Tag: India vs England

  • India vs England Test; ನಿರ್ಣಾಯಕ ಪಂದ್ಯದಿಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಔಟ್‌

    India vs England Test; ನಿರ್ಣಾಯಕ ಪಂದ್ಯದಿಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಔಟ್‌

    ಬ್ರಿಟನ್‌: ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮಹತ್ವದ ಬದಲಾವಣೆ ಮಾಡಿಕೊಂಡಿವೆ. ಇಂಗ್ಲೆಂಡ್ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಮತ್ತು ಭಾರತದ ವೇಗಿ ಜಸ್ಪ್ರಿತ್‌ ಬುಮ್ರಾ (Jasprit Bumrah) ಇಬ್ಬರೂ ಓವಲ್‌ನಲ್ಲಿ ಸರಣಿ ನಿರ್ಣಾಯಕ ಪಂದ್ಯದಿಂದ ಹೊರಗುಳಿದಿದ್ದಾರೆ.

    ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭುಜದ ಗಾಯದಿಂದಾಗಿ ಸ್ಟೋಕ್ಸ್ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬುಧವಾರ ದೃಢಪಡಿಸಿದೆ. ಉಪನಾಯಕ ಓಲಿ ಪೋಪ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ. ಇದನ್ನೂ ಓದಿ: ವಾಂಖೆಡೆಯಲ್ಲಿ 6.5 ಲಕ್ಷ ಮೌಲ್ಯದ 261 ಐಪಿಎಲ್ ಜೆರ್ಸಿ ಕಳವು – ಸೆಕ್ಯುರಿಟಿ ಗಾರ್ಡ್ ಅರೆಸ್ಟ್

    ಇಂಗ್ಲೆಂಡ್ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸ್ಟೋಕ್ಸ್, ಸರಣಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದರು. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ.

    ಭಾರತ ಕೂಡ ಬೌಲಿಂಗ್ ಮುಂಚೂಣಿಯಲ್ಲಿಲ್ಲ. ಜಸ್ಪ್ರಿತ್‌ ಬುಮ್ರಾ ಅವರ ಬೆನ್ನಿನ ನೋವು ಸಮಸ್ಯೆ ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆಯಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಗಾಯದಿಂದಾಗಿ ಅವರು ಹಲವು ತಿಂಗಳು ತಂಡದಿಂದ ಹೊರಗುಳಿದಿದ್ದರು. ಇದನ್ನೂ ಓದಿ: ಚೆಸ್‌ ವಿಶ್ವಕಪ್‌ | ಅನುಭವಿ ಕೊನೆರು ಹಂಪಿಗೆ ಸೋಲು, 19ರ ದಿವ್ಯಾ ದೇಶಮುಖ್‌ ಚಾಂಪಿಯನ್‌

    ಬಿಸಿಸಿಐ ವೈದ್ಯಕೀಯ ತಂಡವು ಬುಮ್ರಾ ಮತ್ತು ತಂಡದ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ, ಸರಣಿಯನ್ನು 2-2 ಸಮಬಲಗೊಳಿಸುವ ಅವಕಾಶವಿದೆ. ಇದನ್ನೂ ಓದಿ: Explained| ಬದಲಾದ ಮಾಲ್ಡೀವ್ಸ್‌ – ಇಂಡಿಯಾ ಔಟ್‌ ಹೇಳಿ ಈಗ ಮೋದಿಯನ್ನು ಆಹ್ವಾನಿಸಿದ್ದು ಯಾಕೆ?

  • IND vs ENG, 2nd ODI: ರೋಹಿತ್‌ ಅಬ್ಬರದ ಶತಕ, ಜಡೇಜಾ ಸ್ಪಿನ್‌ ಜಾದು – ಆಂಗ್ಲರ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

    IND vs ENG, 2nd ODI: ರೋಹಿತ್‌ ಅಬ್ಬರದ ಶತಕ, ಜಡೇಜಾ ಸ್ಪಿನ್‌ ಜಾದು – ಆಂಗ್ಲರ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

    * 2-0 ಮುನ್ನಡೆಯೊಂದಿಗೆ ಸರಣಿ ಗೆದ್ದ ಟೀಂ ಇಂಡಿಯಾ

    ಕಟಕ್‌: ಕ್ಯಾಪ್ಟನ್‌ ರೋಹಿತ್‌ ಶರ್ಮಾ ಅಬ್ಬರದ ಬ್ಯಾಟಿಂಗ್‌, ಆಲ್‌ರೌಂಡರ್‌ ಜಡೇಜಾ ಸ್ಪಿನ್‌ ಮೋಡಿಗೆ ಇಂಗ್ಲೆಂಡ್‌ ತತ್ತರಿಸಿದೆ. ಇಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಟೀಂ ಇಂಡಿಯಾ 4 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ಗೆದ್ದಿದೆ.

    ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. 49.5 ಓವರ್‌ಗಳಿಗೆ ಜೋಸ್‌ ಬಟ್ಲರ್‌ ಪಡೆ 304 ರನ್‌ಗಳಿಗೆ ಆಲೌಟ್‌ ಆಯಿತು. ಬೆನ್ ಡಕೆಟ್ 69, ಜೋ ರೂಟ್ 65, ಲಿಯಾಮ್ ಲಿವಿಂಗ್‌ಸ್ಟೋನ್ 41, ಜೋಸ್ ಬಟ್ಲರ್ 34, ಹ್ಯಾರಿ ಬ್ರೂಕ್ 31 ಹೊಡೆದು ಗಮನ ಸೆಳೆದರು. ಭಾರತಕ್ಕೆ ಇಂಗ್ಲೆಂಡ್‌ 305 ರನ್‌ಗಳ ಗುರಿ ನೀಡಿತು.

    ಟೀಂ ಇಂಡಿಯಾ ಪರ ಜಡೇಜಾ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದರು. ಜಡೇಜಾ 3, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ 1 ವಿಕೆಟ್‌ ಕಬಳಿಸಿದ್ದಾರೆ.

    ಭಾರತ ಪರ ನಾಯಕ ರೋಹಿತ್‌ ಶರ್ಮಾ ಶತಕ ಸಿಡಿಸಿ ಅಬ್ಬರಿಸಿದರು. 90 ಬಾಲ್‌ಗೆ 119 ರನ್‌ (12 ಫೋರ್‌, 7 ಸಿಕ್ಸರ್‌) ಸಿಡಿಸಿ ಮಿಂಚಿದರು. ಶುಭಮನ್‌ ಗಿಲ್‌ 60, ಶ್ರೇಯಸ್‌ ಅಯ್ಯರ್‌ 44, ಅಕ್ಷರ್‌ ಪಟೇಲ್‌ 41 ರನ್‌ ಗಳಿಸಿ ತಂಡದ ಗೆಲುವಿಗೆ ಸಾಥ್‌ ನೀಡಿದರು.

    ಅಂತಿಮವಾಗಿ ಟೀಂ ಇಂಡಿಯಾ 44.3 ಓವರ್‌ಗಳಿಗೆ 308 ರನ್‌ ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿತು.

  • ತಿಲಕ್‌ ವರ್ಮಾ ಜವಾಬ್ದಾರಿಯುತ ಆಟ – ಆಂಗ್ಲರ ವಿರುದ್ಧ ಟೀಂ ಇಂಡಿಯಾಗೆ 2 ವಿಕೆಟ್‌ಗಳ ಜಯ

    ತಿಲಕ್‌ ವರ್ಮಾ ಜವಾಬ್ದಾರಿಯುತ ಆಟ – ಆಂಗ್ಲರ ವಿರುದ್ಧ ಟೀಂ ಇಂಡಿಯಾಗೆ 2 ವಿಕೆಟ್‌ಗಳ ಜಯ

    ಚೆನ್ನೈ: ತಿಲಕ್‌ ವರ್ಮಾ ಜವಾಬ್ದಾರಿಯುತ ಆಟದಿಂದ ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾಗೆ (India vs England) 2 ವಿಕೆಟ್‌ಗಳ ಜಯ ಸಿಕ್ಕಿದೆ. ಆ ಮೂಲಕ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಕಾಯ್ದುಕೊಂಡಿದೆ.

    ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ – ಇಂಗ್ಲೆಂಡ್ (India vs England)​ ನಡುವಿನ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ನೀಡಿದ 166 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 19.2 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 166 ರನ್‌ ಕಲೆಹಾಕಿ ಜಯಗಳಿಸಿತು.

    ಭಾರತದ ಪರ ತಿಲಕ್‌ ವರ್ಮ 55 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 4 ಬೌಂಡರಿಗಳ ನೆರವಿನಿಂದ 72 ರನ್‌ ಕಲೆಹಾಕಿದರು. ವಾಷಿಂಗ್ಟನ್‌ ಸುಂದರ್‌ 19 ಎಸೆತಗಳಲ್ಲಿ 26, ಸೂರ್ಯಕುಮಾರ್‌ ಯಾದವ್‌, ಅಭಿಷೇಕ್‌ ಶರ್ಮಾ ತಲಾ 12, ರನ್‌ ಕಲೆ ಹಾಕಿದರು. ಉಳಿದ ಆಟಗಾರರು ಒಂದಂಕಿಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

    ಇಂಗ್ಲೆಂಡ್‌ ತಂಡ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 165 ರನ್‌ ಕಲೆಹಾಕಿತು. ಇಂಗ್ಲೆಂಡ್‌ ಪರ ಮೊದಲು ಬ್ಯಾಟಿಂಗ್ ಮಾಡಿದ ನಾಯಕ ಬಟ್ಲರ್ 30 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ 45 ರನ್​ಗಳಿಸಿ ತಂಡಕ್ಕೆ ನೆರವಾದರು. ಮೊದಲ ಪಂದ್ಯದಂತೆ ಎರಡನೇ ಟಿ20 ಪಂದ್ಯದಲ್ಲೂ ಇಂಗ್ಲೆಂಡ್ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

    ಟಾಸ್​ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಆಗಮಿಸಿದ್ದ ಫಿಲ್​ ಸಾಲ್ಟ್​ 4 ಹಾಗೂ ಬೆನ್​ ಡಕೆಟ್​ 3 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಸಾಲ್ಟ್ ಮತ್ತೊಮ್ಮೆ ಅರ್ಷದೀಪ್​ಗೆ ವಿಕೆಟ್​ ಒಪ್ಪಿಸಿದರೆ, ಡಕೆಟ್ ಲೋಕಲ್ ಬಾಯ್ ವಾಷಿಂಗ್ಟನ್ ಸುಂದರ್ ಬೌಲಿಂಗ್​ನಲ್ಲಿ ಜುರೆಲ್​ಗೆ ಕ್ಯಾಚ್​ ಕೊಟ್ಟು ಪೆವಿಲಿಯನ್​ ಸೇರಿದರು.

    ಅಟ್ಕಿನ್ಸನ್​ ಬದಲಿಗೆ ಅವಕಾಶ ಪಡೆದಿದ್ದ ವೇಗದ ಬೌಲರ್ ಬ್ರಿಡನ್ ಕೇರ್ಸ್ 17 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಸಹಿತ 31 ರನ್​ಗಳಿಸಿ ರನ್​ಔಟ್ ಆದರು. ಕೊನೆಯಲ್ಲಿ ಆರ್ಚರ್​ ಅಜೇಯ 12, ರಶೀದ್ 10, ಮಾರ್ಕ್​ ವುಡ್ 5 ರನ್​ಗಳಿಸಿದರು.

    ಭಾರತದ ಪರ ವರುಣ್ ಚಕ್ರವರ್ತಿ 38ಕ್ಕೆ 2 ವಿಕೆಟ್, ಅಕ್ಷರ್ ಪಟೇಲ್ 32ಕ್ಕೆ2, ಹಾರ್ದಿಕ್ ಪಾಂಡ್ಯ 6ಕ್ಕೆ1, ಅರ್ಷದೀಪ್ ಸಿಂಗ್ 40ಕ್ಕೆ1 ಹಾಗೂ ಅಭಿಷೇಕ್ ಶರ್ಮಾ 12ಕ್ಕೆ1 ವಿಕೆಟ್ ಪಡೆದು ಮಿಂಚಿದರು.

  • ರೋಹಿತ್‌, ಗಿಲ್‌ ಶತಕಗಳ ಅಬ್ಬರ; 2ನೇ ದಿನವೂ ಕ್ರೀಸ್‌ ಬಿಟ್ಟುಕೊಡದ ಭಾರತ – ಭರ್ಜರಿ 255 ರನ್‌ಗಳ ಮುನ್ನಡೆ

    ರೋಹಿತ್‌, ಗಿಲ್‌ ಶತಕಗಳ ಅಬ್ಬರ; 2ನೇ ದಿನವೂ ಕ್ರೀಸ್‌ ಬಿಟ್ಟುಕೊಡದ ಭಾರತ – ಭರ್ಜರಿ 255 ರನ್‌ಗಳ ಮುನ್ನಡೆ

    – ಆಂಗ್ಲರ ಬೆವರಿಳಿಸಿದ ಟೀಂ ಇಂಡಿಯಾ ಬ್ಯಾಟರ್ಸ್‌

    ಧರ್ಮಶಾಲಾ: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಅಂತಿಮ ಹಾಗೂ 5ನೇ ಟೆಸ್ಟ್‌ ಪಂದ್ಯದಲ್ಲಿ 2ನೇ ದಿನವೂ ಕ್ರೀಸ್‌ ಬಿಟ್ಟುಕೊಡದ ಭಾರತ (Team India) ದಿನದ ಅಂತ್ಯಕ್ಕೆ 473 ರನ್‌ಗಳಿಸಿದೆ.

    ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಮೈದಾನದಲ್ಲಿ ಒಟ್ಟು 120 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 473 ರನ್‌ ಗಳಿಸುವ ಮೂಲಕ ಇಂಗ್ಲೆಂಡ್‌ (England) ವಿರುದ್ಧ 255 ರನ್‌ಗಳ ಮುನ್ನಡೆ ಸಾಧಿಸಿದೆ. ಅಲ್ಲದೇ 3ನೇ ದಿನಕ್ಕೆ ಕ್ರೀಸ್‌ ಉಳಿಸಿಕೊಂಡಿದೆ. ಇದನ್ನೂ ಓದಿ: ಫ್ರೀ.. ಫ್ರೀ.. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಡಿಸ್ನಿ+ ಹಾಟ್‍ಸ್ಟಾರ್‌ನಲ್ಲಿ ಫ್ರೀ

    ಮೊದಲ ದಿನದ ಅಂತ್ಯಕ್ಕೆ 30 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡಿದ್ದ ಭಾರತ 135 ರನ್‌ ಗಳಿಸಿತ್ತು. ಆ ಮೂಲಕ 83 ರನ್‌ಗಳ ಹಿನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿತು. ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್‌ ಜೊತೆಗೂಡಿ ಶತಕದ ಜೊತೆಯಾಟವಾಡಿದ್ದ ನಾಯಕ ರೋಹಿತ್‌ ಶರ್ಮಾ‌ (Rohit Sharma), 2ನೇ ದಿನದಲ್ಲಿ ಶುಭಮನ್‌ ಗಿಲ್‌ (Shubman Gill) ಜೊತೆಯಾಗಿ 244 ಎಸೆತಗಳಲ್ಲಿ 171 ರನ್‌ ಜೊತೆಯಾಟ ನೀಡಿದರು. ಈ ಮೂಲಕ ಇಂಗ್ಲೆಂಡ್‌ ವಿರುದ್ಧ ಮೇಲುಗೈ ಮೇಲುಗೈ ಸಾಧಿಸುವಂತೆ ಮಾಡಿದರು. ಇದರೊಂದಿಗೆ ಮಧ್ಯಮ ಕ್ರಮಾಂಕಲ್ಲಿ ಸರ್ಫರಾಜ್‌ ಖಾನ್‌, ದೇವದತ್‌ ಪಡಿಕಲ್‌ ಅವರ ಅರ್ಧಶತಕಗಳ ಬ್ಯಾಟಿಂಗ್‌ ನೆರವು ಟೀಂ ಇಂಡಿಯಾ ಬೃಹತ್‌ ಮೊತ್ತಕ್ಕೆ ಕಾರಣವಾಯಿತು.

    ಗಿಲ್‌, ರೋಹಿತ್‌ ಶತಕಗಳ ಮಿಂಚು:
    2ನೇ ದಿನದಾಟದಲ್ಲಿ ಭದ್ರವಾಗಿ ಕ್ರೀಸ್‌ನಲ್ಲಿ ನೆಲೆಯೂರಿದ್ದ ಶುಭಮನ್‌ ಗಿಲ್‌ ಹಾಗೂ ರೋಹಿತ್‌ ಶರ್ಮಾ ಇಬ್ಬರೂ ಶತಕ ಸಿಡಿಸಿ ಮಿಂಚಿದರು. ನಾಯಕ ರೋಹಿತ್‌ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಬದುಕಿನ 12ನೇ ಶತಕ ಪೂರೈಸಿದರು. 162 ಎಸೆತಗಳಲ್ಲಿ 103 ರನ್‌ (13, ಬೌಂಡರಿ, 3 ಸಿಕ್ಸರ್)‌ ಬಾರಿಸುವ ಮೂಲಕ ಹಲವು ದಾಖಲೆಗಳನ್ನೂ ಮುಡಿಗೇರಿಸಿಕೊಂಡರು. ಇದನ್ನೂ ಓದಿ: ಯಶಸ್ವಿ ಅರ್ಧಶತಕ – 700 ರನ್‌ ಸಿಡಿಸಿ ಸಚಿನ್‌, ಕೊಹ್ಲಿ ದಾಖಲೆ ಉಡೀಸ್‌

    ಈ ಬೆನ್ನಲ್ಲೇ ಶುಭಮನ್‌ ಗಿಲ್‌ 110 ರನ್‌ (150 ಎಸೆತ, 12 ಬೌಂಡರಿ, 5 ಸಿಕ್ಸರ್‌), ದೇವದತ್‌ ಪಡಿಕಲ್‌ 65 ರನ್‌ (103 ಎಸೆತ, 10 ಬೌಂಡರಿ, 1 ಸಿಕ್ಸರ್‌), ಸರ್ಫರಾಜ್‌ ಖಾನ್‌ 56 ರನ್‌ (60 ಎಸೆತ, 1 ಸಿಕ್ಸರ್‌, 8 ಬೌಂಡರಿ), ರವೀಂದ್ರ ಜಡೇಜಾ 15 ರನ್‌, ಧ್ರುವ್‌ ಜುರೆಲ್‌ 15 ರನ್‌ ಗಳಿಸಿದ್ರೆ ಅಶ್ವಿನ್‌ ಶೂನ್ಯ ಸುತ್ತಿದರು. ಸದ್ಯ ಕುಲ್ದೀಪ್‌ 27 ರನ್‌, ಜಸ್ಪ್ರೀತ್‌ ಬುಮ್ರಾ 19 ರನ್‌ ಗಳಿಸಿದ್ದು, 3ನೇ ದಿನಕ್ಕೆ ಕ್ರೀಸ್‌ ಉಳಿಸಿಕೊಂಡಿದ್ದಾರೆ.

    ಇಂಗ್ಲೆಂಡ್‌ ಪರ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ಶೋಯೆಬ್‌ ಬಷೀರ್‌ (Shoaib Bashir) 4 ವಿಕೆಟ್‌ ಪಡೆದರೆ, ಟಾಮ್‌ ಹಾರ್ಟ್ಲಿ 2 ವಿಕೆಟ್‌ ಹಾಗೂ ಜೇಮ್ಸ್‌ ಆಂಡರ್ಸನ್‌ ಮತ್ತು ಬೆನ್‌ಸ್ಟೋಕ್ಸ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.  ಇದನ್ನೂ ಓದಿ: T20 World Cup: ಅಬ್ಬಬ್ಬಾ! ಇಂಡೋ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ ಕೇಳಿದ್ರೆ ಎದೆಬಡಿತ ಜೋರಾಗುತ್ತೆ

  • India vs England, 5th Test Day 1: ಕುಲ್ದೀಪ್‌ಗೆ 5 ವಿಕೆಟ್‌; 218 ರನ್‌ಗಳಿಗೆ ಇಂಗ್ಲೆಂಡ್‌ ಆಲೌಟ್‌

    India vs England, 5th Test Day 1: ಕುಲ್ದೀಪ್‌ಗೆ 5 ವಿಕೆಟ್‌; 218 ರನ್‌ಗಳಿಗೆ ಇಂಗ್ಲೆಂಡ್‌ ಆಲೌಟ್‌

    – 100ನೇ ಟೆಸ್ಟ್‌ ಪಂದ್ಯದಲ್ಲಿ ಅಶ್ವಿನ್‌ಗೆ 4 ವಿಕೆಟ್‌
    – ಜೈಸ್ವಾಲ್‌ ಫಿಫ್ಟಿ; ಅರ್ಧಶತಕ ಬಾರಿಸಿ ಕ್ರೀಸ್‌ನಲ್ಲಿ ರೋಹಿತ್‌ ಶರ್ಮಾ

    ಧರ್ಮಶಾಲಾ: ಭಾರತ ತಂಡದ ಕುಲ್ದೀಪ್‌ ಯಾದವ್‌ ಹಾಗೂ ಆರ್‌.ಅಶ್ವಿನ್‌ ಅವರ ಸ್ಪಿನ್‌ ದಾಳಿಗೆ ತತ್ತರಿಸಿದ ಆಂಗ್ಲರ ಪಡೆ ಇಲ್ಲಿ ನಡೆಯುತ್ತಿರುವ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 57.4 ಓವರ್‌ಗೆ 218 ರನ್‌ಗಳಿಗೆ ಆಲೌಟ್‌ ಆಗಿದೆ.

    ಟಾಸ್‌ ಗೆದ್ದು ಇಂಗ್ಲೆಂಡ್‌ (England) ತಂಡ ಮೊದಲ ಬ್ಯಾಟಿಂಗ್‌ ಆಯ್ದುಕೊಂಡಿತು. ಉತ್ತಮ ಶುಭಾರಂಭ ಪಡೆದರೂ ಇಂಗ್ಲೆಂಡ್‌ ತಂಡದ ಬ್ಯಾಟರ್‌ಗಳ ವೈಫಲ್ಯ ಅನುಭವಿಸಿದರು. ಇದನ್ನೂ ಓದಿ: ಕಳಪೆ ಬೌಲಿಂಗ್‌, ಬ್ಯಾಟಿಂಗ್‌ನಿಂದ RCBಗೆ ಸೋಲು – WPL 2ನೇ ಆವೃತ್ತಿಯಲ್ಲಿ ಗುಜರಾತ್‌ಗೆ ಚೊಚ್ಚಲ ಜಯ

    ಜಾಕ್ ಕ್ರಾಲಿ (Zak Crawley) ಬಿಟ್ಟರೆ ಆಂಗ್ಲ ಪಡೆಯ ಯಾವೊಬ್ಬ ಆಟಗಾರನೂ ಹೆಚ್ಚು ಸಮಯ ಕ್ರೀಜ್‌ನಲ್ಲಿ ನಿಲ್ಲಲಿಲ್ಲ. ಜಾಕ್‌ ಕ್ರಾಲಿ 79 (11 ಫೋರ್‌, 1 ಸಿಕ್ಸರ್‌) ಸಿಡಿಸಿ ಕುಲ್ದೀಪ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿ ನಡೆದರು. ಇವರ ಬೆನ್ನಲ್ಲೇ ಎಲ್ಲಾ ಆಟಗಾರರು ಅಲ್ಪ ಮೊತ್ತಕ್ಕೆ ಒಬ್ಬೊಬ್ಬರಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು.

    ಬೆನ್ ಡಕೆಟ್ 27, ಓಲಿ ಪೋಪ್‌ 11, ಜೋ ರೂಟ್‌ 26, ಜಾನಿ ಬೈರ್ಸ್ಟೋವ್ 29 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಬೆನ್‌ ಸ್ಟೋಕ್ಸ್‌ ರನ್‌ ಖಾತೆ ತೆರೆಯದೇ ಶೂನ್ಯ ಸುತ್ತಿ ಔಟಾದರು. ಇದನ್ನೂ ಓದಿ: ಮಾ.7 ರಿಂದ ಇಂಗ್ಲೆಂಡ್‌ ವಿರುದ್ಧ ಫೈನಲ್‌ ಟೆಸ್ಟ್‌ – ಹಲವು ದಾಖಲೆ ನಿರ್ಮಿಸಲು ಭಾರತ ವೇಯ್ಟಿಂಗ್‌

    ಬೆನ್‌ ಫೋಕ್ಸ್‌ 24, ಟಾಮ್ ಹಾರ್ಟ್ಲಿ 6 ರನ್‌ ಗಳಿಸಿ ಔಟಾದರೆ, ಮಾರ್ಕ್ ವುಡ್ ಮತ್ತು ಜೇಮ್ಸ್ ಆಂಡರ್ಸನ್ ಶೂನ್ಯ ಸುತ್ತಿದರು. ಶೋಯೆಬ್ ಬಶೀರ್ ಅಜೇಯ 11 ಗಳಿಸಿದರು.

    ಕುಲ್ದೀಪ್‌, ಅಶ್ವಿನ್‌ ಮಿಂಚು
    ಭಾರತ (India) ತಂಡದ ಕುಲ್ದೀಪ್‌ ಯಾದವ್‌ (Kuldeep Yadav) ಮತ್ತು ಆರ್‌.ಅಶ್ವಿನ್‌ (R.Ashwin) ಸ್ಪಿನ್‌ ದಾಳಿಗೆ ಆಂಗ್ಲರ ಪಡೆ ಮಂಡಿಯೂರಿತು. ಕುಲ್ದೀಪ್‌ 5 ವಿಕೆಟ್‌ ಕಿತ್ತು ಮಿಂಚಿದರು. 100 ನೇ ಟೆಸ್ಟ್‌ ಪಂದ್ಯ ಆಡುತ್ತಿರುವ ಅಶ್ವಿನ್‌ 4 ಬೀಳಿಸಿದ್ದಾರೆ. ರವೀಂದ್ರ ಜಡೇಜಾ 1 ವಿಕೆಟ್‌ ಕಬಳಿಸಿದರು. ಇದನ್ನೂ ಓದಿ: ಮೆಗ್‌ ಲ್ಯಾನಿಂಗ್‌, ರಾಡ್ರಿಗಾಸ್‌ ಫಿಫ್ಟಿ; ಮುಂಬೈ ವಿರುದ್ಧ ಡೆಲ್ಲಿಗೆ 29 ರನ್‌ಗಳ ಗೆಲುವು

    ಜೈಸ್ವಾಲ್‌, ರೋಹಿತ್‌ ಫಿಫ್ಟಿ
    ಮೊದಲ ಇನಿಂಗ್ಸ್‌ ಬ್ಯಾಟಿಂಗ್‌ ನಡೆಸುತ್ತಿರುವ ಭಾರತ ಆರಂಭದಲ್ಲೇ ಉತ್ತಮ ಪ್ರದರ್ಶನ ತೋರಿದೆ. ಓಪನರ್‌ಗಳಾದ ಯಶಸ್ವಿ ಜೈಸ್ವಾಲ್‌ (Yashavi Jaiswal) ಮತ್ತು ರೋಹಿತ್‌ ಶರ್ಮಾ (Rohit Sharma) ಅರ್ಧಶತಕ ಗಳಿಸಿ ಮಿಂಚಿದ್ದಾರೆ. ಜೈಸ್ವಾಲ್‌ 57 (58 ಬಾಲ್‌, 5 ಫೋರ್‌, 3 ಸಿಕ್ಸರ್‌) ಬಾರಿಸಿ ಶೋಯೆಬ್‌ ಬಶೀರ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ರೋಹಿತ್‌ ಶರ್ಮಾ 52 ಹಾಗೂ ಶುಭಮನ್‌ ಗಿಲ್‌ 26 ಗಳಿಸಿ ಕ್ರೀಸ್‌ನಲ್ಲಿದ್ದಾರೆ.

    ಮೊದಲ ಇನಿಂಗ್ಸ್‌ನ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 30 ಓವರ್‌ಗಳಿಗೆ 1 ವಿಕೆಟ್‌ ನಷ್ಟಕ್ಕೆ 135 ರನ್‌ ಗಳಿಸಿದೆ. ಆ ಮೂಲಕ 83 ರನ್‌ಗಳ ಹಿನ್ನಡೆಯಲ್ಲಿದೆ. ಇದನ್ನೂ ಓದಿ: ಫ್ರೀ.. ಫ್ರೀ.. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಡಿಸ್ನಿ+ ಹಾಟ್‍ಸ್ಟಾರ್‌ನಲ್ಲಿ ಫ್ರೀ

  • ನಲುಗಿದ ಆಂಗ್ಲ ಪಡೆಗೆ ರೂಟ್‌ ಶತಕದ ಬಲ – ಮೊದಲ ದಿನವೇ 300ರ ಗಡಿ ದಾಟಿದ ಇಂಗ್ಲೆಂಡ್‌

    ನಲುಗಿದ ಆಂಗ್ಲ ಪಡೆಗೆ ರೂಟ್‌ ಶತಕದ ಬಲ – ಮೊದಲ ದಿನವೇ 300ರ ಗಡಿ ದಾಟಿದ ಇಂಗ್ಲೆಂಡ್‌

    ರಾಂಚಿ: ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಇಂಡಿಯಾ (Team India) ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ (England) 7 ವಿಕೆಟ್‍ಗಳ ನಷ್ಟಕ್ಕೆ 302 ರನ್‍ಗಳಿಸಿದೆ.

    ಇಂಗ್ಲೆಂಡ್ ಪರ ಬ್ಯಾಟ್ ಬೀಸಿದ ಜೋ ರೂಟ್ 226 ಎಸೆತಗಳಿಗೆ 9 ಬೌಂಡರಿ ಚಚ್ಚುವ ಮೂಲಕ ಶತಕ ಸಿಡಿಸಿದ್ದಾರೆ. ಈ ಮೂಲಕ 106 ರನ್‍ಗಳನ್ನು ಕಲೆ ಹಾಕಿ ಕ್ರೀಸ್‍ನಲ್ಲೇ ಉಳಿದಿದ್ದಾರೆ. ಝಾಕ್ ಕ್ರಾವ್ಲಿ 42 ಎಸೆತಗಳಿಗೆ 42 ರನ್ ಗಳಿಸಿ ಔಟಾಗಿದ್ದಾರೆ. ಬೆನ್ ಡಕೆಟ್ 21 ಎಸೆತಗಳಿಗೆ 11 ರನ್‍ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

    ಬೈಸ್ರ್ಟೋವ್ 35 ಎಸೆತಗಳಲ್ಲಿ 38 ರನ್ ಗಳಿಸಿ ಔಟಾಗಿದ್ದಾರೆ. ಬೆನ್ ಫೋಕ್ಸ್ ನಾಲ್ಕು ಬೌಂಡರಿ ಚಚ್ಚಿ, ಒಂದು ಸಿಕ್ಸ್ ಸಿಡಿಸುವ ಮೂಲಕ 126 ಎಸೆತಗಳಲ್ಲಿ 47 ರನ್ ಗಳಿಸಿ ಸಿರಾಜ್ ಬೌಲಿಂಗ್ ದಾಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನೂ ಟಾಮ್ ಹಾಟ್ರ್ಲಿ ಒಂದು ಸಿಕ್ಸ್ ಒಂದು ಫೋರ್ ಸೇರಿ 13 ರನ್‍ಗಳಿಸಿ ಔಟಾಗಿದ್ದಾರೆ.

    ಓಲಿ ಪೋಪ್ ಕೇವಲ ಎರಡೇ ಎಸೆತಗಳಲ್ಲಿ ಆಕಾಶ್ ದೀಪ್ ಬೌಲಿಂಗ್‍ಗೆ ಎಲ್‍ಬಿಡಬ್ಲ್ಯೂ ಆಗಿ ಪೆವಿಲಿಯನ್‍ಗೆ ಮರಳಿದ್ದಾರೆ. ರಾಬಿನ್ಸನ್ 60 ಎಸೆತಗಳಲ್ಲಿ ನಾಲ್ಕು ಬೌಂಡರಿ ಒಂದು ಸಿಕ್ಸ್ ಸೇರಿ 31 ರನ್ ಕಲೆ ಹಾಕಿ ಔಟಾಗದೇ ಉಳಿದಿದ್ದಾರೆ.

    ಭಾರತದ ಪರವಾಗಿ ಸಿರಾಜ್ (Mohammed Siraj) 2, ಆಕಾಶ್ ದೀಪ್ (Akash Deep) 3, ಜಡೇಜಾ 1, ಅಶ್ವಿನ್ 1 ವಿಕೆಟ್ ಕಬಳಿಸಿದ್ದಾರೆ.

  • ಜೈಸ್ವಾಲ್‌, ಜಡೇಜಾ ಶೈನ್‌; ಆಂಗ್ಲರ ವಿರುದ್ಧ ಭಾರತಕ್ಕೆ 434 ರನ್‌ ಗೆಲುವು – ಟೆಸ್ಟ್‌ ಸರಣಿ ಕೈವಶಕ್ಕೆ ಇನ್ನೊಂದೇ ಹೆಜ್ಜೆ

    ಜೈಸ್ವಾಲ್‌, ಜಡೇಜಾ ಶೈನ್‌; ಆಂಗ್ಲರ ವಿರುದ್ಧ ಭಾರತಕ್ಕೆ 434 ರನ್‌ ಗೆಲುವು – ಟೆಸ್ಟ್‌ ಸರಣಿ ಕೈವಶಕ್ಕೆ ಇನ್ನೊಂದೇ ಹೆಜ್ಜೆ

    ರಾಜ್‌ಕೋಟ್‌: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಅಮೋಘ ದ್ವಿಶತಕ ಮತ್ತು ಜಡೇಜಾ ಸ್ಪಿನ್‌ ದಾಳಿ (5 ವಿಕೆಟ್‌ ನೆರವಿನಿಂದ ಭಾರತ ತಂಡ 434 ರನ್‌ಗಳಿಂದ ಗೆದ್ದು ಬೀಗಿದೆ. ಆ ಮೂಲಕ 5 ಟೆಸ್ಟ್‌ ಸರಣಿಯ ಕೈವಶ ಮಾಡಿಕೊಳ್ಳಲು ಇನ್ನೊಂದು ಹೆಜ್ಜೆ ಬಾಕಿ ಇದೆ.

    ಟೀಂ ಇಂಡಿಯಾ ನೀಡಿದ್ದ 557 ರನ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 122ಕ್ಕೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲನುಭವಿಸಿತು. 5 ಟೆಸ್ಟ್‌ ಸರಣಿಯಲ್ಲಿ ಈಗ ಭಾರತ 2 ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್‌ ಒಂದು ಪಂದ್ಯ ಗೆದ್ದಿದೆ. ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ 434 ರನ್‌ಗಳ ದಾಖಲೆ ಜಯ – ಭಾರತದ ಟಾಪ್-5 ಟೆಸ್ಟ್ ಲಿಸ್ಟ್!

    557 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ಗೆ ಆಧಾರವಾಗಿ ಯಾರೂ ನಿಲ್ಲಲೇ ಇಲ್ಲ. ತಂಡದ ಮೊತ್ತ 28 ರನ್ ಆದಾಗ ಇಂಗ್ಲೆಂಡ್ ಆಗಲೇ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

    ಮೊದಲ ಇನ್ನಿಂಗ್ಸ್‌ನಲ್ಲಿ 153 ರನ್‌ಗಳ ಸ್ಫೋಟಕ ಆಟವಾಡಿದ್ದ ಆರಂಭಿಕ ಆಟಗಾರ ಬೆನ್ ಡಕೆಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್ ಗಳಿಸಿ ಔಟಾದರು.

    6ನೇ ಓವರ್‌ನಲ್ಲಿ ಇಂಗ್ಲೆಂಡ್ ತಂಡ 15 ರನ್ ಗಳಿಸಿದ್ದಾಗ ಡಕೆಟ್ ಔಟಾದರು. ಮತ್ತೆ ಮೂರು ರನ್ ಸೇರಿಸುವಷ್ಟರಲ್ಲಿ ಇನ್ನೊಬ್ಬ ಆರಂಭಿಕ ಆಟಗಾರ ಝಕ್ ಕ್ರಾಲಿ 11 ರನ್ ಗೆ ಔಟಾದರು. ಬೂಮ್ರಾ ಎಸೆತಕ್ಕೆ ಕ್ರಾಲಿ ಎಲ್‌ಬಿಡಬ್ಲ್ಯೂಗೆ ಬಲಿಯಾದರು. ಇದನ್ನೂ ಓದಿ: ತಾಯಿ ಆಸ್ಪತ್ರೆಯಲ್ಲಿದ್ದರೂ ದೇಶಕ್ಕಾಗಿ ಓಡೋಡಿ ಬಂದ ಅಶ್ವಿನ್‌!

    10ನೇ ಓವರ್‌ನಲ್ಲಿ ಜಡೇಜಾ ಎಸೆತಕ್ಕೆ ಬ್ಯಾಟ್ ಬೀಸಿದ ಓಲ್ಲಿ ಪೊಪೆ 3 ರನ್ ಗಳಿಸಿ ಔಟಾದರು. 12ನೇ ಓವರ್‌ನಲ್ಲಿ ಜಾನಿ ಬೇರ್‌ಸ್ಟೋ 4 ರನ್ ಗಳಿಸಿ ರವೀಂದ್ರ ಜಡೇಜಾಗೆ ಎಲ್‌ಬಿಡಬ್ಲ್ಯೂಗೆ ಬಲಿಯಾದರು.

    ತಂಡದ ಮೊತ್ತ 50 ತಲುಪಿದಾಗ ಇಂಗ್ಲೆಂಡ್ ಮತ್ತೆ 3 ವಿಕೆಟ್ ಕಳೆದುಕೊಂಡಿತು. ಜೋ ರೂಟ್ 4 ರನ್ ಗೆ ಔಟಾದರೆ, ಬೆನ್ ಸ್ಟೋಕ್ಸ್ 15 ಹಾಗೂ ರೆಹಾನ್ ಅಹ್ಮದ್ ಶೂನ್ಯ ಸುತ್ತಿ ಪೆವಿಲಿಯನ್‌ನತ್ತ ಮುಖ ಮಾಡಿದರು.

    36ನೇ ಓವರ್‌ನಲ್ಲಿ ಬೆನ್ ಫೋಕ್ಸ್ 16 ರನ್ ಗಳಿಸಿ ಜಡೇಜಾ ಬೌಲಿಂಗ್‌ನಲ್ಲಿ ಔಟಾದರು. 37ನೇ ಓವರ್‌ನಲ್ಲಿ ತಂಡದ ಮೊತ್ತ 91 ತಲುಪಿದಾಗ ಟಾಮ್ ಹಾರ್ಟ್ಲಿ ಔಟಾದರು. ಕೊನೆಯದಾಗಿ ಮಾರ್ಕ್ ವುಡ್ 33 ರನ್ ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು.

    ಜಡೇಜಾಗೆ 5 ವಿಕೆಟ್
    ಟೀಂ ಇಂಡಿಯಾ ಪರವಾಗಿ ಜಡೇಜಾ 5, ಕುಲ್ದೀಪ್ ಯಾದವ್ 2, ಜಸ್ಪ್ರಿತ್‌ ಬೂಮ್ರಾ 1 ಹಾಗೂ ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಇದನ್ನೂ ಓದಿ: India vs England, 3rd Test – ಜೈಸ್ವಾಲ್ ದ್ವಿಶತಕ – ಇಂಗ್ಲೆಂಡ್‍ಗೆ 557 ರನ್ ಗುರಿ ನೀಡಿದ ಟೀಂ ಇಂಡಿಯಾ

    ಮತ್ತೆ ಟೀಂ ಸೇರಿಕೊಂಡ ಅಶ್ವಿನ್
    ಫ್ಯಾಮಿಲಿ ಎಮರ್ಜೆನ್ಸಿ ಎಂದು ರಾಜ್‌ಕೋಟ್‌ನಿಂದ ಹೊರಟಿದ್ದ ರವಿಚಂದ್ರನ್ ಅಶ್ವಿನ್ ಇಂದು ಮತ್ತೆ ತಂಡಕ್ಕೆ ವಾಪಾಸ್ ಆದರು. ಈ ಪಂದ್ಯಲ್ಲಿ 1 ವಿಕೆಟ್ ಪಡೆದರು.

  • India vs England, 3rd Test – ಜೈಸ್ವಾಲ್ ದ್ವಿಶತಕ – ಇಂಗ್ಲೆಂಡ್‍ಗೆ 557 ರನ್ ಗುರಿ ನೀಡಿದ ಟೀಂ ಇಂಡಿಯಾ

    India vs England, 3rd Test – ಜೈಸ್ವಾಲ್ ದ್ವಿಶತಕ – ಇಂಗ್ಲೆಂಡ್‍ಗೆ 557 ರನ್ ಗುರಿ ನೀಡಿದ ಟೀಂ ಇಂಡಿಯಾ

    ರಾಜ್‍ಕೋಟ್: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ (Team India) ಇಂಗ್ಲೆಂಡ್‍ಗೆ 557 ರನ್‍ಗಳ ಬೃಹತ್ ಗುರಿ ನೀಡಿದೆ.

    ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಎರಡನೇ ದ್ವಿಶತಕ ಹಾಗೂ ಶುಭಮನ್ ಗಿಲ್ ಮತ್ತು ಸರ್ಫರಾಜ್ ಖಾನ್ ಅರ್ಧಶತಕದ ನೆರವಿನಿಂದ ಭಾರತ ಈ ಮೊತ್ತ ಕಲೆಹಾಕಿದೆ. ಮೂರನೇ ದಿನದ ಆಟದ ವೇಳೆ ಗಾಯಗೊಂಡು ಹೊರಹೋಗಿದ್ದ ಜೈಸ್ವಾಲ್, ಇಂದು ಮತ್ತೆ ಕ್ರೀಸ್‍ಗೆ ಆಗಮಿಸಿ ತಮ್ಮ ಶತಕವನ್ನು ದ್ವಿಶತಕ್ಕೆ ಏರಿಸಿದರು. 236 ಎಸೆತಗಳಲ್ಲಿ 214 ರನ್ ಗಳಿಸಿದ ಅವರು ಇನ್ನಿಂಗ್ಸ್‍ನಲ್ಲಿ 12 ಸಿಕ್ಸರ್ ಹಾಗೂ 14 ಬೌಂಡರಿಗಳನ್ನು ಸಿಡಿಸಿದರು.

    91 ರನ್ ಗಳಿಸಿ ಗಿಲ್ ಶತಕ ವಂಚಿತರಾದರು. ಎರಡನೇ ಇನ್ನಿಂಗ್ಸ್‍ನಲ್ಲೂ ಸರಾಗವಾಗಿ ಬ್ಯಾಟ್ ಬೀಸಿದ ಸರ್ಫರಾಜ್ ಖಾನ್ 72 ಎಸೆತಗಳಲ್ಲಿ 68 ರನ್ ದಾಖಲಿಸಿದರು. ತಂಡದ ಮೊತ್ತ 430 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.

    ಇಂಗ್ಲೆಂಡ್ ಪರ ಜೋ ರೋಟ್, ಟಾಮ್ ಹಾಟ್ರ್ಸ್ ಹಾಗೂ ರೆಹಾನ್ ಅಹಮದ್ ತಲಾ ಒಂದು ವಿಕೆಟ್ ಉರುಳಿಸಿದರು.

    ಯಶಸ್ವಿ ಜೈಸ್ವಾಲ್ ಶತಕದ ನೆರವಿನಿಂದ ಟೀಂ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 322 ರನ್‍ಗಳ ಮುನ್ನಡೆ ಸಾಧಿಸಿತ್ತು. ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 19 ರನ್ ಗಳಿಸಿ ಔಟಾಗಿದ್ದರು. ನಂತರ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಉತ್ತಮ ಜೊತೆಯಾಟವಾಡಿದರು. ಜೈಸ್ವಾಲ್ 103 (133 ಬಾಲ್, 5 ಸಿಕ್ಸರ್, 9 ಫೋರ್) ಸಿಡಿಸಿ ಮಿಂಚಿದ್ದರು. ಆಟದ ವೇಳೆ ಬೆನ್ನು ನೋವಿನ ಸಮಸ್ಯೆಯಿಂದ ರಿಟೈರ್ಡ್ ಹರ್ಟ್ ಆಗಿ ಹೊರನಡೆದಿದ್ದರು. ರಜತ್ ಪಾಟಿದಾರ್ ಶೂನ್ಯಕ್ಕೆ ಔಟಾದರು. ಶುಭಮನ್ ಗಿಲ್ ಅರ್ಧಶತಕ ಬಾರಿಸಿ (64) ಸಿಡಿಸಿದ್ದರು.

    ಇದೀಗ 557 ರನ್‍ಗಳ ಗುರಿ ಪಡೆದ ಇಂಗ್ಲೆಂಡ್ ಆಟ ಆರಂಭಿಸಿದೆ.

  • 3rd Test: ರೋಹಿತ್‌, ಜಡೇಜಾ ಶತಕ; ಸರ್ಫರಾಜ್‌ ಫಿಫ್ಟಿ – ಭಾರತ ಮೊದಲ ದಿನದಾಟದ ಅಂತ್ಯಕ್ಕೆ 326/5

    3rd Test: ರೋಹಿತ್‌, ಜಡೇಜಾ ಶತಕ; ಸರ್ಫರಾಜ್‌ ಫಿಫ್ಟಿ – ಭಾರತ ಮೊದಲ ದಿನದಾಟದ ಅಂತ್ಯಕ್ಕೆ 326/5

    ರಾಜ್‌ಕೋಟ್‌: ಇಂಗ್ಲೆಂಡ್‌ (India vs England 3rd Test) ವಿರುದ್ಧದ ಟೆಸ್ಟ್‌ ಸರಣಿಯ 3ನೇ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 326 ರನ್‌ ಗಳಿಸಿದೆ.

    ಭಾರತ ತಂಡದ ನಾಯಕ ರೋಹಿತ್‌ ಶರ್ಮಾ (131 ರನ್‌, 14 ಫೋರ್‌, 3 ಸಿಕ್ಸರ್‌) ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜಾ (110 ರನ್‌, 9 ಫೋರ್‌, 2) ಶತಕ ಮಿಂಚಿದ್ದಾರೆ. ಪದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್‌ ಖಾನ್‌ (62 ರನ್‌, 9 ಫೋರ್‌, 1 ಸಿಕ್ಸರ್‌) ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ರೋಹಿತ್‌ ಬೊಂಬಾಟ್‌ ಶತಕ – ಮಹಿ ಸಿಕ್ಸರ್‌ ದಾಖಲೆ ಮುರಿದ ಹಿಟ್‌ಮ್ಯಾನ್‌

    ಕಳೆದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಯಶಸ್ವಿ ಜೈಸ್ವಾಲ್‌ 10 ರನ್‌ ಗಳಿಸಿ ಔಟಾದರು. ರೋಹಿತ್‌ ಶರ್ಮಾ 131 ರನ್‌ ಗಳಿಸಿ ಮಾರ್ಕ್‌ವುಡ್‌ಗೆ ಔಟಾದರು.

    ಶುಭಮನ್‌ ಗಿಲ್‌ ಶೂನ್ಯಕ್ಕೆ ಪೆವಿಲಿಯನ್‌ ಸೇರಿ ನಿರಾಸೆ ಮೂಡಿಸಿದರು. ರಜತ್‌ ಪಾಟೀದಾರ್‌ 5 ರನ್‌ ಗಳಿಸಿ ಕ್ಯಾಚ್‌ ನೀಡಿ ಔಟಾದರು. ಸರ್ಫರಾಜ್‌ ಖಾನ್‌ ಅರ್ಧಶತಕ ಗಳಿಸಿ ರನೌಟ್‌ ಆದರು. ರವೀಂದ್ರ ಜಡೇಜಾ 110 ರನ್‌ ಗಳಿಸಿ ಆಡುತ್ತಿದ್ದಾರೆ. ಇದನ್ನೂ ಓದಿ: ವಿದೇಶದಲ್ಲಿ ಅಲ್ಲ, ಈ ಬಾರಿಯೂ ಭಾರತದಲ್ಲೇ IPL – ಯಾವಾಗಿನಿಂದ ಶುರು?

    ಇಂಗ್ಲೆಂಡ್‌ ಪರ ಮಾರ್ಕ್‌ ವುಡ್‌ 3, ಟಾಮ್ ಹಾರ್ಟ್ಲಿ 1 ವಿಕೆಟ್‌ ಕಿತ್ತಿದ್ದಾರೆ. ಆಡಿರುವ 2 ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿವೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 28 ರನ್‌ ಅಂತರದಿಂದ ಇಂಗ್ಲೆಂಡ್‌ ಗೆದ್ದಿತ್ತು. 2ನೇ ಪಂದ್ಯವನ್ನು 106 ರನ್‌ ಅಂತರದಿಂದ ಸೋತಿತ್ತು. ಈಗ ಉಭಯ ತಂಡಗಳು ಮುನ್ನಡೆ ಸಾಧಿಸುವ ಲೆಕ್ಕಾಚಾರದಲ್ಲಿವೆ.

  • India vs England 2nd Test: 255 ಕ್ಕೆ ಭಾರತ ಆಲೌಟ್‌, ಇಂಗ್ಲೆಂಡ್‌ಗೆ 399 ರನ್‌ ಗುರಿ

    India vs England 2nd Test: 255 ಕ್ಕೆ ಭಾರತ ಆಲೌಟ್‌, ಇಂಗ್ಲೆಂಡ್‌ಗೆ 399 ರನ್‌ ಗುರಿ

    – ಶುಭಮನ್‌ ಗಿಲ್‌ ಅಮೋಘ ಶತಕ

    ವಿಶಾಖಪಟ್ಟಣಂ: ಇಂಗ್ಲೆಂಡ್‌ (India-England 2nd Test) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟರ್‌ ಶುಭಮನ್‌ ಗಿಲ್‌ (Shubman Gill) ಅವರ ಅಮೋಘ ಶತಕದಾಟದೊಂದಿಗೆ ಭಾರತ ತಂಡವು 78.3 ಓವರ್‌ಗೆ 255 ರನ್‌ ಗಳಿಸಿ ಆಲೌಟ್‌ ಆಗಿದೆ. ಇಂಗ್ಲೆಂಡ್‌ ಗೆಲುವಿಗೆ 399 ರನ್‌ಗಳ ಗುರಿ ನೀಡಿದೆ.

    ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಭಾರತ 255 ರನ್ ಗಳಿಸಿತು. 28/0 ಇರುವಾಗಲೇ ರೋಹಿತ್ ಶರ್ಮಾ (13) ಮತ್ತು ಯಶಸ್ವಿ ಜೈಸ್ವಾಲ್ (17) ಎರಡು ಆರಂಭಿಕ ವಿಕೆಟ್‌ಗಳನ್ನು ಭಾರತ ಕಳೆದುಕೊಂಡಿತು. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ ಪಂದ್ಯದಿಂದಲೂ ಕೊಹ್ಲಿ ಔಟ್‌?

    ಈ ವೇಳೆ ಶುಭಮನ್‌ ಗಿಲ್‌ ತಂಡದ ಪರ ಲಯ ಕಾಯ್ದುಕೊಂಡು, 104 ರನ್ (147 ಬಾಲ್‌, 11 ಫೋರ್‌, 2 ಸಿಕ್ಸರ್‌) ಗಳಿಸಿದರು. ಅಕ್ಷರ್ ಪಟೇಲ್ ಕೂಡ 45 ರನ್ ಗಳಿಸಿ ಅರ್ಧಶತಕ ವಂಚಿತರಾದರು.

    ಶ್ರೇಯಸ್‌ ಅಯ್ಯರ್‌ (29), ರಜತ್‌ ಪಾಟಿದಾರ್‌ (9), ಶ್ರೀಕಾಂತ್‌ ಭರತ್‌ (6), ರವಿಚಂದ್ರನ್‌ ಅಶ್ವಿನ್‌ (29) ರನ್‌ ಗಳಿಸಿದರು. ಬೌಲರ್‌ಗಳಾದ ಕುಲದೀಪ್‌ ಯಾದವ್‌, ಜಸ್ಪ್ರೀತ್‌ ಬುಮ್ರಾ, ಮುಕೇಶ್‌ ಕುಮಾರ್‌ ಡಕೌಟ್‌ ಆದರು. ಇದನ್ನೂ ಓದಿ: ಬೆಂಕಿ ದಾಳಿಗೆ ಆಂಗ್ಲರ ಪಡೆ ಛಿದ್ರ ಛಿದ್ರ – 6 ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದ ಬುಮ್ರಾ

    ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲಿ 4 ವಿಕೆಟ್ ಪಡೆದರೆ ರೆಹಾನ್ ಅಹ್ಮದ್ 3 ಮತ್ತು ಜೇಮ್ಸ್ ಆಂಡರ್ಸನ್ 2 ವಿಕೆಟ್ ಪಡೆದರು.