Tag: India-Australia

  • ಟೀಂ ಇಂಡಿಯಾ ಎಡವಿದ್ದೆಲ್ಲಿ; ಇಲ್ಲಿದೆ 5 ಕಾರಣ..

    ಟೀಂ ಇಂಡಿಯಾ ಎಡವಿದ್ದೆಲ್ಲಿ; ಇಲ್ಲಿದೆ 5 ಕಾರಣ..

    ನವದೆಹಲಿ: ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆಲುವಿನ ಹಂಬಲದಲ್ಲಿ ಅಂತಿಮ ಹಂತದಲ್ಲಿ ಎಡವಿತು. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್‌ಗಳ ಜಯ ಸಾಧಿಸಿತು. ಫೈನಲ್‌ನಲ್ಲಿ ಭಾರತದ ಸೋಲಿಗೆ ಕಾರಣವಾದ ಐದು ತಿರುವುಗಳೇನು ಎಂಬುದನ್ನು ನೋಡೋಣ.

    ಮಿಂಚುವಲ್ಲಿ ವಿಫಲರಾದ ಗಿಲ್‌
    ಭಾರತ ತಂಡದ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಉತ್ತಮ ಆರಂಭ ನೀಡಿದ್ದರು. ಆದರೆ ಅವರಿಗೆ ಜೊತೆಯಾಗಿ ನಿಲ್ಲುವಲ್ಲಿ ಶುಭಮನ್‌ ಗಿಲ್‌ ಎಡವಿದರು. ಇದರಿಂದ ಭಾರತಕ್ಕೆ ಉತ್ತಮ ಆರಂಭ ಒದಗಿಸಲು ಸಾಧ್ಯವಾಗಲಿಲ್ಲ. ಕೇವಲ 4 ರನ್‌ ಗಳಿಸಿ ಕ್ಯಾಚ್‌ ನೀಡಿ ಗಿಲ್‌ ಪೆವಿಲಿಯನ್‌ ಸೇರಿದರು. ತಂತ್ರಗಾರಿಕೆ ಮೂಲಕ ಭಾರತದ ಬ್ಯಾಟರ್‌ಗಳು ಹೆಚ್ಚು ರನ್‌ ಹೊಡೆಯದಂತೆ ಕಟ್ಟಿಹಾಕುವಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳು ಯಶಸ್ವಿಯಾದರು.

    ಮಧ್ಯಮ ಕ್ರಮಾಂಕದಲ್ಲಿ ನಿಧಾನಗತಿಯ ಆಟ
    ಐದನೇ ಓವರ್‌ನಲ್ಲಿ ಶುಭಮನ್ ಗಿಲ್ ಔಟಾದ ನಂತರ, ರೋಹಿತ್ ಶರ್ಮಾ ಆಕ್ರಮಣಕಾರಿ ಸ್ಟ್ರೋಕ್‌ಗಳನ್ನು ಆಡುವುದನ್ನು ಮುಂದುವರೆಸಿದರು. 10 ನೇ ಓವರ್‌ನಲ್ಲಿ ಔಟಾಗುವ ಮೊದಲು 31 ಎಸೆತಗಳಲ್ಲಿ 47 ರನ್ ಗಳಿಸಿದರು. ಶರ್ಮಾ ಔಟಾದ ನಂತರ ಭಾರತ ತಂಡವು ಪ್ರಮುಖ ಆಟಗಾರರನ್ನು ಕಳೆದುಕೊಂಡಿತು. ಶ್ರೇಯಸ್ ಅಯ್ಯರ್ 4 ಗಳಿಸಿ ಔಟಾದರು. ನಂತರ ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌.ರಾಹುಲ್‌ 67 ರನ್‌ಗಳ ಜೊತೆಯಾಟ ನೀಡಿದರು. ಈ ಜೋಡಿ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

    ಮಧ್ಯಮ ಕ್ರಮಾಂಕದಲ್ಲಿ ನಿಧಾನಗತಿಯಲ್ಲಿ ರನ್‌ ದಾಖಲಾಯಿತು. 11 ರಿಂದ 20 ಓವರ್‌ಗಳ ಹಂತದಲ್ಲಿ ಭಾರತ ಒಂದು ವಿಕೆಟ್ ನಷ್ಟಕ್ಕೆ ಕೇವಲ 35 ರನ್ ಗಳಿಸಲಷ್ಟೇ ಶಕ್ತವಾಯಿತು. 21 ರಿಂದ 30 ಓವರ್‌ಗಳ ಹಂತದಲ್ಲಿ ಭಾರತ ಒಂದು ವಿಕೆಟ್ ನಷ್ಟಕ್ಕೆ 37 ರನ್ ಅಷ್ಟೇ ಗಳಿಸಿತು. ಒಟ್ಟಾರೆ ಇಡೀ ಇನಿಂಗ್ಸ್‌ನಲ್ಲಿ ಭಾರತ ಕೇವಲ 13 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಗಳಿಸಿತು.

    ಮಂಕಾದ ಸೂರ್ಯ
    ಭಾರತದ ಬ್ಯಾಟ್ಸ್‌ಮನ್‌ಗಳು ಸ್ಕೋರ್ ಮಾಡಲು ಹೆಣಗಾಡಿದರು. ಒಂದು ಹಂತದಲ್ಲಿ 148/4 ಆಗಿತ್ತು. ವಿರಾಟ್ ಕೊಹ್ಲಿ ಕೇವಲ 63 ಎಸೆತಗಳಲ್ಲಿ 54 ರನ್ ಗಳಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್ ಜೊತೆಗೂಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೂ, ಹಲವರಿಗೆ ಆಶ್ಚರ್ಯವಾಗುವಂತೆ ರವೀಂದ್ರ ಜಡೇಜಾ ಕ್ರೀಸ್ ಪಡೆದರು. ಆಲ್ ರೌಂಡರ್ ಭಾರತದ ರನ್ ವೇಗವನ್ನು ಹೆಚ್ಚಿಸುವ ನಿರೀಕ್ಷೆಯಿತ್ತು. ಆದರೆ ಜಡೇಜಾ 22 ಎಸೆತಗಳಲ್ಲಿ 9 ರನ್ ಗಳಿಸಿ ಪೆವಿಲಿಯನ್‌ ಸೇರಿದರು.

    ಸೂರ್ಯಕುಮಾರ್ ಯಾದವ್ ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಕಳುಹಿಸದೆ ಭಾರತವು ಅವಕಾಶವನ್ನು ಕಳೆದುಕೊಂಡಿದೆ. ಮುಂಬೈ ಬ್ಯಾಟರ್ ಮೊದಲು ಬಂದು ಅವರ ವಿಶಿಷ್ಟ ಶೈಲಿಯಲ್ಲಿ ಆಡಿದ್ದರೆ, ಭಾರತವು ಹೆಚ್ಚು ಅಸಾಧಾರಣ ಸ್ಕೋರ್ ಸಾಧಿಸಬಹುದಿತ್ತು.

    ಕೈಕೊಟ್ಟ ಬೌಲರ್‌ಗಳು
    ಭಾರತ ತಂಡ ಫೈನಲ್‌ ಪ್ರವೇಶಿಸಲು ಬೌಲರ್‌ಗಳ ಪಾತ್ರ ಗಮನಾರ್ಹವಾಗಿತ್ತು. ಫೈನಲ್‌ ಪಂದ್ಯದಲ್ಲೂ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಪೇಸ್ ಸಂಯೋಜನೆಯು ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸುವಲ್ಲಿ ಸಹಕಾರಿಯಾಗಬಹುದಿತ್ತು. ಆದರೆ, ನಿರ್ಣಾಯಕ ದಿನದಂದು ರೋಹಿತ್ ಶರ್ಮಾ ಅವರು ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರೊಂದಿಗೆ ಬೌಲಿಂಗ್ ತೆರೆಯಲು ನಿರ್ಧರಿಸಿದರು. ಆರಂಭಿಕ ಹಂತದಲ್ಲಿ ಇದು ಸಹಕಾರಿಯಾಗಿತ್ತು. 43 ರನ್‌ಗಳಿಗೆ ಭಾರತ 3 ವಿಕೆಟ್‌ ಕಬಳಿಸಿತ್ತು. ಆದರೆ ಮುಂದೆ ವಿಕೆಟ್‌ ಉರುಳಿಸಲು ಸಾಧ್ಯವಾಗಲಿಲ್ಲ. ಈ ಬದಲಾವಣೆಯಿಂದಾಗಿ ಸಿರಾಜ್‌ ಬೌಲಿಂಗ್‌ ಪರಿಣಾಮಕಾರಿಯಾಗಿ ಫಲಿಸಲಿಲ್ಲ. ಅಷ್ಟೇ ಅಲ್ಲದೇ ಸ್ಪಿನ್‌ ಬೌಲಿಂಗ್‌ ಸಹ ಸಹಕಾರಿಯಾಗಲಿಲ್ಲ.

    ಎದುರಾಳಿ ಕಟ್ಟಹಾಕಲು ಎಡವಿದ ಟೀಂ ಇಂಡಿಯಾ
    ಆರಂಭದಲ್ಲಿ ವೇಗವಾಗಿ ವಿಕೆಟ್‌ ಉರುಳಿಸಿದ ಭಾರತಕ್ಕೆ ಅನುಕೂಲಕರ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೆನ್ ಇನ್ ಬ್ಲೂ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ವಿಫಲವಾಯಿತು. ಟ್ರಾವಿಸ್ ಹೆಡ್ (137) ಮತ್ತು ಮಾರ್ನಸ್ ಲಬುಶನ್‌ (58) ನಾಲ್ಕನೇ ವಿಕೆಟ್‌ಗೆ 192 ರನ್‌ಗಳ ಜೊತೆಯಾಟದಲ್ಲಿ ಆಸ್ಟ್ರೇಲಿಯಾವನ್ನು ಅಪಾಯದಿಂದ ಪಾರು ಮಾಡಿದರು. ಐತಿಹಾಸಿಕ ಆರನೇ ವಿಶ್ವಕಪ್ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದರು. ಭಾರತ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದರೆ ಫೈನಲ್‌ ಫಲಿತಾಂಶ ಭಿನ್ನವಾಗಿರುತ್ತಿತ್ತು.

  • ಕೋಚ್‌ ದ್ರಾವಿಡ್‌ ದಾಖಲೆ ಮುರಿದ ‘ರಾಹುಲ್‌’

    ಕೋಚ್‌ ದ್ರಾವಿಡ್‌ ದಾಖಲೆ ಮುರಿದ ‘ರಾಹುಲ್‌’

    ಅಹಮದಾಬಾದ್: ವಿಶ್ವಕಪ್‌ 2023ರ (World Cup 2023) ಟೂರ್ನಿಯಲ್ಲಿ ಉಪ ನಾಯಕನಾಗಿ ಉತ್ತಮ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಕೆ.ಎಲ್‌.ರಾಹುಲ್‌ (K.L.Rahul), ಭಾರತ ತಂಡದ ವಿಕೆಟ್‌ ಕೀಪರ್‌ ಆಗಿ ದಾಖಲೆಯೊಂದನ್ನು ಬರೆದಿದ್ದಾರೆ.

    ವಿಶ್ವಕಪ್‌ ಟೂರ್ನಿಯ ಒಂದರಲ್ಲಿ ವಿಕೆಟ್‌ ಕೀಪರ್‌ ಆಗಿ ಅತಿ ಹೆಚ್ಚು ಕ್ಯಾಚ್‌ ಹಿಡಿದ ಭಾರತದ ಆಟಗಾರನಾಗಿ ಕೂಲ್‌ ಕ್ಯಾಪ್ಟನ್‌ ಎಂ.ಎಸ್‌.ಧೋನಿ (M.S.Dhoni) ಅವರ ದಾಖಲೆಯನ್ನು ಕನ್ನಡಿಗ ಮುರಿದಿದ್ದಾರೆ. ಇದನ್ನೂ ಓದಿ: ಡಿಆರ್‌ಎಸ್‌ ತೆಗೆದುಕೊಳ್ಳದೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ ಸ್ಮಿತ್‌

    ಈ ಟೂರ್ನಿಯಲ್ಲಿ ಕೆ.ಎಲ್‌.ರಾಹುಲ್‌ ಈವರೆಗೆ 17 ಕ್ಯಾಚ್‌ ಹಿಡಿದು ವಿರೋಧಿ ತಂಡದ ಆಟಗಾರರನ್ನು ಔಟ್‌ ಮಾಡಿದ್ದಾರೆ. 2015 ರ ವಿಶ್ವಕಪ್‌ ಟೂರ್ನಿಯಲ್ಲಿ ಎಂ.ಎಸ್‌.ಧೋನಿ ಅವರು 15 ಕ್ಯಾಚ್‌ ಹಿಡಿದು ಎದುರಾಳಿ ತಂಡದವರನ್ನು ಔಟ್‌ ಮಾಡಿದ್ದರು. ಈಗ ಧೋನಿ ದಾಖಲೆಯನ್ನು ರಾಹುಲ್‌ ಮುರಿದಿದ್ದಾರೆ.

    ಅಷ್ಟೇ ಅಲ್ಲದೇ ರಾಹುಲ್‌, ದಕ್ಷಿಣ ಆಫ್ರಿಕಾದ ವಿಕೆಟ್‌ ಕೀಪರ್‌ ಕ್ವಿಂಟನ್‌ ಡಿ ಕಾಕ್‌ ಅವರ ದಾಖಲೆಯನ್ನು ಸರಿಗಟ್ಟುವ ಸನಿಹದಲ್ಲಿದ್ದಾರೆ. ಡಿ ಕಾಕ್‌ ಒಂದೇ ಆವೃತ್ತಿಯಲ್ಲಿ 19 ಕ್ಯಾಚ್‌ ಹಿಡಿದು ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. 2003 ರ ವಿಶ್ವಕಪ್‌ ಆವೃತ್ತಿಯಲ್ಲಿ ಅತಿ ಹೆಚ್ಚು ಕ್ಯಾಚ್‌ ಹಿಡಿದು ಔಟ್‌ ಮಾಡಿ (21) ಆಸ್ಟ್ರೇಲಿಯಾದ ಮಾಜಿ ವಿಕೆಟ್‌ ಕೀಪರ್‌ ಆ್ಯಡಮ್ ಗಿಲ್‌ಕ್ರಿಸ್ಟ್‌ ನಂಬರ್‌ ಒನ್‌ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: World Cup Final: ಆಸೀಸ್‌ಗೆ 241 ರನ್‌ಗಳ ಗುರಿ – ವಿಶ್ವಕಪ್‌ಗಾಗಿ ಶತಕೋಟಿ ಭಾರತೀಯರ ಪ್ರಾರ್ಥನೆ

    ಟೂರ್ನಿಯ ಒಂದರಲ್ಲಿ ಹೆಚ್ಚು ಕ್ಯಾಚ್‌ ಹಿಡಿದು ಔಟ್‌ ಮಾಡಿದ ಟಾಪ್ ವಿಕೆಟ್‌ಕೀಪರ್‌ಗಳು‌
    * ಆ್ಯಡಮ್ ಗಿಲ್‌ಕ್ರಿಸ್ಟ್‌ (ಆಸ್ಟ್ರೇಲಿಯಾ): 2003 ರಲ್ಲಿ 21 ಕ್ಯಾಚ್‌
    * ಕ್ವಿಂಟನ್‌ ಡಿ ಕಾಕ್‌ (ದಕ್ಷಿಣ ಆಫ್ರಿಕಾ): 2023 ರಲ್ಲಿ 19 ಕ್ಯಾಚ್‌
    * ಕೆ.ಎಲ್.ರಾಹುಲ್‌ (ಭಾರತ): 2023 ರಲ್ಲಿ 17 ಕ್ಯಾಚ್‌

    ಭಾರತದ ವಿಕೆಟ್‌ಕೀಪರ್‌ಗಳು
    * ಕೆ.ಎಲ್.ರಾಹುಲ್‌: 2023 ರಲ್ಲಿ 17 ಕ್ಯಾಚ್‌
    * ರಾಹುಲ್‌ ದ್ರಾವಿಡ್‌: 2003 ರಲ್ಲಿ 15 ಕ್ಯಾಚ್‌
    * ಎಂ.ಎಸ್.ಧೋನಿ: 2015 ರಲ್ಲಿ 15 ಕ್ಯಾಚ್‌

  • ಮದುವೆ ಮಂಟಪದಲ್ಲಿ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ ವಧು-ವರ

    ಮದುವೆ ಮಂಟಪದಲ್ಲಿ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ ವಧು-ವರ

    ರಾಯಚೂರು: ಮದುವೆ ಮಂಟಪದಲ್ಲೇ ವಿಶ್ವಕಪ್‌ ಟೂರ್ನಿ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ವಧು-ವರ ವೀಕ್ಷಿಸಿ ಗಮನ ಸೆಳೆದಿದ್ದಾರೆ. ರಾಯಚೂರಿನಲ್ಲಿ (Raichuru) ಕಲ್ಯಾಣ ಮಂಟಪದಲ್ಲಿ ದೊಡ್ಡ ಸ್ಕ್ರೀನ್‌ ಅಳವಡಿಸಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದಾರೆ.

    ಕ್ರಿಕೆಟ್ ಪ್ರೇಮಿಗಳು ತಮ್ಮ ಕುಟುಂಬದ ಮದುವೆ ಮಂಟಪದಲ್ಲೇ ಬಂಧುಗಳಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ (India-Australia) ಪಂದ್ಯ ನೋಡಲು ಎಲ್‌ಇಡಿ ಸ್ಕ್ರೀನ್ ಹಾಕಿಸಿ ಕ್ರಿಕೆಟ್ ಪ್ರೇಮ ಮೆರೆದಿದ್ದಾರೆ. ಇದನ್ನೂ ಓದಿ: ಸಮುದ್ರದಾಳದಲ್ಲಿ ಟೀಂ ಇಂಡಿಯಾಕ್ಕೆ ಆಲ್‌ ದಿ ಬೆಸ್ಟ್‌ ಹೇಳಿದ ಸಾಹಸಿಗರು

    ನಗರದ ಹರ್ಷಿತಾ ಗಾರ್ಡನ್ ಕಲ್ಯಾಣ ಮಂಟಪದಲ್ಲಿ ಸಿರವಾರ ತಾಲೂಕಿನ ನುಗದೋಣಿ ಗ್ರಾಮದ ಹಳೆಮನಿ ಕುಟುಂಬದ ಹರ್ಷವರ್ಧನ್ ಹಾಗೂ ಸಹನಾ ಮದುವೆಯಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಣೆಯೇ ಹೈಲೈಟ್ ಆಗಿದೆ. ವಧು-ವರರು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಫೈನಲ್ ಪಂದ್ಯ ವೀಕ್ಷಣೆಗೆ ಮದುವೆ ಮಂಟಪದಲ್ಲಿ ವ್ಯವಸ್ಥೆ ಮಾಡಿದ್ದರು. ಮದುವೆಗೆ ಬಂದಿರುವ ಬಂಧುಗಳು ಎಲ್‌ಇಡಿ ದೊಡ್ಡ ಸ್ಕ್ರೀನ್‌ನಲ್ಲಿ ಪಂದ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

    ಮದುವೆಗೆ ಬರುವ ಸಂಬಂಧಿಕರು, ಸ್ನೇಹಿತರಿಗಾಗಿಯೇ ಎಲ್‌ಇಡಿ ಮೂಲಕ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮದುವೆಗೆ ಬಂದವರು ನವ ವಧುವರರಿಗೆ ಶುಭಾಶಯ ತಿಳಿಸುವ ಜೊತೆಗೆ ಟೀಂ ಇಂಡಿಯಾಗೂ ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ: WC Final: ವರ್ಲ್ಡ್‌ ಕಪ್‌ ಇತಿಹಾಸದಲ್ಲಿ ಕಿಂಗ್‌ ಕೊಹ್ಲಿ ವಿಶ್ವದಾಖಲೆ

  • WC Final: ವರ್ಲ್ಡ್‌ ಕಪ್‌ ಇತಿಹಾಸದಲ್ಲಿ ಕಿಂಗ್‌ ಕೊಹ್ಲಿ ವಿಶ್ವದಾಖಲೆ

    WC Final: ವರ್ಲ್ಡ್‌ ಕಪ್‌ ಇತಿಹಾಸದಲ್ಲಿ ಕಿಂಗ್‌ ಕೊಹ್ಲಿ ವಿಶ್ವದಾಖಲೆ

    ಅಹಮದಾಬಾದ್‌: ವಿಶ್ವಕಪ್‌ ಟೂರ್ನಿ (World Cup 2023) ಒಂದರಲ್ಲಿ 750 ಕ್ಕೂ ಹೆಚ್ಚು ರನ್‌ ಗಳಿಸುವ ಮೂಲಕ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ.

    ಆಫ್ರಿಕಾದ ಆತಿಥ್ಯದಲ್ಲಿ ನಡೆದಿದ್ದ 2003 ರ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ (Sachin Tendulkar) ಭಾರತ ತಂಡದ ಪರವಾಗಿ 673 ರನ್‌ ಬಾರಿಸಿದ್ದರು. 20 ವರ್ಷಗಳ ನಂತರ ಈ ದಾಖಲೆಯನ್ನು ವಿರಾಟ್‌ ಕೊಹ್ಲಿ (Virat Kohli) ಮುರಿದಿದ್ದಾರೆ. ಇದನ್ನೂ ಓದಿ: ದಾಖಲೆಗಾಗಿ ಆಡದೇ ಇದ್ದರೂ ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    2023 ರ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ, ಸಚಿನ್‌ ದಾಖಲೆ ಮುರಿದರು. 101.57ರ ಸರಾಸರಿಯಲ್ಲಿ ಒಟ್ಟಾರೆ 711 ರನ್‌ ಬಾರಿ ಕೊಹ್ಲಿ ದಾಖಲೆ ಸೃಷ್ಟಿಸಿದ್ದರು.

    ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ತಮ್ಮ ದಾಖಲೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ವಿಶ್ವಕಪ್‌ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ 750 ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ಬ್ಯಾಟರ್‌ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲದೇ ಈ ಆವೃತ್ತಿಯಲ್ಲಿ ಕೊಹ್ಲಿ 3 ಶತಕ, 9 ಅರ್ಧಶತಕ ಗಳಿಸಿ ಮಿಂಚಿದ್ದಾರೆ. ಇದನ್ನೂ ಓದಿ: World Cup 2023- ನೀವು ನಮ್ಮ ಹೆಮ್ಮೆ- ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಸಚಿನ್ ಜೆರ್ಸಿ ಗಿಫ್ಟ್

    ವಿರಾಟ್ ಕೊಹ್ಲಿ 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಸೆಮಿ ಮತ್ತು ಫೈನಲ್ ಎರಡರಲ್ಲೂ 50+ ರನ್ ಗಳಿಸಿದ ಮೊದಲ ಭಾರತೀಯರಾಗಿದ್ದಾರೆ. 2023ರ ವಿಶ್ವಕಪ್ ಟೂರ್ನಿ ಒಂದೇ ಆವೃತ್ತಿಯಲ್ಲಿ 9 ಅರ್ಧಶತಕ, ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ 72 ಅರ್ಧಶತಕ ಬಾರಿಸಿದ್ದಾರೆ. ಇದನ್ನೂ ಓದಿ: ಮೂರು ಫೈನಲ್‌ ಪೈಕಿ ಟಾಸ್‌ ಸೋತ ಎರಡರಲ್ಲಿ ಭಾರತ ಚಾಂಪಿಯನ್‌ – ಈ ಬಾರಿ ಏನಾಗಬಹುದು?

    ವಿಶ್ವಕಪ್‌ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್‌ ಬಾರಿಸಿದ ಬ್ಯಾಟರ್ಸ್‌
    * ವಿರಾಟ್‌ ಕೊಹ್ಲಿ (ಭಾರತ): 2023 ರಲ್ಲಿ 750+ ರನ್‌

    * ಸಚಿನ್‌ ತೆಂಡೂಲ್ಕರ್‌ (ಭಾರತ): 2003 ರಲ್ಲಿ 673 ರನ್‌

    * ಮ್ಯಾಥ್ಯೂ ಹೇಡನ್‌ (ಆಸ್ಟ್ರೇಲಿಯಾ): 2007 ರಲ್ಲಿ 659 ರನ್‌

    * ರೋಹಿತ್‌ ಶರ್ಮಾ (ಭಾರತ): 2019 ರಲ್ಲಿ 648 ರನ್‌

  • 140 ಕೋಟಿ ಭಾರತೀಯರು ನಿಮ್ಮ ಪರವಾಗಿದ್ದಾರೆ: ಟೀಂ ಇಂಡಿಯಾಗೆ ಮೋದಿ ಶುಭಹಾರೈಕೆ

    140 ಕೋಟಿ ಭಾರತೀಯರು ನಿಮ್ಮ ಪರವಾಗಿದ್ದಾರೆ: ಟೀಂ ಇಂಡಿಯಾಗೆ ಮೋದಿ ಶುಭಹಾರೈಕೆ

    ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ ಸೆಣಸುತ್ತಿರುವ ‘ಮೆನ್ ಇನ್ ಬ್ಲೂ’ (ಟೀಂ ಇಂಡಿಯಾ) ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಭ ಹಾರೈಸಿದ್ದಾರೆ.

    ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಪ್ರಧಾನಿ ಮೋದಿ, 140 ಕೋಟಿ ಭಾರತೀಯರು ಐದು ಬಾರಿ ವಿಶ್ವ ಚಾಂಪಿಯನ್‌ಗಳ ವಿರುದ್ಧ ಮೈದಾನಕ್ಕಿಳಿದಿರುವಾಗ ತಂಡದ ಪರವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂರು ಫೈನಲ್‌ ಪೈಕಿ ಟಾಸ್‌ ಸೋತ ಎರಡರಲ್ಲಿ ಭಾರತ ಚಾಂಪಿಯನ್‌ – ಈ ಬಾರಿ ಏನಾಗಬಹುದು?

    ನಾಯಕ ರೋಹಿತ್ ಶರ್ಮಾ ಮತ್ತು ಅವರ ನಿಲುವುಗಳು ಕ್ರೀಡಾಸ್ಫೂರ್ತಿಯನ್ನು ಎತ್ತಿಹಿಡಿಯುವಂತಿದೆ. ಯಾವುದೇ ಘರ್ಷಣೆಯಲ್ಲಿ ತೀವ್ರ ಪೈಪೋಟಿ ನೀಡುತ್ತವೆ ಎಂದು ಮೋದಿ ಅವರು ಆಶಿಸಿದ್ದಾರೆ.

    ಅಭಿನಂದನೆಗಳು ಟೀಂ ಇಂಡಿಯಾ! 140 ಕೋಟಿ ಭಾರತೀಯರು ನಿಮಗಾಗಿ ಹುರಿದುಂಬಿಸುತ್ತಿದ್ದಾರೆ. ನೀವು ಪ್ರಕಾಶಮಾನವಾಗಿ ಮಿಂಚಲಿ, ಉತ್ತಮವಾಗಿ ಆಡಲಿ ಮತ್ತು ಕ್ರೀಡಾ ಮನೋಭಾವವನ್ನು ಎತ್ತಿ ಹಿಡಿಯಲಿ ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟಾಸ್ ಗೆದ್ದ ಆಸೀಸ್; ಫೀಲ್ಡಿಂಗ್ ಆಯ್ಕೆ- ಭಾರತ ಮೊದಲು ಬ್ಯಾಟಿಂಗ್

    ವಿಶ್ವಕಪ್ ಪಂದ್ಯಗಳುದ್ದಕ್ಕೂ ನಮ್ಮ ತಂಡವು ಅಸಾಧಾರಣ ವಿಜಯದ ದಾಖಲೆಗಳನ್ನು ಮಾಡಿದೆ. ವಿಶ್ವದಾದ್ಯಂತ 140 ಕೋಟಿ ನಾಗರಿಕರು ಮತ್ತು ಕ್ರಿಕೆಟ್ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ತಂಡಕ್ಕೆ ನನ್ನ ಶುಭಾಶಯಗಳು. ಹೋಗಿ ವಿಶ್ವಕಪ್ ಗೆಲ್ಲಿರಿ ಎಂದು ಅಮಿತ್‌ ಶಾ (Amit Shah) ಎಕ್ಸ್‌ನಲ್ಲಿ ಶುಭ ಹಾರೈಸಿದ್ದಾರೆ.

    ಟಾಸ್‌ ಗೆದ್ದ ಆಸ್ಟ್ರೇಲಿಯಾ (Australia) ಫೀಲ್ಡಿಂಗ್‌ ಆಯ್ದುಕೊಂಡಿದೆ. ಬ್ಯಾಟಿಂಗ್‌ ನಡೆಸುತ್ತಿರುವ ಭಾರತ (India) 3 ವಿಕೆಟ್‌ ನಷ್ಟಕ್ಕೆ 81 ರನ್‌ ಗಳಿಸಿ ಆಡುತ್ತಿದೆ.

  • ಭಾರತ ಕ್ರಿಕೆಟ್ ತಂಡ ಅಗ್ರಸ್ಥಾನಕ್ಕೆ ಬರುತ್ತೆ ಎಂದು ನನಗೆ ಖಾತ್ರಿಯಿದೆ: ಸದ್ಗುರು

    ಭಾರತ ಕ್ರಿಕೆಟ್ ತಂಡ ಅಗ್ರಸ್ಥಾನಕ್ಕೆ ಬರುತ್ತೆ ಎಂದು ನನಗೆ ಖಾತ್ರಿಯಿದೆ: ಸದ್ಗುರು

    ಚಿಕ್ಕಬಳ್ಳಾಪುರ: ವಿಶ್ವಕಪ್ ಫೀವರ್‌ ಇಡೀ ದೇಶವನ್ನು ಆವರಿಸಿರುವಾಗ, ಹೆಸರಾಂತ ಯೋಗಿ ಸದ್ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev) ಅವರು ಭಾರತೀಯ ಕ್ರಿಕೆಟ್ ತಂಡದ ಗೆಲುವಿಗೆ ಪ್ರಾರ್ಥಿಸಿದ್ದಾರೆ.

    ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸಲಿರುವ ಸದ್ಗುರುಗಳು ತಮ್ಮ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ, “ಭಾರತದ ತಂಡಕ್ಕೆ ಎಂತಹ ಅದ್ಭುತ ರನ್! ನಮ್ಮ ಕ್ರಿಕೆಟ್ ತಂಡವು ಆಟವನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಕೊಂಡೊಯ್ದಿದೆ. 10 ಕ್ಕೆ 10, ಈ ಹಿಂದೆ ಕೇಳಿಲ್ಲದ ವಿಷಯ! ಅನುಕರಣೀಯ ನಾಯಕತ್ವ ಮತ್ತು ವೈಯಕ್ತಿಕ ಆಟಗಾರರ ಅದ್ಭುತ ಪ್ರದರ್ಶನ ಮತ್ತು ದಾಖಲೆಗಳು ಹೇರಳವಾಗಿರುವುದರಿಂದ, ಈ ಅಸಾಧಾರಣ ತಂಡವು ಫೈನಲ್ ಬಗ್ಗೆ ಯಾವುದೇ ಚಿಂತೆಯನ್ನು ಹೊಂದಿರಬಾರದು” ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ಅವಮಾನ ತಪ್ಪಿಸಲು ಭಾರತ ವಿಶ್ವಕಪ್‌ ಗೆಲ್ಲಲೇಬೇಕು: 2006ರ ಚಾಂಪಿಯನ್ಸ್‌ ಟ್ರೋಫಿ ವೇಳೆ ಆಗಿದ್ದೇನು?

    ತಂಡದೊಂದಿಗೆ ತಮ್ಮ ಸಲಹೆಯನ್ನು ಹಂಚಿಕೊಂಡ ಸದ್ಗುರು, “ಮುಖ್ಯವಾದ ವಿಷಯವೆಂದರೆ, ನಾವು ಎಂದಿಗೂ ಎದುರಾಳಿಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅಥವಾ ಅವರು ಯಾರು ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು. ಆಟವನ್ನು ಪೂರ್ಣವಾಗಿ ಹೇಗೆ ಆಡುವುದು ಎಂಬುದು ನಮ್ಮ ಕಾಳಜಿಯಾಗಿರಬೇಕು. ನಮ್ಮ ಹುಡುಗರು ಅದೇ ರೀತಿಯಲ್ಲಿ ಇಡೀ ದೇಶಕ್ಕೆ ಹೆಮ್ಮೆ ಮತ್ತು ಸಂತೋಷವನ್ನು ತರುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದಾರೆ.

    ನೀವು 1.4 ಬಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ತರುವ ಸಂತೋಷದ ಪ್ರಮಾಣವನ್ನು ಪರಿಗಣಿಸಿರಿ. ಅದನ್ನು ಮರೆಯಬೇಡಿ. ಆದರೆ ಅದನ್ನು ನಿಮ್ಮ ತಲೆಯ ಮೇಲೆ ಒಯ್ಯಬೇಡಿ. ಕೇವಲ ಚೆಂಡನ್ನು ಹೊಡೆಯಿರಿ, ವಿಕೆಟ್‌ಗಳನ್ನು ಹೊಡೆದುರುಳಿಸಿ ಅಷ್ಟೇ! ಉಳಿದದ್ದು ಸಂಭವಿಸುತ್ತದೆ. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು ಮತ್ತು ಆಶೀರ್ವಾದಗಳು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಪಂದ್ಯಕ್ಕೂ ಮುನ್ನ ರಂಗೇರಲಿದೆ ಮೋದಿ ಕ್ರೀಡಾಂಗಣ – ಕಾರ್ಯಕ್ರಮಗಳ ಪಟ್ಟಿ ರಿಲೀಸ್‌

    ಅಹಮದಾಬಾದ್‍ನಲ್ಲಿ ನಡೆಯಲಿರುವ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಾ ನಿಮ್ಮೊಂದಿಗೆ ಇರುತ್ತೇನೆ. ಇದನ್ನು ಸಾಧ್ಯವಾಗಿಸೋಣ ಎಂದು ಸದ್ಗುರು ತಿಳಿಸಿದ್ದಾರೆ. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ (India vs Australia) ತಂಡಗಳು ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸೆಣಸಲಿವೆ.

  • 2 ಕಿ.ಮೀ. ಉದ್ದದ ಸಾಲಿನಲ್ಲಿ ನಿಂತು ಕ್ರಿಕೆಟ್ ಟಿಕೆಟ್ ಖರೀದಿಸಿದ ಅಭಿಮಾನಿಗಳು

    2 ಕಿ.ಮೀ. ಉದ್ದದ ಸಾಲಿನಲ್ಲಿ ನಿಂತು ಕ್ರಿಕೆಟ್ ಟಿಕೆಟ್ ಖರೀದಿಸಿದ ಅಭಿಮಾನಿಗಳು

    ಬೆಂಗಳೂರು: ಭಾರತ-ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ಮ್ಯಾಚ್ ಫೀವರ್ ಹೆಚ್ಚಾಗಿದ್ದು, ಸಿಲಿಕಾನ್ ಸಿಟಿ ಜನತೆ ನಿದ್ದೆ ಬಿಟ್ಟು ಕ್ರಿಕೆಟ್ ಟಿಕೆಟ್ ಗಾಗಿ ಕಾಯುತ್ತಿದ್ದಾರೆ.

    ಜ.19ರಂದು ನಡೆಯಲಿರುವ ಇಂಡಿಯಾ-ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್ ನೋಡಲು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಿಲೋಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತಿದ್ದರು. ಎಲ್ಲ ವಯೋಮಾನದವರು ನಿದ್ದೆ ಬಿಟ್ಟು ಟಿಕೆಟ್ ಗಾಗಿ 2 ಕಿ.ಮೀ.ವರೆಗೂ ಸಾಲಿನಲ್ಲಿ ನಿಂತಿದ್ದರು. ಇಂಡಿಯಾ, ಇಂಡಿಯಾ ಎಂದು ಘೋಷಣೆ ಕೂಗುತ್ತಾ ಅಭಿಮಾನ ವ್ಯಕ್ತಪಡಿಸುತ್ತಿದ್ದರು.

    ಜ.19ರಂದು ನಡೆಯಲಿರುವ ಕ್ರಿಕೆಟ್ ಪಂದ್ಯಕ್ಕಾಗಿ ಟಿಕೆಟ್ ಪಡೆಯುವ ಕ್ರೇಜ್ ಸಹ ಜೋರಾಗಿದೆ. ಅಭಿಮಾನಿಗಳು ಟಿಕೆಟಿಗಾಗಿ ಭಾನುವಾರ ರಾತ್ರಿ 10 ಗಂಟೆಯಿಂದಲೇ ನಿದ್ದೆ ಬಿಟ್ಟು ನಿಂತಿದ್ದರು. ಟಿಕೆಟಿಗಾಗಿ ನಿದ್ದೆ ಬಿಟ್ಟು ಇಲ್ಲಿಯೇ ನಿಂತಿದ್ದೇನೆ ಎಂದು ಕ್ರಿಕೆಟ್ ಅಭಿಮಾನಿ ಬೃಂದಾ ಪ್ರತಿಕ್ರಿಯಿಸಿದ್ದಾರೆ.

    ಅಲ್ಲದೆ ಆರಂಭದಲ್ಲೇ ಸಾಲಿನಲ್ಲಿ ನಿಂತು ಟಿಕೆಟ್ ಪಡೆದವರು ಫುಲ್ ಖುಷಿಯಾದರು. ಟಿಕೆಟ್ ದರ 500, 2000 ಹಾಗೂ 20,000 ರೂ. ಇದ್ದರೂ ಮುಗಿಬಿದ್ದು ಟಿಕೆಟ್ ಖರೀದಿಸಿದರು.