Tag: india

  • ಲೆಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

    ಲೆಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅರ್ಜೆಂಟೀನಾ ಫುಟ್‍ಬಾಲ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ಅವರನ್ನು ಹಿಂದಿಕ್ಕಿದ್ದಾರೆ.

    ಫೋರ್ಬ್ಸ್ ನಿಯತಕಾಲಿಕೆ ಬುಧವಾರ ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾಪಟುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕೊಹ್ಲಿ 7ನೇ ಸ್ಥಾನ ಪಡೆದರೆ, ಮೆಸ್ಸಿ 9ನೇ ಸ್ಥಾನ ಪಡೆದಿದ್ದಾರೆ.

    ಆಟಗಾರರ ವೇತನ, ಬೋನಸ್ ಸೇರಿದಂತೆ ಎಲ್ಲ ಹೂಡಿಕೆಗಳಿಂದ ಬರುವ ಆದಾಯವನ್ನು ಲೆಕ್ಕಹಾಕಿ ಈ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಟೆನ್ನಿಸ್ ಆಟಗಾರ ಸ್ವಿಜರ್‍ಲ್ಯಾಂಡಿನ  ರೋಜರ್ ಫೆಡರರ್ ಮೊದಲ ಸ್ಥಾನ ಪಡೆದಿದ್ದಾರೆ.

    ಟಾಪ್ ಆಟಗಾರರು ಯಾರು?
    1. ರೋಜರ್ ಫೆಡರರ್ – 37.2 ದಶಲಕ್ಷ ಡಾಲರ್ (ಅಂದಾಜು 241 ಕೋಟಿ ರೂ.)
    2. ಲೆಬ್ರೋನ್ ಜೇಮ್ಸ್ – 33.4 ದಶಲಕ್ಷ ಡಾಲರ್ (ಅಂದಾಜು 216 ಕೋಟಿ ರೂ.)
    3. ಉಸೇನ್ ಬೋಲ್ಟ್ – 27 ದಶಲಕ್ಷ ಡಾಲರ್ (ಅಂದಾಜು 175 ಕೋಟಿ ರೂ.)
    4. ಕ್ರಿಶ್ಚಿಯಾನೋ ರೊನಾಲ್ಡೊ – 21.5 ದಶಲಕ್ಷ ಡಾಲರ್ (ಅಂದಾಜು 139 ಕೋಟಿ ರೂ.)

    5. ಫಿಲ್ ಮೈಕ್ಲೆಸನ್ – 19.6 ದಶಲಕ್ಷ ಡಾಲರ್(ಅಂದಾಜು127 ಕೋಟಿ ರೂ.)
    6. ಟೈಗರ್ ವುಡ್ಸ್ – 16.6 ದಶಲಕ್ಷ ಡಾಲರ್(ಅಂದಾಜು107 ಕೋಟಿ ರೂ.)
    7. ವಿರಾಟ್ ಕೊಹ್ಲಿ – 14.5 ದಶಲಕ್ಷ ಡಾಲರ್(ಅಂದಾಜು 94 ಕೋಟಿ ರೂ.)
    8. ರೋರಿ ಮೆಕ್ರಾಯ್ – 13.6 ದಶಲಕ್ಷ ಡಾಲರ್(ಅಂದಾಜು 88 ಕೋಟಿ ರೂ.)
    8. ಲಿಯೋನೆಲ್ ಮೆಸ್ಸಿ -13.5 ದಶಲಕ್ಷ ಡಾಲರ್(ಅಂದಾಜು 87 ಕೋಟಿ ರೂ.)
    10. ಸ್ಟೆಫ್ ಕರ್ರಿ – 13.4 ದಶಲಕ್ಷ ಡಾಲರ್(ಅಂದಾಜು 86 ಕೋಟಿ ರೂ.)

     

  • ಭಾರತಕ್ಕೆ 6 ವಿಕೆಟ್‍ಗಳ ಜಯ: ಸರಣಿ ಜೀವಂತ

    ಭಾರತಕ್ಕೆ 6 ವಿಕೆಟ್‍ಗಳ ಜಯ: ಸರಣಿ ಜೀವಂತ

    ಪುಣೆ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ ಆರು ವಿಕೆಟ್ ಗಳಿಂದ ಜಯಗಳಿಸಿದೆ.

    ಗೆಲ್ಲಲು 231 ರನ್ ಗಳ ಸುಲಭ ಸವಾಲನ್ನು ಪಡೆದ ಭಾರತ 46 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 232 ರನ್ ಹೊಡೆಯುವ ಮೂಲಕ ಗುರಿ ಮುಟ್ಟಿತು.

    ಭಾರತದ ಪರ ಶಿಖರ್ ಧವನ್ 68 ರನ್(84 ಎಸೆತ, 5 ಬೌಂಡರಿ, 2 ಸಿಕ್ಸರ್), ದಿನೇಶ್ ಕಾರ್ತಿಕ್ ಔಟಾಗದೇ 64 ರನ್( 92 ಎಸೆತ, 4 ಬೌಂಡರಿ) ವಿರಾಟ್ ಕೊಹ್ಲಿ 29 ರನ್(29 ಎಸೆತ, 3 ಬೌಂಡರಿ, 1 ಸಿಕ್ಸರ್, ಹಾರ್ದಿಕ್ ಪಾಂಡ್ಯ 30 ರನ್ (31 ಎಸೆತ, 2 ಬೌಂಡರಿ, 1 ಸಿಕ್ಸರ್), ಧೋನಿ ಔಟಾಗದೇ 18 ರನ್( 21 ಎಸೆತ, 3 ಬೌಂಡರಿ) ಹೊಡೆದರು.

    ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತ್ತು.

    ನ್ಯೂಜಿಲೆಂಡ್ ಪರ ಟಾಮ್ ಲಥಾಮ್ 38, ಹೆನ್ರಿ ನಿಕೊಲ್ಸ್ 42, ಕೊಲಿನ್ ಡೆ ಗ್ರಾಡ್‍ಹೋಮ್ 41, ಸ್ಯಾಟ್ನಾರ್ 29 ರನ್ ಹೊಡೆದರು. ಭಾರತದ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಬೂಮ್ರಾ ಮತ್ತು ಚಹಲ್ ತಲಾ 2 ವಿಕೆಟ್ ಪಡೆದರು. ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

    ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 6 ವಿಕೆಟ್ ಗಳ ಗೆಲುವು ಸಾಧಿಸಿತ್ತು. ಈಗ ಈ ಪಂದ್ಯವನ್ನು ಭಾರತ ಜಯಗಳಿಸಿದ್ದು, ಸರಣಿಯ ಕೊನೆಯ ಪಂದ್ಯ ಅಕ್ಟೋಬರ್ 29ರ ಭಾನುವಾರ ಕಾನ್ಪುರದಲ್ಲಿ ನಡೆಯಲಿದೆ.

     

  • 2ನೇ ಏಕದಿನ ಗೆಲ್ಲಲು ಟೀಂ ಇಂಡಿಯಾಗೆ 231 ರನ್ ಗುರಿ

    2ನೇ ಏಕದಿನ ಗೆಲ್ಲಲು ಟೀಂ ಇಂಡಿಯಾಗೆ 231 ರನ್ ಗುರಿ

    ಪುಣೆ: ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ನ್ಯೂಜಿಲೆಂಡ್ 231 ರನ್ ಗಳ ಗುರಿಯನ್ನು ನೀಡಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿದೆ.

    ನ್ಯೂಜಿಲೆಂಡ್ ಪರ ಟಾಮ್ ಲಥಾಮ್ 38, ಹೆನ್ರಿ ನಿಕೊಲ್ಸ್ 42, ಕೊಲಿನ್ ಡೆ ಗ್ರಾಡ್‍ಹೋಮ್ 41, ಸ್ಯಾಟ್ನಾರ್ 29 ರನ್ ಹೊಡೆದರು. ಭಾರತದ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಬೂಮ್ರಾ ಮತ್ತು ಚಹಲ್ ತಲಾ 2 ವಿಕೆಟ್ ಪಡೆದರು. ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

    ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 6 ವಿಕೆಟ್ ಗಳ ಗೆಲುವು ಸಾಧಿಸಿತ್ತು.

  • ‘ಬುಕ್ಕಿ’ ಮುಂದೆ 340 ರನ್ ಹೊಡೆದ್ರೂ ಚೇಸ್ ಮಾಡಬಹುದು ಅಂದಿದ್ದ ಪುಣೆ ಕ್ಯೂರೇಟರ್ ಅಮಾನತು

    ‘ಬುಕ್ಕಿ’ ಮುಂದೆ 340 ರನ್ ಹೊಡೆದ್ರೂ ಚೇಸ್ ಮಾಡಬಹುದು ಅಂದಿದ್ದ ಪುಣೆ ಕ್ಯೂರೇಟರ್ ಅಮಾನತು

    ಪುಣೆ: ಭಾರತ ನ್ಯೂಜಿಲೆಂಡ್ ಎರಡನೇ ಪಂದ್ಯಕ್ಕೂ ಮುನ್ನ ಪುಣೆ ಪಿಚ್ ಕ್ಯೂರೇಟರ್ ಪಾಂಡುರಂಗ ಸಲಗಾಂವ್ಕರ್ ಅವರನ್ನು ಬಿಸಿಸಿಐ ಸೂಚನೆ ಮೇರೆಗೆ ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಅಮಾನತುಗೊಳಿಸಿದೆ.

    ಇಂಡಿಯಾ ಟುಡೇ ವಾಹಿನಿ ಬುಕ್ಕಿಗಳ ರೂಪದಲ್ಲಿ ತೆರಳಿ ನಡೆಸಿದ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಸಲ್‍ಗಾಂವ್ಕರ್ ಪಿಚ್ ಸ್ವಭಾವ ಏನು, ಪಿಚ್ ಹೇಗೆ ಇರಲಿದೆ ಎನ್ನುವುದನ್ನು ವಿವರಿಸಿದ್ದರು.

    ಈ ಸುದ್ದಿ ಬುಧವಾರ ಬೆಳಗ್ಗೆ ಪ್ರಸಾರವಾಗುತ್ತಿದ್ದಂತೆ ಬಿಸಿಸಿಐ ಶಿಸ್ತುಕ್ರಮವನ್ನು ಕೈಗೊಂಡಿದೆ. ವೇಷಮರೆಸಿ ಬಂದಿದ್ದ ವಾಹಿನಿಯ ವರದಿಗಾರರು ತಮಗೆ ಬೇಕಾದಂತೆ ಪಿಚ್ ನಿರ್ಮಿಸಬೇಕೆಂದು ಹೇಳಿಕೊಂಡಿದ್ದರು. ಇದಕ್ಕೆ ಸಲ್‍ಗಾಂವ್ಕರ್ ಒಪ್ಪಿದ್ದರು.

    ಐಸಿಸಿ ನಿಯಮಗಳ ಅನ್ವಯ ಪಂದ್ಯ ಆರಂಭಕ್ಕೂ ಮುನ್ನ ಯಾವುದೇ ಕಾರಣಕ್ಕೂ ಪಿಚ್ ನ ಕುರಿತು ಮಾಹಿತಿಯನ್ನು ಕ್ಯೂರೇಟರ್ ಯಾರಿಗೂ ನೀಡುವಂತಿಲ್ಲ. ಆದರೆ ಸಲ್‍ಗಾಂವ್ಕರ್ ಈ ಪಿಚ್ ನಲ್ಲಿ 337 -340 ರನ್ ಪೇರಿಸಬಹುದು. 340 ರನ್ ಹೊಡೆದರೂ ಇದನ್ನು ಚೇಸ್ ಮಾಡಬಹುದು ಎಂದು ತಿಳಿಸಿದ್ದರು.

  • ಟಿವಿ ಟಿಆರ್‍ಪಿಯಲ್ಲೂ ಹೊಸ ದಾಖಲೆ ಬರೆದ ಬಾಹುಬಲಿ

    ಟಿವಿ ಟಿಆರ್‍ಪಿಯಲ್ಲೂ ಹೊಸ ದಾಖಲೆ ಬರೆದ ಬಾಹುಬಲಿ

    ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಬಾಹುಬಲಿ ಈಗ ಟಿವಿ ರೇಟಿಂಗ್‍ನಲ್ಲೂ ದಾಖಲೆ ಬರೆದಿದೆ.

    ಭಾರತದ ಟಿವಿ ವಾಹಿನಿಗಳಲ್ಲಿ ರೇಟಿಂಗ್ ನೀಡುವ ಲ್ಲಿ ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) 41 ವಾರದ ಟಿಆರ್‍ಪಿಯನ್ನು ಬಿಡುಗಡೆ ಮಾಡಿ ಈ ವಿಚಾರವನ್ನು ತಿಳಿಸಿದೆ.

    ಅಕ್ಟೋಬರ್ 8 ರಂದು ಸೋನಿ ಮ್ಯಾಕ್ಸ್ ವಾಹಿನಿಯಲ್ಲಿ ಬಾಹುಬಲಿ ಹಿಂದಿ ಸಿನಿಮಾ ಪ್ರಸಾರವಾಗಿತ್ತು. ಈ ಸಿನಿಮಾಗೆ 26054 ಟಿಆರ್‍ಪಿ ಸಿಗುವ ಮೂಲಕ ದೇಶದ ಟಿವಿ ಇತಿಹಾಸದಲ್ಲೇ ಅತಿಹೆಚ್ಚು ರೇಟಿಂಗ್ ಪಡೆದ ಹಿಂದಿ ಸಿನಿಮಾ ಎಂದು ಬಾರ್ಕ್ ಹೇಳಿದೆ. ಈ ಹಿಂದೆ ಸ್ಟಾರ್ ಗೋಲ್ಡ್ ವಾಹಿನಿಯಲ್ಲಿ ಸಲ್ಮಾನ್ ಖಾನ್ ಅಭಿನಯದ ಟ್ಯೂಬ್ ಲೈಟ್ 5195 ಟಿಆರ್‍ಪಿ ಗಳಿಸಿತ್ತು.

    ಹೆಚ್ಚು ಟಿಆರ್‍ಪಿ ಪಡೆದುಕೊಂಡು 5 ಹಿಂದಿ ಚಿತ್ರಗಳು: ಬಾಹುಬಲಿ(26054), ಟ್ಯೂಬ್‍ಲೈಟ್(5195), ಮೈ ಹೂನ್ ಸೂರ್ಯ ಸಿಂಗಂ 2(5030), ಸೂರ್ಯವಂಶ(4456), ಸನ್ ಆಫ್ ಸತ್ಯಮೂರ್ತಿ(4351) ಟಿಆರ್‍ಪಿ ಗಳಿಸಿತ್ತು.

    ರಾಜಮೌಳಿ ನಿರ್ದೇಶನದ ಬಾಹಬಲಿ 2 2017ರ ಏಪ್ರಿಲ್ 28 ರಂದು ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ರಮ್ಯಕೃಷ್ಣ, ಸತ್ಯರಾಜ್ ಅಭಿನಯದ ಈ ಚಿತ್ರ 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದರೆ ಬಾಕ್ಸ್ ಆಫೀಸ್ ನಲ್ಲಿ 1725 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

    ಇದನ್ನೂ ಓದಿ: ಬಾಹುಬಲಿ-2 ಚಿತ್ರದಿಂದ ಕರ್ನಾಟಕಕ್ಕೆ ಕೋಟಿ ಕೋಟಿ ಆದಾಯ

    ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ

     

  • ಡಿ.9, 14ಕ್ಕೆ ಗುಜರಾತ್ ಚುನಾವಣೆ, 18ಕ್ಕೆ ಫಲಿತಾಂಶ

    ಡಿ.9, 14ಕ್ಕೆ ಗುಜರಾತ್ ಚುನಾವಣೆ, 18ಕ್ಕೆ ಫಲಿತಾಂಶ

    ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. 2 ಹಂತದಲ್ಲಿ ಚುನಾವಣೆ ನಡೆಯಲಿದೆ.

    ದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜ್ಯೋತಿ, ಮೊದಲ ಹಂತದ ಮತದಾನ ಡಿಸೆಂಬರ್ 9ರಂದು ನಡೆದರೆ, 2ನೇ ಹಂತದ ಚುನಾವಣೆ ಡಿಸೆಂಬರ್ 14ರಂದು ನಡೆಯಲಿದೆ ಎಂದು ತಿಳಿಸಿದರು.

    ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 50128 ಮತದಾನ ಕೇಂದ್ರಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಚುನಾವಣೆಯಲ್ಲಿ ಮತ ದೃಢೀಕರಿಸುವ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುವುದು ಎಂದರು.

    ಗುಜರಾತ್ ನ ಒಟ್ಟು 182 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಪ್ರತಿ ಅಭ್ಯರ್ಥಿಗೆ ವೆಚ್ಚದ ಮಿತಿಯನ್ನು 28 ಲಕ್ಷ ರೂ. ಎಂದು ನಿಗದಿಗೊಳಿಸಲಾಗಿದೆ ಎಂದರು.

     

  • ನ್ಯೂಜಿಲೆಂಡ್ ವಿರುದ್ಧದ ಟಿ 20, ಶ್ರೀಲಂಕಾ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ

    ನ್ಯೂಜಿಲೆಂಡ್ ವಿರುದ್ಧದ ಟಿ 20, ಶ್ರೀಲಂಕಾ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ

    ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಟೆಸ್ಟ್ ತಂಡಕ್ಕೆ ಮುರಳಿ ವಿಜಯ್ ಮರಳಿದ್ದಾರೆ.

    ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ತಂಡವನ್ನು ಆಯ್ಕೆ ಮಾಡಿದ್ದು, ಟಿ20 ತಂಡದಲ್ಲಿ ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಮನೀಷ್ ಪಾಂಡೆ ಸ್ಥಾನ ಪಡೆದಿದ್ದಾರೆ. ಈ ಹಿಂದೆ ವಿಶ್ರಾಂತಿ ನೀಡಲಾಗಿದ್ದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರನ್ನು ಪುನಃ ಟೆಸ್ಟ್ ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ.

    ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಸರಣಿಯಿಂದ ವಿಶ್ರಾಂತಿ ಬೇಕೆಂದು ಕೇಳಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆದರೆ ಕೊಹ್ಲಿಗೆ ವಿಶ್ರಾಂತಿ ನೀಡದೇ ಮುಂದುವರಿಸಲಾಗಿದೆ.

    ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ:
    ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ಅಕ್ಸರ್ ಪಟೇಲ್, ಯುಜುವೇಂದ್ರ ಚಹಲ್, ಕುಲ್‍ದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬುಮ್ರಾ, ಆಶಿಶ್ ನೆಹ್ರಾ, ಮೊಹಮ್ಮದ್ ಸಿರಾಜ್.

    ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ:
    ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ (ಉಪ ನಾಯಕ), ರೋಹಿತ್ ಶರ್ಮಾ, ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್‍ದೀಪ್ ಯಾದವ್, ಹಾರ್ದಿಕ್ ಪಾಂಡ್ಯಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಈಶಾಂತ್ ಶರ್ಮಾ.

    ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯ:
    ನಮನ್ ಓಜಾ (ನಾಯಕ, ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಜೀವನ್ ಜೋತ್ ಸಿಂಗ್, ಬಿ ಸಂದೀಪ್, ತನ್ಮಯ್ ಅಗರ್‍ವಾಲ್, ಅಭಿಷೇಕ್ ಗುಪ್ತಾ, ರೋಹನ್ ಪ್ರೇಮ್, ಆಕಾಶ್ ಭಂಡಾರಿ, ಜಲಜ್ ಸಕ್ಸೇನಾ, ಸಿವಿ ಮಿಲಿಂದ್, ಅವೇಶ್ ಖಾನ್, ಸಂದೀಪ್ ವಾರಿಯರ್, ರವಿ ಕಿರಣ್.

    ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ 20 ಪಂದ್ಯ ನವೆಂಬರ್ ಒಂದರನ್ನು ನಡೆಯಲಿದ್ದು, ಮೂರನೇ ಮತ್ತು ಕೊನೆಯ ಪಂದ್ಯ ನವೆಂಬರ್ 7ರಂದು ನಡೆಯಲಿದೆ. ನವೆಂಬರ್ 16ರಿಂದ ಭಾರತ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಕೋಲ್ಕತ್ತಾದಲ್ಲಿ ನಡೆಯಲಿದೆ.

  • ಭಾರತದ ವಿರುದ್ಧ 6 ವಿಕೆಟ್‍ಗಳಿಂದ ಗೆದ್ದು ವಾಂಖೆಡೆಯಲ್ಲಿ ದಾಖಲೆ ನಿರ್ಮಿಸಿದ ಕಿವೀಸ್

    ಭಾರತದ ವಿರುದ್ಧ 6 ವಿಕೆಟ್‍ಗಳಿಂದ ಗೆದ್ದು ವಾಂಖೆಡೆಯಲ್ಲಿ ದಾಖಲೆ ನಿರ್ಮಿಸಿದ ಕಿವೀಸ್

    ಮುಂಬೈ: ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ 6 ವಿಕೆಟ್ ಗಳಿಂದ ಜಯಗಳಿಸುವ ಮೂಲಕ ನ್ಯೂಜಿಲೆಂಡ್ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಗೆಲ್ಲಲು 281 ರನ್ ಗಳ ಸುಲಭ ಸವಾಲನ್ನು ಪಡೆದ ನ್ಯೂಜಿಲೆಂಡ್ ಟಾಮ್ ಲಥಾಮ್ ಶತಕ ಮತ್ತು ರಾಸ್ ಟೇಲರ್ ಅವರ ಅರ್ಧಶತಕದಿಂದಾಗಿ 49 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 284 ರನ್ ಹೊಡೆಯುವ ಮೂಲಕ ಗುರಿ ಮುಟ್ಟಿತು.

    ನಾಲ್ಕನೇ ವಿಕೆಟ್ ಗೆ ಟಾಮ್ ಲಥಾಮ್ ಮತ್ತು ರಾಸ್ ಟೇಲರ್ 200 ರನ್‍ಗಳ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ತಂಡದ ಮೊತ್ತ 280 ಆಗಿದ್ದಾಗ 95 ರನ್(100 ಎಸೆತ, 8 ಬೌಂಡರಿ) ಗಳಿಸಿದ್ದ ರಾಸ್ ಟೇಲರ್ ಕ್ಯಾಚ್ ನೀಡಿ ಔಟಾದರು. ಟಾಮ್ ಲಥಾಮ್ ಔಟಾಗದೇ 103 ರನ್( 102 ಎಸೆತ, 8 ಬೌಂಡರಿ, 2 ಸಿಕ್ಸರ್) ಸಿಡಿಸಿದರು.

    ಆರಂಭಿಕ ಆಟಗಾರರಾದ ಮಾರ್ಟಿನ್ ಗುಪ್ಟಿಲ್ 32 ರನ್, ಕಾಲಿನ್ ಮುನ್ರೋ 28 ರನ್ ಗಳಿಸಿ ಔಟಾದರು. ಭುವನೇಶ್ವರ್ ಕುಮಾರ್, ಬುಮ್ರಾ, ಕಲದೀಪ್ ಯಾದವ್ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

    ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ನಾಯಕ ವಿರಾಟ್ ಕೊಹ್ಲಿ 121 ರನ್(125 ಎಸೆತ, 9 ಬೌಂಡರಿ, 2 ಸಿಕ್ಸರ್) ಹೊಡೆದರೆ, ಕಾರ್ತಿಕ್ 37, ಧೋನಿ 25, ಭುವನೇಶ್ವರ್ ಕುಮಾರ್ 26 ರನ್ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿತ್ತು.

    ಈ ಪಂದ್ಯವನ್ನು ಗೆಲ್ಲುವ ಮೂಲಕ ವಾಂಖೆಡೆಯಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿ ಪಂದ್ಯ ಗೆದ್ದುಕೊಂಡ ಸಾಧನೆಯನ್ನು ನ್ಯೂಜಿಲೆಂಡ್ ನಿರ್ಮಿಸಿತು. ಈ ಹಿಂದೆ 2011ರ ವಿಶ್ವಕಪ್ ಫೈನಲ್ ನಲ್ಲಿ ಭಾರತ ಶ್ರೀಲಂಕಾ ವಿರುದ್ಧ 4 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತ್ತು. ಎರಡನೇ ಏಕದಿನ ಪಂದ್ಯ ಪುಣೆಯಲ್ಲಿ ಅಕ್ಟೋಬರ್ 25 ರಂದು ನಡೆಯಲಿದೆ.

    ಇದನ್ನೂ ಓದಿ: 200ನೇ ಪಂದ್ಯದಲ್ಲಿ ಶತಕ ಸಿಡಿಸಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟ ರನ್ ಮೆಷಿನ್!

  • 10 ವರ್ಷದ ಬಳಿಕ ಏಷ್ಯಾ ಕಪ್ ಹಾಕಿ ಗೆದ್ದ ಭಾರತ

    10 ವರ್ಷದ ಬಳಿಕ ಏಷ್ಯಾ ಕಪ್ ಹಾಕಿ ಗೆದ್ದ ಭಾರತ

    ಢಾಕಾ: 10 ವರ್ಷದ ಬಳಿಕ ಭಾರತದ ಹಾಕಿ ತಂಡ ಏಷ್ಯಾ ಕಪ್ ಗೆದ್ದು ಕೊಂಡಿದೆ. ಮಲೇಷ್ಯಾ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಭಾರತ ಗೆಲುವಿನ ನಗೆ ಬೀರಿದೆ.

    ಪಂದ್ಯದ ಆರಂಭದ ಮೂರು ನಿಮಿಷದಲ್ಲಿಯೇ ರಮಣ್ ದೀಪ್ ಸಿಂಗ್ ಮೊದಲ ಗೋಲು ಬಾರಿಸಿದರೆ, 29ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ಇನ್ನೊಂದು ಗೋಲು ಬಾರಿಸುವ ಮೂಲಕ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 50ನೇ ನಿಮಿಷದಲ್ಲಿ  ಶಹರಿಲ್ ಸಬಾಹ್ ಅವರು ಒಂದು ಗೋಲು ಹೊಡೆಯುವ ಮೂಲಕ ಮಲೇಷ್ಯಾ ಖಾತೆ ತೆರೆಯಿತು.

    2003ರಲ್ಲಿ ಕೌಲಾಲಾಂಪುರ್‍ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು 4-2 ಗೋಲುಗಳಿಂದ ಮಣಿಸಿದ್ದ ಭಾರತ 2007ರಲ್ಲಿ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 7-2 ಅಂತರದಲ್ಲಿ ಮಣಿಸಿ ಎರಡನೇ ಬಾರಿ ಏಷ್ಯಾ ಕಪ್ ಗೆದ್ದುಕೊಂಡಿತ್ತು.

    ದಕ್ಷಿಣ ಕೊರಿಯಾವನ್ನು 6-3 ಗೋಲುಗಳ ಅಂತರದಿಂದ ಪರಾಭವಗೊಳಿಸಿ ಪಾಕಿಸ್ತಾನ ಕಂಚು ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಅಜಾಸ್ ಅಹ್ಮದ್ ಹ್ಯಾಟ್ರಿಕ್ ಗೋಲು ಹೊಡೆದಿದ್ದರು.

     

  • ಭಾರತದಲ್ಲಿ ಎಲ್ಲಾ 5 ಸರಣಿ ಸೋತಿದೆ ನ್ಯೂಜಿಲೆಂಡ್! – ಭಾನುವಾರ ಮೊದಲ ಒನ್ ಡೇ ಮ್ಯಾಚ್

    ಭಾರತದಲ್ಲಿ ಎಲ್ಲಾ 5 ಸರಣಿ ಸೋತಿದೆ ನ್ಯೂಜಿಲೆಂಡ್! – ಭಾನುವಾರ ಮೊದಲ ಒನ್ ಡೇ ಮ್ಯಾಚ್

    ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ 3 ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ಭಾನುವಾರ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಎರಡೂ ತಂಡಗಳ ಮುಂಬೈನಲ್ಲಿ ಬೀಡು ಬಿಟ್ಟಿದ್ದು ಮೊದಲ ಮುಖಾಮುಖಿಗೆ ಪ್ರಾಕ್ಟೀಸ್ ನಡೆಸುತ್ತಿದ್ದಾರೆ.

    ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾದ ಸದ್ಯದ ಫಾರ್ಮ್ ಹಾಗೂ ನ್ಯೂಜಿಲೆಂಡ್ ತಂಡ ಇದುವರೆಗೆ ಭಾರತದಲ್ಲಿ ಮಾಡಿದ ಸಾಧನೆ ನೋಡಿದರೆ ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ತಂಡ ಎನ್ನಬಹುದು. ಕಾರಣ ಇದುವರೆಗೆ ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಭಾರತದಲ್ಲಿ ಆಡಿದ 32 ಪಂದ್ಯಗಳಲ್ಲಿ ಕೇವಲ 7 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಭಾರತ 24 ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿದೆ. ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದಿರಲಿಲ್ಲ. 1987ರಿಂದ ನ್ಯೂಜಿಲೆಂಡ್ ಭಾರತ ತಂಡದ ವಿರುದ್ಧ ಅಟವಾಡುತ್ತಿದೆ.

    ಟೆಸ್ಟ್ ಆಟವಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ವಿರುದ್ಧ ಭಾರತದಲ್ಲಿ ನ್ಯೂಜಿಲೆಂಡ್ ಗಿಂತ ಕಳಪೆ ಪ್ರದರ್ಶನ ನೀಡಿರುವುದು ಜಿಂಬಾಬ್ವೆ ಮಾತ್ರ. ಜಿಂಬಾಬ್ವೆ ಭಾರತದಲ್ಲಿ ಒಟ್ಟು 19 ಏಕದಿನ ಪಂದ್ಯಗಳನ್ನಾಡಿದ್ದು ಇದರಲ್ಲಿ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿತ್ತು. 15 ಪಂದ್ಯದಲ್ಲಿ ಭಾರತ ಗೆದ್ದರೆ ಒಂದು ಪಂದ್ಯ ಟೈ ಆಗಿತ್ತು.

    ಭಾರತದಲ್ಲಿ ಇದುವರೆಗೆ ನ್ಯೂಜಿಲೆಂಡ್ 5 ಏಕದಿನ ಸರಣಿಯನ್ನು ಆಡಿದೆ. ಈ ಐದೂ ಸರಣಿಗಳಲ್ಲೂ ಭಾರತವೇ ಗೆದ್ದು ಮೇಲುಗೈ ಸಾಧಿಸಿದೆ. 1988ರಲ್ಲಿ 4-0, 1995ರಲ್ಲಿ 3-2, 1999ರಲ್ಲಿ 3-2, 2010ರಲ್ಲಿ 5-0 ಹಾಗೂ 2016ರಲ್ಲಿ 3-2 ಅಂತರದಿಂದ ಭಾರತ ಗೆಲುವು ಸಾಧಿಸಿತ್ತು.

    ಭಾರತ ಪ್ರವಾಸದಲ್ಲಿ ನ್ಯೂಜಿಲೆಂಡ್ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ. 2ನೇ ಏಕದಿನ ಅ.25ರಂದು ಪುಣೆ ಹಾಗೂ 3ನೇ ಏಕದಿನ ಪಂದ್ಯ ಅ.29ರಂದು ಕಾನ್ಪುರದಲ್ಲಿ ನಡೆಯಲಿದೆ.

    ಮೊದಲ ಟಿ20 ಪಂದ್ಯ ನವಂಬರ್ 1ರಂದು ದೆಹಲಿ, 2ನೇ ಟಿ20 ನ.4ರಂದು ರಾಜ್ ಕೋಟ್ ಹಾಗೂ ಸರಣಿಯ ಕೊನೆಯ ಟಿ20 ಪಂದ್ಯ ನ.7ರಂದು ತಿರುವನಂತಪುರಂನಲ್ಲಿ ನಡೆಯಲಿದೆ. ಏಕದಿನ ಪಂದ್ಯಗಳು ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದ್ದು, ಟಿ20 ಪಂದ್ಯಗಳು ರಾತ್ರಿ 7 ಗಂಟೆಗೆ ಆರಂಭಗೊಳ್ಳಲಿದೆ.