Tag: indian army

  • ಭದ್ರತಾ ಪಡೆಯಿಂದ ಯಶಸ್ವಿ ಕಾರ್ಯಚರಣೆ – ಓರ್ವ ಭಯೋತ್ಪಾದಕ ಹತ

    ಭದ್ರತಾ ಪಡೆಯಿಂದ ಯಶಸ್ವಿ ಕಾರ್ಯಚರಣೆ – ಓರ್ವ ಭಯೋತ್ಪಾದಕ ಹತ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವಾರ್ (Kishtwar) ಜಿಲ್ಲೆಯ ಛತ್ರು ಪ್ರದೇಶದಲ್ಲಿ ಭಾರತೀಯ ಸೇನೆಯು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಭಯೋತ್ಪಾದಕನೊಬ್ಬನನ್ನು ಹೊಡೆದುರುಳಿಸಲಾಗಿದೆ.

    ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಛತ್ರುವಿನ ಕಾಡಿನ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಸಾಧ್ಯತೆಯನ್ನು ಗಮನಿಸಿದ ಸೇನೆ, ಶೋಧ ಕಾರ್ಯಾಚರಣೆಯನ್ನು ಆರಂಭಿಸಿತು. ಈ ವೇಳೆ ಭಯೋತ್ಪಾದಕರೊಂದಿಗೆ (Terrorists) ತೀವ್ರ ಗುಂಡಿನ ಚಕಮಕಿಯಾಗಿದ್ದು, ಒಬ್ಬ ಭಯೋತ್ಪಾದಕನನ್ನು ಸೇನೆಯು ಯಶಸ್ವಿಯಾಗಿ ಹೊಡೆದುರುಳಿಸಿದೆ. ಇದನ್ನೂ ಓದಿ: ಬಿಹಾರ ಚುನಾವಣೆ ವೇಳೆ ಕೇಂದ್ರ ಸರ್ಕಾರ ಉಗ್ರ ರಾಣಾನನ್ನ ಗಲ್ಲಿಗೇರಿಸಲಿದೆ: ಸಂಜಯ್ ರಾವತ್‌

    ಈ ಕಾರ್ಯಾಚರಣೆಯಲ್ಲಿ ಯಾವುದೇ ಯೋಧರಿಗೆ ಗಾಯವಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ. ಕೊಲ್ಲಲ್ಪಟ್ಟ ಭಯೋತ್ಪಾದಕನ ಗುರುತು ಇನ್ನೂ ಖಚಿತವಾಗಿಲ್ಲ. ಭದ್ರತಾ ಸಿಬ್ಬಂದಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಾರ್ಯಾಚರಣೆಯ ಸ್ಥಳದಿಂದ ಶಸ್ತ್ರಾಸ್ತ್ರಗಳು, ಗುಂಡಿನ ಸಾಮಗ್ರಿಗಳು ಮತ್ತು ಇತರ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

  • ಭಾರತದ ಗಡಿಯೊಳಗೆ ನುಗ್ಗಲು ಪಾಕ್ ಸೇನೆ ಯತ್ನ – ಭಾರತದಿಂದ ಪ್ರತಿದಾಳಿ

    ಭಾರತದ ಗಡಿಯೊಳಗೆ ನುಗ್ಗಲು ಪಾಕ್ ಸೇನೆ ಯತ್ನ – ಭಾರತದಿಂದ ಪ್ರತಿದಾಳಿ

    ಶ್ರೀನಗರ: ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಜಮ್ಮು ಮತ್ತು ಕಾಶ್ಮೀರದ (Jammu Kashmir) ಪೂಂಚ್ ಪ್ರದೇಶದ ಗಡಿ ನಿಯಂತ್ರಣ ರೇಖೆಯ (LOC) ಉದ್ದಕ್ಕೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪಾಕ್ ಸೇನೆಯಿಂದ (Pakistan Army) ಅಪ್ರಚೋದಿತ ಗುಂಡಿನ ದಾಳಿ ಮತ್ತು ಅತಿಕ್ರಮಣ ನಡೆದಿದೆ. ಭಾರತದ ಗಡಿಯೊಳಗೆ ನುಗ್ಗಲು ನೋಡಿದ ಪಾಕ್ ಸೇನೆಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ.

    ಭಾರತದ ನೆಲಕ್ಕೆ ನುಗ್ಗಿದ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆಯೂ (Indian Army) ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಸೇನಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಎನ್‌ಜಿಒಗಳಿಗೆ ಜಾರ್ಜ್ ಸೊರೊಸ್ ನಿಧಿಯಿಂದ ಹಣ ವರ್ಗಾವಣೆ – ಪತ್ತೆ ಹಚ್ಚಿದ ಇಡಿ

    ಏಪ್ರಿಲ್ 1 ರಂದು ಗಡಿ ನಿಯಂತ್ರಣ ರೇಖೆಯಾದ್ಯಂತ ದಾಟಿ ಪಾಕಿಸ್ತಾನ ಸೇನೆಯ ಒಳನುಸುಳುವಿಕೆಯ ಪರಿಣಾಮವಾಗಿ ಕೃಷ್ಣ ಘಾಟಿ ವಲಯದಲ್ಲಿ ಗಣಿ ಸ್ಫೋಟ ಸಂಭವಿಸಿದೆ. ಇದರ ನಂತರ ಕದನ ವಿರಾಮ ಒಪ್ಪಂದದ ಉಲ್ಲಂಘನೆ ಮಾಡಿರುವ ಪಾಕಿಸ್ತಾನ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸಾವು ನೋವಿನ ಬಗ್ಗೆ ಯಾವುದೇ ವರದಿ ಆಗಿಲ್ಲ. ಭಾರತ ಪಾಕಿಸ್ತಾನದೊಂದಿಗೆ ಒಟ್ಟು 3,323 ಕಿಮೀ ಗಡಿಯನ್ನು ಹಂಚಿಕೊಂಡಿದೆ. ಇದನ್ನೂ ಓದಿ: ಆರ್‌ಬಿಐ ನೂತನ ಡೆಪ್ಯೂಟಿ ಗವರ್ನರ್ ಆಗಿ ಪೂನಮ್ ಗುಪ್ತಾ ನೇಮಕ

  • ಪಾಕ್‌ನಿಂದ ಸ್ನೈಪರ್‌ ದಾಳಿ – ಭಾರತದ ಯೋಧನಿಗೆ ಗಾಯ

    ಪಾಕ್‌ನಿಂದ ಸ್ನೈಪರ್‌ ದಾಳಿ – ಭಾರತದ ಯೋಧನಿಗೆ ಗಾಯ

    ಶ್ರೀನಗರ: ರಜೌರಿ (Rajouri) ಜಿಲ್ಲೆಯ ನೌಶೇರಾದ ಕಲ್ಸಿಯಾನ್ ಪ್ರದೇಶದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ (Pakistan) ಬುಧವಾರ ಸ್ನೈಪರ್‌ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಭಾರತೀಯ ಯೋಧರೊಬ್ಬರು ಗಾಯಗೊಂಡಿದ್ದಾರೆ.

    ಗೂರ್ಖಾ ರೆಜಿಮೆಂಟ್ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನ ಮೇಲೆ ಸ್ನೈಪರ್‌ ಗುಂಡಿನ ದಾಳಿ ನಡೆದಿದೆ. ತಕ್ಷಣವೇ ಅವರನ್ನು ಉಧಂಪುರದಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭೂಸ್ವಾಧೀನ ಪರಿಹಾರ ನೀಡದ ಜಿಲ್ಲಾಡಳಿತ – ಹಾವೇರಿ ಜಿಲ್ಲಾಧಿಕಾರಿ ಕಾರು ಜಪ್ತಿ

    ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಬಗ್ಗೆ ಎಚ್ಚರಿಕೆ ನೀಡಿದ್ದು, ನಿಯಂತ್ರಣ ರೇಖೆಯ ಉದ್ದಕ್ಕೂ ಪರಿಸ್ಥಿತಿಯನ್ನು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕದ ಮದ್ಯದ ಮೇಲೆ ಭಾರತ 150%, ಕೃಷಿ ಉತ್ಪನ್ನಗಳ ಮೇಲೆ 100% ತೆರಿಗೆ ವಿಧಿಸುತ್ತಿದೆ: ವೈಟ್‌ಹೌಸ್

  • ರಜೌರಿಯಲ್ಲಿ ಸೇನಾ ವಾಹನದ ಮೇಲೆ ದಾಳಿ – ಪಠಾಣ್‌ಕೋಟ್‌ನಲ್ಲಿ ಅಕ್ರಮ ನುಸುಳುಕೋರನ ಹತ್ಯೆ

    ರಜೌರಿಯಲ್ಲಿ ಸೇನಾ ವಾಹನದ ಮೇಲೆ ದಾಳಿ – ಪಠಾಣ್‌ಕೋಟ್‌ನಲ್ಲಿ ಅಕ್ರಮ ನುಸುಳುಕೋರನ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu&Kashmir) ರಾಜೌರಿಯ (Rajouri) ಸುಂದರ್‌ಬನಿ ಮಲ್ಲಾ ರಸ್ತೆಯ ಅರಣ್ಯ ಪ್ರದೇಶದ ಫಾಲ್ (Phal) ಗ್ರಾಮದ ಬಳಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

    ವರದಿಗಳ ಪ್ರಕಾರ ಸೇನಾ ವಾಹನವು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಗುಂಡಿನ ದಾಳಿ ಮಾಡಲಾಗಿದೆ. ಯಾವುದೇ ಸಾವುನೋವು ಸಂಭವಿಸಿಲ್ಲ, ಸೈನಿಕರು ಗಾಯಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಮಿಳುನಾಡಿಗೆ ಅಮಿತ್ ಶಾ ಭೇಟಿ – ಕೊಯಮತ್ತೂರಿನಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿದ ಅಮಿತ್ ಶಾ

    ಕಾಡಿನಲ್ಲಿ ಅವಿತುಕೊಂಡಿದ್ದ ಭಯೋತ್ಪಾದಕರು, ಸೇನಾ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ. ಈ ಮಾರ್ಗವನ್ನು ಉಗ್ರರ ಒಳನುಸುಳುವಿಕೆ ಮಾರ್ಗವೆಂದು ವರದಿಯಾಗಿದೆ.

    ಸೇನೆಯು ಭಯೋತ್ಪಾದಕರ ಮೇಲೆ ಪ್ರತಿದಾಳಿ ನಡೆಸಿದೆ. ದಾಳಿ ನಡೆದ ಸ್ಥಳದಲ್ಲಿ ಸೇನೆಯು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭಕ್ತಿ ಪ್ರಿಯ ಶಿವ.. ಪರಮೇಶ್ವರನ ಅಚ್ಚುಮೆಚ್ಚಿನ ಭಕ್ತರಿವರು

    ಪಂಜಾಬ್‌ನ ಪಠಾಣ್‌ಕೋಟ್‌ನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಬಿಎಸ್‌ಎಫ್ ಸಿಬ್ಬಂದಿ ಪಾಕಿಸ್ತಾನಿ ಒಳನುಸುಳುಕೋರನನ್ನು ಹತ್ಯೆ ಮಾಡಿದ್ದಾರೆ. ಪಠಾಣ್‌ಕೋಟ್ ಮೂಲಕ ವ್ಯಕ್ತಿಯೊಬ್ಬ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ. ಆರಂಭದಲ್ಲಿ ಬಿಎಸ್‌ಎಫ್ ಸಿಬ್ಬಂದಿ ಆತನಿಗೆ ಎಚ್ಚರಿಕೆ ನೀಡಿದ್ದರು. ಇದನ್ನು ನಿರ್ಲಕ್ಷಿಸಿ ಮುಂದೆ ಸಾಗುತ್ತಲೇ ಇದ್ದ ನುಸುಳುಕೋರರನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಪುಲ್ವಾಮಾ ದಾಳಿಗೆ 6 ವರ್ಷ – 2019ರ ಫೆ.14 ರಂದು ನಡೆದಿದ್ದು ಏನು?

    ಪುಲ್ವಾಮಾ ದಾಳಿಗೆ 6 ವರ್ಷ – 2019ರ ಫೆ.14 ರಂದು ನಡೆದಿದ್ದು ಏನು?

    ಪ್ರತಿ ವರ್ಷ ಪ್ರೇಮಿಗಳ ದಿನವನ್ನಾಗಿ ಆಚರಿಸುವ ಪ್ರತಿಯೊಬ್ಬರಿಗೂ ಇದು ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನ ಅನ್ನೋದು ಮತ್ತೆ ಮತ್ತೆ ನೆನಪಿಗೆ ಬರುತ್ತೆ. ಏಕೆಂದರೆ ಇದೇ ದಿನ ಸರಿಯಾಗಿ 6 ವರ್ಷಗಳ ಹಿಂದೆ ಭಾರತೀಯ ಸೇನೆ (Indian Army) ಭದ್ರತಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ಸಿಆರ್‌ಪಿಎಫ್ (CRPF) ಯೋಧರು ಹುತಾತ್ಮರಾಗಿದ್ದರು. ಇಡೀ ಭಾರತವೇ ಶೋಕಾಚರಣೆ ಆಚರಿಸಿ, ಮರುಕ ವ್ಯಕ್ತಪಡಿಸಿತ್ತು.

    ಈಗಲೂ ಪ್ರತಿ ವರ್ಷ ಫೆಬ್ರವರಿ 14, ಭಾರತೀಯರ ಪಾಲಿಗೆ ಮರೆಯಲಾಗದ ದಿನ, ಕರಾಳ ದಿನ ಎಂದೇ ಹೇಳಬಹುದು. ಹೌದು.. 5 ವರ್ಷಗಳ ಹಿಂದೆ ಫೆಬ್ರವರಿ 14 ರಂದು 40 ಸಿಆರ್‌ಪಿಎಫ್ ಅಧಿಕಾರಿಗಳು ಹುತಾತ್ಮರಾಗಿದ್ದರು. ಈ ಸುದ್ದಿ ಕೇಳಿ ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿತ್ತು.

    ಜೈಶ್-ಎ-ಮೊಹಮ್ಮದ್ (JEM) ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ ವಾಹನದಲ್ಲಿ ಹೋಗುತ್ತಿದ್ದ ಯೋಧರು ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡರು. ಸ್ಫೋಟಕ ತುಂಬಿದ ವಾಹನವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಬೆಂಗಾವಲು ಪಡೆಯ ಮೇಲೆ ಭೀಕರವಾಗಿ ದಾಳಿ ನಡೆಸಲಾಗಿತ್ತು. ಈ ಕರಾಳ ಘಟನೆಯ ಬಗ್ಗೆ ನೆಟ್ಟಿಗರು #BlackDay ಹೆಸರಿನಲ್ಲಿ ಪೋಸ್ಟ್‌ ಮಾಡಿ ವೀರ ಯೋಧರ ಬಲಿದಾನವನ್ನು ಸ್ಮರಿಸುತ್ತಿದ್ದಾರೆ.

    ದಾಳಿಯ ಪ್ರಮುಖ ಅಂಶಗಳು
    14 ಫೆಬ್ರವರಿ 2019:
    ಜಮ್ಮು ಮತ್ತು ಕಾಶ್ಮೀರದಲ್ಲಿ 40 ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ 2 ಬಸ್‌ಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬಸ್‌ಗಳು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಅರೆಸೇನಾಪಡೆಯ ವಾಹನಗಳ ದೊಡ್ಡ ಗುಂಪಿನ ಭಾಗವಾಗಿತ್ತು. ದಾಳಿಯ ಸ್ವಲ್ಪ ಸಮಯದ ನಂತರ ಜೈಶ್-ಇ-ಮೊಹಮ್ಮದ್ ಸಂಘಟನೆ ವೀಡಿಯೋ ಬಿಡುಗಡೆ ಮಾಡಿತು. ದಾಳಿಯ ಹೊಣೆ ಹೊತ್ತುಕೊಂಡಿತ್ತು. ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗುಂಡಿಬಾಗ್, ಕಾಕಪೋರಾದಲ್ಲಿ ವಾಸಿಸುತ್ತಿದ್ದ ಸ್ಥಳೀಯ ಕಾಶ್ಮೀರಿ ಜಿಹಾದಿ ಎಂದು ಹೇಳಿಕೊಂಡಿದ್ದನು.

    15 ಫೆಬ್ರವರಿ 2019:
    ಫೆಬ್ರವರಿ 15, 2019 ರಂದು ಪತ್ರಿಕಾ ಪ್ರಕಟಣೆಯಲ್ಲಿ ವಿದೇಶಾಂಗ ಸಚಿವಾಲಯವು, ಪಾಕಿಸ್ತಾನವು ಭಯೋತ್ಪಾದನೆ ಬೆಂಬಲಿಸುತ್ತಿದೆ ಎಂದು ಆರೋಪಿಸಿತು. ಪಾಕಿಸ್ತಾನಿ ನಿಯಂತ್ರಿತ ಪ್ರದೇಶಗಳಲ್ಲಿ ತನ್ನ ಭಯೋತ್ಪಾದಕ ಮೂಲಸೌಕರ್ಯವನ್ನು ನಿರ್ವಹಿಸಲು ಮತ್ತು ವಿಸ್ತರಿಸಲು, ಭಾರತ ಇತರೆಡೆ ದಾಳಿಗಳನ್ನು ನಡೆಸಲು ಜೈಷ್‌ ನಾಯಕ ಮಸೂದ್ ಅಜರ್‌ಗೆ ಸಂಪೂರ್ಣ ಸ್ವಾತಂತ್ರ‍್ಯವನ್ನು ನೀಡಲಾಗಿದೆ ಎಂದು ವಿದೇಶಾಂಗ ಇಲಾಖೆ ಆರೋಪಿಸಿತು.

    ಪುಲ್ವಾಮಾ ದಾಳಿಯಲ್ಲಿ ಪಾಕ್ ಭಾಗವಹಿಸಿದೆ ಎಂಬ ಆರೋಪವನ್ನು ಪಾಕಿಸ್ತಾನ ನಿರಾಕರಿಸಿತು. ಮಸೂದ್ ಅಜರ್ ಭಯೋತ್ಪಾದಕ ಸಂಘಟನೆಗೆ ಸೇರಿದವನಲ್ಲ ಎಂದು ಚೀನಾ ಸಮರ್ಥಿಸಿಕೊಂಡಿತು. ಇದಕ್ಕೆ ಕಾರಣರಾದವರು ಭಾರೀ ಬೆಲೆ ತೆರಬೇಕಾಗುತ್ತದೆ ಮತ್ತು ಭಯೋತ್ಪಾದಕರನ್ನು ಎದುರಿಸಲು ಭದ್ರತಾ ಪಡೆಗಳಿಗೆ ಮುಕ್ತ ನಿಯಂತ್ರಣ ನೀಡಲಾಗುವುದು. ಉಗ್ರರು ಎಲ್ಲೇ ಅಡಗಿದ್ದರೂ ಅವರ ಮನೆಗೆ ನುಗ್ಗಿ ಹೊಡೆದು ಬರುತ್ತೇವೆ ಎಂದು ಅಂದು ಮೋದಿ ಗುಡುಗಿದ್ದರು. ಇಂತಹ ದಾಳಿಗಳನ್ನು ಸಂಘಟಿಸಿ ಭಾರತವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು. ಪುಲ್ವಾಮಾ ಭಯೋತ್ಪಾದಕ ದಾಳಿಯ ವಿರುದ್ಧ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಜಮ್ಮುವಿನಲ್ಲಿ ಕರ್ಫ್ಯೂ ಜಾರಿಗೊಳಿಸಲಾಯಿತು. ಮಿಲಿಟರಿ ಪಡೆಗಳ ನಿಯೋಜನೆಯಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಯಿತು.

    16 ಫೆಬ್ರವರಿ 2019:
    ರಾಜಕೀಯ ಪಕ್ಷಗಳು ಭದ್ರತಾ ಪಡೆಗಳನ್ನು ಬೆಂಬಲಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದವು, ಸ್ವಲ್ಪ ಸಮಯದ ನಂತರ ಎಲ್ಲಾ ಪಾಕಿಸ್ತಾನಿ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು 200 ಪ್ರತಿಶತಕ್ಕೆ ಹೆಚ್ಚಿಸಲಾಯಿತು. – ಜೆಎಂ ಜೊತೆ ಆಪಾದಿತ ಸಂಪರ್ಕ ಹೊಂದಿರುವ ಕನಿಷ್ಠ 7 ಜನರನ್ನು ಪುಲ್ವಾಮದಲ್ಲಿ ಬಂಧಿಸಲಾಯಿತು.

    ಈ ದಾಳಿ ಪರಿಣಾಮದಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟೂ ಹದಗೆಟ್ಟಿತ್ತು. ಭಾರತವು ತನ್ನ ಅತ್ಯಂತ ಆದ್ಯತೆಯ ರಾಷ್ಟ್ರವಾಗಿ ಪಾಕಿಸ್ತಾನದ ಸ್ಥಾನಮಾನವನ್ನು ತೆಗೆದುಹಾಕಿತು. ಭಾರತಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಪಾಕಿಸ್ತಾನಿ ಸರಕುಗಳ ಮೇಲಿನ ಕಸ್ಟಮ್ಸ್ ಹೆಚ್ಚಿಸಲಾಯಿತು. ಭಾರತದ ಸರ್ಕಾರದ ಪ್ರಕಾರ, ಪಾಕಿಸ್ತಾನವನ್ನು ಮನಿ ಲಾಂಡರಿಂಗ್ (ಎಫ್‌ಎಟಿಎಫ್) ಕಪ್ಪುಪಟ್ಟಿಗೆ ಹಣಕಾಸು ಆಕ್ಷನ್ ಟಾಸ್ಕ್ ಫೋರ್ಸ್ ಸೇರಿಸಬೇಕು. ಜಮ್ಮು ಮತ್ತು ಕಾಶ್ಮೀರ ಆಡಳಿತವು ಫೆಬ್ರವರಿ 17 ರಂದು ಪ್ರತ್ಯೇಕತಾವಾದಿ ನಾಯಕರ ಭದ್ರತೆಯನ್ನು ಹಿಂದಕ್ಕೆ ಪಡೆದುಕೊಂಡಿತು.

    26 ಫೆಬ್ರವರಿ 2019:
    ಭಾರತೀಯ ವಾಯುಪಡೆಯ ಜೆಟ್‌ಗಳು 12 ದಿನಗಳ ನಂತರ ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತು. 1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ, ದಾಳಿಯ ವಿಮಾನವು ನಿಯಂತ್ರಣ ರೇಖೆಯನ್ನು ದಾಟಿದ್ದು ಇದೇ ಮೊದಲಾಗಿತ್ತು. ಫೆಬ್ರವರಿ 26 ರಂದು, ಭಾರತೀಯ ವಾಯುಪಡೆಯ 12 ಮಿರಾಜ್-2000 ಜೆಟ್‌ಗಳು, ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲಕೋಟ್‌ನಲ್ಲಿದ್ದ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿತು. ಇದು ಜೈಶ್-ಇ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿ ಮತ್ತು ಈ ದಾಳಿಯಲ್ಲಿ ಸುಮಾರು 250 ಉಗ್ರಗಾಮಿಗಳು ಬಲಿಯಾದರು ಎಂದು ವರದಿ ಹೇಳಿತ್ತು.

    27 ಫೆಬ್ರವರಿ 2019:
    ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳು ಭಾರತದ ವಾಯುನೆಲೆಯನ್ನು ಪ್ರವೇಶಿಸಿದವು. ಈ ಯುದ್ಧವಿಮಾನಗಳು ಭಾರತೀಯ ಮಿಗ್-21 ಬೈಸನ್ ಎರಡು ಯುದ್ಧವಿಮಾನಗಳನ್ನು ನಾಶಪಡಿಸಿದವು. ಇದೇ ವೇಳೆ ಪಾಕಿಸ್ತಾನದ ಎಫ್-16 ವಿಮಾನವನ್ನು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಲ್ಟಿಹೊಡೆಯುವಂತೆ ಮಾಡಿದ್ದರು. ಈ ವೇಳೆ ಅಭಿನಂದನ್ ಅವರನ್ನ ಪಾಕಿಸ್ತಾನ ಸೆರೆಹಿಡಿಯಿತು.

    28 ಫೆಬ್ರವರಿ 2019:
    ಬಂಧಿತ ಐಎಎಫ್ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಇಮ್ರಾನ್ ಖಾನ್ ಫೆಬ್ರವರಿ 28 ರಂದು ಘೋಷಿಸಿದರು.

  • ಭಾರತೀಯ ಸೇನೆಯ ಅವಹೇಳನ ಆರೋಪ – ರಾಹುಲ್ ಗಾಂಧಿಗೆ ಲಕ್ನೋ ಕೋರ್ಟ್‌ ಸಮನ್ಸ್

    ಭಾರತೀಯ ಸೇನೆಯ ಅವಹೇಳನ ಆರೋಪ – ರಾಹುಲ್ ಗಾಂಧಿಗೆ ಲಕ್ನೋ ಕೋರ್ಟ್‌ ಸಮನ್ಸ್

    ನವದೆಹಲಿ: 2022ರಲ್ಲಿ ನಡೆದಿದ್ದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯನ್ನು (Indian Army) ಅವಹೇಳನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಲಕ್ನೋ ನ್ಯಾಯಾಲಯ (Lucknow Court) ಸಮನ್ಸ್ ಜಾರಿ ಮಾಡಿದೆ.

    ಮಾರ್ಚ್ 24 ರಂದು ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ (Rahul Gandhi) ಅವರಿಗೆ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಅಲೋಕ್ ವರ್ಮಾ ನಿರ್ದೇಶನ ನೀಡಿದ್ದಾರೆ. ಸೇನಾ ಕರ್ನಲ್ ಹುದ್ದೆಗೆ ಸಮನಾದ ಹುದ್ದೆ ಹೊಂದಿದ್ದ ಬಾರ್ಡರ್‌ ರೋಡ್‌ ಆರ್ಗನೈಸೇಷನ್‌ ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಎಂಬುವರ ಪರವಾಗಿ ವಕೀಲ ವಿವೇಕ್ ತಿವಾರಿ ಅವರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: 2025ರಲ್ಲಿ ಹಜ್‌ ಯಾತ್ರೆಗೆ ಮಕ್ಕಳು ನಿಷೇಧ – ಕಾರಣ ಏನು ಗೊತ್ತಾ?

    ಭಾರತ- ಚೀನಾ ಸೇನೆಗಳ ನಡುವಿನ ಘರ್ಷಣೆಯ ಕುರಿತು ಡಿಸೆಂಬರ್ 16, 2022 ರಂದು ರಾಹುಲ್‌ ಡಿಸೆಂಬರ್ 9, 2022ರಂದು ನೀಡಿದ ಹೇಳಿಕೆಗಳು ಭಾರತೀಯ ಸೇನೆಯನ್ನು ಅವಹೇಳನ ಮಾಡುವಂತಿದ್ದು, ಮಾನಹಾನಿಕರವಾಗಿವೆ ಎಂದು ತಿವಾರಿ ಆರೋಪಿಸಿದ್ದಾರೆ. ಇದನ್ನೂ ಓದಿ: ನಿಮಿಷಾಂಭ ದೇವಸ್ಥಾನದಲ್ಲಿ ಮಾಘ ಹುಣ್ಣಿಮೆ ಸಂಭ್ರಮ – ಕಾವೇರಿ ನದಿಯಲ್ಲಿ ಪುಣ್ಯಸ್ನಾನ

    ʻಅರುಣಾಚಲ ಪ್ರದೇಶದಲ್ಲಿ ಚೀನಾದ ಸೈನಿಕರು ಭಾರತೀಯ ಸೇನಾ ಸಿಬ್ಬಂದಿಯನ್ನು ಥಳಿಸುತ್ತಿದ್ದಾರೆʼ ಎಂಬ ರಾಹುಲ್‌ ಅವರ ಹೇಳಿಕೆಯು ವ್ಯಾಪಕ ಚರ್ಚೆ ಮತ್ತು ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾ ನಡೆಸಿದ್ದ ಕೃತ್ಯಗಳನ್ನು ಮುಂದೆ ಮಾಡಿ ಕೇಂದ್ರ ಸರ್ಕಾರವನ್ನು ರಾಹುಲ್‌ ಟೀಕಿಸಿದ್ದರು.

    ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮಾಜಿ ಅಧ್ಯಕ್ಷ ಅಮಿತ್ ಶಾ ಅವರನ್ನು ಕೊಲೆ ಆರೋಪಿ ಎಂದು ಕರೆದಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಜನವರಿಯಲ್ಲಿ ಸುಪ್ರೀಂ ಕೋರ್ಟ್ ತಡೆಹಿಡಿದಿದ್ದನ್ನು ಇಲ್ಲಿ ನೆನೆಯಬಹುದು. ಇದನ್ನೂ ಓದಿ: ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ: ಉದಯಗಿರಿ ದಾಂಧಲೆಗೂ ಮುನ್ನ ಮೌಲ್ವಿ ಪ್ರಚೋದನಕಾರಿ ಭಾಷಣ

    ಜಾರ್ಖಂಡ್‌ನಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಮಾರ್ಚ್ 18, 2018ರಂದು ಬಿಜೆಪಿಯನ್ನು ಟೀಕಿಸುವ ಭಾಷಣವನ್ನು ಗಾಂಧಿ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡನ ನವೀನ್‌ ಝಾ ದೂರು ದಾಖಲಿಸಿದ್ದರು. ಭಾಷಣದ ವೇಳೆ ಅಂದಿನ ಗೃಹ ಸಚಿವ ಅಮಿತ್‌ ಶಾ ಅವರು ಕೊಲೆ ಆರೋಪಿ ರಾಹುಲ್‌ ಹೇಳಿದ್ದರು ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.

  • ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಐಇಡಿ ಸ್ಫೋಟ – ಇಬ್ಬರು ಯೋಧರು ಹುತಾತ್ಮ

    ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಐಇಡಿ ಸ್ಫೋಟ – ಇಬ್ಬರು ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನಲ್ಲಿ ಭಯೋತ್ಪಾದಕರು ನಡೆಸಿದ ಐಇಡಿ (IED) ಸ್ಫೋಟದಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

    X ನಲ್ಲಿ ಪೋಸ್ಟ್ ಮಾಡಿರುವ ಸೇನೆ, ವೈಟ್ ನೈಟ್ ಕಾರ್ಪ್ಸ್ ಸಿಬ್ಬಂದಿಯ ಸಾವನ್ನು ದೃಢಪಡಿಸಿದೆ. ಪೋಸ್ಟ್‌ನಲ್ಲಿ, ಇಬ್ಬರು ಧೀರ ಸೈನಿಕರ ತ್ಯಾಗಕ್ಕೆ ವೈಟ್ ನೈಟ್ ಕಾರ್ಪ್ಸ್ ವಂದನೆ ಸಲ್ಲಿಸುತ್ತದೆ ಎಂದು ಸೇನೆ ತಿಳಿಸಿದೆ.

    ಸೈನಿಕರು ನಿಯಂತ್ರಣ ರೇಖೆಯಲ್ಲಿ (LoC) ಗಸ್ತು ತಿರುಗುತ್ತಿದ್ದ ವೇಳೆ IED ದಾಳಿ ನಡೆದಿದೆ. ದಾಳಿ ನಡೆದ ಸ್ಥಳದಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಸೇನೆ ತಿಳಿಸಿದೆ.

  • ಕೇರಳ | ಮಹಿಳೆ, ಅವಳಿ ಮಕ್ಕಳ ಕೊಲೆ ಕೇಸ್ – 19 ವರ್ಷಗಳ ಬಳಿಕ ಇಬ್ಬರು ಮಾಜಿ ಸೈನಿಕರು ಅರೆಸ್ಟ್!

    ಕೇರಳ | ಮಹಿಳೆ, ಅವಳಿ ಮಕ್ಕಳ ಕೊಲೆ ಕೇಸ್ – 19 ವರ್ಷಗಳ ಬಳಿಕ ಇಬ್ಬರು ಮಾಜಿ ಸೈನಿಕರು ಅರೆಸ್ಟ್!

    ತಿರುವನಂತಪುರಂ: ಮಹಿಳೆ ಹಾಗೂ ಆಕೆಯ 17 ದಿನದ ಅವಳಿ ಮಕ್ಕಳನ್ನು ಕೊಲೆಗೈದು 19 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಇಬ್ಬರು ಮಾಜಿ ಸೈನಿಕರನ್ನು ಕೇರಳ (Kerala) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ದಿಬಿಲ್ ಕುಮಾರ್ ಬಿ ಹಾಗೂ ರಾಜೇಶ್.ಪಿ ಎಂದು ಗುರುತಿಸಲಾಗಿದೆ. ಆರೋಪಿಗಳು ಫೆಬ್ರವರಿ 10, 2006 ರಂದು ಕೃತ್ಯ ಎಸಗಿದ್ದರು. ಪಿತೃತ್ವ ಪರೀಕ್ಷೆಯಲ್ಲಿ ಅವಳಿ ಹೆಣ್ಣುಮಕ್ಕಳ ತಂದೆ ಎಂದು ಸಾಬೀತಾಗುತ್ತದೆ ಎಂದು ಹೆದರಿ ಆರೋಪಿ ಕುಮಾರ್ ತನ್ನ ಸಹ ಸೈನಿಕನ ಸಹಾಯದಿಂದ ಅವಳನ್ನು ಮತ್ತು ಶಿಶುಗಳನ್ನು ಕೊಲೆಗೈದಿದ್ದ. ಬಳಿಕ ಇಬ್ಬರು ಸೈನ್ಯವನ್ನು ತೊರೆದಿದ್ದರು.

    ಕೇರಳದ ಕೊಲ್ಲಂ ಜಿಲ್ಲೆಯ ಆಂಚಲ್ ಬಳಿಯ ಯೆರಮ್‍ನಲ್ಲಿ ರಂಜಿನಿ (24) ಮತ್ತು ಅವಳ ನವಜಾತ ಹೆಣ್ಣುಮಕ್ಕಳನ್ನು ಅವರ ಬಾಡಿಗೆ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಅವಳಿ ಮಕ್ಕಳ ಜನನ ಪ್ರಮಾಣ ಪತ್ರ ಪಡೆಯಲು ಹೋಗಿದ್ದ ರಂಜಿನಿ ಅವರ ತಾಯಿ ಪಂಚಾಯತ್ ಕಚೇರಿಯಿಂದ ಹಿಂತಿರುಗಿದಾಗ ಮನೆಯಲ್ಲಿ ಶವಗಳು ಪತ್ತೆಯಾಗಿದ್ದವು.

    ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದಾಗ, ಪಠಾಣ್‍ಕೋಟ್‍ನಲ್ಲಿ ಭಾರತೀಯ ಸೇನೆಯ 45 ಎಡಿ ರೆಜಿಮೆಂಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಚಲ್‍ನ ದಿಬಿಲ್ ಕುಮಾರ್ ಬಿ (28) ರಂಜಿನಿ ಅವರೊಂದಿಗೆ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿತ್ತು. ಜನವರಿ 24, 2006 ರಂದು ಅವಳಿ ಮಕ್ಕಳು ಜನಿಸಿದ ನಂತರ, ಅವರು ಅವಳಿಂದ ದೂರವಾಗಲು ಪ್ರಾರಂಭಿಸಿದ್ದರು.

    ನಂತರ ಮಹಿಳೆಯ ತಾಯಿ ಕೇರಳ ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಿದ್ದರು. ಇದು ಅವಳಿ ಮಕ್ಕಳ ಡಿಎನ್‍ಎ ಪರೀಕ್ಷೆಗೆ ಆದೇಶಿಸಿತ್ತು. ಇದರಿಂದ ಕುಮಾರ್ ಆಕೆಯ ಕೊಲೆಗೆ ಸಂಚು ರೂಪಿಸಿದ್ದ. ಬಳಿಕ ಸೈನ್ಯದಲ್ಲಿದ್ದ ರಾಜೇಶ್.ಪಿ ಎಂಬಾತ ರಂಜಿನಿಯನ್ನು ಮದುವೆಯಾಗಲು ಕುಮಾರ್‌ಗೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದ. ಆದರೆ ಆತ ಕುಮಾರ್ ಜೊತೆ ಸೇರಿಕೊಂಡು ಹತ್ಯೆಗೆ ಕೈ ಜೋಡಿಸಿದ್ದ.

    ಸ್ಥಳೀಯ ಪೊಲೀಸರು ವ್ಯಾಪಕ ತನಿಖೆ ನಡೆಸಿದರೂ ಮತ್ತು ಅವರ ಸೆರೆಗೆ ಕಾರಣವಾಗುವ ಮಾಹಿತಿಗೆ 2 ಲಕ್ಷ ರೂಪಾಯಿ ಬಹುಮಾನ ನೀಡಿದ್ದರೂ ಸಹ ಇಬ್ಬರ ಸುಳಿವು ಸಿಕ್ಕಿರಲಿಲ್ಲ. ಕೇರಳ ಹೈಕೋರ್ಟ್‍ನ (Court) ಆದೇಶದ ಮೇರೆಗೆ 2010 ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು.

    ಸಿಬಿಐ (CBI) ತನಿಖೆ ವೇಳೆ ಕುಮಾರ್ ಮತ್ತು ರಾಜೇಶ್ ಪುದುಚೇರಿಯಲ್ಲಿ ನಕಲಿ ಹೆಸರಿನಲ್ಲಿ ವಾಸಿಸುತ್ತಿದ್ದಾರೆ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಹೊಸ ದಾಖಲೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುಳಿವು ಸಿಕ್ಕಿತ್ತು. ಅಲ್ಲದೇ ಇಬ್ಬರು ಶಿಕ್ಷಕಿಯರನ್ನು ಮದುವೆಯಾಗಿದ್ದರು ಎಂದು ತಿಳಿದು ಬಂದಿತ್ತು.

    ಸಿಬಿಐನ ಚೆನ್ನೈ ಘಟಕವು ಶುಕ್ರವಾರ ಇಬ್ಬರನ್ನು ಬಂಧಿಸಿ ಕೊಚ್ಚಿಗೆ ಕರೆತಂದಿದೆ. ಅಲ್ಲಿ ಅವರನ್ನು ಶನಿವಾರ ಎರ್ನಾಕುಲಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಜ.18ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

  • ಜಮ್ಮುವಿನ ಬಂಡಿಪೋರಾದಲ್ಲಿ ಪ್ರಪಾತಕ್ಕೆ ಬಿದ್ದ ಸೇನಾ ವಾಹನ – ನಾಲ್ವರು ಯೋಧರು ಹುತಾತ್ಮ!

    ಜಮ್ಮುವಿನ ಬಂಡಿಪೋರಾದಲ್ಲಿ ಪ್ರಪಾತಕ್ಕೆ ಬಿದ್ದ ಸೇನಾ ವಾಹನ – ನಾಲ್ವರು ಯೋಧರು ಹುತಾತ್ಮ!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡೀಪೋರಾ (Bandipore) ಜಿಲ್ಲೆಯಲ್ಲಿ ಶನಿವಾರ ಸೇನಾ ವಾಹನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ (Army Vehicle Falls) ಪರಿಣಾಮ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ.

    ಮಧ್ಯಾಹ್ನ 2.30ರ ಸುಮಾರಿಗೆ ಎಸ್‌ಕೆ ಪೇಯೆನ್ ಪ್ರದೇಶದ ಬಳಿ ಕೆಟ್ಟ ಹವಾಮಾನ ಪರಿಸ್ಥಿತಿಯಿಂದ ವಾಹನವು ಚಾಲಕನ ನಿಯಂತ್ರಣ ತಪ್ಪಿ, ದುರಂತ ಸಂಭವಿಸಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ಯೋಧರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಚಿಕಿತ್ಸೆ ಫಲಕಾರಿಯಾಗದೇ ನಾಲ್ವರು ಸಾವನ್ನಪ್ಪಿದ್ದಾರೆ. ಮೂವರ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

    ಅಪಘಾತ ಸ್ಥಳದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸ್‌ ಸಿಬ್ಬಂದಿಯನ್ನ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ. ಇದನ್ನೂ ಓದಿ: 32 ವರ್ಷಗಳಿಂದ ಸ್ನಾನವನ್ನೇ ಮಾಡದ ಛೋಟಾ ಬಾಬಾ – ‘ಕುಂಭ ಮೇಳ’ದ ಆಕರ್ಷಣೆ ಕೇಂದ್ರಬಿಂದು ಇವರೇ!

    ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತಕ್ಕೀಡಾಗಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆ 2024ರ ಡಿಸೆಂಬರ್‌ 24ರಂದು ಪೂಂಚ್‌ನಲ್ಲಿ ಸೇನಾವಾಹನ 350 ಆಳದ ಪ್ರಪಾತಕ್ಕೆ ಬಿದ್ದು, ಐವರು ಸೈನಿಕರು ಸಾವನ್ನಪ್ಪಿದ್ದರು ಮತ್ತು ಐವರು ಗಾಯಗೊಂಡಿದ್ದರು. ಈ ಪೈಕಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾದರು. ಇದನ್ನೂ ಓದಿ: Delhi Assembly Election | 29 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ

    ಇದಕ್ಕೂ ಮುನ್ನ 2024ರ ನವೆಂಬರ್‌ 4ರಂದು ರಜೌರಿ ಜಿಲ್ಲೆಯಲ್ಲಿ ಸೇನಾ ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಬಿದ್ದು ಓರ್ವ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರು, ಮತ್ತೊಬ್ಬರು ಗಾಯಗೊಂಡಿದ್ದರು. ನವೆಂಬರ್‌ 2ರಂದು ರಿಯಾಸಿ ಜಿಲ್ಲೆಯಲ್ಲಿ ಕಾರೊಂದು ಕಮರಿಗೆ ಬಿದ್ದು 10 ತಿಂಗಳ ಮಗು ಸೇರಿ ಮೂವರು ಸಾವನ್ನಪ್ಪಿದ್ದರು ಹಾಗೂ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನೂ ಓದಿ: ಕೆಲವರು ಗ್ರಾಮೀಣ ಭಾಗದಲ್ಲಿ ಜಾತಿ ರಾಜಕಾರಣದ ಹೆಸರಿನಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ: ಮೋದಿ

  • ಇಂದು ಯೋಧ ದಿವೀನ್‌ ಅಂತ್ಯಕ್ರಿಯೆ – ಓದಿದ್ದ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಇಂದು ಯೋಧ ದಿವೀನ್‌ ಅಂತ್ಯಕ್ರಿಯೆ – ಓದಿದ್ದ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಮಡಿಕೇರಿ: ಜಮ್ಮು-ಕಾಶ್ಮೀರ (Jammu and Kashmir) ಪೂಂಚ್‌ನಲ್ಲಿ ನಡೆದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕೊಡಗಿನ ಯೋಧ (Kodagu soldier) ದಿವಿನ್ (28) ಭಾನುವಾರ ರಾತ್ರಿ ಹುತಾತ್ಮರಾಗಿದ್ದಾರೆ. ಅವರ ಪಾರ್ಥಿವ ಶರೀರ ಹೂಟ್ಟೂರು ತಲುಪಿದೆ.

    ಆಲೂರು ಸಿದ್ದಾಪುರದಲ್ಲಿ ದಿವಿನ್ ವಿದ್ಯಾಭ್ಯಾಸ ಮಾಡಿದ್ದ ಜಿಎಂಪಿ ಶಾಲಾ ಮೈದಾನದಲ್ಲಿ ಕೆಲ ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಬಳಿಕ ಕುಶಾಲನಗರದಿಂದ ನೇರವಾಗಿ ಆಲೂರು ಸಿದ್ದಾಪುರಕ್ಕೆ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತದೆ. ಬಳಿಕ ದಿವಿನ್ ಅವರ ತೋಟದಲ್ಲಿರುವ ಅವರ ತಂದೆ ಸಮಾಧಿ ಪಕ್ಕದಲ್ಲಿ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

    ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಕೊಡಗಿನ ಯೋಧ ಗಂಭೀರ ಗಾಯಗೊಂಡಿದ್ದರು. ದುರಂತದಲ್ಲಿ ಕರ್ನಾಟದ ಮೂವರು ಸೈನಿಕರು ಹುತಾತ್ಮರಾಗಿದ್ದರು.