Tag: India Lockdown

  • ಮೇ ಅಂತ್ಯಕ್ಕೆ ಕೊರೊನಾ ಎರಡನೇ ಅಲೆಯ ತಡೆಗೆ ಸರ್ಕಾರದ ಸಿದ್ಧತೆ

    ಮೇ ಅಂತ್ಯಕ್ಕೆ ಕೊರೊನಾ ಎರಡನೇ ಅಲೆಯ ತಡೆಗೆ ಸರ್ಕಾರದ ಸಿದ್ಧತೆ

    ಬೆಂಗಳೂರು: ಮೇ 3ರ ನಂತರ ದೇಶದಲ್ಲಿಯ ಲಾಕ್‍ಡೌನ್ ಸಡಿಲಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ನಡುವೆ ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ಕೊರೊನಾ ಹರಡುವಿಕೆ ಎರಡನೇ ಅಲೆಯ ತಡೆಗಾಗಿ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಕೊರೊನಾ ಸೋಂಕು ಕಳೆದ 3.4 ದಿನಗಳಲ್ಲಿ ದ್ವಿಗುಣವಾಗ್ತಿದೆ. ದ್ವಿಗುಣದ ಪ್ರಮಾಣವನ್ನು 12 ದಿನಗಳಿಗೆ ತರಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

    ಲಾಕ್‍ಡೌನ್ ಮೊದಲು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3.4 ರಿಂದ 7.5 ದಿನಗಳಲ್ಲಿ ದ್ವಿಗುಣವಾಗುತ್ತಿತ್ತು. ಕೊರೊನಾ ಹರಡುವಿಕೆಯ ದ್ವಿಗುಣ ಪ್ರಮಾಣ ಈ ವಾರದ ಕೊನೆಗೆ 10 ದಿನಗಳಿಗೆ ಮತ್ತು ಮೇ ಮೊದಲ ವಾರಕ್ಕೆ 12 ದಿನಗಳಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ.

    ಲಾಕ್‍ಡೌನ್ ಸಡಿಲಿಕೆಯಾಗುತ್ತಾ? ಸದ್ಯ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಕೇವಲ 3.4 ದಿನಗಳಲ್ಲಿ ಡಬಲ್ ಆಗ್ತಿದ್ದು, ಇದು ಕೆಟ್ಟ ಪರಿಸ್ಥಿತಿ. ಆದ್ರೆ ಈ ದಿನಗಳ ಸಂಖ್ಯೆ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರಕ್ಕೆ 12ಕ್ಕೆ ತರಲು ಪ್ರಯತ್ನಿಸಲಾಗತ್ತಿದೆ. ಆದ್ರೆ ದೇಶದ ಆರ್ಥಿಕತೆ ದೃಷ್ಟಿಯಿಂದ ಮೇ 3ರ ನಂತರ ಕೆಲ ಭಾಗಗಳಲ್ಲಿ ಲಾಕ್‍ಡೌನ್ ನಲ್ಲಿ ಸಡಿಲಿಕೆ ನೀಡುವ ಸಾಧ್ಯತೆಗಳಿವೆ. ಕೊರೊನಾ ತಡೆಗೆ ಲಾಕ್‍ಡೌನ್ ಒಂದೇ ನಮ್ಮ ಬಳಿಯಲ್ಲಿರುವ ಮದ್ದು. ಲಾಕ್‍ಡೌನ್ ಸಡಿಲಿಕೆ ವೇಳೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳು ಇರುತ್ತವೆ ಎಂಬುವುದು ಆರೋಗ್ಯ ಸಚಿವಾಲಯದ ಮಾಹಿತಿ ಎಂದು ವರದಿಯಾಗಿದೆ.

    ಕೊರೊನಾ ಎರಡನೇ ಅಲೆ: ಮೇ ಅಂತ್ಯ ಅಥವಾ ಜೂನ್ ಆರಂಭದಲ್ಲಿ ದೇಶದಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿಕೊಳ್ಳಬಹುದು. ಈ ಸಮಯದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿರುತ್ತದೆ. ಜನರು ಸಹ ಮುಂಜಾಗ್ರತ ಕ್ರಮವಾಗಿ ಮಾಸ್ಕ್, ಸ್ಯಾನಿಟೈಸಿಂಗ್, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಿರುತ್ತಾರೆ. ಎರಡನೇ ಬಾರಿಗೆ ಕೊರೊನಾ ಅಲೆಯಲ್ಲಿ ಸೋಂಕಿತರ ಸಂಖ್ಯೆ 5 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ದ್ವಿಗುಣವಾಗದಂತೆ ನೋಡಿಕೊಳ್ಳುವ ಸವಾಲು ಕೇಂದ್ರದ ಮುಂದಿದೆ.

    ಲಾಕ್‍ಡೌನ್ ಸಡಿಲಿಕೆ ಬಳಿಕ ನಗರ, ಅರೆ ನಗರ, ಪಟ್ಟಣಗಳಲ್ಲಿ ವಾಸಿಸುವ ಜನರ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದು. ಈ ಪ್ರದೇಶಗಳು ಗ್ರಾಮೀಣ ಭಾಗಗಳಿಗಿಂತ ಹೆಚ್ಚು ಕಠಿಣವಾಗಿರುತ್ತದೆ. ಮುಂಬೈ, ಇಂದೋರ್ ಮತ್ತು ಚಂಡೀಗಢನಲ್ಲಿ ಯಾವುದೇ ಒಳ್ಳೆಯ ಬೆಳವಣಿಗೆಗಳು ಕಾಣಿಸುತ್ತಿಲ್ಲ. ಕೆಲವೊಂದು ನಗರಗಳು ಕೊರೊನಾ ಹೋರಾಟಕ್ಕೆ ಸನ್ನದ್ಧವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಜನರು ಸಹ ಕೋವಿಡ್-19 ವಿರುದ್ಧದ ಯುದ್ಧಕ್ಕೆ ಸಾಥ್ ನೀಡುತ್ತಿದ್ದಾರೆ.

    ಯಾವ ಪ್ರದೇಶಗಳಿಗೆ ಲಾಕ್‍ಡೌನ್ ಸಡಿಲಿಕೆ: ಮುಂದಿನ ದಿನಗಳಲ್ಲಿ ಪ್ರದೇಶವಾರು ಕೊರೊನಾ ಪ್ರಕರಣಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಕೊರೊನಾ ಪ್ರಕರಣಗಳ ಏರಿಕೆ ಮತ್ತು ಇಳಿಕೆಯನ್ನ ಗಣನೆಗೆ ತೆಗೆದುಕೊಂಡು ಹಂತ ಹಂತವಾಗಿ ಲಾಕ್‍ಡೌನ್ ಸಡಿಲಿಕೆ ಮತ್ತು ವಿನಾಯ್ತಿಗಳನ್ನ ನೀಡಲಾಗುತ್ತದೆ. ಈ ಪ್ರಕ್ರಿಯೆ ಸೆಪ್ಟೆಂಬರ್ ವರೆಗೂ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಕೊರೊನಾ ಹರಡುವಿಕೆ ಅಲೆಯು ಮಾರ್ಚ್ ನಂತೆ ಹೆಚ್ಚಾಗದಂತೆ ತಡೆಯಲು ಎಲ್ಲ ಮುಂಜಾಗ್ರತ ಕ್ರಮಗಳನ್ನು ಸರ್ಕಾರಗಳು ತೆಗೆದುಕೊಳ್ಳುತ್ತಿದ್ದು, 3.4 ಅಥವಾ ಅದಕ್ಕಿಂತ ಕಡಿಮೆ ದಿನಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳದಂತೆ ಹಾಗೂ ಹೊಸ ಪ್ರಕರಣಗಳು ಬರದಂತೆ ಕಾರ್ಯ ನಿರ್ವಸಹಿಸಬೇಕಿದೆ. ಹೀಗಾಗಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳನ್ನು ಉತ್ತಮವಾಗಿ ಸಜ್ಜುಗೊಳಿಸಬೇಕಿದೆ.

    ಸ್ಪಷ್ಟ ಚಿತ್ರಣ ಸಿಗುತ್ತಾ?: ಮೇ 3ರ ನಂತರ ಕೊರೊನಾ ಸಂಬಂಧಿಸಿದಂತೆ ಸ್ಪಷ್ಟ ಚಿತ್ರಣ ಸಿಗುತ್ತಾ ಅನ್ನೋ ಪ್ರಶ್ನೆಗೆ ಸದ್ಯ ಯಾರ ಬಳಿಯೂ ಉತ್ತರವಿಲ್ಲ. ಮೇ 3ರ ನಂತರ ತೆಗೆದುಕೊಳ್ಳಲು ನಿರ್ಣಯಗಳು ಸರ್ಕಾರ ವಿಂಗಡಿಸಿರುವ ರೆಡ್, ಆರೆಂಜ್ ಮತ್ತು ಗ್ರೀನ್ ಝೋನ್ ಗಳ ನಿರ್ಧರಿಸಲಿದೆ. ಈ ಮೂರು ವಲಯಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇದರ ಆಧಾರದ ಮೇಲೆ ಲಾಕ್‍ಡೌನ್ ಸಡಿಲಿಕೆ ಯಾವ ಭಾಗ, ಜಿಲ್ಲೆಗೆ ನೀಡಬೇಕು ಎಂಬುವುದು ನಿರ್ಧಾರವಾಗಲಿದೆ.

    ಭಾರತದಲ್ಲಿ ಗುರುತಿಸಲಾಗಿರುವ ರೆಡ್ ಝೋನ್ ಗಳಿಂದಲೇ ಶೇ.80ರಷ್ಟು ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಪ್ರದೇಶದಲ್ಲಿ ನಾಲ್ಕು ದಿನಗಳ ಕಡಿಮೆ ಅವಧಿಯಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಇದುವರೆಗೂ 321 ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ಪ್ರಕರಣಗಳ ಕಂಡು ಬಂದಿಲ್ಲ. ಕಳೆದ ಏಳು ದಿನಗಳಲ್ಲಿ 77 ಜಿಲ್ಲೆಗಳಲ್ಲಿ, 14 ದಿನಗಳಲ್ಲಿ 62 ಜಿಲ್ಲೆಗಳು, 21 ದಿನಗಳಲ್ಲಿ 17 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಕಂಡು ಬಂದಿಲ್ಲ. ಇನ್ನು ಮೂರು ಜಿಲ್ಲೆಗಳಾದ ಮಾಹೆ, ಕೊಡಗು, ಪುರಿ ಗರ್ಹಾವಲ್ ಗಳಲ್ಲಿ ಕಳೆದ 28 ದಿನಗಳಿಂದು ಒಂದು ಪ್ರಕರಣಗಳು ಬೆಳಕಿಗೆ ಬಂದಿಲ್ಲ.

    ಸರ್ಕಾರ ಚೀನಾ, ದಕ್ಷಿಣ ಕೊರಿಯಾ ದೇಶಗಳು ಅನುಸರಿಸಿದ ನಿಯಮಗಳನ್ನು ಅಧ್ಯಯನ ನಡೆಸುತ್ತಿದೆ. ಲಾಕ್‍ಡೌನ್ ಬಳಿಕ ಜೀವನ ಶೈಲಿ ಹೇಗಿರಬೇಕು? ಆರ್ಥಿಕ ಸ್ಥಿತಿಗತಿಯ ಸುಧಾರಣೆ ಸೇರಿದಂತೆ ಹಲವು ಆಯಾಮಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ.

  • ದೆಹಲಿಯಲ್ಲಿ ಕೊರೊನಾ ವಿರುದ್ಧ OPERATION SHIELD

    ದೆಹಲಿಯಲ್ಲಿ ಕೊರೊನಾ ವಿರುದ್ಧ OPERATION SHIELD

    -ಕೊರೊನಾಗೆ ಬ್ರೇಕ್ ಹಾಕಲು ಕೇಜ್ರಿ ಸರ್ಕಾರದಿಂದ 6 ಸೂತ್ರ

    ನವದೆಹಲಿ: ಕೊರೊನಾ ರುದ್ರ ಕುಣಿತಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಬೆದರಿ ಹೋಗಿದೆ. ನಿಜಾಮುದ್ದಿನ್ ಮರ್ಕಜ್ ಪ್ರಕರಣ ಬಳಿಕ ನೋಡ ನೋಡುತ್ತಿದ್ದಂತೆ ಅಂಕಿ ಆಕಾಶಕ್ಕೆ ಏರುತ್ತಿದೆ. ಈ ಮಿಂಚಿನ ಓಟಕ್ಕೊಂದು ಬ್ರೇಕ್ ಹಾಕಲು ಮುಂದಾಗಿರುವ ಕೇಜ್ರಿವಾಲ್ ಸರ್ಕಾರ ಆಪರೇಷನ್ ಶೀಲ್ಡ್ ಔಟ್ ಆರಂಭಿಸಿದ್ದು, ಆರು ಸೂತ್ರಗಳನ್ನು ಜಾರಿ ತರಲು ಮುಂದಾಗಿದೆ.

    ಅಲ್ಲೊಂದು, ಇಲ್ಲೊಂದು ಪ್ರಕರಣ ಎಂದುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಡಿತದಲ್ಲಿದ್ದ ಕೊರೊನಾ ಸೋಂಕು ನಿಜಾಮುದ್ದೀನ್ ಮರ್ಕಜ್ ಪ್ರಕರಣ ಬಳಿಕ ನೋಡ ನೋಡುತ್ತಿದ್ದಂತೆ ಹೆಚ್ಚಾಗ ತೊಡಗಿದೆ. ಈವರೆಗೂ 720 ಪ್ರಕರಣಗಳು ಪತ್ತೆಯಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 450ಕ್ಕೂ ಹೆಚ್ಚು ಕೇಸ್‍ಗಳು ಮರ್ಕಜ್ ಮೂಲದ್ದು ಎಂಬುದು ಇಲ್ಲಿ ಗಮನಿಸಬೇಕಾದ ಗಂಭೀರ ಅಂಶ. ಕೊರೋನಾ ಸಾವು ನೋವಿನ ಅಂಕಿ ಅಂಶ ಕೈ ಮೀರಿ ಆಕಾಶದೆತ್ತರಕ್ಕೆ ಬೆಳೆಯುತ್ತಿದ್ದಂತೆ ದೆಹಲಿ ಸರ್ಕಾರ, ರಾಷ್ಟ್ರ ರಾಜಧಾನಿಯಲ್ಲಿ 100 ಪರ್ಸೆಂಟ್ ಸೀಲ್ಡ್ ಮಾದರಿಯನ್ನು ಜಾರಿಗೆ ತಂದಿದೆ.

    ದೆಹಲಿಯಲ್ಲಿ 25 ಪ್ರದೇಶಗಳನ್ನು ಹಾಟ್‍ಸ್ಪಾಟ್ ಗಳನ್ನು ಗುರುತಿಸಿದ್ದು. ಈ ಪ್ರದೇಶದಲ್ಲಿ ಆಪರೇಷನ್ ಶೀಲ್ಡ್ ಘೋಷಣೆ ಮಾಡಿದ್ದಾರೆ. ಕೊರೊನಾ ವಿರುದ್ಧ ಆಪರೇಷನ್ ಶೀಲ್ಡ್ ಘೋಷಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರು ಸೂತ್ರಗಳನ್ನು ಜಾರಿಗೆ ತರಲು ಸಿದ್ಧವಾಗಿದ್ದಾರೆ.

    1. ಮೊದಲ ಸೂತ್ರದ ಮೂಲಕ ಇಡೀ ಪ್ರದೇಶವನ್ನು ಸೀಲ್ ಮಾಡುವುದು ಮತ್ತು ಸೋಂಕಿತ ಪ್ರದೇಶವನ್ನು ಮ್ಯಾಪಿಂಗ್ ಮಾಡುವುದು.
    2. ಸೀಲ್ ಮಾಡಿರುವ ಪ್ರದೇಶದಲ್ಲಿರುವ ಎಲ್ಲ ಜನರು ಮನೆಯಲ್ಲೇ ಇರುವುದು ಕಡ್ಡಾಯ
    3. ಈ ತಂತ್ರದಲ್ಲಿ ಸೋಂಕಿತ ವ್ಯಕ್ತಿಯ ಮೊದಲ ಮತ್ತು ಎರಡನೇ ಹಂತದ ಸಂಪರ್ಕಗಳನ್ನು ಗುರುತಿಸಿ ಐಸೊಲೇಷನ್ ಮಾಡುವುದು.
    4. ತುರ್ತು ಅಗತ್ಯ ವಸ್ತುಗಳನ್ನು ಸೀಲ್ಡ್ ಪ್ರದೇಶದಲ್ಲಿ ಹೋಂ ಕ್ವಾರಂಟೇನ್‍ನಲ್ಲಿರುವ ಮಂದಿಗೆ ಸರ್ಕಾರದಿಂದಲೇ ಪೂರೈಕೆ.
    5. ಸ್ಥಳೀಯ ಆಡಳಿತದಿಂದ ಇಡೀ ಪ್ರದೇಶ ಮತ್ತು ಪ್ರತಿ ಮನೆಯನ್ನು ಸ್ಯಾಜಿಟೈಜ್ ಮಾಡುವುದು.
    6. ಇನ್ನು ಸೀಲ್ ಆಗಿರುವ ಪ್ರದೇಶದಲ್ಲಿ ಒಬ್ಬೇ ಒಬ್ಬ ವ್ಯಕ್ತಿಯನ್ನು ಬಿಡದೇ ಪ್ರತಿ ಮನೆಗೂ ಹೋಗಿ ಅವರ ಆರೋಗ್ಯ ತಪಾಸಣೆ ನಡೆಸುವುದು. ರೋಗದ ಲಕ್ಷಣಗಳು ಕಂಡು ಬಂದ ವ್ಯಕ್ತಿಯನ್ನು ಐಸೊಲೇಷನ್ ಮಾಡುವುದು.

    ಹೀಗೆ ಸಾಮಾನ್ಯ ಜನರು ಮಾತ್ರವಲ್ಲದೇ ವೈದ್ಯರನ್ನು ಕೂಡ ಕಾಡುತ್ತಿರುವ ಕೊರೊನಾ ವಿರುದ್ಧ ಆಪರೇಷನ್ 100% ಸೀಲ್ ಜಾರಿಗೆ ತಂದಿರುವ ದೆಹಲಿ ಸರ್ಕಾರ ರಣ ಕಹಳೆ ಮೊಳಗಿಸಿದೆ. ಆರು ಸೂತ್ರಗಳ ಮೂಲಕ ಕೊರೊನಾ ಹೆಮ್ಮಾರಿಯನ್ನು ಹಿಮ್ಮೆಟ್ಟಿಸಲು ಸಿದ್ಧವಾಗಿದೆ.

  • ಸೀಲ್ ಆಗುತ್ತಾ ರಾಜ್ಯದ 18 ಜಿಲ್ಲೆಗಳು- ಕೊರೊನಾ ತಡೆಗೆ ಸರ್ಕಾರದಿಂದ ಬ್ರಹ್ಮಾಸ್ತ್ರ ಪ್ರಯೋಗ

    ಸೀಲ್ ಆಗುತ್ತಾ ರಾಜ್ಯದ 18 ಜಿಲ್ಲೆಗಳು- ಕೊರೊನಾ ತಡೆಗೆ ಸರ್ಕಾರದಿಂದ ಬ್ರಹ್ಮಾಸ್ತ್ರ ಪ್ರಯೋಗ

    ಬೆಂಗಳೂರು: ದೇಶವನ್ನು ಲಾಕ್‍ಡೌನ್ ಮಾಡಿ ಇಂದಿಗೆ 16 ದಿನಗಳು ಕಳೆದಿವೆ. ಆದ್ರೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಹೀಗಾಗಿ ಕೊರೊನಾ ತಡೆಗಾಗಿ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗುತ್ತಿದೆ.

    ಕೊರೊನಾ ಸೋಂಕಿತರ ಪ್ರದೇಶಗಳನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡುವುದು. ಈ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಜನರಿಗೆ ಮನೆಯಿಂದ ಹೊರ ಬರದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವುದು. ಈ ಮೂಲಕ ಆ ಪ್ರದೇಶವನ್ನು ಸೀಲ್ ಮಾಡುವ ಮೂಲಕ ಕೊರೊನಾ ಚೈನ್ ಕಟ್ ಮಾಡುವುದು.

    ರಾಜ್ಯದ ಕೊರೊನಾ ಹಾಟ್‍ಸ್ಪಾಟ್‍ಗಳಾದ 18 ಜಿಲ್ಲೆಗಳಲ್ಲಿ ಸೀಲ್ ಮಾದರಿಯ ನಿಯಮ ಜಾರಿ ಆಗುವ ಸಾಧ್ಯತೆ ಇದೆ. ಈ ಮೂಲಕ ಈವರೆಗೂ ಸರ್ಕಾರದ ನಿಯಮ ಪಾಲಿಸದ ಜನರಿಗೆ ಕಠಿಣ ಕ್ರಮಗಳ ಮೂಲಕ ಚಾಟಿ ಏಟು ನೀಡುವ ಸಾಧ್ಯತೆಗಳಿವೆ.

    ಯಾವ ಜಿಲ್ಲೆಗಳು ಸೀಲ್ ಆಗಬಹುದು?
    ಬೆಂಗಳೂರು ನಗರ- 63 (ಕೊರೊನಾ ಸೋಂಕಿತರ ಸಂಖ್ಯೆ), ಮೈಸೂರು-35, ದಕ್ಷಿಣ ಕನ್ನಡ-13, ಚಿಕ್ಕಬಳ್ಳಾಪುರ-08, ಕಲಬುರಗಿ-09, ಬೆಂಗಳೂರು ಗ್ರಾಮಾಂತರ-03, ಬೆಳಗಾವಿ-07, ಬಳ್ಳಾರಿ-06, ಬೀದರ್-10, ಉತ್ತರ ಕನ್ನಡ-9, ಕೊಡಗು – 01, ಮಂಡ್ಯ-04, ಬಾಗಲಕೋಟೆ-05, ಉಡುಪಿ-03, ದಾವಣಗೆರೆ-03, ತುಮಕೂರು-02, ಗದಗ-01 ಮತ್ತು ಧಾರವಾಡ – 1

  • ಕೊರೊನಾಗೆ 24 ಗಂಟೆಯಲ್ಲಿ 27 ಸಾವು – ಸೋಂಕಿತರ ಸಂಖ್ಯೆ 4,200ಕ್ಕೆ ಏರಿಕೆ

    ಕೊರೊನಾಗೆ 24 ಗಂಟೆಯಲ್ಲಿ 27 ಸಾವು – ಸೋಂಕಿತರ ಸಂಖ್ಯೆ 4,200ಕ್ಕೆ ಏರಿಕೆ

    ಬೆಂಗಳೂರು: 27 ಜನರು ಕಳೆದ 24 ಗಂಟೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 100ಕ್ಕೆ ತಲುಪಿದೆ. ಭಾನುವಾರ ಸುಮಾರು 12 ಜನರನ್ನು ಕೊರೊನಾ ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇನ್ನು ಕೊರೊನಾ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ.

    ಭಾನುವಾರ ಒಂದೇ ದಿನ ಸುಮಾರು 500ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ಸೋಂಕಿಂತರ ಸಂಖ್ಯೆ ದ್ವಿಗುಣವಾಗಿ ಏರಿಕೆಯಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 1ರಂದು ದೇಶದಲ್ಲಿ ಅಂದಾಜು 2 ಸಾವಿರ ಸೋಂಕಿತರಿದ್ದರು. ಕೇವಲ ನಾಲ್ಕೈದು ದಿನಗಳಲ್ಲಿ ಈ ಸಂಖ್ಯೆ ಡಬಲ್ ಆಗಿದೆ.

    ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿಯ ಜಮಾತ್ ನಲ್ಲಿ ಭಾಗಿಯಾದ ತಬ್ಲೀಘಿಗಳಿಂದ ವೇಗವಾಗಿ ಕೊರೊನಾ ಹಬ್ಬುತ್ತಿದೆ. ಶೇ.30ರಷ್ಟು ಕೊರೊನಾ ಸೋಂಕಿತ ಪ್ರಕರಣಗಳು ದೆಹಲಿ ಜಮಾತ್ ಲಿಂಕ್ ಹೊಂದಿವೆ. ಇದೇ ರೀತಿ ಕೊರೊನಾ ಪ್ರಕರಣಗಳ ಸಂಕ್ಯೆ ಹೆಚ್ಚಾದಲ್ಲಿ ಈ ಮುಂದಿನ ಏಳು ದಿನಗಳಲ್ಲಿ ದ್ವಿಗುಣವಾಗುವ ಸಾಧ್ಯತೆಗಳಿವೆ.

    ದೇಶದ 274 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಹಾಗಾಗಿ ಕೊರೊನಾಗೆ ತುತ್ತಾಗದ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ. ಕೊರೊನಾದಿಂದ ತತ್ತರಿಸಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲು ಇತರೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

  • ಭಾರತದಲ್ಲಿ ಕೊರೊನಾ ಯಾವ ಪ್ರಮಾಣದಲ್ಲಿ ಹರಡುತ್ತಿದೆ?- ಇಲ್ಲಿದೆ ಸಂಪೂರ್ಣ ವಿವರ

    ಭಾರತದಲ್ಲಿ ಕೊರೊನಾ ಯಾವ ಪ್ರಮಾಣದಲ್ಲಿ ಹರಡುತ್ತಿದೆ?- ಇಲ್ಲಿದೆ ಸಂಪೂರ್ಣ ವಿವರ

    -ವಾರದಿಂದ ವಾರಕ್ಕೆ ಏರಿಕೆಯಾದ ಪ್ರಮಾಣ ಎಷ್ಟು?
    -ಇತರೆ ರಾಷ್ಟ್ರಗಳಿಗಿಂತ ಭಾರತ ಸುರಕ್ಷಿತವಾಗಿದೆಯಾ?

    ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಈ ಏರಿಕೆ ಪ್ರಮಾಣ ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಿದಾಗ ತುಂಬಾ ಕಡಿಮೆ.

    ಇನ್‍ಸ್ಟಿಟ್ಯೂಟ್ ಆಫ್ ಮೆಥೆಮಟಿಕಲ್ ಸೈನ್ಸ್ ನ ಚೆನ್ನೈ ವಿಜ್ಞಾನಿ ಸಿತಾಭ್ರಾ ಸಿನ್ಹಾ ಪ್ರಕಾರ, ಮಾರ್ಚ್ 19ರ ವೇಳೆ ಭಾರತದಲ್ಲಿ ಕೊರೊನಾ ಪಾಸಿಟಿವ್ ರೋಗಿಯಿಂದ ಸೋಂಕು ಸರಾಸರಿ 1.7 ಜನರಿಗೆ ಹರಡುತ್ತಿತ್ತು. ಮಾರ್ಚ್ 26ಕ್ಕೆ ಈ ಸರಾಸರಿ 1.81ಕ್ಕೆ ಏರಿಕೆ ಕಂಡಿತ್ತು. ಈ ಸರಾಸರಿ ಪ್ರಮಾಣ ಇರಾನ್, ಇಟಲಿ ದೇಶಕ್ಕಿಂತ ಕಡಿಮೆ.

    ದಿ ಲಾನ್ಸೆಟ್ ಅಧ್ಯಯನ, ಕೋವಿಡ್-19 ಸೋಂಕಿನ ಪ್ರಸರಣದ ಪ್ರಮಾಣ ಒಂದು ಪ್ರಕರಣದಿಂದ ಇಬ್ಬರಿಂದ ಮೂವರಿಗೆ ಹರಡಬಹುದು ಎಂದು ಅಂದಾಜಿಸಿದೆ. ಮಾರ್ಚ್ ತಿಂಗಳಾಂತ್ಯಕ್ಕೆ ಸೋಂಕಿತರ ಸಂಖ್ಯೆ 1,500 ಇದೆ ಎಂಬುವುದು ಸಿನ್ಹಾ ಅವರ ಲೆಕ್ಕಾಚಾರ.

    ಮಾರ್ಚ್ 26ರಂದು ಮಾತನಾಡಿದ್ದ ಸಿನ್ಹಾ, ಏಪ್ರಿಲ್ 5ರೊಳಗೆ ಸೋಂಕಿತರ ಸಂಖ್ಯೆ 3 ಸಾವಿರ ತಲುಪಬಹುದು. ಒಂದು ವೇಳೆ ನಿರ್ಲಕ್ಷಿಸಿದ್ದಲ್ಲಿ ಈ ಸಂಖ್ಯೆ 5 ಸಾವಿರವರೆಗೂ ಹೆಚ್ಚಾಗುವ ಸಾಧ್ಯತೆಗಳಿವೆ. ಮಾರ್ಚ್ 16ರ ನಂತರ ಸೋಂಕಿತರ ಸಂಖ್ಯೆಯ ಪ್ರಮಾಣದ ರೇಖೆ ಸ್ವಲ್ಪ ಏರಿಕೆ ಕಂಡು, ಸ್ಥಿರವಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆಯ ಏರಿಕೆಯ ರೇಖೆ ಇಳಿದಿದೆ ಎಂದು ಅಂದಾಜಿಸಲಾಗಿದೆ. ಕೊರೊನಾ ವೈರಸ್ ತಡೆಯಲು ಲಾಕ್‍ಡೌನ್ ಎಷ್ಟು ಪ್ರಮಾಣದಲ್ಲಿ ಕೆಲಸ ಮಾಡಿತು ಎಂಬುವುದು ಮುಂದಿನ ವಾರದಲ್ಲಿ ಸ್ಪಷ್ಟವಾಗಲಿದೆ ಎಂದು ಸಿನ್ಹಾ ಹೇಳುತ್ತಾರೆ.

    30 ದಿನ 6 ರಾಷ್ಟ್ರಗಳು: ಕೋವಿಡ್-19 ಏರಿಕೆಯ ಪ್ರಮಾಣ ಮೂರರಿಂದ 1 ಸಾವಿರಕ್ಕೆ ತಲುಪಿದೆ. ಭಾರತದ ಕೊರೊನಾ ಗ್ರೋಥ್ ರೇಟ್ ನ್ನು ಸೌಥ್ ಕೊರಿಯಾಗೆ ಹೋಲಿಸಿದ್ರೆ ಎರಡು ದೇಶಗಳ ರೇಖೆಗಳು ಸಮಾನಾಂತರವಾಗಿದೆ. ಸ್ಪೇನ್, ಇಟಲಿ, ಇರಾನ್ ದೇಶಗಳ ಸೋಂಕಿತರ ಪ್ರಮಾಣದ ರೇಖೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 47 ಸಾವಿರ ತಲುಪಿದೆ.

    ಭಾರತದಲ್ಲಿ ಕೊರೊನಾದ ಮೊದಲ 30 ದಿನಗಳನ್ನು ಇತರ ಆರು ರಾಷ್ಟ್ರಗಳಿಗೆ ತುಲನೆ ಮಾಡಿದಾಗ ಸೌಥ್ ಕೊರಿಯಾ, ಸ್ಪೇನ್, ಇರಾನ್ ಮತ್ತು ಇಟಲಿಗಿಂತ ಕಡಿಮೆಯಿದ್ದು, ಸಿಂಗಾಪುರಕ್ಕಿಂತ ಹೆಚ್ಚಿದೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯ ಪ್ರಕಾರ ಈ ಅಂಕಿ-ಅಂಶಗಳಿವೆ. ಎಲ್ಲ ದೇಶಗಳು ಕೊರೊನಾ ತಡೆಗೆ ಹಲವು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿವೆ. ಹಾಗೆ ಭಾರತ ಸಹ 21 ದಿನ ಲಾಕ್‍ಡೌನ್ ಮಾಡಿಕೊಂಡು ಕೊರೊನಾ ತಡೆಗೆ ಶ್ರಮಿಸುತ್ತಿದೆ.

    ವಾರದಿಂದ ವಾರಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು ಏರಿಕೆ? (ಮಾರ್ಚ್ 29 ಅಂತ್ಯಕ್ಕೆ)
    1. ಭಾರತ: 3-43-114-415-1,071
    2. ಸೌಥ್ ಕೊರಿಯಾ: 4-23-28-104-1,766
    3. ಸಿಂಗಾಪುರ: 4-18-43-75-90 (ಸದ್ಯ 91ಕ್ಕೆ ಏರಿಕೆಯಾಗಿದೆ)
    4. ಸ್ಪೇನ್: 2-151-1,639-11,178-39,673 (ಸದ್ಯ 47 ಸಾವಿರ ತಲುಪಿದೆ)
    5. ಇಟಲಿ: 3-650-3,858-15,113-41,035 (ಸದ್ಯ 41,035ಕ್ಕೆ ತಲುಪಿದೆ)
    6. ಇರಾನ್: 2-141-2,922-9,000-1,7361 (ಸದ್ಯ 18,407ಕ್ಕೆ ತಲುಪಿದೆ)

    ಆರು ರಾಷ್ಟ್ರಗಳ ಜೊತೆ ಭಾರತದ ಅಂಕಿ-ಸಂಖ್ಯೆಗಳು ಕಡಿಮೆ ಪ್ರಮಾಣದಲ್ಲಿವೆ. ಹಾಗಾಗಿ ಲಾಕ್‍ಡೌನ್ ಸೇರಿದಂತೆ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರೆವೆನ್ಷನ್ ಆ್ಯಂಡ್ ಕಂಟ್ರೋಲ್ ಪ್ರಕಾರ, ಭಾರತದಲ್ಲಿ ಕೊರನಾ ಹರಡುವಿಕೆ ಸರಾಸರಿ ಪ್ರಮಾಣ 2.76ರಿಂದ 3.25ರಷ್ಟಿದೆ. ಈ ಸರಾಸರಿ ಪ್ರಮಾಣದ ಸಂಖ್ಯೆಯನ್ನು ರಿಪ್ರೊಡೆಕ್ಷನ್ ನಂಬರ್/ಆರ್‍ಓ ಎಂದು ಕರೆಯಲಾಗುತ್ತದೆ. ಆರ್‍ಓ ಒಂದಕ್ಕಿಂತ ಕಡಿಮೆ ಇದ್ದಲ್ಲಿ ಯಾವುದೇ ಅಪಾಯ ಇಲ್ಲ ಎಂಬರ್ಥ.

    ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ, ಸಾಮಾಜಿಕ ಅಂತರ ಕಾಯ್ದುಕೊಳ್ಳುವದರಿಂದ ಸೋಂಕಿನ ಹರಡುವಿಕೆ ಪ್ರಮಾಣ ತಗ್ಗಿಸಬಹುದು. ಇದರಿಂದ ಸೋಂಕಿತರ ಸಂಖ್ಯೆಯ ಕಡಿಮೆಯಾಗುತ್ತದೆ. ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರ ಬರಬೇಕು. ಇದರಿಂದ ಸೋಂಕಿನ ವೇಗವನ್ನು ತಗ್ಗಿಸಬಹುದು ಎಂದು ಹೇಳುತ್ತಾರೆ.

  • ಪತ್ನಿಯನ್ನ ಹೆಗಲ ಮೇಲೆ ಹೊತ್ತು 257 ಕಿ.ಮೀ. ಸಾಗಿದ

    ಪತ್ನಿಯನ್ನ ಹೆಗಲ ಮೇಲೆ ಹೊತ್ತು 257 ಕಿ.ಮೀ. ಸಾಗಿದ

    ನವದೆಹಲಿ: ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡ ಪತಿ ಬರೋಬ್ಬರಿ 257 ಕಿ.ಮೀ. ನಡೆದುಕೊಂಡು ಬಂದಿದ್ದಾರೆ.

    ಅಹಮದಾಬಾದ್ ನಿಂದ ಬಾಂಸವಾಡಕ್ಕೆ ದಂಪತಿ ಪ್ರಯಾಣ ಬೆಳೆಸಿದ್ದರು. ಆದ್ರೆ ಪತ್ನಿಯ ಕಾಲು ಫ್ರ್ಯಾಕ್ಚರ್ ಆಗಿದ್ದರಿಂದ ಪತಿ ಹೆಗಲ ಮೇಲೆ ಹೊತ್ತುಕೊಂಡು ಊರು ತಲುಪಿದ್ದಾನೆ. ದಂಪತಿ ಬಳಿ ಯಾವುದೇ ವಾಹನಗಳಿಲ್ಲದ ಹಿನ್ನೆಲೆಯಲ್ಲಿ ಹೊತ್ತುಕೊಂಡು ಸಾಗಿದ್ದಾರೆ.

    ಭಾರತ ಲಾಕ್‍ಡೌನ್ ಆಗಿದ್ದರಿಂದ ಎಲ್ಲ ಕೆಲಸಗಳು ನಿಂತಿವೆ. ದಿನನಿತ್ಯ ಕೂಲಿ, ಕಟ್ಟಡಗಳಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕ ವರ್ಗ ಊರುಗಳತ್ತ ಮುಖ ಮಾಡಿದ್ದಾರೆ. ಕೆಲವರು ವಾಹನಗಳು ಸಿಗದಕ್ಕೆ ನಡೆದುಕೊಂಡು ಹೋಗುತ್ತಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿಯತ್ತ ಜನ ನಡೆದುಕೊಂಡು ಹೋಗುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು.

    ಕೆಲವು ದಿನಗಳ ಹಿಂದೆ ಬಾಲಕನೋರ್ವ ತಾನು ಬಿಹಾರಕ್ಕೆ ಹೋಗಬೇಕೆಂದು ಕಣ್ಣೀರು ಹಾಕಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದೆಹಲಿಯಲ್ಲಿ ಕೆಲಸ ನಿಂತಿದೆ, ಊರಿಗೆ ತೆರಳಲು ಯಾವುದೇ ಬಸ್, ರೈಲು ಇಲ್ಲ. ಇಲ್ಲಿ ಉಳಿದುಕೊಳ್ಳಲು ಸ್ಥಳವೂ ಇಲ್ಲ ಎಂದು ಕಣ್ಣೀರು ಹಾಕಿದ್ದನು.

  • 21 ದಿನಗಳ ಸುದೀರ್ಘ ಬಂದ್ – ಮಹತ್ವದ ಕೆಲಸಕ್ಕೆ ಮುಂದಾದ ಬಿಜೆಪಿ

    21 ದಿನಗಳ ಸುದೀರ್ಘ ಬಂದ್ – ಮಹತ್ವದ ಕೆಲಸಕ್ಕೆ ಮುಂದಾದ ಬಿಜೆಪಿ

    ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ್ ಬಂದ್‍ಗೆ ಕರೆ ನೀಡಿದ್ದು ಈ ನಡುವೆ ಸಂಕಷ್ಟ ಎದುರಿಸುವ ಜನರ ನೆರವಿಗೆ ಬಿಜೆಪಿ ಮುಂದಾಗಿದೆ.

    ಭಾರತ ಬಂದ್ ನಡುವೆ ಹಸಿದವರ ಹೊಟ್ಟೆ ತುಂಬಿಸಲು ಬಿಜೆಪಿ ನಿರ್ಧರಿಸಿದ್ದು, 21 ದಿನಗಳ ಅವಧಿಯಲ್ಲಿ 5 ಕೋಟಿ ಜನರಿಗೆ ಉಚಿತ ಆಹಾರ ನೀಡುವ ಸಂಕಲ್ಪ ಮಾಡಿದೆ. ಭಾರತ ಬಂದ್ ಹಿನ್ನೆಲೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಬಂದ್ ವೇಳೆ ಸಂಕಷ್ಟಕ್ಕೆ ಸಿಲುಕುವ ಜನರ ನೆರವು ನೀಡುವ ಬಗ್ಗೆ ಚರ್ಚೆ ಮಾಡಲಾಯಿತು.

    21 ದಿನಗಳ ಸುದೀರ್ಘ ಬಂದ್ ನಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ನಿರಾಶ್ರಿತರು ಊಟ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಹಾಗಾಗಿ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ನಿರಾಶ್ರಿತರಿಗೆ ಉಚಿತ ಆಹಾರ ಹಂಚುವ ಕಾರ್ಯ ಮಾಡಬೇಕು ಎಂದು ತಿರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಈ ನಿರ್ಧಾರದ ಬಳಿಕ ಎಲ್ಲ ರಾಜ್ಯಗಳ ಬಿಜೆಪಿ ರಾಜ್ಯಧ್ಯಕ್ಷರಿಗೂ ಈ ಮಾಹಿತಿ ರವಾನೆ ಮಾಡಿದ್ದು, ಕಾರ್ಯಕರ್ತರ ಮೂಲಕ ನೆರವಿನ ಹಸ್ತ ಚಾಚುವಂತೆ ಜೆ.ಪಿ ನಡ್ಡಾ ಸೂಚಿಸಿದ್ದಾರೆ.

    ಈ ಸಂಬಂಧ ಪ್ರತಿನಿತ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು ಜೆ.ಪಿ ನಡ್ಡಾ ಅವರು ರಾಜ್ಯವಾರು ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ. ಪ್ರಧಾನಿ ಮೋದಿ ಭಾರತ ಬಂದ್ ಘೋಷಿಸಿದ ಬಳಿಕ ಸಾಮಾನ್ಯ ಜನರು ಯಾರು ಹಸಿವಿನಿಂದ ಬಳಲಬಾರದು ಸುತ್ತಲಿನ ಜನರು ನೆರವಿಗೆ ಬರಬೇಕು ಎಂದು ಮನವಿ ಮಾಡಿಕೊಂಡಿದ್ದರು.

  • ಮನೆಯಿಂದ ಹೊರಗೆ ಬಂದವರಿಗೆ ಗೋಡೆ ನೋಡುವ ಶಿಕ್ಷೆ

    ಮನೆಯಿಂದ ಹೊರಗೆ ಬಂದವರಿಗೆ ಗೋಡೆ ನೋಡುವ ಶಿಕ್ಷೆ

    ಲಕ್ನೊ: ಮಹಾಮಾರಿ ಕೊರೊನಾ ತಡೆಗೆ ದೇಶವೇ ಲಾಕ್‍ಡೌನ್ ಆಗಿದೆ. ಅನಾವಶ್ಯಕವಾಗಿ ಹೊರಗೆ ಬಂದವರನ್ನು ಪೊಲೀಸರು ಗೋಡೆಗೆ ಒರಗಿ ನಿಲ್ಲುವ ಶಿಕ್ಷೆ ನೀಡುತ್ತಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಪೊಲೀಸರು ಜನರಿಗೆ ಮನೆಯಿಂದ ಹೊರ ಬರದಂತೆ ಸೂಚಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಬನ್ನಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ರಸ್ತೆಯಲ್ಲಿ ಕಾಣಿಸಿಕೊಂಡವರನ್ನ ತಡೆ ಹಿಡಿದು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಇಷ್ಟೆಲ್ಲ ಬಿಗಿ ಭದ್ರತೆ ಕೈಗೊಂಡಿದ್ರೂ, ಕೆಲವರು ಅನಾವಶ್ಯಕವಾಗಿ ಸುತ್ತಾಡುತ್ತ ಪೊಲೀಸರು ಲಾಠಿ ರುಚಿ ನೀಡುತ್ತಿದ್ದಾರೆ.

    ಹೊರ ಬಂದಿದ್ದಕ್ಕೆ ಸೂಕ್ತ ಕಾರಣ ನೀಡದವರನ್ನು ಗೋಡೆಗಳತ್ತ ಮುಖ ಮಾಡಿ, ಕೈ ಮೇಲೆ ಎತ್ತಿಸಿ ಶಿಕ್ಷೆ ನೀಡುತ್ತಿದ್ದಾರೆ. ಸ್ವಲ್ಪ ಸಮಯದ ಬಳಿಕ ಕೊರೊನಾ ಬಗ್ಗೆ ಜಾಗೃತಿ ನೀಡಿ ಕಳುಹಿಸುತ್ತಿದ್ದಾರೆ. ಬಹುತೇಕ ಪೊಲೀಸರು ಲಾಠಿ ಏಟು ನೀಡಿದ್ರೆ, ಕೆಲವರು ಬಸ್ಕಿ ಹೊಡೆಸುತ್ತಿದ್ದಾರೆ.