Tag: india

  • ನಾಳೆಯಿಂದ ಬಜೆಟ್ ವರ್ಷ ಆರಂಭ: ಯಾವುದು ಏರಿಕೆ? ಯಾವುದು ಇಳಿಕೆ?

    ನಾಳೆಯಿಂದ ಬಜೆಟ್ ವರ್ಷ ಆರಂಭ: ಯಾವುದು ಏರಿಕೆ? ಯಾವುದು ಇಳಿಕೆ?

    ನವದೆಹಲಿ: ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಶುರುವಾಗಲಿದೆ. ಬಜೆಟ್‍ನಲ್ಲಿ ಪ್ರತಿಪಾದಿಸಿದ ಅಂಶಗಳು  ನಾಳೆಯಿಂದ ಜಾರಿಯಾಗಲಿದ್ದು, ಕೆಲ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಕಾರಣ ಕೆಲ ಬೆಲೆ ಏರಲಿದೆ. ಹೀಗಾಗಿ ಯಾವುದರ ಬೆಲೆ ಇಳಿಯುತ್ತೆ? ಯಾವುದರ ಬೆಲೆ ಏರಿಕೆಯಾಗುತ್ತದೆ ಎನ್ನುವ ವಿವರ ಇಲ್ಲಿ ನೀಡಲಾಗಿದೆ.

    ಇಳಿಕೆ:
    ಗೋಡಂಬಿ ಮೇಲಿನ ಅಬಕಾರಿ ಸುಂಕ ಶೇ.5 ರಿಂದ ಶೇ.2.5ರವೆರೆಗೆ ಇಳಿಕೆಯಾಗಿದೆ. ಸೋಲಾರ್ ಉಪಕರಣಗಳ ಮೇಲಿನ ದರ ಕಡಿತಗೊಂಡಿದ್ದು, ಶ್ರವಣ ಸಾಧನಗಳ ಮೇಲಿನ ಸುಂಕ ಸಂಪೂರ್ಣ ಕಡಿತವಾಗಿದೆ. ಇಟ್ಟಿಗೆ, ಟೈಲ್ಸ್, ಸೆರಾಮಿಕ್ ವಸ್ತುಗಳ ಬೆಲೆ ಶೇ.7.5 ಇಳಿಕೆಯಾಗಲಿದೆ.

    ಏರಿಕೆಯಾಗಲಿರುವ ವಸ್ತುಗಳು
    ಎಲೆಕ್ಟ್ರಾನಿಕ್ ಉತ್ಪನ್ನಗಳು
    ಚಾರ್ಜರ್ ಶೇ.10, ಸ್ಮಾರ್ಟ್ ವಾಚ್‍ಗಳು ಶೇ.20, ಎಲ್‍ಸಿಡಿ/ಎಲ್‍ಇಡಿ/ಒಎಲ್‍ಇಡಿ ಟಿವಿಗಳು ಶೇ.15, ಗೃಹ ಅಲಂಕಾರಿಕ ವಿದ್ಯುದ್ದೀಪಗಳು ಶೇ.20 ಏರಿಕೆಯಾಗಲಿದೆ.

    ಆಟೋಮೊಬೈಲ್:
    ಕಾರು, ಬೈಕ್‍ಗಳ ಬಿಡಿ ಭಾಗಗಳು ಶೇ.15, ಟ್ರಕ್ ಮತ್ತು ಬಸ್‍ಗಳ ಟಯರ್ ಗಳು ಶೇ.15ಕ್ಕೆ ಏರಿಕೆಯಾಗಲಿದೆ.

    ಆಹಾರ ಉತ್ಪನ್ನಗಳು:
    ಆರೆಂಜ್ ಫ್ರೂಟ್ ಜೂಸ್ ಶೇ. 3 ಫ್ರೂಟ್ ಜ್ಯೂಸ್ ಮತ್ತು ತರಕಾರಿ ಜ್ಯೂಸ್ ಶೇ. 50, ಕಚ್ಚಾ ಅಡುಗೆ ಎಣ್ಣೆ ಶೇ. 30, ಸಂಸ್ಕರಿಸಿದ ಅಡುಗೆ ಎಣ್ಣೆ ಶೇ.35 ಏರಿಕೆಯಾಗಲಿದೆ.

    ಸೌಂದರ್ಯ ವರ್ಧಕಗಳು:
    ಸುಗಂಧ ದ್ರವ್ಯ, ಡಿಯೋಡ್ರೆಂಟ್ ಶೇ.20, ಸೌಂದರ್ಯ ವರ್ಧಕಗಳು ಶೇ.20, ದಂತ ಶುದ್ಧಿಗೆ ಬಳಸುವ ವಸ್ತುಗಳು ಶೇ.20, ಶೇವಿಂಗ್ ಕ್ರೀಮ್, ಆಫ್ಟರ್ ಶೇವ್ ಶೇ.20ಕ್ಕೆ ಏರಿಕೆಯಾಗಲಿದೆ.

    ಬಟ್ಟೆಗಳು:
    ಪಾದರಕ್ಷೆಗಳು ಶೇ.20, ಪಾದರಕ್ಷೆಗಳ ಬಿಡಿಭಾಗಗಳು ಶೇ.15ಕ್ಕೆ ಏರಿಕೆಯಾಗಲಿದೆ.

    ಇತರೇ:
    ಹಾಸಿಗೆ, ದಿಂಬು ಇತ್ಯಾದಿ ಶೇ.20, ಮಕ್ಕಳ ಆಟಿಕೆಗಳು ಶೇ.20 ಏರಿಕೆ, ವಿಡಿಯೋ ಗೇಮ್ ಉಪಕರಣಗಳು ಶೇ.20ಕ್ಕೆ, ಸಿಗರೇಟು, ಲೈಟರ್ ಗಳು ಎಲೆಕ್ಟ್ರಿಕ್ ಸಿಗರೇಟು ಶೇ.20ಕ್ಕೆ ಏರಿಕೆ  ಇದನ್ನೂ ಓದಿ: ಅಬಕಾರಿ ಸುಂಕ 2 ರೂ. ಇಳಿಕೆಯಾದ್ರೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯಲ್ಲ!

    ಮೊಬೈಲ್ ಫೋನ್ ಬೆಲೆ ಎಷ್ಟು ಹೆಚ್ಚಾಗುತ್ತೆ?
    ಆಮದು ಮಾಡಿಕೊಳ್ಳಲಾಗುವ ಮೊಬೈಲ್ ಫೋನ್, ಟಿ.ವಿ ಸೆಟ್, ಡಿಜಿಟಲ್ ಕ್ಯಾಮೆರಾಗಳು, ಮೈಕ್ರೋವೇವ್ ಓವೆನ್, ಎಲ್‍ಇಡಿ ಬಲ್ಬ್ ಗಳು ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗಲಿದೆ.

    ಮೊಬೈಲ್ ಫೋನ್ ಮೇಲಿನ ಕಸ್ಟಮ್ ಡ್ಯುಟಿಯನ್ನು ಶೇ.15 ನಿಂದ ಶೇ.20ಕ್ಕೆ ಏರಿಸಲಾಗಿದೆ. ಹೀಗಾಗಿ ಆಮದು ಮಾಡಿಕೊಳ್ಳುವ ಆಪಲ್ ಐಫೋನ್‍ಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ತಜ್ಞರ ಪ್ರಕಾರ ಐಫೋನ್ ದರದ ಮೇಲೆ 2ರಿಂದ 3 ಸಾವಿರ ರೂ. ಹೆಚ್ಚಾಗಲಿದೆ. ಉದಾಹರಣೆಗೆ ಐಫೋನ್ ಎಕ್ಸ್ ಮಾಡಲ್‍ನ ಫೋನ್ 89 ಸಾವಿರ ರೂ. ಇದ್ದು, ಕಂಪೆನಿ ತೆರಿಗೆ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿದರೆ ಫೋನ್ ಬೆಲೆ 92 ಸಾವಿರ ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ.

    ಟಿ.ವಿ ಸೆಟ್ ಬೆಲೆಗಳೂ ಕೂಡ ಏರಿಕೆಯಾಗಲಿದ್ದು, ಸ್ಕ್ರೀನ್ ಗಾತ್ರಕ್ಕೆ ಅನುಗುಣವಾಗಿ ಈಗಿರುವ ಬೆಲೆಗಿಂತ ಹೆಚ್ಚಾಗಲಿದೆ. 10 ಸಾವಿರ ರೂ. ಬೆಲೆಯ 20 ಲೀಟರ್ ಮೈಕ್ರೋವೇವ್ ಓವೆನ್ ಬೆಲೆ ಮೇಲೆ 500 ರೂ. ಹೆಚ್ಚಾಗುವ ಸಾಧ್ಯತೆಯಿದೆ.

    ಆಮದು ತೆರಿಗೆ ಹೆಚ್ಚಳದಿಂದಾಗಿ ಆಪಲ್ ನಂತಹ ಸಂಸ್ಥೆಗಳು ಸ್ಥಳೀಯ ಉತ್ಪಾದನಾ ಯೋಜನೆಗಳ ವೇಗ ಹೆಚ್ಚಿಸಲಿದ್ದು, ಇದರಿಂದ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಪುಷ್ಟಿ ಸಿಕ್ಕಂತಾಗುತ್ತದೆ. ಹಾಗೂ ಸ್ಥಳೀಯ ಉತ್ಪಾದಕರಿಗೆ ಆಮದಿನಿಂದ ಹೆಚ್ಚಿನ ಸುರಕ್ಷತೆ ಸಿಕ್ಕಂತಾಗುತ್ತದೆ ಎಂದು ವರದಿಯಾಗಿದೆ.

    ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಉತ್ತನ್ನಗಳ ಮೇಲಿನ ಕಸ್ಟಮ್ ಡ್ಯೂಟಿಯನ್ನು ಹೆಚ್ಚಿಸಲಾಗಿದೆ. 2017ರ ಹಣಕಾಸು ವರ್ಷದಲ್ಲಿ ಭಾರತ ಸರಿಸುಮಾರು 42 ಬಿಲಿಯನ್ ಡಾಲರ್(ಅಂದಾಜು 2 ಲಕ್ಷ ಕೋಟಿ ರೂ.) ಮೌಲ್ಯದ ಟೆಲಿಕಾಂ ವಸ್ತುಗಳು, ಕಂಪ್ಯೂಟರ್ ಹಾರ್ಡ್‍ವೇರ್, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸಾಧನಗಳನ್ನು ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ.

  • ನಾಳೆಯಿಂದ ಬಜೆಟ್ ವರ್ಷ ಆರಂಭ: ಯಾವುದು ಏರಿಕೆ? ಯಾವುದು ಇಳಿಕೆ?

    ನಾಳೆಯಿಂದ ಬಜೆಟ್ ವರ್ಷ ಆರಂಭ: ಯಾವುದು ಏರಿಕೆ? ಯಾವುದು ಇಳಿಕೆ?

    ನವದೆಹಲಿ: ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಶುರುವಾಗಲಿದೆ. ಬಜೆಟ್‍ನಲ್ಲಿ ಪ್ರತಿಪಾದಿಸಿದ ಅಂಶಗಳು  ನಾಳೆಯಿಂದ ಜಾರಿಯಾಗಲಿದ್ದು, ಕೆಲ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಕಾರಣ ಕೆಲ ಬೆಲೆ ಏರಲಿದೆ. ಹೀಗಾಗಿ ಯಾವುದರ ಬೆಲೆ ಇಳಿಯುತ್ತೆ? ಯಾವುದರ ಬೆಲೆ ಏರಿಕೆಯಾಗುತ್ತದೆ ಎನ್ನುವ ವಿವರ ಇಲ್ಲಿ ನೀಡಲಾಗಿದೆ.

    ಇಳಿಕೆ:
    ಗೋಡಂಬಿ ಮೇಲಿನ ಅಬಕಾರಿ ಸುಂಕ ಶೇ.5 ರಿಂದ ಶೇ.2.5ರವೆರೆಗೆ ಇಳಿಕೆಯಾಗಿದೆ. ಸೋಲಾರ್ ಉಪಕರಣಗಳ ಮೇಲಿನ ದರ ಕಡಿತಗೊಂಡಿದ್ದು, ಶ್ರವಣ ಸಾಧನಗಳ ಮೇಲಿನ ಸುಂಕ ಸಂಪೂರ್ಣ ಕಡಿತವಾಗಿದೆ. ಇಟ್ಟಿಗೆ, ಟೈಲ್ಸ್, ಸೆರಾಮಿಕ್ ವಸ್ತುಗಳ ಬೆಲೆ ಶೇ.7.5 ಇಳಿಕೆಯಾಗಲಿದೆ.

    ಏರಿಕೆಯಾಗಲಿರುವ ವಸ್ತುಗಳು
    ಎಲೆಕ್ಟ್ರಾನಿಕ್ ಉತ್ಪನ್ನಗಳು
    ಚಾರ್ಜರ್ ಶೇ.10, ಸ್ಮಾರ್ಟ್ ವಾಚ್‍ಗಳು ಶೇ.20, ಎಲ್‍ಸಿಡಿ/ಎಲ್‍ಇಡಿ/ಒಎಲ್‍ಇಡಿ ಟಿವಿಗಳು ಶೇ.15, ಗೃಹ ಅಲಂಕಾರಿಕ ವಿದ್ಯುದ್ದೀಪಗಳು ಶೇ.20 ಏರಿಕೆಯಾಗಲಿದೆ.

    ಆಟೋಮೊಬೈಲ್:
    ಕಾರು, ಬೈಕ್‍ಗಳ ಬಿಡಿ ಭಾಗಗಳು ಶೇ.15, ಟ್ರಕ್ ಮತ್ತು ಬಸ್‍ಗಳ ಟಯರ್ ಗಳು ಶೇ.15ಕ್ಕೆ ಏರಿಕೆಯಾಗಲಿದೆ.

    ಆಹಾರ ಉತ್ಪನ್ನಗಳು:
    ಆರೆಂಜ್ ಫ್ರೂಟ್ ಜೂಸ್ ಶೇ. 3 ಫ್ರೂಟ್ ಜ್ಯೂಸ್ ಮತ್ತು ತರಕಾರಿ ಜ್ಯೂಸ್ ಶೇ. 50, ಕಚ್ಚಾ ಅಡುಗೆ ಎಣ್ಣೆ ಶೇ. 30, ಸಂಸ್ಕರಿಸಿದ ಅಡುಗೆ ಎಣ್ಣೆ ಶೇ.35 ಏರಿಕೆಯಾಗಲಿದೆ.

    ಸೌಂದರ್ಯ ವರ್ಧಕಗಳು:
    ಸುಗಂಧ ದ್ರವ್ಯ, ಡಿಯೋಡ್ರೆಂಟ್ ಶೇ.20, ಸೌಂದರ್ಯ ವರ್ಧಕಗಳು ಶೇ.20, ದಂತ ಶುದ್ಧಿಗೆ ಬಳಸುವ ವಸ್ತುಗಳು ಶೇ.20, ಶೇವಿಂಗ್ ಕ್ರೀಮ್, ಆಫ್ಟರ್ ಶೇವ್ ಶೇ.20ಕ್ಕೆ ಏರಿಕೆಯಾಗಲಿದೆ.

    ಬಟ್ಟೆಗಳು:
    ಪಾದರಕ್ಷೆಗಳು ಶೇ.20, ಪಾದರಕ್ಷೆಗಳ ಬಿಡಿಭಾಗಗಳು ಶೇ.15ಕ್ಕೆ ಏರಿಕೆಯಾಗಲಿದೆ.

    ಇತರೇ:
    ಹಾಸಿಗೆ, ದಿಂಬು ಇತ್ಯಾದಿ ಶೇ.20, ಮಕ್ಕಳ ಆಟಿಕೆಗಳು ಶೇ.20 ಏರಿಕೆ, ವಿಡಿಯೋ ಗೇಮ್ ಉಪಕರಣಗಳು ಶೇ.20ಕ್ಕೆ, ಸಿಗರೇಟು, ಲೈಟರ್‍ಗಳು ಎಲೆಕ್ಟ್ರಿಕ್ ಸಿಗರೇಟು ಶೇ.20ಕ್ಕೆ ಏರಿಕೆ

    ಮೊಬೈಲ್ ಫೋನ್ ಬೆಲೆ ಎಷ್ಟು ಹೆಚ್ಚಾಗುತ್ತೆ?
    ಆಮದು ಮಾಡಿಕೊಳ್ಳಲಾಗುವ ಮೊಬೈಲ್ ಫೋನ್, ಟಿ.ವಿ ಸೆಟ್, ಡಿಜಿಟಲ್ ಕ್ಯಾಮೆರಾಗಳು, ಮೈಕ್ರೋವೇವ್ ಓವೆನ್, ಎಲ್‍ಇಡಿ ಬಲ್ಬ್ ಗಳು ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗಲಿದೆ.

    ಮೊಬೈಲ್ ಫೋನ್ ಮೇಲಿನ ಕಸ್ಟಮ್ ಡ್ಯುಟಿಯನ್ನು ಶೇ.15 ನಿಂದ ಶೇ.20ಕ್ಕೆ ಏರಿಸಲಾಗಿದೆ. ಹೀಗಾಗಿ ಆಮದು ಮಾಡಿಕೊಳ್ಳುವ ಆಪಲ್ ಐಫೋನ್‍ಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ತಜ್ಞರ ಪ್ರಕಾರ ಐಫೋನ್ ದರದ ಮೇಲೆ 2ರಿಂದ 3 ಸಾವಿರ ರೂ. ಹೆಚ್ಚಾಗಲಿದೆ. ಉದಾಹರಣೆಗೆ ಐಫೋನ್ ಎಕ್ಸ್ ಮಾಡಲ್‍ನ ಫೋನ್ 89 ಸಾವಿರ ರೂ. ಇದ್ದು, ಕಂಪೆನಿ ತೆರಿಗೆ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿದರೆ ಫೋನ್ ಬೆಲೆ 92 ಸಾವಿರ ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ.

    ಟಿ.ವಿ ಸೆಟ್ ಬೆಲೆಗಳೂ ಕೂಡ ಏರಿಕೆಯಾಗಲಿದ್ದು, ಸ್ಕ್ರೀನ್ ಗಾತ್ರಕ್ಕೆ ಅನುಗುಣವಾಗಿ ಈಗಿರುವ ಬೆಲೆಗಿಂತ ಹೆಚ್ಚಾಗಲಿದೆ. 10 ಸಾವಿರ ರೂ. ಬೆಲೆಯ 20 ಲೀಟರ್ ಮೈಕ್ರೋವೇವ್ ಓವೆನ್ ಬೆಲೆ ಮೇಲೆ 500 ರೂ. ಹೆಚ್ಚಾಗುವ ಸಾಧ್ಯತೆಯಿದೆ.

    ಆಮದು ತೆರಿಗೆ ಹೆಚ್ಚಳದಿಂದಾಗಿ ಆಪಲ್ ನಂತಹ ಸಂಸ್ಥೆಗಳು ಸ್ಥಳೀಯ ಉತ್ಪಾದನಾ ಯೋಜನೆಗಳ ವೇಗ ಹೆಚ್ಚಿಸಲಿದ್ದು, ಇದರಿಂದ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಪುಷ್ಟಿ ಸಿಕ್ಕಂತಾಗುತ್ತದೆ. ಹಾಗೂ ಸ್ಥಳೀಯ ಉತ್ಪಾದಕರಿಕೆ ಆಮದಿನಿಂದ ಹೆಚ್ಚಿನ ಸುರಕ್ಷತೆ ಸಿಕ್ಕಂತಾಗುತ್ತದೆ ಎಂದು ವರದಿಯಾಗಿದೆ.

    ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಉತ್ತನ್ನಗಳ ಮೇಲಿನ ಕಸ್ಟಮ್ ಡ್ಯೂಟಿಯನ್ನು ಹೆಚ್ಚಿಸಲಾಗಿದೆ. 2017ರ ಹಣಕಾಸು ವರ್ಷದಲ್ಲಿ ಭಾರತ ಸರಿಸುಮಾರು 42 ಬಿಲಿಯನ್ ಡಾಲರ್(ಅಂದಾಜು 2 ಲಕ್ಷ ಕೋಟಿ ರೂ.) ಮೌಲ್ಯದ ಟೆಲಿಕಾಂ ವಸ್ತುಗಳು, ಕಂಪ್ಯೂಟರ್ ಹಾರ್ಡ್‍ವೇರ್, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸಾಧನಗಳನ್ನು ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ.

  • ಜಿಸ್ಯಾಟ್ 6ಎ ಉಪಗ್ರಹ ಉಡಾವಣೆ ಯಶಸ್ವಿ: ಏನಿದರ ವಿಶೇಷತೆ? ಸೈನಿಕರಿಗೆ ಹೇಗೆ ಸಹಾಯ ಆಗುತ್ತೆ? ಇಲ್ಲಿದೆ ಮಾಹಿತಿ

    ಜಿಸ್ಯಾಟ್ 6ಎ ಉಪಗ್ರಹ ಉಡಾವಣೆ ಯಶಸ್ವಿ: ಏನಿದರ ವಿಶೇಷತೆ? ಸೈನಿಕರಿಗೆ ಹೇಗೆ ಸಹಾಯ ಆಗುತ್ತೆ? ಇಲ್ಲಿದೆ ಮಾಹಿತಿ

    ಶ್ರೀಹರಿಕೋಟಾ: ಇಸ್ರೋದ ಜಿಸ್ಯಾಟ್-6ಎ ಉಪಗ್ರಹ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ  ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.

    ಸ್ಪೇಸ್ ಸೆಂಟರ್ ನಲ್ಲಿರುವ ಎರಡನೇ ಲಾಂಚ್ ಪ್ಯಾಡ್‍ನಿಂದ ಉಪಗ್ರಹವನ್ನು ಹೊತ್ತ ಜಿಎಸ್‍ಎಲ್‍ವಿ ಎಫ್8 ರಾಕೆಟ್ ಇಂದು ಸಂಜೆ 4.56ಕ್ಕೆ ನಭಕ್ಕೆ ಚಿಮ್ಮಿತು. ಉಡಾವಣೆಯಾದ 17 ನಿಮಿಷಕ್ಕೆ ಸರಿಯಾಗಿ ಉಪಗ್ರಹ 36,000 ಕಿ.ಮೀ ಎತ್ತರದಲ್ಲಿರುವ ನಿಗದಿತ ಕಕ್ಷೆಯನ್ನು ತಲುಪಿತು. ಈ ವರ್ಷ ಇಸ್ರೋ ಉಡಾಯಿಸಿದ 2ನೇ ಉಪಗ್ರಹ ಇದಾಗಿದ್ದು ಅತ್ಯಂತ ಶಕ್ತಿಶಾಲಿ ಸಂವಹನ ಉಪಗ್ರಹವಾಗಿದೆ.

    ಈ ಉಪಗ್ರಹ ಸುಮಾರು 2 ಟನ್ ತೂಕವಿದ್ದು, ಇದರ ನಿರ್ಮಾಣಕ್ಕಾಗಿ ಇಸ್ರೋ 270 ಕೋಟಿ ರೂ. ವೆಚ್ಚ ಮಾಡಿದೆ. 400ಕ್ಕೂ ಹೆಚ್ಚು ವಿಜ್ಞಾನಿಗಳು ಈ ಉಪಗ್ರಹ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು.

    161 ಅಡಿ ಎತ್ತರವನ್ನು ಹೊಂದಿದ್ದ ಜಿಎಸ್‍ಎಲ್‍ವಿ ರಾಕೆಟ್‍ಗೆ ಸ್ವದೇಶಿ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಲಾಗಿದೆ. ಜಿಸ್ಯಾಟ್ 6ಎ ಎಸ್ ಬ್ಯಾಂಡ್ ಸಂವಹನ ಉಪಗ್ರಹ ಸರಣಿಯ ಎರಡನೇ ಉಪಗ್ರಹವಾಗಿದೆ. ಜಿಸ್ಯಾಟ್6 2015ರ ಆಗಸ್ಟ್ ನಲ್ಲಿ ಉಡಾವಣೆ ಮಾಡಲಾಗಿತ್ತು. ಇದನ್ನೂ ಓದಿ: ಏನಿದು ಕ್ರಯೋಜನಿಕ್ ಎಂಜಿನ್?

    ಉಪಗ್ರಹದ ವಿಶೇಷತೆ ಏನು?
    ಈ ಉಪಗ್ರಹ 6 ಮೀ. ಉದ್ದದ ಎಸ್-ಬ್ಯಾಂಡ್ `ಸ್ವಯಂ ಚಾಲಿತ’ ಹರಡಿಕೊಳ್ಳುವ ಆ್ಯಂಟೆನಾ ಇದರ ವಿಶೇಷ. ಕಕ್ಷೆಗೆ ಸೇರುತ್ತಲೇ ಇದು ಛತ್ರಿಯಂತೆ ಹರಡಿಕೊಳ್ಳುತ್ತದೆ. ಈವರೆಗೆ ಇಸ್ರೋ ಅಳವಡಿಸಿರುವ ಆ್ಯಂಟೆನಾಗಳಿಗಿಂತಾ ಮೂರು ಪಟ್ಟು ದೊಡ್ಡದಾಗಿರುವುದು ಇದರ ವಿಶೇಷತೆ.

    ಎಸ್-ಬ್ಯಾಂಡ್ ವಿಶೇಷತೆ?
    ವಿದ್ಯುತ್ಕಾಂತೀಯ ಮಾದರಿಯ 2 ರಿಂದ 4 ಗಿಗಾ ಹಟ್ರ್ಸ್ ವರೆಗಿನ ತರಂಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಈ ಉಪಗ್ರಹ ಹೊಂದಿದೆ. ಈ ಉಪಗ್ರಹದ ಜೀವಿತಾವಧಿ 10 ವರ್ಷ. ಜಾಗತಿಕವಾಗಿ 4ಜಿ ಮೊಬೈಲ್ ಸೇವೆ ಪಡೆಯಲು 2.5 ಗಿಗಾಹರ್ಟ್ಸ್ ಬ್ಯಾಂಡ್ ಬಳಸಲಾಗುತ್ತದೆ. ಮೊಬೈಲ್ ಬ್ರಾಡ್‍ಬ್ಯಾಂಡ್ ಗೆ ಎಸ್ ಬ್ಯಾಂಡ್ ಸ್ಪೆಕ್ಟ್ರಾಂ ಬಳಕೆ ಮಾಡಲಾಗುತ್ತದೆ.

    ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆ?
    ಸೈನಿಕರಿಗೆ ವಾಯ್ಸ್ ಮತ್ತು ವಿಡಿಯೋ ಡೇಟಾಗಳನ್ನು ಸುಲಭವಾಗಿ ಸಂವಹನ ಮಾಡಲು ಈ ಉಪಗ್ರಹ ಸಹಕಾರಿಯಾಗಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ(ಡಿಆರ್‌ಡಿಒ) ಈಗಾಗಲೇ ಕೈಯಲ್ಲಿ ಬಳಸುವ ಹಲವು ಸಾಧನಗಳನ್ನು ಅಭಿವೃದ್ಧಿ ಪಡಿಸಿದೆ. ಮುಂದಿನ ದಿನಗಳಲ್ಲಿ ಈ ಉಪಗ್ರಹವನ್ನು ಆಧಾರಿಸಿ ಕೆಲಸ ಮಾಡಬಲ್ಲ ಮತ್ತಷ್ಟು ಸಾಧನಗಳನ್ನು ಅಭಿವೃದ್ಧಿ ಪಡಿಸಲಿದೆ.

  • ಬ್ರಾಡ್‍ಬ್ಯಾಂಡ್ ಇಂಟರ್ನೆಟ್‌ ಸ್ಪೀಡ್: 10 ಸ್ಥಾನ ಏರಿಕೆ ಕಂಡ ಭಾರತ

    ಬ್ರಾಡ್‍ಬ್ಯಾಂಡ್ ಇಂಟರ್ನೆಟ್‌ ಸ್ಪೀಡ್: 10 ಸ್ಥಾನ ಏರಿಕೆ ಕಂಡ ಭಾರತ

    ನವದೆಹಲಿ: ಭಾರತದ ಇಂಟರ್ನೆಟ್‌ ಸ್ಪೀಡ್ ಹೆಚ್ಚಾಗಿದೆ. ಸ್ಥಿರ ಬ್ರಾಡ್‍ಬ್ಯಾಂಡ್ ಸ್ಪೀಡ್‍ನಲ್ಲಿ ವಿಶ್ವದಲ್ಲೇ ಭಾರತಕ್ಕೆ 67ನೇ ಸ್ಥಾನ ಸಿಕ್ಕಿದ್ದು, ಮತ್ತು ಮೊಬೈಲ್ ಇಂಟರ್ನೆಟ್‌ ಸ್ಪೀಡ್ ನಲ್ಲಿ 109ನೇ ಸ್ಥಾನ ಸಿಕ್ಕಿದೆ.

    ಇಂಟರ್ನೆಟ್‌ ಸ್ಪೀಡ್ ಟೆಸ್ಟಿಂಗ್ ಮತ್ತು ಅನಾಲಿಸಿಸ್ ಕಂಪೆನಿ ಓಕ್ಲಾ ವಿಶ್ವದ ವಿವಿಧ ದೇಶಗಳ ಇಂಟರ್ನೆಟ್‌ ಸ್ಪೀಡ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಭಾರತದ ಸ್ಥಿರ ಬ್ರಾಡ್‍ಬ್ಯಾಂಡ್ ಸ್ಪೀಡ್ 2017ರ ನವೆಂಬರ್ ನಲ್ಲಿ 18.82 ಮೆಗಾ ಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ಇದ್ದರೆ, 2018ರ ಫೆಬ್ರವರಿಯಲ್ಲಿ 20.72 ಎಂಬಿಪಿಎಸ್‍ಗೆ ಏರಿಕೆಯಾಗಿದೆ ಎಂದು ಹೇಳಿದೆ.

    ಕಳೆದ ವರ್ಷ ಭಾರತದ ಫಿಕ್ಸ್ಡ್ ಬ್ರಾಡ್‍ಬ್ಯಾಂಡ್ ಡೌನ್‍ಲೋಡ್ ಸ್ಪೀಡ್ ರ‍್ಯಾಂಕ್ ಪಟ್ಟಿಯಲ್ಲಿ 76ನೇ ಸ್ಥಾನದಲ್ಲಿದ್ದರೆ ಈ ಬಾರಿ 67ನೇ ಸ್ಥಾನಕ್ಕೆ ಏರಿಕೆಯಾಗಿದೆ. ಆದರೆ ಮೊಬೈಲ್ ಇಂಟರ್ನೆಟ್‌ ಡೌನ್‍ಲೋಡ್ ಸ್ಪೀಡ್ ಮಾತ್ರ ಸರಾಸರಿ 8.80 ಎಂಬಿಪಿಎಸ್ ನಿಂದ 9.01 ಎಂಬಿಪಿಎಸ್ ಗೆ ಏರಿಕೆಯಾಗಿದೆ.

    ಅತಿವೇಗವಾದ ಮೊಬೈಲ್ ಇಂಟರ್ನೆಟ್‌ ಪಟ್ಟಿಯಲ್ಲಿ ನಾರ್ವೆಗೆ ಮೊದಲ ಸ್ಥಾನ ಸಿಕ್ಕಿದ್ದು, ಅಲ್ಲಿ 62.07 ಎಂಬಿಪಿಎಸ್ ವೇಗದ ಬ್ರಾಡ್‍ಬ್ಯಾಂಡ್ ಸಂಪರ್ಕ ಇದೆ. 161.53 ಎಂಬಿಪಿಎಸ್ ಸರಾಸರಿ ವೇಗವನ್ನು ಹೊಂದುವ ಮೂಲಕ ಬ್ರಾಡ್‍ಬ್ಯಾಂಡ್ ಇಂಟರ್ನೆಟ್‌ ನಲ್ಲಿ ಸಿಂಗಾಪುರಕ್ಕೆ ಮೊದಲ ಸ್ಥಾನ ಸಿಕ್ಕಿದೆ.

    ಯಾವ ದೇಶದಲ್ಲಿ ಇಂಟರ್ನೆಟ್‌ ಸ್ಪೀಡ್ ಎಷ್ಟಿದೆ ಎನ್ನುವುದನ್ನು ‘ಸ್ಪೀಡ್ ಟೆಸ್ಟ್ ಗ್ಲೋಬಲ್ ಇಂಡೆಕ್ಸ್ ಪಟ್ಟಿ’ಯನ್ನು ಓಕ್ಲಾ ಪ್ರತಿ ತಿಂಗಳು ಬಿಡುಗಡೆಗೊಳಿಸುತ್ತಿರುತ್ತದೆ. ಈ ಮಾಹಿತಿಯನ್ನು ಕಲೆಹಾಕಲು ವಿಶ್ವದಲ್ಲಿ 7,021 ಸರ್ವರ್ ಗಳನ್ನು ಹೊಂದಿದ್ದು, ಇದರಲ್ಲಿ 439 ಅತಿವೇಗವಾದ ಸರ್ವರ್ ಗಳು ಭಾರತದಲ್ಲಿದೆ. ಇದನ್ನೂ ಓದಿ: 2020ರ ವೇಳೆಗೆ ಭಾರತದಲ್ಲಿ ಬರುತ್ತೆ 5ಜಿ: ನೆಟ್ ಸ್ಪೀಡ್ ಎಷ್ಟು ಗೊತ್ತಾ?

  • ಜಿಯೋಫಿ ಹೊಸ ಸಾಧನ ಬಿಡುಗಡೆ: ಬೆಲೆ ಎಷ್ಟು? ಎಷ್ಟು ಡಿವೈಸ್ ಕನೆಕ್ಟ್ ಮಾಡಬಹುದು?

    ಜಿಯೋಫಿ ಹೊಸ ಸಾಧನ ಬಿಡುಗಡೆ: ಬೆಲೆ ಎಷ್ಟು? ಎಷ್ಟು ಡಿವೈಸ್ ಕನೆಕ್ಟ್ ಮಾಡಬಹುದು?

    ಮುಂಬೈ: ರಿಲಯನ್ಸ್ ಜಿಯೋ ಹೊಸ ಮಾದರಿಯ ಜಿಯೋಫಿ 4ಜಿ ಎಲ್‍ಟಿಇ ಹಾಟ್ ಸ್ಪಾಟ್ ಸಾಧನವನ್ನು ಬಿಡುಗಡೆ ಮಾಡಿದ್ದು 999 ರೂ. ಬೆಲೆಯಲ್ಲಿ ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.

    ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು, ಒಂದು ವರ್ಷ ವಾರಂಟಿ ಸಿಗಲಿದೆ. ಹಿಂದೆ ಬಿಡುಗಡೆ ಮಾಡಿದ್ದ ಸಾಧನ ಮೊಟ್ಟೆ ಆಕಾರದಲ್ಲಿ ಇದ್ದರೆ ಈಗ ಬಿಡುಗಡೆಯಾಗಿರುವ ಸಾಧನ ವೃತ್ತಾಕಾರದಲ್ಲಿದೆ.

    ಆನ್, ಆಫ್, ಡಬ್ಲ್ಯೂಪಿಎಸ್(ವೈಫೈ ಪ್ರೊಟೆಕ್ಟೆಡ್ ಸೆಟಪ್), ಬ್ಯಾಟರಿ ನೋಟಿಫಿಕೇಶನ್ ಲೈಟ್, 4ಜಿ, ವೈಫೈ ಸಿಗ್ನಲ್ ನೋಡಲು ಸಾಧ್ಯವಿದೆ. 150 ಎಂಬಿಎಸ್ ಡೌನ್ಲೋಡ್ ಸ್ಪೀಡ್ ಇದ್ದರೆ 50 ಎಂಬಿ ಅಪ್ಲೋಡ್ ಸ್ವೀಡ್ ಇದೆ.

    ಒಂದು ಬಾರಿ ಗರಿಷ್ಟ 32 ಸಾಧನಗಳನ್ನು ಕನೆಕ್ಟ್ ಮಾಡುವ ಸಾಮರ್ಥ್ಯ ಈ ಸಾಧನಕ್ಕಿದೆ. ಮೈಕ್ರೋ ಎಸ್‍ಡಿ ಸ್ಲಾಟ್ ನೀಡಲಾಗಿದ್ದು, ಗರಿಷ್ಟ 64 ಜಿಬಿ ಮೆಮೊರಿ ಕಾರ್ಡ್ ಹಾಕಬಹುದಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಸಾಧನ 2300 ಎಂಎಎಚ್ ಬ್ಯಾಟರಿ ಹೊಂದಿದ್ದರೆ ಹೊಸ ಸಾಧನ 3000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.

  • ನಾನು ಓದುತ್ತಿರೋ ವಿಶ್ವವಿದ್ಯಾಲಯದಲ್ಲಿ ಧೋನಿ ಟಾಪರ್: ಕಾರ್ತಿಕ್

    ನಾನು ಓದುತ್ತಿರೋ ವಿಶ್ವವಿದ್ಯಾಲಯದಲ್ಲಿ ಧೋನಿ ಟಾಪರ್: ಕಾರ್ತಿಕ್

    ಚೆನ್ನೈ: ನಾನು ಓದುತ್ತಿರುವ ವಿಶ್ವವಿದ್ಯಾಲಯದಲ್ಲಿ ಧೋನಿ ಟಾಪರ್ ಆಗಿದ್ದರೆ, ನಾನು ಇನ್ನೂ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದೇನೆ ಎಂದು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

    ಬಾಂಗ್ಲಾ ವಿರುದ್ಧ ನಿದಾಸ್ ಟ್ರೋಫಿ ಟಿ 20 ಫೈನಲ್ ಪಂದ್ಯವನ್ನು ಜಯಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನನ್ನ ಆಟವನ್ನು ಧೋನಿಗೆ ಹೋಲಿಸುವುದು ಸರಿಯಲ್ಲ ಎಂದರು.

    ಪಂದ್ಯದ ಫಿನಿಶಿಂಗ್ ವಿಚಾರಕ್ಕೆ ಬಂದರೆ ಧೋನಿ ನಂತರದ ಸ್ಥಾನವನ್ನು ತುಂಬಬಲ್ಲ ಆಟಗಾರ ಎನ್ನುವ ಮಾತು ಭಾನುವಾರದ ಪಂದ್ಯದ ಬಳಿಕ ಕೇಳಿ ಬಂದಿತ್ತು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಧೋನಿ ನನಗಿಂತಲೂ ಮಾನಸಿಕವಾಗಿ ಸದೃಢರಾಗಿದ್ದಾರೆ ಎಂದು ತಿಳಿಸಿದರು.

    ನನ್ನ ಕ್ರಿಕೆಟ್ ಜೀವನ ಮತ್ತು ಧೋನಿಯವರ ಕ್ರಿಕೆಟ್ ಜೀವನಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಧೋನಿ ಅವರು ಕಿರಿಯ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾರೆ. ಹೀಗಾಗಿ ಅವರ ಆಟಕ್ಕೆ ನನ್ನ ಆಟವನ್ನು ಹೋಲಿಸುವುದು ಸರಿಯಲ್ಲ ಎಂದರು. ಇದನ್ನೂ ಓದಿ: ದಿನೇಶ್ ಕಾರ್ತಿಕ್ ಗೆ ಕ್ಷಮೆ ಕೋರಿದ ಅಮಿತಾಬ್ ಬಚ್ಚನ್!

    ಈ ವೇಳೆ ಮುಂಬೈ ಆಟಗಾರ ಅಭಿಷೇಕ್ ನಾಯರ್ ನೀಡಿದ ಸಲಹೆಯನ್ನು ತಿಳಿಸಲು ಕಾರ್ತಿಕ್ ಮರೆಯಲಿಲ್ಲ. ಕಳೆದ ಎರಡು ವರ್ಷದಲ್ಲಿ ನನ್ನ ಆಟ ನಾಯರ್ ನೀಡಿದ ಸಲಹೆಯಿಂದ ಬದಲಾಗಿದೆ. ಅಭಿಷೇಕ್ ನಾಯರ್ ನದಿಯಾದರೆ ನಾನು ದೋಣಿ ಎಂದರು. ಇದನ್ನೂ ಓದಿ: ಸಿಕ್ಸರ್ ಸಿಡಿಸಲು ಅಭ್ಯಾಸ ನಡೆಸುತ್ತಿದ್ದೆ: ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್

    ವಿಜಯ್ ಶಂಕರ್ ಆಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೌಲರ್ ಆಗಿ ಅವರು ಉತ್ತಮ ಆಟವನ್ನು ಆಡಿದ್ದಾರೆ. ಆಲ್ ರೌಂಡರ್ ಆಗಿರುವ ಅವರು ಒತ್ತಡ ಸಮಯದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಅವರಿಗೆ ಸಹಾಯಕವಾಗಬಹುದು ಎಂದು ತಿಳಿಸಿದರು. ಇದನ್ನೂ ಓದಿ : ದಿನೇಶ್ ಕಾರ್ತಿಕ್ ಕೊನೆಯ ಸಿಕ್ಸರ್ ನೋಡಿಲ್ಲ ಯಾಕೆ ಅನ್ನೋದನ್ನು ಹೇಳಿದ್ರು ರೋಹಿತ್

  • ಶೀಘ್ರವೇ ಭಾರತಕ್ಕೂ ಲಗ್ಗೆಯಿಡಲಿವೆ ಬಿಕಿನಿ ಏರ್ ಲೈನ್ಸ್!

    ಶೀಘ್ರವೇ ಭಾರತಕ್ಕೂ ಲಗ್ಗೆಯಿಡಲಿವೆ ಬಿಕಿನಿ ಏರ್ ಲೈನ್ಸ್!

    ನವದೆಹಲಿ: ಬಿಕಿನಿ ಏರ್ ಲೈನ್ ಅಂತಾನೇ ಇದು ಫೇಮಸ್ ಆಗಿರೋ ವಿಯೆಟ್ನಾಂನ ವಿಯೆಟ್ಜೆಟ್ ಸದ್ಯದಲ್ಲೇ ಭಾರತಕ್ಕೂ ಬರಲಿದೆ ಎಂದು ವಿಮಾನಯಾನ ಸಂಸ್ಥೆ ಫೋಷಿಸಿದೆ.

    ಈ ವಿಮಾನ ನವದೆಹಲಿಯಿಂದ ಹೊ ಚಿ ಮಿನ್ಹ್ ನಗರಕ್ಕೆಪ್ರಯಾಣ ಆರಂಭಿಸುವುದಾಗಿ ಘೋಷಿಸಿದೆ. ವಾರದಲ್ಲಿ ನಾಲ್ಕು ದಿನಗಳ ಕಾಲ ಇದು ಹಾರಾಟ ನಡೆಸಲಿದೆ. ಒಟ್ಟಿನಲ್ಲಿ ಜುಲೈ ಅಥವಾ ಅಗಸ್ಟ್ ನಲ್ಲಿ ಬಿಕಿನಿ ಏರ್ ಲೈನ್ಸ್ ವಿಮಾನ ದೆಹಲಿಯಿಂದ ಹಾರಾಟ ಆರಂಭಿಸಲಿದೆ ಎಂಬುದಾಗಿ ವರದಿಯಾಗಿದೆ.

    ಈ ವಿಮಾನದಲ್ಲಿರೋ ಗಗನಸಖಿಯರೆಲ್ಲ ಕೇವಲ ಬಿಕಿನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಈ ಬಿಕಿನಿ ಸುಂದರಿಯರೀಗ ಭಾರತಕ್ಕೂ ಆಗಮಿಸುತ್ತಿರುವುದು ಪ್ರಯಾಣಿಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.

    ಇದು ನಿರಂತರ ವಿಮಾನವಾಗಿರುವುದರಿಂದ ಹೆಚ್ಚಿನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್ ಆಗಲ್ಲ. ಅಂದರೆ ಪ್ರಯಾಣಿಕರು ಮಾರ್ಗ ಮಧ್ಯೆ ಬೇರೆ ಬೇರೆ ವಿಮಾನಗಳನ್ನು ಬದಲಿಸಬೇಕಾಗಿಲ್ಲ. ಈ ವಿಮಾನ ಪ್ರಸ್ತುತ ಭಾರತ ಮತ್ತು ವಿಯೆಟ್ನಾಂ ನಡುವೆ ಇದೆ. ಈ ವಿಮಾನ ಥೈಲ್ಯಾಂಡ್, ಸಿಂಗಾಪುರ್ ಅಥವಾ ಮಲೇಶಿಯಾ ಮೂಲಕ ಪ್ರಯಾಣಿಕರನ್ನು ಕರೆದೊಯ್ಯುತ್ತದೆ.

    ವಿಯೆಟ್ನಾಂ ಏರ್ ಲೈನ್ ವಾರ್ಷಿಕ ಕ್ಯಾಲೆಂಡರ್ ಕೂಡ ಪ್ರಕಟಿಸುತ್ತಿದೆ. ಇದು ವಿಮಾನದ ಮಾಡೆಲ್ ಗಳು, ಪೈಲಟ್ ಗಳು ಮತ್ತು ನೆಲ ಸಿಬ್ಬಂದಿಗಳ ವಿವರಗಳನ್ನು ತಿಳಿಸುತ್ತದೆ. ಜನರು ನಮ್ಮನ್ನು ಬಿಕಿನಿಯ ಚಿತ್ರದೊಂದಿಗೆ ಸಂಯೋಜಿಸುವಾಗ ನಾವು ಅಸಮಾಧಾನ ಹೊಂದಿಲ್ಲ. ಜನರಿಗೆ ಸಂತೋಷವನ್ನುಂಟು ಮಾಡಿದರೆ ನಾವು ಸಂತೋಷ ವಾಗಿರುತ್ತೇವೆ ಎಂದು ವಿಯೆಟ್ಜೆಟ್ ವ್ಯವಸ್ಥಾಪಕ ನಿರ್ದೇಶಕ ಲುಯು ಡುಕ್ ಖಾನ್ ತಿಳಿಸಿದ್ದಾರೆ.


    ಅಷ್ಟೇ ಅಲ್ಲದೇ ಕ್ಯಾಲೆಂಡರ್ ಮತ್ತು ಬಿಕಿನಿಯನ್ನು ವಿಯೆಟ್ನಾಂನ ಸಂಪ್ರದಾಯವಾದ ಸಂಸ್ಕೃತಿಯಲ್ಲಿನ ಚಿತ್ರಗಳು ಎಂದು ವಿಯೆಟ್ಜೆಟ್ ನ ಬಿಲಿಯನೇರ್ ಮಹಿಳಾ ಸಿಇಓ ಥಿ ಫುಂಗ್ ಥೊವೊ ಕೂಡಾ ಹೇಳಿದ್ದಾರೆ.

  • ಯುಗಾದಿಯಂದೇ ಪಾಕ್ ನಿಂದ ಗುಂಡಿನ ದಾಳಿ- ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ದುರ್ಮರಣ

    ಯುಗಾದಿಯಂದೇ ಪಾಕ್ ನಿಂದ ಗುಂಡಿನ ದಾಳಿ- ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ದುರ್ಮರಣ

    ಜಮ್ಮು-ಕಾಶ್ಮೀರ: ಯುಗಾದಿಯಂದೇ ಪಾಕಿಸ್ತಾನ ಭಾರತದ ಮೇಲೆ ಗುಂಡಿನ ದಾಳಿ ನಡೆಸಿದ್ದರ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

    ಪೂಂಛ್ ಜಿಲ್ಲೆಯ ದೇವ್ಟಾ ಧರ್ ಗ್ರಾಮದಲ್ಲಿರುವ ಮನೆಗೆ ಪಾಕ್ ಸೇನೆ ಹಾರಿಸಿದ ಶೆಲ್‍ಗಳು ಅಪ್ಪಳಿಸಿವೆ. ದಾಳಿಯಲ್ಲಿ ಮನೆಯಲ್ಲಿದ್ದ ಚೌಧರಿ ಮೊಹ್ಮದ್ ರಂಜನ್, ಪತ್ನಿ ಮತ್ತು ಮೂವರು ಗಂಡು ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಘಟನೆಯಿಂದಾಗಿ ರಂಜನ್ ಅವರ ಇಬ್ಬರು ಹೆಣ್ಣು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇಂದು ಬೆಳಗ್ಗೆ 7.45ರ ಸುಮಾರಿಗೆ ಪಾಕ್ ಗುಂಡಿನ ದಾಳಿ ನಡೆಸಿದೆ. ಸೇನೆಯ ಬದಲು ನಾಗರಿಕ ಪ್ರದೇಶಗಳನ್ನೇ ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಸೇನೆ ದಾಳಿ ನಡೆಸ್ತಿದೆ ಅಂತ ಸೇನಾ ವಕ್ತಾರ ದೇವೇಂದರ್ ಆನಂದ್ ತಿಳಿಸಿದ್ದಾರೆ.

    ಕಳೆದ ವಾರ ರಾಜ್ಯಸಭೆಯಲ್ಲಿ ಪ್ರಶ್ನೆಯ ವೇಳೆ ಪಾಕಿಸ್ತಾನ ಜನವರಿಯಿಂದ ಈವರೆಗೆ ಸುಮಾರು 209 ಬಾರಿ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿದೆ. ಅದರಲ್ಲಿ ಫೆಬ್ರವರಿಯ 12 ದಿನದೊಳಗೆ ಸುಮಾರು 142 ಬಾರಿ ದಾಳಿ ನಡೆಸಿದೆ. ಒಟ್ಟಾರೆ ಕಳೆದ ವರ್ಷದಿಂದ ಈವರೆಗೆ ಸುಮಾರು 860 ಬಾರಿ ಪಾಕ್ ಭಾರತದ ಮೇಲೆ ದಾಳಿ ನಡೆಸಿದೆ ಅಂತ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದ್ದರು.

    ಕಳೆದ ತಿಂಗಳಷ್ಟೇ ಪೂಂಛ್ ಹಾಗೂ ರಾಜೌರಿ ಜಿಲ್ಲೆಯಲ್ಲಿ ಪಾಕ್ ನ ದಾಳಿಗೆ 22 ವರ್ಷದ ಯೋಧ ಸೇರಿ 4 ಮಂದಿ ಹುತಾತ್ಮರಾಗಿದ್ದರು. ಪಾಕ್‍ನ ಪ್ರತಿ ದಾಳಿಗೂ ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸಿದ್ದಾರೆ ಎಂದು ಸೇನಾ ಮುಖ್ಯಸ್ಥ ಶರತ್ ಚಂದ್ ತಿಳಿಸಿದ್ದಾರೆ.

  • ಇನ್ನು ಮುಂದೆ @OfficeOfRGಯಲ್ಲಿ ರಾಹುಲ್ ಗಾಂಧಿ ಸಿಗಲ್ಲ!

    ಇನ್ನು ಮುಂದೆ @OfficeOfRGಯಲ್ಲಿ ರಾಹುಲ್ ಗಾಂಧಿ ಸಿಗಲ್ಲ!

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಶನಿವಾರ ಬೆಳಗ್ಗೆ ಬದಲಾಗಿದೆ. ಕಾಂಗ್ರೆಸ್ ಪಕ್ಷದ 84ನೇ ಪೂರ್ಣಾಧಿವೇಶನದ ಸಂದರ್ಭದಲ್ಲೇ ಹೊಸ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ನನ್ನ ಟ್ವಿಟ್ಟರ್ ಹ್ಯಾಂಡಲ್ ಇವತ್ತು ಬೆಳಿಗ್ಗೆ 9 ಗಂಟೆಯಿಂದ @RahulGandhi ಆಗಿ ಬದಲಾಗಿದೆ. @OfficeOfRG ಟ್ವಿಟ್ಟರ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ನಿಮ್ಮ ಪ್ರತಿಕ್ರಿಯೆ ಹಾಗೂ ಅಭಿಪ್ರಾಯಗಳನ್ನು ಎದುರು ನೋಡುತ್ತಿದ್ದೇನೆ. ಟ್ವಿಟ್ಟರ್ ಮತ್ತು ಇತರ ತಾಣಗಳಲ್ಲಿ ನನ್ನ ಮಾತುಕತೆ ಮುಂದುವರಿಯಲಿದೆ ಎಂದು ಟ್ವೀಟ್ ಮಾಡಿದ್ದಾರೆ.

    2015ರ ಮೇ 8 ರಂದು ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟಿದ್ದ ರಾಹುಲ್ ಗಾಂಧಿ ಶನಿವಾರದವರೆಗೆ 3,631 ಟ್ವೀಟ್ ಮಾಡಿದ್ದು, 94 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ರಾಹುಲ್ ಖಾತೆಯನ್ನು 62 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.

  • ಶೀಘ್ರವೇ 5 ಪೈಸೆಗೆ 1 ಲೀಟರ್ ಕುಡಿಯುವ ನೀರು: ಗಡ್ಕರಿ

    ಶೀಘ್ರವೇ 5 ಪೈಸೆಗೆ 1 ಲೀಟರ್ ಕುಡಿಯುವ ನೀರು: ಗಡ್ಕರಿ

    ಭೋಪಾಲ್: ಶೀಘ್ರದಲ್ಲೇ 5 ಪೈಸೆಗೆ ಒಂದು ಲೀಟರ್ ನೀರನ್ನು ವಿತರಿಸಲಾಗುವುದು ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

    ಮಧ್ಯಪ್ರದೇಶದ ಬಂದ್ರಭಾನ್ ನಲ್ಲಿ ನಡೆಯುತ್ತಿರುವ ನದಿ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ತಮಿಳುನಾಡಿನ ಟ್ಯುಟಿಕೋರನ್ ನಲ್ಲಿ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಕುಡಿಯುವ ನೀರಾಗಿ ಪರಿವರ್ತನೆ ಮಾಡುವ ಪ್ರಯೋಗ ನಡೆಯುತ್ತಿದೆ ಎಂದು ತಿಳಿಸಿದರು.

    ನಮ್ಮ ದೇಶದಲ್ಲಿ ಹಲವು ರಾಜ್ಯಗಳು ನದಿ ನೀರಿಗಾಗಿ ಜಗಳವಾಡುತ್ತಿದೆ. ಆದರೆ ನಮ್ಮ ದೇಶದಿಂದ ಪಾಕಿಸ್ತಾನಕ್ಕೆ ಹೋಗುವ ನದಿಯ ಬಗ್ಗೆ ಯಾರು ಕಳವಳ ವ್ಯಕ್ತಪಡಿಸುವುದಿಲ್ಲ ಎಂದರು.

    ಭಾರತದ ಮೂರು ನದಿಗಳು ಪಾಕಿಸ್ತಾನಕ್ಕೆ ಹರಿದು ಹೋಗುತ್ತದೆ. ಈ ವಿಚಾರದ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡುವುದಿಲ್ಲ ಜೊತೆಗೆ ಶಾಸಕರು ನೀರನ್ನು ತಡೆಯಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಹೇಳಿದರು. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಮುದ್ರ ನೀರನ್ನು ಕುಡಿದ ಮೋದಿ!