Tag: India Maharajas

  • ಅಭಿಮಾನಿಗಾಗಿ ಭಾರತದ ಬಾವುಟದ ಮೇಲೆ ಆಟೋಗ್ರಾಫ್ ಹಾಕಿದ ಅಫ್ರಿದಿ!

    ಅಭಿಮಾನಿಗಾಗಿ ಭಾರತದ ಬಾವುಟದ ಮೇಲೆ ಆಟೋಗ್ರಾಫ್ ಹಾಕಿದ ಅಫ್ರಿದಿ!

    ಬೆಂಗಳೂರು: ಶನಿವಾರ ನಡೆದ ಲೆಜೆಂಡ್ಸ್ ಲೀಗ್ (Legends League Cricket) ಎಲಿಮಿನೇಟರ್ ಪಂದ್ಯದಲ್ಲಿ ಏಷ್ಯಾ ಲಯನ್ಸ್, ಇಂಡಿಯಾ ಮಹಾರಾಜಾಸ್ (India Maharajas) ವಿರುದ್ಧ 85 ರನ್‌ಗಳ ಭರ್ಜರಿ ಜಯ ಸಾಧಿಸಿತು.

    ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕ್ರಿಕೆಟ್ ದಂಥಕತೆ ಶಾಹಿದ್ ಅಫ್ರಿದಿ (Shahid Afridi) ನಾಯಕತ್ವದ ಏಷ್ಯಾ ಲಯನ್ಸ್ (Asia Lions) ತಂಡವು 20 ಓವರ್‌ಗಳಲ್ಲಿ 191 ರನ್ ಬಾರಿಸಿತ್ತು. ಉಪುಲ್ ತರಂಗ 31 ಎಸೆತಗಳಲ್ಲಿ 50 ರನ್, ಮೊಹಮ್ಮದ್ ಹಫೀಜ್ 24 ಎಸೆತಗಳಲ್ಲಿ 38 ರನ್ ಗಳಿಸಿ ಮಿಂಚಿದ್ದರು. ಈ ಗುರಿ ಬೆನ್ನತ್ತಿದ್ದ ಇಂಡಿಯಾ ಮಹಾರಾಜಾಸ್ 106 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ಏಷ್ಯಾ ಲಯನ್ಸ್ ತಂಡವು 85 ರನ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನನ್ನ ಮಗಳು ಭಾರತದ ಧ್ವಜವನ್ನೇ ಹಿಡಿದಿದ್ದಳು – ಶಾಹಿದ್ ಅಫ್ರಿದಿ

    ಪಂದ್ಯದ ಬಳಿಕ ಅಭಿಮಾನಿಯೊಬ್ಬರು ಅಫ್ರಿದಿ ಬಳಿಬಂದು ಆಟೋಗ್ರಾಫ್ ಕೇಳಿದರು. ಒಂದು ಕ್ಷಣವೂ ಯೋಚಿಸದ ಅಫ್ರಿದಿ, ಗೌರವದಿಂದಲೇ ಅಭಿಮಾನಿಯಿಂದ ಭಾರತದ ರಾಷ್ಟ್ರಧ್ವಜ (Indian Flag) ಪಡೆದು ಅದರ ಮೇಲೆ ಆಟೋಗ್ರಾಫ್ ಹಾಕಿಕೊಟ್ಟರು. ಈ ವೀಡಿಯೋ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕಳಪೆ ಬ್ಯಾಟಿಂಗ್‌ – ಸೂರ್ಯನ ವಿರುದ್ಧ ಸಿಡಿದ ಅಭಿಮಾನಿಗಳು

    2022ರ ಏಷ್ಯಾಕಪ್ ಸಂದರ್ಭದಲ್ಲಿ ಏಷ್ಯಾಕಪ್ ಟೂರ್ನಿ ಕುರಿತು ಮಾತನಾಡಿದ್ದ ಅಫ್ರಿದಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ 2022ರ ಪಂದ್ಯದ ವೇಳೆ ನನ್ನ ಮಗಳು ಪಾಕಿಸ್ತಾನ ಧ್ವಜಕ್ಕಿಂತ ಭಾರತ ಧ್ವಜವನ್ನೇ ಹಿಡಿದು ಬೀಸುತ್ತಿದ್ದಳು ಎಂದು ಹೇಳಿಕೊಂಡಿದ್ದರು.

  • ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ

    ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ

    ಮುಂಬೈ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿರುವ ಹಿರಿಯ ಆಟಗಾರರಿಗಾಗಿ ಲೆಜೆಂಡ್ಸ್ ಲೀಗ್‍ನ್ನು ಭಾರತ ಆಯೋಜಿಸುತ್ತಿದೆ. ಭಾರತ ತಂಡವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಯಕನಾಗಿ ಮುನ್ನಡೆಸಲಿದ್ದಾರೆ.

    ಸೆಪ್ಟೆಂಬರ್ 15 ರಿಂದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಆರಂಭಗೊಳ್ಳುತ್ತಿದೆ. ಭಾರತದ ಒಂದು ತಂಡ ಮತ್ತು ಇತರ ದೇಶದ ಆಟಗಾರರೆಲ್ಲ ಸೇರಿ ಒಂದು ತಂಡ ರಚಿಸಲಾಗಿದೆ. ಭಾರತದ ತಂಡಕ್ಕೆ ಭಾರತ ಮಹರಾಜರು ಎಂದು ಹೆಸರು ನೀಡಲಾಗಿದೆ. ಇತರ ದೇಶಗಳ ಆಟಗಾರರನ್ನೊಳಗೊಂಡ ತಂಡಕ್ಕೆ ವರ್ಲ್ಡ್ ಜೈಂಟ್ಸ್ ಎಂದು ನಾಮಕರಣ ಮಾಡಲಾಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಸೆ.15ಕ್ಕೆ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಬ್ರಾವೋ ವಿಶ್ವದಾಖಲೆ – ಫ್ರಾಂಚೈಸ್ ಲೀಗ್‍ನ ಬಾದ್‍ಶಾನಾಗಿ ಮೆರೆದಾಟ

    ಈಗಾಗಲೇ 2 ತಂಡಗಳನ್ನು ಅಂತಿಮಗೊಳಿಸಲಾಗಿದೆ. ಭಾರತ ತಂಡದಲ್ಲಿ ಗಂಗೂಲಿ, ಸೆಹ್ವಾಗ್, ಮೊಹಮ್ಮದ್ ಕೈಫ್ ಸೇರಿದಂತೆ ಹಿರಿಯ ಆಟಗಾರರ ದಂಡಿದ್ದರೆ, ಅತ್ತ ವರ್ಲ್ಡ್ ಜೈಂಟ್ಸ್ ತಂಡದಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡದ ದೈತ್ಯ ಆಟಗಾರರ ಬಲಿಷ್ಠ ತಂಡ ಕಟ್ಟಲಾಗಿದೆ. ಇದನ್ನೂ ಓದಿ: ಚಿನ್ನದ ಹುಡುಗಿಯ ಪರಿಸರ ಪ್ರೀತಿ – ಹುಟ್ಟುಹಬ್ಬಕ್ಕೆ ಗಿಡ ನೆಟ್ಟ ಮೀರಾಬಾಯಿ ಚಾನು

    ತಂಡ ಹೀಗಿದೆ:
    ಭಾರತ ಮಹರಾಜರು: ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸುಬ್ರಮಣ್ಯಂ ಬದರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಎಸ್. ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಪ್ರಗ್ಯಾನ್ ಓಜಾ, ಅಜಯ್ ಜಡೇಜಾ, ಆರ್.ಪಿ ಸಿಂಗ್, ಜೋಗಿಂದರ್ ಶರ್ಮಾ, ರೀತೀಂದರ್ ಸಿಂಗ್ ಸೋಧಿ.

    ವರ್ಲ್ಡ್ ಜೈಂಟ್ಸ್: ಇಯಾನ್ ಮೋರ್ಗನ್ (ನಾಯಕ), ಲೆಂಡ್ಲ್ ಸಿಮನ್ಸ್, ಹರ್ಷಲ್ ಗಿಬ್ಸ್, ಜಾಕ್ ಕಾಲಿಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಯರ್, ನಥನ್ ಮೆಕಲಮ್, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇನ್, ಹ್ಯಾಮಿಲ್ಟನ್ ಮಸಕಝ ಮುಶ್ರಫೆ ಮೊರ್ತಜಾ, ಅಸ್ಗರ್ ಅಫಘಾನ್, ಮಿಚೆಲ್ ಜಾನ್ಸನ್, ಬ್ರೆಟ್ ಲೀ, ಕೆವಿನ್ ಒ‌ ಬ್ರಿಯಾನ್, ದಿನೇಶ್ ರಾಮ್‍ದಿನ್

    Live Tv
    [brid partner=56869869 player=32851 video=960834 autoplay=true]