ರಾಯ್ಪುರ್: 110 ಮಹಿಳೆಯರು ಮತ್ತು 98 ಪುರುಷರು ಸೇರಿದಂತೆ 208 ನಕ್ಸಲರು ಛತ್ತೀಸ್‌ಗಢದ (Chhattisgarh) ದಂಡಕಾರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳ ಮುಂದೆ (Naxals Surrender) ಶರಣಾಗಿದ್ದಾರೆ. ಶರಣಾದ ನಕ್ಸಲರಿಗೆ ಸಂವಿಧಾನದ ಪ್ರತಿ ಮತ್ತು ಗುಲಾಬಿಯನ್ನು ನೀಡಿ ಮುಖ್ಯವಾಹಿನಿಗೆ ಸ್ವಾಗತಿಸಲಾಯಿತು.
ಶರಣಾಗತಿಯ ಸಮಯದಲ್ಲಿ ಒಟ್ಟು 153 ಶಸ್ತ್ರಾಸ್ತ್ರಗಳನ್ನು ನಕ್ಸಲರು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಶಸ್ತ್ರಾಸ್ತ್ರಗಳಲ್ಲಿ 19 AK-47 ರೈಫಲ್‌ಗಳು, 17 SLR ರೈಫಲ್‌ಗಳು, 23 INSAS ರೈಫಲ್‌ಗಳು, 1 INSAS LMG, 36.303 ರೈಫಲ್‌ಗಳು, 4 ಕಾರ್ಬೈನ್‌ಗಳು, 11 BGL ಲಾಂಚರ್‌ಗಳು, 41 12-ಬೋರ್/ಸಿಂಗಲ್-ಶಾಟ್ ಗನ್‌ಗಳು ಮತ್ತು 1 ಪಿಸ್ತೂಲ್ ಸೇರಿವೆ.
ಶರಣಾದ 208 ನಕ್ಸಲರಲ್ಲಿ ಒಬ್ಬ ಕೇಂದ್ರ ಸಮಿತಿ ಸದಸ್ಯರು (CCM), ನಾಲ್ವರು ದಂಡಕಾರಣ್ಯ ವಿಶೇಷ ಪ್ರಾದೇಶಿಕ ಸಮಿತಿ (DKSZC) ಸದಸ್ಯರು, ಒಬ್ಬ ಪ್ರಾದೇಶಿಕ ಸಮಿತಿ ಸದಸ್ಯರು, 21 ವಿಭಾಗೀಯ ಸಮಿತಿ ಸದಸ್ಯರು (DVCM), 61 ಪ್ರದೇಶ ಸಮಿತಿ ಸದಸ್ಯರು (ACM), 98 ಪಕ್ಷದ ಸದಸ್ಯರು ಮತ್ತು 22 PLGA/RPC/ಇತರ ಕಾರ್ಯಕರ್ತರು ಸೇರಿದ್ದಾರೆ.
ಈ ಶರಣಾಗತಿಯೊಂದಿಗೆ, ಉತ್ತರ ಬಸ್ತಾರ್‌ನಲ್ಲಿ ನಕ್ಸಲೀಯರ ಚಟುವಟಿಕೆ ಬಹುತೇಕ ಕೊನೆಗೊಂಡಿದೆ ಎಂದು ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಹೇಳಿವೆ. ಮುಂದಿನ ಹಂತದ ಕಾರ್ಯಾಚರಣೆ ದಕ್ಷಿಣ ಬಸ್ತಾರ್‌ನ ಗುರಿಯಾಗಿಸಿಕೊಂಡು ನಡೆಯಲಿದೆ.
ಕೋಲ್ಕತ್ತಾ: ಭಾರತೀಯ ಸೇನೆಯ (Indian Army) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ (West Bengal) ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ನನ್ನು (Social Media Influencer) ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನಾಡಿಯಾ ಜಿಲ್ಲೆಯ ಆರಂಗಟಾದ ಬಿಸ್ವಾಜಿತ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಆರೋಪಿ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದ. ಆತನನ್ನು ಬಂಧಿಸಿ ಶನಿವಾರ ಮಧ್ಯಾಹ್ನ ನಾಡಿಯಾ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಈ ವೇಳೆ ಆರೋಪಿ ತನ್ನ ತಪ್ಪಿಗೆ ಕ್ಷಮೆಯಾಚಿಸಿದ್ದಾನೆ. ಇದನ್ನೂ ಓದಿ: ನನ್ನ ಹೃದಯ ಚೂರಾಗಿದೆ.. ನೋವು, ದುಃಖದಲ್ಲಿ ನರಳುತ್ತಿದ್ದೇನೆ: ಕಾಲ್ತುಳಿತ ದುರಂತಕ್ಕೆ ವಿಜಯ್ ಮೊದಲ ಪ್ರತಿಕ್ರಿಯೆ
ಬಿಸ್ವಾಸ್ ಆಗಾಗ ಫೇಸ್‌ಬುಕ್ ಲೈವ್‌ನಲ್ಲಿ ಬರುತ್ತಿದ್ದ. ಆಗೆಲ್ಲ ಸಶಸ್ತ್ರ ಪಡೆಗಳು ಮತ್ತು ಸಿಬ್ಬಂದಿಯನ್ನು ಅತ್ಯಂತ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಭಾಷೆ ಬಳಸಿ ನಿಂದಿಸುತ್ತಿದ್ದ. ಈ ಬಗ್ಗೆ ಆತನ ನೆರೆಹೊರೆಯವರು ಹಾಗೂ ಸಾಮಾಜಿಕ ಮಾಧ್ಯಮದಲ್ಲಿದ್ದ ಕೆಲವು ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದರು. ದೂರಿನಡಿ ಆತನನ್ನು ಬಂಧಿಸಲಾಗಿದೆ. ಆರೋಪಿ ಯಾವ ಉದ್ದೇಶಕ್ಕೆ ಈ ರೀತಿ ವರ್ತಿಸಿದ್ದಾನೆ ಎಂದು ಇನ್ನೂ ತಿಳಿದು ಬಂದಿಲ್ಲ.
ಪಹಲ್ಗಾಮ್ ದಾಳಿಯ ಬಳಿಕ ಭಾರತ ತನ್ನ ಭದ್ರತೆಗೆ ಭಾರೀ ಮಹತ್ವ ನೀಡುತ್ತಿದೆ. ಈ ದಾಳಿಯ ನಂತರ ನಡೆದ ಆಪರೇಷನ್ ಸಿಂದೂರದ ಬಳಿಕ ಭಾರತದ ಸೇನೆಯ ಶಕ್ತಿ ಜಗತ್ತಿಗೂ ಗೊತ್ತಾಗಿದೆ. ಇದರ ನಡುವೆಯೇ ಭಾರತೀಯ ಸೇನೆಯ (Indian Army) ಬತ್ತಳಿಕೆಗೆ ಹೊಸ ಹೊಸ ಅಸ್ತ್ರ ಗಳು, ಯುದ್ಧ ವಿಮಾನಗಳು ಸೇರಿದಂತೆ ನೌಕಾಪಡೆಗೆ ಯುದ್ಧನೌಕೆಗಳನ್ನು ಸೇರಿಸುತ್ತಿದೆ. ಅದರಂತೆ ಇತ್ತೀಚೆಗೆ ಸ್ವದೇಶಿ ನಿರ್ಮಿತ 2ನೇ ಜಲಾಂತರ್ಗಾಮಿ ನಿರೋಧಕ ಹಡಗು ನೌಕಾಪಡೆಗೆ ಸೇರ್ಪಡೆಯಾಗಿದೆ. ಅದರ ವಿಶೇಷತೆ ಹಾಗೂ ಮಹತ್ವದ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ನೌಕೆಗೆ ʻಅಂಡ್ರೋತ್ʼ ಹೆಸರು ಬಂದಿದ್ದೇಕೆ? ಭಾರತೀಯ ನೌಕಾಪಡೆಗೆ (Indian Navy) ಎರಡನೆಯ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿರೋಧಕ ಹಡಗು (ಎಎಸ್‌ಡಬ್ಲ್ಯು ಎಸ್‌ಡಬ್ಲ್ಯುಸಿಗಳು) ಅಂಡ್ರೋತ್ (Androth) ಸೇರ್ಪಡೆಯಾಗಿದೆ. ಈ ಹಡಗಿನ ನಿರ್ಮಾಣವನ್ನು ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆಯೆಡೆಗೆ ಇಡಲಾದ ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗಿದೆ.ಇದಕ್ಕೆ ಲಕ್ಷದ್ವೀಪ ಸಮೂಹದ ದ್ವೀಪಗಳಲ್ಲೊಂದಾದ ‘ಅಂಡ್ರೋತ್’ ದ್ವೀಪದ ಹೆಸರನ್ನು ಈ ಹಡಗಿಗೆ ಇಡಲಾಗಿದೆ. ನೌಕೆಗೆ ಇಡಲಾದ ʻಅಂಡ್ರೋತ್ʼ ಹೆಸರು ಭಾರತದ ವಿಶಾಲವಾದ ಕಡಲ ತೀರವನ್ನು ರಕ್ಷಿಸುವ ಬದ್ಧತೆಯನ್ನು ಸೂಚಿಸುತ್ತದೆ ಎಂದು ನೌಕಾಪಡೆ ಹೇಳಿಕೊಂಡಿದೆ.
ಕೋಲ್ಕತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ (ಜಿಆರ್‌ಎಸ್‌ಇ) ಈ ಹಡಗುಗಳನ್ನು ನಿರ್ಮಿಸುತ್ತಿದೆ. ಒಟ್ಟು 8 ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಗಳಲ್ಲಿ ಈಗಾಗಲೇ ಎರಡು ನೌಕಾಪಡೆಗೆ ಹಸ್ತಾಂತರಿಸಲಾಗಿದೆ.
ಅಂಡ್ರೋತ್ ಸಾಮರ್ಥ್ಯವೇನು? 77 ಮೀಟರ್ ವಿಸ್ತೀರ್ಣದ ಈ ಹಡಗು ಡೀಸೆಲ್-ವಾಟರ್‌ಜೆಟ್ ಎಂಜಿನ್ ಮೂಲಕ ಚಲಿಸುವ ಬೃಹತ್ ಸಮರ ನೌಕೆಗಳಲ್ಲೊಂದಾಗಿದೆ. ಈ ಹಡಗುಗಳ ನಿಯೋಜನೆಯಿಂದಾಗಿ ಶತ್ರು ದೇಶಗಳ ಜಲಾಂತರ್ಗಾಮಿಗಳಿಂದ ರಕ್ಷಣೆ ದೊರೆಯಲಿದೆ. ಇನ್ನೂ ಸೆನ್ಸಾರ್ ಮೂಲಕ ಕರಾವಳಿಯ ಗಡಿಯ ಮೇಲೆ ಈ ನೌಕೆ ಕಣ್ಗಾವಲು ಇರಿಸಲಿದೆ. ಹೆಚ್ಚಿನ ಸ್ಫೋಟಕಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದ್ದು, ಹಠಾತ್ ದಾಳಿಗಳೇನಾದರೂ ಆದರೆ ತಕ್ಷಣ ಪ್ರತಿಕ್ರಿಯಿಗೆ ಸಿದ್ಧವಿರುತ್ತವೆ. ತೀರಪ್ರದೇಶಗಳಲ್ಲಿ ಶತ್ರು ದೇಶದ ಜಲಾಂತರ್ಗಾಮಿ ನೌಕೆಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚುವ ಈ ನೌಕೆ ಅದರ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ನೌಕಾಪಡೆಯ ಮೂಲಗಳು ತಿಳಿಸಿವೆ.
ಅತ್ಯಾಧುನಿಕ ಹಗುರವಾದ ಟಾರ್ಪಿಡೊಗಳು (ಸ್ಫೋಟಕ) ಮತ್ತು ASW ರಾಕೆಟ್‌ಗಳಿಂದ ಈ ಹಡಗು ಶತ್ರುಗಳ ಮೇಲೆ ದಾಳಿಗೆ ಸಜ್ಜುಗೊಂಡಿರುತ್ತದೆ. ಕಡಲಲ್ಲಿ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಈ ಹಡಗು ಒಳಗೊಂಡಿದೆ.
ಸುಮಾರು 80% ಕ್ಕಿಂತ ಹೆಚ್ಚು ಸ್ಥಳೀಯ ಸಂಪನ್ಮೂಲಗಳಿಂದಲೇ ಈ ಹಡಗನ್ನು ನಿರ್ಮಿಸಲಾಗಿದೆ. ಇದರಿಂದ ರಕ್ಷಣಾ ಆಮದಿನ ಅವಲಂಬನೆ ಕಡಿಮೆ ಆಗಲಿದೆ. ಇದು ಸರ್ಕಾರದ ಆತ್ಮನಿರ್ಭರ ಭಾರತ ಧ್ಯೇಯವನ್ನು ಬಲಪಡಿಸುತ್ತದ. ಈ ಮೂಲಕ ಸ್ಥಳೀಯ ಹಡಗು ನಿರ್ಮಾಣಕ್ಕಾಗಿ ನೌಕಾಪಡೆಯ ಪ್ರಯತ್ನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಂತಾಗಿದೆ. ಅಲ್ಲದೇ ಭಾರತದ ದೇಶೀಯ ರಕ್ಷಣಾ ಉದ್ಯಮದ ಬೆಳೆಯುತ್ತಿರುವ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ.
ಅಂಡ್ರೋತ್ ಎಲ್ಲಿ ಕಾರ್ಯ ನಿರ್ವಹಿಸುತ್ತದೆ? ವಿಶೇಷವಾಗಿ ಲಕ್ಷದ್ವೀಪ ದ್ವೀಪಸಮೂಹ ಮತ್ತು ಇತರ ನಿರ್ಣಾಯಕ ಸಮುದ್ರ ಮಾರ್ಗಗಳ ಸುತ್ತಲೂ ಕರಾವಳಿ ಭದ್ರತಗೆ ನಿಯೋಜಿಸಲಾಗುತ್ತದೆ. ಈ ಮೂಲಕ ಶತ್ರು ದೇಶಗಳ ಚಲನವಲನದ ಮೇಲೆ ಕಣ್ಣಿಟ್ಟು ಗಡಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ.
ಅಂಡ್ರೋತ್ ನೌಕೆಗೆ ಆದ ಖರ್ಚು? ಆಂಡ್ರೋತ್ ನೌಕೆಯ ನಿರ್ಮಾಣಕ್ಕೆ 789 ಕೋಟಿ ರೂ. ಖರ್ಚಾಗಿದೆ. ಈ ಹಿಂದೆ 2020ರಲ್ಲಿ ನೌಕಾಪಡೆಯ 16 ಹಡಗುಗಳಿಗಾಗಿ ಸುಮಾರು 12,622 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು.
ಭಾರತಕ್ಕೆ ಅಂಡ್ರೋತ್ ಯಾಕೆ ಮುಖ್ಯ? ಭಾರತ ಪರ್ಯಾಯ ದ್ವೀಪವಾಗಿದ್ದು, ಮೂರು ದಿಕ್ಕಿನಲ್ಲಿ ಸಮುದ್ರ ಗಡಿಯನ್ನು ಹೊಂದಿದೆ. ಶತ್ರುಗಳು ನೆಲದ ಮೇಲೆ ದಾಳಿ ನಡೆಸಿದರೆ ಸುಲಭವಾಗಿ ದಾಳಿ ನಡೆಸಬಹುದು. ಉದ್ವಿಗ್ನ ಪರಿಸ್ಥಿತಿಯಲ್ಲಿ ಸಮುದ್ರ ಮಾರ್ಗವಾಗಿ ದಾಳಿ ನಡೆಸಿದರೆ ಅದನ್ನು ಹತ್ತಿಕ್ಕಲು ಸಜ್ಜಾಗಿರಬೇಕಾಗುತ್ತದೆ.
ಈ ಗಡಿಗಳು ಪಾಕಿಸ್ತಾನ ಹಾಗೂ ಚೀನಾಕ್ಕೂ ಹೊಂದಿಕೊಂಡಿದ್ದು, ಒಂದೊಮ್ಮೆ ಉದ್ವಿಗ್ನ ಪರಿಸ್ಥಿತಿ ಉಂಟಾದರೆ ಅದನ್ನು ಹಿಮ್ಮೆಟ್ಟಿಸಲು ನೌಕಾಪಡೆಗೆ ಅಂಡ್ರೋತ್‌ನಂತಹ ಯುದ್ಧ ನೌಕೆಗಳ ಅಗತ್ಯವಿದೆ.
ಅಂದ್ರೋತ್ ಬಗ್ಗೆ ಮುಖ್ಯಾಂಶಗಳು ನಿರ್ಮಾಣ: ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ (GRSE) ನಿರ್ಮಿಸಿದೆ. GRSE ನಿರ್ಮಿಸುತ್ತಿರುವ 8 ಜಲಾಂತರ್ಗಾಮಿ ನೌಕೆಗಳ ಪೈಕಿ 2ನೆಯದು. ಉದ್ದೇಶ: ಇದು ಜಲಾಂತರ್ಗಾಮಿ-ನಿರೋಧಕ (Anti-Submarine Warfare) ಯುದ್ಧನೌಕೆಯಾಗಿದೆ. ಭಾರತದ ಕಡಲಲ್ಲಿ ಶತ್ರು ದೇಶಗಳ ಜಲಾಂತರ್ಗಾಮಿಗಳ ಸಂಚಾರ, ಹಾಗೂ ಗೂಢಚಾರ್ಯ ಮೇಲೆ ಕಣ್ಣಿಟ್ಟು ಕಾಪಾಡುವುದಾಗಿದೆ. ಎಂಜಿನ್: ಡೀಸೆಲ್ ಎಂಜಿನ್-ವಾಟರ್‌ಜೆಟ್ ಸಂಯೋಜನೆಯಿಂದ ಚಲಿಸುತ್ತದೆ. ಆಯುಧಗಳು: ಅತ್ಯಾಧುನಿಕ ಹಗುರವಾದ ಟಾರ್ಪಿಡೊಗಳು ಮತ್ತು ದೇಶೀಯ ಜಲಾಂತರ್ಗಾಮಿ-ನಿರೋಧಕ ಯುದ್ಧ ಕ್ಷಿಪಣಿಗಳನ್ನು ಹೊಂದಿದೆ. ಹೆಸರಿನ ಮೂಲ: ಲಕ್ಷದ್ವೀಪ ದ್ವೀಪಸಮೂಹದಲ್ಲಿರುವ ಅಂಡ್ರೋತ್ ದ್ವೀಪದಿಂದ ಈ ನೌಕೆಗೆ ಹೆಸರಿಡಲಾಗಿದೆ.
ಸೇನೆಗೆ ಇನ್ನೂ ಸಿಗಲಿದೆ ಭೀಮ ಬಲ! ಆಪರೇಷನ್ ಸಿಂದೂರ ಬಳಿಕ ಎಚ್ಚೆತ್ತುಕೊಂಡಿರುವ ಮೋದಿ ಸರ್ಕಾರ ಸ್ವಾತಂತ್ರ್ಯಾನಂತರದ ಅತಿದೊಡ್ಡ ರಕ್ಷಣಾ ಸಾಮರ್ಥ್ಯ ಮೇಲ್ದರ್ಜೆಗೇರಿಸುವ ಯೋಜನೆಗೆ ಕೈಹಾಕಿದೆ. ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ನೌಕೆಗಳು, ಡ್ರೋನ್‌ಗಳನ್ನು ಸೇನಾ ಬತ್ತಳಿಕೆಗೆ ಸೇರ್ಪಡೆ ಮಾಡುವ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಮುಂದಿನ ತಲೆಮಾರಿನ ಯುದ್ಧದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು 15 ವರ್ಷಗಳ ನೀಲನಕ್ಷೆಯನ್ನೂ ಸಿದ್ಧಪಡಿಸಲಾಗಿದೆ.
ನೌಕಾಸೇನೆಗೆ ಏನೆಲ್ಲ ಸೇರಿಸಲು ತೀರ್ಮಾನಿಸಲಾಗಿದೆ? ನೂತನ ವಿಮಾನವಾಹಕ ಯುದ್ಧ ನೌಕೆ, ಮುಂದಿನ ತಲೆಮಾರಿನ 10 ಯುದ್ಧನೌಕೆಗಳು, 8 ಅತ್ಯಾಧುನಿಕ ಗಸ್ತು ಸಮರ ನೌಕೆಗಳು, ನಾಲ್ಕು ಲ್ಯಾಂಡಿಂಗ್ ಡಾಕ್ ಪ್ಲಾಟ್‌ಫಾರ್ಮ್‌ಗಳು, ಯುದ್ಧನೌಕೆಗಳಿಗೆ ನ್ಯೂಕ್ಲಿಯರ್ ಪ್ರೊಪಲ್ಷನ್‌ಗಳು, ಎಲೆಕ್ಟ್ರೋ ಮ್ಯಾಗ್ನೆಟಿಕ್ ಏರ್‌ಕ್ರಾಫ್ಟ್ ಲಾಂಚ್ ಸಿಸ್ಟಂಗಳ ಸೇರ್ಪಡೆಗೆ ತೀರ್ಮಾನಿಸಲಾಗಿದೆ.
ದುಬೈ: ಇಲ್ಲಿನ ನಡೆದ ಏಷ್ಯಾ ಕಪ್ 2025ರ ಟೂರ್ನಿಯ ಪಾಕ್ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ನಾಯಕ ಸೂರ್ಯಕುಮಾರ್ ಯಾದವ್ ಅರ್ಪಿಸಿದ್ದಾರೆ.
ಪಂದ್ಯ ಗೆದ್ದ ಬಳಿಕ ಮಾತನಾಡಿದ ಸೂರ್ಯಕುಮಾರ್, ಇದೊಂದು ಪರಿಪೂರ್ಣ ಸಂದರ್ಭ ಎಂದು ನಾನು ಭಾವಿಸುತ್ತೇನೆ. ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಈ ಗೆಲುವನ್ನು ನಮ್ಮ ಎಲ್ಲಾ ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.
ಟಾಸ್ ಸಮಯದಲ್ಲಿ ಪಾಕ್ ನಾಯಕನಿಗೆ ಹಸ್ತಾಲಾಘವ ಮಾಡಲು ಭಾರತ ತಂಡದ ನಾಯಕ ಸೂರ್ಯಕುಮಾರ್ ನಿರಾಕರಿಸಿದರು. ಕೊನೆಗೆ ವಿನ್ನಿಂಗ್ ಶಾಟ್ ಬಾರಿಸಿ ಸಹಪಾಠಿ ಶಿವಂ ದುಬೆಗೆ ಮಾತ್ರ ಹ್ಯಾಂಡ್‌ಶೇಕ್ ಮಾಡಿದ ಸೂರ್ಯ, ಪಾಕ್ ಆಟಗಾರರಿಗೆ ಹಸ್ತಾಲಾಘವ ಮಾಡದೇ ಹೊರಟರು.
ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ ನಡೆದ ಮಾರಕ ಮತ್ತು ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ಜೀವಗಳು ಬಲಿಯಾದವು. ಇದರ ನಂತರ, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಈ ಘಟನೆಗಳಾದ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಿವೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪೂಂಚ್‌ನಲ್ಲಿ (Poonch) ಒಳನುಸುಳಲು ಪ್ರಯತ್ನಿಸುತ್ತಿದ್ದ ಶಂಕಿತ ಉಗ್ರರ ಮೇಲೆ ಭಾರತೀಯ ಸೇನೆ (Indian Army) ಗುಂಡಿನ ದಾಳಿ ನಡೆಸಿದೆ.
ಕಳೆದೊಂದು ತಿಂಗಳ ಅವಧಿಯಲ್ಲಿ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿ ಜಮ್ಮು ಹಾಗೂ ಕಾಶ್ಮೀರದಲ್ಲಿ ತೀವ್ರ ಹಾನಿಯಾಗಿದೆ. ಈ ಹಿನ್ನೆಲೆ ಪ್ರವಾಹ ಪೀಡಿತ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಅವರು ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇದೇ ವೇಳೆ ಉಗ್ರರು ಒಳನುಸುಳಲು ಪ್ರಯತ್ನಿಸಿರುವುದಾಗಿ ತಿಳಿದುಬಂದಿದೆ.
ಸೋಮವಾರ ಬೆಳಿಗ್ಗೆ 5:30ರ ಸುಮಾರಿಗೆ ಬಾಲಕೋಟ್‌ನ ವೈಟ್ ನೈಟ್ ಕಾರ್ಪ್ಸ್ ಪಡೆಗಳು ಎಲ್‌ಒಸಿ ಬಳಿ ಅನುಮಾನಾಸ್ಪದ ಚಲನೆಯನ್ನು ಗಮನಿಸಿದರು. ತಕ್ಷಣವೇ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಎರಡು ಕಡೆಯಿಂದಲೂ ಗುಂಡಿನ ಚಕಮಕಿ ನಡೆದಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವಾರ್‌ನಲ್ಲಿ (Indian Army) ಭಯೋತ್ಪಾದಕರು ಅಡುಗುತಾಣಗಳನ್ನಾಗಿ ಬಳಸಿಕೊಂಡಿದ್ದಾರೆ ಎಂದು ಶಂಕಿಸಲಾದ ಗುಹೆಗಳನ್ನು ಭಾರತೀಯ ಸೇನೆ (Indian Army) ಸ್ಫೋಟಿಸಿದೆ.
ಕಿಶ್ತ್ವಾರ್ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಭಾನುವಾರದಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ. ಈ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಸಿಕ್ಕ ಬಳಿಕ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆ ವೇಳೆ, ಭಾರೀ ಗುಂಡಿನ ದಾಳಿ ಮತ್ತು ಸ್ಫೋಟಗಳು ಸಂಭವಿಸಿವೆ.
ಕಾರ್ಯಾಚರಣೆ ಸಮಯದಲ್ಲಿ ಪರ್ವತಗಳಲ್ಲಿ ಇರುವ ಉಗ್ರರ ಅಡಗು ತಾಣಗಳಾಗಿ ಬಳಸಿಕೊಳ್ಳುತ್ತಿದ್ದರು ಎಂದು ಶಂಕಿಸಲಾದ ನೈಸರ್ಗಿಕ ಗುಹೆಯನ್ನು ಸ್ಫೋಟಿಸಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಫೋಟ ಸಂಭವಿದಾಗ ಭಾರೀ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕಾರ್ಯಾಚರಣೆಯಲ್ಲಿ ಉಗ್ರರು ಸಾವನ್ನಪ್ಪಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಭಾರತ ಪರಾಕ್ರಮ – ಪಾಕ್‌ನ 6 ಯುದ್ಧ ವಿಮಾನಗಳು ಉಡೀಸ್; ವಾಯುಪಡೆ ಮುಖ್ಯಸ್ಥ
ಪಾಕಿಸ್ತಾನದಲ್ಲಿ ತರಬೇತಿ ಪಡೆದು ಬಂದ ಉಗ್ರರು ಕಿಶ್ತ್ವಾರ್ ಜಿಲ್ಲೆಯಲ್ಲಿ ಅಡಗಿಕೊಂಡು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದು ಜಮ್ಮು ಸೇರಿದಂತೆ ಏಳು ಜಿಲ್ಲೆಗಳಿಗೆ ಭದ್ರತಾ ಸವಾಲಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಸೇನೆ ಈ ಭಾಗದಲ್ಲಿ ಭಾರೀ ಕಾರ್ಯಾಚರಣೆ ಕೈಗೊಂಡಿದೆ.
ಆ.1 ರಿಂದ ಆರಂಭಗೊಂಡ ಕಾರ್ಯಾಚರಣೆ ಇಂದು (ಸೋಮವಾರ) 11 ನೇ ದಿನಕ್ಕೆ ಕಾಲಿಟ್ಟಿದೆ. ಈ ಸುದೀರ್ಘ ಕಾರ್ಯಾಚರಣೆಯಲ್ಲಿ ಶನಿವಾರ ಭಾರತೀಯ ಸೇನೆಯ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಎನ್‌ಕೌಂಟರ್ ಸಮಯದಲ್ಲಿ ಇಲ್ಲಿಯವರೆಗೆ 10 ಭದ್ರತಾ ಪಡೆಗಳ ಸಿಬ್ಬಂದಿ ಗಾಯಗೊಂಡಿದ್ದಾರೆ. ಓರ್ವ ಸ್ಥಳೀಯ ಉಗ್ರನನ್ನು ಸೇನೆ ಹತ್ಯೆಗೈದಿದೆ. ಇದನ್ನೂ ಓದಿ: ಆಪರೇಷನ್ ಅಖಾಲ್ | ಭದ್ರತಾ ಸಿಬ್ಬಂದಿ, ಉಗ್ರರ ನಡುವೆ ಗುಂಡಿನ ಚಕಮಕಿ – ಇಬ್ಬರು ಯೋಧರು ಹುತಾತ್ಮ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಆಪರೇಷನ್ ಅಖಾಲ್ (Operation Akhal) ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಚರಣೆಯಲ್ಲಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದು, ಇಬ್ಬರು ಯೋಧರು (Soldiers) ಹುತಾತ್ಮರಾಗಿದ್ದಾರೆ.
Update: OP AKHAL, Kulgam
Chinar Corps honours the supreme sacrifice of the Bravehearts, L/Nk Pritpal Singh and Sep Harminder Singh, in line of duty for the Nation. Their courage and dedication will forever inspire us. #IndianArmy expresses deepest condolences and stand in… pic.twitter.com/La4i49Ov2h
— Chinar Corps🍁 – Indian Army (@ChinarcorpsIA) August 9, 2025
ಕುಲ್ಗಾಮ್‌ನಲ್ಲಿ (Kulgam) ಶುಕ್ರವಾರ ರಾತ್ರಿಯಿಡೀ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದು, ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಮೃತ ಯೋಧರನ್ನು ಲ್ಯಾನ್ಸ್ ನಾಯಕ್ ಪ್ರೀತ್ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸಮಾಧಿ ಶೋಧ ಮ್ಯಾರಥಾನ್ – ಐದು ಅಡಿ ಅಗೆದರೂ ಸಿಕ್ಕಿದ್ದು ಬರೀ ಮಣ್ಣು
ಆಪರೇಷನ್ ಅಖಾಲ್ ಕಾರ್ಯಚರಣೆ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಯಾಚರಣೆಯ ಆರಂಭದಿಂದ ಇಲ್ಲಿಯವರೆಗೆ ಹನ್ನೊಂದು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಆಗಸ್ಟ್ 1 ರಂದು ದಕ್ಷಿಣ ಕಾಶ್ಮೀರ ಜಿಲ್ಲೆಯ ಅಖಾಲ್‌ನಲ್ಲಿರುವ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ನಂತರ ಭದ್ರತಾ ಪಡೆಗಳು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.
ಕಿರಣರಾಜ್ ಅವರ ಪಾರ್ಥಿವ ಶರೀರಕ್ಕೆ ಅಥಣಿ ಪಟ್ಟಣದ ತಹಸೀಲ್ದಾರ್ ಕಚೇರಿ, ಮಾಜಿ ಸೈನಿಕರ ಸಂಘದ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ತೆರೆದ ವಾಹನದಲ್ಲಿ ಪಾರ್ಥಿವ ಶರೀರವನ್ನು ಮುಖ್ಯ ರಸ್ತೆಯ ಮೂಲಕ ಸಾವಿರಾರು ಸಂಖ್ಯೆಯ ಜನರ ಮಧ್ಯೆ ಮೆರವಣಿಗೆ ಮೂಲಕ ತರಲಾಯಿತು.
ಕಿರಣರಾಜ್ ಅವರ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಯೋಧನ ಕಳೆದುಕೊಂಡ ಕುಟುಂಬ ಅಲ್ಲದೆ ನೆರೆದ ಸಾವಿರಾರು ಜನ ಕಂಬನಿ ಮಿಡಿದು ಕಿರಣರಾಜ್ ಅಮರ ರಹೇ ಎಂದು ಘೋಷಣೆ ಕೂಗಿ ಅಭಿಮಾನ ತೋರಿದರು.
– ಕೇಂದ್ರದಿಂದ ಅಗತ್ಯವಿರುವ ಎಲ್ಲಾ ಸಹಾಯ ನೀಡುವುದಾಗಿ ಮೋದಿ ಭರವಸೆ
– ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ; 150 ಮಂದಿ ಸ್ಥಳಾಂತರ
ಡೆಹ್ರಾಡೂನ್: ಉತ್ತರಕಾಶಿಯ ಧರಾಲೀಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ (Uttarkashi Cloudburst) ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯವನ್ನ ಭಾರತೀಯ ಸೇನೆ (Indian Army), ಐಟಿಬಿಪಿ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಆರಂಭಿಸಿವೆ. ಭಾರೀ ಮಳೆಯ ನಡುವೆಯೂ 150 ಮಂದಿಯನ್ನ ರಕ್ಷಿಸಲಾಗಿದೆ. ಇನ್ನೂ 150ಕ್ಕೂ ಹೆಚ್ಚುಮಂದಿಯನ್ನು ಪ್ರವಾಹಪೀಡಿತ ಸ್ಥಳದಿಂದ ರಕ್ಷಿಸಲಾಗಿದೆ.
ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
ಇನ್ನೂ ಮೇಘಸ್ಫೋಟದಿಂದ ಪ್ರವಾಹ ಸಂಭವಿಸಿದ ಸ್ಥಳವನ್ನ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ದು, ಸಮರೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನ ಕೈಗೊಳ್ಳಲಾಗುತ್ತಿದೆ. ಸಂತ್ರಸ್ತರಿಗೆ ತ್ವರಿತ ಸಹಾಯವನ್ನೂ ನೀಡುತ್ತಿದ್ದೇವೆ ಎಂದು ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿರುವ 6,291 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ 125 ಸಂಘಗಳು ದಿವಾಳಿ ಅಂಚಿನಲ್ಲಿವೆ: ಅಮಿತ್ ಶಾ
ಪ್ರಧಾನಿ ಮೋದಿ ಜೊತೆಗೆ ಮಾತುಕತೆ
ಈ ನಡುವೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಧರಾಲಿ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ವಿಪತ್ತು ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮಾಹಿತಿ ಪಡೆದಿದ್ದಾರೆ. ರಾಜ್ಯ ಸರ್ಕಾರವು ಸಂಪೂರ್ಣ ಸಿದ್ಧತೆಯೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ, ನಿರಂತರ ಭಾರೀ ಮಳೆಯಿಂದಾಗಿ, ಕೆಲವು ಪ್ರದೇಶಗಳಲ್ಲಿ ತೊಂದರೆಗಳಿವೆ ಎಲ್ಲಾ ಸಂಬಂಧಪಟ್ಟ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಇದರಿಂದ ಸಂತ್ರಸ್ತರಿಗೆ ತ್ವರಿತ ಸಹಾಯ ಸಿಗುತ್ತದೆ ಎಂದು ಮೋದಿ ಅವರಿಗೆ ಧಾಮಿ ಮಾಹಿತಿ ನೀಡಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ಸಹಾಯವನ್ನು ಭರವಸೆ ನೀಡಿದ್ದಾರೆ.
ಉತ್ತರಾಖಂಡ ಬಿಜೆಪಿ ಸಂಸದರಿಂದ ಮೋದಿ ಭೇಟಿ
ಈ ಎಲ್ಲ ಬೆಳವಣಿಗೆಗಳ ನಡುವೆ ಉತ್ತರಾಖಂಡದ ಬಿಜೆಪಿ ಸಂಸದರನ್ನು (Uttarakhand BJP MPs) ಭೇಟಿಯಾದ ಪ್ರಧಾನಿ ಮೋದಿ, ಉತ್ತರಕಾಶಿ ಉಂಟಾದ ಮೇಘಸ್ಫೋಟ ಘಟನೆ ಕುರಿತು ಚರ್ಚಿಸಿದ್ದಾರೆ. ಉತ್ತರಾಖಂಡದ ಸಂಸದರಾದ ಅಜಯ್ ಭಟ್, ಮಾಲಾ ರಾಜ್ಯ ಲಕ್ಷ್ಮಿ ಶಾ, ತ್ರಿವೇಂದ್ರ ಸಿಂಗ್ ರಾವತ್ ಮತ್ತು ಅನಿಲ್ ಬಲುನಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಆರ್ಮಿ ಕ್ಯಾಂಪ್‌ನಲ್ಲಿದ್ದ 10ಕ್ಕೂ ಅಧಿಕ ಸೈನಿಕರು ನಾಪತ್ತೆ
100ಕ್ಕೂ ಅಧಿಕ ಮಂದಿ ಮಿಸ್ಸಿಂಗ್
ಇನ್ನೂ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮ ನೈಸರ್ಗಿಕ ವಿಕೋಪಕ್ಕೆ ಸಿಲುಕಿದ್ದು, ಭಾರೀ ಮೇಘಸ್ಫೋಟದಿಂದ ವಿನಾಶವೇ ಸೃಷ್ಟಿಯಾಗಿದೆ. ಧರಾಲಿ ಗ್ರಾಮದ ಬಳಿಯಿರುವ ಖೀರ್ ಗಡ್ ಪ್ರದೇಶದಲ್ಲಿ ಪ್ರವಾಹದಿಂದಾಗಿ ಹಠಾತ್ ನೀರಿನ ಹರಿವು ಹೆಚ್ಚಾದ ಪರಿಣಾಮ ದಿಢೀರ್ ಪ್ರವಾಹ ಉಂಟಾಗಿದೆ. ನೋಡನೋಡುತ್ತಿದ್ದಂತೆ ನದಿಯಲ್ಲಿ ರೌದ್ರಾವತಾರ ತಾಳಿ ಹರಿದು ಬಂದ ಭಾರೀ ಪ್ರಮಾಣದ ಕಪ್ಪು ಬಣ್ಣದ ನೀರಿನಿಂದ 25ಕ್ಕೂ ಹೆಚ್ಚು ಹೋಟೆಲ್, ಹೋಂಸ್ಟೇಗಳು ಕೊಚ್ಚಿಹೋಗಿವೆ. ಘಟನೆಯಲ್ಲಿ ಸುಮಾರು ಹತ್ತು ಮಂದಿ ಮೃತಪಟ್ಟಿದ್ದು, ನೂರಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ. ಇದನ್ನೂ ಓದಿ: ಉತ್ತಾರಾಖಂಡದಲ್ಲಿ ಪ್ರವಾಹ – ಕಲಬುರಗಿ ಜಿಲ್ಲಾಡಳಿತದಿಂದ ಸಹಾಯವಾಣಿ ಕೇಂದ್ರ ಆರಂಭ
ಈ ಪ್ರದೇಶಗಳಲ್ಲಿ ನಾಪತ್ತೆಯಾದವರ ರಕ್ಷಣಾ ಕಾರ್ಯ ಆರಂಭವಾಗಿದೆ. ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಐಟಿಬಿಪಿ ಮತ್ತು ಸ್ಥಳೀಯ ಆಡಳಿತದ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಇದುವರೆಗೆ 150 ಜನರನ್ನ ರಕ್ಷಿಸಲಾಗಿದೆ. ಸುಮಾರು 150 ಜನರನ್ನ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.
ನವದೆಹಲಿ: ಗಡಿ ನಿಯಂತ್ರಣ ರೇಖೆ (LoC) ಬಳಿ ಯಾವುದೇ ಕದನ ವಿರಾಮ ಉಲ್ಲಂಘನೆಯಾಗಿಲ್ಲ ಎಂದು ಭಾರತೀಯ ಸೇನೆ (Indian Army) ಸ್ಪಷ್ಟಪಡಿಸಿದೆ.
ಪೂಂಚ್ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆಯ ಕುರಿತು ಕೆಲವು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ (Social Media) ವರದಿಗಳು ಪ್ರಕಟವಾದ ಬೆನ್ನಲ್ಲೇ ಭಾರತೀಯ ಸೇನೆ ಸ್ಪಷ್ಟನೆ ನೀಡಿ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದೆ.
There have been some media and social media reports regarding ceasefire violations in the Poonch region. It is clarified that there has been no ceasefire violation along the Line of Control: Indian Army pic.twitter.com/OhCLA9yh3b
ಸರಿ ಸುಮಾರು ಹದಿನೈದು ನಿಮಿಷಗಳ ಕಾಲ ನಡೆದ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
370 ನೇ ವಿಧಿಯನ್ನು ರದ್ದುಗೊಳಿಸಿದ 6 ನೇ ವಾರ್ಷಿಕೋತ್ಸವ ಇಂದು ನಡೆಯತ್ತಿದೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಆಗಸ್ಟ್ 05, 2019 ರಂದು ರದ್ದುಗೊಳಿಸಿತ್ತು.