Tag: india

  • ಸೋಲುವ ಭೀತಿಯಲ್ಲಿ ಹೈಡ್ರಾಮಾ ಸೃಷ್ಟಿಸಿದ ಬಾಂಗ್ಲಾ ಆಟಗಾರರು! ವಿಡಿಯೋ

    ಸೋಲುವ ಭೀತಿಯಲ್ಲಿ ಹೈಡ್ರಾಮಾ ಸೃಷ್ಟಿಸಿದ ಬಾಂಗ್ಲಾ ಆಟಗಾರರು! ವಿಡಿಯೋ

    ಕೊಲಂಬೊ: ನಿದಾಸ್ ತ್ರಿಕೋನ ಟಿ20 ಸರಣಿಯ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದ್ದ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಎರಡು ವಿಕೆಟ್ ಜಯ ಪಡೆದು ಬಾಂಗ್ಲಾದೇಶ ಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಅಂಪೈರ್ ಹಾಗೂ ಆಟಗಾರ ನಡುವೆ ಭಾರೀ ವಾಗ್ವಾದ ನಡೆದಿದೆ.

    ಪಂದ್ಯದ ಅಂತಿಮ ಓವರ್ ವೇಳೆ ಬಾಂಗ್ಲಾದ ಮಹಮದುಲ್ಲ ಮತ್ತು ಮುಸ್ತಫಿಜೂರ್ ರೆಹ್ಮಾನ್ ಜೋಡಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಲಂಕಾ ವೇಗಿ ಉದಾನ ಸತತ 2 ಬೌನ್ಸರ್ ಹಾಕಿದರು. 2ನೇ ಎಸೆತದಲ್ಲಿ ಮುಸ್ತಫಿಜೂರ್ ರನೌಟಾದರು. ಒಂದು ಓವರ್ ನಲ್ಲಿ ಒಂದು ಬೌನ್ಸರ್ ಗೆ ಮಾತ್ರ ಅಕಾಶವಿದ್ದರೂ 2ನೇ ಬೌನ್ಸರನ್ನು ಅಂಪೈರ್ ನೋಬಾಲ್ ಎಂದು ಪರಿಗಣಿಸಲಿಲ್ಲ. ಇದರಿಂದ ಸಿಟ್ಟಾದ ಬಾಂಗ್ಲಾ ಆಟಗಾರು ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ಅಸಮಾಧಾನ ವ್ಯಕಪಡಿಸಿ ವಾಗ್ವಾದ ನಡೆಸಿದ್ದರು. ಅಲ್ಲದೇ ಬಾಂಗ್ಲಾ ತಂಡದ ನಾಯಕ ಶಕೀಬ್ ಬ್ಯಾಟ್ಸ್ ಮನ್ ಗಳನ್ನು ಮೈದಾನದಿಂದ ಹೊರಕ್ಕೆ ಬರಲು ಸೂಚಿಸಿದ್ದರು. ಅಂಪೈರ್ ಗಳ ಮಧ್ಯಪ್ರವೇಶದ ಬಳಿಕ ಕೊನೆಯ ಓವರ್ ನ ನಾಲ್ಕು ಎಸೆತ ಉಳಿದಿತ್ತು. ಈ ವೇಳೆ ಕ್ರಮವಾಗಿ 4, 2, 6 ರನ್ ಸಿಡಿಸುವ ಮೂಲಕ ಮಹಮದುಲ್ಲ ಬಾಂಗ್ಲಾ ತಂಡದ ಗೆಲುವಿಗೆ ಕಾರಣರಾದರು.

    https://twitter.com/Nishant96336349/status/974698788966211584

    ತನಿಖೆ: ಶ್ರೀಲಂಕಾ 70 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯ ನೆನಪಿನ ಹಿನ್ನೆಲೆ ತ್ರಿಕೋನ ಟಿ20 ಸರಣಿ ಆಯೋಜಿಸಿದೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ನಂತರ ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್ ಕಿಟಕಿ ಗಾಜು ಒಡೆದ ಘಟನೆಯೂ ನಡೆದಿದೆ. ಘಟನೆ ಕುರಿತು ಕ್ರೀಡಾಂಗಣ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    https://twitter.com/beingnik07/status/974698903143555072

    ಘಟನೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಪಂದ್ಯದ ರೆಫರಿ ಕ್ರಿಸ್ ಬ್ರಾಡ್ ಹ್ಯಾಸ್ ಅಧಿಕಾರಿಗಳಿಗೆ ಕೊಠಡಿಯ ಸಿಸಿಟಿವಿ ದೃಶ್ಯಗಳನ್ನು ನೀಡಲು ಹೇಳಿದ್ದಾರೆ. ಐಸಿಸಿ ಮ್ಯಾಚ್ ರೆಫರಿ ಘಟನೆ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

    ಪಂದ್ಯದ ಕೊನೆಯ ಓವರ್ ನಲ್ಲಿ ನಡೆದ ಆಟಗಾರರ ಹಾಗೂ ಅಂಪೈರ್ ಗಳ ನಡುವಿನ ವಾಗ್ವಾದ ಕುರಿತು ಕೂಡ ಅಂಪೈರ್ ಗಳು ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಭಾನುವಾರ ಭಾರತ ಮತ್ತು ಬಾಂಗ್ಲಾ ನಡುವೆ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

  • ಟೀಂ ಇಂಡಿಯಾದ ಮಹಿಳಾ ಕ್ರಿಕೆಟರ್ ಹೊಡೆದ ಸಿಕ್ಸರ್‌ಗೆ  ಉರುಳಿಬಿತ್ತು ಸ್ಕೋರ್ ಬೋರ್ಡ್ ನಂಬರ್ಸ್-ವಿಡಿಯೋ

    ಟೀಂ ಇಂಡಿಯಾದ ಮಹಿಳಾ ಕ್ರಿಕೆಟರ್ ಹೊಡೆದ ಸಿಕ್ಸರ್‌ಗೆ ಉರುಳಿಬಿತ್ತು ಸ್ಕೋರ್ ಬೋರ್ಡ್ ನಂಬರ್ಸ್-ವಿಡಿಯೋ

    ವಡೋದರಾ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರ್ತಿ ಪೂಜಾ ವಸ್ತ್ರಾಕರ್ ಸಿಡಿಸಿದ ಸಿಕ್ಸರ್ ಗೆ ಸ್ಕೋರ್ ಬೋರ್ಡ್ ನಲ್ಲಿದ್ದ ಅಕ್ಷರಗಳು ಉರುಳಿಬಿದ್ದ ವಿಡಿಯೋ ವೈರಲ್ ಆಗಿದೆ.

    ಐಸಿಸಿ ಮಹಿಳಾ ಕ್ರಿಕೆಟ್ ಚಾಂಪಿಯನ್‍ಶಿಪ್ ಭಾಗವಾಗಿ ಆಯೋಜಿಸಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೆನೇ ಪಂದ್ಯದ 40ನೇ ಓವರ್ ನಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ಜೆಸ್ ಜೋನ್ಸನ್ ಎಸೆತವನ್ನು ಪೂಜಾ ವಸ್ತ್ರಕರ್ ಸಿಕ್ಸರ್ ಗೆ ಅಟ್ಟಿದ್ದರು. ಈ ವೇಳೆ ಬಾಲ್ ಸ್ಕೋರ್ ಬೋರ್ಡ್‍ಗೆ ಬಿದ್ದು ಅದರಲ್ಲಿ ಜೋಡಣೆಯಾಗಿದ್ದ ಅಕ್ಷರಗಳು ಕೆಳಗಡೆ ಬಿದ್ದಿದೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ವನಿತೆಯರ ತಂಡ ಗೆಲುವಿನ ಸನಿಹದಲ್ಲಿ ಎಡವಿತ್ತು. ಪೂಜಾ ವಸ್ತ್ರಾಕರ್  ಬೌಲರ್ ಆಗಿದ್ದು, ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬಿಸಿ 33 ಎಸೆಗಳಲ್ಲಿ 30 ರನ್ ಸಿಡಿಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ (51) ಸಿಡಿಸಿದ್ದ ಪೂಜಾ ವಸ್ತ್ರಾಕರ್  ಭಾರತದ ದಿಟ್ಟ ಹೋರಾಟ ನೀಡಲು ಕಾರಣರಾಗಿದ್ದರು.

    ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲುವ ಮೂಲಕ ಸರಣಿಯನ್ನು ಕಳೆದು ಕೊಂಡಿದೆ. ಮೊದಲ ಪಂದ್ಯದಲ್ಲಿ 5 ವಿಕೆಟ್ ಸೋಲು ಪಡೆದಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ 60 ರನ್ ಅಂತರದಿಂದ ಸೋಲನ್ನು ಅನುಭವಿಸಿದೆ.

    ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಮಾರ್ಚ್ 18 ರಂದು ನಡೆಯಲಿದೆ. ಈ ಸರಣಿಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ಮಾರ್ಚ್ 22 ರಿಂದ ಆರಂಭವಾಗುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ತ್ರಿಕೋನ ಟಿ20 ಸರಣಿಯಲ್ಲಿ ಭಾಗವಹಿಸಲಿದೆ.

  • ದೇಶೀಯ ಮಾರುಕಟ್ಟೆಗೆ ಸ್ವದೇಶಿ ರೆಡ್‍ಮೀ 5 ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ದೇಶೀಯ ಮಾರುಕಟ್ಟೆಗೆ ಸ್ವದೇಶಿ ರೆಡ್‍ಮೀ 5 ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಬೆಂಗಳೂರು: ದೇಶೀಯ ಮಾರುಕಟ್ಟೆಗೆ ಕ್ಸಿಯೋಮಿ ಕಂಪೆನಿಯ ರೆಡ್‍ಮೀ 5 ಡ್ಯುಯಲ್ ಸಿಮ್ ಫೋನ್ ಮೂರು ಮಾದರಿಯಲ್ಲಿ ಬಿಡುಗಡೆಯಾಗಿದೆ.

    ಭಾರತದಲ್ಲಿ ಮಾರಾಟವಾಗುವ ಈ ಎಲ್ಲ ಫೋನ್ ಗಳು ಸ್ವದೇಶದಲ್ಲೇ ತಯಾರಾಗಿದೆ ಎಂದು ಕಂಪೆನಿ ತಿಳಿಸಿದೆ. ಅಮೇಜಾನ್, ಎಂಐ ಸ್ಟೋರ್ ಮತ್ತು ಆಫ್ ಲೈನ್ ಸ್ಟೋರ್ ನಲ್ಲಿ ಈ ಫೋನ್ ಗಳು ಲಭ್ಯವಿದೆ. ಈ ಮೂರು ಫೋನ್ ಗಳ ಮೊದಲ ಫ್ಲಾಶ್ ಸೇಲ್ ಮಾರ್ಚ್ 20ರ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.

    ರೆಡ್‍ಮೀ 5 ಕ್ವಾಲಕಂ ಎಸ್‍ಡಿಎಂ 450 ಅಕ್ಟಾ ಕೋರ್ 1.8 GHz ಕಾರ್ಟೆಕ್ಸ್ ಎ-53 ಪ್ರೊಸೆಸರ್ ಹೊಂದಿದ್ದು, AnTuTu ಬೆಂಚ್ ಮಾರ್ಕ್ ನಲ್ಲಿ 69,628 ಸ್ಕೋರ್ ಗಳಿಸಿದೆ. ಡಿಸೆಂಬರ್ ನಲ್ಲಿ ಈ ಫೋನ್ ಚೀನಾದಲ್ಲಿ ಬಿಡುಗಡೆಯಾಗಿತ್ತು.

    ಬೆಲೆ ಎಷ್ಟು?
    2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 7,999 ರೂ., 3 ಜಿಬಿ ರ‍್ಯಾಮ್/32 ಜಿಬಿ  ಆಂತರಿಕ ಮೆಮೊರಿಯ ಫೋನಿಗೆ 8,999 ರೂ., 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 10,999 ರೂ. ನಿಗದಿ ಮಾಡಿದೆ

    ಗುಣವೈಶಿಷ್ಟ್ಯಗಳು
    ಬಾಡಿ ಮತ್ತು ಡಿಸ್ಪ್ಲೇ:
    151.8* 72.8 * 7.7 ಮಿ.ಮೀ., 157 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್( ನ್ಯಾನೋ ಸಿಮ್), 5.7 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720*1440 ಪಿಕ್ಸೆಲ್, 18:9 ಅನುಪಾತ, 282 ಪಿಪಿಐ).

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 7.1.2 ನೂಗಟ್ ಓಎಸ್ ಎಂಐ ಯೂಸರ್ ಇಂಟರ್ ಫೇಸ್ 9.1, ಕ್ವಾಲಕಂ ಎಸ್‍ಡಿಎಂ 450 ಅಕ್ಟಾ ಕೋರ್ 1.8 GHz ಕಾರ್ಟೆಕ್ಸ್ ಎ-53 ಪ್ರೊಸೆಸರ್, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, ಎರಡನೇ ಸಿಮ್ ನಲ್ಲಿ ಕಾರ್ಡ್ ಹಾಕಿದ್ರೆ 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 2ಜಿಬಿ ರ‍್ಯಾಮ್/16 ಜಿಬಿ, 3ಜಿಬಿ ರ‍್ಯಾಮ್/32 ಜಿಬಿ, 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ.

    ಕ್ಯಾಮೆರಾ ಮತ್ತು ಇತರೇ:
    12 ಎಂಪಿ ಹಿಂದುಗಡೆ, 5 ಎಂಪಿ ಮುಂದುಗಡೆ ಕ್ಯಾಮೆರಾ, ಎಲ್‍ಇಡಿ ಫ್ಲಾಶ್, ಫಿಂಗರ್ ಪ್ರಿಂಟ್ ಸೆನ್ಸರ್, ಮೈಕ್ರೋ ಯುಎಸ್‍ಬಿ 2.0, ಫಾಸ್ಟ್ ಬ್ಯಾಟರಿ ಚಾರ್ಜಿಂಗ್5V/2A, ತೆಗೆಯಲು ಅಸಾಧ್ಯವಾದ ಲಿಪೋ-3300 ಎಂಎಎಚ್ ಬ್ಯಾಟರಿ.

     

     

     

     

     

     

     

     

  • ಮೋದಿ, ರಾಹುಲ್, ಟ್ರಂಪ್‍ಗೆ ಎಷ್ಟು ಮಂದಿ ನಕಲಿ ಟ್ವಿಟ್ಟರ್ ಫಾಲೋವರ್ಸ್‍ಗಳಿದ್ದಾರೆ? ಇಲ್ಲಿದೆ ಪೂರ್ಣ ಮಾಹಿತಿ

    ಮೋದಿ, ರಾಹುಲ್, ಟ್ರಂಪ್‍ಗೆ ಎಷ್ಟು ಮಂದಿ ನಕಲಿ ಟ್ವಿಟ್ಟರ್ ಫಾಲೋವರ್ಸ್‍ಗಳಿದ್ದಾರೆ? ಇಲ್ಲಿದೆ ಪೂರ್ಣ ಮಾಹಿತಿ

    ಜಿನಿವಾ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಫಾಲೋವರ್ಸ್ ಪೈಕಿ 60% ಫಾಲೋವರ್ಸ್ ನಕಲಿ ಎಂದು ಎಂದು ಸ್ವಿಜರ್ಲ್ಯಾಂಡ್ ಸಂಸ್ಥೆಯೊಂದು ತಿಳಿಸಿದೆ.

    ಟ್ವಿಪ್ಲೊಮೆಸಿ ಸಂಸ್ಥೆಯೊಂದು ಅತಿ ಹೆಚ್ಚು ಫಾಲೋವರ್ ಗಳಿರುವ ವಿಶ್ವದ ಕೆಲ ನಾಯಕರ ಟ್ವಿಟ್ಟರ್ ಖಾತೆಗಳನ್ನು ಅಧ್ಯಯನ ನಡೆಸಿ ಈ ವರದಿಯನ್ನು ಬಿಡುಗಡೆ ಮಾಡಿದೆ. ಅತಿ ಹೆಚ್ಚು ನಕಲಿ ಫಾಲೋವರ್ಸ್ ಗಳನ್ನು ಹೊಂದಿರುವ ನಾಯಕರ ಪಟ್ಟಿಯಲ್ಲಿ ಮೋದಿಗೆ ಮೊದಲ ಸ್ಥಾನ ಸಿಕ್ಕಿದ್ದರೆ, ಪೋಪ್ ಫ್ರಾನ್ಸಿಸ್ ಅವರಿಗೆ ಎರಡನೇ ಸ್ಥಾನ ಸಿಕ್ಕಿದೆ.

    ಪ್ರಧಾನಿ ಮೋದಿ ಅವರ ಖಾತೆಯನ್ನು 4.3 ಕೋಟಿ ಜನ ಫಾಲೋ ಮಾಡುತ್ತಿದ್ದು ಇದರಲ್ಲಿ 60% ಮಂದಿ ನಕಲಿ ಖಾತೆಯನ್ನು ಹೊಂದಿದ್ದಾರೆ. ಪೋಪ್ ಫ್ರಾನ್ಸಿಸ್ ಅವರನ್ನು 1.67 ಕೋಟಿ ಜನ ಫಾಲೋ ಮಾಡುತ್ತಿದ್ದು, ಇದರಲ್ಲಿ 59% ಫಾಲೋವರ್ಸ್ ನಕಲಿ ಎಂದು ಅಧ್ಯಯನ ತಿಳಿಸಿದೆ.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಒಟ್ಟು 36,96,460 ಮಂದಿ ಫಾಲೋ ಮಾಡುತ್ತಿದ್ದು, ಇದರಲ್ಲಿ 19,80,826 ಮಂದಿ ನಕಲಿ ಫಾಲೋವರ್ಸ್ ಎಂದು ಹೇಳಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 4.79 ಕೋಟಿ ಜನ ಫಾಲೋ ಮಾಡುತ್ತಿದ್ದು ಇದರಲ್ಲಿ 37% ನಕಲಿ ಫಾಲೋವರ್ಸ್ ಇದ್ದಾರೆ.

    ಟ್ವಿಟ್ಟರ್ ಆಡಿಟ್ ಅಲ್ಗೋರಿದಂ ಮೂಲಕ ಫ್ರೆಂಡ್ಸ್ ಆಗಿರುವ ವ್ಯಕ್ತಿಗಳಿಗೆ ಎಷ್ಟು ಮಂದಿ ಫಾಲೋವರ್ಸ್ ಗಳಿದ್ದಾರೆ? ಕೊನೆಯ ಬಾರಿ ಟ್ವೀಟ್ ಮಾಡಿದ್ದು ಯಾವಾಗ? ಇದೂವರೆಗೆ ಎಷ್ಟು ಟ್ವೀಟ್ ಮಾಡಿದ್ದಾರೆ ಈ ವಿಚಾರಗಳನ್ನು ಲೆಕ್ಕ ಹಾಕಿ ಈ ಅಧ್ಯಯನ ನಡೆಸಲಾಗಿದೆ.

  • ಎಂಜಿನ್‍ನಲ್ಲಿ ದೋಷ: ಇಂಡಿಗೋದ 47 ವಿಮಾನಗಳ ಹಾರಾಟ ರದ್ದು

    ಎಂಜಿನ್‍ನಲ್ಲಿ ದೋಷ: ಇಂಡಿಗೋದ 47 ವಿಮಾನಗಳ ಹಾರಾಟ ರದ್ದು

    ನವದೆಹಲಿ: ಎಂಜಿನ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇಂಡಿಗೋ ಸಂಸ್ಥೆ  ತನ್ನ 47 ವಿಮಾನಗಳ ಹಾರಾಟವನ್ನು ರದ್ದು ಪಡಿಸಿದೆ.

    ಕಳೆದ ಒಂದು ತಿಂಗಳಿನಲ್ಲಿ ಅಮೆರಿಕದ ಪ್ರ್ಯಾಟ್ ಮತ್ತು ವಿಟ್ನೆ ಕಂಪನಿಯ ಎಂಜಿನ್‍ಗಳನ್ನು ಹೊಂದಿದ್ದ ಮೂರು ವಿಮಾನಗಳು ವೈಫಲ್ಯಗೊಂಡ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಈ ಎಂಜಿನ್ ಗಳನ್ನು ಅಳವಡಿಸಿಕೊಂಡಿದ್ದ ಇಂಡಿಗೋ ಮತ್ತು ಗೋಏರ್ ವಿಮಾನಯಾನ ಸಂಸ್ಥೆಗಳ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿದೆ.

    ಈ ಆದೇಶದ ಅನ್ವಯ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಪಾಟ್ನಾ, ಶ್ರೀನಗರ, ಭುವನೇಶ್ವರ್, ಅಮೃತಸರ್, ಗುವಾಹಟಿ ಸೇರಿದಂತೆ ಕೆಲ ಪ್ರದೇಶಗಳಿಗೆ ಸಂಚರಿಸುತ್ತಿದ್ದ ವಿಮಾನಗಳ ಹಾರಾಟ ರದ್ದಾಗಿದೆ.

    ಸೋಮವಾರ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಹಾರಾಟ ಆರಂಭಿಸಿ ಎಂಜಿನ್ ವೈಫಲ್ಯದಿಂದ ತುರ್ತು ಲ್ಯಾಂಡಿಂಗ್ ಆಗಿತ್ತು.

    ಪ್ರತಿದಿನ ಇಂಡಿಗೋ ಕಂಪೆನಿಯ 1 ಸಾವಿರಕ್ಕೂ ಅಧಿಕ ವಿಮಾನಗಳು ದೇಶದಲ್ಲಿ ಹಾರಾಟ ನಡೆಸುತ್ತಿದೆ. ಕಡಿಮೆ ಬೆಲೆ ಟಿಕೆಟ್ ನಿಗದಿಪಡಿಸಿದ ಕಾರಣ ದೇಶದ 40% ಪ್ರಯಾಣಿಕರು ಇಂಡಿಗೋ ಸೇವೆಯನ್ನು ಬಳಸುತ್ತಿದ್ದಾರೆ. ಗೋಏರ್ ಕಂಪೆನಿಗೆ ದೇಶದಲ್ಲಿ 10% ಮಾರುಕಟ್ಟೆ ಇದೆ.

    ಫೆ.24 ರಂದು ಲೆಹ್ ನಲ್ಲಿ ಗೋಏರ್ ವಿಮಾನದಲ್ಲಿ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಮಾರ್ಚ್ 5 ರಂದು ಮುಂಬೈ ನಲ್ಲಿ ಎಂಜಿನ್ ನಲ್ಲಿ ಇಂಡಿಗೋದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಟೇಕಾಫ್ ಆಗಿರಲಿಲ್ಲ.

  • ಫೆರಾರಿಯ 5.20 ಕೋಟಿ ರೂ. ಬೆಲೆಯ ಪವರ್ ಪುಲ್ ಸ್ಫೋರ್ಟ್ಸ್ ಕಾರು ಬಿಡುಗಡೆ

    ಫೆರಾರಿಯ 5.20 ಕೋಟಿ ರೂ. ಬೆಲೆಯ ಪವರ್ ಪುಲ್ ಸ್ಫೋರ್ಟ್ಸ್ ಕಾರು ಬಿಡುಗಡೆ

    ನವದೆಹಲಿ: ಇಟಲಿಯ ಫೆರಾರಿ ಕಂಪೆನಿ ದೇಶೀಯ ಮಾರುಕಟ್ಟೆಗೆ ಪವರ್ ಫುಲ್ ಸ್ಫೋರ್ಟ್ಸ್ ಕಾರು 812 ಸೂಪರ್ ಫಾಸ್ಟ್ ಕಾರು ಬಿಡುಗಡೆ ಮಾಡಿದೆ.

    ಈ ಕಾರಿಗೆ 5.20 ಕೋಟಿ ರೂ. ದರವನ್ನು ನಿಗದಿಪಡಿಸಿದೆ. 6.5 ಲೀಟರ್ ವಿ12 ಯೂನಿಟ್ 234 ಸಿಸಿ ಎಂಜಿನ್ 789 ಬಿಹೆಚ್‍ಪಿ ಮತ್ತು 718 ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ. ಅಷ್ಟೇ ಅಲ್ಲದೇ 7 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. 2.9 ಸೆಕೆಂಡಿಗೆ 100 ಕಿಲೋಮೀಟರ್ ವೇಗವನ್ನು ತಲುಪಬಲ್ಲ ಸಾಮರ್ಥ್ಯ ಮತ್ತು ಗಂಟೆಗೆ 340ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಸಾಮರ್ಥ್ಯವನ್ನು ಈ ಕಾರು ಹೊಂದಿರುವುದು ವಿಶೇಷ.

    ಎರಡು ಡೋರ್ ಒಳಗೊಂಡ ಸ್ಫೋರ್ಟ್ಸ್ ಕಾರ್ 2017ರ ಜಿನಿವಾ ಮೋಟಾರ್ ಶೋನಲ್ಲಿ ಪ್ರಥಮ ಬಾರಿಗೆ ಅನಾವರಣಗೊಂಡಿತ್ತು. ಫುಲ್ ಎಲ್‍ಇಡಿ ಹೆಡ್‍ಲೈಟ್, ಹೊಸ ಇನ್ಫೋಟೈನ್‍ಮೆಂಟ್, ಏರ್ ಕಂಡಿಷನ್ ಒಳಗೊಂಡಿದೆ. ಫೆರಾರಿ ಸ್ಫೋರ್ಟ್ಸ್ ಕಾರು ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಜೊತೆಗೆ ವರ್ಚುವಲ್ ಶಾರ್ಟ್ ವೀಲ್ ಬೇಸ್ 2.0 ಸಿಸ್ಟಂ ಹೊಂದಿದೆ.

    ಪ್ರತಿ ಲೀಟರ್ ಪೆಟ್ರೋಲ್ ಗೆ 6.7 ಕಿ.ಮೀ ಮೈಲೇಜ್, 2,750 ಮಿಲಿ ಮೀಟರ್ ವೀಲ್ ಬೇಸ್, 4,657 ಮಿ.ಮೀ ಉದ್ದ, 1,971 ಮಿ.ಮೀ ಅಗಲ, 1,276 ಮಿ.ಮೀ ಎತ್ತರ, 1,525 ಮಿ.ಮೀ ತೂಕವನ್ನು ಈ ಕಾರು ಹೊಂದಿದೆ.

  • ಎಐ ಬಗ್ಗೆ ಹೇಳೋ ಆಧುನಿಕ ತಂತ್ರಜ್ಞಾನಕ್ಕಿಂತ ಕುಂಡಲಿ ಮೇಲು: ಹೆಗಡೆ

    ಎಐ ಬಗ್ಗೆ ಹೇಳೋ ಆಧುನಿಕ ತಂತ್ರಜ್ಞಾನಕ್ಕಿಂತ ಕುಂಡಲಿ ಮೇಲು: ಹೆಗಡೆ

    ಹುಬ್ಬಳ್ಳಿ: ಕಂಪ್ಯೂಟರ್ ಸಹಾಯದಿಂದ ನಮ್ಮ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಗ್ಗೆ ಹೇಳುವ ಆಧುನಿಕ ತಂತ್ರಜ್ಞಾನಕ್ಕಿಂತ ನಮ್ಮ ಹಿರಿಯರು ಬರೆಯುತ್ತಿದ್ದ ಕುಂಡಲಿಗಳೇ ಮೇಲು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

    ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಇ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಐ ಬಳಸಿ ನಮ್ಮ ಸಂಪೂರ್ಣ ಮಾಹಿತಿಯನ್ನು ಕ್ರೋಢಿಕರಿಸಿ ಕೊಟ್ಟರೆ ಅದನ್ನು ಆಧುನಿಕ ತಂತ್ರಜ್ಞಾನ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ, ಕೇವಲ ಜನ್ಮದಿನಾಂಕ, ಸಮಯ ಕೊಟ್ಟರೆ ಸಾಕು, ಆ ವ್ಯಕ್ತಿಯನ್ನೂ ನೋಡದೆ ವ್ಯಕ್ತಿತ್ವ, ಬಣ್ಣ, ನಿಲುವು, ಅವನ ಆರೋಗ್ಯ ಮತ್ತು ಅವನು ಎಂದು ಸಾಯುತ್ತಾನೆ ಎಂಬುದನ್ನು ನಮ್ಮ ಕುಂಡಲಿ ಹೇಳುತ್ತದೆ ಎಂದು ತಿಳಿಸಿದರು.

    ಕುಂಡಲಿ ಹೇಳಿದ್ದನ್ನು ನಾವು ಒಪ್ಪುವುದಿಲ್ಲ. ಯಾಕೆಂದರೆ ನಮಗೆ ಹಿತ್ತಲ ಗಿಡ ಮದ್ದಲ್ಲ. ನಾವು ನಮ್ಮ ಭಾಷೆಯಲ್ಲಿ ಹೇಳಿದರೆ ಅದಕ್ಕೆ ಬೆಲೆ ಇಲ್ಲ. ಆದರೆ ಅವರ ಭಾಷೆಯಲ್ಲಿ ಹೇಳಿದರೆ ಹೊಸ ಆವಿಷ್ಕಾರ ಎಂದು ಹೇಳುತ್ತೇವೆ ಎಂದು ಅಭಿಪ್ರಾಯಪಟ್ಟರು.

    ಅಧ್ಯಾತ್ಮ ತಳಹದಿಯಲ್ಲಿ ಜಗತ್ತಿಗೆ ನಾವು ಶೂನ್ಯ ಕೊಟ್ಟಿದ್ದೇವೆ. ಭಾರತ ಜಗತ್ತಿಗೆ ಶೂನ್ಯವನ್ನು ಕೊಡುಗೆಯಾಗಿ ಕೊಡದೇ ಇದ್ದರೆ, ಜಗತ್ತಿನಲ್ಲಿ ಈ ರೀತಿಯ ತಾಂತ್ರಿಕ ಆವಿಷ್ಕಾರಗಳು ನಡೆಯುತ್ತಿರಲಿಲ್ಲ. ನಾನು ಹೇಳುತ್ತಿಲ್ಲ, ವಿಜ್ಞಾನಿ ಐನ್ ಸ್ಟೈನ್ ಹೇಳಿರುವ ಮಾತು. ಆದರೆ ಈ ಮಾತನ್ನು ಅನಂತಕುಮಾರ ಹೆಗಡೆ ಹೇಳಿದ್ದರೆ ಚಡ್ಡಿ ಹಾಕಿಕೊಂಡು ಹೇಳಿದ ಎಂದು ಎಡಬಿಡಂಗಿಗಳು ಹೇಳುತ್ತಾರೆ ವ್ಯಂಗ್ಯವಾಡಿದರು.

    ಈ ವೇಳೆ, ನಮ್ಮ ಇತ್ತೀಚಿನ ಕವಿಗಳು ಕನಸಲ್ಲಿ ಕಂಡದನ್ನು ಬೆಳಗಿನಲ್ಲಿ ಶಬ್ದಗಳಲ್ಲಿ ಜೋಡಿಸಿದ ಹಾಗೆ ಬರೆಯುತ್ತಾರೆ. ಅದಕ್ಕೆ ಯಾವುದೇ ಅರ್ಥ, ಛಂದಸ್ಸು, ಅಲಂಕಾರ ಇರುವುದಿಲ್ಲ ಎಂದು ಹೇಳಿ ತನ್ನನ್ನು ಟೀಕಿಸುವ ಸಾಹಿತಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

     

  • ಸರ್ಜಿಕಲ್ ಸ್ಟ್ರೈಕ್ ಭಯ: 2 ಷರತ್ತು ಇರಿಸಿ ಶರಣಾಗ್ತೀನಿ ಎಂದ ದಾವೂದ್

    ಸರ್ಜಿಕಲ್ ಸ್ಟ್ರೈಕ್ ಭಯ: 2 ಷರತ್ತು ಇರಿಸಿ ಶರಣಾಗ್ತೀನಿ ಎಂದ ದಾವೂದ್

    ಮುಂಬೈ: ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪ್ರಾಣಭಯ ಶುರುವಾಗಿದ್ದು ಶರಣಾಗುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾನೆ ಎಂದು ರಾಷ್ಟ್ರೀಯ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.

    ಉಗ್ರ ಒಸಾಮಾ ಬಿನ್ ಲಾಡೆನ್‍ನನ್ನು ಅಮೆರಿಕ ಹತ್ಯೆ ನಡೆಸಿದ್ದಂತೆ ನನ್ನನ್ನೂ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿ ಹೊಡೆದುರುಳಿಸಬಹುದು ಎನ್ನುವ ಭಯ ದಾವೂದ್‍ಗೆ ಕಾಡುತ್ತಿದ್ದು ಎರಡು ಷರತ್ತುಗಳೊಂದಿಗೆ ನಾನು ಶರಣಾಗುತ್ತೇನೆ ಎಂದು ಹೇಳಿದ್ದಾನೆ.

    ನಾನೇ ಭಾರತಕ್ಕೆ ಶರಣಾಗುತ್ತೇನೆ. ಆದರೆ ಸುಪ್ರೀಂ ಕೋರ್ಟ್ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಮಧ್ಯವರ್ತಿಯಾಗಬೇಕು. ಮುಂಬೈನ ಆರ್ಥರ್ ಜೈಲಲ್ಲೇ ಇರಿಸಬೇಕು ಎನ್ನುವ ಬೇಡಿಕೆಯಿಟ್ಟಿದ್ದಾನೆ ಎಂದು ಮುಂಬೈ ಪೊಲೀಸರ ವಶದಲ್ಲಿರುವ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಪರ ವಕೀಲ ತಿಳಿಸಿದ್ದಾರೆ.

    ದಾವೂದ್ ಶರಣಾಗತಿಗೆ ಸಂಬಂಧಿಸಿದಂತೆ ಸುದ್ದಿ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ 2015ರ ಜುಲೈನಲ್ಲಿ ವಕೀಲ ರಾಮ್ ಜೇಠ್ಮಲಾನಿ ಅವರು, ದಾವೂದ್ ಈ ಹಿಂದೆ ನನ್ನ ಜೊತೆ ಭಾರತಕ್ಕೆ ನಾನು ಶರಣಾಗುತ್ತೇನೆ ಎಂದು ಹೇಳಿದ್ದ ಎನ್ನುವುದನ್ನು ತಿಳಿಸಿದ್ದರು. ಇದನ್ನೂ ಓದಿ: ಮೋದಿ ಸರ್ಕಾರ ಬಂದ್ಮೇಲೆ ಪಾಕಿಸ್ತಾನದಲ್ಲಿ 4 ಬಾರಿ ಮನೆ ಬದಲಿಸಿದ್ದಾನೆ ದಾವೂದ್: ಸಹೋದರನೇ ಬಾಯ್ಬಿಟ್ಟ ಸತ್ಯ

    ಭಾರತಕ್ಕೆ ಶರಣಾಗಲು ದಾವೂದ್ ಬಯಸಿದ್ದ. ಆದರೆ ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಆತನ ಭದ್ರತೆಯ ಬೇಡಿಕೆ ವಿಚಾರವಾಗಿ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಅಷ್ಟೇ ಅಲ್ಲದೇ ಯುಪಿಎ ಸರ್ಕಾರದಿಂದಲೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಗದ ಕಾರಣ ಆತ ಶರಣಾಗಲಿಲ್ಲ ಎಂದು ತಿಳಿಸಿದ್ದರು.

    ದಾವೂದ್ ಪ್ರಮುಖ ಆರೋಪಿಯಾಗಿರುವ 1993 ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸುಮಾರು 227 ಜನರು ದಾರಣವಾಗಿ ಸಾವನ್ನಪ್ಪಿದ್ದರು. ಜೊತೆಗೆ 713 ಜನ ಗಂಭೀರವಾಗಿ ಗಾಯಗೊಂಡಿದ್ದರು. ಅಷ್ಟೇ ಅಲ್ಲದೇ ಸುಮಾರು 27 ಕೋಟಿ. ರೂ ನಷ್ಟವಾಗಿತ್ತು. ಇದನ್ನೂ ಓದಿ: ಈ ಕಾರಣಕ್ಕೆ ಭಾರತಕ್ಕೆ ಡಾನ್ ದಾವೂದ್ ಬರೋದೇ ಇಲ್ವಂತೆ

     

  • ಮುಸ್ಲಿಂ- ಬೌದ್ಧರ ನಡುವೆ ಹಿಂಸಾಚಾರ – ಶ್ರೀಲಂಕಾದಲ್ಲಿ 10 ದಿನ ತುರ್ತು ಪರಿಸ್ಥಿತಿ ಘೋಷಣೆ

    ಮುಸ್ಲಿಂ- ಬೌದ್ಧರ ನಡುವೆ ಹಿಂಸಾಚಾರ – ಶ್ರೀಲಂಕಾದಲ್ಲಿ 10 ದಿನ ತುರ್ತು ಪರಿಸ್ಥಿತಿ ಘೋಷಣೆ

    ಕೊಲೊಂಬೊ: ಕ್ಯಾಂಡಿ ಜಿಲ್ಲೆಯಲ್ಲಿ ಬೌದ್ಧರು ಮತ್ತು ಮುಸ್ಲಿಂ ಸಮುದಾಯದ ನಡುವೆ ಭಾರೀ ಪ್ರಮಾಣ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ 10 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಸರ್ಕಾರ ಘೋಷಿಸಿದೆ.

    ಮುಸ್ಲಿಮರು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಹಾಗೂ ಬೌದ್ಧರ ಪವಿತ್ರ ಸ್ಥಳಗಳನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ಕೆಲ ಬೌದ್ಧ ಸಂಘಟನೆಗಳು ಈ ಹಿಂದೆ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಒಂದು ಕಳೆದ ಒಂದು ವರ್ಷದಿಂದ ಎರಡು ಸಮುದಾಯಗಳ ನಡುವೆ ಘರ್ಷಣೆಗಳು ನಡೆಯುತಿತ್ತು.

    ಈ ನಡುವೆ ಮ್ಯಾನ್ಮಾರ್ ನ ರೋಹಿಂಗ್ಯಾ ಮುಸ್ಲಿಮರಿಗೆ ಶ್ರೀಲಂಕಾದಲ್ಲಿ ಆಶ್ರಯ ನೀಡಬಾರದು ಎಂದು ಬೌದ್ಧ ಧರ್ಮದವರು ಪ್ರತಿಭಟಿಸುತ್ತಿದ್ದರು. ಈ ವಿಚಾರದ ಬಗ್ಗೆ ನಡೆಯುತ್ತಿದ್ದ ಜಗಳ ಈಗ ತೀವ್ರ ಸ್ವರೂಪ ಪಡೆದು ಹಿಂಸಾಚಾರಕ್ಕೆ ತಿರುಗಿದೆ.

    ಹಿಸಾಂಚಾರದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಇಂದು ವಿಶೇಷ ಸಂಪುಟ ಸಭೆ ನಡೆಸಿ, ಕೋಮುಗಲಭೆ ತಡೆಯುವ ನಿಟ್ಟಿನಲ್ಲಿ 10 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಅಷ್ಟೇ ಅಲ್ಲದೇ ಫೇಸ್‍ಬುಕ್ ಮೂಲಕ ಹಿಂಸೆಗೆ ಪ್ರಚೋದನೆ ನೀಡಿದವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಂಪುಟ ಸಭೆ ನಿರ್ಧರಿಸಿದೆ.

    ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯ ನಡೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

     

  • ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಕೌರ್, ಸಾಕ್ಷಿ ಮಲಿಕ್‍ಗೆ ಕಂಚು

    ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಕೌರ್, ಸಾಕ್ಷಿ ಮಲಿಕ್‍ಗೆ ಕಂಚು

    ಬಿಶ್‍ಕೆಕ್: ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಮಹಿಳಾ ಕುಸ್ತಿಪಟು ನವಜೋತ್ ಕೌರ್ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಹಿರಿಯರ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕುಸ್ತಿ ಪಟು ಎನಿಸಿಕೊಂಡಿದ್ದಾರೆ. ಹಾಗೇ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ್ದ ಸಾಕ್ಷಿ ಮಲಿಕ್ ಇಲ್ಲಿಯೂ ಕಂಚು ಪಡೆದಿದ್ದಾರೆ.

    ಕಿರ್ಗಿಸ್ತಾನದ ಬಿಶ್‍ಕೆಕ್‍ನಲ್ಲಿ ಶುಕ್ರವಾರದಂದು ನಡೆದ ಮಹಿಳೆಯರ 65 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿ ಅಂತಿಮ ಹಣಾಹಣಿಯಲ್ಲಿ ಜಪಾನ್ ನ ಮಿಯಾ ಇಮಾಯಿರನ್ನು 9-1 ಅಂತರದಲ್ಲಿ ಸೋಲಿಸಿ ನವಜೋತ್ ಕೌರ್ ಚಿನ್ನವನ್ನು ಗೆದ್ದರು. ಹಾಗೂ ಈ ಬಾರಿಯ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಾಲಿನ ಮೊದಲ ಚಿನ್ನದ ಪದಕವನ್ನು ಕೌರ್ ಜಯಿಸಿದ್ದಾರೆ.

    ಇತ್ತ 62 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್, ಕಝಕಿಸ್ತಾನದ ಕ್ಯಾಸಿಮೋವಾ ವಿರುದ್ಧ ಹಣಾಹಣಿ ನಡೆಸಿ 10-7 ಅಂತರದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ 1 ಚಿನ್ನ, 1 ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಈವರೆಗೆ ಒಟ್ಟು 6 ಪದಕಗಳನ್ನು ಪಡೆದಿದೆ.