Tag: india

  • ಬೇರ್ಪಟ್ಟಿದೆ ಲಕ್ಷ ಕೋಟಿ ಟನ್ ತೂಕದ ಹಿಮಬಂಡೆ: ಭಾರತದ ಮೇಲಾಗುವ ಪರಿಣಾಮ ಏನು?

    ಬೇರ್ಪಟ್ಟಿದೆ ಲಕ್ಷ ಕೋಟಿ ಟನ್ ತೂಕದ ಹಿಮಬಂಡೆ: ಭಾರತದ ಮೇಲಾಗುವ ಪರಿಣಾಮ ಏನು?

    ಲಂಡನ್: ಜಾಗತಿಕ ತಾಪಮಾನದಿಂದಾಗಿ ಭಾರೀ ದೊಡ್ಡ ಹಿಮಬಂಡೆಯೊಂದು ಅಂಟಾರ್ಟಿಕಾದಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಹಿಮಬಂಡೆಯಾಗಿರುವ ಲಾರ್ಸೆನ್ ಸಿ ಯಿಂದ ಜುಲೈ 10- 12ರ ಮಧ್ಯಭಾಗದಲ್ಲಿ ಬೇರ್ಪಟ್ಟಿದೆ.

    ಈ ಹಿಮಬಂಡೆ ಸರಿ ಸುಮಾರು 5 ಸಾವಿರ 800 ಚದರ ಕಿ.ಮೀ. ಅಷ್ಟು ದೊಡ್ಡದಾಗಿದ್ದು, ಒಂದು ಲಕ್ಷ ಕೋಟಿ ಟನ್ ತೂಕವಿದೆ. ಅಂದ್ರೆ ಬರೋಬ್ಬರಿ ನಾಲ್ಕು ದೆಹಲಿಯಷ್ಟು ದೊಡ್ಡದು. ಈ ಹಿಮಬಂಡೆ ತುಂಡಾಗಿರುವುದಿಂದ ವಿಶ್ವದಲ್ಲೇ ಭಾರೀ ಪ್ರತಿಕೂಲ ಪರಿಣಾಮವಾಗಲಿದೆ ಅಂತ ವಿಜ್ಞಾನಿಗಳು ಅಂದಾಜಿಸಿದ್ದಾರೆ. ವಿಶೇಷವಾಗಿ ದಕ್ಷಿಣ ಧ್ರುವದ ಬಳಿ ಸಂಚರಿಸುವ ಹಡಗುಗಳಿಗೆ ಗಂಭೀರ ಅಪಾಯವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

    ಭಾರತದ ಮೇಲಾಗುವ ಪರಿಣಾಮ ಏನು?
    ಭಾರತ ಪರ್ಯಾಯ ದ್ವೀಪರಾಷ್ಟ್ರ. ಮೂರು ಕಡೆ ನೀರಿನಿಂದ ತುಂಬಿದೆ. ಹೀಗಾಗಿ, ತುಂಡಾಗಿರುವ ಮಂಜುಗಡ್ಡೆ ನಿಧಾನವಾಗಿ ಕರಗಲು ಆರಂಭಿಸುತ್ತದೆ. ಆಗ ಸಮುದ್ರ ಮಟ್ಟ ಏರಿಕೆಯಾಗೋದು ಸಾಮಾನ್ಯ. ಹಾಗಾಗಿ, ಭಾರತದ ಕಡಲ ಕಿನಾರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ. ಅರಬ್ಬಿಸಮುದ್ರದ ಮುಂಬೈ, ಹಿಂದೂ ಮಹಾಸಾಗರದ ಚೆನ್ನೈ, ಬಂಗಾಳಕೊಲ್ಲಿಯ ಕೊಲ್ಕತ್ತಾದ ಮೇಲೆ ಪರಿಣಾಮ ಆಗಲಿದೆ.

    2050ರೊಳಗೆ ಸಮುದ್ರ ಏರಿಕೆಯಾಗಲಿರುವ ಬಗ್ಗೆ ವಿಜ್ಞಾನಿಗಳು ಅಂದಾಜಿಸಿದ್ದು 2100ನೇ ಇಸ್ವಿಯೊಳಗಾಗಿ 30 ರಿಂದ 100 ಸೆ.ಮೀ. ನೀರು ಏರಿಕೆಯಾಗಬಹುದು. ಕೆಲವು ಪ್ರದೇಶದಲ್ಲಿ 200 ರಿಂದ 300 ಸೆ.ಮೀ. ಸಾಗರ ಮಟ್ಟ ಏರಿಕೆಯಾಗಬಹುದು.

    ಈಗಾಗಲೇ ಸುಂದರ್‍ಬನ್ಸ್ ಹಾಗೂ ಮಜೌಲಿಯಲ್ಲಿ ಸಮುದ್ರ ಮಟ್ಟ ಏರಿಕೆಯಾಗುತ್ತಿದ್ದು, ಭಾರತ, ಚೀನಾ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿಗೆ ಸಮಸ್ಯೆಯಾಗಬಹುದು. ಪ್ರಮುಖವಾಗಿ ದಕ್ಷಿಣ ಏಷ್ಯಾ ಹಾಗೂ ಆಗ್ನೇಯಾ ಏಷ್ಯಾ ದೇಶಗಳಿಗೆ ತೊಂದರೆಯಾಗಲಿದೆ.

    ನೀರಿನ ಮಟ್ಟ ಏರಿಕೆಯಾದಲ್ಲಿ ವಾತಾವರಣದಲ್ಲಿ ಹವಾಮಾನ ವೈಪರಿತ್ಯವಾಗಿ ಮಳೆ ಮೇಲೆ ಪರಿಣಾಮ ಆಗಬಹುದು. ಇದರಿಂದಾಗಿ ಹಲವು ದೇಶಗಳಲ್ಲ ಪ್ರವಾಹ ಹೆಚ್ಚಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿ ಬಿಗ್ ಬುಲೆಟಿನ್ ನಲ್ಲಿ ಪರಿಸರವಾದಿ ಅಕ್ಷಯ್ ಹೆಬ್ಳಿಕರ್ ಮಾತನಾಡಿ, ಸದ್ಯಕ್ಕೆ ಏನೂ ಪರಿಣಾಮ ಆಗುವುದಿಲ್ಲ. 15-20 ವರ್ಷದಲ್ಲಿ ಭಾರತದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಸಮುದ್ರದಲ್ಲಿ ಜೀವ ವೈವಿಧ್ಯಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಸಿಹಿ ನೀರು ಉಪ್ಪು ನೀರಿಗಳು ಸೇರುವುದರಿಂದ ಜಲಚರಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

     

  • ಮೋದಿ ಸರ್ಕಾರಕ್ಕೆ ವಿಶ್ವದಲ್ಲೇ ಅತಿ ಹೆಚ್ಚು ವಿಶ್ವಾಸರ್ಹತೆ

    ಮೋದಿ ಸರ್ಕಾರಕ್ಕೆ ವಿಶ್ವದಲ್ಲೇ ಅತಿ ಹೆಚ್ಚು ವಿಶ್ವಾಸರ್ಹತೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ವಿಶ್ವದಲ್ಲಿ ಅತಿ ಹೆಚ್ಚು ವಿಶ್ವಾಸರ್ಹತೆ ಹೊಂದಿದೆ ಎಂದು ಅಂತರಾಷ್ಟ್ರೀಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ(ಒಇಸಿಡಿ) ಹೇಳಿದೆ.

    ವಿವಿಧ ರಾಷ್ಟ್ರಗಳ ಸರ್ಕಾರಗಳ ಮೇಲೆ ಜನರು ಹೊಂದಿರುವ ವಿಶ್ವಾಸಾರ್ಹತೆ ಸಂಬಂಧಿಸಿದಂತೆ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಶೇ.73ರಷ್ಟು ಜನರು ಪ್ರಧಾನಿ ಮೋದಿ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಒಇಸಿಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

    ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರ 2014ರಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರವನ್ನು ಏರಿತ್ತು. ಆಡಳಿತದಲ್ಲಿ ಸರ್ಕಾರ ಘೋಷಿಸಿದ ಕೆಲವು ಆರ್ಥಿಕ ಹಾಗೂ ಸಾಮಾಜಿಕ ಯೋಜನೆಗಳನ್ನು ಜಾರಿಗೆ ತಂದ ಕಾರಣ ಭಾರತ ಸರ್ಕಾರಕ್ಕೆ ಈ ಸ್ಥಾನ ಸಿಕ್ಕಿದೆ ಎಂದು ಹೇಳಿದೆ.

    ಭಾರತದ ನಂತರ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡಿಯು ಅವರ ನೇತೃತ್ವದ ಸರ್ಕಾರ ಶೇ.62 ಎಷ್ಟು ಬೆಂಬಲ ಸಿಕ್ಕಿದ್ದರೆ, ಟರ್ಕಿ ಸರ್ಕಾರಕ್ಕೆ ಶೇ.58 ರಷ್ಟು ಬೆಂಬಲ ಸಿಕ್ಕಿದೆ. ಬ್ರಿಟನ್ ಪ್ರಧಾನಿ ತೆರೆಸಾ ಮೇ ನೇತೃತ್ವದ ಸರ್ಕಾರ ಒಇಸಿಡಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದಿದೆ. ನಂತರದ ಸ್ಥಾನವನ್ನು ಜಪಾನ್ ಹಾಗೂ ಅಮೆರಿಕ ಪಡೆದುಕೊಂಡಿದೆ.

    ಆರ್ಥಿಕ, ಸಾಮಾಜಿಕ ಮತ್ತು ಪರಿಸರದ ಬದಲಾವಣೆಯ ಅಂಶಗಳನ್ನು ಪರಿಗಣಿಸಿ ಅಧ್ಯಯನ ನಡೆಸಿ ಸರ್ಕಾರಗಳಿಗೆ ಒಇಸಿಡಿ ಶ್ರೇಯಾಂಕ ನೀಡಿದೆ.

     

  • ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್

    ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್

    ಬ್ರಿಸ್ಟಲ್: ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್ ವಿಶ್ವಕಪ್ ಕ್ರಿಕೆಟ್‍ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎರಡು ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಯ ಜೊತೆ 6 ಸಾವಿರ ರನ್ ಗಡಿ ದಾಟಿದ ಮೊದಲ ಆಟಗಾರ್ತಿಯಾಗಿ ಮಿಥಾಲಿ ರಾಜ್ ಹೊರ ಹೊಮ್ಮಿದ್ದಾರೆ.

    ಇಲ್ಲಿಯವರೆಗೆ ಏಕದಿನದ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ಇಂಗ್ಲೆಂಡಿನ ಚಾರ್ಲೊಟ್ ಎಡ್ವರ್ಡ್ಸ್  ಹೆಸರಿನಲ್ಲಿತ್ತು. 191 ಪಂದ್ಯಗಳಿಂದ ಚಾರ್ಲೊಟ್ 5992 ರನ್ ಹೊಡೆದಿದ್ದರು. ಈ ಪಂದ್ಯ ಆರಂಭಕ್ಕೂ ಮುನ್ನ 5959 ರನ್ ಗಳಿಸಿದ್ದ ಮಿಥಾಲಿ ರಾಜ್ ಇಂದು 33 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ.

    ಇಂದಿನ ಪಂದ್ಯ ಸೇರಿದಂತೆ ಮಿಥಾಲಿ ರಾಜ್ ಒಟ್ಟು 183 ಪಂದ್ಯಗಳ 164 ಇನ್ನಿಂಗ್ಸ್ ಮೂಲಕ 6028 ರನ್ ಗಳಿಸಿದ್ದಾರೆ. ಏಕದಿನದಲ್ಲಿ 5 ಶತಕ, 49 ಅರ್ಧ ಶತಕ ಹೊಡೆದಿದ್ದಾರೆ.

    ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಿಥಾಲಿ ರಾಜ್ 69 ರನ್(114 ಎಸೆತ, 4 ಬೌಂಡರಿ,1 ಸಿಕ್ಸರ್) ಸಿಡಿಸಿ ಔಟಾದರು. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇಸ್ಥಾನಕ್ಕೆ ಕುಸಿದಿರುವ ಭಾರತಕ್ಕೆ ಈ ಪಂದ್ಯವನ್ನು ಗೆದ್ದರೆ ಮಾತ್ರ ಸೆಮಿಫೈನಲ್ ಪ್ರವೇಶಿಸಲಿದೆ.

    ಪಾದಾರ್ಪಣೆ ಪಂದ್ಯದಲ್ಲಿಯೇ ಮಿಥಾಲಿ ಶತಕ ಹೊಡೆದಿದ್ದರು. 1999ರಲ್ಲಿ ಐರ್ಲೆಂಡ್ ವಿರುದ್ಧದ ನಡೆದ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ಮಿಥಾಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ 114 ರನ್ ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಮಹಿಳೆಯರ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಸತತ 7 ಅರ್ಧಶತಕ ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿರುವ ಮಿಥಾಲಿ ಒಟ್ಟು 49 ಅರ್ಧಶತಕ ದಾಖಲಿಸುವ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಅರ್ಧಶತಕ ದಾಖಲಿಸಿದ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ.

     

  • 5000 ಎಂಎಎಚ್ ಬ್ಯಾಟರಿ ಹೊಂದಿರುವ ಮೋಟೋ ಡ್ಯುಯಲ್‍ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    5000 ಎಂಎಎಚ್ ಬ್ಯಾಟರಿ ಹೊಂದಿರುವ ಮೋಟೋ ಡ್ಯುಯಲ್‍ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಭಾರತದ ಮಾರುಕಟ್ಟೆಗೆ ಲೆನೊವೊ ಮಾಲೀಕತ್ವದ ಮೋಟೋ ಇ4 ಪ್ಲಸ್ 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ.

    ಈ ಫೋನಿಗೆ 9,999 ರೂ. ನಿಗದಿ ಮಾಡಿದ್ದು, ಇಂದು ಮಧ್ಯರಾತ್ರಿ 11.59 ರಿಂದ ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ ಆರಂಭವಾಗಲಿದೆ.

    5.5 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್ 4ಜಿ ವೋಲ್ಟ್ ಗೆ ಸಪೋರ್ಟ್ ಮಾಡುವ ಕಾರಣ ಜಿಯೋ ಸಿಮ್ ಹಾಕಬಹುದಾಗಿದೆ. ಮೊಟೊರೊಲಾ ಮೊಬೈಲ್ ಕಂಪೆನಿಯನ್ನು ಈ ಹಿಂದೆ ಗೂಗಲ್ ಖರೀದಿಸಿತ್ತು. 2014ರಲ್ಲಿ ಗೂಗಲ್ ಮೊಟೊರೊಲಾವನ್ನು ಲೆನೊವೊ ಕಂಪೆನಿಗೆ ಮಾರಾಟ ಮಾಡಿತ್ತು.

    ಗೂಗಲ್ ಆಂಡ್ರಾಯ್ಡ್ ಅಪ್‍ಡೇಟ್ ಬಿಡುಗಡೆ ಮಾಡುವಾಗ ಎಲ್ಲ ಸ್ಮಾರ್ಟ್ ಫೋನ್ ಗಳಿಗೆ ಬೇಗನೇ ಆಪ್‍ಡೇಟ್ ಸಿಗುವುದಿಲ್ಲ. ಆದರೆ ಮೋಟೋ ಫೋನ್ ಗಳಲ್ಲಿ ಶುದ್ಧವಾಘಿರುವ ಆಂಡ್ರಾಯ್ಡ್ ಓಎಸ್ ಇರುವ ಕಾರಣ ಬೇಗನೇ ಆಪ್‍ಡೇಟ್ ಸಿಗುತ್ತದೆ.

    ಮೋಟೋ ಇ4 ಪ್ಲಸ್ ಗುಣವೈಶಿಷ್ಟ್ಯಗಳು

    ಬಾಡಿ ಮತ್ತು ಡಿಸ್ಪ್ಲೇ:
    155*77.5*9.6 ಮಿ.ಮೀ ಗಾತ್ರ, 198 ಗ್ರಾಂ, 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್, 720*1280 ಪಿಕ್ಸೆಲ್, 267 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3

    ಪ್ಲಾಟ್ ಫಾರಂ ಮತ್ತು ಮೊಮೊರಿ:
    ಆಂಡ್ರಾಯ್ಡ್ ನೂಗಟ್ ಓಎಸ್, ಮೀಡಿಯಾ ಟೆಕ್ ಕ್ವಾಡ್ ಕೋರ್ 1.3 ಕಾರ್ಟೆಕ್ಸ್ ಎ53 1.3 GHz  ಪ್ರೊಸೆಸರ್, ಮಾಲಿ ಟಿ720 ಗ್ರಾಫಿಕ್ಸ್ ಪ್ರೊಸೆಸರ್, 32 ಜಿಬಿ ಆಂತರಿಕ ಮೆಮೊರಿ, 3ಜಿಬಿ ರಾಮ್, 128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ.

    ಕ್ಯಾಮೆರಾ, ಬ್ಯಾಟರಿ:
    13 ಎಂಪಿ ಹಿಂದುಗಡೆ ಕ್ಯಾಮೆರಾ, 5 ಎಂಪಿ ಮುಂದುಗಡೆ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, ಮೈಕ್ರೋ ಯುಎಸ್‍ಬಿ 2.0, ಫಾಸ್ಟ್ ಬ್ಯಾಟರಿ ಚಾರ್ಜಿಂಗ್, 500 ಎಂಎಎಚ್ ತೆಗೆಯಲು ಅಸಾಧ್ಯವಾದ ಲಿಯಾನ್ ಬ್ಯಾಟರಿ.

  • ಮಾಲ್‍ಗಳ ಬಿಲ್ ಮೇಲೆ ಜಿಎಸ್‍ಟಿ ಟ್ಯಾಕ್ಸ್: ಈ ಸಂದೇಶವನ್ನು ಕಳಿಸೋ ಮುನ್ನ ಈ ಸುದ್ದಿ ಓದಿ

    ಮಾಲ್‍ಗಳ ಬಿಲ್ ಮೇಲೆ ಜಿಎಸ್‍ಟಿ ಟ್ಯಾಕ್ಸ್: ಈ ಸಂದೇಶವನ್ನು ಕಳಿಸೋ ಮುನ್ನ ಈ ಸುದ್ದಿ ಓದಿ

    ಬೆಂಗಳೂರು: “ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದ ಬಳಿಕ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಬಿಲ್‍ಗಳ ಮೇಲೆ ಹೆಚ್ಚುವರಿ ತೆರಿಗೆ ಹಾಕಲಾಗುತ್ತಿದೆ”

    ಹೀಗೊಂದು ಸಂದೇಶ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ದಯವಿಟ್ಟು ಈ ರೀತಿಯ ಸಂದೇಶವನ್ನು ಯಾರು ಕಳುಹಿಸಬೇಡಿ. ಇದು ಸುಳ್ಳು ಸುದ್ದಿಯಾಗಿದ್ದು ನಿಮ್ಮಲ್ಲಿ ಗೊಂದಲ ಮೂಡಿಸಿಲು ಯಾರೋ ಈ ಮಸೇಜ್ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

    ಜಿಎಸ್‍ಟಿ ಬಂದ ಮೇಲೆ ದೇಶದಲ್ಲಿರುವ ಉತ್ಪನ್ನಗಳನ್ನು 5 ವರ್ಗದಲ್ಲಿ ವಿಂಗಡಿಸಿ ಅವುಗಳ ಮೇಲೆ ಶೂನ್ಯ ತೆರಿಗೆ, ಶೇ.5 ತೆರಿಗೆ, ಶೇ.12 ತೆರಿಗೆ, ಶೇ.18 ತೆರಿಗೆ, ಶೇ.28 ತೆರಿಗೆಯನ್ನು ಹಾಕಲಾಗುತ್ತದೆ. ಈ ತೆರಿಗೆ ಮಾಲ್ ಗಳಲ್ಲಿ  ನೀವು ಖರೀದಿ ಮಾಡಿದ ವಸ್ತುಗಳಿಗೆ ಮಾತ್ರ ಅನ್ವಯವಾಗುತ್ತದೆ ಹೊರತು ಬಿಲ್‍ಗಳಿಗೆ ಅನ್ವಯವಾಗುವುದಿಲ್ಲ.

    ಜಿಎಸ್‍ಟಿ ತೆರಿಗೆ ಸೇರಿ ಉತ್ಪನ್ನದ ಎಂಆರ್‍ಪಿ ನಿಗದಿಯಾಗುತ್ತದೆ. ಹೀಗಾಗಿ ಬಿಲ್‍ನಲ್ಲಿ ಮತ್ತೊಮ್ಮೆ ಜಿಎಸ್‍ಟಿ ತೆರಿಗೆ ಹಾಕುವುದಿಲ್ಲ.

    ಹೀಗಾಗಿ ಯಾರಾದರೂ ನಿಮಗೆ ಈ ರೀತಿಯ ಮೆಸೇಜ್ ಕಳುಹಿಸಿದದರೆ ಅವರಿಗೆ ಇದು ಸುಳ್ಳು ಮೆಸೇಜ್. ಈ ರೀತಿ ಬಿಲ್ ಮೇಲೆ ತೆರಿಗೆ ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿಬಿಡಿ.

    ವಾಟ್ಸಪ್ ಸಂದೇಶದಲ್ಲಿ ಏನಿದೆ?
    ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದ ಬಳಿಕ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಬಿಲ್‍ಗಳ ಮೇಲೆ ತೆರಿಗೆ ಹಾಕಲಾಗುತ್ತಿದೆ. 0 ಯಿಂದ 1 ಸಾವಿರ ರೂ. ವರೆಗಿನ ಬಿಲ್‍ಗಳಿಗೆ ಯಾವುದೇ ತೆರಿಗೆ ಇಲ್ಲ. 1000 ರೂ. ನಿಂದ 1500 ರೂ. ವರೆಗಿನ ಬಿಲ್ ಗಳಿಗೆ ಶೇ.2.5 ತೆರಿಗೆ, 1500 ರೂ. ನಿಂದ 2500 ರೂ.ವರೆಗಿನ ಬಿಲ್‍ಗಳಿಗೆ ಶೇ.6, 2500 ರೂ. ನಿಂದ 4500 ರೂ.ವರೆಗಿನ ಬಿಲ್‍ಗಳಿಗೆ ಶೇ.18 ತೆರಿಗೆ ವಿಧಿಸಲಾಗುತ್ತಿದೆ. ದಯವಿಟ್ಟು ಈ ವಿಚಾರವನ್ನು ಎಲ್ಲರಿಗೆ ತಿಳಿಸಿ ಎನ್ನುವ ಸಂದೇಶ ಹರಿದಾಡುತ್ತಿದೆ.

    ಇದನ್ನೂ ಓದಿ: ಆನ್‍ಲೈನ್ ಮೂಲಕ ಶಾಪಿಂಗ್ ಮಾಡೋ ಮಂದಿಗೆ ಗುಡ್‍ನ್ಯೂಸ್

  • ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಆಗಿದ್ಯಾ? ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ

    ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಆಗಿದ್ಯಾ? ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ

    ನವದೆಹಲಿ: ರಿಲಯನ್ಸ್ ಜಿಯೋ ಗ್ರಾಹಕರ ಡೇಟಾ ಲೀಕ್ ಆಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

    magicapk.com ತಾಣ ಜಿಯೋ ಬಳಕೆದಾರರ ಮಾಹಿತಿಯನ್ನು ಪ್ರಕಟಿಸಿದೆ. ಆದರೆ ಜಿಯೋ ಈ ಸುದ್ದಿಯನ್ನು ತಿರಸ್ಕರಿಸಿದ್ದು, ಬಳಕೆದಾರರ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದೆ.

    ಆಗಿದ್ದು ಏನು?
    ಭಾನುವಾರ ಸಂಜೆ ಕೆಲ ಜಿಯೋ ಬಳಕೆದಾರರು ನಮ್ಮ ಮಾಹಿತಿ ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪ್ರಕಟಿಸಿದ್ದರು. ಈ ಪೋಸ್ಟ್, ಟ್ವೀಟ್ ಗಳು ಸಂಚಲನ ಮೂಡಿಸಿದ ಬಳಿಕ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು.

    ಈ ವೆಬ್‍ಸೈಟ್ ನಲ್ಲಿರುವ ಮಾಹಿತಿಗಳು ನಿಜವಾಗಿಯೂ ಸೋರಿಕೆಯಾಗಿದ್ಯಾ ಎಂದು ಪರಿಶೀಲನೆ ನಡೆಸಿದ್ದು, ಈ ವೇಳೆ ನಮೂದಿಸಿದ ಮೊಬೈಲ್ ನಂಬರ್ ಮತ್ತು ಅದಕ್ಕೆ ಸಂಬಂಧಿಸಿದ ಗ್ರಾಹಕರ ಸಂಖ್ಯೆ ತಾಳೆ ಆಗುತ್ತಿರಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಹಾಗಾದ್ರೆ ಸೋರಿಕೆಯಾಗಿದ್ದು ಹೇಗೆ?
    ಥರ್ಡ್ ಪಾರ್ಟಿ ವೆಬ್‍ಸೈಟ್ ಮೂಲಕ ರಿಚಾರ್ಜ್ ಮಾಡಲು ಸಾಧ್ಯವಿದೆ. ಹೀಗಾಗಿ ಈ ವೆಬ್‍ಸೈಟ್ ಗಳಲ್ಲಿ ರಿಚಾರ್ಜ್ ಮಾಡಿದ ಗ್ರಾಹಕರ ಮೊಬೈಲ್ ಸಂಖ್ಯೆಗಳು ಲೀಕ್ ಆಗಿರಬಹುದು ಎಂದು ಕೆಲ ಮಾಧ್ಯಮಗಳು ವರದಿ ಪ್ರಕಟಿಸಿದೆ.

    ಸಸ್ಪೆಂಡ್ ಆಗಿದೆ ವೆಬ್‍ಸೈಟ್:
    ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಮಾಡಿದ್ದೇವೆ ಎಂದು ಪ್ರಕಟಿಸಿದ ಬಳಿಕ ಈಗ ಈ ವೆಬ್‍ಸೈಟ್ ಅಮಾನತು ಆಗಿದ್ದು, ಯಾವುದೇ ಪುಟ ಓಪನ್ ಆಗುತ್ತಿಲ್ಲ. ಐಪಿ ವಿಳಾಸ ಚೆಕ್ ಮಾಡಿದಾಗ ಮುಂಬೈ ಮೂಲದ ವೆಬ್‍ಸೈಟ್ ಇದಾಗಿದ್ದು, ಈ ವರ್ಷ ಮೇ ತಿಂಗಳಿನಲ್ಲಿ ಡೊಮೈನ್ ರಿಜಿಸ್ಟ್ರರ್ ಆಗಿದೆ. ವೆಬ್‍ಸೈಟ್ ಸಸ್ಪೆಂಡ್ ಆಗಿದ್ಯಾ ಅಥವಾ ಬಹಳಷ್ಟು ಜನ ಭೇಟಿ ನೀಡಿದ್ದರಿಂದ ಹೆವಿ ಟ್ರಾಫಿಕ್ ಆಗಿ ಪೇಜ್ ಓಪನ್ ಆಗುತ್ತಿಲ್ಲವೇ ಎನ್ನುವುದು ದೃಢಪಟ್ಟಿಲ್ಲ

    ಸೋರಿಕೆಯಾಗಿಲ್ಲ:
    ಗ್ರಾಹಕರ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ. ಗ್ರಾಹಕರ ಮಾಹಿತಿ ನಾವು ಸುರಕ್ಷಿತವಾಗಿ ಇಟ್ಟಕೊಂಡಿದ್ದೇವೆ. ಈಗಾಗಲೇ ನಾವು ಈ ಸಂಬಂಧ ವೆಬ್‍ಸೈಟ್ ವಿರುದ್ಧ ಕಾನೂನು ಸಂಸ್ಥೆಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಜಿಯೋದ ವಕ್ತಾರರು ತಿಳಿಸಿದ್ದಾರೆ.

  • ಜಾಗತಿಕ ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ

    ಜಾಗತಿಕ ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ

    ನವದೆಹಲಿ: ಜಾಗತಿಕ ಆರ್ಥಿಕತೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.

    ಅಮೆರಿಕದ ಹಾರ್ವರ್ಡ್ ವಿವಿಯ ಸೆಂಟರ್ ಫಾರ್ ಇಂಟರ್‍ನ್ಯಾಷನಲ್ ಡೆವಲಪ್‍ಮೆಂಟ್ (ಸಿಐಡಿ) ಅಧ್ಯಯನದ ಪ್ರಕಾರ 2025ರವರೆಗೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಹೊರಹೊಮ್ಮುವ ಆರ್ಥಿಕ ಶಕ್ತಿಯಾಗಿ ಭಾರತ ಉದಯಿಸಲಿದೆ. ಈ ಸಂದರ್ಭದಲ್ಲಿ ವಾರ್ಷಿಕ ಜಿಡಿಪಿ ಬೆಳವಣಿಗೆ ದರ ಶೇ.7.7 ಇರಲಿದೆ ಎಂದು ಅದು ಅಂದಾಜಿಸಿದೆ.

    ರಾಸಾಯನಿಕ, ವಾಹನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳ ಬೆಳವಣಿಗೆಯಿಂದ ಭಾರತದ ಆರ್ಥಿಕತೆ ಪ್ರಗತಿ ಕಾಣಲಿದೆ ಎಂದು ಅದು ಅಂದಾಜಿಸಿದೆ.

    ರಾಜಕೀಯ, ಭೌಗೋಳಿಕ, ಸಾಂಸ್ಥಿಕ ಕ್ಷೇತ್ರಗಳಿಂದಾಗಿ, ಭಾರತದ ಜೊತೆ ಇಂಡೋನೇಷ್ಯಾ, ವಿಯೆಟ್ನಾಂ, ಟರ್ಕಿ, ಉಗಾಂಡ, ಬಲ್ಗೇರಿಯಾ ದೇಶಗಳ ಆರ್ಥಿಕತೆಗಳು ವೇಗವಾಗಿ ಬೆಳವಣಿಗೆಯಾಗಲಿದೆ ಎಂದು ಸಿಐಡಿ ತಿಳಿಸಿದೆ.

     

  • ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್

    ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಗೆ ಬಂದ ನಂತರ ಉತ್ಪನ್ನಗಳ ಮೇಲೆ ಪರಿಷ್ಕೃತ ಎಂಆರ್‍ಪಿ ಮುದ್ರಿಸದೇ ಇದ್ದರೆ ತಯಾರಕರಿಗೆ ಜೈಲು ಶಿಕ್ಷೆ ವಿಧಿಸುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

    ಮೊದಲ ತಪ್ಪಿಗೆ 25 ಸಾವಿರ ರೂ., ಎರಡನೇ ಬಾರಿ ಸಿಕ್ಕಿಬಿದ್ದರೆ 50 ಸಾವಿರ ರೂ., ಮೂರನೇ ಬಾರಿ 1 ಲಕ್ಷ ರೂ. ದಂಡ ವಿಧಿಸಲಾಗುವುದು. ಮೂರು ಬಾರಿ ದಂಡ ಕಟ್ಟಿದ ಬಳಿಕವೂ ಉಲ್ಲಂಘನೆ ಕಂಡು ಬಂದಲ್ಲಿ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸರ್ಕಾರ ತಯಾರಕರಿಗೆ ವಾರ್ನಿಂಗ್ ನೀಡಿದೆ.

    ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌, ಜಿಎಸ್‍ಟಿ ಬಂದ ಮೇಲೆ ಕೆಲ ಉತ್ಪನ್ನಗಳ ಬೆಲೆ ಕಡಿಮೆಯಾಗಿದ್ದರೆ, ಕೆಲ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಈಗಾಗಲೇ ನಾವು ತಯಾರಕರಿಗೆ ಹೊಸ ಎಂಆರ್‍ಪಿ ಹಾಕುವಂತೆ ಸೂಚಿಸಿದ್ದೇವೆ. ಒಂದು ವೇಳೆ ಹೊಸ ಎಂಆರ್‍ಪಿ ಹಾಕದೇ ಹಳೇ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

    ತಯಾರಕರು ಎಂಆರ್‍ಪಿ ಹಾಕದೇ ವಂಚಿಸಿದ್ದು ಕಂಡು ಬಂದಲ್ಲಿ ಮೊದಲ ತಪ್ಪಿಗೆ 25 ಸಾವಿರ ರೂ. ಎರಡನೇ ಬಾರಿ ಸಿಕ್ಕಿಬಿದ್ದರೆ 25 ಸಾವಿರ ರೂ., ಎರಡನೇ ಬಾರಿ 50 ಸಾವಿರ ಮೂರನೇ ಬಾರಿ 1 ಲಕ್ಷ ರೂ. ದಂಡ ವಿಧಿಸಲಾಗುವುದು. ಮೂರು ಬಾರಿ ದಂಡ ಕಟ್ಟಿದ ಬಳಿಕವೂ ಉಲ್ಲಂಘನೆ ಕಂಡು ಬಂದಲ್ಲಿ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಈ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆ ಇಲ್ಲ ಎಂದು ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದರು.

    ಜಿಎಸ್‍ಟಿ ಬಂದ ನಂತರ ಆರಂಭದಲ್ಲಿ ಕೆಲ ಸಮಸ್ಯೆಗಳು ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಇವುಗಳು ನಿವಾರಣೆಯಾಗಲಿದೆ. ಗ್ರಾಹಕರು ಉತ್ಪನ್ನಗಳನ್ನು ಖರೀದಿಸುವ ಸಂದರ್ಭದಲ್ಲಿ ಯಾವುದೇ ತೊಂದರೆ ಆಗದೇ ಇರಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

    ಈಗಾಗಲೇ ಸ್ಟಾಕ್ ಇರುವ ಉತ್ಪನ್ನಗಳಿಗೆ ಹೊಸ ಎಂಆರ್‍ಪಿ ಹಾಕಿ ಸೆಪ್ಟೆಂಬರ್ ವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಜುಲೈ 1ರ ಬಳಿಕ ತಯಾರಕರು ಉತ್ಪನ್ನಗಳ ಮೇಲೆ ಮೂಲ ಎಂಆರ್‍ಪಿ ಮುಂದುವರೆಸಬೇಕು. ಜತೆಗೆ, ಪರಿಷ್ಕೃತ ದರವನ್ನೂ ಮುದ್ರಿಸಬೇಕು. ಮೂಲ ಎಂಆರ್‍ಪಿ ಮೇಲೆ ಹೊಸ ದರ ಮುದ್ರಿಸಬಾರದು. ಎರಡನ್ನೂ ಪ್ರತ್ಯೇಕವಾಗಿ ಗುರುತಿಸುವಂತಿರಬೇಕು ಎಂದು ಪಾಸ್ವಾನ್  ತಿಳಿಸಿದರು.

    ಇದನ್ನೂ ಓದಿ: ಇನ್ಮುಂದೆ ಹೋಟೆಲ್, ಏರ್‍ಪೋರ್ಟ್, ಮಾಲ್‍ಗಳಲ್ಲಿ ನೀರಿನ ಬಾಟಲಿಗಳಿಗೆ ಎಂಆರ್‍ಪಿ ಹಣವನ್ನು ಮಾತ್ರ ಕೊಡಿ

  • ಸಚಿನ್ ವಿಶೇಷ ದಾಖಲೆ ಮುರಿದ ವಿರಾಟ್ ಕೊಹ್ಲಿ!

    ಸಚಿನ್ ವಿಶೇಷ ದಾಖಲೆ ಮುರಿದ ವಿರಾಟ್ ಕೊಹ್ಲಿ!

    ಕಿಂಗ್‍ಸ್ಟನ್: ವಿಂಡೀಸ್ ವಿರುದ್ಧದ ಕೊನೆಯ ಏಕದಿನದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಶತಕ ಹೊಡೆಯುವ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ  ದಾಖಲೆಯನ್ನು ಮುರಿದಿದ್ದಾರೆ.

    ವಿರಾಟ್ ಕೊಹ್ಲಿ ಸರಣಿಯ ಐದನೇ ಪಂದ್ಯದಲ್ಲಿ ಏಕದಿನದಲ್ಲಿ 28ನೇ ಶತಕವನ್ನು ಹೊಡೆದರು. 108 ಎಸೆತದಲ್ಲಿ ಶತಕ ಹೊಡೆದ ಕೊಹ್ಲಿ ಅಂತಿಮವಾಗಿ 111ರನ್(115 ಎಸೆತ, 12 ಬೌಂಡರಿ, 2 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.

    ಇಲ್ಲಿಯವರೆಗೆ 17 ಶತಕ ಹೊಡೆಯುವ ಮೂಲಕ ಚೇಸಿಂಗ್‍ನಲ್ಲಿ ಅತಿ ಹೆಚ್ಚು ಶತಕ ಹೊಡೆದ ದಾಖಲೆ ಸಚಿನ್ ಹೆಸರಿನಲ್ಲಿತ್ತು. ಕೊಹ್ಲಿ ಈಗ ಕೊಹ್ಲಿ ಚೇಸಿಂಗ್ ನಲ್ಲಿ 18ನೇ ಶತಕ ಹೊಡೆಯುವ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.

    ಸಚಿನ್ ತೆಂಡೂಲ್ಕರ್ 232 ಇನ್ನಿಂಗ್ಸ್ ಆಡಿ 17 ಶತಕ ಹೊಡೆದಿದ್ದರೆ, ಕೊಹ್ಲಿ ಕೇವಲ 102 ಇನ್ನಿಂಗ್ಸ್ ಆಡಿ 18 ಶತಕ ಹೊಡೆದಿದ್ದಾರೆ. ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 116 ಇನ್ನಿಂಗ್ಸ್ ಗಳಿಂದ 11 ಶತಕ ಹೊಡೆಯುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಅತಿ ಹೆಚ್ಚು ಶತಕ ಹೊಡೆದ ಆಟಗಾರರು:
    ಏಕದಿನದಲ್ಲಿ ಸಚಿನ್ 49 ಶತಕ ಹೊಡೆಯುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ರಿಕ್ಕಿ ಪಾಟಿಂಗ್ 30 ಶತಕ ಹೊಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ 25 ಶತಕ, ಶ್ರೀಲಂಕಾದ ಕುಮಾರ ಸಂಗಕ್ಕಾರ 25 ಶತಕ, ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ 24 ಶತಕ ಹೊಡೆದಿದ್ದಾರೆ.

    ಭಾರತಕ್ಕೆ ಸರಣಿ ಜಯ: ಕೊನೆಯ ಏಕದಿನ ಪಂದ್ಯವನ್ನು ಭಾರತ 8 ವಿಕೆಟ್ ಗಳಿಂದ ಗೆದ್ದು ಕೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ವಿಂಡೀಸ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಕೊಹ್ಲಿ ಶತಕ, ದಿನೇಶ್ ಕಾರ್ತಿಕ್ ಔಟಾಗದೇ 50 ರನ್, ರೆಹಾನೆ 39 ರನ್ ಹೊಡೆಯುವ 36.5 ಓವರ್‍ಗಳಲ್ಲಿ 206 ರನ್ ಗಳಿಸಿ ಸರಣಿಯನ್ನು 3-1 ಅಂತರದಿಂದ ಗೆದ್ದು ಕೊಂಡಿತು.

    ನಾಯಕ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದರೆ, ಅಜಿಂಕ್ಯಾ ರೆಹಾನೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು.

     

  • ಟ್ರಂಪ್, ಪೋಪ್ ಬಳಿಕ ಇಸ್ರೇಲಿನಲ್ಲಿ ಮೋದಿಗೆ ಸಿಕ್ತು ‘ಆ’ ವಿಶೇಷ ಸ್ವಾಗತ: ವಿಡಿಯೋ ನೋಡಿ

    ಟ್ರಂಪ್, ಪೋಪ್ ಬಳಿಕ ಇಸ್ರೇಲಿನಲ್ಲಿ ಮೋದಿಗೆ ಸಿಕ್ತು ‘ಆ’ ವಿಶೇಷ ಸ್ವಾಗತ: ವಿಡಿಯೋ ನೋಡಿ

    ಟೆಲ್ ಅವೀವ್: ವಿಮಾನದಿಂದ ಇಳಿದ ಕೂಡಲೇ ಆತಿಥೇಯ ದೇಶದ ಪ್ರಧಾನಿಯಿಂದ ಆತ್ಮೀಯ ಸ್ವಾಗತ, ಇದಾದ ಬಳಿಕ ಭಾರತ ರಾಷ್ಟ್ರಗೀತೆ ಮೊಳಗಿಸಿ ಗೌರವ, ಸ್ವಾಗತ ಸಿಕ್ಕಿದ ಬಳಿಕ ಅಲ್ಲೇ ವಿಶೇಷ ಭಾಷಣ. ಇದು 70 ವರ್ಷದ ಬಳಿಕ ಇಸ್ರೇಲಿಗೆ ಆಗಮಿಸಿದ ಭಾರತದ ಪ್ರಧಾನಿಗೆ ಆ ದೇಶದ ನೀಡಿದ ವಿಶೇಷ ಸ್ವಾಗತದ ಹೈಲೈಟ್ಸ್.

    ಪ್ರಮುಖ ನಗರವಾಗಿರುವ ಟೆಲ್ ಅವೀವ್‍ಗೆ ಪ್ರಧಾನಿ ಇದ್ದ ಏರ್‍ಇಂಡಿಯಾ ವಿಮಾನ ಭಾರತೀಯ ಕಾಲಮಾನ ಸಂಜೆ 6.30ರ ವೇಳೆಗೆ ಲ್ಯಾಂಡ್ ಆಯ್ತು. ವಿಮಾನ ನಿಲ್ದಾಣದಲ್ಲಿ ನಿಗಧಿತ ಸ್ಥಳದಲ್ಲಿ ಲ್ಯಾಂಡ್ ಆದ ಕೂಡಲೇ ಪ್ರಧಾನಿ ಮೋದಿ ಅವರಿಗೆ ವಿಶೇಷ ಸ್ವಾಗತ ನೀಡುವ ಪ್ರಕ್ರಿಯೆ ಆರಂಭವಾಯಿತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯುಹು ನಿಲ್ದಾಣಕ್ಕೆ ಆಗಮಿಸಿದರು. ಏರ್‍ಸ್ಟ್ರೇರ್ ಮೂಲಕ ಮೋದಿ ಕೆಳಗಡೆ ಇಳಿಯುತ್ತಿದ್ದಂತೆ ಬೆಂಜಮಿನ್ ಮೋದಿ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಮೋದಿ ಅವರು ಈ ಗೌರವಕ್ಕೆ ಥ್ಯಾಂಕ್ಸ್ ಎಂದು ಹೇಳಿದರು. ಇದಾದ ಬಳಿಕ ಮೋದಿ ಅವರಿಗೆ ಬೆಂಜಮಿನ್ ನೆತನ್ಯುಹು ಇಸ್ರೇಲ್ ಅಧಿಕಾರಿಗಳನ್ನು ಮೋದಿಗೆ ಪರಿಚಯಿಸಿದರು.

    ನಂತರ ಕೆಂಪು ಹಾಸಿನ ಮೇಲೆ ನಡೆದ ಇಬ್ಬರು ಪ್ರಧಾನಿಗಳು ಸ್ವಲ್ಪ ದೂರ ನಡೆದು ನಿಂತರು. ಕೂಡಲೇ ಭಾರತದ ರಾಷ್ಟ್ರಗೀತೆ ಮೊಳಗಿತು. ಈ ವಿಶೇಷ ವಂದನೆಯ ಸ್ವೀಕರಿಸಿದ ಬಳಿಕ ಇಬ್ಬರು ನಾಯಕರು ಅಲ್ಲೇ ನಿರ್ಮಾಣವಾಗಿದ್ದ ವೇದಿಕೆಯನ್ನು ಏರಿದರು.

    ಮೇರೆ ದೋಸ್ತೋ.. ಆಪ್ ಕೋ ಸ್ವಾಗತ್ ಎಂದು ಹಿಂದಿಯಲ್ಲೇ ಭಾಷಣ ಆರಂಭಿಸಿದ ಬೆಂಜಮಿನ್. `ಮೋದಿ ನಮ್ಮ ಬೆಸ್ಟ್ ಫ್ರೆಂಡ್, ಭಾರತೀಯರೆಂದರೆ ನಮಗೆ ಇಷ್ಟ. ನಿಮ್ಮ ಭೇಟಿಯಿಂದ ನಮ್ಮೆರೆಡು ರಾಷ್ಟ್ರಗಳ ಬಾಂಧವ್ಯ ವೃದ್ಧಿಯಾಗಲಿದೆ ಎಂದು ಹೇಳಿದರು. ನಂತರ ಮೋದಿ ಅವರು ಮಾತನಾಡಿ ನಮ್ಮ ಮಾತುಕತೆಯಿಂದ ಎರಡೂ ದೇಶಗಳ ಬಾಂಧವ್ಯ ವೃದ್ಧಿಸಲಿದೆ ಎಂದು ತಿಳಿಸಿದರು.

    ಮೂರನೇ ವ್ಯಕ್ತಿ: ಇಸ್ರೇಲ್ ಪ್ರಧಾನಿಯವರೇ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಈ ರೀತಿಯ ವಿಶೇಷ ಸ್ವಾಗತ ನೀಡುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ಧರ್ಮಗುರು ಪೋಪ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿದ್ದರು. ಈಗ ಈ ವಿಶೇಷ ಸ್ವಾಗತವನ್ನು ಪಡೆದ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

    ಇಸ್ರೇಲ್ ಪ್ರಧಾನಿಯವರ ಫೇಸ್‍ಬುಕ್ ಪೇಜ್‍ನಲ್ಲಿ ಮೋದಿ ಅವರಿಗೆ ನೀಡಿದ ವಿಶೇಷ ಗೌರವದ ವಿಡಿಯೋ ಅಪ್ಲೋಡ್ ಆಗಿದೆ. ಬೆಂಜಮಿನ್ ನೆತನ್ಯುಹು ಅವರು ಟ್ವಿಟ್ಟರ್ ನಲ್ಲಿ ಹಿಂದಿಯಲ್ಲಿ ಸ್ವಾಗತವನ್ನು ಕೋರಿದ್ದಾರೆ.

    2003ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಇಸ್ರೇಲ್ ಪ್ರಧಾನಿ ಏರಿಯಲ್ ಶರೋನ್ ಭಾರತ ಪ್ರವಾಸ ಕೈಗೊಂಡಿದ್ದರು. ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 25 ವರ್ಷಗಳಾಗಿದ್ದರೂ ಉಳಿದ ದೇಶಗಳಿಗೆ ಹೋಲಿಸಿದರೆ ಉಭಯ ದೇಶಗಳ ನಾಯಕರು ಬಂದು ಹೋಗುವ ಪರಿಪಾಠ ಬಹಳ ಕಡಿಮೆ ಇದೆ. 2006ರಲ್ಲಿ ಗುಜರಾತ್ ಸಿಎಂ ಆಗಿದ್ದಾಗ ಇಸ್ರೇಲ್‍ಗೆ ಮೋದಿ ಭೇಟಿ ನೀಡಿದ್ದರು.