Tag: Indian armed forces

  • 3 ರಫೇಲ್‌ ಸೇರಿ 5 ಯುದ್ಧ ವಿಮಾನಗಳನ್ನ ಪಾಕ್‌ ಹೊಡೆದಿದೆ – ಐಎಎಫ್‌ ಅಧಿಕಾರಿ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್‌ ವಾಗ್ದಾಳಿ

    3 ರಫೇಲ್‌ ಸೇರಿ 5 ಯುದ್ಧ ವಿಮಾನಗಳನ್ನ ಪಾಕ್‌ ಹೊಡೆದಿದೆ – ಐಎಎಫ್‌ ಅಧಿಕಾರಿ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್‌ ವಾಗ್ದಾಳಿ

    ನವದೆಹಲಿ: ಕಳೆದ ಮೇ 7ರಂದು ನಡೆದ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ಕುರಿತು ಇಂಡೋನೇಷ್ಯಾದಲ್ಲಿರುವ ಭಾರತೀಯ ವಾಯು ಸೇನೆ (IAF) ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ಭಾರೀ ಕೋಲಾಹಲ ಎಬ್ಬಿಸಿದೆ.

    ʻಮೇ 7ರ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆ ವೇಳೆ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳನ್ನು (Fighter Gets) ಪಾಕಿಸ್ತಾನವು ಹೊಡೆದುರುಳಿಸಿದೆ. ರಾಜಕೀಯ ನಾಯಕತ್ವವು ನಿರ್ಬಂಧ ಹೇರಿದ್ದರಿಂದಲೇ ನಾವು ವಿಮಾನಗಳನ್ನು ಕಳೆದುಕೊಳ್ಳಬೇಕಾಯಿತುʼ ಎಂದು ವಾಯುಸೇನೆ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಗಗನಯಾತ್ರಿ ಶುಭಾಂಶು ಜೊತೆಗೆ ಮೋದಿ ಸಂವಾದ – 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡ್ತಿದ್ದೇವೆ ಎಂದ ಶುಕ್ಲಾ

    ಇಂಡೋನೇಷ್ಯಾದ (Indonesian) ವಿಶ್ವವಿದ್ಯಾಲಯವೊಂದರಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾರತೀಯ ವಾಯು ಸೇನೆಯ ಕ್ಯಾಪ್ಟನ್ ಶಿವಕುಮಾ‌ರ್ ಹಿಂದೆ ಮಾತನಾಡಿದ್ದರು. ಈ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್ ಬಳಿ ಕೇಂದ್ರ ಸರ್ಕಾರದಿಂದ NIMHANS ಪಾಲಿಟ್ರೌಮಾ ಘಟಕಕ್ಕೆ ಅನುಮೋದನೆ

    ವಾಯು ಸೇನೆಯ ಅಧಿಕಾರಿ ಹೇಳಿದ್ದೇನು?
    ಏಪ್ರಿಲ್‌ 22ರ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನೇರ ಮಿಲಿಟರಿ ದಾಳಿಯಾಗಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತು. ಈ ಸಮಯದಲ್ಲಿ ಭಾರತೀಯ ವಾಯು ಸೇನೆಯ 5 ಯುದ್ಧ ವಿಮಾನಗಳನ್ನು ಪಾಕಿಸ್ತಾನವು ಹೊಡೆದುರುಳಿಸಿದೆ. ಮೂರು ರಫೇಲ್‌ಗಳು, 1 ಮಿಗ್-29 ಮತ್ತು ಸುಖೋಯ್ -30 ಯುದ್ಧ ವಿಮಾನಗಳು ಹಾಗೂ ಒಂದು ಯುದ್ಧತಂತ್ರದ ಡ್ರೋನ್‌ ಅನ್ನು ಕಳೆದುಕೊಳ್ಳಬೇಕಾಯಿತು. ರಾಜಕೀಯ ನಾಯಕತ್ವವು ನಿರ್ಬಂಧ ಹೇರಿದ್ದರಿಂದಲೇ ನಾವು ವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು. ಇದನ್ನೂ ಓದಿ: Operation Sindoor | ತಲೆ ಕೆಡಿಸಿಕೊಂಡು ʻಸಿಂಧೂರʼ ಅರ್ಥ ಹುಡುಕಾಡ್ತಿದೆ ಪಾಕ್‌ – ಗೂಗಲ್‌ನಲ್ಲಿ ಟ್ರೆಂಡ್‌

    operation sindoor India intercepts Pakistans Fatah ballistic missile fired at Delhi

    ಭಾರತವು ಹಲವು ವಿಮಾನಗಳನ್ನು ಕಳೆದುಕೊಂಡಿದೆ. ಅವರು ಈ ಮಾತನ್ನು ಒಪ್ಪದೇ ಇರಬಹುದು. ಆದ್ರೆ ನಾವು ಕೆಲವು ವಿಮಾನಗಳನ್ನು ಕಳೆದುಕೊಂಡಿದ್ದೇವೆ. ಅದು ಮಿಲಿಟರಿ ನೆಲೆಗಳ ಮೇಲೆ ಮತ್ತು ವಾಯುರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡದಂತೆ ರಾಜಕೀಯ ನಾಯಕತ್ವವು ನಿರ್ಬಂಧ ಹೇರಿದ್ದರಿಂದಾಗಿದೆ. ಇದಾದ ಬಳಿಕ ನಾವು ನಮ್ಮ ತಂತ್ರಗಳನ್ನ ಸಂಪೂರ್ಣ ಬದಲಾಯಿಸಿದೆವು. ಅವರ ಮಿಲಿಟರಿ ನೆಲೆಗಳು, ವಾಯುರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿದೆವು. (ಮಿಲಿಟರಿ ಭಾಷೆಯಲ್ಲಿ SEAD ಮತ್ತು DEAD ಎಂದು ಕರೆಯಲಾಗುತ್ತದೆ). ಮೇ 8, 9, 10ರಂದು ಸಂಪೂರ್ಣ ಹಿಡಿತ ಸಾಧಿಸಲಾಯಿತು ಎಂದು ಹೇಳಿರುವುದಾಗಿ ವರದಿಯಾಗಿದೆ. ಕ್ಯಾಪ್ಟನ್ ಶಿವಕುಮಾ‌ರ್ ಅವರು ಹೇಳಿದ್ದಾರೆ ಎನ್ನಲಾದ ಹೇಳಿಕೆ ಕುರಿತು ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    s 500 air defence system

    ಈ ವರದಿಯನ್ನು ತನ್ನ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌ ನಾಯಕರು, ಕೇಂದ್ರ ಸರ್ಕಾರವು ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಂವಿಧಾನದ ಪೀಠಿಕೆ ರಾಷ್ಟ್ರದ ಆತ್ಮ, ತಿದ್ದುಪಡಿಯಿಂದ ಸಂವಿಧಾನದ ಆಶಯಕ್ಕೆ ಧಕ್ಕೆಯಾಗಿದೆ: ಜಗದೀಪ್ ಧನ್ಕರ್ ಕಳವಳ

    ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷಗಳ ಸಭೆ ಕರೆದು ಅದರ ನೇತೃತ್ವ ವಹಿಸಿಕೊಳ್ಳಲು ಯಾಕೆ ನಿರಾಕರಿಸುತ್ತಿದ್ದಾರೆ. ಪಹಲ್ಗಾಮ್‌ ದಾಳಿ ಮತ್ತು ʻಆಪರೇಷನ್ ಸಿಂಧೂರʼದ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು ಎನ್ನುವ ವಿರೋಧ ಪಕ್ಷಗಳ ಆಗ್ರಹವನ್ನು ಯಾಕಾಗಿ ಒಪ್ಪಿಕೊಳ್ಳುತ್ತಿಲ್ಲ? ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

    ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಇದನ್ನು ಭಾರತದ ಜನರ ಎದುರು ಕಾಂಗ್ರೆಸ್ ತೆರೆದಿಡುತ್ತದೆ ಎಂದು ಅವರು ಭಯಭೀತರಾಗಿದ್ದಾರೆ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ S-400 ಯಶಸ್ವಿ ಕಾರ್ಯಾಚರಣೆ; S-500 ರಕ್ಷಣಾ ವ್ಯವಸ್ಥೆ ಖರೀದಿಗೂ ಆಸಕ್ತಿ ತೋರಿದ ಭಾರತ

  • ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಯೋಧರಿಗೆ ಗೀತನಮನ!

    ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಯೋಧರಿಗೆ ಗೀತನಮನ!

    – ಮೈನವಿರೇಳಿಸಿದ ದೇಶಭಕ್ತಿ ಗೀತಗಾಯನ, ರೋಮಾಂಚಕ ಏರ್‌ಶೋ

    ಮುಂಬೈ: 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಯಶಸ್ವಿಯಾಗಿ ನೆರವೇರಿದೆ. ಇಂದು ಪಂಜಾಬ್‌ ಕಿಂಗ್ಸ್‌ ಮತ್ತು ಆರ್‌ಸಿಬಿ ನಡುವಿನ ಫೈನಲ್‌ ಪಂದ್ಯ ಮುಕ್ತಾಯದೊಂದಿಗೆ ಈ ಆವೃತ್ತಿಗೆ ತೆರೆ ಬೀಳಲಿದೆ. ಇಂದು ಫೈನಲ್‌ ಪಂದ್ಯಕ್ಕೂ ಮುನ್ನ ನಡೆಯುತ್ತಿರುವ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲಾಯಿತು.

    ಇಂದಿನ ಫೈನಲ್‌ ಪಂದ್ಯವನ್ನು ಭಾರತೀಯ ಸೇನೆಗೆ ಅರ್ಪಿಸಲು ಬಿಸಿಸಿಐ ನಿರ್ಧಾರ ಕೈಗೊಂಡಿತ್ತು. ಅದಕ್ಕಾಗಿ ಪಂದ್ಯ ಆರಂಭಕ್ಕೂ ಮುನ್ನ ಮೂರು ಸೇನೆಗಳಿಗೆ ಗೌರವ ಸಲ್ಲಿಸಲಾಯಿತು. ದೇಶಭಕ್ತಿ ನೃತ್ಯಗಳು, ಶಂಕರ್‌ ಮಹಾದೇವನ್‌, ಶ್ರೇಯಾ ಘೋಷಾಲ್ ತಂಡದಿಂದ ದೇಶಭಕ್ತಿ ಗೀತೆಗಳ ನಮನ ಸಲ್ಲಿಸಲಾಯಿತು. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    45 ನಿಮಿಷಗಳ ಈ ಸಮಾರಂಭದಲ್ಲಿ ಖ್ಯಾತ ಹಿನ್ನೆಲೆ ಗಾಯಕರ ದೇಶಭಕ್ತಿ ಗೀತೆಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಮೈ ನವಿರೇಳುವಂತೆ ಮಾಡಿದವು. ಜೈ ಹೋ, ವಂದೇ ಮಾತರಂ, ಹೇ ವತನ್‌ ಮೇರೆವತನ್‌ ಮೊದಲಾದ ಗೀತೆಗಳಿಗೆ ಅಭಿಮಾನಿಗಳು ತಲೆದೂಗಿದರು. ಅಲ್ಲದೇ ರಾಷ್ಟ್ರಧ್ವಜ ಹಾರಿಸುತ್ತಾ.. ಎದ್ದು ನಿಂತು ಗೌರವ ಸಲ್ಲಿಸಿದರು. ಇದೇ ವೇಳೆ ವಾಯುಪಡೆಯಿಂದ ಏರ್‌ ಶೋ ಕೂಡ ನಡೆಯಿತು. ದೇಶದ ಅತಿದೊಡ್ಡ ಕ್ರೀಡಾಂಗಣದ ಮೇಲೆ ವಾಯುಪಡೆಯ ವಿಮಾನಗಳ ಸಾಹಸ ದೃಶ್ಯಗಳು ಅಭಿಮಾನಿಗಳನ್ನು ರೋಮಾಂಚನಗೊಳಿಸಿತು. ಇದನ್ನೂ ಓದಿ: ಗೆದ್ದು ಬಾ ಆರ್‌ಸಿಬಿ – ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

    ಸೇನೆಗೆ ಸಮರ್ಪಿಸಲು ಕಾರಣವೂ ಇದೆ.
    ಕಳೆದ ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನ ಹತ್ಯೆಗೈಯಲಾಗಿತ್ತು. ಇದಕ್ಕೆ ʻಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ಮೂಲಕ ಭಾರತ (India) ಪ್ರತೀಕಾರ ತೀರಿಸಿಕೊಂಡಿತ್ತು. ಅಲ್ಲದೇ ಪಾಕಿಸ್ತಾನದ ದಾಳಿಗಳನ್ನ ವಿಫಲಗೊಳಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರತೀಕಾರ ಸಮರ ಜೋರಾಗುತ್ತಿದ್ದಂತೆ ಐಪಿಎಲ್‌ ಪಂದ್ಯಗಳನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಭಾರತ ಮತ್ತು ಪಾಕ್ ‌ನಡುವೆ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಮೇ 17ರಿಂದ ಟೂರ್ನಿ ಪುನರಾರಂಭಗೊಳಿಸಲಾಯಿತು. ಹೀಗಾಗಿ ಭಾರತೀಯ ಸೇನೆಯ ಈ ಶೌರ್ಯ, ಸಾಹಸಕ್ಕೆ ಗೌರವ ಸಲ್ಲಿಸುವ ಸಲುವಾಗಿ ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲು ಬಿಸಿಸಿಐ ನಿರ್ಧರಿಸಿತು.

    ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮೂರು ಸೇನಾಪಡೆಗಳ ಮುಖ್ಯಸ್ಥರಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, ನೇವಿ ಮುಖ್ಯಸ್ಥ ಅಡ್ಮಿರಲ್‌ ದಿನೇಶ್‌ ಕೆ ತ್ರಿಪಾಠಿ, ಏರ್‌ಚೀಫ್‌ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ಅವರನ್ನ ವೇದಿಕೆಗೆ‌ ಸೇನಾ ಗೌರವದೊಂದಿಗೆ ಆಹ್ವಾನಿಸಲಾಯಿತು. ಬಳಿಕ ಸೇನೆಗೆ ಗೌರವಾರ್ಥವಾಗಿ ಮಿಲಿಟರಿ ಬ್ಯಾಂಡ್‌ ಪ್ರದರ್ಶನ ನಡೆಯಿತು. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

  • ರಾಜ್ಯದ ಇಬ್ಬರು IPS ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ – 18 ಮಂದಿಗೆ ವಿಶಿಷ್ಟ ಸೇವಾ ಪದಕ ಪ್ರದಾನ

    ರಾಜ್ಯದ ಇಬ್ಬರು IPS ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ – 18 ಮಂದಿಗೆ ವಿಶಿಷ್ಟ ಸೇವಾ ಪದಕ ಪ್ರದಾನ

    ಬೆಂಗಳೂರು: 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ (Ministry of Home Affairs) ಕೊಡಮಾಡುವ ರಾಷ್ಟ್ರಪತಿ ಪದಕಕ್ಕೆ (President Medal) ರಾಜ್ಯದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಪೊಲೀಸ್‌ ವಿಶಿಷ್ಟ ಸೇವಾ ಪದಕಕ್ಕೆ 18 ಮಂದಿ ಪೊಲೀಸ್‌ ಅಧಿಕಾರಿಗಳು (Police Officers) ಭಾಜನರಾಗಿದ್ದಾರೆ.

    ಪೊಲೀಸ್‌ ಇಲಾಖೆಗೆ ಸಲ್ಲಿಸಿದ ಗಣನೀಯ ಸೇವೆಗೆ ಕೇಂದ್ರ ಗೃಹ ಸಚಿವಾಲಯ ಪದಕ ಪ್ರದಾನ ಮಾಡಲಿದೆ. ಅಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.

    ರಾಷ್ಟ್ರಪತಿ ಪದಕ:
    ಎಸ್. ಮುರುಗನ್, ಎಡಿಜಿಪಿ
    ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ

    ವಿಶಿಷ್ಟ ಸೇವಾ ಪದಕ:
    ಸಂದೀಪ್ ಪಾಟೀಲ್, ಐಜಿಪಿ
    ಬಿ ಎಸ್ ಮೋಹನ್ ಕುಮಾರ್, ಡಿವೈಎಸ್‌ಪಿ
    ನಾಗರಾಜ್, ಎಸಿಪಿ
    ಶಿವಶಂಕರ್, ಅಸಿಸ್ಟೆಂಟ್ ಡೈರೆಕ್ಟರ್
    ಭೀಮಾರಾವ್ ಗಿರೀಶ್, ಎಸ್ಪಿ
    ರಾಘವೇಂದ್ರ ಹೆಗ್ಡೆ , ಎಸ್‌ಪಿ
    ಜಗದೀಶ್ ಹೆಚ್.ಎಸ್, ಎಸಿಪಿ
    ಕೇಶವಮೂರ್ತಿ ಗೋಪಾಲಯ್ಯ, ಡಿಎಸ್‌ಪಿ
    ನಾಗಯ್ಯ ನಾಗರಾಜು, ಡಿಎಸ್‌ಪಿ
    ಬಿ.ಎನ್ ಶ್ರೀನಿವಾಸ್, ಡಿಎಸ್‌ಪಿ
    ಅಂಜುಮಾಲ ನಾಯ್ಕ್, ಡಿವೈಎಸ್‌ಪಿ
    ಅನಿಲ್ ಕುಮಾರ್ ಪ್ರಭಾಕರ್, ಪಿಐ
    ಅಶೋಕ್ ಆರ್.ಪಿ, ಪಿಐ
    ರಾಮಪ್ಪ ಗುತ್ತೇರ್, ಪಿಐ
    ಶಂಕರ, ಹೆಚ್‌ಸಿ
    ಕೆ.ವೆಂಕಟೇಶ್, ಹೆಚ್‌ಸಿ
    ಕುಮಾರ್, ಎಹೆಚ್‌ಸಿ
    ವಿ.ಬಂಗಾರು, ಕೆಎಸ್‌ಆರ್‌ಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತೀಯ ಸೇನೆಗಾಗಿ ಮಹಿಂದ್ರಾ ಗ್ರೂಪ್‍ನಿಂದ ನೂತನ ಶಸ್ತ್ರಸಜ್ಜಿತ ವಾಹನ ನಿರ್ಮಾಣ

    ಭಾರತೀಯ ಸೇನೆಗಾಗಿ ಮಹಿಂದ್ರಾ ಗ್ರೂಪ್‍ನಿಂದ ನೂತನ ಶಸ್ತ್ರಸಜ್ಜಿತ ವಾಹನ ನಿರ್ಮಾಣ

    ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಾಗಿ ವಿಶೇಷವಾಗಿ ತಯಾರಿಸಲಾದ ಆರ್ಮರ್ಡ್ ಲೈಟ್ ಸ್ಪೆಷಲಿಸ್ಟ್ ವೆಹಿಕಲ್‍ನ್ನು ಸೇನೆಗೆ ನೀಡಲಾಗುತ್ತಿದೆ ಎಂದು ಮಹೀಂದ್ರಾ ಗ್ರೂಪ್‍ನ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ಈ ನೂತನ ವಾಹನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಲಘು ಶಸ್ತ್ರಸಜ್ಜಿತ ವಿಶೇಷ ವಾಹನವಾಗಿದೆ. ಅಲ್ಲದೇ ಇದು ಹೆಚ್ಚುವರಿ ಬಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ನಮ್ಮ ದೇಶದ ಎಲ್ಲಾ ಭೂ ಭಾಗಗಳಲ್ಲಿ ಹಾಗೂ ಮರುಭೂಮಿಯಲ್ಲಿ ಕಾರ್ಯ ನಿರ್ವಹಿಸಲು ಈ ವಾಹನ ಸೂಕ್ತವಾಗಿದೆ. ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳಲ್ಲಿ ಗಸ್ತು ತಿರುಗಲು, ವಿಶೇಷ ಪಡೆಗಳ ಕ್ಷಿಪ್ರ ಕಾರ್ಯಾಚರಣೆಗಳಿಗೆ ಇದು ಸೂಕ್ತವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22ಕ್ಕೆ ಕರ್ನಾಟಕ ಬಂದ್‌ಗೆ ಕರೆ

    ಶಸ್ತ್ರಸಜ್ಜಿತ ವಾಹನಗಳ ವೀಡಿಯೊವನ್ನು ಹಂಚಿಕೊಂಡಿರುವ ಆನಂದ್ ಮಹಿಂದ್ರಾ ಅವರು, ವಾಹನದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಎಲ್ಲಾ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ನಮ್ಮ ಸೇನೆಗಾಗಿ ಹೆಮ್ಮೆಯಿಂದ ನಿರ್ಮಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

    ಸುಖವಿಂದರ್ ಹೇಯರ್ ಅವರ ತಂಡ ಈ ವಾಹನವನ್ನು ಯಶಸ್ವಿಯಾಗಿ ಸಿದ್ಧಪಡಿಸಿದೆ. ಈ ಮೂಲಕ ದೇಶದ ಭದ್ರತಾ ವ್ಯವಸ್ಥೆಗೆ ಸಂಸ್ಥೆ ಅಮೂಲ್ಯ ಕೊಡುಗೆ ನೀಡಿದೆ ಎಂದು ಅವರು ಟ್ವೀಟ್‍ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಮೀನು ಹಿಡಿಯಲು ತೆರಳಿದ್ದ ಮೂವರು ಬಾಲಕರು ನೀರುಪಾಲು