Tag: india

  • ಶ್ರೀಲಂಕಾ ಟೆಸ್ಟ್ ವೇಳೆ ಹೊಸ ಇನ್ನಿಂಗ್ಸ್ ಆರಂಭಿಸಿದ ನೆಹ್ರಾ

    ಶ್ರೀಲಂಕಾ ಟೆಸ್ಟ್ ವೇಳೆ ಹೊಸ ಇನ್ನಿಂಗ್ಸ್ ಆರಂಭಿಸಿದ ನೆಹ್ರಾ

    ಕೋಲ್ಕತ್ತಾ: ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ 20 ಪಂದ್ಯವನ್ನು ಆಡಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದ ಎಡಗೈ ವೇಗದ ಬೌಲರ್ ಆಶಿಶ್ ನೆಹ್ರಾ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

    ನೆಹ್ರಾ ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಗ್ಗೆ ಮಾಜಿ ಟೀಂ ಇಂಡಿಯಾ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ನೆಹ್ರಾ ಅವರನ್ನು ಸ್ವಾಗತಿಸಿದ್ದಾರೆ.

    ಕ್ರಿಕೆಟ್ ನಲ್ಲಿ ನಮಗೆ ಮನರಂಜನೆ ನೀಡುತ್ತಿದ್ದ ನೆಹ್ರಾ ಇನ್ನು ಮುಂದೆ ಮೈಕ್ ಮುಂದೆ ಮನರಂಜನೆ ನೀಡಲಿದ್ದಾರೆ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

    1979ರ ಏಪ್ರಿಲ್ 29ರಂದು ದೆಹಲಿಯಲ್ಲಿ ಜನಿಸಿದ ನೆಹ್ರಾಗೆ ಈಗ 38 ವರ್ಷ. 1999ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಟ್ಟ ನೆಹ್ರಾ 2004ರಲ್ಲಿ ಪಾಕ್ ವಿರುದ್ಧ ರಾವಲ್ಪಿಂಡಿಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು.

    2001ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಮೊದಲ ಏಕದಿನ ಆಡಿದ್ದರೆ, 2011ರಲ್ಲಿ ಮೊಹಾಲಿಯಲ್ಲಿ ಪಾಕ್ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. 2009ರಲ್ಲಿ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಆಡಿದ್ದರು.

    17 ಟೆಸ್ಟ್ ಗಳಿಂದ 44 ವಿಕೆಟ್ ಪಡೆದಿರುವ ನೆಹ್ರಾ 120 ಏಕದಿನದಿಂದ 157 ವಿಕೆಟ್ ಸಂಪಾದಿಸಿದ್ದಾರೆ. 27 ಟಿ20 ಪಂದ್ಯಗಳಿಂದ 34 ವಿಕೆಟ್ ಗಳಿಸಿದ್ದಾರೆ. ಕೊನೆಯ ಟಿ20 ಪಂದ್ಯದಲ್ಲಿ ನೆಹ್ರಾ 4 ಓವರ್ ಎಸೆದು 29 ರನ್ ನೀಡಿದ್ದರು.

    ಇದನ್ನೂ ಓದಿ: ಮೊದಲ ಟಿ20ಯಲ್ಲಿ ನೆಹ್ರಾ ಕೊನೆಯ ಓವರ್ ಎಸೆದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು

  • ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    ಮುಂಬೈ: ರಿಲಯನ್ಸ್ ಜಿಯೋ ಟೆಲಿಕಾಂ ಪ್ರವೇಶಿಸಿದ ಮೇಲೆ ಭಾರತದಲ್ಲಿದ್ದ ಟೆಲಿಕಾಂ ಕಂಪೆನಿಗಳ ಆದಾಯಕ್ಕೆ ಹೊಡೆತ ಬಿದ್ದಿರುವುದು ಹಳೆಯ ಸುದ್ದಿ. ಈಗ ಈ ಕ್ಷೇತ್ರದಲ್ಲಿ ಆರಂಭವಾಗಿರುವ ಭಾರೀ ಸ್ಪರ್ಧೆಯಿಂದಾಗಿ ಉದ್ಯೋಗಿಗಳ ಉದ್ಯೋಗಕ್ಕೂ ಕುತ್ತು ಬಂದಿದ್ದು, ಒಟ್ಟು 75 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

    ಕೆಲ ಕಂಪೆನಿಗಳು ವಿಲೀನಗೊಳ್ಳುತ್ತಿದ್ದರೆ, ಕೆಲವೊಂದು ಸಂಪೂರ್ಣವಾಗಿ ಮುಚ್ಚುತ್ತಿದೆ. ಇವುಗಳಿಂದಾಗಿ ಟೆಲಿಕಾಂ ಕ್ಷೇತ್ರದಲ್ಲಿರುವ ಒಟ್ಟು ಅಂದಾಜು 3 ಲಕ್ಷ ಉದ್ಯೋಗಿಗಳ ಪೈಕಿ ಶೇ. 25 ರಷ್ಟು ಮಂದಿ ಉದ್ಯೋಗವನ್ನು ತೊರೆದಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಈಗಾಗಲೇ ಕೆಲ ಕಂಪೆನಿಗಳು ಸಂಬಳವನ್ನು ಹೆಚ್ಚಿಸದ ಕಾರಣ ಕೆಲ ಉದ್ಯೋಗಿಗಳು ತೊರೆದಿದ್ದಾರೆ. ಈ ಕ್ಷೇತ್ರವನ್ನು ಬಿಟ್ಟವರಲ್ಲಿ ಶೇ.30ರಷ್ಟು ಮಧ್ಯಮ ಮ್ಯಾನೇಜ್‍ಮೆಂಟ್ ವಿಭಾಗದವರು. ಟೆಲಿಕಾಂ ಕ್ಷೇತ್ರದಲ್ಲಿ ಸುಮಾರು ಶೇ.50ರಷ್ಟು ಮಂದಿ ಈ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

    ಎಮಾ ಪಾರ್ಟ್ ನರ್ಸ್ ಕಂಪೆನಿಯ ಎ ರಾಮಚಂದ್ರನ್ ಎಂಬವರು ಪ್ರತಿಕ್ರಿಯಿಸಿ, ಒಂದು ವರ್ಷದ ಹಿಂದೆ ಟೆಲಿಕಾಂ ಕ್ಷೆತ್ರದಲ್ಲಿ 3 ಲಕ್ಷ ಮಂದಿ ಉದ್ಯೋಗಿಗಳಿದ್ದರು. ಆದರೆ ಈಗ ಇದರಲ್ಲಿ 25% ಮಂದಿ ಈ ಕ್ಷೇತ್ರವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ.

    ಹೆಚ್ಚಿನ ಕೌಶಲ್ಯ ಹೊಂದಿದ ಉದ್ಯೋಗಿಗಳನ್ನು ಕಂಪೆನಿಗಳು ಮುಂದುವರೆಸುತ್ತಿದ್ದು, ಕೆಲವರಿಗೆ ಮೊದಲೇ ಪ್ಯಾಕೇಜ್ ನೀಡಿ ತೊರೆಯುವಂತೆ ಹೇಳುತ್ತಿದೆ. ಕಂಪೆನಿಯ ಮಾನವ ಸಂಪನ್ಮೂಲಕ್ಕೆ ಒಟ್ಟು 4% ರಿಂದ 5% ರಷ್ಟು ಖರ್ಚಾಗುತ್ತದೆ. ಈ ಖರ್ಚನ್ನು ಭರಿಸುವ ಸಾಮರ್ಥ್ಯ ಇಲ್ಲದೇ ಇರುವ ಕಾರಣ ಕಂಪೆನಿಗಳು ಉದ್ಯೋಗನ್ನು ಕಡಿತಗೊಳಿಸುತ್ತಿದೆ.

    ಟೆಲಿಕಾಂ ಕಂಪೆನಿಯೊಂದರ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಉದ್ಯೋಗಿಗಳಿಂದ ತೆರವಾದ ಜಾಗವನ್ನು ಶೀಘ್ರವೇ ಭರ್ತಿ ಮಾಡುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ.

    ಟೆಲಿಕಾಂ ಕ್ಷೇತ್ರವನ್ನು ತೊರೆದು ಉದ್ಯೋಗಿಗಳು ಬೇರೆ ಕಡೆ ಉದ್ಯೋಗಕ್ಕೆ ಅರ್ಜಿ ಹಾಕುತ್ತಿದ್ದು, ಈ ಪ್ರಮಾಣ 35 – 40% ಹೆಚ್ಚಾಗಿದೆ ಎಂದು ಉದ್ಯೋಗಾತ ಸಂಸ್ಥೆಗಳು ತಿಳಿಸಿವೆ.

    2016ರ ಸೆಪ್ಟೆಂಬರ್ ನಲ್ಲಿ ಭಾರತದ ಮಾರುಕಟ್ಟೆಯನ್ನು ಜಿಯೋ ಪ್ರವೇಶಿಸಿದ ಬಳಿಕ ದೇಶದ ನಂ 2 ಮತ್ತು ನಂ 3 ಕಂಪೆನಿಗಳಾದ ವೊಡಾಫೋನ್ ಮತ್ತು ಐಡಿಯಾ ಕಂಪೆನಿಗಳು ವಿಲೀನಗೊಂಡಿತ್ತು. ಇದಕ್ಕೂ ಮೊದಲು ಏರ್ ಟೆಲ್ ಕಂಪೆನಿ ಟೆಲಿನಾರ್ ಇಂಡಿಯಾ ಕಂಪೆನಿಯನ್ನು ಖರೀದಿಸಿತ್ತು.

    ಈಗಾಗಲೇ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ ಈಗಾಗಲೇ ಡಿಸೆಂಬರ್ 1 ರಿಂದ 2ಜಿ ಕರೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

    ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಐಡಿಯಾ ಸೆಲ್ಯುಲರ್ ಕಂಪನಿಯು 1,107 ಕೋಟಿ ರೂ. ನಷ್ಟ ಅನುಭವಿಸಿತ್ತು. ಏರ್‍ಟೆಲ್‍ನ ನಿವ್ವಳ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.76ರಷ್ಟು ಕುಸಿದಿದ್ದು 343 ಕೋಟಿ ರೂ. ತಲುಪಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ತ್ರೈಮಾಸಿಕ ಫಲಿತಾಂಶ ಪ್ರಕಟವಾಗಿದ್ದು, 2,709 ಕೋಟಿ ರೂ. ನಷ್ಟ ದಾಖಲಾಗಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

     

     

     

     

  • ಬಾಲ್ ಬ್ಯಾಟ್ ಗೆ ತಾಗಿಲ್ಲ, ಆಟಗಾರರು ಮನವಿ ಮಾಡಿಲ್ಲ ಆದ್ರೂ ಬ್ಯಾಟ್ಸ್ ಮನ್ ಔಟ್!

    ಬಾಲ್ ಬ್ಯಾಟ್ ಗೆ ತಾಗಿಲ್ಲ, ಆಟಗಾರರು ಮನವಿ ಮಾಡಿಲ್ಲ ಆದ್ರೂ ಬ್ಯಾಟ್ಸ್ ಮನ್ ಔಟ್!

    ಮುಂಬೈ: ಬಾಲ್ ಬ್ಯಾಟ್ಸ್ ಮನ್‍ನ ಪ್ಯಾಡ್ ಗೆ ತಾಗಿಲ್ಲ, ವಿಕೆಟ್ ಬೀಳಿಸಲಿಲ್ಲ. ಅಷ್ಟೇ ಅಲ್ಲದೇ ಫೀಲ್ಡರ್ ಗಳು ಯಾರು ಔಟ್ ಗೆ ಮನವಿ ಸಲ್ಲಿಸಲೇ ಇಲ್ಲ. ಆದರೆ ಬ್ಯಾಟ್ಸ್ ಮನ್ ಔಟ್ ಎಂದು ಅಂಪೈರ್ ತೀರ್ಪು ನೀಡಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಟೀಂ ಇಂಡಿಯಾದ ಎಡಗೈ ಆಟಗಾರ ಯವರಾಜ್ ಸಿಂಗ್ ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ ಬಳಿಕ ವೈರಲ್ ಆಗಿದ್ದ ವಿಡಿಯೋ ಈಗ ಮತ್ತಷ್ಟು ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.

    ಈ ವಿಡಿಯೋದಲ್ಲಿ, ನೀವು ಇದೂವರೆಗೆ ನೋಡಿರದ ಅಪರೂಪದ ಔಟ್ ಪ್ರಕರಣ ಇದಾಗಿದ್ದು, ಬಾಲ್ ಬ್ಯಾಟ್ಸ್ ಮನ್ ಬ್ಯಾಟ್ ಗೆ ತಾಗಿಲ್ಲ, ಅಷ್ಟೇ ಅಲ್ಲದೇ ಆಟಗಾರರು ಔಟ್ ಗೆಂದು ಮನವಿ ಸಲ್ಲಿಸಲೇ ಇಲ್ಲ. ಆದರೂ ಅಂಪೈರ್ ಬೆರಳನ್ನು ಎತ್ತಿ ಔಟ್ ಎಂದು ತೀರ್ಪು ನೀಡಿದ್ದಾರೆ ಎಂಬುದಾಗಿ ಅಕ್ಷರಗಳಲ್ಲಿ ಪ್ರಕಟವಾಗಿದೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಟ್ವೀಟ್ ಮಾಡಿ, ಧನ ಸಹಾಯಕ್ಕಾಗಿ 2007ರಲ್ಲಿ ಆಯೋಜನೆಗೊಂಡಿದ್ದ ಕ್ರಿಕೆಟ್ ಪಂದ್ಯದ ವಿಡಿಯೋ ಇದಾಗಿದೆ. ಈ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಒಬ್ಬ ಒಂದೇ ಓವರ್ ನಲ್ಲಿ ಸತತವಾಗಿ ಎರಡು ಬಾಲ್ ಗಳನ್ನು ಹೊಡೆಯದೇ ಇದ್ದಲ್ಲಿ ಔಟ್ ಎಂದು ಘೋಷಿಸುವ ನಿಯಮವನ್ನು ಮೊದಲೇ ಅಳವಡಿಸಲಾಗಿತ್ತು. ಹೀಗಾಗಿ ಆತ ಬಾಲನ್ನು ಹೊಡೆಯದೇ ಇದ್ದ ಕಾರಣ ಔಟ್ ಎಂದು ಅಂಪೈರ್ ತೀರ್ಪು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಈ ವರ್ಷ ಜೂನ್ 30ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿರುವ ಯುವರಾಜ್ ಸಿಂಗ್ ಫಿಟ್ ನೆಸ್ ಸಮಸ್ಯೆ ಮತ್ತು ಕಳಪೆ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

    304 ಎಕದಿನ ಪಂದ್ಯಗಳ 278 ಇನ್ನಿಂಗ್ಸ್ ಮೂಲಕ ಒಟ್ಟು 8701 ರನ್ ಹೊಡೆದಿರುವ ಯುವಿ 58 ಟಿ 20 ಪಂದ್ಯಗಳ 51 ಇನ್ನಿಂಗ್ಸ್ ಆಡಿ 1177 ರನ್ ಬಾರಿಸಿದ್ದಾರೆ. 40 ಟೆಸ್ಟ್ ಪಂದ್ಯಗಳ 62 ಇನ್ನಿಂಗ್ಸ್ ಆಡಿರುವ ಯುವರಾಜ್ ಸಿಂಗ್ ಒಟ್ಟು 1900 ರನ್ ಹೊಡೆದಿದ್ದಾರೆ.

    ????????????

    A post shared by Yuvraj Singh (@yuvisofficial) on

    https://youtu.be/MHFgWsfZBk4

     

  • ಗಂಗೂಲಿ ದಾಖಲೆ ಮುರಿಯುವತ್ತ ಕೊಹ್ಲಿ ಕಣ್ಣು!

    ಗಂಗೂಲಿ ದಾಖಲೆ ಮುರಿಯುವತ್ತ ಕೊಹ್ಲಿ ಕಣ್ಣು!

    ನವದೆಹಲಿ: ವಿರಾಟ್ ಕೊಹ್ಲಿ ನಾಯಕತ್ವ ವಹಿಸಿದ ಬಳಿಕ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದ್ದು ಈಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಅತಿ ಹೆಚ್ಚು ಟೆಸ್ಟ್ ಮ್ಯಾಚ್ ಗೆದ್ದ ಎರಡನೇ ಯಶಸ್ವಿ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

    ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಗುರುವಾರದಿಂದ ಮೂರು ಪಂದ್ಯಗಳ ಸರಣಿ ಆರಂಭವಾಗಲಿದೆ. ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಗಂಗೂಲಿ ಅವರ ದಾಖಲೆಯನ್ನು ಕೊಹ್ಲಿ ಮುರಿಯಲಿದ್ದಾರೆ. ಇದೂವರೆಗೆ ಕೊಹ್ಲಿ ನಾಯಕತ್ವದಲ್ಲಿ 29 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 19 ಪಂದ್ಯಗಳಲ್ಲಿ ಗೆಲುವು ಪಡೆದು ಟೀಂ ಇಂಡಿಯಾದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

    ಭಾರತದ ಪರ ಟೆಸ್ಟ್ ನಲ್ಲಿ ಯಶಸ್ವಿ ನಾಯಕನೆಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಧೋನಿ ನೇತೃತ್ವದಲ್ಲಿ 60 ಪಂದ್ಯಗಳನ್ನು ಟೀಂ ಇಂಡಿಯಾ ಆಡಿದ್ದು 27 ರಲ್ಲಿ ಜಯಿಸಿದೆ. ನಂತರ ಸ್ಥಾನದಲ್ಲಿ ಗಂಗೂಲಿ ಇದ್ದು 49 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿ 21 ರಲ್ಲಿ ಗೆಲುವು ಪಡೆದಿದ್ದಾರೆ.

    ಅಂತರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ಟೆಸ್ಟ್ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್ ಹೆಸರಿನಲ್ಲಿದೆ. 104 ಪಂದ್ಯಗಳನ್ನು ಮುನ್ನಡೆಸಿದ ಸ್ಮಿತ್ 53ರಲ್ಲಿ ಗೆಲುವು ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕ್ಕಿ ಪಾಟಿಂಗ್ ಇದ್ದು, 77 ಪಂದ್ಯಗಳಲ್ಲಿ 48ರಲ್ಲಿ ಗೆಲುವು ಪಡೆದಿದ್ದಾರೆ.

    ತಿಂಗಳ ಹಿಂದೆಯಷ್ಟೇ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯನ್ನು ಭಾರತ 9-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.

     

  • ದಿಢೀರ್ ಭಾರೀ ಇಳಿಕೆ ಆಯ್ತು ರೆಡ್‍ಮೀ ನೋಟ್ 4 ಬೆಲೆ

    ದಿಢೀರ್ ಭಾರೀ ಇಳಿಕೆ ಆಯ್ತು ರೆಡ್‍ಮೀ ನೋಟ್ 4 ಬೆಲೆ

    ನವದೆಹಲಿ: ಕ್ಸಿಯೋಮಿ ಕಂಪೆನಿಯ ರೆಡ್ ಮೀ ನೋಟ್ 4 ಫೋನಿನ ಬೆಲೆ ದಿಢೀರ್ 1 ಸಾವಿರ ರೂ. ಇಳಿಕೆಯಾಗಿದೆ.

    ಜನವರಿಯಲ್ಲಿ ಬಿಡುಗಡೆಯಾದಾಗ 32 ಜಿಬಿ ಆಂತರಿಕ ಮಮೊರಿ, 3ಜಿಬಿ RAM ಫೋನಿಗೆ 10,999 ರೂ. ಇದ್ದರೆ, 64 ಜಿಬಿ ಆಂತರಿಕ ಮಮೊರಿ, 4ಜಿಬಿ RAM ಫೋನಿಗೆ 12,999 ರೂ. ದರ ನಿಗದಿಯಾಗಿತ್ತು. ಆದರೆ ಈಗ 32 ಜಿಬಿ ಆಂತರಿಕ ಮೆಮೊರಿಯ ಫೋನ್ 9,999 ರೂ.ಗೆ ಲಭ್ಯವಿದ್ದರೆ, 64 ಜಿಬಿ ಫೋನ್ 11,999 ರೂ.ಗೆ ಲಭ್ಯವಿದೆ.

    ಬೆಲೆ ಕಡಿಮೆಯಾಗಿರುವ ವಿಚಾರವನ್ನು ಕ್ಸಿಯೋಮಿ ಕಂಪೆನಿಯ ನಿರ್ದೇಶಕ ಮನು ಕುಮಾರ್ ಜೈನ್ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. ಈ ಎರಡು ಫೋನ್ ಗಳು ಈಗ ಫ್ಲಿಪ್ ಕಾರ್ಟ್ ಮತ್ತು ಎಂಐ ಸ್ಟೋರ್ ನಿಂದ ಖರೀದಿಸಬಹುದಾಗಿದೆ.

    https://twitter.com/manukumarjain/status/929940822253961216

    ರೆಡ್‍ಮೀ ನೋಟ್ 4 ಗುಣವೈಶಿಷ್ಟ್ಯಗಳು
    ಬಾಡಿ ಮತ್ತು ಡಿಸ್ಪ್ಲೇ:
    151*76*8.5 ಮಿ.ಮೀ ಗಾತ್ರ, 165 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್( ಮೈಕ್ರೋ ಸಿಮ್+ ನ್ಯಾನೋ ಸಿಮ್) ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಸ್ಕ್ರೀನ್(1080*1920 ಪಿಕ್ಸೆಲ್, 401 ಪಿಪಿಐ, 16:09 ಬಾಡಿ ಅನುಪಾತ).

    ಪ್ಲಾಟ್ ಫಾರಂ ಮತ್ತು ಪ್ರೊಸೆಸರ್:
    ಆಂಡ್ರಾಯ್ಡ್ 6.0 ಮಾರ್ಶ್ ಮೆಲೋ, ಆಂಡ್ರಾಯ್ಡ್ ನೂಗಟ್ ಗೆ ಅಪ್‍ಡೇಟ್ ಮಾಡಬಹುದು. ಕ್ವಾಲಕಂ ಸ್ನಾಪ್‍ಡ್ರಾಗನ್ 625 ಅಕ್ಟಾಕೋರ್ 2. GHz  ಕಾರ್ಟೆಕ್ಸ್ ಎ 53 ಪ್ರೊಸೆಸರ್ Adreno 5 506 ಗ್ರಾಫಿಕ್ಸ್ ಪ್ರೊಸೆಸರ್.

    ಮೆಮೊರಿ:
    4 ಜಿಬಿ RAM 64 ಜಿಬಿ ಆಂತರಿಕ ಮೆಮೊರಿ, 3ಜಿಬಿ RAM 32 ಜಿಬಿ ಆಂತರಿಕ ಮೆಮೊರಿ, ಎರಡನೇ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ.

    ಕ್ಯಾಮೆರಾ ಮತ್ತು ಇತರೇ:
    ಡ್ಯುಯಲ್ ಎಲ್‍ಇಡಿ ಫ್ಲಾಶ್ ಹೊಂದಿರುವ 13 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್, ತೆಗೆಯಲು ಅಸಾಧ್ಯವಾದ 4100 ಎಂಎಎಚ್ ಬ್ಯಾಟರಿ.

  • ಪ್ರಧಾನಿ ಮೋದಿ ಕಾರ್ಯವೈಖರಿಯನ್ನು ವಿಶ್ವ ನಾಯಕರ ಮುಂದೆ ಹೊಗಳಿದ ಟ್ರಂಪ್

    ಪ್ರಧಾನಿ ಮೋದಿ ಕಾರ್ಯವೈಖರಿಯನ್ನು ವಿಶ್ವ ನಾಯಕರ ಮುಂದೆ ಹೊಗಳಿದ ಟ್ರಂಪ್

    ಡ್ಯಾನಂಗ್: 100 ಕೋಟಿ ಭಾರತೀಯರನ್ನು ಒಗ್ಗೂಡಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

    ಚೀನಾ ಪ್ರವಾಸ ಮುಕ್ತಾಯಗೊಳಿಸಿ ವಿಯೆಟ್ನಾಂ ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ(ಅಪೆಕ್) ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಟ್ರಂಪ್ ಮೋದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    70 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಭಾರತ ಆಚರಿಸುತ್ತಿದೆ. ನೂರು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ದೇಶದ ಪ್ರಜೆಗಳನ್ನು ಒಗ್ಗೂಡಿಸಿ ಯಶಸ್ವಿಯಾಗಿ ಮೋದಿ ಮುನ್ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

    ಭಾರತ ಮುಕ್ತ ಆರ್ಥಿಕತೆಗೆ ತೆರೆದ ಬಳಿಕ ಭಾರೀ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿದೆ. ಮೋದಿ ಅವರು ಎಲ್ಲ ಜನರನ್ನು ಒಗ್ಗೂಡಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ ಎಂದು ಟ್ರಂಪ್ ಶ್ಲಾಘಿಸಿದರು. ಜಪಾನ್, ರಷ್ಯಾ, ಚೀನಾ, ದಕ್ಷಿಣ ಕೊರಿಯಾ ನಾಯಕರು ಅಪೆಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

    ಪ್ರಧಾನಿ ಮೋದಿ  ಜೂನ್  ತಿಂಗಳಿನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಶ್ವೇತ ಭವನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು.

    ಇದನ್ನೂ ಓದಿ: ಶ್ವೇತಭವನದಲ್ಲಿ ಪ್ರಧಾನಿಯನ್ನು ಮುಜುಗರದಿಂದ ಪಾರು ಮಾಡಿದ್ರು ಅಜಿತ್ ದೋವಲ್!

     

     

  • ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ: ಇಳಿಕೆಯಾಗಲಿದೆ 178 ದಿನಬಳಕೆಯ ವಸ್ತುಗಳ ಬೆಲೆ

    ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ: ಇಳಿಕೆಯಾಗಲಿದೆ 178 ದಿನಬಳಕೆಯ ವಸ್ತುಗಳ ಬೆಲೆ

    ಗುವಾಹಟಿ: ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ. ನೀವು ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳು ಇನ್ನು ಮುಂದೆ ಇಳಿಕೆಯಾಗಲಿವೆ. ಬರೋಬ್ಬರೀ 178 ದಿನಬಳಕೆ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) 10%ರಷ್ಟು ಇಳಿಕೆಯಾಗಿದೆ.

    28% ರಷ್ಟಿದ್ದ ಜಿಎಸ್‍ಟಿ ತೆರಿಗೆಯನ್ನು 18%ಕ್ಕೆ ಇಳಿಸಲಾಗಿದೆ. ಶುಕ್ರವಾರ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜಿಎಸ್‍ಟಿ ಮಂಡಳಿಯ 23ನೇ ಸಭೆಯಲ್ಲಿ 178 ವಸ್ತುಗಳಿಗೆ ವಿಧಿಸಲಾಗಿದ್ದ ತೆರಿಗೆಯನ್ನು 18% ಇಳಿಕೆ ಮಾಡಿ, 50 ಸಾಮಗ್ರಿಗಳಿಗೆ ಮಾತ್ರ 28% ರ ತೆರಿಗೆ ವ್ಯಾಪ್ತಿಯಲ್ಲಿ ಮುಂದುವರೆಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಗೋಷ್ಠಿ ನಡೆಸಿ, ಒಟ್ಟು 178 ವಸ್ತುಗಳ ಮೇಲಿನ ತೆರಿಗೆಯನ್ನು 18% ಇಳಿಸಲಾಗಿದ್ದು, ನವೆಂಬರ್ 15 ರಿಂದ ಪರಿಷ್ಕೃತ ತೆರಿಗೆ ಜಾರಿಯಾಗಲಿದೆ ಎಂದು ತಿಳಿಸಿದರು.

    ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಪ್ರತಿಕ್ರಿಯಿಸಿ, ಗ್ರಾನೈಟ್, ಮಾರ್ಬಲ್, ಚಾಕ್ಲೇಟ್, ಚೂಯಿಂಗ್‍ಗಮ್, ವಾಚ್, ಬ್ಲೇಡ್, ಸ್ಟೌ, ಸೌಂದರ್ಯವರ್ಧಕಗಳು, ಶಾಂಪು ಮೇಲಿನ ತೆರಿಗೆಯನ್ನು ಇಳಿಸಲಾಗಿದೆ ಎಂದು ತಿಳಿಸಿದರು.

    ಪೇಂಟ್, ಸೀಮೆಂಟ್ ಜೊತೆ ಲಕ್ಷುರಿ ಉತ್ಪನ್ನಗಳಾದ ವಾಶಿಂಗ್ ಮಶೀನ್, ಏರ್ ಕಂಡಿಷನ್ ಸೇರಿದಂತೆ 50 ಉತ್ಪನ್ನಗಳ ಮೇಲೆ ಈ ಹಿಂದೆ ವಿಧಿಸಲಾಗುತ್ತಿದ್ದ 28% ತೆರಿಗೆಯನ್ನು ಮುಂದುವರಿಸಲಾಗಿದೆ. ಸೆಣಬು ಮತ್ತು ಹತ್ತಿಯ ಕೈ ಚೀಲಗಳ ಮೇಲಿನ ತೆರಿಗೆಯನ್ನು 18% ರಿಂದ 12% ಕ್ಕೆ ಇಳಿಸಲಾಗಿದೆ.

    ಮುಂದಿನ ದಿನಗಳಲ್ಲಿ 28% ತೆರಿಗೆ ವಿಧಿಸುವ ವಸ್ತುಗಳು 18% ತೆರಿಗೆ ವ್ಯಾಪ್ತಿಗೆ ಬರಲಿದೆ. ಈಗಲೇ ಈ ವಸ್ತುಗಳ ಮೇಲೆ ತೆರಿಗೆ ಇಳಿಸಿದರೆ ಆದಾಯ ಸಂಗ್ರಹಕ್ಕೆ ಭಾರೀ ಹೊಡೆತ ಬೀಳುತ್ತದೆ ಎಂದು ಸುಶೀಲ್ ಮೋದಿ ತಿಳಿಸಿದರು.

    ಜುಲೈ ಒಂದರಂದು ದೇಶದಲ್ಲಿ ಜಿಎಸ್‍ಟಿ ಜಾರಿಯಾಗಿದ್ದು, ವಸ್ತುಗಳ ಮೇಲೆ 0%, 5%, 12%, 18%, 28% ತೆರಿಗೆ ವಿಧಿಸಲಾಗುತ್ತಿದೆ.

     

     

  • 8 ವರ್ಷದಲ್ಲಿ ಫಸ್ಟ್ ಟೈಂ ಭಾರತದಲ್ಲಿ ಚಿನ್ನದ ಬಳಕೆ ಭಾರೀ ಇಳಿಕೆ

    8 ವರ್ಷದಲ್ಲಿ ಫಸ್ಟ್ ಟೈಂ ಭಾರತದಲ್ಲಿ ಚಿನ್ನದ ಬಳಕೆ ಭಾರೀ ಇಳಿಕೆ

    ಮುಂಬೈ: 8 ವರ್ಷದಲ್ಲೇ ಭಾರತದಲ್ಲಿ ಚಿನ್ನದ ಬಳಕೆ ಭಾರೀ ಇಳಿಕೆಯಾಗಿದೆ ಎಂದು ವರ್ಲ್ಡ್  ಗೋಲ್ಡ್ ಕೌನ್ಸಿಲ್ (ಡಬ್ಲ್ಯೂಜಿಸಿ)ಹೇಳಿದೆ.

    ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಸರಾಸರಿ ಪ್ರತಿ ವರ್ಷ 845 ಟನ್ ಚಿನ್ನ ಬಳಕೆಯಾಗುತಿತ್ತು. ಆದರೆ 2017ರಲ್ಲಿ ಅಂದಾಜು 650 ಟನ್ ಬಳಕೆಯಾಗುವ ಸಾಧ್ಯತೆಯಿದೆ ಎಂದು ಭಾರತದ ಡಬ್ಲ್ಯೂಜಿಸಿ ಆಡಳಿತ ನಿರ್ದೇಶಕರಾದ ಸೋಮಸುಂದರಂ ಪಿಆರ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    2016ರಲ್ಲಿ 666.1 ಟನ್ ಚಿನ್ನ ಬಳಕೆಯಾಗಿತ್ತು, ಜಿಎಸ್‍ಟಿ ಜಾರಿ ಮತ್ತು  ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಜಾರಿ ಮಾಡಿ ಆಭರಣ ಖರೀದಿ ಮೇಲೆ ಕಠಿಣ ಕ್ರಮವನ್ನು ಕೇಂದ್ರ ಸರ್ಕಾರ ವಿಧಿಸಿದ ಬಳಿಕ ಚಿನ್ನದ ಬಳಕೆ ಭಾರೀ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಜುಲೈ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಚಿನ್ನ ಬೇಡಿಕೆ ಶೇ.24ರಷ್ಟು ಇಳಿಕೆಯಾಗಿದೆ. ಭಾರತದಲ್ಲಿ ಮೂರನೇ ಎರಡರಷ್ಟು ಚಿನ್ನದ ಬೇಡಿಕೆ ಗ್ರಾಮೀಣ ಭಾಗದಿಂದ ಬರುತ್ತದೆ. ಆದರೆ ಈ ಬಾರಿ ಮುಂಗಾರು ಮಳೆ ಕೆಲವೆಡೆ ಬಾರದೇ ಇದ್ದ ಕಾರಣ ಚಿನ್ನದ ಬೇಡಿಕೆ ಕುಸಿದಿದೆ  ಎಂದು ಡಬ್ಲ್ಯೂಜಿಸಿ ತನ್ನ ವರದಿಯಲ್ಲಿ ತಿಳಿಸಿದೆ.

    ಅಕ್ಟೋಬರ್ – ಡಿಸೆಂಬರ್ ವೇಳೆ ಹಬ್ಬಗಳು ಮತ್ತು ಮದುವೆಗಳು ಹೆಚ್ಚಾಗಿ ನಡೆಯುವ ಕಾರಣ ಈ ಅವಧಿಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಡಬ್ಲ್ಯೂಜಿಸಿ ಹೇಳಿದೆ.

    ಜಿಎಸ್‍ಟಿಗೂ ಮೊದಲು ಚಿನ್ನದ ಮೇಲೆ ಸೇವಾ ತೆರಿಗೆ 1.2% ಇತ್ತು. ಜಿಎಸ್‍ಟಿಯಲ್ಲಿ ಚಿನ್ನದ ಮೇಲೆ 3% ತೆರಿಗೆ ವಿಧಿಸಲಾಗಿದೆ.

    ಇದೇ ಅಕ್ಟೋಬರ್ ನಲ್ಲಿ 50 ಸಾವಿರ ರೂ. ಮೇಲ್ಪಟ್ಟ ಚಿನ್ನಾಭರಣಗಳ ಖರೀದಿಗೆ ಪಾನ್‍ಕಾರ್ಡ್ ಕಡ್ಡಾಯಗೊಳಿಸಿದ್ದ ಕಾನೂನನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಇನ್ನು ಮುಂದೆ 2 ಲಕ್ಷ ರು. ವರೆಗಿನ ಚಿನ್ನಾಭರಣ ಖರೀದಿಗೆ ಪಾನ್‍ಕಾರ್ಡ್ ಕಡ್ಡಾಯ ಇರುವುದಿಲ್ಲ. ಅದಕ್ಕೆ ಮೇಲ್ಪಟ್ಟ ಮೊತ್ತದ ಖರೀದಿಗೆ ಮಾತ್ರವೇ ಪಾನ್ ಕಡ್ಡಾಯ ಎಂದು ಸರ್ಕಾರ ತಿಳಿಸಿತ್ತು.

    ನೋಟ್ ಬ್ಯಾನ್ ಬಳಿಕ ಆಭರಣ ಉದ್ಯಮಿಗಳು, ಅಕ್ರಮ ಹಣ ಸಕ್ರಮ ಮಾಡುವ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ಸಂಶಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ- 2002 ಅನ್ನು ಆಭರಣ ಖರೀದಿ ವ್ಯವಹಾರಗಳಿಗೆ ವಿಸ್ತರಿಸಿತ್ತು. ವಿಸ್ತರಿಸಿದ ಪರಿಣಾಮ 50 ಸಾವಿರ ರೂ. ಮೇಲ್ಪಟ್ಟ ಚಿನ್ನಖರೀದಿ ವೇಳೆ ಗ್ರಾಹಕರು ಪಾನ್‍ಕಾರ್ಡ್ ವಿವರ ನೀಡಬೇಕಿತ್ತು. ಜೊತೆಗೆ ವ್ಯಾಪಾರಿಗಳು ಭಾರೀ ಮೌಲ್ಯದ ಖರೀದಿ ಬಗ್ಗೆ ದಾಖಲೆ ಇಟ್ಟುಕೊಳ್ಳುವುದರ ಜತೆಗೆ ಅದನ್ನು ಹಣಕಾಸು ಗುಪ್ತ ಚರ ಇಲಾಖೆಗೆ ಸಲ್ಲಿಸಬೇಕಿತ್ತು.

    ಪ್ರಸ್ತುತ ಈಗ 2 ಲಕ್ಷ ರೂ. ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ಪಾನ್, ಆಧಾರ್ ನಂಬರ್, ಡಿಎಲ್ ಅಥವಾ ಪಾಸ್‍ಪೋರ್ಟ್ ಪ್ರತಿ ನೀಡುವುದು ಕಡ್ಡಾಯವಾಗಿದೆ.

  • ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ ಅಪ್: ಟೀಂ ಇಂಡಿಯಾದ ಆಟಗಾರರಿಗೆ ಸಿಕ್ಕಿದ ನಗದು ಬಹುಮಾನ ಎಷ್ಟು?

    ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ ಅಪ್: ಟೀಂ ಇಂಡಿಯಾದ ಆಟಗಾರರಿಗೆ ಸಿಕ್ಕಿದ ನಗದು ಬಹುಮಾನ ಎಷ್ಟು?

    ಮುಂಬೈ: ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಪಾಕಿಸ್ತಾನದ ವಿರುದ್ಧ ಸೋತು ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿದ್ದ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗೆ ಬಿಸಿಸಿಐ ತಲಾ 38.67 ಲಕ್ಷ ರೂ. ನಗದು ಬಹುಮಾನ ನೀಡಿದೆ.

    ಬಿಸಿಸಿಐ ತನ್ನ ವೆಬ್‍ಸೈಟ್ ನಲ್ಲಿ 15 ಆಟಗಾರರಿಗೆ ನೀಡಿದ ನಗದು ಬಹುಮಾನದ ಮೊತ್ತದ ಮಾಹಿತಿಯನ್ನು ಪ್ರಕಟಿಸಿದೆ. ಅಕ್ಟೋಬರ್ 18, 2017 ರಿಂದ ಜನವರಿ 17,2018 ರ ಅವಧಿಯಲ್ಲಿ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಕೋಚ್ ರವಿಶಾಸ್ತ್ರಿ ಅವರಿಗೆ 2 ಕೋಟಿ ರೂ. ವೇತನವನ್ನು ನೀಡಲಾಗಿದೆ.

    ಇಂಗ್ಲೆಡ್ ನ ಓವಲ್ ಕ್ರೀಡಾಂಗಣದಲ್ಲಿ ಜೂನ್ 18ರಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕ್ ವಿರುದ್ಧ 180 ರನ್ ಗಳ ಅಂತರದಿಂದ ಸೋತಿತ್ತು. ಈ ಮೂಲಕ ಪಾಕಿಸ್ತಾನ ತನ್ನ ಚೊಚ್ಚಲ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.

    ಐಸಿಸಿ ನೀಡಿದ ಬಹುಮಾನ ಎಷ್ಟು?
    ಐಸಿಸಿ ಚಾಂಪಿಯನ್ ಟ್ರೋಫಿ ವಿಜೇತ ಪಾಕ್ ತಂಡಕ್ಕೆ 2.2 ದಶಲಕ್ಷ ಡಾಲರ್ ಹಣ(ಅಂದಾಜು 14 ಕೋಟಿ ರೂ.) ಬಹುಮಾನ ರೂಪದಲ್ಲಿ ಸಿಕ್ಕಿದೆ. ಈ ಟೂರ್ನಿಗೆ ಐಸಿಸಿ ಒಟ್ಟು 4.5 ದಶಲಕ್ಷ ಡಾಲರ್(ಅಂದಾಜು 28 ಕೋಟಿ ರೂ.) ಬಹುಮಾನವನ್ನು ತಂಡಗಳಿಗೆ ನೀಡಿತ್ತು. ದ್ವಿತೀಯ ಸ್ಥಾನಿ ಭಾರತ ತಂಡಕ್ಕೆ 1.1 ದಶಲಕ್ಷ ಡಾಲರ್(ಅಂದಾಜು 7ಕೋಟಿ ರೂ.) ನಗದು ಬಹುಮಾನ ಸಿಕ್ಕಿತ್ತು.

    ಸೆಮಿಫೈನಲ್‍ನಲ್ಲಿ ಸೋತ ಎರಡೂ ತಂಡಗಳಿಗೆ 4.50 ಲಕ್ಷ ಡಾಲರ್(ಅಂದಾಜು 2.8 ಕೋಟಿ ರೂ.) ಸಿಕ್ಕಿದೆ. ಗುಂಪಿನಲ್ಲಿ ಮೂರನೇ ಸ್ಥಾನವನ್ನು ಪಡೆದ ಎರಡು ತಂಡಕ್ಕೆ 90 ಸಾವಿರ ಡಾಲರ್(ಅಂದಾಜು 57 ಲಕ್ಷ ರೂ.), ಗುಂಪಿನಲ್ಲಿ ಕೊನೆಯ ಸ್ಥಾನವನ್ನು ಪಡೆದ ತಂಡಕ್ಕೆ 60 ಸಾವಿರ ಡಾಲರ್( ಅಂದಾಜು 38 ಲಕ್ಷ ರೂ.) ಬಹುಮಾನ ದೊರೆತಿದೆ.

    2013ರ ಟೂರ್ನಿಗೆ ಹೋಲಿಸಿದರೆ ಈ ಬಾರಿಯ ಐಸಿಸಿ ಬಹುಮಾನದ ಮೊತ್ತವನ್ನು ಹೆಚ್ಚಿಸಿತ್ತು. ಒಟ್ಟು 5 ಲಕ್ಷ ಡಾಲರ್(ಅಂದಾಜು 3 ಕೋಟಿ ರೂ.) ಹೆಚ್ಚಿನ ಅನುದಾನವನ್ನು ನೀಡಿತ್ತು. ಜೂನ್ 1ರಿಂದ ಜೂನ್ 18 ರವರೆಗೆ ಇಂಗ್ಲೆಂಡಿನಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆದಿತ್ತು.

    2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ ಗಳಿಂದ ಸೋಲಿಸಿ ಭಾರತ ಚಾಂಪಿಯನ್ ಪಟ್ಟವನ್ನು ಆಲಂಕರಿಸಿತ್ತು.

     

  • ದಕ್ಷಿಣ ಆಫ್ರಿಕಾ ಚುನಾವಣೆಯಲ್ಲಿ ಬಳಕೆಯಾಗಲಿದೆ ಹಳೆಯ 500, 1 ಸಾವಿರ ರೂ. ನೋಟುಗಳು!

    ದಕ್ಷಿಣ ಆಫ್ರಿಕಾ ಚುನಾವಣೆಯಲ್ಲಿ ಬಳಕೆಯಾಗಲಿದೆ ಹಳೆಯ 500, 1 ಸಾವಿರ ರೂ. ನೋಟುಗಳು!

    ತಿರುವನಂತಪುರಂ: ಕಳೆದ ವರ್ಷ ನಿಷೇಧಗೊಂಡಿರುವ 500 ಮತ್ತು 1 ಸಾವಿರ ರೂ. ನೋಟುಗಳು ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಳಕೆಯಾಗಲಿದೆ.

    ಹೌದು. 2019ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ವೇಳೆ ಇಲ್ಲಿಯ ಪ್ರಚಾರ ಕಾರ್ಯಗಳಲ್ಲಿ ಹಾರ್ಡ್ ಬೋರ್ಡ್ ಗಳನ್ನು ಬಳಸಲಾಗುತ್ತದೆ. ಈ ಹಾರ್ಡ್ ಬೋರ್ಡ್ ಗಳನ್ನು ಭಾರತದಲ್ಲಿ ನಿಷೇಧಗೊಂಡಿರುವ ನೋಟುಗಳನ್ನು ತಯಾರಿಸಿ ನಿರ್ಮಾಣ ಮಾಡಲಾಗುತ್ತಿದೆ.

    ದಕ್ಷಿಣ ಆಫ್ರಿಕಾಗೆ ಹೇಗೆ ಹೋಗುತ್ತೆ?
    ನಿಷೇಧಗೊಂಡಿರುವ ನೋಟುಗಳನ್ನು ಸುಟ್ಟರೆ ಪರಿಸರ ಮಾಲಿನ್ಯವಾಗುವ ಕಾರಣ ಆರ್‍ಬಿಐ ಕೇರಳದ ಕಣ್ಣೂರಿನಲ್ಲಿರವ ವೆಸ್ಟರ್ನ್ ಇಂಡಿಯಾ ಪ್ಲೈವುಡ್(ಡಬ್ಲ್ಯೂಐಪಿ) ಕಂಪೆನಿಯನ್ನು ಸಂಪರ್ಕಿಸಿತ್ತು. ಬಳಿಕ ಕಂಪೆನಿ ಹಳೆಯ ನೋಟುಗಳನ್ನು ಬಳಸಿ ಈಗ ಪ್ಲೈವುಡ್ ಹಾರ್ಡ್ ಬೋರ್ಡ್ ಗಳನ್ನು ತಯಾರಿಸಿದೆ.

    ಕಂಪನಿಯ ಪ್ರಧಾನ ವ್ಯವಸ್ಥಾಪಕ ಟಿಐ ಬಾವ ಪ್ರತಿಕ್ರಿಯಿಸಿ, ನೋಟ್ ನಿಷೇಧಗೊಂಡ ಬಳಿಕ ತಿರುವನಂತಪುರಂನಲ್ಲಿರುವ ಆರ್‍ಬಿಐ ಕಚೇರಿ ನಮ್ಮನ್ನು ಸಂಪರ್ಕಿಸಿತು. ಬಳಿಕ ನಾವು ನೋಟಿನ ಸ್ಯಾಂಪಲ್ ನೀಡುವಂತೆ ಕೇಳಿದ್ವಿ. ನಮ್ಮ ರಿಸರ್ಚ್ ತಂಡ ನೋಟುಗಳನ್ನು ಬಳಸಿ ಪ್ಲೈವುಡ್ ತಯಾರಿಸುವುದು ಹೇಗೆ ಎನ್ನುವುದನ್ನು ಕಂಡುಹಿಡಿದರು. ಬಳಿಕ ಈ ನೋಟುಗಳನ್ನು ಬಳಸಿ ಪ್ಲೈವುಡ್ ತಯಾರಿಸಲಾಗಿದ್ದು, ಇವುಗಳು 2019ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಳಕೆಯಾಗಲಿದೆ ಎಂದು ಹೇಳಿದರು.

    ಹೇಗೆ ಹಾರ್ಡ್ ಬೋರ್ಡ್ ತಯಾರಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಹೆಚ್ಚಿನ ಶಾಖದಲ್ಲಿ ನೋಟಿನ ಚೂರುಗಳನ್ನು ಕುದಿಸಿ ಹಿಟ್ಟು ಮಾಡಲಾಗುತ್ತದೆ. ಈ ಹಿಟ್ಟಿನ ಜೊತೆ ಮರದ ಹಿಟ್ಟನ್ನು ಮಿಶ್ರಣ ಮಾಡಿ ಪ್ಲೈವುಡ್ ಬೋರ್ಡ್ ತಯಾರಿಸಲಾಗಿದೆ. ಇಂತಹ ಬೋರ್ಡ್ ಗಳಿಗೆ ಆಫ್ರಿಕಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಬೇಡಿಕೆಯಿದೆ ಎಂದು ಬಾವ ಉತ್ತರಿಸಿದರು.

    ಪ್ರಸ್ತುತ ಭಾರತದಲ್ಲಿ ನೋಟನ್ನು ಸಂಸ್ಕರಿಸಿ ಅದನ್ನು ಪ್ಲೈವುಡ್ ಮಾಡುವ ತಂತ್ರಜ್ಞಾನ ಡಬ್ಲ್ಯೂಐಪಿ ಕಂಪೆನಿ ಬಳಿ ಮಾತ್ರ ಇದೆ. ಇದೂವರೆಗೆ 750 ಟನ್ ಹಳೆಯ ನೋಟುಗಳನ್ನು ನಾವು ಸ್ವೀಕರಿಸಿದ್ದೇವೆ. ಒಂದು ಟನ್ ನೋಟಿಗೆ 128 ರೂ. ನೀಡಿದ್ದೇವೆ. ಈ ಎಲ್ಲ ಪ್ರಕ್ರಿಯೆ ಕಣ್ಣೂರಿನ ವಾಲಪಟ್ಟನಂಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದಿದೆ ಎಂದು ಅವರು ವಿವರಿಸಿದರು.

    ನಾವು ತಯಾರಿಸಿದ ಹಾರ್ಡ್ ಬೋರ್ಡ್ ಗಳು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಈ ಬೋರ್ಡ್ ನೋಟ್ ನಿಂದ ತಯಾರಿಸಲಾಗಿದೆ. ಹೀಗಾಗಿ ಇದಕ್ಕೆ ಬೆಲೆ ಜಾಸ್ತಿ ಎಂದು ಹೇಳಿ ಮಾರಾಟ ಮಾಡುತ್ತಿದ್ದಾರೆ. ಆದರೆ ನಾವು ಆ ರೀತಿ ಮಾಡದೇ ಒಂದೇ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು..

    ಆರ್‍ಬಿಐಗೆ  ಎಷ್ಟು ನೋಟು ಬಂದಿದೆ?
    ರದ್ದಾಗಿರುವ 500 ಮತ್ತು 1 ಸಾವಿರ ರೂ. ಮುಖಬೆಲೆಯ 15.44 ಲಕ್ಷ ರೂ. ಮೌಲ್ಯದ ನೋಟುಗಳ ಪೈಕಿ 15.28 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಆರ್‍ಬಿಐಗೆ ವಾಪಸ್ ಬಂದಿದೆ. 16 ಸಾವಿರ ಕೋಟಿ ರೂ. ಮೌಲ್ಯದ ನೋಟುಗಳು ಅಥವಾ ಶೇ.1.4 ರಷ್ಟು ನೋಟುಗಳು ವಾಪಸ್ ಬಂದಿಲ್ಲ. ಶೇ.98.6ರಷ್ಟು ನೋಟುಗಳು ವಾಪಸ್ ಬಂದಿದೆ ಎಂದು ಆರ್‍ಬಿಐ ಆಗಸ್ಟ್ 30ರಂದು ಮಾಹಿತಿ ನೀಡಿತ್ತು.