Tag: India Meteorological Department

  • ದೆಹಲಿಯಲ್ಲಿ ಮುಂದುವರಿದ ಮಳೆ – ಹಲವು ಪ್ರದೇಶಗಳು ಜಲಾವೃತ

    ದೆಹಲಿಯಲ್ಲಿ ಮುಂದುವರಿದ ಮಳೆ – ಹಲವು ಪ್ರದೇಶಗಳು ಜಲಾವೃತ

    – ಮತ್ತಷ್ಟು ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

    ನವದೆಹಲಿ: ನಿರಂತರ ಮಳೆಯಿಂದಾಗಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಆರೆಂಜ್ ಆಲರ್ಟ್ (Orange Alert) ಘೋಷಿಸಲಾಗಿದೆ. ಸಾಧಾರಣ ಮಳೆ ಹಾಗೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (Indian Meteorological Department) ಮೂನ್ಸೂಚನೆ ನೀಡಿದೆ.

    ಈಗಾಗಲೇ ಮಳೆಯಿಂದಾಗಿ ನಗರದ ಕೆಲವು ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮುಂದಿನ ಕೆಲವು ಗಂಟೆಗಳ ಕಾಲ ರಾಷ್ಟ್ರರಾಜಧಾನಿಯ ಹೆಚ್ಚಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ (IMD) ತಿಳಿಸಿದೆ.ಇದನ್ನೂ ಓದಿ: ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯನ ಖಾಸಗಿ ಅಂಗಕ್ಕೆ ಬ್ಲೇಡ್ ಹಾಕಿ ಪಾರಾದ ನರ್ಸ್!

    ನಗರದ ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡ ಕಾರಣ ವಾಹನ ಸವಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆಯನ್ನು ಸೂಚಿಸಿದೆ. ಮೋಡ ಕವಿದ ವಾತಾವರಣವಿರುವ ಕಾರಣ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

    ಕನಿಷ್ಠ 21.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಗರಿಷ್ಠ 30 ಡಿಗ್ರಿ ಸೆಲ್ಸಿಯಲ್ ದಾಖಲಾಗಿದೆ ಎಂದು ತಿಳಿಸಿದೆ.ಇದನ್ನೂ ಓದಿ: ನಾಗ್ಪುರ ಆಡಿ ಕಾರು ಅಪಘಾತ – ಬಾರ್‌ನಲ್ಲಿದ್ದ ಬಿಜೆಪಿ ಮುಖಂಡನ ಪುತ್ರನ ವೀಡಿಯೋ ಮಿಸ್ಸಿಂಗ್

    ದೆಹಲಿ ಸೇರಿದಂತೆ ಉತ್ತರಾಖಂಡ, ಉತ್ತರಪ್ರದೇಶದ ಪಶ್ಚಿಮ ಭಾಗ, ಪಶ್ಚಿಮ ಬಂಗಾಳ, ಮಿಜೋರಾಮ್ ಹಾಗೂ ತ್ರಿಪುರಾ ರಾಜ್ಯಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

  • ದೆಹಲಿಯಲ್ಲಿ ಮಳೆ ಆರ್ಭಟ: ಮುಂದಿನ ಮೂರು ದಿನಗಳ ಕಾಲ ಹೈಅಲರ್ಟ್ ಘೋಷಣೆ

    ದೆಹಲಿಯಲ್ಲಿ ಮಳೆ ಆರ್ಭಟ: ಮುಂದಿನ ಮೂರು ದಿನಗಳ ಕಾಲ ಹೈಅಲರ್ಟ್ ಘೋಷಣೆ

    – ಉತ್ತರಪ್ರದೇಶ, ಉತ್ತರಾಖಂಡಕ್ಕೂ ಅಲರ್ಟ್

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಮುಂದಿನ ಮೂರು ದಿನಗಳ ಕಾಲ ಹೈ-ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ತಿಳಿಸಿದೆ.

    ಮುಂದಿನ ಮೂರು ದಿನಗಳ ಕಾಲ ದೆಹಲಿ, ಉತ್ತರಪ್ರದೇಶ (Uttarpradesh) ಹಾಗೂ ಉತ್ತರಾಖಂಡದಲ್ಲಿ (Uttarakhand) ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಗುರುವಾರ ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.ಇದನ್ನೂ ಓದಿ: ಮಾಧ್ಯಮಗಳನ್ನು ನೋಡಿ ಅಸಭ್ಯ ಸನ್ನೆ ಮಾಡಿದ ದರ್ಶನ್

    ಹವಾಮಾನ ಇಲಾಖೆಯ ವರದಿ ಪ್ರಕಾರ ಉತ್ತರಾಖಂಡದಲ್ಲಿ ಸೆ.12 ರಿಂದ 14 ರವರೆಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

    ಭಾರೀ ಮಳೆಯಿಂದಾಗಿ ಮಥುರಾದ (Mathura) ರಸ್ತೆಗಳು ಜಲಾವೃತಗೊಂಡಿದ್ದು, ಟ್ರಾಫಿಕ್ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ.

    ದೆಹಲಿ, ಉತ್ತರಪ್ರದೇಶ ಹಾಗೂ ಉತ್ತರಾಖಂಡ ಹೊರತುಪಡಿಸಿ, ಮಧ್ಯಪ್ರದೇಶದಲ್ಲಿ (Madhyapradesh)  ಸೆ.14ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ಸೆ.15ರವರೆಗೆ ಪೂರ್ವ ರಾಜಸ್ಥಾನದಲ್ಲಿ (Rajasthan) ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ ಎಂದು ಐಎಂಡಿ (IMD)  ತಿಳಿಸಿದೆ.ಇದನ್ನೂ ಓದಿ: ವಯನಾಡು ದುರಂತದಲ್ಲಿ ಕುಟುಂಬದ 9 ಮಂದಿಯನ್ನು ಕಳೆದುಕೊಂಡ್ಳು, ಈಗ ಮದುವೆಯಾಗಬೇಕಿದ್ದ ಹುಡುಗನೂ ಅಪಘಾತದಲ್ಲಿ ಸಾವು

    ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮಧ್ಯಪ್ರದೇಶ ವಾಯುವ್ಯ ಹಾಗೂ ಉತ್ತರ ಪ್ರದೇಶದ ನೈಋತ್ಯ ಭಾಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

  • ರಾಜ್ಯದ ಹವಾಮಾನ ವರದಿ: 27-10-2023

    ರಾಜ್ಯದ ಹವಾಮಾನ ವರದಿ: 27-10-2023

    ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಇಂದು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಉಳಿದ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-20
    ಮಂಗಳೂರು: 32-25
    ಶಿವಮೊಗ್ಗ: 34-18
    ಬೆಳಗಾವಿ: 32-18
    ಮೈಸೂರು: 32-19

    ಮಂಡ್ಯ: 32-19
    ಮಡಿಕೇರಿ: 29-18
    ರಾಮನಗರ: 32-20
    ಹಾಸನ: 31-18
    ಚಾಮರಾಜನಗರ: 32-19
    ಚಿಕ್ಕಬಳ್ಳಾಪುರ: 31-18

    ಕೋಲಾರ: 31-18
    ತುಮಕೂರು: 32-18
    ಉಡುಪಿ: 33-23
    ಕಾರವಾರ: 34-24
    ಚಿಕ್ಕಮಗಳೂರು: 31-17
    ದಾವಣಗೆರೆ: 34-19

    ಹುಬ್ಬಳ್ಳಿ: 34-19
    ಚಿತ್ರದುರ್ಗ: 33-18
    ಹಾವೇರಿ: 34-19
    ಬಳ್ಳಾರಿ: 35-19
    ಗದಗ: 34-19
    ಕೊಪ್ಪಳ: 34-20

    ರಾಯಚೂರು: 34-19
    ಯಾದಗಿರಿ: 33-18
    ವಿಜಯಪುರ: 34-19
    ಬೀದರ್: 30-17
    ಕಲಬುರಗಿ: 33-18
    ಬಾಗಲಕೋಟೆ: 35-20

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯದ ಹವಾಮಾನ ವರದಿ: 26-10-2023

    ರಾಜ್ಯದ ಹವಾಮಾನ ವರದಿ: 26-10-2023

    ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಮಳೆ ಇಲ್ಲದೆ ರೈತರು ಕಂಗೆಟ್ಟಿದ್ದಾರೆ. ಇಂದು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಉಳಿದ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-18
    ಮಂಗಳೂರು: 32-24
    ಶಿವಮೊಗ್ಗ: 34-18
    ಬೆಳಗಾವಿ: 32-18
    ಮೈಸೂರು: 32-19

    ಮಂಡ್ಯ: 32-19
    ಮಡಿಕೇರಿ: 28-16
    ರಾಮನಗರ: 32-19
    ಹಾಸನ: 31-18
    ಚಾಮರಾಜನಗರ: 32-19
    ಚಿಕ್ಕಬಳ್ಳಾಪುರ: 31-18

    ಕೋಲಾರ: 31-18
    ತುಮಕೂರು: 32-18
    ಉಡುಪಿ: 33-23
    ಕಾರವಾರ: 34-24
    ಚಿಕ್ಕಮಗಳೂರು: 31-17
    ದಾವಣಗೆರೆ: 34-19

    ಹುಬ್ಬಳ್ಳಿ: 34-19
    ಚಿತ್ರದುರ್ಗ: 33-18
    ಹಾವೇರಿ: 34-19
    ಬಳ್ಳಾರಿ: 35-19
    ಗದಗ: 34-19
    ಕೊಪ್ಪಳ: 34-20

    ರಾಯಚೂರು: 34-19
    ಯಾದಗಿರಿ: 33-18
    ವಿಜಯಪುರ: 34-19
    ಬೀದರ್: 30-17
    ಕಲಬುರಗಿ: 33-18
    ಬಾಗಲಕೋಟೆ: 35-20

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ

    ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ

    ನವದೆಹಲಿ: ಮುಂದಿನ 4-5 ದಿನಗಳ ವರೆಗೆ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ (Rain) ಸಾಧ್ಯತೆಯಿದ್ದು, ಕೆಲ ಭಾಗಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

    ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗೋವಾ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯುಂಟಾಗುವ ಸಾಧ್ಯತೆ ಇದೆ. ಮುಂದಿನ 5 ದಿನಗಳಲ್ಲಿ ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

    ದೇಶಾದ್ಯಂತ ಮುಂಗಾರು ಪ್ರಭಾವ ಹೆಚ್ಚಿರಲಿದ್ದು, ಮಹಾರಾಷ್ಟ್ರದ ಹಲವು ನಗರಗಳಲ್ಲಿ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಥಾಣೆ, ರಾಯಗಢ, ರತ್ನಗಿರಿ, ನಾಸಿಕ್, ಪುಣೆ, ಸತಾರಾ ಸೇರಿದಂತೆ ಹಲವೆಡೆ ಭಾರೀ ಮಳೆ ಇರಲಿದ್ದು, ಆರೆಂಟ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಯಾರಿ – ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

    ಈಗಾಗಲೇ ವಾಯುವ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ ಮಾನ್ಸೂನ್ ಬಹುತೇಕ ಇಡೀ ದೇಶದ ಮೇಲೆ ಪರಿಣಾಮ ಬೀರಿದೆ. ಇಡೀ ಗುಜರಾತ್ ಹಾಗೂ ಆಗ್ನೇಯ ರಾಜಸ್ಥಾನವನ್ನು ಮಾನ್ಸೂನ್ ಆವರಿಸಿದೆ. ಮುಂದಿನ 2 ದಿನಗಳಲ್ಲಿ ದಕ್ಷಿಣ ಪಂಜಾಬ್ ಹರಿಯಾಣ ಹಾಗೂ ರಾಜಸ್ಥಾನದ ಉಳಿದ ಭಾಗಗಳಲ್ಲಿ ಆವರಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಇಲಾಖೆ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡ್ತೀವಿ: ರಾಮಲಿಂಗಾರೆಡ್ಡಿ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಜೂ.1ಕ್ಕೆ ಕೇರಳ ಪ್ರವೇಶಿಸಲಿವೆ ಮಾನ್ಸೂನ್ ಮಾರುತಗಳು

    ಜೂ.1ಕ್ಕೆ ಕೇರಳ ಪ್ರವೇಶಿಸಲಿವೆ ಮಾನ್ಸೂನ್ ಮಾರುತಗಳು

    ನವದೆಹಲಿ: ನೈಋತ್ಯ ಮಾನ್ಸೂನ್ ಮಾರುತಗಳು ಜೂನ್ 1ಕ್ಕೆ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

    ಕೇಂದ್ರ ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವ್ ಅವರು ಈ ಕುರಿತು ಮಾತನಾಡಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ನೈಋತ್ಯ ಮಾನ್ಸೂನ್ ಮಾರುತಗಳು ಜೂ.1ಕ್ಕೆ ಕೇರಳ ಪ್ರವೇಶಿಸಲಿವೆ ಎಂದು ಮುನ್ಸೂಚನೆ ನೀಡಿದ್ದಾರೆ. ಮೇ 15ರಂದು ಭಾರತ ಹವಾಮಾನ ಇಲಾಖೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದು, ಯಾವ ದಿನಾಂಕದಂದು ಯಾವ ರಾಜ್ಯ ಪ್ರವೇಶಿಸಲಿವೆ, ಅಂದಾಜು ಎಷ್ಟು ಪ್ರಮಾಣದಲ್ಲಿ ಮಳೆ ಸುರಿಸಲಿವೆ ಎಂಬ ಮಾಹಿತಿ ನೀಡಲಿದೆ ಎಂದರು.

    ಮಾನ್ಸೂನ್ ಪ್ರವೇಶದ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ, ಎಂದಿನಂತೆ ಜೂನ್ 1ರಂದು ಕೇರಳ ಪ್ರವೇಶಿಸಲಿವೆ. ಇದು ಆರಂಭಿಕ ಸೂಚನೆಯಾಗಿದ್ದು, ಮೇ 15ರಂದು ಹವಾಮಾನ ಇಲಾಖೆ ಅಧಿಕೃತ ಮಾನ್ಸೂನ್ ಮುನ್ಸೂಚನೆ ಹಾಗೂ ಸರಾಸರಿ ಮಳೆಯ ಕುರಿತು ಮಾಹಿತಿ ನೀಡಲಿದೆ ಎಂದು ರಾಜೀವ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

    ಇತ್ತೀಚೆಗೆ ಭಾರತ ಹವಾಮಾನ ಇಲಾಖೆ ಮಾಹಿತಿ ನಿಡಿದ್ದು, ದೇಶದಲ್ಲಿ ವಾರ್ಷಿಕ ಶೇ.75ರಷ್ಟು ಮಳೆಗೆ ಕಾರಣವಾಗಿರುವ ನೈಋತ್ಯ ಮಾನ್ಸೂನ್ ಮಾರುತಗಳು ಈ ವರ್ಷ ಸಾಮಾನ್ಯ ಮಳೆ ಸುರಿಸುತ್ತವೆ ಎಂದು ತಿಳಿಸಿದೆ. ಈ ವರ್ಷ ಸಾಮಾನ್ಯ ಮಳೆ ಸುರಿಯಲಿದ್ದು, ಇದು ನಮ್ಮ ದೇಶ ಹಾಗೂ ದೇಶದ ಕೃಷಿಕರಿಗೆ ಸಂತಸದ ವಿಚಾರವಾಗಿದೆ ಎಂದು ರಾಜೀವ್ ಮಾಹಿತಿ ನೀಡಿದ್ದಾರೆ.

  • ಭಾರತದ ಅತಿ ಹೆಚ್ಚು ಬಿಸಿಲು ಹೊಂದಿರುವ 15 ನಗರಗಳ ಪಟ್ಟಿ ಬಿಡುಗಡೆ

    ಭಾರತದ ಅತಿ ಹೆಚ್ಚು ಬಿಸಿಲು ಹೊಂದಿರುವ 15 ನಗರಗಳ ಪಟ್ಟಿ ಬಿಡುಗಡೆ

    ನವದೆಹಲಿ: ಬೇಸಿಗೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬಿಸಿಲಿನ ಹೊಡೆತದಿಂದಾಗಿ ಜನರು ಮನೆಯಿಂದ ಹೊರ ಬರಲು ನೂರು ಬಾರಿ ಯೋಚಿಸುವಂತಾಗಿದೆ. ಶುಕ್ರವಾರ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ 15 ನಗರಗಳ ಪಟ್ಟಿಯೊಂದು ಬಿಡುಗಡೆಗೊಂಡಿದೆ. ಶುಕ್ರವಾರ ಸಂಜೆ 7.30ರ ತಾಪಮಾನವನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ‘El Dordo’ ವೆಬ್‍ಸೈಟ್ ಈ ಪಟ್ಟಿಯನ್ನು ಪ್ರಕಟಿಸಿದೆ.

    ಇಎಲ್ ಡೊರಡೋ ವೆಬ್‍ಸೈಟ್ ಜಗತ್ತಿನ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ 15 ನಗರಗಳು ಭಾರತದಲ್ಲಿದೆ ಎಂದು ಹೇಳಿದೆ. ಈ 15 ನಗರಗಳು ಮಧ್ಯ ಭಾರತ ಮತ್ತು ಆಸುಪಾಸಿನಲ್ಲಿವೆ. ಮೊದಲ ಸ್ಥಾನವನ್ನು ಮಧ್ಯ ಪ್ರದೇಶದ ಖರಗೋನ್ ನಗರ ಪಡೆದಿದೆ. ಇಲ್ಲಿ 46.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

    15 ನಗರಗಳು ಎಲ್ಲಿವೆ?
    15 ನಗರಗಳ ಪೈಕಿ 9 ಮಹಾರಾಷ್ಟ್ರ, 3 ಮಧ್ಯ ಪ್ರದೇಶ, 2 ಉತ್ತರ ಪ್ರದೇಶ ಮತ್ತು ಒಂದು ನಗರ ತೆಲಂಗಾಣದಲ್ಲಿದೆ. ಮಧ್ಯ ಪ್ರದೇಶದ ಖರಗೋನ್ (46.6), ಮಹಾರಾಷ್ಟ್ರದ ಅಕೋಲಾ (46.6), ಬ್ರಹ್ಮಪುರಿ (45.8), ಪರ್ಭಾನಿ (45.7) ಮತ್ತು ವಾರ್ಧಾ (45.7) ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿವೆ.

    ಮಹಾರಾಷ್ಟ್ರದ ಚಂದ್ರಾಪುರದ ವೈಲ್ಡ್ ಲೈಫ್ ಎನ್‍ಜಿಓ (Habitat Conservation Society) ಪ್ರಕಾರ, ನಗರದ 15 ಕಿ.ಮೀ. ಅಸುಪಾಸಿನಲ್ಲಿ ಸುಮಾರು ಬಿಸಿಲಿನ ಝಳಕ್ಕೆ 9 ಪಕ್ಷಿಗಳು ಮೃತಪಟ್ಟಿವೆ. ಕಲ್ಲಿದ್ದಲು ಗಣಿಗಾರಿಕೆ, ಶಾಖೋತ್ಪನ್ನ ಘಟಕ ಹಾಗೂ ಇತರೆ ಕೈಗಾರಿಕೆಗಳು ಇಲ್ಲಿ ಕೇಂದ್ರಿಕೃತವಾಗಿದ್ದರಿಂದ ತಾಪಮಾನದ ಹೆಚ್ಚಳವಾಗಲು ಕಾರಣವಾಗಿದೆ. ಇದೆಲ್ಲದರ ನೇರ ಪರಿಣಾಮ ಪಕ್ಷಿಗಳ ಮೇಲೆ ಉಂಟಾಗುತ್ತಿದೆ ಎಂದು ತಿಳಿಸಿದೆ.

    ಅಕೋಲಾ, ಅಮರಾವತಿ, ಚಂದ್ರಾಪುರ, ನಾಗ್ಪುರ, ಯವತ್ಮಾಲ ಮತ್ತು ವಾರ್ಧಾ ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಿಸಿಗಾಳಿ ಬೀಸಲಿದೆ. ಈ ಜಿಲ್ಲೆಗಳಲ್ಲಿ ಅಂದಾಜು 45-47 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ ಎಂದು ಭಾರತದ ಹವಾಮಾನ ಇಲಾಖೆ (India Meteorological Department) ತಿಳಿಸಿದೆ.

  • ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿದ ವರುಣ

    ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿದ ವರುಣ

    ಬೆಂಗಳೂರು: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮೊದಲ ದಿನವೇ ಸಿಲಿಕಾನ್ ಸಿಟಿಯಲ್ಲಿ ಮತ್ತೆ ವರುಣನ ಅಬ್ಬರ ಶುರುವಾಗಿದೆ. ನಗರದ ವಿವಿಧೆಡೆ ಧಾರಾಕಾರ ಮಳೆ ಸುರಿದಿದ್ದು, ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡು ಸವಾರರು ಪರದಾಡಿದ್ದಾರೆ.

    ಬೆಂಗಳೂರಿನ ಸದಾಶಿವನಗರ, ಶಿವಾಜಿನಗರ, ಹೆಬ್ಬಾಳ, ವಸಂತನಗರ, ಕೋಲ್ಸ್ ಪಾರ್ಕ್, ಯಶವಂತಪುರ, ಲಾಲ್ ಬಾಗ್, ಕಾರ್ಪೋರೇಷನ್ ಹಾಗೂ ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಮಳೆಯಾಗಿದೆ. ರಸ್ತೆಯ ಮೇಲೆ ನೀರು ನಿಂತು, ಸವಾರರು ಹರಸಾಹಸ ಪಡಬೇಕಾಯಿತು.

    ಬೆಂಗಳೂರು ಸೇರಿದಂತೆ ಹಲವೆಡೆ ಅಕ್ಟೋಬರ್ 6 ರಿಂದ ಭಾರಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಹವಾಮಾನ ಇಲಾಖೆ ತಿಳಿಸಿದ ಮೊದಲ ದಿನದಂದೇ ವರುಣ ತನ್ನ ಆರ್ಭಟ ಮೆರೆದಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv