ಶ್ರೀನಗರ: ಆಪರೇಷನ್ ಸಿಂಧೂರದ (Operation Sindoor) ಬಳಿಕ ಮೊದಲ ಬಾರಿಗೆ ಪಾಕಿಸ್ತಾನ (Pakistan) ಕದನ ವಿರಾಮ ಉಲ್ಲಂಘಿಸಿದೆ.
ಪೂಂಚ್ ವಲಯದಲ್ಲಿ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪಾಕ್ ದಾಳಿ ಬೆನ್ನಲ್ಲೇ ಭಾರತೀಯ ಸೇನೆ (Indian Army) ಪ್ರತಿ ದಾಳಿ ನಡೆಸಿದೆ.
ಸರಿ ಸುಮಾರು ಹದಿನೈದು ನಿಮಿಷಗಳ ಕಾಲ ನಡೆದ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
370 ನೇ ವಿಧಿಯನ್ನು ರದ್ದುಗೊಳಿಸಿದ 6 ನೇ ವಾರ್ಷಿಕೋತ್ಸವದಂದು ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘಿಸಿದೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಆಗಸ್ಟ್ 05, 2019 ರಂದು ರದ್ದುಗೊಳಿಸಲಾಗಿತ್ತು.
ನವದೆಹಲಿ: ರಷ್ಯಾದಿಂದ ಕಚ್ಚಾ ತೈಲ (Russian Oil) ಆಮದು ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ, ಅಮೆರಿಕದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಅಮೆರಿಕ (America) ಆಕ್ಷೇಪಣೆಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆ, 1971ರ ಯುದ್ಧದ ಸಮಯದಲ್ಲಿ ಅಮೆರಿಕ ಪಾಕಿಸ್ತಾನವನ್ನು ಹೇಗೆ ಬೆಂಬಲಿಸಿತು? ಎನ್ನುವ ವರದಿಯೊಂದನ್ನು ಉಲ್ಲೇಖಿಸಿ ತಿರುಗೇಟು ನೀಡಿದೆ.
ʻಈ ದಿನ ಆ ವರ್ಷʼ – ಯುದ್ಧದ ನಿರ್ಮಾಣ – 05 ಆಗಸ್ಟ್ 1971 #KnowFactsʼ ಎಂಬ ಶೀರ್ಷಿಕೆಯ ಅಡಿ ಸೇನೆಯು ಹಳೆಯ ಪೇಪರ್ ಕಟಿಂಗ್‌ವಿಂದನ್ನ ಪೊಸ್ಟ್ ಮಾಡಿದೆ. ಅಮೆರಿಕವು 1954 ರಿಂದ ಪಾಕಿಸ್ತಾನಕ್ಕೆ (Pakistan) 2 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ರವಾನಿಸಿದೆ ಎಂಬ ಶೀರ್ಷಿಕೆ ಹೊಂದಿರುವ ಪತ್ರಿಕಾ ವರದಿಯನ್ನ ಹಂಚಿಕೊಂಡು ಪಾಕ್ ಪರ ಹೇಗೆ ಕೆಲಸ ಮಾಡಿತು ಎಂದು ತಿವಿದಿದೆ. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ಯಶಸ್ಸಿಗೆ ಸನ್ಮಾನ – ʻಜೈ ಶ್ರೀರಾಮ್, ಹರಹರ ಮಹದೇವ್ʼ ಘೋಷಣೆ ನಡ್ವೆ ಮೋದಿಗೆ ಗೌರವ
ರಷ್ಯಾದಿಂದ ಕಚ್ಚಾ ತೈಲ ಖರೀದಿ ಮೂಲಕ ಉಕ್ರೇನ್ (Ukraine) ವಿರುದ್ಧದ ಯುದ್ಧಕ್ಕೆ ಭಾರತ ಫಂಡಿಗ್ ಮಾಡುತ್ತಿದೆ ಎನ್ನುವ ಅಮೆರಿಕದ ಹೇಳಿಕೆಗೆ ಭಾರತ ಕೌಂಟರ್ ಕೊಟ್ಟ ಒಂದು ದಿನದ ನಂತರ ಈ ಪೋಸ್ಟ್ ಬಂದಿದೆ. ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಟೀಕೆಗಳು ʻಅಸಮರ್ಥನೀಯ ಮತ್ತು ಅಸಮಂಜಸʼ ಎಂದು ಭಾರತ ಕರೆದಿದೆ. ಉಕ್ರೇನ್ ಸಂಘರ್ಷ ಪ್ರಾರಂಭವಾದ ನಂತರ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕಾಗಿ ಭಾರತವನ್ನ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಗುರಿಯಾಗಿಸಿಕೊಂಡಿದೆ. ಇದನ್ನೂ ಓದಿ: ಕೆಂಪು ಕೋಟೆಗೆ ಪ್ರವೇಶಿಸಲು ಯತ್ನ – ಐವರು ಬಾಂಗ್ಲಾ ಪ್ರಜೆಗಳು ಅರೆಸ್ಟ್
ಪತ್ರಿಕಾ ವರದಿಯಲ್ಲಿ 1954ರಿಂದ 1971ರ ವರೆಗೆ ಅಮೆರಿಕವು ಪಾಕಿಸ್ತಾನಕ್ಕೆ ಸುಮಾರು 2 ಶತಕೋಟಿ ಡಾಲರ್ ಮೌಲ್ಯದ ಆಯುಧಗಳನ್ನು ಪೂರೈಸಿರುವುದಾಗಿ ವರದಿ ಮಾಡಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪಾಕಿಸ್ತಾನ 1971ರ ಬಾಂಗ್ಲಾದೇಶ ಮುಕ್ತಿ ಯುದ್ಧದ ಸಂದರ್ಭದಲ್ಲಿ ಹಾಗೂ ಆಪರೇಷನ್ ವಿಜಯ್ ವರ್ಷದಲ್ಲಿ ಬಳಕೆ ಮಾಡಿದೆ ಎನ್ನುವುದು ಉಲ್ಲೇಖಿಸುತ್ತದೆ. ಇದನ್ನೂ ಓದಿ: ವೀಸಾ ಅವಧಿ ಮೀರಿ ವಾಸ್ತವ್ಯ; ಭಾರತ ಸೇರಿ ವಿದೇಶಿ ಪ್ರಜೆಗಳಿಗೆ ಅಮೆರಿಕ ಗಡೀಪಾರು ಎಚ್ಚರಿಕೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆಯುತ್ತಿರುವ ʻಆಪರೇಷನ್ ಅಖಾಲ್ʼ (Operation Akhal) ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆಗೀಡಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
— Chinar Corps🍁 – Indian Army (@ChinarcorpsIA) August 1, 2025
ದಕ್ಷಿಣ ಕಾಶ್ಮೀರದ (South Kashamir) ಕುಲ್ಗಾಮ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಗುಪ್ತಚರ (Intelligence) ಮಾಹಿತಿ ಪಡೆದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ʻಆಪರೇಷನ್ ಅಖಾಲ್ʼ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಿತು. ಅರಣ್ಯ ಪ್ರದೇಶ ಸುತ್ತುವರಿದು ಶೋಧ ಆರಂಭಿಸಿದ ಭದ್ರತಾ ಪಡೆಗಳು ಓರ್ವ ಉಗ್ರನನ್ನ ಹತ್ಯೆಗೈದಿವೆ ಎಂದು ಪೊಲೀಸ್ (J&K Police) ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ – ಡೊನಾಲ್ಡ್ ಟ್ರಂಪ್
ಶೋಧ ನಡೆಯುತ್ತಿದ್ದಂತೆಯೇ ಉಗ್ರರು ಗುಂಡಿನ ದಾಳಿ ನಡೆಸಲು ಮುಂದಾದ್ರು. ಇದರಿಂದ ಯೋಧರು ಪ್ರತಿದಾಳಿಗೆ ಮುಂದಾದರು. ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿಯಿತು, ಗುಂಡಿನ ಸದ್ದು ಮೊಳಗುತ್ತಿದ್ದರಿಂದ ಸ್ಥಳೀಯರಿಗೂ ಈ ಪ್ರದೇಶದತ್ತ ಸುಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಈವರೆಗೆ ಓರ್ವ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ʻಆಪರೇಷನ್ ಅಖಾಲ್ʼ ಮುಂದುವರಿದಿದೆ ಎಂದು ಸೇನೆಯ ಚಿನಾರ್ ಕಾರ್ಪ್ಸ್ (Chinar Corps) ತಿಳಿಸಿದೆ. ಇದನ್ನೂ ಓದಿ: ಪಾಕ್ ಬೆಂಬಲಿಸಿದ ಟರ್ಕಿಗೆ ಶಾಕ್ – ಭಾರತೀಯ ಪ್ರವಾಸಿಗರ ಸಂಖ್ಯೆ ಭಾರೀ ಕುಸಿತ
ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಲಿಡ್ವಾಸ್ ಪ್ರದೇಶದ ದಚಿಗಮ್ ಅರಣ್ಯ ಪ್ರದೇಶದಲ್ಲಿ ʻಆಪರೇಷನ್ ಮಹಾದೇವ್ʼ (Operation MAHADEV) ಕಾರ್ಯಾಚರಣೆ ನಡೆಸಿದ್ದ ಚಿನಾರ್ ಕಾರ್ಪ್ಸ್ ಮೂವರು ವಿದೇಶಿ ಉಗ್ರರನ್ನ ಬೇಟೆಯಾಡಿತ್ತು. ಈ ಪೈಕಿಯಲ್ಲಿ ಹೊಬ್ಬ ಪಹಲ್ಗಾಮ್ ನರಮೇಧಕ್ಕೆ ಕಾರಣವಾದ ಉಗ್ರನಾಗಿದ್ದ. ಈ ಬೆನ್ನಲ್ಲೇ ಮತ್ತು ಕಾರ್ಯಾಚರಣೆ ಕೈಗೊಂಡಿದೆ. ಇದನ್ನೂ ಓದಿ: 8 ಪುರುಷರ ಮದುವೆಯಾಗಿ ಲಕ್ಷಾಂತರ ಹಣ ವಸೂಲಿ – 9ನೇ ಮದುವೆಯಾಗಲು ಮಾತುಕತೆಗೆ ಹೊರಟಿದ್ದವಳು ಸಿಕ್ಕಿಬಿದ್ಳು!
ಶ್ರೀನಗರ: ಪಹಲ್ಗಾಮ್ ದಾಳಿ (Pahalgam Attac) ಬಳಿಕ ಆಫ್ ಆಗಿದ್ದ ಸ್ಯಾಟಲೈಟ್ ಫೋನ್‌ಗಳು 2 ದಿನದ ಹಿಂದೆ ಅಕ್ಟಿವ್ ಆಗಿದ್ದು, ಉಗ್ರರನ್ನು ಬೇಟೆಯಾಡಲು ಸೇನೆಗೆ ಸಹಕಾರಿಯಾಗಿದೆ ಎಂಬ ವಿಷಯ ತಿಳಿದುಬಂದಿದೆ.
ಪಹಲ್ಗಾಮ್ ದಾಳಿ ಬಳಿಕ ಸ್ಯಾಟ್‌ಲೈಟ್ ಫೋನ್‌ಗಳ ಮೇಲೆ ಸೇನೆ ನಿಗಾ ಇಟ್ಟಿತ್ತು. ಉಗ್ರರ ದಾಳಿ ಬಳಿಕ ಸುಮಾರು ಎರಡು ತಿಂಗಳಿಂದ ನಿಷ್ಕ್ರಿಯಗೊಂಡಿದ್ದ ಸ್ಯಾಟ್‌ಲೈಟ್ ಫೋನ್‌ಗಳು ಆನ್ ಆಗಿದ್ದು, `ಆಪರೇಷನ್ ಮಹದೇವ್ʼ (Operation Mahade) ಕಾರ್ಯಾಚರಣೆಗೆ ಕಾರಣವಾಯಿತು ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.
ಫೋನ್ ಟ್ರ್ಯಾಕ್ ಮಾಡಿದಾಗ ಡಚಿಗಮ್‌ನಲ್ಲಿ (Dachigam Encounter) ಸ್ಯಾಟಲೈಟ್ ಫೋನ್ ಬಳಕೆಯಾಗಿರುವುದು ತಿಳಿದು ಬಂದಿತ್ತು. ಆದರೆ ಅಲ್ಲಿ ಯಾವ ಜನವಸತಿ ಇಲ್ಲ. ಅನುಮಾನಾಸ್ಪದ ಕರೆಯಿಂದ ಸೇನೆ ಕಾರ್ಯಾಚರಣೆಗೆ ಮುಂದಾಯಿತು. ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತ್ಯೆ ಮಾಡಲಾಗಿದೆ. ಹತ್ಯೆಯಾದ ಒಬ್ಬ ಉಗ್ರನನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Operation Mahadev | ಪಹಲ್ಗಾಮ್ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ
ಹಾಶಿಮ್ ಮೂಸಾ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾಗೆ ಸೇರಿದವನು ಎಂಬ ಅನುಮಾನ ಇದೆ. ಉಳಿದಂತೆ ಹತ್ಯೆಯಾದ ಉಗ್ರರನ್ನು ಇನ್ನೂ ಗುರುತಿಸಲಾಗಿಲ್ಲ. ಮೃತದೇಹಗಳನ್ನು ಕೆಳಗೆ ತರಲು ಸಮಯ ತೆಗೆದುಕೊಳ್ಳುತ್ತದೆ. ಹತ್ಯೆಗೀಡಾದ ಭಯೋತ್ಪಾದಕರ ಗುರುತುಗಳನ್ನು ಖಚಿತಪಡಿಸಿಕೊಳ್ಳಲು ಡ್ರೋನ್ ಬಳಕೆ ಮಾಡಲಾಗುತ್ತಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈ ಹಿಂದೆ ಬಂಧಿಸಿದ್ದ ಪರ್ವೇಜ್ ಮತ್ತು ಬಶೀರ್ ಅಹ್ಮದ್ ಎಂದು ಗುರುತಿಸಲಾದ ಇಬ್ಬರು, ಪಹಲ್ಗಾಮ್ ದಾಳಿಯಲ್ಲಿ ಮೂವರು ಪಾಕಿಸ್ತಾನಿ ಲಷ್ಕರ್ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ವಿಚಾರಣೆ ವೇಳೆ ತಿಳಿಸಿದ್ದರು. ಇವರಿಗೆ ಹತ್ಯೆಯಾದ ಉಗ್ರರ ಫೋಟೋ ತೋರಿಸಿ ಮಾಹಿತಿ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
– ತೆರೆಯ ಅಂಚಿಗೆ ಮಿಗ್-21; ಬೀಳ್ಕೊಡುಗೆ ನೀಡಲು ಭಾರತೀಯ ಸೇನೆ ಸಜ್ಜು
ಯುದ್ಧಗಳಲ್ಲಿ ಪ್ರವೀಣ, ಎದುರಾಳಿಗಳಿಗೆ ಸಿಂಹಸ್ವಪ್ನ, ಭಾರತೀಯ ವಾಯುಸೇನೆಯಲ್ಲಿ ಸುದೀರ್ಘ 40ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ‘ಮಿಗ್ 21’ ಯುದ್ಧ ವಿಮಾನ ಇನ್ನು ನೆನಪಷ್ಟೇ. 60 & 70ರ ದಶಕದಲ್ಲಿ ಈ ಫೈಟರ್ ಜೆಟ್‌ಗೆ ಸರಿಸಾಟಿಯೇ ಇರಲಿಲ್ಲ. ಹಲವು ಯುದ್ಧಗಳಲ್ಲಿ ಭಾರತಕ್ಕೆ ವಿಜಯಮಾಲೆ ತಂದುಕೊಟ್ಟಿದೆ. ಇಷ್ಟೆಲ್ಲಾ ಸಾಮರ್ಥ್ಯ ಹೊಂದಿದ್ದ ಮಿಗ್ 21 (MIG 21) ‘ಹಾರುವ ಶವಪೆಟ್ಟಿಗೆ’ ಎಂಬ ಕುಖ್ಯಾತಿಯನ್ನೂ ಗಳಿಸಿತ್ತು. ಹಲವು ಪೈಲಟ್‌ಗಳ ಸಾವಿಗೆ ಕಾರಣವಾಗಿತ್ತು. ತನ್ನ ಸಾಮರ್ಥ್ಯ, ತಂತ್ರಜ್ಞಾನದ ಕಾರಣ ಇಲ್ಲಿವರೆಗೂ ಇದ್ದು ಯುದ್ಧದಲ್ಲಿ ಇದ್ದು ತನ್ನದೇ ಆದ ಕೊಡುಗೆ ನೀಡಿದೆ. ಈಗ ಇತಿಹಾಸದ ಪುಟ ಸೇರಲು ಸಜ್ಜಾಗಿದೆ.
ಏನಿದು ಮಿಗ್ 21 ಯುದ್ಧ ವಿಮಾನ? ಇದರ ಇತಿಹಾಸ ಏನು? ಯುದ್ಧಗಳಲ್ಲಿ ಇದರ ಸಾಮರ್ಥ್ಯ ಹೇಗಿತ್ತು? ಹಾರುವ ಶವಪೆಟ್ಟಿಗೆ (Flying Coffin) ಅನ್ನೋ ಕುಖ್ಯಾತಿ ಯಾಕೆ? ಈಗ ನಿವೃತ್ತಿ ಹಂತಕ್ಕೆ ಬಂದಿರೋದ್ಯಾಕೆ? ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ವಿವರ. ಇದನ್ನೂ ಓದಿ: MIG-21 ಫೈಟರ್ ಜೆಟ್ ಹಾರಾಟ ಬಂದ್ – IAF ಮಹತ್ವದ ನಿರ್ಧಾರ
ಗುಡ್‌ಬೈ ಮಿಗ್ 21
ಭಾರತೀಯ ವಾಯುಪಡೆಯ ಮಿಗ್-21ಗೆ ಈಗ ನಿವೃತ್ತಿ ಸಮಯ. ಭಾರತ ಯುದ್ಧಗಳನ್ನು ಗೆಲ್ಲಲು ಸಹಾಯ ಮಾಡಿದ್ದರೂ, ಹಲವಾರು ಮಾರಕ ಅಪಘಾತಗಳಿಂದಾಗಿ ‘ಹಾರುವ ಶವಪೆಟ್ಟಿಗೆ’ ಎಂಬ ಕುಖ್ಯಾತಿಯನ್ನೂ ಹೊಂದಿತ್ತು. ರಷ್ಯಾ ಮೂಲದ ಮಿಗ್-21 ಯುದ್ಧ ವಿಮಾನಗಳನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸೇವೆಯಿಂದ ಕೈಬಿಡಲಾಗುವುದು. ಭಾರತೀಯ ವಾಯುಪಡೆಯು ಸೆಪ್ಟೆಂಬರ್ 19 ರಂದು ಚಂಡೀಗಢ ವಾಯುನೆಲೆಯಲ್ಲಿ ರಷ್ಯಾ ಮೂಲದ ಮಿಗ್ -21 ಯುದ್ಧ ವಿಮಾನಕ್ಕೆ ಅದ್ದೂರಿಯಾಗಿ ಬೀಳ್ಕೊಡುಗೆ ನೀಡಲಿದೆ.
ಏನಿದು ಮಿಗ್ 21 ಯುದ್ಧ ವಿಮಾನ?
ಭಾರತೀಯ ವಾಯುಪಡೆ (ಐಎಎಫ್) ಹಾರಿಸುವ ಆರು ಯುದ್ಧ ವಿಮಾನಗಳಲ್ಲಿ ಮಿಗ್-21 ವಿಮಾನಗಳು ಸೇರಿವೆ. ಬಹಳ ಹಿಂದಿನಿಂದಲೂ ಐಎಎಫ್‌ನ ಬೆನ್ನೆಲುಬಾಗಿವೆ. ಮಿಗ್-21 ವಿಮಾನಗಳು ಒಂದೇ ಎಂಜಿನ್, ಒಂದೇ ಆಸನದ ಬಹುಪಾತ್ರದ ಯುದ್ಧ ವಿಮಾನ. ಅವುಗಳನ್ನು ಮೊದಲು 1963 ರಲ್ಲಿ ಇಂಟರ್‌ಸೆಪ್ಟರ್ ವಿಮಾನವಾಗಿ ಸೇರಿಸಿಕೊಳ್ಳಲಾಯಿತು. ನಂತರದ ವರ್ಷಗಳಲ್ಲಿ ಯುದ್ಧ ವಿಮಾನವು ಪ್ರಮುಖ ಪಾತ್ರಗಳನ್ನು ನಿರ್ವಹಿಸುವುದಕ್ಕಾಗಿ ಹಲವು ಬಾರಿ ಪರಿಷ್ಕರಿಸಲಾಯಿತು.
ಭಾರತವು ಟೈಪ್-77, ಟೈಪ್-96 ಮತ್ತು ಬಿಐಎಸ್‌ನಂತಹ ವಿವಿಧ ಶ್ರೇಣಿಯ 800 ಕ್ಕೂ ಹೆಚ್ಚು ಮಿಗ್-21 ವಿಮಾನಗಳನ್ನು ಖರೀದಿಸಿದೆ. ಅವುಗಳಲ್ಲಿ ಇತ್ತೀಚಿನದು ಮಿಗ್-21 ಬೈಸನ್, ಇದು ಸುಧಾರಿತ ಕ್ಷಿಪಣಿಗಳು, ರಾಡಾರ್‌ಗಳು ಮತ್ತು ಉತ್ತಮ ಏವಿಯಾನಿಕ್ಸ್ ಹೊಂದಿರುವ ನವೀಕರಿಸಿದ ವಿಮಾನವಾಗಿದೆ. ಐಎಎಫ್‌ನೊಂದಿಗೆ 100 ಕ್ಕೂ ಹೆಚ್ಚು ಮಿಗ್-21 ವಿಮಾನಗಳನ್ನು 2006 ರಿಂದ ಬೈಸನ್‌ಗೆ ಉನ್ನತೀಕರಿಸಲಾಗಿದೆ. ಭಾರತ ನಡೆಸಿದ ಹಲವಾರು ಯುದ್ಧಗಳಲ್ಲಿ ಈ ವಿಮಾನಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಇದನ್ನೂ ಓದಿ: ಪಾಕಿನ F-16 ಯುದ್ಧ ವಿಮಾನವನ್ನು ಭಾರತ ಹೊಡೆದು ಹಾಕಿದ್ಯಾ?
ಪಾಕ್ ಫೈಟರ್ ಜೆಟ್ ಹೊಡೆದುರುಳಿಸಿತ್ತು ಮಿಗ್ 21
1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಮಿಗ್-21 ಗಳು (ಟೈಪ್ 77 ಶ್ರೇಣಿ) ಭಾರತ ಮೇಲುಗೈ ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದವು. 1965 ರ ಯುದ್ಧ ಮತ್ತು 1999 ರ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಸಂಘರ್ಷದಲ್ಲಿ ಈ ಫೈಟರ್ ಜೆಟ್ ಐಎಎಫ್‌ನ ಪ್ರಮುಖ ಭಾಗವಾಗಿತ್ತು. 2019 ರಲ್ಲಿ ಶ್ರೀನಗರ ಮೂಲದ 51ನೇ ಸಂಖ್ಯೆಯ ಸ್ಕ್ವಾಡ್ರನ್‌ನ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ (ಆಗ ವಿಂಗ್ ಕಮಾಂಡರ್ ಆಗಿದ್ದರು) ಮಿಗ್ -21 ಬೈಸನ್ ಅನ್ನು ಹಾರಿಸುತ್ತಿದ್ದಾಗ, ಪಾಕಿಸ್ತಾನ ವಾಯುಪಡೆಯ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು.
ಭಾರತವು ಮಿಗ್-21 ಫೈಟರ್ ಜೆಟ್‌ಗಳ ಅತಿದೊಡ್ಡ ನಿರ್ವಾಹಕ ರಾಷ್ಟ್ರವಾಗಿದೆ. ಮಿಗ್-21 ಎಲ್ಲಾ ಬಗೆಯ ಹವಾಮಾನಗಳಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. 1971ರ ಯುದ್ಧದ ಸಂದರ್ಭದಲ್ಲಿ ಪಾಕ್ ವಾಯುನೆಲೆ ಮೇಲೆ 500 ಕೆಜಿ ಭಾರದ ಬಾಂಬ್‌ನ ಸುರಿಮಳೆಗೈದು ಮಿಗ್-21 ಪ್ರಮುಖ ಪಾತ್ರ ವಹಿಸಿತ್ತು.
ಹಾರುವ ಶವಪೆಟ್ಟಿಗೆ ಕುಖ್ಯಾತಿ ಯಾಕೆ?
ಕಳೆದ 60 ವರ್ಷಗಳಲ್ಲಿ 500 ಕ್ಕೂ ಹೆಚ್ಚು ಮಿಗ್-21 ವಿಮಾನಗಳು ಅಪಘಾತಕ್ಕೀಡಾಗಿದ್ದು, 170 ಕ್ಕೂ ಹೆಚ್ಚು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. 2010 ರಿಂದ 20 ಕ್ಕೂ ಹೆಚ್ಚು ವಿಮಾನಗಳು ಅಪಘಾತಕ್ಕೀಡಾಗಿವೆ. 1963 ರಲ್ಲಿ ಫೈಟರ್ ಜೆಟ್ ಸೇರ್ಪಡೆಯ ಮೊದಲ ವರ್ಷದಲ್ಲೇ ಸೋವಿಯತ್ ಯುಗದ ಎರಡು ವಿಮಾನಗಳು ಅಪಘಾತಕ್ಕೀಡಾಗಿದ್ದವು. 2023ರ ಮೇ ತಿಂಗಳಲ್ಲಿ IAFನ ಮಿಗ್-21 ಫೈಟರ್ ಜೆಟ್ ರಾಜಸ್ಥಾನದ ಸೂರತ್‌ಗಢ ಬಳಿ ನಿಯಮಿತ ಕಾರ್ಯಾಚರಣೆಯ ತರಬೇತಿ ಹಾರಾಟದಲ್ಲಿದ್ದಾಗ ಅಪಘಾತಕ್ಕೀಡಾಯಿತು. ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ, ವಿಮಾನದ ಅವಶೇಷಗಳು ರಾಜ್ಯದ ಹನುಮಾನ್‌ಗಢ ಜಿಲ್ಲೆಯ ಬಹ್ಲೋಲ್ ನಗರದಲ್ಲಿರುವ ಮನೆಯ ಮೇಲೆ ಬಿದ್ದು ಮೂವರು ನಾಗರಿಕರು ಸಾವನ್ನಪ್ಪಿದರು.
2022ರ ಜುಲೈನಲ್ಲಿ ತರಬೇತಿ ನಡೆಸುತ್ತಿದ್ದ ಯುದ್ಧ ವಿಮಾನ ಅಪಘಾತಕ್ಕೀಡಾಗಿ, ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದರು. 2021 ರಲ್ಲಿ ಐದು MiG-21 ಬೈಸನ್ ಅಪಘಾತಗಳು ಮೂವರು ಪೈಲಟ್‌ಗಳನ್ನು ಬಲಿ ತೆಗೆದುಕೊಂಡವು. ಅಪಘಾತಗಳಿಗೆ ಹಲವಾರು ಕಾರಣಗಳಿವೆ. ತಾಂತ್ರಿಕ ದೋಷಗಳು, ಮಾನವ ದೋಷ, ಪಕ್ಷಿ ಡಿಕ್ಕಿ ಅಥವಾ ಕೆಲವು ಸಂದರ್ಭಗಳಲ್ಲಿ ಪೈಲಟ್‌ಗಳ ಅಚಾತುರ್ಯದ ಕಾರ್ಯಗಳು ಪ್ರಮುಖ ಕಾರಣವಾಗಿವೆ.
ವಿಮಾನವನ್ನು ಹಂತ ಹಂತವಾಗಿ ತೆಗೆದುಹಾಕುವ ಯೋಜನೆ ಏನು?
ಐಎಎಫ್‌ನಲ್ಲಿ ಪ್ರಸ್ತುತ ಮೂರು ಮಿಗ್-21 ವಿಮಾನಗಳ ಸ್ಕ್ವಾಡ್ರನ್‌ಗಳು ಸೇವೆಯಲ್ಲಿವೆ. ಪ್ರತಿ ಸ್ಕ್ವಾಡ್ರನ್ ಒಂದು ಅಥವಾ ಎರಡು ತರಬೇತುದಾರ ಆವೃತ್ತಿಗಳನ್ನು ಹೊರತುಪಡಿಸಿ 16-18 ವಿಮಾನಗಳನ್ನು ಒಳಗೊಂಡಿದೆ. 2022ರ ಸೆಪ್ಟೆಂಬರ್‌ನಲ್ಲಿ ಶ್ರೀನಗರ ಮೂಲದ ನಂ 51 ಸ್ಕ್ವಾಡ್ರನ್ ಅನ್ನು ನಿವೃತ್ತಿಗೊಳಿಸಲಾಯಿತು. ಮೂರು ಮಿಗ್-21 ಬೈಸನ್ ಸ್ಕ್ವಾಡ್ರನ್‌ಗಳನ್ನು ಈಗ ಹಂತ ಹಂತವಾಗಿ ಸೇವೆಯಲ್ಲಿ ಬಿಡುಗಡೆಗೊಳಿಸಲು ಯೋಜಿಸಲಾಗಿದೆ. ಇದನ್ನೂ ಓದಿ: ಪಾಕ್ ವಶದಲ್ಲಿದ್ದ ‘ಸಿಂಗಂ’ ವಿಂಗ್ ಕಮಾಂಡರ್ ತಾಯ್ನಾಡಿಗೆ ವಾಪಸ್ – ಭಾರತದ ಗೆಲುವಿಗೆ 5ರ ಸಂಭ್ರಮ
ಐಎಎಫ್ ಮಿಗ್ 21 ವಿಮಾಗಳನ್ನು ಮುಂದುವರಿಸಿದ್ದೇಕೆ?
ಐಎಎಫ್‌ನ ಸ್ಕ್ವಾಡ್ರನ್ ಬಲವು 42 ಆಗಿದೆ. ಯುದ್ಧ ವಿಮಾನಗಳನ್ನು ಮೊದಲೇ ಹೊರಹಾಕುವುದರಿಂದ ಐಎಎಫ್‌ನ ಫೈಟರ್ ಸ್ಕ್ವಾಡ್ರನ್ ಬಲವು ಅಪಾಯಕಾರಿಯಾಗಿ ಕಡಿಮೆಯಾಗುತ್ತದೆ. ‘ಈ ಫೈಟರ್ ಜೆಟ್ ಹಾರಾಟದ ಸಮಯ ಮತ್ತು ಸೇವೆಯಲ್ಲಿರುವ ವರ್ಷಗಳನ್ನು ಮುಖ್ಯವಾಗಿಟ್ಟುಕೊಂಡು ನೋಡುವುದಾದರೆ ಕಳಪೆ ಸುರಕ್ಷತಾ ದಾಖಲೆ ಹೊಂದಿಲ್ಲ’ ಎಂದು ಹಿರಿಯ ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಮಿಗ್ 21 ಸೇರ್ಪಡೆ ಇತಿಹಾಸವೇನು?
1963 ರಲ್ಲಿ ಐಎಎಫ್‌ನಲ್ಲಿ ಸೂಪರ್‌ಸಾನಿಕ್ ವಿಮಾನವನ್ನು ಸೇರಿಸುವುದು ತುರ್ತು ಅಗತ್ಯವಾಗಿತ್ತು. 1962 ರ ಚೀನಾದೊಂದಿಗಿನ ಯುದ್ಧ ಮತ್ತು ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಸಂದರ್ಭದಲ್ಲಿ ಯುಎಸ್‌ಎ ತನ್ನ ಹೊಸ ವಿಮಾನಗಳಲ್ಲಿ ಒಂದಾದ ಎಫ್-104 ಸ್ಟಾರ್‌ಫೈಟರ್ ಅನ್ನು ಪಾಕಿಸ್ತಾನಕ್ಕೆ ಪೂರೈಸಿತ್ತು. ಈ ಬೆಳವಣಿಗೆ ಭಾರತದಲ್ಲಿ ಆತಂಕ ಮೂಡಿಸಿತ್ತು.
ಐಎಎಫ್ ಕೂಡ ಎಫ್-104 ವಿಮಾನಗಳನ್ನು ಬಯಸಿತ್ತು. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲು ಯುಎಸ್ ಹೆಚ್ಚು ಆಸಕ್ತಿ ತೋರಲಿಲ್ಲ. ನಂತರ ರಷ್ಯಾದಿಂದ ಮಿಗ್-21 ಫೈಟರ್ ಜೆಟ್ ತರಿಸಿಕೊಳ್ಳಲಾಯಿತು. ಮೊದಲ ಆರು ಮಿಗ್-21 ವಿಮಾನಗಳು 1963ರ ಏಪ್ರಿಲ್‌ನಲ್ಲಿ ಚಂಡೀಗಢಕ್ಕೆ ಆಗಮಿಸಿದವು. ಪೈಲಟ್‌ಗಳು ಪರೀಕ್ಷಾರ್ಥ ಹಾರಾಟ ನಡೆಸಿದರು. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ನಟ ದರ್ಶನ್ ವಾಪಸ್
ವಿವಾದ ಏನು?
2001 ರಲ್ಲಿ ಸೂರತ್‌ಗಢದಲ್ಲಿ ಸಂಭವಿಸಿದ ಮಿಗ್-21 ಅಪಘಾತದಲ್ಲಿ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಫ್ಲೈಟ್ ಲೆಫ್ಟಿನೆಂಟ್ ಅಭಿಜಿತ್ ಗಾಡ್ಗಿಲ್ ಸಾವನ್ನಪ್ಪಿದರು. ಪೈಲಟ್‌ನ ತಾಯಿ ಕವಿತಾ ಗಾಡ್ಗಿಲ್ ಅವರು, ವಿಮಾನದಲ್ಲಿ ತಾಂತ್ರಿಕ ದೋಷಗಳಿವೆ. ಆದರೆ, ಅಪಘಾತಕ್ಕೆ ನನ್ನ ಮಗನನ್ನು ತಪ್ಪಾಗಿ ದೂಷಿಸಲಾಗುತ್ತಿದೆ ಎಂದು ಹೇಳಿದಾಗ ವಿವಾದ ಉಂಟಾಯಿತು. ಐಎಎಫ್‌ನ ಆಗಿನ ಇನ್ಸ್ಪೆಕ್ಟರ್ ಜನರಲ್ ಆಫ್ ಫ್ಲೈಟ್ ಸೇಫ್ಟಿ ಆಗಿದ್ದ ಏರ್ ಮಾರ್ಷಲ್ ಅಶೋಕ್ ಗೋಯಲ್ ಪತ್ರ ಬರೆದು, ನಿಮ್ಮ ಹೇಳಿಕೆಗಳಿಂದ ಐಎಎಫ್‌ನ ಸ್ಥೈರ್ಯ ಕುಗ್ಗುತ್ತದೆ ಎಂದಿದ್ದರು.
ನವದೆಹಲಿ: ಭಾರತೀಯ ಸೇನೆಗೆ ಅಮೆರಿಕದಿಂದ (America) ಮೂರು ಅಪಾಚೆ ಹೆಲಿಕಾಪ್ಟರ್‌ಗಳ (Apache Attack Choppers) ಮೊದಲ ಬ್ಯಾಚ್ ಆಗಮಿಸಿದೆ. ಅಪಾಚೆ ಹೆಲಿಕಾಪ್ಟರ್‌ಗಳು ಸೇನೆಯ ಆಕ್ರಮಣ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸುತ್ತದೆ.
ಡೆಸರ್ಟ್ ಕ್ಯಾಮೊ ಬಣ್ಣದಲ್ಲಿರುವ ಅತ್ಯಾಧುನಿಕ ಚಾಪರ್‌ಗಳು ಅಮೆರಿಕದಿಂದ ಆಂಟೋನೋವ್ ಸಾರಿಗೆ ವಿಮಾನದಲ್ಲಿ ಆಗಮಿಸಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಭಾರತೀಯ ಸೇನೆ ಅಪಾಚೆ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವುದು ಇದೇ ಮೊದಲಾಗಿದೆ. ಇದು ವಿಶ್ವದ ಅತ್ಯುತ್ತಮ ಫೈಟರ್ ಚಾಪರ್‌ಗಳಲ್ಲಿ ಒಂದಾಗಿದೆ. ಭಾರತೀಯ ವಾಯುಪಡೆ ಈಗಾಗಲೇ 22 ಬಾರಿ ದಾಳಿ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿದೆ. ಇದನ್ನೂ ಓದಿ: ಶೀಘ್ರವೇ ಧರ್ಮಸ್ಥಳ ಪ್ರಕರಣಗಳ ತನಿಖೆ ಆರಂಭ; ಎಸ್‌ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ: ಪರಮೇಶ್ವರ್
ಸೇನಾ ವಾಯುಯಾನಕ್ಕಾಗಿ ಮೊದಲ ಬ್ಯಾಚ್ ಅಪಾಚೆ ಹೆಲಿಕಾಪ್ಟರ್‌ಗಳು ಭಾರತಕ್ಕೆ ಆಗಮಿಸುತ್ತಿರುವುದರಿಂದ ಭಾರತೀಯ ಸೇನೆಗೆ ಇದು ಮೈಲಿಗಲ್ಲು ದಾಖಲಿಸಿದ ಕ್ಷಣವಾಗಿದೆ. ಈ ಅತ್ಯಾಧುನಿಕ ಹೆಲಿಕಾಪ್ಟರ್‌ಗಳು ಭಾರತೀಯ ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ ಎಂದು ಭಾರತೀಯ ಸೇನೆಯು ಭಾರತದಲ್ಲಿನ ಹೆಲಿಕಾಪ್ಟರ್‌ಗಳ ಮೊದಲ ಫೋಟೋಗಳನ್ನು ಹಂಚಿಕೊಂಡಿದೆ. ಈ ಹೊಸ ಚಾಪರ್‌ಗಳನ್ನು ಪಾಕಿಸ್ತಾನದ ಪಶ್ಚಿಮ ಗಡಿಯ ಬಳಿಯ ಜೋಧ್‌ಪುರದಲ್ಲಿ ನಿಯೋಜಿಸಲಾಗುತ್ತದೆ ಮತ್ತು ಲೇಹ್-ಲಡಾಖ್ ಪ್ರದೇಶಕ್ಕೂ ಹೋಗುವ ಸಾಧ್ಯತೆ ಇದೆ. ಇದನ್ನೂ ಓದಿ: GST ನೋಟಿಸ್ ಕೊಟ್ಟ ಕೋತಿ ಕೆಲಸ ರಾಜ್ಯ ಸರ್ಕಾರದ್ದು- ನೋಟಿಸ್ ವಾಪಸ್ ಪಡೆಯಬೇಕು: ಸಿ.ಟಿ.ರವಿ
ನವದೆಹಲಿ: ಭಾರತೀಯ ವಾಯುಸೇನೆಯ ಐತಿಹಾಸಿಕ ಯುದ್ಧ ವಿಮಾನ ಮಿಗ್-21, 62 ವರ್ಷಗಳ ತನ್ನ ಶೌರ್ಯದ ಸೇವೆಯನ್ನು ಮುಗಿಸಲಿದೆ. ಸೆಪ್ಟೆಂಬರ್ 19ರಂದು ಕೊನೆಯ ಜೆಟ್‌ಗೆ ಚಂಡೀಗಢ ವಾಯುನೆಲೆಯಲ್ಲಿ 23 ಸ್ಕ್ವಾಡ್ರನ್ (ಪ್ಯಾಂಥರ್ಸ್) ಔಪಚಾರಿಕ ಬೀಳ್ಕೊಡುಗೆ ನೀಡಲಿದೆ.
ಸೋವಿಯತ್ ನಿರ್ಮಿತ ಈ ವಿಮಾನವು 1963ರಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಯಾಯಿತು. ಬಳಿಕ ದೇಶದ ವೈಮಾನಿಕ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. 1965 ಮತ್ತು 1971ರ ಭಾರತ-ಪಾಕಿಸ್ತಾನ ಯುದ್ಧಗಳು, 1999ರ ಕಾರ್ಗಿಲ್ ಯುದ್ಧ, 2019ರ ಬಾಲಕೋಟ್ ದಾಳಿಗಳು ಮತ್ತು ಆಪರೇಷನ್ ಸಿಂಧೂರದಲ್ಲಿ ಪ್ರಮುಖ ಪಾತ್ರವಹಿಸಿದೆ. ಇದನ್ನೂ ಓದಿ: ಅಹಮದಾಬಾದ್ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಶೋಧ
ಸಾಕಷ್ಟು ಸಾಧನೆಯ ನಡುವೆಯೂ ಇತ್ತೀಚಿನ ವರ್ಷಗಳಲ್ಲಿ ಈ ವಿಮಾನವು ಆಗಾಗ ಅಪಘಾತಕ್ಕೀಡಾಗಿತ್ತು. 400ಕ್ಕೂ ಹೆಚ್ಚು ಅಪಘಾತಗಳು ಮತ್ತು ಗಮನಾರ್ಹ ಪೈಲಟ್ ಸಾವು-ನೋವುಗಳು ಇದರಲ್ಲಿ ಸಂಭವಿಸಿವೆ. ಹೀಗಾಗಿ ಇದಕ್ಕೆ `ಹಾರುವ ಶವಪೆಟ್ಟಿಗೆ’ ಎಂದು ಕರೆಯಲಾಗುತ್ತಿತ್ತು. ಇದನ್ನೂ ಓದಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು
ತಾಂತ್ರಿಕವಾಗಿ ಹಳೆಯದಾದ ಮಿಗ್-21 ವಿಮಾನಗಳು ಆಧುನಿಕ ಯುದ್ಧದ ಅಗತ್ಯಗಳಿಗೆ ಸರಿ ಹೊಂದಿರುವುದರಿಂದ, ಭಾರತೀಯ ವಾಯುಸೇನೆಯು ತೇಜಸ್ ಮತ್ತು ರಫೇಲ್‌ನಂತಹ ಆಧುನಿಕ ಯುದ್ಧ ವಿಮಾನಗಳನ್ನು ಸೇರಿಸಿಕೊಳ್ಳುತ್ತಿದೆ.
ಭಾರತೀಯ ವಾಯುಸೇನೆಯು ತೇಜಸ್ ಎಂಕೆ-1ಎ, ರಫೇಲ್, ಮತ್ತು ಸುಖೋಯ್ ಸು-30 ಎಂಕೆಐ ವಿಮಾನಗಳೊಂದಿಗೆ ತನ್ನ ಶಕ್ತಿಯನ್ನು ಬಲಪಡಿಸುತ್ತಿದೆ. ಇದರ ಜೊತೆಗೆ, ಸ್ವದೇಶಿ ಎಎಂಸಿಎ (ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್) ಯೋಜನೆಯು ಭವಿಷ್ಯದ ಯುದ್ಧ ವಿಮಾನಗಳಿಗೆ ದಾರಿ ಮಾಡಿಕೊಡಲಿದೆ.
ನವದೆಹಲಿ: ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ʻಆಪರೇಷನ್ ಸಿಂಧೂರʼ (Operation Sindoor) ಪ್ರತೀಕಾರದ ದಾಳಿಯ ಕುರಿತು ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ಉದ್ವಿಗ್ನತೆಯ ಭೀತಿ ಲೆಕ್ಕಿಸದೇ ಯೋಧರಿಗೆ ಸಹಾಯ ಮಾಡಿದ್ದ 10 ವರ್ಷದ ಬಾಲಕನ ಸಂಪೂರ್ಣ ಶಿಕ್ಷಣ ವೆಚ್ಚ ಭರಿಸಲು ಸೇನೆ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
10ರ ಬಾಲಕನಿಂದ ಸಿಕ್ಕ ಸಹಾಯ ಏನು?
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಬೈಸರನ್ ಕಣಿವೆ ಪ್ರದೇಶದಲ್ಲಿರುವ ಪಹಲ್ಗಾಮ್‌ನಲ್ಲಿ ನಾಲ್ವರು ಉಗ್ರರು ಅಟ್ಟಹಾಸ ಮೆರೆದಿದ್ದರು. ಓರ್ವ ವಿದೇಶಿಗ ಸೇರಿ 26 ಮಂದಿಯನ್ನ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಶುರು ಮಾಡಿತು. ಮೇ 7ರ ಮಧ್ಯರಾತ್ರಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ 9 ಅಡಗು ತಾಣಗಳನ್ನ ಧ್ವಂಸಗೊಳಿಸಿತ್ತು. ಇದನ್ನೂ ಓದಿ: Tamil Nadu | ಪತಿಯೊಂದಿಗೆ ಜಗಳ – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯನ್ನು ಇರಿದು ಕೊಂದ ಗಂಡ
ಪಾಕಿಸ್ತಾನ ಕೂಡ ಪ್ರತಿದಾಳಿಗೆ ಮುಂದಾಗಿ ಭಾರತದ ಕೆಲ ನಗರಗಳ ಮೇಲೆ ಶೆಲ್ ದಾಳಿ ನಡೆಸಲು ಮುಂದಾಯಿತು. ಆದ್ರೆ ಪಾಕ್‌ನ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿತು. ಈ ವೇಳೆ ಭಾರತ ಪಾಕ್ ಗಡಿ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಏರ್ಪಟ್ಟಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಫಿರೋಜ್‌ಪುರದ ಮಾಮ್‌ಡೋಟ್ ಪ್ರದೇಶದ ತಾರಾ ವಾಲಿ ಗ್ರಾಮ ಶವಣ್ ಸಿಂಗ್ ಸೈನಿಕರಿಗೆ ನೀರು, ಐಸ್, ಚಹಾ, ಹಾಲು ಮತ್ತು ಲಸ್ಸಿಯನ್ನ ಖುದ್ದಾಗಿ ತಲುಪಿಸುತ್ತಿದ್ದ. ಗುಂಡು, ಶೆಲ್‌ಗಳ ಶಬ್ಧ, ಉದ್ವಿಗ್ನತೆಗೂ ಜಗ್ಗದೇ ನಿರ್ಭೀತಿಯಿಂಧ ಸೈನಿಕರ ಸೇವೆ ಮಾಡಿದ್ದ. 4ನೇ ತರಗತಿ ಓದುತ್ತಿರುವ ಶವನ್‌ನ ಈ ಸೇವೆ ಯೋಧರ ಹೃದಯ ಗೆದ್ದಿದೆ.
ಸೈನಿಕನಾಗುವ ಕನಸು
ಇನ್ನೂ ಈ ಕುರಿತು ಮಾತನಾಡಿರುವ ಶವನ್ ಸಿಂಗ್, ಯೋಧನಾಗುವ ಕನಸು ಕಂಡಿರುವುದಾಗಿ ಹೇಳಿಕೊಂಡಿದ್ದಾನೆ. ಯೋಧನಾಗಿ ಮುಂದೆ ದೇಶಸೇವೆ ಮಾಡಲು ಬಯಸುವುದಾಗಿ ಹೇಳಿಕೊಂಡಿದ್ದಾನೆ.
ಲಕ್ನೋ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ರಕ್ಷಣಾ ವಲಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅದರ ಹಾದಿಯಾಗಿ ಒಂದಿಲ್ಲೊಂದು ಅಸ್ತ್ರಗಳು ಭಾರತೀ ಸೇನಾ (Indian Army) ಬತ್ತಳಿಕೆ ಸೇರಿಕೊಳ್ಳುತ್ತಿವೆ. ಎರಡುವಾರಗಳ ಹಿಂದೆಯಷ್ಟೇ ಮೋದಿ ಸರ್ಕಾರ 1 ಲಕ್ಷ ಕೋಟಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಅನುಮತಿ ನೀಡಿತ್ತು. ಇದೀಗ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಎಕೆ-203 ರೈಫಲ್ (AK-203 Assault Rifles) ಅನ್ನು ಭಾರತೀಯ ಸೇನೆಗೆ ಪೂರೈಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಮುಂದಿನ 2-3 ವಾರಗಳಲ್ಲಿ ಶೇ. 50ರಷ್ಟು ದೇಶೀಯ ನಿರ್ಮಿತ ಸುಮಾರು 7,000 ಸಾವಿರ AK-203 ರೈಫಲ್‌ಗಳು, ಈ ವರ್ಷಾಂತ್ಯದ ವೇಳೇ 75,000 ಹಾಗೂ 2026ರ ವೇಳೆಗೆ ಸರಿಸುಮಾರು 1 ಲಕ್ಷ ರೈಫಲ್‌ಗಳು ಸೇನೆಗೆ ಪೂರೈಕೆಯಾಗಲಿವೆ. ನಂತರದಲ್ಲಿ ಅರೆಸೇನಾ ಪಡೆಗಳು ಹಾಗೂ ಪೊಲೀಸರಿಗೂ ಲಭ್ಯವಾಗಲಿದ್ದು, ಶೀಘ್ರದಲ್ಲೇ ಶೇ. 100ರಷ್ಟು ಸ್ವದೇಶಿ ನಿರ್ಮಿತ ರೈಫಲ್‌ಗಳ ಉತ್ಪಾದನೆ ಶುರುವಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ನನಗೂ ನನ್ನ ಪತ್ನಿಗೂ ಏನಾದ್ರು ಆದ್ರೆ ಅದಕ್ಕೆ ಪಾಕ್ ಸೇನಾ ಮುಖ್ಯಸ್ಥನೇ ಕಾರಣ: ಇಮ್ರಾನ್ ಖಾನ್ ಹೇಳಿಕೆ
ಸದ್ಯ 50% ರಷ್ಟು ಸ್ವದೇಶಿ ರೈಫಲ್‌ಗಳನ್ನ ಉತ್ಪಾದಿಸಲಾಗುತ್ತಿದ್ದು, 100% ರಷ್ಟು ರೈಫಲ್‌ಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ರಕ್ಷಣಾ ಸಚಿವಾಲಯ ಮತ್ತು IRRPL ನಡುವೆ 10 ವರ್ಷಗಳಿಗೆ ಒಪ್ಪಂದವಾಗಿದ್ದು, ಈ ಅವಧಿಯೊಳಗೆ 6,01,427 ಎಕೆ-203 ಅಸಾಲ್ಟ್ ರೈಫಲ್‌ಗಳಿಗೆ ಆರ್ಡರ್ ನೀಡಲಾಗಿದೆ. 2025ರ ನಂತರ ವಾರ್ಷಿಕ 70 ಸಾವಿರ ರೈಫಲ್ ಉತ್ಪಾದಿಸುವ ನಿರೀಕ್ಷೆಯಿದ್ದು, 2030ರ ಹೊತ್ತಿಗೆ 6 ಲಕ್ಷ ರೈಫಲ್ ಪೂರೈಕೆ ಆಗಲಿದೆ ಎಂದು ಐಆರ್‌ಆರ್‌ಪಿಎಲ್‌ನ ಸಿಎಂಡಿ ಮೇಜರ್ ಜನರಲ್ ಎಸ್‌ಕೆ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್‌ನ ಜೈಲಿಗಟ್ಟುತ್ತೀನಿ, ದೇಶದ ಅನೇಕ ಜೈಲುಗಳು ಗಾಂಧಿ ಕುಟುಂಬಕ್ಕೆ ಕಾಯ್ತಿವೆ: ಅಸ್ಸಾಂ ಸಿಎಂ
ʻಶೇರ್ʼ ವಿಶೇಷತೆ ಏನು?
* 3.8 ಕೆ.ಜಿ ತೂಕ ಹೊಂದಿದ್ದು, ಕಾರ್ಯಾಚರಣೆ ಸುಲಭ
* ಹಳೆಯ ರೈಫಲ್‌ಗಳಿಗೆ ಹೋಲಿಸಿದ್ರೆ ಹೆಚ್ಚಿನ ನಿಖರತೆ
* ಪ್ರತಿ ನಿಮಿಷಕ್ಕೆ 700 ಸುತ್ತು ಗುಂಡು ಹಾರಿಸಬಲ್ಲ ತಾಕತ್ತು
* 800 ಮೀಟರ್ ರೇಂಜ್ ಸಾಮರ್ಥ್ಯ ಹೊಂದಿದೆ.
ನವದೆಹಲಿ: ಭಾರತದ ವಾಯುಪಡೆಗೆ ಅಮೆರಿಕದ 3 ಅಪಾಚೆ ಹೆಲಿಕಾಪ್ಟರ್‌ಗಳು (Apache helicopters) ಸೇರ್ಪಡೆಗೊಂಡಿವೆ. ಜುಲೈ 21ರಂದು ಈ ಮೂರು ಹೆಲಿಕಾಪ್ಟರ್‌ಗಳು ಭಾರತ-ಪಾಕ್ ಗಡಿಯಲ್ಲಿ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ.
First batch of the Indian Air Force’s @Boeing_In AH-64E Apache helicopters inbound! Four airframes arrive in India in the next few days, with total of 9 to be delivered this year + remaining 13 next year. They’ll operate out of Pathankot & Jorhat. pic.twitter.com/Z4LG66J0PE
ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳಿಗೆ (Defence Sector) ಸಂಬಂಧಿಸಿದ ಮೂಲಗಳ ಪ್ರಕಾರ, ಭಾರತ ಸ್ವೀಕರಿಸಲಿರುವ ಮೂರು ಹೆಲಿಕಾಪ್ಟರ್‌ಗಳನ್ನು ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾಗುತ್ತದೆ. ‘ಗಾಳಿಯಲ್ಲಿರುವ ಯುದ್ಧ ಟ್ಯಾಂಕ್‌ಗಳು’ ಎಂದೂ ಕರೆಯಲ್ಪಡುವ ಸುಧಾರಿತ AH-64E ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಯ (IAF) ಹಿಂಡನ್ ವಾಯುಪಡೆ ನಿಲ್ದಾಣದಲ್ಲಿ ಇಳಿಯಲಿವೆ. ರಾಜಸ್ಥಾನದ ಜೋಧ್‌ಪುರದಲ್ಲಿ ವಾಯುಸೇನೆಯು ತನ್ನ ಮೊದಲ ಅಪಾಚೆ ಸ್ಕ್ವಾಡ್ರನ್ ರಚಿಸಿದ 15 ತಿಂಗಳ ನಂತರ, ಅಮರಿಕದಿಂದ ಮೊದಲ ಕಂತಿನ ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಭಾರತಕ್ಕೆ ಬರುತ್ತಿವೆ.
ಈ ಹಿಂದೆ 2015ರಲ್ಲಿ 22 ಅಪಾಚೆ ಹೆಲಿಕಾಪ್ಟರ್ ಖರೀದಿಸಲಾಗಿತ್ತು. ಜುಲೈ 2020ರಲ್ಲಿ ಮತ್ತೆ 600 ಮಿಲಿಯನ್ ಡಾಲರ್ ವೆಚ್ಚದ 6 ಹೆಲಿಕಾಪ್ಟರ್‌ಗಳಿಗಾಗಿ ಸಹಿ ಆಗಿತ್ತು. ಇದಾಗಿ ಒಂದು ವರ್ಷದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ಮತ್ತೆ ಆರು ಹೊಸ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು 600 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದದ ಕರಾರಿನಂತೆ ಮೊದಲ ಕಂತಿನ ಮೂರು ಅಪಾಚೆ ಹೆಲಿಕಾಪ್ಟರ್‌ನ್ನು 2024ರ ಮೇ ಮತ್ತು ಜೂನ್ ನಡುವೆ ಭಾರತಕ್ಕೆ ತಲುಪಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಇದನ್ನು ಮುಂದೂಡಲಾಯಿತು. 15 ತಿಂಗಳು ತಡವಾಗಿ 3 ಹೆಲಿಕಾಪ್ಟರ್ ಭಾರತಕ್ಕೆ ಬರ್ತಿವೆ. ಗಾಳಿಯಲ್ಲಿರುವ ಯುದ್ಧ ಟ್ಯಾಂಕರ್ ಎಂದು ಕರೆಯಲ್ಪಡುವ ಸುಧಾರಿತ ಎಎಚ್-64ಇ ಹೆಲಿಕಾಫ್ಟರ್‌ಗಳು ಸೇನೆಯ ಆಕ್ರಮಣಾಕಾರಿ ಹಾಗೂ ವಿಚಕ್ಷಣಾ ಕಾರ್ಯಾಚರಣೆಗೆ ನೆರವಾಗಲಿವೆ.