Tag: India-Pakistan

  • ಭಾರತ-ಪಾಕ್ ಉದ್ವಿಗ್ನ; ಹಂಪಿ ಮೇಲೆ ವಿಶೇಷ ನಿಗಾವಹಿಸಿದ ಕೇಂದ್ರ, ರಾಜ್ಯ ಸರ್ಕಾರ

    ಭಾರತ-ಪಾಕ್ ಉದ್ವಿಗ್ನ; ಹಂಪಿ ಮೇಲೆ ವಿಶೇಷ ನಿಗಾವಹಿಸಿದ ಕೇಂದ್ರ, ರಾಜ್ಯ ಸರ್ಕಾರ

    -4 ಚೆಕ್‌ಪೋಸ್ಟ್ ನಿರ್ಮಿಸಿ, ಭದ್ರತೆ ಹೆಚ್ಚಿಸಿದ ಪೊಲೀಸ್ ಇಲಾಖೆ

    ಬಳ್ಳಾರಿ: ಭಾರತ-ಪಾಕಿಸ್ತಾನ (India-Pakistan) ಗಡಿಯಲ್ಲಿ ಉದ್ವಿಗ್ನ ವಾತಾವರಣ ಹಿನ್ನೆಲೆ ದಕ್ಷಿಣ ಕಾಶಿ, ಯುನೆಸ್ಕೋ ವಿಶ್ವಪಾರಂಪರಿಕ ತಾಣ ಹಂಪಿಯ (Hampi) ಮೇಲೆ ಕೇಂದ್ರ, ರಾಜ್ಯ ಸರ್ಕಾರ ವಿಶೇಷ ನಿಗಾವಹಿಸಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗಿದೆ.ಇದನ್ನೂ ಓದಿ: ಕುಂಭಮೇಳದ ನೀಲಿ ಕಂಗಳ ಚೆಲುವೆಗೆ ಬಿಗ್ ಚಾನ್ಸ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಹಂಪಿಗೆ ಬರುವ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬ ಪ್ರವಾಸಿಗನ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಹಂಪಿಗೆ ಬರುವ ಮಾರ್ಗಗಳಲ್ಲಿ 4 ಚೆಕ್‌ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದೆ. 24 ಗಂಟೆಗಳ ಕಾಲ ಎರಡು ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಕಲ್ಲಿನ ತೇರಿನ ಬಳಿ ಹಗಲು ಹೊತ್ತಿನಲ್ಲಿ ಚೆಕ್‌ಪೋಸ್ಟ್ ಕಾರ್ಯನಿರ್ವಹಿಸುತ್ತಿದೆ.

    ಇನ್ನೂ ಪೊಲೀಸರು ಗಸ್ತು ವಾಹನಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ತಪಾಸಣೆಗಾಗಿ 4 ಮೆಟಲ್ ಡಿಟೆಕ್ಟರ್ ಅಳವಡಿಸಿದ್ದಾರೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರನ್ನು ತಪಾಸಣೆ ಮಾಡುವಂತೆ ಕೇಂದ್ರ, ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಹೆಚ್ಚಿನ ಭದ್ರತೆ ನೀಡಲಾಗಿದೆ.ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ ಏಟಿಗೆ ಪಾಕಿಸ್ತಾನ ಬಾಲ ಮುದುರಿದ ನಾಯಿಯಂತೆ ಓಡಿದೆ: ಪೆಂಟಗನ್‌ ಮಾಜಿ ಅಧಿಕಾರಿ ವ್ಯಂಗ್ಯ

  • ಭಾರತದ ವಿರುದ್ಧ ಪಾಕಿಸ್ತಾನ ಸುಳ್ಳು ಸುದ್ದಿಗಳನ್ನು ಹಬ್ಬಿಸಿದೆ: ಸೋಫಿಯಾ ಖುರೇಷಿ

    ಭಾರತದ ವಿರುದ್ಧ ಪಾಕಿಸ್ತಾನ ಸುಳ್ಳು ಸುದ್ದಿಗಳನ್ನು ಹಬ್ಬಿಸಿದೆ: ಸೋಫಿಯಾ ಖುರೇಷಿ

    – ಭಾರತೀಯ ವಾಯುನೆಲೆಗಳು ಸುರಕ್ಷಿತ
    – ನಮ್ಮ ಪ್ರತಿದಾಳಿಯಿಂದ ಪಾಕ್ ಸೇನೆಗೆ ಅಪಾರ ನಷ್ಟ: ಕರ್ನಲ್ ಸೋಫಿಯಾ

    ನವದೆಹಲಿ: ಭಾರತದ ವಿರುದ್ಧ ಪಾಕಿಸ್ತಾನ ಸುಳ್ಳು ಆರೋಪ ಮಾಡಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ(Sofiya Qureshi) ಹೇಳಿದ್ದಾರೆ.

    ಶನಿವಾರ ಭಾರತ(India) ಹಾಗೂ ಪಾಕಿಸ್ತಾನದ(Pakistan) ನಡುವಿನ ಕದನ ವಿರಾಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್400 ಕ್ಷಿಪಣಿ, ಬ್ರಹ್ಮೋಸ್ ನೆಲೆ ನಾಶವಾಗಿಲ್ಲ. ಭಾರತದ ವಿರುದ್ಧ ಪಾಕಿಸ್ತಾನ ಸುಳ್ಳು ಆರೋಪಗಳನ್ನ ಮಾಡ್ತಿದೆ. ಚಂಡೀಗಢದಲ್ಲಿ ಪಾಕ್ ಶೆಲ್ ಮೇಲೆ ದಾಳಿ ಮಾಡಿರೋದು ಸುಳ್ಳು ಸುದ್ದಿಯಾಗಿದೆ. ಭಾರತೀಯ ಸೇನೆಯು ಪಾಕಿಸ್ತಾನದ ಡ್ರೋನ್‌ಗಳನ್ನ ಹೊಡೆದುರುಳಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಗುಂಡಿನ ದಾಳಿ, ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಭಾರತ-ಪಾಕ್‌ ಒಪ್ಪಂದ: ಜೈಶಂಕರ್‌

    ಭಾರತೀಯ ಸೇನೆಯು(Indian Army) ಕೇವಲ ಪಾಕ್‌ನ ಸೇನಾವಲಯಗಳನ್ನ ಮಾತ್ರ ಗುರಿ ಮಾಡಿ ದಾಳಿ ಮಾಡಿದೆ. ಪಾಕಿಸ್ತಾನ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದೆ. ನಮ್ಮ ದಾಳಿಯಿಂದ ಪಾಕಿಸ್ತಾನ ಸೇನೆಗೆ ಸಾಕಷ್ಟು ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದೆ: ಪಾಕ್ ವಿದೇಶಾಂಗ ಸಚಿವ ಘೋಷಣೆ

    ಭಾರತೀಯ ಸೇನೆಯು ಪಾಕಿಸ್ತಾನದ ಯಾವುದೇ ಮಸೀದಿಗಳನ್ನ ಟಾರ್ಗೆಟ್ ಮಾಡಿಲ್ಲ. ಕೇವಲ ಪಾಕ್ ಉಗ್ರರ ನೆಲೆಗಳನ್ನ ಧ್ವಂಸ ಮಾಡಿದ್ದೇವೆ. ಪಾಕಿಸ್ತಾನ ಏರ್‌ಬೇಸ್‌ಗಳನ್ನ ಹೊಡೆದುರುಳಿಸಿದ್ದೇವೆ. ಎಲ್‌ಓಸಿಯಲ್ಲಿಯೂ ಪಾಕಿಸ್ತಾನ ಗುಂಡಿನ ದಾಳಿ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಭಾರತ ದಾಳಿ ಮಾಡಿದ ವೇಳೆ ಅವರಿಗೂ ನಷ್ಟವಾಗಿದೆ. ಎಲ್ಲಾ ಸಮಯದಲ್ಲೂ ನಮ್ಮ ಸೇನೆ ಅಲರ್ಟ್ ಇರಲಿದೆ. ಪಾಕ್ ದಾಳಿಗೆ ಪ್ರತಿದಾಳಿ ಮಾಡಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

  • ಭಾರತ- ಪಾಕ್ ನಡುವೆ ಕದನ ವಿರಾಮ

    ಭಾರತ- ಪಾಕ್ ನಡುವೆ ಕದನ ವಿರಾಮ

    – ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿ

    ನವದೆಹಲಿ: ಪಾಕಿಸ್ತಾನದ(Pakistan) ಜೊತೆಗಿನ ಕದನ ವಿರಾಮಕ್ಕೆ ಭಾರತ(India) ಒಪ್ಪಿಕೊಂಡಿದ್ದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ.

    ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಯಾಗಿದೆ. ಮೇ 12ರಂದು ಉಭಯ ದೇಶಗಳು ಮಾತುಕತೆ ನಿರ್ಧರಿಸಿವೆ. ಈ ಸಭೆಗೆ ಅಮೆರಿಕಾ(America) ಮಧ್ಯಸ್ಥಿಕೆ ಇಲಾಖೆ ವಹಿಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದೆ: ಪಾಕ್ ವಿದೇಶಾಂಗ ಸಚಿವ ಘೋಷಣೆ

    ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್‌ ಉಗ್ರರು(Pahalgam Terror Attack) ದಾಳಿ ಮಾಡಿ 26 ಅಮಾಯಕರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಮೇ 7ರಂದು ಭಾರತವು ʻಆಪರೇಷನ್‌ ಸಿಂಧೂರʼ(Operation Sindoor) ಹೆಸರಿನಡಿಯಲ್ಲಿ ಪಾಕ್‌ನ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿತ್ತು. ಇದನ್ನೂ ಓದಿ: ಭಾರತ-ಪಾಕಿಸ್ತಾನದಿಂದ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಟ್ರಂಪ್‌ ಘೋಷಣೆ

    ಈ ದಾಳಿಗೆ ಪ್ರತಿಯಾಗಿ ಪಾಕ್‌ ಭಾರತದ ಮೇಲೆ ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ಮಾಡಿತ್ತು. ಭಾರತೀಯ ಸೇನೆಯು ಪಾಕ್‌ನ ಡ್ರೋನ್‌ ಹಾಗೂ ಕ್ಷಿಪಣಿಗಳಿಗೆ ಹೊಡೆದುರುಳಿಸುವ ಮೂಲಕ ಪ್ರತ್ಯುತ್ತರ ನೀಡಿತ್ತು.  ಇದನ್ನೂ ಓದಿ: ಪಾಕ್‌ಗೆ ಬೆಂಬಲ ನೀಡಿದ ಟರ್ಕಿ, ಅಜೆರ್ಬೈಜಾನ್‌ಗೆ ಭಾರತ ಪೆಟ್ಟು – 2 ದೇಶಗಳಿಗೆ ಟೂರ್‌ ಪ್ಯಾಕೇಜ್‌ ಸ್ಥಗಿತ

    ಭಾರತದ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಡುತ್ತಿದ್ದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Donald Trump) ಉಭಯ ರಾಷ್ಟ್ರಗಳಿಗೆ ಕದನ ವಿರಾಮ(Ceasefire) ಮಾಡುವಂತೆ ಸಲಹೆ ನೀಡಿದ್ದರು. ಆದರೆ ಇದು ಫಲಪ್ರದವಾಗಿರಲಿಲ್ಲ. ಇದೀಗ ಮತ್ತೊಮ್ಮೆ ಮಾತುಕತೆ ನಡೆಸಿ, ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ.

  • ಭಾರತ-ಪಾಕ್ ಉದ್ವಿಗ್ನ ಸ್ಥಿತಿ; ದೆಹಲಿ ಏರ್‌ಪೋರ್ಟ್‌ನಲ್ಲಿ 138 ವಿಮಾನ ಹಾರಾಟ ರದ್ದು

    ಭಾರತ-ಪಾಕ್ ಉದ್ವಿಗ್ನ ಸ್ಥಿತಿ; ದೆಹಲಿ ಏರ್‌ಪೋರ್ಟ್‌ನಲ್ಲಿ 138 ವಿಮಾನ ಹಾರಾಟ ರದ್ದು

    ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆ ವಿವಿಧ ವಿಮಾನಯಾನ ಸಂಸ್ಥೆಗಳು ದೆಹಲಿ ವಿಮಾನ ನಿಲ್ದಾಣದಲ್ಲಿ(Delhi Airport) ಸುಮಾರು 138 ವಿಮಾನಗಳನ್ನು ರದ್ದುಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.

    ಶುಕ್ರವಾರ ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಒಟ್ಟು 66 ದೇಶೀಯ(Domestic) ನಿರ್ಗಮನಗಳು ಮತ್ತು 63 ಆಗಮನ ವಿಮಾನಗಳು, ಹಾಗೆಯೇ 5 ಅಂತರರಾಷ್ಟ್ರೀಯ(International) ನಿರ್ಗಮನಗಳು ಮತ್ತು 4 ಆಗಮನ ವಿಮಾನಗಳ ಹಾರಾಟವನ್ನು ಭದ್ರತಾ ದೃಷ್ಟಿಯಿಂದ ರದ್ದು ಮಾಡಲಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಯಶಸ್ವಿಯಾಗಲೆಂದು ವೀರೇಂದ್ರ ಹೆಗ್ಗಡೆ ವಿಶೇಷ ಪೂಜೆ

    ದೆಹಲಿ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ. ವಾಯುಪ್ರದೇಶದ ಪರಿಸ್ಥಿತಿ ಮತ್ತು ಹೆಚ್ಚಿದ ಭದ್ರತಾ ಕ್ರಮಗಳಿಂದಾಗಿ, ಕೆಲವು ವಿಮಾನಗಳ ವೇಳಾಪಟ್ಟಿ ಮತ್ತು ಭದ್ರತಾ ಪ್ರಕ್ರಿಯೆಯ ಸಮಯದ ಮೇಲೆ ಪರಿಣಾಮ ಬೀರಬಹುದು ಎಂದು ಡಿಐಎಎಲ್(Delhi International Airport Limited) ಎಕ್ಸ್ ಮೂಲಕ ತಿಳಿಸಿದೆ. ಇದನ್ನೂ ಓದಿ: ದೇಶಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧ: ಜಮೀರ್ ಅಹ್ಮದ್

    ಭದ್ರತಾ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚುವರಿ ಸಮಯಕ್ಕೆ ಸಿದ್ಧರಾಗಿರಬೇಕು ಮತ್ತು ಸುಗಮ ಪ್ರಕ್ರಿಯೆಗಾಗಿ ವಿಮಾನಯಾನ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಪ್ರಯಾಣಿಕರಿಗೆ ಸಲಹೆ ನೀಡಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಕೇಸ್ | NIAಗೆ ವಹಿಸಲು ರಾಜ್ಯಪಾಲರಿಗೆ ಮನವಿ, ಕರಾವಳಿಗೆ ಪಾಕ್ ಸಂಪರ್ಕವಿದೆ: ಅಶೋಕ್

    ಏ. 22ರಂದು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ(Pahalgam Terror Attack) 26 ಮಂದಿ ಮೃತಪಟ್ಟಿದ್ದರು. ಈ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕ್ ಉಗ್ರರ 9 ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯ ಬಳಿಕ ಮುಂಜಾಗ್ರತೆ ಕ್ರಮವಾಗಿ ಗಡಿ ಪ್ರದೇಶಗಳಿಗೆ ಹೊಂದಿಕೊಂಡಿರುವ 27 ಏರ್‌ಪೋರ್ಟ್‌ಗಳಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

  • ಗುಜರಾತ್ ಸಿಎಂ ಜೊತೆ ಗಡಿ ಜಿಲ್ಲೆಗಳ ಭದ್ರತೆ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ

    ಗುಜರಾತ್ ಸಿಎಂ ಜೊತೆ ಗಡಿ ಜಿಲ್ಲೆಗಳ ಭದ್ರತೆ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ

    ಗಾಂಧಿನಗರ: ಭಾರತ-ಪಾಕ್ ನಡುವಿನ ಉದ್ವಿಗ್ನ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(Narendra Modi) ಗುಜರಾತ್ ಸಿಎಂ ಭೂಪೇಂದ್ರ ಪಟೇಲ್(Bhupendra Patel) ಜೊತೆ ಗಡಿ ಜಿಲ್ಲೆಗಳ ಭದ್ರತೆ ಕುರಿತು ಚರ್ಚೆ ನಡೆಸಿದರು.

    ಪ್ರಧಾನಿ ಮೋದಿ ಅವರು ಗುಜರಾತ್(Gujarat) ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕರೆ ಮಾಡಿ, ಗಡಿ ರಾಜ್ಯವಾದ ಗುಜರಾತ್‌ನಲ್ಲಿ ಪ್ರಸ್ತುತ ಉದ್ವಿಗ್ನತೆಯ ಪರಿಸ್ಥಿತಿಗೆ ರಾಜ್ಯ ಸರ್ಕಾರ ಕೈಗೊಂಡಿರುವ ಮುಂಗಡ ಯೋಜನೆಯ ವಿವರಗಳನ್ನು ಪಡೆದರು. ಈ ವೇಳೆ ಪ್ರಧಾನಿ ಅವರು ಕೆಲವು ಅಗತ್ಯ ಮಾರ್ಗದರ್ಶನವನ್ನೂ ನೀಡಿದರು. ಇದನ್ನೂ ಓದಿ: India’s Strike | ಪಾಕ್‌ ಮೇಲೆ ಭಾರತ ಪ್ರಯೋಗಿಸಿದ 3 ರಾಷ್ಟ್ರಗಳ ಶಸ್ತ್ರಾಸ್ತ್ರಗಳು ಎಷ್ಟು ಪವರ್‌ಫುಲ್?‌

    ಪಾಕಿಸ್ತಾನ ಗಡಿಗೆ(Pakistan Border) ಸಂಪರ್ಕ ಹೊಂದಿರುವ ಕಚ್, ಬನಸ್ಕಂತ, ಪಟಾನ್, ಜಾಮ್‌ನಗರದಂತಹ ಸೂಕ್ಷ್ಮ ಜಿಲ್ಲೆಗಳಲ್ಲಿ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಕೈಗೊಂಡಿರುವ ಕ್ರಮಗಳ ವಿವರಗಳನ್ನು ಪಡೆದರು. ಇದನ್ನೂ ಓದಿ: ಸೇನಾ ಮುಖ್ಯಸ್ಥರ ಜೊತೆ ಹೈವೋಲ್ಟೇಜ್‌ ಸಭೆ ನಡೆಸಿದ ರಾಜನಾಥ್ ಸಿಂಗ್‌

    ಪ್ರಧಾನಿ ಮೋದಿಯವರು ಗಡಿ ಸುರಕ್ಷತೆ ಬಗ್ಗೆ ಮಾಹಿತಿ ಪಡೆದಿರುವುದರ ಕುರಿತು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಪಾಕಿಸ್ತಾನವು ಗುಜರಾತ್‌ನ ಭುಜ್ ಸೇರಿದಂತೆ 15 ನಗರಗಳಲ್ಲಿ ಮಿಲಿಟರಿ ಸ್ಥಾಪನೆಗಳ ಮೇಲೆ ನಡೆಸಿದ ವಾಯುದಾಳಿ ಪ್ರಯತ್ನವನ್ನು ಭಾರತ ವಿಫಲಗೊಳಿಸಿದೆ.

  • ಜೈಸಲ್ಮೇರ್‌ನಲ್ಲಿ ಬಾಂಬ್ ತರಹದ ವಸ್ತು ಪತ್ತೆ – ಭಯಭೀತರಾದ ಜನ

    ಜೈಸಲ್ಮೇರ್‌ನಲ್ಲಿ ಬಾಂಬ್ ತರಹದ ವಸ್ತು ಪತ್ತೆ – ಭಯಭೀತರಾದ ಜನ

    ಜೈಪುರ: ರಾಜಸ್ಥಾನದ(Rajastan) ಜೈಸಲ್ಮೇರ್‌ನಲ್ಲಿ(Jaisalmer) ಶುಕ್ರವಾರ ಬೆಳಗ್ಗೆ ನಿಗೂಢ ಬಾಂಬ್ ತರಹದ ವಸ್ತು ಪತ್ತೆಯಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

    ಗುರುವಾರ ರಾತ್ರಿ ಪಾಕಿಸ್ತಾನವು(Pakistan) ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ನಂತರ ಜೈಸಲ್ಮೇರ್‌ನಲ್ಲಿ ಬಾಂಬ್‌ಗೆ ಹೋಲುವಂತ ವಸ್ತು ಪತ್ತೆಯಾಗಿದೆ. ಜೈಸಲ್ಮೇರ್‌ನ ಕಿಶನ್ ಘಾಟ್‌ನಲ್ಲಿರುವ(Kishan Ghat) ಗ್ರಾಮಸ್ಥರು ತಮ್ಮ ಮನೆಗಳ ಹೊರಗೆ ಈ ವಸ್ತುವನ್ನು ಕಂಡುಕೊಂಡ ಭಯಭೀತರಾಗಿದ್ದಾರೆ. ಈ ವಿಷಯ ತಿಳಿಯುತ್ತಿದಂತೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ ಟೈಟಲ್‌ಗೆ ಬೇಡಿಕೆ- ರಿಜಿಸ್ಟರ್ ಮಾಡಲು ಮುಗಿಬಿದ್ದ ನಿರ್ಮಾಪಕರು

    ಈ ಕುರಿತು ಸ್ಥಳೀಯರೊಬ್ಬರು ಪ್ರತಿಕ್ರಯಿಸಿ, ರಾತ್ರಿಯಿಡೀ ನಮಗೆ ಸೈರನ್ ಕೇಳಿಸಿತು. ರಾತ್ರಿ 9 ಗಂಟೆಯ ಸುಮಾರಿಗೆ, ಆಕಾಶದಿಂದ ಬೀಳುತ್ತಿದ್ದ ಕಿಡಿಗಳು ಮಾತ್ರ ಕಾಣುತ್ತಿದ್ದವು. ಮನೆಯ ಹೊರಗೆ ಬಂದರೆ ದೊಡ್ಡ ದೊಡ್ಡ ಶಬ್ದಗಳು ಕೇಳುತ್ತಿದ್ದವು. ಹಾಗಾಗಿ ಮನೆಯಿಂದ ಹೊರಬರಲು ಹೆದರುತ್ತಿದ್ದೆವು. ಇಂದು ಬೆಳಗ್ಗೆ ನಾವು ನಮ್ಮ ಮನೆಯಿಂದ ಹೊರಬಂದಾಗ, ಈ ಬಾಂಬ್ ತರಹದ ವಸ್ತು ಕಂಡುಬಂದಿದೆ ಎಂದರು. ಇದನ್ನೂ ಓದಿ: ಸೇನಾ ಮುಖ್ಯಸ್ಥರ ಜೊತೆ ಹೈವೋಲ್ಟೇಜ್‌ ಸಭೆ ನಡೆಸಿದ ರಾಜನಾಥ್ ಸಿಂಗ್‌

    ಬಾಂಬ್ ತರಹದ ವಸ್ತುವಿನ ಬಗ್ಗೆ ನಮಗೆ ಮಾಹಿತಿ ನೀಡಲಾಯಿತು. ಅದು ಏನೆಂದು ನಮಗೆ ಇನ್ನೂ ಖಚಿತವಿಲ್ಲ. ನಾವು ಸೇನೆಗೆ ಮಾಹಿತಿ ನೀಡಿದ್ದೇವೆ ಮತ್ತು ಬಾಂಬ್ ನಿಷ್ಕ್ರಿಯ ದಳವೂ ಬರುತ್ತಿದೆ ಎಂದು ಕೊತ್ವಾಲಿ ಸ್ಟೇಷನ್ ಹೌಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಪಾಕ್‌ ಕ್ಷಿಪಣಿ ಅವಶೇಷ ಪತ್ತೆ – ಚೀನಾ ನಿರ್ಮಿತ ಪವರ್‌ಫುಲ್‌ ಮಿಸೈಲ್‌ ಠುಸ್‌!

    ಏ. 22ರಂದು ಪಹಲ್ಗಾಮ್‌ನಲ್ಲಿ ನಡೆದ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿ ಮತ್ತು ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಗುರಿಗಳ ಮೇಲೆ ಭಾರತ ಪ್ರತಿದಾಳಿ ನಡೆಸಿದೆ. ಭಾರತ ಹಾಗೂ ಪಾಕ್ ಉದ್ವಿಗ್ನದ ಬೆನ್ನಲ್ಲೇ ಹಲವು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

  • ಪಾಕ್‌ ತಂಡದ ನಸೀಮ್‌ ಷಾ ಶೂ ಲೇಸ್‌ ಕಟ್ಟಿದ ಕಿಂಗ್‌ ಕೊಹ್ಲಿ – ವಿರಾಟ್‌ ಸರಳತೆಗೆ ಸಲಾಂ ಹೊಡೆದ ಫ್ಯಾನ್ಸ್‌

    ಪಾಕ್‌ ತಂಡದ ನಸೀಮ್‌ ಷಾ ಶೂ ಲೇಸ್‌ ಕಟ್ಟಿದ ಕಿಂಗ್‌ ಕೊಹ್ಲಿ – ವಿರಾಟ್‌ ಸರಳತೆಗೆ ಸಲಾಂ ಹೊಡೆದ ಫ್ಯಾನ್ಸ್‌

    ದುಬೈ: ವಿರಾಟ್‌ ಕೊಹ್ಲಿಗೆ ಜಾಗತಿಕ ಕ್ರಿಕೆಟ್‌ ವಲಯದಲ್ಲಿ ವಿಶೇಷ ಸ್ಥಾನಮಾನವಿದೆ. ಆದರೂ ಮೈದಾನದಲ್ಲಿ ಕೆಲವೊಮ್ಮೆ ಅವರು ಸರಳ ವ್ಯಕ್ತಿಯಂತೆ ನಡೆದುಕೊಳ್ಳುವ ರೀತಿ ಅಭಿಮಾನಿಗಳಿಗೆ ಮೆಚ್ಚು. ಅದಕ್ಕೆ ನಿದರ್ಶನವೆಂಬಂತೆ ಘಟನೆಯೊಂದು ನಡೆದಿದೆ. ವಿರಾಟ್‌ ಕೊಹ್ಲಿ ಆಟದ ಮಧ್ಯೆ ಪಾಕ್‌ ತಂಡದ ಬೌಲರ್‌ ನಸೀಮ್‌ ಷಾ ಅವರ ಶೂ ಲೇಸ್‌ ಕಟ್ಟಿ ಸರಳತೆ ಮೆರೆದಿದ್ದಾರೆ.

    ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್. 2025 ರ ಭಾರತ-ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕ್‌ ಬ್ಯಾಟಿಂಗ್‌ ವೇಳೆ ನಾನ್-ಸ್ಟ್ರೈಕರ್‌ನಲ್ಲಿದ್ದ ನಸೀಮ್ ಷಾ, ಕೊಹ್ಲಿಯನ್ನು ತನ್ನ ಶೂಲೇಸ್‌ಗಳನ್ನು ಕಟ್ಟಲು ಕೇಳಿಕೊಂಡರು. ಇದಕ್ಕೆ ಭಾರತದ ಮಾಜಿ ನಾಯಕ ಒಪ್ಪಿಗೆ ಸೂಚಿಸಿ ಶೂಲೇಸ್‌ ಕಟ್ಟಿದ್ದಾರೆ. ಈ ಅಪರೂಪದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

    ಸಾಮಾನ್ಯ ವ್ಯಕ್ತಿಯಂತೆ ಎದುರಾಳಿ ತಂಡದ ಆಟಗಾರನ ಶೂಲೇಸ್‌ ಕಟ್ಟಿದ ಕೊಹ್ಲಿ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಳತೆ ಅಂದ್ರೆ ಇದು ಎಂದು ಬಣ್ಣಿಸಿದ್ದಾರೆ. ವೈರಲ್‌ ಆಗಿರುವ ದೃಶ್ಯಗಳು ಹೃದಯಸ್ಪರ್ಶಿಯಾಗಿವೆ.

    ಕಿಂಗ್‌ ಕೊಹ್ಲಿ ಆಕರ್ಷಕ ಶತಕ, ಶ್ರೇಯಸ್‌ ಫಿಫ್ಟಿ ಆಟದಿಂದ ಹೈವೋಲ್ಟೇಜ್‌ ಪಂದ್ಯದಲ್ಲಿ ಪಾಕ್‌ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಭಾರತದ ಶಿಸ್ತುಬದ್ಧ ಬೌಲಿಂಗ್‌ಗೆ ಪಾಕಿಸ್ತಾನ ಸಾಧಾರಣ ಮೊತ್ತ ಕಲೆ ಹಾಕಿತ್ತು. 49.4 ಓವರ್‌ಗೆ ಪಾಕ್‌ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿತ್ತು. 242 ರನ್‌ ಗುರಿ ಬೆನ್ನತ್ತಿದ ಭಾರತ 3 ವಿಕೆಟ್‌ ಕಳೆದುಕೊಂಡು 42.3 ಓವರ್‌ಗಳಲ್ಲಿ ಗುರಿ ತಲುಪಿತು.

  • ಧರ್ಮದ ಆಧಾರದಲ್ಲೇ ದೇಶ ವಿಭಜನೆಯಾಗಿದೆ; ಭಾರತ ಹಿಂದೂ ರಾಷ್ಟ್ರ – ಕೈಲಾಶ್ ವಿಜಯವರ್ಗಿಯಾ

    ಧರ್ಮದ ಆಧಾರದಲ್ಲೇ ದೇಶ ವಿಭಜನೆಯಾಗಿದೆ; ಭಾರತ ಹಿಂದೂ ರಾಷ್ಟ್ರ – ಕೈಲಾಶ್ ವಿಜಯವರ್ಗಿಯಾ

    ಇಂದೋರ್: ಭಾರತ-ಪಾಕಿಸ್ತಾನ (India-Pakistan) ವಿಭಜನೆಗೆ ಧರ್ಮವೇ ಆಧಾರವಾಗಿತ್ತು. ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಮುಸ್ಲಿಂ ದೇಶವಾದರೆ, ಭಾರತ ಹಿಂದೂ ದೇಶವಾಗಿದೆ (Hindu Nation) ಎಂದು ಬಿಜೆಪಿ (BJP) ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ (Kailash Vijayvargiya) ಹೇಳಿದ್ದಾರೆ.

    ಮಧ್ಯಪ್ರದೇಶದ (Madhyapradesh) ಇಂದೋರ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದೂ ರಾಷ್ಟ್ರವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಭೋಪಾಲ್‌ನಲ್ಲಿ ವಾಸಿಸುವ ಅವರ ಮುಸ್ಲಿಂ ಸ್ನೇಹಿತ ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸುತ್ತಾನೆ ಮತ್ತು ಶಿವ ದೇವಾಲಯಕ್ಕೂ ಭೇಟಿ ನೀಡುತ್ತಾನೆ ಎಂದು ಅವರು ಹೇಳಿಕೊಂಡಿದ್ದಾರೆ. ತಮ್ಮ ಮುಸ್ಲಿಂ ಸ್ನೇಹಿತನಂತೆ, ತಮ್ಮ ಪೂರ್ವಜರು ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ ಎಂದು ಭಾವಿಸುವ ಅನೇಕ ಜನರಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: 2 ಸಾವಿರಕ್ಕೂ ಅಧಿಕ ಮೋದಿ ವಿರೋಧಿ ಪೋಸ್ಟರ್‌ಗಳು – ನಾಲ್ವರು ಅರೆಸ್ಟ್

    ಹನುಮಾನ್ ಮತ್ತು ಶಿವನನ್ನು ಪೂಜಿಸಲು ಹೇಗೆ ಪ್ರೇರಿತನಾದೆ ಎಂದು ನಾನು ನನ್ನ ಮುಸ್ಲಿಂ ಸ್ನೇಹಿತನನ್ನು ಕೇಳಿದೆ. ಅವರ ಕುಟುಂಬದ ಇತಿಹಾಸವನ್ನು ಓದಿದಾಗ, ಅವರ ಪೂರ್ವಜರು ರಾಜಸ್ಥಾನದ ರಜಪೂತರು ಮತ್ತು ಅವರ ಕೆಲವು ಸಂಬಂಧಿಕರು ಇನ್ನೂ ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ವಾಸಿಸುವ ರಜಪೂತರೆಂದು ನನ್ನ ಸ್ನೇಹಿತ ಉತ್ತರಿಸಿದ ಎಂದರು.

    ಇದಕ್ಕೂ ಮೊದಲು ಜೂನ್ 2022 ರಲ್ಲಿ ಕೈಲಾಶ್ ವಿಜಯವರ್ಗಿಯಾ ಅವರು ಅಗ್ನಿವೀರರ ಕುರಿತಾದ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಅಗ್ನಿವೀರರನ್ನು ತಮ್ಮ ಬಿಜೆಪಿ ಕಚೇರಿಯಲ್ಲಿ ಭದ್ರತಾ ಕೆಲಸಗಳಿಗೆ ನೇಮಿಸಿಕೊಳ್ಳುವುದಾಗಿ ಹೇಳಿದ್ದರು. ಈ ಹೇಳಿಕೆ ಟೀಕೆಗೆ ಗುರಿಯಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ನಾಡಿನ ಸಮಸ್ತ ಜನತೆಗೆ ಕನ್ನಡದಲ್ಲೇ ಯುಗಾದಿ ಶುಭಾಶಯ ತಿಳಿಸಿದ ಮೋದಿ

  • ಭಾರತ-ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಿದವರಿಗೆ 5 ಸಾವಿರ ರೂ. ದಂಡ – ಶ್ರೀನಗರ ಕಾಲೇಜು ಆದೇಶ

    ಭಾರತ-ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಿದವರಿಗೆ 5 ಸಾವಿರ ರೂ. ದಂಡ – ಶ್ರೀನಗರ ಕಾಲೇಜು ಆದೇಶ

    ಶ್ರೀನಗರ: ಇಂದು ಭಾರತ ಮತ್ತು ಪಾಕ್ ಹೈವೋಲ್ಟೇಜ್ ಕ್ರಿಕೆಟ್ ಮ್ಯಾಚ್ ಹಿನ್ನೆಲೆ ಶ್ರೀನಗರದಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‍ಐಟಿ) ತನ್ನ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸದಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

    ವಿದ್ಯಾರ್ಥಿಗಳ ಸುರಕ್ಷತೆ ಹಿತದೃಷ್ಟಿಯಿಂದ ಈ ಕುರಿತಂತೆ ನೋಟಿಸ್ ನೀಡಿದ್ದು, ಮ್ಯಾಚ್ ವೇಳೆ ವಿದ್ಯಾರ್ಥಿಗಳು ನಿಗದಿ ಪಡಿಸಿರುವ ಕೊಠಡಿಗಳಲ್ಲಿಯೇ ಇರಬೇಕು ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಈದ್ಗಾ ಮೈದಾನ ವಿಚಾರವಾಗಿ ಹಿಂದೂ ಸಂಘಟನೆಗಳ ಸವಾಲು – ಎಚ್ಚೆತ್ತ ಪಾಲಿಕೆ ದಶ ದಿಕ್ಕುಗಳಲ್ಲಿ ಹದ್ದಿನ ಕಣ್ಣು

    ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ವಿವಿಧ ರಾಷ್ಟ್ರಗಳನ್ನೊಳಗೊಂಡ ಕ್ರಿಕೆಟ್ ಸರಣಿ ನಡೆಯುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿದಿದೆ. ಹೀಗಾಗಿ ಆಟವನ್ನು ಆಟದ ರೀತಿ ನೋಡುವಂತೆ ತಿಳಿಸಿದ್ದು, ಹಾಸ್ಟೆಲ್‍ನಲ್ಲಿ ಯಾವುದೇ ರೀತಿಯ ಅಶಿಸ್ತು ಸೃಷ್ಟಿಸದಂತೆ ಸೂಚಿಸಿದೆ.

    ಭಾನುವಾರದ ಪಂದ್ಯ ನಡೆಯುವ ವೇಳೆ ವಿದ್ಯಾರ್ಥಿಗಳು ತಮಗೆ ನಿಗದಿಪಡಿಸಿದ ಕೊಠಡಿಗಳಲ್ಲಿಯೇ ಇರಬೇಕು ಮತ್ತು ಇತರ ವಿದ್ಯಾರ್ಥಿಗಳ ಕೊಠಡಿಗಳಿಗೆ ಪ್ರವೇಶಿಸಬಾರದು. ಗುಂಪು ಕಟ್ಟಿಕೊಂಡು ಪಂದ್ಯವನ್ನು ವೀಕ್ಷಿಸಬಾರದು. ಇಂದು ವೇಳೆ ನಿಗದಿ ಪಡಿಸಿರುವ ಕೊಠಡಿಯಲ್ಲಿ ಮ್ಯಾಚ್ ವೀಕ್ಷಿಸಿದರೆ, ಆ ಕೊಠಡಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಹಾಸ್ಟೆಲ್ ವಸತಿಯಿಂದ ಡಿಬಾರ್ ಮಾಡಲಾಗುತ್ತದೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಕನಿಷ್ಠ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ.

    ಪಂದ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಾರದು. ಇದಲ್ಲದೆ ಪಂದ್ಯದ ಸಮಯದಲ್ಲಿ ಅಥವಾ ನಂತರ ಹಾಸ್ಟೆಲ್ ಕೊಠಡಿಗಳಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಇಂಡಿಯಾ, ಪಾಕ್ ಹೈವೋಲ್ಟೇಜ್ ಕ್ರಿಕೆಟ್- ಭಾರತ ಗೆಲುವಿಗೆ ಮುಸ್ಲಿಮರಿಂದ ವಿಶೇಷ ಪೂಜೆ

    2016ರಲ್ಲಿ ಟಿ-20 ವಿಶ್ವಕಪ್ ಸೆಮಿ-ಫೈನಲ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋತ ನಂತರ ಹೊರರಾಜ್ಯ ಮತ್ತು ಸ್ಥಳೀಯ ವಿದ್ಯಾರ್ಥಿಗಳ ನಡುವೆ ನ್ಯಾಷನಲ್ ಇನ್‍ಸ್ಟಿಟ್ಯೂಟ್‍ನಲ್ಲಿ ಘರ್ಷಣೆಗಳು ಸಂಭವಿಸಿತ್ತು. ಇದರಿಂದ ಕೆಲ ದಿನಗಳವರೆಗೆ ಎನ್‍ಐಟಿ ಕಾಲೇಜನ್ನು ಮುಚ್ಚಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಹಿಂದೂಗಳಿಲ್ಲದೆ ಭಾರತವಿಲ್ಲ, ಭಾರತವಿಲ್ಲದೆ ಹಿಂದೂಗಳಿಲ್ಲ: ಮೋಹನ್ ಭಾಗವತ್

    ಹಿಂದೂಗಳಿಲ್ಲದೆ ಭಾರತವಿಲ್ಲ, ಭಾರತವಿಲ್ಲದೆ ಹಿಂದೂಗಳಿಲ್ಲ: ಮೋಹನ್ ಭಾಗವತ್

    ಭೋಪಾಲ್‌: ಹಿಂದೂಗಳಿಲ್ಲದೆ ಭಾರತವಿಲ್ಲ ಮತ್ತು ಭಾರತವಿಲ್ಲದೆ ಹಿಂದೂಗಳಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‍ಎಸ್‍ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

    ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಹಿಂದೂಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಭಾರತವು ಸಂಸ್ಕೃತಿ, ಆಚಾರ-ವಿಚಾರದಲ್ಲಿ ಸ್ವಂತಿಕೆಯನ್ನು ಹೊಂದಿದೆ. ಅದು ಹಿಂದುತ್ವದ ಸಾರವಾಗಿದೆ. ಹೀಗಾಗಿ ಭಾರತ ಹಿಂದೂಗಳ ದೇಶವಾಗಿದೆ ಎಂದು ಭಾಗವತ್‌ ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ವಾರದಲ್ಲಿ ಮೂರನೇ ಬಾರಿ ಗೌತಮ್‌ ಗಂಭೀರ್‌ಗೆ ಐಸಿಸ್‌ನಿಂದ ಕೊಲೆ ಬೆದರಿಕೆ

    ಭಾರತ-ಪಾಕಿಸ್ತಾನ ವಿಭಜನೆ ಕುರಿತು ಮಾತನಾಡಿದ ಅವರು, ನಾವು ಹಿಂದೂಗಳು ಎಂಬುದನ್ನು ಮರೆತಿದ್ದೆವು. ಪರಿಣಾಮವಾಗಿಯೇ ಭಾರತ-ಪಾಕಿಸ್ತಾನ ಎಂದು ವಿಭಜನೆಯಾಯಿತು. ನಾವು ಭಾರತೀಯರು ಎಂಬುದನ್ನು ಮುಸ್ಲಿಮರು ಸಹ ಮರೆತಿದ್ದರು. ಮನಃಪೂರ್ವಕವಾಗಿ ನಾನು ಹಿಂದೂ ಎಂದು ಹೇಳಿಕೊಳ್ಳುವವರ ಸಂಖ್ಯೆ ಆಗ ಕಡಿಮೆ ಇದ್ದದ್ದರಿಂದ ಭಾರತದೊಂದಿಗೆ ಪಾಕಿಸ್ತಾನ ಹೆಚ್ಚು ದಿನ ಉಳಿಯಲಿಲ್ಲ ಎಂದು ಹೇಳಿದ್ದಾರೆ.

    ಪ್ರಸ್ತುತ ಹಿಂದೂಗಳ ಸಂಖ್ಯೆ ಕ್ಷೀಣಿಸಿದೆ. ಭಾರತೀಯರಲ್ಲಿ ಹಿಂದುತ್ವದ ಭಾವನೆಯೂ ಕುಸಿಯುತ್ತಿದೆ. ಹಿಂದೂಗಳು ಹಿಂದೂಗಳಾಗಿಯೇ ಉಳಿದರೆ ಭಾರತವು ಅಖಂಡವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಆರೋಗ್ಯ ಸ್ಥಿರವಾಗಿದೆ, ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ: ಹಂಸಲೇಖ

    ವಿಭಜನೆಯ ಸಮಯದಲ್ಲಿ ಭಾರತ ಅನುಭವಿಸಿದ ನೋವನ್ನು ಮರೆಯಲಾಗದು. ವಿಭಜನೆಯನ್ನು ರದ್ದುಗೊಳಿಸಿದಾಗ ಮಾತ್ರ ಆ ನೋವು ಕಡಿಮೆಯಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.