Tag: Indian American

  • ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

    ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷಾಗಿ 2ನೇ ಬಾರಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ ಭಾರತ (Indian American) ಮೂಲದ ಕಶ್ಯಪ್ ʻಕಶ್ʼ ಪಟೇಲ್ ಅವರನ್ನ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (FBI) ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಈ ಮೂಲಕ ಟ್ರಂಪ್‌ ಸಂಪುಟಕ್ಕೆ ಆಯ್ಕೆಯಾದ ಭಾರತೀಯ ಮೂಲದ 2ನೇ ವ್ಯಕ್ತಿ ಎಂಬ ಹೆಗ್ಗಳಿಕೆ ಕಶ್ಯಪ್ ಅವರದ್ದಾಗಿದೆ.

    ಈ ಮಾಹಿತಿಯನ್ನು ಟ್ರಂಪ್‌ (Donald Trump) ತಮ್ಮ ಟ್ರೂಥ್‌ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಮೂಲದ ಅಮೆರಿಕನ್‌ ಪ್ರಜೆ ಕಶ್‌, ನಮ್ಮ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅವರು ಎಫ್‌ಬಿಐಗೆ ಇನ್ನಷ್ಟು ಸಮಗ್ರತೆಯನ್ನು ತರಲಿದ್ದಾರೆ. ಕಶ್ ಪಟೇಲ್ ಅವರು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ನ ಮುಂದಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬುದನ್ನು ಪ್ರಕಟಿಸಲು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ.

    ಯಾರು ಈ ಕಶ್‌?
    ಕಾಶ್ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯವನ್ನು ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ರಷ್ಯಾದ ಹುಸಿ ಬೆದರಿಕೆ ಅನಾವರಣಗೊಳಿಸುವಲ್ಲಿ ಕಶ್ಯಪ್‌ ಅವರ ಪಾತ್ರ ದೊಡ್ಡದಿದೆ. ಸತ್ಯದ ಪರ ವಕೀಲರಾಗಿ, ಬದ್ಧತೆ ಮತ್ತು ಸಂವಿಧಾನದ ಪರವಾಗಿ ಸದಾ ನಿಂತವರು. ನನ್ನ ಮೊದಲ ಅವಧಿಯಲ್ಲಿ ಕಶ್ ರಕ್ಷಣಾ ವಿಭಾಗದ ಸಿಬ್ಬಂದಿ ಮುಖ್ಯಸ್ಥರಾಗಿ, ರಾಷ್ಟ್ರೀಯ ಗುಪ್ತಚರ ವಿಭಾಗದ ಉಪ ನಿರ್ದೇಶಕರಾಗಿ ಮತ್ತು ಭಯೋತ್ಪಾದೆ ವಿರೋಧಿ ವಿಭಾಗದ ಹಿರಿಯ ನಿರ್ದೇಶಕರಾಗಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಅಸಾಧಾರಣ ಕೆಲಸ ಮಾಡಿದ್ದಾರೆ ಎಂದು ಟ್ರಂಪ್‌ ಗುಣಗಾನ ಮಾಡಿದ್ದಾರೆ.

    ಬರಾಕ್ ಒಬಾಮಾ ಅವರ ಅವಧಿಯಲ್ಲಿ ನ್ಯಾಯ ವಿಭಾಗದಲ್ಲಿ ಅಲ್ಪಕಾಲ ಸೇವೆ ಸಲ್ಲಿಸಿದ್ದ ಕಶ್ಯಪ್‌ ಅವರು 2 ವರ್ಷಗಳ ಕಾಲ ಡೆವಿನ್ ನ್ಯೂನ್ಸ್, ಆರ್-ಕ್ಲಿಫ್ ಪರ ಹಿರಿಯ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. 2017 ಮತ್ತು 2018ರಲ್ಲಿ ಹೌಸ್ ಇಂಟೆಲಿಜೆನ್ಸ್ ಕಮಿಟಿ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ, ಎಫ್‌ಬಿಐ ರಷ್ಯಾ ತನಿಖೆಗೆ ನೆರವಾಗಿದ್ದರು.

    44 ವರ್ಷದ ಕಶ್ಯಪ್‌ ಪಟೇಲ್‌ ಪೂರ್ವ ಆಫ್ರಿಕಾದಿಂದ ವಲಸೆ ಬಂದ ಗುಜರಾತಿ ಮೂಲದ ದಂಪತಿಗೆ ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಜನಿಸಿದರು. ಕಾನೂನು ಪದವಿ ಪಡೆದ ನಂತರ ಫ್ಲೋರಿಡಾದಲ್ಲಿ ವಕೀಲರಾಗಿ ಕೆಲಸ ಮಾಡಿದರು, ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಗ್ರಾಹಕರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದರು. ನಂತರ ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್ ಆಗಿ ಸೇರಿಕೊಂಡರು. ಪೂರ್ವ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ನಡೆಯುತ್ತಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಕರಣಗಳನ್ನು ನಿರ್ವಹಿಸಿದ್ದರು.

  • ಅಮೆರಿಕದಲ್ಲಿ ಹೊಸ ವಲಸೆ ನೀತಿ ಘೋಷಿಸಿದ ಬೈಡೆನ್‌ – ಭಾರತೀಯ ಅಮೆರಿಕನ್ನರಿಗೆ ಏನು ಲಾಭ?

    ಅಮೆರಿಕದಲ್ಲಿ ಹೊಸ ವಲಸೆ ನೀತಿ ಘೋಷಿಸಿದ ಬೈಡೆನ್‌ – ಭಾರತೀಯ ಅಮೆರಿಕನ್ನರಿಗೆ ಏನು ಲಾಭ?

    ಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರು ಅಮೆರಿಕನ್‌ ಪ್ರಜೆಗಳನ್ನು ವಿವಾಹವಾದ ಸುಮಾರು ಅರ್ಧ ಮಿಲಿಯನ್ ದಾಖಲೆರಹಿತ ವಲಸಿಗರಿಗೆ ಪೌರತ್ವವನ್ನು ನೀಡುವ‌ ಹೊಸ ಯೋಜನೆಯೊಂದನ್ನು ಘೋಷಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವು ತಿಂಗಳುಗಳು ಬಾಕಿ ಇರುವಾಗ ಜೋ ಬೈಡೆನ್‌ ಈ ಯೋಜನೆಯನ್ನು ಘೋಷಿಸಿದ್ದಾರೆ. ಹಾಗಿದ್ರೆ ಬೈಡೆನ್‌ ಅವರ ಹೊಸ ವಲಸೆ ಯೋಜನೆ (New Immigration Policy) ಏನು? ಭಾರತೀಯರಿಗೆ ಇದು ಹೇಗೆ ನೆರವಾಗುತ್ತದೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಬೈಡೆನ್ ಹೊಸ ವಲಸೆ ಯೋಜನೆ ಏನು?
    ಅಮೆರಿಕದಲ್ಲಿ ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ದಾಖಲೆರಹಿತವಾಗಿ ವಾಸಿಸುತ್ತಿರುವ ಸಂಗಾತಿ ಅಥವಾ ಮಕ್ಕಳಿಗೆ ಯುಎಸ್‌ ಕಾನೂನು ಸ್ಥಾನಮಾನಕ್ಕಾಗಿ ದಾಖಲೆಗಳನ್ನು ಸಲ್ಲಿಸಲು ಅನುವು ಮಾಡಿಕೊಡುತ್ತದೆ. 

    ಈ ಯೋಜನೆಯ ಅರ್ಹತೆ ಪಡೆಯಲು, ಸಂಗಾತಿಗಳು ಮದುವೆಯಾಗಿರಬೇಕು ಮತ್ತು ಜೂನ್ 17, 2024ರಂತೆ ಕನಿಷ್ಠ 10 ವರ್ಷಗಳ ಕಾಲ ಅಮೆರಿಕದಲ್ಲಿ ವಾಸಿಸಿರಬೇಕು. ಅಲ್ಲದೇ  US ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಫ್ಯಾಕ್ಟ್ ಶೀಟ್ ಪ್ರಕಾರ, ಸಾರ್ವಜನಿಕ ಸುರಕ್ಷತೆ ಅಥವಾ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನುಂಟು ಮಾಡಬಾರದು. 

    ಶಾಶ್ವತ ವಾಸ ಅರ್ಜಿಗಳ ಪ್ರಕ್ರಿಯೆಯು ತಿಂಗಳುಗಳಿಂದ ವರ್ಷಗಳವರೆಗೆ ತೆಗೆದುಕೊಳ್ಳಬಹುದು. ಯುಎಸ್‌ನಲ್ಲಿ ʼಗ್ರೀನ್ ಕಾರ್ಡ್ʼ ಪಡೆದವರು ಯುಎಸ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು.ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸುತ್ತಿದ್ದು ಮತ್ತು ಅಲ್ಲಿನ ನಾಗರಿಕರನ್ನೇ ಮದುವೆಯಾಗಿರುವ ಹೊರದೇಶದ ಪ್ರಜೆಗಳು ಇನ್ನು ಮುಂದೆ ಅಲ್ಲಿಂದ ವಾಪಸ್ ತನ್ನ ದೇಶಕ್ಕೆ ಮರಳಬೇಕಾದ ಅನಿವಾರ್ಯತೆ ಇರುವುದಿಲ್ಲ. ಈ ಯೋಜನೆಯ ನಂತರ, ಅವರು ತಮ್ಮ ಕುಟುಂಬದೊಂದಿಗೆ ಅಮೆರಿಕ ದೇಶದಲ್ಲಿಯೇ ವಾಸಿಸಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ, ವಲಸಿಗರು ಅಮೆರಿಕನ್ ಪ್ರಜೆಯನ್ನು ಮದುವೆಯಾಗುವ ಮೂಲಕ ಅಮೆರಿಕನ್ ಪೌರತ್ವವನ್ನು ಪಡೆಯಬೇಕಿತ್ತು. ಹಾಗಿದ್ದರೂ,  ಗ್ರೀನ್ ಕಾರ್ಡ್ (Green Card) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಮ್ಮ ದೇಶಕ್ಕೆ ಮರಳಬೇಕಿತ್ತು.

    ವಲಸೆ ಯೋಜನೆ ಯಾರಿಗೆ ಪ್ರಯೋಜನವನ್ನು ನೀಡುತ್ತದೆ?
    ಅಮೆರಿಕದಲ್ಲಿ ದಾಖಲೆರಹಿತರಾಗಿ ನೆಲೆಸಿರುವ ಸುಮಾರು 5,00,000 ಸಂಗಾತಿಗಳು ಈ ಯೋಜನೆ ಪಡೆಯಲು ಅರ್ಹರಾಗಿದ್ದಾರೆ ಎಂದು DHS ಫ್ಯಾಕ್ಟ್ ಶೀಟ್ ಹೇಳುತ್ತದೆ. ಅಲ್ಲದೇ ಈ ಸಂಗಾತಿಗಳ ಸುಮಾರು 50,000 ಮಕ್ಕಳು ಸಹ ಈ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ.

    ಹೊಸ ವಲಸೆ ನೀತಿ ಕಾರ್ಯಕ್ರಮದ ಅಡಿಯಲ್ಲಿ, ಯಾವುದೇ ಕುಟುಂಬಗಳು ಕಾನೂನು ಸ್ಥಾನಮಾನವನ್ನು ಪಡೆಯುವವರೆಗೆ ಅಮೆರಿಕ ದೇಶದಲ್ಲಿ ಉಳಿಯಲು ಅನುಮತಿ ನೀಡಲಾಗುತ್ತದೆ. ಈ ಸಂಗಾತಿಗಳು ಕೆಲಸದ ಪರವಾನಗಿ ಪಡೆಯಲು ಸಹ ಅರ್ಹರಾಗಿರುತ್ತಾರೆ. ಇದು ಅವರಿಗೆ ಆರ್ಥಿಕವಾಗಿ ಕೊಡುಗೆ ನೀಡಲು ಮತ್ತು ಅವರ ಕುಟುಂಬಗಳನ್ನು ಪೋಷಿಸಲು ಅನುವು ಮಾಡಿಕೊಡುತ್ತದೆ.

    ಯಾವುದೇ ದಾಖಲೆಗಳನ್ನು ಹೊಂದಿರದ ಅನೇಕ ಭಾರತೀಯ ಅಮೆರಿಕನ್ ಕುಟುಂಬಗಳಿಗೆ ಸಹ ಇದರಿಂದ ಪರಿಣಾಮ ಬೀರಲಿದ್ದು, ಈಗ ಈ ನೀತಿ ಅವರನ್ನು ಗಡಿಪಾರು ಭೀತಿಯಿಂದ ಪಾರು ಮಾಡಲಿದೆ. ಅವರಿಗೆ ಅಮೆರಿಕದಲ್ಲಿಯೇ ಕಾನೂನುಬದ್ಧವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ನೀಡಲಿದ್ದು, ಇದರ ಜೊತೆಗೆ ದಾಖಲೆಗಳಿಲ್ಲದೆ ಉಳಿದಿರುವವರಿಗೆ ಪರಿಹಾರವನ್ನು ನೀಡಲಿದೆ. ಈ ನೀತಿಯು US ನಾಗರಿಕರ ಸರಿಸುಮಾರು 5 ಲಕ್ಷ ಸಂಗಾತಿಗಳಿಗೆ ಪೆರೋಲ್ ಇನ್ ಪ್ಲೇಸ್ ಪ್ರೋಗ್ರಾಂಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡುತ್ತದೆ, ಇದು ಅವರನ್ನು ಗಡೀಪಾರು ಮಾಡುವಿಕೆಯಿಂದ ರಕ್ಷಿಸುತ್ತದೆ ಮತ್ತು ಕನಿಷ್ಠ 10 ವರ್ಷಗಳ ಕಾಲ ದೇಶದಲ್ಲಿ ವಾಸಿಸುತ್ತಿದ್ದರೆ ಅವರಿಗೆ ಕೆಲಸದ ಪರವಾನಗಿಯನ್ನು ಒದಗಿಸುತ್ತದೆ ಎಂದು ತಿಳಿದು ಬಂದಿದೆ.

    ಯೋಜನೆ ಜಾರಿ ಯಾವಾಗ?
    ಬೇಸಿಗೆಯ ಅಂತ್ಯದ ವೇಳೆಗೆ ಯೋಜನೆಯ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಬೈಡೆನ್ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ. ಅರ್ಹರು ಇದರ ಬಳಿಕವಷ್ಟೇ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.

    ಯುಎಸ್‌ ವಿಶ್ವವಿದ್ಯಾನಿಲಯಗಳಿಂದ ಪದವಿಗಳನ್ನು ಪಡೆದಿರುವ ಅಥವಾ ಡ್ರೀಮರ್ಸ್ ಸೇರಿದಂತೆ ತಮ್ಮ ಕ್ಷೇತ್ರದಲ್ಲಿ ಉದ್ಯೋಗಾವಕಾಶವನ್ನು ಪಡೆದಿರುವ ಹೆಚ್ಚು ನುರಿತ ದಾಖಲೆರಹಿತ ವಲಸಿಗರಿಗೆ ವೀಸಾ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ವೇಗಗೊಳಿಸಲು ಶ್ವೇತಭವನ ಯೋಜಿಸುತ್ತಿದೆ.

  • ಅಮೆರಿಕದಲ್ಲಿ ನಡೆದ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ 12 ವರ್ಷದ ಭಾರತೀಯ-ಅಮೆರಿಕನ್‌ ವಿಜೇತ

    ಅಮೆರಿಕದಲ್ಲಿ ನಡೆದ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ 12 ವರ್ಷದ ಭಾರತೀಯ-ಅಮೆರಿಕನ್‌ ವಿಜೇತ

    ವಾಷಿಂಗ್ಟನ್‌: ಅಮೆರಿಕದಲ್ಲಿ (America) ನಡೆದ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ (National Spelling Bee) 12 ವಯಸ್ಸಿನ ಭಾರತೀಯ-ಅಮೆರಿಕನ್ (Indian-American) ಬಾಲಕ ವಿಜೇತನಾಗಿದ್ದಾರೆ.

    ಫ್ಲೋರಿಡಾದಲ್ಲಿರುವ 7ನೇ ತರಗತಿಯ ವಿದ್ಯಾರ್ಥಿ ಬೃಹತ್ ಸೋಮ, ಟೈಬ್ರೇಕರ್‌ನಲ್ಲಿ 29 ಪದಗಳನ್ನು ಸರಿಯಾಗಿ ಉಚ್ಛರಿಸಿದ ನಂತರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಗೆದ್ದಿದ್ದಾರೆ. ಇದನ್ನೂ ಓದಿ: ಟೇಕಾಫ್‌ ಆಗಲು 20 ಗಂಟೆ ತಡ ಮಾಡಿದ ಏರ್‌ ಇಂಡಿಯಾ ವಿಮಾನ – ಎಸಿ ಇಲ್ಲದೇ ಮೂರ್ಛೆ ಹೋದ ಪ್ರಯಾಣಿಕರು

    ಗುರುವಾರ ನಡೆದ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲಿಂಗ್ ಬೀಯಲ್ಲಿ ಬೃಹತ್ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. 41.74 ಲಕ್ಷ ರೂ. ನಗದು ಮತ್ತು ಇತರ ಬಹುಮಾನಗಳನ್ನು ಗೆದ್ದಿದ್ದಾರೆ. 90 ಸೆಕೆಂಡುಗಳಲ್ಲಿ 29 ಪದಗಳನ್ನು ಸರಿಯಾಗಿ ಉಚ್ಛರಿಸಿದರು. ಮಿಂಚಿನ ಸುತ್ತಿನಲ್ಲಿ 20 ಪದಗಳನ್ನು ಸರಿಯಾಗಿ ಉಚ್ಛರಿಸಿದ ಫೈಜಾನ್ ಝಕಿ ಅವರನ್ನು ಸೋಲಿಸಿದ್ದಾರೆ.

    ಬಹೃತ್‌ ಸೋಮ 2024 ರ ಸ್ಕ್ರಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಚಾಂಪಿಯನ್. ನಂಬಲಸಾಧ್ಯವಾದ ಜ್ಞಾಪಕಶಕ್ತಿಯುಳ್ಳ ಹುಡುಗ‌. 2022 ರಲ್ಲಿ ಹರಿಣಿ ಲೋಗನ್ ಅವರ ಸ್ಟ್ಯಾಂಡಿಂಗ್ ಸ್ಪೆಲ್-ಆಫ್ ದಾಖಲೆಯನ್ನೂ ಮುರಿದಿದ್ದಾರೆ. ಆಗ ಲೋಗನ್‌ 26ರ ಪೈಕಿ 22 ಪದಗಳನ್ನು ಸರಿಯಾಗಿ ಉಚ್ಛರಿಸಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ. ಇದನ್ನೂ ಓದಿ: ಹಷ್‌ ಮನಿ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ದೋಷಿ: ಕೋರ್ಟ್‌ ತೀರ್ಪು

    ದಿ ಇ ಡಬ್ಲ್ಯೂ ಸ್ಕ್ರಿಪ್ಸ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಆಡಮ್ ಸಿಮ್ಸನ್ ಅವರು ಬೃಹತ್‌ಗೆ ಚಾಂಪಿಯನ್‌ಶಿಪ್ ಟ್ರೋಫಿ ನೀಡಿದ್ದಾರೆ. ಕೇವಲ 12 ವಯಸ್ಸಿನಲ್ಲೇ ಬೃಹತ್‌ ಹುಡುಗ ತುಂಬಾ ಜ್ಞಾನ ಹೊಂದಿದ್ದಾನೆ ಎಂದು ಬಣ್ಣಿಸಿದ್ದಾರೆ.

  • ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್‌ ಸ್ಪರ್ಧೆ – ಎಲೋನ್‌ ಮಸ್ಕ್‌ ಶ್ಲಾಘನೆ

    ಯುಎಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್‌ ಸ್ಪರ್ಧೆ – ಎಲೋನ್‌ ಮಸ್ಕ್‌ ಶ್ಲಾಘನೆ

    ವಾಷಿಂಗ್ಟನ್‌: ಭಾರತೀಯ ಅಮೆರಿಕನ್‌ ಶಾಸಕ ವಿವೇಕ್‌ ರಾಮಸ್ವಾಮಿ (Vivek Ramaswamy) ಅವರು ಅಮೆರಿಕ ಅಧ್ಯಕ್ಷ (US Presidential Candidate) ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ವಿವೇಕ್‌ ಬಗ್ಗೆ ಟ್ವಿಟ್ಟರ್‌ ಮಾಲೀಕ ಎಲೋನ್‌ ಮಸ್ಕ್‌ (Elon Musk) ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.

    ರಿಪಬ್ಲಿಕನ್ ನಾಯಕ ವಿವೇಕ್‌, ಮಾಜಿ ಫಾಕ್ಸ್ ನ್ಯೂಸ್ ಆ್ಯಂಕರ್ ಟಕರ್ ಕಾರ್ಲ್‌ಸನ್‌ಗೆ ನೀಡಿದ ಸಂದರ್ಶನದ ವೀಡಿಯೋವನ್ನು ಎಲೋನ್‌ ಮಸ್ಕ್‌ ತಮ್ಮ ಟ್ವೀಟ್‌ ಖಾತೆಯಲ್ಲಿ (ಎಕ್ಸ್‌) ಹಂಚಿಕೊಂಡಿದ್ದಾರೆ. ‘ಅವರು (ವಿವೇಕ್‌) ಅತ್ಯಂತ ಭರವಸೆಯ ಅಭ್ಯರ್ಥಿ’ ಎಂದು ಮಸ್ಕ್ ಹೇಳಿದ್ದಾರೆ. ಇದನ್ನೂ ಓದಿ: 21 ಚರ್ಚ್‌ಗಳನ್ನು ಧ್ವಂಸಗೊಳಿಸಿದ 600 ಜನರ ಮೇಲೆ ಕೇಸ್ – 135 ಆರೋಪಿಗಳನ್ನು ಬಂಧಿಸಿದ ಪಾಕ್ ಪೊಲೀಸರು

    ಕೇರಳದಿಂದ ಅಮೆರಿಕಗೆ ವಲಸೆ ಬಂದಿದ್ದ ಭಾರತೀಯ ದಂಪತಿ ಪುತ್ರ ವಿವೇಕ್‌ ರಾಮಸ್ವಾಮಿ. ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದ ಟೆಕ್-ಉದ್ಯಮಿಯಾಗಿದ್ದರು.

    ವಿವೇಕ್‌ ರಾಮಸ್ವಾಮಿ, ನಿಕ್ಕಿ ಹ್ಯಾಲಿ ಮತ್ತು ಹರ್ಷವರ್ಧನ್ ಸಿಂಗ್ ಅವರು ಜನವರಿಯಲ್ಲಿ ನಡೆಯಲಿರುವ ಯುಎಸ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಅಮೆರಿಕನ್‌ ನಾಯಕರು. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಲಘು ವಿಮಾನ ಪತನ – 10 ಮಂದಿ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮೆರಿಕದ ವಿವಿಧ ಹುದ್ದೆಯಲ್ಲಿ 130ಕ್ಕೂ ಅಧಿಕ ಇಂಡೋ ಅಮೆರಿಕನ್ನರು- ದಾಖಲೆ ಸೃಷ್ಟಿಸಿದ ಬೈಡನ್

    ಅಮೆರಿಕದ ವಿವಿಧ ಹುದ್ದೆಯಲ್ಲಿ 130ಕ್ಕೂ ಅಧಿಕ ಇಂಡೋ ಅಮೆರಿಕನ್ನರು- ದಾಖಲೆ ಸೃಷ್ಟಿಸಿದ ಬೈಡನ್

    ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರದಲ್ಲಿ ಇಲ್ಲಿಯವರೆಗೆ 130ಕ್ಕೂ ಅಧಿಕ ಪ್ರಮುಖ ಸ್ಥಾನಗಳಿಗೆ ಇಂಡೋ ಅಮೆರಿಕರನ್ನರನ್ನು ನೇಮಿಸಿದ್ದಾರೆ. ಈ ಮೂಲಕ ಬೈಡನ್ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.

    ಅಮೆರಿಕಾದ ಜನಸಂಖ್ಯೆಯಲ್ಲಿ ಭಾರತೀಯ ಸಮೂದಾಯದ ಪ್ರಮಾಣ ಶೇ.1ರಷ್ಟಿದ್ದು, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಸಮೂದಾಯಕ್ಕೆ ನೀಡಿದ್ದ ಭರವಸೆಯನ್ನು ಪೂರೈಸಿದ್ದಾರೆ. ಈ ಮೂಲಕ ಹಿಂದಿನ 2 ಅಧ್ಯಕ್ಷರ ದಾಖಲೆಯನ್ನು ಮುರಿದಿದ್ದಾರೆ.

    Kamala Harris 3

    ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಸರ್ಕಾರದಲ್ಲಿ 80ಕ್ಕೂ ಹೆಚ್ಚು ಇಂಡೋ ಅಮೆರಿಕರಿದ್ದರೆ, ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ 60ಕ್ಕೂ ಅಧಿಕ ಇಂಡೋ ಅಮೆರಿಕರನ್ನು ನೇಮಿಸಿದ್ದರು. ಇದನ್ನೂ ಓದಿ: ಇಂದು ಒಂದೇ ದಿನ 155 ರೈಲು ಕ್ಯಾನ್ಸಲ್ – ರದ್ದುಗೊಂಡಿರುವ ರೈಲುಗಳ ಪಟ್ಟಿ ಇಲ್ಲಿದೆ‌

    ಆದರೆ ಈ ಬಾರಿ ಬೈಡನ್ ನೇತೃತ್ವದ ಸರ್ಕಾರದಲ್ಲಿ 130ಕ್ಕೂ ಅಧಿಕ ಇಂಡೋ ಅಮೆರಿಕನ್ನರು ಕೆಲಸ ಮಾಡುತ್ತಿದ್ದಾರೆ. ಯುಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಾಲ್ವರು ಸೇರಿದಂತೆ ವಿವಿಧ ರಾಜ್ಯ ಮತ್ತು ಫೆಡರಲ್ ಹಂತಗಳಲ್ಲಿ 40ಕ್ಕೂ ಅಧಿಕ ಇಂಡೋ ಅಮೆರಿಕನ್ನರು ಚುನಾಯಿತರಾಗಿದ್ದಾರೆ. 20ಕ್ಕೂ ಹೆಚ್ಚು ಇಂಡೋ ಅಮೆರಿಕನ್ನರು ಯುಎಸ್ ಕಂಪನಿಗಳ ಪ್ರಮುಖ ಹುದ್ದೆಯಲ್ಲಿದ್ದಾರೆ.

    Joe Biden

    ಅಮೆರಿಕಾ ಮೂಲದ ಜಾಗತಿಕ ಸಂಸ್ಥೆಯಾದ ಇಂಡಿಯಾಸ್ಪೊರಾ ಸಂಸ್ಥೆಯ ಮುಖ್ಯಸ್ಥ ಹಾಗೂ ಸಂಸ್ಥಾಪಕ ಎಂ.ಆರ್.ರಂಗಸ್ವಾಮಿ ಈ ಬಗ್ಗೆ ಮಾತನಾಡಿ, ಇಂಡೋ ಅಮೆರಿಕನ್ನರು ತಮ್ಮ ಸೇವಾ ಮನೋಭಾವದಿಂದ ಗಮನಸೆಳೆದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡ್ತೀವಿ – ಅಶೋಕ್ ಘೋಷಣೆ

    Live Tv
    [brid partner=56869869 player=32851 video=960834 autoplay=true]

  • ಅಮೆರಿಕದಲ್ಲಿ ಲೈಂಗಿಕ ದೌರ್ಜನ್ಯವೆಸಗಿ ಕತ್ತು ಹಿಸುಕಿ ಆಂಧ್ರ ವಿದ್ಯಾರ್ಥಿನಿಯ ಕೊಲೆ

    ಅಮೆರಿಕದಲ್ಲಿ ಲೈಂಗಿಕ ದೌರ್ಜನ್ಯವೆಸಗಿ ಕತ್ತು ಹಿಸುಕಿ ಆಂಧ್ರ ವಿದ್ಯಾರ್ಥಿನಿಯ ಕೊಲೆ

    – ಕಾರಿನಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ

    ವಾಷಿಂಗ್ಟನ್: ಚಿಕಾಗೋದಲ್ಲಿ 19 ವರ್ಷದ ಭಾರತೀಯ-ಅಮೆರಿಕನ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಈ ಕ್ರೂರ ಹತ್ಯೆಯು ಅಮೆರಿಕದಲ್ಲಿಯ ಅನಿವಾಸಿ ಭಾರತೀಯ ಸಮುದಾಯವನ್ನು ಬೆಚ್ಚಿಬೀಳಿಸಿದೆ.

    ಹೈದರಾಬಾದ್ ಮೂಲದ ರೂತ್ ಜಾರ್ಜ್ ಕೊಲೆಯಾದ ವಿದ್ಯಾರ್ಥಿನಿ. ರೂತ್ ಜಾರ್ಜ್ ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದಳು. ಕಾಲೇಜ್ ಕ್ಯಾಂಪಸ್‍ನ ಗ್ಯಾರೇಜ್‍ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಶನಿವಾರ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಚಿಕಾಗೊ ಮೆಟ್ರೋ ನಿಲ್ದಾಣದಲ್ಲಿ 26 ವರ್ಷದ ಆರೋಪಿ ಡೊನಾಲ್ಡ್ ಥರ್ಮನ್‍ನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಆದರೆ ಆರೋಪಿಯು ವಿಶ್ವವಿದ್ಯಾಲಯದ ವಿದ್ಯಾರ್ಥಿಯಲ್ಲ ಎಂದು ತಿಳಿದು ಬಂದಿದೆ. ಬಂಧಿತ ಡೊನಾಲ್ಡ್ ಥರ್ಮನ್ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಕೃತ್ಯದ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಶುಕ್ರವಾರ ಸಂಜೆಯಿಂದ ಮಗಳು ಕಾಣಿಸುತ್ತಿಲ್ಲ ಎಂದು ಜಾರ್ಜ್ ಪೋಷಕರು, ವಿಶ್ವವಿದ್ಯಾಲಯದ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ವಿದ್ಯಾರ್ಥಿನಿಯ ಮೊಬೈಲ್‍ಗೆ ಕರೆ ಮಾಡಿದ್ದರು. ಬಳಿಕ ಮೊಬೈಲ್ ಟ್ರ್ಯಾಕ್ ಮಾಡಿದಾಗ ಕಾಲೇಜ್ ಕ್ಯಾಂಪಸ್‍ನ ಗ್ಯಾರೇಜ್‍ನಲ್ಲಿ ಸಿಗ್ನಲ್ ತೋರಿಸಿತ್ತು. ಈ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಕಾರಿನ ಹಿಂಭಾಗದ ಸೀಟ್‍ನಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿತ್ತು. ಬಳಿಕ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

    ಆರೋಪಿಯು ವಿದ್ಯಾರ್ಥಿನಿ ರೂತ್ ಜಾರ್ಜ್ ಹಿಂದೆ ನಡೆದುಕೊಂಡು ಹೋಗುತ್ತಿದ್ದ ದೃಶ್ಯವು ವಿಶ್ವವಿದ್ಯಾಲಯದ ಕ್ಯಾಮೆರಗಳಲ್ಲಿ ಸೆರೆಯಾಗಿತ್ತು. ಈ ವಿಡಿಯೋ ತುಣುಕನ್ನು ಪಡೆದುಕೊಂಡ ಪೊಲೀಸರು ಆರೋಪಿಗೆ ಬಲೆ ಬಿಸಿದ್ದರು. ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯನ್ನು ಕತ್ತು ಹಿಸುಕಿ ಕೊಲೆಗೈಯಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು.

    ಪೊಲೀಸರು ಆರೋಪಿ ಥರ್ಮನ್‍ನನ್ನು ಮೆಟ್ರೋ ರೈಲು ನಿಲ್ದಾಣದ ಬಳಿ ಭಾನುವಾರ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

  • ಒಂದೇ ವಾರದಲ್ಲಿ ನಾಲ್ವರು ಸಂಬಂಧಿಕರನ್ನ ಕೊಲೆಗೈದ ಟೆಕ್ಕಿ

    ಒಂದೇ ವಾರದಲ್ಲಿ ನಾಲ್ವರು ಸಂಬಂಧಿಕರನ್ನ ಕೊಲೆಗೈದ ಟೆಕ್ಕಿ

    – ಕಾರಿನಲ್ಲಿ ಶವ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದ ಆರೋಪಿ

    ವಾಷಿಂಗ್ಟನ್: ಒಂದೇ ವಾರದಲ್ಲಿ ನಾಲ್ವರು ಸಂಬಂಧಿಕರನ್ನು ಕೊಲೆಗೈದ ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಶಂಕರ್ ನಾಗಪ್ಪ ಹುನಗೋಡ (53) ಬಂಧಿತ ಐಟಿ ಉದ್ಯೋಗಿ. ಶಂಕರ್ ಕ್ಯಾಲಿಫೋರ್ನಿಯಾದ ಪ್ಲೇಸರ್ ಕೌಂಟಿಯ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ. ಆರೋಪಿಯು ಸೋಮವಾರ ಕೊಲೆಗೈದ ವ್ಯಕ್ತಿಯ ಮೃತದೇಹವನ್ನು ಕಾರಿನಲ್ಲಿ ಇಟ್ಟುಕೊಂಡು 350 ಕಿ.ಮೀ. ದೂರದ ಮೌಂಟ್ ಶಸ್ತ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಇದನ್ನೂ ಓದಿ: ಹೆಣ್ಣು ಮಕ್ಕಳ ಮೇಲಿನ ದ್ವೇಷಕ್ಕೆ ಕುಟುಂಬವೇ ಬಲಿ – ತಪ್ಪೊಪ್ಪಿಕೊಂಡ ಕೇರಳ ಸೈನೈಡ್ ಕಿಲ್ಲರ್

    ನಾನು ಒಟ್ಟು ನಾಲ್ವರನ್ನು ಕೊಲೆ ಮಾಡಿದ್ದೇನೆ. ಈ ಪೈಕಿ ಓರ್ವನ ಶವವನ್ನು ಪೊಲೀಸ್ ಠಾಣೆಗೆ ತಂದಿದ್ದೇನೆ. ಮಿಕ್ಕ ಮೂವರ ಮೃತದೇಹಗಳು ಪ್ಲೇಸರ್ ಕೌಂಟಿಯ ಅಪಾರ್ಟ್‍ಮೆಂಟ್‍ನಲ್ಲಿವೆ ಎಂದು ಶಂಕರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

    ಆರೋಪಿಯ ಹೇಳಿಕೆ ಆಧಾರದ ಮೇಲೆ ಪೊಲೀಸರು ಪ್ಲೇಸರ್ ಕೌಂಟಿಯ ಅಪಾರ್ಟ್‍ಮೆಂಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆದಿದ್ದರು. ಈ ವೇಳೆ ಇಬ್ಬರು ವಯಸ್ಕರ ಹಾಗೂ ಮಗುವಿನ ಮೃತ ದೇಹ ಪತ್ತೆಯಾಗಿವೆ. ಆರೋಪಿ ಶಂಕರ್ ಅಕ್ಟೋಬರ್ 7ರಂದು ಇಬ್ಬರನ್ನು ಕೊಲೆ ಮಾಡಿದ್ದ. ಮರುದಿನ ಅಂದ್ರೆ ಅಕ್ಟೋಬರ್ 9ರಂದು ಅದೇ ಅಪಾರ್ಟ್‍ಮೆಂಟ್‍ನಲ್ಲಿ ಮತ್ತೊಬ್ಬನನ್ನು ಹತ್ಯೆ ಮಾಡಿದ್ದ. ಕೊನೆಯದಾಗಿ ಅಕ್ಟೋಬರ್ 13ರಂದು ಓರ್ವನನ್ನು ಕೊಲೆ ಮಾಡಿದ್ದ. ಬಳಿಕ ಶವವನ್ನು ಕಾರಿನಲ್ಲಿ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

    ಮೌಂಟ್ ಶಸ್ತ ಠಾಣೆ ಪೊಲೀಸರು ಶಂಕರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಶಂಕರ್ ಯಾಕೆ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಭಾರತದಲ್ಲಿರುವ ಮೃತರ ಸಂಬಂಧಿಕರಿಗೆ ಪೊಲೀಸರು ಮಾಹಿತಿ ನೀಡಿದ್ದು, ಶವಗಳನ್ನು ಭಾರತಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.