Tag: indian army

  • ಮತ್ತೊಬ್ಬ ಉಗ್ರನ ಮನೆ ಉಡೀಸ್‌ – ಇಲ್ಲಿಯವರೆಗೆ 8 ಉಗ್ರರ ನಿವಾಸ ಧ್ವಂಸ

    ಮತ್ತೊಬ್ಬ ಉಗ್ರನ ಮನೆ ಉಡೀಸ್‌ – ಇಲ್ಲಿಯವರೆಗೆ 8 ಉಗ್ರರ ನಿವಾಸ ಧ್ವಂಸ

    ಶ್ರೀನಗರ: ಪಹಲ್ಗಾಮ್‌ ದಾಳಿಗೆ (Pahalgam Terror Attack) ಪ್ರತೀಕಾರವಾಗಿ ಭದ್ರತಾ ಪಡೆಗಳ ಸಚ್ಛ ಕಾಶ್ಮೀರ (Jammu Kashmir) ಅಭಿಯಾನ ಮತ್ತಷ್ಟು ತೀವ್ರಗೊಂಡಿದೆ. ಉಗ್ರರ ಮನೆಗಳನ್ನು ಹುಡುಕಿ ಹುಡುಕಿ ಧ್ವಂಸ ಮಾಡುತ್ತಿರುವ ಭದ್ರತಾ ಈಗ ಮತ್ತೊಬ್ಬ ಉಗ್ರನ ಮನೆಯನ್ನು (House) ಸ್ಫೋಟಿಸಿದೆ.

    ಬಂಡಿಪೋರಾದಲ್ಲಿ ಲಷ್ಕರ್-ಎ-ತೈಬಾ ಭಯೋತ್ಪಾದಕ ಜಮೀಲ್ ಅಹ್ಮದ್‌ನ ಮನೆಯನ್ನು ಭದ್ರತಾ ಪಡೆಗಳು ಸ್ಫೋಟಿಸಿವೆ. ಈ ಮೂಲಕ ಕಳೆದ ಮೂರು ದಿನಗಳಲ್ಲಿ 8 ಉಗ್ರರ ಮನೆಗಳನ್ನು ಧ್ವಂಸಗೊಳಿಸಿದಂತಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ – ಶಾಸಕ, ಶಿಕ್ಷಕ, ವಕೀಲ ಸೇರಿ 19 ಮಂದಿ ಅರೆಸ್ಟ್‌

     

    ಕಳೆದ ಮೂರು ದಿನಗಳಲ್ಲಿ ಜಿಲ್ಲಾ ಅಧಿಕಾರಿಗಳೊಂದಿಗೆ, ಭದ್ರತಾ ಪಡೆಗಳು ಕಣಿವೆಯಾದ್ಯಂತ ಹಲವಾರು ಭಯೋತ್ಪಾದಕರ ಆಸ್ತಿಗಳನ್ನು ಧ್ವಂಸಗೊಳಿಸಿವೆ. ಇದನ್ನೂ ಓದಿ: ಪಹಲ್ಗಾಮ್‌ ಉಗ್ರರ ದಾಳಿ – NIA ಹೆಗಲಿಗೆ ತನಿಖೆಯ ಹೊಣೆ

    ಭದ್ರತಾ ಪಡೆಗಳು ಈಗ ಅನುಮಾನ ಬಂವರ ಮನೆಗಳನ್ನು ಹುಡುಕಿ ಶಸ್ತ್ರಸ್ತ್ರ ಪತ್ತೆ ಮಾಡುತ್ತಿದ್ದಾರೆ. ಉಗ್ರರಿಗೆ ಸಹಕಾರ ನೀಡಿದ ಆರೋಪದ ಅಡಿ ನೂರಾರು ಮಂದಿ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಕಾಶ್ಮೀರದ ಹಲವೆಡೆ ಭದ್ರತಾ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ – ಇದುವರೆಗೆ 175ಕ್ಕೂ ಹೆಚ್ಚು ಮಂದಿ ವಶಕ್ಕೆ

    ಕಾಶ್ಮೀರದ ಹಲವೆಡೆ ಭದ್ರತಾ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ – ಇದುವರೆಗೆ 175ಕ್ಕೂ ಹೆಚ್ಚು ಮಂದಿ ವಶಕ್ಕೆ

    – ಉಗ್ರರಿಗೆ ಸ್ಥಳೀಯ ಮಟ್ಟದಲ್ಲಿ ಸಹಾಯ ಮಾಡುತ್ತಿದ್ದ ಹಿನ್ನೆಲೆ ವಶಕ್ಕೆ
    – 24 ಗಂಟೆಯಲ್ಲಿ ಐವರು ಉಗ್ರರ ಮನೆ ಧ್ವಂಸ

    ಶ್ರೀನಗರ: ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನೆತ್ತರು ಹರಿಸಿದ್ದ ಉಗ್ರರ ವಿರುದ್ಧ ಭಾರತೀಯ ಸೇನೆಯ (Indian Army) ಕಾರ್ಯಾಚರಣೆ ಶುರುವಾಗಿದೆ. ಕುಲ್ಗಾಮ್ ಜಿಲ್ಲೆಯ ಮುತಲ್ಹಾಮಾ ಗ್ರಾಮದಲ್ಲಿ ಉಗ್ರ ಝಾಕೀರ್ ಅಹ್ಮದ್ ಗಣಿ, ಶೋಪಿಯಾನ್‌ನ ಚೋಟಿಪೋರಾ ಗ್ರಾಮದಲ್ಲಿ ಎಲ್‌ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಉಗ್ರನ ಮನೆಯನ್ನು ನೆಲಸಮಗೊಳಿಸಲಾಗಿದೆ. ಪುಲ್ವಾಮಾದ ಮರ‍್ರಾನ್ ಪ್ರದೇಶದಲ್ಲಿ ಅಹ್ಸಾನ್ ಉಲ್ ಹಕ್ ಮನೆ ಸ್ಫೋಟಿಸಿ ನಿನ್ನೆಯಷ್ಟೇ ನೆಲಸಮ ಮಾಡಲಾಗಿತ್ತು.

    ಇನ್ನೂ ಉಗ್ರರಿಗೆ ಹಣಕಾಸು ಸಹಾಯ ಮಾಡಿರುವ ಶಂಕೆಯಲ್ಲಿ ಅನಂತನಾಗ್ (Anantnag) ಜಿಲ್ಲೆಯಲ್ಲಿ 175 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ ಕುಪ್ವಾರದಲ್ಲಿ ಕೂಂಬಿಂಗ್ ವೇಳೆ 8 ಎಕೆ 47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಲಂಡನ್‌ನಲ್ಲಿ ಭಾರತೀಯರ ಪ್ರತಿಭಟನೆ ವೇಳೆ ಕತ್ತು ಕೊಯ್ಯುವ ಸನ್ನೆ ಮಾಡಿದ ಪಾಕ್ ಅಧಿಕಾರಿ

    ಇನ್ನೂ ಪಾಕಿಸ್ತಾನ ಪ್ರಜೆಗಳು ದೇಶ ತೊರೆಯಲು ಕೇಂದ್ರ ಸರ್ಕಾರ 48 ಗಂಟೆ ಗಡುವು ನೀಡಿತ್ತು. ಈ ಬೆನ್ನಲ್ಲೇ ಭಾರತಕ್ಕೆ ಭೇಟಿ ನೀಡಿದ ಒಟ್ಟು 191 ಪಾಕಿಸ್ತಾನಿ ಪ್ರಜೆಗಳು ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಭೂಮಾರ್ಗದ ಮೂಲಕ ವಾಪಸ್ ಮರಳಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ 287 ಭಾರತೀಯ ಪ್ರಜೆಗಳು ಸಹ ಹಿಂತಿರುಗಿದ್ದಾರೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದಲ್ಲಿರುವ 98 ಜನ ಪಾಕಿಸ್ತಾನ ಪ್ರಜೆಗಳಿಗೂ ದೇಶ ತೊರೆಯುವಂತೆ ಸೂಚಿಸಲಾಗಿದೆ.

    ಈ ಮಧ್ಯೆ, ವಾಘಾ ಗಡಿ ಬಂದ್ ಆದ ಕಾರಣ ಪಾಕ್ ವಧು-ರಾಜಸ್ಥಾನದ ವರ ಮದುವೆ ಅತಂತ್ರಗೊಂಡಿದೆ. ಈ ಮಧ್ಯೆ, ಉಗ್ರರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರಿದಿವೆ. ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್‌ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ – ರನ್‌ವೇ ಬಂದ್‌, ವಿಮಾನಗಳ ಹಾರಾಟ ಸ್ಥಗಿತ

  • ಸಿಂಧು ನದಿ ಒಪ್ಪಂದ ರದ್ದಿನಿಂದ ಪಾಕ್ ವಿಲವಿಲ – ಭಾರತದ ಉಸಿರು ನಿಲ್ಲಿಸ್ತೇವೆಂದ ಕ್ರಿಮಿ ಹಫೀಜ್

    ಸಿಂಧು ನದಿ ಒಪ್ಪಂದ ರದ್ದಿನಿಂದ ಪಾಕ್ ವಿಲವಿಲ – ಭಾರತದ ಉಸಿರು ನಿಲ್ಲಿಸ್ತೇವೆಂದ ಕ್ರಿಮಿ ಹಫೀಜ್

    ಶ್ರೀನಗರ: ಪಹಲ್ಗಾಮ್‌ನಲ್ಲಿ (Pahalgam) ಅಮಾಯಕ ಹಿಂದೂಗಳನ್ನ ನರಮೇಧ ಮಾಡಿ ಕ್ರೌರ್ಯ ಮೆರೆದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ (Indian Army) ರೌದ್ರರೂಪ ತಾಳಿದೆ. ಧರ್ಮ ಕೇಳಿ, ಪ್ಯಾಂಟ್ ಬಿಚ್ಚಿ, ಕಲ್ಮಾ ಬರದಿದ್ದಕ್ಕೆ ಗುಂಡಿಟ್ಟು ಕೊಂದ ಉಗ್ರರನ್ನು ಸದೆಬಡಿಯಲು ಆಪರೇಷನ್ ಆರಂಭಿಸಿದೆ.ಇದನ್ನೂ ಓದಿ: ಶನಿವಾರ ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ

    ಪ್ರವಾಸಿಗರ ಹತ್ಯಾಕಾಂಡ ಬೆನ್ನಲ್ಲೇ ಓರ್ವ ಉಗ್ರ ಕ್ರಿಮಿಯನ್ನ ಸೇನಾಪಡೆ ಹೊಸಕಿ ಹಾಕಿದೆ. ಜಮ್ಮು ಮತ್ತು ಕಾಶ್ಮೀರದ (Jammu Kashmir) ಬಂಡಿಪೋರಾದಲ್ಲಿ LET ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಸೇನೆ ಸಂಹರಿಸಿದೆ. ಪಹಲ್ಗಾಮ್ ದಾಳಿ ಬಳಿಕ ಉಗ್ರರನ್ನು ಹುಟ್ಟಡಗಿಸಲು ಕಾರ್ಯಾಚರಣೆ ಆರಂಭಿಸಿದ ಸೇನಾಪಡೆ ಇಂದು ಬೆಳಿಗ್ಗೆ ಪೊಲೀಸರ ಜೊತೆಗೂಡಿ ಅಲ್ತಾಫ್‌ನನ್ನು ಫಿನೀಶ್ ಮಾಡಿದೆ.

    ಗುಂಡಿನ ಚಕಮಕಿ ವೇಳೆ ಇಬ್ಬರು ಯೋಧರಿಗೆ ಗಾಯಗಳಾಗಿವೆ. ಲಷ್ಕರ್ ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿ, ಕಾಶ್ಮೀರದಲ್ಲಿ ಉಗ್ರರ ದಾಳಿ ಹಾಗೂ ಪ್ಲ್ಯಾನ್‌ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ. ನಿನ್ನೆ ರಾತ್ರಿ ಎಲ್‌ಒಸಿಯಲ್ಲಿ ಬಾಲ ಬಿಚ್ಚಿದ್ದ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ. ಪಾಕ್ ಸೇನಾ ಶಿಬಿರಗಳ ಮೇಲೆ ಭಾರತ ಪ್ರತಿದಾಳಿ ನಡೆಸಿದೆ. ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಪಹಲ್ಗಾಮ್‌ಗೆ ಭೇಟಿ ಕೊಟ್ಟು, ಪರಿಶೀಲನೆ ನಡೆಸಿದ್ದಾರೆ. ಇನ್ನು ಐಎಸ್‌ಐ ದಾಳಿ ಸಾಧ್ಯತೆ ಹಿನ್ನೆಲೆ ಕಾಶ್ಮೀರದಲ್ಲಿರುವ ಸ್ಥಳೀಯರಲ್ಲದ ರೈಲ್ವೆ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಸೆಕ್ಯುರಿಟಿ ಅಡ್ವೈಸರಿ ಹೊರಡಿಸಲಾಗಿದೆ.ಇದನ್ನೂ ಓದಿ: Waqf Act | ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ – ಅರ್ಜಿಗಳನ್ನು ವಜಾಗೊಳಿಸುವಂತೆ ಮನವಿ

  • ಹಿಂದೂಗಳ ನರಮೇಧ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ – ಇಬ್ಬರು ಭಯೋತ್ಪಾದಕರ ಮನೆಗಳು ಬ್ಲಾಸ್ಟ್!

    ಹಿಂದೂಗಳ ನರಮೇಧ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ – ಇಬ್ಬರು ಭಯೋತ್ಪಾದಕರ ಮನೆಗಳು ಬ್ಲಾಸ್ಟ್!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ದಲ್ಲಿ (Pahalgam) ಭಯೋತ್ಪಾದಕರ ದಾಳಿಗೆ 26 ಅಮಾಯಕ ಹಿಂದೂಗಳು ಜೀವ ತೆತ್ತಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ (Indian Army) ಪ್ರತೀಕಾರ ಪ್ರಾರಂಭಿಸಿದೆ. ಉಗ್ರರ ಸದೆಬಡಿಯುವ ಶಪಥಗೈಯ್ದಿರುವ ಭಾರತೀಯ ಸೇನೆ ಮೊದಲ ದಿಟ್ಟ ಹೆಜ್ಜೆ ಇರಿಸಿದೆ. ಪಹಲ್ಗಾಮ್‌ನ ದಾಳಿಯಲ್ಲಿ ಭಾಗಿ ಆಗಿದ್ದಾನೆ ಎನ್ನಲಾದ ಲಷ್ಕರ್-ಇ-ತೈಬಾ ಉಗ್ರ ಆಸೀಫ್ ಶೇಖ್ ಮತ್ತು ಆದಿಲ್ ಮನೆಗಳನ್ನು ಸೇನೆ ಉಡಾಯಿಸಿದೆ.

    ಬಿಹಾರದಲ್ಲಿ (Bihar) ಪ್ರಧಾನಿ ನರೇಂದ್ರ ಮೋದಿ (PM Narendra Modi), ಅಮಾಯಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳೋದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇವತ್ತು ಸೇನೆ ಅಖಾಡಕ್ಕೆ ಇಳಿದಿದೆ. ಕಾಶ್ಮೀರದ (Kashmir)  ಟ್ರಾಲ್‌ನಲ್ಲಿರುವ ಎಲ್‌ಇಟಿ ಭಯೋತ್ಪಾದಕ ಆಸಿಫ್ ಶೇಖ್‌ನ ಮನೆ, ಅನಂತ್‌ನಾಗ್ ಜಿಲ್ಲೆಯಲ್ಲಿರುವ ಆದಿಲ್ ಮನೆಯನ್ನು ಸ್ಫೋಟಿಸಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಶೇಖ್ ಭಾಗಿಯಾಗಿದ್ದಾನೆಂದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಅಧಿಕಾರಿಗಳು ಶೇಖ್ ಮನೆ-ಆಸ್ತಿಯನ್ನು ನಾಶಪಡಿಸಿದ್ದಾರೆ. ಟ್ರಾಲ್ ಮತ್ತು ಅನಂತ್‌ನಾಗ್ ಜಿಲ್ಲೆಯಲ್ಲಿ ಇಬ್ಬರು ಉಗ್ರರ ಮನೆಗಳನ್ನು ಧ್ವಂಸಗೊಳಿಸಲಾಗಿದೆ.ಇದನ್ನೂ ಓದಿ: ನಾನು ಒಂದು ಧರ್ಮದ ಪರ ಅಲ್ಲ: ಸಿದ್ದರಾಮಯ್ಯ

    ಪಹಲ್ಗಾಮ್‌ನಲ್ಲಿ ಗುಂಡಿನ ಸುರಿಮಳೆ ಸುರಿಸಿ ಹಿಂದೂಗಳ ಹತ್ಯೆಗೈಯ್ದ ಉಗ್ರರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿದೆ. 5 ರಿಂದ 7 ಭಯೋತ್ಪಾದಕರು ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಪೈಕಿ ಇಬ್ಬರು ಸ್ಥಳೀಯ ಉಗ್ರರೇ ಆಗಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಈಗಾಗಲೇ ಇಬ್ಬರು ಉಗ್ರರ ಮನೆಗಳನ್ನು ಧ್ವಂಸ ಮಾಡಿರುವ ಸೇನೆ ಭಯೋತ್ಪಾದಕರ ಜಾಲ ಭೇದಿಸಲು ಕಾರ್ಯಾಚರಣೆ ಶುರು ಮಾಡಿದೆ.

    ಅಮಾಯಕ 26 ಮಂದಿ ಹಿಂದೂಗಳ ಕಗ್ಗೊಲೆ ಮಾಡಿದ ಕಡುಪಾಪಿಗಳ ಹುಟ್ಟಡಗಿಸಲು ಭಾರತೀಯ ಸೇನೆ ಶಪಥ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಎನ್‌ಕೌಂಟರ್ ಆರಂಭಿಸಲಾಗಿದೆ. ಅಡಗಿ ಕುಳಿತಿರುವ ಉಗ್ರರು ಹಾಗೂ ಭಾರತೀಯ ಸೇನಾಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ಕಾರ್ಯಾಚರಣೆ ವೇಳೆ ಲಷ್ಕರ್-ಎ ತೊಯ್ಬಾ ಸಂಘಟನೆಯ ಕಮಾಂಡರ್ ಅಲ್ತಫಾ ಲಲ್ಲಿಯನ್ನು ಫಿನಿಶ್ ಮಾಡಲಾಗಿದೆ.

    ಬಂಡಿಪೋರಾ ಜಿಲ್ಲೆಯ ಬಾಜಿಪೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆ ಭದ್ರತಾ ಪಡೆಗಳು ಕೂಂಬಿAಗ್ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಪರಿಣಾಮ ಇಬ್ಬರು ಭದ್ರತಾಪಡೆ ಸಿಬ್ಬಂದಿಗೆ ಗಾಯಗಳಾಗಿವೆ. ಉಗ್ರರು ಅಡಗಿರುವ ಸ್ಥಳವನ್ನು ಸುತ್ತುವರೆದಿರುವ ಸೇನಾಪಡೆ ಕಾರ್ಯಾಚರಣೆಯನ್ನು ಎನ್‌ಕೌಂಟರ್ ಆಗಿ ಬದಲಿಸಿದ್ದು, ಪಾಕ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.

    ಒಟ್ಟಿನಲ್ಲಿ ಭಾರತ ಪಾಕಿಸ್ತಾನದ ಮಧ್ಯೆ ಆತಂಕದ ವಾತಾವರಣವಿದ್ದು, ಇದು ಯಾವ ಹಂತ ತಲುಪುತ್ತದೆ ಎಂದು ಕಾದು ನೋಡಬೇಕಿದೆ.ಇದನ್ನೂ ಓದಿ: ಉಗ್ರರ ದಾಳಿ ನಡೆದ ಪಹಲ್ಗಾಮ್‌ನಲ್ಲಿ ನಿಮ್ಮ ʻPublic TVʼ; ಬೈಸರನ್ ವ್ಯಾಲಿಯಿಂದ ಕನ್ನಡದ ಏಕೈಕ ಚಾನಲ್ ಪ್ರತ್ಯಕ್ಷ ವರದಿ..!

  • ಎನ್‌ಕೌಂಟರ್‌ಗೆ ಲಷ್ಕರ್‌ ಟಾಪ್‌ ಉಗ್ರ ಬಲಿ

    ಎನ್‌ಕೌಂಟರ್‌ಗೆ ಲಷ್ಕರ್‌ ಟಾಪ್‌ ಉಗ್ರ ಬಲಿ

    ಶ್ರೀನಗರ: ಪಹಲ್ಗಾಮ್‌ ದಾಳಿಯ ನಂತರ ಉಗ್ರರನ್ನು ಮಟ್ಟ ಹಾಕುವ ಕಾರ್ಯಾಚರಣೆ ತೀವ್ರಗೊಂಡಿದ್ದು ಜಮ್ಮು ಕಾಶ್ಮೀರದ (Jammu Kashmir) ಬಂಡಿಪೋರಾದಲ್ಲಿ ಲಷ್ಕರ್-ಎ-ತೈಬಾ (Lashkar-e-Taiba) ಟಾಪ್‌ ಕಮಾಂಡರ್‌ನನ್ನು (Top Commander) ಭದ್ರತಾ ಪಡೆಗಳು ಹತ್ಯೆ ಮಾಡಿವೆ.

    ಅಲ್ತಾಫ್ ಲಲ್ಲಿ ಟಾಪ್‌ ಕಮಾಂಡರ್‌ ಆಗಿದ್ದು ಉಗ್ರ ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದ. ಅರಣ್ಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶುಕ್ರವಾರ ಬೆಳಗ್ಗೆ ಜಂಟಿ ಕಾರ್ಯಾಚರಣೆ ನಡೆಯಿತು. ಈ ಎನ್‌ಕೌಂಟರ್‌ನಲ್ಲಿ ಅಲ್ತಾಫ್‌ ಲಲ್ಲಿ ಹತ್ಯೆಯಾಗಿದ್ದಾನೆ.  ಇದನ್ನೂ ಓದಿ: ಮಂಗಳೂರಲ್ಲಿ ಪಹಲ್ಗಾಮ್ ದಾಳಿ ಸಮರ್ಥಿಸಿಕೊಂಡ ದುಷ್ಟ – ಪೊಲೀಸರಿಂದ ಕಿಡಿಗೇಡಿಗಾಗಿ ಹುಡುಕಾಟ

     

    ಈ ಕಾರ್ಯಾಚರಣೆ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶ್ರೀನಗರಕ್ಕೆ ಇಂದು ಆಗಮಿಸಿದ್ದು ಅವರಿಗೆ ಕಾರ್ಯಾಚರಣೆಯ ವಿವರ ನೀಡಲಾಯಿತು.

    ಗುರುವಾರ ಬಿಹಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಹಲ್ಗಾಮ್‌ ದಾಳಿ ಮಾಡಿದವರು ಮತ್ತು ದಾಳಿಯ ಹಿಂದೆ ಇರುವವರು ಊಹೆ ಮಾಡದ ರೀತಿ ನಾವು ಪ್ರತಿಕ್ರಿಯೆ ನೀಡುತ್ತೇವೆ ಎಂದು ಗುಡುಗಿದ್ದರು.

  • ಪಹಲ್ಗಾಮ್ ದಾಳಿಯ ಬೆನ್ನಲ್ಲೇ 2 ಭಯೋತ್ಪಾದಕರನ್ನ ಹೊಡೆದುರುಳಿಸಿದ ಸೇನಾ ಪಡೆ

    ಪಹಲ್ಗಾಮ್ ದಾಳಿಯ ಬೆನ್ನಲ್ಲೇ 2 ಭಯೋತ್ಪಾದಕರನ್ನ ಹೊಡೆದುರುಳಿಸಿದ ಸೇನಾ ಪಡೆ

    ಶ್ರೀನಗರ: ಭದ್ರತಾ ಪಡೆಯು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ (Baramulla) ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಒಳನುಸುಳಲು ಮುಂದಾಗುತ್ತಿದ್ದ ಇಬ್ಬರು ಭಯೋತ್ಪಾದಕರನ್ನು (Terrorists) ಹತ್ಯೆ ಮಾಡಿದೆ.

    ಈ ಇಬ್ಬರು ಭಯೋತ್ಪಾದಕರು ಬಾರಾಮುಲ್ಲಾದ ಉರಿ ನಾಲಾದ ಸರ್ಜೀವನ್ ಪ್ರದೇಶದ ಮೂಲಕ ಒಳನುಸುಳಲು ಪ್ರಯತ್ನಿಸಿದರು ಎಂದು ಚಿನಾರ್ ಕಾರ್ಪ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಐಷಾರಾಮಿ ಕಾರುಗಳಲ್ಲಿ ಪ್ರಯಾಣ, ಪಾಕ್‌ ಸೇನೆಯ ನಂಬಿಕಸ್ಥನೇ ದಾಳಿಯ ಮಾಸ್ಟರ್‌ ಮೈಂಡ್‌!

    ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರನ್ನು ತಡೆದಿದ್ದು, ಈ ವೇಳೆ ಗುಂಡಿನ ಚಕಮಕಿ ನಡೆಯಿತು. ಸತತ 1 ಗಂಟೆಯ ಕಾರ್ಯಾಚರಣೆ ನಂತರ ಇಬ್ಬರು ಭಯೋತ್ಪಾದಕರನ್ನು ಸದೆಬಡಿಯಲಾಯಿತು. ಈ ವೇಳೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: Pahalgam Terror Attack | ಹಿಂದೂಗಳೇ ಭಯೋತ್ಪಾದಕರ ಟಾರ್ಗೆಟ್!

    ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು (Pahalgam Terror Attack) ಪ್ರವಾಸಿಗರ ಮೇಲೆ ದಾಳಿ ನಡೆಸಿದ ಒಂದು ಘಟನೆಯ ನಂತರ ಈ ಕಾರ್ಯಾಚರಣೆ ನಡೆದಿದೆ. ಪಹಲ್ಗಾಮ್ ಭಯೋತ್ಪಾದಕರ ದಾಳಿಯಲಿ 26 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ನೌಕಾಪಡೆಯ ಒಬ್ಬ ಅಧಿಕಾರಿ ಹಾಗೂ ಗುಪ್ತಚರ ಬ್ಯೂರೋದ ಅಧಿಕಾರಿಯೊಬ್ಬರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: Pahalgam Terror Attack | ಉಗ್ರರ ದಾಳಿಗೆ ಬೆಂಗಳೂರಿನ ಮಧುಸೂದನ್‌ ಬಲಿ

    ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಪ್ರಧಾನಿ ಮೋದಿಯವರು (Narendra Modi) ಖಂಡಿಸಿದ್ದಾರೆ. ಈ ಘೋರ ಕೃತ್ಯದ ಹಿಂದಿರುವವರನ್ನು ಬಿಡಲಾಗುವುದಿಲ್ಲ. ಅವರ ದುಷ್ಟ ಕಾರ್ಯಸೂಚಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲ ಮತ್ತು ಅದು ಇನ್ನಷ್ಟು ಬಲಗೊಳ್ಳುತ್ತದೆ ಎಂದು ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: Pahalgam Attack | ಉಗ್ರರ ಅಟ್ಟಹಾಸಕ್ಕೆ ಪತ್ನಿ ಕಣ್ಣೆದುರೇ ಬೆಂಗಳೂರಿನ ಟೆಕ್ಕಿ ಸಾವು

    ಸೌದಿ ಅರೇಬಿಯಾದ ತಮ್ಮ ಪ್ರವಾಸವನ್ನು ಅರ್ಧಕ್ಕೆ ಕೈಬಿಟ್ಟು ಬುಧವಾರ ಬೆಳಗ್ಗೆ ಭಾರತಕ್ಕೆ ಹಿಂತಿರುಗಿದರು. ಬಳಿಕ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಸಭೆ ನಡೆಸಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಪರಿಸ್ಥಿತಿಯನ್ನು ಅವಲೋಕಿಸಿದರು.

  • ಪತ್ನಿಯನ್ನು ಕೊಲೆಗೈದು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ಸೈನಿಕ ಅರೆಸ್ಟ್‌

    ಪತ್ನಿಯನ್ನು ಕೊಲೆಗೈದು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ಸೈನಿಕ ಅರೆಸ್ಟ್‌

    – ಫೋನ್ ಬಳಸದೆ ಬರಿ ನಗದು ವ್ಯವಹಾರ ಮಾಡ್ತಿದ್ದ ಹಂತಕ
    – ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್‌ ಪಡೆದು ಪರಾರಿ

    ನವದೆಹಲಿ: ಪತ್ನಿಯ (Wife) ಹತ್ಯೆ ಕೇಸ್‌ನಲ್ಲಿ ಶಿಕ್ಷೆಗೊಳಗಾಗಿ ಪೆರೋಲ್ ಮೇಲೆ ಹೊರಗೆ ಬಂದು ತಲೆಮರೆಸಿಕೊಂಡಿದ್ದ ಭಾರತೀಯ ಸೇನೆಯ (Indian Army) ಮಾಜಿ ಸೈನಿಕನನ್ನು 20 ವರ್ಷಗಳ ನಂತರ ದೆಹಲಿ (Delhi) ಪೊಲೀಸರು (Police) ಮಧ್ಯಪ್ರದೇಶದಲ್ಲಿ (Madhya Pradesh) ಬಂಧಿಸಿದ್ದಾರೆ.

    ಬಂಧಿತನನ್ನು ಅನಿಲ್ ಕುಮಾರ್ ತಿವಾರಿ ಎಂದು ಗುರುತಿಸಲಾಗಿದೆ. ಆರೋಪಿ, 1989 ರಲ್ಲಿ ತನ್ನ ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆಗೈದಿದ್ದ. ಆತನನ್ನು 1989ರ ಮೇ 31 ರಂದು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆತ 2005ರ ನವೆಂಬರ್ 21ರಂದು ರಂದು ದೆಹಲಿ ಹೈಕೋರ್ಟ್‌ನಲ್ಲಿ ಪೆರೋಲ್ ಪಡೆದಿದ್ದ. ಬಳಿಕ ಆತ ಜೈಲಿಗೆ ವಾಪಸ್‌ ಆಗದೇ ತಲೆಮರೆಸಿಕೊಂಡಿದ್ದ.

    ಪೊಲೀಸರು ಪತ್ತೆಹಚ್ಚಿದ್ದು ಹೇಗೆ?
    ಇತ್ತೀಚೆಗೆ ದೆಹಲಿ ಅಪರಾಧ ವಿಭಾಗದ ತಂಡ ಪ್ರಯಾಗರಾಜ್‌ನಲ್ಲಿ ತಿವಾರಿ ಓಡಾಡಿದ್ದ ಬಗ್ಗೆ ಮಾಹಿತಿ ಕಲೆಹಾಕಿತ್ತು. ಇದೇ ಮಾಹಿತಿಯ ಆಧಾರದ ಮೇಲೆ, ತಂಡವು ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಚುರ್ಹತ್ ಗ್ರಾಮದ ಮೇಲೆ ದಾಳಿ ನಡೆಸಿ ಬಂಧಿಸಿದೆ.

    ಪೊಲೀಸರಿಗೆ ಆತ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ?
    ಅನಿಲ್ ತಿವಾರಿಗೆ ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆಂದು ತಿಳಿದಿತ್ತು. ಅದಕ್ಕಾಗಿ ಮೊಬೈಲ್ ಫೋನ್‌ನ್ನು ಆತ ಬಳಸುತ್ತಿರಲಿಲ್ಲ. ಅಲ್ಲದೇ ಅಡಗುತಾಣ ಮತ್ತು ಕೆಲಸದ ಸ್ಥಳವನ್ನು ನಿರಂತರವಾಗಿ ಬದಲಾಯಿಸುತ್ತಿದ್ದ. ಚಾಲಕನಾಗಿ ಕೆಲಸ ಮಾಡುತ್ತಿದ್ದು, ಎಲೆಕ್ಟ್ರಾನಿಕ್ ಪುರಾವೆಗಳು ಸಿಗದಂತೆ ಯಾವಾಗಲೂ ನಗದು ವ್ಯವಹಾರ ಮಾಡುತ್ತಿದ್ದ ಎಂದು ಆತ ಒಪ್ಪಿಕೊಂಡಿದ್ದಾನೆ. ಇನ್ನೂ ತಲೆಮರೆಸಿಕೊಂಡಿದ್ದ ಸಮಯದಲ್ಲಿ ಮತ್ತೊಂದು ಮದುವೆಯಾಗಿದ್ದು, ಈಗ ಆತನಿಗೆ ನಾಲ್ಕು ಮಕ್ಕಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅನಿಲ್ ತಿವಾರಿ 1986 ರಲ್ಲಿ ಭಾರತೀಯ ಸೇನೆಯ ಆರ್ಡನೆನ್ಸ್ ಕಾರ್ಪ್ಸ್ ಘಟಕಕ್ಕೆ ಚಾಲಕನಾಗಿ ಸೇರಿದ್ದ. ನ್ಯಾಯಾಲಯವು ಆತನನ್ನು ದೋಷಿ ಎಂದು ತೀರ್ಪು ನೀಡಿದ ಬಳಿ ಅವನನ್ನು ಸೈನ್ಯದಿಂದ ವಜಾಗೊಳಿಸಲಾಗಿತ್ತು.

  • ಇದೇ ಮೊದಲು – ಭಾರತದ ಸೇನಾ ಬತ್ತಳಿಕೆಗೆ ಲೇಸರ್‌ ಅಸ್ತ್ರ, ಪ್ರಯೋಗ ಯಶಸ್ವಿ

    ಇದೇ ಮೊದಲು – ಭಾರತದ ಸೇನಾ ಬತ್ತಳಿಕೆಗೆ ಲೇಸರ್‌ ಅಸ್ತ್ರ, ಪ್ರಯೋಗ ಯಶಸ್ವಿ

    ಅಮರಾವತಿ: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತಯಾರಿಸಿದ Mk-II(A) ಲೇಸರ್ ಶಸ್ತ್ರಾಸ್ತ್ರದ (DEW) ಮೊದಲ ಯಶಸ್ವಿ ಪ್ರಯೋಗ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಭಾನುವಾರ ನಡೆಯಿತು.

    ಆಂಧ್ರಪ್ರದೇಶದ ಕರ್ನೂಲ್‌ನಲ್ಲಿರುವ ರಾಷ್ಟ್ರೀಯ ಮುಕ್ತ ವಾಯು ಪ್ರದೇಶದಲ್ಲಿ (NOAR) ಲೇಸರ್ ಅಸ್ತ್ರವನ್ನು ಬಳಸಿ ಡ್ರೋನ್‌ನ್ನು ಹೊಡೆದುರುಳಿಸಲಾಯಿತು. ಈ ಮೂಲಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ನಾಲ್ಕು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸಹ ಸೇರಿಕೊಂಡಿತು. ಅಮೆರಿಕ, ಚೀನಾ ಮತ್ತು ರಷ್ಯಾದಲ್ಲಿ ಈಗಾಗಲೇ ಲೇಸರ್‌ ಶಸ್ತ್ರಾಸ್ತ್ರಗಳು ಇವೆ.

    ಲೇಸರ್ ಅಸ್ತ್ರದಿಂದ ಡ್ರೋನ್‌ಗಳು ಮತ್ತು ಸ್ಪೋಟಕಗಳನ್ನು ಹೊಡೆದುರುಳಿಸಬಹುದಾಗಿದೆ. ಈ ತಂತ್ರಜ್ಞಾನವನ್ನು ಹೈದರಾಬಾದ್‌ನ DRDOನ ಹೈ ಎನರ್ಜಿ ಸಿಸ್ಟಮ್ಸ್ ಅಂಡ್ ಸೈನ್ಸಸ್ ಸೆಂಟರ್ (CHESS) ಹಾಗೂ ಹಲವಾರು ಶೈಕ್ಷಣಿಕ ಸಂಸ್ಥೆಗಳು ಮತ್ತು ದೇಶಿಯ ಕೈಗಾರಿಕೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

    ‘ಸ್ಟಾರ್ ವಾರ್ಸ್’ ತಂತ್ರಜ್ಞಾನ!
    ಜನಪ್ರಿಯ ಚಲನಚಿತ್ರ ಸರಣಿ ‘ಸ್ಟಾರ್ ವಾರ್ಸ್’ ನಲ್ಲಿನ ಡೆತ್ ಸ್ಟಾರ್‌ನಂತೆ ಲೇಸರ್-ಡ್ಯೂ ಕಾರ್ಯನಿರ್ವಹಿಸುತ್ತದೆ. ಭಾರತೀಯ ಸೇನೆಯು ಹೆಚ್ಚಿನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಆರಂಭ ಮಾತ್ರ ನಾವು ಶೀಘ್ರದಲ್ಲೇ ಇದಕ್ಕಿಂತ ಶಕ್ತಿಶಾಲಿ ಅಸ್ತ್ರವನ್ನು ತಯಾರಿಸುತ್ತೇವೆ ಎಂದು ಡಿಆರ್‌ಡಿಒ ಅಧ್ಯಕ್ಷ ಡಾ. ಸಮೀರ್ ಕಾಮತ್‌ ತಿಳಿಸಿದ್ದಾರೆ.

    ಲೇಸರ್ ಅಸ್ತ್ರ ಹೇಗೆ ಕೆಲಸ ಮಾಡುತ್ತದೆ?
    Mk-II(A) ಲೇಸರ್ ಶಸ್ತ್ರಾಸ್ತ್ರ ವಿಶ್ವದ ಅತ್ಯಂತ ಪ್ರಬಲವಾದ ಪ್ರತಿ ಡ್ರೋನ್ ವ್ಯವಸ್ಥೆಗಳಲ್ಲಿ ಒಂದಾಗಿದ್ದು, ಗುರಿಯನ್ನು ಕೆಲವೇ ಸೆಕೆಂಡುಗಳಲ್ಲಿ ಹೊಡೆದುರುಳಿಸುತ್ತದೆ. ಏಕಕಾಲದಲ್ಲಿ ಬಹು ಡ್ರೋನ್ ದಾಳಿಗಳನ್ನು ತಡೆಯಲು ಶಕ್ತವಾಗಿದೆ. ಅಲ್ಲದೇ ಕಣ್ಗಾವಲು ವ್ಯವಸ್ಥೆ ಮತ್ತು ಆಂಟೆನಾಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

    ಲೇಸರ್ ಅಸ್ತ್ರ ರಾಡಾರ್ ಅಥವಾ ಅದರ ಅಂತರ್ನಿರ್ಮಿತ ಎಲೆಕ್ಟ್ರೋ ಆಪ್ಟಿಕ್ (EO) ವ್ಯವಸ್ಥೆಯಿಂದ ಗುರಿಯನ್ನು ಪತ್ತೆಹಚ್ಚಿ, ಶಕ್ತಿಯುತ ಲೇಸರ್‌ ಕಿರಣ ಬಳಸಿ ದಾಳಿ ಮಾಡುತ್ತದೆ. ಯುದ್ಧದ ಸಮಯದಲ್ಲಿ ದುಬಾರಿ ಮದ್ದುಗುಂಡುಗಳ ಮೇಲಿನ ಅವಲಂಬನೆಯನ್ನು ಈ ವ್ಯವಸ್ಥೆ ಕಡಿಮೆ ಮಾಡುತ್ತದೆ.

  • ಭಾರತದ ಗಡಿಯಲ್ಲಿ ಗುಂಡಿನ ಚಕಮಕಿ – ಪಾಕ್ ನುಸುಳುಕೋರರನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ಓರ್ವ ಯೋಧ ಹುತಾತ್ಮ

    ಭಾರತದ ಗಡಿಯಲ್ಲಿ ಗುಂಡಿನ ಚಕಮಕಿ – ಪಾಕ್ ನುಸುಳುಕೋರರನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ಓರ್ವ ಯೋಧ ಹುತಾತ್ಮ

    ಶ್ರೀನಗರ: ಜಮ್ಮುವಿನ ಅಖ್ನೂರ್‌ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (LOC) ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ (Indian Army) ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

    ರಜೌರಿ ಜಿಲ್ಲೆಯ ಅಖ್ನೂರ್‌ನಲ್ಲಿ ಪಾಕ್ ನುಸುಳುಕೋರರನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (JoC) ಕುಲ್‌ದೀಪ್‌ ಚಂದ್‌ (Kuldeep Chand) ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸಮರ ಸಾರಿದ ಸೇನೆ – ಜೈಶ್ ಕಮಾಂಡೋ ಸೇರಿ ಮೂವರು ಭಯೋತ್ಪಾದಕರ ಹತ್ಯೆ

    ಶುಕ್ರವಾರ ತಡರಾತ್ರಿ ಕೇರಿ ಭಟ್ಟಾಲ್‌ನ ಅರಣ್ಯ ಪ್ರದೇಶದ ಹೊಳೆ ಬಳಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪಿನ ಚಲನವಲನ ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಸೇನಾ ಪಡೆದ ಅವರನ್ನು ಎದುರಿಸಲು ಮುಂದಾಗಿವೆ. ಈ ವೇಳೆ ಎರಡೂಕಡೆಯಿಂದ ತೀವ್ರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಕುಲ್‌ದೀಪ್‌ ಚಂದ್‌ ಅವರಿಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದು ಉನ್ನತ ಸೇನಾಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಕಾರ್ಯಾಚರಣೆ ಮುಂದುವರಿಸಿರುವ ಸೇನೆ ಉಗ್ರರರು ಅಡಗಿರುವ ಪ್ರದೇಶವನ್ನು ಸುತ್ತುವರಿದಿದೆ.

    INDIAN ARMY

    ಕಳೆದ ಫೆಬ್ರವರಿ 11ರಂದು ಇದೇ ಪ್ರದೇಶದಲ್ಲಿ ಭಯೋತ್ಪಾದಕರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು, ಮತ್ತೊಬ್ಬರು ಗಾಯಗೊಂಡಿದ್ದರು. ಇದನ್ನೂ ಓದಿ: ಪಾಕಿಸ್ತಾನದಲ್ಲಿ 5.3 ತೀವ್ರತೆಯ ಭೂಕಂಪ – ಜಮ್ಮು-ಕಾಶ್ಮೀರದಲ್ಲೂ ಭೂಮಿ ಕಂಪಿಸಿದ ಅನುಭವ

    ಕಿಶ್ತ್ವಾರದಲ್ಲಿ ಮೂವರು ಉಗ್ರರ ಹತ್ಯೆ
    ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವಾರ್‌ನಲ್ಲಿ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಕಮಾಂಡರ್ ಸೈಫುಲ್ಲಾ ಸೇರಿದಂತೆ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು (Indian Army) ಹತ್ಯೆಗೈದಿವೆ. ಈ ಪೈಕಿ ಕಾರ್ಯಾಚರಣೆಯಲ್ಲಿ ಒಟ್ಟು ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ.

    ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಛತ್ರುವಿನ ಕಾಡಿನ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಸಾಧ್ಯತೆಯನ್ನು ಗಮನಿಸಿದ ಸೇನೆ, ಶೋಧ ಕಾರ್ಯಾಚರಣೆಯನ್ನು ಆರಂಭಿಸಿತು. ಈ ವೇಳೆ ಭಯೋತ್ಪಾದಕರೊಂದಿಗೆ ತೀವ್ರ ಗುಂಡಿನ ಚಕಮಕಿಯಾಗಿದ್ದು, ಒಬ್ಬ ಭಯೋತ್ಪಾದಕನನ್ನು ಸೇನೆಯು ಯಶಸ್ವಿಯಾಗಿ ಹೊಡೆದುರುಳಿಸಿದೆ. ಇದನ್ನೂ ಓದಿ: UPI Down | ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ವ್ಯತ್ಯಯ – ಬ್ಯಾಂಕಿಂಗ್‌ ಸೇವೆಗಳ ಮೇಲೂ ಪರಿಣಾಮ

  • ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸಮರ ಸಾರಿದ ಸೇನೆ – ಜೈಶ್ ಕಮಾಂಡೋ ಸೇರಿ ಮೂವರು ಭಯೋತ್ಪಾದಕರ ಹತ್ಯೆ

    ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸಮರ ಸಾರಿದ ಸೇನೆ – ಜೈಶ್ ಕಮಾಂಡೋ ಸೇರಿ ಮೂವರು ಭಯೋತ್ಪಾದಕರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವಾರ್‌ನಲ್ಲಿ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಕಮಾಂಡರ್ ಸೈಫುಲ್ಲಾ ಸೇರಿದಂತೆ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು (Indian Army) ಹತ್ಯೆಗೈದಿವೆ.

    ಉಗ್ರರ ಒಳನುಸುಳುವಿಕೆ ತಡೆಯಲು ಗುಡ್ಡಗಾಡು ಪ್ರದೇಶಗಳಲ್ಲಿ ಯೋಧರು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ (Anti Militancy Operation) ನಡೆಸುತ್ತಿದ್ದಾರೆ. ಕಾರ್ಯಾಚರಣೆಯ ಎರಡನೇ ದಿನವಾದ ಶುಕ್ರವಾರ (ಏ.11) ಮೂವರು ಭಯೋತ್ಪಾದಕರ ಹತ್ಯೆಯಾಗಿದೆ. ಜಮ್ಮುವಿನ ಗುಡ್ಡಗಾಡು ಪ್ರದೇಶಗಳಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚುವ ಕಾರ್ಯಾಚರಣೆ ಇಂದು ಸಹ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಣಾಗೆ 14×14 ಅಡಿಯ ಸೆಲ್ – ದಿನದ 24 ಗಂಟೆಯೂ ನಿಗಾ; ಸೆಲ್‌ನಲ್ಲೇ ಊಟ

    ಹತ್ಯೆಗೊಳಗಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಜೈಶ್-ಎ-ಮೊಹಮ್ಮದ್‌ನ ಉನ್ನತ ಕಮಾಂಡರ್ ಸೈಫುಲ್ಲಾ ಎಂದು ಗುರುತಿಸಲಾಗಿದೆ. ಈತ ಹಲವಾರು ತಿಂಗಳುಗಳಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಿಶ್ತ್ವಾರ್ ಜಿಲ್ಲೆಯ ಚತ್ರು ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಉಗ್ರರ ಶೋಧದ ವೇಳೆ ಭದ್ರತಾ ಸಿಬ್ಬಂದಿ ಭಯೋತ್ಪಾದಕರು ಅಡಗಿರುವುದನ್ನು ಪತ್ತೆಹಚ್ಚಿದ್ದರು. ಈ ವೇಳೆ ಎರಡು ಕಡೆಯಿಂದ ಗುಂಡಿನ ದಾಳಿ ನಡೆದಿದೆ. ಈ ವೇಳೆ ಮೂವರು ಉಗ್ರರು ಹತರಾಗಿದ್ದಾರೆ.

    ಪ್ರತಿಕೂಲ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ಸೈನಿಕರು ನಿರಂತರ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಸೇನಾ ವಿಮಾನ, ಡ್ರೋಣ್‌ ಮತ್ತು ಸ್ನಿಫರ್ ನಾಯಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿದೆ. ಇದನ್ನೂ ಓದಿ: ಭದ್ರತಾ ಪಡೆಯಿಂದ ಯಶಸ್ವಿ ಕಾರ್ಯಚರಣೆ – ಓರ್ವ ಭಯೋತ್ಪಾದಕ ಹತ