Tag: india

  • ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕೇಸ್: ಕಂಪ್ಯೂಟರ್ ಫೈಲ್, ಫೋನ್ ಕಾಲ್ ಡಿಲೀಟ್

    ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕೇಸ್: ಕಂಪ್ಯೂಟರ್ ಫೈಲ್, ಫೋನ್ ಕಾಲ್ ಡಿಲೀಟ್

    ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಗಣಪತಿ ಪ್ರಕರಣಕ್ಕೆ ಒಂದು ವರ್ಷ ಕಳೆಯುತ್ತಿದ್ದಂತೆ ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್ ನೌ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಕ್ಷ್ಯ ನಾಶ ಮಾಡಿರುವ ಬಗ್ಗೆ ಉಲ್ಲೇಖ ಇರುವುದನ್ನು ಬಹಿರಂಗಪಡಿಸಿದೆ.

    ಆತ್ಮಹತ್ಯೆ ಮಾಡಿಕೊಂಡ ದಿನಾಂಕದ ಬಳಿಕ ಹಾಲಿ ಮಂತ್ರಿ, ಮಾಜಿ ಮಂತ್ರಿ, ಹಾಲಿ ಶಾಸಕರು, ಕೇಂದ್ರ ಸಚಿವರ ಸಂಬಂಧಿ, ಮುಖಂಡರು, ಇಬ್ಬರು ಪೊಲೀಸ್ ಅಧಿಕಾರಿಗಳ ಕರೆ ದಾಖಲೆ, ಮೊಬೈಲ್ ದಾಖಲೆ ನಾಶ ಮಾಡಿರುವುದು ಹಾಗೂ ಕಂಪ್ಯೂಟರ್ ದಾಖಲೆ ನಾಶ ಮಾಡಿರೋದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಸಿಐಡಿ ಫೊರೆನ್ಸಿಕ್ ವರದಿಯನ್ನು ತನಿಖೆ ವೇಳೆ ಪರಿಗಣಿಸಿದೇ ಸಚಿವ ಜಾರ್ಜ್ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್ ಚೀಟ್ ನೀಡಿದೆ. ಈ ವೇಳೆ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳನ್ನು ವಾಹಿನಿ ಮಾತನಾಡಿಸಿದೆ. ಜಗನ್ ಬೆಳ್ಳಿಯಪ್ಪ ಮಾತನಾಡಿ, ಪೊಲೀಸ್ ಅಧಿಕಾರಿಗಳು ನಮ್ಮ ಜೊತೆ ಜಾಸ್ತಿ ಪ್ರಶ್ನೆ ಕೇಳಿಲ್ಲ. ಕೆಲ ಪ್ರಶ್ನೆ ಕೇಳಿದರು. ಏನು ಪ್ರಶ್ನೆ ಕೇಳಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಕೊನೆಗೆ ಖಾಲಿ ಬಿಳಿ ಹಾಳೆಯಲ್ಲಿ ಸಹಿ ಹಾಕಲು ಹೇಳಿದರು. ನಾವು ಸಹಿ ಹಾಕಿದ್ವಿ ಎಂದು ತಿಳಿಸಿದ್ದಾರೆ.

    ಏನೇನು ಡಿಲೀಟ್ ಆಗಿದೆ?
    100 ಇಮೇಲ್, 2699 ವರ್ಡ್ ಫೈಲ್, 910 ಎಂಎಸ್ ಎಕ್ಸೆಲ್ ಫೈಲ್, 145 ಪಿಡಿಎಫ್ ಫೈಲ್, 2500 ಇಮೇಜ್ ಫೈಲ್, 331 ಪಿಪಿಟಿ ಫೈಲ್, 791 ಟೆಕ್ಸ್ಟ್ ಫೈಲ್, 352 ಕಾಂಟಾಕ್ಟ್ , 52 ಮೆಸೇಜ್‍ಗಳು ಡಿಲೀಟ್ ಆಗಿದೆ ಎಂದು ವಾಹಿನಿ ವರದಿ ಪ್ರಸಾರಿಸಿದೆ.

    ಏನಿದು ಪ್ರಕರಣ?:
    2016 ಜುಲೈ 7 ರಂದು ಡಿವೈಎಸ್ಪಿ ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಶರಣಾಗುವ ಮುನ್ನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮುಂದೆ ನನಗೆ ಏನಾದ್ರೂ ಆದರೆ ಅದಕ್ಕೆ ಸಚಿವ ಕೆಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಅಶಿತ್ ಮೋಹನ್ ಪ್ರಸಾದ್ ಮತ್ತು ಪ್ರಣಬ್ ಮೊಹಂತಿ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಈ ಸಂದರ್ಶನ ನೀಡಿದ ಬಳಿಕ ಸಂಜೆ ಮಡಿಕೇರಿ ನಗರದ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದರು. ಈ ಪ್ರಕರಣದ ತನಿಖೆಯನ್ನು ನಡೆಸಿದ ಸಿಐಡಿ ಸಚಿವ ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಬಿ ರಿಪೋರ್ಟ್ ಸಲ್ಲಿಸಿ ಕ್ಲೀನ್ ಚಿಟ್ ನೀಡಿತ್ತು.

    ಸುಪ್ರೀಂನಲ್ಲಿದೆ ಮತ್ತೊಂದು ಅರ್ಜಿ: ಸಿಐಡಿ ವರದಿಯಲ್ಲಿ ಸಚಿವ ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ತನಿಖೆಗೆ ಆಗ್ರಹಿಸುವಂತೆ ಗಣಪತಿ ತಂದೆ ಕುಶಾಲಪ್ಪ ಈ ಹಿಂದೆ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾ.ಎಸ್.ಅಬ್ದುಲ್ ನಜೀರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಶಾಲಪ್ಪ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದು, ನ್ಯಾ. ಆನಂದಕುನಾರ್ ಗೊಯೇಲ್ ಮತ್ತು ಉದಯ್ ಲಲಿತ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ.

    ತಕರಾರು ಅರ್ಜಿ ಸಲ್ಲಿಸಿರಲಿಲ್ಲ: ಸಚಿವ ಜಾರ್ಜ್ ಅವರಿಗೆ ಸಿಐಡಿ ನೀಡಿರುವ ಬಿ ರಿಪೋರ್ಟ್ ಅನ್ನು ಗಣಪತಿ ಅವರ ಪುತ್ರ ನೇಹಾಲ್ ಒಪ್ಪಿಕೊಂಡಿದ್ದರು. ಸಿಐಡಿ ಸಲ್ಲಿಸಿದ ಬಿ ರಿಪೋರ್ಟ್ ಗೆ ಗಣಪತಿ ಪುತ್ರ ಯಾವುದೇ ತಕರಾರು ಅರ್ಜಿ ಸಲ್ಲಿಸಿರಲಿಲ್ಲ.

    https://youtu.be/AGmp1M_0q2s

    https://youtu.be/p2V1xEclj3g

  • ನಾಳೆ ನಡೆಯಲಿರುವ ಭಾರತ, ಶ್ರೀಲಂಕಾ ಪಂದ್ಯಕ್ಕೆ ರಾಷ್ಟ್ರಗೀತೆ ಮೊಳಗಲ್ಲ ಯಾಕೆ?

    ನಾಳೆ ನಡೆಯಲಿರುವ ಭಾರತ, ಶ್ರೀಲಂಕಾ ಪಂದ್ಯಕ್ಕೆ ರಾಷ್ಟ್ರಗೀತೆ ಮೊಳಗಲ್ಲ ಯಾಕೆ?

    ನವದೆಹಲಿ: ಸಾಧಾರಣವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆರಂಭವಾಗುವ ಮುನ್ನ ಆಯಾ ರಾಷ್ಟ್ರಗಳ ರಾಷ್ಟ್ರಗೀತೆ ಮೊಳಗುವುದು ಸಾಮಾನ್ಯ. ಆದರೆ ಶ್ರೀಲಂಕಾ ವಿರುದ್ಧ ಗುರುವಾರ ಪಲ್ಲೆಕೆಲೆಯಲ್ಲಿ ಆರಂಭವಾಗಲಿರುವ ಎರಡನೇ ಏಕದಿನ ಪಂದ್ಯದಲ್ಲಿ ರಾಷ್ಟ್ರಗೀತೆ ಮೊಳಗುವುದಿಲ್ಲ.

    ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀಲಂಕಾ ಕ್ರಿಕೆಟ್ ತಂಡದ ಮಾಧ್ಯಮ ಮ್ಯಾನೇಜರ್ ದಿನೇಶ್ ರತ್ನಸಿಂಗಮ್, ನಾವು ಶಿಷ್ಟಾಚಾರವನ್ನು ಆರಂಭಿಸಿದ್ದು, ಪಂದ್ಯದ ಮೊದಲ ದಿನ ಮಾತ್ರ ನಾವು ರಾಷ್ಟ್ರಗೀತೆ ನುಡಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಡಾಂಬುಲದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗಿತ್ತು, ಮುಂದೆ ಸೆಪ್ಟೆಂಬರ್ 6 ರಂದು ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿರುವ ಮೊದಲ ಟಿ-20 ಪಂದ್ಯದಲ್ಲಿ ರಾಷ್ಟ್ರಗೀತೆ ಮೊಳಗಲಿದೆ ಎಂದು ಅವರು ತಿಳಿಸಿದರು.

    ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡೂ ರಾಷ್ಟ್ರಗಳ ರಾಷ್ಟ್ರಗೀತೆ ನುಡಿಸಲಾಗಿತ್ತು. ಕೊಲಂಬೋದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶಿಷ್ಟಾಚಾರದ ಪ್ರಕಾರ ರಾಷ್ಟ್ರಗೀತೆ ಮೊಳಗಿರಲಿಲ್ಲ.

    ಐದು ಏಕದಿನ ಪಂದ್ಯಗಳ ಮೊದಲ ಪಂದ್ಯವನ್ನು ಭಾರತ ಶಿಖರ್ ಧವನ್ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಆಟದಿಂದಾಗಿ 9 ವಿಕೆಟ್ ಗಳಿಂದ ಜಯಗಳಿಸಿತ್ತು.

    ಇದನ್ನೂ ಓದಿ: ಲಂಕಾ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಧವನ್

  • ನೈತಿಕ ಹೊಣೆ ಹೊತ್ತು  ರೈಲ್ವೇ ಸಚಿವ ಸುರೇಶ್ ಪ್ರಭು ರಾಜೀನಾಮೆ? ಮೋದಿ ಹೇಳಿದ್ದೇನು?

    ನೈತಿಕ ಹೊಣೆ ಹೊತ್ತು ರೈಲ್ವೇ ಸಚಿವ ಸುರೇಶ್ ಪ್ರಭು ರಾಜೀನಾಮೆ? ಮೋದಿ ಹೇಳಿದ್ದೇನು?

    ನವದೆಹಲಿ: ಒಂದು ವಾರದೊಳಗಡೆ ಎರಡು ರೈಲು ದುರಂತ ಸಂಭವಿಸಿ ಟೀಕೆಗೆ ಒಳಗಾಗಿರುವ ಸುರೇಶ್ ಪ್ರಭು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

    ಕೈಫಿಯತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 70 ಜನ ಗಾಯಗೊಂಡಿರುವ ಘಟನೆಯ ಬಳಿಕ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸುರೇಶ್ ಪ್ರಭು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

    ಭೇಟಿ ವೇಳೆ ಸ್ವಲ್ಪ ಸಮಯ ಕಾಯಿರಿ ಎನ್ನುವುದಾಗಿ ಮೋದಿ ನನಗೆ ಹೇಳಿದ್ದಾರೆ ಎಂದು ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.

    ಉತ್ತರ ಪ್ರದೇಶದ ರೈಲು ದುರಂತದ ಬಳಿಕ ಸರಣಿ ಟ್ವೀಟ್ ಮಾಡಿರುವ ಸುರೇಶ್ ಪ್ರಭು ಅವರು ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಕಳೆದ ಮೂರು ವರ್ಷ ನಾನು ರೈಲ್ವೇಯ ಬೆಳವಣಿಗೆ ತುಂಬಾ ಶ್ರಮ ಪಟ್ಟಿದ್ದೇನೆ. ಕಳೆದ ಎರಡು ದಶಕಗಳಿಂದ ಹದೆಗೆಟ್ಟಿದ್ದ ರೈಲ್ವೇಯನ್ನು ಮೇಲಕ್ಕೆ ಎತ್ತಲು ಮೋದಿ ಸರ್ಕಾರ ತುಂಬಾ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

    ಉತ್ಕಲ್ ರೈಲು ದುರಂತ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಕೈಫಿಯತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 70 ಜನ ಗಾಯಗೊಂಡಿರುವ ಘಟನೆ ಮಂಗಳವಾರ ಅವೌರೇಯಾ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಉತ್ಕಲ್ ರೈಲು ದುರಂತ ಸಂಭವಿಸಿ 22 ಮಂದಿ ಮೃತಪಟ್ಟಿದ್ದರು.

    ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೂರು ವರ್ಷಗಳ ಕಾಲ ರೈಲ್ವೇ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ಪ್ರಭು ಅವರು ಖಾಸಗಿ ಸಂಸ್ಥೆಗಳು ನಡೆಸುವ ‘ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವರ’ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದರು. ಇತ್ತೀಚೆಗೆ ಇಂಡಿಯಾ ಟುಡೇ ಅವರು ಮೋದಿ ಸಂಪುಟದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಟಾಪ್ -5 ಮಂತ್ರಿಗಳ ಪಟ್ಟಿಯಲ್ಲೂ ಸುರೇಶ್ ಪ್ರಭು ಸ್ಥಾನವನ್ನು ಪಡೆದುಕೊಂಡಿದ್ದರು.

    ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರೈಲು ದುರಂತ ಸಂಭವಿಸಿದ್ದು ಹೇಗೆ ವಿಡಿಯೋ ನೋಡಿ

  • ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ: ಹಳಿ ತಪ್ಪಿದ ಕೈಫಿಯತ್ ಎಕ್ಸ್ ಪ್ರೆಸ್, 70 ಮಂದಿಗೆ ಗಾಯ

    ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ: ಹಳಿ ತಪ್ಪಿದ ಕೈಫಿಯತ್ ಎಕ್ಸ್ ಪ್ರೆಸ್, 70 ಮಂದಿಗೆ ಗಾಯ

    ಲಕ್ನೋ: ಉತ್ಕಲ್ ರೈಲು ದುರಂತದ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಕೈಫಿಯತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 70 ಜನ ಗಾಯಗೊಂಡಿರುವ ಘಟನೆ ಮಂಗಳವಾರ ಅವೌರೇಯಾ ಜಿಲ್ಲೆಯಲ್ಲಿ ನಡೆದಿದೆ.

    ಮಾನವ ರಹಿತ ಸಿಗ್ನಲ್ ನಲ್ಲಿ ಪಲ್ಟಿಯಾಗಿದ್ದ ಮರಳಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರೈಲು ಅಜಮ್‍ಘಡದಿಂದ ದೆಹಲಿಗೆ ಸಂಚರಿಸುತ್ತಿದ್ದಾಗ ಬುಧವಾರ ನಸುಕಿನ ಜಾವ 2.50ಕ್ಕೆ ಪಟ ಮತ್ತು ಅಚಲ್ಡ ರೈಲ್ವೇ ನಿಲ್ದಾಣದ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಉತ್ತರ ಕೇಂದ್ರ ವಲಯದ ಅಧಿಕಾರಿ ತಿಳಿಸಿದ್ದಾರೆ.

    ಒಂದು ಬೋಗಿ ಸಂಪೂರ್ಣವಾಗಿ ತಿರುಗಿದ್ದರೆ, ಏಳು ಬೋಗಿಗಳು ಹಳಿ ತಪ್ಪಿದೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೇ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿ ಘಟನೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿಲಾಗಿದೆ ಎಂದು ಹೇಳಿದ್ದಾರೆ.

    ಘಟನೆ ಬಗ್ಗೆ ವಿವರಣೆ ಪಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಅದಿತ್ಯನಾಥ್ ಹಿರಿಯ ಅಧಿಕಾರಿಗಳ ಹತ್ತಿರ ಮಾತನಾಡಿದ್ದಾರೆ. ಪೊಲೀಸ್ ಹೆಚ್ಚುವರಿ ನಿರ್ದೇಶಕ ಅಧಿಕಾರಿಯಾದ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಮರಳಿನ ಲಾರಿ ಹಳಿ ಪ್ರವೇಶಿಸಿ ಪಲ್ಟಿಯಾಗಿದ್ದು ಹೇಗೆ ಎನ್ನುವುದರ ಬಗ್ಗೆ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

    ಶನಿವಾರ ಪಶ್ಚಿಮ ಉತ್ತರ ಪ್ರದೇಶದ ಕತೌಲಿಯ ಹತ್ತಿರ ಕಾಳಿಂಗ ಎಕ್ಸ್‍ಪ್ರೆಸ್ ಹಳಿ ತಪ್ಪಿ 23 ಜನ ಸಾವನ್ನಪ್ಪಿ, 150 ಕ್ಕಿಂತಲೂ ಹೆಚ್ಚಿನ ಮಂದಿಗೆ ಗಾಯವಾಗಿತ್ತು. ವಿಶ್ವದ 4ನೇ ಅತಿ ದೊಡ್ಡ ರೈಲ್ವೇ ಜಾಲವನ್ನು ಭಾರತ ಹೊಂದಿದ್ದು, ಪ್ರತಿ ದಿನ 2.2 ಕೋಟಿ ಜನ ರೈಲಿನಲ್ಲಿ ಸಂಚರಿಸುತ್ತಾರೆ.

     

     

     

  • ಲಂಕಾ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಧವನ್

    ಲಂಕಾ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಧವನ್

    ಡಂಬುಲಾ: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶಿಖರ್ ಧವನ್ ದಾಖಲೆ ಬರೆದಿದ್ದಾರೆ. ವಿಶ್ವದ ಯಾವುದೇ ತಂಡದ ವಿರುದ್ಧ ಸತತ 6 ಬಾರಿ 50 ಕ್ಕೂ ಹೆಚ್ಚು ರನ್ ಹೊಡೆದ ಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಶಿಖರ್ ಧವನ್ ಪಾತ್ರರರಾಗಿದ್ದಾರೆ.

    ಲಂಕಾ ವಿರುದ್ಧ ಈ ಹಿಂದಿನ ಪಂದ್ಯಗಳಲ್ಲಿ ಧವನ್ ಕ್ರಮವಾಗಿ 94, 113, 79, 91, 125 ರನ್ ಗಳಿಸಿದ್ದರು. ಭಾನುವಾರ ನಡೆದ ಪಂದ್ಯದಲ್ಲಿ ಧವನ್ ಅಜೇಯ 132 ರನ್(90 ಎಸೆತ, 20 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರು.

    ಈ ಹಿಂದೆ ಲಂಕಾ ವಿರುದ್ಧ ಆಸ್ಟ್ರೇಲಿಯಾದ ಮಾಜಿ ನಾಯಕ ಡೀನ್ ಜೋನ್ಸ್, ಮಾಜಿ ಭಾರತೀಯ ಕ್ರಿಕೆಟಿಗ ನವಜೋತ್ ಸಿಂಗ್ ಸಿಂಧು, ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಪಾಕಿಸ್ತಾನದ ಸಯೀದ್ ಅನ್ವರ್ 5 ಬಾರಿ ಸತತ 50ಕ್ಕೂ ಹೆಚ್ಚು ರನ್ ಸಿಡಿಸಿದ್ದರು.

    ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ 43.2 ಓವರ್ ಗಳ್ಲಲಿ 216 ರನ್ ಗಳಿಗೆ ಆಲೌಟ್ ಆಗಿತ್ತು. ರೋಹಿತ್ ಶರ್ಮಾ 4 ರನ್ ಗಳಿಸಿ ಔಟಾದರೂ ನಂತರ ಶಿಖರ್ ಧವನ್ ಮತ್ತು ನಾಯಕ ಕೊಹ್ಲಿ ಮುರಿಯದ ಎರಡನೇ ವಿಕೆಟ್ ಗೆ 197 ರನ್ ಜೊತೆಯಾಟವಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ.

    ಐದು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯ ಪಲ್ಲೆಕೆಲೆಯಲ್ಲಿ ಆಗಸ್ಟ್ 24ರಂದು ನಡೆಯಲಿದೆ.

     

  • ಇಂದು ಅತೀ ದೊಡ್ಡ ಸೂರ್ಯಗ್ರಹಣ

    ಇಂದು ಅತೀ ದೊಡ್ಡ ಸೂರ್ಯಗ್ರಹಣ

    ಬೆಂಗಳೂರು: ಸೌರಮಂಡಲದಲ್ಲಿ ಇಂದು ಶತಮಾನದ ಸೂರ್ಯ ಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣ ಗತಿಸಿದ 2 ವಾರಗಳ ಅಂತರದಲ್ಲಿ ಸೂರ್ಯಗ್ರಹಣ ಸಂಭವಿಸ್ತಿರೋದು ವಿಜ್ಞಾನಿಗಳಿಗೆ ಹಬ್ಬವಾದರೆ, ಜ್ಯೋತಿಷಿಗಳಿಗೆ ಆತಂಕ ಮೂಡಿಸಿದೆ.

    1979ರ ಬಳಿಕ ಇದೇ ಮೊದಲ ಬಾರಿಗೆ ಅತಿ ದೊಡ್ಡ ಸೂರ್ಯಗ್ರಹಣ ಸಂಭವಿಸುತ್ತಿದೆ. ಅಮೆರಿಕ, ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಈ ಅತಿದೊಡ್ಡ ಕೌತುಕ ಕಾಣಸಿಗಲಿದೆ. ಇನ್ನು ಕೆಲವರ ಪ್ರಕಾರ ಇಂದಿನ ಸೂರ್ಯಗ್ರಹಣದ ವೇಳೆ ಭೂಕಂಪ, ಸುನಾಮಿಯೂ ಸಂಭವಿಸಲಿದೆ ಎನ್ನಲಾಗಿದೆ.

    ನ್ಯೂಯಾರ್ಕ್ ಕಾಲಮಾನ ಪ್ರಕಾರ ಮಧ್ಯಾಹ್ನ 12.05ಕ್ಕೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 4.09ರ ಹೊತ್ತಿಗೆ ಮುಗಿಯಲಿದೆ. ಭಾರತೀಯ ಕಾಲಮಾನದ ಪ್ರಕಾರ ನಮ್ಮ ದೇಶದಲ್ಲಿ ರಾತ್ರಿ ಆಗಿರುತ್ತದೆ. ಹೀಗಾಗಿ ಇದರ ಎಫೆಕ್ಟ್ ಭಾರತದಲ್ಲಿ ಇರುವುದಿಲ್ಲ.

    ಪೂರ್ಣ ಗ್ರಹಣದ ವೇಳೆ ಗ್ರಹಣ ಕಾಣಿಸುವ ದೇಶದ ಬಹುತೇಕ ಭಾಗಗಳಲ್ಲಿ ಕತ್ತಲು ಆವರಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋಗುವ ಮೂಲಕ ಭೂಮಿಯ ಮೇಲೆ ಚಂದ್ರನ ನೆರಳು ಆವರಿಸುವ ಈ ವಿದ್ಯಮಾನವು ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ. 2 ನಿಮಿಷ 40 ಸೆಕೆಂಡ್‍ಗಳ ಕಾಲ ಸೂರ್ಯನನ್ನು ಚಂದ್ರ, ಭೂಮಿ ಸಂಪೂರ್ಣವಾಗಿ ಮರೆ ಮಾಡಲಿದೆ. ಆಫ್ರಿಕಾ ಮತ್ತು ಯೂರೋಪ್‍ನಿಂದಲೂ ಪಾಶ್ರ್ವ ಗ್ರಹಣ ದರ್ಶನವಾಗಲಿದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ.

    ಈ ಖಗ್ರಾಸ ಸೂರ್ಯಗ್ರಹಣವನ್ನು ಬರೀಗಣ್ಣಿನಿಂದ ನೋqಬಾರದು. ಯಾಕೆಂದರೆ ಇದರಿಂದ ಕಣ್ಣಿನ ರೆಟಿನಾ (ಅಕ್ಷಿಪಟಲ) ಸುಟ್ಟು ಹೋಗಬಹುದು ಅಥವಾ ಕಣ್ಣಿನಲ್ಲಿ ಶಾಶ್ವತ ಅಂಧತ್ವ ಉಂಟಾಗಬಹುದು ಎಂದು ಪರಿಣತ ತಜ್ಞರು ಎಚ್ಚರಿಕೆ ನೀಡಿದ್ದಾರೆ.

  • ನಾಳೆ ಸಂಪೂರ್ಣ ಸೂರ್ಯಗ್ರಹಣ – ಭಾರತದ ಮೇಲೆ ಪರಿಣಾಮ ಬೀರಲಿದ್ಯಾ?

    ನಾಳೆ ಸಂಪೂರ್ಣ ಸೂರ್ಯಗ್ರಹಣ – ಭಾರತದ ಮೇಲೆ ಪರಿಣಾಮ ಬೀರಲಿದ್ಯಾ?

    ನವದೆಹಲಿ: ಆಗಸ್ಟ್ 21ರಂದು ಸಂಪೂರ್ಣ ಸೂರ್ಯ ಗ್ರಹಣ. 38 ವರ್ಷಗಳ ಬಳಿಕ ಅಂದ್ರೆ 1979ರ ಬಳಿಕ ಸಂಭವಿಸುತ್ತಿರುವ ಮೊದಲ ಅತೀ ದೊಡ್ಡ ಸೂರ್ಯ ಗ್ರಹಣ ಇದಾಗಿದ್ದು ಅಮೆರಿಕಾ, ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಮಾತ್ರ ಇದರ ದರ್ಶನ ಆಗಲಿದೆ.

    ನ್ಯೂಯಾರ್ಕ್ ಕಾಲಮಾನ ಪ್ರಕಾರ ಮಧ್ಯಾಹ್ನ 12.05 ಗಂಟೆಗೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 4.09ರ ಹೊತ್ತಿಗೆ ಮುಗಿಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸೂರ್ಯಗ್ರಹಣ ಸಂಭವಿಸಿದಾಗ ಭಾರತದಲ್ಲಿ ರಾತ್ರಿ ಆಗಿರುತ್ತದೆ. ಹೀಗಾಗಿ ಭಾರತದಲ್ಲಿ ಇದರ ಪರಿಣಾಮವಿರಲ್ಲ.

    ಪೂರ್ಣ ಗ್ರಹಣದ ವೇಳೆ ಗ್ರಹಣ ಕಾಣಿಸುವ ದೇಶದ ಬಹುತೇಕ ಭಾಗಗಳಲ್ಲಿ ಕತ್ತಲು ಆವರಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋಗುವ ಮೂಲಕ ಭೂಮಿಯ ಮೇಲೆ ಚಂದ್ರನ ನೆರಳು ಆವರಿಸುವ ಈ ವಿದ್ಯಮಾನವು ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ. 2 ನಿಮಿಷ 40 ಸೆಕೆಂಡ್‍ಗಳ ಕಾಲ ಸೂರ್ಯನನ್ನು ಚಂದ್ರ, ಭೂಮಿ ಸಂಪೂರ್ಣವಾಗಿ ಮರೆ ಮಾಡಲಿದೆ. ಆಫ್ರಿಕಾ ಮತ್ತು ಯೂರೋಪ್‍ನಿಂದಲೂ ಪಾರ್ಶ್ವ ಗ್ರಹಣ ದರ್ಶನವಾಗಲಿದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ.

    ಈ ಖಗ್ರಾಸ ಸೂರ್ಯಗ್ರಹಣವನ್ನು ಬರೀಗಣ್ಣಿನಿಂದ ನೋಡಬೇಡಿ. ಯಾಕೆಂದರೆ ಇದರಿಂದ ಕಣ್ಣಿನ ರೆಟಿನಾ (ಅಕ್ಷಿಪಟಲ) ಸುಟ್ಟು ಹೋಗಬಹುದು ಅಥವಾ ಕಣ್ಣಿನಲ್ಲಿ ಶಾಶ್ವತ ಅಂಧತ್ವ ಉಂಟಾಗಬಹುದು ಎಂದು ಪರಿಣತ ತಜ್ಞರು ಎಚ್ಚರಿಕೆ ನೀಡಿದ್ದಾರೆ.

     

  • 2022ರ ಒಳಗಡೆ ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗಳಿಗೆ ಮುಕ್ತಿ ಹಾಡಿ, ನವ ಭಾರತ ಕಟ್ತೀವಿ: ರಾಜನಾಥ್ ಸಿಂಗ್

    2022ರ ಒಳಗಡೆ ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗಳಿಗೆ ಮುಕ್ತಿ ಹಾಡಿ, ನವ ಭಾರತ ಕಟ್ತೀವಿ: ರಾಜನಾಥ್ ಸಿಂಗ್

    ನವದೆಹಲಿ: 2022ರೊಳಗೆ ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಮುಕ್ತಿ ಹಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ.

    ಭಯೋತ್ಪಾದನೆ, ನಕ್ಸಲ್ ದಾಳಿ, ಗಡಿ ವಿವಾದ, ಕಾಶ್ಮೀರ ಗಲಭೆ, ಈಶಾನ್ಯ ಭಾರತದಲ್ಲಿರುವ ಬಂಡಾಯ ಶಮನ ಮಾಡುವುದು ನಮ್ಮ ಗುರಿ. ಆ ಮೂಲಕ ಹೊಸ ಭಾರತ ಕಟ್ಟುವುದು ನಮ್ಮ ಧ್ಯೇಯ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

    ‘ನವ ಭಾರತ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ 2022ರ ವೇಳೆಗೆ ಹೊಸ ಭಾರತವನ್ನು ನಿರ್ಮಿಸುವುದು ನಮ್ಮ ಗುರಿ ಎಂದರು.

    ಬಾಂಗ್ಲಾ ಗಡಿಯಲ್ಲಿ ಬಾಕಿ ಇರುವ 223.7 ಕಿ.ಮೀ ಉದ್ದಕ್ಕೆ ತಂತಿ ಬೇಲಿ ಹಾಕಲಾಗುತ್ತಿದ್ದು, ಮುಂದಿನ ವರ್ಷದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

  • ಕಿರು ಭಾಷಣ ಮಾಡಿ ಕೊಟ್ಟ ಮಾತನ್ನು ಉಳಿಸಿದ ಪ್ರಧಾನಿ ಮೋದಿ

    ಕಿರು ಭಾಷಣ ಮಾಡಿ ಕೊಟ್ಟ ಮಾತನ್ನು ಉಳಿಸಿದ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2016ರ ಸ್ವಾತಂತ್ರ್ಯ ದಿನದಂದು ದೀರ್ಘ ಭಾಷಣ ಮಾಡಿದ್ದಾರೆ, ಈ ಬಾರಿ ದೇಶವನ್ನು ಉದ್ದೇಶಿಸಿ ಕಿರು ಭಾಷಣ ಮಾಡಿದ್ದಾರೆ.

    ಕೆಂಪುಕೋಟೆಯಲ್ಲಿ ಈ ವರ್ಷ ಮೋದಿ 56 ನಿಮಿಷಗಳ ಕಾಲ ಭಾಷಣ ಮಾಡಿದ್ದರೆ, ಕಳೆದ ವರ್ಷ 96 ನಿಮಿಷಗಳ ಕಾಲ ಮಾತನಾಡಿದ್ದರು.

    2014 ರಲ್ಲಿ 65 ನಿಮಿಷ ಮಾತನಾಡಿದ್ದರೆ 2015 ರಲ್ಲಿ 86 ನಿಮಿಷ ಮೋದಿ ಭಾಷಣ ಮಾಡಿದ್ದರು. 1947ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು 72 ನಿಮಿಷಗಳ ಭಾಷಣ ಮಾಡಿದ್ದು 2015ರವರೆಗೂ ಅತಿ ದೀರ್ಘವಾದ ಭಾಷಣ ಆಗಿತ್ತು.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹತ್ತು ಸ್ವಾತಂತ್ರ್ಯೋತ್ಸವದ ಭಾಷಣ 50 ನಿಮಿಷಗಳಿಗೆ ಸೀಮಿತಗೊಂಡಿತ್ತು. ಬಿಜೆಪಿಯ ಮೊದಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 30, 35 ನಿಮಿಷಗಳ ಕಾಲ ಭಾಷಣ ಮಾಡಿದ್ದರು. 2002ರಲ್ಲಿ ವಾಜಪೇಯಿ 25 ನಿಮಿಷ ಮಾತನಾಡಿದ್ದರೆ, 2003 ರಲ್ಲಿ 30 ನಿಮಿಷ ಮಾತನಾಡಿದ್ದರು.

    ಕಡಿಮೆ ಅವಧಿ ಯಾಕೆ: ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ, ಕಡಿಮೆ ಅವಧಿಯ ಸ್ವಾತಂತ್ರ್ಯ ಭಾಷಣವನ್ನು ಮಾಡಬೇಕೆಂದು ಜನರು ಸಲಹೆ ನೀಡಿದ್ದಾರೆ. ಹೀಗಾಗಿ ಈ ಬಾರಿ ನಾನು ಕಿರು ಭಾಷಣ ಮಾಡುತ್ತೇನೆ ಎಂದು ಮೋದಿ ಭರವಸೆ ನೀಡಿದ್ದರು.

    ಇದನ್ನೂ ಓದಿ: 71ನೇ ಸ್ವತಂತ್ರ ದಿನಾಚರಣೆಯಲ್ಲಿ ಮೋದಿ ಭಾಷಣ- ನೋಟ್ ಬ್ಯಾನ್‍ನಿಂದ ಬ್ಯಾಂಕ್ ಸೇರಿದ ಹಣವಿಷ್ಟು

    ಇದನ್ನೂ ಓದಿ: ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಸರ್ಕಾರದಿಂದ ವಿಶೇಷ ಗೌರವ: ಏನಿದು ಹೊಸ ವೆಬ್‍ಸೈಟ್? ಮಾಹಿತಿ ಪಡೆಯೋದು ಹೇಗೆ?

     

  • ವಿಡಿಯೋ: ಶ್ರೀಲಂಕಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಟೀಂ ಇಂಡಿಯಾ

    ವಿಡಿಯೋ: ಶ್ರೀಲಂಕಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಟೀಂ ಇಂಡಿಯಾ

    ಕೊಲಂಬೋ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ಭಾರತ ಕ್ರಿಕೆಟ್ ತಂಡ ಶ್ರೀಲಂಕಾದ ಕ್ಯಾಂಡಿಯಲ್ಲಿ ತ್ರಿವರ್ಣ ದ್ವಜವನ್ನು ಹಾರಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧ್ವಜವನ್ನ ಹಾರಿಸುತ್ತಿದ್ದಂತೆ ರಾಷ್ಟ್ರಗೀತೆಯ ವಾದ್ಯ ಮೊಳಗಿತು. ಇದರ ವಿಡಿಯೋವನ್ನ ಬಿಸಿಸಿಐ ಟ್ವಿಟ್ಟರ್ ಕಾತೆಯಲ್ಲಿ ಹಂಚಿಕೊಳ್ಳಲಾಗಿದೆ.

    ಟೀಂ ಇಂಡಿಯಾ ಆಟಗಾರರು ಶ್ರೀಲಂಕಾ ಪ್ರವಾಸದಲ್ಲಿದ್ದು ಈಗಾಗಲೇ 3-0 ಅಂತರದಿಂದ ಟೆಸ್ಟ್ ಸರಣಿ ಗೆದ್ದಿದ್ದಾರೆ. ಸೋಮವಾರದಂದು ಭಾರತ ತಂಡ ಸರಣಿ ಗೆದ್ದಿದ್ದು, ವಿದೇಶಿ ನೆಲದಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿ ಸರಣಿ ಗೆದ್ದಿರುವುದು ಇದೇ ಮೊದಲು.

    ಸರಣಿ ನಂತರ ಟೀಂ ಇಂಡಿಯಾ 5 ಏಕ ದಿನ ಪಂದ್ಯಗಳು ಹಾಗೂ ಟಿ20 ಪಂದ್ಯವನ್ನ ಆಡಲಿದೆ. ನೂತನ ಕೋಚ್ ರವಿ ಶಾಸ್ತ್ರಿ ಹಾಗೂ ನಾಯಕ ಕೊಹ್ಲಿ ಅಡಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಅಲ್ಲದೆ ಇದೇ ವರ್ಷ ಭಾರತ ತಂಡ ಶ್ರೀಲಂಕಾ ವಿರುದ್ಧ ಮತ್ತೊಂದು ಟೆಸ್ಟ್ ಅರಣಿ ಆಡಲಿದೆ.