Tag: India vs West Indies

  • ಸ್ಮೃತಿ ಮಂದಾನ, ಕೌರ್ ಶತಕದ ವೈಭವ – ವಿಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ಸ್ಮೃತಿ ಮಂದಾನ, ಕೌರ್ ಶತಕದ ವೈಭವ – ವಿಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ವೆಲ್ಲಿಂಗ್ಟನ್: ಮಹಿಳಾ ವಿಶ್ವಕಪ್‍ನ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾದ ಬ್ಯಾಟರ್‌ಗಳಾದ ಸ್ಮೃತಿ ಮಂದಾನ ಮತ್ತು ಹರ್ಮನ್‍ಪ್ರೀತ್ ಕೌರ್ ಭರ್ಜರಿ ಶತಕದ ನೆರವಿನಿಂದ ಭಾರತ 155 ರನ್‍ಗಳ ಜಯ ಸಾಧಿಸಿದೆ.

    ಟೀಂ ಇಂಡಿಯಾ ನೀಡಿದ 317 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ವಿಂಡೀಸ್ ಬ್ಯಾಟರ್‌ಗಳು 162 ರನ್‌ಗಳಿಗೆ ಸರ್ವಪನತ ಕಂಡು ಸೋಲೊಪ್ಪಿಕೊಂಡರು. ಭಾರತ 155 ರನ್‌ಗಳ  ಜಯದೊಂದಿಗೆ ಕೂಟದ ಎರಡನೇ ಬೃಹತ್ ಮೊತ್ತದ ಜಯ ದಾಖಲಿಸಿದೆ. ಇದನ್ನೂ ಓದಿ: ಡೇ – ನೈಟ್ ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಸಜ್ಜು – 2 ವರ್ಷಗಳ ಬಳಿಕ ಚಿನ್ನಸ್ವಾಮಿಯಲ್ಲಿ ಟೀಂ ಇಂಡಿಯಾ ಕಾದಾಟ

    ವೆಸ್ಟ್ ಇಂಡೀಸ್ ತಂಡದ ಆರಂಭಿಕ ಜೋಡಿ, ಡಿಯಾಂಡ್ರಾ ಡಾಟಿನ್ 62 ರನ್ (46 ಎಸೆತ, 10 ಬೌಂಡರಿ, 1 ಸಿಕ್ಸ್) ಮತ್ತು ಹೇಲಿ ಮ್ಯಾಥ್ಯೂಸ್ ಜೋಡಿ 43 ರನ್ (36 ಎಸೆತ, 6 ಬೌಂಡರಿ) ಬಾರಿಸಿ ಮೊದಲ ವಿಕೆಟ್‍ಗೆ 100 ರನ್‍ಗಳ ಜೊತೆಯಾಟವಾಡಿತು. ಈ ಇಬ್ಬರು ಬ್ಯಾಟರ್‌ಗಳು ಔಟ್ ಆದ ಬಳಿಕ ಕುಸಿತ ಕಂಡ ವಿಂಡೀಸ್, ಭಾರತಕ್ಕೆ ಸವಾಲು ಅನಿಸಲೇ ಇಲ್ಲ. ಭಾರತದ ಬೌಲರ್‌ಗಳು ವಿಂಡೀಸ್ ಬ್ಯಾಟರ್‌ಗಳ ವಿಕೆಟ್ ಬೇಟೆಯನ್ನು ಸರಾಗವಾಗಿ ಮುಂದುವರಿಸಿ 162 ರನ್‌ಗಳಿಗೆ ಕಟ್ಟಿಹಾಕಿ ಗೆಲ್ಲುವಂತೆ ಮಾಡಿದರು. ಇದನ್ನೂ ಓದಿ: ಐಸಿಸಿ ಮಹಿಳಾ ವಿಶ್ವಕಪ್ 2022: ಬೃಹತ್ ದಾಖಲೆ ಬರೆದ ಮಿಥಾಲಿ ರಾಜ್

    ಭಾರತದ ಪರ ಸ್ನೇಹ ರಾಣಾ 3 ವಿಕೆಟ್‌ ಕಿತ್ತು ಮಿಂಚಿದರೆ, ಮೇಘನಾ ಸಿಂಗ್  2 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕರ್, ಜೂಲನ್ ಗೋಸ್ವಾಮಿ ತಲಾ 1 ವಿಕೆಟ್ ಪಡೆಯಲು ಯಶಸ್ವಿಯಾದರು.

    ಸ್ಮೃತಿ ಮಂದಾನ, ಕೌರ್ ಬ್ಯಾಟಿಂಗ್ ವೈಭವ:
    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬ್ಯಾಟರ್‌ಗಳು ವಿಂಡೀಸ್ ಬೌಲರ್‌ಗಳ ಬೆವರಿಳಿಸಿದರು. ಅದರಲ್ಲೂ ಸ್ಮೃತಿ ಮಂದಾನ ಮತ್ತು ಹರ್ಮನ್‍ಪ್ರೀತ್ ಕೌರ್ ಮನಸೋ ಇಚ್ಛೆ ಬ್ಯಾಟ್ ಬೀಸಿದರು. ಈ ಜೋಡಿ 4 ವಿಕೆಟ್‍ಗೆ 184 ರನ್ (174 ಎಸೆತ) ಜೊತೆಯಾಟವಾಡಿ ಮಿಂಚಿತು. ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಲಸಿತ್‌ ಮಾಲಿಂಗ ನೇಮಕ

    ಸ್ಮೃತಿ ಮಂದಾನ 123 ರನ್ (119 ಎಸೆತ, 13 ಬೌಂಡರಿ, 2 ಸಿಕ್ಸ್) ಚಚ್ಚಿದರೆ, ಹರ್ಮನ್‍ಪ್ರೀತ್ ಕೌರ್ 109 ರನ್ (107 ಎಸೆತ, 10 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಂಡೀಸ್ ಬೌಲರ್‌ಗಳನ್ನು ಬೆಂಡೆತ್ತಿದರು. ಇವರಿಬ್ಬರನ್ನು ಹೊರತುಪಡಿಸಿ ಯಾಸ್ತಿಕಾ ಭಾಟಿಯಾ 31 ರನ್ (21 ರನ್, 21 ಎಸೆತ, 6 ಬೌಂಡರಿ) ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ 50 ಓವರ್‌ಗಳಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 317 ರನ್ ಗಳಿಸಿತು.

    ರನ್ ಏರಿದ್ದು ಹೇಗೆ?
    50 ರನ್ 42 ಎಸೆತ
    100 ರನ್ 121 ಎಸೆತ
    150 ರನ್ 169 ಎಸೆತ
    200 ರನ್ 217 ಎಸೆತ
    250 ರನ್ 251 ಎಸೆತ
    300 ರನ್ 287 ಎಸೆತ

  • ಧೋನಿ ಅನುಪಸ್ಥಿತಿ ರಿಷಬ್ ಪಂತ್‍ಗೆ ಉತ್ತಮ ಅವಕಾಶ: ವಿರಾಟ್ ಕೊಹ್ಲಿ

    ಧೋನಿ ಅನುಪಸ್ಥಿತಿ ರಿಷಬ್ ಪಂತ್‍ಗೆ ಉತ್ತಮ ಅವಕಾಶ: ವಿರಾಟ್ ಕೊಹ್ಲಿ

    ಜಮೈಕಾ: ವೆಸ್ಟ್ ಇಂಡೀಸ್ ಟೂರ್ನಿಗೆ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಎಂ.ಎಸ್ ಧೋನಿ ಅವರ ಅನುಪಸ್ಥಿತಿ ಯುವ ಆಟಗಾರ ರಿಷಬ್ ಪಂತ್‍ಗೆ ಉತ್ತಮ ಅವಕಾಶ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಮೊದಲ ಟಿ-20 ಪಂದ್ಯದ ಮುನ್ನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ರಿಷಬ್ ಪಂತ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಸ್ಥಿರ ಪ್ರದರ್ಶನ ನೀಡಬೇಕು. ಧೋನಿ ಅವರ ಅನುಪಸ್ಥಿತಿಯಲ್ಲಿ ಅವರು ಚೆನ್ನಾಗಿ ಆಡಬೇಕು ಎಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

    ಎಂ.ಎಸ್ ಧೋನಿ ಅವರು ಅನುಭವ ಯಾವಾಗಲೂ ನಮ್ಮ ತಂಡಕ್ಕೆ ಬೇಕು. ಆದರೆ ಅವರ ಅನುಪಸ್ಥಿತಿ ರಿಷಬ್ ಪಂತ್ ರೀತಿಯ ಯುವ ಆಟಗಾರರಿಗೆ ಒಳ್ಳೆಯ ಅವಕಾಶ. ಇದನ್ನು ಅವರ ಬಳಸಿಕೊಂಡು ಅವರ ಸಾಮರ್ಥ್ಯವನ್ನು ಸಾಬೀತು ಮಾಡಬೇಕು. ನಮಗೆ ಗೊತ್ತು ರಿಷಬ್ ಪಂತ್ ತುಂಬಾ ಒಳ್ಳೆಯ ಆಟಗಾರ. ರಿಷಬ್ ಪಂತ್ ಕೆಳ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡಬೇಕು ಎಂದು ನಾವು ಬಯಸುತ್ತೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಎಂ.ಎಸ್.ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ, ರವೀಂದ್ರ ಜಡೇಜಾ, ಕ್ರುನಾಲ್ ಪಾಂಡ್ಯ, ರಿಷಬ್ ಪಂತ್ ಮುಂತಾದವರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಯಾರು ಫಿನಿಶರ್ ಪಾತ್ರವನ್ನು ನಿರ್ವಹಿಸುವ ಅವಕಾಶವನ್ನು ಬಳಸಿಕೊಳ್ಳುತ್ತಾರೆ ನೋಡಬೇಕು ಎಂದು ಕೊಹ್ಲಿ ಹೇಳಿದ್ದಾರೆ.

    ಈ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ ಮತ್ತು ಧೋನಿ ವಿಶ್ವಕಪ್ ನಂತರ 2 ತಿಂಗಳ ವಿಶ್ರಾಂತಿ ತೆಗೆದುಕೊಂಡಿದ್ದು, ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನೆಯೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಈ ಇಬ್ಬರು ಕೆಳ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳ ಅನುಪಸ್ಥಿತಿಯಲ್ಲಿ, ಈ ಟೂರ್ನಿಯಲ್ಲಿ ಯಾರು ಚೆನ್ನಾಗಿ ಆಡುತ್ತಾರೆ ನೋಡಬೇಕಿದೆ.

    ಈ ನಿಟ್ಟಿನಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್‍ಗಾಗಿ ಭಾರತ ತಂಡವನ್ನು ಸಿದ್ಧ ಮಾಡಲು ನಾವು ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ರಿಷಭ್ ಪಂತ್‍ಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದೇವೆ ಎಂದು ಭಾರತೀಯ ಆಯ್ಕೆ ಅಮಿತಿ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ಸುಳಿವು ನೀಡಿದ್ದರು.

    ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ ಇಂತಿದೆ.

    1. ಟಿ-20 ಸರಣಿ
    * ಆಗಸ್ಟ್ 3 (ಶನಿವಾರ) ಮೊದಲ ಟಿ-20 ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 4 (ಭಾನುವಾರ) ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ, ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 6 (ಮಂಗಳವಾರ) ಗಯಾನಾದ ಪ್ರಾವಿಡೆನ್ಸ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)

    ಟಿ-20 ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹರ್ ಹಾಗೂ ನವದೀಪ್ ಸೈನಿ.

    2. ಏಕದಿನ ಸರಣಿ
    * ಆಗಸ್ಟ್ 8 (ಗುರುವಾರ) ಮೊದಲನೇ ಏಕದಿನ- ಗಯಾನಾದ ಪ್ರಾವಿಡೆನ್ಸ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 11 (ಭಾನುವಾರ) ಎರಡನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 14 (ಬುಧವಾರ) ಮೂರನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)

    ಏಕದಿನ ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ನವದೀಪ್ ಸೈನಿ.

    3. ಟೆಸ್ಟ್ ಸರಣಿ
    * ಆಗಸ್ಟ್ 22 ಗುರುವಾರ ದಿಂದ ಆಗಸ್ಟ್ 26 ಸೋಮವಾರದ ವರಗೆ 1 ನೇ ಟೆಸ್ಟ್ ಆಂಟಿಗುವಾದ ಸರ್ ವಿವಿಯನ್ ರಿಚಡ್ರ್ಸ್ ಮೈದಾನದಲ್ಲಿ
    * ಆಗಸ್ಟ್ 30 ಶುಕ್ರವಾರದಿಂದ ಸೆಪ್ಟೆಂಬರ್ 03 ಮಂಗಳವಾರದ ವರೆಗೆ 2 ನೇ ಟೆಸ್ಟ್ ಜಮೈಕಾದ ಸಬಿನಾ ಪಾರ್ಕ್ ಮೈದಾನದಲ್ಲಿ

    ಟೆಸ್ಟ್ ತಂಡ:
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ಕೆ. ಎಲ್.ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಉಮೇಶ್ ಯಾದವ್.

  • ಕೊನೆಯ ಓವರ್‌ನಲ್ಲಿ ಧೋನಿ 2 ಸಿಕ್ಸ್, ವಿಂಡೀಸ್‍ಗೆ 269 ರನ್ ಗುರಿ

    ಕೊನೆಯ ಓವರ್‌ನಲ್ಲಿ ಧೋನಿ 2 ಸಿಕ್ಸ್, ವಿಂಡೀಸ್‍ಗೆ 269 ರನ್ ಗುರಿ

    ಮ್ಯಾಂಚೆಸ್ಟರ್: ವಿಶ್ವಕಪ್ ಕ್ರಿಕೆಟ್‍ನಲ್ಲಿ ವಿಂಡೀಸ್‍ಗೆ ಭಾರತ 269 ರನ್‍ಗಳ ಗುರಿಯನ್ನು ನೀಡಿದೆ.

    ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‍ಗಳ ವೈಫಲ್ಯದ ನಡುವೆಯೂ ಕೊಹ್ಲಿ, ಧೋನಿ ಅರ್ಧಶತಕ, ಪಾಂಡ್ಯ, ರಾಹುಲ್ ಉತ್ತಮ ಆಟದಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 268 ರನ್ ಗಳಿಸಿತು. ಇದನ್ನೂ ಓದಿ: ಸಚಿನ್, ಲಾರಾ ಹಿಂದಿಕ್ಕಿ ಕೊಹ್ಲಿ ವಿಶ್ವದಾಖಲೆ

    38.2 ಓವರ್‌ಗಳಲ್ಲಿ 180 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಾಗ ಭಾರತ 250 ರನ್‍ಗಳ ಗಡಿಯನ್ನು ದಾಟುವುದು ಅನುಮಾನವಾಗಿತ್ತು. ಆದರೆ ಪಾಂಡ್ಯ ಮತ್ತು ಧೋನಿ ಗಟ್ಟಿ ನಿಂತು ಆಡಿದ ಪರಿಣಾಮ ಭಾರತ ಉತ್ತಮ ಮೊತ್ತವನ್ನು ಪೇರಿಸಿದೆ.

    1 ಸಿಕ್ಸರ್, 1 ಬೌಂಡರಿ ಹೊಡೆದು ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 18 ರನ್ ಗಳಿಸಿ ಔಟಾದರು. ಮೂರನೇ ಅಂಪೈರ್ ಈ ಔಟ್ ತೀರ್ಪು ನೀಡಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: 3ನೇ ಅಂಪೈರ್ ಬೇಡ, 4ನೇ ಅಂಪೈರ್ ಬೇಕು – ಐಸಿಸಿ ವಿರುದ್ಧ ನೆಟ್ಟಿಗರು ಕಿಡಿ

    ಎರಡನೇ ವಿಕೆಟಿಗೆ ರಾಹುಲ್ ಮತ್ತು ಕೊಹ್ಲಿ 69 ರನ್ ಜೊತೆಯಾಟವಾಡಿದರು. ರಾಹುಲ್ 48 ರನ್(64 ಎಸೆತ, 4 ಬೌಂಡರಿ) ಹೊಡೆದರೆ ಕೊಹ್ಲಿ 72 ರನ್( 82 ಎಸೆತ, 8 ಬೌಂಡರಿ) ಹೊಡೆದು ಔಟಾದರು.

    ನಂತರ ಬಂದ ವಿಜಯ್ ಶಂಕರ್ ಮತ್ತು ಕೇದಾರ್ ಜಾಧವ್ ಕ್ರಮವಾಗಿ 14, 7 ರನ್ ಗಳಿಸಿ ಪೆವಿಲಿಯನ್‍ಗೆ ನಡೆದರು. ಕೊನೆಯಲ್ಲಿ ಧೋನಿ ಮತ್ತು ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸಿ 6ನೇ ವಿಕೆಟಿಗೆ 60 ಎಸೆತಗಳಲ್ಲಿ 70 ರನ್ ಜೊತೆಯಾಟವಾಡಿದರು. ಪಾಂಡ್ಯ 46 ರನ್(38 ಎಸೆತ, 5 ಬೌಂಡರಿ) ಹೊಡೆದರೆ ಧೋನಿ 56 ರನ್(61 ಎಸೆತ,3 ಬೌಂಡರಿ, 2 ಸಿಕ್ಸರ್) ಸಿಡಿಸಿದರು. 50ನೇ ಓವರ್‍ನಲ್ಲಿ ಧೋನಿ 2 ಸಿಕ್ಸರ್, ಒಂದು ಬೌಂಡರಿ ಸಿಡಿಸಿ ರನ್ ಏರಿಸಿದರು.

    ರೋಚ್ ಮೂರು ವಿಕೆಟ್ ಪಡೆದರೆ, ಕೊಟ್ರೆಲ್ ಮತ್ತು ಹೋಲ್ಡರ್ ತಲಾ 2 ವಿಕೆಟ್ ಪಡೆದರು.