ಬಾಲಿವುಡ್ ಬೆಡಗಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಸದ್ಯ ‘ಇಂಡಿಯನ್ 2’ (Indian 2) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ, ಲಿಪ್‌ಲಾಕ್ ದೃಶ್ಯದಲ್ಲಿ ನಟಿಸುವ ಬಗ್ಗೆ ನಟಿಗೆ ಪ್ರಶ್ನೆ ಎದುರಾಗಿದ್ದು, ನಟಿ ಖಡಕ್ ಆಗಿ ಉತ್ತರಿಸಿದ್ದಾರೆ. ಇದನ್ನೂ ಓದಿ:ವೀರ್ ಪಹಾರಿಯಾ ಜೊತೆ ನಟಿ ಮಾನುಷಿ ಚಿಲ್ಲರ್ ಡೇಟಿಂಗ್

ಹಿಂದಿ ಮತ್ತು ಸೌತ್ ಸಿನಿಮಾಗಳಲ್ಲಿ ರಕುಲ್ ನಟಿಸುತ್ತಿದ್ದಾರೆ. ಮದುವೆಯಾದ್ಮೇಲೆ ಕೂಡ ಸಿನಿಮಾಗಳಲ್ಲಿ ನಟಿ ಆ್ಯಕ್ಟೀವ್ ಆಗಿದ್ದಾರೆ. ‘ಇಂಡಿಯನ್ 2’ ಚಿತ್ರದಲ್ಲಿ ತಮಿಳು ನಟ ಸಿದ್ಧಾರ್ಥ್‌ಗೆ ರಕುಲ್ ನಾಯಕಿಯಾಗಿ ನಟಿಸಿದ್ದಾರೆ. ಜು.12ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಹೀಗಿರುವಾಗ ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬೋಲ್ಡ್ ಆಗಿ ಹೇಳಿಕೆ ನೀಡಿರೋದು ವೈರಲ್ ಆಗಿದೆ.

ನೀವು ಲಿಪ್‌ಲಾಕ್ ದೃಶ್ಯದಲ್ಲಿ ನಟಿಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ರಕುಲ್, ಅದು ಕಥೆಯ ಮೇಲೆ ಅವಲಂಬಿತವಾಗಿರುತ್ತದೆ. ನಾನು ಮೊದಲು ಹಾಗೇ ನಟಿಸಿದ್ದೇನೆ. ಸಿನಿಮಾ ಕಥೆಗೆ ಬೇಕಾದರೆ ಮಾಡುತ್ತೇನೆ. ಆದರೆ ಪ್ರಚಾರಕ್ಕಾಗಿ ಲಿಪ್‌ಲಾಕ್ ದೃಶ್ಯ ಹಾಕಿದರೆ ನಟಿಸಲ್ಲ ಕಂಡೀಷನ್ ಅಪ್ಲೈ ಆಗಲಿದೆ ಎಂದು ಮಾತನಾಡಿದ್ದಾರೆ.
ಅಂದಹಾಗೆ, ಕನ್ನಡದ ‘ಗಿಲ್ಲಿ’ (Gilli Kannada) ಸಿನಿಮಾದ ಮೂಲಕ ನವರಸ ನಾಯಕ ಜಗ್ಗೇಶ್ ಪುತ್ರನಿಗೆ ನಾಯಕಿಯಾಗಿ ರಕುಲ್ ನಟಿಸಿದ್ದರು.















ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್ (Rakul Preet Singh), ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

