Tag: india

  • 99 ಎಸೆತಗಳ ಪಂದ್ಯದಲ್ಲಿ ಭಾರತಕ್ಕೆ ರೋಚಕ 6 ರನ್ ಜಯ

    99 ಎಸೆತಗಳ ಪಂದ್ಯದಲ್ಲಿ ಭಾರತಕ್ಕೆ ರೋಚಕ 6 ರನ್ ಜಯ

    ತಿರುವನಂತಪುರಂ: ಮೂರನೇ ಟಿ 20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರೂ ಭಾರತ 6 ರನ್ ಜಯಗಳಿಸುವ ಮೂಲಕ 2-1 ಅಂತರದಿಂದ ಟಿ20 ಸರಣಿಯನ್ನು ಗೆದ್ದುಕೊಂಡಿದೆ.

    ಭಾರೀ ಮಳೆಯಿಂದಾಗಿ ಪಂದ್ಯವನ್ನು 8 ಓವರ್ ಗಳಿಗೆ ಕಡಿತಗೊಳಿಸಲಾಗಿತ್ತು.  ರಾತ್ರಿ 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ 9.30ಕ್ಕೆ ಆರಂಭವಾಯಿತು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 5 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತು. ಇದಕ್ಕೆ ಉತ್ತರ ನೀಡಿದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಪರವಾಗಿ ರೋಹಿತ್ ಶರ್ಮಾ 8, ಶಿಖರ್ ಧವನ್ 6, ಕೊಹ್ಲಿ 13, ಶ್ರೇಯಸ್ ಐಯ್ಯರ್ 6, ಮನೀಶ್ ಪಾಂಡೆ 17, ಹಾರ್ದಿಕ್ ಪಾಂಡ್ಯ ಔಟಾಗದೇ 14 ರನ್, ಧೋನಿ ಔಟಾಗದೇ 0 ರನ್ ಗಳಿಸಿದರು.

    ನ್ಯೂಜಿಲೆಂಡ್ ತಂಡ ಇತರೇ ರೂಪದಲ್ಲಿ ಒಂದು ವೈಡ್ ನೀಡಿದರೆ ಭಾರತೀಯ ಬೌಲರ್ ಗಳು 2 ವೈಡ್ ಎಸೆದಿದ್ದರು.

    ನ್ಯೂಜಿಲೆಂಡ್ ಪರ ಟೀಮ್ ಸೌಥಿ ಮತ್ತು ಇಶ್ ಸೋಧಿ ತಲಾ 2 ವಿಕೆಟ್ ಪಡೆದರೆ, ಟ್ರಂಟ್ ಬೌಲ್ಟ್ 1 ವಿಕೆಟ್ ಪಡೆದರು. ಭಾರತದ ಪರ ಬುಮ್ರಾ 2ವಿಕೆಟ್ ಪಡೆದರೆ ಭುವನೇಶ್ವರ್ ಕುಮಾರ್, ಚಹಲ್, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.

     

     

  • ಟಿ20ಗೆ ಧೋನಿ ನಿವೃತ್ತಿ ಹೇಳೋದು ಉತ್ತಮ: ವಿವಿಎಸ್ ಲಕ್ಷ್ಮಣ್

    ಟಿ20ಗೆ ಧೋನಿ ನಿವೃತ್ತಿ ಹೇಳೋದು ಉತ್ತಮ: ವಿವಿಎಸ್ ಲಕ್ಷ್ಮಣ್

    ನವದೆಹಲಿ: ಟಿ20 ಕ್ರಿಕೆಟ್‍ಗೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಹೇಳುವುದು ಒಳ್ಳೆಯದ್ದು ಎಂದು ಭಾರತ ತಂಡ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

    ಶನಿವಾರ ರಾಜ್‍ಕೋಟ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ಬಳಿಕ ಪ್ರತಿಕ್ರಿಯಿಸಿದ ಅವರು, ಧೋನಿ ಟಿ20ಯಲ್ಲಿ ಯುವ ಕ್ರಿಕೆಟಿಗರಿಗ ಅವಕಾಶ ನೀಡಬೇಕು. ಟಿ20ಯ ಬದಲು ಏಕದಿನ ಕ್ರಿಕೆಟ್ ನಲ್ಲಿ ಧೋನಿ ಚೆನ್ನಾಗಿ ಆಡುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಧೋನಿ ನಾಲ್ಕನೇಯವರಾಗಿ ಕ್ರೀಸ್ ಗೆ ಆಗಮಿಸುತ್ತಾರೆ. ಜೊತೆಗೆ ಮೈದಾನ ಹೊಂದಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಶನಿವಾರದ ಆಟ ನೋಡಿದರೆ ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ 160 ಇದ್ದರೆ, ಧೋನಿಯ ಸ್ಟ್ರೈಕ್ ರೇಟ್ 80 ಇತ್ತು ಎಂದು ಹೇಳುವ ಮೂಲಕ ತಮ್ಮ ವಾದಕ್ಕೆ ಸಮರ್ಥನೆ ನೀಡಿದ್ದಾರೆ.

    197 ರನ್ ಗಳ ಗುರಿಯನ್ನು ಬೆನ್ನೆಟ್ಟಿಟ್ಟುತ್ತಿದ್ದ ವೇಳೆ 9.1 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದ್ದಾಗ ನಾಲ್ಕನೇಯವರಾಗಿ ಧೋನಿ ಕ್ರೀಸ್ ಗೆ ಆಗಮಿಸಿದರು. ಕೊಹ್ಲಿ ಬೌಂಡರಿ ಹೊಡೆದು ರನ್ ಹೆಚ್ಚಿಸುವತ್ತ ಗಮನ ಹರಿಸಿದರೆ ಧೋನಿ ಆರಂಭದಲ್ಲಿ ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸಲಿಲ್ಲ.

    15 ಓವರ್ ಪೂರ್ಣಗೊಂಡಾಗ ಧೋನಿ 18 ಎಸೆತ ಎದುರಿಸಿ 16 ರನ್ ಹೊಡೆದಿದ್ದರು. ಧೋನಿ ಅಂತಿಮವಾಗಿ 49 ರನ್(37 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿ 19.3 ಓವರ್ ನಲ್ಲಿ 7ನೇಯವರಾಗಿ ಔಟಾದರು.

    ಧೋನಿ ಟಿ20 ಕ್ರಿಕೆಟ್‍ಗೆ ನಿವೃತ್ತಿ ಹೇಳಬೇಕೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ದಾಖಲಿಸಿ.

    ಇದನ್ನೂ ಓದಿ: ವಿರಾಟ್, ಧೋನಿ ನಡುವೆ ಹೊಂದಾಣಿಕೆ ಎಷ್ಟಿದೆ? ಕೊಹ್ಲಿಯ ಮಾತು ಕೇಳಿದ್ರೆ ನಿಮ್ಗೆ ಇಷ್ಟವಾಗುತ್ತೆ

     

  • ನೋಟ್ ಬ್ಯಾನ್ ನಂತ್ರ ಡಿಜಿಟಲ್ ವಹಿವಾಟು ಎಷ್ಟು ಹೆಚ್ಚಾಗಿದೆ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

    ನೋಟ್ ಬ್ಯಾನ್ ನಂತ್ರ ಡಿಜಿಟಲ್ ವಹಿವಾಟು ಎಷ್ಟು ಹೆಚ್ಚಾಗಿದೆ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

    ನವದೆಹಲಿ: 500 ಮತ್ತು 1 ಸಾವಿರ ರೂ. ನೋಟು ಬ್ಯಾನ್ ಆದ ಬಳಿಕ ಭಾರತದಲ್ಲಿ ಡಿಜಿಟಲ್ ವಹಿವಾಟು ಎಷ್ಟಾಗಿದೆ? ಪ್ರಧಾನಿ ನರೇಂದ್ರ ಮೋದಿಯ ನೋಟ್‍ಬ್ಯಾನ್‍ಗೆ ಒಂದು ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಕೇಳುತ್ತಿರುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ(ಎನ್‍ಪಿಸಿಐ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ನೋಟ್ ಬ್ಯಾನ್ ಬಳಿಕ ಯುಪಿಐ ಮೂಲಕ ನಡೆಸುವ ವಹಿವಾಟು 77 ಪಟ್ಟು ಏರಿಕೆಯಾಗಿದೆ.

    ನೋಟ್ ಬ್ಯಾನ್ ಮುನ್ನ ಅಕ್ಟೋಬರ್ ಅವಧಿಯಲ್ಲಿ ಯುಪಿಐ ಮೂಲಕ 1 ಲಕ್ಷ ವಹಿವಾಟು ನಡೆದಿದ್ದರೆ ಈಗ 7.6 ಕೋಟಿ ವಹಿವಾಟು ನಡೆದಿದೆ. ಸೆಪ್ಟೆಂಬರ್ 2017ರ ಅವಧಿಯಲ್ಲಿ 3 ಕೋಟಿ ವಹಿವಾಟು ನಡೆದಿದ್ದರೆ, ಅಕ್ಟೋಬರ್ ನಲ್ಲಿ ಒಂದೇ ಬಾರಿಗೆ  7.6 ಕೋಟಿಗೆ ಜಿಗಿತ ಕಂಡಿದೆ.

    ಆಗಸ್ಟ್ ನಲ್ಲಿ ಒಟ್ಟು 65,149 ಕೋಟಿ ರೂ. ವಹಿವಾಟು ನಡೆದಿದ್ದರೆ, ಸೆಪ್ಟೆಂಬರ್ ನಲ್ಲಿ 71,759 ಕೋಟಿ ರೂ. ವಹಿವಾಟು ನಡೆದಿದೆ. ಆದರೆ ಅಕ್ಟೋಬರ್ ನಲ್ಲಿ 75,041 ಕೋಟಿ ರೂ. ವಹಿವಾಟು ನಡೆದಿದೆ ಎಂದು ಎನ್‍ಪಿಸಿಐ ಹೇಳಿದೆ.

    ಇನ್ಫೋಸಿಸ್ ಮುಖ್ಯಸ್ಥ ನಂದನ್ ನಿಲೇಕಣಿ ಟ್ವೀಟ್ ಮಾಡಿ ಯುಪಿಐ ಸಾಧನೆಯನ್ನು ಹೊಗಳಿದ್ದು, ‘ವಾಟ್ ಎ ಸ್ಟೋರಿ’ ಎಂದು ಬರೆದು ಹೊಗಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‍ನಲ್ಲಿ ಭಾರತ್ ಇಂಟರ್‍ಫೇಸ್ ಫಾರ್ ಮನಿ(ಭೀಮ್) ಅಪ್ಲಿಕೇಶನ್ ಬಿಡುಗಡೆ ಮಾಡಿದ್ದರು. ಭಾರತ ಸರ್ಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೇರೇಷನ್ ‘ಯೂನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್(ಯುಪಿಐ) ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಗೆ ಸುಲಭವಾಗಿ ಹಣವನ್ನು ಪಾವತಿಸಬಹುದಾಗಿದೆ. ಪೇಟಿಎಂ, ಜಿಯೋ ಮನಿ, ಪೋನ್‍ಪೇ ಇತ್ಯಾದಿ ಅಪ್‍ಗಳು ಯುಪಿಐ ಮೂಲಕವೇ ಕಾರ್ಯನಿರ್ವಹಿಸುತ್ತದೆ.

  • ಫಸ್ಟ್ ಟೈಂ ಕ್ಯಾಂಪಸ್ ಆಯ್ಕೆಗಾಗಿ ಭಾರತಕ್ಕೆ ಬರುತ್ತಿದೆ ಆಪಲ್

    ಫಸ್ಟ್ ಟೈಂ ಕ್ಯಾಂಪಸ್ ಆಯ್ಕೆಗಾಗಿ ಭಾರತಕ್ಕೆ ಬರುತ್ತಿದೆ ಆಪಲ್

    ಹೈದರಾಬಾದ್: ಪ್ರಖ್ಯಾತ ಐಫೋನ್ ತಯಾರಕಾ ಕಂಪೆನಿ ಆಪ್ ಇದೇ ಮೊದಲ ಬಾರಿಗೆ ಕ್ಯಾಂಪಸ್ ಸೆಲೆಕ್ಷನ್‍ಗಾಗಿ ಭಾರತಕ್ಕೆ ಬರುತ್ತಿದೆ.

    ಈ ವರ್ಷ ಹೈದರಾಬಾದ್ ನಲ್ಲಿರುವ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿಗೆ ಕ್ಯಾಂಪಸ್ ಸಂದರ್ಶನಕ್ಕೆ ಆಪಲ್ ಬರಲಿದೆ.

    ಇದೇ ಮೊದಲ ಬಾರಿಗೆ ಕ್ಯಾಂಪಸ್ ಸಂದರ್ಶನಕ್ಕೆ ಬರುವುದಾಗಿ ಆಪಲ್ ತಿಳಿಸಿದೆ. ಆಪಲ್ ಸಂಸ್ಥೆಗೆ ಬೇಕಾಗಿರುವ ಅರ್ಹತೆ ಇರುವ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೂ ಆಪಲ್ ನಮ್ಮಲ್ಲಿಗೆ ಬರುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಹೈದರಾಬಾದ್ ಐಐಟಿಯ ಉದ್ಯೋಗ ಸೆಲ್ ವಿಭಾಗದ ಮುಖ್ಯಸ್ಥ ಟಿ.ವಿ. ದೇವಿ ಪ್ರಸಾದ್ ತಿಳಿಸಿದ್ದಾರೆ.

    ಹೈದರಾಬಾದ್ ಮತ್ತು ಬೆಂಗಳೂರಿನ ಕಚೇರಿಗಾಗಿ ಉದ್ಯೋಗಿಗಳನ್ನು ನೇಮಿಸುವ ಸಲುವಾಗಿ ಆಪಲ್ ಭಾರತಕ್ಕೆ ಆಗಮಿಸುತ್ತಿದೆ ಎನ್ನಲಾಗುತ್ತಿದೆ. ಆಪಲ್ ಅಲ್ಲದೇ ಮೈಕ್ರೋಸಾಫ್ಟ್, ಗೂಗಲ್, ಪಿಲಿಪ್ಸ್ ಕಂಪೆನಿಗಳು ಹೈದರಾಬಾದ್ ಐಐಟಿಗೆ ಕ್ಯಾಂಪಸ್ ಸಂದರ್ಶನಕ್ಕೆ ಬರುವುದಾಗಿ ಹೇಳಿದೆ.

    ಡಿಸೆಂಬರ್ ನಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಲಿದ್ದು, ಬಿಇ, ಬಿಟೆಕ್, ಎಂಟೆಕ್, ಎಂಎಸ್‍ಸಿ 350 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನಕ್ಕೆ ಹೆಸರು ನೊಂದಾಯಿಸಿದ್ದಾರೆ.

    ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್), ಡೇಟಾ ಸೈನ್ಸ್, ಆಟೋಮೆಷನ್ ವಿಭಾಗದಲ್ಲಿ ಉದ್ಯೋಗಗಳಿವೆ. ಈ ವರ್ಷ ಹಾರ್ಡ್ ವೇರ್ ಎಂಜಿನಿಯರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಇಂಟಿಗ್ರೇಟೆಡ್ ಸರ್ಕ್ಯೂಟ್ ಮತ್ತು ಡಿಸೈನ್ ವೆರಿಫಿಕೇಶನ್, ಅಷ್ಟೇ ಅಲ್ಲದೇ ಮೊಬೈಲ್ ಸಂವಹನಕ್ಕಾಗಿ 2ಡಿ- 3ಡಿ ಗ್ರಾಫಿಕ್ ಜ್ಞಾನವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ ಎಂದು ಪ್ರಸಾದ್ ತಿಳಿಸಿದರು.

  • ಡಿಸೆಂಬರ್ 1ರಿಂದ ರಿಲಯನ್ಸ್ 2ಜಿ ಕರೆ ಸ್ಥಗಿತ

    ಡಿಸೆಂಬರ್ 1ರಿಂದ ರಿಲಯನ್ಸ್ 2ಜಿ ಕರೆ ಸ್ಥಗಿತ

    ನವದೆಹಲಿ: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ 2ಜಿ ಕರೆ ಸೇವೆಯನ್ನು ಡಿಸೆಂಬರ್ 1ರಿಂದ ಸ್ಥಗಿತಗೊಳಿಸಲು ನಿರ್ಧರಿಸಿದೆ.

    ಇನ್ನು ಮುಂದೆ ಕೇವಲ 4ಜಿ ಸೇವೆಯನ್ನು ಮಾತ್ರ ನೀಡಲಾಗುವುದು. 4ಜಿ ಸೇವೆ ಬಳಸುತ್ತಿರುವ ಗ್ರಾಹಕರು ರಿಲಯನ್ಸ್ ಸೇವೆಯನ್ನು ಮುಂದುವರಿಸಬಹುದು ಎಂದು ಹೇಳಿದೆ. 2ಜಿ ಸೇವೆಯನ್ನು ಇನ್ನು ಮುಂದೆ ನೀಡಲು ಸಾಧ್ಯವಿಲ್ಲ. 2ಜಿ ಸೇವೆ ಬೇಕಿದ್ದಲ್ಲಿ ಬೇರೆ ಟೆಲಿಕಾಂ ಕಂಪೆನಿಗೆ ಹೋಗಬಹುದು ಎಂದು ಹೇಳಿದೆ.

    ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇತರ ಕಂಪೆನಿಗಳಿಗೆ ರಿಲಯನ್ಸ್ ಗ್ರಾಹಕರು ನಂಬರ್ ಪೋರ್ಟಿಂಗ್ ಅರ್ಜಿ ಹಾಕಿದರೆ ಪೋರ್ಟಿಂಗ್ ಮನವಿಯನ್ನು ಸ್ವೀಕರಿಸುವಂತೆ ಸೂಚಿಸಿದೆ.

    2ಜಿ ಮತ್ತು 4ಜಿ ಸೇವೆಗಳನ್ನು ಒದಗಿಸುತ್ತಿರುವ ರಿಲಯನ್ಸ್ 46 ಸಾವಿರ ಕೋಟಿ ರೂ. ನಷ್ಟದಲ್ಲಿದೆ. ಇತ್ತೀಚೆಗೆ ಏರ್‍ಸೆಲ್ ಕಂಪೆನಿಯನ್ನು ಖರೀದಿಸಲು ರಿಲಯನ್ಸ್ ಪ್ರಯತ್ನ ನಡೆಸಿತ್ತು. ಆದರೆ ಅದರಲ್ಲಿ ಯಶಸ್ವಿಯಾಗಿರಲಿಲ್ಲ.

    ಆಂಧ್ರಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಉತ್ತಪ್ರದೇಶ ಪೂರ್ವ ಮತ್ತು ಪಶ್ಚಿಮ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ 2ಜಿ ಮತ್ತು 4ಜಿ ಸೇವೆ ಯನ್ನು ರಿಲಯನ್ಸ್ ನೀಡುತ್ತಿದೆ.

  • ಟೀಂ ಇಂಡಿಯಾಗೆ 40 ರನ್ ಸೋಲು – ನ.7ಕ್ಕೆ ನಿರ್ಣಾಯಕ ಪಂದ್ಯ

    ಟೀಂ ಇಂಡಿಯಾಗೆ 40 ರನ್ ಸೋಲು – ನ.7ಕ್ಕೆ ನಿರ್ಣಾಯಕ ಪಂದ್ಯ

    ರಾಜ್ ಕೋಟ್: ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 40 ರನ್ ಗಳಿಂದ ಸೋತಿದೆ. ಈ ಮೂಲಕ 3 ಪಂದ್ಯಗಳ ಸರಣಿ 1-1ರ ಸಮಬಲ ಸಾಧಿಸಿದೆ. ಮಂಗಳವಾರ ತಿರುವನಂತಪುರಂನಲ್ಲಿ ನಡೆಯಲಿರುವ ಪಂದ್ಯ ಸರಣಿಯನ್ನು ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸಲಿದೆ.

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 156 ರನ್ ಮಾತ್ರ ಗಳಿಸುವುದು ಸಾಧ್ಯವಾಯಿತು.

    ನ್ಯೂಜಿಲೆಂಡ್ ಪರವಾಗಿ ಕಾಲಿನ್ ಮನ್ರೋ 28 ಎಸೆತಗಳಲ್ಲಿ 109 ರನ್ ಗಳಿಸಿ ಅಜೇಯರಾಗುಳಿದರು. ಈ ಇನ್ನಿಂಗ್ಸ್ ನಲ್ಲಿ ತಲಾ 7 ಬೌಂಡರಿ ಹಾಗೂ 7 ಸಿಕ್ಸರ್ ಗಳಿದ್ದವು. ಮನ್ರೋ ಗೆ ಮಾರ್ಟಿನ ಗಪ್ಟಿಲ್ ಉತ್ತಮ ಜೊತೆಯಾಟ ನೀಡಿದರು. 41 ಎಸೆತಗಳಲ್ಲಿ 3 ಬೌಂಡರಿ ಹಾಗೂ3 ಸಿಕ್ಸರ್ ಗಳನ್ನೊಳಗೊಂಡ 45 ರನ್ ಗಳಿಸಿದರು. ಟೀಂ ಇಂಡಿಯಾ ಪರವಾಗಿ ಮೊಹಮ್ಮದ್ ಸಿರಾಜ್ ಹಾಗೂ ಚಾಹಲ್ ತಲಾ 1 ವಿಕೆಟ್ ಗಳಿಸಿದರು. ಮೊಹಮ್ಮದ್ ಸಿರಾಜ್ 4 ಓವರ್ ನಲ್ಲಿ 53 ರನ್ ಹಾಗೂ ಚಾಹಲ್ 4 ಓವರ್ ನಲ್ಲಿ 39 ರನ್ ಬಿಟ್ಟು ಕೊಟ್ಟರು. ಅಕ್ಷರ್ ಪಟೇಲ್ 3 ಓವರ್ ನಲ್ಲಿ 39 ರನ್ ಹಾಗೂ ಹಾರ್ದಿಕ್ ಪಾಂಡ್ಯ 1 ಓವರ್ ನಲ್ಲಿ 14 ರನ್ ನೀಡಿದರು.

    197 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾ 2 ಓವರ್ ಗಳಲ್ಲೇ ಆರಂಭಿಕ ಆಟಗಾರರನ್ನು ಕಳೆದುಕೊಂಡಿತು. ಶಿಖರ್ ಧವನ್ 1 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 5 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ 21 ಎಸೆತದಲ್ಲಿ 23 ರನ್ ಗಳಿಸಿದರೆ ಹಾರ್ದಿಕ್ ಪಾಂಡ್ಯ 1 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 65 ಹಾಗೂ ಮಹೇಂದ್ರ ಸಿಂಗ್ ಧೋನಿ 49 ರನ್ ಗಳಿಸಿ ಟೀಂ ಇಂಡಿಯಾದ ಮಾನ ಉಳಿಸಿದರು. ನ್ಯೂಜಿಲೆಂಡ್ ಪರವಾಗಿ ಟ್ರೆಂಟ್ ಬೋಲ್ಟ್ 4 ವಿಕೆಟ್ ಗಳಿಸಿದರೆ ಸಾಂಟ್ನರ್, ಸೋಧಿ ಹಾಗೂ ಮುನ್ರೋ ತಲಾ 1 ವಿಕೆಟ್ ಗಳಿಸಿದರು.

  • ವಿಶ್ವದ ಕೋಟಿ ಕೋಟಿ ಗ್ರಾಹಕರಿಗೆ ವಾಟ್ಸಪ್ ಶಾಕ್!

    ವಿಶ್ವದ ಕೋಟಿ ಕೋಟಿ ಗ್ರಾಹಕರಿಗೆ ವಾಟ್ಸಪ್ ಶಾಕ್!

    ಬೆಂಗಳೂರು: ಕೋಟಿ ಕೋಟಿ ಗ್ರಾಹಕರಿಗೆ ವಾಟ್ಸಪ್ ಇಂದು ದಿಢೀರ್ ಶಾಕ್ ಕೊಟ್ಟಿದ್ದು, ವಿಶ್ವಾದ್ಯಂತ ಕೆಲ ಕಾಲ ಕ್ರ್ಯಾಷ್ ಆಗಿತ್ತು.

    ಮಧ್ಯಾಹ್ನ 1.45 ಕ್ಕೆ ಸ್ತಬ್ಧಗೊಂಡಿದ್ದ ವಾಟ್ಸಪ್‍ನಲ್ಲಿ ಮೆಸೇಜ್‍ಗಳು ಕಳುಹಿಸಿದ್ದರೂ ಒಂದೇ ಟಿಕ್ ಮಾರ್ಕ್ ಬರುತಿತ್ತು. ಕೆಲವೊಮ್ಮೆ ಮೆಸೇಜ್ ಸೆಂಡ್ ಆಗುತ್ತಿರಲಿಲ್ಲ. 2.40 ರ ವೇಳೆಗೆ ವಾಟ್ಸಪ್ ಸೇವೆ ಮತ್ತೆ ಆರಂಭವಾಗಿದೆ.

    ಯಾವ ಕಾರಣಕ್ಕೆ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು ಎನ್ನುವುದನ್ನು ವಾಟ್ಸಪ್ ತಿಳಿಸಿಲ್ಲ. ಭಾರತದಲ್ಲಿ ಮಧ್ಯಾಹ್ನ ಸಮಸ್ಯೆ ಪರಿಹಾರವಾದರೂ ಕೆಲವೊಂದು ದೇಶಗಳಲ್ಲಿ ಸಮಸ್ಯೆ ಪರಿಹಾರವಾಗಿಲ್ಲ.

    2009 ರಲ್ಲಿ ಆರಂಭಗೊಂಡಿದ್ದ ವಾಟ್ಸಪ್ ಸೇವೆಯನ್ನು 100 ಕೋಟಿಗೂ ಅಧಿಕ ಜನ ಬಳಸುತ್ತಿದ್ದಾರೆ. 2014 ರಲ್ಲಿ ಫೇಸ್‍ಬುಕ್ ವಾಟ್ಸಪ್ ಕಂಪೆನಿಯನ್ನು ಖರೀದಿಸಿತ್ತು.

    ವಾಟ್ಸಪ್ ಕ್ರ್ಯಾಷ್ ಆದ ಹಿನ್ನೆಲೆಯಲ್ಲಿ  ಟ್ವಿಟ್ಟರ್ ನಲ್ಲಿ ಟ್ರಂಡ್ ಅಗಿದೆ.

    https://twitter.com/sharmaji_92/status/926387983380635648

    https://twitter.com/flexkemboi/status/926387547009437696

    https://twitter.com/raushan4g/status/926386977607442432

  • ಗೆದ್ದಿದ್ದು ಟೀಂ ಇಂಡಿಯಾ, ನಂ.1 ಆಗಿದ್ದು ಪಾಕಿಸ್ತಾನ!

    ಗೆದ್ದಿದ್ದು ಟೀಂ ಇಂಡಿಯಾ, ನಂ.1 ಆಗಿದ್ದು ಪಾಕಿಸ್ತಾನ!

    ದುಬೈ: ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಈಗ ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

    ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತವು 53 ರನ್‍ಗಳ ಗೆಲುವು ಪಡೆದುಕೊಂಡಿತು. ಇದರಿಂದ ನಂ.1 ಸ್ಥಾನದಲ್ಲಿದ್ದ ನ್ಯೂಜಿಲೆಂಡ್ 2ನೇ ಸ್ಥಾನಕ್ಕೆ ಕುಸಿದಿದೆ. ಪ್ರಸ್ತುತ ಭಾರತ ತಂಡವು 116 ಅಂಕಗಳೊಂದಿಗೆ ಐಸಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದೆ.

    ಈ ಹಿಂದೆ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಆಡಿದ್ದ 5 ಪಂದ್ಯಗಳಲ್ಲಿಯೂ ಸೋತಿತ್ತು. ಈಗ ಮೊದಲ ಪಂದ್ಯವನ್ನು ಗೆಲ್ಲುವ ಮೊದಲ ಗೆಲುವನ್ನು ಪಡೆದುಕೊಂಡು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.

    ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲನ್ನು ಪಡೆಯುವ ಮೂಲಕ ನ್ಯೂಜಿಲೆಂಡ್ ಐಸಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 121 ಅಂಕಗಳನ್ನು ಪಡೆದುಕೊಂಡಿದೆ. ಇದರಿಂದ ಪಾಕ್ ತಂಡವು 124 ಅಂಕಗಳನ್ನು ಪಡೆಯುವ ಮೂಲಕ ಐಸಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡಿದೆ.

    ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್ ಸ್ವಿಪ್ ಮಾಡಿದರೂ ಸಹ 122 ಅಂಕಗಳನ್ನು ಪಡೆದು 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಗುತ್ತದೆ. ಐಸಿಸಿ ಟಿ20 ಪಂದ್ಯಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಆಫ್ರಿಕಾ, ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳು ಕ್ರಮವಾಗಿ 6, 7 ಮತ್ತು 8 ನೇ ಸ್ಥಾನವನ್ನು ಪಡೆದುಕೊಂಡಿದೆ.

     

     

     

  • 53 ರನ್‍ಗಳ ಗೆಲುವು: ನ್ಯೂಜಿಲೆಂಡ್ ಗೆಲುವಿನ ಓಟಕ್ಕೆ ಬಿತ್ತು ಬ್ರೇಕ್

    53 ರನ್‍ಗಳ ಗೆಲುವು: ನ್ಯೂಜಿಲೆಂಡ್ ಗೆಲುವಿನ ಓಟಕ್ಕೆ ಬಿತ್ತು ಬ್ರೇಕ್

    ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಭಾರತ 53 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    203 ರನ್ ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಈ ಮೂಲಕ ಭಾರತ ಮೊದಲ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ. ಉಭಯ ತಂಡಗಳ ಮಧ್ಯೆ ಈ ಪಂದ್ಯಕ್ಕೂ ಮುನ್ನ 5 ಟಿ-20 ಪಂದ್ಯಗಳು ನಡೆದಿತ್ತು. ಎಲ್ಲ ಮ್ಯಾಚ್ ನಲ್ಲಿ ಕಿವೀಸ್ ಗೆದ್ದುಕೊಂಡಿತ್ತು.

    ನಾಯಕ ಕೇನ್ ವಿಲಿಯಮ್ಸ್ 28 ರನ್, ಟಾಮ್ ಲಥಾಮ್ 39 ರನ್, ಮೈಕಲ್ ಸ್ಯಾಂಟ್ನರ್ ಔಟಾಗದೇ 27 ರನ್ ಹೊಡೆಯುವ ಮೂಲಕ ಸ್ವಲ್ಪ ಪ್ರತಿರೋಧ ತೋರಿದರು.

    ಭಾರತದ ಪರ ಚಹಲ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್, ಬುಮ್ರಾ, ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಭಾರತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು.

    37 ಎಸೆತದಲ್ಲಿ 50 ರನ್ ಹೊಡೆದ ಶಿಖರ್ ಧವನ್ 80 ರನ್(52 ಎಸೆತ, 10 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು. ನಂತರ ಬಂದ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾದರು. 42 ಎಸೆತದಲ್ಲಿ ಅರ್ಧಶತಕ ಹೊಡೆದ ರೋಹಿತ್ ಶರ್ಮಾ 80 ರನ್(55 ಎಸೆತ, 6 ಬೌಂಡರಿ, 4 ಸಿಕ್ಸರ್) ಗಳಿಸಿದಾಗ ಔಟಾದರು. ಕೊನೆಯಲ್ಲಿ ಕೊಹ್ಲಿ ಮತ್ತು ಧೋನಿ ಬಿರುಸಿನ ಆಟವಾಡಿ ತಂಡದ ಮೊತ್ತವನ್ನು 200 ರನ್ ಗಡಿ ದಾಟಿಸಿದರು. ಕೊಹ್ಲಿ ಔಟಾಗದೇ 26 ರನ್(11 ಎಸೆತ, 3 ಬೌಂಡರಿ) ಧೋನಿ ಔಟಾಗದೇ 7 ರನ್(2 ಎಸೆತ, 1 ಸಿಕ್ಸರ್) ಹೊಡೆದರು.

    ಟ್ರೆಂಟ್ ಬೌಲ್ಟ್ 4 ಓವರ್ ಎಸೆದು, 49 ರನ್ ನೀಡಿದರೆ, ಟಿಮ್ ಸೌಥಿ 44 ರನ್ ನೀಡಿದರು. ಇತರೆ ರೂಪದಲ್ಲಿ ಭಾರತಕ್ಕೆ 9 ರನ್ ಬಂದಿತ್ತು.

    ದಾಖಲೆಯ ಜೊತೆಯಾಟ: ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 98 ಎಸೆತಗಳಲ್ಲಿ 158 ರನ್ ಜೊತೆಯಾಟ ಮಾಡುವ ಮೂಲಕ ಭಾರತದ ಪರ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದರಲ್ಲಿ ಧವನ್ 80 ರನ್ ಹೊಡೆದಿದ್ದರೆ ರೋಹಿತ್ ಶರ್ಮ 70 ರನ್ ಹೊಡೆದರು. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 138 ರನ್ ಜೊತೆಯಾಟ ಮಾಡಿದ್ದರು.

    ಭಾರತದ ರನ್ ಏರಿದ್ದು ಹೀಗೆ:
    50 ರನ್ – 6.4 ಓವರ್
    100 ರನ್ – 11.6 ಓವರ್
    150 ರನ್ – 15.3 ಓವರ್
    200 ರನ್ – 19.5 ಓವರ್

  • ಎನ್‍ಟಿಪಿಸಿ ಘಟಕದಲ್ಲಿ ಬಾಯ್ಲರ್ ಸ್ಫೋಟ: 10 ಸಾವು, 100 ಮಂದಿಗೆ ಗಾಯ

    ಎನ್‍ಟಿಪಿಸಿ ಘಟಕದಲ್ಲಿ ಬಾಯ್ಲರ್ ಸ್ಫೋಟ: 10 ಸಾವು, 100 ಮಂದಿಗೆ ಗಾಯ

    ನವದೆಹಲಿ: 30 ವರ್ಷ ಹಳೆಯ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ(ಎನ್‍ಟಿಪಿಸಿ) ಬಾಯ್ಲರ್ ಸ್ಫೋಟಗೊಂಡ ಪರಿಣಾಮ 10 ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿಯಲ್ಲಿ ನಡೆದಿದೆ.

    ಉಚಾಹಾರ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಬಾಯ್ಲರ್ ಪೈಪ್ ಒಡೆದು ಈ ದುರ್ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

    ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಗಾಯಗೊಂಡವರ ಪೈಕಿ ಹಲವರ ದೇಹ ಸುಟ್ಟು ಹೋಗಿದೆ ಎಂದು ತಿಳಿಸಿದ್ದಾರೆ.

    ಗಾಯಗೊಂಡವರನ್ನು ಎನ್‍ಟಿಪಿಸಿ ಕ್ಯಾಂಪಸ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಾಯ್ಲರ್ ಪೈಪ್ ಒಡೆದ ಬಳಿಕ ಘಟಕವನ್ನು ಈಗ ಮುಚ್ಚಲಾಗಿದೆ. 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊದಿರುವ 5 ಘಟಕ 1988ರಲ್ಲಿ ಆರಂಭಗೊಂಡಿತ್ತು. 500 ಮೆಗಾ ವ್ಯಾಟ್ ಸಾಮರ್ಥ್ಯದ  6ನೇ ಘಟಕ ಈ ವರ್ಷವೇ ಆರಂಭಗೊಳ್ಳಬೇಕಿತ್ತು.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಧನ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.