Tag: INDIA Bloc

  • ವಿಶೇಷ ಸ್ಥಾನಮಾನ ರದ್ದು ಬಳಿಕ ಜಮ್ಮು-ಕಾಶ್ಮೀರದಲ್ಲಿ ‘ಇಂಡಿಯಾ’ ಒಕ್ಕೂಟ ಮುನ್ನಡೆ

    ವಿಶೇಷ ಸ್ಥಾನಮಾನ ರದ್ದು ಬಳಿಕ ಜಮ್ಮು-ಕಾಶ್ಮೀರದಲ್ಲಿ ‘ಇಂಡಿಯಾ’ ಒಕ್ಕೂಟ ಮುನ್ನಡೆ

    ಶ್ರೀನಗರ: ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.

    ಐಎನ್‌ಡಿಐಎ ಒಕ್ಕೂಟ (INDIA Bloc) ಜಮ್ಮು ಮತ್ತು ಕಾಶ್ಮೀರದಲ್ಲಿ 5 ರ ಪೈಕಿ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್‌ಡಿಎಗೆ (NDA) 1 ಸ್ಥಾನ ಸಿಕ್ಕಿದೆ ಎಂದು ಟ್ರೆಂಡ್‌ಗಳು ಹೇಳುತ್ತಿವೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಫಲಿತಾಂಶ ನೋಡಲು ಪ್ರಜ್ವಲ್ ರೇವಣ್ಣಗೆ ಅವಕಾಶ

    ಕಾಶ್ಮೀರದ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪೈಕಿ ಒಮರ್ ಅಬ್ದುಲ್ಲಾ ಮುನ್ನಡೆಯಲ್ಲಿದ್ದಾರೆ. ಆದರೆ ಮೆಹಬೂಬಾ ಮುಫ್ತಿ ಅವರು 60,000 ಮತಗಳ ಹಿನ್ನಡೆ ಅನುಭವಿಸಿದ್ದಾರೆ.

    ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ನ್ಯಾಶನಲ್ ಕಾನ್ಫರೆನ್ಸ್ (NC) ಒಮರ್ ಅಬ್ದುಲ್ಲಾ ಅವರು ತಮ್ಮ ಪ್ರತಿಸ್ಪರ್ಧಿ ಜೆ & ಕೆ ಪೀಪಲ್ಸ್ ಕಾನ್ಫರೆನ್ಸ್ (JKPC) ನ ಸಜಾದ್ ಗನಿ ಲೋನ್ ಅವರಿಗಿಂತ ಮುಂದಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯನ್ನು ಶೀಘ್ರದಲ್ಲಿಯೇ ನಡೆಸುವುದಾಗಿ ಚುನಾವಣಾ ಆಯೋಗ ಸೋಮವಾರ ಹೇಳಿತ್ತು. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನದ ಪ್ರಮಾಣದಿಂದ ಚುನಾವಣಾ ಆಯೋಗವು ಉತ್ಸುಕವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಜನರ ಉತ್ಸುಕತೆ ತೋರಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: NDA vs I.N.D.I.A ನೆಕ್‌ ಟು ನೆಕ್‌ ಫೈಟ್‌ – ಎನ್‌ಡಿಎ 295 ಕ್ಷೇತ್ರಗಳಲ್ಲಿ ಮುನ್ನಡೆ

  • ಎನ್‌ಡಿಎ ಸರ್ಕಾರವನ್ನು ಮತ್ತೆ ಆಯ್ಕೆ ಮಾಡಲು ಜನ ದಾಖಲೆ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ: ಮೋದಿ

    ಎನ್‌ಡಿಎ ಸರ್ಕಾರವನ್ನು ಮತ್ತೆ ಆಯ್ಕೆ ಮಾಡಲು ಜನ ದಾಖಲೆ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ: ಮೋದಿ

    – ಜಾತಿವಾದಿಗಳು, ಕೋಮುವಾದಿಗಳು, ಭ್ರಷ್ಟರು – ‘ಇಂಡಿಯಾ’ ಒಕ್ಕೂಟಕ್ಕೆ ಪ್ರಧಾನಿ ಟಾಂಗ್‌

    ನವದೆಹಲಿ: ಎನ್‌ಡಿಎ (NDA) ಸರ್ಕಾರವನ್ನು ಮರು ಆಯ್ಕೆ ಮಾಡಲು ಭಾರತದ ಜನರು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ.

    ಚುನಾವಣೋತ್ತರ ಸಮೀಕ್ಷೆ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಜನರು ನಮ್ಮ ಟ್ರ್ಯಾಕ್ ರೆಕಾರ್ಡ್ ಅನ್ನು ನೋಡಿದ್ದಾರೆ. ನಮ್ಮ ಕೆಲಸವು ಬಡವರ, ಅವಕಾಶ ವಂಚಿತರು ಮತ್ತು ದೀನದಲಿತರ ಜೀವನದಲ್ಲಿ ಗುಣಾತ್ಮಕ ಬದಲಾವಣೆಯನ್ನು ತಂದಿದೆ ಎಂದಿದ್ದಾರೆ. ಇದನ್ನೂ ಓದಿ: Exit Polls | ಮೋದಿ ಹ್ಯಾಟ್ರಿಕ್‌ – 350ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎನ್‌ಡಿಎ

    ಅದೇ ಸಮಯದಲ್ಲಿ, ಭಾರತದಲ್ಲಿನ ಸುಧಾರಣೆಗಳು ಭಾರತವನ್ನು ಐದನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಿ ಹೇಗೆ ಮುನ್ನಡೆಸಿದೆ ಎಂಬುದನ್ನು ಅವರು ನೋಡಿದ್ದಾರೆ. ನಮ್ಮ ಪ್ರತಿಯೊಂದು ಯೋಜನೆಯು ಪಕ್ಷಪಾತವಿಲ್ಲದೇ ಫಲಾನುಭವಿಗಳನ್ನು ನೇರವಾಗಿ ತಲುಪಿದೆ ಎಂದು ಹೇಳಿದ್ದಾರೆ.

    ಅವಕಾಶವಾದಿ ‘ಇಂಡಿ’ ಒಕ್ಕೂಟವು ಮತದಾರರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಅವರು ಜಾತಿವಾದಿಗಳು, ಕೋಮುವಾದಿಗಳು ಮತ್ತು ಭ್ರಷ್ಟರು. ಬೆರಳೆಣಿಕೆಯ ತಮ್ಮದೇ ಕುಟುಂಬದವರನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಈ ಒಕ್ಕೂಟವು ರಾಷ್ಟ್ರಕ್ಕೆ ಭವಿಷ್ಯದ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ವಿಫಲವಾಗಿದೆ. ನನ್ನನ್ನು ಟೀಕಿಸುವುದಕ್ಕಷ್ಟೇ ಪ್ರಚಾರವನ್ನು ಸೀಮಿತಿಗೊಳಿಸಿಕೊಂಡರು. ಇಂತಹ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ ಎಂದು ಇಂಡಿಯಾ ಮೈತ್ರಿಕೂಟಕ್ಕೆ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: Exit Polls | ಕೇರಳದಲ್ಲೂ ಖಾತೆ ತೆರೆಯಲಿದೆ ಬಿಜೆಪಿ

    ನಾನು ಪ್ರತಿಯೊಬ್ಬ ಎನ್‌ಡಿಎ ಕಾರ್ಯಕರ್ತರನ್ನು ಶ್ಲಾಘಿಸಲು ಬಯಸುತ್ತೇನೆ. ಭಾರತ ಆಗಾಗ್ಗೆ ತೀವ್ರವಾದ ಶಾಖವನ್ನು ಎದುರಿಸುತ್ತಿದೆ. ನಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ಜನರಿಗೆ ಸೂಕ್ಷ್ಮವಾಗಿ ವಿವರಿಸಿ ಮತ ಚಲಾಯಿಸುವಂತೆ ಪ್ರೇರೇಪಿಸಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ನಮ್ಮ ಕಾರ್ಯಕರ್ತರು ನಮ್ಮ ದೊಡ್ಡ ಶಕ್ತಿ ಎಂದು ಕೊಂಡಾಡಿದ್ದಾರೆ.

  • ‘ಇಂಡಿಯಾ’ ಮೈತ್ರಿಕೂಟ ಕನಿಷ್ಠ 295 ಸ್ಥಾನಗಳನ್ನು ಗೆಲ್ಲಲಿದೆ: ಖರ್ಗೆ ಭರವಸೆ

    ‘ಇಂಡಿಯಾ’ ಮೈತ್ರಿಕೂಟ ಕನಿಷ್ಠ 295 ಸ್ಥಾನಗಳನ್ನು ಗೆಲ್ಲಲಿದೆ: ಖರ್ಗೆ ಭರವಸೆ

    ನವದೆಹಲಿ: ‘ಇಂಡಿಯಾ’ ಮೈತ್ರಿಕೂಟ (INDIA Bloc) ಕನಿಷ್ಠ 295 ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ (Mallikarjun Kharge) ಭರವಸೆ ವ್ಯಕ್ತಪಡಿಸಿದ್ದಾರೆ.

    ದೆಹಲಿಯಲ್ಲಿರುವ (New Delhi) ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಒಕ್ಕೂಟದ ನಾಯಕರ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಅವರು, ನಾವು ಒಗ್ಗಟ್ಟಾಗಿದ್ದೇವೆ ಮತ್ತು ನಾವು ಒಗ್ಗಟ್ಟಿನಿಂದ ಇರುತ್ತೇವೆ. ನಮ್ಮನ್ನು ವಿಭಜಿಸಲು ಪ್ರಯತ್ನಿಸಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: Exit Polls ಚರ್ಚೆಗಳಲ್ಲಿ INDIA ಒಕ್ಕೂಟ ಭಾಗವಹಿಸುತ್ತೆ: ಪವನ್‌ ಖೇರಾ

    ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದ ದಿನದಂದು ಇಂಡಿಯಾ ಒಕ್ಕೂಟದ ನಾಯಕರು ಸಭೆ ನಡೆಸಿದರು. ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಚುನಾವಣೆಯ ಕಾರಣ ಮತ್ತು ರೆಮಲ್ ಚಂಡಮಾರುತದ ಪರಿಣಾಮವನ್ನು ಪರಿಶೀಲಿಸುವ ಉದ್ದೇಶದಿಂದ ಸಭೆಗೆ ಹಾಜರಾಗುವುದಿಲ್ಲ ಎಂದು ಈಗಾಗಲೇ ಹೇಳಿದ್ದರು. ಆದ್ದರಿಂದ ಸಭೆಗೆ ಹಾಜರಿರಲಿಲ್ಲ. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಸಭೆಗೆ ಗೈರಾಗಿದ್ದರು.

    ಕಾಂಗ್ರೆಸ್, ಸಮಾಜವಾದಿ ಪಕ್ಷ, ಸಿಪಿಐ-ಎಂ, ಸಿಪಿಐ, ಡಿಎಂಕೆ, ಜೆಎಂಎಂ, ಎಎಪಿ, ಆರ್‌ಜೆಡಿ, ಶಿವಸೇನೆ (ಯುಬಿಟಿ), ಮತ್ತು ಎನ್‌ಸಿಪಿ (ಶರದ್ ಪವಾರ್) ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತದಾನದ ವೇಳೆ ಹಿಂಸಾಚಾರ – EVM ಅನ್ನು ಕೊಳಕ್ಕೆ ಎಸೆದ ಕಿಡಿಗೇಡಿಗಳು

    ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆಸಿ ವೇಣುಗೋಪಾಲ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಎನ್‌ಸಿಪಿ ನಾಯಕ ಜಿತೇಂದ್ರ ಅವದ್, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಎಎಪಿ ಮುಖಂಡ ರಾಘವ್ ಚಡ್ಡಾ, ಸಂಜಯ್ ಸಿಂಗ್. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಂಜಯ್ ಯಾದವ್, ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್, ಕಲ್ಪನಾ ಸೊರೆನ್, ಡಿಎಂಕೆಯ ಟಿಆರ್ ಬಾಲು, ಸಿಪಿಐನ ಡಿ ರಾಜಾ, ಸಿಪಿಐಎಂ ನಾಯಕ ಸೀತಾರಾಮ್ ಯೆಚೂರಿ, ಸಿಪಿಐ(ಎಂಎಲ್) ನಾಯಕ ದೀಪಂಕರ್ ಭಟ್ಟಾಚಾರ್ಯ, ಶಿವಸೇನಾ (ಯುಬಿಟಿ) ಮುಖಂಡ ಅನಿಲ್ ದೇಸಾಯಿ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಇದ್ದರು.

    ಖರ್ಗೆ ಅವರು ಸಭೆಯ ವೀಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ ಎಣಿಕೆ ದಿನದ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಲು ಇಂಡಿಯಾ ಒಕ್ಕೂಟದ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಶುಭ ಸುದ್ದಿ; ಪಿಒಕೆ ದೇಶದ ಅವಿಭಾಜ್ಯ ಅಂಗವಲ್ಲ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್!

  • ಲೋಕಸಭಾ ಚುನಾವಣೆ ಟಿಕೆಟ್ ಮಿಸ್ – ಲೋಕ ಜನಶಕ್ತಿ ಪಕ್ಷದ 22 ನಾಯಕರು ರಾಜೀನಾಮೆ

    ಲೋಕಸಭಾ ಚುನಾವಣೆ ಟಿಕೆಟ್ ಮಿಸ್ – ಲೋಕ ಜನಶಕ್ತಿ ಪಕ್ಷದ 22 ನಾಯಕರು ರಾಜೀನಾಮೆ

    – ಇಂಡಿಯಾ ಒಕ್ಕೂಟಕ್ಕೆ ಬೆಂಬಲ

    ಪಾಟ್ನಾ: ಲೋಕಸಭೆ ಚುನಾವಣೆಗೆ (Lok Sabha Election) ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಚಿರಾಗ್ ಪಾಸ್ವಾನ್ (Chirag Paswan) ನೇತೃತ್ವದ ಲೋಕ ಜನಶಕ್ತಿ ಪಕ್ಷದ (Lok Janshakti Party) 22 ನಾಯಕರು ಏಕಕಾಲದಲ್ಲಿ ರಾಜೀನಾಮೆ (Resignation) ಸಲ್ಲಿಸಿದ್ದಾರೆ.

    ರಾಜೀನಾಮೆ ನೀಡಿದ ಪ್ರಮುಖರಲ್ಲಿ ಮಾಜಿ ಸಚಿವ ರೇಣು ಕುಶ್ವಾಹ, ಮಾಜಿ ಶಾಸಕ ಮತ್ತು ಎಲ್‌ಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, ರಾಜ್ಯ ಸಂಘಟನೆ ಸಚಿವ ರವೀಂದ್ರ ಸಿಂಗ್, ಅಜಯ್ ಕುಶ್ವಾಹ, ಸಂಜಯ್ ಸಿಂಗ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಡಾಂಗಿ ಸೇರಿದ್ದಾರೆ. ಹಣಕ್ಕಾಗಿ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದನ್ನೂ ಓದಿ: ನಾನು ಸನಾತನ ವಿರೋಧಿ ಘೋಷಣೆ ಕೂಗಲ್ಲ – ಕಾಂಗ್ರೆಸ್‌ಗೆ ಗೌರವ್ ವಲ್ಲಭ್ ರಾಜೀನಾಮೆ

    ಪಕ್ಷಕ್ಕೆ ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಂಸದೆ ರೇಣು ಕುಶ್ವಾಹಾ, ಹೊರಗಿನವರಿಗೆ ಟಿಕೆಟ್ ಕೊಡುವ ಬದಲು ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ ಎಂದರೆ ನಿಮ್ಮ ಪಕ್ಷದಲ್ಲಿ ನಾವ್ಯಾರು ಸಮರ್ಥರು ಇಲ್ವಾ? ನಾವು ಪಕ್ಷಕ್ಕಾಗಿ ಕಾರ್ಮಿಕರಾಗಿ ಸೇವೆ ಸಲ್ಲಿಸಲು ಬಂದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೈಸೂರಿನಲ್ಲಿ 98.52 ಕೋಟಿ ರೂ. ಮೊತ್ತದ ಬಿಯರ್ ಜಪ್ತಿ

    ಇನ್ನು ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಶಾಸಕ ಮತ್ತು ಎಲ್‌ಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, ಬಂಡಾಯ ಎಲ್‌ಜೆಪಿ ನಾಯಕರು ಈಗ ಇಂಡಿಯಾ ಒಕ್ಕೂಟವನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಶೂನ್ಯ ಮಳೆ ದಾಖಲು

    ದೇಶದಲ್ಲಿ ಇಂತಹ ಮಹತ್ವದ ಚುನಾವಣೆಗಳು ನಡೆಯುತ್ತಿರುವಾಗ ಎಲ್‌ಜೆಪಿ ವರಿಷ್ಠರು ಪಕ್ಷದವರಿಗೆ ಟಿಕೆಟ್ ನೀಡದೆ ಕಾರ್ಯಕರ್ತರನ್ನು ಬೆಚ್ಚಿ ಬೀಳಿಸಿದ್ದಾರೆ. ‘ಚಿರಾಗ್ ಪಾಸ್ವಾನ್‌ಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಹಗಲಿರುಳು ಎಬ್ಬಿಸುತ್ತಿದ್ದ ಜನರು ‘ಹೊಸ ಬಿಹಾರ’ದ ನಿರೀಕ್ಷೆಯಲ್ಲಿದ್ದರು. ಇದೀಗ ಅವರಿಗೆ ದ್ರೋಹ ಮಾಡಲಾಗಿದೆ. ಅವರ ಆಕಾಂಕ್ಷೆಗಳನ್ನು ಪುಡಿಮಾಡಲಾಗಿದೆ. ಈಗ ದೇಶವನ್ನು ಉಳಿಸಲು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಬೇಕು. ಹಾಗಾಗಿ ನಾವು ಇಂಡಿಯಾ ಒಕ್ಕೂಟವನ್ನು ಬೆಂಬಲಿಸುತ್ತೇವೆ ಎಂದರು. ಇದನ್ನೂ ಓದಿ: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ

    ಪಕ್ಷದ ಸಂಘಟನಾ ಕಾರ್ಯದರ್ಶಿ ರವೀಂದ್ರ ಸಿಂಗ್ ಅವರು ಚಿರಾಗ್ ಪಾಸ್ವಾನ್ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಚಿರಾಗ್ ಪಾಸ್ವಾನ್ ಅವರು ಬಿಹಾರದ ಜನರೊಂದಿಗೆ ಭಾವನಾತ್ಮಕ ಆಟವಾಡಿದ್ದಾರೆ. ನಮ್ಮ ಪರಿಶ್ರಮದಿಂದ ಐದು ಸೀಟುಗಳು ಸಿಕ್ಕಾಗ ಆ ಎಲ್ಲಾ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಾರೆ. ಅವರಿಗೆ ಬಿಹಾರದ ಜನರು ಉತ್ತರ ನೀಡಲಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬಿಸಿಲಿನ ಬೇಗೆಗೆ ಬೆಂಗಳೂರು ತತ್ತರ – 8 ವಲಯಗಳಲ್ಲಿ ದಾಖಲೆಯ ತಾಪಮಾನ

    ಬಿಹಾರದ 40 ಲೋಕಸಭಾ ಸ್ಥಾನಗಳ ಪೈಕಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ವೈಶಾಲಿ, ಹಾಜಿಪುರ್, ಸಮಸ್ತಿಪುರ್, ಖಗಾರಿಯಾ ಮತ್ತು ಜಮುಯಿ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಬಿಹಾರದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತ ಏಪ್ರಿಲ್ 19, ಎರಡನೇ ಹಂತ ಏಪ್ರಿಲ್ 26, ಮೂರನೇ ಹಂತ ಮೇ 7, ನಾಲ್ಕನೇ ಹಂತ ಮೇ 13, ಐದನೇ ಹಂತ ಮೇ 20, ಆರನೇ ಹಂತ ಮೇ 25 ಮತ್ತು ಏಳನೇ ಹಂತ ಜೂನ್ 1 ರಂದು ನಡೆಯಲಿದೆ. ಇದನ್ನೂ ಓದಿ: ತೀವ್ರ ಬರ – ಯಾದಗಿರಿ ಜಿಲ್ಲೆಯ 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

  • ಬಿಹಾರದಲ್ಲಿ ಬಿಜೆಪಿ ಮೈತ್ರಿ ಪಕ್ಷಕ್ಕೆ 8 ಸೀಟ್‌ ಆಫರ್‌ ಕೊಟ್ಟ ‘ಇಂಡಿಯಾ’ ಮೈತ್ರಿಕೂಟ

    ಬಿಹಾರದಲ್ಲಿ ಬಿಜೆಪಿ ಮೈತ್ರಿ ಪಕ್ಷಕ್ಕೆ 8 ಸೀಟ್‌ ಆಫರ್‌ ಕೊಟ್ಟ ‘ಇಂಡಿಯಾ’ ಮೈತ್ರಿಕೂಟ

    ನವದೆಹಲಿ: ಬಿಹಾರ (Bihar) ವಿಷಯದಲ್ಲಿ ಎನ್‌ಡಿಎಯಲ್ಲಿ ಸೀಟು ಹಂಚಿಕೆಯ ಜಗಳ ಮುಂದುವರಿದಿದ್ದು, ಇಂಡಿಯಾ ಮೈತ್ರಿಕೂಟವು (INDIA Bloc) ರಾಜಕೀಯ ಚದುರಂಗದಾಟಕ್ಕೆ ಮುಂದಾಗಿದೆ. ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್‌ಗೆ ರಾಜ್ಯದಲ್ಲಿ ಎಂಟು ಮತ್ತು ಉತ್ತರ ಪ್ರದೇಶದಲ್ಲಿ ಎರಡು ಲೋಕಸಭಾ ಸ್ಥಾನಗಳನ್ನು ಬಿಟ್ಟುಕೊಡುವ ಆಫರ್‌ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ಪಾಸ್ವಾನ್‌ಗೆ ಬಿಹಾರದಲ್ಲಿ ಎನ್‌ಡಿಎಯಿಂದ (NDA) ಕೇವಲ 6 ಕ್ಷೇತ್ರಗಳನ್ನು ಮಾತ್ರ ನೀಡುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಇಂಡಿಯಾ ಮೈತ್ರಿಕೂಟವು, 2019 ರಲ್ಲಿ ಅವಿಭಜಿತ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಸ್ಪರ್ಧಿಸಿದ್ದ ಎಲ್ಲಾ ಆರು ಕ್ಷೇತ್ರಗಳ ಜೊತೆ ಬಿಹಾರದಲ್ಲಿ ಎರಡು ಹೆಚ್ಚುವರಿ ಕ್ಷೇತ್ರಗಳು ಮತ್ತು ಉತ್ತರ ಪ್ರದೇಶದ ಎರಡು ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ತಿಳಿಸಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ರಾರಾಜಿಸಿದ ಮೋದಿ ಫ್ಲೆಕ್ಸ್‌ – ಪ್ರಧಾನಿಗೆ ಭವ್ಯ ಸ್ವಾಗತಕ್ಕೆ ಸಜ್ಜು

    ಪಕ್ಷದ ಮುಖ್ಯಸ್ಥ ಮತ್ತು ಹಿರಿಯ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ಒಂದು ವರ್ಷದ ನಂತರ ಪರಾಸ್ ಅವರು ಬಂಡಾಯವೆದ್ದರು. ಬಳಿಕ 2021 ರಲ್ಲಿ ಲೋಕ ಜನಶಕ್ತಿ ಪಕ್ಷವು ವಿಭಜನೆಯಾಯಿತು.

    ಪಾಸ್ವಾನ್, ಪರಾಸ್ ಅವರ ಸಹೋದರ ಮತ್ತು ಚಿರಾಗ್ ಪಾಸ್ವಾನ್ ಅವರ ತಂದೆ. ಪರಾಸ್ ಅವರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಕ್ಯಾಬಿನೆಟ್ ಸ್ಥಾನ ನೀಡಿದ ನಂತರ, ಚಿರಾಗ್ ಪಾಸ್ವಾನ್ ಜನತಾ ದಳ ಯುನೈಟೆಡ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದಾಗ್ಯೂ, ಅವರು ಬಿಜೆಪಿ ಮತ್ತು ಪಿಎಂ ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡು ದೂರವಿದ್ದರು. ಇದನ್ನೂ ಓದಿ: ಇಡಿ ವಿಚಾರಣೆಗೆ ಗೈರು – ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

    ನಿತೀಶ್‌ ಕುಮಾರ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ 2020 ರಲ್ಲಿ ಎನ್‌ಡಿಎ ತೊರೆದ ನಂತರ, ಕಳೆದ ವರ್ಷ ಬಿಹಾರ ಮುಖ್ಯಮಂತ್ರಿ ಲಾಲು ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಒಳಗೊಂಡಿರುವ ಮಹಾಘಟಬಂಧನ್‌ನ ಭಾಗವಾಗಿದ್ದಾಗ ಚಿರಾಗ್ ಪಾಸ್ವಾನ್ ಮತ್ತೆ ಮೈತ್ರಿ ಮಾಡಿಕೊಂಡಿದ್ದರು.

  • ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

    ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

    ಲೋಕಸಭಾ ಚುನಾವಣೆಗೆ (General Elections 2024) ವೇದಿಕೆ ಸಿದ್ಧವಾಗಿದೆ. ಅಖಾಡದಲ್ಲಿ ಸೆಣಸಾಡಲು ಪೈಲ್ವಾನರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಒಂದೆಡೆ ಆಡಳಿತಾರೂಢ ಬಿಜೆಪಿ (BJP) ನೇತೃತ್ವದ ಎನ್‌ಡಿಎ ಒಕ್ಕೂಟ (NDA) ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಎನ್‌ಡಿಎ ಒಕ್ಕೂಟವನ್ನು ಮಟ್ಟಹಾಕಲು ಒಂದಾಗಿದ್ದ ಯುಪಿಎ ನೇತೃತ್ವದ ಇಂಡಿಯಾ ಮೈತ್ರಿಕೂಟ ಈಗ ನಾಲ್ಕು ದಿಕ್ಕಿಗೂ ಹರಿದು ಹಂಚಿಹೋಗಿದೆ. ಒಡೆದ ಮಡಿಕೆಯಂತಾಗಿರುವ ಮೈತ್ರಿಕೂಟವನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್?

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ಮತ್ತೊಂದು ಗೆಲುವು ಸಾಧಿಸುವುದನ್ನು ತಡೆಯಲು ರಚಿಸಲಾಗಿದ್ದ ‘ಇಂಡಿಯಾ’ ಬಣವು (INDIA Alliance) ಶಿಥಿಲಗೊಳ್ಳುತ್ತಿರುವಂತೆ ತೋರುತ್ತಿದೆ. ಮೈತ್ರಿಕೂಟದ ಭಾಗವಾಗಿದ್ದ ತೃಣಮೂಲ ಕಾಂಗ್ರೆಸ್ ಸಮಿತಿ (ಟಿಎಂಸಿ), ಜೆಡಿಯು, ಆರ್‌ಎಲ್‌ಡಿ ಪಕ್ಷಗಳು ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ಗೆ ನೀಡಿದ್ದ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿವೆ. ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿಯೇ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದ ಎಸ್‌ಪಿ ಮತ್ತು ಎಎಪಿ ಸಂಧಾನ ಮಾತುಕತೆ ಬಳಿಕ ಮತ್ತೆ ಮೈತ್ರಿಕೂಟಕ್ಕೆ ವಾಪಸ್ ಆಗಿವೆ. ಮೈತ್ರಿಕೂಟದಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯವನ್ನು ಕಾಂಗ್ರೆಸ್‌ ಹೇಗೆ ನಿಭಾಯಿಸಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಇದನ್ನೂ ಓದಿ: I.N.D.I.A ಮೈತ್ರಿಕೂಟದ ಜವಾಬ್ದಾರಿ ಮಲ್ಲಿಕಾರ್ಜುನ್‌ ಖರ್ಗೆ ಹೆಗಲಿಗೆ

    ಕಮಲ ಮುಡಿದ ಜೆಡಿಯು!
    ವಿಪಕ್ಷಗಳ ಮೈತ್ರಿಕೂಟಕ್ಕೆ ಐಎನ್‌ಡಿಐಎ ಹೆಸರು ಸೇರಿದಂತೆ ಹಲವು ವಿಚಾರಗಳಿಗಾಗಿ ಮುನಿಸಿಕೊಂಡು ಬಿಹಾರ ಸಿಎಂ ನಿತೀಶ್ ಕುಮಾರ್ ಮಹಾಘಟಬಂಧನದಿಂದ ಹೊರಬಂದರು. ನಂತರ ಮಹಾಘಟಬಂಧನ ಜೊತೆಗಿನ ಮೈತ್ರಿ ತೊರೆದು ಬಿಜೆಪಿ ಸೇರಿ ಬಿಹಾರದಲ್ಲಿ ಸರ್ಕಾರ ರಚಿಸಿದರು. ಇಂಡಿಯಾ ಮೈತ್ರಿಕೂಟದ ಕಥೆ ಈಗ ಮುಗಿದ ಅಧ್ಯಾಯ ಎಂಬ ಮಾತುಗಳನ್ನು ನಿತೀಶ್ ಕುಮಾರ್ ಆಡುತ್ತಿದ್ದಾರೆ. ಇಂಡಿಯಾ ಒಕ್ಕೂಟದ ಅವಿಭಾಜ್ಯ ಅಂಗವೇ ಆಗಿದ್ದ ಜೆಡಿಯು ಇನ್ಮುಂದೆ ಮೈತ್ರಿಯ ಭಾಗವಾಗಿಲ್ಲ. ಅಲ್ಲಿ ಎಲ್ಲವೂ ಸರಿಯಿಲ್ಲ ಎಂದು ನಿತೀಶ್ ಕುಮಾರ್ ಮೈತ್ರಿಕೂಟದಿಂದ ಹೊರಬರುತ್ತಿದ್ದಂತೆ ಅನೇಕ ರಾಜಕೀಯ ಬೆಳವಣಿಗೆಗಳು ನಡೆದವು. ಇದು ಇಂಡಿಯಾ ಬಣಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

    ಟಿಎಂಸಿ ಜೊತೆಗಿನ ಮೈತ್ರಿ ಏನಾಯ್ತು?
    ಮೈತ್ರಿಕೂಟದಿಂದ ಜೆಡಿಯು ಹೊರಬರುತ್ತಿದ್ದಂತೆ ಇತ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಲ್ಲೂ ಅಸಮಾಧಾನ ಸ್ಫೋಟಿಸಿತು. ಲೋಕಸಭೆ ಚುನಾವಣೆಯಲ್ಲಿ ಬಂಗಾಳದಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಜೊತೆಗೆ ಯಾವುದೇ ಮೈತ್ರಿ ಇಲ್ಲ ಎಂದು ಕಳೆದ ತಿಂಗಳು ಬ್ಯಾನರ್ಜಿ ಘೋಷಿಸಿದ್ದರು. ಮೈತ್ರಿಕೂಟದ ಜೊತೆಗಿನ ಟಿಎಂಸಿ ಮುನಿಸು ಇನ್ನೂ ಶಮನವಾದಂತೆ ಕಾಣುತ್ತಿಲ್ಲ. ಇದನ್ನೂ ಓದಿ: I.N.D.I.A ಮೈತ್ರಿಕೂಟದಿಂದ ಹೊರಬಂದ ಆಪ್‌

    2019 ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 18 ಹಾಗೂ ಕಾಂಗ್ರೆಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಟಿಎಂಸಿ ಮತ್ತು ಕಾಂಗ್ರೆಸ್ ನಡುವೆ ಒಮ್ಮತ ಮೂಡಲಿಲ್ಲ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಗೆ ಪಟ್ಟು ಹಿಡಿದಿದೆ. ಟಿಎಂಸಿ ಕೂಡ ತನ್ನ ಹಠ ಬಿಡುತ್ತಿಲ್ಲ. ಹೀಗಾಗಿ ಎರಡೂ ಪಕ್ಷಗಳ ನಡುವೆ ಅಸಮಾಧಾನ ಹಾಗೆಯೇ ಮುಂದುವರಿದಿದೆ.

    ಎಎಪಿ ಜೊತೆ ಸಂಧಾನ?
    ಪಂಜಾಬ್‌ನಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 8, ಎಸ್‌ಎಡಿ ಮತ್ತು ಬಿಜೆಪಿ ತಲಾ 2 ಸ್ಥಾನಗಳನ್ನು ಗೆದ್ದಿದ್ದವು. ಈ ಬಾರಿ ಸೀಟು ಹಂಚಿಕೆ ಸಂಬಂಧ ಎಎಪಿ-ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಸಾರ್ವತ್ರಿಕ ಚುನಾವಣೆಗೆ ಪಂಜಾಬ್‌ನಲ್ಲಿ 13 ಮತ್ತು ಚಂಡೀಗಢದಲ್ಲಿ 1 ಸ್ಥಾನಕ್ಕಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ಕೆಲದಿನಗಳ ಹಿಂದಷ್ಟೇ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದರು. ಮೈತ್ರಿಕೂಟದ ಒಡಕಿನಿಂದ ಎಚ್ಚೆತ್ತ ಕಾಂಗ್ರೆಸ್ ಕೇಜ್ರಿವಾಲ್ ಜೊತೆಗೆ ಸಂಧಾನ ಮಾತುಕತೆಯಾಡಿತು. ಈಗ ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ಮಾತುಕತೆ ಅಂತಿಮ ಹಂತದಲ್ಲಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

    ಎಸ್‌ಪಿ-ಕಾಂಗ್ರೆಸ್ ಮುನಿಸು ಶಮನ?
    ಚುನಾವಣೆಯಲ್ಲಿ ಸೀಟು ಹಂಚಿಕೆ ಸಂಬಂಧವೇ ಮೈತ್ರಿಕೂಟದಿಂದ ದೂರವಾಗಿದ್ದ ಸಮಾಜವಾದಿ ಪಕ್ಷ ಈಗ ಮತ್ತೆ ಒಂದಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸಿದೆ. ಯುಪಿ ಯಲ್ಲಿ ಕಾಂಗ್ರೆಸ್‌ಗೆ 11 ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಎಸ್‌ಪಿ ಹೇಳಿತ್ತು. ಆದರೆ ಇದಕ್ಕೆ ಕಾಂಗ್ರೆಸ್ ತಕರಾರು ತೆಗೆದು ಹೆಚ್ಚಿನ ಸ್ಥಾನಕ್ಕೆ ಬೇಡಿಕೆ ಇಟ್ಟಿತ್ತು. ಇದಕ್ಕೆ ಎಸ್‌ಪಿ ಒಪ್ಪಿಗೆ ಸೂಚಿಸಿರಲಿಲ್ಲ. ಅಲ್ಲದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದೂ ಸಹ ಅಖಿಲೇಶ್ ಯಾದವ್ ಘೋಷಿಸಿದ್ದರು. ಆದರೀಗ ಎರಡೂ ಪಕ್ಷಗಳು ಒಂದಾಗಿವೆ. ಇದನ್ನೂ ಓದಿ: INDIA ಮೈತ್ರಿಕೂಟ ನಮ್ಮ ನಂಬಿಕೆಗೆ ಧಕ್ಕೆ ತರುತ್ತಿದೆ: ಮೋದಿ

    ಯುಪಿಯಲ್ಲಿ ರಾಷ್ಟ್ರೀಯ ಲೋಕದಳ ಕೈ ಕೊಟ್ಟ ಕಾರಣ, ಕಾಂಗ್ರೆಸ್‌ಗೆ 17 ಕ್ಷೇತ್ರಗಳನ್ನು ಬಿಟ್ಟುಕೊಡಲು ಎಸ್‌ಪಿ ಒಪ್ಪಿಗೆ ಸೂಚಿಸಿದೆ. ಸಂಧಾನ ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಉತ್ತರ ಪ್ರದೇಶ ತಲುಪಿದ್ದ ರಾಹುಲ್ ಗಾಂಧಿ ಯಾತ್ರೆಯನ್ನು ಅಖಿಲೇಶ್ ಯಾದವ್ ಸೇರಿಕೊಂಡರು. ಉಭಯ ಪಕ್ಷಗಳ ನಾಯಕರೂ ಶಕ್ತಿ ಪ್ರದರ್ಶನ ಮಾಡಿದರು. ಮೈತ್ರಿಕೂಟದೊಂದಿಗೆ ಚುನಾವಣೆ ಎದುರಿಸಲಾಗುವುದು ಎಂದು ಅಖಿಲೇಶ್ ಘೋಷಿಸಿದ್ದಾರೆ.

    ಕಾಂಗ್ರೆಸ್ ನಿಲುವೇನು?
    ಟಿಎಂಸಿ ಇಲ್ಲದ ಮೈತ್ರಿಕೂಟವನ್ನು ಪಕ್ಷವು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ 255 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಕಳೆದ ತಿಂಗಳು ಘೋಷಿಸಿತ್ತು. ಇದು 2019 ರ ಲೋಕಸಭೆ ಚುನಾವಣೆಗಿಂತ ಕಡಿಮೆ ಸಂಖ್ಯೆಯ ಸ್ಥಾನಗಳನ್ನು ಹೊಂದಿದೆ. ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ: ನಿತೀಶ್‌ ಕುಮಾರ್‌ ಬೇಸರ

    ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 421 ಸ್ಥಾನಗಳಲ್ಲಿ ಸ್ಪರ್ಧಿಸಿ 52 ಸ್ಥಾನಗಳನ್ನು ಗೆದ್ದಿತ್ತು. ಇದು ಬಿಹಾರದ ಆರ್‌ಜೆಡಿ, ಮಹಾರಾಷ್ಟ್ರದ ಎನ್‌ಸಿಪಿ, ಕರ್ನಾಟಕದ ಜೆಡಿಎಸ್, ಜಾರ್ಖಂಡ್‌ನ ಜೆಎಂಎಂ ಮತ್ತು ತಮಿಳುನಾಡಿನ ಡಿಎಂಕೆ ಜೊತೆ ಮೈತ್ರಿಯ ಭಾಗವಾಗಿತ್ತು. ಸ್ಥಳೀಯ ಪಕ್ಷಗಳ ಪ್ರಭಾವವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿ ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳ ಜೊತೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಿ, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಪರಸ್ಪರ ಟೀಕೆ ಮಾಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಮುಂದಿನ ನಡೆ ಏನು?
    7 ತಿಂಗಳ ಹಿಂದೆ ಪಾಟ್ನಾದಲ್ಲಿ ರಚನೆಯಾದಾಗಿನಿಂದ 28 ವಿಪಕ್ಷಗಳ ಇಂಡಿಯಾ ಬಣವು ಮತದಾರರನ್ನು ಸೆಳೆಯಲು ಯಾವುದೇ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಆದರೆ ಒಕ್ಕೂಟದ ಪಕ್ಷಗಳಲ್ಲೇ ಆಂತರಿಕ ಭಿನ್ನಾಭಿಪ್ರಾಯದಿಂದಾದ ಗಾಯವೇ ದೊಡ್ಡದಾಗಿದೆ. ಗಾಯಕ್ಕೆ ಮುಲಾಮು ಹಚ್ಚಿ, ಚುನಾವಣೆಯಲ್ಲಿ ಒಕ್ಕೂಟದ ಪಕ್ಷಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸವಾಲು ಕಾಂಗ್ರೆಸ್ ಮುಂದಿದೆ.

    ಸೀಟು ಹಂಚಿಕೆ ಒಪ್ಪಂದಗಳು ಮತ್ತು ಚುನಾವಣೋತ್ತರ ಮೈತ್ರಿಯನ್ನು ಅವಲಂಬಿಸಿ ರಾಜ್ಯಗಳ ಜೊತೆಗಿನ ಮೈತ್ರಿಯನ್ನು ಕಾಂಗ್ರೆಸ್ ನೋಡಬೇಕಿದೆ. ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢವನ್ನು ಕಾಂಗ್ರೆಸ್ ಕಳೆದುಕೊಂಡಿರುವುದು, ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಸಂಘರ್ಷ, ಆಡಳಿತ ವಿರೋಧಿ ಅಲೆ (ಹಿರಿಯ ನಾಯಕ ಕಮಲ್ ನಾಥ್), ಅತಿಯಾದ ಆತ್ಮವಿಶ್ವಾಸ (ಭೂಪೇಶ್ ಬಘೇಲ್) ಮತ್ತು ರಾಜ್ಯ ನಾಯಕತ್ವಕ್ಕೆ ಪ್ರಾಮುಖ್ಯತೆ ಇಲ್ಲದಿರುವುದು ಕಾಂಗ್ರೆಸ್ ಅವನತಿಗೆ ಕಾರಣವಾಗಬಹುದು. ಇದೆಲ್ಲವನ್ನೂ ಅರಿತು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಮತ್ತೊಂದು ಸವಾಲು ಕೂಡ ಕಾಂಗ್ರೆಸ್ ಮುಂದೆ ಈಗ ಇದೆ. ಇದನ್ನೂ ಓದಿ: INDIA ಮೈತ್ರಿಕೂಟ ನಮ್ಮ ನಂಬಿಕೆಗೆ ಧಕ್ಕೆ ತರುತ್ತಿದೆ: ಮೋದಿ

  • ಬಂಗಾಳದ ಎಲ್ಲಾ 42 ಕ್ಷೇತ್ರಗಳಲ್ಲೂ ಸ್ಪರ್ಧೆ: ಟಿಎಂಸಿ ಮಾತಿನಿಂದ ಕಾಂಗ್ರೆಸ್‌ಗೆ ನಿರಾಸೆ

    ಬಂಗಾಳದ ಎಲ್ಲಾ 42 ಕ್ಷೇತ್ರಗಳಲ್ಲೂ ಸ್ಪರ್ಧೆ: ಟಿಎಂಸಿ ಮಾತಿನಿಂದ ಕಾಂಗ್ರೆಸ್‌ಗೆ ನಿರಾಸೆ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (Trinamool Congress) ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ (Lok Sabha) ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಪುನರುಚ್ಚರಿಸಿದ್ದು, ಸೀಟು ಹಂಚಿಕೆ ವಿಚಾರದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿ (INDIA Bloc) ನಿರಾಸೆ ಮೂಡಿದೆ.

    ರಾಜ್ಯಸಭೆಯಲ್ಲಿ ತೃಣಮೂಲ ನಾಯಕ ಡೆರೆಕ್ ಒ’ಬ್ರೇನ್, ಕೆಲವು ವಾರಗಳ ಹಿಂದೆ, ಟಿಎಂಸಿ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳದ ಎಲ್ಲಾ 42 ಸ್ಥಾನಗಳಲ್ಲಿ ಟಿಎಂಸಿ ಸ್ಪರ್ಧಿಸುತ್ತಿದೆ ಎಂದು ಹೇಳಿದ್ದಾರೆ. ನಾವು ಕೂಡ ಒಂದು ಕ್ಷೇತ್ರದಲ್ಲಿ ಕಣದಲ್ಲಿದ್ದೇವೆ. ಅಸ್ಸಾಂನ ಕೆಲವು ಸ್ಥಾನಗಳು ಮತ್ತು ಮೇಘಾಲಯದ ತುರಾ ಲೋಕಸಭಾ ಸ್ಥಾನ. ಈ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರ ಸುರಕ್ಷಿತವಾಗಿದೆ, ನಾನು ಸ್ವತಂತ್ರಳಾಗಿದ್ದೇನೆ – ಬ್ರಿಟನ್ ಸಂಸತ್‌ನಲ್ಲಿ ಕಾಶ್ಮೀರದ ಪತ್ರಕರ್ತೆ ಶ್ಲಾಘನೆ

    ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿರುವ ಮತ್ತು ದೆಹಲಿ, ಗುಜರಾತ್, ಗೋವಾದಲ್ಲಿ ಎಎಪಿ ಜೊತೆ ಒಪ್ಪಂದ ಮಾಡಿಕೊಂಡಿರುವ ಇಂಡಿಯಾ ಮೈತ್ರಿಕೂಟ ಹಾಗೂ ಕಾಂಗ್ರೆಸ್‌ಗೆ ಈ ಹೇಳಿಕೆಯಿಂದ ಹಿನ್ನಡೆಯಾಗಲಿದೆ.

    ಪಶ್ಚಿಮ ಬಂಗಾಳದಲ್ಲಿನ ಒಪ್ಪಂದವು ವಿರೋಧ ಪಕ್ಷಕ್ಕೆ ಪ್ರಮುಖ ನೈತಿಕ ವರ್ಧಕವಾಗುತ್ತಿತ್ತು. ರಾಜ್ಯವು ಲೋಕಸಭೆಗೆ ಮೂರನೇ ಅತಿ ಹೆಚ್ಚು ಸಂಸದರನ್ನು ಕಳುಹಿಸುವ ಕಾರಣ ಚುನಾವಣಾ ದೃಷ್ಟಿಯಿಂದಲೂ ಮುಖ್ಯವಾಗಿದೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಬಿಲ್‌ಗೆ ಪರಿಷತ್‌ನಲ್ಲಿ ಸೋಲು; ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ

  • I.N.D.I.A ಮೈತ್ರಿಕೂಟದಿಂದ ಹೊರಬಂದ ಆಪ್‌

    I.N.D.I.A ಮೈತ್ರಿಕೂಟದಿಂದ ಹೊರಬಂದ ಆಪ್‌

    ನವದೆಹಲಿ: ಪಂಜಾಬ್ (Punjab), ಚಂಡೀಗಢದಲ್ಲಿ (Chandigarh) ಇಂಡಿಯಾ ಒಕ್ಕೂಟದೊಂದಿಗೆ (INDIA Bloc) ಯಾವುದೇ ಮೈತ್ರಿ ಇಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಘೋಷಿಸಿದ್ದಾರೆ. ಎಎಪಿ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.

    ಈ ಘೋಷಣೆಯಿಂದ ಇಂಡಿಯಾ ಒಕ್ಕೂಟಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಆಮ್‌ ಆದ್ಮಿ ಪಕ್ಷವು ಮಹಾಮೈತ್ರಿಯನ್ನು ತೊರೆದಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಈ ಸಂಬಂಧ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿ: ಅಮಿತ್‌ ಶಾ ಘೋಷಣೆ

    ಇಂಡಿಯಾ ಒಕ್ಕೂಟ ತೊರೆಯಲು ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಸಿದ್ಧರಾಗಿದ್ದಾರೆ. ಮಾಜಿ ಪ್ರಧಾನಿ ಚರಣ್‌ ಸಿಂಗ್‌ ಅವರಿಗೆ ‘ಭಾರತ ರತ್ನ’ ಮರಣೋತ್ತರ ಪ್ರಶಸ್ತಿ ಘೋಷಿಸಿದ ಬಳಿಕ ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿದ್ದಾರೆ.

    ಈ ಮೊದಲು ನಿತೀಶ್ ಕುಮಾರ್ ಮೈತ್ರಿ ತೊರೆದು ಎನ್‌ಡಿಎ ಒಕ್ಕೂಟ ಸೇರಿದ್ದರು. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೂಡ ಮೈತ್ರಿಕೂಟದಿಂದ ಹೊರಬಂದಿದ್ದರು. ಇದನ್ನೂ ಓದಿ: ಮೋದಿಯವರ 10 ವರ್ಷ ರಾಜ್ಯಕ್ಕೆ ಅನ್ಯಾಯದ ಕಾಲ: ಸಿದ್ದರಾಮಯ್ಯ

  • ಮತ್ತೆ ಮೋದಿ ಸರ್ಕಾರ; ಎನ್‌ಡಿಎಗೆ 335, ಇಂಡಿಯಾ ಮೈತ್ರಿಕೂಟಕ್ಕೆ 166

    ಮತ್ತೆ ಮೋದಿ ಸರ್ಕಾರ; ಎನ್‌ಡಿಎಗೆ 335, ಇಂಡಿಯಾ ಮೈತ್ರಿಕೂಟಕ್ಕೆ 166

    – ಇಂಡಿಯಾ ಟುಡೆ-ಸಿವೋಟರ್‌ ‘ಮೂಡ್‌ ಆಫ್‌ ದಿ ನೇಷನ್‌’ ಸರ್ವೆ ಹೇಳೋದೇನು?

    ನವದೆಹಲಿ: 2024ರ ಲೋಕಸಭಾ ಚುನಾವಣೆ (Lok Sabha Election 2024) ಹತ್ತಿರ ಬರುತ್ತಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಅಧಿಕಾರದ ಗದ್ದುಗೆಗೆ ಯಾರು ಏರುತ್ತಾರೆ ಎಂಬ ಕುತೂಹಲವು ಮೂಡಿದೆ. ಈಗಾಗಲೇ ಒಂದೊಂದಾಗಿ ಸಮೀಕ್ಷೆಗಳು ಹೊರಬೀಳುತ್ತಿವೆ. ‘ಮೂಡ್‌ ಆಫ್‌ ದಿ ನೇಷನ್‌’ (India Today Mood Of The Nation) ಸಮೀಕ್ಷೆ ಹೊರಬಿದ್ದಿದ್ದು, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ.

    ಇಂಡಿಯಾ ಟುಡೆ ‘ಮೂಡ್‌ ಆಫ್‌ ದಿ ನೇಷನ್’ ಸರ್ವೆ
    ಇಂಡಿಯಾ ಟುಡೇ-ಸಿವೋಟರ್‌ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಪ್ರಕಾರ, ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ನಿರ್ಣಾಯಕ ಬಹುಮತ ಪಡೆಯುವ ಸಾಧ್ಯತೆಯಿದೆ. ಎನ್‌ಡಿಎ ಒಕ್ಕೂಟ 335 ಸ್ಥಾನಗಳ ಭರ್ಜರಿ ಬಹುಮತದೊಂದಿಗೆ 3ನೇ ಬಾರಿಯೂ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನು ‘ಇಂಡಿಯಾ’ ಮೈತ್ರಿಕೂಟವು 166 ಸ್ಥಾನಗಳನ್ನು ಪಡೆಯಲಿದೆ. ಇದನ್ನೂ ಓದಿ: ಯುಪಿಎ 10 ವರ್ಷಗಳಲ್ಲಿ ಆರ್ಥಿಕತೆಯನ್ನು ನಿಷ್ಕ್ರಿಯಗೊಳಿಸಿತ್ತು: ಶ್ವೇತಪತ್ರ ಹೊರಡಿಸಿದ ಮೋದಿ ಸರ್ಕಾರ

    2024 ರ ಫೆಬ್ರವರಿಯಲ್ಲಿ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆಯು ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ 35,801 ಜನರ ಪ್ರತಿಕ್ರಿಯೆ ಆಧರಿಸಿದೆ. 2023ರ ಡಿಸೆಂಬರ್‌ 15 ಮತ್ತು, 2024 ರ ಜನವರಿ 28 ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ.

    ಸಮೀಕ್ಷೆಯ ಪ್ರಕಾರ, ಎನ್‌ಡಿಎ ಉತ್ತರ, ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಪ್ರಾಬಲ್ಯ ಮೆರೆಯಲಿದೆ. ದಕ್ಷಿಣದ ರಾಜ್ಯಗಳು ‘ಇಂಡಿಯಾ’ ಮೈತ್ರಿಕೂಟಕ್ಕೆ ಆದ್ಯತೆ ನೀಡುವ ಸಾಧ್ಯತೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

    ಉತ್ತರ ಭಾರತ?
    ಉತ್ತರ ಭಾರತ ಭಾಗದಲ್ಲಿ 180 ಕ್ಕೆ ಎನ್‌ಡಿಎ 154 ಸ್ಥಾನಗಳನ್ನು ಗಳಿಸಲಿದೆ. ಇಂಡಿಯಾ ಮೈತ್ರಿಕೂಟ 25 ಹಾಗೂ ಇತರೆ 1 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಬಾಯಿ ಬಿಟ್ಟರೆ ಬರೀ ಸುಳ್ಳು – ಸಚಿವ ಪ್ರಹ್ಲಾದ್‌ ಜೋಶಿ ಕಿಡಿ

    ಪೂರ್ವ
    ಪೂರ್ವ ಭಾಗದಲ್ಲಿ 153 ಕ್ಕೆ ಎನ್‌ಡಿಎ 103, ಇಂಡಿಯಾ ಒಕ್ಕೂಟ 38 ಹಾಗೂ ಇತರೆ 12 ಸ್ಥಾನಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಿವೆ.

    ಪಶ್ಚಿಮ
    ಪಶ್ಚಿಮ ಭಾಗದಲ್ಲಿ 78 ಸ್ಥಾನಗಳ ಪೈಕಿ ಎನ್‌ಡಿಎ 51, ಇಂಡಿಯಾ ಒಕ್ಕೂಟ 27 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿವೆ ಎಂದು ಸಮೀಕ್ಷೆ ಹೇಳಿದೆ.

    ದಕ್ಷಿಣ
    ದಕ್ಷಿಣ ಭಾರತದಲ್ಲಿ 132 ಕ್ಕೆ ಎನ್‌ಡಿಎ 27, ಇಂಡಿಯಾ ಒಕ್ಕೂಟ 76 ಹಾಗೂ ಇತರೆ 29 ಸ್ಥಾನಗಳನ್ನು ಜಯಿಸಲಿವೆ ಎಂದು ಸಮೀಕ್ಷೆ ತಿಳಿಸಿದೆ.

  • I.N.D.I.A ಮೈತ್ರಿಕೂಟದ ಜವಾಬ್ದಾರಿ ಮಲ್ಲಿಕಾರ್ಜುನ್‌ ಖರ್ಗೆ ಹೆಗಲಿಗೆ

    I.N.D.I.A ಮೈತ್ರಿಕೂಟದ ಜವಾಬ್ದಾರಿ ಮಲ್ಲಿಕಾರ್ಜುನ್‌ ಖರ್ಗೆ ಹೆಗಲಿಗೆ

    – ಖರ್ಗೆಗೆ ಅಧ್ಯಕ್ಷ ಸ್ಥಾನ, ನಿತೀಶ್‌ ಕುಮಾರ್‌ ಸಂಚಾಲಕ: ಮೂಲಗಳ ಮಾಹಿತಿ

    ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ (Mallikarjun Kharge) ಅವರನ್ನು ಇಂಡಿಯಾ ಮೈತ್ರಿಕೂಟದ (I.N.D.I.A Alliance) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಂಡಿಯಾ ಮೈತ್ರಿಕೂಟ ಈ ಬಗ್ಗೆ ಅಧಿಕೃತ ಘೋಷಣೆ ಮಾಡಬೇಕಿದೆ.

    ಬಿಹಾರದ ಮುಖ್ಯಮಂತ್ರಿ ಮತ್ತು ಜನತಾ ದಳ (ಯುನೈಟೆಡ್) ಅಧ್ಯಕ್ಷ ನಿತೀಶ್ ಕುಮಾರ್ (Nitish Kumar) ಅವರನ್ನು ಮೈತ್ರಿಕೂಟದ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಅವರು ಸಂಚಾಲಕ ಸ್ಥಾನದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯಸಭೆಗೆ ಅವಕಾಶ ನೀಡಿ, ಲೋಕಸಭೆಯಲ್ಲಿ 3 ಕ್ಷೇತ್ರ ಗೆಲ್ಲಿಸುವೆ: ಅಮಿತ್ ಶಾ ಮುಂದೆ ಸೋಮಣ್ಣ ಮನವಿ

    ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಇಂದಿನ ಸಭೆಗೆ ಗೈರಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಇಂದು ನಡೆದ ಸಭೆಯಲ್ಲಿ ಖರ್ಗೆ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಎಎಪಿ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಮೈತ್ರಿಕೂಟದ ಸಮನ್ವಯ ಸಮಿತಿಯ ಸದಸ್ಯರಾಗಿರುವ ಪಕ್ಷಗಳ ಮುಖ್ಯಸ್ಥರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಿಜಯೇಂದ್ರ ಜೊತೆಗೆ ಮಂಪರು ಪರೀಕ್ಷೆಗೆ ಒಳಪಡಿಸುವುದಾದ್ರೆ ನಾನು ಸಿದ್ಧ: ಬಿ.ಕೆ ಹರಿಪ್ರಸಾದ್

    ಇಂಡಿಯಾ ಒಕ್ಕೂಟದ ಕೆಲವು ಪಕ್ಷಗಳ ನಾಯಕರು ನಿತೀಶ್ ಕುಮಾರ್ ಅವರನ್ನು ಸಂಚಾಲಕರನ್ನಾಗಿ ನೇಮಿಸುವ ಆಲೋಚನೆಯ ಬಗ್ಗೆ ಟಿಎಂಸಿ ನಿಜವಾಗಿಯೂ ಉತ್ಸಾಹ ಹೊಂದಿಲ್ಲ ಎಂದಿದ್ದರು ಎನ್ನಲಾಗಿದೆ. ಖರ್ಗೆ ಅವರನ್ನು ಮೈತ್ರಿಕೂಟದ ಅಧ್ಯಕ್ಷರನ್ನಾಗಿ ಮತ್ತು ನಿತೀಶ್‌ ಕುಮಾರ್ ಅವರನ್ನು ಸಂಚಾಲಕರನ್ನಾಗಿ ನೇಮಿಸಬೇಕು ಎಂದು ಜೆಡಿಯು ಅಭಿಪ್ರಾಯಪಟ್ಟಿತ್ತು.