Tag: India Pakistan Conflict

  • ಭಾರತ-ಪಾಕ್‌ ಸಂಘರ್ಷದಲ್ಲಿ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಸಾಧ್ಯವಾಗದಿದ್ದಕ್ಕೆ 50% ಸುಂಕ: ಯುಎಸ್‌ ಬ್ಯಾಂಕ್ ವರದಿ

    ಭಾರತ-ಪಾಕ್‌ ಸಂಘರ್ಷದಲ್ಲಿ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಸಾಧ್ಯವಾಗದಿದ್ದಕ್ಕೆ 50% ಸುಂಕ: ಯುಎಸ್‌ ಬ್ಯಾಂಕ್ ವರದಿ

    – ಭಾರತ ತನ್ನ ರೈತರನ್ನು ರಕ್ಷಿಸುವ ಗುರಿ ಹೊಂದಿದೆ; ವರದಿಯಲ್ಲಿ ಉಲ್ಲೇಖ

    ವಾಷಿಂಗ್ಟನ್‌: ಭಾರತ ಮತ್ತು ಪಾಕ್‌ ಸಂಘರ್ಷದಲ್ಲಿ (India Pakistan Conflict) ಡೊನಾಲ್ಡ್‌ ಟ್ರಂಪ್‌ ಮಧ್ಯಸ್ಥಿಕೆ ವಹಿಸಲು ಸಾಧ್ಯವಾಗದೇ ಇದ್ದ ಕಾರಣ, ಭಾರತದ ಮೇಲೆ 50% ಸುಂಕ ವಿಧಿಸಿದ್ದಾರೆ ಎಂದು ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸಂಸ್ಥೆ ಜೆಫರೀಸ್ ವರದಿ (Jefferies Bank Report) ಹೇಳಿದೆ.

    ದಕ್ಷಿಣ ಏಷ್ಯಾದ ಎರಡು ಪರಮಾಣು ಶಕ್ತಿ ರಾಷ್ಟ್ರಗಳ ನಡುವೆ ಮಧ್ಯಪ್ರವೇಶಿಸಲು ಟ್ರಂಪ್‌ (Donald Trump) ಆಶಿಸಿದ್ದರು. ಆದ್ರೆ ಭಾರತ ಮತ್ತು ಪಾಕಿಸ್ತಾನ ನಡುವಿನ ದೀರ್ಘಕಾಲ ದ್ವೇಷವನ್ನು ಕೊನೆಗೊಳಿಸುವಲ್ಲಿ ಪಾತ್ರ ವಹಿಸಲು ಅವಕಾಶ ಸಿಗಲಿಲ್ಲ. ಇದು ಅಮೆರಿಕ ಅಧ್ಯಕ್ಷರ ವೈಯಕ್ತಿಕ ದ್ವೇಷಕ್ಕೆ ಕಾರಣವಾಗಿದ್ದು, ಹೆಚ್ಚುವರಿ ಸುಂಕವನ್ನು ಭಾರತದ ಮೇಲೆ ವಿಧಿಸಿದ್ದಾರೆ ಎಂದು ವರದಿ ಹೇಳಿದೆ.

    ನೊಬೆಲ್ ಶಾಂತಿ ಪ್ರಶಸ್ತಿಗೆ ಶ್ವೇತಭವನ ಒತ್ತಾಯ
    ಕೆಲ ದಿನಗಳ ಹಿಂದಷ್ಟೇ ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಹೇಳಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸೇರಿದಂತೆ ವಿಶ್ವದಾದ್ಯಂತ ಹಲವಾರು ಯುದ್ಧಗಳನ್ನು ಕೊನೆಗೊಳಿಸಿದ್ದಾರೆ ಅವರಿಗೆ ಪ್ರಶಸ್ತಿ ನೀಡುವಂತೆ ಕೇಳಿಕೊಂಡಿತ್ತು. ಆದ್ರೆ ಭಾರತ ಮಾತ್ರ ಟ್ರಂಪ್‌ ಹಸ್ತಕ್ಷೇಪವನ್ನು ತಳ್ಳಿಹಾಕುತ್ತಲೇ ಬಂದಿದೆ.

    ಈ ವರದಿಯ ಮತ್ತೊಂದು ಅಂಶವೆಂದರೆ, ಭಾರತ ತನ್ನ ರೈತರನ್ನು ರಕ್ಷಣೆಗಾಗಿ ನಿಂತಿರುವ ಉದ್ದೇಶವನ್ನು ಒತ್ತಿ ಹೇಳಿದೆ. ಹೌದು. ಸುಮಾರು 250 ಮಿಲಿಯನ್ ರೈತರು ಮತ್ತು ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಭಾರತದಲ್ಲಿ ಶೇಕಡಾ 40 ರಷ್ಟು ಉದ್ಯೋಗಿಗಳು ಕೃಷಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತ ತನ್ನ ರೈತರನ್ನು ರಕ್ಷಿಸುವ ಸಲುವಾಗಿ ಕೃಷಿ ವಲಯವನ್ನು ಆಮದುಗಳಿಗೆ ಮುಕ್ತಗೊಳಿಸಲು ಒಪ್ಪಿಕೊಂಡಿಲ್ಲ ಎಂಬುದನ್ನು ತೋರಿಸಿದೆ.

  • ಆಪರೇಷನ್‌ ಸಿಂಧೂರಕ್ಕೆ ಜೈಶ್‌ ನೆಲೆಗಳು ಉಡೀಸ್‌ – ಪುನರ್‌ ನಿರ್ಮಾಣಕ್ಕೆ ನಿಧಿ ಕೋರಿದ ಉಗ್ರ ಸಂಘಟನೆ

    ಆಪರೇಷನ್‌ ಸಿಂಧೂರಕ್ಕೆ ಜೈಶ್‌ ನೆಲೆಗಳು ಉಡೀಸ್‌ – ಪುನರ್‌ ನಿರ್ಮಾಣಕ್ಕೆ ನಿಧಿ ಕೋರಿದ ಉಗ್ರ ಸಂಘಟನೆ

    ಇಸ್ಲಾಮಾಬಾದ್: ಭಾರತದ ‘ಆಪರೇಷನ್‌ ಸಿಂಧೂರ’ (Operation Sindoor) ಕಾರ್ಯಾಚರಣೆಯ ವೈಮಾನಿಕ ದಾಳಿಗೆ ತುತ್ತಾದ ತಿಂಗಳುಗಳ ನಂತರ ಭಯೋತ್ಪಾದಕ ಸಂಘಟನೆ ಜೈ-ಎ-ಮೊಹಮ್ಮದ್‌ (Jaish-e-Mohammed) ತಮ್ಮ ಪ್ರಧಾನ ಕಚೇರಿ ಪುನರ್‌ ನಿರ್ಮಿಸಲು ನಿಧಿಗೆ ಮನವಿ ಮಾಡಿಕೊಂಡಿದೆ.

    2001 ರ ಸಂಸತ್ತಿನ ಮೇಲೆ ನಡೆದ ದಾಳಿ ಮತ್ತು 2019 ರ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಪ್ರಮುಖ ದಾಳಿಗಳಿಗೆ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಹೊಣೆಗಾರಿಕೆಯಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಜೈಶ್‌ನ ಪ್ರಧಾನ ಕಚೇರಿಯು ವೈಮಾನಿಕ ದಾಳಿಯಿಂದ ನಾಶವಾಗಿದೆ. ಇದನ್ನೂ ಓದಿ: ಭಾರತ ಕೊಟ್ಟ ತಿರುಗೇಟಿಗೆ ಸರಿಯಾಗಿ ಉತ್ತರ ನೀಡದೇ ನುಣುಚಿದ ಟ್ರಂಪ್‌

    ಸುಮಾರು ಮೂರು ತಿಂಗಳ ನಂತರ ಮೌಲಾನಾ ಮಸೂದ್ ಅಜರ್ ನೇತೃತ್ವದ ಸಂಘಟನೆಯು, ನಾಶವಾಗಿರುವ ಸ್ಥಳವನ್ನು ಪುನರ್‌ ನಿರ್ಮಿಸಲು ನಿಧಿಯನ್ನು ಸಂಗ್ರಹಿಸುವ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾನೆ.

    ಪಾಕಿಸ್ತಾನದ ದಕ್ಷಿಣ ಪಂಜಾಬ್ ಪ್ರಾಂತ್ಯದ ಒಳಗೆ ಸುಮಾರು 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್, ಬಹಳ ಹಿಂದಿನಿಂದಲೂ ಭಯೋತ್ಪಾದಕ ಗುಂಪಿನ ಸೈದ್ಧಾಂತಿಕ ಮತ್ತು ಕಾರ್ಯಾಚರಣೆಯ ಕೇಂದ್ರವಾಗಿದೆ. ಇದನ್ನೂ ಓದಿ: ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗೆ ಸಂಬಂಧವನ್ನ ಹದಗೆಡಿಸಬೇಡಿ – ಟ್ರಂಪ್‌ಗೆ ತಿವಿದ ನಿಕ್ಕಿ ಹ್ಯಾಲಿ

    ಜೆಇಎಂ ತನ್ನ ಪ್ರಧಾನ ಕಚೇರಿಯಾದ ಜಾಮಿಯಾ ಮಸೀದಿ ಸುಭಾನ್ ಅಲ್ಲಾಹ್‌ನ ಪುನರುಜ್ಜೀವನಕ್ಕಾಗಿ ದೇಣಿಗೆ ಕೋರಿದೆ. ಇದು ಒಂದು ಕಾಲದಲ್ಲಿ ವಿಸ್ತಾರವಾದ ಕಾಂಪ್ಲೆಕ್ಸ್‌ ಆಗಿತ್ತು. ಅಜರ್, ಅವನ ಸಹೋದರ, ಮುಖ್ಯಸ್ಥ ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಮತ್ತು ಇತರ ಕುಟುಂಬ ಸದಸ್ಯರಿಗೆ ನೆಲೆಯಾಗಿತ್ತು. ಬುಧವಾರ ಪ್ರಾರಂಭವಾದ ಅಭಿಯಾನದ ಯಶಸ್ಸಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದೆ.

    2015 ರಲ್ಲಿ ಸ್ಥಾಪನೆಯಾದಾಗಿನಿಂದ, ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಜೆಇಎಂನ ಪ್ರಾಥಮಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ಕಾರ್ಯಾಚರಣಾ ಪ್ರಧಾನ ಕಚೇರಿ ಮತ್ತು ಪ್ರಮುಖ ತರಬೇತಿ ಸೌಲಭ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಬಹವಾಲ್ಪುರ್ ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು. ನಿಖರವಾದ ದಾಳಿಗಳಿಂದ ಕಟ್ಟಡಕ್ಕೆ ವ್ಯಾಪಕ ಹಾನಿಯನ್ನುಂಟಾಗಿತ್ತು.

    ಜೆಇಎಂ ಮುಖ್ಯಸ್ಥ ತನ್ನ ಕುಟುಂಬದ 10 ಸದಸ್ಯರು ಮತ್ತು ತನ್ನ ನಾಲ್ವರು ಸಹಾಯಕರು ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಾನೆ. 1994 ರಲ್ಲಿ ಭಾರತದಲ್ಲಿ ಬಂಧಿಸಲ್ಪಟ್ಟು ಏರ್ ಇಂಡಿಯಾ ಐಸಿ 814 ವಿಮಾನ ಅಪಹರಣದ ನಂತರ ಬಿಡುಗಡೆಯಾದ ಅಜರ್ ಹೇಳಿಕೆಯ ಪ್ರಕಾರ, ದಾಳಿಯಲ್ಲಿ ಸಾವನ್ನಪ್ಪಿದವರು ಆತನ ಅಕ್ಕ, ಆಕೆಯ ಪತಿ, ಸೋದರಳಿಯ ಮತ್ತು ಪತ್ನಿ, ಸೊಸೆ ಮತ್ತು ಕುಟುಂಬದ ಐದು ಮಕ್ಕಳು ಎನ್ನಲಾಗಿದೆ.

  • ಭಾರತ-ಪಾಕ್‌ನಂತೆಯೇ ಥಾಯ್ಲೆಂಡ್‌-ಕಾಂಬೋಡಿಯಾ ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್‌

    ಭಾರತ-ಪಾಕ್‌ನಂತೆಯೇ ಥಾಯ್ಲೆಂಡ್‌-ಕಾಂಬೋಡಿಯಾ ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್‌

    ನೋಮ್ ಪೆನ್: ಥೈಲ್ಯಾಂಡ್ ಶನಿವಾರ ತಡರಾತ್ರಿ ಕಾಂಬೋಡಿಯಾ ಜೊತೆಗಿನ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಘೋಷಿಸಿತು.

    ಥೈಲ್ಯಾಂಡ್ ಜೊತೆಗಿನ ಗಡಿ ಸಂಘರ್ಷವನ್ನು ನಿಲ್ಲಿಸಲು ಕಾಂಬೋಡಿಯಾ ಕದನ ವಿರಾಮದ ಬಗ್ಗೆ ಚರ್ಚಿಸಲು ಸಿದ್ಧವಾಗಿದೆ ಎಂದು ಪ್ರಧಾನಿ ಹನ್ ಮಾನೆಟ್ ಭಾನುವಾರ ಹೇಳಿದ್ದಾರೆ. ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯಪ್ರವೇಶವನ್ನು ಸ್ವಾಗತಿಸಿದ್ದಾರೆ.

    ಥೈಲ್ಯಾಂಡ್ ಜನರೊಂದಿಗೆ ಸಮನ್ವಯ ಸಾಧಿಸಲು ತಮ್ಮ ವಿದೇಶಾಂಗ ಸಚಿವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಮಾತನಾಡುತ್ತಾರೆ ಎಂದು ಹನ್ ಮಾನೆಟ್ ಹೇಳಿದ್ದಾರೆ. ಆದರೆ, ಯಾವುದೇ ಒಪ್ಪಂದವನ್ನು ರದ್ದುಗೊಳಿಸುವುದರ ವಿರುದ್ಧ ಬ್ಯಾಂಕಾಕ್‌ಗೆ ಎಚ್ಚರಿಕೆ ನೀಡಿದ್ದಾರೆ.

    ಭಾರತ-ಪಾಕಿಸ್ತಾನ ರೀತಿಯಲ್ಲಿಯೇ ಕಾಂಬೋಡಿಯಾ-ಥಾಯ್ಲೆಂಡ್‌ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಟ್ರಂಪ್‌ ಪುನರುಚ್ಚರಿಸಿದ್ದಾರೆ. ವ್ಯಾಪಾರ ಒಪ್ಪಂದದ ಎಚ್ಚರಿಕೆ ನೀಡಿ ಕದನ ವಿರಾಮ ಘೋಷಿಸುವಂತೆ ಮಾಡಿದ್ದೇವೆ ಎಂದು ಟ್ರಂಪ್‌ ತಿಳಿಸಿದ್ದಾರೆ.

    ಟ್ರೂತ್‌ ಸೋಷಿಯಲ್‌ ಮೀಡಿಯಾದಲ್ಲಿ, ಕಾಂಬೋಡಿಯಾ ಮತ್ತು ಥಾಯ್ಲೆಂಡ್‌ನ ಪ್ರಧಾನಿಗಳ ಜೊತೆ ಮಾತನಾಡಿದೆ. ಯುದ್ಧ ನಿಲ್ಲುವ ತನಕ ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡುವುದಿಲ್ಲ ಎಂದು ಹೇಳಿ ಕದನ ವಿರಾಮಕ್ಕೆ ಒಪ್ಪಿಸಿದೆ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

    ಹಿಂದೂ ದೇಗುಲ ವಿಚಾರಕ್ಕಾಗಿ ಕಾಂಬೋಡಿಯಾ ಮತ್ತು ಥಾಯ್ಲೆಂಡ್‌ ಗಡಿಯಲ್ಲಿ ಸಂಘರ್ಷ ನಡೆಯುತ್ತಿದೆ. ಯುದ್ಧದಿಂದಾಗಿ 33 ಮಂದಿ ಬಲಿಯಾಗಿದ್ದಾರೆ.

  • ವ್ಯಾಪಾರ ಬೆದರಿಕೆ ಹಾಕಿ ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದೆ: ಟ್ರಂಪ್‌

    ವ್ಯಾಪಾರ ಬೆದರಿಕೆ ಹಾಕಿ ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದೆ: ಟ್ರಂಪ್‌

    – ಕದನ ವಿರಾಮ ನನ್ನಿಂದಲೇ ಆಗಿದ್ದು: ಅಮೆರಿಕ ಅಧ್ಯಕ್ಷ ಪುನರುಚ್ಚಾರ

    ವಾಷಿಂಗ್ಟನ್: ವ್ಯಾಪಾರ ಬೆದರಿಕೆ ಹಾಕಿ ಭಾರತ ಮತ್ತು ಪಾಕಿಸ್ತಾನ (India Pakistan Conflict) ಯುದ್ಧ ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಪುನರುಚ್ಚಾರ ಮಾಡಿದ್ದಾರೆ.

    ಶ್ವೇತಭವನದಲ್ಲಿ ಕೆಲವು ರಿಪಬ್ಲಿಕನ್ ಶಾಸಕರೊಂದಿಗೆ ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್‌, ಕದನ ವಿರಾಮ ನನ್ನಿಂದಲೇ ಆಗಿದ್ದು. ವ್ಯಾಪಾರ ಬೆದರಿಕೆಯನ್ನು ಬಳಸಿಕೊಂಡು ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನನಗೂ ನನ್ನ ಪತ್ನಿಗೂ ಏನಾದ್ರು ಆದ್ರೆ ಅದಕ್ಕೆ ಪಾಕ್‌ ಸೇನಾ ಮುಖ್ಯಸ್ಥನೇ ಕಾರಣ: ಇಮ್ರಾನ್‌ ಖಾನ್‌ ಹೇಳಿಕೆ

    ಪಹಲ್ಗಾಮ್ ದಾಳಿಯ ನಂತರ ಭಾರತ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಪ್ರಾರಂಭಿಸಿತು. ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಸಮಯದಲ್ಲಿ ಸುಮಾರು 4-5 ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ, ಜೆಟ್‌ಗಳು ಭಾರತದ್ದೋ ಅಥವಾ ಪಾಕಿಸ್ತಾನದ್ದೋ ಎಂಬುದನ್ನು ನಿರ್ದಿಷ್ಟಪಡಿಸಲಿಲ್ಲ.

    ಆದರೆ ಟ್ರಂಪ್‌, ಎರಡು ಪರಮಾಣು ಶಸ್ತ್ರಸಜ್ಜಿತ ದೇಶಗಳ ನಡುವಿನ ಕದನ ವಿರಾಮಕ್ಕೆ ವ್ಯಾಪಾರ ಬೋಗಿಯನ್ನು ಬಳಸಿಕೊಂಡು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಮತ್ತೊಮ್ಮೆ ಪುನರುಚ್ಚಾರಿಸಿದ್ದಾರೆ. ಇದನ್ನೂ ಓದಿ: 80,000 ನಗ್ನ ಫೋಟೋಸ್‌, ಸೆಕ್ಸ್‌ ಮಾಡಿ ಬೌದ್ಧ ಬಿಕ್ಕುಗಳ ಟ್ರ್ಯಾಪ್‌ – 100 ಕೋಟಿ ಸುಲಿಗೆ ಮಾಡಿದ್ದ ಹನಿ ಲೇಡಿ ಅರೆಸ್ಟ್‌

    ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡ ಕೆಲವು ದಿನಗಳ ನಂತರ, ಏರ್ ಮಾರ್ಷಲ್ ಎ.ಕೆ.ಭಾರ್ತಿ, ಅನೇಕ ‘ಹೈಟೆಕ್’ ಪಾಕಿಸ್ತಾನಿ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದ್ದರು.

  • ಶ್ರೀನಗರ, ಜಮ್ಮು ಸೇರಿ 5 ನಗರಗಳಿಗೆ ಇಂಡಿಗೋ, ಏರ್‌ ಇಂಡಿಯಾ ವಿಮಾನ ಹಾರಾಟ ರದ್ದು

    ಶ್ರೀನಗರ, ಜಮ್ಮು ಸೇರಿ 5 ನಗರಗಳಿಗೆ ಇಂಡಿಗೋ, ಏರ್‌ ಇಂಡಿಯಾ ವಿಮಾನ ಹಾರಾಟ ರದ್ದು

    ನವದೆಹಲಿ: ಇಂಡಿಗೋ (IndiGo) ಮತ್ತು ಏರ್ ಇಂಡಿಯಾ (Air India) ಇಂದು ಶ್ರೀನಗರ, ಜಮ್ಮು, ಅಮೃತಸರ, ಚಂಡೀಗಢ ಮತ್ತು ಇತರ ಮೂರು ಗಡಿ ನಗರಗಳಿಗೆ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ.

    ಜಮ್ಮು, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗಳಿಗೆ ದ್ವಿಮುಖ ವಿಮಾನ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಇಂಡಿಗೋ ಜಮ್ಮು, ಅಮೃತಸರ, ಚಂಡೀಗಢ, ಲೇಹ್, ಶ್ರೀನಗರ ಮತ್ತು ರಾಜ್‌ಕೋಟ್‌ಗಳಿಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸಹ ರದ್ದುಗೊಳಿಸಿದೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧ ಮರಳಿ ಗಡಿಯತ್ತ – ಬೀಳ್ಕೊಟ್ಟ ಗುಬ್ಬಿ ನಾಗರಿಕರು

    ಇತ್ತೀಚಿನ ಬೆಳವಣಿಗೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಮೇ 13ರ ಮಂಗಳವಾರ ರದ್ದುಗೊಳಿಸಲಾಗಿದೆ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಿಮಗೆ ಮಾಹಿತಿ ನೀಡುತ್ತೇವೆ ಎಂದು ಏರ್ ಇಂಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

    ಭಾರತ ಮತ್ತು ಪಾಕಿಸ್ತಾನ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದ ವಿಮಾನ ನಿಲ್ದಾಣಗಳು ಸೋಮವಾರ ನಾಗರಿಕ ವಿಮಾನಯಾನಕ್ಕಾಗಿ ಮತ್ತೆ ತೆರೆದಿದ್ದವು. ಕಳೆದ ವಾರ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ 32 ವಿಮಾನ ನಿಲ್ದಾಣಗಳಲ್ಲಿ ಮೇ 15ರ ಬಳಿಕ ನಾಗರಿಕ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಳ್ಳಲಿವೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸೋಮವಾರ ಪ್ರಕಟಿಸಿದೆ. ಇದನ್ನೂ ಓದಿ: ಎರಡೂ ಕಡೆಯಿಂದ ಒಂದೇ ಒಂದು ಗುಂಡು ಹೊಡೆಯಬಾರದು: DGMO ಸಭೆಯಲ್ಲಿ ಏನಾಯ್ತು?

    ಅಧಂಪುರ, ಅಂಬಾಲಾ, ಅವಂತಿಪುರ, ಬಟಿಂಡಾ, ಬಿಕಾನೇರ್, ಹಲ್ವಾರ, ಹಿಂಡನ್, ಜೈಸಲ್ಮೇರ್, ಕಾಂಡ್ಲಾ, ಕಂಗ್ರಾ (ಗಗ್ಗಲ್), ಕೆಶೋದ್, ಕಿಶನ್‌ಗಢ್, ಕುಲು ಮನಾಲಿ (ಭುಂಟರ್), ಮುಂದ್ರಾ, ಮುಂದ್ರಾ, ಪಠಾಣ್, ಪಠಾಣ್, ಸಾರ್ವಭೌಮ, ಪಠಾಣ್, ಸಿವಿಲಿಯನ್ ಫ್ಲೈಟ್ ಕಾರ್ಯಾಚರಣೆಯನ್ನು ಪುನರಾರಂಭಿಸಲು ವಿಮಾನ ನಿಲ್ದಾಣಗಳಿಗೆ ಅನುಮತಿಸಲಾಗಿದೆ.

  • ಮೋದಿಗೆ ಯುದ್ಧಕ್ಕಿಂತ ಬಿಹಾರ ಚುನಾವಣೆ ಮುಖ್ಯ: ಪ್ರಿಯಾಂಕ್ ಖರ್ಗೆ ಕಿಡಿ

    ಮೋದಿಗೆ ಯುದ್ಧಕ್ಕಿಂತ ಬಿಹಾರ ಚುನಾವಣೆ ಮುಖ್ಯ: ಪ್ರಿಯಾಂಕ್ ಖರ್ಗೆ ಕಿಡಿ

    – ಪ್ರಧಾನಿ ಹಾಗೂ ಅಜಿತ್ ದೋವಲ್ ನಮ್ಮ ಸೇನೆ, ಜನರಿಗೆ ನಿರಾಸೆ ಮಾಡಿದ್ದಾರೆ
    – ಬೇರೆ ದೇಶದವರ ಉಪದೇಶ ನಮಗೆ ಬೇಡ

    ಕಲಬುರಗಿ: ಭಾರತ ಪಾಕಿಸ್ತಾನ ಯುದ್ಧ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನಡೆದಿದೆ. ಕೇಂದ್ರ ಸರ್ಕಾರ ಸಾಕಷ್ಟು ನೀರಿಕ್ಷೆಗಳನ್ನ ಹೆಚ್ಚಿಸಿತ್ತು. ಆದರೆ ಮೋದಿಗೆ ಯುದ್ಧಕ್ಕಿಂತ ಬಿಹಾರ ಚುನಾವಣೆಯೇ(Bihar Election) ಮುಖ್ಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಕಿಡಿಕಾರಿದ್ದಾರೆ.

    ಕಲಬುರಗಿಯಲ್ಲಿ(Kalaburagi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದವರನ್ನು ನಂಬೋದಕ್ಕೆ ಆಗೋದಿಲ್ಲ. ಅವರು ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ. ಕದನ ವಿರಾಮ ಉಲ್ಲಂಘನೆ ಮಾಡಿದ್ರೆ ವಾರ್ ಆಗುತ್ತೆ ಅಂತಾ ಹೇಳಿದ್ದರು. ಆದರೆ ಕಳೆದ ಕೆಲ ಬೆಳವಣಿಗೆಯನ್ನು ನೋಡಿದ್ರೆ ಆಶ್ಚರ್ಯ ಆಗುತ್ತಿದೆ. ನಮ್ಮ ಸೈನಿಕರು ಭಯೋತ್ಪಾದನೆ ಹುಟ್ಟುವ ಜಾಗದ ಮೇಲೆ ದಾಳಿ ಮಾಡಿದ್ದರು. ನಮ್ಮ ಸೇನೆಗೆ, ಜನರಿಗೆ ಪ್ರಧಾನಿ ಮೋದಿ ಹಾಗೂ ಅಜಿತ್ ದೋವಲ್ ನಿರಾಸೆ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಲಂಡನ್‌ನಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್- ಜ್ಯೂ.ಎನ್‌ಟಿಆರ್ ಆಕ್ರೋಶ

    ನಮ್ಮ ವಿದೇಶಾಂಗ ನೀತಿ ಸಂಪೂರ್ಣವಾಗಿ ಕುಸಿದು ಹೋಗಿದೆ. ವಿಶ್ವಗುರು ಅಂತಾ ಹೇಳಿಕೊಳ್ಳುವವರು, ನಾವು ದಾಳಿ ಮಾಡಿದ ಉಗ್ರರ ದೇಶಕ್ಕೆ ಐಎಂಫ್‌ನಿಂದ ಸಾಲ ಸಿಗುತ್ತಿದೆ ಎಂದರೆ ನಾವು ಅವರ ಮನವೊಲಿಸುವಲ್ಲಿ ವಿಫಲರಾಗಿದ್ದೇವೆ ಎಂದು ಅರ್ಥ. ಅಂದರೆ ವಿದೇಶಾಂಗ ನೀತಿಯಲ್ಲಿ ನಾವು ಹಿಂದೆ ಉಳಿದಿದ್ದೇವೆ ಎಂಬ ಅಭಿಪ್ರಾಯ ಸ್ಪಷ್ಟವಾಗಿ ತಿಳಿಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್‌ನಲ್ಲಿರುವ ಎಲ್ಲಾ ಭಯೋತ್ಪಾದಕರು ಈಗ ಧರ್ಮಗುರುಗಳಾಗಿದ್ದಾರೆ – ಸಚಿವ ಖವಾಜಾ ಆಸಿಫ್

    ಮನಮೋಹನ್ ಸಿಂಗ್(Manmohan Singh) ಅವರು ಹೇಳಿದ ಹಾಗೆ ವಿದೇಶಿ ಸಂಬಂಧವನ್ನು ಬೆಳೆಸಿಕೊಳ್ಳಲು ಬೇರೆ ದೇಶದ ಪ್ರಧಾನಿಗಳನ್ನು ಅಪ್ಪಿಕೊಳ್ಳುವುದಲ್ಲ. ಬದಲಾಗಿ ಕುಳಿತುಕೊಂಡು ಮಾತನಾಡಿ ನಮ್ಮ ಅವರ ಸಂಬಂಧವನ್ನು ಗಟ್ಟಿಗೊಳಿಸುವುದು. ಪಾಕಿಸ್ತಾನಕ್ಕೆ(Pakistan) ಟರ್ಕಿ ಹಾಗೂ ಚೀನಾ ಸಪೋರ್ಟ್ ಮಾಡಿದೆ. ಆದ್ರೆ ಭಾರತಕ್ಕೆ ಯಾವ ದೇಶ ಕೂಡ ಬಹಿರಂಗವಾಗಿ ಬೆಂಬಲ ನೀಡಿಲ್ಲ. ಪ್ರಧಾನಿ ಅವ್ರು ಡೊನಾಲ್ಡ್‌ ಟ್ರಂಪ್(Donald Trump) ನಮ್ಮ ಸ್ನೇಹಿತರು ಅಂತಾ ಹೇಳ್ತಾರೆ. ಆದರೆ ಕದನ ವಿರಾಮ ಆಗಿರೋ ವಿಷಯ ನಮಗೆ ಹೇಗೆ ಗೊತ್ತಾಯ್ತು ಅಂದ್ರೆ ಟ್ರಂಪ್ ಅವರ ಟ್ವೀಟ್ ಮೂಲಕ ಗೊತ್ತಾಗಿದೆ. ಆ ಟ್ವೀಟ್‌ನಲ್ಲಿ ನಮ್ಮನ್ನೂ ಪಾಕಿಸ್ತಾನವನ್ನು ಹೋಲಿಕೆ ಮಾಡಿ, ಎರಡೂ ದೇಶದವರು ಸಮಾನರು ಎಂದು ಹೇಳಿದ್ದಾರೆ. ನಾವು ಪಾಕಿಸ್ತಾನದವರಿಗಿಂತ ಮುಂದಿದ್ದೇವೆ. ಟ್ರಂಪ್ ಅವ್ರು ನಮಗೆ ಸಾಮಾನ್ಯ ಪ್ರಜ್ಞೆ ಹೇಳಿ ಕೊಡ್ತಿದ್ದಾರಾ ಎಂದು ಗುಡುಗಿದರು. ಇದನ್ನೂ ಓದಿ: ನಾನು ಅಕ್ಷರ ಕಲಿಯದಿದ್ದರೆ ಚಡ್ಡಿ ಹಾಕೊಂಡು ಕುರಿ ಕಾಯ್ತಿದ್ದೆ – ಸಿದ್ದರಾಮಯ್ಯ

    ಪಹಲ್ಗಾಮ್‌ನಲ್ಲಿ(Pahalgam) 26 ಮಂದಿ ಅಮಾಯಕರನ್ನು ಹತ್ಯೆ ಮಾಡಿದ ನಾಲ್ವರು ಉಗ್ರರು ಎಲ್ಲಿ ಹೋದರು? ನೀವು ಏನೇ ಮಾಡಿದ್ರು ನಮ್ಮ ಬೆಂಬಲವಿದೆ. ಆದ್ರೆ ನಮ್ಮ ವಿದೇಶಾಂಗ ನೀತಿ ಬಗ್ಗೆ ಮೋದಿ ಹೇಳಬೇಕು. ಸದ್ಯ ದೇಶ ಮರೆತು ವ್ಯಕ್ತಿಯ ಪೂಜೆ ವೈಭವಿಕರಣಕವಾಗುತ್ತಿದೆ. ನಮ್ಮ ಸೈನಿಕರ ಪರಿಶ್ರಮ, ಬಲಿದಾನವನ್ನು ಗೌರವಿಸಬೇಕು. ಇವರು ನೋಡಿದ್ರೆ ಕರಾಚಿವರೆಗೆ ಹೋಗುತ್ತೇವೆ ಅಂತಾರೆ ಇಲ್ಲಿ ನೋಡಿದ್ರೆ ಕರಾಚಿ ಬೇಕರಿ ಒಡೆಯುತ್ತಿದ್ದಾರೆ. ಕದನ ವಿರಾಮದ ಬಗ್ಗೆ ನಮ್ಮ ಮನೆ ಯಜಮಾನರು ಹೇಳಬೇಕು. ಬೇರೆ ದೇಶದವರ ಉಪದೇಶ ನಮಗೆ ಬೇಡ ಎಂದರು. ಇದನ್ನೂ ಓದಿ: ಟೇಕ್ವಾಂಡೋ ಸ್ಪರ್ಧೆಯಲ್ಲಿ 2 ಚಿನ್ನ ಗೆದ್ದ ಕನ್ನಡಿಗ ದಕ್ಷಿಣ್‌ ಸೂರ್ಯ

    ಯುಪಿಎ ಸರ್ಕಾರ ಇದ್ದಾಗ ಮನಮೋಹನ್ ಸಿಂಗ್ ಅವರು ಪಾಕಿಸ್ತಾನವನ್ನು ಉಗ್ರರ ದೇಶ ಅಂತಾ ಹೇಳಿದ್ದರು. ಪಾಕಿಸ್ತಾನಕ್ಕೆ ವಿದೇಶದಿಂದ ಆರ್ಥಿಕ ದಿಗ್ಬಂಧನ ಹಾಕಿದ್ದರು. ಆದರೆ ಈಗ ಏನಾಗ್ತಿದೆ. ಪಾಕ್‌ಗೆ ಆರ್ಥಿಕ ನೆರವು ಹೇಗೆ ಸಿಗ್ತಿದೆ. ಯಾಕೆ ಕೇಂದ್ರ ಸರ್ಕಾರ ಇದರ ಬಗ್ಗೆ ಮಾತನಾಡ್ತಿಲ್ಲ ಎಂದು ಪ್ರಶ್ನಿಸಿದರು.

  • ನಮ್ಮ ದೇಶ ಥರ್ಡ್ ಪಾರ್ಟಿಯ ಮಧ್ಯಸ್ಥಿಕೆ ಇಟ್ಟುಕೊಂಡಿಲ್ಲ: ಕುಮಾರಸ್ವಾಮಿ

    ನಮ್ಮ ದೇಶ ಥರ್ಡ್ ಪಾರ್ಟಿಯ ಮಧ್ಯಸ್ಥಿಕೆ ಇಟ್ಟುಕೊಂಡಿಲ್ಲ: ಕುಮಾರಸ್ವಾಮಿ

    – ಇನ್ನೂ ಪಾಕ್ ಬುದ್ಧಿ ಕಲಿಯದೇ ಇದ್ರೇ ಸರ್ವನಾಶ

    ಬೆಂಗಳೂರು: ನಮ್ಮ ದೇಶ ಮೂರನೇ ಪಾರ್ಟಿಯ ಮಧ್ಯಸ್ಥಿಕೆ ಇಟ್ಟುಕೊಂಡಿಲ್ಲ. ಪಾಕ್ ಹಾಗೂ ನಮ್ಮ ನಡುವಿನ ಎಲ್ಲಾ ವಿಚಾರವನ್ನು ನಿಭಾಯಿಸುವ ಶಕ್ತಿಯಿದೆ ಎಂದು ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ(H D Kumaraswamy) ಹೇಳಿದರು.

    ಬೆಂಗಳೂರಿನಲ್ಲಿ(Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದವರು(Pakistan) ಏನೇ ಉಪಟಳ ಮಾಡಿದ್ರೂ ಅವರಿಗೆ ಅಂತಿಮವಾಗಿ ದೊಡ್ಡಮಟ್ಟದ ಹೊಡೆತ ಬೀಳಲಿದೆ. ರಷ್ಯಾ ಮತ್ತು ಉಕ್ರೇನ್ ಇವತ್ತು ಯಾವ ಸ್ಥಿತಿ ಅನುಭವಿಸ್ತಾ ಇವೆ ಎಂದು ಎಲ್ಲರಿಗೂ ತಿಳಿದಿದೆ. ಆ ದೃಷ್ಟಿಯಿಂದ ಕೆಲವು ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದರು. ಇನ್ನೂ ಪಾಕ್ ಬುದ್ಧಿ ಕಲಿಯದೇ ಇದ್ರೇ ಸರ್ವನಾಶವಾಗಲಿದೆ ಎಂದರು. ಇದನ್ನೂ ಓದಿ: ದೇಶದ ಸೈನಿಕರ ರಕ್ಷಣೆಗಾಗಿ ಮಂತ್ರಾಲಯದಲ್ಲಿ ವಿಶೇಷ ಪೂಜೆ

    ಕಳೆದ ಒಂದು ವಾರದಿಂದ ಪಹಲ್ಗಾಮ್‌ನಲ್ಲಿ(Pahalgam) ನಡೆದ ಉಗ್ರರ ಕೃತ್ಯ ದೇಶಾದ್ಯಂತ ಚರ್ಚೆಯಾಯ್ತು. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi), ರಕ್ಷಣಾ ಸಚಿವರು ಹಲವು ಸಭೆಗಳನ್ನು ಮಾಡಿ ಉಗ್ರ ಚಟುವಟಿಕೆ ಅಂತಿಮ ಇತೀಶ್ರೀ ಹಾಡಬೇಕು ಎಂದು ಹೆಜ್ಜೆಯಿಟ್ಟರು. ನಮ್ಮ ದೇಶದ ಗೌರವ ಹಾಳಾಗಬಾರದೆಂದು ಪ್ರಧಾನಿಯವರು ಹಾಗೂ ಅಧಿಕಾರಿಗಳು ಕದನವಿರಾಮದ(Ceasefire) ನಿರ್ಧಾರ ತೆಗೆದುಕೊಂಡರು ಹೇಳಿದರು. ಇದನ್ನೂ ಓದಿ: ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

    ಭಾರತೀಯ ಸೇನೆಯು ಕೇವಲ ಪಾಕ್‌ನ ಉಗ್ರ ನೆಲಗಳ ಮೇಲೆ ಮಾತ್ರ ದಾಳಿ ಮಾಡಿದೆ. ನಮ್ಮ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ. ಕೇವಲ ಎರಡೇ ದಿನದಲ್ಲಿ ಪಾಕ್ ಶರಣಾಗತಿಯಾಯ್ತು. ನನ್ನ ವೈಯಕ್ತಿಕ ಅಭಿಪ್ರಾಯವೇನೆಂದರೆ, ನಮ್ಮ ದಾಳಿಯಿಂದ ಪಾಕ್‌ಗೆ ಮುಖಭಂಗವಾಗಿದೆ. ಭಾರತ ಸೈನಿಕರ ದಾಳಿಯು ಪಾಕ್‌ಗೆ ನಡುಕ ಉಂಟುಮಾಡಿದೆ ಎಂದು ನುಡಿದರು.

    ಪಿಒಕೆ ವಿಷಯದಲ್ಲಿ ನಮ್ಮ ಪ್ರಶ್ನೆ ಏನೆಂದರೆ ನಾವು ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಅನ್ನುವುದಕ್ಕಿಂತ ಪಾಕಿಸ್ಥಾನಕ್ಕೆ ಆದ ಮುಖಭಂಗ ಮತ್ತು ನಮ್ಮ ಸೈನಿಕರ ಮೇಲುಗೈ ಗಮನಿಸಿ ಕೆಲವು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನಾವು ಇಲ್ಲಿಯವರೆಗೆ ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ. ಇದನ್ನೂ ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಡಿಜಿಎಂಒಗಳ ಸಭೆಯನ್ನು ಕರೆದಿದ್ದರು. ಆದರೆ ಈ ಸಭೆ ಸಂಜೆಗೆ ಮುಂದೂಡಿಕೆಯಾಗಿದೆ ಎಂದರು. ಇದನ್ನೂ ಓದಿ: ಪಾಕ್ ಮೇಲೆ ಪ್ರಕೃತಿಗೂ ಮುನಿಸು – ಮತ್ತೆ ಭೂಕಂಪ

    ಯುದ್ಧದ ಬಗ್ಗೆ ಜನರಲ್ಲಿ ಎರಡು ತರಹದ ಭಾವನೆಗಳಿವೆ. ಯುದ್ಧವಾಗಬೇಕು ಅನ್ನೋದು ಒಂದು ವರ್ಗದ ಭಾವನೆಯಾದರೆ, ಮತ್ತೊಂದೆಡೆ ನಮಗೆ ಆಗುವ ಪ್ರಾಣಿಹಾನಿಯಾಗುತ್ತದೆ. ನಮಗೆ ಶಕ್ತಿಯಿದೆ ಅಂತಾ ಇನ್ನೊಂದು ದೇಶದ ಮೇಲೆ ಗದಾಪ್ರಹಾರ ಮಾಡಿದ್ರೇ, ಇವತ್ತು ಉಕ್ರೇನ್, ರಷ್ಯಾದವರು ಒಂದು ವರ್ಷದಿಂದ ಯುದ್ಧ ಮಾಡಿ ಏನು ಸಾಧನೆ ಮಾಡ್ತಾ ಇದ್ದಾರೆ ಎಂಬುದು ಕೆಲವರ ಭಾವನೆಯಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಬ್ಲಾಕ್‌ ಸೀರೆಯಲ್ಲಿ ಕಲರ್‌ಫುಲ್‌ ಆಗಿ ಮಿಂಚಿದ ನಭಾ!

    ಕಾಶ್ಮೀರದಲ್ಲಿ(Kashmir) ಸಿಲುಕಿದಕೊಂಡ ಕರ್ನಾಟಕದ ವಿದ್ಯಾರ್ಥಿಗಳ ಕುರಿತು ಮಾತನಾಡಿದ ಅವರು, ಈ ವಿಷಯ ತಿಳಿಯುತ್ತಿದ್ದಂತೆ ನಮ್ಮ ಇಲಾಖೆಯ ಗಮನಕ್ಕೆ ತಂದು ಅವರನ್ನು ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ದೆಹಲಿಗೆ ಅವರು ತಲುಪಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದರು.

  • ಪಾಕ್ ದಾಳಿ ಮಾಡಿದರೆ ನಾವು ಭೀಕರ ದಾಳಿ ಮಾಡುತ್ತೇವೆ: ಮೋದಿ ಎಚ್ಚರಿಕೆ

    ಪಾಕ್ ದಾಳಿ ಮಾಡಿದರೆ ನಾವು ಭೀಕರ ದಾಳಿ ಮಾಡುತ್ತೇವೆ: ಮೋದಿ ಎಚ್ಚರಿಕೆ

    – ಪಿಒಕೆ ಬಿಟ್ಟು ತೆರಳಿದರೆ ಮಾತ್ರ ಪಾಕ್ ಜೊತೆ ಮಾತುಕತೆ
    – ಯಾರ ಮಧ್ಯಸ್ಥಿಕೆಯನ್ನೂ ಒಪ್ಪಲ್ಲ

    ನವದೆಹಲಿ: ಪಾಕ್ (Pakistan) ದಾಳಿ ಮಾಡಿದರೆ ಭಾರತ ಪ್ರತಿಯಾಗಿ ಭೀಕರ ದಾಳಿ ಮಾಡುತ್ತದೆ ಎಂದು ಪ್ರಧಾನಿ ಮೋದಿ (Narendra Modi) ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.

    ಪಾಕ್‌ನೊಂದಿಗಿನ ಸಂಘರ್ಷದ ಕುರಿತು ದೂರವಾಣಿ ಕರೆ ಮೂಲಕ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ಪ್ರಧಾನಿ ಮೋದಿ ಚರ್ಚಿಸಿದರು. ಈ ವೇಳೆ ಪಾಕಿಸ್ತಾನ ದಾಳಿ ಮಾಡಿದರೆ ನಮ್ಮ ದಾಳಿ ಬಲವಾಗಿರುತ್ತದೆ. ಮತ್ತೆ ತಂಟೆಗೆ ಬಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಭಾರತದ ರಾಜಕೀಯ, ಸಾಮಾಜಿಕ, ಮಿಲಿಟರಿ ಶಕ್ತಿಯ ಬಲ – ರಾಜನಾಥ್ ಸಿಂಗ್

    ಆಪರೇಷನ್ ಸಿಂಧೂರ ಇನ್ನೂ ಪೂರ್ಣಗೊಂಡಿಲ್ಲ. ಪಾಕ್ ಗುಂಡು ಹೊಡೆದರೆ, ನಾವು ಫಿರಂಗಿಗಳ ಮೂಲಕ ಉತ್ತರಿಸಬೇಕು. ಉಗ್ರವಾದ ನಿಲ್ಲುವವರೆಗೂ ಸಿಂಧೂ ಒಪ್ಪಂದ ಸ್ಥಗಿತಗೊಳಿಸಲಾಗುವುದು. ನಾಳಿನ ಸಭೆಯಲ್ಲಿ ಪಿಒಕೆ ವಿಚಾರ ಮಾತ್ರ ಚರ್ಚೆ ಮಾಡಲಾಗುವುದು. ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ಅಗತ್ಯವಿಲ್ಲ. ಕಾಶ್ಮೀರ ವಿವಾದ ಬಗೆಹರಿಸುವ ಶಕ್ತಿ ಭಾರತಕ್ಕಿದೆ. ಕಾಶ್ಮೀರ ವಿವಾದ ಜಾಗತಿಕಗೊಳಿಸಲು ಇಚ್ಛೆ ಪಡಲ್ಲ ಎಂದು ಮೋದಿ, ದೊಡ್ಡಣ್ಣ ಅಮೆರಿಕಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಕದನ ವಿರಾಮ ಉಲ್ಲಂಘಿಸಿದ್ರೆ ಪ್ರತಿದಾಳಿ ನಡೆಸಿ – ಕಮಾಂಡರ್‌ಗಳಿಗೆ ಭಾರತೀಯ ಸೇನೆ ಪೂರ್ಣ ಅಧಿಕಾರ

    ಮ್ಯಾರಥಾನ್ ಸಭೆ ನಡೆಸಿದ ಮೋದಿ, ರಾಜನಾಥ್ ಸಿಂಗ್, ಎನ್‌ಎಸ್‌ಎ ಅಜಿತ್ ದೋವಲ್, ಸಿಡಿಎಸ್ ಮೇಜರ್ ಅನಿಲ್ ಚೌಹಾಣ್, ಮೂರೂ ಸೇನೆಗಳ ಮುಖ್ಯಸ್ಥರ ಜೊತೆ ಎರಡು ಗಂಟೆ ಚರ್ಚೆ ನಡೆಸಿದ್ದಾರೆ. ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ. ಪಿಒಕೆ ಬಿಟ್ಟು ತೆರಳಿದರೆ ಮಾತ್ರ ಪಾಕ್ ಜೊತೆ ನಮ್ಮ ಮಾತುಕತೆ. ಇನ್ನೂ ನಾವು ಯಾರ ಮಧ್ಯಸ್ಥಿಕೆಯನ್ನೂ ಒಪ್ಪುವುದಿಲ್ಲ. ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ನಾವು ಒಪ್ಪಲ್ಲ. ನಾಳೆ ಪಿಓಕೆ ವಿಚಾರವಾಗಿ ಮಾತುಕತೆ ನಡೆಸಿ ನಿರ್ಣಯ ಮಾಡಲಾಗುವುದು ಎಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: Explainer | ಬ್ರಹ್ಮೋಸ್‌ ನಿರ್ಮಾಣಕ್ಕೆ ಕೈ ಹಾಕಿದ್ದು ಯಾಕೆ? ಪಾಕ್‌ ರೇಡಾರ್‌ ಕಣ್ಣಿಗೆ ಬಿದ್ದಿಲ್ಲ ಯಾಕೆ?

  • ಆಪರೇಷನ್ ಸಿಂಧೂರ | ಲಷ್ಕರ್ ಮುಖ್ಯಸ್ಥ ಸೇರಿ 140 ಉಗ್ರರು ಉಡೀಸ್

    ಆಪರೇಷನ್ ಸಿಂಧೂರ | ಲಷ್ಕರ್ ಮುಖ್ಯಸ್ಥ ಸೇರಿ 140 ಉಗ್ರರು ಉಡೀಸ್

    ನವದೆಹಲಿ: ಭಾರತೀಯ ಸೇನೆ (Indian Army) ನಡೆಸಿದ `ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯಲ್ಲಿ ಪ್ರಮುಖ ಭಯೋತ್ಪಾದಕ ನಾಯಕರು ಸೇರಿ 140 ಉಗ್ರರು ಹತ್ಯೆಯಾಗಿದ್ದಾರೆ.

    ಏ.22 ರಂದು ಪಹಲ್ಗಾಮ್‌ನಲ್ಲಿ (Pahalgam) ನಡೆದ ಹಿಂದೂಗಳ ನರಮೇಧದ ಪ್ರತೀಕಾರವಾಗಿ ಮೇ 6 ಮತ್ತು 7ರ ರಾತ್ರಿ ಭಾರತೀಯ ಸೇನೆಯ `ಆಪರೇಷನ್ ಸಿಂಧೂರ’ ಆಪರೇಷನ್‌ನಲ್ಲಿ ಪಾಕಿಸ್ತಾನದ ಹಲವು ಪ್ರಮುಖ ಭಯೋತ್ಪಾಕರು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

    ಮಾಹಿತಿ ಪ್ರಕಾರ, ಐಸಿ-814 ಅಪಹರಣಕಾರ ಯೂಸುಫ್ ಅಜರ್, ಲಷ್ಕರೆ ಮುರಿಡ್ಕೆ ಪ್ರಧಾನ ಕಚೇರಿಯ ಮುಖ್ಯಸ್ಥ ಅಬು ಜುಂದಾಲ್ @ ಮುದಾಸರ್, 2016ರ ನಗ್ರೋಟಾ ದಾಳಿಯ ಸಂಚುಕೋರನ ಮಗ ಹಾಗೂ ಜಿಹಾದಿ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ. ಹಲವು ಪ್ರಮುಖ ಉಗ್ರರ ಸಾವಿನಿಂದಾಗಿ ಪಾಕಿಸ್ತಾನದ ಮಿಲಿಟರಿ-ಭಯೋತ್ಪಾದನೆಗೆ ತೀವ್ರ ಹಿನ್ನಡೆ ಉಂಟಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

    ಕಾರ್ಯಾಚರಣೆ ವೇಳೆ ಮುರಿದಿಕೆಯಲ್ಲಿನ ಲಷ್ಕರ್ ಪ್ರಧಾನ ಕಚೇರಿಯಲ್ಲೇ ಇದ್ದ ಅತೀ ಹೆಚ್ಚು ಉಗ್ರರ ಹತ್ಯೆಯಾಗಿದ್ದು, ವಿಮಾನ ಹೈಜಾಕರ್ ಯೂಸುಫ್ ಅಜರ್, ಅಬು ಜುಂದಾಲ್ @ ಮುದಸ್ಸರ್ ಸೇರಿ 140 ಉಗ್ರರು ಬಲಿಯಾಗಿದ್ದಾರೆ.

    ಜೈಷ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಕೆಲವರನ್ನು ಹೊಡೆದುರುಳಿಸಿದಲ್ಲದೇ ಮೌಲಾನಾ ಮಸೂದ್ ಅಜರ್‌ನ ಕಾನೂನು ಸಲಹೆಗಾರನಾಗಿದ್ದ ಹಫೀಜ್ ಮುಹಮ್ಮದ್ ಜಮೀಲ್, ವಿಮಾನ ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದ ಮೊಹ್ದ್ ಯೂಸುಫ್ ಅಜರ್ ಅಲಿಯಾಸ್ ಉಸ್ತಾದ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಾಳಿಗಳ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹ್ದ್ ಹಸನ್ ಖಾನ್, ಈ ಮೂವರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

    ಮೇ 6ರ ತಡರಾತ್ರಿ ಭಾರತೀಯ ಸೇನೆ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಪಾಕ್‌ಗೆ ತಕ್ಕ ಉತ್ತರ ನೀಡಿತ್ತು.ಇದನ್ನೂ ಓದಿ: ಆಪರೇಷನ್‌ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ

     

  • ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

    ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

    ಇಸ್ಲಾಮಾಬಾದ್: ಭಾರತ-ಪಾಕ್ (India-Pakistan) ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ವೇಳೆ ಪಾಕ್ ಸೇನೆಗೆ ಸಂಬಂಧಿಸಿದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಉಗ್ರ ಒಸಾಮಾ ಬಿನ್ ಲಾಡೆನ್‌ (Osama Bin Laden) ಆಪ್ತನ ಮಗನೇ ಈಗ ಪಾಕ್ ಸೇನಾ ವಕ್ತಾರ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿದುಬಂದಿದೆ.

    ಭಾರತದ ವಿರುದ್ಧ ಪಾಕಿಸ್ತಾನದ ಅಘೋಷಿತ ಕದನ ಸಾಗಿರುವ ನಡುವೆಯೇ ಪಾಕಿಸ್ತಾನ ಸೇನಾ ಪಡೆಗಳ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಒಸಾಮಾ ಬಿನ್ ಲ್ಯಾಡೆನ್ ಆಪ್ತನ ಮಗ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಆಪರೇಷನ್‌ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ

    ಅಲ್‌ಖೈದಾ ಸಂಸ್ಥಾಪಕ ಉಗ್ರ ಒಸಾಮಾ ಬಿನ್ ಲಾಡೆನ್ ಆಪ್ತ ಪಾಕಿಸ್ತಾನದ ಪರಮಾಣು ವಿಜ್ಞಾನಿ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಅವರ ಮಗ ಅಹ್ಮದ್ ಷರೀಫ್ ಚೌಧರಿ ಈಗಿನ ಪಾಕ್ ಸಾರ್ವಜನಿಕ ಸಂಪರ್ಕಾಧಿಕಾರಿಯೆಂದು ತಿಳಿದುಬಂದಿದೆ.

    ಈ ಮೊದಲು ಲಾಡೆನ್ ಆಪ್ತ ಉಗ್ರರಿಗೆ ಪರಮಾಣು ಶಸ್ತ್ರಾಸ್ತ್ರ ತಂತ್ರಜ್ಞಾನ ಹಸ್ತಾಂತರಿಸಲು ಯತ್ನಿಸಿದ್ದರು ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಆರೋಪ ಹೊತ್ತಿದ್ದರು. ಬಳಿಕ ಅವರನ್ನು ವಿಶ್ವಸಂಸ್ಥೆ ನಿರ್ಬಂಧಿಸಿತ್ತು.ಇದನ್ನೂ ಓದಿ: 6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್‌