ನವದೆಹಲಿ: ಭಾರತೀಯ ಮತ್ತು ಚೀನಾದ ಸೈನಿಕರು ಲಡಾಖ್ ಸೇರಿದಂತೆ ವಾಸ್ತವ ನಿಯಂತ್ರಣ ರೇಖೆಯ ಏಳು ಸ್ಥಳಗಳಲ್ಲಿ ದೀಪಾವಳಿ ಪ್ರಯುಕ್ತ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡರು.
ಕಳೆದ ವಾರ ಗಸ್ತು ಒಪ್ಪಂದಕ್ಕೆ ಅನುಗುಣವಾಗಿ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಿಂದ ಉಭಯ ದೇಶಗಳು ಸೇನಾ ವಾಪಸಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಗಡಿಯಲ್ಲಿ ಶಾಂತಿ ಕಾಪಾಡುವ ಒಪ್ಪಂದ ಯಶಸ್ವಿಯಾದ ಹಿನ್ನೆಲೆ ಎರಡೂ ದೇಶಗಳ ಸೈನಿಕರು ಪರಸ್ಪರ ದೀಪಾವಳಿ ಸಿಹಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದರು.
ಲಡಾಖ್‌ನ ಚುಶುಲ್ ಮಾಲ್ಡೊ ಮತ್ತು ದೌಲತ್ ಬೇಗ್ ಓಲ್ಡಿ, ಅರುಣಾಚಲ ಪ್ರದೇಶದ ಬಂಚಾ (ಕಿಬುಟು ಬಳಿ) ಮತ್ತು ಬುಮ್ಲಾ ಮತ್ತು ಸಿಕ್ಕಿಂನ ನಾಥುಲಾದಲ್ಲಿ ಸಿಹಿಯನ್ನು ವಿನಿಮಯ ಮಾಡಿಕೊಳ್ಳಲಾಗಿದೆ.
ಡೆಪ್ಸಾಂಗ್ ಬಯಲು ಪ್ರದೇಶಗಳು ಮತ್ತು ಡೆಮ್‌ಚೋಕ್‌ನಿಂದ ತಾತ್ಕಾಲಿಕ ಶಿಬಿರಗಳನ್ನು ಒಳಗೊಂಡಂತೆ ಮಿಲಿಟರಿ ಸಿಬ್ಬಂದಿ ಮತ್ತು ಮೂಲಸೌಕರ್ಯಗಳನ್ನು ತೆಗೆದುಹಾಕಲು ಮತ್ತು 2020 ರ ಏಪ್ರಿಲ್‌ನ ಪೂರ್ವದ ಸ್ಥಾನಗಳಿಗೆ ತಮ್ಮ ತಮ್ಮ ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.
2020ರ ಮೇ ಮತ್ತು ಜೂನ್ ತಿಂಗಳಲ್ಲಿ ಪ್ಯಾಂಗೊಂಗ್ ಸರೋವರ ಮತ್ತು ಗಾಲ್ವಾನ್ ಪ್ರದೇಶಗಳಲ್ಲಿ ಘರ್ಷಣೆಗಳು ನಡೆದಿದ್ದವು. ಸುಮಾರು ನಾಲ್ಕು ವರ್ಷಗಳ ಮಿಲಿಟರಿ ಮತ್ತು ರಾಜತಾಂತ್ರಿಕ ಬಿಕ್ಕಟ್ಟು ಈಗ ಕೊನೆಗೊಂಡಿದೆ.
ಶ್ರೀನಗರ: ಚೀನಾ ಗಡಿ ಸಂಘರ್ಷ ವಿಚಾರದಲ್ಲಿ (India China Border Row) ಭಾರತ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿಧಾನ ಅತ್ಯಂತ ಅಪಾಯಕಾರಿಯಾಗಿದೆ. ಇದು ಚೀನಾ ತನ್ನ ಆಕ್ರಮಣಕಾರಿ ಕೆಲಸಗಳನ್ನ ಮುಂದುವರಿಸಲು ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡುತ್ತದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್‌ಗಾಂಧಿ (Rahul Gandhi) ಎಚ್ಚರಿಸಿದ್ದಾರೆ.
ಚೀನಾ ಗಡಿ ಸಂಘರ್ಷದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (S Jaishankar) ಸ್ಪಷ್ಟನೆ ನೀಡಿದ ಒಂದು ದಿನದ ನಂತರ ರಾಹುಲ್ ಹಾಂಧಿ ಮತ್ತೊಮ್ಮೆ ಲಡಾಖ್‌ನ (Ladakh) ವಿಷಯ ಪ್ರಸ್ತಾಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಗಾಂಧಿ, ಲಡಾಖ್‌ನ ಸುಮಾರು 2 ಸಾವಿರ ಚದರ ಕಿ.ಮೀ ಭಾರತೀಯ ಭೂಭಾಗವು ಚೀನಾದ ವಶದಲ್ಲಿದೆ ಎಂದು ಒತ್ತಿ ಹೇಳಿದ್ದಾರೆ.
ಚೀನಿಯರು ಭಾರತದ ಯಾವುದೇ ಭೂಪ್ರದೇಶವನ್ನ ವಶಪಡಿಸಿಕೊಂಡಿಲ್ಲ ಅನ್ನೋ ಅನಿಸಿಕೆ ದೇಶಕ್ಕೆ ಇದೆ. ಇದರೊಂದಿಗೆ ಚೀನಿಯರು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನ ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರ (Government Of India) ಅನುಸರಿಸುತ್ತಿರುವ ವಿಧಾನ ಅತ್ಯಂತ ಅಪಾಯಕಾರಿಯಾಗಿದೆ. ಇದು ಚೀನಾ ತನ್ನ ಆಕ್ರಮಣಕಾರಿ ಕೆಲಸಗಳನ್ನ ಮುಂದುವರಿಸಲು ಆತ್ಮವಿಶ್ವಾಸ ಹೆಚ್ಚಿಸಿದಂತೆ ಮಾಡಿದೆ ಎಂದಿದ್ದಾರೆ.
ನಾನು ಇತ್ತೀಚೆಗೆ ಕೆಲವು ಮಾಜಿ ಸೈನಿಕರನ್ನ ಭೇಟಿ ಮಾಡಿದ್ದೇನೆ. ಲಡಾಖ್‌ನ ನಿಯೋಗವೂ 2 ಸಾವಿರ ಚದರ ಕೀ.ಮೀ. ಭಾರತೀಯ ಭೂಪ್ರದೇಶವನ್ನ ಚೀನೀಯರು ವಶಪಡಿಸಿಕೊಂಡಿದ್ದಾರೆ ಎಂಬುದನ್ನ ಸ್ಪಷ್ಟವಾಗಿ ಹೇಳಿದ್ದಾರೆ. ಭಾರತೀಯ ಭೂಪ್ರದೇಶದಲ್ಲಿದ್ದ ಹಲವು ಗಸ್ತು ಕೇಂದ್ರಗಳು ಚೀನಿಯರ ವಶದಲ್ಲಿವೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಚೀನಾ ಈಗಾಗಲೇ `ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ನಾವು ನಿಮ್ಮ ಭೌಗೋಳಿಕತೆಯನ್ನು ಬದಲಾಯಿಸುತ್ತೇವೆ, ಲಡಾಖ್ ಪ್ರವೇಶಿಸುತ್ತೇವೆ, ನಾವು ಅರುಣಾಚಲ ಪ್ರದೇಶವನ್ನ ಪ್ರವೇಶ ಮಾಡ್ತೀವಿ’ ಎಂದು ಎಚ್ಚರಿಕೆ ನೀಡಿದೆ. ಇದನ್ನ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕಮಲ್ ಹಾಸನ್ ಅವರೊಂದಿಗಿನ ಸಂಭಾಷಣೆಯಲ್ಲಿ ಚರ್ಚಿಸಲಾಗಿತ್ತು.
ಚೀನಾ 1962ರಲ್ಲೇ ಆ ಭೂಮಿಯನ್ನ ಆಕ್ರಮಿಸಿತ್ತು. ಕೆಲವರು ರಾಜಕೀಯಕ್ಕಾಗಿ ಚೀನಾ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. 1962ರ ಚೀನಾ ಗಡಿ ಸಮಸ್ಯೆ ಇತ್ತೀಚೆಗೆ ಆರಂಭವಾಗಿದ್ದು ಎನ್ನುವಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಚೀನಾ ಭೂಪ್ರದೇಶ ಆಕ್ರಮಣ ಬಗ್ಗೆ ಮಾತನಾಡುವಾಗ ಅವರು ಸತ್ಯ ಹೇಳುವುದಿಲ್ಲ. ಆ ಘಟನೆ ನಿನ್ನೆ ಆಗಿದೆ ಎಂಬ ಭಾವನೆ ಬರುವಂತೆ ಮಾತನಾಡುತ್ತಾರೆ. ಅಂತಹ ಜನರು ಉದ್ದೇಶಪೂರ್ವಕವಾಗಿ ಚೀನಾದ ಬಗ್ಗೆ ತಪ್ಪು ಮಾಹಿತಿ ಹರಡುತ್ತಾರೆ ಎಂದು ಜೈಶಂಕರ್ ವಾಗ್ದಾಳಿ ನಡೆಸಿದ್ದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: `ಗಡಿ ಭಾಗದಲ್ಲಿ ಚೀನಾಗೆ (China) ಪ್ರಧಾನಿ ಮೋದಿಯವರು (Narendra Modi) ಹೋರಾಟವಿಲ್ಲದೇ ಭೂಪ್ರದೇಶವನ್ನು ಬಿಟ್ಟುಕೊಟ್ಟಿದ್ದಾರೆ’ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಟೀಕೆಗೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ (S Jaishankar) ತಿರುಗೇಟು ನೀಡಿದ್ದು, `ಚೀನಾ 1962ರಲ್ಲೇ ಆ ಭೂಮಿಯನ್ನ ಆಕ್ರಮಿಸಿತ್ತು’ ಎಂದು ಹೇಳಿದ್ದಾರೆ.
ಕೆಲವರು ರಾಜಕೀಯಕ್ಕಾಗಿ ಚೀನಾ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. 1962ರ ಚೀನಾ ಗಡಿ ಸಮಸ್ಯೆ ಇತ್ತೀಚೆಗೆ ಆರಂಭವಾಗಿದ್ದು ಎನ್ನುವಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
`ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 100 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಚೀನಾಕ್ಕೆ ಹೋರಾಟವಿಲ್ಲದೇ ನೀಡಿದ್ದಾರೆ. ಅದನ್ನು ಹೇಗೆ ಹಿಂಪಡೆಯುತ್ತಾರೆ?’ ಎಂದು ರಾಹುಲ್ ಗಾಂಧಿ ಸರ್ಕಾರವನ್ನು ಪ್ರಶ್ನಿಸಿದ್ದರು. ಅಲ್ಲದೇ ಇತ್ತೀಚೆಗೆ ನಟ, ರಾಜಕಾರಣಿ ಕಮಲ್ ಹಾಸನ್ (Kamal Hassan) ಅವರೊಂದಿಗಿನ ಸಂವಾದದಲ್ಲಿಯೂ ರಾಹುಲ್ ಮತ್ತೊಮ್ಮೆ ಚೀನಾವು ಭಾರತದ 2,000 ಚದರ ಮೀಟರ್ ಭೂಪ್ರದೇಶ ಆಕ್ರಮಿಸಿಕೊಂಡಿದೆ. ಆದರೂ ನಮ್ಮ ಪ್ರಧಾನಿ ಮೋದಿ ಏನನ್ನೂ ಹೇಳಲಿಲ್ಲ’ ಎಂದು ಟೀಕಿಸಿದ್ದರು.
ಇದಕ್ಕೆ ಜೈಶಂಕರ್ ತಿರುಗೇಟು ನೀಡಿದ್ದು, `ಚೀನಾ ಭೂಪ್ರದೇಶ ಆಕ್ರಮಣ ಬಗ್ಗೆ ಮಾತನಾಡುವಾಗ ಅವರು ಸತ್ಯ ಹೇಳುವುದಿಲ್ಲ. ಆ ಘಟನೆ ನಿನ್ನೆ ಆಗಿದೆ ಎಂಬ ಭಾವನೆ ಬರುವಂತೆ ಮಾತನಾಡುತ್ತಾರೆ. ಅಂತಹ ಜನರು ಉದ್ದೇಶಪೂರ್ವಕವಾಗಿ ಚೀನಾದ ಬಗ್ಗೆ ತಪ್ಪು ಮಾಹಿತಿ ಹರಡುತ್ತಾರೆ ಎಂದು ಜೈಶಂಕರ್ ಹೇಳಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕೋವಿಡ್ ಹಾವಳಿ – ಮೊದಲ ಬಾರಿಗೆ ಕೊರೊನಾ ಬಗ್ಗೆ ಜಿನ್‌ಪಿಂಗ್ ಮಾತು
ಬಹುತೇಕ ವಿದೇಶಿ ಮಾಧ್ಯಮಗಳು ಭಾರತ ಸರ್ಕಾರವನ್ನು `ಹಿಂದೂ ರಾಷ್ಟ್ರೀಯವಾದಿ’ (Hindu Nationalist) ಎಂದು ಉಲ್ಲೇಖಿಸುತ್ತವೆ. ಆದರೆ ಅಮೆರಿಕ ಹಾಗೂ ಇತರ ಯುರೋಪ್ ರಾಷ್ಟ್ರಗಳ ಸರ್ಕಾರಗಳನ್ನು ಅವರು `ಕ್ರಿಶ್ಚಿಯನ್ ರಾಷ್ಟ್ರವಾದಿ’ ಎಂದೇಕೆ ಕರೆಯುವುದಿಲ್ಲ? ಬಹುತೇಕ ವಿದೇಶಿ ಮಾಧ್ಯಮಗಳು ಧರ್ಮ ವಿಶ್ಲೇಷಣೆ ಪದಗಳನ್ನ ಭಾರತಕ್ಕೆ ಮಾತ್ರ ಸಿಮೀತಗೊಳಿಸಿವೆ. ಆದರೆ ಭಾರತ ಇಡೀ ವಿಶ್ವಕ್ಕಾಗಿ ಹೆಚ್ಚಿನದನ್ನು ಮಾಡಲು ಬಯಸುತ್ತದೆ ಎಂಬುದು ಅವರಿಗೆ ಅರ್ಥವೇ ಆಗುತ್ತಿಲ್ಲ ಎಂದು ಜೈಶಂಕರ್ ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]