Tag: india

  • ವಿವೇಕಾನಂದರು ಈಗ ಭಾರತದಲ್ಲಿ ಇದ್ದಿದ್ರೆ ಅವರಿಗೂ ಎಂಜಿನ್ ಆಯಿಲ್ ಎಸೆಯುತ್ತಿದ್ದರು- ಶಶಿತರೂರ್

    ವಿವೇಕಾನಂದರು ಈಗ ಭಾರತದಲ್ಲಿ ಇದ್ದಿದ್ರೆ ಅವರಿಗೂ ಎಂಜಿನ್ ಆಯಿಲ್ ಎಸೆಯುತ್ತಿದ್ದರು- ಶಶಿತರೂರ್

    ನವದೆಹಲಿ: ದೇಶದಲ್ಲಿ ಇಂದು ಸ್ವಾಮಿ ವಿವೇಕಾನಂದರು ಇದ್ದಿದ್ದರೆ ದುಷ್ಕರ್ಮಿಗಳು ಅವರಿಗೂ ಎಂಜಿನ್ ಆಯಿಲ್ ಎಸೆಯುತ್ತಿದ್ದರು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

    ಕೇರಳದ ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಶಿತರೂರ್ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ಸಮರ್ಪಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿಲ್ಲ ಎಂದು ಆರೋಪಿಸಿದರು.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಬರದಲ್ಲಿ ಶಶಿತರೂರ್ ಈ ಹೇಳಿಕೆ ನೀಡಿದ್ದಾರೆ. ಸ್ವಾಮಿ ವಿವೇಕಾನಂದರು ಇಂದು ಭಾರತದಲ್ಲಿ ನೆಲೆಸಿದ್ದರೆ ದುಷ್ಕರ್ಮಿಗಳು ಅವರನ್ನು ಟಾರ್ಗೆಟ್ ಮಾಡಿ ಎಂಜಿನ್ ಆಯಿಲ್ ಬಳಿಯಲು ಪ್ರಯತ್ನಿಸುತ್ತಿದ್ದರು. ಅಲ್ಲದೇ ಅವರನ್ನು ಬೀದಿಗೆ ತಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

    ಕಳೆದ ತಿಂಗಳು ಸ್ವಾಮಿ ಅಗ್ನಿವೇಶ್ ಅವರ ಮೇಲೆ ಹಲ್ಲೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಅವರು ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು. ಅಲ್ಲದೇ ದೇಶದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ, ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇದು ಕೋಮು ಹಿಂಸಾಚಾರ ಹೆಚ್ಚಾಗಲು ಕಾರಣವಾಗಿದೆ. ಹಲವರ ಮೇಲೆ ಗೋರಕ್ಷಣೆಯ ಹೆಸರಿನಲ್ಲಿ ಹಲ್ಲೆ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ನಂತರ ಮೋದಿ ಸರ್ಕಾರ ಆಡಳಿತಕ್ಕೂ ಬರುವ ಮೊದಲು 70ಕ್ಕೂ ಹೆಚ್ಚು ಹಲ್ಲೆ ಪ್ರಕರಣಗಳು ಗೋ ರಕ್ಷಣೆ ಹೆಸರಿನಲ್ಲಿ ನಡೆದಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಆದರೆ ಕಳೆದ 4 ವರ್ಷಗಳಲ್ಲಿ 2,920 ಗಳು ನಡೆದಿದ್ದಾಗಿ ಕೇಂದ್ರ ಗೃಹ ಇಲಾಖೆ ನೀಡಿದೆ. ಅಂದರೆ 97% ಪ್ರಕರಣಗಳು ಕಳೆದ 4 ವರ್ಷಗಳ ಅವಧಿಯಲ್ಲಿ ನಡೆದಿದ್ದು, ಇದರಲ್ಲಿ 389 ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಇಷ್ಟು ಪ್ರಕರಣಗಳು ವರದಿಯಾದರೂ ಈ ಕುರಿತು ಮಾತನಾಡಲು 68 ಅವಕಾಶಗಳು ಸಿಕ್ಕರೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಕೃತ್ಯಗಳ ಬಗ್ಗೆ ಮೌನ ವಹಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ದೇಶದ ಜನತೆ ಮೇಲೆ ನಡೆಯುತ್ತಿರುವ ಹಲ್ಲೆಗಳ ಕುರಿತು ಒಮ್ಮೆಯೂ ಮಾತನಾಡಿಲ್ಲ ಎಂದು ದೂರಿದರು.

    ಕಳೆದ ಕೆಲ ತಿಂಗಳ ಹಿಂದೆ 2019 ರ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ಭಾರತ ಹಿಂದೂ ಪಾಕಿಸ್ತಾನ ಆಗಲಿದೆ ಎಂದು ಹೇಳಿಕೆ ನೀಡಿದ ಬಳಿಕ ಶಶಿತರೂರ್ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾರಿಂದ ಧೋನಿ ಭೇಟಿ!

    ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾರಿಂದ ಧೋನಿ ಭೇಟಿ!

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಮುಂಬರುವ ಲೋಕಸಭಾ ಚುನಾವಣೆಯಿಂದಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಮಿತ್ ಷಾ ಹಾಗೂ ಧೋನಿಯವರ ಭೇಟಿಯು ಹಲವು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. 2019ರ ಲೋಕಸಭಾ ಚುನಾವಣೆಗೆ ಧೋನಿಯವರನ್ನು ರಾಜಕೀಯಕ್ಕೆ ಸೆಳೆಯಲು ಅಮಿತ್ ಷಾ ತಂತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

    ಅಮಿತ್ ಷಾ ಕೈಗೊಂಡಿರುವ ಸಂಪರ್ಕ್ ಫಾರ್ ಸಮರ್ಥನ್ ಪ್ರಚಾರದಡಿ ದೇಶದ ಹಲವು ಗಣ್ಯ ವ್ಯಕ್ತಿಗಳನ್ನು ಖುದ್ದು ಭೇಟಿ ಮಾಡಿ, ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸುತ್ತಾ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧೋನಿಯವರೊಂದಿಗೆ ಹಲವು ವಿಷಯಗಳ ಕುರಿತು ಮಾತುಕತೆ ನಡೆದಿದ್ದು, ಮೋದಿ ಸರ್ಕಾರ 2014ರಿಂದ ಜಾರಿಗೆ ತಂದ ಯೋಜನೆಗಳ ಪೂರ್ಣ ಮಾಹಿತಿಯನ್ನು ಧೋನಿಯವರಿಗೆ ತಿಳಿಸಿದ್ದಾರೆ.

    ಧೋನಿಯವರ ಭೇಟಿ ನಂತರ ಅಮಿತ್ ಷಾರವರು ತಮ್ಮ ಟ್ವೀಟ್ ಮೂಲಕ, ಸಂಪರ್ಕ್ ಫಾರ್ ಸಮರ್ಥನ್ ಪ್ರಚಾರದ ಭಾಗವಾಗಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಫಿನಿಶರ್ ಗಳಲ್ಲಿ ಒಬ್ಬರಾಗಿರುವ ಧೋನಿ ಅವರನ್ನು ಭೇಟಿ ಮಾಡಿ, ಮೋದಿ ಸರ್ಕಾರ 4 ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಎಂಎಸ್ ಧೋನಿಗೆ ತಿಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಂದ ಲತಾ ಮಂಗೇಶ್ಕರ್ ಭೇಟಿ!

    ಧೋನಿ ಭೇಟಿ ಸಂದರ್ಭದಲ್ಲಿ ಅಮಿತ್ ಷಾ ಅವರಿಗೆ ರೈಲ್ವೇ ಸಚಿವ ಪಿಯೂಷ್ ಗೋಯಲ್, ಬಿಜೆಪಿ ದೆಹಲಿ ಮುಖ್ಯಸ್ಥ ಮನೋಜ್ ತಿವಾರಿ ಹಾಗೂ ಪಕ್ಷದ ಇತರ ಹಿರಿಯರು ಸಾಥ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪ್ರಸಾದ್@49: ಪಾಕ್ ವಿರುದ್ಧದ ಬೆಂಗ್ಳೂರು ಪಂದ್ಯದ ವಿಡಿಯೋ ನೋಡಿ

    ಪ್ರಸಾದ್@49: ಪಾಕ್ ವಿರುದ್ಧದ ಬೆಂಗ್ಳೂರು ಪಂದ್ಯದ ವಿಡಿಯೋ ನೋಡಿ

    ಬೆಂಗಳೂರು: ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಕರ್ನಾಟಕದ ಹೆಮ್ಮೆಯ ವೆಂಕಟೇಶ್ ಪ್ರಸಾದ್ ಇಂದು 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    ಭಾರತದ ಬಲಗೈ ಮಧ್ಯಮ ವೇಗದ ಬೌಲರ್ ಗಳಲ್ಲಿ ಒಬ್ಬರಾಗಿರುವ ವೆಂಕಟೇಶ್ ಪ್ರಸಾದ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಸಿಸಿಐ ಪಾಕಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ನಡೆದ ವಿಲ್ಸ್ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದ ವಿಡಿಯೋವನ್ನು ಅಪ್ಲೋಡ್ ಮಾಡಿ ಶುಭಾಶಯ ತಿಳಿಸಿದೆ.

    ವಿಡಿಯೋದಲ್ಲಿ ಏನಿದೆ?
    288 ರನ್‍ಗಳ ಗುರಿ ಪಡೆದ ಪಾಕಿಸ್ತಾನ 14.4 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 109 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ವೆಂಕಟೇಶ್ ಪ್ರಸಾದ್ ಎಸೆದ 14.5ನೇ ಓವರ್ ನ 5ನೇ ಎಸೆತವನ್ನು ನಾಯಕ ಅಮೀರ್ ಸೊಹೈಲ್ ಬೌಂಡರಿಗೆ ಅಟ್ಟಿದ್ದರು. ಈ ವೇಳೆ ಪ್ರಸಾದ್ ಅವರನ್ನು ನೋಡಿ ಸೊಹೈಲ್, ಬಾಲ್ ಅಲ್ಲಿ ಹೋಯ್ತು ಎಂದು ಬ್ಯಾಟ್ ಎತ್ತಿ ಕಿಚಾಯಿಸಿದ್ದಾರೆ. ಇದರಿಂದ ಸಿಟ್ಟಾದ ವೆಂಕಟೇಶ್ ಮರು ಎಸೆತದಲ್ಲಿ 55 ರನ್ ಗಳಿಸಿದ್ದ ಸೊಹೈಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ತನ್ನನ್ನು ಕೆಣಕಿದ್ದಕ್ಕೆ ಸೊಹೈಲ್ ಮುಖವನ್ನು ನೋಡಿ ಪ್ರಸಾದ್ ಸಂಭ್ರಮಿಸಿದ್ದರು. ಈ ಪಂದ್ಯದಲ್ಲಿ ವೆಂಕಟೇಶ್ ಪ್ರಸಾದ್ 3 ವಿಕೆಟ್ ಪಡೆದು ಮಿಂಚಿದ್ದರು.

    ಈ ಪಂದ್ಯದಲ್ಲಿ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿದ್ದರೆ ಪಾಕಿಸ್ತಾನ 49 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು. ನಿಧಾನಗತಿಯ ಓವರ್ ಮಾಡಿದ್ದಕ್ಕೆ ಪಾಕಿಸ್ತಾನ ಬ್ಯಾಟಿಂಗ್ ವೇಳೆ 1 ಓವರ್ ಕಡಿತಗೊಳಿಸಲಾಗಿತ್ತು. ಭಾರತ ಕೊನೆಯ ನಾಲ್ಕು ಓವರ್ ಗಳಲ್ಲಿ 57 ರನ್ ಗಳಿಸಿದ್ದರೆ, ವಾಕರ್ ಯೂನಿಸ್ ಎಸೆದ ಓವರ್ ನಲ್ಲಿ 22 ರನ್ ಬಂದಿತ್ತು. 93 ರನ್ (115 ಎಸೆತ, 9 ಬೌಂಡರಿ) ಹೊಡೆದ ಸಿದ್ದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಜಡೇಜಾ 45 ರನ್(25 ಎಸೆತ, 4 ಬೌಂಡರಿ, 2 ಸಿಕ್ಸರ್) ಚಚ್ಚಿದ್ದರು.

    ಭಾರತದ ಪರ 33 ಟೆಸ್ಟ್ ಪಂದ್ಯಗಳ 58 ಇನ್ನಿಂಗ್ಸ್ ನಲ್ಲಿ 96 ವಿಕೆಟ್ ಪಡೆದಿರುವ ವೆಂಕಟೇಶ್ ಪ್ರಸಾದ್ 161 ಏಕದಿನ ಪಂದ್ಯಗಳಲ್ಲಿ 196 ವಿಕೆಟ್ ಪಡೆದಿದ್ದಾರೆ. 2005ರಲ್ಲಿ ನಿವೃತ್ತಿ ಘೋಷಿಸಿದ ಬಳಿಕ ಐಪಿಎಲ್‍ನಲ್ಲಿ ಆರ್ ಸಿಬಿ ತಂಡದ ಕೋಚ್ ಹಾಗೂ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • 1 ಸಾವಿರ ಫೋಟೋ, 380 ವಿಡಿಯೋ – ಶಿಶುಕಾಮಿ ಭಾರತೀಯನಿಗೆ ಜೈಲು ಶಿಕ್ಷೆ!

    1 ಸಾವಿರ ಫೋಟೋ, 380 ವಿಡಿಯೋ – ಶಿಶುಕಾಮಿ ಭಾರತೀಯನಿಗೆ ಜೈಲು ಶಿಕ್ಷೆ!

    ನ್ಯೂಯಾರ್ಕ್: ಮಕ್ಕಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತೀಯ ವ್ಯಕ್ತಿಯೊಬ್ಬನಿಗೆ ಅಮೆರಿಕದ ಕೋರ್ಟ್ 4 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಪಿಟ್ಸ್‍ಬರ್ಗ್ ನಿವಾಸಿ 28 ವರ್ಷದ ಅಭಿಜಿತ್ ದಾಸ್, ಅಪ್ರಾಪ್ತ ಮಕ್ಕಳ 1,000 ಅಶ್ಲೀಲ ಫೋಟೋ ಮತ್ತು 380 ವಿಡಿಯೋಗಳನ್ನು ಸಂಗ್ರಹಿಸಿದ್ದನು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಫೆಡರಲ್ ಕೋರ್ಟ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 52 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಮೆರಿಕದ ಕಾನೂನು ಪ್ರಕಾರ 18 ವರ್ಷದ ಒಳಗಡೆ ಇರುವ ಅಪ್ರಾಪ್ತರ ಅಶ್ಲೀಲ ಚಿತ್ರ, ವಿಡಿಯೋಗಳನ್ನು ಸಂಗ್ರಹಿಸುವುದು ಅಪರಾಧ. ಅಷ್ಟೇ ಅಲ್ಲದೇ ಮಕ್ಕಳ ಅಶ್ಲೀಲ ಚಿತ್ರ ನಿರ್ಮಾಣ, ಮಾರಾಟ ಮಾಡುವುದು, ಅಶ್ಲೀಲ ಚಿತ್ರಗಳಲ್ಲಿ ನಟಿಸುವುಂತೆ ಮನ ಒಲಿಸುವುದು, ಒತ್ತಾಯ ಮಾಡಿದರು ಅಪರಾಧ ಎಂದೇ ಪರಿಗಣಿಸಲ್ಪಡುತ್ತದೆ.

    ಯಾವುದೇ ವ್ಯಕ್ತಿಯ ಮೇಲೆ ಈ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದರೆ ಫೆಡರಲ್ ಕಾನೂನಿನ ಅಡಿಯಲ್ಲಿ ವಿಚಾರಣೆ ನಡೆಯುತ್ತದೆ.

  • ಸ್ಯಾಮ್‍ಸಂಗ್‍ ನ ಜೆ7 ಡ್ಯುಯೋಸ್ ಹಾಗೂ ಜೆ6 ಬೆಲೆ ದಿಢೀರ್ ಇಳಿಕೆ!

    ಸ್ಯಾಮ್‍ಸಂಗ್‍ ನ ಜೆ7 ಡ್ಯುಯೋಸ್ ಹಾಗೂ ಜೆ6 ಬೆಲೆ ದಿಢೀರ್ ಇಳಿಕೆ!

    ನವದೆಹಲಿ: ಭಾರತದ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಸ್ಯಾಮ್‍ಸಂಗ್ ತನ್ನ ಜೆ7 ಡ್ಯುಯೋಸ್ ಹಾಗೂ ಜೆ6 ಮಾದರಿಯ ಸ್ಮಾರ್ಟ್ ಫೋನ್‍ಗಳಲ್ಲಿ ಬೆಲೆಯನ್ನು ಇಳಿಕೆ ಮಾಡಿದೆ.

    ಏಪ್ರಿಲ್‍ನಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ಜೆ7 ಡ್ಯುಯೋಸ್‍ನ ಮುಖಬೆಲೆ 16,990 ರೂ. ಆಗಿದ್ದರೆ ಪ್ರಸ್ತುತ ಈಗ 13,990 ರೂಪಾಯಿ ಆಗಿದೆ. ಜೆ6 ಸ್ಮಾರ್ಟ್ ಫೋನ್ ಮೇ ತಿಂಗಳಿನಲ್ಲಿ 14,990 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಈಗ ಈ ಫೋನ್ 12,990 ರೂ.ಗೆ ಲಭ್ಯವಿದೆ.

    ಸ್ಯಾಮ್‍ಸಂಗ್ ಜೆ7 ಡ್ಯುಯೋಸ್ 4ಜಿಬಿ RAM/32 ಜಿಬಿ ಆತಂರಿಕ ಮೊಮೊರಿ ಹೊಂದಿರುವ ಸ್ಮಾರ್ಟ್ ಫೋನ್ ಚಿನ್ನ, ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿದ್ದು ಬೆಲೆ 13,990 ರೂ. ಆಗಿದೆ. ಜೆ6 3ಜಿ RAM/32 ಜಿಬಿ ಆಂತರಿಕ ಮೊಮೊರಿ ಹೊಂದಿದ್ದು, ಚಿನ್ನ, ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿದ್ದು ಬೆಲೆ 12,990 ರೂ. ಆಗಿದೆ.

    ಸ್ಯಾಮ್‍ಸಂಗ್ ಜೆ7 ಡ್ಯುಯೋಸ್ ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 153.5 x 77.2 x 8.2 ಮಿ.ಮೀ. ಗಾತ್ರ, 174 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 5.5 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720X1280 ಪಿಕ್ಸೆಲ್, 16:9 ಅನುಪಾತ, 267ಪಿಪಿಐ)

    ಪ್ಲಾಟ್‍ ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.0 (ಓರಿಯೋ), ಎಕ್ಸಿನೋಸ್ 7885 ಅಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹಟ್ರ್ಸ್ ಸ್ಪೀಡ್, 4ಜಿಬಿ RAM/32 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 8ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13+5ಎಂಪಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದ್ದು, ಫಿಂಗರ್ ಪ್ರಿಂಟ್ ಸೆನ್ಸರ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

    ಸ್ಯಾಮ್‍ಸಂಗ್ ಜೆ6 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 149.3 x 70.2 x 8.2 ಮಿ.ಮೀ. ಗಾತ್ರ, 154 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 5.6 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720X1480 ಪಿಕ್ಸೆಲ್, 18.5:9 ಅನುಪಾತ, 293ಪಿಪಿಐ)

    ಪ್ಲಾಟ್‍ ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.0 (ಓರಿಯೋ), ಎಕ್ಸಿನೋಸ್ 7870 ಅಕ್ಟಾ ಕೋರ್ ಪ್ರೊಸೆಸರ್, 1.6 ಗೀಗಾಹಟ್ರ್ಸ್ ಸ್ಪೀಡ್, 3ಜಿಬಿ RAM/32 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 8ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13ಎಂಪಿ ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಸ್ಕ್ರೀನ್ ಪ್ರೊಟೆಕ್ಷನ್, ಫಿಂಗರ್ ಪ್ರಿಂಟ್ ಸೆನ್ಸರ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

    https://www.youtube.com/watch?v=480_MSd16NA

  • ಭಾರತದಲ್ಲಿ ಆಪಲ್ ಹಾಗೂ ಸ್ಯಾಮ್‌ಸಂಗ್‌ ಗೆ ಸಡ್ಡು ಹೊಡೆದ ಒನ್‍ಪ್ಲಸ್

    ಭಾರತದಲ್ಲಿ ಆಪಲ್ ಹಾಗೂ ಸ್ಯಾಮ್‌ಸಂಗ್‌ ಗೆ ಸಡ್ಡು ಹೊಡೆದ ಒನ್‍ಪ್ಲಸ್

    ನವದೆಹಲಿ: ಚೀನಾ ಒನ್‍ಪ್ಲಸ್ ಕಂಪೆನಿಯು ತನ್ನ ನೂತನ ಮಾದರಿಯ ಸ್ಮಾರ್ಟ್ ಫೋನ್‍ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಹಾಗೂ ಸ್ಯಾಮ್‌ಸಂಗ್‌ ಮೊಬೈಲ್ ಕಂಪೆನಿಗಳಿಗೆ ಸಡ್ಡು ಹೊಡಿದಿದೆ.

    ಪ್ರೀಮಿಯಂ ಫೋನ್ ಸೆಗ್ಮೆಂಟ್ ವಿಭಾಗದ 2018ರ ಏಪ್ರಿಲ್ – ಜೂನ್ ಅವಧಿಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಒನ್‍ಪ್ಲಸ್ ಕಂಪೆನಿಯು ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ ಎಂದು ಮಾರುಕಟ್ಟೆ ಅಧ್ಯಯನ ನಡೆಸುವ ಕೌಂಟರ್ ಪಾಯಿಂಟ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

    30 ಸಾವಿರ ರೂ. ಮೇಲ್ದರ್ಜೆಯ ಸ್ಮಾರ್ಟ್ ಫೋನ್‍ಗಳ ವಿಭಾಗದಲ್ಲಿ ಒನ್‍ಪ್ಲಸ್ ಭಾರತದ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದ್ದು, ತನ್ನ ನೂತನ ಒನ್‍ಪ್ಲಸ್ 6 ಮಾದರಿಯ ಸ್ಮಾರ್ಟ್ ಫೋನುಗಳ ಮೂಲಕ ಭಾರತದಲ್ಲಿ ವ್ಯಾಪಕವಾಗಿ ಮಾರಾಟಗೊಳ್ಳುತ್ತಿದೆ. ಈ ಮೊದಲು ಈ ಶ್ರೇಣಿಯಲ್ಲಿದ್ದ ಆಪಲ್ ಮತ್ತು ಸ್ಯಾಮ್ ಸಂಗ್ ಕಂಪೆನಿಗಳ ಸ್ಮಾರ್ಟ್ ಫೋನ್‍ಗಳನ್ನು ಹಿಂದಿಕ್ಕಿದೆ ಎಂದು ಕೌಂಟರ್ ಪಾಯಿಂಟ್ ಸಂಸ್ಥೆ ತಿಳಿಸಿದೆ.

    ಒನ್‍ಪ್ಲಸ್ ತನ್ನ ನೂತನ 6 ಆವೃತ್ತಿಯ ಸ್ಮಾರ್ಟ್ ಫೋನಿಂದ 40% ರಷ್ಟು ಮಾರುಕಟ್ಟೆಯನ್ನು ಹೆಚ್ಚಿಸಿಕೊಂಡಿದ್ದರೆ, ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ ಎಸ್ 9 ಹಾಗೂ ಗ್ಯಾಲಕ್ಸಿ ಎಸ್ 8 ಮಾದರಿಗಳಲ್ಲಿ 34% ರಷ್ಟು ಮಾರುಕಟ್ಟೆಯಲ್ಲಿ ಹೊಂದಿದೆ. ಆಪಲ್ ತನ್ನ ಐಫೋನ್ 8 ಹಾಗೂ ಐಫೋನ್ ಎಕ್ಸ್ ಮಾದರಿಗಳ ಮೂಲಕ 14%ರಷ್ಟು ಹೊಂದುವ ಮೂಲಕ ಕುಸಿತ ಕಂಡಿದೆ. ವಿಶೇಷ ಏನೆಂದರೆ 2017ರ ಈ ಅವಧಿಯಲ್ಲಿ ಒನ್‍ಪ್ಲಸ್ ಕಂಪೆನಿ 9% ಮಾರುಕಟ್ಟೆ ಪಾಲನ್ನು ಹೊಂದಿತ್ತು.

    ಭಾರತದ ಒಟ್ಟು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೋನ್ ಗಳ ಪಾಲು 3% ಇದ್ದು, ಒಟ್ಟು ಆದಾಯದಲ್ಲಿ ಇವುಗಳ ಪಾಲು 12% ಆಗಿದೆ. ಭಾರತದಲ್ಲಿ ಈ ಸ್ಮಾರ್ಟ್ ಫೋನುಗಳು ವರ್ಷದಿಂದ ವರ್ಷಕ್ಕೆ 19%ರಷ್ಟು ವೇಗದಲ್ಲಿ ಬೆಳವಣಿಗೆಯಾಗುತ್ತಿದೆ. ಈಗ ಒನ್‍ಪ್ಲಸ್ ಕಂಪೆನಿ ಆಫ್‍ಲೈನ್ ಸ್ಟೋರ್ ತೆರೆಯಲು ಮುಂದಾಗಿದ್ದು, ಕಳೆದ ವಾರ ಬೆಂಗಳೂರಿನ ಜಯನಗರದಲ್ಲಿ ಆಫ್‍ಲೈನ್ ಸ್ಟೋರ್ ತೆರೆದಿದೆ. ಈ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 10 ಆಫ್‍ಲೈನ್ ಸ್ಟೋರ್ ತೆರೆಯುವ ಯೋಜನೆ ರೂಪಿಸಿದೆ.

    ಪ್ರಸ್ತುತ ಭಾರತ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕ್ಸಿಯೋಮಿ ಮತ್ತು ಸ್ಯಾಮ್‍ಸಂಗ್ ನಡುವೆ ನೇರ ಸ್ಪರ್ಧೆಯಿದ್ದು, ಏಪ್ರಿಲ್- ಜೂನ್ ಅವಧಿಯ ಮಾರುಕಟ್ಟೆಯಲ್ಲಿ ಸ್ಯಾಮ್‍ಸಂಗ್ ಅತಿ ಹೆಚ್ಚು ಮಾರುಕಟ್ಟೆಯ ಪಾಲನ್ನು ಹೊಂದಿದೆ ಎಂದು ಕೌಂಟರ್ ಪಾಯಿಂಟ್ ತಿಳಿಸಿತ್ತು

     ಕೌಂಟರ್ ಪಾಯಿಂಟ್ ಸಂಸ್ಥೆಯ 2018ರ ಎರಡನೇ ವರದಿಗಳು:

     

  • ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿ-ಗತಿಗಳ ಬಗ್ಗೆ ವಿಡಿಯೋ ಕಳಿಸಿ: ಲಂಡನ್ ಕೋರ್ಟ್

    ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿ-ಗತಿಗಳ ಬಗ್ಗೆ ವಿಡಿಯೋ ಕಳಿಸಿ: ಲಂಡನ್ ಕೋರ್ಟ್

    ನವದೆಹಲಿ: ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯನನ್ನು ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಕೋರ್ಟ್ ದೇಶದಲ್ಲಿರುವ ಜೈಲುಗಳ ಸ್ಥಿತಿಗತಿಗಳ ಬಗ್ಗೆ ತಿಳಿಸುವಂತೆ ಸೂಚಿಸಿದೆ.

    ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಭಾರತದಿಂದ ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‍ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಂಡಿದೆ.

    ಭಾರತಕ್ಕೆ ಹಸ್ತಾಂತರಿಸುವ ಕುರಿತು ವಿಜಯ್ ಮಲ್ಯ ಪರ ವಕೀಲರು, ಭಾರತದಲ್ಲಿನ ಜೈಲುಗಳಲ್ಲಿ ಸರಿಯಾದ ಗಾಳಿ-ಬೆಳಕು ಇಲ್ಲ. ಹೀಗಾಗಿ ಹಸ್ತಾಂತರ ಮಾಡಲು ಅನುಮತಿ ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

    ಈ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು, ವ್ಯಕ್ತಿಯೊಬ್ಬ ಜೈಲಿನೊಳಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಚಿತ್ರಿಸಿ ಕಳುಹಿಸಿ. ಅದು ಮಧ್ಯಾಹ್ನದ ಹೊತ್ತಿನಲ್ಲಿ ಸೂರ್ಯನ ಬೆಳಕು ಜೈಲಿನಲ್ಲಿ ಅಗಾಧವಾಗಿ ಪ್ರವೇಶಿಸುವಂತಿರಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

    ಭಾರತ ಸರ್ಕಾರದ ಪರ ವಾದಿಸಿದ ವಕೀಲ ಮಾರ್ಕ್ ಸಮ್ಮರ್, ಮಾನವ ಹಕ್ಕು ಆಯೋಗ ನಿಗದಿಪಡಿಸಿದ ಮಾನದಂಡದ ಆಧಾರದಲ್ಲಿ ಜೈಲುಗಳನ್ನು ನಿರ್ಮಿಸಲಾಗಿದೆ. ವಿಜಯ್ ಮಲ್ಯ ಕೂಡಿ ಹಾಕುವ ಬ್ಯಾರಕ್ ನಲ್ಲಿ ಶುದ್ಧವಾದ ಗಾಳಿ ಬೆಳಕು ಇರಲಿದೆ. ಅಷ್ಟೇ ಅಲ್ಲದೇ ಪಾಶ್ಚಿಮಾತ್ಯ ಶೈಲಿಯ ಶೌಚಾಲಯ, ಶುಭ್ರವಾದ ಬೆಡ್ ನೀಡಲಾಗುವುದು ಎಂದು ತಿಳಿಸಿದರು.

    ಮುಂಬೈನ ಆರ್ಥರ್ ರೋಡ್ ಜೈಲಿನ ವಿಡಿಯೋಗಳನ್ನು ಸಲ್ಲಿಸುವಂತೆ ತಿಳಿಸಿದ್ದು, ಮುಂದಿನ ವಿಚಾರಣೆಯಲ್ಲಿ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಮದ್ಯದೊರೆ ಮಲ್ಯಗೆ 6 ವಾರಗಳ ಸಮಯ ಬಿಗ್ ರಿಲೀಫ್ ಸಿಕ್ಕಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಪರ ವಾದಿಸುತ್ತಿರುವ ವಕೀಲರ ತಂಡ ಮುಂಬೈ ಅರ್ಥರ್ ರೋಡ್ ಜೈಲಿನ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಭಾರತ ಸರ್ಕಾರ ಪರ ಆದೇಶ ನೀಡಿದರೆ, ವಿಜಯ ಮಲ್ಯ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ.

  • ಟಿಸಿಎಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್!

    ಟಿಸಿಎಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್!

    ಮುಂಬೈ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಕಂಪೆನಿಯನ್ನು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾಗಿ ಹೊರಹೊಮ್ಮಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ತನ್ನ ಷೇರಿನ ಬೆಲೆ 2.4% ಏರಿಕೆಯಾದ ಹಿನ್ನೆಲೆಯಲ್ಲಿ ರಿಲಯನ್ಸ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ರಿಲಯನ್ಸ್ ಷೇರಿನ ಬೆಲೆ 2.4% ಏರಿಕೆಯಾದ ಪರಿಣಾಮ ಮಂಗಳವಾರ  ಒಂದು ಷೇರಿನ ಬೆಲೆ 1,177 ರೂ. ಇದ್ದರೆ, ಟಿಸಿಎಸ್ ಒಂದು ಷೇರಿನ ಬೆಲೆ 1,930 ರೂ. ಇತ್ತು. ಟಿಸಿಎಸ್ 7.39 ಲಕ್ಷ ಕೋಟಿ ರೂ. ಮೌಲ್ಯದ ಕಂಪೆನಿಯಾಗಿದ್ದರೆ ರಿಲಯನ್ಸ್ ಈಗ 7.46 ಲಕ್ಷ ಕೋಟಿ ರೂ. ಮೌಲ್ಯದ ಕಂಪೆನಿಯಾಗಿ ಹೊರಹೊಮ್ಮಿದೆ.

    ಕಳೆದ ಎರಡು ತಿಂಗಳಿನಿಂದ ರಿಲಯನ್ಸ್ ಷೇರು ಏರಿಕೆ ಕಾಣುತ್ತಿದ್ದು, ವಿಶೇಷವಾಗಿ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಜಿಯೋದಿಂದಾಗಿ ಏರಿಕೆಯಾಗುತ್ತಿದೆ.

    ಶುಕ್ರವಾರ ರಿಲಯನ್ಸ್ ಕಂಪೆನಿ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಏಪ್ರಿಲ್-ಜೂನ್ ಅವಧಿಯಲ್ಲಿ 9,459 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ಸಂಸ್ಥೆ ಕಳೆದ ವರ್ಷ ಇದೇ ಅವಧಿಯಲ್ಲಿ 8,021 ಕೋಟಿ ರೂ. ಲಾಭ ದಾಖಲಿಸಿತ್ತು. ಇದನ್ನೂ ಓದಿ: ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

     

     

  • ಭಾರತವನ್ನು ಬಿಟ್ಟು ಜಗತ್ತನ್ನು ವರ್ಣಿಸಲು ಸಾಧ್ಯವಿಲ್ಲ: ಉಗಾಂಡ ಉಪ ಪ್ರಧಾನಿ

    ಭಾರತವನ್ನು ಬಿಟ್ಟು ಜಗತ್ತನ್ನು ವರ್ಣಿಸಲು ಸಾಧ್ಯವಿಲ್ಲ: ಉಗಾಂಡ ಉಪ ಪ್ರಧಾನಿ

    ಬಾಗಲಕೋಟೆ: ಭಾರತವನ್ನು ಬಿಟ್ಟು ಜಗತ್ತನ್ನು ವರ್ಣಿಸಲು ಸಾಧ್ಯವಿಲ್ಲವೆಂದು ಉಗಾಂಡ ದೇಶದ ಎರಡನೇ ಉಪ ಪ್ರಧಾನಿ ಡಾ. ಅಲಿ ಕಿರುಂದಾ ಕಿವಿಜೆಂಜಾರವರು ಅಭಿಪ್ರಾಯಪಟ್ಟಿದ್ದಾರೆ.

    ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಪಾಲಿಟೆಕ್ನಿಕ್ ಕಾಲೇಜಿಗೆ ಉಗಾಂಡ ದೇಶದ ಎರಡನೇ ಉಪ ಪ್ರಧಾನಿ ಡಾ. ಅಲಿ ಕಿರುಂದಾ ಕಿವಿಜೆಂಜಾರವರು ತಮ್ಮ ದೇಶದ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮದವರು ಜಗತ್ತಿನಲ್ಲಿನ ಭಯೋತ್ಪಾದನೆ ನಿರ್ಮೂಲನೆ ಕುರಿತು ಅವರನ್ನು ಪ್ರಶ್ನಿಸಿದಾಗ, ಭಾರತ ಜಗತ್ತಿನಲ್ಲೇ ದೊಡ್ಡ ದೇಶವಾಗಿದೆ. ಅಲ್ಲದೇ ಎರಡನೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದ್ದು, ಆರ್ಥಿಕವಾಗಿ ಐದನೇ ಸ್ಥಾನದಲ್ಲಿದೆ. ಹೀಗಾಗಿ ಭಾರತವನ್ನು ಬಿಟ್ಟು ಇಡೀ ಜಗತ್ತನ್ನು ವರ್ಣಿಸಲು ಅಸಾಧ್ಯ. ಅಲ್ಲದೇ ಭಯೋತ್ಪಾದನೆ ನಿರ್ಮೂಲನೆಗೆ ಕುರಿತು ಭಾರತ ಮಹತ್ವದ ಸ್ಥಾನದಲ್ಲಿದೆ ಎಂದರು.

    ಪ್ರಧಾನಿ ಮೋದಿಯವರು ಇತ್ತೀಚೆಗೆ ಉಗಾಂಡಾ ದೇಶಕ್ಕೆ ಭೇಟಿ ನೀಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಭೇಟಿಯಿಂದ ಎರಡೂ ದೇಶಗಳ ನಡುವೆ ಭವಿಷ್ಯದಲ್ಲಿ ಉತ್ತಮ ಬಾಂಧವ್ಯ ನಿರ್ಮಿಸುವ ದೃಷ್ಟಿಯಿಂದ ಎರಡೂ ದೇಶದ ಪ್ರತಿನಿಧಿಗಳೊಂದಿಗೆ ಸಾಕಷ್ಟು ವಿಷಯಗಳು ಚರ್ಚೆಯಾಗಿದ್ದು, ಭಾರತದೊಂದಿಗಿನ ಉತ್ತಮ ಬಾಂಧವ್ಯಕ್ಕೆ ಪ್ರಧಾನಿ ಭೇಟಿ ಒಂದು ಉತ್ತಮ ವೇದಿಕೆಯಾಗಿತ್ತು ಎಂದು ತಿಳಿಸಿದರು.

    ಬಸವೇಶ್ವರ ವಿದ್ಯಾವರ್ಧಕ ಸಂಘದ ಪಾಲಿಟೆಕ್ನಿಕ್ ವಿಭಾಗದ ಮುಖ್ಯಸ್ಥರೊಂದಿಗೆ ಇಲ್ಲಿನ ಶಿಕ್ಷಣದ ಕೌಶಲ್ಯಗಳು, ಶಿಕ್ಷಣದ ಗುಣಮಟ್ಟ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಲಿ ಕಿರುಂದಾ ಕಿವಿಜೆಂಜಾ ಚರ್ಚೆ ನಡೆಸಿದರು.

  • ಇಂದು ವಿಶ್ವ ಹುಲಿ ದಿನಾಚರಣೆ

    ಇಂದು ವಿಶ್ವ ಹುಲಿ ದಿನಾಚರಣೆ

    -ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ ಎಷ್ಟು ಗೊತ್ತಾ?

    ಬೆಂಗಳೂರು: ಇಂದು ವಿಶ್ವ ಹುಲಿ ದಿನಾಚರಣೆಯಾಗಿದ್ದು, ನಮ್ಮ ರಾಷ್ಟ್ರೀಯ ಪ್ರಾಣಿಯಾದ ಹುಲಿಗಳ ಸಂಖ್ಯೆ ಕರ್ನಾಟಕದಲ್ಲಿಯೇ ಅತಿಹೆಚ್ಚು ಇರುವುದು ನಮ್ಮ ಹೆಮ್ಮೆಯ ಸಂಗತಿಯಾಗಿದೆ.

    ಹೌದು, 2014ರ ಹುಲಿಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 2,264 ಹುಲಿಗಳಿದ್ದು, ಕರ್ನಾಟಕದಲ್ಲಿಯೇ ಸುಮಾರು 229 ಹುಲಿಗಳು ಕಂಡುಬರುತ್ತವೆ. ಈ ಮೂಲಕ ರಾಷ್ಟ್ರದಲ್ಲಿಯೇ ಅತಿಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕ ರಾಜ್ಯ ಪಾತ್ರವಾಗಿದೆ. ರಾಜ್ಯದ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳು ಹುಲಿ ಸಂರಕ್ಷಿತ ಅಭಯಾರಣ್ಯಗಳಾಗಿವೆ.

    ಏನಿದು ಹುಲಿ ದಿನ?
    ಹುಲಿ ಸಂರಕ್ಷಣೆ ಮತ್ತು ಸಾರ್ವಜನಿಕರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2010 ರ ಜುಲೈ 29ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೆಂಟ್ ಪೀಟರ್ ಬರ್ಗ್‍ನಲ್ಲಿ ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಹುಲಿ ಸಂರಕ್ಷಣೆ ಕುರಿತು ಚರ್ಚೆ, ಉಪನ್ಯಾಸ, ಜಾಥಾ, ವಿಚಾರ ಸಂಕಿರಣ ಹಾಗೂ ಛಾಯಾಚಿತ್ರ ಪ್ರದರ್ಶನ ದೇಶಾದ್ಯಂತ ನಡೆಯುತ್ತದೆ. ಇಂದಿನ ದಿನಗಳಲ್ಲಿ ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಹುಲಿ ಸಂರಕ್ಷಣೆಯನ್ನು ಉತ್ತೇಜಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

    ಜಗತ್ತಿನ 13 ದೇಶಗಳಲ್ಲಿ ಮಾತ್ರ ಹುಲಿ ಸಂತತಿ ಬರುತ್ತದೆ. ವಿಶ್ವದಲ್ಲಿ ಒಟ್ಟು 6 ಜಾತಿಯ ಹುಲಿಗಳಿದ್ದು, ಅತಿಹೆಚ್ಚು ಹುಲಿಗಳು ಏಷ್ಯಾಖಂಡದಲ್ಲಿಯೇ ಕಾಣಸಿಗುತ್ತವೆ. ಭಾರತದಲ್ಲಿಯೇ ಸುಮಾರು 2,264 ಕ್ಕೂ ಹೆಚ್ಚು ಹುಲಿಗಳಿದ್ದು, 6000 ಹುಲಿಗಳು ವಾಸ ಮಾಡುವಷ್ಟು ಅರಣ್ಯ ಪ್ರದೇಶವನ್ನು ನಾವು ಹೊಂದಿದ್ದೇವೆ. ಅಲ್ಲದೇ 50 ಹುಲಿ ಸಂರಕ್ಷಿತ ಅಭಯಾರಣ್ಯಗಳನ್ನು ಭಾರತ ಹೊಂದಿದೆ.