Tag: India vs Pakistan

  • ಕುಲ್ದೀಪ್‌ ಸ್ಪಿನ್ ಮೋಡಿ; ಪಾಕಿಸ್ತಾನ ಆಲೌಟ್‌ – ಭಾರತ ಗೆಲುವಿಗೆ 147 ರನ್‌ಗಳ ಗುರಿ

    ಕುಲ್ದೀಪ್‌ ಸ್ಪಿನ್ ಮೋಡಿ; ಪಾಕಿಸ್ತಾನ ಆಲೌಟ್‌ – ಭಾರತ ಗೆಲುವಿಗೆ 147 ರನ್‌ಗಳ ಗುರಿ

    ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ 2025 ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಅಬ್ಬರಿಸಿದ್ದಾರೆ. ಪಾಕ್‌ ಆಲೌಟ್‌ ಆಗಿದ್ದು, ಟೀಂ ಇಂಡಿಯಾ ಗೆಲುವಿಗೆ 147 ರನ್‌ಗಳ ಗುರಿ ನೀಡಿದೆ.

    ಭಾನುವಾರದ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಭಾರತ ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ, ಮಧ್ಯಮ ಕ್ರಮಾಂಕದಿಂದ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಅಂತಿಮವಾಗಿ 19.1 ಓವರ್‌ಗೆ ಪಾಕ್‌ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿದೆ.

    ಆರಂಭಿಕರಾಗಿ ಕಣಕ್ಕಿಳಿದ ಸಾಹಿಬ್‌ಜಾದಾ ಫರ್ಹಾನ್, ಫಖರ್ ಜಮಾನ್ ಜೋಡಿ ಉತ್ತಮ ಆರಂಭ ನೀಡಿತು. ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟವಾಡಿ ಗಮನ ಸೆಳೆದರು. ಫರ್ಹಾನ್‌ 38 ಬಾಲ್‌ಗೆ ಅರ್ಧಶತಕ (57 ರನ್) ಗಳಿಸಿದರು. ವರುಣ್‌ ಚಕ್ರವರ್ತಿ 9ನೇ ಓವರ್‌ನಲ್ಲಿ ಮೊದಲ ವಿಕೆಟ್‌ ಪಡೆಯುವ ಮೂಲಕ ಜೊತೆಯಾಟಕ್ಕೆ ಬ್ರೇಕ್‌ ಹಾಕಿದರು.

    ತಂಡದ ಮೊತ್ತ 113 ಇದ್ದಾಗ ಸೈಮ್ ಅಯೂಬ್ ಔಟಾದರು. ಈ ಮಧ್ಯೆ ಜಮಾನ್‌ಗೆ ಯಾವೊಬ್ಬ ಬ್ಯಾಟರ್‌ ಕೂಡ ಸಾಥ್‌ ನೀಡಲಿಲ್ಲ. ನಂತರ ಬಂದ ಮೊಹಮ್ಮದ್ ಹ್ಯಾರಿಸ್ ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದರು. 46 ರನ್‌ ಗಳಿಸಿದ್ದ ಜಮಾನ್‌ ಕ್ಯಾಚ್‌ ನೀಡಿ ಔಟಾದರು.

    ಆರಂಭದಲ್ಲಿ ರನ್‌ ಬಿಟ್ಟುಕೊಟ್ಟಿದ್ದ ಟೀಂ ಇಂಡಿಯಾ ಬೌಲರ್‌ಗಳು ನಂತರ ಪಾಕ್‌ ವಿರುದ್ಧ ಆರ್ಭಟಿಸಿದರು. ಬ್ಯಾಟರ್‌ಗಳ ಬೆವರಿಳಿಸಿದರು. ವಿಕೆಟ್‌ಗಳು ತರಗೆಲೆಯಂತೆ ಉದುರಿದವು. ಯಾರೊಬ್ಬರು ಕೂಡ ಒಂದಂಕಿ ರನ್‌ ದಾಟಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ಪಾಕಿಸ್ತಾನ 19.1 ಓವರ್‌ಗೆ ಆಲೌಟ್‌ ಆಗಿ 146 ರನ್‌ ಗಳಿಸಿತು.

    ಟೀಂ ಇಂಡಿಯಾ ಪರ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಜಾದು ಮಾಡಿದರು. ಪಂದ್ಯದಲ್ಲಿ ನಾಲ್ಕು ವಿಕೆಟ್‌ ಕಿತ್ತು ಮಿಂಚಿದರು. ಜಸ್ಪ್ರಿತ್‌ ಬುಮ್ರಾ, ವರುಣ್‌ ಚಕ್ರವರ್ತಿ, ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಕಿತ್ತರು.

  • ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಕ್ಯಾಪ್ಟನ್ ಸೂರ್ಯ

    ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಕ್ಯಾಪ್ಟನ್ ಸೂರ್ಯ

    ದುಬೈ: ಇಲ್ಲಿನ ನಡೆದ ಏಷ್ಯಾ ಕಪ್‌ 2025ರ ಟೂರ್ನಿಯ ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ನಾಯಕ ಸೂರ್ಯಕುಮಾರ್‌ ಯಾದವ್‌ ಅರ್ಪಿಸಿದ್ದಾರೆ.

    ಪಂದ್ಯ ಗೆದ್ದ ಬಳಿಕ ಮಾತನಾಡಿದ ಸೂರ್ಯಕುಮಾರ್, ಇದೊಂದು ಪರಿಪೂರ್ಣ ಸಂದರ್ಭ ಎಂದು ನಾನು ಭಾವಿಸುತ್ತೇನೆ. ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು‌ ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಈ ಗೆಲುವನ್ನು ನಮ್ಮ ಎಲ್ಲಾ ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.

    ಟಾಸ್‌ ಸಮಯದಲ್ಲಿ ಪಾಕ್‌ ನಾಯಕನಿಗೆ ಹಸ್ತಾಲಾಘವ ಮಾಡಲು ಭಾರತ ತಂಡದ ನಾಯಕ ಸೂರ್ಯಕುಮಾರ್‌ ನಿರಾಕರಿಸಿದರು. ಕೊನೆಗೆ ವಿನ್ನಿಂಗ್ ಶಾಟ್ ಬಾರಿಸಿ ಸಹಪಾಠಿ ಶಿವಂ ದುಬೆಗೆ ಮಾತ್ರ ಹ್ಯಾಂಡ್‌ಶೇಕ್ ಮಾಡಿದ ಸೂರ್ಯ, ಪಾಕ್‌ ಆಟಗಾರರಿಗೆ ಹಸ್ತಾಲಾಘವ ಮಾಡದೇ ಹೊರಟರು.

    ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ ನಡೆದ ಮಾರಕ ಮತ್ತು ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ಜೀವಗಳು ಬಲಿಯಾದವು. ಇದರ ನಂತರ, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಈ ಘಟನೆಗಳಾದ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಮುಖಾಮುಖಿಯಾಗಿವೆ.

  • ಬರ್ತ್‌ಡೇ ದಿನವೇ ಪಾಕ್‌ ವಿರುದ್ಧ ಭಾರತಕ್ಕೆ ಗೆಲುವಿನ ಸಿಹಿ ಕೊಟ್ಟ ನಾಯಕ ಸೂರ್ಯ

    ಬರ್ತ್‌ಡೇ ದಿನವೇ ಪಾಕ್‌ ವಿರುದ್ಧ ಭಾರತಕ್ಕೆ ಗೆಲುವಿನ ಸಿಹಿ ಕೊಟ್ಟ ನಾಯಕ ಸೂರ್ಯ

    ದುಬೈ: ಏಷ್ಯಾ ಕಪ್‌ 2025ರ ಟೂರ್ನಿಯ ಭಾರತ ತಂಡದ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಬರ್ತ್‌ಡೇ ದಿನವೇ ಪಾಕ್‌ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಸಿಹಿ ನೀಡಿದ್ದಾರೆ.

    ಭಾನುವಾರದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕನ ಆಟವಾಡಿ ಗಮನ ಸೆಳೆದರು. 37 ಎಸೆತಗಳಲ್ಲಿ 47 ರನ್ ಗಳಿಸಿದರು. ಸಿಕ್ಸರ್‌ ಸಿಡಿಸಿ ಪಂದ್ಯವನ್ನು ಗೆಲ್ಲಿಸಿದರು. ಆಟ ಮುಗಿದ ಮೇಲೆ ಪ್ರೈಸ್‌ಮನಿ ಕೊಡುವ ಸಂದರ್ಭದಲ್ಲಿ ಸೂರ್ಯಕುಮಾರ್‌ಗೆ ಬರ್ತ್‌ಡೇ ವಿಶ್‌ ಮಾಡಲಾಯಿತು. ಆಗ ಸಹ ಆಟಗಾರರೆಲ್ಲಾ ನಾಯಕನಿಗೆ ಶುಭಾಶಯ ತಿಳಿಸಿದರು.

    1990ರ ಸೆಪ್ಟೆಂಬರ್‌ 14 ರಂದು ಜನಿಸಿದ ಯಾದವ್‌ಗೆ ಈಗ 35ರ ಸಂಭ್ರಮ. ನಾಯಕ ಸೂರ್ಯಕುಮಾರ್‌ ಆಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಬರ್ತ್‌ಡೇ ಜೊತೆಗೆ ತಂಡದ ಗೆಲುವಿನ ಡಬಲ್‌ ಸಂಭ್ರಮವನ್ನು ಯಾದವ್‌ ಪಡೆದುಕೊಂಡಿದ್ದಾರೆ.

    ಏಷ್ಯಾ ಕಪ್‌ ಟೂರ್ನಿಯ ಭಾರತ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಆಪರೇಷನ್ ಸಿಂಧೂರದ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು.

    ಏಷ್ಯಾ ಕಪ್‌ 2025ರ ಟೂರ್ನಿಯ ಪಾಕ್‌ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾದ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಅಬ್ಬರಕ್ಕೆ ಪಾಕ್‌ ಮಣಿದಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 9 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿತು. ಭಾರತ ತಂಡ 15.4 ಓವರ್‌ಗೆ 3 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿದೆ.

  • India Vs Pakistan: ಮೊದಲ ಎಸೆತಕ್ಕೆ ವಿಕೆಟ್‌; ಪಾಕ್‌ ವಿರುದ್ಧದ ಪಂದ್ಯದಲ್ಲಿ ಇತಿಹಾಸ ಬರೆದ ಹಾರ್ದಿಕ್‌ ಪಾಂಡ್ಯ

    India Vs Pakistan: ಮೊದಲ ಎಸೆತಕ್ಕೆ ವಿಕೆಟ್‌; ಪಾಕ್‌ ವಿರುದ್ಧದ ಪಂದ್ಯದಲ್ಲಿ ಇತಿಹಾಸ ಬರೆದ ಹಾರ್ದಿಕ್‌ ಪಾಂಡ್ಯ

    ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ 2025ರ ಟೂರ್ನಿಯ ಪಾಕ್‌ ವಿರುದ್ಧದ ಪಂದ್ಯದಲ್ಲಿ ಮೊದಲ ಎಸತೆದಲ್ಲೇ ವಿಕೆಟ್‌ ಪಡೆದು ಟೀಂ ಇಂಡಿಯಾ ಆಟಗಾರ ಹಾರ್ದಿಕ್‌ ಪಾಂಡ್ಯ ಇತಿಹಾಸ ಬರೆದಿದ್ದಾರೆ.

    ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹಾರ್ದಿಕ್‌ ಪಾಂಡ್ಯ ಮೊದಲ ಎಸೆತದಲ್ಲೇ ಸೈಮ್‌ ಅಯೂಬ್‌ ವಿಕೆಟ್‌ ಪಡೆದರು. ಆ ಮೂಲಕ ಪಾಕ್‌ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್‌ ಬೀಳಿಸಿದ ಸ್ಟಾರ್‌ ಆಲ್‌ರೌಂಡರ್‌ ಎಂಬ ದಾಖಲೆ ಬರೆದಿದ್ದಾರೆ.

    ಪಾಕಿಸ್ತಾನ ವಿರುದ್ಧದ ಅಂತರರಾಷ್ಟ್ರೀಯ ಟಿ20 ಪಂದ್ಯದ ಮೊದಲ ಎಸೆತದಲ್ಲಿ ಭಾರತೀಯ ಆಟಗಾರನೊಬ್ಬ ವಿಕೆಟ್ ಪಡೆದಿರುವುದು ಇದೇ ಮೊದಲು. 2024 ರ ಟಿ20 ವಿಶ್ವಕಪ್‌ನಲ್ಲಿ ಯುಎಸ್ಎ ವಿರುದ್ಧ ಅರ್ಶ್ದೀಪ್‌ ಸಿಂಗ್‌ ಈ ಸಾಧನೆ ಮಾಡಿದ್ದಾರೆ. ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾಂಡ್ಯ ಪಾತ್ರರಾಗಿದ್ದಾರೆ.

    ಪಾಕಿಸ್ತಾನ ವಿರುದ್ಧದ ಟಿ20ಐ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಮೂರನೇ ಬೌಲರ್ ಆಗಿದ್ದಾರೆ. ಶ್ರೀಲಂಕಾದ ನುವಾನ್ ಕುಲಶೇಖರ 2009 ರಲ್ಲಿ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಜಾರ್ಜ್ ಲಿಂಡೆ 2021 ರಲ್ಲಿ ಮೊದಲ ಎಸೆತಕ್ಕೆ ಪಾಕ್‌ ಆಟಗಾರನ ವಿಕೆಟ್‌ ಕಿತ್ತು ಈ ಸಾಧನೆ ಮಾಡಿದ್ದಾರೆ.

  • India vs Pakistan: ಟಾಸ್‌ ಬಳಿಕ ಪಾಕ್‌ ನಾಯಕನಿಗೆ ಹ್ಯಾಂಡ್‌ಶೇಕ್‌ ಮಾಡದ ಸೂರ್ಯಕುಮಾರ್‌ ಯಾದವ್‌

    India vs Pakistan: ಟಾಸ್‌ ಬಳಿಕ ಪಾಕ್‌ ನಾಯಕನಿಗೆ ಹ್ಯಾಂಡ್‌ಶೇಕ್‌ ಮಾಡದ ಸೂರ್ಯಕುಮಾರ್‌ ಯಾದವ್‌

    – ಬ್ಯಾಟಿಂಗ್‌ ಆಯ್ದುಕೊಂಡ ಪಾಕಿಸ್ತಾನ

    ದುಬೈ: ಪಹಲ್ಗಾಮ್‌ ಭಯೋತ್ಪಾದಕ ದಾಳಿ, ಭಾರತದ ಆಪರೇಷನ್‌ ಸಿಂಧೂರ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಮುಖಾಮುಖಿಯಾಗಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಎಷ್ಯಾ ಕಪ್‌ 2025ರ ಗ್ರೂಪ್‌ ಎ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ ಆಯ್ದುಕೊಂಡಿದೆ.

    ಟಾಸ್‌ ಸಮಯದಲ್ಲಿ ಮೈದಾನದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ. ಟಾಸ್‌ ಬಳಿಕ ಭಾರತದ ನಾಯಕ ಸೂರ್ಯಕುಮಾರ್‌ ಯಾದವ್‌, ಪಾಕ್‌ ಕ್ಯಾಪ್ಟನ್‌ ಸಲ್ಮಾನ್‌ ಅಲಿ ಅಘಾ ಕೈ ಕುಲುಕಲಿಲ್ಲ. ಪಾಕ್‌ ಕ್ಯಾಪ್ಟನ್‌ ಕಡೆ ನೋಡದೇ ಸೂರ್ಯಕುಮಾರ್‌ ಮುಂದೆ ಸಾಗಿದ ಪ್ರಸಂಗ ನಡೆಯಿತು. ಸಾಮಾನ್ಯವಾಗಿ ಕ್ರಿಕೆಟ್‌ ಪಂದ್ಯಗಳಲ್ಲಿ ನಾಯಕರು ಟಾಸ್ ಸಮಯದಲ್ಲಿ ಕೈಕುಲುಕುವುದು ವಾಡಿಕೆ.

    ಭಾರತ ಆಟಗಾರರು: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್(ಸಿ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ಪ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

    ಪಾಕಿಸ್ತಾನ ಆಟಗಾರರು: ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಮೊಹಮ್ಮದ್ ಹ್ಯಾರಿಸ್(ಡಬ್ಲ್ಯೂ), ಫಖರ್ ಜಮಾನ್, ಸಲ್ಮಾನ್ ಅಘಾ(ಸಿ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಸುಫಿಯಾನ್ ಮುಖೀಮ್, ಅಬ್ರಾರ್ ಅಹ್ಮದ್.

  • ಪಾಕ್‌ ವಿರುದ್ಧ ಟೀಂ ಇಂಡಿಯಾ ಗೆಲುವಿಗೆ ವಿಶ್ವ ಹಿಂದೂ ರಕ್ಷಾ ಪರಿಷತ್‌ನಿಂದ ಹೋಮ-ಹವನ

    ಪಾಕ್‌ ವಿರುದ್ಧ ಟೀಂ ಇಂಡಿಯಾ ಗೆಲುವಿಗೆ ವಿಶ್ವ ಹಿಂದೂ ರಕ್ಷಾ ಪರಿಷತ್‌ನಿಂದ ಹೋಮ-ಹವನ

    ಲಕ್ನೋ: ಭಾನುವಾರ ನಡೆಯಲಿರುವ 2025 ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವಿಗಾಗಿ ವಿಶ್ವ ಹಿಂದೂ ರಕ್ಷಾ ಪರಿಷತ್ ವಿಶೇಷ ಹೋಮ-ಹವನ, ಪೂಜೆ ಮಾಡಿ ಪ್ರಾರ್ಥಿಸಿದೆ.

    ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಮೊದಲ ಬಾರಿಗೆ ಪಾಕಿಸ್ತಾನದೊಂದಿಗೆ ಮುಖಾಮುಖಿಯಾಗಲು ಸಜ್ಜಾಗಿರುವ ಭಾರತ ಕ್ರಿಕೆಟ್ ತಂಡದೊಂದಿಗೆ ನಿಲ್ಲುವ ಸಮಯ ಇದೀಗ ಬಂದಿದೆ ಎಂದು ವಿಶ್ವ ಹಿಂದೂ ರಕ್ಷಾ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಗೋಪಾಲ್ ರೈ ಹೇಳಿದ್ದಾರೆ. ಇದನ್ನೂ ಓದಿ: ಬದ್ಧವೈರಿಗಳ ಕ್ರಿಕೆಟ್‌ ಕಾದಾಟಕ್ಕೆ ಬಾಯ್ಕಾಟ್‌ ಬಿಸಿ; ಮೋದಿ ಈಗ ಏಕೆ ಮೌನ? – ಶಿವಸೇನೆ

    ಭಾರತ ಯಾವಾಗಲೂ ಗೆದ್ದಿದೆ. ಭಾರತ ಯಾವಾಗಲೂ ಗೆಲ್ಲುತ್ತದೆ. ಪಹಲ್ಗಾಮ್‌ನಲ್ಲಿ ಅಮಾಯಕ ಜನರನ್ನು ಕೊಂದಿದ್ದಕ್ಕೆ ನಮ್ಮ ಪ್ರಧಾನಿ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಂಡರು. ಕೆಲವರು ಪಂದ್ಯದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಆದರೆ ವಿಶ್ವ ಹಿಂದೂ ರಕ್ಷಾ ಪರಿಷತ್ ನಂಬುವುದೇನೆಂದರೆ, ನಾವು ಆಡದಿದ್ದರೆ ಭಾರತವು ಪಾಕಿಸ್ತಾನವನ್ನು ಒಂದೇ ಬಾರಿಗೆ ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಜಗತ್ತಿಗೆ ಹೇಗೆ ತಿಳಿಯುತ್ತದೆ? ನಾವು ನಮ್ಮ ಭಾರತೀಯ ಕ್ರಿಕೆಟಿಗರ ಜೊತೆ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಭಾರತ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಯುಎಇ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಮೇಲುಗೈ ಸಾಧಿಸಿದರೆ, ಪಾಕಿಸ್ತಾನ ಹಾಂಗ್‌ಕಾಂಗ್ ಚೀನಾ ತಂಡವನ್ನು 93 ರನ್‌ಗಳಿಂದ ಸುಲಭವಾಗಿ ಮಣಿಸಿತು. ಈ ಫಲಿತಾಂಶವು ಸೂಪರ್ ಫೋರ್‌ಗೆ ಹೋಗುವ ಓಟದಲ್ಲಿ ಭಾನುವಾರದ ಪಂದ್ಯವನ್ನು ನಿರ್ಣಾಯಕವಾಗಿಸಿದೆ. ಇದನ್ನೂ ಓದಿ: ದುಬೈನಲ್ಲಿ ಇಂಡಿಯಾ-ಪಾಕ್ ಮ್ಯಾಚ್‌ನ ಟಿಕೆಟ್ ಅನ್ ಸೋಲ್ಡ್!

    ಪಂದ್ಯವನ್ನು ಬಹಿಷ್ಕರಿಸುವಂತೆ ವಿರೋಧ ಪಕ್ಷಗಳಿಂದ ಒತ್ತಾಯ ಕೇಳಿಬಂದಿದೆ. ಆದಾಗ್ಯೂ, ಯಾವುದೇ ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಭಾರತ ತಂಡದಿಂದ ಕೇಂದ್ರವು ಯಾವುದೇ ಆಕ್ಷೇಪಣೆಯನ್ನು ವ್ಯಕ್ತಪಡಿಸಿರಲಿಲ್ಲ.

  • ಭಾರತ, ಪಾಕ್ ಕ್ರಿಕೆಟ್ ಕದನ | ಉಗ್ರ ಪೋಷಕ ಪಾಕಿಸ್ತಾನದ ಜೊತೆ ಕ್ರಿಕೆಟ್ ಬೇಕಾ? – ಜನರ ಆಕ್ರೋಶ

    ಭಾರತ, ಪಾಕ್ ಕ್ರಿಕೆಟ್ ಕದನ | ಉಗ್ರ ಪೋಷಕ ಪಾಕಿಸ್ತಾನದ ಜೊತೆ ಕ್ರಿಕೆಟ್ ಬೇಕಾ? – ಜನರ ಆಕ್ರೋಶ

    ಇಂದು (ಸೆ.14) ದುಬೈನಲ್ಲಿ ನಡೆಯಲಿರುವ ಟೀಂ ಇಂಡಿಯಾ ಹಾಗೂ ಪಾಕ್ (India vs Pakistan) ತಂಡದ ನಡುವಿನ ಪಂದ್ಯಕ್ಕೆ (Asia Cup) ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ಪ್ರವಾಸಿಗರ ಸ್ವರ್ಗದಲ್ಲಿ ಭಯಾನಕ ನರಮೇಧವನ್ನು  (Pahalgam Attack) ನಡೆಸಿ 26 ಜನರ ನೆತ್ತರ ಹರಿಸಿದ ಪಹಲ್ಗಾಮ್ ದುರಂತವನ್ನು ಭಾರತೀಯರು ಎಂದು ಮರೆಯುವುದಿಲ್ಲ. ನಮ್ಮ ಹೆಣ್ಣುಮಕ್ಕಳ ಸಿಂದೂರವನ್ನು ಅಳಿಸಿ ಕಣ್ಣೀರ ಕೋಡಿ ಹರಿಸಿದ ನರರಾಕ್ಷಸರ ಅಟ್ಟಹಾಸ ಎಂದಿಗೂ ಮರೆಯಲು ಸಾಧ್ಯವಿಲ್ಲ. ರಕ್ತಹರಿಸಿದ ಪಾಪಿಗಳನ್ನು ಪೋಷಿಸಿದ ಈ ಪಾಪಿ ಪಾಕಿಸ್ತಾನ ಭಾರತ ಪಾಲಿಗೆ ಎಂದಿದ್ರೂ ಶತ್ರು ದೇಶವೆ. ಇಡೀ ದೇಶ ಪಾಕ್ ವಿರುದ್ಧ ಆಕ್ರೋಶಗೊಂಡಿರುವಾಗ ನಡೆಯುತ್ತಿರುವ ಭಾರತ – ಪಾಕ್ ಮಧ್ಯೆ ಕ್ರಿಕೆಟ್ ಪಂದ್ಯ ದೇಶದ ಜನರನ್ನು ರೊಚ್ಚಿಗೆಬ್ಬಿಸಿದೆ. ಇದನ್ನೂ ಓದಿ: ಭಾರತ ತಂಡವನ್ನೂ ಸೋಲಿಸುವಷ್ಟು ಸಮರ್ಥರಿದ್ದೇವೆ – ಪಂದ್ಯಕ್ಕೂ ಮುನ್ನ ಪಾಕ್‌ ಕ್ಯಾಪ್ಟನ್‌ ವಾರ್ನಿಂಗ್‌

    ಧರ್ಮ ಕೇಳಿ ಕೊಂದವರು, ಪತ್ನಿಯ ಎದುರಿನಲ್ಲಿ ಪತಿಯ ಕತ್ತುಸೀಳಿದವರು, ನವದಂಪತಿಯ ಬದುಕಿನ ಕನಸಿಗೆ ಕೊಳ್ಳಿ ಇಟ್ಟವರು, ಪುಟ್ಟ ಮಕ್ಕಳ ಮುಂದೆಯೇ ಅಪ್ಪನ ನೆತ್ತರ ಹರಿಸಿ ಬದುಕು ಪೂರ್ತಿ ಕರಾಳ ನೆನಪನ್ನೇ ಕೊಟ್ಟವರು ಪಾಕ್ ಪೋಷಿತ ಉಗ್ರರು. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು ಇದಕ್ಕೆ ಇಡೀ ದೇಶದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

    ರಕ್ತ ನೀರು ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಪಾಕ್ ಜೊತೆಗೆ ಎಲ್ಲಾ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡು ಉಗ್ರರ ಪೋಷಣೆ ಮಾಡುವ ನಿಮ್ಮನ್ನು ಮಂಡಿಯೂರುವಂತೆ ಮಾಡುತ್ತೇವೆ ಎಂದು ಪಾಕಿಸ್ತಾನಕ್ಕೆ ಅಪರೇಷನ್ ಸಿಂದೂರದ ಮೂಲಕ ಭಾರತ ಉತ್ತರ ಕೊಟ್ಟಿತ್ತು. ಆದರೆ ಈಗ ಭಯೋತ್ಪಾದಕ ದೇಶದ ಜೊತೆಗೆ ಕ್ರೀಡಾಸ್ಫೂರ್ತಿಗಾಗಿ ಕ್ರಿಕೆಟ್ ಆಡಲು ಬಿಸಿಸಿಐ ನಿರ್ಣಯಕೈಗೊಂಡಿದೆ. ಈಗ ಜನ ಪಾಕ್ ಜೊತೆಗೆ ಕ್ರಿಕೆಟ್ ಬೇಡ, ದೇಶಕ್ಕಿಂತ ಕ್ರಿಕೆಟ್ ದೊಡ್ಡದಾ ಎನ್ನುವ ಪ್ರಶ್ನೆ ಎತ್ತಿದ್ದಾರೆ.

    ರಕ್ತ ಹರಿಸಿದವರ ಜೊತೆಗೆ ಈಗ ಶಿಳ್ಳೆ ಚಪ್ಪಾಳೆ ಹೊಡೆದು ಕ್ರಿಕೆಟ್ ಆಟವನ್ನು ನೋಡೋದಾದ್ರೂ ಹೇಗೆ? ಅವರು ಗುಂಡು ಹೊಡೆದ್ರೂ ಅದನ್ನು ಮರೆತು ಈಗ ಕ್ರಿಕೆಟ್ ನೆಪದಲ್ಲಿ ಸ್ನೇಹದ ಕೈಚಾಚಬೇಕಾ? ಹಾಗಿದ್ರೇ ಈ ನರಮೇಧ, ಸೈನಿಕರ ಆಪರೇಷನ್ ಸಿಂಧೂರ, ಪಹಲ್ಗಾಮ್‍ನಲ್ಲಿ ಹರಿದ ಭಾರತೀಯರ ನೆತ್ತರ ಪ್ರತೀಕಾರ ಎಲ್ಲವೂ ಹುಸಿಯಾಗಿಯೇ ಬಿಡ್ತಾ ಅನ್ನುವ ಪ್ರಶ್ನೆ ಈಗ ಎಲ್ಲರಲ್ಲೂ ಕಾಡುತ್ತಿದೆ. ಇದರ ನಡುವೆ ಪಂದ್ಯದ ಟಿಕೆಟ್‌ ಬೇಡಿಕೆ ಸಹ ಕುಸಿದಿದೆ.

    ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್, ಭಾರತ – ಪಾಕಿಸ್ತಾನದ ಜೊತೆ ಕ್ರಿಕೆಟ್ ಆಟವಾಡಬಾರದು, ಐಸಿಸಿ ಟೂರ್ನಿಮೆಂಟ್‍ಗಳಲ್ಲೂ ಆಡಬಾರದು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ದೇಶಕ್ಕಿಂತ ಯಾವುದು ಮುಖ್ಯವಲ್ಲ. ನನ್ನ ವೈಯಕ್ತಿ ಅಭಿಪ್ರಾಯದಲ್ಲಿ ಭಾರತ, ಪಾಕ್‍ಜೊತೆ ಆಡಬಾರದು. ಇನ್ನುಳಿದಂತೆ ಅಂತಿಮ ನಿರ್ಧಾರ ಕೇಂದ್ರ ಸರ್ಕಾರದ್ದು ಎಂದಿದ್ದಾರೆ. ಇದನ್ನೂ ಓದಿ: ಇದು ಮ್ಯಾಚ್‌ ಅಷ್ಟೇ; ಭಾರತ – ಪಾಕ್ ಪಂದ್ಯ ಬೇಡ ಎಂದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

  • ಭಾರತ-ಪಾಕ್‌ ಪಂದ್ಯ ಬಾಯ್ಕಾಟ್‌ಗೆ ಕರೆ – ಪಾಕ್‌ ಜೆರ್ಸಿ ಇರುವ ಪ್ರತಿಕೃತಿ ದಹಿಸಿ ಎಎಪಿ ಪ್ರತಿಭಟನೆ

    ಭಾರತ-ಪಾಕ್‌ ಪಂದ್ಯ ಬಾಯ್ಕಾಟ್‌ಗೆ ಕರೆ – ಪಾಕ್‌ ಜೆರ್ಸಿ ಇರುವ ಪ್ರತಿಕೃತಿ ದಹಿಸಿ ಎಎಪಿ ಪ್ರತಿಭಟನೆ

    ನವದೆಹಲಿ: ಏಷ್ಯಾ ಕಪ್‌ನಲ್ಲಿ ನಾಳೆ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಪ್ರತಿಭಟನೆಗಳು ರಾಜಕೀಯ ತಿರುವು ಪಡೆದುಕೊಂಡಿವೆ.

    ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಉಭಯ ದೇಶಗಳ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಘಟನೆಯಾದ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ದಾಳಿಯಲ್ಲಿ ಮೃತಪಟ್ಟ ತಮ್ಮ ಪುತ್ರರ ಬಗ್ಗೆ ಕುಟುಂಬಗಳು ಇನ್ನೂ ಶೋಕದಲ್ಲಿದ್ದಾವೆ. ಹಲವಾರು ರಾಜಕೀಯ ನಾಯಕರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಿ ಕ್ರಿಕೆಟಿಗರೊಂದಿಗೆ ಆಟವಾಡುವುದು ತಪ್ಪು ಎಂದು ಹೇಳಿದ್ದಾರೆ. ಈ ಹೊತ್ತಲ್ಲಿ ಏಷ್ಯಾ ಕಪ್‌ನಲ್ಲಿ ಎರಡೂ ತಂಡಗಳು ಆಡಲು ಮುಂದಾಗಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.‌ ಇದನ್ನೂ ಓದಿ: ಭಾರತ ತಂಡವನ್ನೂ ಸೋಲಿಸುವಷ್ಟು ಸಮರ್ಥರಿದ್ದೇವೆ – ಪಂದ್ಯಕ್ಕೂ ಮುನ್ನ ಪಾಕ್‌ ಕ್ಯಾಪ್ಟನ್‌ ವಾರ್ನಿಂಗ್‌

    ಭಾರತ-ಪಾಕ್‌ ಆಟಕ್ಕೆ ವಿರೋಧ ವ್ಯಕ್ತವಾಗಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ. ರಾಜಕೀಯ ನಾಯಕರು ಮತ್ತೊಮ್ಮೆ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ಒತ್ತಾಯಿಸಿದ್ದಾರೆ. ಟೀಕೆಗಳು ಹೆಚ್ಚಾಗಿ ವಿರೋಧ ಪಕ್ಷಗಳಿಂದಲೇ ಕೇಳಿಬರುತ್ತಿವೆ. ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಪಂದ್ಯವನ್ನು ವಿರೋಧಿಸಿವೆ.

    ಎಎಪಿ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಕಚೇರಿಯ ಹೊರಗೆ ಪಾಕಿಸ್ತಾನ ಲೇಬಲ್ ಹೊಂದಿರುವ ಪ್ರತಿಕೃತಿಯನ್ನು ದಹಿಸಿದ್ದಾರೆ. ಮಾಜಿ ಸಚಿವ ಸೌರಭ್ ಭಾರದ್ವಾಜ್ ಪಂದ್ಯದ ನೇರ ಪ್ರಸಾರ ಮಾಡುವ ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಬಹಿಷ್ಕರಿಸುವಂತೆ ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ. ‘ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸುವ ಇಂತಹ ಅಸಹ್ಯಕರ ಜನರೊಂದಿಗೆ ಭಾರತ ಸರ್ಕಾರ ಕ್ರಿಕೆಟಿಗರನ್ನು ಆಡುವಂತೆ ಮಾಡುತ್ತಿದೆ. ಭಾರತ-ಪಾಕಿಸ್ತಾನ ಪಂದ್ಯಗಳನ್ನು ಪ್ರಸಾರ ಮಾಡುವ ದೆಹಲಿಯಲ್ಲಿರುವ ಎಲ್ಲಾ ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ನಾವು ಬಹಿರಂಗಪಡಿಸುತ್ತೇವೆ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇದು ಮ್ಯಾಚ್‌ ಅಷ್ಟೇ; ಭಾರತ – ಪಾಕ್ ಪಂದ್ಯ ಬೇಡ ಎಂದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

    ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದ ಬಗ್ಗೆ ಪ್ರಧಾನಿಯವರ ‘ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ನೆನಪಿಸಿಕೊಂಡು ಟ್ವೀಟ್‌ ಮಾಡಿದ್ದಾರೆ. ‘ರಕ್ತ ಮತ್ತು ಕ್ರಿಕೆಟ್’ ಹೇಗೆ ಒಟ್ಟಿಗೆ ಹೋಗುತ್ತದೆ ಎಂದು ಪ್ರಶ್ನಿಸಿದ್ದಾರೆ. ‘ಯುದ್ಧ ಮತ್ತು ಕ್ರಿಕೆಟ್ ಒಂದೇ ಸಮಯದಲ್ಲಿ ಹೇಗೆ ಇರಲು ಸಾಧ್ಯ? ಅವರು ದೇಶಭಕ್ತಿಯ ವ್ಯವಹಾರವನ್ನು ಮಾಡಿದ್ದಾರೆ. ಅವರಿಗೆ ಕೇವಲ ಹಣ ಬೇಕು’ ಎಂದು ಠಾಕ್ರೆ ಟೀಕಿಸಿದ್ದಾರೆ.

    ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ತಮ್ಮ ಗಂಡಂದಿರನ್ನು ಕಳೆದುಕೊಂಡ ಸಹೋದರಿಯರನ್ನು ನೋಡಿಕೊಳ್ಳದೆ ಕೆಲ ಜನರು ಹಣ ಸಂಪಾದಿಸುವುದರಲ್ಲಿ ನಿರತರಾಗಿದ್ದಾರೆ. ಇದು ವ್ಯವಹಾರ. ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಉತ್ಸಾಹವಿದೆ. ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ನಮ್ಮ ಸಹೋದರಿಯರ ಸಿಂಧೂರ ಅಳಿಸಿದ್ದಾರೆಂದು ಅವರು ಬೇಸರಗೊಂಡಿಲ್ಲ. ಈ ಜನರು ಕ್ರಿಕೆಟ್ ಹೆಸರಿನಲ್ಲಿ ಹಣ ಸಂಪಾದಿಸುವಲ್ಲಿ ನಿರತರಾಗಿದ್ದಾರೆ. ನಮ್ಮ ಸಹೋದರಿಯರ ಕುಟುಂಬಗಳು ನಾಶವಾದವು. ಆದರೆ, ಇವರು ಪಾಕಿಸ್ತಾನಿಗಳೊಂದಿಗೆ ಕ್ರಿಕೆಟ್ ಆಡಲು ಹೊರಟಿದ್ದಾರೆ. ಸರ್ಕಾರ ನಾಚಿಕೆಪಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

  • ಏಷ್ಯಾ ಕಪ್‌ ಟೂರ್ನಿಗೆ ಮುಹೂರ್ತ ಫಿಕ್ಸ್‌; ಸೆ.7ಕ್ಕೆ ಭಾರತ-ಪಾಕ್‌ ಮುಖಾಮುಖಿ

    ಏಷ್ಯಾ ಕಪ್‌ ಟೂರ್ನಿಗೆ ಮುಹೂರ್ತ ಫಿಕ್ಸ್‌; ಸೆ.7ಕ್ಕೆ ಭಾರತ-ಪಾಕ್‌ ಮುಖಾಮುಖಿ

    ಮುಂಬೈ: ಏಷ್ಯಾ ಕಪ್‌ (Asia Cup 2025) ಕ್ರಿಕೆಟ್‌ ಟೂರ್ನಿಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಯುಎಇನಲ್ಲಿ ಸೆಪ್ಟೆಂಬರ್‌ 5 ರಿಂದ ಟೂರ್ನಿ ಆರಂಭವಾಗಲಿದ್ದು, ಸೆ.7 ರಂದು ಭಾರತ ಮತ್ತು ಪಾಕ್‌ (India vs Pakistan) ನಡುವಿನ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ.

    ಸೆ.21 ರಂದು ಫೈನಲ್‌ ಪಂದ್ಯ ನಡೆಯಲಿದೆ. 17 ದಿನಗಳ ಟೂರ್ನಿಯ ವೇಳಾಪಟ್ಟಿ ಬಹುತೇಕ ಪೂರ್ಣಗೊಂಡಿದೆ. ಭಾರತ ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ರಾಷ್ಟ್ರಗಳು ತಮ್ಮ ಸರ್ಕಾರಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಇದನ್ನೂ ಓದಿ: ಪತ್ನಿಗೆ ತಿಂಗಳಿಗೆ 4 ಲಕ್ಷ ಕೊಡಿ: ಮೊಹಮ್ಮದ್‌ ಶಮಿಗೆ ಹೈಕೋರ್ಟ್‌ ಸೂಚನೆ

    ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಯುಎಇ ಟೂರ್ನಿಯಲ್ಲಿ ಭಾಗವಹಿಸಲಿವೆ. ಗುಂಪುಹಂತ ಮತ್ತು ಸೂಪರ್‌ ಫೋರ್‌ ವಿಧಾನದಲ್ಲಿ ಸ್ಪರ್ಧೆಗಳು ನಡೆಯಲಿವೆ.

    ಪಹಲ್ಗಾಮ್‌ ಘಟನೆ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಇದು ಉಭಯ ದೇಶಗಳ ನಡುವಿನ ಕ್ರಿಕೆಟ್‌ ಪಂದ್ಯದ ಬಗ್ಗೆಯೂ ಪ್ರಶ್ನಾರ್ಥಕ ಚಿಹ್ನೆ ಇತ್ತು. ಈ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಂಘರ್ಷದ ಬಳಿಕ ಬಹುರಾಷ್ಟ್ರ ಟೂರ್ನಿಯಲ್ಲಿ ಎರಡೂ ದೇಶಗಳು ಭಾಗವಹಿಸುತ್ತಿರುವುದು ಇದೇ ಮೊದಲು. ಇದನ್ನೂ ಓದಿ: ಹಲವು ಮಹಿಳೆಯರ ಜೊತೆ ಅಫೇರ್‌ ಇಟ್ಕೊಂಡಿದ್ದ – ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ

  • ಭಾರತದ ದಾಳಿಯನ್ನು ವಿಫಲಗೊಳಿಸಿದ್ದೇವೆ: ಬುರುಡೆ ಬಿಟ್ಟ ಪಾಕ್‌ ಪ್ರಧಾನಿ

    ಭಾರತದ ದಾಳಿಯನ್ನು ವಿಫಲಗೊಳಿಸಿದ್ದೇವೆ: ಬುರುಡೆ ಬಿಟ್ಟ ಪಾಕ್‌ ಪ್ರಧಾನಿ

    – 80 ಜೆಟ್‌ಗಳಲ್ಲಿ 5 ನ್ನು ಪಾಕ್‌ ವಾಯು ಸೇನೆ ಹೊಡೆದುರುಳಿಸಿದೆ ಎಂದ ಶೆಹಬಾಜ್‌ 

    ಇಸ್ಲಾಮಾಬಾದ್: ಭಾರತದ ದಾಳಿಯನ್ನು ವಿಫಲಗೊಳಿಸಿದ್ದೇವೆ ಎಂದು ಮತ್ತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif) ಬುರುಡೆ ಬಿಟ್ಟಿದ್ದಾರೆ.

    ತಡರಾತ್ರಿ ಪಾಕ್ ಮತ್ತು ಪಿಒಕೆ ಹಲವಾರು ಸ್ಥಳಗಳಲ್ಲಿ ಭಾರತ ಕ್ಷಿಪಣಿ ದಾಳಿ ನಡೆಸಿದ ನಂತರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದರು. ಈ ದಾಳಿ ಅಚ್ಚರಿ ಮೂಡಿಸಿತು. ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಭಾರತೀಯ ವಿಮಾನಗಳು ತಮ್ಮ ದೇಶವನ್ನು ಪ್ರವೇಶಿಸಿದರೆ ಸಮುದ್ರಕ್ಕೆ ಎಸೆಯಲು ಪಾಕಿಸ್ತಾನ ವಾಯುಪಡೆ ಸಿದ್ಧವಾಗಿದೆ ಮತ್ತು ಅದಕ್ಕಾಗಿ ಕಾಯುತ್ತಿದೆ. ಪಾಕಿಸ್ತಾನವು 5 ರಫೇಲ್ ಜೆಟ್‌ಗಳು ಮತ್ತು 2 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಹಸಿಹಸಿ ಸುಳ್ಳು ಹೇಳಿದ್ದಾರೆ. ಇದನ್ನೂ ಓದಿ: ಲಡಾಖ್‍ನಲ್ಲಿ ಪ್ರವಾಸಿಗರಿಗೆ ಉಚಿತ ವಸತಿ!

    ಪಾಕಿಸ್ತಾನ ವಾಯುಪಡೆಯು ಪ್ರತೀಕಾರ ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ರಾತ್ರಿಯನ್ನು ಐತಿಹಾಸಿಕ ರಾತ್ರಿಯನ್ನಾಗಿ ಮಾಡಿತು. ದಾಳಿಯಲ್ಲಿ ಮಕ್ಕಳು, ಪುರುಷರು ಮತ್ತು ಮಹಿಳೆಯರು ಸೇರಿದಂತೆ ಅನೇಕ ಪಾಕಿಸ್ತಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಪಾಕ್‌ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.

    ಏ.22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವನ್ನು ಭಾರತ ದೂಷಿಸಿದೆ. ಆದರೆ, ಬಲೂಚಿಸ್ತಾನದಲ್ಲಿ ನಡೆದ ರೈಲು ಅಪಹರಣವಾಯಿತು. ಈ ದಾಳಿಗೆ ಭಾರತವೇ ಕಾರಣ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ, 4 ದಿನ ಕ್ವಾರಂಟೈನ್‌ – ಕಾರ್ಯಾಚರಣೆ ಯಶಸ್ವಿಯಾಗಿದ್ದು ಹೇಗೆ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಪಹಲ್ಗಾಮ್ ದಾಳಿಯು ನಾನು ಟರ್ಕಿಯಲ್ಲಿದ್ದಾಗ ನಡೆದಿದೆ. ಈ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿಲ್ಲ. ಈ ವಿಷಯದ ಬಗ್ಗೆ ತನಿಖೆಗೆ ಆಹ್ವಾನ ನೀಡಿದ್ದೇನೆ. ತನಿಖೆಗೆ ಸಹಕರಿಸಲು ಪಾಕಿಸ್ತಾನ ಸಿದ್ಧವಾಗಿದೆ. ಆದಾಗ್ಯೂ, ಭಾರತ ಈ ಪ್ರಸ್ತಾಪವನ್ನು ತಿರಸ್ಕರಿಸಿತು ಎಂದು ಹೇಳಿಕೆ ನೀಡಿದ್ದಾರೆ.

    ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ವಾಯುಪಡೆಯು ಯಾವುದೇ ದಿನ ದಾಳಿ ನಡೆಸುತ್ತದೆ ಎಂಬ ಮಾಹಿತಿ ನಮಗೆ ಬರುತ್ತಿದೆ. ಪಾಕಿಸ್ತಾನ ವಾಯುಪಡೆಯು ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧವಾಗಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಬಾಲಾಕೋಟ್‌, ಬ್ರಹ್ಮೋಸ್‌ ಬಳಿಕ ʻಆಪರೇಷನ್‌ ಸಿಂಧೂರʼ – ಪಾಕ್‌ ನಂಬಿದ್ದ ʻಮೇಡ್‌ ಇನ್‌ ಚೈನಾʼ ರೆಡಾರ್‌ ಫೇಲ್‌

    ಭಾರತ ನಡೆಸುತ್ತಿರುವ ದಾಳಿಗಳ ಬಗ್ಗೆ ನಮಗೆ ಮಾಹಿತಿ ಇದೆ. ದಾಳಿಯಲ್ಲಿ ಒಟ್ಟು 80 ಯುದ್ಧ ವಿಮಾನಗಳು ಭಾಗಿಯಾಗಿದ್ದು, ದೇಶದ ಆರು ಸ್ಥಳಗಳಲ್ಲಿ ಅವು ದಾಳಿ ನಡೆಸಿವೆ. ಇದಕ್ಕೆ ಪಿಎಎಫ್ ಸಿದ್ಧವಾಗಿತ್ತು. ಭಾರತೀಯ ಯುದ್ಧ ವಿಮಾನಗಳು ಪೇಲೋಡ್ ಅನ್ನು ಬಿಡುಗಡೆ ಮಾಡಿದ ನಂತರ ಅವುಗಳ ಮೇಲೆ ದಾಳಿ ಮಾಡಿತು. ಐದು ರಫೇಲ್ ಜೆಟ್‌ಗಳನ್ನು ಹೊಡೆದುರುಳಿಸಲು ಸಾಧ್ಯವಾಯಿತು. ಒಂದು ವಿಮಾನ ಪಂಜಾಬ್‌ನ ಭಟಿಂಡಾದಲ್ಲಿ ಬಿದ್ದಿತು. ಪ್ರತಿದಾಳಿಯಲ್ಲಿ ಎರಡು ಡ್ರೋನ್‌ಗಳನ್ನು ಸಹ ಹೊಡೆದುರುಳಿಸಲಾಗಿದೆ. ಇದು ಸಾಂಪ್ರದಾಯಿಕ ಯುದ್ಧವಾಗಿತ್ತು. ಪಾಕಿಸ್ತಾನವು ಈ ಸಾಂಪ್ರದಾಯಿಕ ಯುದ್ಧದಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಯಿತು. ಪಾಕಿಸ್ತಾನ ಸೇನೆಯು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ. ಕಠಿಣ ಸಮಯದಲ್ಲಿ ಅವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಜಗತ್ತಿಗೆ ಈಗ ತಿಳಿದಿದೆ ಎಂದು ಪಾಕ್‌ ಪ್ರಧಾನಿ ಬುರುಡೆ ಬಿಟ್ಟಿದ್ದಾರೆ.