Tag: India Coast Guard

  • ಗುಜರಾತ್‌ ಕರಾವಳಿಯಲ್ಲಿ ಭರ್ಜರಿ ಬೇಟೆ – 1,800 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

    ಗುಜರಾತ್‌ ಕರಾವಳಿಯಲ್ಲಿ ಭರ್ಜರಿ ಬೇಟೆ – 1,800 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

    ಗಾಂಧಿನಗರ: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ಭಾರತೀಯ ಕೋಸ್ಟ್ ಗಾರ್ಡ್ (ICG) ಜಂಟಿ ಕಾರ್ಯಾಚರಣೆಯಲ್ಲಿ, ಗುಜರಾತ್ ಕರಾವಳಿಯ ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯ ಬಳಿ 1,800 ಕೋಟಿ ರೂ. ಮೌಲ್ಯದ 300 ಕೆಜಿ ಮೆಥಾಂಫೆಟಮೈನ್ ಡ್ರಗ್ಸ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಜರಾತ್ ಎಟಿಎಸ್ ಹಿರಿಯ ಅಧಿಕಾರಿಯೊಬ್ಬರು (ATS official) ತಿಳಿಸಿದ್ದಾರೆ.

    ಭಾರೀ ಪ್ರಮಾಣದ ಸರಕು ಪತ್ತೆಯಾಗಿದೆ, ಆದ್ರೆ ಕಳ್ಳಸಾಗಣೆದಾರರು ಎಸ್ಕೇಪ್‌ ಆಗಲು ಪಾಕಿಸ್ತಾನ ಜಲ ಪ್ರದೇಶಕ್ಕೆ (Pakistani waters boundary) ಪಲಾಯನ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಕೇಂದ್ರ ಸರ್ಕಾರ ʻಡ್ರಗ್‌ ಮುಕ್ತ ಭಾರತʼ ನಿರ್ಮಾಣ ಮಾಡುವ ದೃಷ್ಟಿಯಿಂದ ದೇಶಾದ್ಯಂತ ಕರೆ ನೀಡಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಡ್ರಗ್‌ ದಂಧೆಯನ್ನು ಭೇದಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

    ಕಳೆದ ವಾರ ಅಸ್ಸಾಂನಲ್ಲಿ 24.32 ಕೋಟಿ ಮೌಲ್ಯದ 30.4 ಕೆಜಿ ಮೆಥಾಂಫೆಟಮೈನ್ ಡ್ರಗ್ಸ್‌ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಡ್ರಗ್ಸ್‌ ವಿರುದ್ಧ ಕಾರ್ಯಾಚರಣೆಗೆ ಕರೆ ನೀಡಿದ್ದರು. ಕೇಂದ್ರ ಸರ್ಕಾರದ ಪ್ರಕಾರ 2024ರ ವರ್ಷದಲ್ಲಿ ದೇಶಾದ್ಯಂತ ವಿವಿಧ ಎನ್‌ಸಿಬಿ ಮತ್ತು ಪೊಲೀಸ್‌ ಪಡೆಗಳು 16,914 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿವೆ ಎಂದು ತಿಳಿದುಬಂದಿದೆ.

    ಇನ್ನೂ 2004 ರಿಂದ 2014ರ ವರೆಗೆ 3.63 ಲಕ್ಷ ಕೆಜಿಯಷ್ಟು ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದ್ರೆ 2014 ರಿಂದ 2024ವರೆಗಿನ ಅವಧಿಯಲ್ಲಿ 24 ಲಕ್ಷ ಕೆಜಿ ಅಂದ್ರೆ ಹಿಂದಿನ ಸರ್ಕಾರದ ಅವಧಿಗಿಂತ 7 ಪಟ್ಟು ಹೆಚ್ಚು ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ, ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.

  • ಇದು ರಾಕಿಭಾಯ್‌ ಇಲ್ಲದ ರಿಯಲ್‌ KGF – ಸಮುದ್ರದಲ್ಲಿ ಸಿಕ್ತು 20 ಕೋಟಿ ಮೌಲ್ಯದ ಚಿನ್ನ..!

    ಇದು ರಾಕಿಭಾಯ್‌ ಇಲ್ಲದ ರಿಯಲ್‌ KGF – ಸಮುದ್ರದಲ್ಲಿ ಸಿಕ್ತು 20 ಕೋಟಿ ಮೌಲ್ಯದ ಚಿನ್ನ..!

    ಚೆನ್ನೈ: ಯಶ್‌ ನಟನೆಯ KGF-2 ಸಿನಿಮಾ ನೀವೆಲ್ಲರೂ ನೋಡಿಯೇ ಇರುತ್ತೀರಾ. ಕೊನೆಯಲ್ಲಿ ರಾಕಿಭಾಯ್‌ ಯಶ್‌ ಇಡೀ ಹಡಗಿನ ತುಂಬಾ ಚಿನ್ನದೊಂದಿಗೆ ಸಮುದ್ರಕ್ಕೆ ಬೀಳುತ್ತಾನೆ. ಎಷ್ಟೇ ಪ್ರಯತ್ನಿಸಿದರೂ ಅಲ್ಲಿಂದ ಚಿನ್ನ ಹೊರತೆಯಲಾಗುವುದಿಲ್ಲ ಎಂದು ಸುಮ್ಮನಾಗಿಬಿಡುತ್ತಾರೆ. ಅದೇ ರೀತಿಯ ಘಟನೆಯೊಂದು ತಮಿಳುನಾಡಿನ (Tamil Nadu) ರಾಮೇಶ್ವರಂನಲ್ಲಿ ನಡೆದಿದ ಸಮುದ್ರದಕ್ಕೆ ಎಸೆದಿದ್ದ 20 ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನ ಹೊತೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ರಾಮೇಶ್ವರಂ ಮಂಟಪ ಪ್ರದೇಶದಿಂದ ಸಮುದ್ರ ಮಾರ್ಗವಾಗಿ ಭಾರೀ ಮೌಲ್ಯದ ಚಿನ್ನವನ್ನ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಅಧಿಕಾರಿಗಳಿಗೆ ಅಪರಿಚಿತ ದೋಣಿ ಹೋಗುತ್ತಿರೋದು ಗಮನಕ್ಕೆ ಬಂದಿತ್ತು. ಖಚಿತ ಮಾಹಿತಿ ಪಡೆದ ಭಾರತೀಯ ಕೋಸ್ಟ್ ಗಾರ್ಡ್ (India Coast Guard) ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (Revenue Intelligence) ಜಂಟಿಯಾಗಿ ದಾಳಿ ನಡೆಸಿತ್ತು. ಅಧಿಕಾರಿಗಳನ್ನು ನೋಡಿದ ದೋಣಿಯಲ್ಲಿದ್ದವರು ತಮ್ಮಲ್ಲಿದ್ದ ಒಂದು ಬಾಕ್ಸನ್ನು ಸಮುದ್ರಕ್ಕೆ ಎಸೆದಿದ್ದರು. ಅಧಿಕಾರಿಗಳು ದೋಣಿಯಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಎಲ್ಲರೂ ಅಸ್ಪಷ್ಟ ಉತ್ತರ ನೀಡುತ್ತಿದ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ

    ಕೊನೆಗೆ ಸಮುದ್ರಕ್ಕೆ ಎಸೆದ ಬಾಕ್ಸ್ ಪತ್ತೆ ಮಾಡಲು ಸ್ಕೂಬಾ ಡೈವರ್‌ಗಳ ತಂಡ ನಿಯೋಜಿಸಲಾಯಿತು. ಜೊತೆಗೆ ಸ್ಥಳೀಯ ಮೀನುಗಾರರ ಸಹಾಯ ಪಡೆದುಕೊಳ್ಳಲಾಗಿತ್ತು. ಶೋಧ ಕಾರ್ಯ ನಡೆದ 2ನೇ ದಿನ ಸಮುದ್ರದಲ್ಲಿ ಎಸೆಯಲಾಗಿದ್ದ ಬಾಕ್ಸ್​ ಪತ್ತೆಯಾಯಿತು. ಸ್ಕೂಬಾ ಡೈವರ್ಸ್​ಗಳು ಬಾಕ್ಸ್​ನ್ನು ಮೇಲೆತ್ತಿದರು. ಅದರಲ್ಲಿ 20 ಕೋಟಿಗೂ ಅಧಿಕ ಮೌಲ್ಯದ ಗೋಲ್ಡ್‌ ಬಿಸ್ಕೆಟ್‌ ಅನ್ನು ನೋಡಿ ಅಧಿಕಾರಿಗಳೇ ಶಾಕ್‌ ಆದರು. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬ, ಗಾಯಾಳುಗಳಿಗೆ ಪರಿಹಾರ ಘೋಷಣೆ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಕೆಲ ದಿನಗಳ ಹಿಂದೆಯೂ 17.74 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿತ್ತು.