Tag: INDIA Bloc

  • ಜಾರ್ಖಂಡ್‌ನಲ್ಲಿ ಬಿಗ್‌ ಟ್ವಿಸ್ಟ್‌; ಜೆಎಂಎಂ ಮುನ್ನಡೆ – ಎನ್‌ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ

    ಜಾರ್ಖಂಡ್‌ನಲ್ಲಿ ಬಿಗ್‌ ಟ್ವಿಸ್ಟ್‌; ಜೆಎಂಎಂ ಮುನ್ನಡೆ – ಎನ್‌ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ

    ರಾಂಚಿ: ಜಾರ್ಖಂಡ್‌ನಲ್ಲಿ ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಗಡಿ ದಾಟಿದೆ.

    ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾದ ನಂತರ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ಮತ್ತೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಬೆಳಗ್ಗೆ 10.30ಕ್ಕೆ ರಾಜ್ಯದ 81 ಸ್ಥಾನಗಳ ಪೈಕಿ 51ರಲ್ಲಿ ಇಂಡಿಯಾ ಮೈತ್ರಿಕೂಟ ಮುಂದಿದೆ. 28 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ.

    ಜಾರ್ಖಂಡ್ ವಿಧಾನಸಭೆಗೆ ಬಹುಮತಕ್ಕೆ 41 ಸ್ಥಾನಗಳು ಅಗತ್ಯವಿದೆ. ರಾಜ್ಯಕ್ಕೆ ನ.13 ರಂದು ಮೊದಲ ಹಂತದ ಮತದಾನವು 43 ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ 38 ಸ್ಥಾನಗಳಿಗೆ ಮತದಾನ ನಡೆದಿತ್ತು.

    ಮ್ಯಾಟ್ರಿಜ್ ಪ್ರಕಾರ, ಎನ್‌ಡಿಎ 42-47 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. ಜೆಎಂಎಂ ನೇತೃತ್ವದ ಮೈತ್ರಿಕೂಟವು 25-30 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಬಹುದು ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ, ಬಹುಪಾಲು ಸಮೀಕ್ಷೆಗಳು ಉಲ್ಟ ಆದಂತಿದೆ.

    ಆದಾಗ್ಯೂ, ಆಕ್ಸಿಸ್ ಮೈ ಇಂಡಿಯಾ ಮತ್ತು ಪಿ ಮಾರ್ಕ್ ಸಮೀಕ್ಷೆ ಭಿನ್ನವಾಗಿತ್ತು. ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್‌ 49-59 ಮತ್ತು ಎನ್‌ಡಿಎ ಮೈತ್ರಿಕೂಟ 37-47 ಸ್ಥಾನ ಪಡೆಯಬಹುದು ಎಂದು ಅಂದಾಜಿಸಿದ್ದವು. ಬಹುಪಾಲು ಇದು ನಿಜವಾದಂತೆ ಕಾಣುತ್ತಿದೆ.

  • ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣಾ ಮತ ಎಣಿಕೆ ಆರಂಭ

    ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣಾ ಮತ ಎಣಿಕೆ ಆರಂಭ

    ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶದ ಮತ ಎಣಿಕೆ ಆರಂಭವಾಗಿದೆ.

    ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರವೇ ಮತ್ತೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳ್ತಿವೆ. ಆದರೆ, ಕಾಂಗ್ರೆಸ್ ಇದನ್ನು ನಂಬ್ತಿಲ್ಲ. ಫೋಟೋ ಫಿನಿಷ್ ಫಲಿತಾಂಶ ಹೊರಬರುವ ನಿರೀಕ್ಷೆಯನ್ನು ಹೊಂದಿದೆ. ಇಂದು ಬೆಳಗ್ಗೆ ಟ್ರೆಂಡ್ ನೋಡಿಕೊಂಡು ಗೆಲ್ಲುವ ಅಭ್ಯರ್ಥಿಗಳನ್ನು ರಕ್ಷಿಸಿಕೊಳ್ಳಲು ಹೈಕಮಾಂಡ್ ಪ್ಲಾನ್ ಮಾಡಿದೆ. ಅಗತ್ಯಬಿದ್ರೆ ಕಾಂಗ್ರೆಸ್ ವಿಜೇತರನ್ನು ಕರ್ನಾಟಕಕ್ಕೆ ಕಳಿಸ್ತೇವೆ. ರೆಸಾರ್ಟ್ ರೆಡಿ ಮಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ -ಡಿಸಿಎಂ ಸಿದ್ದರಾಮಯ್ಯನವರಿಗೆ ಸೂಚಿಸಿದೆ ಎನ್ನಲಾಗಿದೆ.

    ಅಂಥಾದ್ದೇನಿಲ್ಲ ಎಂದು ಡಿಸಿಎಂ ಹೇಳಿದ್ದಾರೆ. ಕಾಂಗ್ರೆಸ್ ಪೆಚ್ಚು ಮೊರೆ ಹಾಕೋದು ನಿಶ್ಚಿತ ಎಂದು ಬಿಜೆಪಿ ಲೇವಡಿ ಮಾಡಿದೆ. ಮತದಾನೋತ್ತರ ಪರಿಸ್ಥಿತಿಗಳನ್ನ ನಿಭಾಯಿಸಲು 2 ರಾಜ್ಯಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ. ಮಹಾರಾಷ್ಟ್ರಕ್ಕೆ ಜಿ.ಪರಮೇಶ್ವರ್ ನಿಯುಕ್ತರಾಗಿದ್ದಾರೆ. ಈ ಹೊತ್ತಲ್ಲೇ, ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಉದ್ಧವ್ ಶಿವಸೇನೆಗೆ ಬಾಗಿಲು ತೆರೆದಿದೆ ಎಂಬ ಸಂದೇಶವನ್ನು ಬಿಜೆಪಿ ನೀಡಿದೆ. ಇದು ಕಾಂಗ್ರೆಸ್‌ಗೆ ಇನ್ನಷ್ಟು ದಿಗಿಲು ತಂದಿದೆ. ಡಿಸಿಎಂ ಫಡ್ನಾವೀಸ್ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ.

    ಉದ್ಧವ್ ಠಾಕ್ರೆ ಕೂಡ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಇನ್ನು, ಜಾರ್ಖಂಡ್‌ನಲ್ಲಿ ಯಾರೂ ಬೇಕಿದ್ರೂ ಗೆಲ್ಲಬಹುದು ಎಂದು ಎಕ್ಸಿಟ್ ಪೋಲ್‌ಗಳ ಸಮೀಕ್ಷೆಗಳು ಹೇಳ್ತಿವೆ.

    ಮಹಾರಾಷ್ಟ್ರ ಎಲೆಕ್ಷನ್
    ಒಟ್ಟು ಕ್ಷೇತ್ರ – 288
    * ಸರಳ ಬಹುಮತ – 145
    * ಮತದಾನ ಪ್ರಮಾಣ – 62.05%

    ಮಹಾರಾಷ್ಟ್ರ ಎಲೆಕ್ಷನ್.. ಪ್ರಮುಖಾಂಶ
    * ಮಹಾಯುತಿ ಒಕ್ಕೂಟದ ಮಾ.ಧ.ವ ಸೂತ್ರ
    (ಮರಾಠೇತರ ಒಬಿಸಿ ಮತಗಳ ಗುರಿಯಾಗಿಸಿದ್ದ ಬಿಜೆಪಿ. ಮಾಧವ ಫಾರ್ಮುಲಾ – ಮಾ-ಮಾಲಿ, ಧ-ಧಂಗರ್, ವ-ವಂಜಾರಿ ಸಮುದಾಯ. ಇವು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿತ್ತು)
    * ಮರಾಠವಾಡ ಪ್ರಾಂತ್ಯದ ಮೇಲೆ ಎಂವಿಎ ಕಣ್ಣು
    (ಲೋಕಸಭೆಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಕೈ ಹಿಡಿದಿದ್ದ ಮರಾಠವಾಡ ಪ್ರಾಂತ್ಯ)
    * 76 ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ನೇರಾನೇರ ಫೈಟ್
    * ನಿರ್ಣಾಯಕವಾದ ವಿದರ್ಭ ಪ್ರಾಂತ್ಯ(62 ಸೀಟ್)ದ ಮೇಲೆ ಬಿಜೆಪಿ ಕಣ್ಣು
    (ಸರ್ಕಾರ ರಚನೆಗೆ ನಿರ್ಣಾಯಕ. ಬಿಜೆಪಿಯ ಹಿಡಿತ ಮುಂದುವರಿಯುತ್ತಾ..)
    * ಕಾಂಗ್ರೆಸ್‌ನ ಗ್ಯಾರಂಟಿಗಳು ವರ್ಸಸ್ ಬಿಜೆಪಿಯ ಲಾಡ್ಲಿ ಬಹೆನ್ ಯೋಜನೆ
    * ರೈತರು, ಗ್ರಾಮಾಂತರ ಪ್ರದೇಶದ ಮತದಾರರು..
    * ಕಣದಲ್ಲಿ ಬಿವಿಎ.. ಯಾವ ಕೂಟಕ್ಕೆ ಲಾಭ.. ಯಾವ ಕೂಟಕ್ಕೆ ನಷ್ಟ?

    ಜಾರ್ಖಂಡ್ ಎಲೆಕ್ಷನ್ – ಇಂದು ಫಲಿತಾಂಶ
    * ಒಟ್ಟು ಸ್ಥಾನ – 81
    * ಮ್ಯಾಜಿಕ್ ನಂಬರ್ – 41
    * ಮತದಾನ ಪ್ರಮಾಣ – 68.01%

    ಜಾರ್ಖಂಡ್ ಎಲೆಕ್ಷನ್.. ಪ್ರಮುಖಾಂಶ
    * ಬುಡಕಟ್ಟು ಸಮುದಾಯದವರೇ ಹೆಚ್ಚಿರುವ ಜಾರ್ಖಂಡ್
    * ಇಂಡಿ ಒಕ್ಕೂಟದ ಗ್ಯಾರಂಟಿ ವರ್ಸಸ್ ಬಿಜೆಪಿ ಸಂಕಲ್ಪ
    * ಜೆಎಂಎಂಗೆ ಕಾಂಗ್ರೆಸ್, ಆರ್‌ಜೆಡಿ, ಎಡಪಕ್ಷಗಳು ಸಾಥ್
    * ಇಡಿಯಿಂದ ಸೋರೆನ್ ಬಂಧನ ಪ್ರಕರಣ.. ಅನುಕಂಪದ ಅಲೆ ನಿರೀಕ್ಷೆ
    * ಪ್ರಧಾನಿ ನರೇಂದ್ರ ಮೋದಿಯನ್ನೇ ನೆಚ್ಚಿಕೊಂಡಿರುವ ಬಿಜೆಪಿ
    * ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದ ಹುಮ್ಮಸ್ಸು
    * ಅದೇ ಫಲಿತಾಂಶ ವಿಧಾನಸಭೆ ಚುಣಾವಣೆಯಲ್ಲಿ ಬರುವ ವಿಶ್ವಾಸ

  • ಕೇಂದ್ರ ಬಜೆಟ್‌ ವಿರುದ್ಧ ಸಂಸತ್‌ ಬಳಿ ಇಂಡಿಯಾ ಒಕ್ಕೂಟ ಪ್ರತಿಭಟನೆ

    ಕೇಂದ್ರ ಬಜೆಟ್‌ ವಿರುದ್ಧ ಸಂಸತ್‌ ಬಳಿ ಇಂಡಿಯಾ ಒಕ್ಕೂಟ ಪ್ರತಿಭಟನೆ

    ನವದೆಹಲಿ: 2024ರ ಬಜೆಟ್‌ನಲ್ಲಿ (Union Budget 2024) ‘ತಾರತಮ್ಯ’ ಮಾಡಲಾಗಿದೆ. ಎಲ್ಲಾ ರಾಜ್ಯಗಳಿಗೂ ಬಜೆಟ್‌ನಲ್ಲಿ ಸಮಾನ ಆದ್ಯತೆ ನೀಡಿಲ್ಲ ಎಂದು ಟೀಕಿಸಿ ಕೇಂದ್ರದ ವಿರುದ್ಧ ವಿಪಕ್ಷಗಳ ಇಂಡಿಯಾ ಒಕ್ಕೂಟ (INDIA Bloc) ಸಂಸತ್‌ (Parliament) ಆವರಣದಲ್ಲಿ ಪ್ರತಿಭಟನೆ ನಡೆಸಿತು.

    ಎನ್‌ಡಿಎ ಕೂಟದ ಮಿತ್ರ ಪಕ್ಷಗಳ ಆಡಳಿತವಿರುವ ಬಿಹಾರ ಮತ್ತು ಆಂಧ್ರಪ್ರದೇಶದ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಆದ್ಯತೆ ನೀಡಿದೆ. ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಬಜೆಟ್‌ ಮಂಡಿಸಿದಂತೆ ತೋರುತ್ತಿದೆ ಎಂದು ವಿಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಯಚೂರಿಗೆ ಘೋಷಣೆಯಾಗದ ಏಮ್ಸ್ – ಹೋರಾಟಗಾರರಿಂದ ಅಸಮಾಧಾನ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬಜೆಟ್‌ನಲ್ಲಿ ಬಿಹಾರಕ್ಕೆ ಒಟ್ಟು 59,000 ಕೋಟಿಯ ಯೋಜನೆಗಳು ಮತ್ತು ಪ್ಯಾಕೇಜ್‌ಗಳನ್ನು ಘೋಷಿಸಿದ್ದಾರೆ. ಆಂಧ್ರಪ್ರದೇಶ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ 15,000 ಕೋಟಿ, ಅಗತ್ಯವಿದ್ದರೆ ಹೆಚ್ಚುವರಿ ಹಣ, ಪೋಲಾವರಂ ಅಣೆಕಟ್ಟು ಯೋಜನೆ ಮತ್ತು ಎರಡು ಕೈಗಾರಿಕಾ ನೋಡ್‌ಗಳನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದ್ದಾರೆ.

    ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬಜೆಟ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಬಜೆಟ್‌ನಲ್ಲಿ ಹಲವರಿಗೆ ನ್ಯಾಯ ಸಿಕ್ಕಿಲ್ಲ, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯಾವ ರಾಜ್ಯವನ್ನೂ ಕಡೆಗಣಿಸಿಲ್ಲ, ಪ್ರತಿಪಕ್ಷಗಳ ಪ್ರತಿಭಟನೆ ದುರುದ್ದೇಶಪೂರ್ವಕ: ನಿರ್ಮಲಾ ಸೀತಾರಾಮನ್

    ಇದು ತಾರತಮ್ಯದ ಬಜೆಟ್.‌ ತಮಿಳುನಾಡು, ತೆಲಂಗಾಣ, ಹಿಮಾಚಲ ಪ್ರದೇಶದಂತಹ ರಾಜ್ಯಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ಈಚೆಗೆ ಈ ರಾಜ್ಯಗಳಲ್ಲಿ ಸಾಕಷ್ಟು ವಿಪತ್ತುಗಳಾದರೂ ಯಾವುದೇ ಪ್ರವಾಹ ಪರಿಹಾರ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕ ಮಾಣಿಕ್ಕಂ ಟ್ಯಾಗೋರ್ ಹರಿಹಾಯ್ದಿದ್ದಾರೆ.

    ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಆರೋಗ್ಯ ಕ್ಷೇತ್ರದಲ್ಲಿ ಕೇರಳ ರಾಜ್ಯವನ್ನು ನಿರ್ಲಕ್ಷಿಸಲಾಗಿದೆ. ರಾಜ್ಯಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಒಂದಷ್ಟು ನಿರೀಕ್ಷೆಗಳಿದ್ದವು. ಅವ್ಯಾವುವೂ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • Assembly Bypolls: ಇಂಡಿಯಾ ಒಕ್ಕೂಟ 10, ಎನ್‌ಡಿಎ 2 ಕ್ಷೇತ್ರಗಳಲ್ಲಿ ಮುನ್ನಡೆ

    Assembly Bypolls: ಇಂಡಿಯಾ ಒಕ್ಕೂಟ 10, ಎನ್‌ಡಿಎ 2 ಕ್ಷೇತ್ರಗಳಲ್ಲಿ ಮುನ್ನಡೆ

    – ಜಲಂಧರ್ ಪಶ್ಚಿಮ ಕ್ಷೇತ್ರ ಗೆದ್ದು ಬೀಗಿದ ಎಎಪಿ

    ನವದೆಹಲಿ: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ (Assembly Pypolls) ಮತ ಎಣಿಕೆ ಇಂದು ಪ್ರಕಟವಾಗಲಿದ್ದು, ಈಗಾಗಲೇ ಇಂಡಿಯಾ ಒಕ್ಕೂಟ (INDIA Bloc) 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

    ಏಳು ರಾಜ್ಯಗಳ 13 ಅಸೆಂಬ್ಲಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. 13ರ ಪೈಕಿ ಕಾಂಗ್ರೆಸ್ 5, ಟಿಎಂಸಿ 4 ಹಾಗೂ ಬಿಜೆಪಿ, ಡಿಎಂಕೆ, ಎಎಪಿ ಮತ್ತು ಜೆಡಿಯು ತಲಾ ಒಂದು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಇದನ್ನೂ ಓದಿ: ಕಾನೂನು ವಿದ್ಯಾರ್ಥಿಗಳ ಪಠ್ಯದಲ್ಲಿ ಮನಸ್ಮೃತಿ ಇಲ್ಲ: ಕೇಂದ್ರ ಶಿಕ್ಷಣ ಸಚಿವ ಸ್ಪಷ್ಟನೆ

    ಹಿಮಾಚಲ ಪ್ರದೇಶದ ಡೆಹ್ರಾ ಮತ್ತು ನಲಗಢ, ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್ ಹಾಗೂ ಮಧ್ಯಪ್ರದೇಶದ ಅವರ್ವಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಇತ್ತ ಪಶ್ಚಿಮ ಬಂಗಾಳದ ರಾಯಗಂಜ್, ರಾಣಾಘಾಟ್ ದಕ್ಷಿಣ, ಬಾಗ್ಡಾ ಮತ್ತು ಮಾಣಿಕ್ತಾಲಾ ಸ್ಥಾನಗಳಲ್ಲಿ ಟಿಎಂಸಿ ಮುಂದಿದೆ.

    ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಎಎಪಿ ಗೆಲುವು ದಾಖಲಿಸಿದೆ. ಬಿಹಾರದ ರುಪೌಲಿ ಕ್ಷೇತ್ರದಲ್ಲಿ ಜೆಡಿಯು, ಹಿಮಾಚಲ ಪ್ರದೇಶದ ಹಮೀರ್‌ಪುರ ಕ್ಷೇತ್ರದಲ್ಲಿ ಬಿಜೆಪಿ, ತಮಿಳುನಾಡಿನ ವಿಕ್ರವಾಂಡಿ ಕ್ಷೇತ್ರದಲ್ಲಿ ಡಿಎಂಕೆ ಮುನ್ನಡೆ ಸಾಧಿಸಿದೆ. ಇದನ್ನೂ ಓದಿ: ಬರ್ಗರ್ ಕಿಂಗ್ ರೆಸ್ಟೋರೆಂಟ್ ಶೂಟೌಟ್ ಕೇಸ್ – ಮೂವರು ಗ್ಯಾಂಗ್‍ಸ್ಟರ್‌ಗಳ ಎನ್‍ಕೌಂಟರ್

  • ಲೋಕಸಭೆಯ ಸ್ಪೀಕರ್‌ ಚುನಾವಣೆ – ಎನ್‌ಡಿಎ ಓಂ ಬಿರ್ಲಾ v/s ಇಂಡಿಯಾ ಒಕ್ಕೂಟದ ಸುರೇಶ್‌ ಮಧ್ಯೆ ಫೈಟ್‌

    ಲೋಕಸಭೆಯ ಸ್ಪೀಕರ್‌ ಚುನಾವಣೆ – ಎನ್‌ಡಿಎ ಓಂ ಬಿರ್ಲಾ v/s ಇಂಡಿಯಾ ಒಕ್ಕೂಟದ ಸುರೇಶ್‌ ಮಧ್ಯೆ ಫೈಟ್‌

    ನವದೆಹಲಿ: 18 ನೇ ಲೋಕಸಭೆಯ ಸ್ಪೀಕರ್‌ಗಾಗಿ ಓಂ ಬಿರ್ಲಾ (Om Birla) ಪರವಾಗಿ ಎನ್‌ಡಿಎ ನಾಯಕರು ಸಹಿ ಹಾಕಿದರು. ಮಂಗಳವಾರ 18ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಮತ್ತು ಇಂಡಿಯಾ ಬ್ಲಾಕ್‌ನ ಕೋಡಿಕುನ್ನಿಲ್ ಸುರೇಶ್ (K.Suresh) ನಾಮಪತ್ರ ಸಲ್ಲಿಸಿದ್ದಾರೆ.

    ಸ್ವಾತಂತ್ರ್ಯದ ನಂತರ, ಲೋಕಸಭೆಯ ಸ್ಪೀಕರ್ (Lok Sabha Speaker Election) ಮತ್ತು ಉಪಸಭಾಪತಿಯನ್ನು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಒಮ್ಮತದ ಮೂಲಕ ಆಯ್ಕೆ ಮಾಡಲಾಗುತಿತ್ತು. ಆದರೆ ಈ ಬಾರಿ ಇಂಡಿಯಾ ಬಣ ಅಭ್ಯರ್ಥಿ ಘೋಷಣೆಯ ನಂತರ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟಿಸುತ್ತಿರುವುದು ವಿಪರ್ಯಾಸ: ಬಸವರಾಜ ಬೊಮ್ಮಾಯಿ

    ಜೂನ್ 26 ರಂದು ಲೋಕಸಭೆಯ ಸ್ಪೀಕರ್ ಆಯ್ಕೆ ಚುನಾವಣೆ ನಡೆಯಲಿದೆ. ಜೂನ್ 27 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಕೃಷಿಕ ಮತ್ತು ಸಮಾಜ ಸೇವಕ ಬಿರ್ಲಾ ಅವರು ತಮ್ಮ ವಿದ್ಯಾರ್ಥಿ ದಿನಗಳಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 1991 ರಲ್ಲಿ ಭಾರತೀಯ ಯುವ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಮತ್ತು ರಾಷ್ಟ್ರಮಟ್ಟದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ತುರ್ತು ಪರಿಸ್ಥಿತಿ ನೆನಪಿಸಿದ ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು

    ಬಿರ್ಲಾ ಅವರು ಕೋಟಾ ಕ್ಷೇತ್ರದಿಂದ 17 ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಅಲ್ಲಿ ಅವರು ಕಾಂಗ್ರೆಸ್‌ನ ರಾಮನಾರಾಯಣ್ ಮೀನಾ ಅವರನ್ನು 2.5 ಲಕ್ಷ ಮತಗಳಿಂದ ಸೋಲಿಸಿದ್ದರು. ಕಳೆದ ಲೋಕಸಭೆಗೆ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

    17ನೇ ಲೋಕಸಭೆಯ ಸ್ಪೀಕರ್ ಆಗಿ ಎನ್‌ಡಿಎ ಅಭ್ಯರ್ಥಿ ಬಿರ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದರು. ಆಗ ಬಿರ್ಲಾ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. ಇದಕ್ಕೆ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಬಿಜೆಡಿ ಸೇರಿದಂತೆ ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದವು. ವೈಎಸ್‌ಆರ್‌ಸಿಪಿ ಮತ್ತು ಟಿಡಿಪಿ ಕೂಡ ಬಿರ್ಲಾ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ್ದವು. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ 50 ವರ್ಷ – ಕರಾಳ ದಿನಗಳನ್ನು ನೆನೆದ ಪ್ರಧಾನಿ

    ಇಂಡಿಯಾ ಬ್ಲಾಕ್ ಅಭ್ಯರ್ಥಿ ಕೆ.ಸುರೇಶ್ ಅವರು 29 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಹೆಚ್ಚು ಕಾಲ ಲೋಕಸಭಾ ಸಂಸದರಾಗಿ ಆಯ್ಕೆಯಾದವರ ಪೈಕಿ ಸುರೇಶ್‌ ಕೂಡ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸುರೇಶ್ ಮೊದಲ ಬಾರಿಗೆ 1989 ರಲ್ಲಿ ಲೋಕಸಭೆಗೆ ಚುನಾಯಿತರಾದರು. ನಂತರ ಅವರು 1991, 1996 ಮತ್ತು 1999 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅಡೂರ್ ಕ್ಷೇತ್ರದಿಂದ ಲೋಕಸಭೆಗೆ ಸತತ ನಾಲ್ಕು ಅವಧಿಗೆ ಗೆದ್ದರು.

    2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾವೆಲಿಕ್ಕಾರ (ಕೇರಳ)ದಿಂದ ಎಂಟನೇ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೆದ್ದರು. ಈ ಹಿಂದೆ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಯಾಧ್ಯಕ್ಷರಾಗಿದ್ದಾರೆ. 17 ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯ ಸಚೇತಕರಾಗಿದ್ದರು.

  • ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಸಂಸದ ವಿಶಾಲ್‌ ಕಾಂಗ್ರೆಸ್‌ಗೆ ಬೆಂಬಲ – ‘ಕೈ’ ಸ್ಥಾನಗಳ ಸಂಖ್ಯೆ 100 ಕ್ಕೆ ಏರಿಕೆ

    ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಸಂಸದ ವಿಶಾಲ್‌ ಕಾಂಗ್ರೆಸ್‌ಗೆ ಬೆಂಬಲ – ‘ಕೈ’ ಸ್ಥಾನಗಳ ಸಂಖ್ಯೆ 100 ಕ್ಕೆ ಏರಿಕೆ

    ಹೈದರಾಬಾದ್: ಸಾಂಗ್ಲಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಸಂಸದ ವಿಶಾಲ್ ಪಾಟೀಲ್ (Vishal Patil) ಅವರು ಗುರುವಾರ ಕಾಂಗ್ರೆಸ್‌ಗೆ (Congress) ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ‘ಇಂಡಿಯಾ’ ಮೈತ್ರಿಕೂಟದ (INDIA Bloc) ಸಂಖ್ಯೆ 233 ಕ್ಕೆ ಏರಿಕೆಯಾಗಿದೆ.

    ಪಾಟೀಲ ಅವರ ಬೆಂಬಲವನ್ನು ಸ್ವಾಗತಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮಹಾರಾಷ್ಟ್ರದ ಜನರು ವಿಶ್ವಾಸಘಾತುಕತನ, ದುರಹಂಕಾರ ಮತ್ತು ವಿಭಜನೆಯ ರಾಜಕಾರಣವನ್ನು ಸೋಲಿಸಿದರು. ಇದು ನಮ್ಮ ಸ್ಫೂರ್ತಿದಾಯಕ ಧೀಮಂತರಾದ ಛತ್ರಪತಿ ಶಿವಾಜಿ ಮಹಾರಾಜರು, ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಒಂದು ಕ್ಷೇತ್ರದ ಸೋಲು – ಮತ್ತೆ ಎನ್‌ಡಿಎಗೆ ಸೇರ್ತಾರಾ ಉದ್ಧವ್‌?

    ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾಂಗ್ಲಿಯಿಂದ ಚುನಾಯಿತ ಸಂಸದ ವಿಶಾಲ್ ಪಾಟೀಲ್ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ಸೂಚಿಸಿರುವುದನ್ನು ಸ್ವಾಗತಿಸುತ್ತೇವೆ ಎಂದು ಖರ್ಗೆ ತಿಳಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಅವರ ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಸಾಂಗ್ಲಿಯಲ್ಲಿ ಉದ್ಧವ್‌ ಠಾಕ್ರೆ ಅವರ ಪಕ್ಷದಿಂದ ಚಂದ್ರಹರ ಸುಭಾಶ್‌ ಪಾಟೀಲ್‌ ಕಣಕ್ಕೆ ಇಳಿದಿದ್ದರು. ಆದರೆ ಫಲಿತಾಂಶ ಪ್ರಕಟವಾದಾಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ವಿಶಾಲ್‌ ಪ್ರಕಾಶ್‌ಬಾಪು ಪಟೀಲ್‌ 1,00,053 ಮತಗಳ ಅಂತರದಿಂದ ಜಯಗಳಿಸಿದ್ದರು. ಇದನ್ನೂ ಓದಿ: ಜೂ.9 ರಂದು ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ: ಮೂಲ

    ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಶಾಲ್‌ ಪ್ರಕಾಶ್‌ ಪಾಟೀಲ್‌ ಅವರು ಕಾಂಗ್ರೆಸ್‌ನಿಂದ ಟಿಕೆಟ್‌ ಕೇಳಿದ್ದರು. ಆದರೆ ಮೈತ್ರಿ ಭಾಗವಾಗಿರುವ ಕಾರಣ ಕಾಂಗ್ರೆಸ್‌ ಟಿಕೆಟ್‌ ನೀಡಿರಲಿಲ್ಲ. ಆದರೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಹಿಂದುಗಡೆಯಿಂದ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಕ್ಕೆ ಉದ್ಧವ್‌ ಠಾಕ್ರೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಬುಧವಾರ ನಡೆದ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಠಾಕ್ರೆ ಗೈರಾಗಿದ್ದರು.

  • ಸರ್ಕಾರ ರಚನೆ ಮಾಡುವ ಚಿಂತನೆ ಕೈಬಿಟ್ಟ ‘ಇಂಡಿಯಾ’ ಮೈತ್ರಿಕೂಟ

    ಸರ್ಕಾರ ರಚನೆ ಮಾಡುವ ಚಿಂತನೆ ಕೈಬಿಟ್ಟ ‘ಇಂಡಿಯಾ’ ಮೈತ್ರಿಕೂಟ

    – ಬಲಿಷ್ಠ ವಿಪಕ್ಷವಾಗಿ ಕಾರ್ಯನಿರ್ವಹಿಸಲು ಇಂಡಿಯಾ ಕೂಟ ನಾಯಕರ ತೀರ್ಮಾನ

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸರಳ ಬಹುಮತ ಕೊರತೆ ಕಾರಣದಿಂದಾಗಿ ಸರ್ಕಾರ ರಚನೆ ಮಾಡುವ ಚಿಂತನೆಯನ್ನು ‘ಇಂಡಿಯಾ’ ಮೈತ್ರಿಕೂಟ (INDIA Bloc) ಕೈಬಿಟ್ಟಿದೆ.

    ಫಲಿತಾಂಶ ಕುರಿತು ಚರ್ಚೆಗೆ ಇಂಡಿಯಾ ಒಕ್ಕೂಟದ ನಾಯಕರು ಸಭೆ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನಿವಾಸದಲ್ಲಿ ನಾಯಕರ ಸಭೆ ನಡೆಯಿತು. ಇದನ್ನೂ ಓದಿ: ಮೋದಿಗೆ ದೊಡ್ಡ ರಾಜಕೀಯ ನಷ್ಟವಾಗಿದೆ: ‘ಇಂಡಿಯಾ’ ಮೈತ್ರಿಕೂಟ ನಾಯಕರ ಸಭೆಯಲ್ಲಿ ಖರ್ಗೆ ಮಾತು

    ಬೇರೆಯವರನ್ನು ಸೆಳೆದು, ಅವರ ಆಣತಿಯಂತೆ ಕುಣಿಯುವುದು ಬೇಡ. ಇಂಡಿಯಾ ಮೈತ್ರಿಕೂಟ ಒಗ್ಗಟ್ಟಾಗಿಯೇ ಇರಲಿ, ಬೇರೆಯವರ ಹಸ್ತಕ್ಷೇಪ ಬೇಡ. ಸರ್ಕಾರ ಮಾಡಲು ಸಾಕಷ್ಟು ಸವಾಲುಗಳಿವೆ. ಬಲಿಷ್ಠ ವಿಪಕ್ಷವಾಗಿ ಕಾರ್ಯನಿರ್ವಹಿಸಲು ಇಂಡಿಯಾ ಒಕ್ಕೂಟ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

    ಮೋದಿ ಹಾಗೂ ಬಿಜೆಪಿ ವಿರುದ್ಧ ಗಟ್ಟಿ ಧ್ವನಿಯಾಗಿ 2014 ರಿಂದ ಮಾಡಿರುವ ತಪ್ಪುಗಳನ್ನ ಒತ್ತಿ ಹೇಳೋಣ. ಮೋದಿಯ ದುರಾಡಳಿತದ ಬಗ್ಗೆ ಜನರಿಗೆ ತಿಳಿಸುವತ್ತ ಕಾರ್ಯಾನಿರ್ವಹಿಸುವುದು. ಸದನದಲ್ಲಿ ಬಿಜೆಪಿಯ ಧ್ವನಿ ಅಡಗಿಸುವ ಕೆಲಸ ಮಾಡಬೇಕು ಮೈತ್ರಿಕೂಟದ ನಾಯಕರು ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ಮೋದಿಯೇ ಪ್ರಧಾನಿಯಾಗಲಿ: ಎನ್‌ಡಿಎ ಸಭೆಯಲ್ಲಿ ‘ನಮೋ’ ನಾಯಕತ್ವಕ್ಕೆ ಬಹುಪರಾಕ್‌

    ಸಭೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಾವೆಲ್ಲರೂ ಸೇರಿ ಒಂದೇ ಧ್ವನಿಯಲ್ಲಿ ಹೇಳುತ್ತಿದ್ದೇವೆ. ನಾವು ಸಂವಿಧಾನ ಅಡಿ ಬರುವ ಎಲ್ಲ ಮತದಾರ ಬಂಧುಗಳಿಗೆ ಧನ್ಯವಾದ ತಿಳಿಸುತ್ತೇವೆ. ಪ್ರಜಾಪ್ರಭುತ್ವ ರಕ್ಷಣೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

  • ಸಂವಿಧಾನ ಮೌಲ್ಯಗಳಿಗೆ ಬದ್ಧವಾದ ಪಕ್ಷಗಳಿಗೆ ಸ್ವಾಗತ: ‘ಇಂಡಿಯಾ’ ಮೈತ್ರಿಕೂಟಕ್ಕೆ ಖರ್ಗೆ ಆಹ್ವಾನ

    ಸಂವಿಧಾನ ಮೌಲ್ಯಗಳಿಗೆ ಬದ್ಧವಾದ ಪಕ್ಷಗಳಿಗೆ ಸ್ವಾಗತ: ‘ಇಂಡಿಯಾ’ ಮೈತ್ರಿಕೂಟಕ್ಕೆ ಖರ್ಗೆ ಆಹ್ವಾನ

    ನವದೆಹಲಿ: ಮೋದಿಗೆ (Narendra Modi) ದೊಡ್ಡ ರಾಜಕೀಯ ನಷ್ಟವಾಗಿದೆ ಎಂದು ಜನಾದೇಶ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಾತನಾಡಿದ್ದಾರೆ.

    ಫಲಿತಾಂಶ ಕುರಿತು ಚರ್ಚೆಗೆ ಖರ್ಗೆ ನಿವಾಸದಲ್ಲಿ ಇಂದು ಇಂಡಿಯಾ ಮೈತ್ರಿಕೂಟದ (INDIA Bloc) ನಾಯಕರು ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಖರ್ಗೆ, ನಾವು ಉತ್ತಮವಾಗಿ ಹೋರಾಡಿದ್ದೇವೆ. ಒಗ್ಗಟ್ಟಿನಿಂದ ಹೋರಾಡಿದ್ದೇವೆ, ದೃಢವಾಗಿ ಹೋರಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿಯೇ ಪ್ರಧಾನಿಯಾಗಲಿ: ಎನ್‌ಡಿಎ ಸಭೆಯಲ್ಲಿ ‘ನಮೋ’ ನಾಯಕತ್ವಕ್ಕೆ ಬಹುಪರಾಕ್‌

    ನಮ್ಮ ಸಂವಿಧಾನ ಮತ್ತು ಅದರ ಮುನ್ನುಡಿಯಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ತನ್ನ ಮೂಲಭೂತ ಬದ್ಧತೆಯನ್ನು ಹಂಚಿಕೊಳ್ಳುವ ಎಲ್ಲಾ ಪಕ್ಷಗಳನ್ನು ಇಂಡಿಯಾ ಒಕ್ಕೂಟವು ಸ್ವಾಗತಿಸುತ್ತದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಹೋರಾಡಿದ್ದೆವು. ಜನಾದೇಶವು ನಿರ್ಣಾಯಕವಾಗಿದೆ ಎಂದರು.

    ಮೋದಿ ವಿರುದ್ಧ ಮತ್ತು ಅವರ ರಾಜಕೀಯದ ಶೈಲಿಗೆ ಸ್ಪಷ್ಟವಾದ ನೈತಿಕ ಸೋಲು ಇದು. ಇದರ ಹೊರತಾಗಿ ಮೋದಿಗೆ ದೊಡ್ಡ ರಾಜಕೀಯ ನಷ್ಟವಾಗಿದೆ. ಅವರು ಜನರ ಇಚ್ಛೆಯನ್ನು ಬುಡಮೇಲು ಮಾಡಲು ನಿರ್ಧರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕನ್ನಡಿಗ ಪ್ರವಾಸಿಗರ ನಾಪತ್ತೆ ಪ್ರಕರಣ- ಸರ್ಕಾರಕ್ಕೆ ವಿಜಯೇಂದ್ರ ಆಗ್ರಹ

    ಇಂಡಿಯಾ ಒಕ್ಕೂಟದ ನಾಯಕರ ಸಭೆಯಲ್ಲಿ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌, ಕೆ.ಸಿ.ವೇಣುಗೋಪಾಲ್‌, ಶರದ್‌ ಪವಾರ್‌, ಸುಪ್ರಿಯಾ ಸುಳೆ, ಟಿ.ಆರ್‌.ಬಾಲು, ಅಖಿಲೇಶ್‌ ಯಾದವ್‌, ರಾಮಗೋಪಾಲ್‌ ಯಾದವ್‌, ಅರವಿಂದ್‌ ಸಾವಂತ್‌, ಅಭಿಷೇಕ್‌ ಬ್ಯಾನರ್ಜಿ, ಸಂಜಯ್‌ ಯಾದವ್‌, ಸಂಜಯ್‌ ರಾವತ್‌, ಚಂಪೈ ಸೊರೇನ್‌, ಓಮರ್‌ ಅಬ್ದುಲ್ಲಾ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.

  • ಇದು ಮೋದಿ ವಿರುದ್ಧದ ಸ್ಪಷ್ಟ ಜನಾದೇಶ: ಫಲಿತಾಂಶದ ಬಗ್ಗೆ ಖರ್ಗೆ ಮಾತು

    ಇದು ಮೋದಿ ವಿರುದ್ಧದ ಸ್ಪಷ್ಟ ಜನಾದೇಶ: ಫಲಿತಾಂಶದ ಬಗ್ಗೆ ಖರ್ಗೆ ಮಾತು

    – ಮೋದಿ ನೈತಿಕ ಮತ್ತು ರಾಜಕೀಯ ಸೋಲು
    – ಚುನಾವಣೆಯು ಜನರ ಗೆಲುವು.. ಪ್ರಜಾಪ್ರಭುತ್ವದ ಜಯ

    ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವಿರುದ್ಧದ ಸ್ಪಷ್ಟ ಜನಾದೇಶವಾಗಿದೆ. ಇದು ಅವರ ‘ನೈತಿಕ ಮತ್ತು ರಾಜಕೀಯ ಸೋಲು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಭಿಪ್ರಾಯಪಟ್ಟಿದ್ದಾರೆ.

    ಫಲಿತಾಂಶ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಚುನಾವಣಾ ಫಲಿತಾಂಶಗಳು ‘ಜಂತಾ ಕಾ ಫಲಿತಾಂಶ’. ಈ ಜನಾದೇಶ ಮೋದಿ ಜಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ ಉಪಸ್ಥಿತರಿದ್ದರು. ಇದನ್ನೂ ಓದಿ: ಆಡಳಿತಾರೂಢ ವೈಎಸ್‌ಆರ್‌ಸಿಪಿ ಧೂಳಿಪಟ – ಟಿಡಿಪಿ ತೆಕ್ಕೆಗೆ ಆಂಧ್ರ

    ಇಂಡಿಯಾ ಬಣವು ಸರ್ಕಾರ ರಚಿಸುವ ಸಾಧ್ಯತೆಯ ಪ್ರಶ್ನೆಗೆ ರಾಹುಲ್ ಗಾಂಧಿ ಮಾತನಾಡಿ, ನಾವು ನಮ್ಮ ಮೈತ್ರಿ ಪಾಲುದಾರರೊಂದಿಗೆ ನಾಳೆ ಸಭೆ ನಡೆಸುತ್ತೇವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾಗುವುದು. ನಮ್ಮ ಮೈತ್ರಿ ಪಾಲುದಾರರನ್ನು ಕೇಳದೆ ನಾವು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಇದಕ್ಕೂ ಮೊದಲು, ಫಲಿತಾಂಶದ ಬಗ್ಗೆ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದರು. ನಾವು 18 ನೇ ಲೋಕಸಭೆ ಚುನಾವಣೆಯ ಜನಾದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ. ಇದು ಜನರ ಗೆಲುವು. ಇದು ಪ್ರಜಾಪ್ರಭುತ್ವದ ಗೆಲುವು. ಈ ಬಾರಿ ಜನ ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿಲ್ಲ. ಅದರಲ್ಲೂ ಆಡಳಿತ ಪಕ್ಷ ಬಿಜೆಪಿಯು ಒಬ್ಬ ವ್ಯಕ್ತಿ – ಒಂದು ಮುಖ ಎಂಬ ಹೆಸರಿನಲ್ಲಿ ಮತ ಕೇಳಿತ್ತು. ಈಗ, ಈ ಜನಾದೇಶ ಮೋದಿಜಿ ವಿರುದ್ಧ ಎಂಬುದು ಸ್ಪಷ್ಟವಾಗಿದೆ. ಇದು ಅವರ ರಾಜಕೀಯ ಮತ್ತು ನೈತಿಕ ಸೋಲು ಬರೆದುಕೊಂಡಿದ್ದರು. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಡಬಲ್‌ ಧಮಾಕ – ಕಾಂಗ್ರೆಸ್‌ ಭದ್ರಕೋಟೆಯಾಗಿಯೇ ಉಳಿದ ರಾಯ್‌ ಬರೇಲಿ

    ಕಾಂಗ್ರೆಸ್ ಪಕ್ಷದ ಪ್ರಚಾರ ಆರಂಭದಿಂದ ಕೊನೆಯ ವರೆಗೂ ಸಕಾರಾತ್ಮಕವಾಗಿತ್ತು. ನಾವು ಹಣದುಬ್ಬರ, ನಿರುದ್ಯೋಗ, ರೈತರು ಮತ್ತು ಕಾರ್ಮಿಕರ ಅವಸ್ಥೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗದಂತಹ ಸಮಸ್ಯೆಗಳನ್ನು ಕೇಂದ್ರ ವಿಷಯಗಳಾಗಿ ತೆಗೆದುಕೊಂಡಿದ್ದೆವು. ಈ ವಿಷಯಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ನಮ್ಮೊಂದಿಗೆ ಸೇರಿಕೊಂಡರು. ನಮಗೆ ಬೆಂಬಲ ನೀಡಿದರು. ಪ್ರಧಾನಿಯವರು ನಡೆಸಿದ ಅಭಿಯಾನವು ಇತಿಹಾಸದಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಮೋದಿಯವರು ಹರಡಿದ ಸುಳ್ಳುಗಳನ್ನು ಸಾರ್ವಜನಿಕರು ಅರ್ಥಮಾಡಿಕೊಂಡಿದ್ದಾರೆ ಎಂದು ಟಾಂಗ್‌ ಕೊಟ್ಟಿದ್ದಾರೆ.

    ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆ ಎರಡರಲ್ಲೂ ಲಕ್ಷಗಟ್ಟಲೆ ಜನರು ಭಾಗವಹಿಸಿದ್ದರು. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾರ್ಗ ಕಂಡುಕೊಳ್ಳುವುದು ಕಾಂಗ್ರೆಸ್‌ನ ಪ್ರಚಾರದ ಪ್ರಮುಖ ಉದ್ದೇಶವಾಗಿತ್ತು. ನಾವು ಇದನ್ನು 5 ನ್ಯಾಯ ಮತ್ತು 25 ಗ್ಯಾರಂಟಿ ಎಂದು ಹೆಸರಿಸಿದ್ದೇವೆ. ಈ ಆಧಾರದ ಮೇಲೆ ನಾವು ಗ್ಯಾರಂಟಿ ಕಾರ್ಡ್ ಮಾಡಿದ್ದೇವೆ. ಅದರೊಂದಿಗೆ ನಮ್ಮ ಕಾರ್ಯಕರ್ತರು ಮನೆ ಮನೆಗೆ ಪ್ರಚಾರ ಮಾಡಿದರು ಎಂದು ಖರ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ನಾಗಾಲ್ಯಾಂಡ್‍ನಲ್ಲಿ 20 ವರ್ಷಗಳ ಬಳಿಕ ಗೆಲುವು ಸಾಧಿಸಿ ಇತಿಹಾಸ ಬರೆದ ಕಾಂಗ್ರೆಸ್

  • ರಾಮರಾಜ್ಯ ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ 42 ಸ್ಥಾನಗಳ ಮುನ್ನಡೆ – ಎನ್‌ಡಿಎ ಕುಸಿತ

    ರಾಮರಾಜ್ಯ ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ 42 ಸ್ಥಾನಗಳ ಮುನ್ನಡೆ – ಎನ್‌ಡಿಎ ಕುಸಿತ

    – 2019 ರಲ್ಲಿ ಕೇವಲ 1 ಸ್ಥಾನ ಗೆದ್ದಿತ್ತು ಕಾಂಗ್ರೆಸ್‌

    ಲಕ್ನೋ: ರಾಮರಾಜ್ಯ ಉತ್ತರ ಪ್ರದೇಶದಲ್ಲಿ (Uttar Pradesh) ವಿಪಕ್ಷಗಳ ‘ಇಂಡಿಯಾ’ ಒಕ್ಕೂಟ 42 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಎನ್‌ಡಿಎಗೆ ಭಾರಿ ಹಿನ್ನಡೆಯಾಗಿದೆ.

    ಸಮಾಜವಾದಿ ಪಕ್ಷವು 34 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಎಂಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಪ್ರಸ್ತುತ 35 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಅಮೇಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅವರಿಗಿಂತ 17,000 ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ 23,635 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇದನ್ನೂ ಓದಿ: Elections Results: ಜೈಲಿನಲ್ಲಿರೋ ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ಗೆ ಮುನ್ನಡೆ

    18ನೇ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಎಲ್ಲರ ಚಿತ್ತ ಉತ್ತರ ಪ್ರದೇಶದ ಕಡೆಗೆ ನೆಟ್ಟಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು (80) ಕ್ಷೇತ್ರಗಳನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಇಲ್ಲಿ ಗೆದ್ದವರು ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುತ್ತಾರೆ ಎಂದೇ ಹೇಳಲಾಗುತ್ತದೆ. 2019ರ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ 62 ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿತ್ತು.

    ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಗೆದ್ದಿದ್ದು ಕೇವಲ ಒಂದೇ ಒಂದು ಸ್ಥಾನ. ಕಾಂಗ್ರೆಸ್‌ ಭದ್ರಕೋಟೆ ರಾಯ್‌ಬರೇಲಿಯಲ್ಲಿ (2019) ಸೋನಿಯಾ ಗಾಂಧಿ ಗೆದ್ದಿದ್ದರು. ಪಕ್ಷದ ಮತ್ತೊಂದು ಭದ್ರಕೋಟೆಯಾಗಿದ್ದ ಅಮೇಠಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಬಿಜೆಪಿ ಸ್ಮೃತಿ ಇರಾನಿ ಪರಾಭವಗೊಳಿಸಿದ್ದರು. ಇದನ್ನೂ ಓದಿ: ವಿಶೇಷ ಸ್ಥಾನಮಾನ ರದ್ದು ಬಳಿಕ ಜಮ್ಮು-ಕಾಶ್ಮೀರದಲ್ಲಿ ‘ಇಂಡಿಯಾ’ ಒಕ್ಕೂಟ ಮುನ್ನಡೆ

    ಈ ಬಾರಿ ರಾಯ್‌ಬರೇಲಿಯಿಂದ ರಾಹುಲ್‌ ಗಾಂಧಿ ಸ್ಪರ್ಧಿಸಿದ್ದು ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್‌ನ ಕಿಶೋರ್‌ ಲಾಲ್‌ ಶರ್ಮಾ ಮುನ್ನಡೆ ಸಾಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಕಾಂಗ್ರೆಸ್‌ ಸೀಟು ಹಂಚಿಕೆ ಮಾಡಿಕೊಂಡಿತ್ತು.