Tag: India vs Pakistan

  • ಪಾಕ್‌ ಬಗ್ಗುಬಡಿದು ಗೆದ್ದು ಬೀಗಿದ ಭಾರತ – ಫ್ಯಾನ್ಸ್‌ ಥ್ರಿಲ್‌

    ಪಾಕ್‌ ಬಗ್ಗುಬಡಿದು ಗೆದ್ದು ಬೀಗಿದ ಭಾರತ – ಫ್ಯಾನ್ಸ್‌ ಥ್ರಿಲ್‌

    ಬೆಂಗಳೂರು: ದೆಹಲಿಯಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ಪಾಕ್‌ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಕ್ರಿಕೆಟ್‌ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಟೀಂ ಇಂಡಿಯಾ ಗೆಲುವನ್ನು ಎಲ್ಲೆಡೆ ಸಂಭ್ರಮಾಚರಣೆ ಮಾಡಿದ್ದಾರೆ.

    ಬೆಂಗಳೂರಿನ ಹಲವೆಡೆ ರೋಹಿತ್‌ ಶರ್ಮಾ ಪಡೆ ಗೆಲುವನ್ನು ಸಂಭ್ರಮಿಸಲಾಗಿದೆ. ಭಾರತ ಗೆಲುವು ದಾಖಲಿಸುತ್ತಿದ್ದಂತೆ ಇತ್ತ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕಿಂಗ್‌ ಕೊಹ್ಲಿ ಶತಕವನ್ನು ಕೊಂಡಾಡಿದ್ದಾರೆ. ಇದನ್ನೂ ಓದಿ: ಕಿಂಗ್‌ ಕೊಹ್ಲಿ ಶತಕದೊಂದಿಗೆ ಭಾರತಕ್ಕೆ ವಿಜಯಮಾಲೆ – ಹೈವೋಲ್ಟೇಜ್‌ ಪಂದ್ಯದಲ್ಲಿ ಪಾಕ್‌ಗೆ ಸೋಲು

    ನಗರದ ಪಬ್‌ಗಳಲ್ಲಿ ಡಿಜೆ ಸಾಂಗ್‌ಗಳನ್ನು ಹಾಕಿ ಫ್ಯಾನ್ಸ್‌ ಕುಣಿದು ಕುಪ್ಪಳಿಸಿದ್ದಾರೆ. ಈ ಬಾರಿ ಭಾರತ ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲಿ ಎಂದು ಶುಭಹಾರೈಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಹನುಮಂತಪ್ಪ ವೃತ್ತದಲ್ಲಿ ಪಟಾಕಿ‌ ಸಿಡಿಸಿ ಸೆಲಬ್ರೇಟ್‌ ಮಾಡಿದ್ದಾರೆ. ಪಾಕಿಸ್ತಾನ ವಿರುದ್ದ ಧಿಕ್ಕಾರ ಕೂಗಿ, ವಿರಾಟ್ ಕೊಹ್ಲಿಗೆ ಜೈಕಾರ ಕೂಗಿದ್ದಾರೆ. ಇದೇ ವೇಳೆ, ನರೇಂದ್ರ ಮೋದಿಗೂ ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: Champions Trophy: ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್, 14,000 ರನ್ ಮೈಲುಗಲ್ಲು – ಎರಡು ದಾಖಲೆ ಬರೆದ ಕೊಹ್ಲಿ

    ಬೆಳಗಾವಿಯ ಗೊಂದಳಿ ಗಲ್ಲಿಯಲ್ಲಿ ಪಟಾಕಿ ಸಿಡಿಸಿ, ಮ್ಯೂಸಿಕ್‌ಗೆ ಡ್ಯಾನ್ಸ್ ಮಾಡಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಕ್ರಿಕೆಟ್‌ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.

    ಹುಬ್ಬಳ್ಳಿಯ ಚನ್ನಮ್ಮ ವೃತ್ತ, ಚಿತ್ರದುರ್ಗ, ರಾಯಚೂರು ಸೇರಿದಂತೆ ಹಲವೆಡೆ ಟೀಂ ಇಂಡಿಯಾ ಅಭಿಮಾನಿಗಳು ಗೆಲುವನ್ನು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಆಲೌಟ್‌ – ಭಾರತಕ್ಕೆ 242 ರನ್‌ಗಳ ಟಾರ್ಗೆಟ್‌

  • Women’s T20 World Cup; ಭಾರತ vs ಪಾಕಿಸ್ತಾನ ಫೈಟ್‌ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯ

    Women’s T20 World Cup; ಭಾರತ vs ಪಾಕಿಸ್ತಾನ ಫೈಟ್‌ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯ

    ದುಬೈ: ಮಹಿಳಾ ಟಿ20 ವಿಶ್ವಕಪ್‌ 2024 ಟೂರ್ನಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಟೀಂ ಇಂಡಿಯಾ ಇಂದು (ಭಾನುವಾರ) ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಆರಂಭಿಕ ಪಂದ್ಯದಲ್ಲೇ ಹೀನಾಯ ಸೋಲನುಭವಿಸಿದ್ದ ಟೀಂ ಇಂಡಿಯಾಗೆ ಇಂದಿನ ಪಂದ್ಯ ನಿರ್ಣಾಯಕವಾಗಿದೆ.

    ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಹಿಳೆಯರ ಟೀಂ ಇಂಡಿಯಾ, ಫಾತಿಮಾ ಸನಾ ನೇತೃತ್ವದ ಪಾಕಿಸ್ತಾನವನ್ನು ಎದುರಿಸಲಿದೆ. ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದ ವನಿತೆಯರು ಸೋಲನುಭವಿಸಿದ್ದರು. ನಂತರ ಶ್ರೀಲಂಕಾ ವಿರುದ್ಧ ಜಯ ಗಳಿಸಿತ್ತು.

    ಶುಕ್ರವಾರ ಕೀವಿಸ್‌ ವಿರುದ್ಧ ಭಾರತ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವೈಫಲ್ಯದಿಂದ 58 ರನ್‌ಗಳಿಂದ ಸೋಲೊಪ್ಪಿಕೊಂಡಿತು. ತಂಡವು ಈಗ ಕಳಪೆ ನೆಟ್‌ ರನ್‌ರೇಟ್‌ ಹೊಂದಿದ್ದು, 5 ತಂಡಗಳಿರುವ ‘ಎ’ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದೆ.

    ಪಾಕ್‌ ವಿರುದ್ಧ ಪಂದ್ಯ ಸೇರಿ ಇನ್ನೂ ಒಟ್ಟು 3 ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ. ಈ ಎಲ್ಲಾ ಪಂದ್ಯಗಳಲ್ಲೂ ಗೆಲ್ಲುವ ಅಗತ್ಯ ಇದೆ. ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಕದನವಾಗಿದೆ. ಒಂದು ವೇಳೆ ಪಾಕ್‌ ವಿರುದ್ಧ ಸೋತರೆ ಭಾರತ ಸೆಮಿಫೈನಲ್‌ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

    ಭಾರತ-ಪಾಕಿಸ್ತಾನ ನಡುವೆ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇದು 8 ನೇ ಪಂದ್ಯ. ಈ ಹಿಂದಿನ 7 ಪಂದ್ಯಗಳಲ್ಲಿ ಭಾರತ 5 ರಲ್ಲಿ ಜಯ ಸಾಧಿಸಿದ್ದು, 2ರಲ್ಲಿ ಸೋಲನುಭವಿಸಿದೆ. ಇಂದು ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ.

    ಟೀಂ ಇಂಡಿಯಾ ಆಟಗಾರರು: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೇಟ್‌ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ಆಶಾ ಸೋಭಾನಾ, ರೇಣುಕಾ ಸಿಂಗ್‌.

    ಪಾಕ್‌ ಆಟಗಾರರು: ಮುನೀಬಾ ಅಲಿ (ವಿಕೇಟ್‌ ಕೀಪರ್), ಗುಲ್ ಫಿರೋಜಾ, ಸಿದ್ರಾ ಅಮೀನ್, ಒಮೈಮಾ ಸೊಹೈಲ್, ನಿದಾ ದಾರ್, ತುಬಾ ಹಸನ್, ಫಾತಿಮಾ ಸನಾ (ಕ್ಯಾಪ್ಟನ್), ಅಲಿಯಾ ರಿಯಾಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.‌

  • ಲಯಕ್ಕೆ ಮರಳಿದ ರನ್ ಮಿಷಿನ್ ಕೊಹ್ಲಿಯಿಂದ ಮತ್ತೊಂದು ಸಾಧನೆ

    ಲಯಕ್ಕೆ ಮರಳಿದ ರನ್ ಮಿಷಿನ್ ಕೊಹ್ಲಿಯಿಂದ ಮತ್ತೊಂದು ಸಾಧನೆ

    ದುಬೈ: 15ನೇ ಆವೃತ್ತಿಯ ಐಪಿಎಲ್‌ನಿಂದ ಸತತವಾಗಿ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದ ರನ್ ಮಿಷಿನ್ ವಿರಾಟ್ ಕೊಹ್ಲಿ ಲಯಕ್ಕೆ ಮರಳಿದ್ದಾರೆ. ದೀರ್ಘಕಾಲದ ವಿರಾಮದ ನಂತರ ಏಷ್ಯಾಕಪ್ ಟೂರ್ನಿ-2022ಗೆ ಎಂಟ್ರಿ ಆಗಿರುವ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಮತ್ತೆ ಅಭಿಮಾನಿಗಳನ್ನ ಮೆಚ್ಚಿಸಿದ್ದಾರೆ.

    ಏಷ್ಯಾಕಪ್ ಟೂರ್ನಿ-2022 ಇಂಡೋ-ಪಾಕ್ ಕದನದಲ್ಲಿ 34 ರನ್‌ಗಳಿಸುವ ಫಾರ್ಮ್‌ಗೆ ಮರಳಿದ್ದ ಕೊಹ್ಲಿ ನಿನ್ನೆ ಹಾಂಕಾಂಗ್ ವಿರುದ್ಧ ನಡೆದ ಪಂದ್ಯದಲ್ಲಿ ಅಜೇಯ 59ರನ್ ಗಳಿಸುವ ಮೂಲಕ ಮತ್ತೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಇದೇ ವೇಳೆ ಅವರು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಸಾಧನೆಯನ್ನು ಸರಿದೂಗಿಸಿದ ಖ್ಯಾತಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ಕೊಹ್ಲಿ – 1 ಓವರ್ 6 ರನ್

    ಸತತ ಬ್ಯಾಟಿಂಗ್ ವೈಫಲ್ಯದಿಂದ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಮೂಲಕವೇ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ. 11 ಇನ್ನಿಂಗಸ್‌ಗಳ ಬಳಿಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: ಕೊಹ್ಲಿ, ಸೂರ್ಯ ಬ್ಯಾಟಿಂಗ್ ಬಿರುಗಾಳಿಗೆ ಕ್ರಿಕೆಟ್ ಶಿಶುಗಳು ಕಂಗಾಲು – ಸೂಪರ್ ಫೋರ್‌ಗೆ ಎಂಟ್ರಿ

    31ನೇ ಅರ್ಧಶತಕ ಬಾರಿಸಿದ ಕಿಂಗ್ ಕೊಹ್ಲಿ:
    ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಬಹುಸಮಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ್ದಾರೆ. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ 44 ಎಸೆತಗಳಲ್ಲಿ 59 ರನ್ ಸಿಡಿಸುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಬದುಕಿನ 31ನೇ ಅರ್ಧಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ.

    ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50ಕ್ಕಿಂತ ಅಧಿಕ ರನ್ ಹೊಡೆದ ಬ್ಯಾಟರ್ ಎಂಬ ಗೌರವಕ್ಕೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ರೋಹಿತ್ ಶರ್ಮಾ 27 ಅರ್ಧಶತಕ ಹಾಗೂ 4 ಶತಕಗಳನ್ನು ಬಾರಿಸಿದ್ದಾರೆ. 118 ರನ್ ಅವರ ವೈಯಕ್ತಿಕ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವಾಗಿದೆ. ಈಗ 59 ರನ್ ಹೊಡೆಯುವ ಮೂಲಕ 50ಕ್ಕಿಂತ ಅಧಿಕ ರನ್ ಹೊಡೆದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಜೊತೆ ವಿರಾಟ್‌ಗೂ ಸ್ಥಾನ ಸಿಕ್ಕಿದೆ.

    ಟೀಂ ಇಂಡಿಯಾ ಸ್ಟಾರ್ ವಿರಾಟ್ ಕೊಹ್ಲಿ, ತಮ್ಮ ಟಿ20-ವೃತ್ತಿಬದುಕಿನಲ್ಲಿ ಒಮ್ಮೆಯೂ ಶತಕ ಬಾರಿಸಿಲ್ಲ. ಆದರೆ 31 ಬಾರಿ 50+ ಸ್ಕೋರ್ ಮಾಡಿದ್ದಾರೆ. 94 ರನ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.

    ವಿರಾಟ್ ಕೊಹ್ಲಿ ಒಟ್ಟಾರೆ 101 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, 3,402 ರನ್‌ಗಳನ್ನು ಬಾರಿಸಿದ್ದರೆ, ರೋಹಿತ್ ಶರ್ಮಾ 134 ಪಂದ್ಯಗಳಿAದ 3,520 ರನ್‌ಗಳನ್ನು ಚಚ್ಚಿದ್ದಾರೆ. ಟಿ20-ಐನಲ್ಲಿ 3,500 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ರೋಹಿತ್ ಶರ್ಮಾ ಅವರದ್ದಾದರೇ, ಏಕದಿನ, ಟಿ20 ಹಾಗೂ ಟೆಸ್ಟ್ ಮೂರು ಮಾದರಿಯ ಪಂದ್ಯಗಳಲ್ಲಿ 100 ಪಂದ್ಯಗಳನ್ನು ಪೂರೈಸಿದ ಮೊದಲ ಭಾರತೀಯನ ಸಾಧನೆ ವಿರಾಟ್ ಕೊಹ್ಲಿ ಅವರಿಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೆಲವೇ ಗಂಟೆಗಳಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡ್ ಔಟ್

    ಕೆಲವೇ ಗಂಟೆಗಳಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡ್ ಔಟ್

    ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ- ಪಾಕಿಸ್ತಾನದ ರಣರೋಚಕ ಪಂದ್ಯ ವೀಕ್ಷಿಸಲು ಪ್ರತಿ ಬಾರಿ ಅಭಿಮಾನಿಗಳು ಹಾತೊರೆಯುತ್ತಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್‍ನ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಕೇವಲ 5 ಗಂಟೆಯಲ್ಲಿ ಸೋಲ್ಡ್ ಔಟ್ ಆಗಿದೆ ಎಂದು ಐಸಿಸಿ ತಿಳಿಸಿದೆ.

    ಅಕ್ಟೋಬರ್ 23 ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಪಂದ್ಯ ಮೆಲ್ಬರ್ನ್ ಮೈದಾನದಲ್ಲಿ ನಡೆಯಲಿದೆ. 1 ಲಕ್ಷ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಹೊಂದಿರುವ ಮೆಲ್ಬರ್ನ್ ವಿಶ್ವದ ಅತಿ ದೊಡ್ಡ ಮೈದಾನದಲ್ಲಿ ಒಂದಾಗಿದೆ. ಈ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ನಿನ್ನೆ ಆನ್‍ಲೈನ್‍ನಲ್ಲಿ ಮಾರಾಟಕ್ಕೆ ಐಸಿಸಿ ಅವಕಾಶ ನೀಡಿತ್ತು. ಇದೀಗ 60 ಸಾವಿರ ಫ್ರೀ-ಸೇಲ್ ಟಿಕೆಟ್ ಕೇವಲ 5 ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿರುವ ಬಗ್ಗೆ ಐಸಿಸಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್

    ಭಾರತ ಹಾಗೂ ಪಾಕಿಸ್ತಾನ ನಡುವಿನ 60 ಸಾವಿರ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆದರೂ ಅಫಿಶಿಯಲ್ ಹಾಸ್ಪಿಟಾಲಿಟಿ ಹಾಗೂ ಐಸಿಸಿ ಟ್ರಾವೆಲ್ಸ್ ಮತ್ತು ಟೂರ್ಸ್ ಯೋಜನೆಯಡಿ ಇನ್ನೂ ಕೆಲವು ಟಿಕೆಟ್‍ಗಳು ಲಭ್ಯವಿವೆ. ಈ ಬಗ್ಗೆ ಇ-ಮೇಲ್ ಮೂಲಕ ಟಿಕೆಟ್ ಲಭ್ಯತೆಯ ಮಾಹಿತಿಯನ್ನು ಐಸಿಸಿ ನೀಡುತ್ತದೆ ಎಂದು ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್

    8ನೇ ಆವೃತ್ತಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾದ 7 ಮೈದಾನದಲ್ಲಿ ನಡೆಯಲಿದ್ದು, ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬರ್ನ್, ಪರ್ತ್ ಮತ್ತು ಸಿಡ್ನಿಯಲ್ಲಿ ಟೂರ್ನಿಯ ಎಲ್ಲಾ ಪಂದ್ಯಗಳು ನಡೆಯಲಿದ್ದು, ಟೂರ್ನಿಯ ಫೈನಲ್ ಪಂದ್ಯಾಟ ನವೆಂಬರ್ 13 ರಂದು ನಡೆಯಲಿದೆ.

    ಒಟ್ಟು 16 ವಿಶ್ವದ ಬಲಾಢ್ಯ ತಂಡಗಳು ವಿಶ್ವಕಪ್‍ಗಾಗಿ ಸೆಣಸಾಡಲಿದ್ದು, 45 ಪಂದ್ಯಗಳು ನಡೆಯಲಿದೆ. ಗ್ರೂಪ್ A ವಿಭಾಗದಲ್ಲಿ ಇಂಗ್ಲಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಸ್ಥಾನಪಡೆದಿದ್ದರೆ, ಗ್ರೂಪ್ B ವಿಭಾಗದಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲದೇಶ ಸ್ಥಾನ ಪಡೆದುಕೊಂಡಿದೆ.

    2021ರ ಟಿ20 ವಿಶ್ವಕಪ್‍ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿ, ಇತಿಹಾಸ ಬರೆದಿತ್ತು. ಆ ಬಳಿಕ ಮತ್ತೊಮ್ಮೆ ಉಭಯ ತಂಡಗಳು ಟಿ20 ವಿಶ್ವಕಪ್‍ನಲ್ಲಿ ಎದುರುಬದುರಾಗುತ್ತಿದೆ. ಹಾಗಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.