Tag: India Flag

  • ಕರಾಟೆಯಲ್ಲಿ ಭಾರತೀಯನಿಗೆ ಸೋಲು – ಗೆದ್ದ ಬಳಿಕ ತ್ರಿವರ್ಣ ಧ್ವಜ ಹಿಡಿದು ಬಂದ ಪಾಕ್‌ ಅಥ್ಲೀಟ್

    ಕರಾಟೆಯಲ್ಲಿ ಭಾರತೀಯನಿಗೆ ಸೋಲು – ಗೆದ್ದ ಬಳಿಕ ತ್ರಿವರ್ಣ ಧ್ವಜ ಹಿಡಿದು ಬಂದ ಪಾಕ್‌ ಅಥ್ಲೀಟ್

    ಅಬುಧಾಬಿ: ದುಬೈನಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ (Karate Combat) ಭಾರತದ ರಾಣಾ ಸಿಂಗ್ ವಿರುದ್ಧ ಪಾಕಿಸ್ತಾನದ ಶಹಜೈಬ್ ರಿಂಧ್ 2-1 ಅಂತರದಲ್ಲಿ ಗೆಲುವು ಸಾಧಿಸಿದರು. ಇಬ್ಬರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದ್ರೆ ಕೊನೇ ಸುತ್ತಿನಲ್ಲಿ ಪಾಕ್‌ ಶಹಜೈಬ್ ರಿಂಧ್ (Shahzaib Rindh) ಬಲವಾದ ಪಂಚ್‌ನಿಂದ ಗೆಲುವು ಸಾಧಿಸಿದರು.

    ಗೆಲುವು ಸಾಧಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ (India And Pakistan) ಎರಡೂ ರಾಷ್ಟ್ರ ಧ್ವಜವನ್ನು (India Flag) ಹಿಡಿದು ಬಂದರು. ಇದು ಭಾರೀ ಕುತೂಹಲ ಮೂಡಿಸಿತ್ತು. ಬಳಿಕ ನಿರೂಪಕರು ಇದಕ್ಕೆ ಕಾರಣವೇನು ಎಂದು ಕೇಳಿದರು. ಇದನ್ನೂ ಓದಿ: ಬಿಜೆಪಿ ಸ್ವತಂತ್ರವಾಗಿಯೇ 350 ಸೀಟು ಗೆಲ್ಲುತ್ತೆ, ತಮಿಳುನಾಡಿನಲ್ಲಿ 5 ಸೀಟು ಖಚಿತ: ಆರ್ಥಿಕ ತಜ್ಞ ಭಲ್ಲಾ ಭವಿಷ್ಯ

    ಇದಕ್ಕೆ ಉತ್ತರಿಸಿದ ಅಥ್ಲೀಟ್‌, ಈ ಫೈಟ್‌ ನಡೆದಿದ್ದು, ಶಾಂತಿಗಾಗಿ. ನಾವು ಶತ್ರುಗಳಲ್ಲ, ಒಟ್ಟಿಗೆ ಇದ್ದೇವೆ. ನಾವು (ಭಾರತ ಮತ್ತು ಪಾಕಿಸ್ತಾನ) ಒಟ್ಟಿಗೆ ಇದ್ದರೆ ಏನೂ ಬೇಕಾದರೂ ಮಾಡಬಹುದು. ಈ ಫೈಟ್‌ ನಡೆದಿದ್ದು, ಶತ್ರುತ್ವಕ್ಕಾಗಿ ಅಲ್ಲ, ಪಾಕಿಸ್ತಾನ ಮತ್ತು ಭಾರತದ ಸ್ನೇಹಕ್ಕಾಗಿ. ನಾವು ಭಾರತದೊಂದಿಗೆ ಶಾಂತಿ ಮತ್ತು ಸ್ನೇಹವನ್ನು ಬಯಸುತ್ತೇವೆ ಎಂದು ಹೇಳಿದ್ದಾರೆ.

    ಸಲ್ಮಾನ್‌ ಖಾನ್‌ಗೆ ಧನ್ಯವಾದ:
    ಇದೇ ವೇಳೆ ಕರಾಟೆ ಫೈಟ್‌ ನೋಡಲು ಬಂದಿದ್ದ ಬಾಲಿವುಡ್‌ ಖ್ಯಾತ ನಟ ಸಲ್ಮಾನ್‌ ಖಾನ್‌ ಅವರಿಗೆ ಧನ್ಯವಾದ ಹೇಳಿದರು. ನಾನು ಚಿಕ್ಕವನಿಂದಲೂ ನಿಮ್ಮ ಸಿನಿಮಾಗಳನ್ನು ನೋಡುತ್ತಿದ್ದೇನೆ, ನಿಮ್ಮ ಮುಂದೆ ಫೈಟ್‌ ಮಾಡಿದ್ದಕ್ಕಾಗಿ ಖುಷಿಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಯನಾಡ್‌ನಲ್ಲಿ ರಾಹುಲ್‌ಗೆ ಬಿಗ್‌ ಶಾಕ್‌ – ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ

  • ಇದು ಭಾರತವಲ್ಲ, ಪಂಜಾಬ್ – ಮುಖದಲ್ಲಿ ಧ್ವಜವಿದ್ದ ಯುವತಿಗೆ ಸ್ವರ್ಣ ಮಂದಿರ ಪ್ರವೇಶಕ್ಕೆ ನಿಷೇಧ

    ಇದು ಭಾರತವಲ್ಲ, ಪಂಜಾಬ್ – ಮುಖದಲ್ಲಿ ಧ್ವಜವಿದ್ದ ಯುವತಿಗೆ ಸ್ವರ್ಣ ಮಂದಿರ ಪ್ರವೇಶಕ್ಕೆ ನಿಷೇಧ

    ಚಂಡೀಗಢ: ಮುಖದಲ್ಲಿ ಭಾರತದ ಧ್ವಜದ ಚಿತ್ರವನ್ನು ಬಿಡಿಸಿಕೊಂಡಿದ್ದಕ್ಕೆ ಪಂಜಾಬ್‍ನ ಅಮೃತಸರದಲ್ಲಿರುವ ಸ್ವರ್ಣ ಮಂದಿರದ (Golden Temple) ಪ್ರವೇಶಕ್ಕೆ ಅನುಮತಿ ನೀಡದ ವಿಚಾರ ಈಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

    ಯುವತಿಯೊಬ್ಬಳು (Woman) ಸ್ವರ್ಣ ಮಂದಿರದ ಒಳಗಡೆ ಹೋಗುತ್ತಿದ್ದಂತೆ ಅಲ್ಲಿಯ ಕಾವಲುಗಾರನೊಬ್ಬ ಆಕೆಯನ್ನು ತಡೆದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?: ಯುವತಿಯು ಕಾವಲುಗಾರನ ಬಳಿ ಇದು ಭಾರತವಲ್ಲವೇ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಆತ ಇದು ಪಂಜಾಬ್ ಎಂದು ಹೇಳುತ್ತಾನೆ. ಅದಾದ ಬಳಿಕ ಆಕೆಯ ಫೋನ್‍ನಲ್ಲಿ ವೀಡಿಯೋ ಮಾಡುತ್ತಿರುವುದನ್ನು ಗಮನಿಸಿ ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ.

    ಘಟನೆಗೆ ಸಂಬಂಧಿಸಿದಂತೆ ಸ್ವರ್ಣ ಮಂದಿರವನ್ನು ನಿರ್ವಹಣೆ ಮಾಡುವ ಶಿರೋಮಣಿ ಗುರುದ್ವಾರ ಪಬರ್ಂಧಕ್ ಸಮಿತಿಯು ಅಧಿಕಾರಿಯ ದುರ್ವರ್ತನೆಗಾಗಿ ಕ್ಷಮೆಯಾಚಿಸಿದೆ. ಆದರೆ ಯುವತಿಯ ಮುಖದ ಮೇಲೆ ಅಶೋಕ ಚಕ್ರವನ್ನು ಹೊಂದಿಲ್ಲದ ಕಾರಣ ಅದು ತ್ರಿವರ್ಣ ಧ್ವಜವಲ್ಲ ಎಂದು ವಾದಿಸಿದೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ – ಬಸವಕಲ್ಯಾಣ ಕ್ಷೇತ್ರದ ಅಖಾಡ ಹೇಗಿದೆ?

    ಎಸ್‍ಜಿಪಿಸಿಯ ಪ್ರಧಾನ ಕಾರ್ಯದರ್ಶಿ ಗುರ್ಚರಣ್ ಸಿಂಗ್ ಗ್ರೆವಾಲ್ ಮಾತನಾಡಿ, ಇದು ಸಿಖ್ ದೇಗುಲವಾಗಿದೆ. ಪ್ರತಿಯೊಂದು ಧಾರ್ಮಿಕ ಸ್ಥಳವು ತನ್ನದೇ ಆದ ಅಲಂಕಾರವನ್ನು ಹೊಂದಿದೆ. ನಾವು ಎಲ್ಲರಿಗೂ ಸ್ವಾಗತಿಸುತ್ತೇವೆ. ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿದರೆ ನಾವು ಕ್ಷಮೆಯಾಚಿಸುತ್ತೇವೆ. ಅವಳ ಮುಖದಲ್ಲಿರುವ ಧ್ವಜವು ನಮ್ಮ ರಾಷ್ಟ್ರಧ್ವಜವಾಗಿರಲಿಲ್ಲ. ಏಕೆಂದರೆ ಅದು ಅಶೋಕ ಚಕ್ರವನ್ನು ಹೊಂದಿರಲಿಲ್ಲ. ಇದು ರಾಜಕೀಯ ಧ್ವಜವಾಗಿರಬಹುದು ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ, ಆರ್‌ಎಸ್‌ಎಸ್‌ನಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ : ರಾಹುಲ್ ಗಾಂಧಿ

  • ಭಾರತ ಧ್ವಜ ಕೆಳಗಿಳಿಸಿ ಖಲಿಸ್ತಾನ್‌ ಧ್ವಜ ಹಾರಿಸಿದ ಪ್ರತ್ಯೇಕತಾವಾದಿಗಳು – ಭಾರತ ಸರ್ಕಾರ ಬೇಸರ

    ಭಾರತ ಧ್ವಜ ಕೆಳಗಿಳಿಸಿ ಖಲಿಸ್ತಾನ್‌ ಧ್ವಜ ಹಾರಿಸಿದ ಪ್ರತ್ಯೇಕತಾವಾದಿಗಳು – ಭಾರತ ಸರ್ಕಾರ ಬೇಸರ

    ಲಂಡನ್: ʼಖಲಿಸ್ತಾನ್‌ ಜಿಂದಾಬಾದ್‌..ʼ ಎಂದು ಕೂಗುತ್ತಾ ಖಲಿಸ್ತಾನ್‌ ಪ್ರತ್ಯೇಕತಾವಾದಿಗಳು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಿಂದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿರುವ ಘಟನೆ ನಡೆದಿದೆ. ಘಟನೆಗೆ ಬೇಸರ ವ್ಯಕ್ತಪಡಿಸಿರುವ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ಬ್ರಿಟನ್‌ನ ಹಿರಿಯ ರಾಜತಾಂತ್ರಿಕರಿಗೆ ಸಮನ್ಸ್‌ ನೀಡಿದೆ.

    ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರ ವಿರುದ್ಧ ಸಿಖ್ಖರ ಒಂದು ವರ್ಗದ ಪ್ರತಿಭಟನೆ ನಡೆಸುತ್ತಿದೆ. ಅಮೃತ್‌ಪಾಲ್‌ ಬಂಧನಕ್ಕೆ ಪಂಜಾಬ್‌ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಅಮೃತ್‌ಪಾಲ್‌ ಆಪ್ತರನ್ನು ವಶಕ್ಕೆ ಪಡೆದಿದೆ. ಇದೇ ಹೊತ್ತಿನಲ್ಲಿ ಲಂಡನ್‌ನಲ್ಲಿ ಖಲಿಸ್ತಾನ್ ಪ್ರತ್ಯೇಕತವಾದಿಗಳು‌ ಭಾರತದ ಧ್ವಜವನ್ನು ಕೆಳಗಿಳಿಸಿ ಘೋಷಣೆ ಕೂಗಿದ್ದಾರೆ. ಅಲ್ಲದೇ ಖಲಿಸ್ತಾನ್‌ ಧ್ವಜವನ್ನು ಹಾರಿಸಿದ್ದಾರೆ. ಈ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ ಪರಾರಿ – ಪಂಜಾಬ್‌ ಹಲವೆಡೆ ಇಂಟರ್‌ನೆಟ್‌ ಸ್ಥಗಿತ

    ಹೈಕಮಿಷನ್ ಆವರಣಕ್ಕೆ ಪ್ರವೇಶಿಸಲು ಹೇಗೆ ಅನುಮತಿಸಲಾಯಿತು? ಈ ಸಂದರ್ಭದಲ್ಲಿ ಬ್ರಿಟಿಷ್ ಭದ್ರತೆಯ ಸಂಪೂರ್ಣ ಅನುಪಸ್ಥಿತಿ ಕುರಿತು ವಿವರಣೆ ನೀಡುವಂತೆ ಭಾರತ ಸರ್ಕಾರ ಕೇಳಿದೆ. ಯುಕೆಯಲ್ಲಿರುವ ಭಾರತೀಯ ರಾಜತಾಂತ್ರಿಕ ಆವರಣ ಮತ್ತು ಸಿಬ್ಬಂದಿ ಭದ್ರತೆ ವಿಚಾರದಲ್ಲಿ ಯುಕೆ ಸರ್ಕಾರದ ಉದಾಸೀನತೆ ತೋರಿರುವುದು ಸರಿಯಲ್ಲ ಎಂದು ಸರ್ಕಾರ ಬೇಸರ ವ್ಯಕ್ತಪಡಿಸಿದೆ. ಇದನ್ನೂ ಓದಿ: ದೆಹಲಿ ಮೆಟ್ರೋ ಸೈಟ್ ಬಳಿ ಚೀಲದಲ್ಲಿತ್ತು ಮಹಿಳೆಯ ತಲೆ, ದೇಹದ ಇತರ ಭಾಗಗಳು

    ವೀಡಿಯೋದಲ್ಲಿ ಏನಿದೆ?
    ʼಖಲಿಸ್ತಾನ್‌ ಜಿಂದಾಬಾದ್‌ʼ ಎಂದು ಘೋಷಣೆ ಕೂಗುವ ಮೂಲಕ ಪ್ರತ್ಯೇಕತವಾದಿಗಳು, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಿಂದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದಾರೆ. ಅಲ್ಲದೇ ಖಲಿಸ್ತಾನ್‌ ಧ್ವಜವನ್ನು ಹಾರಿಸಿ ಪ್ರತಿಭಟನೆ ನಡೆಸಿದ್ದಾರೆ.

    ಕೋಮು ಸಂಘರ್ಷ ಹರಡಲು ಯತ್ನಿಸಿದ ಆರೋಪದಲ್ಲಿ, ಖಾಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಆತನ ಆಪ್ತರನ್ನು ಬಂಧಿಸಿದ್ದಾರೆ. ಅಮೃತಪಾಲ್ ಸಿಂಗ್‌ ಅವರ 78 ಬೆಂಬಲಿಗರನ್ನು ಬಂಧಿಸಲಾಗಿದೆ.

  • ಬೃಹತ್ ರಾಷ್ಟ್ರ ಧ್ವಜ ರ‍್ಯಾಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ

    ಬೃಹತ್ ರಾಷ್ಟ್ರ ಧ್ವಜ ರ‍್ಯಾಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ

    ಧಾರವಾಡ: ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ದಿನ ನಡೆದ ಬೃಹತ್ ರಾಷ್ಟ್ರ ಧ್ವಜ ರ‍್ಯಾಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಗರಿ ಸಿಕ್ಕಿದೆ.

    2021 ಆಗಸ್ಟ್ 15, ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದಂದು ಕಲಘಟಗಿ ಪಟ್ಟಣದಲ್ಲಿ ಮಾಜಿ ಸಚಿವರು ಹಾಗೂ ಧಾರವಾಡ ಜಿಲ್ಲೆಯ ಕಲಘಟಗಿ ಮತಕ್ಷೇತ್ರದ, ಮಾಜಿ ಶಾಸಕರಾದ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ನಡೆಸಿದ 2 ಕಿ.ಮೀ ಉದ್ದ ಹಾಗೂ 3 ಮೀಟರ್ ಅಗಲದ ಬೃಹತ್ ರಾಷ್ಟ್ರ ಧ್ವಜ ರ‍್ಯಾಲಿಗೆ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯ ಗರಿ ಸಂದಿದೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ತ್ರಿವರ್ಣ ಧ್ವಜದ ಜಾಥಾದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ ರಾಷ್ಟ್ರಾಭಿಮಾನ ಮೆರೆದಿದ್ದರು. ಇಷ್ಟೊಂದು ದೊಡ್ಡ ಹಾಗೂ ಅಗಲದ ರಾಷ್ಟ್ರ ಧ್ವಜ ಅನಾವರಣ ಹಾಗೂ ರ‍್ಯಾಲಿ ಈ ವರೆಗೆ ಭಾರತದಲ್ಲಿ ಎಲ್ಲೂ ನಡೆದಿಲ್ಲ. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    Flag of India

    ಜಾಥದಲ್ಲಿ ಬಳಸಿದ ತ್ರಿವರ್ಣ ಧ್ವಜದ ಒಟ್ಟು ತೂಕ 350 ಕೆ ಜಿ ಯಷ್ಟಿತ್ತು. 48 ಗಂಟೆಗಳನ್ನು ಈ ಧ್ವಜ ಸಿದ್ಧಪಡಿಸಲು ತೆಗೆದುಕೊಳ್ಳಲಾಗಿದ್ದು, 60 ಮಂದಿ ಇದರ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದರು. ಬೆಂಗಳೂರಿನ ಕೆ ಆರ್ ಮಾರುಕಟ್ಟೆಯ ಕಲ್ಯಾಣ್ ಟೆಕ್ಸ್‌ ಟೈಲ್ಸ್‌ನಲ್ಲಿ ಈ ಬೃಹತ್ ಧ್ವಜವನ್ನು ಸಿದ್ಧಪಡಿಸಲಾಗಿತ್ತು. ಇದನ್ನೂ ಓದಿ:  2ರೂ. ಬೆಂಕಿ ಪೊಟ್ಟಣದಲ್ಲಿ 36 ಕಡ್ಡಿ ಬದ್ಲು 50 ಕಡ್ಡಿ