Tag: india

  • ವಿವೋ ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

    ವಿವೋ ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

    ನವದೆಹಲಿ: ವಿವೋದ ನೂತನ ವಿ9 ಆವೃತ್ತಿಯ ಸ್ಮಾರ್ಟ್ ಫೋನ್ ಬೆಲೆ ದಿಢೀರ್ ಇಳಿಕೆಯಾಗಿದೆ. ಐಪಿಎಲ್ ವೇಳೆ ಏಪ್ರಿಲ್ ತಿಂಗಳಿನಲ್ಲಿ ಫುಲ್ ಸ್ಕ್ರೀನ್ ಹೊಂದಿರುವ ಫೋನ್ 19,990 ರೂ.ಗೆ ಬಿಡುಗಡೆಯಾಗಿತ್ತು. ಈಗ ಮೂರು ಸಾವಿರ ರೂ. ಕಡಿಮೆಯಾಗಿದ್ದು 16,990 ರೂ. ನಿಗದಿಯಾಗಿದೆ.

    ವಿವೋ ವಿ9 ಮೊಬೈಲ್ ಸದ್ಯ ಆನ್‍ಲೈನ್ ನ www.tatacliq.com ವೆಬ್‍ಸೈಟ್‍ ಹಾಗೂ ಆಫ್ ಲೈನ್ ನಲ್ಲಿ 16,990 ರೂಪಾಯಿಗಳಿಗೆ ಲಭ್ಯವಿದ್ದು, ಗೋಲ್ಡ್, ಬ್ಲಾಕ್, ಮ್ಯಾಟ್ ರೆಡ್ ಮತ್ತು ಸಫೈರ್ ಬ್ಲೂ ಬಣ್ಣಗಳಲ್ಲಿ ಸಿಗಲಿದೆ.

    ವಿವೋ 9ಎನ್ ಸ್ಮಾರ್ಟ್ ಫೋನ್ ನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 154.8 x 75.1 x 7.9 ಮಿ.ಮೀ. ಗಾತ್ರ, 150 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 6.3 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080X2280 ಪಿಕ್ಸೆಲ್, 19:9 ಅನುಪಾತ, 400ಪಿಪಿಐ)

    ಪ್ಲಾಟ್‍ ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಪ್ರೋ, ಸ್ನಾಪ್ ಡ್ರಾಗನ್ 626, ಆಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹಟ್ರ್ಸ್ ಸ್ಪೀಡ್, 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ:
    ಮುಂಭಾಗ 24ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 16+5 ಎಂಪಿ ಡ್ಯುಯಲ್ ಕ್ಯಾಮೆರಾ, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್.

    ಇತರೆ ಫೀಚರ್ ಗಳು: ಸ್ಕ್ರೀನ್ ನಲ್ಲಿಯೇ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿದ್ದು, ಫೋಟೋ ಅನ್ ಲಾಕಿಂಗ್, 3,260 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

    https://www.youtube.com/watch?v=tMNheU3NffY

  • ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ನಾನು ಎರಡು ಹೆಜ್ಜೆ ಮುಂದಿಡುತ್ತೇನೆ: ಇಮ್ರಾನ್ ಖಾನ್

    ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ನಾನು ಎರಡು ಹೆಜ್ಜೆ ಮುಂದಿಡುತ್ತೇನೆ: ಇಮ್ರಾನ್ ಖಾನ್

    ಕರಾಚಿ: ಭಾರತ ಹಾಗೂ ಪಾಕ್ ದ್ವಿಪಕ್ಷಿಯ ಸುಧಾರಣೆಯಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ನಾನು ಎರಡು ಹೆಜ್ಜೆ ಮುಂದಿಡುತ್ತೇನೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಹೇಳಿದ್ದಾರೆ.

    ಪಾಕಿಸ್ತಾನ ನಡೆದ ಚುನಾವಣೆಯಲ್ಲಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಳಿಕ ಮಾತನಾಡಿದ ಅವರು, ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷಿಯ ಸಂಬಂಧದಲ್ಲಿ ಅವರು ಒಂದು ಹೆಜ್ಜೆ ಮುಂದೆ ಬಂದರೆ ನಾವು ಎರಡು ಹೆಜ್ಜೆ ಮುಂದಿಡುತ್ತೇವೆ. ಎರಡು ದೇಶಗಳ ನಡುವಿನ ಸಂಬಂಧ ಉತ್ತಮಗೊಳ್ಳುವುದು ಮುಖ್ಯ ಎಂದರು.

    ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಕುರಿತು ಉಲ್ಲಂಘನೆ ಪ್ರತಿಕ್ರಿಯೆ ನೀಡಿರುವ ಇಮ್ರಾನ್ ಖಾನ್, ಯಾವುದೇ ಒಂದು ಪ್ರದೇಶದಕ್ಕೆ ಸಶಸ್ತ್ರ ಪಡೆಗಳನ್ನು ಕಳುಹಿಸಿದರೆ ಇಂತಹ ಘಟನೆಗಳು ಬೆಳಕಿಗೆ ಬರುತ್ತದೆ. ಆದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಭಾರತದ ಮಾಧ್ಯಮಗಳು ನನ್ನನ್ನು ಬಾಲಿವುಡ್ ವಿಲನ್ ರೀತಿ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ.

    ತಮ್ಮ ಮೊದಲ ಭಾಷಣದಲ್ಲೇ ವಿದೇಶಾಂಗ ನೀತಿಯನ್ನು ಪ್ರಸ್ತಾಪಿಸಿದ ಇಮ್ರಾನ್ ಖಾನ್ ಚೀನಾ, ಅಫ್ಘಾನಿಸ್ತಾನ, ಇರಾನ್ ಹಾಗೂ ಸೌದಿ ರಾಷ್ಟ್ರಗಳು ಸೇರಿದಂತೆ ಭಾರತದೊಂದಿಗೆ ಉತ್ತಮ ಸಂಬಂಧ ಬೆಳಸುವ ಕುರಿತು ಹೇಳಿದರು.

    ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆದಿರುವ ಪಿಟಿಐ ಮುಖಂಡರು ಸಂತಸ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಪಕ್ಷದ ಮುಖಂಡರು ಚುನಾವಣೆಯಲ್ಲಿ ಅಕ್ರಮ ನಡೆದಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಆರೋಪಿಸಿದ್ದಾರೆ.

    342 ಸ್ಥಾನಗಳಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ 76 ಸ್ಥಾನಗಳಲ್ಲಿ ಗೆಲುವು ಪಡೆದಿದ್ದು, 43 ರಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) 43 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, 20 ರಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಟಿ) 18 ಸ್ಥಾನಗಳಲ್ಲಿ ಜಯಗಳಿಸಿದೆ.

    ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಚುನಾವಣೆಯಲ್ಲಿ ನೇರವಾಗಿ 137 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಅಗತ್ಯವಾಗಿದೆ. ಅಂದಹಾಗೇ 342 ಸ್ಥಾನಗಳ ಪೈಕಿ 272 ಸ್ಥಾನಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಉಳಿದ 60 ಸ್ಥಾನಗಳಲ್ಲಿ ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗುತ್ತದೆ. ಒಟ್ಟಾರೆ 172 ಸ್ಥಾನಗಳು ಪಡೆದ ಸರ್ಕಾರ ರಚಿಸುವ ಅವಕಾಶ ಪಡೆಯುತ್ತದೆ.

     

     

  • ಹಾನರ್ 9ಎನ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಹಾನರ್ 9ಎನ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೆಸರು ಗಳಿಸುತ್ತಿರುವ ಹಾನರ್ ತನ್ನ ನೂತನ ಆವೃತ್ತಿಯ ಹಾನರ್ 9ಎನ್ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ನೂತನ ಹಾನರ್ 9ಎನ್ ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 16 ಎಂಪಿ ಎಚ್‍ಡಿ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 13+2ಎಂಪಿ ಡ್ಯುಯಲ್ ಕ್ಯಾಮೆರಾವಿದೆ. ಲ್ಯಾವೆಂಡರ್ ಪರ್ಪಲ್, ರಾಬಿನ್ ಎಗ್ ಬ್ಲೂ, ಸಪೈರ್ ಬ್ಲೂ ಹಾಗೂ ಮಿಡ್ ನೈಟ್ ಬ್ಲಾಕ್ ಬಣ್ಣಗಳಲ್ಲಿ ಫೋನ್ ಲಭ್ಯವಿರಲಿದೆ. ಜುಲೈ 31 ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್ ಕಾರ್ಟ್ ಆನ್‍ಲೈನ್ ಜಾಲತಾಣಗಳಲ್ಲಿ ನೂತನ ಸ್ಮಾರ್ಟ್ ಫೋನ್ ಲಭ್ಯವಿರಲಿದೆ.

    ಬೆಲೆ ಎಷ್ಟು?
    3ಜಿಬಿ RAM/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 11,999 ರೂ. 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 13,999 ರೂ. ಹಾಗೂ 4ಜಿಬಿ RAM/128 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 17,999 ರೂ. ದರ ನಿಗದಿ ಪಡಿಸಿದೆ.

    ಹಾನರ್ 9ಎನ್ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 149.2 x 71.8 x 7.7 ಮಿ.ಮೀ., 150 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 5.84 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(2280×1080 ಪಿಕ್ಸೆಲ್, 19:9 ಅನುಪಾತ 432ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕಿರಿನ್ 659, ಆಕ್ಟಾ ಕೋರ್ ಪ್ರೊಸೆಸರ್ 2.36 ಗೀಗಾಹಟ್ರ್ಸ್, 3ಜಿಬಿ RAM/32 ಜಿಬಿ ಆಂತರಿಕ ಮೆಮೊರಿ, 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ ಹಾಗೂ 4ಜಿಬಿ RAM/128 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ:
    ಮುಂಭಾಗ 16ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13+2 ಎಂಪಿ ಡ್ಯುಯಲ್ ಕ್ಯಾಮೆರಾ, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್.

       

    ಇತರೆ ಪ್ಯೂಚರ್ ಗಳು: 2.5 ಕಾರ್ನಿಂಗ್ ಗೊರಿಲ್ಲಾ ಗ್ಲಾಸ್, 12 ಲೆಯರ್ ಸೇಫ್ಟಿ ಗ್ಲಾಸ್, ಫಿಂಗರ್ ಪ್ರಿಂಟ್ ಸೆನ್ಸಾರ್, ಫೋಟೋ ಲಾಕಿಂಗ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

  • ಅಮೆರಿಕಾದಲ್ಲಿ ಮುಂದುವರಿದ ಗುಂಡಿನ ದಾಳಿ: ಮಹಿಳೆ ಸಾವು, 14 ಮಂದಿಗೆ ಗಾಯ!

    ಅಮೆರಿಕಾದಲ್ಲಿ ಮುಂದುವರಿದ ಗುಂಡಿನ ದಾಳಿ: ಮಹಿಳೆ ಸಾವು, 14 ಮಂದಿಗೆ ಗಾಯ!

    ವಾಷಿಂಗ್ಟನ್: ಅಮೆರಿಕಾದ ಟೊರಾಂಟೋದಲ್ಲಿ ಮತ್ತೆ ಶೂಟೌಟ್ ದಾಳಿ ಮುಂದುವರಿದಿದ್ದು, ಭಾನುವಾರ ರಾತ್ರಿ ಸುಮಾರು 10ಕ್ಕೆ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಮಹಿಳೆ ಸಾವನ್ನಪ್ಪಿ, 14 ಮಂದಿ ಗಾಯಗೊಂಡಿದ್ದಾರೆ.

    ಟೊರಾಂಟೋದ ಯಾಂಗ್ ಸ್ಟ್ರೀಟ್ ನಲ್ಲಿರುವ ಖ್ಯಾತ ರೆಸ್ಟೋರೆಂಟ್ ವೊಂದರಲ್ಲಿ ಈ ದಾಳಿ ನಡೆದಿದ್ದು, ರಾತ್ರಿ 10 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಯೋರ್ವ ದಿಢೀರ್ ಗುಂಡಿನ ದಾಳಿ ನಡೆಸಿದ್ದಾನೆ. ಸುಮಾರು 20 ಕ್ಕೂ ಹೆಚ್ಚು ಬಾರಿ ದಾಳಿಕೋರ ಗುಂಡು ಹಾರಿಸಿದ್ದು, ಈ ವೇಳೆ ಹಲವರಿಗೆ ಗುಂಡೇಟು ತಗುಲಿದೆ. ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಬಾಲಕಿಯೊಬ್ಬಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

    ಘಟನೆ ಕುರಿತು ಟೊರಾಂಟೋ ಪೊಲೀಸರು ಟ್ವೀಟ್ ಮಾಡಿದ್ದು, `ಗುಂಡಿನ ದಾಳಿಯಿಂದಾಗಿ 14 ಮಂದಿ ಗಾಯಗೊಂಡಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೇ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ದುಷ್ಕರ್ಮಿ ಸ್ವತಃ ಗುಂಡಿಕ್ಕಿ ಹತ್ಯೆ ಮಾಡಿಕೊಂಡಿದ್ದಾನೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಪ್ರಸ್ತುತ ದಾಳಿಗೀಡಾಗಿರುವ ರೆಸ್ಟೋರೆಂಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    ಇದೇ ಜುಲೈ 6 ರಂದು ಅಮೇರಿಕಾದ ಕನ್ಸಾಸ್ ನಗರದಲ್ಲಿ ಗುಂಡಿನ ದಾಳಿಯಿಂದಾಗಿ ಹೈದರಾಬಾದ್ ನ ಟೆಕ್ಕಿ ಶರತ್ ಕೊಪ್ಪು ಎಂಬವರು ಮೃತಪಟ್ಟಿದ್ದರು. ಅಲ್ಲದೇ ಅಮೇರಿಕಾದಲ್ಲಿ ಪದೇ ಪದೇ ಇಂತಹ ಗುಂಡಿನ ದಾಳಿ ನಡೆಯುತ್ತಿರುವುದು ಸಾಮಾನ್ಯವಾಗಿದೆ.

  • ಉತ್ತಮ ಆಡಳಿತದಲ್ಲಿ ಕೇರಳ ಫಸ್ಟ್, ಬಿಹಾರ ಲಾಸ್ಟ್

    ಉತ್ತಮ ಆಡಳಿತದಲ್ಲಿ ಕೇರಳ ಫಸ್ಟ್, ಬಿಹಾರ ಲಾಸ್ಟ್

    ಬೆಂಗಳೂರು: ಆಡಳಿತ ವ್ಯವಸ್ಥೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಕೇರಳ ಇದ್ದರೆ, ಬಿಹಾರ ಕೊನೆಯ ಕೊನೆಯ ಸ್ಥಾನದಲ್ಲಿದೆ. ಇನ್ನು ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ ಎಂದು ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೆರ್ಸ್ ಸೆಂಟರ್ (ಪಿಎಸಿ) ಸಾರ್ವಜನಿಕ ವ್ಯವಹಾರಗಳ ಸೂಚಂಕ್ಯದ ಆಧಾರದಲ್ಲಿ ಪಟ್ಟಿಯನ್ನು ಇಂದು ಬಿಡುಗೊಡೆಗೊಳಿಸಿದೆ.

    ಸೂಚಂಕ್ಯ ಆಧಾರದ ಅಡಿಯಲ್ಲಿ ಕೇರಳ ಮೊದಲ ಸ್ಥಾನಗಳಿಸಿದೆ. 2016ರಿಂದಲೂ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಕೇರಳ ಮೊದಲ ಸ್ಥಾನವನ್ನು ಪಡೆಯುತ್ತಾ ಬಂದಿದೆ. ಅತಿ ದೊಡ್ಡ ರಾಜ್ಯಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದು, ನಂತರ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ ಟಾಪ್ 5ರ ಸ್ಥಾನದಲ್ಲಿವೆ. ಮಧ್ಯ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ಕೊನೆಯ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.

    ಅತಿ ಚಿಕ್ಕ ರಾಜ್ಯಗಳ ಪೈಕಿ (2 ಕೋಟಿಗಿಂತಲೂ ಕಡಿಮೆ ಜನಸಂಖ್ಯೆ) ಹಿಮಾಚಲ ಪ್ರದೇಶ ಮೊದಲ ಸ್ಥಾನ ಪಡೆದರೆ, ಗೋವಾ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರ ನಂತರದ ಸ್ಥಾನಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಪಡೆದುಕೊಂಡಿವೆ. ನಾಗಾಲ್ಯಾಂಡ್, ಮಣಿಪುರ ಮತ್ತು ಮೇಘಾಲಯ ಚಿಕ್ಕ ರಾಜ್ಯಗಳ ಪೈಕಿ ಕೊನೆಯ ಸ್ಥಾನದಲ್ಲಿವೆ.

    ವರದಿ ಹೇಗೆ ತಯಾರಿಸಲಾಗುತ್ತೆ?
    ಮೂಲಭೂತ ಸೌಲಭ್ಯ, ಸಾಮಾಜಿಕ ರಕ್ಷಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗು ಮಾನವ ಅಭಿವೃದ್ಧಿ ಸೇರಿದಂತೆ ದೇಶಾದ್ಯಂತ ಹತ್ತು ಅಂಶಗಳನ್ನು ಕುರಿತು ಪಿಎಸಿ ವರದಿಗೂ ಮುನ್ನ ಅಧ್ಯಯನ ನಡೆಸುತ್ತದೆ. ಜನಸಂಖ್ಯೆ ಆಧಾರದ ಮೇಲೆ ದೊಡ್ಡ ಮತ್ತು ಸಣ್ಣ ರಾಜ್ಯಗಳು ಎಂದು ಎರಡು ವರ್ಗ ಮಾಡಿ ಅಧ್ಯಯನ ನಡೆಸಲಾಗುತ್ತದೆ. 2 ಕೋಟಿಗಿಂತ ಹೆಚ್ಚಿಗೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವನ್ನು ದೊಡ್ಡ ರಾಜ್ಯ ಎಂದು ವಿಭಾಗಿಸಲಾಗುತ್ತದೆ. ಒಟ್ಟು 30 ಮುಖ್ಯ ವಿಷಯಗಳು ಮತ್ತು 100 ಸೂಚಕಗಳು ಅಂದಾಜು ಮಾಡಲ್ಪಟ್ಟ, ಸರ್ಕಾರದ ಮಾಹಿತಿಯ ಮೇಲೆ ಈ ವರದಿ ಅವಲಂಬಿಸಿರುತ್ತದೆ.

    2016ರಿಂದಲೂ ಪಿಎಸಿ ಸಾರ್ವಜನಿಕ ವ್ಯವಹಾರಗಳ ಸೂಚಂಕ್ಯದ ಆಧಾರದ ಮೇಲೆ ಈ ಪಟ್ಟಿಯನ್ನು ಬಿಡುಗೊಳಿಸುತ್ತಾ ಬಂದಿದೆ. ಈ ವರದಿಯ ದತ್ತಾಂಶಗಳ ಆಧಾರದ ಮೇಲೆ ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ದಿಕ್ಸೂಚಿಯಾಗಲಿದೆ. 1994ರಲ್ಲಿ ಭಾರತದ ಖ್ಯಾತ ಅರ್ಥಶಾಸ್ತ್ರಜ್ಞ ಸ್ಯಾಮುವೆಲ್ ಪೌಲ್ ಪಿಎಸಿ ಸಂಸ್ಥೆಯನ್ನು ಹುಟ್ಟು ಹಾಕಿದ್ದರು.

  • ನೋಕಿಯಾದ ನೂತನ 3.1 ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನೋಕಿಯಾದ ನೂತನ 3.1 ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೆಸರು ಗಳಿಸಲು ನೋಕಿಯಾ ಬಜೆಟ್ ಗಾತ್ರದಲ್ಲಿ ತನ್ನ ನೂತನ ಆವೃತ್ತಿಯ ನೋಕಿಯಾ 3.1 ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಈ ಮೊದಲು ನೋಕಿಯಾ ಕಂಪೆನಿ ಇದೇ ವರ್ಷ ಮೇ ತಿಂಗಳಲ್ಲಿ ರಷ್ಯಾದ ಮಾಸ್ಕೋ ನಗರದಲ್ಲಿ ಬಜೆಟ್ ಗಾತ್ರದ ನೂತನ ಆವೃತ್ತಿಯ ಸ್ಮಾರ್ಟ್ ಫೋನ್‍ಗಳನ್ನು ಪರಿಚಯಿಸಿತ್ತು. ಇಂದು ಇದೇ ಆವೃತ್ತಿಯ ಸ್ಮಾರ್ಟ್ ಫೋನ್‍ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

    ನೂತನ ನೋಕಿಯಾ 3.1 ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 8 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 13 ಎಂಪಿ ಹೊಂದಿರುವ ಕ್ಯಾಮೆರಾವಿದೆ. ಬ್ಲೂ ಕಾಪರ್, ಬ್ಲಾಕ್ ಕ್ರೋಮ್ ಮತ್ತು ಬಿಳಿ ಬಣ್ಣಗಳಲ್ಲಿ ಫೋನ್ ಲಭ್ಯವಿದೆ. ಜುಲೈ 21 ರಿಂದ ಪೇಟಿಎಂ ಮಾಲ್ ಆ್ಯಪ್ ಹಾಗೂ ನೋಕಿಯಾ ವೆಬ್‍ಸೈಟ್‍ಗಳಲ್ಲಿ ಈ ನೂತನ ಫೋನ್ ಸಿಗಲಿದೆ.

    ಬೆಲೆ ಎಷ್ಟು?
    2ಜಿಬಿ RAM/16 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 10,499 ಆಗಿದ್ದು, ಕೇವಲ ಒಂದೇ ಒಂದು ಆವೃತ್ತಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

    ನೋಕಿಯಾ 3.1 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 146.25 x 68.65 x 8.70ಮಿ.ಮೀ., 138.30 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.20 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (720X1440 ಪಿಕ್ಸೆಲ್, 18:9 ಅನುಪಾತ 310ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಆಕ್ಟಾ ಕೋರ್ ಪ್ರೊಸೆಸರ್, 1.5 ಗೀಗಾಹಟ್ರ್ಸ್ ಮೀಡಿಯಟೆಕ್ ಎಂಟಿ6750, 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 2ಜಿಬಿ RAM/16 ಜಿಬಿ ಆಂತರಿಕ ಮೆಮೊರಿ.

    ಕ್ಯಾಮೆರಾ ಹಾಗೂ ಇತರೆ ಫ್ಯೂಚರ್ ಗಳು:
    ಮುಂಭಾಗ 8ಎಂಪಿ ಕ್ಯಾಮೆರಾ, ಹಿಂಭಾಗ 13 ಎಂಪಿ ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್, 2,990 ಎಂಎಹೆಚ್ ಸಾಮರ್ಥ್ಯದ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

  • ಭಾರತೀಯ ಯುದ್ಧ ನೌಕೆಗಳ ಧ್ವಂಸ ಮಾಡಲು ಜೈಶ್ ಉಗ್ರರಿಗೆ ಸಮುದ್ರದಾಳದಲ್ಲಿ ತರಬೇತಿ

    ಭಾರತೀಯ ಯುದ್ಧ ನೌಕೆಗಳ ಧ್ವಂಸ ಮಾಡಲು ಜೈಶ್ ಉಗ್ರರಿಗೆ ಸಮುದ್ರದಾಳದಲ್ಲಿ ತರಬೇತಿ

    ನವದೆಹಲಿ: ಪಾಕಿಸ್ತಾನದ ಕುಖ್ಯಾತ ಜೈಶ್-ಇ-ಮೊಹಮದ್ ಉಗ್ರ ಸಂಘಟನೆಯು ಭಾರತೀಯ ಸೇನೆಯ ವಿನಾಶಕಾರಿ ಸಮರನೌಕೆಗಳ ಮೇಲೆ ಕಣ್ಣಿಟ್ಟಿದ್ದು, ಅವುಗಳನ್ನು ಧ್ವಂಸ ಮಾಡಲು ಉಗ್ರರಿಗೆ ಸಮುದ್ರದಾಳದಲ್ಲಿ ತರಬೇತಿ ನೀಡುತ್ತಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗ ಪಡಿಸಿದೆ.

    ಭಾರತವನ್ನು ಗುರಿ ಮಾಡಿಕೊಂಡಿರುವ ಜೈಶ್-ಇ-ಮೊಹಮದ್ ಉಗ್ರ ಸಂಘಟನೆಯು ಪಾಕಿಸ್ತಾನ ಹಾಗೂ ಬಹವಲ್ಪುರ ಸಮುದ್ರ ಪ್ರದೇಶದಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿದ್ದು, ಭಾರತೀಯ ಸೇನೆಯ ಅತ್ಯಂತ ಬಲಶಾಲಿ ಮತ್ತು ವಿನಾಶಕಾರಿ ಯುದ್ಧ ನೌಕೆಗಳನ್ನು ಧ್ವಂಸ ಮಾಡಲು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ. ಸಮುದ್ರದ ಅತ್ಯಂತ ಆಳಕ್ಕೆ ಧುಮುಕಿ ಅಲ್ಲಿ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವ ಕುರಿತು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

    ವರದಿಗಳ ಪ್ರಕಾರ ಉಗ್ರರು ಪ್ರಮುಖವಾಗಿ ಭಾರತದ ಪರಮಾಣ ಜಲಾಂತರ್ಗಾಮಿ ನೌಕೆಗಳು, ಯುದ್ಧ ವಿಮಾನಗಳನ್ನು ಸಾಗಿಸುವ ನೌಕೆಗಳು ಮತ್ತು ಯುದ್ಧ ನೌಕೆಗಳನ್ನು ಗುರಿ ಮಾಡಿದ್ದಾರೆ. ಅಲ್ಲದೇ ಭಾರತದ ಪ್ರಮುಖ ಪರಮಾಣು ಜಲಾಂತರ್ಗಾಮಿಗಳಾದ ಐಎನ್‍ಎಸ್ ಅರಿಹಂತ್ ಮತ್ತು ಐಎನ್‍ಎಸ್ ಅರಿಘಾಟ್ ಉಗ್ರರ ಪ್ರಮುಖ ಗುರಿಯಾಗಿದೆ ಎಂದು ತಿಳಿದು ಬಂದಿದೆ. ವಿಶಾಖಪಟ್ಟಣದಲ್ಲಿ ಲಂಗರು ಹಾಕಿರುವ ಐಎನ್‍ಎಸ್ ಚಕ್ರ ಮೇಲೂ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

    ಗುಪ್ತಚರ ಮಾಹಿತಿಯ ವರದಿ ಬೆನ್ನಲ್ಲೇ ಎಚ್ಚೆತ್ತ ಭಾರತ ನೌಕಾದಳವು ಸಮುದ್ರದಲ್ಲಿ ಅತೀ ಸೂಕ್ಷ್ಮ ರಾಡಾರ್ ಗಳನ್ನು ಸ್ಥಾಪಿಸಿದೆ. ಈ ರಾಡಾರ್ ಗಳು ಸಮುದ್ರದ ಆಳದಲ್ಲಿ ಯಾವುದೇ ವಸ್ತುಗಳ ಬಗ್ಗೆ ಮಾಹಿತಿ ರವಾನಿಸುತ್ತವೆ.

    ಈ ಹಿಂದೆ 2000 ನೇ ವರ್ಷದಲ್ಲಿ ಅಲ್ ಖೈದಾ ಉಗ್ರ ಸಂಘಟನೆಯು ಇದೇ ರೀತಿ ಸಂಚು ರೂಪಿಸಿ ಅಮೆರಿಕದ ಜಲಾಂತರ್ಗಾಮಿಯನ್ನು ಹೊಡೆದುರುಳಿಸಿತ್ತು. ಅಮೆರಿಕದ ವಿನಾಶಕಾರಿ ಜಲಾಂತರ್ಗಾಮಿ ಯುಎಸ್ ಎಸ್ ಯೆಮೆನ ಅಡೆನ್ ಬಂದರಿನಲ್ಲಿ ಇಂಧನ ತುಂಬಿಸಿಕೊಳ್ಳುತ್ತಿದ್ದಾಗ ಅಲ್ ಖೈದಾ ಉಗ್ರರು ಸಮುದ್ರಕ್ಕೆ ಧುಮಿಕಿ ಸ್ಫೋಟಕಗಳಿಂದ ದಾಳಿ ಮಾಡಿ ಜಲಾಂತರ್ಗಾಮಿಯನ್ನು ಧ್ವಂಸ ಮಾಡಿದ್ದರು. ಈ ದುರಂತದಲ್ಲಿ 17 ಮಂದಿ ಅಮೆರಿಕದ ನೌಕಾಪಡೆಯ ಸೈನಿಕರು ಹುತಾತ್ಮರಾಗಿದ್ದರು.

  • ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಎಲ್ಲಿಯೂ ಹೋಗುವುದಿಲ್ಲ, ಅವರು ತಂಡದಲ್ಲಿಯೇ ಇರುತ್ತಾರೆ ಎಂದು ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರೀಯವರು ಸ್ಪಷ್ಟನೆ ನೀಡಿದ್ದಾರೆ.

    ಧೋನಿ ನಿವೃತ್ತಿ ವದಂತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಧೋನಿಯವರು ಕೇವಲ ಬಾಲನ್ನು ಪರೀಕ್ಷೆಗೆ ಒಳಪಡಿಸುವುದಕ್ಕೋಸ್ಕರ ತೆಗೆದುಕೊಂಡಿದ್ದಾರೆ. ಧೋನಿಯವರು ಬಾಲ್ ತೆಗೆದುಕೊಂಡಿದ್ದಕ್ಕೆ ಅವರು ನಿವೃತ್ತಿ ಹೊಂದುತ್ತಾರೆ ಎನ್ನುವ ವಂದತಿ ಹಬ್ಬಿರುವುದು ದುರದೃಷ್ಟಕರ ಸಂಗತಿ. ಧೋನಿಯವರು ಎಲ್ಲಿಯೂ ಹೋಗಲ್ಲ, ಅವರು ಭಾರತ ಕ್ರಿಕೆಟ್ ತಂಡದಲ್ಲಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬೌಲಿಂಗ್ ಮಾಡುವಾಗ 45 ಓವರ್ ಗಳ ಬಳಿಕವು ಬಾಲ್ ವೇಗಿಗಳಿಗೆ ಕೈಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಧೋನಿ ಬಾಲನ್ನು ಪಡೆದು ತಂಡದ ಭಾರತ್ ಅರುಣ್ ಎಂಬ ಬಾಲ್ ತಜ್ಞರಿಗೆ ತೋರಿಸಿ, ಬಾಲ್ ನ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಅಂಪೈರ್ ನಿಂದ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿದಾಯದ ಮುನ್ಸೂಚನೆ ನೀಡಿದ್ರಾ ಧೋನಿ?

    ಏನಿದು ವದಂತಿ?
    ಇಂಗ್ಲೆಂಡಿನಲ್ಲಿ ನಡೆದ ಅಂತಿಮ ಪಂದ್ಯದ ವೇಳೆ ಧೋನಿಯವರು ಅಂಪೈರ್ ನಿಂದ ಬಾಲನ್ನು ಪಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಜಾಲತಾಣಿಗರು ವಿಡಿಯೋವನ್ನು ನೋಡಿ ಧೋನಿಯವರು ನಿವೃತ್ತಿಗಾಗಿ ಬಾಲನ್ನು ಪಡೆದುಕೊಂಡಿದ್ದಾರೆ ಎಂದು ವದಂತಿ ಹರಿಬಿಟ್ಟಿದ್ದರು. ಧೋನಿಯವರು ಬಾಲ್ ಪಡೆದ ಬಗ್ಗೆ ಸಾಕಷ್ಟು ಉಹಾಪೋಹಗಳು ಕೇಳಿಬಂದಿದ್ದವು.

  • ನಾಯಕನಾಗಿ ಮತ್ತೊಂದು ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

    ನಾಯಕನಾಗಿ ಮತ್ತೊಂದು ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

    ಲಂಡನ್: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನಾಯಕನಾಗಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಮಂಗಳವಾರ ಲೀಡ್ಸ್‍ನಲ್ಲಿ ನಡೆದ ವಿರಾಟ್ ಕೊಹ್ಲಿಯ ಕಡಿಮೆ ಪಂದ್ಯಗಳಲ್ಲಿ 3,000 ರನ್ ಗಳ ಗಡಿತಲುಪಿದ ವಿಶ್ವದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 16 ರನ್ ಗಳಿಸಿದ್ದಾಗ ಕೊಹ್ಲಿ ಈ ಸಾಧನೆ ನಿರ್ಮಿಸಿದರು.

    ವಿರಾಟ್ ಕೊಹ್ಲಿಯವರು ಒಟ್ಟಾರೆ 49 ಇನ್ನಿಂಗ್ಸ್ ನಲ್ಲಿ 3,000 ಗಡಿ ತಲುಪುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಈ ಮೊದಲು ಭಾರತದ ಮಾಜಿ ಕ್ಯಾಪ್ಟನ್ ಗಳಾದ ಮಹೇಂದ್ರ ಸಿಂಗ್ ಧೋನಿ 70 ಇನ್ನಿಂಗ್ಸ್ ಹಾಗೂ ಸೌರವ್ ಗಂಗೂಲಿ 74 ಇನ್ನಿಂಗ್ಸ್ ಆಡಿ ಈ ಸಾಧನೆಯನ್ನು ಮಾಡಿದ್ದರು. ಈ ಮೊದಲು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ರವರು 60 ಇನ್ನಿಂಗ್ಸ್ ಮೂಲಕ ಈ ಸಾಧನೆಯನ್ನು ಮಾಡಿದ್ದರು. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಪಾಕಿಸ್ತಾನ ಮಿಸ್ಬಾ ಉಲ್ ಹಕ್ 83 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರೆ ಶ್ರೀಲಂಕಾದ ಸನತ್ ಜಯಸೂರ್ಯ ಮತ್ತು ಆಸ್ಟ್ರೇಲಿಯಾದ ರಿಕ್ಕಿ ಪಾಟಿಂಗ್ 84 ಇನ್ನಿಂಗ್ಸ್ ನಲ್ಲಿ ಈ ಸಾಧನೆ ನಿರ್ಮಿಸಿದ್ದರು.

    ಮಂಗಳವಾರದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಪಂದ್ಯವನ್ನು ಜಯಿಸಿದೆ. ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256ರನ್ ಗಳಿಸಿತ್ತು. ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಕೇವಲ 44.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 260 ರನ್ ಭಾರಿಸಿ ಪಂದ್ಯವನ್ನು ಗೆದ್ದುಕೊಂಡಿತು.

  • ವಿಶ್ವದಲ್ಲಿ ಆರಂಭಗೊಂಡಾಗ ಭಾರತದಲ್ಲೂ ಬಿಎಸ್‍ಎನ್‍ಎಲ್‍ನಿಂದ ಸಿಗಲಿದೆ 5ಜಿ ಸೇವೆ!

    ವಿಶ್ವದಲ್ಲಿ ಆರಂಭಗೊಂಡಾಗ ಭಾರತದಲ್ಲೂ ಬಿಎಸ್‍ಎನ್‍ಎಲ್‍ನಿಂದ ಸಿಗಲಿದೆ 5ಜಿ ಸೇವೆ!

    ನವದೆಹಲಿ: ಜಗತ್ತಿನಲ್ಲಿ 5ಜಿ ಸೇವೆ ಆರಂಭಗೊಳ್ಳುವಾಗಲೇ ಭಾರತದಲ್ಲೂ ಈ ಸೇವೆಯನ್ನು ನೀಡಲು ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಿದ್ಧವಾಗಿದೆ. ದೇಶದಲ್ಲಿ ಯಾವುದೇ ಟೆಲಿಕಾಂ 5ಜಿ ಸೇವೆಯನ್ನು ಆರಂಭಿಸುವ ಮುನ್ನವೇ  ಬಿಎಸ್‍ಎನ್‍ಎಲ್ ಭಾರತದಲ್ಲಿ 5ಜಿ ಸೇವೆ ನೀಡಲಿದೆ.

    ವಿಶ್ವದ ಯಾವುದೇ ದೇಶದಲ್ಲಿ 5ಜಿ ಸೇವೆ ಆರಂಭಗೊಳ್ಳುವಾಗ ಭಾರತದಲ್ಲೂ ಈ ಸೇವೆ ಆರಂಭವಾಗಲಿದೆ. ಅಷ್ಟೇ ಅಲ್ಲದೇ ಭಾರತದಲ್ಲಿ ಬಿಎಸ್‍ಎನ್‍ಎಲ್‍ಗಿಂತ ಮೊದಲು ಯಾರು 5ಜಿ ಸೇವೆ ನೀಡಲು ಸಾಧ್ಯವಿಲ್ಲ ಎಂದು ಬಿಎಸ್‍ಎನ್‍ಎಲ್‍ನ ಪ್ರಧಾನ ವ್ಯವಸ್ಥಾಪಕ ಅನಿಲ್ ಜೈನ್ ಹೇಳಿದ್ದಾರೆ.

    ಯಾವಾಗ ಈ ಸೇವೆ ಆರಂಭಗೊಳ್ಳಬಹುದು ಎನ್ನುವ ಪ್ರಶ್ನೆಗೆ, ಈ ಸೇವೆ ಆರಂಭಗೊಳ್ಳುವ ಬಗ್ಗೆ ಇನ್ನೂ ಸಮಯ ನಿಗದಿಯಾಗಿಲ್ಲ. ಜೂನ್ 2020ರ ವೇಳೆ 5ಜಿ ಆರಂಭಗೊಳ್ಳಬಹುದು ಎನ್ನುವ ಮಾತು ವಿಶ್ವದೆಲ್ಲೆಡೆ ಕೇಳಿ ಬರುತ್ತಿದೆ. ಈ ಮಧ್ಯೆ ಜೂನ್ 2019ರ ವೇಳೆಗೆ 5ಜಿ ಸೇವೆ ಆರಂಭಗೊಂಡರು ಅಚ್ಚರಿಯಿಲ್ಲ ಎಂದು ಉತ್ತರಿಸಿದರು.

    ಹಿಂದೆ ವಿಶ್ವದಲ್ಲಿ 4ಜಿ ಸೇವೆ ಆರಂಭಗೊಂಡಿದ್ದಾಗ ಭಾರತಕ್ಕೆ ಈ ಅವಕಾಶ ತಪ್ಪಿತ್ತು. ಆದರೆ 5ಜಿಯಲ್ಲಿ ಹೀಗೆ ಆಗುವುದಿಲ್ಲ. ಈಗಾಗಲೇ 5ಜಿ ಸೇವೆ ನೀಡಲು ಪರೀಕ್ಷೆಗಳು ಆರಂಭಗೊಂಡಿದ್ದು ಅಂತರಾಷ್ಟ್ರೀಯ ಕಂಪೆನಿಗಳಾದ ನೋಕಿಯಾ, ಎನ್‍ಟಿಟಿ ಜೊತೆ ಉನ್ನತ ತಂತ್ರಜ್ಞಾನ ಸಂಬಂಧ ಒಪ್ಪಂದಗಳು ನಡೆದಿದೆ. ಸದ್ಯ ಜರ್ಮನಿ, ಅಮೆರಿಕ, ಚೀನಾ ಮತ್ತು ಭಾರತದಲ್ಲಿ 5ಜಿ ಸಂಬಂಧ ಹಲವು ಪರೀಕ್ಷೆಗಳು ನಡೆಯುತ್ತಿವೆ ಎಂದು ವಿವರಿಸಿದರು.

    2020ರ ವೇಳೆಗೆ ದೇಶದಲ್ಲಿ 5ಜಿ ತಂತ್ರಜ್ಞಾನ ಸೇವೆ ಆರಂಭಗೊಳ್ಳಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2017ರ ಆಗಸ್ಟ್ ನಲ್ಲಿ ಸಮಿತಿ ರಚಿಸಿತ್ತು. 3ಜಿ ಮತ್ತು 4ಜಿ ಮಾನದಂಡವನ್ನು ನಿರ್ಧರಿಸುವ ಸಂದರ್ಭದಲ್ಲಿ ನಾವು ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದೇವು. ಆದರೆ ವಿಶ್ವದಲ್ಲಿ 5ಜಿ ಮಾನದಂಡ ಸಿದ್ಧತೆ ಮಾಡುವ ಸಂದರ್ಭದಲ್ಲಿ ಭಾರತವೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತದೆ. ಯಾವುದೇ ಕಾರಣಕ್ಕೂ ಈ ಅವಕಾಶವನ್ನು ಕೈತಪ್ಪಲು ಬಿಡುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದರು.

    500 ಕೋಟಿ ಮೂಲನಿಧಿಯೊಂದಿಗೆ 5ಜಿ ಸಂಬಂಧಿತ ಸಂಶೋಧನೆ ಹಾಗೂ ಅಭಿವೃದ್ಧಿ ನಡೆಯಲಿದ್ದು, ಈ ಸಮಿತಿಯಲ್ಲಿ ಟೆಲಿಕಾಂ, ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಇರಲಿದ್ದಾರೆ.

    5ಜಿ ಬಂದರೆ ನಗರ ಪ್ರದೇಶದಲ್ಲಿ 10 ಗಿಗಾ ಬೈಟ್ಸ್ ಪರ್ ಸೆಕೆಂಡ್ ಬ್ರಾಡ್‍ಬ್ಯಾಂಡ್ ಸಂಪರ್ಕ ಸಿಕ್ಕಿದರೆ, ಗ್ರಾಮಾಂತರ ಪ್ರದೇಶದಲ್ಲಿ 1 ಗಿಗಾ ಬೈಟ್ಸ್ ಪರ್ ಸೆಕೆಂಡ್ ಸಿಗಲಿದೆ.

    ಈ ಹಿಂದೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) 5ಜಿ ಸೇವೆಗೆ 3300- 3400 Mhz ಮತ್ತು 3400- 3600 Mhz ಬ್ಯಾಂಡ್ ಬಳಸಲು ಸಮಯ ನಿಗದಿ ಪಡಿಸಿ ಎಂದು ಟೆಲಿಕಾಂ ಕಂಪೆನಿಗಳಿಗೆ ಹೇಳಿತ್ತು.  ಕೇಂದ್ರ ಸರ್ಕಾರ 5ಜಿ ಸೇವೆ ಆರಂಭಿಸಲು ಉತ್ಸುಕವಾಗಿದ್ದರೂ ಭಾರತೀಯ ಟೆಲಿಕಾಂ ಕಂಪೆನಿ ಹಣಕಾಸು ಸಮಸ್ಯೆ ಎದುರಿಸುತ್ತಿರುವ ಕಾರಣ 2021-2022ರ ವೇಳೆಗೆ 5ಜಿ ಭಾರತದಲ್ಲಿ ಆರಂಭವಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಇಂಟರ್ ನ್ಯಾಷನಲ್ ಟೆಲಿಕಮ್ಯೂನಿಕೇಷನ್ ಯುನಿಯನ್(ಐಟಿಯು) 5ಜಿ ಮಾನದಂಡವನ್ನು ಸಿದ್ಧಪಡಿಸಲಿದ್ದು, ಈಗಾಗಲೇ ಪ್ರಸ್ತಾವನೆ ಸಿದ್ದಪಡಿಸಿದೆ. ಫೆಬ್ರವರಿಯಲ್ಲಿ ಪ್ರಸ್ತಾಪಗೊಂಡ ಪ್ರಕಾರ 5ಜಿ ಡೌನ್‍ಲಿಂಕ್ ಸ್ಪೀಡ್ 20 ಗಿಗಾಬೈಟ್ಸ್ ಪರ್ ಸೆಕೆಂಡ್ ಇರಬೇಕೆಂದು ಹೇಳಿದೆ.