Tag: India vs Sri Lanka

  • 48 ವರ್ಷಗಳಲ್ಲೇ ಮೊದಲು! ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬುಮ್ರಾ

    48 ವರ್ಷಗಳಲ್ಲೇ ಮೊದಲು! ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬುಮ್ರಾ

    ಮುಂಬೈ: ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಕ್ರಿಕೆಟ್ ವಿಶ್ವಕಪ್ ಪಂದ್ಯದ ವೇಳೆ ತಂಡದ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟ್ ತಂಡದ ಬೌಲರ್ ಎನಿಸಿಕೊಂಡಿದ್ದಾರೆ. 48 ವರ್ಷಗಳ ಇತಿಹಾಸದಲ್ಲೇ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತಕ್ಕೆ ಬುಮ್ರಾ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

    ವಾಂಖೆಡೆ ಮೈದಾನದಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಮೊದಲ ಓವರ್‌ ಬೌಲಿಂಗ್‌ ಮಾಡಿದರು. ಮೊದಲ ಎಸೆತದಲ್ಲೇ ಪಾತುಮ್ ನಿಸ್ಸಾಂಕಾ ಎಲ್‌ಬಿಡಬ್ಲ್ಯು ಆದರು. ಬ್ಯಾಟ್‌ಗೆ ಸಿಗದ ಬಾಲ್‌ ವೇಗವಾಗಿ ಹೋಗಿ ಪ್ಯಾಡ್‌ಗೆ ಬಡಿಯಿತು. ಅಂಪೈರ್ ಅದನ್ನು ಔಟ್ ಎಂದು ತೀರ್ಪು ನೀಡಿದರು. ಡಿಆರ್‌ಎಸ್‌ನಲ್ಲೂ ಅದು ಔಟ್‌ ಎಂದು ದೃಢಪಟ್ಟಿತು. ಭಾರತದ ಯಾವ ಬೌಲರ್‌ ಕೂಡ ಈ ಸಾಧನೆಯನ್ನು ಮಾಡಿಲ್ಲ. ಇದನ್ನೂ ಓದಿ: ಶತಕ ಮಿಸ್‌ ಆದ್ರೂ ಸಚಿನ್‌ ದಾಖಲೆ ಮುರಿದ ಕಿಂಗ್‌ ಕೊಹ್ಲಿ

    ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಮತ್ತೊಂದು ದಾಖಲೆ ಆಗಿದೆ. ವಿರಾಟ್‌ ಕೊಹ್ಲಿ ಭಾರತ ತಂಡದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರ ಮತ್ತೊಂದು ದಾಖಲೆಯನ್ನು ಮುರಿದು ಇತಿಹಾಸ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್‌ ವರ್ಷದಲ್ಲಿ 8 ಬಾರಿ 1,000 ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಚಿನ್‌ ತೆಂಡೂಲ್ಕರ್‌ 7 ಬಾರಿ ಈ ಸಾಧನೆ ಮಾಡಿದ್ದರು.

    ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 8 ವಿಕೆಟ್‌ ನಷ್ಟಕ್ಕೆ 357 ರನ್‌ ಗಳಿಸಿತ್ತು. ಬೃಹತ್‌ ರನ್‌ ಗುರಿ ಬೆನ್ನತ್ತಿದ ಶ್ರೀಲಂಕಾ ಹೀನಾಯ ಸೋಲನುಭವಿಸಿತು. ಕೇವಲ 19.4 ಓವರ್‌ಗಳಲ್ಲೇ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 55 ರನ್‌ ಮಾತ್ರ ಗಳಿಸಿತು. ಭಾರತ 302 ರನ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: ಪ್ರಧಾನಿ ಮೋದಿಗೆ ದೇಶದಲ್ಲೇ ಸಿಗದಂತಹ ಗಿಫ್ಟ್ ಕೊಟ್ಟ ಕಾಫಿನಾಡ ಅಂಧ ಅಥ್ಲೀಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ-ಶ್ರೀಲಂಕಾ ನಡುವೆ ಟಿ20 ಕ್ಲೈಮ್ಯಾಕ್ಸ್‌ – ರಾಜ್‍ಕೋಟ್‍ನಲ್ಲಿ ಗೆದ್ದವರಿಗೆ ಕಿರೀಟ

    ಭಾರತ-ಶ್ರೀಲಂಕಾ ನಡುವೆ ಟಿ20 ಕ್ಲೈಮ್ಯಾಕ್ಸ್‌ – ರಾಜ್‍ಕೋಟ್‍ನಲ್ಲಿ ಗೆದ್ದವರಿಗೆ ಕಿರೀಟ

    ರಾಜ್‍ಕೋಟ್: ಭಾರತ (India) ಹಾಗೂ ಶ್ರೀಲಂಕಾ (Sri Lanka) ನಡುವೆ ಇಂದು ಮೂರನೇ ಮತ್ತು ಅಂತಿಮ ಟಿ20 (T20I) ಪಂದ್ಯ ನಡೆಯಲಿದೆ. ಇದೀಗ ಸರಣಿ 1-1 ಸಮಬಲ ಸಾಧಿಸಿರುವ ಕಾರಣ ಇಂದು ನಡೆಯುವ ಪಂದ್ಯ ಕುತೂಹಲ ಮೂಡಿಸಿದೆ.

    ರಾಜ್‍ಕೋಟ್‍ನಲ್ಲಿ (Rajkot) ಫೈನಲ್ ಫೈಟ್ ನಡೆಯಲಿದ್ದು, ಕ್ರಿಕೆಟ್ ಪ್ರೇಮಿಗಳು ಹೈವೋಲ್ಟೇಜ್ ಮ್ಯಾಚ್‍ಗಾಗಿ ಕಾದು ಕುಳಿತಿದ್ದಾರೆ. 3 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯವನ್ನು ಭಾರತ 2 ರನ್‍ಗಳಿಂದ ರೋಚಕವಾಗಿ ಗೆದ್ದುಕೊಂಡರೆ, 2 ಪಂದ್ಯವನ್ನು ಶ್ರೀಲಂಕಾ 16 ರನ್‍ಗಳ ಗೆಲುವಿನೊಂದಿಗೆ ಸರಣಿಯನ್ನು ಸಮಬಲ ಗೊಳಿಸಿಕೊಂಡಿದೆ. ಹಾಗಾಗಿ ಮೂರನೇ ಪಂದ್ಯ ಫೈನಲ್‍ನಂತೆ ಗೋಚರಿಸುತ್ತಿದ್ದು, ಗೆದ್ದವರು ಸರಣಿ ಕೈವಶ ಮಾಡಿಕೊಳ್ಳಲಿದ್ದಾರೆ. ಇದನ್ನೂ ಓದಿ: ನೋಬಾಲ್ ಎಸೆಯುವುದು ಅಪರಾಧ – ಅರ್ಶ್‍ದೀಪ್ ಸಿಂಗ್ ತಪ್ಪಿಗೆ ಚಾಟಿ ಬೀಸಿದ ಪಾಂಡ್ಯ

    ಟೀಂ ಇಂಡಿಯಾ ಟಿ20 ತಂಡದ ಸಾರಥ್ಯ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ರಾಜ್‍ಕೋಟ್‍ನಲ್ಲಿ ಗೆಲುವಿನ ಸಂಭ್ರಮಾಚರಣೆಗೆ ಕಾದು ಕುಳಿತಿದ್ದು, ಈ ಗೆಲುವಿನೊಂದಿಗೆ ಟಿ20 ತಂಡದ ಚುಕ್ಕಾಣಿ ಭದ್ರಪಡಿಸಿಕೊಳ್ಳುವ ಪ್ಲಾನ್‍ನಲ್ಲಿದ್ದಾರೆ. ಇನ್ನೊಂದೆಡೆ ಶ್ರೀಲಂಕಾ ಟಿ20 ಕ್ರಿಕೆಟ್‍ನಲ್ಲಿ ಶ್ರೇಷ್ಠ ಪ್ರದರ್ಶನದೊಂದಿಗೆ ತವರಿನಲ್ಲಿ ಭಾರತಕ್ಕೆ ಟಕ್ಕರ್ ನೀಡಲು ಹವಣಿಸುತ್ತಿದೆ.

    ಈಗಾಗಲೇ ನಡೆದಿರುವ 2 ಪಂದ್ಯಗಳು ಕೂಡ ಪೈಪೋಟಿಯಿಂದ ಕೊಡಿತ್ತು. ಪುಣೆಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ರನ್ ಹೊಳೆ ಹರಿದಿತ್ತು. ಬೌಂಡರಿ, ಸಿಕ್ಸರ್‌ಗಳ ಮೂಲಕ ಬ್ಯಾಟ್ಸ್‌ಮ್ಯಾನ್‌ಗಳು ವಿಜೃಂಭಿಸಿದ್ದರು. ಇದೀಗ ಮೂರನೇ ಪಂದ್ಯ ಭಾರೀ ಕುತೂಹಲ ಮೂಡಿಸಿದ್ದು, ಎರಡೂ ತಂಡಗಳು ಗೆಲುವಿಗಾಗಿ ಹೋರಾಡಲಿದೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿ ಸುರಿಮಳೆ – ಸ್ಫೋಟಕ ಅರ್ಧ ಶತಕ ಸಿಡಿಸಿ ದಾಖಲೆ ಬರೆದ ಅಕ್ಷರ್ ಪಟೇಲ್

    ಟೀಂ ಇಂಡಿಯಾ ಪರ ಮೊದಲೆರಡು ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಭಮನ್ ಗಿಲ್ ಉತ್ತಮ ಆರಂಭ ನೀಡಲು ವಿಫಲರಾಗಿದ್ದರು. ಹಾಗಾಗಿ ಅವರ ಸ್ಥಾನದಲ್ಲಿ ಋತುರಾಜ್ ಗಾಯಕ್ವಾಡ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಇನ್ನೊಂದೆಡೆ ಕಳೆದ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ರಾಹುಲ್ ತ್ರಿಪಾಠಿ ನಿರಾಸೆ ಮೂಡಿಸಿದ್ದರು. ಹಾಗಾಗಿ ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್‌ರನ್ನು ಕಣಕ್ಕಿಳಿಸುವ ಸಾಧ್ಯತೆ ಕಂಡುಬರುತ್ತಿದೆ. ಬೌಲಿಂಗ್‍ನಲ್ಲಿ ದುಬಾರಿಯಾದ ಅರ್ಶ್‍ದೀಪ್ ಸಿಂಗ್ ಬದಲು ಮತ್ತೆ ಹರ್ಷಲ್ ಪಟೇಲ್ ಸ್ಥಾನ ಪಡೆಯಬಹುದು. ಈ ಮೂರು ಬದಲಾವಣೆಯೊಂದಿಗೆ ಭಾರತ ಮೂರನೇ ಪಂದ್ಯವಾಡುವ ಸಾಧ್ಯತೆ ಗೋಚರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k