Tag: india

  • ಟೆಸ್ಟ್, ಏಕದಿನದಲ್ಲಿ ಕ್ಲೀನ್ ಸ್ವೀಪ್‍ನೊಂದಿಗೆ ಲಂಕಾ ದಹನ: ಭಾರತಕ್ಕೆ 6 ವಿಕೆಟ್‍ಗಳ ಭರ್ಜರಿ ಜಯ

    ಟೆಸ್ಟ್, ಏಕದಿನದಲ್ಲಿ ಕ್ಲೀನ್ ಸ್ವೀಪ್‍ನೊಂದಿಗೆ ಲಂಕಾ ದಹನ: ಭಾರತಕ್ಕೆ 6 ವಿಕೆಟ್‍ಗಳ ಭರ್ಜರಿ ಜಯ

    ಕೊಲಂಬೋ: ಶ್ರೀಲಂಕಾ ವಿರುದ್ಧ ನಡೆದ ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ಐದು ಪಂದ್ಯಗಳ ಮೈಕ್ರೋಮ್ಯಾಕ್ಸ್ ಸರಣಿಯನ್ನು ಗೆಲ್ಲುವ ಮೂಲಕ ಏಕದಿನದಲ್ಲೂ ಕ್ಲೀನ್ ಸ್ವೀಪ್ ಸಾಧಿಸಿದೆ.

    ಕೊನೆಯ ಪಂದ್ಯವನ್ನು ಗೆಲ್ಲಲು 239 ರನ್ ಗಳ ಗುರಿಯನ್ನು ಪಡೆದ ಭಾರತ ಕೊಹ್ಲಿಯ ಅಜೇಯ ಶತಕ, ಕೇದಾರ್ ಜಾಧವ್ ಅರ್ಧಶತಕದಿಂದಾಗಿ 46.3 ಓವರ್‍ಗಳಲ್ಲಿ 239 ರನ್ ಗಳಿಸಿ 6 ವಿಕೆಟ್ ಗಳಿಂದ ಜಯಗಳಿಸಿತು.

    29 ರನ್ ಗಳಿಸುವಷ್ಟರಲ್ಲೇ ರಹಾನೆ ಮತ್ತು ರೋಹಿತ್ ಶರ್ಮಾ ಔಟಾಗುವ ಮೂಲಕ ಭಾರತ ಆರಂಭಿಕ ಕುಸಿತ ಕಂಡಿತ್ತು. ಆದರೆ ಮೂರನೇ ವಿಕೆಟ್ ಗೆ ಮನೀಶ್ ಪಾಂಡೆ ಮತ್ತು ಕೊಹ್ಲಿ 99 ರನ್ ಜೊತೆಯಾಟವಾಡುವ ಮೂಲಕ ಕುಸಿತದಿಂದ ಪಾರು ಮಾಡಿದರು. ನಾಲ್ಕನೇ ವಿಕೆಟ್ ಗೆ ಕೊಹ್ಲಿ ಮತ್ತು ಕೇದಾರ್ ಜಾಧವ್ 109 ರನ್ ಪೇರಿಸಿ ವಿಜಯದ ಸನಿಹ ಭಾರತವನ್ನು ತಂದಿದ್ದರು. 52 ಎಸೆತಗಳಿಗೆ ಅರ್ಧಶತಕ ಹೊಡೆದ ಜಾಧವ್ ವಿಜಯಕ್ಕೆ ಎರಡು ರನ್ ಬೇಕಿದ್ದಾಗ 63 ರನ್ (73 ಎಸೆತ, 7 ಬೌಂಡರಿ) ಗಳಿಸಿ ಕ್ಯಾಚ್ ನೀಡಿ ಔಟಾದರು.

    53 ಎಸೆತಗಳಿಗೆ 50 ರನ್ ಹೊಡೆದ ಕೊಹ್ಲಿ 107 ಎಸೆತದಲ್ಲಿ ಶತಕ ಹೊಡೆದದರು. ಅಂತಿಮವಾಗಿ 110 ರನ್( 116 ಎಸೆತ, 9 ಬೌಂಡರಿ) ಹೊಡೆದು ಅಜೇಯರಾಗಿ ಉಳಿದರೆ, ನಾಟೌಟ್ ನಲ್ಲಿ ವಿಶ್ವ ದಾಖಲೆ ಬರೆದಿರುವ ಧೋನಿ 1 ರನ್ ಗಳಿಸಿ ಅಜೇಯರಾಗಿ ಉಳಿದರು.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಲಂಕಾ ಪರವಾಗಿ ತಿರುಮನೆ 67 ರನ್, ಏಂಜಲೋ ಮಾಥ್ಯೂಸ್ 55 ರನ್, ನಾಯಕ ಉಪುಲ್ ತರಂಗ 48 ರನ್ ಹೊಡೆದರು.

    ಭುವನೇಶ್ವರ್ ಕುಮಾರ್ ಇದೇ ಮೊದಲ ಬಾರಿಗೆ 5 ವಿಕೆಟ್ ಪಡೆದರೆ, ಜಸ್ ಪ್ರೀತ್ ಬೂಮ್ರಾ 2 ವಿಕೆಟ್ ಕಿತ್ತರು. ಕುಲದೀಪ್ ಯಾದವ್ ಮತ್ತು ಚಹಲ್ ತಲಾ ಒಂದೊಂದು ವಿಕೆಟ್ ಪಡೆದರು.

    ಕೊಹ್ಲಿ ಸಾಧನೆ: 2017ರಲ್ಲಿ 1 ಸಾವಿರ ರನ್ ಪೂರ್ಣಗೊಳಿಸಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಶತಕದ ಸಾಧನೆ ಸರಿಗಟ್ಟಿದ್ದಾರೆ. ಪಾಟಿಂಗ್ 375 ಪಂದ್ಯಗಳಿಂದ 30 ಶತಕ ಹೊಡೆದಿದ್ದರೆ, ಕೊಹ್ಲಿ 194 ಪಂದ್ಯಗಳಿಂದ ಈ ಸಾಧನೆ ಮಾಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 463 ಪಂದ್ಯಗಳಿಂದ 49 ಶತಕ ಸಿಡಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಲಂಕಾ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ ಸತತ ಎರಡನೇ ಬಾರಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ. 2014ರಲ್ಲಿ ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿ ಶ್ರೀಲಂಕಾ 5 ಪಂದ್ಯಗಳನ್ನು ಸೋತಿತ್ತು. ಇದಾದ ಬಳಿಕ ಭಾರತ ಏಕದಿನದಲ್ಲಿ ಯಾವೊಂದು ತಂಡದ ವಿರುದ್ಧ ಈ ವಿಶೇಷ ಸಾಧನೆ ಮಾಡಿರಲಿಲ್ಲ.

    ಮೊದಲ ಏಕದಿನವನ್ನು 9 ವಿಕೆಟ್ ಗಳಿಂದ ಗೆದ್ದಿದ್ದರೆ, ಎರಡನೇ ಪಂದ್ಯವನ್ನು 3 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. 6 ವಿಕೆಟ್ ಗಳಿಂದ ಮೂರನೇ ಪಂದ್ಯವನ್ನು ಗೆದ್ದಿದ್ದ ಭಾರತ ನಾಲ್ಕನೇಯ ಏಕದಿನವನ್ನು 168 ರನ್ ಗಳಿಂದ ಗೆದ್ದುಕೊಂಡಿತ್ತು.

    ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 304 ರನ್ ಗಳಿಂದ ಗದ್ದಿದ್ದರೆ, ಎರಡನೇ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 171 ರನ್ ಗಳಿಂದ ಗೆದ್ದುಕೊಂಡಿತ್ತು. ಮೂರನೇ ಪಂದ್ಯವನ್ನು 9 ವಿಕೆಟ್ ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.

    ಇದನ್ನೂ ಓದಿ: ಏಕದಿನ ಕ್ರಿಕೆಟ್‍ನಲ್ಲಿ ಧೋನಿಯಿಂದ ಮತ್ತೊಂದು ವಿಶ್ವದಾಖಲೆ!

     


    https://twitter.com/BrokenCricket/status/904391290732683268

  • ಏಕದಿನ ಕ್ರಿಕೆಟ್‍ನಲ್ಲಿ ಧೋನಿಯಿಂದ ಮತ್ತೊಂದು ವಿಶ್ವದಾಖಲೆ!

    ಏಕದಿನ ಕ್ರಿಕೆಟ್‍ನಲ್ಲಿ ಧೋನಿಯಿಂದ ಮತ್ತೊಂದು ವಿಶ್ವದಾಖಲೆ!

    ಕೊಲಂಬೋ: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.

    ಹೌದು. ಶ್ರೀಲಂಕಾ ವಿರುದ್ಧದ ಐದನೇ ಪಂದ್ಯದಲ್ಲಿ ಚಹಲ್ ಬೌಲಿಂಗ್ ನಲ್ಲಿ ಅಖಿಲಾ ಧನಂಜಯರನ್ನು ಸ್ಟಂಪ್ ಔಟ್ ಮಾಡುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 100 ಸ್ಟಂಪ್ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರವಾಗಿದ್ದಾರೆ.

    ಕ್ಯಾಂಡಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಚಹಲ್ ಬೌಲಿಂಗ್ ನಲ್ಲಿ ಗುಣತಿಲಕ ಅವರನ್ನು ಸ್ಟಂಪ್ ಮಾಡುವ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಸಾಧನೆಯನ್ನು ಧೋನಿ ಸರಿಗಟ್ಟಿದ್ದರು.

    ಇಂದಿನ ಪಂದ್ಯ ಸೇರಿದಂತೆ ಧೋನಿ ಒಟ್ಟು 301 ಪಂದ್ಯಗಳ 296 ಇನ್ನಿಂಗ್ಸ್ ಮೂಲಕ 100 ಸ್ಟಪ್ ಔಟ್ ಮಾಡಿದ್ದಾರೆ. 283 ಕ್ಯಾಚ್ ಗಳನ್ನು ಪಡೆಯುವ ಮೂಲಕ ಒಟ್ಟು 383 ಮಂದಿಯನ್ನು ಧೋನಿ ಔಟ್ ಮಾಡಿದ್ದಾರೆ.

    75 ಸ್ಟಂಪ್ ಔಟ್ ಮಾಡುವ ಮೂಲಕ ಶ್ರೀಲಂಕಾದ ರಮೇಶ್ ಕಲುವಿತರಣ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಮೋಯಿನ್ ಖಾನ್ 73 ಸ್ಟಂಪ್ ಔಟ್ ಮಾಡಿದ್ದರೆ, ಆಸ್ಟ್ರೇಲಿಯಾದ ಆಡಂ ಗಿಲ್‍ಕ್ರಿಸ್ಟ್ 55 ಸ್ಟಂಪ್ ಔಟ್ ಮಾಡುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.

    4ನೇ ಸ್ಥಾನ: ಅತಿ ಹೆಚ್ಚು ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ ವಿಕೆಟ್ ಕೀಪರ್‍ಗಳ ಪಟ್ಟಿಯಲ್ಲಿ ಧೋನಿ ನಾಲ್ಕನೇಯ ಸ್ಥಾನದಲ್ಲಿದ್ದಾರೆ. ಸಂಗಕ್ಕಾರ 482(383 ಕ್ಯಾಚ್, 99 ಸ್ಟಂಪ್) ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗಿಲ್‍ಕ್ರಿಸ್ಟ್ 472(417 ಕ್ಯಾಚ್, 55 ಸ್ಟಂಪ್) ಇದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ 424 ಬಲಿ(402 ಕ್ಯಾಚ್, 22 ಸ್ಟಂಪ್) ಪಡೆಯುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

    ಸದ್ಯ ಒಟ್ಟು 377 ಮಂದಿಯನ್ನು ಔಟ್ ಮಾಡಿರುವ ಧೋನಿ 2019ರ ವಿಶ್ವಕಪ್ ಕ್ರಿಕೆಟ್‍ವರೆಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದರೆ ಸಂಗಕ್ಕಾರ ನಿರ್ಮಿಸಿದ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.

    ಭಾರತದಲ್ಲಿ ಯಾರು ಎಷ್ಟು? ಭಾರತದ ಪರವಾಗಿ ನಯನ್ ಮೊಂಗಿಯಾ 44 ಸ್ಟಂಪ್ ಔಟ್ ಮಾಡಿದ್ದರೆ, ಕಿರಣ್ ಮೊರೆ 27 ಸ್ಟಂಪ್ ಔಟ್ ಮಾಡಿದ್ದಾರೆ. ಚಂದ್ರಕಾಂತ್ ಪಂಡಿತ್ 15 ಸ್ಟಂಪ್ ಮಾಡಿದ್ದರೆ, ರಾಹುಲ್ ದ್ರಾವಿಡ್ 14 ಸ್ಟಂಪ್ ಔಟ್ ಮಾಡಿದ್ದಾರೆ.

    ಇದನ್ನೂ ಓದಿ: ನಾಟೌಟಲ್ಲೂ ಧೋನಿ ವಿಶ್ವ ದಾಖಲೆ!

    https://twitter.com/DHONIism/status/904341019977596928

    https://youtu.be/ZTprzduNDDk

    https://youtu.be/ULWBPEngbpk

    https://youtu.be/B8kTz5cnvgo

  • 2018ರ ಒಳಗಡೆ ಕರ್ನಾಟಕದ 20 ಸೇರಿ, ದೇಶದ 800 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ!

    2018ರ ಒಳಗಡೆ ಕರ್ನಾಟಕದ 20 ಸೇರಿ, ದೇಶದ 800 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ!

    ಬೆಂಗಳೂರು: ಫಲಿತಾಂಶದಲ್ಲಿ ಕಳಪೆ ಸಾಧನೆ ಮತ್ತು ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆ ಆಗುತ್ತಿರುವ ಕರ್ನಾಟಕದ 20 ಸೇರಿದಂತೆ 800 ಎಂಜಿನಿಯರಿಂಗ್ ಕಾಲೇಜುಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಒಳಗಡೆ ಬೀಗ ಬೀಳಲಿದೆ.

    ಹೌದು, ಗುಣಮಟ್ಟದಲ್ಲಿ ಕಳಪೆ ಸಾಧನೆ ತೋರಿಸುತ್ತಿರುವ ದೇಶದ 800 ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಮುಖ್ಯಸ್ಥ ಅನಿಲ್ ದತ್ತಾತ್ರೇಯ ಸಹಸ್ರಬುದೆ ತಿಳಿಸಿದ್ದಾರೆ.

    ಮೂಲಸೌಕರ್ಯ ಇಲ್ಲದ ಮತ್ತು ಸತತ 5 ವರ್ಷಗಳ ಕಾಲ ಶೇ.30ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿರುವ ಕಾಲೇಜುಗಳನ್ನು ಮುಚ್ಚಲಾಗುತ್ತಿದೆ. ಎಐಸಿಟಿಇಯ ಕಠಿಣ ನಿಯಮಗಳಿಂದಾಗಿ ವಾರ್ಷಿಕವಾಗಿ 150ಕ್ಕೂ ಹೆಚ್ಚು ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಅವರು ತಿಳಿಸಿದರು.

    2014-15 ರಿಂದ 2017-18ರ ವರೆಗೆ ಭಾರತದಲ್ಲಿ ಒಟ್ಟು 410 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಎಐಸಿಟಿಇ ಅನುಮೋದನೆ ನೀಡಿದ್ದು ಈ ಪಟ್ಟಿಯಲ್ಲಿ 20 ಕರ್ನಾಟಕದ ಕಾಲೇಜುಗಳು ಇವೆ.

    ತೆಲಂಗಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ರಾಜಸ್ಥಾನ, ತಮಿಳುನಾಡು, ಹರ್ಯಾಣ, ಗುಜರಾತ್ ಮತ್ತು ಮಧ್ಯಪ್ರದೇಶದ ರಾಜ್ಯಗಳ ಕಾಲೇಜುಗಳು ಈ ಪಟ್ಟಿಯಲ್ಲಿ ಸೇರಿದೆ. ಈ ಪಟ್ಟಿಯಲ್ಲಿ ಕೆಲ ಕಾಲೇಜುಗಳು ಸ್ವಯಂ ಪ್ರೇರಿತವಾಗಿ ಅರ್ಜಿ ಸಲ್ಲಿಸಿದೆ ಎಂದು ಅವರು ತಿಳಿಸಿದರು.

    ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳ ಉಪನ್ಯಾಸಕರು ಎಂಟೆಕ್ ಅಥವಾ ಪಿಎಚ್‍ಡಿ ಪದವಿ ಪಡೆದಿದ್ದರೂ ಆಧುನಿಕ ಶಿಕ್ಷಣದ ತರಬೇತಿ ಹೊಂದಿಲ್ಲದ ಕಾರಣ ಉತ್ತಮ ವಿದ್ಯಾರ್ಥಿಗಳು ತಯಾರಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಲೇಜುಗಳಿಗೆ ಉಪನ್ಯಾಸಕರಾಗಿ ಸೇರ್ಪಡೆಯಾಗುವವರು ಕಡ್ಡಾಯವಾಗಿ 6 ತಿಂಗಳ ವಿಶೇಷ ತರಬೇತಿ ಪಡೆಯಬೇಕಾಗುತ್ತದೆ. ಅಷ್ಟೇ ಅಲ್ಲದೇ ಈಗಾಗಲೇ ಉಪನ್ಯಾಸಕ ವೃತ್ತಿಯಲ್ಲಿರುವವರು ಈ ವಿಶೇಷ ತರಬೇತಿಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು.

    ಎಂಜಿನಿಯರಿಂಗ್ ಕಾಲೇಜುಗಳ ಗುಣಮಟ್ಟ ಕಡಿಮೆ ಆದಲ್ಲಿ ಅವುಗಳನ್ನು ಕಲಾ, ವಿಜ್ಞಾನ ಅಥವಾ ಪಾಲಿಟೆಕ್ನಿಕ್ ಕಾಲೇಜುಗಳಾಗಿ ರೂಪಿಸಲಾಗುತ್ತದೆ. ಉದ್ಯಮಕ್ಕೆ ತಯಾರಾಗಿರುವ ವಿದ್ಯಾರ್ಥಿಗಳನ್ನು ಎಐಸಿಟಿಇ ನಿರೀಕ್ಷಿಸುತ್ತಿದೆ. ಈ ಕಾರಣಕ್ಕೆ ಈ ವರ್ಷದಿಂದಲೇ ಎರಡು ಮತ್ತು ಮೂರನೇ ವರ್ಷದಲ್ಲಿ ಇಂಟರ್ನ್ ಶಿಪ್ ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಕ್ಯಾಂಪಸ್ ಸಂದರ್ಶನ ನಡೆಯುವ ಮೊದಲೇ ವಿದ್ಯಾರ್ಥಿಗಳು ಉದ್ಯೋಗ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

    ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

  • ಭಾರತಕ್ಕೆ 168 ರನ್‍ಗಳ ಭರ್ಜರಿ ಜಯ

    ಭಾರತಕ್ಕೆ 168 ರನ್‍ಗಳ ಭರ್ಜರಿ ಜಯ

    ಕೊಲಂಬೋ: ಶ್ರೀಲಂಕಾ ನಾಲ್ಕನೇ ಏಕದಿನ ಪಂದ್ಯವನ್ನು 168 ರನ್ ಗಳಿಂದ ಜಯಗಳಿಸುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ.

    ಗೆಲ್ಲಲು 376 ರನ್ ಗಳ ಕಠಿಣ ಸವಾಲನ್ನು ಪಡೆದ ಶ್ರೀಲಂಕಾ 42.4 ಓವರ್ ಗಳಲ್ಲಿ 207 ರನ್‍ಗಳಿಸಿ ಆಲೌಟ್ ಆಯಿತು.

    ಲಂಕಾ ಪರ ಏಂಜಲೋ ಮಾಥ್ಯೂಸ್ 70 ರನ್(80 ಎಸೆತ, 10 ಬೌಂಡರಿ) ಮತ್ತು ಸಿರಿವರ್ಧನ 39 ರನ್(43 ಎಸೆತ, 3 ಬೌಂಡರಿ) ಹೊಡೆಯುವ ಮೂಲಕ ಸ್ವಲ್ಪ ಪ್ರತಿರೋಧ ತೋರಿದರು.

    ಭಾರತದ ಪರ ಬುಮ್ರಾ, ಪಾಡ್ಯಾ, ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಕಿತ್ತರು. ಶಾರ್ದೂಲ್ ಠಾಕೂರ್ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

    ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಟಗಾರ ರೋಹಿತ್ ಶರ್ಮಾ 104 ರನ್(88 ಎಸೆತ, 11 ಬೌಂಡರಿ, 3 ಸಿಕ್ಸರ್) ವಿರಾಟ್ ಕೊಹ್ಲಿ 131 ರನ್ (96 ಎಸೆತ, 17 ಬೌಂಡರಿ, 2 ಸಿಕ್ಸರ್) ಮನೀಷ್ ಪಾಂಡೆ ಔಟಾಗದೇ 50 ರನ್(42 ಎಸೆತ, 4 ಬೌಂಡರಿ), ಧೋನಿ ಔಟಾಗದೇ 49 ರನ್(42 ಎಸೆತ, 5 ಬೌಂಡರಿ, 1ಸಿಕ್ಸರ್) ಹೊಡೆಯುವ ಮೂಲಕ 5ವಿಕೆಟ್ ನಷ್ಟಕ್ಕೆ 375ರನ್ ಗಳಿಸಿತ್ತು.

    ಇದನ್ನೂ ಓದಿ: ದ್ವಿಶತಕದ ಜೊತೆಯಾಟದ ದಶ ದಾಖಲೆ ಬರೆದ ವಿರಾಟ್ ಕೊಹ್ಲಿ!

     

    embed]https://twitter.com/SirJadeja/status/903230189647400963[/embed]

  • ದ್ವಿಶತಕದ ಜೊತೆಯಾಟದ ದಶ ದಾಖಲೆ ಬರೆದ ವಿರಾಟ್ ಕೊಹ್ಲಿ!

    ದ್ವಿಶತಕದ ಜೊತೆಯಾಟದ ದಶ ದಾಖಲೆ ಬರೆದ ವಿರಾಟ್ ಕೊಹ್ಲಿ!

    ಬೆಂಗಳೂರು: ಏಕದಿನ ಪಂದ್ಯಗಳಲ್ಲಿ 10 ಬಾರಿ ದ್ವಿಶತಕದ ಜೊತೆಯಾಟ ಆಡುವ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ. 10 ಬಾರಿ ದ್ವಿಶತಕದ ಜೊತೆಯಾಟ ಆಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ ಕೊಹ್ಲಿ.

    ಶ್ರೀಲಂಕಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ 2ನೇ ವಿಕೆಟ್ ಗೆ 219 ರನ್ ಗಳ ಜೊತೆಯಾಟ ನೀಡಿ ಈ ನೂತನ ದಾಖಲೆಯನ್ನು ಕೊಹ್ಲಿ ತನ್ನ ಹೆಸರಿಗೆ ಬರೆದುಕೊಂಡರು. 2ನೇ ಓವರ್ ನಲ್ಲಿ ಬ್ಯಾಟಿಂಗ್ ಗೆ ಇಳಿದ ಕೊಹ್ಲಿ 30ನೇ ಓವರ್ ನಲ್ಲಿ ಲಸಿತ್ ಮಾಲಿಂಗಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾಗುವಾಗ 2ನೇ ವಿಕೆಟ್ ಗೆ 219 ರನ್ ಗಳ ಜೊತೆಯಾಟ ನೀಡಿದ್ದರು.

    ವೃತ್ತಿ ಜೀವನದ 29ನೇ ಶತಕ ಬಾರಿಸಿ ಶ್ರೀಲಂಕಾದ ಸನತ್ ಜಯಸೂರ್ಯ ದಾಖಲೆಯನ್ನು ಹಿಂದಿಕ್ಕಿದರು. ಕೊಹ್ಲಿ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ಜೊತೆ ತಲಾ 3 ದ್ವಿಶತಕದ ಜೊತೆಯಾಟ ನೀಡಿದ್ದಾರೆ. ಜೊತೆಗೆ 2017ರಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯೂ ಸದ್ಯ ವಿರಾಟ್ ಕೊಹ್ಲಿ ಹೆಸರಲ್ಲಿದೆ.

    ಇದನ್ನೂ ಓದಿ: ಶತಕ ಸಿಡಿಸಿ 2017ರ ಏಕದಿನದಲ್ಲಿ ವಿಶೇಷ ಸಾಧನೆಗೈದ ರನ್ ಮೆಷಿನ್!

    ವಿರಾಟ್ ಕೊಹ್ಲಿಯ 10 ದ್ವಿಶತಕಗಳ ಜೊತೆಯಾಟದ ವಿವರ ಈ ಕೆಳಗಿನಂತಿದೆ.

     

     

     

  • ರೆಡ್‍ಮೀ 4ಎ 3ಜಿಬಿ ರಾಮ್, 32 ಜಿಬಿ ಆಂತರಿಕ ಮೆಮೊರಿ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ರೆಡ್‍ಮೀ 4ಎ 3ಜಿಬಿ ರಾಮ್, 32 ಜಿಬಿ ಆಂತರಿಕ ಮೆಮೊರಿ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಚೀನಾದ ಕ್ಸಿಯೋಮಿ ಕಂಪೆನಿ ರೆಡ್‍ಮೀ 4ಎ 3ಜಿಬಿ ರಾಮ್, 32 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿರುವ ಫೋನನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಈ ಫೋನಿಗೆ 6,999 ರೂ. ದರವನ್ನು ನಿಗದಿ ಪಡಿಸಿದ್ದು, Mi.com, ಅಮೆಜಾನ್ ಇಂಡಿಯಾ, ಪೇಟಿಎಂ, ಟಾಟಾ ಕ್ಲಿಕ್ ಮೂಲಕ ಗುರುವಾರದಿಂದ ಖರೀದಿಸಬಹುದು ಎಂದು ಕ್ಸಿಯೋಮಿ ತಿಳಿಸಿದೆ.

    ರೆಡ್‍ಮೀ 4ಎ 2ಜಿಬಿ ರಾಮ್ , 16 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಫೋನ್ ಭಾರತದ ಮಾರುಕಟ್ಟೆಗೆ ಮಾರ್ಚ್ ತಿಂಗಳಿನಲ್ಲಿ 5,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಈ ಫೋನ್ ಫ್ಲಾಶ್ ಸೇಲ್ ನಲ್ಲಿ ಕೇವಲ ನಾಲ್ಕು ನಿಮಿಷದಲ್ಲಿ 2.50 ಲಕ್ಷ ಫೋನ್‍ಗಳನ್ನು ಮಾರಾಟ ಆಗುವ ಮೂಲಕ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು.

    ಅಮೆಜಾನ್ ಇಂಡಿಯಾದ ಪೋರ್ಟಲ್‍ನಲ್ಲಿ ಪ್ರತಿ ಸೆಕೆಂಡ್‍ಗೆ 1500 ಫೋನ್‍ಗಳು ಬುಕ್ ಆಗಿದ್ದರೆ, ಒಂದು ನಿಮಿಷಕ್ಕೆ 50 ಲಕ್ಷ ಹಿಟ್ಸ್ ಸಂಪಾದಿಸಿತ್ತು. ಬಿಡುಗಡೆಯಾದ ದಿನವೇ ದಾಖಲೆ ಪ್ರಮಾಣದಲ್ಲಿ ಇಷ್ಟೊಂದು ಫೋನ್ ಭಾರತದಲ್ಲಿ ಮಾರಾಟವಾಗಿರುವುದು ಇದೆ ಮೊದಲು ಎಂದು ಟೆಕ್ ಮಾಧ್ಯಮಗಳು ವರದಿ ಮಾಡಿತ್ತು.

    ಈ ಸೆಗ್ಮೆಂಟ್‍ನಲ್ಲಿ ಉತ್ತಮ ಗುಣ ವೈಶಿಷ್ಟ್ಯಗಳು ಇರುವ ಕಾರಣ ರೆಡ್‍ಮೀ 4ಎ ಗ್ರಾಹಕರನ್ನು ಸೆಳೆಯುತ್ತಿದೆ ಎಂದು ಕ್ಸಿಯೋಮಿ ಇಂಡಿಯಾದ ಆನ್‍ಲೈನ್ ಸೇಲ್ಸ್ ಮುಖ್ಯಸ್ಥ ರಘು ರೆಡ್ಡಿ ಹೇಳಿದ್ದಾರೆ.

    2016ರ ನವೆಂಬರ್ ನಲ್ಲಿ ಚೀನಾದಲ್ಲಿ ಬಿಡುಗಡೆಯಾದ  ನೋಟ್ 4 ಫೋನ್ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಬರೆದಿದ್ದು, 6 ತಿಂಗಳಿನಲ್ಲಿ 50 ಲಕ್ಷ ಫೋನ್ ಗಳು ಮಾರಾಟವಾಗಿದೆ ಎಂದು ಭಾರತದ ಕ್ಸಿಯೋಮಿ ಕಂಪೆನಿಯ ಆಡಳಿತ ನಿರ್ದೇಶಕ ಮನು ಕುಮಾರ್ ಜೈನ್ ಟ್ವೀಟ್ ಮಾಡಿದ್ದಾರೆ.

    ಹೈ ಬ್ರಿಡ್ ಸಿಮ್‍ಸ್ಲಾಟ್ ನೀಡಿರುವ ಕಾರಣ ಎರಡು ಸಿಮ್ ಸ್ಲಾಟ್ ಅಥವಾ ಒಂದು ನ್ಯಾನೋ ಸಿಮ್ ಕಾರ್ಡ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು.

    ಎಲ್‍ಟಿಇ ತಂತ್ರಜ್ಞಾನಕ್ಕೆ ಈ ಫೋನ್ ಸಪೋರ್ಟ್ ಮಾಡುವ ಕಾರಣ ಇದರಲ್ಲಿ ಜಿಯೋ ಸಿಮ್ ಹಾಕಬಹುದು. ಬೆಲೆ ಕಡಿಮೆ ಇರುವುದರಿಂದ ಇದಕ್ಕೆ ಫಿಂಗರ್‍ಪ್ರಿಂಟ್ ಸೆನ್ಸರ್ ಅನ್ನು ಕ್ಸಿಯೋಮಿ ನೀಡಿಲ್ಲ.

    ಗುಣವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    139.5*70.4*8.5. ಮಿ.ಮೀ ಗಾತ್ರ, 131.5 ಗ್ರಾಂ ತೂಕ, ಡ್ಯುಯಲ್ ಸಿಮ್, 5 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(720*1280 ಪಿಕ್ಸೆಲ್, 296ಪಿಪಿಐ), 131.5 ಗ್ರಾಂ ತೂಕವನ್ನು ಹೊಂದಿದೆ.

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 6.0.1 ಮಾರ್ಶ್‍ಮೆಲೋ ಓಎಸ್, 1.4 GHz ಕ್ವಾಲಕಂ ಸ್ನಾಪ್‍ಡ್ರಾಗನ್ 425 ಕ್ವಾಡ್‍ಕೋರ್ ಪ್ರೊಸೆಸರ್, 16/32 ಜಿಬಿ ಆಂತರಿಕ ಮೆಮೊರಿ, 2/3 ಜಿಬಿ ರಾಮ್, 2ನೇ ಸಿಮ್ ಸ್ಲಾಟ್‍ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೊರಿ ವಿಸ್ತರಿಸಬಹುದು.

    ಇತರೇ:
    ಹಿಂದುಗಡೆ 13 ಎಂಪಿ, ಮುಂದುಗಡೆ 5 ಎಂಪಿ ಕ್ಯಾಮೆರಾ, ಯುಎಸ್‍ಬಿ 2.0, ತೆಗೆಯಲು ಅಸಾಧ್ಯವಾದ ಲಿಯಾನ್ 3120 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.

    https://twitter.com/manukumarjain/status/895893233397411840

     

    <

     

  • ಡೋಕ್ಲಾಂ ಗಡಿ ವಿವಾದದಲ್ಲಿ ಭಾರತಕ್ಕೆ ರಾಜತಾಂತ್ರಿಕ ಗೆಲುವು

    ಡೋಕ್ಲಾಂ ಗಡಿ ವಿವಾದದಲ್ಲಿ ಭಾರತಕ್ಕೆ ರಾಜತಾಂತ್ರಿಕ ಗೆಲುವು

    ನವದೆಹಲಿ: ಡೋಕ್ಲಾಂ ಗಡಿ ವಿವಾದದಲ್ಲಿ ಭಾರತಕ್ಕೆ ದೊಡ್ಡ ಜಯ ಸಿಕ್ಕಿದೆ. ಗಡಿಯಿಂದ ಹಿಂದಕ್ಕೆ ಸರಿಯಲು ಭಾರತ ಹಾಗೂ ಚೀನಾ ಎರಡು ರಾಷ್ಟ್ರಗಳ ಸೇನೆ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಈ ವಿವಾದ ಬಗೆಹರಿಯುವ ಸಾಧ್ಯತೆ ಗೋಚರಿಸಿದೆ.

    ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಡೋಕ್ಲಾಂ ಗಡಿಯಲ್ಲಿ ಉಭಯ ರಾಷ್ಟ್ರಗಳ ಸೇನೆಗಳು ಕಾದಾಟ ನಡೆಸುತಿತ್ತು. ಆಗಸ್ಟ್ 15 ರಂದೇ ಪರಸ್ಪರ ಕಲ್ಲು ತೂರಾಟ ನಡೆಸಿದ್ದರು. ಈ ನಡುವೆ ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ಭಾರತೀಯ ಸೇನೆ ಮತ್ತು ಸರ್ಕಾರದ ವಿರುದ್ಧ ಸುದ್ದಿಗಳನ್ನು ಪ್ರಕಟಿಸಿ ಕೆಣಕುತಿತ್ತು.

    ಈ ಎಲ್ಲಾ ಬೆಳವಣಿಗೆ ಬಳಿಕ ಉಭಯ ರಾಷ್ಟ್ರಗಳ ಸೇನೆಗಳು ಒಮ್ಮತ ನಿರ್ಧಾರಕ್ಕೆ ಬಂದಿದ್ದು ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಒಪ್ಪಿಗೆ ನೀಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

    ಸೆಪ್ಟೆಂಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಸಮಾವೇಶದದಲ್ಲಿ ಪಾಲ್ಗೊಳ್ಳಲು ಚೀನಾ ಪ್ರವಾಸ ಹಮ್ಮಿಕೊಂಡಿದ್ದು, ಇದರ ಬೆನ್ನಲ್ಲೇ ಚೀನಾ ಸೇನೆಯನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿದ್ದು, ಭಾರತದ ರಾಜತಾಂತ್ರಿಕ ನೀತಿಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಚೀನಾ ಸೇನೆಯ ಮಾಧ್ಯಮ ವಕ್ತಾರರು ಈ ಹಿಂದೆ ಪ್ರತಿಕ್ರಿಯಿಸಿ, ಯುದ್ಧ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 1962ರ ಯುದ್ಧದಿಂದ ಭಾರತ ಪಾಠ ಕಲಿಯಲಿ. ಭಾರತ ನಿಯೋಜಿಸಿರುವ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಹೇಳಿಕೆ ನೀಡುವ ಮೂಲಕ ಕೆಣಕ್ಕಿದ್ದರು.

    ಹಣಕಾಸು ಸಚಿವ ಅರುಣ್ ಜೇಟ್ಲಿ ಚೀನಾ ನಡೆಯ ಬಗ್ಗೆ ಜೂನ್ 30ರಂದು ಪ್ರತಿಕ್ರಿಯಿಸಿ, ಚೀನಾ ನಮಗೆ ಇತಿಹಾಸವನ್ನು ನೆನಪಿಸಲು ಪ್ರಯತ್ನಿಸುತ್ತಿದೆ. 1962ರ ಭಾರತವೇ ಬೇರೆ, 2017ರ ಭಾರತವೇ ಬೇರೆ. ದೇಶದ ಭದ್ರತೆಗೆ ಸಂಬಂಧಿಸಿದಂತೆ ಭಾರತ ಯಾವುದೇ ಸವಾಲನ್ನು ಎದುರಿಸಲು ಸಿದ್ಧವಾಗಿದೆ ಎಂದು ಹೇಳುವ ಮೂಲಕ ಖಡಕ್ ತಿರುಗೇಟು ನೀಡಿದ್ದರು.

    ಜೂನ್ 16ರಂದು ಭೂತಾನ್ ಗೆ ಸೇರಿದ್ದ ಡೋಕ್ಲಾಂ ನಲ್ಲಿ ಚೀನಾ ಅತಿಕ್ರಮಣವಾಗಿ ಪ್ರವೇಶಿಸಿತ್ತು. ಈ ಪ್ರವೇಶವನ್ನು ವಿರೋಧಿಸಿ ಭಾರತೀಯ ಸೇನೆ ಅಡ್ಡವಾಗಿ ನಿಂತಿತ್ತು. ಇದರಿಂದಾಗಿ ಭಾರತ ಮತ್ತು ಚೀನಾದ ನಡುವೆ ರಾಜತಾಂತ್ರಿಕ ಸಂಬಂಧ ಸ್ವಲ್ಪ ಹಳಸಿತ್ತು.

  • ಭಾರತದ 45ನೇ ಮುಖ್ಯನ್ಯಾಯಾಧೀಶರಾಗಿ ದೀಪಕ್ ಮಿಶ್ರಾ ಪ್ರಮಾಣವಚನ

    ಭಾರತದ 45ನೇ ಮುಖ್ಯನ್ಯಾಯಾಧೀಶರಾಗಿ ದೀಪಕ್ ಮಿಶ್ರಾ ಪ್ರಮಾಣವಚನ

    ನವದೆಹಲಿ: ನ್ಯಾ. ದೀಪಕ್ ಮಿಶ್ರಾ ಅವರು ಇಂದು ಭಾರತದ 45ನೇ ಮುಖ್ಯನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‍ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಮಿಶ್ರಾ ಅವರಿಗೆ ಪ್ರಮಾಣವಚನ ಬೋಧಿಸಿದ್ರು. ದೇವರ ಹೆಸರಿನಲ್ಲಿ ಮಿಶ್ರಾ ಪ್ರಮಾಣವಚನ ಸ್ವೀಕರಿಸಿದ್ರು.

    2018ರ ಅಕ್ಟೋಬರ್ 2ವರೆಗೆ 13 ತಿಂಗಳು ಹಾಗೂ 6 ದಿನಗಳ ಕಾಲ ಮಿಶ್ರಾ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಜೆಎಸ್ ಖೆಹರ್ ಶುಕ್ರವಾರದಂದು ನಿವೃತ್ತರಾದ್ರು. ಸ್ಥಾಪಿತ ರೂಢಿಯಂತೆ ಕಳೆದ ತಿಂಗಳು ಖೆಹರ್, ಮಿಶ್ರಾ ಅವರನ್ನ ಮುಖ್ಯನ್ಯಾಯಾಧೀಶರಾಗಿ ನೇಮಿಸಿದ್ದರು.

    2011ರ ಅಕ್ಟೋಬರ್‍ನಲ್ಲಿ ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರಾಗುವುದಕ್ಕೂ ಮುನ್ನ ಮಿಶ್ರಾ ಅವರು ಪಾಟ್ನಾ ಹೈಕೋರ್ಟ್ ಹಾಗೂ ದೆಹಲಿ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ರು. 1977ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಮಿಶ್ರಾ ಒಡಿಶಾ ಹೈಕೋರ್ಟ್‍ನಲ್ಲಿ ಸಾಂವಿಧಾನಿಕ, ಸಿವಿಲ್, ಕ್ರಿಮಿನಲ್, ರೆವೆನ್ಯೂ, ಸವೀರ್ಸ್ ಮತ್ತು ಮಾರಾಟ ತೆರಿಗೆಯಲ್ಲಿ ಪ್ರಾಕ್ಟೀಸ್ ಮಾಡ್ತಿದ್ರು. 1996ರ ಜನವರಿ 17ರಂದು ಮಿಶ್ರಾ ಅವರನ್ನ ಒಡಿಶಾ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲಾಯ್ತು. ನಂತರ ಮಧ್ಯಪ್ರದೇಶ ಹೈಕೋರ್ಟ್‍ಗೆ ವರ್ಗಾವಣೆಯಾದ್ರು. 1997ರ ಡಿಸೆಂಬರ್ 19ರಂದು ಶಾಶ್ವತ ನ್ಯಾಯಾಧೀಶರಾದ್ರು.

    ಕಾವೇರಿ ಹಾಗೂ ಕೃಷ್ಣಾ ನದಿಗಳ ವಿವಾದದ ಕುರಿತು ವಿಚಾರಣೆ ನಡೆಸುತ್ತಿರುವ ಪೀಠಕ್ಕೆ ಸದ್ಯ ನ್ಯಾ. ಮಿಶ್ರಾ ಅವರು ನೇತೃತ್ವ ವಹಿಸಿಕೊಂಡಿದ್ದಾರೆ. ಅಲ್ಲದೆ ಬಿಸಿಸಿಐ ಸುಧಾರಣೆ, ಸಹಾರಾ ಕೇಸ್ ಹಾಗೂ ಇನ್ನಿತರೆ ಕೇಸ್‍ಗಳನ್ನು ಇವರು ವಿಚಾರಣೆ ನಡೆಸುತ್ತಿದ್ದಾರೆ.

    ಇಂದಿನ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವಾರು ಕೇಂದ್ರ ಮಂತ್ರಿಗಳು ಹಾಜರಿದ್ರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯಸಭಾದ ವಿರೋಧಪಕ್ಷ ನಾಯಕ ಗುಲಾಮ್ ನಬೀ ಆಜಾದ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ರು.

  • ಭಾರತಕ್ಕೆ ಸರಣಿ: ಲಂಕಾ ಆಟಗಾರರ ವಿರುದ್ಧ ರೊಚ್ಚಿಗೆದ್ದ ಪ್ರೇಕ್ಷಕರು

    ಭಾರತಕ್ಕೆ ಸರಣಿ: ಲಂಕಾ ಆಟಗಾರರ ವಿರುದ್ಧ ರೊಚ್ಚಿಗೆದ್ದ ಪ್ರೇಕ್ಷಕರು

    ಕ್ಯಾಂಡಿ: ಶ್ರೀಲಂಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಜಯಗಳಿಸುವ ಮೂಲಕ ಇನ್ನು 2 ಪಂದ್ಯ ಬಾಕಿ ಇರುವಂತೆಯೇ ಮೈಕ್ರೋಮ್ಯಾಕ್ಸ್ ಸರಣಿಯನ್ನು ಜಯಗಳಿಸಿದೆ.

    218 ರನ್‍ಗಳ ಸುಲಭ ಸವಾಲನ್ನು ಪಡೆದ ಭಾರತ ರೋಹಿತ್ ಶರ್ಮಾ ಅವರ ಆಕರ್ಷಕ ಶತಕ, ಧೋನಿ ಅರ್ಧಶತಕ ದಿಂದಾಗಿ ಜಯಗಳಿಸಿತು.

    44 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದ್ದಾಗ ಶ್ರೀಲಂಕಾ ಆಟಗಾರರ ಕಳಪೆ ಪ್ರದರ್ಶನಕ್ಕೆ ರೊಚ್ಚಿಗೆದ್ದ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಾಟಲಿಗಳನ್ನು ಎಸೆದು ಆಕ್ರೋಶವನ್ನು ವ್ಯಕ್ತಪಡಿಸಿದರು. ಬೌಂಡರಿ ಗೆರೆಯ ಬಳಿ ಬಾಟಲಿಗಳನ್ನು ಎಸೆದ ಹಿನ್ನೆಲೆಯಲ್ಲಿ ರೆಫ್ರಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದರು.

    ಈ ವೇಳೆ ಬಾಟಲಿಗಳನ್ನು ಎಸೆದ ಸ್ಥಳದಲ್ಲಿದ್ದ ಪ್ರೇಕ್ಷಕರನ್ನು ಖಾಲಿ ಮಾಡಿದ ನಂತರ ಪಂದ್ಯ ಮತ್ತೆ 35 ನಿಮಿಷದ ಬಳಿಕ ಆರಂಭವಾಯಿತು. ಅಂತಿಮವಾಗಿ 45.1 ಓವರ್ ಗಳಲ್ಲಿ 218 ರನ್ ಹೊಡೆಯುವ ಮೂಲಕ ಭಾರತ ಪಂದ್ಯವನ್ನು ಗೆದ್ದುಕೊಂಡಿತು.

    15.1 ಓವರ್ ಗಳಲ್ಲಿ 61 ರನ್ ಗಳಿಸಿದ್ದಾಗ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ರೋಹಿತ್ ಶರ್ಮಾ ಮತ್ತು ಧೋನಿ ಮುರಿಯದ 5ನೇ ವಿಕೆಟ್‍ಗೆ 157 ರನ್ ಜೊತೆಯಾಟವಾಡುವ ಮೂಲಕ ಭಾರತಕ್ಕೆ ವಿಜಯವನ್ನು ತಂದಿಟ್ಟರು.

    50 ಎಸೆತದಲ್ಲಿ ಅರ್ಧಶತಕ ಹೊಡೆದ ರೋಹಿತ್ 118 ಎಸೆತದಲ್ಲಿ ಕ್ರಿಕೆಟ್ ಬಾಳ್ವೆಯ 12 ನೇ ಶತಕ ಹೊಡೆದರು. ಅಂತಿಮವಾಗಿ ರೋಹಿತ್ ಶರ್ಮಾ 124 ರನ್(145 ಎಸೆತ, 16 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೇ ಉಳಿದರು. 74 ಎಸೆತದಲ್ಲಿ ಅರ್ಧಶತ ಹೊಡೆದ ಧೋನಿ ಅಂತಿಮವಾಗಿ 67ರನ್(86 ಎಸೆತ, 4 ಬೌಂಡರಿ, 1ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಲಂಕಾವನ್ನು ಬೂಮ್ರಾ ಕಟ್ಟಿ ಹಾಕಿದ್ದ ಪರಿಣಾಮ 9 ವಿಕೆಟ್ ನಷ್ಟಕ್ಕೆ 217 ರನ್‍ಗಳಿಸಿತು. ಲಂಕಾ ಪರ ತಿರಮಣೆ 80 ರನ್(105 ಎಸೆತ, 5 ಬೌಂಡರಿ, 1 ಸಿಕ್ಸರ್) ಆರಂಭಿಕ ಆಟಗಾರ ದಿನೇಶ್ ಚಾಂಡಿಮಲ್ 36 ರನ್, ಶ್ರೀವರ್ಧನ 29 ರನ್ ಹೊಡೆದರು.

    ಭಾರತದ ಪರ ಜಸ್‍ಪ್ರಿತ್ ಬುಮ್ರಾ 27 ರನ್ ನೀಡಿ 5 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯಾ, ಅಕ್ಷರ್ ಪಟೇಲ್, ಕೇದಾರ್ ಜಾದವ್ ತಲಾ ಒಂದೊಂದು ವಿಕೆಟ್ ಪಡೆದರು.

     

    https://twitter.com/i_m_odd/status/901849873892261888

     

    https://twitter.com/Priya0304/status/901854358366707713

     

  • ಏಕದಿನ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆಯುವ ಸನಿಹದಲ್ಲಿ  ಧೋನಿ

    ಏಕದಿನ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಧೋನಿ

    ಕ್ಯಾಂಡಿ: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆಯುವ ಹೊಸ್ತಿಲಿನಲ್ಲಿದ್ದಾರೆ.

    ಹೌದು. ಇನ್ನು ಒಂದು ಸ್ಟಂಪ್ ಔಟ್ ಮಾಡಿದರೆ ಏಕದಿನ ಕ್ರಿಕೆಟ್ ನಲ್ಲಿ 100 ಸ್ಟಂಪ್ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಲಿದ್ದಾರೆ.

    ಕ್ಯಾಂಡಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಚಹಲ್ ಬೌಲಿಂಗ್ ನಲ್ಲಿ ಗುಣತಿಲಕ ಅವರನ್ನು ಸ್ಟಂಪ್ ಮಾಡುವ ಮೂಲಕ ಈ ವಿಶ್ವದಾಖಲೆ ಸಾಧನೆಯ ಸಮೀಪ ಬಂದಿದ್ದು ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

    ಇಂದಿನ ಪಂದ್ಯ ಸೇರಿದಂತೆ ಧೋನಿ ಒಟ್ಟು 298 ಪಂದ್ಯಗಳ 293 ಇನ್ನಿಂಗ್ಸ್ ಮೂಲಕ 99 ಸ್ಟಪ್ ಔಟ್ ಮಾಡಿದ್ದಾರೆ. 278 ಕ್ಯಾಚ್ ಗಳನ್ನು ಪಡೆಯುವ ಮೂಲಕ ಒಟ್ಟು 377 ಮಂದಿಯನ್ನು ಧೋನಿ ಔಟ್ ಮಾಡಿದ್ದಾರೆ.

    ಏಕದಿನದ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್ ಮಾಡಿರೋ ಕೀಪರ್‍ಗಳ ಪಟ್ಟಿಯಲ್ಲಿ 99 ಸ್ಟಂಪ್ ಮಾಡುವ ಮೂಲಕ ಧೋನಿ ಮತ್ತು ಕುಮಾರ ಸಂಗಕ್ಕಾರ(404 ಪಂದ್ಯ, 353 ಇನ್ನಿಂಗ್ಸ್) ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. 75 ಸ್ಟಂಪ್ ಔಟ್ ಮಾಡುವ ಮೂಲಕ ಶ್ರೀಲಂಕಾದ ರಮೇಶ್ ಕಲುವಿತರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಮೋಯಿನ್ ಖಾನ್ 73 ಸ್ಟಂಪ್ ಔಟ್ ಮಾಡಿದ್ದರೆ, ಆಸ್ಟ್ರೇಲಿಯಾದ ಆಡಂ ಗಿಲ್‍ಕ್ರಿಸ್ಟ್ 55 ಸ್ಟಂಪ್ ಔಟ್ ಮಾಡುವ ಮೂಲಕ ನಾಲ್ಕನೇಯ ಸ್ಥಾನದಲ್ಲಿದ್ದಾರೆ.

    4ನೇ ಸ್ಥಾನ: ಅತಿ ಹೆಚ್ಚು ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ ವಿಕೆಟ್ ಕೀಪರ್‍ಗಳ ಪಟ್ಟಿಯಲ್ಲಿ ಧೋನಿ ನಾಲ್ಕನೇಯ ಸ್ಥಾನದಲ್ಲಿದ್ದಾರೆ. ಸಂಗಕ್ಕಾರ 482(383 ಕ್ಯಾಚ್, 99 ಸ್ಟಂಪ್) ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗಿಲ್‍ಕ್ರಿಸ್ಟ್ 472(417 ಕ್ಯಾಚ್, 55 ಸ್ಟಂಪ್) ಇದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ 424 ಬಲಿ(402 ಕ್ಯಾಚ್, 22 ಸ್ಟಂಪ್) ಪಡೆಯುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

    ಸದ್ಯ ಒಟ್ಟು 377 ಮಂದಿಯನ್ನು ಔಟ್ ಮಾಡಿರುವ ಧೋನಿ 2019ರ ವಿಶ್ವಕಪ್ ಕ್ರಿಕೆಟ್‍ವರೆಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದರೆ ಸಂಗಕ್ಕಾರ ನಿರ್ಮಿಸಿದ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.

    ಭಾರತದಲ್ಲಿ ಯಾರು ಎಷ್ಟು? ಭಾರತದ ಪರವಾಗಿ ನಯನ್ ಮೊಂಗಿಯಾ 44 ಸ್ಟಂಪ್ ಔಟ್ ಮಾಡಿದ್ದರೆ, ಕಿರಣ್ ಮೊರೆ 27 ಸ್ಟಂಪ್ ಔಟ್ ಮಾಡಿದ್ದಾರೆ. ಚಂದ್ರಕಾಂತ್ ಪಂಡಿತ್ 15 ಸ್ಟಂಪ್ ಮಾಡಿದ್ದರೆ, ರಾಹುಲ್ ದ್ರಾವಿಡ್ 14 ಸ್ಟಂಪ್ ಔಟ್ ಮಾಡಿದ್ದಾರೆ.

    ಇದನ್ನೂ ಓದಿ:ಒಂದೇ ಓವರ್ ನಲ್ಲಿ ಸಿಕ್ಸರ್, ಬೌಂಡರಿ ಚಚ್ಚಿ ಕಪಿಲ್ ದೇವ್ ದಾಖಲೆ ಮುರಿದ ಪಾಂಡ್ಯ

    https://youtu.be/ZTprzduNDDk

    https://youtu.be/ULWBPEngbpk

    https://youtu.be/B8kTz5cnvgo