Tag: India Under 19s

  • ಭಾರತಕ್ಕಿಂದು ಹ್ಯಾಟ್ರಿಕ್‌ ಶಾಕ್‌ – ಸತತ 2ನೇ ಬಾರಿಗೆ ಬಾಂಗ್ಲಾಗೆ U19 ಏಷ್ಯಾಕಪ್‌ ಕಿರೀಟ

    ಭಾರತಕ್ಕಿಂದು ಹ್ಯಾಟ್ರಿಕ್‌ ಶಾಕ್‌ – ಸತತ 2ನೇ ಬಾರಿಗೆ ಬಾಂಗ್ಲಾಗೆ U19 ಏಷ್ಯಾಕಪ್‌ ಕಿರೀಟ

    ಅಬುದಾಬಿ: ಇಂದಿನ ಸೂಪರ್‌ ಸಂಡೇ ಭಾರತದ ಕ್ರಿಕೆಟ್‌ ಜಗತ್ತಿನ (Indian Cricket World) ಕರಾಳ ದಿನವಾಗಿ ಪರಿಣಮಿಸಿದೆ. ಒಂದೇ ದಿನ ಹ್ಯಾಟ್ರಿಕ್‌ ಸೋಲಿನ ಬಿಸಿ ಭಾರತಕ್ಕೆ ತಟ್ಟಿದೆ.

    ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಪುರುಷರ ಕ್ರಿಕೆಟ್‌ ತಂಡ, ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿವೆ. ಇತ್ತ U19 ಏಷ್ಯಾಕಪ್‌ (U19 Asia Cup) ಟೂರ್ನಿಯಲ್ಲಿ ಭಾರತ ಪುರುಷರ ತಂಡ ಫೈನಲ್‌ನಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. U19 ಏಷ್ಯಾಕಪ್‌ ಟೂರ್ನಿಯ ಫೈನಲ್‌ನಲ್ಲಿ ಇದು ಭಾರತದ ಮೊದಲ ಸೋಲಾಗಿದೆ. ಹಾಗಾಗಿ ಬಾಂಗ್ಲಾದೇಶ (Bangladesh) U19 ಪುರುಷರ ತಂಡ ಫೈನಲ್‌ನಲ್ಲಿ ಗೆದ್ದು 2ನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಇದನ್ನೂ ಓದಿ: ಆಸೀಸ್‌ ವಿರುದ್ಧ ಹೀನಾಯ ಸೋಲು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಭಾರತ, ಫೈನಲ್‌ ಹಾದಿ ಕಠಿಣ

    ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡದ ಫೈನಲ್‌ನಲ್ಲಿ 199 ರನ್‌ಗಳ ಗುರಿ ಪಡೆದ ಭಾರತ 35.2 ಓವರ್‌ಗಳಲ್ಲೇ 139 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಬಾಂಗ್ಲಾ ತಂಡ 59 ರನ್‌ಗಳ ಗೆಲುವು ಸಾಧಿಸಿ, ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಟೆಕ್ವಾಂಡೋ ಸ್ಪರ್ಧೆ: ಪಾಣೆಮಂಗಳೂರಿನ‌ ಆಯಿಶಾ ಹಫೀಝ್‌ಗೆ ಚಿನ್ನ

    1989ರಿಂದ 9 ಬಾರಿ ಫೈನಲ್‌ ತಲುಪಿರುವ ಭಾರತ 8 ಬಾರಿ (1989, 2003, 2012, 2013/14, 2016, 2018, 2019, 2021 ರಲ್ಲಿ) ಪ್ರಶಸ್ತಿ ಗೆದ್ದುಕೊಂಡಿದೆ. ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಸೋತು ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಆದ್ರೆ ಬಾಂಗ್ಲಾದೇಶ ಮೂರು ಬಾರಿ ಫೈನಲ್‌ ತಲುಪಿ ಸತತ 2ನೇ ಬಾರಿಗೆ (2023, 2024) ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

    ಇನ್ನುಳಿದಂತೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಲಾ ಒಂದು ಬಾರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. ಇದನ್ನೂ ಓದಿ: ಐಸಿಸಿ ಅಧ್ಯಕ್ಷರಾಗಿ ಜಯ್‌ ಶಾ ಅಧಿಕಾರ ಸ್ವೀಕಾರ – ಇಂದಿನಿಂದ ಹೊಸ ಅಧ್ಯಾಯ

  • ಮತ್ತೆ ಹೀನಾಯ ಸೋಲು, ಭಾರತದ ವಿಶ್ವಕಪ್‌ ಕನಸು ಭಗ್ನ – 14 ವರ್ಷಗಳ ಬಳಿಕ ಆಸೀಸ್‌ಗೆ U19 ವಿಶ್ವಕಪ್‌ ಕಿರೀಟ!

    ಮತ್ತೆ ಹೀನಾಯ ಸೋಲು, ಭಾರತದ ವಿಶ್ವಕಪ್‌ ಕನಸು ಭಗ್ನ – 14 ವರ್ಷಗಳ ಬಳಿಕ ಆಸೀಸ್‌ಗೆ U19 ವಿಶ್ವಕಪ್‌ ಕಿರೀಟ!

    – 4ನೇ ಬಾರಿಗೆ U19 ವಿಶ್ವಕಪ್‌ ಟ್ರೋಫಿ ಗೆದ್ದ ಆಸ್ಟ್ರೇಲಿಯಾ

    ಕ್ಯಾನ್ಬೆರಾ: 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾ ವಿರುದ್ಧ 79 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ 14 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಜೊತೆಗೆ 4ನೇ ಬಾರಿಗೆ ಅಂಡರ್‌ 19 ವಿಶ್ವಕಪ್‌ ಕಿರೀಟ ತನ್ನದಾಗಿಸಿಕೊಂಡಿದೆ.

    1988ರಲ್ಲಿ ನಡೆದ ಐಸಿಸಿ ಅಂಡರ್​ 19 ವಿಶ್ವಕಪ್ ಟೂರ್ನಿಯ ಮೊದಲ ಆವೃತ್ತಿಯಲ್ಲೇ ಚಾಂಪಿಯನ್‌ ಆಗಿದ್ದ ಆಸ್ಟ್ರೇಲಿಯಾ, 2002 & 2010ರಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಆ ನಂತರ 2012 ಮತ್ತು 2018ರಲ್ಲಿ ಫೈನಲ್‌ ತಲುಪಿದ್ದರೂ ಭಾರತದ ವಿರುದ್ಧವೇ ಸೋತು ರನ್ನರ್‌ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.

    2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತವರಿನಲ್ಲೇ ಟೀಂ ಇಂಡಿಯಾ ಸೋಲಿಸಿ ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಶತಕೋಟಿ ಭಾರತೀಯರ ಕನಸನ್ನು ಭಗ್ನಗೊಳಿಸುವ ಜೊತೆಗೆ ಮೂರನೇ ಬಾರಿ ವಿಶ್ವಕಪ್ ಗೆಲ್ಲಬೇಕೆಂಬ ಟೀಂ ಇಂಡಿಯಾದ ಕನಸನ್ನೂ ನುಚ್ಚುನೂರು ಮಾಡಿತ್ತು. 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. ಈ ಮೂಲಕ 6 ಬಾರಿ ವಿಶ್ವಕಪ್ ಗೆದ್ದ ಏಕೈಕ ತಂಡವಾಗಿ ಆಸ್ಟ್ರೇಲಿಯಾ ಹೊರಹೊಮ್ಮಿತ್ತು. ಇದೀಗ ಮತ್ತೊಮ್ಮೆ ಭಾರತದ ವಿಶ್ವಕಪ್‌ ಕನಸು ಭಗ್ನಗೊಂಡಿದೆ.

    ಸತತ 5ನೇ ಬಾರಿ ಫೈನಲ್‌, 2 ಬಾರಿ ಚಾಂಪಿಯನ್:
    ಭಾರತ ಕಿರಿಯರ ತಂಡ 2016 ರಿಂದ 2024ರ ವರೆಗೆ ನಡೆದಿರುವ ಎಲ್ಲಾ ಐಸಿಸಿ ಅಂಡರ್​ 19 ವಿಶ್ವಕಪ್​ನಲ್ಲಿ ಫೈನಲ್ ಪ್ರವೇಶಿಸಿದೆ. 2016ರಲ್ಲಿ ವಿಂಡೀಸ್ ವಿರುದ್ಧ, 2020ರಲ್ಲಿ ಬಾಂಗ್ಲಾದೇಶದ ವಿರುದ್ಧ ಫೈನಲ್​ನಲ್ಲಿ ಸೋಲುಕಂಡರೆ, 2018ರಲ್ಲಿ ಪೃಥ್ವಿ ಶಾ ನೇತೃತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ 2022ರಲ್ಲಿ ಯಶ್ ಧುಲ್ ನೇತೃತ್ವದ ಇಂಗ್ಲೆಂಡ್ ಮಣಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಈ ಹಿಂದೆ 2000ನೇ ಇಸವಿಯಲ್ಲಿ ಮೊಹಮ್ಮದ್‌ ಕೈಫ್‌, 2008ರಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ, 2012ರಲ್ಲಿ ಉನ್ಮುಕ್‌ ಚಂದ್‌ ನಾಯಕತ್ವದಲ್ಲಿ ಚಾಂಪಿಯನ್‌ ಆಗಿದ್ದ ಭಾರತ ತಂಡ 2006ರಲ್ಲಿ ಪಾಕಿಸ್ತಾನದ ಎದುರು ಫೈನಲ್‌ನಲ್ಲಿ ಸೋಲು ಕಂಡಿತ್ತು.

    ಭಾನುವಾರ ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿ, ಭಾರತಕ್ಕೆ 254 ರನ್‌ಗಳ ಗುರಿ ನೀಡಿತ್ತು. ಆದ್ರೆ ಆಸೀಸ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ಭಾರತ ತಂಡ 43.5 ಓವರ್‌ಗಳಲ್ಲಿ ಕೇಲವ 174 ರನ್‌ಗಳಿಗೆ ಆಲೌಟ್‌ ಆಯಿತು. ಈ ಗೆಲುವಿನೊಂದಿಗೆ ಆಸೀಸ್‌ ತಂಡ 4ನೇ ಬಾರಿಗೆ ಐಸಿಸಿ ಅಂಡರ್‌ 19 ವಿಶ್ವಕಪ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

    ಸಾಧಾರಣ ಮೊತ್ತದ ಚೇಸಿಂಗ್‌ ಆರಂಭಿಸಿದ ಟೀಂ ಇಂಡಿಯಾ ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತು. ಇದರೊಂದಿಗೆ ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಭಾರತದ ಪರ ಆದರ್ಶ್ ಸಿಂಗ್ 47 ರನ್‌, ಮುಶೀರ್ ಖಾನ್ 22 ರನ್‌, ಮುರುಗನ್ ಅಭಿಷೇಕ್ 42 ರನ್‌ ಗಳಿಸಿದ್ದು ಬಿಟ್ಟರೇ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಪರಿಣಾಮ ಭಾರತ ಹೀನಾಯ ಸೋಲನುಭವಿಸಿತು.

    ಇದಕ್ಕೂ ಮುನ್ನ ಆಸೀಸ್ ಪರ ಬ್ಯಾಟಿಂಗ್‌ ಮಾಡಿದ ಹ್ಯಾರಿ ಡಿಕ್ಸನ್ 56 ಎಸೆತಗಳಲ್ಲಿ 42 ರನ್ ಗಳಿಸಿದ್ರೆ, ಹಗ್ ವೈಬ್ಜೆನ್ 48 ರನ್, ಹರ್ಜಾಸ್ ಸಿಂಗ್ 55 ರನ್ (3 ಬೌಂಡರಿ, 3 ಸಿಕ್ಸರ್), ರಿಯಾನ್ ಹಿಕ್ಸ್ 20 ರನ್, ರಾಫ್ ಮ್ಯಾಕ್‌ಮಿಲನ್ 2 ರನ್, ಚಾರ್ಲಿ ಆಂಡರ್ಸನ್ 13 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನೂ ಕೊನೆಯಲ್ಲಿ ಆಲಿವರ್ ಪೀಕ್ 46 ರನ್, ಟಾಮ್ ಸ್ಟ್ರೇಕರ್ 8 ರನ್ ಗಳಿಸಿ ಅಜೇಯರಾಗುಳಿದರು.

    ಇನ್ನೂ ಆಸೀಸ್ ಪರ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ವೇಗಿ ರಾಜ್ ಲಿಂಬಾನಿ 10 ಓವರ್‌ಗಳಲ್ಲಿ 38 ರನ್ ಬಿಟ್ಟುಕೊಟ್ಟು 3 ರನ್ ಪಡೆದರು. ನಮನ್ ತಿವಾರಿ 2 ವಿಕೆಟ್, ಸೌಮಿ ಪಾಂಡೆ ಹಾಗೂ ಮುಶೀರ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

  • ಭಾರತಕ್ಕೆ 254 ರನ್‌ ಟಾರ್ಗೆಟ್‌ – U19 ವಿಶ್ವಕಪ್‌ ಗೆಲುವಿಗಾಗಿ ಶತಕೋಟಿ ಭಾರತೀಯರ ಪ್ರಾರ್ಥನೆ!

    ಭಾರತಕ್ಕೆ 254 ರನ್‌ ಟಾರ್ಗೆಟ್‌ – U19 ವಿಶ್ವಕಪ್‌ ಗೆಲುವಿಗಾಗಿ ಶತಕೋಟಿ ಭಾರತೀಯರ ಪ್ರಾರ್ಥನೆ!

    ಕ್ಯಾನ್ಬೆರಾ: 2023ರ ಏಕದಿನ ವಿಶ್ವಕಪ್‌ ಫೈನಲ್‌ (World Cup Final) ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತವರಿನಲ್ಲೇ ಟೀಂ ಇಂಡಿಯಾ ಸೋಲಿಸಿ ವಿಶ್ವಕಪ್‌ ಟ್ರೋಫಿ ತನ್ನದಾಗಿಸಿಕೊಂಡಿತ್ತು.

    ಶತಕೋಟಿ ಭಾರತೀಯರ ಕನಸನ್ನು ಭಗ್ನಗೊಳಿಸುವ ಜೊತೆಗೆ ಮೂರನೇ ಬಾರಿ ವಿಶ್ವಕಪ್‌ (World Cup) ಗೆಲ್ಲಬೇಕೆಂಬ ಟೀಂ ಇಂಡಿಯಾದ (Team India) ಕನಸನ್ನೂ ನುಚ್ಚುನೂರು ಮಾಡಿತ್ತು. 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್‌ ಗೆದ್ದು ಸಂಭ್ರಮಿಸಿತ್ತು. ಈ ಮೂಲಕ 6 ಬಾರಿ ವಿಶ್ವಕಪ್‌ ಗೆದ್ದ ಏಕೈಕ ತಂಡವಾಗಿ ಆಸ್ಟ್ರೇಲಿಯಾ (Australia) ಹೊರಹೊಮ್ಮಿತ್ತು.

    ಇದೀಗ ಆಸೀಸ್‌ (Australia Under19s) ತವರಿನಲ್ಲೇ ಸೇಡು ತೀರಿಸಿಕೊಳ್ಳುವ ಸದವಕಾಶ ಭಾರತಕ್ಕೆ ಬಂದೊದಗಿದೆ. ಆಸೀಸ್‌ ತಂಡವನ್ನು ಮಣಿಸಿ ವಿಶ್ವಕಪ್‌ ಸೋಲಿನ ಸೇಡು ತೀರಿಸಿಕೊಳ್ಳುವಂತೆ ಶತಕೋಟಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ. ಕ್ರೀಡಾಂಗಣದಲ್ಲೂ ನೆರೆದಿರುವ ಟೀಂ ಇಂಡಿಯಾ ಅಭಿಮಾನಿಗಳು ಆಸೀಸ್‌ಗೆ ತಿರುಗೇಟು ಕೊಡುವಂತೆ ಪೋಸ್ಟರ್‌ ಹಿಡಿದು ಆಟಗಾರರನ್ನು ಹುರಿದುಂಬಿಸುತ್ತಿದ್ದಾರೆ. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ

    19 ವರ್ಷದೊಳಗಿನವರ ವಿಶ್ವಕಪ್‌ ಫೈನಲ್‌ (ICC Under-19 World Cup Final) ಪಂದ್ಯವು ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 253 ರನ್‌ ಗಳಿಸಿ, ಭಾರತಕ್ಕೆ 254 ರನ್‌ಗಳ ಗುರಿ ನೀಡಿದೆ. ಇದನ್ನೂ ಓದಿ: ಭಾರತವನ್ನು ನಂ.1 ಪಟ್ಟದಿಂದ ಕೆಳಗಿಳಿಸಿದ ಆಸ್ಟ್ರೇಲಿಯಾ – ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವಕ್ಕೆ ಮೆಚ್ಚುಗೆ!

    ಆಸೀಸ್‌ ಪರ ಹ್ಯಾರಿ ಡಿಕ್ಸನ್ 56 ಎಸೆತಗಳಲ್ಲಿ 42 ರನ್‌ ಗಳಿಸಿದ್ರೆ, ಹಗ್ ವೈಬ್ಜೆನ್ 48 ರನ್‌, ಹರ್ಜಾಸ್ ಸಿಂಗ್ 55 ರನ್‌ (3 ಬೌಂಡರಿ, 3 ಸಿಕ್ಸರ್‌), ರಿಯಾನ್ ಹಿಕ್ಸ್ 20 ರನ್‌, ರಾಫ್ ಮ್ಯಾಕ್‌ಮಿಲನ್ 2 ರನ್‌, ಚಾರ್ಲಿ ಆಂಡರ್ಸನ್ 13 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಇನ್ನೂ ಕೊನೆಯಲ್ಲಿ ಆಲಿವರ್ ಪೀಕ್ 46 ರನ್‌, ಟಾಮ್ ಸ್ಟ್ರೇಕರ್ 8 ರನ್‌ ಗಳಿಸಿ ಅಜೇಯರಾಗುಳಿದರು.

    ಇನ್ನೂ ಆಸೀಸ್‌ ಪರ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ವೇಗಿ ರಾಜ್ ಲಿಂಬಾನಿ 10 ಓವರ್‌ಗಳಲ್ಲಿ 38 ರನ್‌ ಬಿಟ್ಟುಕೊಟ್ಟು 3 ರನ್‌ ಪಡೆದರು. ನಮನ್ ತಿವಾರಿ 2 ವಿಕೆಟ್‌, ಸೌಮಿ ಪಾಂಡೆ ಹಾಗೂ ಮುಶೀರ್ ಖಾನ್ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಸೂರ್ಯನಿಗೆ ಸೆಡ್ಡು ಹೊಡೆದು ಹಿಟ್‌ಮ್ಯಾನ್ ಶತಕ ದಾಖಲೆ ಸರಿಗಟ್ಟಿದ ಮ್ಯಾಕ್ಸಿ!