Tag: india-south africa

  • ಕಾಲಿಗೆ ಬೀಳಬೇಡಪ್ಪ..: ಪಾದ ಮುಟ್ಟಲು ಬಂದ ಯುವ ಅಭಿಮಾನಿಗೆ ಕೊಹ್ಲಿ ಪ್ರೀತಿಯ ಮಾತು: Viral Video

    ಕಾಲಿಗೆ ಬೀಳಬೇಡಪ್ಪ..: ಪಾದ ಮುಟ್ಟಲು ಬಂದ ಯುವ ಅಭಿಮಾನಿಗೆ ಕೊಹ್ಲಿ ಪ್ರೀತಿಯ ಮಾತು: Viral Video

    ನವದೆಹಲಿ: ಭಾರತ-ದಕ್ಷಿಣ ಆಫ್ರಿಕಾ (IND vs SA) ನಡುವಣ ಹೈವೋಲ್ಟೇಜ್‌ ಪಂದ್ಯದ ಸಂದರ್ಭದ ಜೋಶ್‌ ಒಂದೆಡೆಯಾದ್ರೆ, ಹುಟ್ಟುಹಬ್ಬದಂದೇ ಕಿಂಗ್‌ ಕೊಹ್ಲಿ (Virat Kohli) ಶತಕ ಸಿಡಿಸಿ ಕ್ರಿಕೆಟ್‌ ದೇವರ ದಾಖಲೆ ಸರಿಗಟ್ಟುತ್ತಾರಾ ಎಂಬ ಕೌತುಕ ಮತ್ತೊಂದೆಡೆ. ಎರಡೆರಡು ನಿರೀಕ್ಷೆಗಳನ್ನಿಟ್ಟುಕೊಂಡು ನ.5 ರಂದು ಕ್ರಿಕೆಟ್‌ ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸಿದ್ದರು. ಕೋಟ್ಯಂತರ ಅಭಿಮಾನಿಗಳು ತಾವಿದ್ದಲ್ಲೇ ಭಾರತ ತಂಡದ ಗೆಲುವಿಗಾಗಿ ಪ್ರಾರ್ಥಿಸಿದ್ದರು.

    ಇತ್ತ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಉಭಯ ತಂಡಗಳು ಸೆಣಸಲು ತಯಾರಾಗಿದ್ದವು. ಈ ಮಧ್ಯೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ವೀಡಿಯೋವೊಂದು ವೈರಲ್‌ ಆಗಿದೆ. ಈಚೆಗೆ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದ ಸಂದರ್ಭದ ವೀಡಿಯೋ ಇದು ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಇದನ್ನೂ ಓದಿ: ಸಚಿನ್ 49 = ವಿರಾಟ್ 49 : ಯಾವ ದೇಶದಲ್ಲಿ ಎಷ್ಟು ಶತಕ..?

    ವೀಡಿಯೋದಲ್ಲಿ, ಭಾರತದ ಕ್ರಿಕೆಟ್‌ ಪಡೆ ಸ್ಟೇಡಿಯಂನಿಂದ ಹೊರಡುತ್ತಿತ್ತು. ಈ ವೇಳೆ ಹುಡುಗ ಅಭಿಮಾನಿಯೊಬ್ಬ ಮೈದಾನದಲ್ಲಿ ಓಡಿ ಬರುತ್ತಾನೆ. ಬಂದವನೇ ವಿರಾಟ್‌ ಕೊಹ್ಲಿ ಕಾಲಿಗೆರಗಲು ಮುಂದಾಗುತ್ತಾನೆ. ಇದರಿಂದ ಶಾಕ್‌ ಆದ ಕೊಹ್ಲಿ, ಹುಡುಗನ ಕೈಗಳನ್ನು ಹಿಡಿದುಕೊಳ್ಳುತ್ತಾರೆ. ಯುವ ಅಭಿಮಾನಿಯ ಇಂಗಿತವನ್ನು ಅರಿತ ಕೊಹ್ಲಿ ಶೇಕ್‌ಹ್ಯಾಂಡ್‌ ಕೊಡುತ್ತಾರೆ. ಕಾಲನ್ನು ಮುಟ್ಟಬೇಡಪ್ಪ ಎಂದು ಅಭಿಮಾನಿಗೆ ಹೇಳುತ್ತಾರೆ.

    ದೃಶ್ಯದ ವೀಡಿಯೋ ಕೊಹ್ಲಿ ಹುಟ್ಟುಹಬ್ಬದಂದು ವೈರಲ್‌ ಆಗಿದೆ. ಆ ಮೂಲಕ ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದರು. 35ನೇ ವಸಂತಕ್ಕೆ ಕಾಲಿಟ್ಟಿರುವ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಅಂತರರಾಷ್ಟ್ರೀಯ ಶತಕಗಳ ದಾಖಲೆಯನ್ನು ಸರಿಗಟ್ಟುವ ದಿನ ಇದಾಗಿತ್ತು. ಇದನ್ನೂ ಓದಿ: 49th Century: ಕಿಂಗ್ ಕೊಹ್ಲಿ ಬರ್ತ್ ಡೇ ಶತಕ – ಶುಭಾಶಯಗಳ ಸುರಿಮಳೆ!

    ಈಗಾಗಲೇ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ನಲ್ಲಿ ಎರಡು ಶತಕಗಳಿಂದ ಕೊಹ್ಲಿ ವಂಚಿತರಾಗಿದ್ದರು. ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಕೊಹ್ಲಿ ಕ್ರಮವಾಗಿ 95 ಮತ್ತು 88 ರನ್ ಗಳಿಸಿ ಔಟಾಗಿದ್ದರು. ಇದನ್ನೂ ಓದಿ: ICC World Cup: 20 ವರ್ಷಗಳ ಬಳಿಕ ಟೀಂ ಇಂಡಿಯಾದ ಸತತ 8ನೇ ಗೆಲುವು

    ಆದರೆ ನ.5 ರಂದು ಕೊಹ್ಲಿ ಅಭಿಮಾನಿಗಳ ಆಸೆ ಈಡೇರಿದೆ. ಫ್ಯಾನ್ಸ್‌ ಪ್ರಾರ್ಥನೆಯಂತೆ ಕೊಹ್ಲಿ ತಮ್ಮ ಹುಟ್ಟುಹಬ್ಬದಂದೇ ಆಫ್ರಿಕಾ ವಿರುದ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಜೊತೆಗೆ ಸಚಿನ್‌ ತೆಂಡೂಲ್ಕರ್‌ ಶತಕದ ದಾಖಲೆಯನ್ನು ಸರಿಗಟ್ಟಿದ್ದಾರೆ.

  • ನಮ್ಮ ಕ್ರಿಕೆಟ್‌ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ: ಭಾರತದ ಗೆಲುವಿಗೆ ಮೋದಿ ಅಭಿನಂದನೆ

    ನಮ್ಮ ಕ್ರಿಕೆಟ್‌ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ: ಭಾರತದ ಗೆಲುವಿಗೆ ಮೋದಿ ಅಭಿನಂದನೆ

    – ಭಾರತ ತಂಡ ವಿರಾಟ್‌ ಕೊಹ್ಲಿಗೆ ಹುಟ್ಟುಹುಬ್ಬದ ಉಡುಗೊರೆ ನೀಡಿದೆ ಎಂದ ಪ್ರಧಾನಿ

    ನವದೆಹಲಿ: ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ವಿಶ್ವಕಪ್‌ 2023 ಟೂರ್ನಿಯ (World Cup 2023) ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ (India vs South Africa) ಅಮೋಘ ಜಯ ದಾಖಲಿಸಿದೆ. ಭಾರತ ಕ್ರಿಕೆಟ್‌ ತಂಡದ ಗೆಲುವಿಗೆ ಪ್ರಧಾನಿ ಮೋದಿ (Narendra Modi) ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಭಾರತದ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಮೋದಿ, ನಮ್ಮ ಕ್ರಿಕೆಟ್ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ! ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ತಂಡಕ್ಕೆ ಅಭಿನಂದನೆಗಳು. ಉತ್ತಮ ತಂಡದ ಕೆಲಸ. ಇಂದು ಸುಂದರವಾದ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿಗೆ (Virat Kohli) ತಂಡವು ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: 49th Century: ಕಿಂಗ್ ಕೊಹ್ಲಿ ಬರ್ತ್ ಡೇ ಶತಕ – ಶುಭಾಶಯಗಳ ಸುರಿಮಳೆ!

    ತಮ್ಮ ಹುಟ್ಟುಹಬ್ಬದ ದಿನದಂದೇ ಕಿಂಗ್‌ ಕೊಹ್ಲಿ ಅಭಿಮಾನಿಗಳಿಗೆ ಶತಕದ ಸಿಹಿ ಕೊಟ್ಟರು. ಜೊತೆಗೆ ಏಕದಿನ ವಿಶ್ವಕಪ್‌ನಲ್ಲಿ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಇಂತಹ ಸ್ಮರಣೀಯ ಕ್ಷಣಗಳಿಗೆ ಇಂದಿನ ದಕ್ಷಿಣ ಆಫ್ರಿಕಾ-ಭಾರತ ನಡುವಿನ ಪಂದ್ಯ ಸಾಕ್ಷಿಯಾಯಿತು.

    ವಿರಾಟ್‌ ಕೊಹ್ಲಿ (Virat Kohli), ಶ್ರೇಯಸ್‌ ಅಯ್ಯರ್‌ ಶತಕದ ಜೊತೆಯಾಟ ಹಾಗೂ ರವೀಂದ್ರ ಜಡೇಜಾ (Ravindra Jadeja) ಸ್ಪಿನ್‌ ಜಾದು ನೆರವಿನಿಂದ ಟೀಂ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 243 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ +2.456 ರನ್‌ರೇಟ್‌ನೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿದೆ. ಇದನ್ನೂ ಓದಿ: ಜಡೇಜಾ ಸ್ಪಿನ್‌ ಜಾದುಗೆ ಮಕಾಡೆ ಮಲಗಿದ ಹರಿಣರು – ಭಾರತಕ್ಕೆ 243 ರನ್‌ಗಳ ಭರ್ಜರಿ ಜಯ

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಭಾರತ ತಂಡ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 326 ರನ್‌ಗಳಿಸಿತು. 327 ರನ್‌ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 83 ರನ್‌ಗಳಿಗೆ ಆಲೌಟ್‌ ಆಗಿ ಮಕಾಡೆ ಮಲಗಿತು.

  • ಕಿಂಗ್‌ ಕೊಹ್ಲಿ ದಾಖಲೆಯ ಶತಕದಾಟ – ಆಫ್ರಿಕಾಗೆ 327 ರನ್‌ ಗುರಿ ನೀಡಿದ ಭಾರತ

    ಕಿಂಗ್‌ ಕೊಹ್ಲಿ ದಾಖಲೆಯ ಶತಕದಾಟ – ಆಫ್ರಿಕಾಗೆ 327 ರನ್‌ ಗುರಿ ನೀಡಿದ ಭಾರತ

    ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ವಿಶ್ವಕಪ್‌ 2023 ಟೂರ್ನಿಯ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat Kohli) ದಾಖಲೆಯ ಶತಕದಾಟದ ನೆರವಿನೊಂದಿಗೆ ದ.ಆಫ್ರಿಕಾಗೆ ಭಾರತ 327 ರನ್‌ಗಳ ಗುರಿ ನೀಡಿದೆ.

    ತಮ್ಮ ಹುಟ್ಟುಹಬ್ಬದ ದಿನದಂದೇ ಕಿಂಗ್‌ ಕೊಹ್ಲಿ ಅಭಿಮಾನಿಗಳಿಗೆ ಶತಕದ ಸಿಹಿ ಕೊಟ್ಟರು. ಜೊತೆಗೆ ಏಕದಿನ ವಿಶ್ವಕಪ್‌ನಲ್ಲಿ ಕ್ರಿಕೆಟ್‌ (World Cup 2023) ದೇವರು ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಇಂತಹ ಸ್ಮರಣೀಯ ಕ್ಷಣಗಳಿಗೆ ಇಂದಿನ ಪಂದ್ಯ ಸಾಕ್ಷಿಯಾಯಿತು. ಭಾರತ ತಂಡ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 326 ರನ್‌ಗಳಿಸಿತು. ಇದನ್ನೂ ಓದಿ: Virat Kohli – ಬರ್ತ್ಡೇಯಂದೇ ಸೆಂಚುರಿ ಬಾರಿಸಿದ 7ನೇ ಆಟಗಾರ..!

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಉತ್ತಮ ಇನ್ನಿಂಗ್ಸ್‌ ಆರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಅರ್ಧಶತಕದ ಜೊತೆಯಾಟ ನೀಡಿತು. ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನಡೆಸಿದ ರೋಹಿತ್‌ ಶರ್ಮಾ 24 ಬಾಲ್‌ಗಳಿಗೆ 40 ರನ್‌ ಗಳಿಸಿ (6 ಫೋರ್‌, 2 ಸಿಕ್ಸರ್‌) ಗಳಿಸಿ ಅರ್ಧಶತಕ ವಂಚಿತರಾದರು. ಆದರೂ ತಂಡಕ್ಕೆ ಉತ್ತಮ ಆರಂಭಕ್ಕೆ ನೆರವಾದರು.

    ನಂತರ ಭರವಸೆ ಮೂಡಿಸಿದ್ದ ಗಿಲ್‌ ಮತ್ತು ಕಿಂಗ್‌ ಕೊಹ್ಲಿ ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಗಿಲ್‌ 22 ರನ್‌ ಗಳಿಸಿ ಕ್ಲೀನ್‌ ಬೌಲ್ಡ್‌ ಆಗಿ ನಿರ್ಗಮಿಸಿದರು. ಈ ವೇಳೆ ಕೊಹ್ಲಿ ಮತ್ತು ಶ್ರೇಯಸ್‌ ಐಯ್ಯರ್‌ ಜೋಡಿ ಉತ್ತಮ ಪ್ರದರ್ಶನ ನೀಡಿತು. ಈ ಜೋಡಿ 158 ಬಾಲ್‌ಗೆ 134 ರನ್‌ ದಾಖಲಿಸಿತು. ಆ ಮೂಲಕ ಆಫ್ರಿಕಾಗೆ ಸವಾಲಿನ ಮೊತ್ತದ ಗುರಿ ನೀಡಲು ನೆರವಾಯಿತು.

    ಬೌಂಡರಿ, ಸಿಕ್ಸರ್‌ಗಳ ಮೂಲಕ ಆಫ್ರಿಕಾ ಬೌಲರ್‌ಗಳನ್ನು ದಂಡಿಸಿದ ಐಯ್ಯರ್‌ ವೇಗವಾಗಿ ಅರ್ಧಶತಕ ಪೂರೈಸಿದರು. 87 ಬಾಲ್‌ಗೆ 77 ರನ್‌ಗಳಿಸಿ (7 ಫೋರ್‌, 2 ಸಿಕ್ಸರ್‌) ತಂಡಕ್ಕೆ ರನ್‌ ಏರುವಲ್ಲಿ ಪಾತ್ರ ವಹಿಸಿದರು. ಇದನ್ನೂ ಓದಿ: Virat Kohli Centuries: ಕ್ರಿಕೆಟ್‌ ದೇವರಿಗೆ ಸರಿಸಮನಾಗಿ ನಿಂತ ಕಿಂಗ್‌ ಕೊಹ್ಲಿ..!

    ನಂತರ ಬಂದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಈ ವೇಳೆ ಕೊಹ್ಲಿ ಜವಾಬ್ದಾರಿಯುತ ಆಟದ ಮೂಲಕ ಶತಕ ಸಿಡಿಸಿದರು. ಕೊಹ್ಲಿ 121 ಬಾಲ್‌ಗಳಿಗೆ 101 ರನ್‌ (10 ಫೋರ್‌) ಗಳಿಸಿ ಗಮನ ಸೆಳೆದರು. ಈ ಗ್ಯಾಪ್‌ನಲ್ಲಿ ಕೆ.ಎಲ್‌.ರಾಹುಲ್‌ ಕೇವಲ 8 ರನ್‌ಗೆ ಔಟಾಗಿ ಪೆವಿಲಿಯನ್‌ ಸೇರಿದರು. ಸೂರ್ಯಕುಮಾರ್‌ ಯಾದವ್‌ (22) ರನ್‌ಗಳಿಸಿ ಕ್ಯಾಚ್‌ ನೀಡಿ ನಿರ್ಗಮಿಸಿದರು.

    ಈ ವೇಳೆ ಕೊಹ್ಲಿಗೆ ಜೊತೆಗೆ ರವೀಂದ್ರ ಜಡೇಜಾ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. 15 ಬಾಲ್‌ಗಳಿಗೆ ಔಟಾಗದೇ 29 ರನ್‌ ಸಿಡಿಸಿದರು. ಅದರಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ ಸಿಡಿಸಿದರು. ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಕೊಹ್ಲಿ – ದಾಖಲೆಗಳ ಸರದಾರನ ಪಟ್ಟಿ ಇಲ್ಲಿದೆ

    ದಕ್ಷಿಣ ಆಫ್ರಿಕಾ ಪರವಾಗಿ ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ ಮಹಾರಾಜರು, ತಬ್ರೈಜ್ ಶಮ್ಸಿ ತಲಾ ಒಂದು ವಿಕೆಟ್‌ ಪಡೆದರು.

  • ಭಾರತ-ದ.ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಬೆಳಗಾವಿ ಮೂಲದ ಅವಿನಾಶ್ ನೇಮಕ

    ಭಾರತ-ದ.ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಬೆಳಗಾವಿ ಮೂಲದ ಅವಿನಾಶ್ ನೇಮಕ

    ಬೆಳಗಾವಿ: ನಗರದ ನಿವಾಸಿ ಅವಿನಾಶ್ ಪೋತದಾರಗೆ (Avinash Potdar) ಬಿಸಿಸಿಐ (BCCI) ಮಹತ್ವದ ಜವಾಬ್ದಾರಿ ನೀಡಿದೆ.‌ ನಾಳೆ ನಡೆಯುವ ದಕ್ಷಿಣ ಆಫ್ರಿಕಾ ಮತ್ತು ಭಾರತ (India vs South Africa) ನಡುವಿನ ಟಿ-20 (T20) ಪಂದ್ಯಕ್ಕೆ ಪರೀವೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

    ಇಲ್ಲಿನ ಜಾಧವ್ ನಗರದ ನಿವಾಸಿ ಆಗಿರುವ ಅವಿನಾಶ್ ‌ಪೋತದಾರ್ ಕಳೆದ ಎರಡು ದಶಕಗಳಿಂದ ಸತತವಾಗಿ ಕೆಎಸ್‌ಸಿಎ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಎಸ್‌ಸಿಎ ಧಾರವಾಡ ವಲಯದ ಕನ್ವೀನರ್ ಆಗಿರುವ ಅವಿನಾಶ್ ಪೋತದಾರ್ ಉದ್ಯಮಿಯು ಆಗಿದ್ದಾರೆ. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ ಹೈವೋಲ್ಟೆಜ್ ಪಂದ್ಯದ ನಡುವೆ ಮೊಳಗಿತು ಜೈಶ್ರೀರಾಮ್ ಉದ್ಘೋಷ

    ಕಬ್ಬು ನುರಿಸುವ ಕಾರ್ಖಾನೆ, ಸಿನಿಮಾ ಟಾಕೀಸ್ ಸೇರಿದಂತೆ ಹಲವು ಉದ್ಯಮಗಳು ಅವಿನಾಶ್ ಪೋತದಾರ್ ನಡೆಸುತ್ತಿದ್ದಾರೆ. ಇದೀಗ ನಾಳೆಯಿಂದ ನಡೆಯುವ ಭಾರತ-ದಕ್ಷಿಣ ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಆಯ್ಕೆ ಆಗಿದ್ದಾರೆ. ನಾಳೆ ತಿರುವನಂತಪುರಂನಲ್ಲಿ ಚೊಚ್ಚಲ ಟಿ-20 ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಪಂದ್ಯಗೆದ್ದ ಖುಷಿ – ರೋಹಿತ್‍ಗೆ ಹೊಡೆದು ಸಂಭ್ರಮಿಸಿದ ಕೊಹ್ಲಿ

    Live Tv
    [brid partner=56869869 player=32851 video=960834 autoplay=true]