Tag: india-new zealand

  • ಭಾರತ VS ನ್ಯೂಜಿಲೆಂಡ್‌ ‘ಫೈನಲ್‌’ ಫೈಟ್‌ – ಟೀಂ ಇಂಡಿಯಾ ಗೆಲುವಿಗೆ ಸ್ಯಾಂಡಲ್‌ವುಡ್‌ ತಾರೆಯರ ವಿಶ್‌

    ಭಾರತ VS ನ್ಯೂಜಿಲೆಂಡ್‌ ‘ಫೈನಲ್‌’ ಫೈಟ್‌ – ಟೀಂ ಇಂಡಿಯಾ ಗೆಲುವಿಗೆ ಸ್ಯಾಂಡಲ್‌ವುಡ್‌ ತಾರೆಯರ ವಿಶ್‌

    ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಬರೋಬ್ಬರಿ 25 ವರ್ಷಗಳ ಬಳಿಕ ಸೀಮಿತ ಓವರ್‌ಗಳ ಐಸಿಸಿ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ (New Zealand) ಮುಖಾಮುಖಿಯಾಗ್ತಿವೆ. ಹೀಗಾಗಿ ಚಂದನವನದ ತಾರೆಯರು (Sandalwood Stars) ಟೀಮ್ ಇಂಡಿಯಾದ (India) ಗೆಲುವಿಗಾಗಿ ಶುಭಹಾರೈಸಿದ್ದಾರೆ.

    ಭಾರತ ಮಾತೆ ಗೆದ್ದೆ ಗೆಲ್ಲುತ್ತಾರೆ. ನಮ್ಮ ಟೀಮ್ ಇಂಡಿಯಾ ಗೆದ್ದೆ ಗೆಲ್ಲುತ್ತದೆ. ಮುಂಚೆ ಕ್ರಿಕೆಟ್ ಆಡುತ್ತಿದ್ದೆ,ಈಗ ಬರೀ ನೋಡುತ್ತೇನೆ. ನಮ್ಮ ಭಾರತನೇ ಗೆಲ್ಲಲಿ ಆಲಿ ದಿ ಬೆಸ್ಟ್, ಜೈ ಆಂಜನೇಯ ಎಂದು ಧ್ರುವ ಸರ್ಜಾ (Dhruva Sarja) ಮಾತನಾಡಿದ್ದಾರೆ.‌ ಇದನ್ನೂ ಓದಿ:ಜಯಮಾಲಾ ಮಗಳ ಮದುವೆಯಲ್ಲಿ ಮಿಂಚಿದ್ದ ಆರೋಪಿ ರನ್ಯಾ ರಾವ್

    ಇಂಡಿಯಾ ವಿನ್ ಆಗೇ ಆಗುತ್ತಾರೆ. ನ್ಯೂಜಿಲೆಂಡ್ ಟೀಮ್ ಏನು ಕಮ್ಮಿಯಿಲ್ಲ. ಅವರು ಕೂಡ ಸ್ಟ್ರಾಂಗ್ ಇದ್ದಾರೆ. ಅವರ ಫೀಲ್ಡಿಂಗ್ ನೋಡಿದ್ರೆನೇ ಭಯ ಆಗುತ್ತದೆ. ಈ ಸಲ ಇಂಡಿಯಾ ಗೆಲ್ಲಬೇಕು ಅಂದರೆ, ಪ್ರತಿ ಬಾಲ್ 6 ರನ್ ಹೊಡೆಯಲೇಬೇಕು. 4 ರನ್ ಹೊಡೆದರೆ ಎದುರಾಳಿ ತಂಡ ಪಕ್ಕಾ ಹಿಡಿಯುತ್ತಾರೆ. ಹಾಗಾಗಿ ನಮ್ಮ ಟೀಮ್ ಇಂಡಿಯಾ ತಂಡ, ಪ್ರತಿ ಬಾಲ್ 6 ರನ್ ಹೊಡೆಯಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ನಮ್ಮ ಭಾರತನೇ ಗೆಲ್ಲಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಚಂದನ್ ಶೆಟ್ಟಿ (Chandan Shetty) ವಿಶ್ ಮಾಡಿದ್ದಾರೆ.

    ಆಲ್ ದಿ ಬೆಸ್ಟ್ ಟೀಮ್ ಇಂಡಿಯಾ. ಅವತ್ತಿನ ದಿನ ಯಾರು ಬೆಸ್ಟ್ ಇರುತ್ತಾರೋ ಅವರಿಗೆ ಗೆಲುವು ಸಿಗುತ್ತದೆ. ಗೆಲುವು ಮುಖ್ಯವಲ್ಲ, ಕ್ರೀಡಾ ಮನೋಭಾವ ಮುಖ್ಯ. ಆಟ ಆಡೋದು ಮುಖ್ಯ, ಚೆನ್ನಾಗಿ ಆಡೋದು ಮುಖ್ಯ. ಗೆಲುವು ಸೋಲು ಎಲ್ಲಾ ಇದ್ದಿದ್ದೇ. ಒಂದು ವೇಳೆ, ಮ್ಯಾಚ್ ಸೋತ್ರೆ ಟ್ರೋಲ್ ಮಾಡಬೇಡಿ ನಮ್ಮ ಆಟಗಾರರಿಗೆ. ಆಟ ಕೂಡ ಕಲೆ ತರನೇ ಜನರನ್ನು, ದೇಶವನ್ನು ಬೆಸೆಯಬೇಕು ಎಂದು ಬಹುಭಾಷಾ ನಟ ಕಿಶೋರ್ (Kishore) ಟೀಮ್ ಇಂಡಿಯಾಗೆ ಶುಭಕೋರಿದ್ದಾರೆ.

    ಇಂಡಿಯಾ ಹಾಗೂ ನ್ಯೂಜಿಲೆಂಡ್ ಮ್ಯಾಚ್ ಇದೆ ಇವತ್ತು. ಇಂಡಿಯಾಗೆ ಆಲ್ ದಿ ಬೆಸ್ಟ್. ನಮ್ಮ ದೇಶಕ್ಕೆ ಗೆಲುವು ಸಿಗಲಿ. ನಾನು ಕೂಡ ಕ್ರಿಕೆಟ್ ಅಭಿಮಾನಿ. ನಮ್ಮ ಟೀಮ್ ಇಂಡಿಯಾ ಚೆನ್ನಾಗಿ ಆಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದು ನಟಿ ಅಂಕಿತಾ ಅಮರ್‌ (Ankitha Amar) ಹೇಳಿದ್ದಾರೆ.

    ಇವತ್ತು ಎಲ್ಲರೂ ಕೂಡ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರಿಕೆಟ್ ಪಂದ್ಯಾವಳಿ ನೋಡೋಕೆ ಕಾಯ್ತಿದ್ದೀರಾ ಅಂತ. ಎಲ್ಲರಿಗೂ ನಿರೀಕ್ಷೆಯಿದೆ ಭಾರತನೇ ಗೆಲ್ಲಬೇಕು ಅಂತ. ಹಾಗಾಗಿ ಇವತ್ತಿನ ಕ್ರಿಕೆಟ್ ಮ್ಯಾಚ್‌ನ ಜಿದ್ದಾಜಿದ್ದಿಯಲ್ಲಿ ಭಾರತ ತಂಡ ಗೆದ್ದು ಬರಲಿ ಅಂತ ಆಶಿಸುತ್ತೇನೆ. ಆಲ್ ದಿ ಬೆಸ್ಟ್ ಇಂಡಿಯಾ ಟೀಮ್. ಗೆದ್ದು ಬಾ ಭಾರತ ಎಂದು‌ ‘ಬಿಗ್‌ ಬಾಸ್‌ ಕನ್ನಡ 11’ರ ಸ್ಪರ್ಧಿ ಚೈತ್ರಾ ಕುಂದಾಪುರ (Chaithra Kundapura) ಶುಭಕೋರಿದ್ದಾರೆ.

  • 100% ಈ ಸಲ ಕಪ್‌ ನಮ್ದೆ: ಟೀಂ ಇಂಡಿಯಾ ಬಗ್ಗೆ ರಜನಿ ರಿಯಾಕ್ಷನ್‌

    100% ಈ ಸಲ ಕಪ್‌ ನಮ್ದೆ: ಟೀಂ ಇಂಡಿಯಾ ಬಗ್ಗೆ ರಜನಿ ರಿಯಾಕ್ಷನ್‌

    ಚೆನ್ನೈ: 100 ಪರ್ಸೆಂಟ್‌ ಈ ಸಲ ಕಪ್‌ ನಮ್ದೆ ಎಂದು ಕ್ರಿಕೆಟ್‌ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡದ ಬಗ್ಗೆ ನಟ ರಜನಿಕಾಂತ್‌ (Rajinikanth)) ಭರವಸೆಯ ಮಾತುಗಳನ್ನಾಡಿದ್ದಾರೆ.

    ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್‌ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ (India vs New Zealand) ವೀರೋಚಿತ ಜಯ ಸಾಧಿಸಿತು. ಈ ಪಂದ್ಯಕ್ಕೆ ಖ್ಯಾತ ನಟ ರಜನಿಕಾಂತ್‌ ಕೂಡ ಸಾಕ್ಷಿಯಾಗಿದ್ದರು. ಪಂದ್ಯ ವೀಕ್ಷಿಸಿ ಭಾರತ ತಂಡದ ಆಟಗಾರರನ್ನು ಬೆಂಬಲಿಸಿದರು. ಇದನ್ನೂ ಓದಿ: ಸೆಮಿಸ್‌ನಲ್ಲೂ ಶಮಿ ಮಿಂಚು; ಕಿವೀಸ್‌ ವಿರುದ್ಧ 70 ರನ್‌ಗಳ ಭರ್ಜರಿ ಜಯ – 4ನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೆ ಭಾರತ ಎಂಟ್ರಿ

    ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಆಟಗಾರರ ಉತ್ತಮ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ತಲೈವಾ, ಮೊದಲು ನಾನು ಸ್ವಲ್ಪ ಟೆನ್ಶನ್ ಆದೆ. ಎರಡು ಮತ್ತು ಮೂರು ವಿಕೆಟ್‌ಗಳ (ನ್ಯೂಜಿಲೆಂಡ್) ನಂತರ ಒಂದೂವರೆ ಗಂಟೆ ಪಂದ್ಯ ಸ್ವಲ್ಪ ರೋಚಕವಾಗಿತ್ತು. ಆದರೆ 100 ಪರ್ಸೆಂಟ್ ಕಪ್ ನಮ್ಮದು. 100 ಪರ್ಸೆಂಟ್ ಸೆಮಿಫೈನಲ್‌ ಗೆಲುವಿಗೆ ಅವರೇ (ಮೊಹಮ್ಮದ್ ಶಮಿ) ಕಾರಣ ಎಂದು ಬಣ್ಣಿಸಿದ್ದಾರೆ.

    ಮೊಹಮ್ಮದ್‌ ಶಮಿ (Mohammed Shami) ಬೆಂಕಿ ಬೌಲಿಂಗ್‌ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ (Team India) ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ 70 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 4ನೇ ಬಾರಿಗೆ ಫೈನಲ್‌ (World Cup Final) ಪ್ರವೇಶಿಸಿದೆ. ಅಷ್ಟೇ ಅಲ್ಲದೇ 2019ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಇದನ್ನೂ ಓದಿ: ಫೈನಲಿಗೆ ಟೀಂ ಇಂಡಿಯಾ – ನಾಯಕನಾಗಿ ದಾಖಲೆ ಬರೆದ ರೋಹಿತ್‌ ಶರ್ಮಾ

    ವಿಶ್ವಕಪ್‌ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 4 ವಿಕೆಟ್‌ ನಷ್ಟಕ್ಕೆ 50 ಓವರ್‌ಗಳಲ್ಲಿ 397 ರನ್‌ ಕಲೆಹಾಕಿತ್ತು. 398 ರನ್‌ಗಳ ಗುರಿ ಬೆನ್ನತ್ತಿದ್ದ ಕಿವೀಸ್‌ 48.5 ಓವರ್‌ಗಳಲ್ಲೇ 327 ರನ್‌ ಗಳಿಗೆ ಸರ್ವಪತನ ಕಂಡಿತು. ಇದರಿಂದ ಟೀಂ ಇಂಡಿಯಾ ಸತತ 10ನೇ ಜಯದೊಂದಿಗೆ ಫೈನಲ್‌ ಪ್ರವೇಶಿಸಿತು.

  • ಅತ್ತ ಭಾರತ-ನ್ಯೂಜಿಲೆಂಡ್ ಹೈವೋಲ್ಟೇಜ್‌‌ ಸೆಮಿಫೈನಲ್‌.. ಇತ್ತ ಪೂರ್ವಜರ ಮನೆಯಲ್ಲಿ ಪತ್ನಿ ಜೊತೆ ಧೋನಿ

    ಅತ್ತ ಭಾರತ-ನ್ಯೂಜಿಲೆಂಡ್ ಹೈವೋಲ್ಟೇಜ್‌‌ ಸೆಮಿಫೈನಲ್‌.. ಇತ್ತ ಪೂರ್ವಜರ ಮನೆಯಲ್ಲಿ ಪತ್ನಿ ಜೊತೆ ಧೋನಿ

    ನವದೆಹಲಿ: ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಭಾರತ-ನ್ಯೂಜಿಲೆಂಡ್‌ ಹೈವೋಲ್ಟೇಜ್‌ ಸೆಮಿಫೈನಲ್‌ ಪಂದ್ಯ ವೀಕ್ಷಣೆಗೆ ಮಾಜಿ ಕ್ಯಾಪ್ಟನ್‌ ಧೋನಿ (M.S.Dhoni) ಬರುತ್ತಾರೆಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಮಾಹಿ ಅನುಪಸ್ಥಿತಿ ಅಭಿಮಾನಿಗಳ ಊಹೆಯನ್ನು ಸುಳ್ಳಾಗಿಸಿದೆ. ಇತ್ತ ಹೈವೋಲ್ಟೇಜ್‌ ಪಂದ್ಯ ನಡೆಯುತ್ತಿದ್ದರೆ, ಅತ್ತ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್‌ ಪತ್ನಿಯೊಂದಿಗೆ ತಮ್ಮ ಪೂರ್ವಜರ ಮನೆಯಲ್ಲಿ ಸಮಯ ಕಳೆದಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬುಧವಾರ, ಭಾರತವು ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯ ಆಡಿದ್ದ ವೇಳೆ, ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎಂ.ಎಸ್‌.ಧೋನಿಯನ್ನು ನೋಡುವ ಉತ್ಸುಕದಲ್ಲಿದ್ದರು. ಆದರೆ, ನೆಚ್ಚಿನ ಪ್ರೀತಿಯ ಕೂಲ್‌ ಕ್ಯಾಪ್ಟನ್‌ ಎಂದೇ ಖ್ಯಾತಿ ಗಳಿಸಿದ್ದ ಧೋನಿ ತನ್ನ ಪತ್ನಿಯೊಂದಿಗೆ ಉತ್ತರಾಖಂಡದ ತನ್ನ ಪೂರ್ವಜರ ಹಳ್ಳಿಗೆ ಹೋಗಿದ್ದರು. ಇದನ್ನೂ ಓದಿ: ಇನ್ಮುಂದೆ ನಿಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಬಹುದು – ಬಾಬರ್‌ ಆಜಂ ಹೊಗಳಿದ ಬೆಂಗ್ಳೂರು ಮೂಲದ ರಚಿನ್‌

    ಧೋನಿ ಪತ್ನಿ ಸಾಕ್ಷಿ ಸಿಂಗ್ ಅವರು, ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿರುವ ಸುಂದರವಾದ ಲ್ವಾಲಿ ಗ್ರಾಮದಲ್ಲಿ ಇಬ್ಬರೂ ಪೋಸ್ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ”ಧೋನಿ ಅವರೊಂದಿಗೆ ಈವೆಂಟ್‌ಫುಲ್‌ ಡೇ! ಇಲ್ಲಿ ಅನೇಕರಿದ್ದಾರೆ ನನ್ನನ್ನು ನಂಬಿರಿ” ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಮೊದಲ ಚಿತ್ರದಲ್ಲಿ, ದಂಪತಿ ಲ್ವಾಲಿಯಲ್ಲಿ ವರ್ಣರಂಜಿತ ಮನೆಯ ಹೊಸ್ತಿಲಲ್ಲಿ ಕುಳಿತಿದ್ದಾರೆ. ಸಾಕ್ಷಿ ಅವರು ಮನೆಯನ್ನು ತೋರಿಸುವ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

    ನವೆಂಬರ್ 15 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಾಕ್ಷಿಯವರು ಈ ಪೋಸ್ಟ್‌ ಹಾಕಿದ್ದಾರೆ. ಪೋಸ್ಟ್‌ಗೆ 11 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿವೆ. ಪೋಸ್ಟ್‌ ಹಾಕಿ ಧೋನಿಯನ್ನು ತೋರಿಸಿದ್ದಕ್ಕೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ಧೋನಿ ಪತ್ನಿ ಸಾಕ್ಷಿಗೆ ಅನೇಕ ಅಭಿಮಾನಿಗಳು ಧನ್ಯವಾದ ತಿಳಿಸಿದ್ದಾರೆ. ಉತ್ತರಾಖಂಡದ ಜನತೆಗೆ ಧೋನಿ ದಂಪತಿಗೆ ಸ್ವಾಗತ ಕೋರಿದ್ದಾರೆ. ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡ ಫೈನಲ್ ಗೆದ್ದರೆ ಬೆತ್ತಲಾಗುವೆ ಎಂದ ನಟಿ ರೇಖಾ

     

    View this post on Instagram

     

    A post shared by Sakshi Singh (@sakshisingh_r)

    ಫ್ಯಾನ್‌ ಒಬ್ಬರು, ”ಧನ್ಯವಾದಗಳು ಸಾಕ್ಷಿ. ಧೋನಿ ಅವರು ತಮಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಮಾಡುವುದನ್ನು ನಿಲ್ಲಿಸಿದ್ದಾರೆ. ಆದರೆ ನೀವು ಅವರನ್ನು ಮತ್ತೆ ನೋಡುವಂತೆ ಮಾಡುತ್ತಿದ್ದೀರಿ” ಎಂದು ಪ್ರತಿಕ್ರಿಯಿಸಿದ್ದಾರೆ. “ಉತ್ತರಾಖಂಡಕ್ಕೆ ನಿಮಗೆ ಸ್ವಾಗತ” ಅಂತ ಮತ್ತೊಬ್ಬರು ಪೋಸ್ಟ್‌ ಹಾಕಿದ್ದಾರೆ.

    ಸೋಷಿಯಲ್‌ ಮೀಡಿಯಾದಲ್ಲಿ ಈಚೆಗೆ ಟ್ರೆಂಡಿಂಗ್‌ ಆಗಿರುವ, ”ಸೋ ಬ್ಯೂಟಿಫುಲ್‌ ಸೋ ಎಲಿಗ್ಯಾಂಟ್‌ ಜಸ್ಟ್‌ ಲುಕಿಂಗ್‌ ಲೈಕ್‌ ಎ ವಾವ್ಹ್‌..” ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ”ಇಂದು ನೀಲಿ ಬಣ್ಣದಲ್ಲಿ ಮಾಹಿ ಕಾಣೆಯಾಗಿದ್ದಾರೆ” ಭಾರತೀಯ ಖ್ಯಾತ ಆಟಗಾರನನ್ನು ಮಿಸ್‌ ಮಾಡಿಕೊಂಡಿದ್ದೇವೆ ಎಂಬಂತೆ ಇನ್ನೊಬ್ಬರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾತ್ರಿ ನಾನು ಭಾರತ – ನ್ಯೂಜಿಲೆಂಡ್‌ ಸೆಮಿಫೈನಲ್‌ ವೀಕ್ಷಿಸಿದ್ದೆ: ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

    ಎಂ.ಎಸ್‌.ಧೋನಿ ಅವರು ಆಗಸ್ಟ್ 2020 ರಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅತ್ಯಂತ ಪ್ರೀತಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ 16 ವರ್ಷಗಳ ಕಾಲ ಸುಪ್ರಸಿದ್ಧ ವೃತ್ತಿಜೀವನ ನಡೆಸಿದ್ದರು. ತಮ್ಮ ವೃತ್ತಿ ಬದುಕಿನಲ್ಲಿ ಅವರು ಭಾರತೀಯ ಕ್ರಿಕೆಟ್ ತಂಡವನ್ನು ಹಲವಾರು ಸಾಂಪ್ರದಾಯಿಕ ಗೆಲುವುಗಳೊಂದಿಗೆ ಮುನ್ನಡೆಸಿದ್ದರು.

  • ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ – ರೋಹಿತ್ ಶರ್ಮಾಗೆ ನಾಯಕ ಪಟ್ಟ

    ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ – ರೋಹಿತ್ ಶರ್ಮಾಗೆ ನಾಯಕ ಪಟ್ಟ

    ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡವನ್ನು ಪ್ರಕಟಿಸಿದ್ದು, ನಾಯಕತ್ವವನ್ನು ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವಹಿಸಿಕೊಳ್ಳಲಿದ್ದಾರೆ.

    ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಅಂತಾರಾಷ್ಟ್ರೀಯ ಸರಣಿಯ ಮೂರು ಪಂದ್ಯಗಳು ಜೈಪುರ, ರಾಂಚಿ, ಕೋಲ್ಕತ್ತದಲ್ಲಿ ನಡೆಯಲಿವೆ. ಟೆಸ್ಟ್‌ನ ಎರಡು ಪಂದ್ಯಗಳು ಕಾನ್ಪುರ, ಮುಂಬೈನಲ್ಲಿ ನಡೆಯಲಿವೆ. ಇದನ್ನೂ ಓದಿ: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ರಾಷ್ಟ್ರಪತಿಯ ದೃಷ್ಟಿ ತೆಗೆದ ಮಂಜಮ್ಮ ಜೋಗತಿ!

    ಯಾರಿಗೆಲ್ಲ ಸ್ಥಾನ?
    ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್. ಇದನ್ನೂ ಓದಿ: ನ.11 ಕ್ಕೆ ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗೆ ಸರ್ಕಾರ ಆದೇಶ