Tag: indian 2 film

  • ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್‌ ಜೊತೆ ಖ್ಯಾತ ಕ್ರಿಕೆಟರ್‌ ತಂದೆ ನಟನೆ

    ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್‌ ಜೊತೆ ಖ್ಯಾತ ಕ್ರಿಕೆಟರ್‌ ತಂದೆ ನಟನೆ

    ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚಿದ ಅನೇಕ ಸ್ಟಾರ್ ಕ್ರಿಕೆಟಿಗರು ತಮ್ಮ ನಿವೃತ್ತಿಯ ನಂತರ ಬೇರೆ ಕ್ಷೇತ್ರಗಳತ್ತ ಮುಖ ಮಾಡೋದು ಸರ್ವೇ ಸಾಮಾನ್ಯ. ಇತ್ತೀಚೆಗಷ್ಟೇ ಎಂ.ಎಸ್ ಧೋನಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೀಗ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್(Yuvaraj Singh) ತಂದೆ ಯೋಗರಾಜ್ ಸಿಂಗ್(Yogaraj Singh) ಕೂಡ ಸಿನಿಮಾಗೆ ಎಂಟ್ರಿ ಕೊಡ್ತಿದ್ದಾರೆ.

    ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಎಂ.ಎಸ್ ಧೋನಿ ನಂತರ ಮಾಜಿ ಕ್ರಿಕೆಟಿಗ ಆಗಿರುವ ಯೋಗರಾಜ್ ಸಿಂಗ್ ಇದೀಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಖ್ಯಾತ ಕ್ರಿಕೆಟರ್ ಯುವರಾಜ್ ಸಿಂಗ್ ತಂದೆ ಕೂಡ ಕ್ರಿಕೆಟ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಕಮಲ್ ಹಾಸನ್(Kamal Haasan) ನಟನೆಯ `ಇಂಡಿಯನ್ 2′ (Indian 2) ಚಿತ್ರದಲ್ಲಿ ಯೋಗರಾಜ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಹನ್ಸಿಕಾ ಮೋಟ್ವಾನಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಿದ ಭಾವಿ ಪತಿ

     

    View this post on Instagram

     

    A post shared by Yograj Singh (@yograjofficial)

    `ಇಂಡಿಯನ್ 2′ ಸಿನಿಮಾ ಶುರುವಾಗಿ ಹಲವು ವರ್ಷಗಳೇ ಆಗಿದೆ. ಆದರೆ ಕೆಲವು ಕಾರಣಗಳಿಂದ ಈ ಚಿತ್ರ ಸ್ಥಗಿತಗೊಂಡಿತ್ತು. ಇದೀಗ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರದ ಸಕ್ಸಸ್ ನಂತರ ಈ ಚಿತ್ರ ಮತ್ತೆ `ಇಂಡಿಯನ್ 2′ ಪ್ರಾಜೆಕ್ಟ್ ಶುರುವಾಗಿದೆ. ಮಾಜಿ ಕ್ರಿಕೆಟರ್ ಯೋಗರಾಜ್ ಸಿಂಗ್ ಈ ಚಿತ್ರದಲ್ಲಿ ಪವರ್‌ಫಯಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಚಿತ್ರದ ಶೂಟಿಂಗ್ ಶುರು

    ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಚಿತ್ರದ ಶೂಟಿಂಗ್ ಶುರು

    ಸ್. ಶಂಕರ್ ನಿರ್ದೇಶನದ `ಇಂಡಿಯನ್ 2′ (Indian 2) ಚಿತ್ರದ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಚಿತ್ರೀಕರಣಕ್ಕೆ ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Hassan) ಹಾಜರ್ ಆಗಿದ್ದಾರೆ. ಸದ್ಯ ಈ ಫೋಟೋ ಮತ್ತು ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    `ವಿಕ್ರಮ್’ ಚಿತ್ರದ ಸಕ್ಸಸ್ ನಂತರ `ಇಂಡಿಯನ್ 2′ ಚಿತ್ರವನ್ನ ಕಮಲ್ ಹಾಸನ್ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಚಿತ್ರದ ಶೂಟಿಂಗ್‌ಗೆ ನಟ ಕಮಲ್ ಹಾಸನ್ ಕೂಡ ಭಾಗಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡುವ ಮೂಲಕ ಅಪ್‌ಡೇಟ್‌ ನೀಡಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಎಸ್.ಶಂಕರ್ ನಿರ್ದೇಶನದ `ಇಂಡಿಯನ್ 2′ ಸಿನಿಮಾದಲ್ಲಿ ಡಿಫರೆಂಟ್ ಗೆಟಪ್‌ನಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಕಮಲ್‌ಗೆ ನಾಯಕಿಯರಾಗಿ ಕಾಜಲ್ ಅಗರ್‌ವಾಲ್, ರಾಕುಲ್ ಪ್ರೀತ್ ಸಿಂಗ್ ನಟಿಸಲಿದ್ದಾರೆ.

    ಬಹುನಿರೀಕ್ಷಿತ `ಇಂಡಿಯನ್ 2′ ಚಿತ್ರದ ಶೂಟಿಂಗ್‌ಗೆ ಚಾಲನೆ ಸಿಕ್ಕಿದೆ. ವಿಕ್ರಮ್‌ ಅವತಾರ ನೋಡಿದ ಅಭಿಮಾನಿಗಳು, ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್ ನಟನೆ ನೋಡಲು ಫ್ಯಾನ್ಸ್‌ ಕ್ಯೂರಿಯಸ್‌ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಚಿತ್ರದಿಂದ ಕಾಜಲ್ ಅಗರ್ವಾಲ್ ಔಟ್

    ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಚಿತ್ರದಿಂದ ಕಾಜಲ್ ಅಗರ್ವಾಲ್ ಔಟ್

    `ವಿಕ್ರಮ್’ ಚಿತ್ರದ ಸಕ್ಸಸ್ ನಂತರ ಕಮಲ್ ಹಾಸನ್ `ಇಂಡಿಯನ್ 2′ ಚಿತ್ರಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರದ ನಾಯಕಿಯಾಗಿದ್ದ ಕಾಜಲ್ ಔಟ್ ಆಗಿದ್ದಾರೆ. ಅವರ ಜಾಗಕ್ಕೆ ಬೇರೆ ನಾಯಕಿಯ ಎಂಟ್ರಿಯಾಗುತ್ತಿದೆ.

    ಕಮಲ್ ಮತ್ತು ಶಂಕರ್ ಕಾಂಬಿನೇಷನ್‌ನ `ಇಂಡಿಯನ್’ ಚಿತ್ರ 1996ರಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಬಳಿಕ ಇದರ ಸೀಕ್ವೇಲ್ 2019ರಿಂದ ಚಿತ್ರೀಕರಣ ಶುರುವಾಯಿತು. 2020ರಲ್ಲಿ ನಡೆದ ಅವಘಡದಲ್ಲಿ ಮೂರು ಕಾರ್ಮಿಕರು ಜೀವ ಕಳೆದುಕಂಡಿದ್ದರು. ಬಳಿಕ ಕೊರೊನಾ ಕಾಟದಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಈಗ 60% ಶೂಟಿಂಗ್ ಆಗಿದ್ದ ಈ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ: ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ನಿಮಗೇಕೆ ಅಷ್ಟೊಂದು ಆಸಕ್ತಿ?: ಕರಣ್ ಗೆ ಕಾಲೆಳೆದ ಆಮೀರ್

    `ವಿಕ್ರಮ್’ ಚಿತ್ರದ ಸಕ್ಸಸ್ ನಂತರ ಸ್ಥಗಿತಗೊಂಡಿದ್ದ `ಇಂಡಿಯನ್ 2′ ಚಿತ್ರವನ್ನ ಕಮಲ್ ಹಾಸನ್ ಮತ್ತೆ ಕೈಗೆತ್ತಿಕೊಂಡಿದ್ದಾರೆ. ಕಮಲ್‌ಗೆ ನಿರ್ದೇಶಕ ಶಂಕರ್ ಸಾಥ್ ನೀಡಿದ್ದಾರೆ. ಆದರೆ ಈಗ ಪ್ಯಾನ್ ಇಂಡಿಯಾ ಚಿತ್ರವಾಗಿ ಬರುತ್ತಿದೆ. ಈ ಚಿತ್ರದ ನಾಯಕಿಯಾಗಿದ್ದ ಕಾಜಲ್ ಮದುವೆಯಾಗಿ, ಮಗನ ಆರೈಕೆಯಲ್ಲಿರುವುದರಿಂದ ಮತ್ತೆ ಚಿತ್ರೀಕರಣದಿಂದ ಮುಂದುವರೆಯುವುದು ಕಷ್ಟವಾಗುತ್ತಿದೆ. ಹಾಗಾಗಿ ಚಿತ್ರತಂಡ ಕಾಜಲ್‌ನ್ನ ಚಿತ್ರದಿಂದ ಕೈ ಬಿಡಲಾಗಿದೆ.

    ಇನ್ನು ಕಮಲ್ ಹಾಸನ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್‌ನ `ಇಂಡಿಯನ್ 2’ಗೆ ಫೈನಲ್ ಮಾಡಲು ಯೋಚಿಸಿದೆಯಂತೆ. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಮಾಹಿತಿ ಹೊರಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್ `ವಿಕ್ರಮ್’ ಚಿತ್ರದ ಮೂಲಕ ಗ್ರ್ಯಾಂಡ್ ಆಗಿ ಕಂಬ್ಯಾಕ್ ಆದರು. `ವಿಕ್ರಮ್’ ಚಿತ್ರದ ಸಕ್ಸಸ್ ಅಲೆಯಲ್ಲಿರುವ ಕಮಲ್ ಹಾಸನ್ ಮುಂದಿನ ನಡೆ ಬಗ್ಗೆ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಇದೆ. ಈಗ ಕಮಲ್ ಹಾಸನ್ ಮುಂದಿನ ಚಿತ್ರದ ಬಗ್ಗೆ ರಿವೀಲ್ ಕೂಡ ಆಗಿದೆ. ಸಿನಿಮಾ ರಿಲೀಸ್ ಅಪ್‌ಡೇಟ್ ಕೂಡ ಸಿಕ್ಕಿದೆ.

    `ವಿಕ್ರಮ್’ ಸಿನಿಮಾ ಕಮಲ್ ಹಾಸನ್ ಕೆರಿಯರ್‌ಗೆ ಒಂದೊಳ್ಳೆಯ ಟರ್ನಿಂಗ್ ಪಾಯಿಂಟ್ ಕೊಟ್ಟಿದೆ. ಸಕ್ಸಸ್ ಖುಷಿಯಲ್ಲಿರುವ ನಟ ಕಮಲ್ ಅಭಿನಯದ ಮುಂದಿನ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. `ಇಂಡಿಯನ್ 2′ ಕಮಲ್ ಹಾಸನ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ರೆಡ್ ಕಲರ್ ಲೆಹೆಂಗಾದಲ್ಲಿ ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಮಿಂಚಿದ ರಶ್ಮಿಕಾ ಮಂದಣ್ಣ

    ಎಸ್. ಶಂಕರ್ ನಿರ್ದೇಶನದ `ಇಂಡಿಯನ್ 2′ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಎಂದೂ ಮಾಡಿರದ ಪಾತ್ರದಲ್ಲಿ ಕಮಲ್ ಹಾಸನ್ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ತೆರೆ ಕಾಣಲಿದೆ ಈ ಸಿನಿಮಾ. ತೆರೆಮರೆಯಲ್ಲಿ ಚಿತ್ರದ ರಿಲೀಸ್‌ಗೆ ತಯಾರಿ ಕೂಡ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]