ನವದೆಹಲಿ: ಭಾರತೀಯ ಮತ್ತು ಚೀನಾದ ಸೈನಿಕರು ಲಡಾಖ್ ಸೇರಿದಂತೆ ವಾಸ್ತವ ನಿಯಂತ್ರಣ ರೇಖೆಯ ಏಳು ಸ್ಥಳಗಳಲ್ಲಿ ದೀಪಾವಳಿ ಪ್ರಯುಕ್ತ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡರು.
ಕಳೆದ ವಾರ ಗಸ್ತು ಒಪ್ಪಂದಕ್ಕೆ ಅನುಗುಣವಾಗಿ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಿಂದ ಉಭಯ ದೇಶಗಳು ಸೇನಾ ವಾಪಸಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಗಡಿಯಲ್ಲಿ ಶಾಂತಿ ಕಾಪಾಡುವ ಒಪ್ಪಂದ ಯಶಸ್ವಿಯಾದ ಹಿನ್ನೆಲೆ ಎರಡೂ ದೇಶಗಳ ಸೈನಿಕರು ಪರಸ್ಪರ ದೀಪಾವಳಿ ಸಿಹಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದರು.
ಲಡಾಖ್‌ನ ಚುಶುಲ್ ಮಾಲ್ಡೊ ಮತ್ತು ದೌಲತ್ ಬೇಗ್ ಓಲ್ಡಿ, ಅರುಣಾಚಲ ಪ್ರದೇಶದ ಬಂಚಾ (ಕಿಬುಟು ಬಳಿ) ಮತ್ತು ಬುಮ್ಲಾ ಮತ್ತು ಸಿಕ್ಕಿಂನ ನಾಥುಲಾದಲ್ಲಿ ಸಿಹಿಯನ್ನು ವಿನಿಮಯ ಮಾಡಿಕೊಳ್ಳಲಾಗಿದೆ.
ಡೆಪ್ಸಾಂಗ್ ಬಯಲು ಪ್ರದೇಶಗಳು ಮತ್ತು ಡೆಮ್‌ಚೋಕ್‌ನಿಂದ ತಾತ್ಕಾಲಿಕ ಶಿಬಿರಗಳನ್ನು ಒಳಗೊಂಡಂತೆ ಮಿಲಿಟರಿ ಸಿಬ್ಬಂದಿ ಮತ್ತು ಮೂಲಸೌಕರ್ಯಗಳನ್ನು ತೆಗೆದುಹಾಕಲು ಮತ್ತು 2020 ರ ಏಪ್ರಿಲ್‌ನ ಪೂರ್ವದ ಸ್ಥಾನಗಳಿಗೆ ತಮ್ಮ ತಮ್ಮ ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.
2020ರ ಮೇ ಮತ್ತು ಜೂನ್ ತಿಂಗಳಲ್ಲಿ ಪ್ಯಾಂಗೊಂಗ್ ಸರೋವರ ಮತ್ತು ಗಾಲ್ವಾನ್ ಪ್ರದೇಶಗಳಲ್ಲಿ ಘರ್ಷಣೆಗಳು ನಡೆದಿದ್ದವು. ಸುಮಾರು ನಾಲ್ಕು ವರ್ಷಗಳ ಮಿಲಿಟರಿ ಮತ್ತು ರಾಜತಾಂತ್ರಿಕ ಬಿಕ್ಕಟ್ಟು ಈಗ ಕೊನೆಗೊಂಡಿದೆ.
ನವದೆಹಲಿ: ನಿಗದಿತ ಟೈಮ್‌ಲೈನ್‌ನಂತೆ ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ಸೇನಾ ವಾಪಸಾತಿ ಪ್ರಕ್ರಿಯೆ ಪೂರ್ಣಗೊಳಿಸಿವೆ. ದೀಪಾವಳಿಯ ಸಂದರ್ಭದಲ್ಲಿ ಉಭಯ ದೇಶಗಳ ಸೈನಿಕರು ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳಲಿದ್ದಾರೆ.
ಸೇನಾ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಗಸ್ತು ತಿರುಗಲಾಗುವುದು ಎಂದು ಮೂಲಗಳು ತಿಳಿಸಿವೆ. ಪರಿಶೀಲನೆ ಪ್ರಕ್ರಿಯೆ ಮುಂದುವರಿದಿದ್ದು, ಗಸ್ತು ತಿರುಗುವ ವಿಧಾನಗಳನ್ನು ಸೇನಾ ಕಮಾಂಡರ್‌ಗಳು ನಿರ್ಧರಿಸುತ್ತಾರೆ ಎಂದು ಭಾರತೀಯ ಸೇನೆಯ ಮೂಲಗಳು ಬುಧವಾರ ತಿಳಿಸಿವೆ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಪಿಎಂ ನರೇಂದ್ರ ಮೋದಿ ನಡುವೆ ಬ್ರಿಕ್ಸ್ ಶೃಂಗಸಭೆಯಲ್ಲಿ ಬಹಳ ಮಹತ್ವದ ಸಭೆ ನಡೆಯಿತು. ಉಭಯ ದೇಶಗಳ ನಡುವಿನ ಸಂಬಂಧಗಳ ಮತ್ತಷ್ಟು ಅಭಿವೃದ್ಧಿಗೆ ಮಾರ್ಗಸೂಚಿಯಾಗಲಿದ್ದಾರೆ. ಭವಿಷ್ಯದಲ್ಲಿ ನಮ್ಮ ಸಂಬಂಧಗಳು ಸುಗಮವಾಗಿ ಮುಂದುವರಿಯುತ್ತವೆ ಎಂದು ರಾಯಭಾರಿ ತಿಳಿಸಿದ್ದಾರೆ.
ಎರಡು ನೆರೆಹೊರೆಯ ದೇಶಗಳಾಗಿ ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರುವುದು ಸಹಜ. ಅವುಗಳನ್ನು ಹೇಗೆ ನಿಭಾಯಿಸುವುದು ಮತ್ತು ಪರಿಹರಿಸುವುದು ಎಂಬುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಈ ಭಿನ್ನಾಭಿಪ್ರಾಯಗಳನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಉಭಯ ನಾಯಕರ ಭೇಟಿಯು ನಮಗೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಅ.21 ರಂದು, ಭಾರತವು ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನ ಎರಡು ವಿವಾದಿತ ಪ್ರದೇಶಗಳಿಗೆ ಗಸ್ತು ಒಪ್ಪಂದ ಮಾಡಿಕೊಂಡಿದೆ ಎಂದು ಘೋಷಿಸಿತು. 2020 ರಲ್ಲಿ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಪ್ರಾರಂಭವಾಗುವ ಮೊದಲು ಇದ್ದ ಸ್ಥಾನಗಳಿಗೆ ಪಡೆಗಳು ಹಿಂತಿರುಗುತ್ತವೆ.
ಭಾರತ ಮತ್ತು ಚೀನಾ ತಮ್ಮ ವಿವಾದಿತ ಗಡಿಯಲ್ಲಿ ಮಿಲಿಟರಿ ಬಿಕ್ಕಟ್ಟನ್ನು ಕೊನೆಗೊಳಿಸಲು ಮಹತ್ವದ ಒಪ್ಪಂದ ಮಾಡಿಕೊಂಡಿವೆ. ಉಭಯ ದೇಶಗಳ ದಶಕಗಳ ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ಘರ್ಷಣೆಗಳಿಗೆ ಇತಿಶ್ರಿ ಹಾಡಲು ಮುಂದಡಿ ಇಟ್ಟಿವೆ. ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಪರಸ್ಪರ ಹ್ಯಾಂಡ್ ಶೇಕ್ ಮಾಡಿ ಶಾಂತಿ ಮಾತುಕತೆಗೆ ಮುನ್ನುಡಿ ಬರೆದರು. ವಿಶ್ವದ ದೊಡ್ಡ ಆರ್ಥಿಕತೆಗಳು ಸ್ನೇಹ-ಸೌಹಾರ್ದದ ಉದ್ದೇಶ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶಾಂತಿ ಒಪ್ಪಂದ ಮಾಡಿಕೊಂಡವು. ಒಪ್ಪಂದದ ಬೆನ್ನಲ್ಲೇ ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ನಿಯೋಜಿಸಿರುವ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಶುರು ಮಾಡಿವೆ.
ಏಷ್ಯಾದ ದೈತರ ನಡುವಿನ ಒಪ್ಪಂದದಿಂದ ದೊಡ್ಡ ಗಡಿ ವಿವಾದವೇನು ಬಗೆಹರಿದಿಲ್ಲ. ಆದರೆ ಒಪ್ಪಂದವು ಲಡಾಖ್ ಪ್ರದೇಶದ ಗಡಿಯುದ್ದಕ್ಕೂ ಎರಡೂ ದೇಶಗಳ ಗಸ್ತು ಪುನಾರಂಭಕ್ಕೆ ಅವಕಾಶ ಕಲ್ಪಿಸಿದೆ. ಜೊತೆಗೆ ತಮ್ಮ ಪ್ರಾದೇಶಿಕ ಹಕ್ಕುಗಳನ್ನು ಪ್ರತಿಪಾದಿಸಲು ಅನುವು ಮಾಡಿಕೊಟ್ಟಿದೆ. ಅಷ್ಟಕ್ಕೂ ಏನಿದು ಭಾರತ-ಚೀನಾ ಗಡಿ ಒಪ್ಪಂದ? ಗಡಿ ವಿವಾದ ಏನು? ಗಡಿ ಸಂಘರ್ಷ ತಲೆದೋರಿದ್ಹೇಗೆ? ಈಗ ಎರಡೂ ದೇಶಗಳು ಮಾಡಿಕೊಂಡ ಒಪ್ಪಂದ ಏನು ಮತ್ತು ಉದ್ದೇಶವೇನು? ಒಪ್ಪಂದದಿಂದ ಇಬ್ಬರಿಗೂ ಆಗುವ ಪ್ರಯೋಜನಗಳೇನು? ಬನ್ನಿ ತಿಳಿಯೋಣ.
ಏನು ಒಪ್ಪಂದ?
ರಷ್ಯಾದ ಕಜಾನ್‌ನಲ್ಲಿ ಈಚೆಗೆ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಪಾಲ್ಗೊಂಡಿದ್ದರು. ಇಬ್ಬರೂ ನಾಯಕರ ಜೊತೆಗೆ ದ್ವಿಪಕ್ಷೀಯ ಮಾತುಕತೆಯಾಯಿತು. ಈ ವೇಳೆ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಸೇನೆಯ ಮತ್ತು ಗಸ್ತು ತಿರುಗುವಿಕೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡರು. ಎಲ್‌ಎಸಿ ಪಶ್ಚಿಮದಲ್ಲಿ ಲಡಾಖ್‌ನಿಂದ ಭಾರತದ ಪೂರ್ವ ರಾಜ್ಯವಾದ ಅರುಣಾಚಲ ಪ್ರದೇಶದ ವರೆಗೆ (3,488 ಕಿಮೀ) ವ್ಯಾಪಿಸಿದೆ.
ಗಡಿ ವಿವಾದ ಹುಟ್ಟಿಕೊಂಡಿದ್ಹೇಗೆ?
ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಘರ್ಷಕ್ಕೆ ಏಳು ದಶಕಗಳ ಇತಿಹಾಸವಿದೆ. ಗಡಿಯ ಗಡಿರೇಖೆಯ ವಿಚಾರವಾಗಿ 1962ರಲ್ಲಿ ಎರಡೂ ರಾಷ್ಟ್ರಗಳ ನಡುವೆ ರಕ್ತಸಿಕ್ತ ಯುದ್ಧ ನಡೆಯಿತು. ಯುದ್ಧದಲ್ಲಿ ಭಾರತವು ಅವಮಾನಕರ ಸೋಲನ್ನು ಅನುಭವಿಸಿತು. ಲಡಾಖ್‌ನ ಈಶಾನ್ಯದಲ್ಲಿರುವ ಅಕ್ಸಾಯ್ ಚಿನ್‌ನಲ್ಲಿ ಒಂದು ಭಾಗವನ್ನು ಭಾರತ ಕಳೆದುಕೊಂಡಿತು. ಇದು ಇಬ್ಬರ ನಡುವಿನ ವಿವಾದದ ಕೇಂದ್ರಬಿಂದುವಾಗಿ ಉಳಿಯಿತು.
ಎಲ್‌ಎಸಿ ರೂಪಿಸಿಕೊಂಡ ಭಾರತ-ಚೀನಾ
1962ರ ಯುದ್ಧದ ನಂತರ ಎರಡೂ ದೇಶಗಳು ಪರಸ್ಪರ ಮಾತುಕತೆಯೊಂದಿಗೆ ಎಲ್‌ಎಸಿ ರೂಪಿಸಿಕೊಂಡವು. 1990ರ ದಶಕದಲ್ಲಿ ಗಡಿ ಒಪ್ಪಂದದ ನಂತರ ರಾಜತಾಂತ್ರಿಕ ಸಂಬಂಧ ಚೇತರಿಸಿಕೊಂಡಿತು. 1993 ಮತ್ತು 1996ರ ಒಪ್ಪಂದಗಳು ಇಬ್ಬರ ನಡುವಿನ ಶಾಂತಿ-ಸೌಹಾರ್ದತೆಗೆ ಮೈಲುಗಲ್ಲಾಗಿತ್ತು. 1962ರ ನಂತರ ಅರ್ಧಶತಮಾನಕ್ಕೂ ಹೆಚ್ಚು ಕಾಲ ಗಡಿಯಲ್ಲಿ ಯಾವುದೇ ಸಂಘರ್ಷ ನಡೆಯಲಿಲ್ಲ. ಆದರೆ, ಕಾಲಾನಂತರದಲ್ಲಿ ಗಡಿಯಲ್ಲಿ ಸಮಸ್ಯೆ ತಲೆದೋರಿತು. 2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಆದ ಘರ್ಷಣೆಯಿಂದ ಎರಡೂ ದೇಶಗಳ ಸಂಬಂಧ ಮುರಿಯುವ ಹಂತಕ್ಕೆ ಹೋಯಿತು.
2020ರಿಂದ ಭಾರತ-ಚೀನಾ ಸಂಬಂಧದಲ್ಲಾದ ಬದಲಾವಣೆ ಏನು?
2020ರ ಜೂನ್: ಈ ವರ್ಷದ ಮೇ ತಿಂಗಳಲ್ಲಿ ಚೀನಾ ಒಪ್ಪಂದ ಮುರಿದು ರೇಖೆ ಬದಲಿಸಲು ಯತ್ನಿಸಿತು. ಇದು ಉಭಯ ದೇಶಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಜೂನ್ ತಿಂಗಳಲ್ಲಿ ಗಲ್ವಾನ್‌ನಲ್ಲಿ ಎರಡೂ ದೇಶಗಳ ಸೈನಿಕರು ಮುಖಾಮುಖಿಯಾದರು. ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರು. ಚೀನಾದ 4 ಸೈನಿಕರು ಮೃತಪಟ್ಟರು. ಸೈನಿಕರ ಬಲಿದಾನವು ಭಾರತದಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಎರಡು ಪರಮಾಣು ಶಸ್ತçಸಜ್ಜಿತ ದೇಶಗಳ ನಡುವಿನ ಉದ್ವಿಗ್ನತೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳವಳ ಉಂಟು ಮಾಡಿತು. ಘರ್ಷಣೆ ಪರಿಣಾಮವಾಗಿ, ಭಾರತವು ಚೀನಾದಿಂದ ಹೂಡಿಕೆಗಳನ್ನು ನಿರ್ಬಂಧಿಸಿತು. ಟಿಕ್‌ಟಾಕ್ ಸೇರಿದಂತೆ ಡಜನ್‌ಗಟ್ಟಲೆ ಜನಪ್ರಿಯ ಚೀನೀ ಮೊಬೈಲ್ ಅಪ್ಲಿಕೇಷನ್‌ಗಳನ್ನು ನಿಷೇಧಿಸಿತು. ನೇರ ವಿಮಾನಯಾನ ಕಡಿತಗೊಳಿಸಿತು. ಇದುವರೆಗೆ ನಿಷೇಧಿತ ಚೀನೀ ಅಪ್ಲಿಕೇಷನ್‌ಗಳ ಸಂಖ್ಯೆ 321ಕ್ಕೆ ಏರಿದೆ.
2021ರ ಜನವರಿ: ಭಾರತೀಯ ಮತ್ತು ಚೀನೀ ಸೈನಿಕರು ಈಶಾನ್ಯ ಭಾರತದ ಸಿಕ್ಕಿಂನಲ್ಲಿ ಮತ್ತೆ ಮುಖಾಮುಖಿಯಾದರು.
2022ರ ಡಿಸೆಂಬರ್: ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಸಣ್ಣ ಗಡಿ ಘರ್ಷಣೆಗಳು ನಡೆದವು. ಅದರ ಕೆಲವು ಭಾಗಗಳು ಚೀನಾದಿಂದಲೂ ಹಕ್ಕು ಪಡೆದಿವೆ. ಭಾರತೀಯ ಪಡೆಗಳು ದಿನನಿತ್ಯದ ಗಸ್ತು ತಿರುಗಲು ಅಡ್ಡಿಪಡಿಸುತ್ತಿವೆ ಎಂದು ಬೀಜಿಂಗ್ ಆರೋಪಿಸಿತು. ಇತ್ತ ನವದೆಹಲಿಯು, ಚೀನಾ ಸೈನಿಕರು ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿದ್ದಾರೆ. ಈಗಿರುವ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದ್ದಾರೆಂದು ಆರೋಪಿಸಿತು. ಹೀಗೆ ಪರಸ್ಪರರಲ್ಲಿ ಆರೋಪ-ಪ್ರತ್ಯಾರೋಪದ ಮಾತು ಕೇಳಿಬಂತು.
2023: ಜೋಹಾನ್ಸ್ಬರ್ಗ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಭಾರತ ಮತ್ತು ಚೀನಾ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಮೋದಿ ಮತ್ತು ಷಿ ಜಿನ್‌ಪಿಂಗ್ ಮಾತುಕತೆ ನಡೆಸಿದರು.
ಜೂನ್: ಕಝಾಕಿಸ್ತಾನದಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಸಂದರ್ಭದಲ್ಲಿ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದರು. ಅಲ್ಲಿ ಅವರು ತಮ್ಮ ಗಡಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ನಡೆಸಲು ಒಪ್ಪಿಕೊಂಡರು.
ಸೆಪ್ಟೆಂಬರ್: ಚೀನಾದೊಂದಿಗಿನ ಭಾರತದ ಗಡಿಯಲ್ಲಿ ಸುಮಾರು 75% ‘ನಿರ್ಬಂಧ’ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಜೈಶಂಕರ್ ಹೇಳಿದರು. ಶಾಂತಿ ಸ್ಥಾಪನೆಗಾಗಿ ಎರಡೂ ದೇಶಗಳು ಪ್ರಯತ್ನ ಮುಂದುವರಿಸಿದವು. ನಾಲ್ಕೂವರೆ ವರ್ಷದಲ್ಲಿ ಉಭಯ ದೇಶಗಳ ನಡುವೆ ಒಟ್ಟು 38 ಸುತ್ತಿನ ಮಾತುಕತೆ ನಡೆದಿವೆ.
ಭಾರತದ ವಿಚಾರದಲ್ಲಿ ಚೀನಾ ಮೆತ್ತಗಾಗಿದ್ದೇಕೆ?
ಭಾರತದ ವಿಚಾರದಲ್ಲಿ ಚೀನಾ ತಣ್ಣಗಾಗಲು ಹಲವು ಕಾರಣಗಳಿವೆ. ಎರಡು ದೇಶಗಳ ವ್ಯಾಪಾರ ಸಂಬAಧಗಳು ಪ್ರಮುಖ ಪ್ರೋತ್ಸಾಹಕವಾಗಿದ್ದವು. ಚೀನಾ ಬಹಳ ಹಿಂದಿನಿಂದಲೂ ಯುನೈಟೆಡ್ ಸ್ಟೇಟ್ಸ್ ಜೊತೆಗೆ ಭಾರತದ ಅಗ್ರ ಎರಡು ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ. 2023 ಮತ್ತು 2024 ರಲ್ಲಿ, ಇದು ದ್ವಿಪಕ್ಷೀಯ ವಾಣಿಜ್ಯದಲ್ಲಿ 118.4 ಬಿಲಿಯನ್ ಡಾಲರ್ ಜೊತೆಗೆ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು. ಬೀಜಿಂಗ್ ಭಾರತದ ಅತಿದೊಡ್ಡ ಸರಕುಗಳ ಮೂಲವಾಗಿದೆ. ಜೊತೆಗೆ ದೂರಸಂಪರ್ಕ ಯಂತ್ರಾಂಶದಿಂದ ಹಿಡಿದು ಭಾರತೀಯ ಔಷಧೀಯ ಉದ್ಯಮಕ್ಕೆ ಕಚ್ಚಾ ವಸ್ತುಗಳ ವರೆಗೆ ಕೈಗಾರಿಕಾ ಉತ್ಪನ್ನಗಳ ಅತಿದೊಡ್ಡ ಪೂರೈಕೆದಾರನಾಗಿ ಉಳಿದಿದೆ.
ಬ್ರಿಕ್ಸ್ ಸೇರಿದಂತೆ ಬಹುಪಕ್ಷೀಯ ವೇದಿಕೆಗಳ ಮೂಲಕ ತನ್ನ ಜಾಗತಿಕ ಪ್ರಭಾವವನ್ನು ವಿಸ್ತರಿಸಲು, ಭಾರತದ ಜೊತೆಗಿನ ಬಿಕ್ಕಟ್ಟು ಶಮನಗೊಳಿಸುವುದು ಚೀನಾಕ್ಕೆ ಅನುಕೂಲಕರವಾಗಿದೆ. 2020 ರ ನಂತರ ಭಾರತದಲ್ಲಿ ವ್ಯಾಪಾರ ಮಾಡಲು ಅನೇಕ ಚೀನೀ ಕಂಪನಿಗಳು ಹೆಣಗಾಡುತ್ತಿವೆ. ಭಾರತವು ಹೂಡಿಕೆಯ ನಿಯಮಗಳನ್ನು ಬಿಗಿಗೊಳಿಸಿದಾಗ ಮತ್ತು ಜನಪ್ರಿಯ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದಾಗ ಸಂಬಂಧಗಳ ಪುನರಾರಂಭಕ್ಕಾಗಿ ಚೀನಾ ಆಶಿಸುತ್ತಿದೆ.
ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಮತ್ತು ಅಂಡರ್‌ಸ್ಟಾಂಡಿಂಗ್ ದಿ ಇಂಡಿಯಾ-ಚೀನಾ ಬಾರ್ಡರ್‌ನ ಲೇಖಕ ಜೋಶಿ, ಎರಡು ದೇಶಗಳ ಗಡಿ ಒಪ್ಪಂದದಲ್ಲಿ ಭಾರತೀಯ ವ್ಯಾಪಾರ ಸಮುದಾಯದ ಒತ್ತಡವು ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಿದ್ದಾರೆ. 2020ರ ಘರ್ಷಣೆ ನಂತರ ಭಾರತವು ಚೀನಾದ ಹೂಡಿಕೆಗಳು ಮತ್ತು ವೀಸಾಗಳ ಮೇಲೆ ತೀವ್ರ ನಿರ್ಬಂಧಗಳನ್ನು ವಿಧಿಸಿತು. ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡುವ ನಿಯಮಗಳನ್ನು ಭಾರತ ಬದಲಾಯಿತು. ಆ ಮೂಲಕ ಚೀನಾದ ಗಧಪ್ರಹಾರ ಮಾಡಿತು. ಇದರಿಂದ ಚೀನಾ ಪ್ರಜೆಗಳು ಮತ್ತು ಉದ್ದಿಮೆದಾರರಿಗೆ ಸಮಸ್ಯೆ ಆಯಿತು. ಇದೆಲ್ಲವನ್ನೂ ಅರಿತ ಚೀನಾ ಈಗ ಭಾರತದ ವಿಚಾರದಲ್ಲಿ ಮೃದುವಾಗಿದೆ. ಇದಕ್ಕೆ ಕಾರಣವಾದ ಗಡಿ ಸಮಸ್ಯೆಯನ್ನು ಪರಿಹರಿಸಲು ಈಗ ಎರಡೂ ದೇಶಗಳು ಒಪ್ಪಂದಕ್ಕೆ ಮುನ್ನುಡಿ ಬರೆದಿವೆ.
ವಿವಾದಿತ ಗಡಿ ಬಿಂದುಗಳು ಯಾವುವು?
ಗಾಲ್ವಾನ್ ಜೊತೆಗೆ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಕನಿಷ್ಠ ನಾಲ್ಕು ಇತರ ಘರ್ಷಣೆ ಬಿಂದುಗಳಿವೆ. ಇವೆಲ್ಲವೂ 1962 ರ ಯುದ್ಧದಲ್ಲಿ ಭಾರತ ಮತ್ತು ಚೀನಾ ಸೈನಿಕರು ಹೋರಾಡಿದ ವಿವಾದಿತ ಪ್ರದೇಶಗಳಾಗಿವೆ.
ಡೆಮ್ಚೋಕ್: ಎಲ್‌ಎಸಿಯಿಂದ ಇದನ್ನು ವಿಭಜಿಸಲಾಗಿದೆ. ಭಾರತವು ಪಶ್ಚಿಮ ಭಾಗವನ್ನು ನಿಯಂತ್ರಿಸುತ್ತದೆ. ಪೂರ್ವ ಭಾಗವು ಚೀನಾದ ನಿಯಂತ್ರಣದಲ್ಲಿದೆ.
ಪ್ಯಾಂಗಾಂಗ್: ಪ್ಯಾಂಗಾಂಗ್ ಸರೋವರದ ಸುಮಾರು 50% ಟಿಬೆಟ್‌ನಲ್ಲಿದೆ (ಚೀನಾದ ನಿಯಂತ್ರಣದಲ್ಲಿದೆ). 40% ಭಾಗ ಲಡಾಖ್‌ನಲ್ಲಿ ಮತ್ತು 10% ಭಾಗ ವಿವಾದಿತವಾಗಿದೆ. ಐಂಅ ಗ್ರಹಿಕೆಗಳಲ್ಲಿನ ವ್ಯತ್ಯಾಸಗಳು ಮಿಲಿಟರಿ ಸ್ಟ್ಯಾಂಡ್‌ಆಫ್‌ಗಳು ಮತ್ತು ಬಫರ್ ವಲಯಗಳಿಗೆ ಕಾರಣವಾಗುತ್ತವೆ.
ಹಾಟ್ ಸ್ಪ್ರಿಂಗ್ಸ್: ಇದು ಗೋಗ್ರಾ ಪೋಸ್ಟ್ ಬಳಿ ಇದೆ. ಹಾಟ್ ಸ್ಪ್ರಿಂಗ್ಸ್ ಪ್ರದೇಶವು ಅದರ ಕಾರ್ಯತಂತ್ರದ ಸ್ಥಳದಿಂದಾಗಿ ಭಾರತಕ್ಕೆ ಮಹತ್ವದ್ದಾಗಿದೆ. ಇದು ಐಂಅ ಮೇಲೆ ಕಣ್ಗಾವಲು ಸುಗಮಗೊಳಿಸುತ್ತದೆ. ಈ ಪ್ರದೇಶದ ಮೇಲೆ ಭಾರತದ ನಿಯಂತ್ರಣವು ತನ್ನ ರಕ್ಷಣಾ ನಿಲುವುಗಳನ್ನು ಹೆಚ್ಚಿಸುತ್ತದೆ. ಅಕ್ಸಾಯ್ ಚಿನ್‌ನಲ್ಲಿನ ಚಲನವಲನಗಳ ಮೇಲ್ವಿಚಾರಣೆಗೆ ಅನುಕೂಲ ಬಿಂದುಗಳನ್ನು ಒದಗಿಸುತ್ತದೆ. ಹೀಗಾಗಿ ಗಡಿ ಭದ್ರತಾ ಡೈನಾಮಿಕ್ಸ್ನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಡೆಪ್ಸಾಂಗ್: ಸೇನಾ ಕಾರ್ಯತಂತ್ರದ ದೃಷ್ಟಿಯಿಂದ ಡೆಪ್ಸಾಂಗ್ ಬಯಲು ಪ್ರದೇಶಗಳು ಭಾರತಕ್ಕೆ ನಿರ್ಣಾಯಕವಾಗಿವೆ. ಡೆಪ್ಸಾಂಗ್ ಮೇಲಿನ ನಿಯಂತ್ರಣವು ಚೀನಾದ ಪಡೆಗಳು ಈ ಪ್ರಮುಖ ಲಾಜಿಸ್ಟಿಕ್ಸ್ ಮಾರ್ಗಗಳಿಗೆ ಬೆದರಿಕೆ ಹಾಕುವುದನ್ನು ತಡೆಯುತ್ತದೆ. ಇದು ಭಾರತದ ಉತ್ತರದ ಗಡಿ ರಕ್ಷಣೆ ಮತ್ತು ಮಿಲಿಟರಿ ಚಲನಶೀಲತೆಗೆ ಅತ್ಯಗತ್ಯವಾಗಿದೆ.
ಭಾರತಕ್ಕೆ (India) ಗಡಿ ಭಾಗಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಕಾಟ ಹೆಚ್ಚಾಗಿದೆ. ಗಡಿಯಲ್ಲಿ ಭದ್ರತೆ ಹೆಚ್ಚಿಸಿಕೊಳ್ಳಲು ಸುಧಾರಿತ ಯುದ್ಧೋಪಕರಣಗಳನ್ನು ದೇಶ ಅಭಿವೃದ್ಧಿಪಡಿಸುತ್ತಿದೆ. ತನ್ನ ಸೇನಾ ಸಾಮರ್ಥ್ಯದ ಮೂಲಕ ಮಗ್ಗುಲು ಮುಳ್ಳಾಗಿರುವವರನ್ನು ಹಿಮ್ಮೆಟ್ಟಿಸಲು ಅವಿರತ ಶ್ರಮಿಸುತ್ತಿದೆ. ರಷ್ಯಾ-ಉಕ್ರೇನ್ (Russia-Ukraine War) ಯುದ್ಧದಿಂದ ಭಾರತ ಸಾಕಷ್ಟು ಪಾಠ ಕಲಿತಿದೆ. ನಮ್ಮ ನೆರೆ-ಹೊರೆಯವರೇ ಹೇಗೆ ನಮಗೆ ಅಪಾಯ ಎಂಬುದಕ್ಕೆ ಈ ಎರಡು ರಾಷ್ಟ್ರಗಳ ನಡುವಿನ ಯುದ್ಧವೇ ಸ್ಪಷ್ಟ ನಿದರ್ಶನ. ಇದರಿಂದ ಎಚ್ಚೆತ್ತುಕೊಂಡಿರುವ ಭಾರತ ಗಡಿ ಭಾಗಗಳಲ್ಲಿ ಹೈಅಲರ್ಟ್ ಆಗಿದೆ. ಪೂರ್ವ ಲಡಾಖ್‌ನಲ್ಲಿ ಚೀನಾ ಸೈನಿಕರ ಉಪಟಳವನ್ನು ನಿಯಂತ್ರಿಸಲು ಭಾರತ ‘ಮೌಂಟೆನ್ ಟ್ಯಾಂಕ್’ ಅಭಿವೃದ್ಧಿಪಡಿಸಿದೆ. ಈಗ ಸೇನೆಗೆ ಆನೆ ಬಲ ಬಂದಂತಾಗಿದೆ.
ಭಾರತ-ಚೀನಾ ‘ಲಡಾಖ್’ ಬಿಕ್ಕಟ್ಟು ಏನು?
ಯುದ್ಧ ಟ್ಯಾಂಕರ್ ಬಗ್ಗೆ ತಿಳಿಯುವ ಮುನ್ನ ನಾವು ಭಾರತ-ಚೀನಾ (India-China) ಗಡಿ ಬಿಕ್ಕಟ್ಟಿನ ಹಿನ್ನೆಲೆ ತಿಳಿಯಬೇಕಿದೆ. ಸ್ವಾತಂತ್ರ್ಯಾನಂತರ ಭಾರತದ ಸುತ್ತಲ ಗಡಿಯು ಬಗೆಹರಿಯದ ಸಮಸ್ಯೆಯಾಗಿದೆ. ಅದರಲ್ಲೂ ಲಡಾಖ್‌ನಲ್ಲಿ ಚೀನಾ ಆಗಾಗ್ಗೆ ಕ್ಯಾತೆ ತೆಗೆಯುತ್ತಿರುತ್ತದೆ. ಲಡಾಖ್ ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ಸೇರಿಲ್ಲ. ಸ್ವಾತಂತ್ರ್ಯ ಬಂದ ನಂತರ ರೂಪಿಸಲಾದ ಗಡಿಗಳನ್ನು ಚೀನಾ ಒಪ್ಪಿಕೊಂಡಿಲ್ಲ. ಈಗಲೂ ಪೂರ್ವ ಲಡಾಖ್‌ನ 60,000 ಚದರ ಕಿ.ಮೀ.ಗಿಂತಲೂ ತನ್ನದೆಂದು ಡ್ರ್ಯಾಗನ್ ರಾಷ್ಟ್ರ ಹೇಳುತ್ತಿದೆ. 1962ರ ಯುದ್ಧದ ನಂತರ ಎರಡೂ ದೇಶಗಳ ಸೈನಿಕರು ಕದನ ವಿರಾಮ ರೇಖೆ ಘೋಷಿಸಿಕೊಂಡರು. ಅದೇ ‘ವಾಸ್ತವ ನಿಯಂತ್ರಣ ರೇಖೆ’. 2020ರಲ್ಲಿ ಈ ರೇಖೆಯನ್ನು ಬದಲಿಸಲು ಚೀನಾ ಮುಂದಾಯಿತು. ಪರಿಣಾಮವಾಗಿ ಗಲ್ವಾನ್, ಪ್ಯಾಂಗಾಂಗ್ ಸರೋವರದ ಬಳಿಕ ಎರಡೂ ದೇಶಗಳ ಸೈನಿಕರ ನಡುವೆ ಸಂಘರ್ಷವೂ ನಡೆಯಿತು. ಚೀನಾ ಈಗಲೂ ಹಂತಹಂತವಾಗಿ ಲಡಾಖ್ ಅನ್ನು ಮುತ್ತುತ್ತಿದೆ. ಹೀಗಾಗಿ ಗಡಿ ಭಾಗದಲ್ಲಿ ಭಾರತ ಸೇನಾ ಭದ್ರತೆ ಹೆಚ್ಚಿಸಲು ಕ್ರಮವಹಿಸಿದೆ.
26 ಗಸ್ತು ಠಾಣೆಗಳನ್ನು ಕಳೆದುಕೊಂಡಿದೆ ಭಾರತ
ಲಡಾಖ್‌ನಲ್ಲಿ ಇರುವ ವಾಸ್ತವ ಗಡಿ ರೇಖೆ (ಎಲ್‌ಎಸಿ) ಉದ್ದಕ್ಕೂ 65 ಗಸ್ತು ಠಾಣೆಗಳನ್ನು ಭಾರತ ಹೊಂದಿತ್ತು. ಅವುಗಳ ಪೈಕಿ ಈಗ 26 ಗಸ್ತು ಠಾಣೆಗಳನ್ನು ಭಾರತ ಕಳೆದುಕೊಂಡಿದೆ. ಈ ಭಾಗಗಳಲ್ಲಿ ಸೇನೆಯು ಗಸ್ತು ತಿರುಗದೇ ಇರುವುದು ಮತ್ತು ಜನರೂ ಅತ್ತ ಸುಳಿಯದಂತೆ ನಿರ್ಬಂಧ ಹೇರಿರುವ ಕಾರಣ, ಆ ಗಸ್ತು ಠಾಣೆಗಳಿಗೆ ಮತ್ತೆ ಹೋಗಲು ಚೀನಾ ಸೇನೆ ಬಿಡುತ್ತಿಲ್ಲ. ಇದರಿಂದ ಭಾರತ 26 ಗಸ್ತು ಠಾಣೆಗಳನ್ನು ಕಳೆದುಕೊಳ್ಳುವಂತಾಗಿದೆ. ಇದನ್ನೂ ಓದಿ: Manipur | ಸಚಿವರ ಆಪ್ತ ಸಹಾಯಕನೇ ಕಿಡ್ನ್ಯಾಪ್ – ದುಷ್ಕರ್ಮಿಗಳ ಗುಂಪಿಗೆ ತೀವ್ರ ಶೋಧ
ಭಾರತೀಯ ಸೇನೆಗೆ ‘ಜೋರಾವರ್’ ಬಲ!
ಗಡಿಗಳಲ್ಲಿ ಶತ್ರುಗಳನ್ನು ಎದುರಿಸಲು ಭಾರತ ‘ಮೌಂಟೆನ್ ಟ್ಯಾಂಕ್’ (Mountain Tank) ಅಭಿವೃದ್ಧಿಪಡಿಸಿದೆ. ಪರ್ವತಗಳಂತಹ ಕಡಿದಾದ ಭಾಗಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಲಾರ್ಸೆನ್ ಮತ್ತು ಟೂಬ್ರೊ ಸಹಯೋಗದಲ್ಲಿ ಡಿಆರ್‌ಡಿಒ ಇದನ್ನು ಅಭಿವೃದ್ಧಿಪಡಿಸಿದೆ. ಪರ್ವತ ಪ್ರದೇಶಗಳಂತಹ ಭಾಗಗಳಲ್ಲಿ ಯುದ್ಧಕ್ಕಾಗಿ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಭಾರತದ ಮೊದಲ ಟ್ಯಾಂಕರ್ ಇದು. ಇದರ ಹೆಸರು ‘ಜೊರಾವರ್’. ಲಡಾಖ್‌ನ ಪರ್ವತ ಪ್ರದೇಶ ಭಾಗಗಳಲ್ಲಿ ಚೀನಾದೊಂದಿಗೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟನ್ನು ನಿರ್ವಹಿಸಲು ಇದನ್ನು ರೂಪಿಸಲಾಗಿದೆ. ಎತ್ತರದ ಪ್ರದೇಶಗಳಲ್ಲಿ ‘ಮೌಂಟೆನ್ ಟ್ಯಾಂಕ್’ ನಿಯೋಜನೆಗೆ ಸಿದ್ಧವಾಗಿದೆ.
‘ಜೊರಾವರ್’ ವಿಶೇಷತೆಗಳೇನು? * ತೂಕ: ಟ್ಯಾಂಕ್ 25 ಟನ್ ತೂಗುತ್ತದೆ. ಇದು ಹಗುರವಾದ ಮತ್ತು ಪರ್ವತ ಭೂಪ್ರದೇಶದಲ್ಲಿ ಬಳಸಲು ಸೂಕ್ತವಾಗಿದೆ. * ಚಲನಶೀಲತೆ: ಹೆಲಿಕಾಪ್ಟರ್‌ಗಳನ್ನು ಒಳಗೊಂಡಂತೆ ಇದನ್ನು ವಾಯುಯಾನದ ಮೂಲಕವೂ ಸಾಗಿಸಬಹುದು. ಇದು ತಲುಪಲು ಕಷ್ಟವಾದ ಪ್ರದೇಶಗಳಲ್ಲಿ ತ್ವರಿತವಾಗಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ. * ವೇಗ: ನೆಲದಲ್ಲಿ ಗಂಟೆಗೆ ಸುಮಾರು 60 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. * ಶಸ್ತ್ರಾಸ್ತ್ರ: ‘ಜೊರಾವರ್’ (Zorawar) 105 ಮಿಲಿಮೀಟರ್ ಗನ್, ಮೆಷಿನ್ ಗನ್ ಮತ್ತು ಟ್ಯಾಂಕ್ ವಿರೋಧಿ ಮಾರ್ಗಸೂಚಿ ಕ್ಷಿಪಣಿಗಳ ವ್ಯವಸ್ಥೆಯನ್ನು ಹೊಂದಿದೆ.
ಅಭಿವೃದ್ಧಿಗೆ ಬೇಕಾಯ್ತು 3 ವರ್ಷ
ಜೊರಾವರ್ ಅಭಿವೃದ್ಧಿಗೆ ಸುಮಾರು ಮೂರು ವರ್ಷಗಳು ಬೇಕಾಯಿತು. ಪಂಜಾಬಿ ಭಾಷೆಯಲ್ಲಿ ಜೊರಾವರ್ ಎಂದರೆ ‘ಧೈರ್ಯಶಾಲಿ’. ಜಮ್ಮುವಿನ ಡೋಗ್ರಾ ರಾಜವಂಶದ ರಾಜಾ ಗುಲಾಬ್ ಸಿಂಗ್ ಸಂಸ್ಥಾನದಲ್ಲಿ ಸೇವೆ ಸಲ್ಲಿಸಿದ ಮತ್ತು ಲಡಾಖ್‌ನ್ನು ವಶಪಡಿಸಿಕೊಳ್ಳುವ ಮೂಲಕ ಡೋಗ್ರಾ ಪ್ರದೇಶವನ್ನು ವಿಸ್ತರಿಸಲು ಸಹಾಯ ಮಾಡಿದ್ದ ಮಿಲಿಟರಿ ನಾಯಕ ಜನರಲ್ ಜೊರಾವರ್ ಸಿಂಗ್ ಕಹ್ಲುರಿಯಾ ಅವರ ಹೆಸರನ್ನೇ ‘ಮೌಂಟೆನ್ ಟ್ಯಾಂಕ್’ಗೆ ಇಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಟ್ಯಾಂಕ್ ಸಂಪೂರ್ಣವಾಗಿ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಜಾರ್ಖಂಡ್‍ನಿಂದ ನೀರು ಜಾಸ್ತಿ ಬಿಟ್ಟಿದ್ದಕ್ಕೆ ಬಂಗಾಳದಲ್ಲಿ ಪ್ರವಾಹ: ಮಮತಾ ಆಕ್ರೋಶ
ಜೊರಾವರ್ ಯುದ್ಧ ಟ್ಯಾಂಕ್‌ನ ಪ್ರಾಥಮಿಕ ಪ್ರಯೋಗಗಳು ಯಶಸ್ವಿಯಾಗಿವೆ. ರಕ್ಷಣಾ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವಲ್ಲಿ ಭಾರತಕ್ಕೆ ಒಂದು ದೊಡ್ಡ ಹೆಜ್ಜೆಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೊಂದು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಟ್ಯಾಂಕ್ ಮರುಭೂಮಿಯ ಭೂಪ್ರದೇಶದಲ್ಲಿ ನಡೆಸಿದ ಪ್ರಯೋಗಗಳಲ್ಲಿ ಟ್ಯಾಂಕ್ ಅಸಾಧಾರಣ ಕಾರ್ಯಕ್ಷಮತೆ ಪ್ರದರ್ಶಿಸಿತು. ಪರ್ವತಮಯ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ.
ಪರ್ವತ ಪ್ರದೇಶಗಳಲ್ಲಿ 350 ಯುದ್ಧ ಟ್ಯಾಂಕ್ ನಿಯೋಜಿಸಲು ಪ್ಲ್ಯಾನ್
ಭಾರತೀಯ ಸೇನೆಯು ಸುಮಾರು 350 ಜೊರಾವರ್ ಟ್ಯಾಂಕ್‌ಗಳನ್ನು ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ನಿಯೋಜಿಸಲು ಯೋಜಿಸಿದೆ. ಭಾರವಾದ ‘ಅರ್ಜುನ್ ಯುದ್ಧ ಟ್ಯಾಂಕ್’ಗಳಿಗೆ ಹೋಲಿಸಿದರೆ, ಜೊರಾವರ್ ಹೆಚ್ಚು ಹಗುರವಾಗಿರುತ್ತದೆ. ಗುಡ್ಡಗಾಡು ಪ್ರದೇಶಗಳಿಗೆ ಇದು ಹೆಚ್ಚು ಸೂಕ್ತವಾಗಿವೆ. ವಿಶೇಷವಾಗಿ ಲಡಾಖ್‌ನಂತಹ ಎತ್ತರದ ಪ್ರದೇಶಗಳಲ್ಲಿ ಸೇನೆಯು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಅರ್ಜುನ್ ಯುದ್ಧ ಟ್ಯಾಂಕ್ 58.5 ಟನ್ ತೂಕವಿದೆ. ಚೀನಾದೊಂದಿಗಿನ ಸಂಘರ್ಷದ ಸಂದರ್ಭದಲ್ಲಿ ಗುಡ್ಡಗಾಡು ಮತ್ತು ಎತ್ತರದ ಪ್ರದೇಶಗಳಲ್ಲಿ ಇದನ್ನು ಸಮರ್ಥವಾಗಿ ಬಳಸುವುದು ಕಷ್ಟ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಹಗುರವಾದ ಟ್ಯಾಂಕ್‌ನ ಅಗತ್ಯತೆ ಇದೆ ಎನಿಸಿತು.
ಕಾಲಕ್ಕೆ ತಕ್ಕಂತೆ ನವೀಕರಿಸುವ ವೈಶಿಷ್ಟ್ಯ
ಜೊರಾವರ್ ಮಾಡ್ಯುಲರ್ ವಿನ್ಯಾಸವನ್ನು ಹೊಂದಿದೆ. ಅಂದರೆ ಕಾಲಾನಂತರದಲ್ಲಿ ಹೊಸ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಅದನ್ನು ನವೀಕರಿಸಬಹುದು. ಯುದ್ಧದ ಅಗತ್ಯತೆಗಳು ಮತ್ತು ತಂತ್ರಜ್ಞಾನವು ವಿಕಸನಗೊಂಡಂತೆ ಟ್ಯಾಂಕ್ ಪ್ರಸ್ತುತವಾಗಿ ಉಳಿಯುತ್ತದೆ. ಎತ್ತರದ ಕೋನಗಳಲ್ಲಿ ಗುಂಡು ಹಾರಿಸುವ ಸಾಮರ್ಥ್ಯವನ್ನೂ ಹೊಂದಿದೆ. ಯುದ್ಧ ಟ್ಯಾಂಕ್ ಸೀಮಿತ ಫಿರಂಗಿ ಪಾತ್ರವನ್ನು ನಿರ್ವಹಿಸಬಲ್ಲದು. ಇದು ಭಾರತೀಯ ಸಶಸ್ತ್ರ ಪಡೆಗಳಿಗೆ ಅಮೂಲ್ಯವಾದ ಆಸ್ತಿಯಾಗಿದೆ. ಇದನ್ನೂ ಓದಿ: ದಿಢೀರ್ ಬಾಯ್ತೆರೆದ ರಸ್ತೆ – ಮುಳುಗಿತು ನೀರಿನ ಟ್ಯಾಂಕರ್