Tag: India Under-19

  • ಕೊಹ್ಲಿ ಶಾಟ್ ರೀಕ್ರಿಯೇಟ್ – ಅಂಡರ್ 19 ಆಟಗಾರ ಶುಬ್‍ಮನ್ ಗಿಲ್ ಸಿಕ್ಸರ್ ನೋಡಿ

    ಕೊಹ್ಲಿ ಶಾಟ್ ರೀಕ್ರಿಯೇಟ್ – ಅಂಡರ್ 19 ಆಟಗಾರ ಶುಬ್‍ಮನ್ ಗಿಲ್ ಸಿಕ್ಸರ್ ನೋಡಿ

    ಮುಂಬೈ: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್-19 ವಿಶ್ವಕಪ್ ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿನ ಓಟವನ್ನು ಮುಂದುವರಿಸಿದೆ. ಸರಣಿಯ ಮೂರನೇ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಿದ ಟೀಂ ಇಂಡಿಯಾ 10 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿದೆ.

    ಈ ಪಂದ್ಯದಲ್ಲಿ ಯುವ ಆಟಗಾರ ಶುಬ್‍ಮನ್ ಗಿಲ್ , ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಶೈಲಿಯಲ್ಲಿ ಸಿಕ್ಸರ್ ಬಾರಿಸಿದ್ದು, ಇಬ್ಬರು ಶೈಲಿಯನ್ನು ಹೋಲಿಕೆ ಮಾಡುವ ವಿಡಿಯೋವನ್ನು ಬಿಸಿಸಿಐ ತನ್ನ ವೆಬ್‍ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗಿದೆ.

    ಶುಕ್ರವಾರ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಶುಬ್‍ಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಕೇವಲ 59 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 90 ರನ್ ಸಿಡಿಸಿದ್ದರು.

    ಈ ವೇಳೆ 14 ಓವರ್ ನ ಎಸೆತವನ್ನು ಕೊಹ್ಲಿ ಅವರ ಶಾರ್ಟ್ ಆರ್ಮ್ ಜಬ್ ಶೈಲಿಯಲ್ಲಿ ಸಿಕ್ಸರ್ ಸಿಡಿದರು. ಕೊಹ್ಲಿ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಇದೇ ಶೈಲಿಯಲ್ಲಿ ಸಿಕ್ಸರ್ ಸಿಡಿಸಿದ್ದರು. ಪ್ರಸ್ತುತ ಗಿಲ್, ಕೊಹ್ಲಿ ಅವರ ಶಾಟ್ ಅನ್ನು ರಿಕ್ರಿಯೇಟ್ ಮಾಡಿದ್ದಾರೆ.

    ಐಸಿಸಿ ಅಂಡರ್ 19 ವಿಶ್ವಕಪ್ ನಲ್ಲಿ ಬಿ ಗ್ರೂಪ್ ನಲ್ಲಿರುವ ಟೀಂ ಇಂಡಿಯಾ ಸತತ ಗೆಲುವುಗಳನ್ನು ಪಡೆದು 6 ಅಂಕಗಳು ಗಳಿಸಿವ ಮೂಲಕ ಮೊದಲ ಸ್ಥಾನ ಪಡೆದಿದೆ. ವಿಶ್ವಕಪ್ ಕ್ವಾರ್ಟರ್ ಫೈನಲ್ ನಲ್ಲಿ ಗ್ರೂಪ್ ಸಿ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಬಾಂಗ್ಲಾದೇಶವನ್ನು ಎದುರಿಸಲಿದೆ. ಜನವರಿ 26 ನ್ಯೂಜಿಲೆಂಡ್ ನ ಕ್ವೀನ್ಸ್ ಟೌನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.