Tag: India Gold medal

  • Asian Games 2023: 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ದಾಖಲೆಯೊಂದಿಗೆ ಬಂಗಾರಕ್ಕೆ ಮುತ್ತಿಟ್ಟ ಅವಿನಾಶ್‌

    Asian Games 2023: 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ದಾಖಲೆಯೊಂದಿಗೆ ಬಂಗಾರಕ್ಕೆ ಮುತ್ತಿಟ್ಟ ಅವಿನಾಶ್‌

    ಹ್ಯಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ (Asian Games) 8ನೇ ದಿನವಾದ ಭಾನುವಾರವೂ ಭಾರತೀಯ ಕ್ರೀಡಾಪಟುಗಳು ಪದಕಗಳ ಬೇಟೆಯಾಡಿದ್ದಾರೆ. 3,000 ಮೀಟರ್ ಸ್ಟೀಪಲ್ ಚೇಸ್​ ಸ್ಪರ್ಧೆಯಲ್ಲಿ ಅವಿನಾಶ್ ಸೇಬಲ್ (Avinash Sable) ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

    ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮತ್ತು ಸ್ಟೀಪಲ್‌ ಚೇಸ್‌ (Steeplechase) ಸ್ಪರ್ಧೆಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಎಂಬ ಖ್ಯಾತಿಗೂ ಅವಿನಾಶ್ ಸೇಬಲ್ (29) ಪಾತ್ರರಾಗಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌ – ಸೂಪರ್‌ ಓವರ್‌ ಟೈ ಆದ್ರೆ ಬೌಂಡರಿಯನ್ನು ಪರಿಗಣಿಸಲಾಗುತ್ತಾ? 2019ರಲ್ಲಿ ಏನಾಗಿತ್ತು?

    8:19:50 ಸೆಕೆಂಡುಗಳಲ್ಲಿ 3,000 ಮೀಟರ್ ಗುರಿ ತಲುಪುವ ಮೂಲಕ ಅವಿನಾಶ್‌ ಭಾರತಕ್ಕೆ ಚಿನ್ನ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ 2018ರ ಜಕಾರ್ತಾ ಗೇಮ್ಸ್‌ನಲ್ಲಿ ಇರಾನ್‌ನ ಹುಸೇನ್ ಕೀಹಾನಿ 8:22.79 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ವಿಶ್ವದಾಖಲೆಯಾಗಿತ್ತು. ಇದೀಗ ಹುಸೇನ್‌ ಹೆಸರಿನಲ್ಲಿದ್ದ ದಾಖಲೆಯನ್ನು ಅವಿನಾಶ್‌ ಮುರಿದು ಸಾಧನೆ ಮಾಡಿದ್ದಾರೆ.

    8ನೇ ದಿನವಾದ ಭಾನುವಾರ ಭಾರತ ಪದಕಗಳ ಬೇಟೆ ಮುಂದುವರಿಸಿದೆ. ಈವರೆಗೆ ಭಾರತಕ್ಕೆ 13 ಚಿನ್ನ, 16 ಬೆಳ್ಳಿ ಮತ್ತು 16 ಕಂಚು ಸೇರಿ ಒಟ್ಟು 45 ಪದಕಗಳು ಸಂದಿವೆ. ಇದನ್ನೂ ಓದಿ: ಬೀಫ್‌ ನೀಡಲ್ಲ ಅಂದ BCCI; ಚಿಕನ್‌, ಮಟನ್‌, ಫಿಶ್‌ ಔತಣಕ್ಕೆ ಪಾಕ್‌ ಆಟಗಾರರು ಫಿದಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asian Games 2023: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ – ಕಂಚು ಗೆದ್ದು ಕಿರಣ್‌ ಮಿಂಚು

    Asian Games 2023: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ – ಕಂಚು ಗೆದ್ದು ಕಿರಣ್‌ ಮಿಂಚು

    ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ 2023ರಲ್ಲಿ (Asian Games 2023) ಭಾರತದ ಸ್ಪರ್ಧಿಗಳ ಪದಕದ ಬೇಟೆ 6ನೇ ದಿನವಾದ ಶುಕ್ರವಾರವೂ ಮುಂದುವರಿದೆ. ಏರ್ ಪಿಸ್ತೂಲ್ ಶೂಟಿಂಗ್‌, ಸ್ಕ್ವಾಷ್‌, ಟೆನ್ನಿಸ್‌ ಬಳಿಕ ಅಥ್ಲೆಟಿಕ್ಸ್‌ನಲ್ಲೂ (Athletics) ಭಾರತೀಯರ ಪದಕ ಬೇಟೆ ಶುರುವಾಗಿದೆ.

    ಶುಕ್ರವಾರ ಟೆನ್ನಿಸ್‌ನಲ್ಲಿ ಭಾರತ ಕಂಚು ಗೆದ್ದ ಬಳಿಕ ಮಹಿಳೆಯರ ಶಾಟ್‌ಪುಟ್‌ (Women’s Shot Put) ವಿಭಾಗದಲ್ಲಿ ಕಿರಣ್ ಬಲಿಯಾನ್ (Kiran Baliyan) ಕಂಚು ಗೆದ್ದು ಸಾಧನೆ ಮಾಡಿದ್ದಾರೆ. ಇದು ಈ ಬಾರಿ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಸಂದ ಮೊದಲ ಪದಕವಾಗಿದೆ. ಈ ಮೂಲಕ 8 ಚಿನ್ನ, 12 ಬೆಳ್ಳಿ, 13 ಕಂಚಿನ ಪದಕಗಳು ಸೇರಿ ಒಟ್ಟು 33 ಪದಕಗಳೊಂದಿಗೆ ಭಾರತ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ.

    ಇದಕ್ಕೂ ಮುನ್ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಶೂಟರ್​ ಪಲಕ್​ ಚಿನ್ನ ಗೆದ್ದರೆ, ಇಶಾ ಬೆಳ್ಳಿಯ ಪದಕ ಬಾಚಿಕೊಂಡಿದ್ದರು. ಇದನ್ನೂ ಓದಿ: Asian Games 2023: ಚಿನ್ನದ ಪದಕಕ್ಕೆ ಶಾರ್ಪ್‌ ಶೂಟ್‌ – 4ನೇ ಸ್ಥಾನಕ್ಕೆ ಜಿಗಿದ ಭಾರತ

    ಅಲ್ಲದೇ ಪುರುಷರ 50 ಮೀಟರ್ ರೈಫಲ್ 3ಪಿ ತಂಡ (ಮೂವರನ್ನೊಳಗೊಂಡ ತಂಡ) ಸ್ಪರ್ಧೆಯಲ್ಲಿ ಭಾರತ 1769 ಅಂಕಗಳೊಂದಿಗೆ ಚಿನ್ನ ಗೆದ್ದುಕೊಂಡಿತು. 1763 ಅಂಕಗಳಿಂದ ಬೆಳ್ಳಿ ಪದಕ ಹಾಗೂ 1748 ಅಂಕಗಳೊಂದಿಗೆ ಕಂಚಿನ ಪದಕ ದಕ್ಷಿಣ ಕೊರಿಯಾ ಪಾಲಾಯಿತು. ಇದನ್ನೂ ಓದಿ: ಹೈದರಾಬಾದ್‌ ಬಿರಿಯಾನಿ, ಬಟರ್‌ ಚಿಕನ್‌, ಲ್ಯಾಂಬ್‌ ಚಾಪ್ಸ್; ಭಾರತದಲ್ಲಿ ಪಾಕ್‌ ಕ್ರಿಕೆಟಿಗರಿಗೆ ಭರ್ಜರಿ ಬಾಡೂಟದ ಆತಿಥ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asian Games 2023: ಚಿನ್ನದ ಪದಕಕ್ಕೆ ಶಾರ್ಪ್‌ ಶೂಟ್‌ – 4ನೇ ಸ್ಥಾನಕ್ಕೆ ಜಿಗಿದ ಭಾರತ

    Asian Games 2023: ಚಿನ್ನದ ಪದಕಕ್ಕೆ ಶಾರ್ಪ್‌ ಶೂಟ್‌ – 4ನೇ ಸ್ಥಾನಕ್ಕೆ ಜಿಗಿದ ಭಾರತ

    ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ 2023ರಲ್ಲಿ (Asian Games 2023) ಭಾರತದ ಸ್ಪರ್ಧಿಗಳ ಪದಕದ ಬೇಟೆ ಮುಂದುವರಿದಿದೆ. 6ನೇ ದಿನವಾದ ಶುಕ್ರವಾರ ಭಾರತಕ್ಕೆ ಗನ್‌ ಶೂಟಿಂಗ್‌ನಲ್ಲಿ (Air Pistol Final) ಚಿನ್ನದ ಪದಕ ಬಂದಿದೆ.

    ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ (Air Pistol) ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಶೂಟರ್​ ಪಲಕ್​ (Palak) ಚಿನ್ನ ಗೆದ್ದರೆ, ಇಶಾ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರಿಂದ 5ನೇ ದಿನ 5ನೇ ಸ್ಥಾನದಲ್ಲಿದ್ದ ಭಾರತ ಶುಕ್ರವಾರ 8 ಚಿನ್ನ, 11 ಬೆಳ್ಳಿ, 12 ಕಂಚು ಸೇರಿ ಒಟ್ಟು 31 ಪದಕಗಳೊಂದಿಗೆ ಭಾರತ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. ಇದನ್ನೂ ಓದಿ: Asian Games 2023: ಈಕ್ವೆಸ್ಟ್ರೀಯನ್‌ನಲ್ಲಿ ಭಾರತಕ್ಕೆ ಕಂಚು – ಇತಿಹಾಸ ನಿರ್ಮಿಸಿದ ಅನುಷ್‌

    ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್​ನಲ್ಲಿ ಪಲಕ್ 242.1 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನ ಗೆದ್ದಿದ್ದಾರೆ. ಇಶಾ 239.7 ಅಂಕಗಳೊಂದಿಗೆ ಬೆಳ್ಳಿ ಪದಕದೊಂದಿಗೆ 2ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಪಾಕಿಸ್ತಾನದ ತಲಾತ್ 218.2 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

    ಇದು ಶುಕ್ರವಾರ ಭಾರತಕ್ಕೆ ಲಭಿಸಿದ 4ನೇ ಪದಕವಾಗಿದೆ. ಇದಕ್ಕಿಂತ ಮೊದಲು ಮಹಿಳೆಯರ ತಂಡ ಶೂಟಿಂಗ್​ನಲ್ಲಿ ಬೆಳ್ಳಿ, ಪುರುಷರ ತಂಡ ಶೂಟಿಂಗ್​ನಲ್ಲಿ ಚಿನ್ನ ಹಾಗೂ ಟೆನಿಸ್​ ಜೋಡಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಇದನ್ನೂ ಓದಿ: ಹೈದರಾಬಾದ್‌ ಬಿರಿಯಾನಿ, ಬಟರ್‌ ಚಿಕನ್‌, ಲ್ಯಾಂಬ್‌ ಚಾಪ್ಸ್; ಭಾರತದಲ್ಲಿ ಪಾಕ್‌ ಕ್ರಿಕೆಟಿಗರಿಗೆ ಭರ್ಜರಿ ಬಾಡೂಟದ ಆತಿಥ್ಯ

    ಪುರುಷರ ತಂಡಕ್ಕೂ ಚಿನ್ನ:
    ಶುಕ್ರವಾರ ಪುರುಷರ 50 ಮೀಟರ್ ರೈಫಲ್ 3ಪಿ ತಂಡ (ಮೂವರನ್ನೊಳಗೊಂಡ ತಂಡ) ಸ್ಪರ್ಧೆಯಲ್ಲಿ ಭಾರತ 1769 ಅಂಕಗಳೊಂದಿಗೆ ಚಿನ್ನ ಗೆದ್ದುಕೊಂಡಿತು. 1763 ಅಂಕಗಳಿಂದ ಬೆಳ್ಳಿ ಪದಕ ಹಾಗೂ 1748 ಅಂಕಗಳೊಂದಿಗೆ ಕಂಚಿನ ಪದಕ ದಕ್ಷಿಣ ಕೊರಿಯಾ ಪಾಲಾಯಿತು.

    ಮಹಿಳೆಯರ ತಂಡಕ್ಕೆ ಬೆಳ್ಳಿ
    ಇದರೊಂದಿಗೆ ಪಾಲಕ್, ಇಶಾ ಸಿಂಗ್ ಮತ್ತು ದಿವ್ಯಾ ತಡಿಗೋಲ್ ಅವರನ್ನೊಳಗೊಂಡ ಭಾರತೀಯ ಶೂಟಿಂಗ್ ತಂಡ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದೆ. 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಭಾರತ 1731 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರೆ, 1736 ಅಂಕ ಪಡೆದ ಚೀನಾ ಚಿನ್ನಕ್ಕೆ ಕೊರಳೊಡ್ಡಿತು. 1723 ಅಂಕಗಳನ್ನು ಪಡೆದುಕೊಂಡ ತೈವಾನ್‌ ಕಂಚಿನ ಪದಕ ಪಡೆದುಕೊಂಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]