Tag: INDIA Bloc

  • Bihar Election 2025 | ಪಂಚಾಯತ್ ಪ್ರತಿನಿಧಿಗಳಿಗೆ ಪಿಂಚಣಿ, 50 ಲಕ್ಷ ವಿಮೆ, 5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ತೇಜಸ್ವಿ ಭರವಸೆ

    Bihar Election 2025 | ಪಂಚಾಯತ್ ಪ್ರತಿನಿಧಿಗಳಿಗೆ ಪಿಂಚಣಿ, 50 ಲಕ್ಷ ವಿಮೆ, 5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ತೇಜಸ್ವಿ ಭರವಸೆ

    – ಅನುಕಂಪ ಆಧಾರದಲ್ಲಿ ಸರ್ಕಾರಿ ಉದ್ಯೋಗ – ವಯಸ್ಸಿನ ಮಿತಿ ರದ್ದು; ಭರವಸೆ

    ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ (Bihar Election 2025) ಇನ್ನೆರಡು ವಾರವಷ್ಟೇ ಬಾಕಿ ಉಳಿದಿದ್ದು, ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರ ಆರಂಭಿಸಿವೆ. ಈ ನಡುವೆ ಇಂದು ರಾಷ್ಟ್ರೀಯ ಜನತಾ ದಳ (RJD) ನಾಯಕಿ ತೇಜಸ್ವಿ ಯಾದವ್ (Tejashwi Yadav) ಮಹಾಘಟಬಂಧನ್ ಮೈತ್ರಿಕೂಟದ ಪರವಾಗಿ ಪ್ರಮುಖ ಚುನಾವಣಾ ಭರವಸೆಯನ್ನ ಪ್ರಕಟಿಸಿದ್ದಾರೆ.

    ಈಗಾಗಲೇ ಪ್ರತಿ ಮನೆಗೆ ಸರ್ಕಾರಿ ಉದ್ಯೋಗ ಭರವಸೆ ನೀಡಿದ್ದಾರೆ. ಇಂದು ನಾಲ್ಕು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು, ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮೈತ್ರಿಕೂಟದ ಭರವಸೆ ಪ್ರಕಟಿಸಿದ್ದಾರೆ.

    ಮಹಾಘಟಬಂಧನ್‌ (Mahagathbandhan) ಮೈತ್ರಿಕೂಟ ಅಧಿಕಾರಕ್ಕೆ ಬಂದ್ರೆ ಪಂಚಾಯತ್‌ ರಾಜ್‌ ವ್ಯವಸ್ಥೆಯ ಪ್ರತಿನಿಧಿಗಳ ಭತ್ಯೆಯನ್ನು ಡಬಲ್‌ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮುಂದುವರಿದು ನಾವು ಮೂರು ಹಂತದ ಪಂಚಾಯತ್ ಪ್ರತಿನಿಧಿಗಳಿಗೆ (ತಾಲೂಕು, ಜಿಲ್ಲೆ, ಗ್ರಾಮ ಪಂಚಾಯಿತಿ) ಪಿಂಚಣಿ ಯೋಜನೆ ಜಾರಿಗೆ ತರುತ್ತೇವೆ. 50 ಲಕ್ಷ ರೂ.ವರೆಗೆ ವಿಮೆ ಸಹ ಒದಗಿಸಲಾಗುವುದು. ಪಿಡಿಎಸ್ ವಿತರಕರಿಗೆ ಗೌರವಧನ ನೀಡಲಾಗುವುದು ಹಾಗೂ ಪ್ರತಿ ಕ್ವಿಂಟಾಲ್‌ಗೆ ಮಾರ್ಜಿನ್ ಹಣ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಅಲ್ಲದೇ ಕುಂಬಾರರು, ಕಮ್ಮಾರರು ಮತ್ತು ಬಡಗಿಗಳಂತಹ ಶ್ರಮಜೀವಿಗಳಿಗೆ 5 ಲಕ್ಷ ರೂಪಾಯಿಗಳ ವರೆಗೆ ಆರ್ಥಿಕ ನೆರವು ನೀಡುವುದಾಗಿ ಅವರು ಘೋಷಿಸಿದರು. 5 ವರ್ಷದಲ್ಲಿ 5 ಲಕ್ಷ ರೂ. ಏಕಕಾಲಿಕ ನೆರವು, ಸರ್ಕಾರಿ ಉದ್ಯೋಗಗಳಿಗೆ ಅನುಕಂಪದ ನೇಮಕಾತಿಗಳಿಗೆ 58 ವರ್ಷ ವಯಸ್ಸಿನ ಮಿತಿ ತೆಗೆದುಹಾಕುವುದಾಗಿಯೂ ಭರವಸೆ ನೀಡಿದ್ದಾರೆ.

    ಮುಂದುವರಿದು ಮಾತನಾಡಿ, ಎನ್‌ಡಿಎ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಚಾರ ಶುರುವಾದಾಗಿನಿಂದ ಬಿಹಾರ ಬದಲಾವಣೆಗಾಗಿ ಕಾತರದಿಂದ ಕಾಯುತ್ತಿದೆ. ಎನ್‌ಡಿಎ ದೃಷ್ಟಿಹೀನ ಸರ್ಕಾರ, ಭ್ರಷ್ಟ ಸರ್ಕಾರ. ಈ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಬಜೆಟ್‌ನಲ್ಲಿ ಬಿಹಾರಕ್ಕೆ ಬರಬೇಕಾದ ಹಣ ಗುಜರಾತ್‌ಗೆ ಹೋಗ್ತಾ ಇದೆ ಎಂದು ಕಿಡಿ ಕಾರಿದರು.

    ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್‌ 6ರಂದು ಮೊದಲ ಹಂತ ನವೆಂಬರ್‌ 11ರಂದು 2ನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನ.14ರಂದು ಫಲಿತಾಂಶ ಪ್ರಕಟವಾಗಲಿದೆ.

  • ಬಿಹಾರ ವಿಧಾನಸಭೆ ಚುನಾವಣೆ; ಎನ್‌ಡಿಎ-ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಲೆಕ್ಕಾಚಾರ

    ಬಿಹಾರ ವಿಧಾನಸಭೆ ಚುನಾವಣೆ; ಎನ್‌ಡಿಎ-ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಲೆಕ್ಕಾಚಾರ

    ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ (Bihar Elections) ಮುಹೂರ್ತ ಫಿಕ್ಸ್ ಆಗಿದೆ. ಈ ಬೆನ್ನಲ್ಲೇ ಎನ್‌ಡಿಎ (NDA) ಮತ್ತು ಇಂಡಿಯಾ ಒಕ್ಕೂಟದಲ್ಲಿ (INDIA Bloc) ಸೀಟು ಹಂಚಿಕೆ ಲೆಕ್ಕಚಾರ ಶುರುವಾಗಿದೆ. ಎಲ್ಲ ಪಕ್ಷಗಳು ಹೆಚ್ಚು ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿವೆ.

    ಮೂಲಗಳ ಪ್ರಕಾರ ಎನ್‌ಡಿಎಯಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ‌. 243 ಕ್ಷೇತ್ರಗಳ ಪೈಕಿ, 205 ಸ್ಥಾನಗಳು ಜೆಡಿಯು ಮತ್ತು ಬಿಜೆಪಿ ನಡುವೆ ಹಂಚಿಕೆಯಾಗಿದೆ. ಕೆಲವು ಸನ್ನಿವೇಶಗಳಲ್ಲಿ ಒಂದು ಪಕ್ಷವು ಇನ್ನೊಂದಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಎನ್ನಲಾಗಿದೆ. ಇದನ್ನೂ ಓದಿ: Bihar Election Dates 2025 | ಬೂತ್ ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡಲು ಸಹಾಯವಾಣಿ

    ಉಳಿದ 38 ಸ್ಥಾನಗಳನ್ನು ಎನ್‌ಡಿಎಯ ಸಣ್ಣ ಮಿತ್ರಪಕ್ಷಗಳಾದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ), ಹಿಂದೂಸ್ತಾನಿ ಅವಾಮ್ ಮೋರ್ಚಾ (ಹೆಚ್‌ಎಎಂ) ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಂ) ನಡುವೆ ಹಂಚುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಬಿಜೆಪಿ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್‌ಗೆ 25 ಸ್ಥಾನಗಳು, ಹೆಚ್‌ಎಎಂ ನಾಯಕ ಜಿತನ್ ರಾಮ್ ಮಾಂಝಿಗೆ ಏಳು ಸ್ಥಾನಗಳು ಮತ್ತು ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಂಗೆ ಆರು ಸ್ಥಾನಗಳನ್ನು ಪಡೆಯಬಹುದು.

    ಚಿರಾಗ್ ಪಾಸ್ವಾನ್ ಅವರೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದ್ದು, ಎಲ್‌ಜೆಪಿ ನಾಯಕ ತಮ್ಮ ಪಕ್ಷದ ನಾಯಕರಿಗೆ ಆದ್ಯತೆಯ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಪಾಸ್ವಾನ್ ಅವರ ಸ್ಥಾನಗಳ ಪಾಲು ಹೆಚ್ಚಾದರೆ, ಅದು ಮಾಂಝಿ ಮತ್ತು ಕುಶ್ವಾಹ ಅವರಿಗೆ ಹಂಚಿಕೆಯಲ್ಲಿ ಕಡಿತಕ್ಕೆ ಕಾರಣವಾಗಬಹುದು. ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ – ನ.6, 11ರಂದು ಮತದಾನ, ನ.14ಕ್ಕೆ ಫಲಿತಾಂಶ

    ಇಂಡಿಯಾ ಒಕ್ಕೂಟದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆರ್‌ಜೆಡಿಗೆ 125, ಕಾಂಗ್ರೆಸ್‌ಗೆ 55 ರಿಂದ 57 ಸ್ಥಾನಗಳಲ್ಲಿ ಸ್ಪರ್ಧೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎಡ ಪಕ್ಷಗಳು 35, ಮುಖೇಶ್ ಸಾಹ್ನಿ ಅವರ ವಿಐಪಿ ಪಕ್ಷಕ್ಕೆ 20 ಸ್ಥಾನಗಳಲ್ಲಿ, ಪಶುಪತಿ ಪರಾಸ್‌ಗೆ ಮೂರು ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ಗೆ ಎರಡು ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ. ಈಗಾಗಲೇ ನಾಯಕರ ನಡುವೆ ಮಾತುಕತೆ ನಡೆದಿದ್ದು, ಬಹುತೇಕ ನಾಯಕರ ಸಮ್ಮತಿ ಸಿಕ್ಕಿದ್ದರೂ, ಕಾಂಗ್ರೆಸ್ ಸೀಟುಗಳ‌ ಸಂಖ್ಯೆ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ. ನಾಳೆ ಕಾಂಗ್ರೆಸ್ ಮೊದಲ ಸಿಇಸಿ ಸಭೆ ನಡೆಸುತ್ತಿದ್ದು, ಸುಮಾರು 30 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ.

    ಬಿಹಾರ ವಿಧಾನಸಭೆಗೆ ಸೋಮವಾರ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಿಸಿದೆ. ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 6 ರಂದು ಮೊದಲ‌ ಹಂತ, ನವೆಂಬರ್ 11 ರಂದು ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ನವೆಂಬರ್ 14 ರಂದು ಮತ ಎಣಿಕೆಯಾಗಲಿದೆ. ಇದನ್ನೂ ಓದಿ: Bihar Election Dates 2025 | 69 ಲಕ್ಷ ಹೆಸರುಗಳು ಡಿಲೀಟ್‌, 21 ಲಕ್ಷ ಹೊಸ ಮತದಾರರ ಸೇರ್ಪಡೆ

  • ಇಂದೇ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎ‌ 324 ಸ್ಥಾನ ಗೆಲ್ಲುವ ಸಾಧ್ಯತೆ

    ಇಂದೇ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎ‌ 324 ಸ್ಥಾನ ಗೆಲ್ಲುವ ಸಾಧ್ಯತೆ

    – ಮೈತ್ರಿಕೂಟಕ್ಕೆ ಆಘಾತ; 234 ರಿಂದ 208ಕ್ಕೆ ಇಳಿಯುವ ನಿರೀಕ್ಷೆ

    ನವದೆಹಲಿ: ಮೂರು ಪ್ರಮುಖ ವಿಧಾನಸಭಾ ಚುನಾವಣೆಗಳಲ್ಲಿ ಸತತ ಜಯಗಳಿಸಿದ ನಂತರ ಬಿಜೆಪಿ ಚೇತರಿಸಿಕೊಂಡಿದೆ. ಇಂದು ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ (NDA) ಪ್ರಬಲ ಪ್ರದರ್ಶನ ನೀಡುವ ಮೂಲಕ 324 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ-ಸಿ ವೋಟರ್, ಮೂಡ್ ಆಫ್ ದಿ ನೇಷನ್ ಸಮೀಕ್ಷೆ ತಿಳಿಸಿದೆ.

    ಮತ್ತೊಂದೆಡೆ 2024 ರಲ್ಲಿ 234 ಸ್ಥಾನಗಳನ್ನು ಗೆದ್ದು ಎನ್‌ಡಿಎಗೆ ಆಘಾತ ನೀಡಿದ್ದ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ ಇಂದು ಚುನಾವಣೆ ನಡೆದರೆ 208 ಸ್ಥಾನಗಳಿಗೆ ಇಳಿಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ. ಇದನ್ನೂ ಓದಿ: ಬಿಜೆಪಿ-ಆರ್‌ಎಸ್‌ಎಸ್‌ ನಡ್ವೆ ಕೆಲ ಭಿನ್ನಾಭಿಪ್ರಾಯ ಇರಬಹುದು, ಎಲ್ಲಿಯೂ ಸಂಘರ್ಷವಿಲ್ಲ: ಮೋಹನ್ ಭಾಗವತ್

    ಈ ಸಮೀಕ್ಷೆಯನ್ನು 2025 ರ ಜುಲೈ 1 ರಿಂದ ಆಗಸ್ಟ್ 14ರ ನಡುವೆ ನಡೆಸಲಾಯಿತು. ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ 54,788 ವ್ಯಕ್ತಿಗಳನ್ನು ಸಮೀಕ್ಷೆ ಮಾಡಲಾಯಿತು. ಸಿ-ವೋಟರ್‌ನ ನಿಯಮಿತ ಟ್ರ್ಯಾಕರ್ ಡೇಟಾದಿಂದ ಹೆಚ್ಚುವರಿಯಾಗಿ 1,52,038 ಜನರ ಅಭಿಪ್ರಾಯಗಳನ್ನು ಸಹ ವಿಶ್ಲೇಷಿಸಲಾಗಿದೆ.

    2024 ರ ಲೋಕಸಭಾ ಚುನಾವಣೆಯಲ್ಲಿ 543 ಸ್ಥಾನಗಳಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿತ್ತು. ಸ್ವಂತವಾಗಿ ಸರ್ಕಾರ ರಚಿಸಲು ಸರಳ ಬಹುಮತಕ್ಕೆ ಅಗತ್ಯವಿರುವ 272 ಸ್ಥಾನಗಳಿಗೆ 32 ಸ್ಥಾನಗಳ ಕೊರತೆಯಾಗಿತ್ತು. ಎನ್‌ಡಿಎ ಪಾಲುದಾರರೊಂದಿಗೆ, ಒಟ್ಟಾರೆ 293 ಸ್ಥಾನಗಳೊಂದಿಗೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸರ್ಕಾರ ರಚಿಸಿದರು. ಇದನ್ನೂ ಓದಿ: ಸರ್ಕಾರಿ ಸೌಲಭ್ಯಗಳ ದುರ್ಬಳಕೆ ಆರೋಪ – ಕರ್ನಾಟಕ ಭವನದ ಹೆಚ್ಚುವರಿ ಆಯುಕ್ತೆ ವಿರುದ್ಧ ಸಿಎಸ್‌ಗೆ ದೂರು

  • ಉಪರಾಷ್ಟ್ರಪತಿ ಚುನಾವಣೆ – ನಿವೃತ್ತ ನ್ಯಾ. ಬಿ.ಸುದರ್ಶನ್ ರೆಡ್ಡಿ ಇಂಡಿಯಾ ಒಕ್ಕೂಟದ ಅಭ್ಯರ್ಥಿ

    ಉಪರಾಷ್ಟ್ರಪತಿ ಚುನಾವಣೆ – ನಿವೃತ್ತ ನ್ಯಾ. ಬಿ.ಸುದರ್ಶನ್ ರೆಡ್ಡಿ ಇಂಡಿಯಾ ಒಕ್ಕೂಟದ ಅಭ್ಯರ್ಥಿ

    ನವದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ಹಿನ್ನಲೆ ಇಂಡಿಯಾ ಒಕ್ಕೂಟದಿಂದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಆಂಧ್ರಪ್ರದೇಶ ಮೂಲದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ (Sudershan Reddy) ಅವರನ್ನು ಅಭ್ಯರ್ಥಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಘೋಷಿಸಿದ್ದಾರೆ.

    ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರು ಭಾರತದ ಸುಪ್ರೀಂಕೋರ್ಟ್ನ ಮಾಜಿ ನ್ಯಾಯಮೂರ್ತಿಯಾಗಿದ್ದರು (Former Supreme Court judge). ಅವರು 2008 ರಿಂದ 2011ರವರೆಗೆ ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮುಂಚೆ, ಅವರು ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು. ಇದನ್ನೂ ಓದಿ: ಸೆಲ್‌ನಲ್ಲೇ ವಾಕಿಂಗ್, ತೆಳುವಾದ ಬೆಡ್ ಮೇಲೆ ಸ್ಲೀಪಿಂಗ್ – ರಾಜಾತಿಥ್ಯ ಇಲ್ದೇ `ಡಿ’ ಗ್ಯಾಂಗ್ ಫುಲ್ ಸೈಲೆಂಟ್

    ನ್ಯಾಯಮೂರ್ತಿ ರೆಡ್ಡಿ ಅವರು, ತಮ್ಮ ವೃತ್ತಿಜೀವನದಲ್ಲಿ ಹಲವಾರು ಪ್ರಮುಖ ತೀರ್ಪುಗಳನ್ನು ನೀಡಿದ್ದಾರೆ. ವಿಶೇಷವಾಗಿ ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು, ಮತ್ತು ಸಂವಿಧಾನಿಕ ವಿಷಯಗಳಿಗೆ ಸಂಬಂಧಿಸಿದ ಆದೇಶ ನೀಡಿದ್ದಾರೆ. ಅವರ ಕಾನೂನು ಜ್ಞಾನ ಮತ್ತು ನ್ಯಾಯಾಂಗದ ಸೇವೆಯಿಂದಾಗಿ ಅವರು ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ನೇಮಕಾತಿ ಪರೀಕ್ಷೆಗಳ ಏಕರೂಪ ಶುಲ್ಕ; ಪ್ರಾಥಮಿಕ ಹಂತಕ್ಕೆ 100 ರೂ., ಮುಖ್ಯ ಪರೀಕ್ಷೆ ಉಚಿತ

    ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯನ್ನು ಘೋಷಿಸಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಮುಂಬರುವ ಉಪರಾಷ್ಟ್ರಪತಿ ಚುನಾವಣೆಯು ಸೈದ್ಧಾಂತಿಕ ಯುದ್ಧವಾಗಿದೆ. ಎಲ್ಲಾ ವಿರೋಧ ಪಕ್ಷಗಳು ನಮ್ಮ ಜೊತೆಗಿವೆ. ಪ್ರಜಾಪ್ರಭುತ್ವ ಮೌಲ್ಯಗಳು ದಾಳಿಗೆ ಒಳಗಾಗಿವೆ. ಎಲ್ಲಾ ವಿರೋಧ ಪಕ್ಷಗಳು ಒಂದೇ ಹೆಸರಿಗೆ ಒಪ್ಪಿಗೆ ನೀಡಿರುವುದು ನನಗೆ ಸಂತೋಷ ತಂದಿದೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಸಾಧನೆಯಾಗಿದೆ ಎಂದು ಖರ್ಗೆ ಹೇಳಿದ್ದಾರೆ.

    ಆಯ್ಕೆ ಬಗ್ಗೆ ಮಾತನಾಡಿದ ನ್ಯಾ.ಸುದರ್ಶನ್ ರೆಡ್ಡಿ, ಎನ್‌ಡಿಎ ಸೇರಿದಂತೆ ಎಲ್ಲಾ ಪಕ್ಷಗಳು ನನ್ನನ್ನು ಬೆಂಬಲಿಸುವಂತೆ ನಾನು ಮನವಿ ಮಾಡುತ್ತೇನೆ. ವಿರೋಧ ಪಕ್ಷದ ಅಭ್ಯರ್ಥಿಯಾಗಿ, ಭಾರತದ 60% ರಷ್ಟು ಪ್ರತಿನಿಧಿಸುವುದಾಗಿ ತಿಳಿಸಿ ಮುಂಬರುವ ಚುನಾವಣೆಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲಮ್ಸ್‌ನ ‘ಕಾಂತಾರ ಚಾಪ್ಟರ್ 1’ ನಲ್ಲಿ ಕುಲಶೇಖರನ ಪಾತ್ರದಲ್ಲಿ ಗುಲ್ಶನ್ ದೇವಯ್ಯ

    ಮೂಲಗಳ ಪ್ರಕಾರ, ಆಂಧ್ರಪ್ರದೇಶದ ಎನ್‌ಡಿಎ ಮಿತ್ರಪಕ್ಷಗಳಾದ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಪವನ್ ಕಲ್ಯಾಣ್ ಅವರ ಜನಸೇನಾ ಮೇಲೆ ಒತ್ತಡ ಹೇರಲು ಪ್ರತಿಪಕ್ಷಗಳು ನ್ಯಾಯಮೂರ್ತಿ ರೆಡ್ಡಿ ಅವರನ್ನು ಆಯ್ಕೆ ಮಾಡಿಕೊಂಡಿವೆ. ಎನ್‌ಡಿಎ ಆಯ್ಕೆಯ ಹಿಂದೆ ಈಗಾಗಲೇ ತಮ್ಮ ಬಲವನ್ನು ಹಾಕಿದ್ದ ಬಿಆರ್‌ಎಸ್ ಮತ್ತು ವೈಎಸ್‌ಆರ್‌ಸಿಪಿಯಂತಹ ಇತರ ತೆಲುಗು ಪಕ್ಷಗಳು ಸಹ ತಮ್ಮ ಆಯ್ಕೆಗಳನ್ನು ಪುನರ್ ವಿಮರ್ಶಿಸುತ್ತಿರಬಹುದು.

    ಬಿಜೆಪಿ ಎನ್‌ಡಿಎ ಅಭ್ಯರ್ಥಿಯಾಗಿ ಸಿಪಿ ರಾಧಕೃಷ್ಣನ್ ಅವರನ್ನು ಆಯ್ಕೆ ಮಾಡಿದೆ. ಇಂದು ನಡೆದ ಸಂಸದೀಯ ಸಭೆಯಲ್ಲಿ ಎಲ್ಲ ಮೈತ್ರಿ ಪಕ್ಷದ ಸಂಸದರು ಹಾಗೂ ವಿರೋಧ ಪಕ್ಷಗಳು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ಈ ನಡುವೆ ಇಂಡಿಯಾ ಒಕ್ಕೂಟ ತನ್ನ ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು ಘೋಷಿಸಿದೆ.

  • ಇಂಡಿಯಾ ಒಕ್ಕೂಟದಿಂದ ಹೊರಬಂದ ಆಪ್‌ – ಎಎಪಿ ನಾಯಕ ಸಂಜಯ್‌ ಸಿಂಗ್‌ ಹೇಳಿಕೆ

    ಇಂಡಿಯಾ ಒಕ್ಕೂಟದಿಂದ ಹೊರಬಂದ ಆಪ್‌ – ಎಎಪಿ ನಾಯಕ ಸಂಜಯ್‌ ಸಿಂಗ್‌ ಹೇಳಿಕೆ

    ನವದೆಹಲಿ: ಇಂಡಿಯಾ ಒಕ್ಕೂಟದಿಂದ ಆಮ್‌ ಆದ್ಮಿ ಪಕ್ಷ (Aam Admi Party) ಹೊರ ಬಂದಿದೆ ಎಂದು ಎಎಪಿ ನಾಯಕ ಸಂಜಯ್‌ ಸಿಂಗ್‌ (Sanjay Singh) ತಿಳಿಸಿದ್ದಾರೆ.

    ಆಪ್ ಇಂಡಿಯಾ ಒಕ್ಕೂಟದ ಭಾಗವಾಗಿಲ್ಲ. ಇದನ್ನು ನಮ್ಮ ನಾಯಕ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ ಎಂದು ಒಕ್ಕೂಟದಿಂದ ಎಎಪಿ ಹೊರ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌ – ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಪುತ್ರ ಬಂಧನ

    ಈ ಹಿಂದೆ 2024 ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಭಾರತ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿವೆ. ಆದರೆ, ಹರಿಯಾಣ ಮತ್ತು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದವು.

    ಇಂದು ಮುಂಗಾರು ಅಧಿವೇಶನ ಹಿನ್ನೆಲೆ ಸಂಜೆ ಏಳು ಗಂಟೆಗೆ ಇಂಡಿಯಾ ಒಕ್ಕೂಟದ (INDIA Bloc) ಸಭೆ ಕರೆಯಲಾಗಿತ್ತು. ಸಭೆಗೂ ಮುನ್ನ ಇಂಡಿಯಾ ಒಕ್ಕೂಟಕ್ಕೆ ಆಪ್‌ ಶಾಕ್‌ ಕೊಟ್ಟಿದೆ. ಇದನ್ನೂ ಓದಿ: ದೆಹಲಿಯ 50, ಬೆಂಗ್ಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ

  • ಈಗ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎಗೆ 343 ಸೀಟು – ಹೊಸ ಸಮೀಕ್ಷೆಯಲ್ಲಿ ಜನರ ಮನದ ಮಾತು ಏನು?

    ಈಗ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎಗೆ 343 ಸೀಟು – ಹೊಸ ಸಮೀಕ್ಷೆಯಲ್ಲಿ ಜನರ ಮನದ ಮಾತು ಏನು?

    – ಇಂಡಿಯಾ ಒಕ್ಕೂಟಕ್ಕೆ ಶಾಕ್

    ನವದೆಹಲಿ: ಈಗ ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ 343 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಬಿಜೆಪಿ ಸ್ವಂತವಾಗಿ ಸರಳ ಬಹುಮತವನ್ನು ಪಡೆಯಲಿದೆ ಎಂದು ಇಂಡಿಯಾ ಟುಡೇ-ಸಿ ವೋಟರ್ ಮೂಡ್ ಆಫ್ ದಿ ನೇಷನ್ ಅಭಿಪ್ರಾಯ ಸಮೀಕ್ಷೆ ತಿಳಿಸಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ 232 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಬಣವು 188 ಸ್ಥಾನಗಳಿಗೆ ಇಳಿಯಲಿದೆ ಎಂದು ಸಮೀಕ್ಷೆ ಹೇಳಿದೆ.

    ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯನ್ನು 2025 ರ ಜ.2 ರಿಂದ ಫೆ.9 ನಡುವೆ ನಡೆಸಲಾಯಿತು. ಎಲ್ಲಾ ಲೋಕಸಭಾ ಕ್ಷೇತ್ರಗಳಿಂದ 125, 123 ವ್ಯಕ್ತಿಗಳನ್ನು ಸಮೀಕ್ಷೆ ಮಾಡಲಾಯಿತು. ಈ ಸಮೀಕ್ಷೆಯಲ್ಲಿ ಹೊಸ ಸಂದರ್ಶನಗಳು ಮತ್ತು ದೀರ್ಘಕಾಲೀನ ಟ್ರ್ಯಾಕಿಂಗ್ ಡೇಟಾ ಸೇರಿವೆ.

    ಮತ ಹಂಚಿಕೆಯ ವಿಷಯದಲ್ಲಿ 292 ಸ್ಥಾನಗಳನ್ನು ಗೆದ್ದಿರುವ ಎನ್‌ಡಿಎ ಒಕ್ಕೂಟ ಶೇ. 3 ರಷ್ಟು ಮತ ಪ್ರಮಾಣ ಏರಿಕೆಯಾಗಿ 47% ತಲುಪುವ ನಿರೀಕ್ಷೆಯಿದೆ. ಇಂಡಿಯಾ ಒಕ್ಕೂಟದ ಮತ ಹಂಚಿಕೆಯಲ್ಲಿ ಕೇವಲ 1% ಏರಿಕೆಯನ್ನು ಮಾತ್ರ ನಿರೀಕ್ಷಿಸಲಾಗಿದೆ. ಲೋಕಸಭಾ ಚುನಾವಣೆಯ ನಂತರ ಒಕ್ಕೂಟದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಅದರ ಮತ ಪ್ರಮಾಣ ಕುಸಿತವನ್ನು ಪ್ರತಿಬಿಂಬಿಸುತ್ತದೆ.

    ಸಮೀಕ್ಷೆಯಲ್ಲಿ ಬಿಜೆಪಿ ಭಾರಿ ಲಾಭವನ್ನು ಕಂಡುಕೊಂಡಿದೆ. ಇಂದು ಚುನಾವಣೆ ನಡೆದರೆ ಅದು 281 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳುತ್ತದೆ. ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿದ್ದ 99 ಸ್ಥಾನಗಳಿಂದ 78 ಸ್ಥಾನಗಳಿಗೆ ಇಳಿಯುವ ಸಾಧ್ಯತೆಯಿದೆ. ವೈಯಕ್ತಿಕವಾಗಿ, ಬಿಜೆಪಿ ತನ್ನ ಮತ ಹಂಚಿಕೆ 41% ಕ್ಕೆ ಏರಿಕೆಯಾಗಲಿದೆ. ಇದು ಶೇಕಡಾ 3 ರಷ್ಟು ಹೆಚ್ಚಳವಾಗಿದ್ದರೆ, ಕಾಂಗ್ರೆಸ್ ಪಾಲು 20% ಕ್ಕೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.

    10 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಮತ್ತು ಇಮೇಜ್ ಸಾಟಿಯಿಲ್ಲ ಎಂದು ಸಮೀಕ್ಷೆ ಸೂಚಿಸುತ್ತದೆ. ಕಾಂಗ್ರೆಸ್ ತನ್ನ ಮೂಲಭೂತ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ. ಅದು ಅದರ ಸಾಂಸ್ಥಿಕ ರಚನೆ ಮತ್ತು ನಾಯಕರಲ್ಲಿ ಗೊಂದಲಗಳಿವೆ ಎಂದು ಸಮೀಕ್ಷೆ ಹೇಳುತ್ತದೆ.

  • ಒಂದು ದೇಶ, ಒಂದು ಚುನಾವಣೆ ಹಿಂದೆ ‘ನಂಬರ್‌ ಗೇಮ್’‌ – ಬಿಲ್‌ ಪಾಸ್‌ ಆಗುತ್ತಾ?

    ಒಂದು ದೇಶ, ಒಂದು ಚುನಾವಣೆ ಹಿಂದೆ ‘ನಂಬರ್‌ ಗೇಮ್’‌ – ಬಿಲ್‌ ಪಾಸ್‌ ಆಗುತ್ತಾ?

    ಪ್ರಸ್ತುತ ದೇಶದಲ್ಲಿ ‘ಒಂದು ದೇಶ, ಒಂದು ಚುನಾವಣೆ’ ಮಸೂದೆ ಬಹು ಚರ್ಚೆಯಲ್ಲಿದೆ. ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಮಸೂದೆ ಇದಾಗಿದೆ. ಈ ಬಿಲ್ ಜಾರಿಗೆ ಪರ-ವಿರೋಧದ ಮಾತು ಜೋರಾಗಿದೆ. ಬಿಜೆಪಿಯ ಪ್ರಮುಖ ಕಾರ್ಯಸೂಚಿಯನ್ನು ಜಾರಿ ತರಲು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಲ್ಲೇ ಒಮ್ಮತದ ಅಭಿಪ್ರಾಯ ಮೂಡಿಲ್ಲ. ಮಂಗಳವಾರ ಕೇಂದ್ರ ಸರ್ಕಾರ ಈ ಮಸೂದೆಯನ್ನು ಮಂಡಿಸಿತು. ಆದರೆ, ಅಂಗೀಕಾರಕ್ಕೆ ಬೇಕಾದ ಬಹುಮತ ಮಾತ್ರ ಸಿಗಲಿಲ್ಲ. ಇದರಿಂದ ‘ಒನ್ ನೇಷನ್ ಒನ್ ಎಲೆಕ್ಷನ್’ ವಿವಾದಿತ ಬಿಲ್ ಆಗಿ ದೇಶದಲ್ಲಿ ಚರ್ಚೆ ಹುಟ್ಟುಹಾಕಿದೆ.

    ಮಸೂದೆ ಮೂಲಕ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಮುಂದಾಗಿದೆ. ಆದರೆ, ಸಂಖ್ಯಾಬಲದ ಕೊರತೆಯಿಂದ ತನ್ನ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಗಿಲ್ಲ. ನಿರೀಕ್ಷೆಯಂತೆ ಲೋಕಸಭೆಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಅಸಾದುದ್ದೀನ್ ಓವೈಸಿ ಎಐಎಂಐಎಂ ಸೇರಿದಂತೆ ಸಣ್ಣ ಪಕ್ಷಗಳು ಕೂಡ ಬಿಲ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಬಿಜೆಪಿಯ ಇಬ್ಬರು ಮಿತ್ರಪಕ್ಷಗಳಾದ ಆಂಧ್ರದ ಆಡಳಿತಾರೂಢ ತೆಲುಗು ದೇಶಂ ಪಕ್ಷ ಹಾಗೂ ಮಹಾರಾಷ್ಟçದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮಾತ್ರ ಮಸೂದೆಗೆ ಬೆಂಬಲ ವ್ಯಕ್ತಪಡಿಸಿವೆ. ಒಟ್ಟಾರೆಯಾಗಿ ‘ಒಂದು ದೇಶ, ಒಂದು ಚುನಾವಣೆ’ ಜಾರಿ ಹಿಂದೆ ನಂಬರ್ ಗೇಮ್ ಶುರುವಾಗಿದೆ.

    ‘ಒಎನ್‌ಒಪಿ’ ನಂಬರ್ ಗೇಮ್!
    ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ಶಿಫಾರಸು ಮಾಡಿರುವ ಸಂವಿಧಾನ ತಿದ್ದುಪಡಿಗಳಿಗೆ ಲೋಕಸಭೆಯಲ್ಲಿ ಅಂಗೀಕಾರ ಸಿಗಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಮಸೂದೆ ಮಂಡಿಸುವಾಗ ಮತ ಚಲಾಯಿಸಿದ ಸಂಸದರ ಸಂಖ್ಯೆಯನ್ನು ಆಧರಿಸಿ ನೋಡಿದರೆ, ಬಿಜೆಪಿಗೆ ಬಹುಮತವಿಲ್ಲ ಎಂದು ತೋರುತ್ತದೆ.

    ಮತ ವಿಭಜನೆಗೆ ಹಾಕಿದಾಗ ಏನಾಯ್ತು?
    ಡಿ.17 ರಂದು ಲೋಕಸಭೆಯಲ್ಲಿ ವಿಪಕ್ಷಗಳು ಮತ ವಿಭಜನೆಗೆ ಪಟ್ಟು ಹಿಡಿದವು. ಆಗ, ಮಸೂದೆಯನ್ನು ಸದನದಲ್ಲಿ ಮಂಡಿಸಬಹುದೇ ಎಂದು ಪ್ರಶ್ನಿಸಿ ಮತಕ್ಕೆ ಹಾಕಲಾಯಿತು. ಪರವಾಗಿ 269 ಮತಗಳು ಹಾಗೂ ವಿರುದ್ಧವಾಗಿ 198 ಮತಗಳು ಬಿದ್ದವು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರುವ, ‘ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024’ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು. ಆದರೆ, ಮಸೂದೆ ಮಂಡನೆ ಪರವಾಗಿ ಬಿದ್ದ ಮತಗಳ ಮತಗಳ ಪ್ರಮಾಣ ಮೂರನೇ ಎರಡರಷ್ಟು ಬಹುಮತಕ್ಕಿಂತ ಕಡಿಮೆ ಇದೆ.

    ನಂಬರ್ ಲೆಕ್ಕಾಚಾರ ಹೇಗಿದೆ?
    ಎನ್‌ಡಿಎ ಮೈತ್ರಿಕೂಟ – 293, ಇಂಡಿಯಾ ಮೈತ್ರಿಕೂಟ – 236, ಅಕಾಲಿದಳ 1, ಎಎಸ್‌ಪಿ (ಕಾನ್ಶಿರಾಮ್) 1, ಎಐಎಂಐಎಂ 1, ವೈಎಸ್‌ಆರ್ ಕಾಂಗ್ರೆಸ್ 4, ವಿಒಟಿಟಿಪಿ 1, ಝಡ್‌ಪಿಎಂ 1, ಪಕ್ಷೇತರ 4 ಲೋಕಸಭಾ ಸದಸ್ಯರಿದ್ದಾರೆ.

    ಮೂರನೇ ಎರಡರಷ್ಟು ಬೆಂಬಲಕ್ಕ ಎಷ್ಟು ನಂಬರ್ ಬೇಕು?
    543 ಸದಸ್ಯ ಬಲದ ಲೋಕಸಭೆಯಲ್ಲಿ ಒಂದು ಸ್ಥಾನ ಖಾಲಿಯಿದೆ. ಸದನವು ಪೂರ್ಣ ಬಲದಲ್ಲಿದ್ದಾಗ ಮೂರನೇ ಎರಡರಷ್ಟು ಬಹುಮತಕ್ಕೆ 362 ಮತಗಳ ಅಗತ್ಯವಿದೆ. ಮತ ವಿಭಜನೆ ಆಧಾರದಲ್ಲಿ ಮಸೂದೆ ಮಂಡನೆಗೆ ಕೇಳಿದ ಸಂದರ್ಭದಲ್ಲಿ ಸಂಸತ್‌ನಲ್ಲಿ 461 ಸಂಸದರಿದ್ದರು. ಆ ಸಂದರ್ಭದಲ್ಲಿ ಮಸೂದೆ ಪರವಾಗಿ 307 ಮತಗಳ (ಮೂರನೇ ಎರಡರಷ್ಟು ಬಹುಮತಕ್ಕೆ) ಅಗತ್ಯವಿತ್ತು. ಆದರೆ, ಬಿಜೆಪಿಯ ಮಸೂದೆ ಪರವಾಗಿ ಬಿದ್ದಿದ್ದು 269 ಮತಗಳು. ಹೀಗಾಗಿ, ಮಸೂದೆ ಮಂಡನೆಗೂ ಬಿಜೆಪಿಗೆ ಬಹುಮತ ಸಿಗಲಿಲ್ಲ.

    9 ಸಂಸದರನ್ನು ಹೊಂದಿರುವ ಆರು ಪಕ್ಷಗಳು ಯಾವುದೇ ಮೈತ್ರಿಕೂಟಕ್ಕೆ ಬೆಂಬಲವನ್ನು ಸೂಚಿಸಿಲ್ಲ. ಇವುಗಳ ಪೈಕಿ ಅಕಾಲಿದಳ, ಎಐಎಂಐಎಂ ಮತ್ತು ಎಎಸ್‌ಪಿ (ಕಾನ್ಶಿರಾಮ್) ಪಕ್ಷಗಳ ಸಂಸದರು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಈ ಹಿಂದೆ ವೈಎಸ್‌ಆರ್ ಕಾಂಗ್ರೆಸ್ ಏಕಕಾಲದಲ್ಲಿ ನಡೆಸುವ ಚುನಾವಣೆಗೆ ಬೆಂಬಲ ಸೂಚಿಸಿತ್ತು. ಆ ಪಕ್ಷದಲ್ಲಿ ನಾಲ್ಕು ಮಂದಿ ಸಂಸದರಿದ್ದಾರೆ. ಇತ್ತ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದರೂ ಟಿಡಿಪಿಯು ಬಿಜೆಪಿ ಜೊತೆ ಅಂತರ ಕಾಯ್ದುಕೊಂಡಿದೆ. ಮಸೂದೆ ವಿಚಾರದಲ್ಲಿ ಈ ಪಕ್ಷ ತನ್ನ ನಿಲುವು ಬದಲಿಸುವ ಸಾಧ್ಯತೆ ಇದೆ. ಎನ್‌ಡಿಎ ಮೈತ್ರಿಕೂಟದ ಸಂಖ್ಯಾಬಲ (292)ದ ಲೆಕ್ಕಾಚಾರದಲ್ಲಿ ನೋಡುವುದಾದರೆ, ಸಂಸತ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಸದಸ್ಯರು ಹಾಜರಾದರೆ ಬಿಜೆಪಿಗೆ ಹೆಚ್ಚುವರಿಯಾಗಿ 64 ಸಂಸದರ ಬೆಂಬಲ ಬೇಕಾಗುತ್ತದೆ.

    ಜೆಪಿಸಿ ರಚನೆ
    ಒಂದು ದೇಶ, ಒಂದು ಚುನಾವಣೆ ಮಸೂದೆ ಪರಾಮರ್ಶೆಗೆ 39 ಸದಸ್ಯರನ್ನೊಳಗೊಂಡ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ದಾರೆ. ಸಮಿತಿಯಲ್ಲಿ ಲೋಕಸಭೆಯ 27 ಹಾಗೂ ರಾಜ್ಯ ಸಭೆಯ 12 ಸದಸ್ಯರಿದ್ದಾರೆ. ಪ್ರಿಯಾಂಕಾ ಗಾಂಧಿ ಜೊತೆಗೆ ಪ್ರಮುಖರಾದ ಮನೀಶ್ ತೆವಾರಿ, ಧರ್ಮೇಂದ್ರ ಯಾದವ್, ಕಲ್ಯಾಣ್ ಬ್ಯಾನರ್ಜಿ, ಸುಪ್ರಿಯಾ ಸುಳೆ, ಶ್ರೀಕಾಂತ್ ಏಕನಾಥ್ ಶಿಂಧೆ, ಸಂಬಿತ್ ಪತ್ರಾ, ಅನಿಲ್ ಬಲುನಿ, ಅನುರಾಗ್ ಸಿಂಗ್ ಠಾಕೂರ್ ಇದ್ದಾರೆ.

    ಏನಿದು ಒಎನ್‌ಒಪಿ ಮಸೂದೆ?
    ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದೇ ‘ಒಂದು ದೇಶ, ಒಂದು ಚುನಾವಣೆ’ ಮಸೂದೆ. 2024ರಲ್ಲಿ ಲೋಕಸಭೆಯೊಂದಿಗೆ ನಾಲ್ಕು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಯಿತು. ಏಪ್ರಿಲ್-ಜೂನ್ ವರೆಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ರಾಜ್ಯಗಳಿಗೆ ಹಾಗೂ ಅಕ್ಟೋಬರ್-ನವೆಂಬರ್ ವರೆಗೆ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಿಗೆ ಚುನಾವಣೆ ನಡೆಯಿತು. ಕಳೆದ ವರ್ಷ ಬೇರೆ ಬೇರೆ ತಿಂಗಳಲ್ಲಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು. 2025 ಕ್ಕೆ ದೆಹಲಿ ಮತ್ತು ಬಿಹಾರ ರಾಜ್ಯಗಳು ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿವೆ.

    ಮಸೂದೆ ಬಗ್ಗೆ ಬಿಜೆಪಿ ನಿಲುವೇನು?
    ಭಾರತ ಪ್ರತಿ ವರ್ಷ ಚುನಾವಣೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಇದರಿಂದ ಭಾರೀ ಹಣ ಖರ್ಚಾಗುತ್ತಿದೆ. ಜೊತೆಗೆ ಪ್ರತಿ ವರ್ಷ ಚುನಾವಣೆಗೆ ನೀತಿ ಸಂಹಿತೆ ಘೋಷಣೆಯಾಗುವುದರಿಂದ ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯಾಗಲಿದೆ. ಈ ಕಾರಣಕ್ಕೆ ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆ ಅಗತ್ಯ ಎಂಬುದನ್ನು ಬಿಜೆಪಿ ಒತ್ತಿ ಹೇಳಿದೆ.

    ವಿಪಕ್ಷಗಳ ವಿರೋಧ ಯಾಕೆ?
    ಈ ಮಸೂದೆಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಅಲ್ಲದೇ ಸರ್ವಾಧಿಕಾರಕ್ಕೆ ಅನುವು ಮಾಡಿಕೊಡುತ್ತದೆ. ಪ್ರಸ್ತಾವಿತ ಮಸೂದೆಯು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತದೆ. ಹೊಸ ಸರ್ಕಾರಗಳ ಅವಧಿ ಕೂಡ ಇದರಿಂದ ಮೊಟಾಗುತ್ತದೆ ಎಂಬುದು ವಿಪಕ್ಷಗಳ ನಿಲುವು.

    ಒಎನ್‌ಒಪಿ ಹೊಸ ಪದ್ಧತಿಯೇ?
    ಭಾರತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದೇನು ಹೊಸಪದ್ಧತಿಯಲ್ಲ. ಸ್ವಾತಂತ್ರ್ಯ ಬಂದು ಸಂವಿಧಾನ ಅಂಗೀಕಾರ ಆದ ಬಳಿಕ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲೇ ಚುನಾವಣೆಗಳು ನಡೆದಿದ್ದವು. 1951 ರಿಂದ 1967ರ ಅವಧಿ ವರೆಗೂ ನಾಲ್ಕು ಸಾರ್ವತ್ರಿಕ ಚುನಾವಣೆಗಳು ಏಕಕಾಲದಲ್ಲೇ ನಡೆದಿವೆ. ಆ ಬಳಿಕ ರಾಜ್ಯ ವಿಧಾನಸಭೆಗಳ ವಿಸರ್ಜನೆ, ಲೋಕಸಭೆ ವಿಸರ್ಜನೆ, ತುರ್ತು ಪರಿಸ್ಥಿತಿ ಮೊದಲಾದ ಬೆಳವಣಿಗೆಗಳಿಂದಾಗಿ ಏಕಕಾಲದಲ್ಲಿ ಚುನಾವಣೆಗಳು ನಡೆಯಲು ಸಾಧ್ಯವಾಗಲಿಲ್ಲ. ಈಗ ಮತ್ತೆ ಅದೇ ಪದ್ಧತಿಯನ್ನು ಜಾರಿಗೆ ತರಲು ಬಿಜೆಪಿ ಮುಂದಾಗಿದೆ.

  • ಅಮಿತ್‌ ಶಾ ಹೇಳಿಕೆ ಗದ್ದಲ, ಕಾಂಗ್ರೆಸ್‌ ಪ್ರತಿಭಟನೆ; ಅಧಿವೇಶನದ ಕೊನೆಯ ದಿನವೂ ಕಲಾಪ ಮುಂದೂಡಿಕೆ!

    ಅಮಿತ್‌ ಶಾ ಹೇಳಿಕೆ ಗದ್ದಲ, ಕಾಂಗ್ರೆಸ್‌ ಪ್ರತಿಭಟನೆ; ಅಧಿವೇಶನದ ಕೊನೆಯ ದಿನವೂ ಕಲಾಪ ಮುಂದೂಡಿಕೆ!

    ನವದೆಹಲಿ: ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನೀಡಿದ ಹೇಳಿಕೆ ಬಿಜೆಪಿ-ಕಾಂಗ್ರೆಸ್‌ ನಡುವೆ ಕಿಚ್ಚುಹೊತ್ತಿಸಿದೆ. ಚಳಿಗಾಲ ಅಧಿವೇಶನ ಕೊನೆಯ ದಿನವಾದ ಇಂದೂ ಬಿಜೆಪಿ-ಕಾಂಗ್ರೆಸ್‌ ಪ್ರತಿಭಟನೆಗಿಳಿದಿವೆ. ಈ ಹಿನ್ನೆಲೆಯಲ್ಲಿ ಕೊನೆಯ ದಿನದ ಕಲಾಪವನ್ನು ಮಧ್ಯಾಹ್ನ 12 ಗಂಟೆ ವರೆಗೆ ಮುಂದೂಡಲಾಗಿದೆ.

    ಗುರುವಾರ ಸಂಸತ್‌ ಆವರಣದ ಮಕರ ದ್ವಾರದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಕಂಡುಬಂದ ನಾಟಕೀಯ ಬೆಳವಣಿಗೆಗಳ ಒಂದು ದಿನದ ನಂತರ ಇಂಡಿಯಾ ಒಕ್ಕೂಟ ವಿಜಯ್‌ ಚೌಕ್‌ನಿಂದ ಸಂಸತ್ತಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದೆ. ಅಮಿತ್‌ ಶಾ ಅವರು ಕ್ಷಮೆ ಕೇಳಬೇಕು ಇಲ್ಲವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಸದಸ್ಯರು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಅಧಿವೇಶನದ ಕೊನೆಯ ದಿನ ಗದ್ದಲದಲ್ಲೇ ಸಮಾಪ್ತಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಅಮಿತ್‌ ಶಾ ರಾಜೀನಾಮೆಗೆ ಪಟ್ಟು
    ಚಳಿಗಾಲದ ಅಧಿವೇಶನದಲ್ಲಿ ʻಸಂವಿಧಾನʼ ಕುರಿತ ಚರ್ಚೆ ವೇಳೆ ರಾಜ್ಯಸಭೆಯಲ್ಲಿ ಅಮಿತ್‌ ಶಾ ಅವರು ಮಾತನಾಡುತ್ತಾ, ʻಅಂಬೇಡ್ಕರ್‌ ಅಂಬೇಡ್ಕರ್‌ ಅಂಬೇಡ್ಕರ್‌ ಇದೊಂದು ಫ್ಯಾಷನ್‌ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ಹೆಸರು ಹೇಳಿದ್ದರೆ ಅವರಿಗೆ ಸ್ವರ್ಗದಲ್ಲಿ ಸ್ಥಾನವಾದರೂ ಸಿಗುತ್ತಿತ್ತುʼ ಎಂದು ಹೇಳಿದ್ದರು. ಈ ಕುರಿತ ವೀಡಿಯೋಗಳನ್ನು ವಿಪಕ್ಷ ನಾಯಕರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕೇಂದ್ರ ಗೃಹ ಸಚಿವರು ರಾಜೀನಾಮೇ ನೀಡಬೇಕು, ಅಂಬೇಡ್ಕರ್‌ ವಿರುದ್ಧದ ಟೀಕೆಗೆ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಸಾರಂಗಿಗೆ ಪೆಟ್ಟು:
    ಅಮಿತ್‌ ಶಾ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ಖಂಡಿಸಿ ಇತ್ತ ಸಂಸತ್‌ ಆವರಣದಲ್ಲಿ ಬಿಜೆಪಿ ಸಹ ಪ್ರತಿಭಟನೆ ನಡೆಸುತ್ತಿತ್ತು.ಈ ವೇಳೆ ಬಿಜೆಪಿ ಸಂಸದ ಪ್ರತಾಪ್‌ ಸಾರಂಗಿ (Pratap Chandra Sarangi) ಕುಸಿದುಬಿದ್ದು, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ತಳ್ಳಿದರೆಂದು ಆರೋಪ ಮಾಡಿದ್ದರು. ಇದಕ್ಕೆ ರಾಹುಲ್‌ಗಾಂಧಿ ಸಹ ಸ್ಪಷ್ಟನೆ ನೀಡಿದರು. ಈ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಸಹ ತಮ್ಮನ್ನು ದೈಹಿಕವಾಗಿ ಬಿಜೆಪಿ ಸಂಸದರು ತಳ್ಳಿದ್ದಾರೆ, ಇದರ ವಿರುದ್ಧ ತನಿಖೆ ನಡೆಸುವಂತೆ ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿದ್ದರು.

  • ಜಾರ್ಖಂಡ್‌ನಲ್ಲಿ ಮತ್ತೆ ಜೆಎಂಎಂಗೆ ಪಟ್ಟ – ಪಕ್ಷವಾರು ಫಲಿತಾಂಶ ಏನು?

    ಜಾರ್ಖಂಡ್‌ನಲ್ಲಿ ಮತ್ತೆ ಜೆಎಂಎಂಗೆ ಪಟ್ಟ – ಪಕ್ಷವಾರು ಫಲಿತಾಂಶ ಏನು?

    ರಾಂಚಿ: ಆದಿವಾಸಿಗಳ ನಾಡು ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಮತ್ತೊಮ್ಮೆ ಗೆಲುವಿನ ನಗಾರಿ ಬಾರಿಸಿದೆ. ಇ.ಡಿ ಕೇಸ್, ಬಂಧನ, ಬಂಡಾಯ, ಆಪರೇಷನ್ ಕಮಲ.. ಎದುರಾಳಿಗಳ ನಾನಾ ವ್ಯೂಹ.. ಹೀಗೆ ಹಲವು ಸವಾಲುಗಳನ್ನು ಎದುರಿಸಿದ ಜಾರ್ಖಂಡ್ ಮುಕ್ತಿ ಮೋರ್ಚಾ, ಮತಗಟ್ಟೆ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ವಿಜಯವನ್ನು ಸಾಧಿಸಿದೆ.

    ಬಂಟಿ ಔರ್ ಬಬ್ಲಿ ಖ್ಯಾತಿಯ ಹೇಮಂತ್ ಸೊರೆನ್-ಕಲ್ಪನಾ ಜೋಡಿ ಸೂಪರ್ ಮ್ಯಾಜಿಕ್ ಮಾಡಿದೆ. ರಾಜಕೀಯ ಅಸ್ಥಿರತೆಗೆ ಕೇರಾಫ್ ಅಡ್ರೆಸ್ ಆಗಿರುವ ಜಾರ್ಖಂಡ್‌ನಲ್ಲಿ ಮತ್ತೊಮ್ಮೆ ಜೆಎಂಎಂ ಸ್ಪಷ್ಟವಾದ ಬಹುಮತ ಗಳಿಸಿ ಮತ್ತೊಮ್ಮೆ ಸರ್ಕಾರ ರಚನೆಗೆ ಸಜ್ಜಾಗುತ್ತಿದೆ.

    ಇಲ್ಲಿ ವಲಸೆವಾದ.. ಇತರೆ ಸಮಸ್ಯೆಗಳನ್ನು ಪ್ರಸ್ತಾಪಿಸಿ ಚುನಾವಣೆ ಮಾಡಿದ್ದ ಬಿಜೆಪಿ ವಿರುದ್ಧ ಜನಾದೇಶ ಬಂದಿದೆ. ಮಾಜಿ ಸಿಎಂ ಚಂಪೈ ಸೊರೆನ್, ಹೇಮಂತ್ ಸೊರೆನ್ ಅತ್ತಿಗೆ ಸೀತಾ ಸೊರೆನ್ ಪಕ್ಷಾಂತರ ಬಿಜೆಪಿಗೆ ವರವಾಗಲಿಲ್ಲ. ಎಸ್‌ಟಿ-ಎಸ್‌ಸಿ ಮೀಸಲು ಕ್ಷೇತ್ರಗಳು ಜೆಎಂಎಂ ಮೈತ್ರಿಕೂಟದ ಕೈ ಹಿಡಿದಿವೆ.

    ಜಾರ್ಖಂಡ್ ಫಲಿತಾಂಶ (81)
    * ಐಎನ್‌ಡಿಐಎ- 56 (46)
    * ಎನ್‌ಡಿಎ – 24 (25)
    * ಇತರೆ – 01 (10)

    ಪಕ್ಷವಾರು ಫಲಿತಾಂಶ
    * ಜೆಎಂಎಂ – 34 (23.45%) (43 ರಲ್ಲಿ ಸ್ಪರ್ಧೆ)
    * ಕಾಂಗ್ರೆಸ್ – 16 (15.50%) (30 ರಲ್ಲಿ ಸ್ಪರ್ಧೆ)
    * ಬಿಜೆಪಿ – 21 (33.20%)
    * ಇತರೆ – 8 (28%)

  • ಜೈಲರ್‌ ಬಾಕ್ಸ್‌ನಿಂದ ಬ್ಯಾಲೆಟ್‌ ಬಾಕ್ಸ್‌ವರೆಗೆ – ಒಂದೇ ವರ್ಷದಲ್ಲಿ 2ನೇ ಬಾರಿ ಹೇಮಂತ್‌ ಸೊರೆನ್‌ ಸಿಎಂ

    ಜೈಲರ್‌ ಬಾಕ್ಸ್‌ನಿಂದ ಬ್ಯಾಲೆಟ್‌ ಬಾಕ್ಸ್‌ವರೆಗೆ – ಒಂದೇ ವರ್ಷದಲ್ಲಿ 2ನೇ ಬಾರಿ ಹೇಮಂತ್‌ ಸೊರೆನ್‌ ಸಿಎಂ

    ರಾಂಚಿ: ಹೇಮಂತ್‌ ಸೊರೆನ್‌ಗೆ 2024ರ ಆರಂಭ ಮತ್ತು ಅಂತ್ಯವು ಹೆಚ್ಚು ಭಿನ್ನವಾಗಿರಲಿಲ್ಲ. ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸಿ ಬಂದ ನಾಯಕನ ಕೈ ಹಿಡಿದು ಜನ ಅಭಯ ತುಂಬಿದ್ದಾರೆ. ಜಾರ್ಖಂಡ್‌ನಲ್ಲಿ ಜಯಭೇರಿ ಬಾರಿಸಿದ ಸೊರೆನ್‌ ಒಂದೇ ವರ್ಷದಲ್ಲಿ 2ನೇ ಬಾರಿಗೆ ಸಿಎಂ ಆಗಿ ಪುನರಾಗಮನಕ್ಕೆ ಸಜ್ಜಾಗಿದ್ದಾರೆ.

    ಈಚೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಸೊರೆನ್‌ರನ್ನು ಭೂಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ವಶಕ್ಕೆ ತೆಗೆದುಕೊಂಡಿತು. ಬಂಧನಕ್ಕೊಳಗಾಗುವ ಮೊದಲು ಅವರು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈಗ ವರ್ಷ (2024) ಮುಗಿಯಲು ಒಂದು ತಿಂಗಳು ಉಳಿದಿರುವಾಗ, ಸೊರೆನ್ ಅವರು ಅಮೋಘ ವಿಜಯದ ವಾಸ್ತುಶಿಲ್ಪಿಯಾಗಿ ಹೊರಹೊಮ್ಮಿದ್ದಾರೆ. ‘ಇಂಡಿಯಾ’ ಮೈತ್ರಿಕೂಟವು ರಾಜ್ಯದಲ್ಲಿ ಮತ್ತೆ ಅಧಿಕಾರ ಉಳಿಸಿಕೊಂಡಿದೆ. ಸೊರೆನ್‌ ಮತ್ತೆ ಸಿಎಂ ಆಗಿ ಮುಂದುವರಿಯಲಿದ್ದಾರೆ.

    ಜೆಎಂಎಂ ನಾಯಕ ಕೂಡ ಈ ನಡುವೆ ಅನೇಕ ಹಿನ್ನಡೆಗಳನ್ನು ಅನುಭವಿಸಿದರು. ಜನವರಿ 31 ರಂದು ಸೊರೆನ್‌ ಬಂಧನವಾಯಿತು. ಇದರ ಬೆನ್ನಲ್ಲೇ ಅವರ ಅತ್ತಿಗೆ ಸೀತಾ ಸೊರೆನ್ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರಿದರು.

    ಪಕ್ಷದ ಹಿರಿಯ ನಾಯಕ ಚಂಪೈ ಸೊರೆನ್‌ ಅವರು ಹೇಮಂತ್‌ ಸೊರೆನ್‌ ಅನುಪಸ್ಥಿತಿಯಲ್ಲಿ ಜಾರ್ಖಂಡ್‌ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಸೊರೆನ್‌ ಬಿಡುಗಡೆಯ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

    ಬಂಧನಕ್ಕೊಳಗಾದ ಐದು ತಿಂಗಳ ನಂತರ ಜೂನ್‌ನಲ್ಲಿ ಜಾರ್ಖಂಡ್ ಹೈಕೋರ್ಟ್‌ನಿಂದ ಮಾಜಿ ಮುಖ್ಯಮಂತ್ರಿಗೆ ಜಾಮೀನು ನೀಡಲಾಯಿತು. ನ್ಯಾಯಾಲಯವು ಪ್ರಾಥಮಿಕವಾಗಿ, ಅವರು ತಪ್ಪಿತಸ್ಥರಲ್ಲ ಮತ್ತು ಅದೇ ರೀತಿಯ ಅಪರಾಧವನ್ನು ಮಾಡುವ ಸಾಧ್ಯತೆಯಿಲ್ಲ ಎಂದು ಅಭಿಪ್ರಾಯಪಟ್ಟಿತು.

    ಇದರ ಬೆನ್ನಲ್ಲೇ ಚಂಪೈ ಸೊರೆನ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದರು. ಜೆಎಂಎಂ ಪಕ್ಷದಲ್ಲಿ ನನಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕೇಸರಿ ಪಡೆ ಸೇರಿಕೊಂಡರು.

    ಇದೆಲ್ಲದರ ಹೊರತಾಗಿಯೂ, ರಾಷ್ಟ್ರೀಯ ಜನತಾ ದಳದಂತಹ ಮಿತ್ರಪಕ್ಷಗಳೊಂದಿಗೆ ಕೆಲವು ಸೀಟು ಹಂಚಿಕೆ ತೊಂದರೆಗಳ ಹೊರತಾಗಿಯೂ, ಸೊರೆನ್‌ ನೇತೃತ್ವದ ಜೆಎಂಎಂ ಮೈತ್ರಿಕೂಟ ಜಾರ್ಖಂಡ್‌ನಲ್ಲಿ ಜಯಭೇರಿ ಬಾರಿಸಿದೆ.

    81 ಸದಸ್ಯ ಬಲದ ಅಸೆಂಬ್ಲಿಯಲ್ಲಿ 2019 ರಲ್ಲಿ ಜೆಎಂಎಂ 30 ಸ್ಥಾನ ಗೆದ್ದಿತ್ತು. ಈ ಬಾರಿ 33 ಕ್ಕೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್, ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) ಆಡಳಿತಾರೂಢ ಮೈತ್ರಿಕೂಟದ ಸಂಖ್ಯೆಯನ್ನು 55ಕ್ಕೆ ಕೊಂಡೊಯ್ದಿವೆ. ಬಿಜೆಪಿ ನೇತೃತ್ವದ ಮೈತ್ರಿಕೂಟ ಕೇವಲ 25ರಲ್ಲಿ ಮುಂದಿದೆ.