Tag: india

  • ದೇಶೀಯ ಮಾರುಕಟ್ಟೆಗೆ 6ಜಿಬಿ ರಾಮ್, 4000 ಎಂಎಎಚ್, ಹಿಂದುಗಡೆ ಡ್ಯುಯಲ್ ಕ್ಯಾಮೆರಾ ಇರೋ ಫೋನ್ ಬಿಡುಗಡೆ

    ದೇಶೀಯ ಮಾರುಕಟ್ಟೆಗೆ 6ಜಿಬಿ ರಾಮ್, 4000 ಎಂಎಎಚ್, ಹಿಂದುಗಡೆ ಡ್ಯುಯಲ್ ಕ್ಯಾಮೆರಾ ಇರೋ ಫೋನ್ ಬಿಡುಗಡೆ

    ನವದೆಹಲಿ: ದೇಶೀಯ ಮಾರುಕಟ್ಟೆಗೆ ಚೀನಾದ ಹುವಾವೆ ಕಂಪೆನಿ 6ಜಿಬಿ ರಾಮ್, 4000 ಎಂಎಎಚ್ ಬ್ಯಾಟರಿಯುಳ್ಳ ಫೋನ್ ಬಿಡುಗಡೆ ಮಾಡಿದೆ.

    ಈ ಫೋನಿಗೆ ಹೋನರ್ ಪ್ರೋ 8 ಎಂದು ಹೆಸರನ್ನು ಇಟ್ಟಿದ್ದು, ಬೆಲೆಯನ್ನು ತಿಳಿಸಿಲ್ಲ. ಈಗಾಗಲೇ ಯುರೋಪ್‍ನಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, 549 ಯುರೋ(ಅಂದಾಜು 39,500 ರೂ.) ದರವಿದೆ.

    ನಿಲಿ ಮತ್ತು ಕಪ್ಪು ಬಣ್ಣದಲ್ಲಿ ಈ ಫೋನ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹಿಂದುಗಡೆ 12 ಎಂಪಿ ಎರಡು ಡ್ಯುಯಲ್ ಕ್ಯಾಮೆರಾವಿದೆ.

    ಗುಣವೈಶಿಷ್ಟ್ಯಗಳು:
    ದೇಹ ಮತ್ತು ಡಿಸ್ಪ್ಲೇ:
    157*77.5*7 ಎಂಎಂ ಗಾತ್ರ, 184 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್ (ಎರಡು ನ್ಯಾನೋ ಸಿಮ್ ಅಥವಾ 1 ಸಿಮ್ ಮತ್ತು ಮೆಮೊರಿ ಕಾರ್ಡ್), 5.7 ಇಂಚಿನ ಎಲ್‍ಟಿಪಿಎಸ್ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(1440*2560 ಪಿಕ್ಸೆಲ್, ~ 73.6% ಬಾಡಿ ಮತ್ತು ಸ್ಕ್ರೀನ್ ಅನುಪಾತ, 515 ಪಿಕ್ಸೆಲ್) ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಹೊಂದಿದೆ.

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 7.0 ನೂಗಟ್ ಓಎಸ್, ಹೈಸಿಲಿಕಾನ್ ಕಿರಿನ್ 960 ಅಕ್ಟಾಕೋರ್ ಪ್ರೊಸೆಸರ್( (4×2.4 GHz Cortex-A73 & 4×1.8 GHz Cortex-A53), ಮಾಲಿ – ಜಿ71 ಎಂಪಿ8 ಗ್ರಾಫಿಕ್ಸ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ, 6 ಜಿಬಿ ರಾಮ್, ಎರಡನೇ ಸಿಮ್ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೊರಿಯನ್ನು ವಿಸ್ತರಿಸಬಹುದು.

     

    ಕ್ಯಾಮೆರಾ:
    ಹಿಂದುಗಡೆ 12 ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾ, ಮುಂದುಗಡೆ 8 ಎಂಪಿ ಹೊಂದಿರುವ ಕ್ಯಾಮೆರಾವಿದೆ.

    ಇತರೇ:
    ಲಿಪೋ 4000 ಎಂಎಎಚ್ ಬ್ಯಾಟರಿ, ಫಾಟ್ ಬ್ಯಾಟರಿ ಚಾರ್ಜಿಂಗ್, ಫಿಂಗರ್ ಪ್ರಿಂಟ್ ಸೆನ್ಸರ್, ಯುಎಸ್‍ಬಿ 2.0

     

     

  • ಒಲಿಂಪಿಕ್ಸ್ ಚಾಂಪಿಯನ್ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಗೆದ್ದ ಶ್ರೀಕಾಂತ್

    ಒಲಿಂಪಿಕ್ಸ್ ಚಾಂಪಿಯನ್ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಗೆದ್ದ ಶ್ರೀಕಾಂತ್

    ಸಿಡ್ನಿ: ಭಾರತದ ಕಿಡಂಬಿ ಶ್ರೀಕಾಂತ್ ರಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಚೀನಾದ ಆಟಗಾರ ಚೆಂಗ್ ಲಾಂಗ್ ಅವರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

    ವಿಶ್ವದ 11ನೇ ಶ್ರೇಯಾಂಕದ ಶ್ರೀಕಾಂತ್ ಅವರು ವಿಶ್ವದ ಮಾಜಿ ನಂಬರ್ ಒನ್ ಪ್ರಸ್ತುತ 4ನೇ ಶ್ರೇಯಾಂಕದ ಚೀನಾದ ಚೆಂಗ್ ಲಾಂಗ್ ಅವರನ್ನು 21-10, 21-14 ಅಂತರದಲ್ಲಿ ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.

    ಕ್ವಾರ್ಟರ್ ಹಾಗೂ ಸೆಮಿಫೈನಲ್‍ನಲ್ಲಿ ಚೀನಾ ಹಾಗೂ ಮಲೇಷ್ಯಾ ಆಟಗಾರರ ವಿರುದ್ಧ ಜಯಸಾಧಿಸಿ ಫೈನಲ್‍ಗೆ ಎಂಟ್ರಿಯಾಗಿದ್ದ ಕಿಡಂಬಿ ಆರಂಭದಿಂದಲೇ ಡ್ರಾಪ್ ಮತ್ತು ಸ್ಮಾಷ್ ಹೊಡೆಯುವ ಮೂಲಕ ಚೆಂಗ್ ಲಾಂಗ್ ಅವರನ್ನು ಸುಲಭವಾಗಿ ಮಣಿಸಿದರು.

    ಈ ವರ್ಷದ ಅತ್ಯುತ್ತಮ ಫಾರ್ಮ್ ನಲ್ಲಿರುವ  24 ವರ್ಷದ ಶ್ರೀಕಾಂತ್ ಏಪ್ರಿಲ್‍ನಲ್ಲಿ ಸಿಂಗಾಪುರ ಓಪನ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತದ ಸಾಯಿ ಪ್ರಣೀತ್ ವಿರುದ್ಧ ಸೋತಿದ್ದರು. ಜೂನ್ 18ರಂದು ಇಂಡೋನೇಷ್ಯಾ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಶ್ರೀಕಾಂತ್ ಒಂದು ವಾರದಲ್ಲಿ ಮತ್ತೊಂದು ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

    ಚೆಂಗ್ ಲಾಂಗ್ ಮತ್ತು ಶ್ರೀಕಂತ್ ನಡುವೆ ಇದೂವರೆಗೆ 6 ಪಂದ್ಯಗಳು ನಡೆದಿದ್ದು, ಇದೇ ಮೊದಲ ಬಾರಿಗೆ ಕಿಡಂಬಿ ಜಯಗಳಿಸುವ ಮೂಲಕ 75 ಲಕ್ಷ ಡಾಲರ್(ಅಂದಾಜು 4.83 ಕೋಟಿ ರೂ.) ನಗದು ಬಹುಮಾನ ಗೆದ್ದಿದ್ದಾರೆ.

     

    https://twitter.com/TrollywoodOffl/status/878870639842545664

  • ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ

    ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ

    ಮುಂಬೈ: ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ಟೀಮ್ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದಾರೆ. ಕುಂಬ್ಳೆ ದಿಢೀರ್ ಆಗಿ ರಾಜೀನಾಮೆ ನೀಡಿದ್ದು ಯಾಕೆ ಎನ್ನುವುದಕ್ಕೆ ಈಗ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂ ಅಸಮಾಧಾನಗಳು ಒಂದೊಂದಾಗಿ ಹೊರ ಬರುತ್ತಿದೆ.

    ಫೈನಲ್‍ನಲ್ಲಿ ಪಾಕ್ ವಿರುದ್ಧ 180 ರನ್‍ಗಳಿಂದ ಸೋತಿದ್ದಕ್ಕೆ ಕೋಚ್ ಅನಿಲ್ ಕುಂಬ್ಳೆ ಗರಂ ಆಗಿ ಟೀಂ ಇಂಡಿಯಾ ಆಟಗಾರನ್ನು 30 ನಿಮಿಷ ತೀವ್ರ ತರಾಟೆ ತೆಗೆದುಕೊಂಡಿದ್ದರು. ಇದರಿಂದ ನೊಂದ ಕ್ರಿಕೆಟಿಗರು ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ದೂರು ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

    ಕುಂಂಬ್ಳೆ ಕ್ಲಾಸ್ ಹೀಗಿತ್ತಂತೆ!
    ಮ್ಯಾಚ್ ಬಳಿಕ ಒಬ್ಬೊಬ್ಬರೇ ಆಟಗಾರರನ್ನು ಕರೆದು ಕುಂಬ್ಳೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ ಹಿರಿಯ ಆಟಗಾರರನ್ನು ಉದಾಹರಿಸಿ ಚೆನ್ನಾಗಿ ಕ್ಲಾಸ್ ಮಾಡಿದ್ದಾರೆ. ತಂಡದ ಬೌಲರ್‍ಗಳ ಬಗ್ಗೆ ಕುಂಬ್ಳೆ ಅಸಮಾಧಾನ ವ್ಯಕ್ತಪಡಿಸಿ ಫುಲ್ ಕ್ಲಾಸ್ ಮಾಡಿದ್ದಾರೆ. ಕುಂಬ್ಳೆ ಕಟು ಪದಗಳಿಂದ ಟೀಕಿಸಿದ್ದಕ್ಕೆ ಆಟಗಾರರು ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಆರಂಭಗೊಳ್ಳುವ ಎರಡು ದಿನದ ಮೊದಲು ಕೊಹ್ಲಿ ಮತ್ತು ಕುಂಬ್ಳೆ ನಡುವೆ ವಾಗ್ವಾದ ನಡೆದಿತ್ತು ಎನ್ನುವ ವಿಚಾರವನ್ನು ಮಾಧ್ಯಮಗಳು ವರದಿ ಮಾಡಿವೆ. ಕೋಚ್ ಕುಂಬ್ಳೆಗೆ ನಿಮ್ಮ ಪರ ನಮ್ಮ ತಂಡದ ಆಟಗಾರರಿಗೆ ಒಲವು ಇಲ್ಲ. ನೀವು ಕೋಚ್ ಆಗಿ ಮುಂದುವರಿಯಲು ನಾನೂ ಸೇರಿದಂತೆ ಆಟಗಾರರ ಒಮ್ಮತವಿಲ್ಲ ಎಂದು ಕುಂಬ್ಳೆಗೆ ಆಟಗಾರರ ಎದುರೇ ಕೊಹ್ಲಿ ನಿಂದಿಸಿದ್ದಾರೆ. ಕೊಹ್ಲಿ ಮಾತಿನಿಂದ ಆಕ್ರೋಶಗೊಂಡ ಕುಂಬ್ಳೆ, ಕೋಚ್ ಆಗಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನೀನು ಸುಮ್ಮನೆ ಇರು ಎಂದು ಕೊಹ್ಲಿಗೆ ತಿರುಗೇಟು ನೀಡಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಧರ್ಮಶಾಲಾ ಟೆಸ್ಟ್ ನಿಂದ ಭಿನ್ನಮತ ಆರಂಭ?
    ಕೊಹ್ಲಿ ಮತ್ತು ಕುಂಬ್ಳೆ ಮಧ್ಯೆ ಮೊದಲು ಅಸಮಾಧಾನ ಸ್ಫೋಟಗೊಳ್ಳಲು ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ನಡೆದ 4 ಟೆಸ್ಟ್ ಪಂದ್ಯ ಕಾರಣ ಎಂದು ಹೇಳಲಾಗುತ್ತಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಭುಜದ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಕೊಹ್ಲಿ ನಾಲ್ಕನೇಯ ಟೆಸ್ಟ್ ಆಡಿರಲಿಲ್ಲ. ಹೀಗಾಗಿ ಟೀಂ ಇಂಡಿಯಾವನ್ನು ಅಜಿಂಕ್ಯಾ ರೆಹಾನೆ ಮುನ್ನಡೆಸಿದ್ದರು. ಈ ಪಂದ್ಯಕ್ಕೆ ಕುಂಬ್ಳೆ ಸ್ಪಿನ್ನರ್ ಕುಲ್‍ದೀಪ್ ಯಾದವ್ ಅವರಿಗೆ ಸ್ಥಾನವನ್ನು ನೀಡಿದ್ದರು. ಆದರೆ ಈ ಪಂದ್ಯದಲ್ಲಿ ಕುಲ್‍ದೀಪ್ ಯಾದವ್ ಅವರಿಗೆ ಸ್ಥಾನ ನೀಡಿದ್ದು ನಾಯಕ ಕೊಹ್ಲಿ ಇಷ್ಟವಿರಲಿಲ್ಲ. ಸ್ಥಾನ ನೀಡಿದ್ದನ್ನು ಪ್ರಶ್ನಿಸಿದ್ದರು ಎಂದು ವರದಿಯಾಗಿದೆ. ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಕುಲ್‍ದೀಪ್ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದರು. ಆಗ್ರ ಬ್ಯಾಟ್ಸ್ ಮನ್‍ಗಳನ್ನು ಪೆವಿಲಿಯನ್ ಗೆ ಕಳುಹಿಸಿದ್ದ ಕುಲ್‍ದೀಪ್ ಯಾದವ್‍ಗೆ ಈ ಪಂದ್ಯದಲ್ಲಿ ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

    ಕುಂಬ್ಳೆ ಪರ ಹಿರಿಯರ ಬ್ಯಾಟಿಂಗ್: ಕುಂಬ್ಳೆ ಮಾಜಿ ಆಟಗಾರರದಾದ ಬಿಷನ್ ಸಿಂಗ್ ಬೇಡಿ, ಸುನೀಲ್ ಗವಾಸ್ಕರ್ ಬ್ಯಾಟಿಂಗ್ ಮಾಡಿದ್ದಾರೆ. ಕುಂಬ್ಳೆ ತಮ್ಮ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅದನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ, ಒಂದು ವೇಳೆ ಟೀಂ ಇಂಡಿಯಾ ಆಟಗಾರರಿಗೆ ಮೃದು ಸ್ವಭಾವದ ಕೋಚ್ ಬೇಕಿದ್ದರೆ ಕುಂಬ್ಳೆ ಹೋಗಿದ್ದೇ ಒಳ್ಳೆಯದು ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.

    ಅಭಿನವ್ ಬಿಂದ್ರಾ ಬ್ಯಾಟಿಂಗ್:
    ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಶೂಟರ್ ಅಭಿನವ್ ಬಿಂದ್ರಾ ಟ್ವೀಟ್ ಮಾಡಿ ಪರೋಕ್ಷವಾಗಿ ಕೊಹ್ಲಿಗೆ ಟಾಂಗ್ ನೀಡಿದ್ದಾರೆ. ನನ್ನ ದೊಡ್ಡ ಟೀಚರ್ ನನ್ನ ಕೋಚ್, ನಾನು ಅವರನ್ನು ದ್ವೇಷಿಸುತ್ತಿದ್ದೆ. 20 ವರ್ಷಗಳ ಕಾಲ ನಾನುದ ಅವರೊಂದಿಗೆ ಇದ್ದೆ. ನನಗೆ ಇಷ್ಟವಾಗದ ವಿಚಾರಗಳನ್ನು ಅವರು ಹೇಳುತ್ತಿದ್ದರು ಎಂದು ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಕುಂಬ್ಳೆಯನ್ನು ಬೆಂಬಲಿಸಿದ್ದಾರೆ.

  • ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕುಂಬ್ಳೆ ಗುಡ್‍ಬೈ

    ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕುಂಬ್ಳೆ ಗುಡ್‍ಬೈ

    ಮುಂಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಸೋತು ಆಘಾತವಾಗಿರುವಾಗಲೇ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನ ಅಸಮಾಧಾನ ಸ್ಫೋಟವಾಗಿದ್ದು ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ಗುಡ್‍ಬೈ ಹೇಳಿದ್ದಾರೆ.

    ಗುಡ್‍ಬೈ ಹೇಳಿದ್ದು ಯಾಕೆ ಎನ್ನುವುದು ತಿಳಿದಿಲ್ಲವಾದರೂ ನಾಯಕ ಕೊಹ್ಲಿ ನಡುವಿನ ಸಂಬಂಧ ಸರಿ ಇಲ್ಲದ್ದಕ್ಕೆ ಕುಂಬ್ಳೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಮುಂದೆ ಹೊಸ ಕೋಚ್ ಆಯ್ಕೆ ಮಾಡಲಿದ್ದಾರೆ. ವೆಸ್ಟ್‍ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಯಾಣ ಬೆಳೆಸುತ್ತಿದ್ದು ಹೊಸಕೋಚ್ ನೇಮಕವಾಗಲಿದೆ. ಕೋಚ್ ರೇಸಲ್ಲಿ ಸೆಹ್ವಾಗ್ ಹೆಸರಿದೆ.

    ದ್ರಾವಿಡ್ ಸಲಹೆ: 2019ರ ವಿಶ್ವಕಪ್ ಕ್ರಿಕೆಟ್‍ಗೆ ಈಗಿನಿಂದ್ಲೇ ರೆಡಿಯಾಗುವಂತೆ ಬಿಸಿಸಿಐಗೆ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದಾರೆ. ಮುಂದಿನ ವಿಶ್ವಕಪ್ ದೃಷ್ಟಿಯಿಂದ ಧೋನಿ ಹಾಗೂ ಯುವರಾಜ್ ಭವಿಷ್ಯ ನಿರ್ಧರಿಸಿ, ಪರ್ಯಾಯ ಆಟಗಾರರನ್ನ ಸಜ್ಜುಗೊಳಿಸಿ. ಇದಕ್ಕೆ ಪೂರ್ವಭಾವಿಯಾಗಿ ಕಿರಿಯ ಅಟಗಾರರಿಗೆ ಅವಕಾಶ ನೀಡುವ ಅಗತ್ಯ ಇದೆ ಎಂದು ರಾಹುಲ್ ತಿಳಿಸಿದ್ದಾರೆ.

  • ಪಾಕ್ ಗೆದ್ದ ಬಳಿಕ ಅಭಿಮಾನಿ ಉದ್ಧಟತನ: ಗರಂ ಶಮಿಯನ್ನು ಕೂಲ್ ಮಾಡಿದ ಧೋನಿ – ವಿಡಿಯೋ

    ಪಾಕ್ ಗೆದ್ದ ಬಳಿಕ ಅಭಿಮಾನಿ ಉದ್ಧಟತನ: ಗರಂ ಶಮಿಯನ್ನು ಕೂಲ್ ಮಾಡಿದ ಧೋನಿ – ವಿಡಿಯೋ

     

    ಓವಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಪಾಕ್ ವಿರುದ್ಧ ಭಾರತ ಸೋತ ಬಳಿಕ ಅಭಿಮಾನಿಗಳ ನಡುವೆ ವಾಕ್ಸಮರವೂ ಜೋರಾಗಿದೆ. ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಪಾಕ್ ಹಾಗೂ ಟೀಂ ಇಂಡಿಯಾ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದ ವಿಡಿಯೋ ಈಗ ವೈರಲ್ ಆಗಿದೆ.

    ಫಾದರ್ಸ್ ಡೇಯಂದು ನಡೆದಿದ್ದ ಫೈನಲ್ ಪಂದ್ಯ ಸೋತು ಡ್ರೆಸ್ಸಿಂಗ್ ರೂಂಗೆ ಮರಳುತ್ತಿದ್ದ ಟೀಂ ಇಂಡಿಯಾ ಆಟಗಾರರನ್ನು ಪಾಕ್ ಅಭಿಮಾನಿಗಳು ಕೆಣಕಿದ್ದು, ಭಾರತೀಯ ಆಟಗಾರರು ಕೇಳಿಸಿಕೊಳ್ಳುವಂತೆ ಪಾಕ್ ಅಭಿಮಾನಿಯೊಬ್ಬ “ಬಾಪ್ ಕೌನ್ ಹೇ …ಕೌನ್ ಹೇ ಬಾಪ್” ಎಂದು ಟೀಂ ಇಂಡಿಯಾ ಆಟಗಾರರನ್ನು ಕೆಣಕಿದ್ದಾನೆ.

    ಈ ವೇಳೆ ತಾಳ್ಮೆ ಕಳೆದುಕೊಂಡ ಮೊಹಮ್ಮದ್ ಶಮಿ ಪಾಕ್ ಅಭಿಮಾನಿ ಬಳಿ ಮಾತಿನ ಸಮರಕ್ಕೆ ಮುಂದಾಗಿದ್ದರು. ಆದರೆ ಹಿಂದಿನಿಂದ ಬಂದ ಮಿ. ಕೂಲ್ ಖ್ಯಾತಿಯ ಮಾಜಿ ನಾಯಕ ಧೋನಿ ಶಮಿ ಅವರನ್ನು ತಮ್ಮ ಜೊತೆ ಕರೆದುಕೊಂಡು ಹೋದರು.

    ಇದನ್ನೂ ಓದಿ: ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್

    ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ

    https://youtu.be/870P_55zaK0

  • ಹಡಗಿನಲ್ಲಿ ತೇಲಾಡುತ್ತಾ ಲವ್ವಾಯ್ತು: ಭಾರತದ ಭರತ್ ಜರ್ಮನ್ ಬ್ಯೂಟಿಗೆ ಉಡುಪಿಯಲ್ಲಿ ತಾಳಿ ಕಟ್ಟಿದ್ರು

    ಹಡಗಿನಲ್ಲಿ ತೇಲಾಡುತ್ತಾ ಲವ್ವಾಯ್ತು: ಭಾರತದ ಭರತ್ ಜರ್ಮನ್ ಬ್ಯೂಟಿಗೆ ಉಡುಪಿಯಲ್ಲಿ ತಾಳಿ ಕಟ್ಟಿದ್ರು

    ಉಡುಪಿ: ಆಕೆ ಜರ್ಮನ್ ಮೂಲದ ಸುಂದರಾಂಗ ಚೆಲುವೆ. ಆತ ಪಕ್ಕಾ ಇಂಡಿಯನ್. ಬಣ್ಣದಲ್ಲಿ ವ್ಯತ್ಯಾಸವಿದ್ದರೂ ಇಬ್ಬರ ಮನಸ್ಸುಗಳು ಮಾತ್ರ ಹೊಂದಾಣಿಕೆಯಾಗಿದೆ. ಸ್ವರ್ಗದಲ್ಲಿ ನಿಶ್ಚಯವಾದ ಮದುವೆ. ಸಮುದ್ರದಲ್ಲಿ ಒಪ್ಪಿಗೆಯಾಗಿ, ಭೂಮಿ ಮೇಲೆ ನಡೆದಿದೆ.

    ರೆಬೆಕಾ ಮರಿಯಾ ಜರ್ಮನಿ ಮೂಲದ ಸ್ಪುರದ್ರೂಪಿ ಚೆಲುವೆ. ಭರತ್ ಕುಮಾರ್ ಇಂಡಿಯನ್ ಜಂಟಲ್ ಮ್ಯಾನ್. ದೇಶ, ಭಾಷೆ, ಸಂಸ್ಕೃತಿಗೆ ಸಂಬಂಧವೇ ಇಲ್ಲದ ಇವರಿಬ್ಬರು ಉಡುಪಿಯಲ್ಲಿ ಮದುವೆಯಾಗಿದ್ದಾರೆ. ಜರ್ಮನಿಯ ಐಡಾ ಕಂಪನಿ ಬೆಲ್ಲಾ ಹಡಗಿನಲ್ಲಿ ಭರತ್ ಕುಮಾರ್ ಫುಡ್ ಆಂಡ್ ಬೇವರೇಜ್ ವಿಭಾದಲ್ಲಿ ಉದ್ಯೋಗಿ. ರೆಬೆಕಾ ಆರ್ಟ್ ಗ್ಯಾಲರಿಯಲ್ಲಿ ಕೆಲಸ ಮಾಡುವಾಕೆ. ಒಂದೇ ಹಡಗಿನಲ್ಲಿ ತೇಲಾಡುತ್ತಾ, ಓಡಾಡುತ್ತಾ ಇವರಿಬ್ಬರಿಗೂ ಲವ್ವಾಗಿದೆ.

    ಇಬ್ಬರೂ ತಮ್ಮ ತಮ್ಮ ಮನೆಯವರಲ್ಲಿ ವಿಷಯ ತಿಳಿಸಿದ್ದಾರೆ. ನಿಮಗೊಪ್ಪಿಗೆಯಾದರೆ ನಮಗೇನೂ ಸಮಸ್ಯೆಯಿಲ್ಲ ಅಂತ ಹೇಳಿದ ಇಬ್ಬರ ಪೋಷಕರು ಅಕ್ಷತೆ ಕಾಳು ಹಾಕಲು ಒಪ್ಪಿದ್ದಾರೆ. ಇಬ್ಬರ ಮದುವೆ ಭಾರತೀಯ ಸಂಸ್ಕೃತಿಯಂತೆ ನಡೆಯಿತು.

    ನಮ್ಮದು ಮೂರು ವರ್ಷದಿಂದ ಲವ್. ಶಿಪ್‍ನಲ್ಲಿ ಮೀಟಾಗಿದ್ದೆವು. ಡೇಟಿಂಗ್ ಹೋಗಿದ್ದೆವು. ಇಬ್ಬರಿಗೂ ನಾವಿಬ್ಬರು ಒಳ್ಳೆ ಜೋಡಿಯಾಗ್ತೇವೆ ಅಂತ ಅನ್ನಿಸ್ತು. ಇಬ್ಬರಿಗೂ ಎಂತ ಸಮಸ್ಯೆಯೂ ಇರಲಿಲ್ಲ. ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಸಿಕ್ಕಿದೆ. ಆರ್ಟ್ ಗ್ಯಾಲರಿಸ್ಟ್ ಆಗಿ ರೆಬೆಕಾ ಕೆಲಸ ಮಾಡುತ್ತಿದ್ದರು. ಪ್ಯಾಕೇಜ್ ಟೂರ್ ತರ ಸಮುದ್ರಯಾನ ಮಾಡುತ್ತೇವೆ. ಇನ್ನೊಂದು ಮೂರ್ನಾಲ್ಕು ವರ್ಷ ಕೆಲಸ ಮಾಡಿ ಭಾರತದಲ್ಲೇ ನೆಲೆಸುವ ಆಲೋಚನೆಯಿದೆ ಎಂದು ಭರತ್ ಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು.

    ಎರಡು ವರ್ಷದ ಹಿಂದೆ ರೆಬೆಕಾ ಉಡುಪಿಯ ಪಡುಬಿದ್ರೆಯ ಭರತ್ ಮನೆಗೆ ಬಂದಿದ್ದರು. ಆಗ ವಿಷಯ ಪ್ರಸ್ತಾಪವಾಗಿದೆ. ವರ್ಷದ ಹಿಂದೆ ಇಬ್ಬರಿಗೂ ಎಂಗೇಜ್‍ಮೆಂಟ್ ಆಗಿದೆ. ಈಗ ಮದುವೆಯೂ ಮುಗಿದಿದೆ. ಎರಡೂ ಕುಟುಂಬದವರು ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಜರ್ಮನಿಯಿಂದ ರೆಬೆಕಾ ಪೋಷಕರು, ಸಂಬಂಧಿಕರು, ಗೆಳೆಯರು ಬಂದಿದ್ದರು. ಭಾರತೀಯ ಸಂಸ್ಕೃತಿಯ ಮದುವೆಯಲ್ಲಿ ಪಾಲ್ಗೊಂಡ ಜರ್ಮನ್ ನೆಂಟರು ಭಾರತೀಯ ಸಂಪ್ರದಾಯದ ಧಿರಿಸು ತೊಟ್ಟಿದ್ದರು. ಇಲ್ಲಿನ ಊಟ, ಹವಾಮಾನದ ಬಗ್ಗೆ ಮೆಚ್ಚಿಕೊಂಡರು.

    ಈ ಸಂದರ್ಭ ವಧುವಿನ ಸಂಬಂಧಿ ಇಯಾಗ ಮಾತನಾಡಿ, 10 ದಿನದ ಹಿಂದೆ ಇಲ್ಲಿಗೆ ಬಂದಾಗ ಜೋರು ಬಿಸಿಲಿತ್ತು. ಈಗ ಜೋರು ಮಳೆ ಬರ್ತಾಯಿದೆ. ಇಲ್ಲಿನ ವೆದರ್ ಗೆ ಅಡ್ಜಸ್ಟ್ ಆಗೋದಕ್ಕೆ ಕಷ್ಟ ಆಗ್ತಾಯಿದೆ. ಊಟ ಕೂಡಾ ಸಿಕ್ಕಾಪಟ್ಟೆ ಸ್ಪೈಸಿ. ಆದ್ರೂ ಇಷ್ಟ ಆಗ್ತಾಯಿದೆ ಎಂದು ಹೇಳಿದರು. ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ಬಹಳ ಖುಷಿಯಾಗಿದೆ. ಇಲ್ಲಿನ ಡೆಕೋರೇಷನ್, ಉಡುಗೆ ತೊಡುಗೆಯೆಲ್ಲಾ ಜರ್ಮನಿ ಮದುವೆಗಿಂತ ಡಿಫರೆಂಟ್ ಇದೆ ಅಂತ ಹೇಳಿದರು.

    ಭಾರತದ ಸಂಸ್ಕೃತಿಯನ್ನು ನೋಡಿ ಇಷ್ಟಪಟ್ಟು ಭಾರತದ ಹುಡುಗನನ್ನು ರೆಬೆಕಾ ಆಯ್ಕೆ ಮಾಡಿದರಂತೆ. ಭರತ್ ಕುಮಾರ್ ರೆಬೆಕಾಗೆ ತುಳು ಭಾಷೆ ಕಲಿಸುತ್ತಿದ್ದಾರೆ. ಮೂರ್ನಾಲ್ಕು ವರ್ಷ ಜರ್ಮನಿಯಲ್ಲೇ ಕೆಲಸ ಮಾಡಿ ಮತ್ತೆ ಭಾರತದಲ್ಲಿ ಸೆಟೆಲ್ ಆಗೋ ಆಲೋಚನೆ ಇಟ್ಟುಕೊಂಡಿದ್ದಾರೆ.

  • ಪ್ರತಿಯೊಂದು ಭೂ ದಾಖಲೆಗೂ ಆಧಾರ್ ಕಡ್ಡಾಯ ಮಾಡಿಲ್ಲ, ಇದು ಸುಳ್ಳು ಸುದ್ದಿ: ಕೇಂದ್ರ ಸರ್ಕಾರ

    ಪ್ರತಿಯೊಂದು ಭೂ ದಾಖಲೆಗೂ ಆಧಾರ್ ಕಡ್ಡಾಯ ಮಾಡಿಲ್ಲ, ಇದು ಸುಳ್ಳು ಸುದ್ದಿ: ಕೇಂದ್ರ ಸರ್ಕಾರ

    ನವದೆಹಲಿ: ಪ್ರತಿಯೊಂದು ಭೂ ದಾಖಲೆಗೂ ಆಧಾರ್ ಸಂಖ್ಯೆಯನ್ನು ಜೋಡಿಸುವಂತೆ ಕೇಂದ್ರ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ, ಇದೊಂದು ಸುಳ್ಳು ಸುದ್ದಿ ಪ್ರೆಸ್ ಇನ್‍ಫಾರ್ಮೆಶನ್ ಬ್ಯುರೋ ಸ್ಪಷ್ಟಪಡಿಸಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಪಿಐಬಿಯ ವಕ್ತಾರ ಫ್ರಾಂಕ್ ನೂರನ್ಹಾ ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ವಿಚಾರವಾಗಿ ಪೊಲೀಸ್ ದೂರು ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

    ಖಾತೆಗಳಿಗೆ ಆಧಾರ್ ಕಡ್ಡಾಯ ಮಾಡಿದಂತೆ ಈಗ ಎಲ್ಲ ಭೂ ದಾಖಲೆಗಳನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡಬೇಕು. ಈ ವರ್ಷದ ಆಗಸ್ಟ್ 14ರ ಒಳಗಡೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚಿ, ಪಾರದರ್ಶಕತೆ ತರಲು ಭೂ ಒಡೆಯನ ಆಧಾರ್ ಸಂಖ್ಯೆಯನ್ನು ಸೇರಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

    ಜೂನ್ 15ರಂದು ಹೊರಡಿಸಿರುವ ಆದೇಶದಲ್ಲಿ ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ಅವರ ಸಹಿಯೂ ಇತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳನ್ನು ಹೆಸರಿಸಿ ಈ ಪತ್ರ ಬರೆಯಲಾಗಿದೆ ಸಲಹೆಗಳನ್ನು ಕೇಳಲಾಗಿತ್ತು.

     

     

  • ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್

    ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್

    ಓವಲ್: ಜಡೇಜಾ ವಿರುದ್ಧ ಅಂಗಳದಲ್ಲಿ ಸಿಟ್ಟಾಗಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಟ್ವಿಟ್ಟರ್‍ನಲ್ಲೂ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ನಮ್ಮವರನ್ನು ನಮ್ಮವರೇ ಲೂಟಿ ಮಾಡಿದ್ರು, ಬೇರೆ ಅವರಿಗೆ ಎಲ್ಲಿದೆ ಆ ತಾಕತ್ತು ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾದ ಆಟಗಾರರು ಪೆವಿಲಿಯನ್ ಪರೇಡ್ ಮಾಡುತ್ತಿದ್ದರೆ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಕೆಚ್ಚೆದೆಯ ಪ್ರದರ್ಶನ ನೀಡಿದ್ದರು. ಆದರೆ ಜಡೇಜಾ ಅವರಿಂದಾಗಿ ರನ್ ಔಟ್ ಆಗಿದ್ದಕ್ಕೆ ಸಿಟ್ಟಾಗಿದ್ದ ಪಾಂಡ್ಯ ಮ್ಯಾಚ್ ಮುಗಿದ ಬಳಿಕ ಈ ಮೇಲಿನಂತೆ ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ್ದರು.

    ರನ್‍ಔಟ್ ಆಗಿದ್ದು ಹೇಗೆ?
    ಟೀಂ ಇಂಡಿಯಾದ ಮೊತ್ತ 152 ಆಗಿದ್ದಾಗ ಹಸನ್ ಅಲಿ ಎಸೆದ 26ನೇ ಓವರ್‍ನ ಮೂರನೇ ಎಸೆತವನ್ನು ಜಡೇಜಾ ಕವರ್‍ಗೆ ತಳ್ಳಿ ರನ್ ಕದಿಯಲು ಮುಂದಾದರು. ಜಡೇಜಾ ಓಡಲು ಆರಂಭಿಸುತ್ತಿದ್ದಂತೆ ನಾನ್ ಸ್ಟ್ರೈಕ್ ನಲ್ಲಿದ್ದ ಪಾಂಡ್ಯ ಸ್ಟ್ರೈಕ್‍ನತ್ತ ಓಡಲು ಆರಂಭಿಸಿದರು. ಅಷ್ಟರಲ್ಲಿ ಬಾಲ್ ಹಫೀಸ್ ಕೈ ಸೇರಿತ್ತು. ಹಫೀಸ್ ಕೈಗೆ ಬಾಲ್ ಸಿಕ್ಕಿದ್ದೆ ತಡ ನಾನ್ ಸ್ಟ್ರೈಕ್‍ರನತ್ತ ಓಡುತ್ತಿದ್ದ ಜಡೇಜಾ ತಮ್ಮ ನಿರ್ಧಾರ ಬದಲಾಯಿಸಿ ಸ್ಟ್ರೈಕ್‍ನತ್ತ ತಿರುಗಿದರು. ಇಬ್ಬರು ಸ್ಟ್ರೈಕ್‍ನತ್ತ ಓಡುವುದನ್ನು ಗಮನಿಸಿದ ಹಫೀಸ್ ಬಾಲನ್ನು ಬೌಲರ್ ಹಸನ್ ಅಲಿಗೆ ಎಸೆದರು. ಈ ವೇಳೆ ಜಡೇಜಾ ಸ್ಟ್ರೈಕ್ ತಲುಪಿ ಆಗಿತ್ತು. ಹೀಗಾಗಿ ಪಾಂಡ್ಯ ರನೌಟ್‍ಗೆ ಬಲಿಯಾದರು.

    ರನ್‍ಔಟ್ ಆದ ಕೂಡಲೇ ಅಲ್ಲೇ ಜಡೇಜಾ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ ಪಾಂಡ್ಯ ಡ್ರೆಸಿಂಗ್ ರೂಂಗೆ ಹೋಗುವವರೆಗೂ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದ್ದರು.

    ರಾತ್ರಿ ಟ್ವೀಟ್: ಪಂದ್ಯ ಮುಗಿದ ಬಳಿಕ ಪಾಂಡ್ಯ ತಮ್ಮ ಆಕ್ರೋಶವನ್ನು ಟ್ವಿಟ್ಟರ್‍ನಲ್ಲಿ ತೋರಿಸಿದ್ದಾರೆ. ರಾತ್ರಿ 10.15 ಟ್ವೀಟ್ ಮಾಡಿದ ತಕ್ಷಣ ಈ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ. ಟ್ವೀಟ್ ಡಿಲೀಟ್ ಮಾಡಿದ್ದರೂ ಜನ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

    ಧೋನಿ ಔಟಾಗುವ ವೇಳೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿತ್ತು. ನಂತರ ಕ್ರೀಸಿಗೆ ಆಗಮಿಸಿದ್ದ ಪಾಂಡ್ಯ ಪಾಕ್ ಬೌಲರ್‍ಗಳ ಎಸೆತವನ್ನು ಮನಬಂದಂತೆ ಚಚ್ಚಲು ಆರಂಭಿಸಿದ್ದರು. ಪರಿಣಾಮ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅವರು 43 ಎಸೆತಗಳಲ್ಲಿ 76 ರನ್ ಸಿಡಿಸಿದ್ದರು. ಈ ಭರ್ಜರಿ ಆಟದಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದ್ದರು.

    ಇದನ್ನೂ ಓದಿ: 76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

     

     

     

    https://twitter.com/takentweets/status/876515488414785537

  • ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ

    ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ

    ಓವಲ್: ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಪಾಕ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

    ಐಸಿಸಿ ಆಯೋಜಿಸಿದ್ದ ಟೂರ್ನಿಯಲ್ಲಿ 7 ಫೈನಲ್ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಯುವಿ ಪಾತ್ರರಾಗಿದ್ದಾರೆ. ಶ್ರೀಲಂಕಾದ ಆಟಗಾರರಾದ ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನೆ, ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾ ರಿಕ್ಕಿಪಾಟಿಂಗ್ ಇದೂವರೆಗೆ 6 ಫೈನಲ್ ಆಡಿದ್ದರು.

    ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯದಲ್ಲಿ ಪಾಕ್ ವಿರುದ್ಧ 32 ಎಸೆತಗಳಲ್ಲಿ 53 ರನ್ ಯುವರಾಜ್ ಚಚ್ಚಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. 2000 ನೇ ಇಸ್ವಿಯಲ್ಲಿ 17ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಎಂಟ್ರಿ ಕೊಟ್ಟ ಯುವಿ ಇದೂವರೆಗೆ 301 ಏಕದಿನ ಪಂದ್ಯ, 58 ಟಿ 20 ಪಂದ್ಯಗಳನ್ನು ಆಡಿದ್ದಾರೆ.

    ಆ 7  ಫೈನಲ್‍ಗಳು
    1. ಐಸಿಸಿ ಚಾಂಪಿಯನ್ಸ್ ಟ್ರೋಫಿ 2000 – ಭಾರತ ವರ್ಸಸ್ ನ್ಯೂಜಿಲೆಂಡ್
    2. ಐಸಿಸಿ ಚಾಂಪಿಯನ್ಸ್ ಟ್ರೋಫಿ 2002 – ಭಾರತ ವರ್ಸಸ್ ಶ್ರೀಲಂಕಾ
    3. ಐಸಿಸಿ ವಿಶ್ವಕಪ್ ಕ್ರಿಕೆಟ್ 2003 – ಭಾರತ ವರ್ಸಸ್ ಆಸ್ಟ್ರೇಲಿಯಾ
    4. ಐಸಿಸಿ ಟಿ20 ವಿಶ್ವಕಪ್ 2007 – ಭಾರತ ವರ್ಸಸ್ ಪಾಕಿಸ್ತಾನ
    5. ಐಸಿಸಿ ವಿಶ್ವಕಪ್ ಕ್ರಿಕೆಟ್ 2011- ಭಾರತ ವರ್ಸಸ್ ಶ್ರೀಲಂಕಾ
    6. ಐಸಿಸಿ ಟಿ20 ವಿಶ್ವಕಪ್ 2014- ಭಾರತ ವರ್ಸಸ್ ಶ್ರೀಲಂಕಾ
    7. ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 – ಭಾರತ ವರ್ಸಸ್ ಪಾಕಿಸ್ತಾನ

  • 76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

    76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

    ಓವಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾ ಸೋತಿದ್ದರೂ ಭಾರತದ ಪರ ಭರ್ಜರಿಯಾಗಿ ಆಡಿದ್ದ ಹಾರ್ದಿಕ್ ಪಾಂಡ್ಯ ಹೊಸ ದಾಖಲೆ ಬರೆದಿದ್ದಾರೆ.

    ಐಸಿಸಿ ಆಯೋಜಿಸಿದ್ದ ಟೂರ್ನಿಯ ಫೈನಲ್ ನಲ್ಲಿ ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾಂಡ್ಯ ಪಾತ್ರರಾಗಿದ್ದಾರೆ.

    32 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಆಡಂ ಗಿಲ್‍ ಕ್ರಿಸ್ಟ್ ದಾಖಲೆಯನ್ನು ಪಾಂಡ್ಯ ಮುರಿದಿದ್ದಾರೆ. 1999ರಲ್ಲಿ ಪಾಕ್ ವಿರುದ್ಧದ ಇಂಗ್ಲೆಂಡಿನ ಲಾರ್ಡ್ಸ್  ನಲ್ಲಿ ನಡೆದ ವಿಶ್ವಕಪ್ ಫೈನಲ್‍ನಲ್ಲಿ ಗಿಲ್‍ ಕ್ರಿಸ್ಟ್ 33 ಎಸೆತದಲ್ಲಿ 50 ರನ್ ಹೊಡೆದ್ದರು.

    ಇಂದಿನ ಪಂದ್ಯದಲ್ಲಿ ಹಫೀಸ್ 34 ಎಸೆತದಲ್ಲಿ ಅರ್ಧಶತಕ ಹೊಡೆಯುವ ಮೂಲಕ ವೇಗದ ಅರ್ಧಶತಕ ಹೊಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.

    ಹಾರ್ದಿಕ್ ಪಾಂಡ್ಯ 76 ರನ್( 43 ಎಸೆತ, 4 ಬೌಂಡರಿ, 6 ಸಿಕ್ಸರ್) ಸಿಡಿಸಿದ್ದಾಗ ರನೌಟ್‍ಗೆ ಬಲಿಯಾದರು.

    ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದ್ದರೆ ಭಾರತ 30.3 ಓವರ್ ಗಳಲ್ಲಿ 158 ರನ್‍ಗಳಿಗೆ ಆಲೌಟ್ ಆಯ್ತು. 180 ರನ್‍ಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮೊದಲ ಬಾರಿಗೆ ಗೆದ್ದುಕೊಂಡ ಸಾಧನೆ ಮಾಡಿತು.

    ಇದನ್ನೂ ಓದಿ:ಪಾಕಿಸ್ತಾನಕ್ಕೆ 14 ಕೋಟಿ ರೂ.: ಭಾರತ ಮತ್ತು ಉಳಿದ ತಂಡಗಳಿಗೆ ಎಷ್ಟು ನಗದು ಬಹುಮಾನ?