Tag: India bulls housing

  • ಇಂಡಿಯಾ ಬುಲ್ಸ್ ಹೌಸಿಂಗ್ ಕಚೇರಿಗಳ ಮೇಲೆ ಇಡಿ ರೇಡ್

    ಇಂಡಿಯಾ ಬುಲ್ಸ್ ಹೌಸಿಂಗ್ ಕಚೇರಿಗಳ ಮೇಲೆ ಇಡಿ ರೇಡ್

    ನವದೆಹಲಿ: ಮುಂಬೈ ಹಾಗೂ ದೆಹಲಿಯಲ್ಲಿರುವ ಇಂಡಿಯಾ ಬುಲ್ಸ್ ಫಿನಾನ್ಸ್ ಸೆಂಟರ್ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಸೋಮವಾರ ದಾಳಿ ನಡೆಸಿದೆ.

    2021ರಲ್ಲಿ ಕಂಪನಿ ಹಾಗೂ ಅದರ ಪ್ರವರ್ತಕ ಸಮೀರ್ ಗೆಹ್ಲಾಟ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧ ಪಟ್ಟಂತೆ ದಾಳಿ ನಡೆಸಲಾಗಿದೆ. ಭಾನುವಾರ ದಾಳಿಯ ಬಗ್ಗೆ ಯೋಜಿಸಿ, ಸೋಮವಾರ ದಾಳಿ ನಡೆಸಲಾಗಿದೆ ಎಂದು ಇಡಿ ತಿಳಿಸಿದೆ. ಇದನ್ನೂ ಓದಿ: ವಿಶ್ವದ ನಂ.1 ಚೆಸ್ ಆಟಗಾರನಿಗೆ ಶಾಕ್ ಕೊಟ್ಟ 16ರ ಭಾರತೀಯ ಬಾಲಕ

    ಈ ಹಿಂದೆ ಮಹಾರಾಷ್ಟ್ರದ ಪಾಲ್ಘರ್‍ನಲ್ಲಿ ಕಂಪನಿ ಹಾಗೂ ಅದರ ಪ್ರವರ್ತಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ರಿಯಲ್ ಎಸ್ಟೇಟ್ ಕಂಪನಿ ಈ ಹಿಂದೆ ಇಂಡಿಯಾ ಬುಲ್ಸ್ ನಿಂದ ಸಾಲ ಪಡೆದು ಹೌಸಿಂಗ್ ಷೇರುಗಳಲ್ಲಿ ಹೂಡಿಕೆ ಮಾಡಿದೆ ಎಂದು ಆರೋಪಿಸಿ ಎಫ್‍ಐಆರ್ ದಾಖಲಾಗಿತ್ತು. ಇದನ್ನೂ ಓದಿ: ಹಿಜಬ್ ವಿವಾದದ ನಡುವೆ ಮೈಸೂರು ಪ್ಯಾಲೇಸ್‍ನಲ್ಲಿ ನಮಾಜ್

    ಕಂಪನಿ ಷೇರು ಮೌಲ್ಯವನ್ನು ಹೆಚ್ಚಿಸಿ ಬಳಿಕ ಹಣವನ್ನು ಇತರ ಘಟಕಗಳಿಗೆ ವರ್ಗಾಯಿಸುತ್ತಿತ್ತು ಎಂದು ತಿಳಿದುಬಂದಿದ್ದು, ದೆಹಲಿ ಹೈಕೋರ್ಟ್ ಆದೇಶದಂತೆ ಇಡಿ ದಾಳಿ ನಡೆಸಿದೆ.