Tag: india

  • ಮುಂಬೈ ದಾಳಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳೆ ಕಾರಣ: ನವಾಜ್ ಷರೀಫ್

    ಮುಂಬೈ ದಾಳಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳೆ ಕಾರಣ: ನವಾಜ್ ಷರೀಫ್

    ಲಾಹೋರ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು 2008ರ ಮುಂಬೈ ಉಗ್ರ ದಾಳಿಯಲ್ಲಿ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಪಾತ್ರ ಇದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

    ಪಾಕಿಸ್ತಾನದ ಡಾನ್ ಪತ್ರಿಕೆ ಜತೆ ಮಾತನಾಡಿರುವ ಅವರು, ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಅವುಗಳು ಸರ್ಕಾರೇತರ ಶಕ್ತಿಗಳಾಗಿವೆ. ಗಡಿಯನ್ನು ದಾಟಿ ಮುಂಬೈಯಲ್ಲಿ 150ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲು ಅವಕಾಶ ಮಾಡಿಕೊಡಬೇಕೆ ಎಂದು ಪ್ರಶ್ನಿಸಿದ್ದಾರೆ.

    10 ಜನ ಲಷ್ಕರ್-ಇ-ತೊಯ್ಬಾ ಉಗ್ರರು ನವೆಂಬರ್ 26, 2008 ರಿಂದ ನವೆಂಬರ್ 29 ರವರೆಗೆ ಮುಂಬೈಯಲ್ಲಿ ಸಂಘಟಿತ ಶೂಟಿಂಗ್ ಮತ್ತು ಬಾಂಬ್ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

    2008 ನವೆಂಬರ್ 26 ರಂದು ಆಗಿದ್ದೇನು?
    ನವೆಂಬರ್ 23 ರಂದು 10 ಜನ ಉಗ್ರರು ಕರಾಚಿಯಿಂದ ಅರೇಬಿಯನ್ ಸಮುದ್ರದ ಮೂಲಕ ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಮಾರ್ಗದ ಮಧ್ಯೆ ಭಾರತದ ಮೀನುಗಾರರ ದೋಣಿಯನ್ನು ಅಪಹರಿಸಿ, 4 ಜನರನ್ನು ಕೊಂದು ದೋಣಿಯ ಕ್ಯಾಪ್ಟನ್ ಅನ್ನು ಭಾರತಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಮುಂಬೈಗೆ 7 ಕಿಮೀ ಇರುವಂತೆ ಕ್ಯಾಪ್ಟನ್ ಅನ್ನು ಕೊಂದುಹಾಕಿ ಮುಂಬೈ ತಲಪುತ್ತಿದ್ದಂತೆ ತಂಡಗಳಾಗಿ ಬೇರೆ ಬೇರೆ ಹಾದಿಯಲ್ಲಿ ನಡೆದಿದ್ದಾರೆ.

    ನವೆಂಬರ್ 26 ರಂದು ಮೊಹಮ್ಮದ್ ಅಜ್ಮಲ್ ಕಸಬ್, ಇಸ್ಮಾಯಿಲ್ ಖಾನ್ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮೇಲೆ ದಾಳಿ ಮಾಡಿ 58 ಜನರನ್ನು ಸಾಯಿಸಿದ್ದರು. ನಂತರ ನಾರಿಮನ್ ಹೌಸ್, ತಾಜ್, ಒಬೆರಾಯ್-ಟ್ರೈಡೆಂಟ್ ಹೋಟೆಲ್ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದರು.

    ಈ ಕೃತ್ಯವನ್ನು ಮಾಡಿರುವವರು ಉಗ್ರರೇ ಅವರಿಗೆ ಪಾಕಿಸ್ತಾನ ಬೆಂಬಲಿಸಿ ನೆಲೆಕೊಟ್ಟಿದೆ ಎಂದು ಭಾರತ ಪದೇ ಪದೇ ದಾಖಲೆ ಸಹಿತ ಆರೋಪ ಮಾಡುತ್ತಲೇ ಬಂದಿತ್ತು.

  • ಐತಿಹಾಸಿಕ ಸಾಧನೆ: ಭಾರತದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ

    ಐತಿಹಾಸಿಕ ಸಾಧನೆ: ಭಾರತದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ

    ನವದೆಹಲಿ: ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ತಲುಪುವ ಮೂಲಕ ಭಾರತ ಐತಿಹಾಸಿಕ ಸಾಧನೆ ನಿರ್ಮಿಸಿದೆ. ಮಣಿಪುರದ ಸೇನಾಪತಿ ಜಿಲ್ಲೆಯ ಗ್ರಾಮವೊಂದಕ್ಕೆ ಶನಿವಾರ ಸಂಜೆ 5.30ಕ್ಕೆ ವಿದ್ಯುತ್ ತಲುಪುವ ಮೂಲಕ ಈ ಸಾಧನೆ ನಿರ್ಮಾಣವಾಗಿದೆ.

    2014ರಲ್ಲಿ ಮೋದಿ ಸರ್ಕಾರ ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಭಾರತದ ಅಭಿವೃದ್ಧಿಯ ಪ್ರಯಾಣದಲ್ಲಿ 2018ರ ಏಪ್ರಿಲ್ 28 ಐತಿಹಾಸಿಕ ದಿನ. ಶನಿವಾರ ನಾವು ನೀಡಿದ್ಧ ಭರವಸೆ ಪೂರ್ಣವಾಗಿದೆ. ಭಾರತದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದ್ದಕ್ಕೆ ನನಗೆ ಬಹಳ ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಪ್ರಧಾನಿ ಮೋದಿ 2015ರ ಸ್ವಾತಂತ್ರ್ಯ ದಿನಾಚಣೆಯ ಭಾಷಣದಲ್ಲಿ, 1 ಸಾವಿರ ದಿನದ ಒಳಗಡೆ ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ ಈ ಗುರಿಯನ್ನು 987 ದಿನದಲ್ಲೇ ಪೂರ್ಣಗೊಳಿಸಿದ್ದೇವೆ ಎಂದು ಪೀಯುಷ್ ಗೋಯಲ್ ರೀಟ್ವೀಟ್ ಮಾಡಿದ್ದಾರೆ.

    ಈ ಗುರಿಯನ್ನು ತಲುಪಲು ಸಹಕರಿಸಿದ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಎಲ್ಲ ಕೆಲಸಗಾರರಿಗೆ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    https://twitter.com/India_Policy/status/990479994362122240

     

  • ಹುಟ್ಟುಹಬ್ಬದ ದಿನದಂದೇ ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಸಚಿನ್‍ಗೆ ಅವಮಾನ!

    ಹುಟ್ಟುಹಬ್ಬದ ದಿನದಂದೇ ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಸಚಿನ್‍ಗೆ ಅವಮಾನ!

    ಬೆಂಗಳೂರು: ಇಂದು 45ನೇ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಅವಮಾನ ಮಾಡಿದೆ ಎಂದು ಆರೋಪಿಸಿ ಸಚಿನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಿದ್ದಾರೆ.

    ಏಪ್ರಿಲ್ 24 ಸಚಿನ್ ಮತ್ತು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಡೇಮಿಯನ್ ಫ್ಲೆಮಿಂಗ್ ಹುಟ್ಟುಹಬ್ಬ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ 2000 ಇಸ್ವಿಯಲ್ಲಿ ಪರ್ಥ್ ನಲ್ಲಿ ನಡೆದ ಏಕದಿನ ಪಂದ್ಯದ ವೇಳೆ ಫ್ಲೆಮಿಂಗ್ ಬೌಲಿಂಗ್ ನಲ್ಲಿ ಸಚಿನ್ ಬೌಲ್ಡ್ ಆಗುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದೆ. ಅಷ್ಟೇ ಅಲ್ಲದೇ ಈ ಟ್ವೀಟ್ ನಲ್ಲಿ ಫ್ಲೆಮಿಂಗ್ ಅವರಿಗೆ ಮಾತ್ರ ಹುಟ್ಟುಹಬ್ಬದ ಶುಭಾಶಯ ಎಂದು ಬರೆದುಕೊಂಡಿದೆ.

    ಈ ಟ್ವೀಟ್ ನೋಡಿದ ಭಾರತದ ಅಭಿಮಾನಿಗಳು ತರಾಟೆಗೆ ತೆಗೆದುಕೊಳ್ಳುತ್ತಿದ್ದು. ಆಸೀಸ್ ಆಟಗಾರರು ಕ್ರಿಕೆಟ್ ಪಂದ್ಯಗಳಿಂದ ಬ್ಯಾನ್ ಆದರೂ ಆಸ್ಟ್ರೇಲಿಯಾ ಇನ್ನೂ ಪಾಠ ಕಲಿತ್ತಿಲ್ಲ ಎನ್ನುವುದಕ್ಕೆ ಈ ವಿಡಿಯೋ ಟ್ವೀಟ್ ಸಾಕ್ಷಿ ಎಂದು ಬರೆದು ತಿರುಗೇಟು ನೀಡಿದ್ದಾರೆ.

    ಡೇಮಿಯನ್ ಫ್ಲೆಮಿಂಗ್ ಹುಟ್ಟುಹಬ್ಬ ಶುಭಾಶಯವನ್ನು ಹೇಳಲು ಸಚಿನ್ ಬೌಲ್ಡ್ ಆಗುತ್ತಿರುವ ವಿಡಿಯೋ ಬಳಸಿದ್ದು ಸರಿಯಲ್ಲ. ಬೇರೆ ಬ್ಯಾಟ್ಸ್ ಮನ್ ಬೌಲ್ಡ್ ಅಗುತ್ತಿರುವ ವಿಡಿಯೋ ಬಳಸಬಹುದಿತ್ತು. ಸಚಿನ್ ಹುಟ್ಟುಹಬ್ಬದ ದಿನ ಎಂದು ಗೊತ್ತಿದ್ದರೂ ಈ ವಿಡಿಯೋ ಪೋಸ್ಟ್ ಮಾಡುವ ಮೂಲಕ ಅವಮಾನ ಮಾಡಿದ್ದಿರಿ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

    ಈ ವಿಡಿಯೋಗೆ ತಿರುಗೇಟು ಎನ್ನುವಂತೆ ಇನ್ನೊಬ್ಬರು, ಫ್ಲೆಮಿಂಗ್ ಬೌಲಿಂಗ್ ನಲ್ಲಿ ಸಚಿನ್ ಬೌಂಡರಿ ಬಾರಿಸುತ್ತಿರುವ ವಿಡಿಯೋವನ್ನು ಹಾಕಿ, ಸಚಿನ್ ಅವರಿಂದ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಫ್ಲೆಮಿಂಗ್ ಅವರಿಗೆ ಭರ್ಜರಿ ಗಿಫ್ಟ್ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಏಕದಿನ ಮತ್ತು ಟೆಸ್ಟ್ ನಲ್ಲಿ ಒಟ್ಟು 7 ಬಾರಿ ಸಚಿನ್ ರನ್ನು ಫ್ಲೆಮಿಂಗ್ ಔಟ್ ಮಾಡಿದ್ದಾರೆ. ಬ್ರೇಟ್ ಲೀ 14, ಮೆಗ್ರಾತ್ 13, ಗಿಲ್ಲೆಸ್ಪಿ 8 ಬಾರಿ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ್ದಾರೆ.

    48ನೇ ಹುಟ್ಟುಹಬ್ಬವನ್ನು ಫ್ಲೆಮಿಂಗ್ ಭಾರತದಲ್ಲಿ ಆಚರಿಸಿಕೊಂಡಿದ್ದು, ಸದ್ಯ ಐಪಿಎಲ್ ವೀಕ್ಷಣೆ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    20 ಟೆಸ್ಟ್ ಪಂದ್ಯ ಆಡಿರುವ ಫ್ಲೆಮಿಂಗ್ 75 ವಿಕೆಟ್ ಪಡೆದಿದ್ದು, 88 ಏಕದಿನ ಪಂದ್ಯವಾಡಿ 134 ವಿಕೆಟ್ ಪಡೆದಿದ್ದಾರೆ. 1994ರಲ್ಲಿ ಪಾಕ್ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಎಂಟ್ರಿಕೊಟ್ಟಿದ್ದ ಫ್ಲೆಮಿಂಗ್ 2001ರಲ್ಲಿ ಫೆಬ್ರವರಿಯಲ್ಲಿ ಭಾರತದ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. 1994ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ್ದ ಫ್ಲೆಮಿಂಗ್ 2001ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು.

    A Classic cover drive as Birthday gift from one Birthday boy @sachin_rt to another Birthday boy @bowlologist! ???????? pic.twitter.com/TxF1v11UIr

    — शशांक (@iShhhshank) April 24, 2018

  • ಶೇರುದಾರರಿಗೆ ಬರೆದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ ಜೆಫ್ ಬೆಜೊಸ್

    ಶೇರುದಾರರಿಗೆ ಬರೆದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ ಜೆಫ್ ಬೆಜೊಸ್

    ಕ್ಯಾಲಿಫೋರ್ನಿಯಾ: ಜಗತ್ತಿನ ಶ್ರೀಮಂತ ಉದ್ಯಮಿ, ಅಮೆಜಾನ್ ಸಿಇಒ ಜೆಫ್ ಬೆಜೊಸ್ ತಮ್ಮ ಕಂಪೆನಿಯ ವಾರ್ಷಿಕ ಹೂಡಿಕೆದಾರರಿಗೆ ಕಳುಹಿಸಿದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವುದಾಗಿ ತಿಳಿಸಿದ್ದಾರೆ.

    ವಿಶ್ವದ ನಂ. 1 ಇ-ಮಾರಾಟ ಸೇವಾ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಅಮೆಜಾನ್ ಭಾರತದಲ್ಲಿ ಕಂಪೆನಿಯ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ. ಲ್ಲದೇ ಅಮೆಜಾನ್ ನೀಡುತ್ತಿರುವ ಅಲೆಕ್ಸಾ ವಾಯ್ಸ್ ಸೇವೆಯಲ್ಲಿ ಹಿಂದಿ ಭಾಷೆಯನ್ನು ಸೇರಿಸುವ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಇದರಿಂದ ಭಾರತದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಾಧ್ಯ ಎಂದು ಜೆಫ್ ಬೆಜೊಸ್ ಹೇಳಿದ್ದಾರೆ.

    ಅಮೆಜಾನ್ ಪ್ರೈಂ ವಿಡಿಯೋಗೆಂದೇ ಅಮೆರಿಕ, ಇಂಗ್ಲೆಂಡ್ ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದಂತೆ ಭಾರತದಲ್ಲೂ ಮುಂದಿನ ದಿನಗಳಲ್ಲಿ ಭಾರತದ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

    ಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯಲು ಅವಕಾಶ ನೀಡಿದ ಒಂದು ವರ್ಷದಲ್ಲೇ ಕಂಪೆನಿಯ ಇತಿಹಾಸದಲ್ಲಿ ಅತೀ ಹೆಚ್ಚು ಸದಸ್ಯರಾಗಿದ್ದಾರೆ. ಬೇರೆ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ಇದೊಂದು ದಾಖಲೆ ಎಂದು ಉಲ್ಲೇಖಿಸಿದ್ದಾರೆ.

    ವೆಬ್‍ಸೈಟ್ ಟ್ರಾಫಿಕ್ ಲೆಕ್ಕ ಹಾಕುವ ಸಂಸ್ಥೆಗಳು ನೀಡಿದ ವರದಿಯನ್ನು ಉಲ್ಲೇಖಿಸಿ, ಅಮೆಜಾನ್ ಭಾರತದಲ್ಲಿ ಅತ್ಯಂತ ಹೆಚ್ಚು ವೇಗವಾಗಿ ಬೆಳೆಯುತ್ತಿದ್ದು, 2017 ರಲ್ಲಿ ಭಾರತದಲ್ಲಿ ಮೊಬೈಲ್ ಹಾಗೂ ಡೆಸ್ಕ್ ಟಾಪ್ ಮೂಲಕ ಅಮೆಜಾನ್ ತಾಣಕ್ಕೆ ಭೇಟಿ ನೀಡಿರುವುದು ಸಂತಸದ ಸಂಗತಿ. 2007ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಡೌನ್ ಲೋಡ್ ಆಗಿರುವ ಅಪ್ಲಿಕೇಶನ್‍ಗಳ ಪೈಕಿ ಅಮೆಜಾನ್.ಇನ್ ಅಪ್ಲಿಕೇಶನ್ ಒಂದಾಗಿದೆ ಎಂದು ಜೆಫ್ ಬೆಜೊಸ್ ತಿಳಿಸಿದ್ದಾರೆ.

    ಏನಿದು ಅಮೆಜಾನ್ ಪ್ರೈಂ?
    ಹಣವನ್ನು ಪಾವತಿಸಿ ಪಡೆಯುವ ಸೇವೆಯೇ ಅಮೆಜಾನ್ ಪ್ರೈಂ. ಪ್ರೈಂ ಸದಸ್ಯರಾದರೆ ಡೆಲಿವರಿಗಾಗಿ (ಒಂದು ದಿನ, ಎರಡು ದಿನ) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಅಷ್ಟೇ ಅಲ್ಲದೇ ಪ್ರೈಂ ವಿಡಿಯೋ, ಮ್ಯೂಸಿಕ್ ಗಳನ್ನು ಸಹ ಉಚಿತವಾಗಿ ನೋಡಬಹುದಾಗಿದೆ. ಹೊಸದಾಗಿ ರಿಲೀಸ್ ಆಗಿರುವ ಸಿನಿಮಾ ಗಳನ್ನು ಸಹ ಪ್ರೈಮ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ನೋಡಬಹುದಾಗಿದೆ. ಈ ಸೇವೆಯನ್ನು ಮೊದಲ ಬಾರಿಗೆ 13 ವರ್ಷಗಳ ಹಿಂದೆ ಅಂದರೆ 2005 ರ ಜನವರಿ 2 ರಂದು ಆರಂಭಿಸಲಾಯಿತು. ಏಪ್ರಿಲ್ 2018ರ ವೇಳೆಗೆ ವಿಶ್ವದೆಲ್ಲೆಡೆ 10 ಕೋಟಿ ಪ್ರೈಂ ಸದಸ್ಯರು ಇದ್ದಾರೆ ಎಂದು ಅಮೆಜಾನ್ ತಿಳಿಸಿದೆ. ಭಾರತದಲ್ಲಿ ಈ ಸೇವೆಯನ್ನು 2016 ಜುಲೈ ತಿಂಗಳಿನಲ್ಲಿ ಆರಂಭಿಸಿತ್ತು. 999 ರೂ. ನೀಡಿದ್ದಲ್ಲಿ ವರ್ಷ ಕಾಲ ಪ್ರೈಂ ಸದಸ್ಯರಾಗಬಹುದು.

  • ಕ್ಸಿಯೋಮಿಯ ಪ್ರಸಿದ್ಧ ಫೋನ್ ದೇಶೀಯ ಮಾರುಕಟ್ಟೆಯಲ್ಲಿ ಅಲಭ್ಯ!

    ಕ್ಸಿಯೋಮಿಯ ಪ್ರಸಿದ್ಧ ಫೋನ್ ದೇಶೀಯ ಮಾರುಕಟ್ಟೆಯಲ್ಲಿ ಅಲಭ್ಯ!

    ಬೆಂಗಳೂರು: ಕ್ಸಿಯೋಮಿ ಕಂಪೆನಿಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ದೇಶೀಯ ಮಾರುಕಟ್ಟೆಯಲ್ಲಿ ಅಲಭ್ಯವಾಗಿದೆ.

    2017ರ ಸೆಪ್ಟೆಂಬರ್ ನಲ್ಲಿ ಎಂಐ ಎ1 ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಬಳಿಕ ಆನ್‍ಲೈನ್ ಮತ್ತು ಆಫ್‍ಲೈನ್ ಸ್ಟೋರ್ ನಲ್ಲಿ ಲಭ್ಯವಿದ್ದ ಫೋನ್ ಈಗ ಅಲಭ್ಯವಾಗಿದೆ. ಫ್ಲಿಪ್ ಕಾರ್ಟ್ ಮತ್ತು ಎಐ ತಾಣದಲ್ಲಿ “ಔಟ್ ಆಫ್ ಸ್ಟಾಕ್” ಆಗಿದೆ ಎಂದು ತೋರಿಸುತ್ತಿದೆ.

    ಈ ಹಿಂದೆ ಟೆಕ್ ಮಾಧ್ಯಮವೊಂದು ಕ್ಸಿಯೋಮಿ ಕಂಪೆನಿ ಈ ಫೋನ್ ಮಾರಾಟವನ್ನು ನಿಲ್ಲಿಸಿದೆ ಎಂದು ವರದಿ ಮಾಡಿತ್ತು. ಈಗ ಈ ವರದಿಗೆ ಪೂರಕ ಎಂಬಂತೆ ಈ ಫೋನ್ ಅಲಭ್ಯವಾಗಿದೆ. ಕೆಲ ತಿಂಗಳ ಹಿಂದೆ ಆಫ್ ಲೈನ್ ಸ್ಟೋರ್ ಗಳಿಗೆ ಈ ಫೋನ್ ವಿತರಣೆಯನ್ನು ಕ್ಸಿಯೋಮಿ ನಿಲ್ಲಿಸಿತ್ತು. ಈ ಫೋನಿನ ಉತ್ತಾರಧಿಕಾರಿ ಎಂದೇ ಪರಿಗಣಿಸಲಾಗಿರುವ ಎಂಐ ಎ2 ಚೀನಾದಲ್ಲಿ ಬಿಡುಗಡೆಯಾಗಿದ್ದು, ಈ ಫೋನ್ ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಎ1 ಫೋನಿನ ಮಾರಾಟವನ್ನು ಕ್ಸಿಯೋಮಿ ನಿಲ್ಲಿಸಿರಬಹುದು ಎಂದು ಟೆಕ್ ಮಾಧ್ಯಮಗಳು ವರದಿ ಮಾಡಿವೆ.

    ಈ ಫೋನ್ ಸೆಪ್ಟೆಂಬರ್ ನಲ್ಲಿ 14,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಬಳಿಕ ಡಿಸೆಂಬರ್ ನಲ್ಲಿ ಕ್ಸಿಯೋಮಿ ಇಂಡಿಯಾದ ಆಡಳಿತ ನಿರ್ದೇಶಕ ಮನು ಕುಮಾರ್ ಜೈನ್ ಟ್ವೀಟ್ ಮಾಡಿ 1 ಸಾವಿರ ರೂ. ಬೆಲೆ ಇಳಿಕೆಯಾಗಿದೆ ಎಂದು ತಿಳಿಸಿದ್ದರು. ಬೆಲೆ ಇಳಿಕೆಗೆ ಕೆಲ ದಿನಗಳಿಗೆ ಮಾತ್ರ ಇಳಿಕೆಯಾಗಿಲ್ಲ. ಶಾಶ್ವತವಾಗಿ ಎ1 ಫೋನಿನ ಬೆಲೆಯನ್ನು ಇಳಿಸಲಾಗಿದೆ ಎಂದು ಮನು ಕುಮಾರ್ ಜೈನ್ ಟ್ವೀಟ್ ಮಾಡಿದ್ದರು.

    ಏನಿದು ಗೂಗಲ್ ಆಂಡ್ರಾಯ್ಡ್ ಒನ್?
    ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಹೊಂದಿದ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಒನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಒನ್ ಅಡಿಯಲ್ಲಿ ಫೋನ್ ತಯಾರಿಸಿತ್ತು

    ಕ್ಸಿಯೋಮಿ ಎಂಐ ಎ1 ಗುಣವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    155.4*75.8*7.3 ಮಿ.ಮೀ, ಹೈ ಬ್ರಿಡ್ ಡ್ಯುಯಲ್ ಸಿಮ್, 5.5 ಇಂಚಿನ ಎಲ್‍ಟಿಪಿಎಸ್ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್( 1080*1920 ಪಿಕ್ಸೆಲ್, 16:9 ಅನುಪಾತ, 403 ಪಿಪಿಐ) ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3.

    ಪ್ಲಾಟ್‍ಫಾರಂ ಮತ್ತು ಮಮೊರಿ:
    ಆಂಡ್ರಯ್ಡ್ 7.1.2 ಆಂಡ್ರಾಯ್ಡ್ ನೂಗಟ್ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ 625 ಅಕ್ಟಾಕೋರ್ 2.0 GHz  ಕಾರ್ಟೆಕ್ಸ್ ಎ53 ಪ್ರೊಸೆಸರ್, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, ಎರಡನೇ ಸ್ಲಾಟ್ ನಲ್ಲಿ ಎಸ್‍ಡಿ ಕಾರ್ಡ್ ಹಾಕಿದ್ರೆ 128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 64 ಜಿಬಿ ಆಂತರಿಕ ಮೆಮೊರಿ, 4ಜಿಬಿ RAM

    ಕ್ಯಾಮೆರಾ ಮತ್ತು ಇತರೇ:
    ಹಿಂದುಗಡೆ ಡ್ಯುಯಲ್ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, ಯುಎಸ್‍ಬಿ ಟೈಪ್ 2.0, ಫಿಂಗರ್ ಪ್ರಿಂಟ್ ಸ್ಕ್ಯಾನರ್, ಫಾಸ್ಟ್ ಬ್ಯಾಟರಿ ಚಾರ್ಜಿಂಗ್, ತೆಗೆಯಲು ಅಸಾಧ್ಯವಾದ ಲಿಯಾನ್ 3080 ಎಂಎಎಚ್ ಬ್ಯಾಟರಿ.

     

  • ಪ್ರಿಯಕರನ ಜೊತೆ ಬಾಂಗ್ಲಾದೇಶಕ್ಕೆ ಓಡಿಹೋಗಿ ಭಾರತಕ್ಕೆ ವಾಪಸ್ ಬರಲ್ಲ ಎಂದ 21ರ ಯುವತಿ: ವಿಡಿಯೋ

    ಪ್ರಿಯಕರನ ಜೊತೆ ಬಾಂಗ್ಲಾದೇಶಕ್ಕೆ ಓಡಿಹೋಗಿ ಭಾರತಕ್ಕೆ ವಾಪಸ್ ಬರಲ್ಲ ಎಂದ 21ರ ಯುವತಿ: ವಿಡಿಯೋ

    ಅಸ್ಸಾಂ: ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಬಾಂಗ್ಲಾದೇಶಕ್ಕೆ ಓಡಿಹೋಗಿ ಭಾರತಕ್ಕೆ ವಾಪಸ್ ಬರಲ್ಲ ಎಂದು ವಿಡಿಯೋ ಮಾಡಿ ಕಳುಹಿಸಿದ್ದಾಳೆ.

    ಮೌಸಮಿ ದಾಸ್(21) ಬಾಂಗ್ಲಾದೇಶಕ್ಕೆ ಓಡಿಹೋದ ಯುವತಿ. ಮಾರ್ಚ್ 12ರಂದು ಮೌಸಮಿ ತನ್ನ ಮನೆಯಿಂದ ಕಾಣೆಯಾಗಿದ್ದಳು. ನಂತರ ಆಕೆಯ ಪೋಷಕರು ಕರೀಮ್‍ಗಂಜ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೇ ಈ ದೂರಿನಲ್ಲಿ ಪೋಷಕರು ಆಕೆಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಿದ್ದರು.

    ಮಾರ್ಚ್ 27ರಂದು ವಾಟ್ಸಾಪ್‍ನಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಮೌಸಮಿ ದಾಸ್ ಪೊಲೀಸ್ ಠಾಣೆಯಲ್ಲಿ ಇರುವುದು ಕಂಡು ಬಂದಿತ್ತು. ಇದಾದ ಬಳಿಕ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಬಾಂಗ್ಲಾದೇಶದಲ್ಲಿ ನಾನು ಖುಷಿಯಾಗಿದ್ದೇನೆ. ನನಗೆ ಭಾರತಕ್ಕೆ ವಾಪಸ್ ಬರಲು ಇಷ್ಟವಿಲ್ಲ ಎಂದು ಮೌಸಾಮಿ ತಿಳಿಸಿದ್ದಾಳೆ.

    ವಿಡಿಯೋದಲ್ಲಿ ಏನಿದೆ?
    ನಾನು ಮೌಸಾಮಿ ದಾಸ್. ನಾನು ಭಾರತದಿಂದ ಓಡಿ ಬಂದಿದ್ದೇನೆ ಹಾಗೂ ನನ್ನ ಇಚ್ಛೆಯಿಂದ ಬಂದಿದ್ದೇನೆ. ನನಗೆ ಭಾರತಕ್ಕೆ ವಾಪಸ್ ಆಗಲು ಇಷ್ಟವಿಲ್ಲ. ನನ್ನ ಪತಿ ಜೊತೆ ಇರಲು ಇಷ್ಟಪಡುತ್ತೇನೆ. ಇನ್ನೂ ಬಾಂಗ್ಲಾದೇಶ ತುಂಬಾ ಚೆನ್ನಾಗಿದೆ. ನಾನು ಇಲ್ಲಿ ಇರಲು ಇಷ್ಟಪಡುತ್ತೇನೆ ಹಾಗೂ ಇಲ್ಲಿಯೇ ಇರುತ್ತೇನೆ. ನನಗೆ 21 ವರ್ಷವಾಗಿದೆ. ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗೋಕ್ಕೆ ನಾನು ಚಿಕ್ಕ ಮಗು ಅಲ್ಲ. ಪತಿಯಾದ ನೂಮನ್ ಬಾದ್‍ಶಾ ಜೊತೆ ಅಸ್ಸಾಂನ ಕರೀಂಗಂಜ್‍ನಿಂದ ಬಂದಿದ್ದೇನೆ ಎಂದು ಮೌಸಾಮಿ ಹೇಳಿದ್ದಾಳೆ.

    ಮೌಸಾಮಿ ಹಿಂದೂವಿನಿಂದ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡಿದ್ದು, ವಿಡಿಯೋದಲ್ಲಿ ಬುರ್ಕಾ ಹಾಕಿರುವುದು ಕಂಡು ಬಂದಿದೆ. ಮೌಸಾಮಿ ಬಾಂಗ್ಲಾದೇಶ ತಲುಪಿದ ಮೇಲೆ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡು ತನ್ನ ಪ್ರಿಯಕರ ನೂಮನ್ ಬಾದ್‍ಶಾ ಜೊತೆ ವಿವಾಹವಾಗಿದ್ದಾಳೆ. ಇನ್ನೂ ಮೌಸಾಮಿ ಹತ್ತಿರ ಯಾವುದೇ ಪಾಸ್‍ಪೋರ್ಟ್ ಹಾಗೂ ವೀಸಾ ಇಲ್ಲ. ಆಕೆ ಅಕ್ರಮವಾಗಿ ಬಾಂಗ್ಲಾ ತಲುಪಿದ್ದಾಳೆ ಎಂದು ವರದಿಯಾಗಿದೆ.

  • ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ- ವೇಟ್ ಲಿಫ್ಟಿಂಗ್‍ನಲ್ಲಿ ಸಂಜಿತಾ ಚಾನುಗೆ ಗೋಲ್ಡ್

    ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ- ವೇಟ್ ಲಿಫ್ಟಿಂಗ್‍ನಲ್ಲಿ ಸಂಜಿತಾ ಚಾನುಗೆ ಗೋಲ್ಡ್

    ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೇಲ್ತ್ ಗೇಮ್ಸ್ ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರಿದಿದೆ. ಭಾರತದ ಸಂಜಿತಾ ಚಾನು ವೇಟ್‍ಲಿಫ್ಟಿಂಗ್‍ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

    53 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಸಂಜಿತಾ ಚಾನು ಮೊದಲ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತಕ್ಕೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮೂರನೇ ಪದಕ ಒಲಿದು ಬಂದಾಂತಾಗಿದೆ. ಇದನ್ನೂ ಓದಿ: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್‍ಗೆ ಸರ್ಕಾರಿ ಕೆಲಸ, 25 ಲಕ್ಷ ನಗದು ಬಹುಮಾನ- ಪ್ರಮೋದ್ ಮಧ್ವರಾಜ್

    ಸಂಜಿತಾ ಚಾನು ಒಟ್ಟು 192 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. 182 ಕೆಜಿ ತೂಕ ಎತ್ತಿದ ಪಪುವಾ ನ್ಯೂಗಿನಿಯಾದ ಲೋಡಿಕಾ ಅವರು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ತನ್ನದಾಗಿಸಿಕೊಂಡರೆ, ನ್ಯೂಜಿಲೆಂಡ್ ನ ರಾಚೆಲ್ ಲೆಬ್ಲಾಂಕ್ ಬಾಝಿನೆಟ್ ಅವರು ಒಟ್ಟು 181 ಕೆಜಿ ತೂಕ ಎತ್ತುವ ಮೂಲಕ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ. ಇದನ್ನೂ ಓದಿ: ವೇಟ್‍ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ

    ಇದೀಗ ಚಿನ್ನದ ಪದಕ ಗಳಿಸಿರುವ ಸಂಜಿತಾ ಚಾನು ಅವರು 2014ರಲ್ಲಿ ನಡೆದ ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲೂ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.

    ಗುರುವಾರ 21ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಶುಭಾರಂಭದಲ್ಲೇ ಕನ್ನಡಿಗ ಪಿ. ಗುರುರಾಜ್ ಅವರು 56 ಕೆ.ಜಿ. ವಿಭಾಗದ ವೇಯ್ಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಬಳಿಕ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮಣಿಪುರದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ದಾಖಲೆಯ 196 ಕೆಜಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟಿದ್ದರು. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

  • ದಾಖಲೆ ಮುರಿಯಲೇಬೇಕಿತ್ತು, ಮುಂದಿನ ಗುರಿ ಏಷ್ಯನ್ ಗೇಮ್ಸ್: ಮೀರಾ ಬಾಯಿ

    ದಾಖಲೆ ಮುರಿಯಲೇಬೇಕಿತ್ತು, ಮುಂದಿನ ಗುರಿ ಏಷ್ಯನ್ ಗೇಮ್ಸ್: ಮೀರಾ ಬಾಯಿ

    ಗೋಲ್ಡ್ ಕೋಸ್ಟ್: ದಾಖಲೆಗಳನ್ನು ಮುರಿಯುವ ನಿರೀಕ್ಷೆಯನ್ನು ನಾನು ಮಾಡಿರಲಿಲ್ಲ. ಇಲ್ಲಿಗೆ ಬಂದ ಮೇಲೆ ನಾನು ದಾಖಲೆಗಳನ್ನು ಮುರಿಯಲೇ ಬೇಕಾಗಿತ್ತು. ನನಗೆ ಆಗುತ್ತಿರುವ ಸಂತಸವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಹೇಳಿದ್ದಾರೆ.

    ಕಾಮನ್‍ವೆಲ್ತ್ ಗೇಮ್ಸ್ ಭಾರತ ಮೊದಲ ಚಿನ್ನದ ಪದಕವನ್ನು ಗೆದ್ದಿದ್ದು ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮಣಿಪುರದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ದಾಖಲೆಯ 196 ಕೆಜಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

    ನಾನು ಈ ಪದಕ ಪಡೆಯಲು ತುಂಬಾ ಕಷ್ಟಪಟ್ಟಿದ್ದೆ. ಕಾಮನ್ ವೆಲ್ತ್ ಕ್ರೀಡಾಕೂಟದ ಎರಡನೇ ಪದಕವಾಗಿದೆ. ಚಿನ್ನ ಗೆದ್ದಿರುವುದು ಬಹಳ ಸಂತಸ ತಂದಿದೆ ಎಂದರು. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

    ನನ್ನ ಮುಂದಿನ ಗುರಿ ಏಷ್ಯಾನ್ ಗೇಮ್ಸ್. ಅಲ್ಲಿ ಕಠಿಣ ಸ್ಪರ್ಧೆ ಇರುತ್ತದೆ. ನಾನು ತುಂಬಾನೇ ಕಷ್ಟಪಡಬೇಕಾಗಿದೆ. ಮುಂದಿನ ಬಾರಿ ಇನ್ನೂ ಉತ್ತಮ ಪ್ರದರ್ಶನ ನೀಡಬೇಕು. ಆದರೆ ಇಲ್ಲಿ ಅಂತಹ ಪ್ರತಿಸ್ಪರ್ಧೆ ಇರಲಿಲ್ಲ ಎಂದು ತಿಳಿಸಿದರು.

    ಸ್ನ್ಯಾಚ್ ನಲ್ಲಿ 86 ಕೆಜಿ, ಕ್ಲೀನ್ ಮತ್ತು ಜರ್ಕ್ ನಲ್ಲಿ 110 ಕೆಜಿ ಎತ್ತುವ ಮೂಲಕ ಮೀರಾಬಾಯಿ ಚಿನ್ನವನ್ನು ಗೆದ್ದರು. ಈ ವಿಭಾಗದಲ್ಲಿ ಶ್ರೀಲಂಕಾ ದಿನುಶಾ 155 ಕೆಜಿ ಎತ್ತುವ ಮೂಲಕ ಕಂಚು ಗೆದ್ದರೆ, ಮಾರಿಷಸ್ ನ ಮಾರಿ ಹನಿಟ್ರಾ 170 ಕೆಜಿ ಎತ್ತುವ ಮೂಲಕ ಬೆಳ್ಳಿ ಗೆದ್ದರು. ಒಂದು ಚಿನ್ನ ಮತ್ತು ಒಂದು ಬೆಳ್ಳಿಯನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ  ಭಾರತ ಮೊದಲ ಸ್ಥಾನದಲ್ಲಿದೆ.

  • ವೇಟ್‍ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ

    ವೇಟ್‍ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ

    ಗೋಲ್ಡ್ ಕೋಸ್ಟ್: ಕಾಮನ್‍ವೆಲ್ತ್ ಗೇಮ್ಸ್ ಭಾರತ ಮೊದಲ ಚಿನ್ನದ ಪದಕವನ್ನು ಗೆದ್ದಿದೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮಣಿಪುರದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ದಾಖಲೆಯ 196 ಕೆಜಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

    ಸ್ನ್ಯಾಚ್ ನಲ್ಲಿ 86 ಕೆಜಿ, ಕ್ಲೀನ್ ಮತ್ತು ಜರ್ಕ್ ನಲ್ಲಿ 110 ಕೆಜಿ ಎತ್ತುವ ಮೂಲಕ ಚಿನ್ನವನ್ನು ಗೆದ್ದರು. ಈ ವಿಭಾಗದಲ್ಲಿ ಶ್ರೀಲಂಕಾ ದಿನುಶಾ 155 ಕೆಜಿ ಎತ್ತುವ ಮೂಲಕ ಕಂಚು ಗೆದ್ದರೆ, ಮಾರಿಷಸ್ ನ ಮಾರಿ ಹನಿಟ್ರಾ 170 ಕೆಜಿ ಎತ್ತುವ ಮೂಲಕ ಬೆಳ್ಳಿ ಗೆದ್ದರು.

    ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭವಾದ 21 ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡಿಗ ಪಿ. ಗುರುರಾಜ್ ಅವರು 56 ಕೆ.ಜಿ. ವಿಭಾಗದ ವೇಯ್ಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

  • ಅಫ್ರಿದಿ `ಯುಎನ್’ ಪದಕ್ಕೆ ವಿಶೇಷ ಅರ್ಥ ನೀಡಿದ್ರು ಗಂಭೀರ್

    ಅಫ್ರಿದಿ `ಯುಎನ್’ ಪದಕ್ಕೆ ವಿಶೇಷ ಅರ್ಥ ನೀಡಿದ್ರು ಗಂಭೀರ್

    ನವದೆಹಲಿ: ಭಾರತವನ್ನು ಕೆಣಕಿ ಟ್ವಿಟ್ಟರ್ ನಲ್ಲಿ ಕಾಶ್ಮೀರ ಕುರಿತು `ಯುಎನ್'(ಯುನೈಟೆಡ್ ನೇಷನ್ಸ್ ಅಥವಾ ವಿಶ್ವಸಂಸ್ಥೆ) ಯಾವ ಕಾರ್ಯ ಮಾಡುತ್ತಿದೆ ಎಂದು ಪ್ರಶ್ನಿಸಿ, ಟ್ವೀಟ್ ಮಾಡಿದ್ದ ಪಾಕ್ ಕ್ರಿಕೆಟಿಗ ಅಫ್ರಿದಿಗೆ ಕ್ರಿಕೆಟಿಗ ಗೌತಮ್ ಗಂಭೀರ್ ವ್ಯಂಗ್ಯವಾಡಿ ಟಾಂಗ್ ನೀಡಿದ್ದಾರೆ.

    ಈ ಮೊದಲು ಟ್ವೀಟ್ ಮಾಡಿದ್ದ ಅಫ್ರಿದಿ ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರದಲ್ಲಿ ಕರೆದಿದ್ದರು. ಅಲ್ಲದೇ ಅಲ್ಲಿನ ಸರ್ಕಾರ ಅಮಾಯಕರನ್ನು ಹತ್ಯೆ ಮಾಡುತ್ತಿದ್ದಾರೆ. ಅದರೂ ವಿಶ್ವಸಂಸ್ಥೆ ಹಾಗೂ ಇತರೇ ಸಂಸ್ಥೆಗಳು ಯಾವುದೇ ಕ್ರಮಕೈಗೊಳ್ಳದೇ ಸುಮ್ಮನೆ ಕುಳಿತಿರುವುದು ಏಕೆ ಎಂದು ಪ್ರಶ್ನಿಸಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ಗಂಭೀರ್, ಮಾಧ್ಯಮಗಳು ಶಹೀದ್ ಅಫ್ರಿದಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಳಿದರು. ಆದರೆ ಅವರಿಗೆ ಏನು ಹೇಳುವುದು? ಅಫ್ರಿದಿ ಮಾತ್ರ `ಯುಎನ್’ ಕಡೆಗೆ ನೋಡುತ್ತಿದ್ದಾರೆ. ಅಫ್ರಿದಿ ಅವರ ಹಿಂದುಳಿದ ನಿಘಂಟಿನಲ್ಲಿ ಯುಎನ್ ಎಂದರೆ `ಅಂಡರ್ ನೈಂಟೀನ್’ ಎಂಬ ಅರ್ಥವನ್ನು ನೀಡುತ್ತದೆ. ಮಾಧ್ಯಮಗಳು ಈ ವಿಷಯದಿಂದ ವಿಶ್ರಾಂತಿ ಪಡೆಯಬಹುದು. ಅಫ್ರಿದಿ ನೋಬಲ್ ನಲ್ಲಿ ಔಟಾದ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಅಫ್ರಿದಿ ತಮ್ಮ 16ನೇ ವಯಸ್ಸಿಗೆ ಕ್ರಿಕೆಟ್ ಗೆ ಪ್ರವೇಶ ಮಾಡಿದ್ದಾರೆ ಎಂಬ ಮಾಹಿತಿ ಇದ್ದು, ಈ ಕುರಿತು ಹಲವು ಬಾರಿ ಚರ್ಚೆಗಳು ನಡೆದಿದ್ದವು. ಇಂದಿಗೂ ಅಫ್ರಿದಿ ಕ್ರಿಕೆಟ್ ಗೆ ಪ್ರವೇಶ ಪಡೆದ ವಯಸ್ಸಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮೂಲಕ ಗಂಭೀರ್ ಮತ್ತೊಮ್ಮೆ ಅಫ್ರಿದಿಗೆ ಟಾಂಗ್ ನೀಡಿದ್ದಾರೆ.

    ಈ ಹಿಂದೆ 2007 ರಲ್ಲಿ ಕನ್ಪುರದಲ್ಲಿ ನಡೆದ ಪಾಕಿಸ್ತಾನ ಹಾಗೂ ಭಾರತ ನಡುವಿನ ಸರಣಿಯ ಮೂರನೇ ಏಕದಿನ ಪಂದ್ಯದ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅಂಪೈರ್ ಇಬ್ಬರ ನಡುವೆ ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದ್ದರು.