Tag: Indian Army Forces

  • ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಭಾರತೀಯ ಸೇನಾ ಪಡೆ!

    ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಭಾರತೀಯ ಸೇನಾ ಪಡೆ!

    ಶ್ರೀನಗರ: ಶುಕ್ರವಾರ ಮೂವರು ಪೊಲೀಸ್ ಪೇದೆಯನ್ನು ಅಪಹರಿಸಿ ಹತ್ಯೆ ಮಾಡಿದ್ದ ಪಾಕ್ ವಿರುದ್ಧ ಭಾರತೀಯ ಸೇನಾ ಪಡೆ 5 ಮಂದಿ ಉಗ್ರರನ್ನು ಸೆದೆಬಡಿಯುವ ಮೂಲಕ ತನ್ನ ಸೇಡು ತೀರಿಸಿಕೊಂಡಿದೆ.

    ಶುಕ್ರವಾರ ಮುಂಜಾನೆ ಮೂವರು ಪೊಲೀಸರ ಮನೆಗೆ ನುಗ್ಗಿ ಅವರನ್ನು ಅಪಹರಿಸಿ ಉಗ್ರರು ಹತ್ಯೆ ಮಾಡಿದರು. ಈ ಘಟನೆ ನಸುಕಿನಲ್ಲೇ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಗಡಿ ದಾಟುತ್ತಿದ್ದ ಐವರು ಉಗ್ರರನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ.

    ಭಾರತೀಯ ಸೇನೆಯ ಸಿಬ್ಬಂದಿಗಳ ಒಂದು ತಂಡ, ಕೇಂದ್ರ ರಿಸರ್ವ್ ಪೊಲೀಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಗುರುವಾರ ಕಾರ್ಡಿನ್ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ವೇಳೆ ಉಗ್ರರು ಸೈನಿಕರ ಮೇಲೆ ಗುಂಡು ಹಾರಿಸಿದರು. ಶುಕ್ರವಾರದ ತನಕ ಗುಂಡಿನ ಚಕಮಕಿ ಕೊನೆಗೆ ಒಂದು ಎನ್‍ಕೌಂಟರ್ ಆಗಿ ತಿರುಗಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ.

    ಗುರುವಾರ ಇಬ್ಬರು ಉಗ್ರರನ್ನು ಕೊಲ್ಲಲಾಗಿದ್ದು, ಇನ್ನುಳಿದ ಮೂವರು ಮಂದಿ ಉಗ್ರರನ್ನು ಶುಕ್ರವಾರ ಹತ್ಯೆ ಮಾಡಲಾಗಿದೆ. ಹತ್ಯೆಗೊಳಗಾದವರೆಲ್ಲರೂ ಉಗ್ರರು ಎಂದು ಗುರುತಿಸಲಾಗಿದೆ ಅಂತಾ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯ ಹಿನ್ನೆಲೆ ಇತ್ತೀಚೆಗೆ ಹಿಜ್ಬುಲ್ ಮುಜಾಹಿದೀನ್ ತಂಡದಿಂದ ಮುಸ್ಲಿಂ ಪೊಲೀಸ್ ಅಧಿಕಾರಿಗಳು ರಾಜಿನಾಮೆ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಬಂದಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ 6 ಎಸ್‍ಪಿಓ ಅಧಿಕಾರಿಗಳು ರಾಜಿನಾಮೆ ನೀಡಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿತ್ತು. ಆದ್ರೆ ಈ ವದಂತಿಯನ್ನು ಕೇಂದ್ರ ಗೃಹ ಇಲಾಖೆ ನಿರಾಕರಿಸಿದೆ.

    ಉಗ್ರರಿಂದ ಹತ್ಯೆಗೊಳಗಾದ ಮೂವರು ಪೊಲೀಸ್ ಅಧಿಕಾರಿಗಳಾದ ಜವಾನ್ಸ್ ನಿಸಾರ್ ಅಹಮ್ಮದ್, ಫಿರ್ದೋಸ್ಸ್ ಕುಚಾಯ್ ಹಾಗೂ ಕುಲ್ವಾನ್ಟ್ ಸಿಂಗ್ ಅವರಿಗೆ ಗೌರವವನ್ನು ಸಲ್ಲಿಸುತ್ತೇವೆ. ಇನ್ನೂ ಮುಂದೆ ಈ ಅಮಾನವೀಯ ಕೃತ್ಯವನ್ನು ಖಂಡಿಸಿ ಅಪರಾಧಿಗಳನ್ನು ಕಾನೂನಿನ ಪ್ರಕಾರ ಸೆದೆಬಡಿಯುತ್ತೇವೆ ಎಂದು ಕಾಶ್ಮೀರದ ಪೊಲೀಸ್ ಪಡೆ ಟ್ವೀಟ್ ಮಾಡಿದೆ.

    ಬಹುಕಾಲದ ನಂತರ ಪಾಕ್-ಭಾರತದ ಚರ್ಚಿಗೆ ಅವಕಾಶ ಸಿಕ್ಕಿತ್ತು. ಆದರೆ ಇದೀಗ ಈ ನೀಚ ಕೃತ್ಯವೆಸಗಿದ್ದರಿಂದ ಪಾಕ್‍ನೊಂದಿಗೆ ದೀರ್ಘ ಗಂಟೆಯ ಚರ್ಚೆಯನ್ನು ಭಾರತ ರದ್ದು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv