Tag: India Book of Record

  • ಅಕ್ಕಿಕಾಳಿನಲ್ಲಿ ನಾಡಗೀತೆ ಬರೆದು ಬುಕ್ ಆಫ್ ರೆಕಾರ್ಡ್ ಮಾಡಿದ ಯುವಕ

    ಅಕ್ಕಿಕಾಳಿನಲ್ಲಿ ನಾಡಗೀತೆ ಬರೆದು ಬುಕ್ ಆಫ್ ರೆಕಾರ್ಡ್ ಮಾಡಿದ ಯುವಕ

    ಹಾವೇರಿ: ಇತ್ತೀಚೆಗೆ ಗ್ರಾಮೀಣ ಭಾಗದ ಯುವಕರು ತಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ತಮ್ಮ ಪ್ರತಿಭೆಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಹಾವೇರಿ (Haveri) ತಾಲೂಕಿನ ಗುಡಿಸಲಕೊಪ್ಪ ಗ್ರಾಮದ ಯುವಕನೊಬ್ಬ ಮೈಕ್ರೋ ಆರ್ಟ್ (Micro Art) ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ (India Book of Record) ಸಾಧನೆ ಮಾಡಿದ್ದಾನೆ.

    ಗ್ರಾಮದ ಪರಮೇಶ ಬಂಡಿ ಎಂಬ ಯುವಕ ಅಕ್ಕಿಕಾಳಿನಲ್ಲಿ ನಾಡಗೀತೆ (Naadageete) ಬರೆದು ಈ ಸಾಧನೆ ಮಾಡಿದ್ದಾನೆ. 80 ನಿಮಿಷದಲ್ಲಿ 144 ಅಕ್ಕಿಕಾಳಿನಿಂದ ನಾಡಗೀತೆ ಬರೆದು ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಡೆಯುವ ಮೂಲಕ ಹೊಸ ಇತಿಹಾಸ ಬರೆದಿದ್ದಾನೆ.

    ಅಷ್ಟೇ ಅಲ್ಲದೇ 92 ಅಕ್ಕಿಕಾಳಿನಲ್ಲಿ ವಂದೇ ಮಾತರಂ ಗೀತೆ ಬರೆದಿದ್ದಾನೆ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ 10 ರಿಂದ 20 ಸಾವಿರ ಅಕ್ಕಿಕಾಳಿನಲ್ಲಿ ಜೈ ಶ್ರೀ ರಾಮ್ ಎಂದು ಬರೆಯಲು ತಯಾರಿ ನಡೆಸಿದ್ದಾನೆ. ಇದನ್ನೂ ಓದಿ: ಹುಲಿ ಉಗುರು ಲಾಕೆಟ್‌ ಕೇಸ್‌ – ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರು

    ಈ ಮೈಕ್ರೋ ಆರ್ಟ್ ಕಲಾವಿದನ ಸಾಧನೆ ನಿಜಕ್ಕೂ ನೋಡುಗರ ಗಮನ ಸೆಳೆಯುತ್ತಿದೆ. ಅದರಲ್ಲೂ ಅಕ್ಕಿಕಾಳಿನಲ್ಲಿ ಬರೆಯುವುದು ಸುಲಭದ ಮಾತಲ್ಲ. ಅಕ್ಕಿ ಕಾಳಿನಲ್ಲಿ ತನ್ನ ಕೈಚಳಕವನ್ನು ತೋರಿಸಿದ್ದಾನೆ. ಓದಿದ್ದು ಪಿಯುಸಿ ಆದರೂ ಮೈಕ್ರೋ ಆರ್ಟ್ ಮೂಲಕ ಹೆಸರು ಮಾಡಿದ್ದಾನೆ. ಇದನ್ನೂ ಓದಿ: ಎಂಜಿನಿಯರಿಂಗ್, ವೆಟರಿನರಿ, ಫಾರ್ಮ್ ಸೈನ್ಸ್, ಆರ್ಕಿಟೆಕ್ಟರ್ ಕೋರ್ಸುಗಳಿಗೆ ಪ್ರವೇಶಾತಿ ಅಕ್ಟೋಬರ್ 30ಕ್ಕೆ ವಿಶೇಷ ಸುತ್ತು: KEA

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೊಜ್ಜು ಕರಗಿಸಬೇಕು ಅಂತ ಸೈಕಲ್ ಏರಿದ ಪೊಲೀಸ್ ಅಧಿಕಾರಿ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ

    ಬೊಜ್ಜು ಕರಗಿಸಬೇಕು ಅಂತ ಸೈಕಲ್ ಏರಿದ ಪೊಲೀಸ್ ಅಧಿಕಾರಿ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ

    ಧಾರವಾಡ: ದೇಹದ ತೂಕವನ್ನು ಇಳಿಸಬೇಕು ಎಂದು ನಿರ್ಧರಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರು ಇದೀಗ ಸೈಕಲಿಂಗ್‌ನಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಮೊದ ಮೊದಲು ಸಣ್ಣ ಪ್ರಮಾಣದಲ್ಲಿ ಸೈಕಲಿಂಗ್ ಜಾಥಾ ಮಾಡುತ್ತಿದ್ದ ಇವರು, ಇದೀಗ ಭಾರತದ ತುತ್ತ ತುದಿಯಿಂದ ಕೊನೆಯವರೆಗೂ ಸೈಕಲ್ ಏರಿ ಜಾಗೃತಿ ಮೂಡಿಸಿದ್ದಾರೆ.

    ಹೌದು, ಹುಬ್ಬಳ್ಳಿಯ ಹೆಸ್ಕಾಂನ ಇನ್ಸ್‌ಪೆಕ್ಟರ್ ಆಗಿರುವ ಮುರುಗೇಶ್ ಚನ್ನಣ್ಣವರ ಇಂತಹದ್ದೊಂದು ಸಾಧನೆ ಮಾಡಿದ್ದಾರೆ. ಸೇ ನೋ ಡ್ರಗ್ಸ್ ಎನ್ನುತ್ತ ಯುವಕರಿಗೆ ಜಾಗೃತಿ ಮೂಡಿಸುವ ಮೂಲಕ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸೈಕಲ್ ಏರಿ ಕೇವಲ 22 ದಿನಗಳಲ್ಲಿ ಜಾಥಾವನ್ನು ಅಂತ್ಯಗೊಳಿಸಿದ್ದಾರೆ.

     

    ಕೆ2ಕೆ ಎನ್ನುವ ಜಾಥಾ ಇದಾಗಿದ್ದು, ಯುವ ಜನರಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2021 ರ ಡಿಸೆಂಬರ್ ತಿಂಗಳಲ್ಲಿ ಇದು ಆರಂಭವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 9 ರಾಜ್ಯಗಳ ಮುಖಾಂತರ ಸುಮಾರು 3,649 ಕಿ.ಮೀ ಸೈಕಲ್ ಯಾತ್ರೆ ನಡೆಸಿದ್ದರು. 42 ರಿಂದ 49 ವಯಸ್ಸಿನೊಳಗಿನ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರಲ್ಲದೇ ಈ ಹಿಂದೆ ಲೋಹ ಪುರುಷ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ. ಇದನ್ನೂ ಓದಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರಂತರ ಪ್ರಯತ್ನ ಮಾಡುತ್ತೇವೆ: ಕಾಗೇರಿ ಹಾರಿಕೆ ಉತ್ತರ

    ಇದು ಯಾರು ಬೇಕಾದರೂ ಮಾಡುವ ಜಾಥಾವಂತೂ ಅಲ್ಲವೇ ಅಲ್ಲ. ಅದು ಮೊದಲೇ ಚಳಿ ಇರುವ ಪ್ರದೇಶವಾಗಿದ್ದು, ಅಲ್ಲಿ ಇವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಏನೇ ಆದರೂ ಜಾಗೃತಿಯ ಸಲುವಾಗಿ ಸೈಕಲ್ ಏರಿದ್ದ ಮುರುಗೇಶ್ ಚನ್ನಣ್ಣವರ ಕೇವಲ 22 ದಿನದಲ್ಲಿ ತಮ್ಮ ಜಾಥಾ ಅಂತ್ಯಗೊಳಿಸಿ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಭಾಜನರಾಗಿದ್ದಾರೆ. ಇವರ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

     

    ಮೊದಲಿನಿಂದಲೂ ಸೈಕಲ್ ಮೇಲೆ ಹೆಚ್ಚು ಒಲವು ಹೊಂದಿದ್ದ ಮುರುಗೇಶ್ ಈಗಾಗಲೇ ಹಲವು ರಾಷ್ಟ್ರೀಯ ಸೈಕಲ್ ಜಾಥಾಗಳಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಸಂಗೀತ ಮಾಂತ್ರಿಕ ಇಳಯರಾಜರನ್ನು ರಾಜ್ಯಸಭೆಗೆ ಸ್ವಾಗತಿಸಿದ ಪ್ರಲ್ಹಾದ್ ಜೋಶಿ

    ಇವರ ಈ ಸೈಕಲ್ ಕ್ರೇಜ್‌ಗೆ ಮನಸೋತಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಹ ಧಾರವಾಡಕ್ಕೆ ಬಂದಾಗಲೆಲ್ಲ ಇವರ ಮನೆಗೆ ಬಂದು ಸೈಕಲ್ ಜಾಥಾ ಬಗ್ಗೆ ಮತ್ತು ಇಬ್ಬರು ಸಹ ಬರ್ಲಿನ್‌ನಲ್ಲಿ ನಡೆಯುವ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರಂತೆ. ಹೀಗಾಗಿಯೇ ಅವರ ಅಕಾಲಿಕ ಮರಣದಿಂದ ಮುರುಗೇಶ್ ಈ ಬುಕ್ ಆಫ್ ರೆಕಾರ್ಡ್ ಅನ್ನು ಪುನೀತ್‌ಗೆ ಸಮರ್ಪಿಸಿದ್ದು, ಮುಂದೊಂದು ದಿನ ಬರ್ಲಿನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಅವರ ಆಸೆಯನ್ನು ನಾನು ಪೂರ್ತಿಯಾಗಿಸುತ್ತೇನೆ ಎಂಬ ಆಸೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪುವಿನ ಪುಟಾಣಿ ಅಭಿಮಾನಿಗಳಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ – ಶಿವಣ್ಣನ ಭೇಟಿಗೆ ಹಾತೊರೆಯುತ್ತಿರುವ ಮಕ್ಕಳು

    ಅಪ್ಪುವಿನ ಪುಟಾಣಿ ಅಭಿಮಾನಿಗಳಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ – ಶಿವಣ್ಣನ ಭೇಟಿಗೆ ಹಾತೊರೆಯುತ್ತಿರುವ ಮಕ್ಕಳು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್‍ನ ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಗಳಾದ ಪುಟಾಣಿ ಅಣ್ಣತಂಗಿ ಸಾಮಾನ್ಯ ಜ್ಞಾನದ ವಿಷಯಗಳನ್ನು ಪಟಪಟನೇ ಹೇಳುವುದರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ಆದ್ರೆ ಈಗ ವಿಷಯ ಅದಲ್ಲ ತಮ್ಮ ಸಾಧನೆಯ ಪ್ರಮಾಣ ಪತ್ರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ರಿಂದಲೇ ಪಡೆಯಬೇಕು ಎಂದು ಮಕ್ಕಳು ಹಂಬಲಿಸುತ್ತಿದ್ದಾರೆ.

    ಮುದಗಲ್‍ನ ಚಂದ್ರಕಲಾ, ಯಲ್ಲಪ್ಪ ದಂಪತಿಯ ಮಕ್ಕಳಾದ ಶಿವರಾಜ್ ಹಾಗೂ ಸಂಜನಾ ತಮ್ಮ ಸಾಧನೆಯನ್ನು ಸ್ವತಃ ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್ ಕುಮಾರ್ ಹಾಡಿಹೊಗಳಬೇಕು, ಅವರ ಆಶೀರ್ವಾದ ಪಡೆಯಬೇಕು ಅಂತ ತುಂಬಾನೇ ಆಸೆ ಇಟ್ಟುಕೊಂಡಿದ್ದರು, ಆದ್ರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಅಪ್ಪು ಸಮಾಧಿ ಬಳಿ ಪ್ರಮಾಣ ಪತ್ರ ಇಟ್ಟು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ರಿಂದ ಆಶೀರ್ವಾದ ಪಡೆದು ಏಷ್ಯಾ ಬುಕ್ ಆಫ್ ರೆಕಾರ್ಡ್‍ಗೆ ತಯಾರಿ ನಡೆಸುವ ಆಸೆಯಲ್ಲಿದ್ದಾರೆ. ಇದನ್ನೂ ಓದಿ: ಮದುವೆಗೆ ಬರಬೇಡಿ, ಆಶೀರ್ವಾದ ಮರಿಬೇಡಿ – ಕರೆಯೋಲೆ ಹಂಚಿದ ವಧು-ವರ

    ತಂದೆ ಕೂಲಿ ಕೆಲಸ ಮಾಡುತ್ತಿದ್ದು ಸಣ್ಣ ಗುಡಿಸಲು ರೀತಿಯ ಮನೆಯಲ್ಲಿ ಕುಟುಂಬ ವಾಸಿಸುತ್ತಿದ್ದರೂ ಮಕ್ಕಳ ಸಾಧನೆಗೆ ಅಡ್ಡಿಯಾಗಿಲ್ಲ. ಕವಿಗಳ ಕಾವ್ಯನಾಮ, ಸಂವಿಧಾನದ ವಿಷಯ, ನೋಬೆಲ್, ಭಾರತರತ್ನ ಪ್ರಶಸ್ತಿ ಪಡೆದವರ ಹೆಸರುಗಳು ಹೀಗೆ ಸಾಕಷ್ಟು ವಿಷಯಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಈ ಇಬ್ಬರು ಮಕ್ಕಳು ಪಟಪಟನೇ ಉತ್ತರಿಸುತ್ತಾರೆ. ಈ ಮೂಲಕ ಈ ಅಣ್ಣ ತಂಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ತಾಯಿ ಆಶಾ ಕಾರ್ಯಕರ್ತೆಯಾಗಿದ್ದು ಲಾಕ್‍ಡೌನ್ ಸಮಯದಲ್ಲಿ ಮಕ್ಕಳು ಮನೆಯಲ್ಲಿ ಓದಿಕೊಳ್ಳುವುದನ್ನು ಗಮನಿಸಿ ಇವರ ನೆನಪಿನ ಶಕ್ತಿ ಬಗ್ಗೆ ಅಚ್ಚರಿ ಪಟ್ಟಿದ್ದರು. ಇವರಿಗೆ ಟ್ಯೂಷನ್ ಹೇಳುತ್ತಿದ್ದ ಮೇಷ್ಟ್ರು ಮಹಾಂತೇಶ್ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.

    ಮಕ್ಕಳ ಆಸೆಗೆ ನಟ ಶಿವರಾಜ್ ಕುಮಾರ್ ಹೇಗೆ ಸ್ಪಂದಿಸುತ್ತಾರೊ ಗೊತ್ತಿಲ್ಲ. ಆದ್ರೆ ಶಿವಣ್ಣನ ಕೈಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರ ಪಡೆದು ಮುಂದಿನ ತಯಾರಿ ನಡೆಸಲು ಅಣ್ಣತಂಗಿ ನಿರ್ಧರಿಸಿದ್ದಾರೆ. ಪುಟಾಣಿ ಅಭಿಮಾನಿಗಳ ಆಸೆಯನ್ನು ಶಿವಣ್ಣ ಯಾವಾಗ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಮಾಡುತ್ತಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಎದುರೇ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಯತ್ನ

  • ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮೂರರ ಪೋರಿ

    ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮೂರರ ಪೋರಿ

    ಚಿಕ್ಕಮಗಳೂರು: ತನ್ನ ತೀಕ್ಷ್ಣ ನೆನಪಿನ ಶಕ್ತಿಯಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಕೂಡಹಳ್ಳಿ ಗ್ರಾಮದ ಮೂರು ವರ್ಷದ ಪುಟ್ಟ ಪೋರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿ ದಾಖಲೆ ನಿರ್ಮಿಸಿದ್ದಾಳೆ.

    ಮೂರು ವರ್ಷದ ಬಾಲಕಿ ಆರ್ವಿ.ಎಸ್ ತೀಕ್ಷ್ಣ ನೆನೆಪಿನ ಶಕ್ತಿಯಿಂದ ಇಂಡಿಯಾ ಬುಕ್ ಆಪ್ ರೆಕಾರ್ಡ್‍ಗೆ ಆಯ್ಕೆಯಾಗಿದ್ದಾಳೆ. ಆನ್‍ಲೈನ್ ಮೂಲಕ ನಡೆದ ಪರೀಕ್ಷೆಯಲ್ಲಿ ತನ್ನ ಅಸಾಧಾರಣೆ ಪ್ರತಿಭೆ ಹಾಗೂ ನೆನಪಿನ ಶಕ್ತಿಯನ್ನು ಅನಾವರಣಗೊಳಿಸಿದ್ದಾಳೆ. ಪರೀಕ್ಷೆಯಲ್ಲಿ ಕನ್ನಡ ಮತ್ತು ಹಿಂದಿ ಸಂಖ್ಯೆಗಳು, 19 ವಿವಿಧ ವಾಹನಗಳು, ಕನ್ನಡ ಮತ್ತು ಇಂಗ್ಲೀಷ್ ವರ್ಣಮಾಲೆಗಳು, ಇಂಗ್ಲೀಷ್ ಸಂಖ್ಯೆಗಳು, ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲೂ ದಿನಗಳು, ತಿಂಗಳುಗಳ ಹೆಸರುಗಳನ್ನು ನಿರರ್ಗಳವಾಗಿ ಹೇಳುತ್ತಾಳೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 7 ಮಕ್ಕಳ ನಾಪತ್ತೆ ಪ್ರಕರಣ – 4 ತಂಡ ಮಾಡಿ ಪತ್ತೆ ಕಾರ್ಯ

    GIRL CHIKKAMAGALURU

    12 ಬಣ್ಣಗಳು, 9 ಆಕಾರಗಳು, 13 ಹಣ್ಣುಗಳು, 15 ತರಕಾರಿಗಳು, 37 ಪ್ರಾಣಿಗಳು, ಏಳು ಇಂಗ್ಲೀಷ್ ಪದ್ಯಗಳು, 7 ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುವ ಮೂಲಕ ತನ್ನ ಅಸಾಧಾರಣ ಪ್ರತಿಭೆಯ ಮೂಲಕ ಬಾಲ್ಯದಲ್ಲೇ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದಾಳೆ. ಮಗಳ ಸಾಧನೆ ಕಂಡು ನಮಗೂ ತೀವ್ರ ಸಂತೋಷವಾಗಿದೆ ಎಂದು ಆರ್ವಿಯ ತಾಯಿ ಸ್ಮಿತಾ ಶಾಶ್ವತ್ ತಿಳಿಸಿದ್ದಾರೆ.

    GIRL CHIKKAMAGALURU

    ನಮ್ಮ ಮಗಳು ಆರ್ವಿ ಒಂದು ವರ್ಷ ತುಂಬಿದ ಮಗುವಾಗಿದ್ದಾಗಲೇ ತುಂಬಾ ಚೂಟಿಯಿಂದ ಇದ್ದಳು. ನಾವು ಏನು ಹೇಳಿದರೂ ನೆನಪಿಡುವ ಗುಣ ಹೊಂದಿದ್ದ ಅವಳಿಗೆ ಅಭ್ಯಾಸ ಮಾಡಿಸಿದ್ದೇವು. ಅದು ಅವಳಿಗೆ ಪ್ರಶಸ್ತಿ ದೊರೆಯಲು ಕಾರಣವಾಯಿತು ಎಂದು ಆರ್ವಿ ತಾಯಿ ಮಗಳ ಸಾಧನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: 50 ಲಕ್ಷ ಮೌಲ್ಯದ ಚಿನ್ನ, ನಗದು ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಎಂ.ಜಿ ಕೃಷ್ಣಮೂರ್ತಿ

    3 ವರ್ಷದ ಮಗುವಿನ ನೆನಪಿನ ಶಕ್ತಿ ಕಂಡು ಸ್ಥಳೀಯರು ಕೂಡ ಆಶ್ಚರ್ಯಚಕಿತರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 3ರ ಪೋರಿ ಆರ್ವಿ ಬಣಕಲ್ ಸಮೀಪದ ಕೂಡಹಳ್ಳಿಯ ಕೆ.ಎಸ್.ಶಾಶ್ವತ್ ಹಾಗೂ ಸ್ಮಿತಾ ದಂಪತಿಯ ಪುತ್ರಿಯಾಗಿದ್ದಾಳೆ.

     

  • ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ 2ರ ಬಾಲಕ ದಾಖಲೆ

    ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ 2ರ ಬಾಲಕ ದಾಖಲೆ

    ಬಾಗಲಕೋಟೆ: ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಬಾಗಲಕೋಟೆಯ 2ರ ಬಾಲಕ ದಾಖಲೆ ನಿರ್ಮಿಸಿದ್ದಾನೆ.

    ಡಾ. ಗಾಯತ್ರಿ, ಡಾ. ಜೈಪ್ರಕಾಶ್ ದಂಪತಿ ಪುತ್ರನಾದ ಮೌರ್ಯವರ್ಧನ್ ಚದುರಂಗಕ್ಕೆ ಸಂಬಂಧಿಸಿದ ವಿಷಯದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದ್ದಾನೆ.

    ಮೌರ್ಯವರ್ಧನ್ ತನ್ನ 2 ವರ್ಷ 26 ದಿನಗಳ ವಯಸ್ಸಿಗೆ ಚೆಸ್ ಬೋರ್ಡ್‍ನ ಮೇಲೆ ಎಲ್ಲಾ 32 ಚೆಸ್ ಕಾಯಿನ್‍ಗಳನ್ನು 1 ನಿಮಿಷ 47 ಸೆಕೆಂಡ್‍ಗಳಲ್ಲಿ ಸಮರ್ಪಕವಾಗಿ ಜೋಡಿಸಿದ್ದಾನೆ. ಇದರಿಂದಾಗಿ ಇವನು ಚೆಸ್ ಬೋರ್ಡ್‍ನ ಮೇಲೆ ಚೆಸ್ ಕಾಯಿನ್‍ಗಳನ್ನು ಸಮರ್ಪಕ ಹಾಗೂ ವೇಗವಾಗಿ ಜೋಡಿಸಿದ ಅತ್ಯಂತ ಕಿರಿಯ ವ್ಯಕ್ತಿ (Youngest to arrange chess pieces on a chess board) ಎಂಬುದಾಗಿ ದಿನಾಂಕ 8ಜೂನ್2021ಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್  ನಲ್ಲಿ ಹಾಗೂ ದಿನಾಂಕ 19ಜೂನ್2021ಕ್ಕೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದ್ದಾನೆ. ಇದನ್ನೂ ಓದಿ:  ಬಿಕಿನಿಯಲ್ಲಿ ಸಾರಾ ಅಲಿ ಖಾನ್ ಸಖತ್ ಹಾಟ್

    ಈ ಮೂಲಕವಾಗಿ ತಮಿಳುನಾಡಿನ 2.6 ವ. ವಯಸ್ಸಿನ ಬಾಲಕನ ಹೆಸರಿನಲ್ಲಿದ್ದ ದಾಖಲೆ ಮುರಿದು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾನೆ. ಈ ಸಾಧನೆಯನ್ನು ಪರಿಗಣಿಸಿ ಇಂಡಿಯಾ ಹಾಗೂ ಏಷ್ಯಾ ಬುಕ್ ಆಫ್  ರೆಕಾರ್ಡ್ಸ್​ವತಿಯಿಂದ ಪದಕ, ಸರ್ಟಿಫಿಕೇಟ್, ಗುರುತಿನ ಕಾರ್ಡ್, ರೆಕಾರ್ಡ್ಸ್​ ಪುಸ್ತಕ ಹಾಗೂ ಇನ್ನಿತರ ವಸ್ತುಗಳನ್ನು ನೀಡಿ ಗೌರವಿಸಿದೆ. ಈ ಹಿಂದೆ ತನ್ನ 1 ವರ್ಷ 9 ತಿಂಗಳ ವಯಸ್ಸಿಗೆ 20 ವಿವಿಧ ಪ್ರಕಾರಗಳಲ್ಲಿ 594 ಚಿತ್ರಗಳನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ Kids Appreciation ವಿಭಾಗದಲ್ಲಿ ಸೇರ್ಪಡೆಗೊಂಡು ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಾಧನೆ ಮಾಡಿ ಖ್ಯಾತಿ ಹೊಂದಿದ್ದನು. ಇದನ್ನೂ ಓದಿ:  ಅರುಣ್ ಸಾಗರ್ ಮಗನ ಸಾಧನೆ ಕೊಂಡಾಡಿದ ಸುದೀಪ್

    ಹೀಗೆ ತನ್ನ 2 ವರ್ಷ ವಯಸ್ಸಿಗೆ ಎರಡು ರಾಷ್ಟ್ರೀಯ ಮಟ್ಟದ ಹಾಗೂ ಒಂದು ಏಷ್ಯಾ ಮಟ್ಟದ ದಾಖಲೆ ನಿರ್ಮಿಸಿ ಬಾಲಕ ದೇಶಕ್ಕೆ ಕೀರ್ತಿಯನ್ನು ತಂದಿದ್ದಾನೆ. ಮೂಲತಃ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕು, ಆಲೂರು ಗ್ರಾಮದವರಾದ ಇವನ ಕುಟುಂಬ ಉದ್ಯೋಗದ ನಿಮಿತ್ತ ಪ್ರಸ್ತುತ ಜಮಖಂಡಿಯ ಮೈಗೂರು ಕಾಲೋನಿಯ ತಾತ್ಕಾಲಿಕ ನಿವಾಸಿಗಳಾಗಿದ್ದಾರೆ.

  • ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ 8 ವರ್ಷದ ಬಾಲಕಿ

    ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ 8 ವರ್ಷದ ಬಾಲಕಿ

    ಹಾವೇರಿ: ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಗುಂಡಗಟ್ಟಿ ಗ್ರಾಮದ ಕುಮಾರ ಗುಡದಳ್ಳಿ ಹಾಗೂ ಪೂರ್ಣಿಮಾ ದಂಪತಿಯ ಮಗಳಾದ 8 ವರ್ಷದ ನಮ್ರತಾ ಕುಮಾರ ಗುಡದಳ್ಳಿ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ನಮ್ರತಾ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಅಕ್ಕಿಆಲೂರಿನಲ್ಲಿ ಓದುತ್ತಿದ್ದಾಳೆ.

    ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ತನ್ನ ಹೆಸರನ್ನು ದಾಖಲಿಸಲು ಹಲವರು ವಿಷಯಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದಾಳೆ. 28 ರಾಜ್ಯಗಳು ಅವುಗಳ ರಾಜಧಾನಿಗಳು, 9 ಕೇಂದ್ರಾಡಳಿತ ಪ್ರದೇಶಗಳು ಅವುಗಳ ರಾಜಧಾನಿಗಳು, ಭಾರತದ ರಾಷ್ಟ್ರಪತಿಗಳು, ಭಾರತದ ಪ್ರಧಾನ ಮಂತ್ರಿಗಳು, ಕರ್ನಾಟಕದ ಮುಖ್ಯಮಂತ್ರಿಗಳು, ಕರ್ನಾಟಕದ ಜಿಲ್ಲೆಗಳು ಮತ್ತು ಮಹಾನಗರ ಪಾಲಿಕೆಗಳು, ಖಂಡಗಳು, ಮಹಾಸಾಗರಗಳು, ಸೌರವ್ಯೂಹದ ಗ್ರಹಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರನ್ನು ಹೇಳುತ್ತಾಳೆ.

    ಗಾದೆಮಾತುಗಳು, ಕರ್ನಾಟಕದ ರಾಜಮನೆತನಗಳು, ನದಿಗಳು, 100 ಸಾಮಾನ್ಯ ಜ್ಞಾನದ ಪ್ರಶೋತ್ತರಗಳು, 1ರಿಂದ 20ರ ವರೆಗಿನ ಮಗ್ಗಿಗಳು, 1ರಿಂದ 100ರ ವರೆಗಿನ ಸಮ-ಬೆಸ ಸಂಖ್ಯೆಗಳು, 100 ರಿಂದ 1ರ ವರೆಗಿನ ಬ್ಯಾಕ್‍ವರ್ಡ್ ನಂಬರ್ 50 ಅಪೋಸಿಟ್ ವಡ್ರ್ಸ್, ಗಣಿತದ ಚಿಹ್ನೆಗಳು, ಆಕಾರಗಳು ಗುರುತಿಸೋದು ಇವೆಲ್ಲವುಗಳನ್ನು ಪರಿಶೀಲಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲಿಸಿದೆ.

  • ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಬಿಗಿದು ಸಾಗರಕ್ಕೆ ಧುಮುಕಿದ 65ರ ಗಂಗಾಧರ್

    ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಬಿಗಿದು ಸಾಗರಕ್ಕೆ ಧುಮುಕಿದ 65ರ ಗಂಗಾಧರ್

    – ಪಡುಕೆರೆ ಕಡಲಲ್ಲಿ ಈಜಿ ರಾಷ್ಟ್ರದಾಖಲೆ

    ಉಡುಪಿ: ಜಿಲ್ಲೆ ಪಡುಕೆರೆ ಕಡಲ ತೀರ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಕ್ಷಿಯಾಗಿದೆ. ಗಂಗಾಧರ ಜಿ ಕಡೆಕಾರು ಹೆಸರು ದಾಖಲೆ ಪುಸ್ತಕದಲ್ಲಿ ಆಚ್ಚಾಗಿದೆ. 65 ವರ್ಷದ ಗಂಗಾಧರ್ ಮಾಡಿರುವ ಸಾಧನೆ ಅಸಾಧಾರಣವಾದದ್ದು.

    ಪಡುಕೆರೆಯಲ್ಲಿ ಗಂಗಾಧರ ಜಿ. ಕಡೆಕಾರ್ ಭೋರ್ಗರೆವ ಅರಬ್ಬಿ ಸಮುದ್ರಕ್ಕೆ ಪದ್ಮಾಸನ ಹಾಕಿ ಎರಡು ಕಾಲುಗಳನ್ನು ಸರಪಳಿಯಲ್ಲಿ ಬಿಗಿದು ಬೀಗ ಜಡಿದುಕೊಂಡು ಧುಮುಕಿ ದಾಖಲೆ ನಿರ್ಮಿಸಿದ್ದಾರೆ. ಒಂದು ಗಂಟೆ 13 ನಿಮಿಷ 7 ಸೆಕೆಂಡುಗಳ ಕಾಲ ನಿರಂತರವಾಗಿ ಈಜಿ ದಡ ಸೇರುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುಸ್ತಕ ಸೇರಿದ್ದಾರೆ. ಸಾಧನೆ ಮಾಡುವುದಕ್ಕೆ ವಯಸ್ಸು ಮುಖ್ಯ ಅಲ್ಲ, ಛಲ ಮುಖ್ಯ ಎಂದು ಸಾಬೀತುಪಡಿಸಿದ್ದಾರೆ.

    ತಮ್ಮ ನಲವತ್ತನೇ ವಯಸ್ಸಿನಲ್ಲಿ ಈಜಿನ ಬಗ್ಗೆ ಹೆಚ್ಚು ಗಮನ ಹರಿಸಿದ ಗಂಗಾಧರ್, ಇದೀಗ ತನ್ನ 65ನೇ ವಯಸ್ಸಿನಲ್ಲಿ ಯಾರೂ ಮಾಡದ ದಾಖಲೆ ಮಾಡಿದ್ದಾರೆ. ಸಂಸ್ಥೆ ಪ್ರಮುಖರು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಜನ ಪ್ರತಿನಿಧಿಗಳು ದಾಖಲೆಗೆ ಸಾಕ್ಷಿಯಾದರು. ಅಪಾಯಕಾರಿ ಜೆಲ್ ಫಿಶ್ ಗಳನ್ನು, ಅಬ್ಬರಿಸುವ ಕಡಲಿನ ಅಲೆಗಳನ್ನು ಹಿಮ್ಮೆಟ್ಟಿಸಿ ಗಂಗಾಧರ್ ಸಮುದ್ರ ತೀರ ಸೇರಿದಾಗ ಸಂಭ್ರಮ ಮನೆ ಮಾಡಿತು. ಹೂಹಾರ, ಶಾಲು ಹಾಕಿ, ಪಟಾಕಿ ಸಿಡಿಸಿ ಜನ ಸಂಭ್ರಮಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗಂಗಾಧರ್:
    ನಾನು ಬಾಲ್ಯದಲ್ಲೇ ಈಜು ಕಲಿತಿದ್ದೇನೆ. 60 ನೇ ವಯಸ್ಸಿನಲ್ಲಿ ಸ್ಪರ್ಧೆಗೆ ಬೇಕಾದ ಶೈಲಿಗಳನ್ನು ಮೈಗೂಡಿಸಿಕೊಂಡೆ. ನಾಲ್ಕು ವಿಧದ ಈಜು ನಾನು ಬಲ್ಲೆ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ನಾನು ಈಜಿ ಪ್ರಶಸ್ತಿ ಗೆದ್ದಿದ್ದೇನೆ. ಸಮುದ್ರದಲ್ಲಿ ಈಜುವದು ಸುಲಭವಲ್ಲ, ಕಳೆದ ಇಪ್ಪತ್ತು ದಿವಸಗಳಿಂದ ಕಾಲಿಗೆ ಸರಪಳಿ ಕಟ್ಟಿ ತರಬೇತಿ ಮಾಡುತ್ತಿದ್ದೇನೆ. ಜೆಲ್ ಮೀನುಗಳು ನನ್ನ ಮೇಲೆ ಅಟ್ಯಾಕ್ ಮಾಡುತ್ತಿದ್ದವು. ಇಂದು ಸಾಗರದ ಅಡಿಭಾಗದಲ್ಲಿ ಭಯಾನಕ ಮೀನುಗಳನ್ನು ಕಂಡೆ. ಇವತ್ತು ಸಹಕರಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅಧಿಕಾರಿಗಳಿಗೆ, ಸಿಬ್ಬಂದಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ, ನನ್ನ ಜೊತೆಗೆ ಇದ್ದ ಎಲ್ಲಾ ನನ್ನ ಸಾವಿರಾರು ಹಿತೈಷಿಗಳಿಗೆ ಧನ್ಯವಾದ ಎಂದು ಹೇಳಿದರು.

    ಶಾಸಕ ರಘುಪತಿ ಭಟ್ ಮಾತನಾಡಿ, ಗಂಗಾಧರ ಮಾಡಿರುವ ಸಾಧನೆ ರಾಜ್ಯವೇ ಹೆಮ್ಮೆ ಪಡುವಂಥದ್ದು. 65 ವರ್ಷದ ವ್ಯಕ್ತಿಯ ಈ ಸಾಧನೆ, ಗಿನ್ನೆಸ್ ರೆಕಾರ್ಡ್ ಆಗಬೇಕು. ರಫ್ ಸಮುದ್ರದಲ್ಲಿ ಈಜುವುದು ಸುಲಭದ ಮಾತಲ್ಲ. ಮುಂದೆ ಗಿನ್ನಿಸ್ ದಾಖಲೆಗೂ ಗಂಗಾಧರ್ ಸೇರ್ಪಡೆ ಆಗಬೇಕು. ಉಡುಪಿ ಕ್ಷೇತ್ರದ ಪರವಾಗಿ ಕರ್ನಾಟಕದ ಜನತೆಯ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹಾರೈಸಿದರು.

    ಇಂಡಿಯಾ ಬುಕ್ ಆಫ್ ರೆಕಾರ್ಡ್ ಜ್ಯೂರೇಟರ್ ಹರೀಶ್ ಮಾತನಾಡಿ, ಗಂಗಾಧರ್ ಅವರು ಉಡುಪಿಯಲ್ಲಿ ಒಂದು ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. ಒಂದು ಗಂಟೆ 13 ನಿಮಿಷದಲ್ಲಿ 7 ಸೆಕೆಂಡ್ ನಲ್ಲಿ 1400 ಮೀಟರ್ ಕ್ರಮಿಸಿದ್ದಾರೆ. ಲೋಟಸ್ ಫ್ಲೋಟ್ ವಿಭಾಗದಲ್ಲಿ ಈ ಸಾಧನೆಯನ್ನು ಮಾಡಿರುವ ಪ್ರಥಮರು ಇವರು. 65ನೇ ವಯಸ್ಸಿನಲ್ಲಿ ಈ ವಿಭಾಗದಲ್ಲಿ ಈವರೆಗೆ ಯಾರು ದಾಖಲೆ ಮಾಡಿಲ್ಲ. ಸದ್ಯಕ್ಕೆ ಗಂಗಾಧರ್ ಅವರಿಗೆ ಯಾವುದೇ ಪ್ರತಿಸ್ಪರ್ಧಿ ಇಲ್ಲ. ಜಿಪಿಎಸ್ ಮೂಲಕ ನಾವು ಕ್ರಮಿಸಿದ ದೂರವನ್ನು ಅಳತೆ ಮಾಡಿದ್ದೇವೆ. ನಾಲ್ಕು ಕ್ಯಾಮೆರಾದಲ್ಲಿ ಗಂಗಾಧರ ಸಾಧನೆ ದಾಖಲಾಗಿದೆ. ಇದೊಂದು ದಾಖಲೆ ಎಂದು ಈಗಲೇ ನಾವು ಪರಿಗಣಿಸಿದ್ದೇವೆ. ಪ್ರಾವಿಷನರಿ ಸರ್ಟಿಫಿಕೇಟನ್ನು ಕೊಟ್ಟಿದ್ದೇವೆ. ಕೆಲ ದಿನಗಳ ನಂತರ ಒರಿಜಿನಲ್ ಸರ್ಟಿಫಿಕೇಟ್ ಗಂಗಾಧರ್ ಅವರ ಕೈ ಸೇರುತ್ತದೆ ಎಂದರು.

  • ಕುಮಟಾದ 3 ವರ್ಷದ ಬಾಲಕನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್

    ಕುಮಟಾದ 3 ವರ್ಷದ ಬಾಲಕನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ಅನಿತಾ-ಸಂತೋಷ್ ನಾಯ್ಕ ದಂಪತಿಯ ಮೂರು ವರ್ಷದ ಏಳು ತಿಂಗಳು ಪುತ್ರ ಸಂಪ್ರೀತ್ ಅತೀವ ಜ್ಞಾಪಕ ಶಕ್ತಿ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದಿದ್ದಾನೆ.

    ಮೂರು ವರ್ಷ ಏಳು ತಿಂಗಳ ಈ ಪುಟ್ಟ ಬಾಲಕ ಭಾರತದ ರಾಜ್ಯಗಳ ರಾಜಧಾನಿ ಹೆಸರು, ರಾಷ್ಟ್ರಗಳ ರಾಜಧಾನಿ, ನ್ಯಾಷನಲ್ ಸಿಂಬಲ್, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಸಂಖ್ಯೆಗಳು, ದೇಹದ ಎಲ್ಲಾ ಭಾಗಗಳ ಹೆಸರು ಹೇಳುತ್ತಾನೆ. ಜೊತೆಗೆ ಕನ್ನಡ, ಇಂಗ್ಲಿಷ್, ಹಿಂದಿ ಅಕ್ಷರಗಳನ್ನು ಹೇಳುವುದು ಮತ್ತು ಗುರುತಿಸಿ ಬರೆಯುತ್ತಾನೆ. ರಾಷ್ಟ್ರೀಯ, ಅಂತರಾಷ್ಟ್ರೀಯ ನಾಯಕರ ಹೆಸರು, ರಾಷ್ಟ್ರಗೀತೆ ಹೇಳುತ್ತಾನೆ.

    ಈವರೆಗೂ ಅಂಗನವಾಡಿಗೂ ಹೋಗದ ಈ ಪುಟ್ಟ ಬಾಲಕನಿಗೆ ತಾಯಿ ಅನಿತಾ ಸಂತೋಷ್ ನಾಯ್ಕರವರೇ ಶಿಕ್ಷಕರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಈತ ಎಲ್ಲವನ್ನೂ ನೆನಪಿಟ್ಟುಕೊಂಡು ಗುರುತಿಸಿ, ಬರೆಯುವ ಜೊತೆ ಅಕ್ಷರದಲ್ಲಿ ಸಹ ಬರೆಯುತ್ತಾನೆ. ಈತನ ಅತೀವ ಜ್ಞಾಪಕ ಶಕ್ತಿ ಕಾರಣದಿಂದ ಇಂಡಿಯೋ ಬುಕ್ ಆಫ್ ರೆಕಾಡರ್ವ ನಲ್ಲಿ ದಾಖಲೆ ಬರೆದಿದ್ದಾನೆ. ತಾಯಿಯ ಆರೈಕೆಯಲ್ಲಿ ಅತೀವ ಜ್ಞಾಪಕ ಶಕ್ತಿಯ ಕನಿಯಾಗಿರುವ ಈತನನ್ನು ಐ.ಪಿ.ಎಸ್ ಮಾಡಬೇಕು ಎನ್ನುವ ಹಂಬಲ ಇವರ ಪೋಷಕರದ್ದು. ಈ ಚಿಕ್ಕ ವಯಸ್ಸಿನಲ್ಲಿಯೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮಾಡಿದ್ದು ಈತನ ಸಾಧನೆಗೆ ಸ್ಥಳೀಯರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.