Tag: IND vs SA

  • U19 Women’s T20 World Cup: ಸತತ 2ನೇ ಬಾರಿಗೆ ಟೀಂ ಇಂಡಿಯಾ ಚಾಂಪಿಯನ್‌

    U19 Women’s T20 World Cup: ಸತತ 2ನೇ ಬಾರಿಗೆ ಟೀಂ ಇಂಡಿಯಾ ಚಾಂಪಿಯನ್‌

    – ಫೈನಲ್‌ನಲ್ಲಿ ಆಫ್ರಿಕಾ ವಿರುದ್ಧ ಭಾರತಕ್ಕೆ ಸುಲಭ ಜಯ

    ಕೌಲಾಲಂಪುರ್: ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ (U19 Women’s T20 World Cup 2025) ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್‌ ಆಗಿ ಭಾರತದ ವನಿತೆಯರು (Team India) ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ಭಾರತ ಸುಲಭ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ (South Africa) 20 ಓವರ್‌ಗಳಿಗೆ ಕೇವಲ 82 ರನ್‌ ಗಳಿಸಿ ಆಲೌಟ್‌ ಆಯಿತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ 11 ಓವರ್‌ ಇರುವಾಗಲೇ ಕೇವಲ 1 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು. ಇದನ್ನೂ ಓದಿ: ಬ್ಯಾಟಿಂಗ್‌, ಬೌಲಿಂಗ್‌ ಪರಾಕ್ರಮ, ಆಂಗ್ಲ ಪಡೆ ತತ್ತರ – ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಸರಣಿ ಗೆದ್ದ ಭಾರತ

    ಸೌತ್‌ ಆಫ್ರಿಕಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಪ್ರಮುಖ ಬ್ಯಾಟರ್‌ಗಳೇ ಕಳಪೆ ಪ್ರದರ್ಶನ ನೀಡಿದರು. ಜೆಮ್ಮಾ ಬೋಥಾ (16), ಕರಾಬೊ ಮೆಸೊ (10), ಮೀಕೆ ವ್ಯಾನ್ ವೂರ್ಸ್ಟ್ (23), ಫೇ ಕೌಲಿಂಗ್ (15) ಬಿಟ್ಟರೆ ಉಳಿದ ಬ್ಯಾಟರ್‌ಗಳು ಒಂದಂಕಿ ದಾಟುವಲ್ಲೂ ವಿಫಲರಾದರು.

    ಟೀಂ ಇಂಡಿಯಾ ಪರ ಗೊಂಗಡಿ ತ್ರಿಶಾ 3 ವಿಕೆಟ್‌ ಕಿತ್ತು ಮಿಂಚಿದರು. ಪರುಣಿಕಾ ಸಿಸೋಡಿಯಾ, ಆಯುಷಿ ಶುಕ್ಲಾ, ವೈಷ್ಣವಿ ಶರ್ಮಾ ತಲಾ 2 ಹಾಗೂ ಶಬ್ನಮ್ ಶಕೀಲ್ 1 ವಿಕೆಟ್‌ ಕಬಳಿಸಿದರು. ಇದನ್ನೂ ಓದಿ: U-19 Women’s T20 World Cup: ಇಂಗ್ಲೆಂಡ್‌ಗೆ ಮಣ್ಣು ಮುಕ್ಕಿಸಿ ಫೈನಲ್‌ಗೆ ಟೀಂ ಇಂಡಿಯಾ ಲಗ್ಗೆ

    ದ.ಆಫ್ರಿಕಾ ನೀಡಿದ್ದ 83 ರನ್‌ಗಳ ಗುರಿ ಬೆನ್ನತ್ತಿದ ಭಾರತ ಆರಂಭಿಕ ಆಘಾತ ಎದುರಿಸಿತು. ಓಪನರ್‌ ಜಿ ಕಮಲಿನಿ ಕೇವಲ 8 ರನ್‌ ಗಳಿಸಿ ಔಟಾಗಿ ಪೆವಿಲಿಯನ್‌ ಸೇರಿದರು. ಗೊಂಗಡಿ ತ್ರಿಶಾ ಮತ್ತು ಸನಿಕಾ ಚಲ್ಕೆ ಜೋಡಿ ಕ್ರೀಸ್‌ನಲ್ಲಿ ನಿಂತು ಪಂದ್ಯ ಗೆದ್ದರು. ತ್ರಿಶಾ 44 ಹಾಗೂ ಚಲ್ಕೆ 26 ರನ್‌ ಗಳಿಸಿದರು.

    2023ರ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಭಾರತೀಯ ಮಹಿಳಾ ತಂಡವೇ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇಂಗ್ಲೆಂಡ್‌ ತಂಡ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದನ್ನೂ ಓದಿ: ರಣಜಿ ಟ್ರೋಫಿ ಪಂದ್ಯದ ವೇಳೆ ಮತ್ತೆ ಭದ್ರತಾ ಲೋಪ – ಕೊಹ್ಲಿಯತ್ತ ಧಾವಿಸಿದ ಮೂವರು ಅಭಿಮಾನಿಗಳು

  • ಆಫ್ರಿಕಾ ವಿರುದ್ಧ 10 ವಿಕೆಟ್‌ಗಳ ಜಯ – ಭಾರತದ ವನಿತೆಯರಿಗೆ ಮತ್ತೊಂದು ಕಿರೀಟ!

    ಆಫ್ರಿಕಾ ವಿರುದ್ಧ 10 ವಿಕೆಟ್‌ಗಳ ಜಯ – ಭಾರತದ ವನಿತೆಯರಿಗೆ ಮತ್ತೊಂದು ಕಿರೀಟ!

    ಚೆನ್ನೈ: ಶಫಾಲಿ ವರ್ಮಾ, ಸ್ಮೃತಿ ಮಂಧಾನ (Smriti Mandhana) ಅವರ ಬ್ಯಾಟಿಂಗ್‌ ನೆರವು ಹಾಗೂ ಸ್ನೇಹ್‌ ರಾಣಾ ಅವರ ಅಮೋಘ ಬೌಲಿಂಗ್‌ ಪ್ರದರ್ಶನದಿಂದ ಟೀಂ ಇಂಡಿಯಾ ಮಹಿಳಾ ತಂಡವು ದಕ್ಷಿಣಾ ಆಫ್ರಿಕಾ ಮಹಿಳಾ (South Africa Women) ತಂಡದ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದ್ದ ವನಿತೆಯರು ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ಗೆಲುವು ಸಾಧಿಸಿದ್ದಾರೆ.

    ಚೆನ್ನೈನ (Chennai) ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್‌ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 37 ರನ್‌ ಗುರಿ ಪಡೆದ ಭಾರತ ಮಹಿಳಾ ತಂಡ 9.2 ಓವರ್‌ಗಳಲ್ಲೇ ಗುರಿ ತಲುಪಿ ಗೆಲುವು ಸಾಧಿಸಿದೆ. ಶಫಾಲಿ ವರ್ಮಾ ಮತ್ತೆ 24 ರನ್, ಶುಭಾ ಸತೀಶ್ 13 ಅಜೇಯರಾಗಿ ಉಳಿದರು. ಇದನ್ನೂ ಓದಿ: ವಿಶ್ವಕಪ್‌ ಗೆಲ್ಲಲು ಕಾರಣವಾಗಿದ್ದು 3 ಮಹತ್ವದ ನಿರ್ಧಾರ – ಟೀಂ ಇಂಡಿಯಾ ಸಿದ್ಧಗೊಂಡಿದ್ದು ಹೇಗೆ?

    ಟಾಸ್ ಗೆದ್ದು ಮೊದಲ ಬ್ಯಾಟ್​ ಮಾಡಿದ ಹರ್ಮನ್​ ಪ್ರೀತ್ ಕೌರ್‌ (Harmanpreet Kaur) ಬಳಗ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್​ ಮೊತ್ತ ಪೇರಿಸಿತ್ತು. 115.1 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಪ್ರತಿಯಾಗಿ ಆಡಿದ್ದ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ 84.3 ಓವರ್​ಗಳಿಗೆ 266 ರನ್ ಗಳಿಸಿ ಆಲೌಟ್‌ ಆಯಿತು. ಬಳಿಕ ಫಾಲೋ ಆನ್‌ ಗುರಿಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 154.4 ಓವರ್‌ಗಳಲ್ಲಿ 373 ಗಳಿಸಿ ಆಲೌಟ್‌ ಆಯಿತು. ಇದರಿಂದ ಭಾರತ ತಂಡ 37 ರನ್​ಗಳ ಗುರಿ ಪಡೆದು ಸುಲಭ ಜಯ ದಾಖಲಿಸಿತು.

    ಮೊದಲ ಇನ್ನಿಂಗ್ಸ್‌ನಲ್ಲಿ ಮಿಂಚಿದ ಬ್ಯಾಟರ್ಸ್‌:
    ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ ದಾಖಲಿಸಿದರು. ಇದರೊಂದಿಗೆ ಸ್ಮೃತಿ ಮಂಧಾನ ಅಮೋಘ ಶತಕ ಸಿಡಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ 292 ರನ್​ಗಳ ಜತೆಯಾಟ ನೀಡಿತ್ತು. ಸ್ಮೃತಿ ಮಂಧಾನ 161 ಎಸೆತಗಳಲ್ಲಿ 26 ಬೌಂಡರಿ, 1 ಸಿಕ್ಸರ್ ಸಹಿತ 149 ರನ್ ಗಳಿಸಿ ಔಟಾದರೆ. ಶಫಾಲಿ 197 ಎಸೆತಗಳಲ್ಲಿ 23 ಬೌಂಡರಿ, 8 ಸಿಕ್ಸರ್ ಸಹಿತ ದಾಖಲೆಯ ದ್ವಿಶತಕ ಸಿಡಿಸಿದರು. ಬಳಿಕ ಜೆಮಿಮಾ ರೋಡ್ರಿಗ್ಸ್‌ 55 ರನ್‌, ಹರ್ಮನ್​ಪ್ರೀತ್ ಕೌರ್ 69 ರನ್‌, ರಿಚಾ ಘೋಷ್ 86 ರನ್ ಸಿಡಿಸಿ ಮಿಂಚಿದರು.

    ಸ್ನೇಹ್ ರಾಣಾ ದಾಳಿಗೆ ಆಫ್ರಿಕಾ ತತ್ತರ:
    ಮೊದಲ ಇನ್ನಿಂಗ್ಸ್​ ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ತಂಡ ಸ್ನೇಹ್ ರಾಣಾ ಬೌಲಿಂಗ್ ದಾಳಿಗೆ ತತ್ತರಿಸಿತು. ಇದರ ನಡುವೆಯೂ ಸುನೆ ಲುಸ್ 65 ರನ್‌ ಮತ್ತು ಮರಿಜಾನ್ನೆ ಕಪ್ 74 ರನ್‌ ಗಳಿಸಿ ಬ್ಯಾಟಿಂಗ್‌ ಬಲ ನೀಡಿದ್ದರು. ಇದರೊಂದಿಗೆ ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ಸ್ನೇಹ್​ ರಾಣಾ 8 ವಿಕೆಟ್ ಕಿತ್ತರು. ಇದನ್ನೂ ಓದಿ: ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

    ವೋಲ್ವರ್ತ್​​ ಮತ್ತು ಸುನೆ ಲೂಸ್ ಶತಕ:
    337 ರನ್​ಗಳ ಹಿನ್ನಡೆ ಅನುಭವಿಸಿದ ಪ್ರವಾಸಿ 2ನೇ ಇನ್ನಿಂಗ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿತು. ನಾಯಕಿ ಲಾರಾ ವೋಲ್ವರ್ತ್​​ ಮತ್ತು ಸುನೆ ಲುಸ್​ ಶತಕ ಸಿಡಿಸಿ ಗಮನ ಸೆಳೆದರು. ಲಾರಾ 16 ಬೌಂಡರಿ ಸಹಿತ 122 ರನ್ ಬಾರಿಸಿದರೆ ಲುಸ್​ 203 ಎಸೆತಗಳಲ್ಲಿ 18 ಬೌಂಡರಿ ಸಹಿತ 109 ರನ್ ಗಳಿಸಿದರು. ನಾಡಿನ್ ಡಿ ಕ್ಲರ್ಕ್ 61 ರನ್‌ ಸಿಡಿಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ 8 ವಿಕೆಟ್ ಕಿತ್ತಿದ್ದ ಸ್ನೆಹ್ ರಾಣಾ 2ನೇ ಇನ್ನಿಂಗ್ಸ್​​ನಲ್ಲಿ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಕಿತ್ತರು, ಶಫಾಲಿ ವರ್ಮಾ, ಹರ್ಮನ್ ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಆಟವನ್ನು ಕೊನೆಗೊಳಿಸಿದರು.

    4ನೇ ದಿನದಾಟದಲ್ಲಿ 37 ರನ್‌ಗಳ ಗುರಿ ಪಡೆದ ಭಾರತ 9.2 ಓವರ್​​​ಗಳಲ್ಲೇ 37 ರನ್ ಗಳಿಸಿತು. ಇದನ್ನೂ ಓದಿ: `ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ – ಭಗವದ್ಗೀತೆಯ ಸಂದೇಶ ಹಂಚಿಕೊಂಡ ಅಖ್ತರ್

    ಸಂಕ್ಷಿಪ್ತ ಸ್ಕೋರ್‌
    ಟೀಂ ಇಂಡಿಯಾ
    ಮೊದಲ ಇನ್ನಿಂಗ್ಸ್‌ – 603/6d
    2ನೇ ಇನ್ನಿಂಗ್ಸ್‌ – 37/0

    ದಕ್ಷಿಣ ಆಫ್ರಿಕಾ
    ಮೊದಲ ಇನ್ನಿಂಗ್ಸ್‌ – 266/10
    2ನೇ ಇನ್ನಿಂಗ್ಸ್‌ – 373/10

  • ಟಿ20 ವಿಶ್ವಕಪ್‌ ಫೈನಲ್‌ ಮ್ಯಾಚ್‌; ಟೀಂ ಇಂಡಿಯಾ ಗೆಲುವಿಗೆ ಕರ್ನಾಟಕದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

    ಟಿ20 ವಿಶ್ವಕಪ್‌ ಫೈನಲ್‌ ಮ್ಯಾಚ್‌; ಟೀಂ ಇಂಡಿಯಾ ಗೆಲುವಿಗೆ ಕರ್ನಾಟಕದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

    – ಸಮುದ್ರದ ಮರಳಿನಲ್ಲಿ ಅರಳಿದ ‘ಜೈ ಹೋ ಇಂಡಿಯಾ’ ಕಲಾಕೃತಿ

    ಬೆಂಗಳೂರು: ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ತಂಡಗಳ ಸೆಣೆಸಾಟ ನೋಡಲು ಕ್ರಿಕೆಟ್‌ ಅಭಿಮಾನಿಗಳು ಕಾತರರಾಗಿದ್ದಾರೆ. ಈ ಬಾರಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡದ ಗೆಲುವಿಗಾಗಿ ದೇಶಾದ್ಯಂತ ಜನರು ಪ್ರಾರ್ಥಿಸುತ್ತಿದ್ದಾರೆ.

    ಭಾರತ ತಂಡ ಗೆಲ್ಲಲಿ ಎಂದು ಬೆಂಗಳೂರಿನ (Bengaluru) ದೇಗುಲದಲ್ಲಿ ವಿಶೇಷ ಹೋಮ-ಹವನ ಮಾಡಿಸಲಾಗಿದೆ. ರಾಜರಾಜೇಶ್ವರಿ ನಗರದ ನಿಮಿಷಾಂಬ ದೇಗುಲದಲ್ಲಿ ಅಭಿಷ್ಟ ಸಿದ್ದಿ ಪೂಜೆ ಮಾಡಲಾಗಿದೆ. ಪ್ರತಿ ನಿಮಿಷವೂ ಶುಭವಾಗಲಿ ಹಾಗೂ ಗೆಲ್ಲಬೇಕೆಂಬ ಅಭಿಲಾಷೆಯಿಂದ ಅಭಿಷ್ಟ ಸಿದ್ದಿ ಹೋಮ ಮಾಡಿಸಿರುವ ಕನ್ನಡಿಗರು, ಟೀಂ ಇಂಡಿಯಾ ಆಟಗಾರರ ಮೇಲೆ ದೇವಿಯ ಬೆಂಬಲ ಇರಲಿ ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಇಂದು ಟಿ-20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯ; ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ-ಭಾರತ ಹಣಾಹಣಿ

    ನಗರದ ಗಾಳಿ ಆಂಜನೇಯನಿಗೆ ವಿಶೇಷ ಅಭಿಷೇಕ ಕೂಡ ಮಾಡಿಸಲಾಗಿದೆ. ಆಂಜನೇಯನಿಗೆ ಹೂವು ಹಾಕಿ ವಿಕೆಟ್, ಬಾಲ್, ಬ್ಯಾಟ್‌ಗೆ ಪೂಜೆ ಸಲ್ಲಿಸಲಾಗಿದೆ. ತೆಂಗಿನಕಾಯಿ ಒಡೆದು, ಹೂವಿನ ಅಭಿಷೇಕ ಮಾಡಿ ತಂಡದ ಗೆಲುವಿಗೆ ಪ್ರಾರ್ಥಿಸಲಾಗಿದೆ.

    ಮಂಡ್ಯ ನಗರದ ಶನೇಶ್ವರ ದೇವಾಲಯದಲ್ಲಿ ಕೂಡ ಪೂಜೆ ಸಲ್ಲಿಕೆಯಾಗಿದೆ. ತಂಡದ ಆಟಗಾರರ ಹೆಸರಿನಲ್ಲಿ ಅರ್ಚನೆ ಕೂಡ ಮಾಡಿಸಲಾಗಿದೆ. ಇತ್ತ ಉಡುಪಿಯ ಕುಂದಾಪುರದ ಕೋಟೇಶ್ವರದಲ್ಲಿ ಬೀಚ್‌ ‘ಜೈ ಹೋ ಇಂಡಿಯಾ’ ಎಂದು ಸ್ಯಾಂಡ್ ಆರ್ಟ್ ಕಲಾಕೃತಿ ರಚಿಸಿದ್ದಾರೆ. ಉಡುಪಿಯ ಸ್ಯಾಂಡ್ ಆರ್ಟ್ ಟೀಂ ನಿಂದ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಗೆದ್ದು ಬಾ ಟೀಂ ಇಂಡಿಯಾ – 2014 ರಿಂದ 2023ವರೆಗೆ ಐಸಿಸಿ ಟೂರ್ನಿಯಲ್ಲಿ ಭಾರತ ಸಾಧನೆ ಏನು?

    ದಾವಣಗೆರೆಯಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಮಕ್ಕಳು ಕೂಡ ಭಾರತ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಆಲ್‌ ದಿ ಬೆಸ್ಟ್‌ ಇಂಡಿಯಾ ಅಂತಾ ಕ್ರಿಕೆಟ್‌ ಅಭಿಮಾನಿಗಳೂ ತಂಡದ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ.

  • ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದ ಭಾರತ!

    ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದ ಭಾರತ!

    ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ (South Africa) ವಿರುದ್ಧ ಗುರುವಾರ ನಡೆದ ಅಂತಿಮ ಟೆಸ್ಟ್‌ ಪಂದ್ಯದ ಬಳಿಕ ಟೀಂ ಇಂಡಿಯಾ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್‌ (WTC Points) ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದೆ.

    2019-2023ರ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಆಸೀಸ್‌ ವಿರುದ್ಧ ಹೀನಾಯವಾಗಿ ಸೋತಿದ್ದ ಭಾರತ (Team India) ಸತತ 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ 3ನೇ ಆವೃತ್ತಿಗೆ ಸಜ್ಜಾಗಿರುವ ಭಾರತ ಈಗಾಗಲೇ ನಂ.1ಪಟ್ಟಕ್ಕೆ ಜಿಗಿದಿದೆ. ಅಂತಿಮವಾಗಿ ಮೊದಲ ಎರಡು ಸ್ಥಾನಗಳಲ್ಲಿ ಬರುವ ತಂಡಗಳು ಫೈನಲ್ ‌ಪ್ರವೇಶಿಸಲಿವೆ. ಇದನ್ನೂ ಓದಿ: ಎರಡೇ ದಿನಗಳಿಗೆ 33 ವಿಕೆಟ್‌ ಉಡೀಸ್‌; ಹರಿಣರ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಜಯ – ಸರಣಿ ಸಮಬಲ

    ಕಳೆದ ವರ್ಷ ವೆಸ್ಟ್‌ ಇಂಡೀಸ್‌ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡುವ ಮೂಲಕ ತನ್ನ ಸರದಿ ಆರಂಭಿಸಿತು. ವೆಸ್ಟ್‌ ಇಂಡೀಸ್‌ ವಿರುದ್ಧ 2 ಟೆಸ್ಟ್‌ನಲ್ಲಿ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದ್ದ ಭಾರತ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಗೆಲುವನ್ನು ಹಂಚಿಕೊಂಡಿದೆ. ಈ ಮೂಲಕ 26 ಅಂಕಗಳು 54.16 ಪಿಸಿಟಿಯೊಂದಿಗೆ (Percentage Of Points Earned) ಅಗ್ರಸ್ಥಾನಕ್ಕೆ ಜಿಗಿದಿದೆ. ಇದನ್ನೂ ಓದಿ: ಪಂದ್ಯದ ವೇಳೆ ರಾಮ್ ಸಿಯಾ ರಾಮ್ ಹಾಡಿಗೆ ರಾಮನಂತೆ ಬಿಲ್ಲು ಹಿಡಿದ ಕೊಹ್ಲಿ ವೀಡಿಯೋ ವೈರಲ್

    ಇನ್ನುಳಿದಂತೆ ತಲಾ 12 ಅಂಕಗಳೊಂದಿಗೆ 50 ಪಿಸಿಟಿ ಹೊಂದಿರುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ಕ್ರಮವಾಗಿ ಎರಡು & 3ನೇ ಸ್ಥಾನಗಳಲ್ಲಿವೆ. 42 ಅಂಕಗಳೊಂದಿಗೆ 50 ಪಿಸಿಟಿ ಹೊಂದಿರುವ ಆಸೀಸ್‌, 12 ಅಂಕಗಳೊಂದಿಗೆ 50 ಪಿಸಿಟಿ ಹೊಂದಿರುವ ಬಾಂಗ್ಲಾದೇಶ, 22 ಅಂಕಗಳೊಂದಿಗೆ 45.83 ಪಿಸಿಟಿ ಹೊಂದಿರುವ ಪಾಕಿಸ್ತಾನ, 4 ಅಂಕಗಳೊಂದಿಗೆ 16.67 ಪಿಸಿಟಿ ಹೊಂದಿರುವ ವೆಸ್ಟ್‌ ಇಂಡೀಸ್‌, 9 ಅಂಕಗಳೊಂದಿಗೆ 15 ಪಿಸಿಟಿ ಹೊಂದಿರುವ ಇಂಗ್ಲೆಂಡ್‌ ಹಾಗೂ ಶೂನ್ಯ ಅಂಕ, ಶೂನ್ಯ ಪಿಸಿಟಿ ಹೊಂದಿರುವ ಶ್ರೀಲಂಕಾ ತಂಡ ಕ್ರಮವಾಗಿ 4 ರಿಂದ 9ನೇ ಸ್ಥಾನಗಳಲ್ಲಿವೆ.

    ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದ ಅಂತಿಮ ಹಾಗೂ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿ ಸಮಬಲವಾಗಿಸಿಕೊಂಡಿತು. ಕೇವಲ ಒಂದೂವರೆ ದಿನಗಳಲ್ಲಿ ಮುಕ್ತಾಯಗೊಂಡ ಈ ಪಂದ್ಯವು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಚುಟುಕು ಪಂದ್ಯ ಎನಿಸಿಕೊಂಡಿತು. ಇತ್ತಂಡಗಳ ಇನ್ನಿಂಗ್ಸ್‌ಗಳಿಂದ ಒಟ್ಟು 642 ಎಸೆತಗಳು ದಾಖಲಾದವು. 1932ರಂದು ಮೆಲ್ಬರ್ನ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ 656 ಎಸೆತಗಳು ಹಾಗೂ 1935ರಲ್ಲಿ ‌ಬ್ರಿಡ್ಜ್‌ಟೌನ್‌ನಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದಲ್ಲಿ 672 ಎಸೆತಗಳು ದಾಖಲಾಗಿದ್ದು, ಈವರೆಗಿನ ಸಾಧನೆಯಾಗಿತ್ತು.

  • ಎರಡೇ ದಿನಗಳಿಗೆ 33 ವಿಕೆಟ್‌ ಉಡೀಸ್‌; ಹರಿಣರ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಜಯ – ಸರಣಿ ಸಮಬಲ

    ಎರಡೇ ದಿನಗಳಿಗೆ 33 ವಿಕೆಟ್‌ ಉಡೀಸ್‌; ಹರಿಣರ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಜಯ – ಸರಣಿ ಸಮಬಲ

    ಕೇಪ್‌ಟೌನ್‌: ಜಸ್ಪ್ರೀತ್‌ ಬುಮ್ರಾ (Jasprit Bumrah), ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಭಾರತ (Team India), ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ 2ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿತು. ಈ ಮೂಲಕ ತವರಿನಲ್ಲೇ ಹರಿಣರನ್ನು ಬಗ್ಗುಬಡಿದು 1-1ರಲ್ಲಿ ಸರಣಿ ಸಮಬಲಗೊಳಿಸಿತು.

    ಈ ಗೆಲುವಿನ ಮೂಲಕ ರೋಹಿತ್ ಶರ್ಮಾ (Rohit Sharma) ಕೇಪ್‌ಟೌನ್‌ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಏಷ್ಯಾದ ಮೊದಲ ನಾಯಕ ಎಂಬ ಕೀರ್ತಿಗೆ ಪಾತ್ರರಾದರು. ಅಲ್ಲದೇ ಎಂ.ಎಸ್ ಧೋನಿ ನಂತರ ದಕ್ಷಿಣ ಆಫ್ರಿಕಾದಲ್ಲಿ (South Africa) ಟೆಸ್ಟ್ ಸರಣಿಯನ್ನು ಸಮಬಲಗೊಳಿಸಿದ 2ನೇ ಭಾರತೀಯ ನಾಯಕ ಎಂಬ ಹಿರಿಮೆಗೂ ರೋಹಿತ್‌ ಪಾತ್ರರಾದರು. ಇದನ್ನೂ ಓದಿ: ಪಂದ್ಯದ ವೇಳೆ ರಾಮ್ ಸಿಯಾ ರಾಮ್ ಹಾಡಿಗೆ ರಾಮನಂತೆ ಬಿಲ್ಲು ಹಿಡಿದ ಕೊಹ್ಲಿ ವೀಡಿಯೋ ವೈರಲ್

    ಕೇವಲ ಎರಡೇ ದಿನಗಳಲ್ಲಿ ಮುಕ್ತಾಯಗೊಂಡ ಈ ಪಂದ್ಯವು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಚುಟುಕು ಪಂದ್ಯ ಎನಿಸಿಕೊಂಡಿತು. ಇತ್ತಂಡಗಳ ಇನ್ನಿಂಗ್ಸ್‌ಗಳಿಂದ ಒಟ್ಟು 642 ಎಸೆತಗಳು ದಾಖಲಾದವು. 1932ರಂದು ಮೆಲ್ಬರ್ನ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ 656 ಎಸೆತಗಳು ಹಾಗೂ 1935ರಲ್ಲಿ ‌ಬ್ರಿಡ್ಜ್‌ಟೌನ್‌ನಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದಲ್ಲಿ 672 ಎಸೆತಗಳು ದಾಖಲಾಗಿದ್ದು, ಈವರೆಗಿನ ಸಾಧನೆಯಾಗಿತ್ತು.

    ಮೊದಲ ಟೆಸ್ಟ್‌ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ್ದ ಟೀಂ ಇಂಡಿಯಾ 2ನೇ ಟೆಸ್ಟ್‌ ಪಂದ್ಯದಲ್ಲಿ ಗೆದ್ದು ಸೇಡು ತೀರಿಸಿಕೊಂಡಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್‌ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ ಬಿಟ್ಟುಕೊಟ್ಟಿತು. ಇದನ್ನೂ ಓದಿ: ಇದು ಇಡೀ ಭಾರತದ ಶ್ರೇಷ್ಠ ಕ್ಷಣ – ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಆಹ್ವಾನ ಪಡೆದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ

    ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ಮಾರಕ ದಾಳಿಗೆ ತುತ್ತಾದ ದಕ್ಷಿಣ ಆಫ್ರಿಕಾ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ ಸಹ 153 ರನ್‌ಗಳಿಗೆ ಆಲೌಟ್‌ ಆಯಿತು. ಪುನಃ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ 17 ಓವರ್‌ಗಳಲ್ಲಿ 62 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಮೊದಲ ದಿನದ ಇನ್ನಿಂಗ್ಸ್‌ ಅಂತ್ಯಗೊಳಿಸಿತ್ತು. ಗುರುವಾರ ತನ್ನ ಸರದಿ ಆರಂಭಿಸಿದ ಹರಿಣರು ಏಡನ್‌ ಮಾರ್ಕ್ರಮ್‌ ಭರ್ಜರಿ ಶತಕದೊಂದಿಗೆ 36.5 ಓವರ್‌ಗಳಲ್ಲಿ 176 ರನ್‌ಗಳಗೆ ಸರ್ವಪತನ ಕಂಡಿತು. ಇದರಿಂದ ಟೀಂ ಇಂಡಿಯಾಕ್ಕೆ 79 ರನ್‌ಗಳ ಗುರಿ ನೀಡಿತು.

    ದಕ್ಷಿಣ ಆಫ್ರಿಕಾ ಪರ ಆರಂಭಿಕ ಏಡನ್‌ ಮಾರ್ಕ್ರಮ್‌ 103 ಎಸೆತಗಳಲ್ಲಿ 2 ಸಿಕ್ಸರ್‌, 17 ಬೌಂಡರಿಯೊಂದಿಗೆ 106 ರನ್‌ ಬಾರಿಸಿದರೆ, ಡೀನ್‌ ಎಲ್ಗರ್‌ 12 ರನ್‌, ಡೇವಿಡ್ ಬೆಡಿಂಗ್ಹ್ಯಾಮ್ ಮತ್ತು ಮಾರ್ಕೋ ಜಾನ್ಸೆನ್‌ ತಲಾ 11 ರನ್‌ ಗಳಿಸಿದರು. ಇನ್ನುಳಿದ ಆಟಗಾರರ ಕೇವಲ ಒಂದಂಕಿಯ ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದನ್ನೂ ಓದಿ: ಸಿರಾಜ್ ಬೌಲಿಂಗ್ ಅಬ್ಬರಕ್ಕೆ ತತ್ತರಿಸಿದ ದಕ್ಷಿಣ ಆಫ್ರಿಕಾ ಪಡೆ, 55ಕ್ಕೆ ಅಲೌಟ್

    79 ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ, ನಾಯಕ ರೋಹಿತ್‌ ಶರ್ಮಾ ಅವರ ತಾಳ್ಮೆಯ ಬ್ಯಾಟಿಂಗ್‌ನಿಂದ 12 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 80 ರನ್‌ ಗಳಿಸಿ ಗೆಲುವು ಸಾಧಿಸಿತು. ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್‌ 28 ರನ್‌, ರೋಹಿತ್‌ ಶರ್ಮಾ 16 ರನ್‌, ಶುಭಮನ್‌ ಗಿಲ್‌ 10 ರನ್‌, ವಿರಾಟ್‌ ಕೊಹ್ಲಿ 12 ರನ್‌, ಶ್ರೇಯಸ್‌ ಅಯ್ಯರ್‌ 4 ರನ್‌ ಗಳಿಸಿದರು. ಅಂತಿಮ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 13.5 ಓವರ್‌ಗಳಲ್ಲಿ 61 ರನ್‌ ಬಿಟ್ಟುಕೊಟ್ಟ ಬುಮ್ರಾ 6 ವಿಕೆಟ್‌ ಕಿತ್ತರೆ, ಮುಕೇಶ್‌ ಕುಮಾರ್‌ 2, ಸಿರಾಜ್‌ ಹಾಗೂ ಪ್ರಸಿದ್ಧ್‌ ಕೃಷ್ಣ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • 30ನೇ ಟೆಸ್ಟ್‌ ಅರ್ಧಶತಕ ಸಿಡಿಸಿ ದಿಗ್ಗಜರ ದಾಖಲೆ ಉಡೀಸ್‌ – 146 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲಿ ಕೊಹ್ಲಿ ಹೊಸ ಮೈಲುಗಲ್ಲು

    30ನೇ ಟೆಸ್ಟ್‌ ಅರ್ಧಶತಕ ಸಿಡಿಸಿ ದಿಗ್ಗಜರ ದಾಖಲೆ ಉಡೀಸ್‌ – 146 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲಿ ಕೊಹ್ಲಿ ಹೊಸ ಮೈಲುಗಲ್ಲು

    ಸೆಂಚೂರಿಯನ್‌: ಟೀಂ ಇಂಡಿಯಾ (Team India) ಟಾಪ್‌ ಕ್ಲಾಸ್‌ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅತ್ಯುತ್ತಮ ಬ್ಯಾಟಿಂಗ್‌ ಫಾರ್ಮ್‌ನೊಂದಿಗೆ ದಾಖಲೆ ಮೇಲೆ ದಾಖಲೆಗಳನ್ನ ಬರೆಯುತ್ತಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 114 ರನ್ ಕಲೆಹಾಕುವ ಮೂಲಕ ಪ್ರಸಕ್ತ ವರ್ಷದ ಎಲ್ಲಾ ಸ್ವರೂಪದಲ್ಲೂ 2 ಸಾವಿರ ರನ್‌ ಪೂರ್ಣಗೊಳಿಸಿದ ಸಾಧನೆ ಮಾಡಿದ್ದಾರೆ.

    ಭಾರತದ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕೊಹ್ಲಿ 50ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ಸಾರ್ವಕಾಲಿಕ ದಾಖಲೆಯನ್ನ ನುಚ್ಚುನೂರು ಮಾಡಿದ್ದರು. ಇದೀಗ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ 146 ವರ್ಷಗಳ ಟೆಸ್ಟ್‌ ಕ್ರಿಕೆಟ್‌ (Test Cricket) ಇತಿಹಾಸದಲ್ಲೇ ಮಹತ್ವದ ಮೈಲುಗಲ್ಲು ತಲುಪಿದ್ದಾರೆ.

    ಕೊಹ್ಲಿ ಸಪ್ತ ಸಾಧನೆ:
    ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದಾಗಿನಿಂದಲೂ ಉತ್ತಮ ಫಾರ್ಮ್‌ನಲ್ಲಿದ್ದು, ಒಂದೇ ಕ್ಯಾಲೆಂಡರ್ ವರ್ಷದಲ್ಲಿ 7 ಬಾರಿ 2000 ರನ್ ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ. 2012 (2,186 ರನ್‌), 2014 (2,286 ರನ್‌), 2016 (2,595 ರನ್‌), 2017 (2,818 ರನ್‌), 2018 (3,735 ರನ್‌) ಹಾಗೂ 2019ರಲ್ಲಿ (2,455 ರನ್‌) ಈ ಸಾಧನೆ ವಿರಾಟ್ ಮಾಡಿದ್ದಾರೆ. ಆದ್ರೆ, 2000 ರಿಂದ 2022ರ ವರೆಗೆ ತಮ್ಮ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದರಿಂದ ಕೊಹ್ಲಿ ಪ್ರಮುಖ ಸಾಧನೆಗಳನ್ನು ಮಾಡುವಲ್ಲಿ ಎಡವಿದ್ದರು. ಆದ್ರೆ 2022ರ ಟಿ20 ಏಷ್ಯಾಕಪ್‌ ಮೂಲಕ ಭರ್ಜರಿ ಕಂಬ್ಯಾಕ್‌ ಮಾಡಿದ ಕೊಹ್ಲಿ 2023ರಲ್ಲಿ ಮಹತ್ವದ ಮೈಲುಗಲ್ಲುಗಳನ್ನ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. 1877ರಲ್ಲಿ ಕ್ರಿಕೆಟ್‌ ಆರಂಭವಾದಾಗಿನಿಂದಲೂ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಖ್ಯಾತಿಗೂ ಕಾರಣರಾಗಿದ್ದಾರೆ.

    ಎಬಿಡಿ ದಾಖಲೆಯೂ ಉಡೀಸ್‌:
    ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್‌ನಲ್ಲಿ ನಡೆದ ಪಂದ್ಯದಲ್ಲಿ 76 ರನ್ ಗಳಿಸಿ ಟೆಸ್ಟ್ ಸ್ವರೂಪದಲ್ಲಿ 8,790 ರನ್ ಕಲೆ ಹಾಕಿದ ವಿರಾಟ್ ಕೊಹ್ಲಿ, 21ನೇ ಶತಮಾನದ ಬ್ಯಾಟರ್‌ಗಳ ಸಾಲಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಆ ಮೂಲಕ ಎಬಿ ಡಿ ವಿಲಿಯರ್ಸ್ (8,765 ರನ್, 22 ಶತಕ, 46 ಅರ್ಧಶತಕ) ಅವರ ದಾಖಲೆಯನ್ನು ಮುರಿದಿದ್ದಾರೆ.

    ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು
    * 15,921 ರನ್- ಸಚಿನ್ ತೆಂಡೂಲ್ಕರ್- 329 ಇನಿಂಗ್ಸ್
    * 13,265 ರನ್- ರಾಹುಲ್ ದ್ರಾವಿಡ್- 284 ಇನಿಂಗ್ಸ್
    * 10,122 ರನ್- ಸುನೀಲ್ ಗವಾಸ್ಕರ್- 214 ಇನಿಂಗ್ಸ್
    * 8,790 ರನ್- ವಿರಾಟ್ ಕೊಹ್ಲಿ- 189 ಇನಿಂಗ್ಸ್
    * 8,781 ರನ್- ವಿವಿಎಸ್ ಲಕ್ಷ್ಮಣ್- 189 ಇನಿಂಗ್ಸ್

  • ಸಂಜು ಸ್ಯಾಮ್ಸನ್ ಚೊಚ್ಚಲ ಶತಕ – ಸಂಭ್ರಮದಲ್ಲಿ ತೋಳ್ಬಲ ಪ್ರದರ್ಶನ!

    ಸಂಜು ಸ್ಯಾಮ್ಸನ್ ಚೊಚ್ಚಲ ಶತಕ – ಸಂಭ್ರಮದಲ್ಲಿ ತೋಳ್ಬಲ ಪ್ರದರ್ಶನ!

    ಪಾರ್ಲ್ (ದಕ್ಷಿಣ ಆಫ್ರಿಕಾ): ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ (Sanju Samson) ಇಂದು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿದರು. ಸಂಜು ಸ್ಯಾಮ್ಸನ್‌ಗೆ ಉತ್ತಮ ಸಾಥ್ ನೀಡಿದ ತಿಲಕ್ ವರ್ಮಾ ಏಕದಿನ ಪಂದ್ಯಗಳಲ್ಲಿ ಮೊದಲ ಅರ್ಧಶತಕ ಬಾರಿಸಿದರು.

    ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶತಕ ಬಾರಿಸಿದರು. 114 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು. ಇದನ್ನೂ ಓದಿ: IND vs SA: ಸಂಜು ಸ್ಯಾಮ್ಸನ್ ಮೊದಲ ಶತಕ; ಆಫ್ರಿಕಾಗೆ 297 ರನ್‌ಗಳ ಗುರಿ

    ಪದೇ ಪದೇ ಕ್ರೀಡಾಂಗಣಕ್ಕಿಳಿಯುವ ಅವಕಾಶ ವಂಚಿತರಾಗಿದ್ದ ಸಂಜು ಇಂದು ಸೆಂಚುರಿ ಬಾರಿಸುತ್ತಿದ್ದಂತೆ ತಮ್ಮ ತೋಳ್ಬಲ ಪ್ರದರ್ಶಿಸಿದರು. ಸೆಂಚುರಿ ಸಿಡಿಸಿದ ಸಂಭ್ರಮದಲ್ಲಿ ಹೆಲ್ಮೆಟ್ ಕೆಳಗೆಸೆದ ಸಂಜು ಟೀ ಶರ್ಟ್ ಮೇಲೆ ಸರಿಸಿ ತೋಳ್ಬಲ ಪ್ರದರ್ಶಿಸಿದರು.

    ಇನ್ನಿಂಗ್ಸ್ ಬ್ರೇಕ್ ಮಧ್ಯೆ ಮಾತನಾಡಿದ ಸಂಜು, ಕಳೆದ ಕೆಲ ವರ್ಷಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಉತ್ತಮ ಆಟವಾಡಲು ಸಿದ್ಧವಾಗಿದ್ದೆ. ಸೆಂಚುರಿ ಬಾರಿಸಿರುವ ಈ ಕ್ಷಣ ಭಾವುಕನಾಗಿದ್ದೇನೆ. ಖುಷಿಯಾಗಿದೆ ಎಂದರು. ಇದನ್ನೂ ಓದಿ: RCB ಕಪ್‌ ಗೆಲ್ಲುವಂತೆ ಬೆಂಬಲಿಸಿ ಎಂದ ‌ಅಭಿಮಾನಿ – ಲೆಜೆಂಡ್‌ ಮಹಿ ಕೊಟ್ಟ ಉತ್ತರ ಏನು?

    ಸಂಜು ಸೆಂಚುರಿ ಸಹಾಯದಿಂದ ಟೀಂ ಇಂಡಿಯಾ ನಿಗದಿತ 50 ಓವರ್ ನಲ್ಲಿ 296 ರನ್ ಗಳಿಸಿತು. ಸಂಜು ಹಾಗೂ ತಿಲಕ್ ವರ್ಮಾ ಮೂರನೇ ವಿಕೆಟ್‌ಗೆ ಗಳಿಸಿದ 116 ರನ್ ಜೊತೆಯಾಟ ಭಾರತ ಉತ್ತಮ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿತು. ಕೊನೆಯ 10 ಓವರ್‌ಗಳಲ್ಲಿ ಭಾರತ 93 ರನ್ ಗಳಿಸಿ, ತಂಡದ ಮೊತ್ತ 296 ರನ್ ತಲುಪಲು ಸಹಕಾರಿಯಾಯಿತು.

  • ಅರ್ಷ-ಆವೇಶ ಘಾತುಕ ಬೌಲಿಂಗ್‌ – ಶ್ರೇಯಸ್‌, ಸುದರ್ಶನ್‌ ಅರ್ಧಶತಕಗಳ ಮಿಂಚು – ಭಾರತಕ್ಕೆ 8 ವಿಕೆಟ್‌ಗಳ ಜಯ

    ಅರ್ಷ-ಆವೇಶ ಘಾತುಕ ಬೌಲಿಂಗ್‌ – ಶ್ರೇಯಸ್‌, ಸುದರ್ಶನ್‌ ಅರ್ಧಶತಕಗಳ ಮಿಂಚು – ಭಾರತಕ್ಕೆ 8 ವಿಕೆಟ್‌ಗಳ ಜಯ

    ಜೋಹಾನ್ಸ್‌ಬರ್ಗ್‌: ಅರ್ಷ್‌ದೀಪ್‌ ಸಿಂಗ್‌ (Arshdeep Singh) ಮತ್ತು ಅವೇಶ್​ ಖಾನ್​ ಅವರ ಘಾತಕ ಬೌಲಿಂಗ್​ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಯುವ ಆರಂಭಿಕ ಸಾಯಿ ಸುದರ್ಶನ್‌ ಹಾಗೂ ಶ್ರೇಯಸ್‌ ಅಯ್ಯರ್‌ (Shreyas Iyer) ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಭಾರತ (Team India) 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-0 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಸೂಪರ್‌ ಸಂಡೇ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ದಕ್ಷಿಣ ಆಫ್ರಿಕಾ (South Africa) ತಂಡ 27.3 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್‌ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತ 16.4 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 117 ರನ್‌ ಗಳಿಸಿ ಜಯ ಸಾಧಿಸಿತು.

    ಭಾರತದ ಪರ ತಾಳ್ಮೆಯ ಆಟವಾಡಿದ ಯುವ ಆರಂಭಿಕ ಸಾಯಿ ಸುದರ್ಶನ್‌ (Sai Sudharsan) ಹಾಗೂ ಶ್ರೇಯಸ್‌ ಅಯ್ಯರ್‌ ಅರ್ಧಶತಕಗಳ ಕೊಡುಗೆ ನೀಡಿದರು. ಶ್ರೇಯಸ್‌ ಅಯ್ಯರ್‌ 45 ಎಸೆತಗಳಲ್ಲಿ 52 ರನ್‌ (6 ಬೌಂಡರಿ, 1 ಸಿಕ್ಸರ್‌) ಗಳಿಸಿ ಔಟಾದರೆ, ಸಾಯಿ ಸುದರ್ಶನ್‌ 43 ಎಸೆತಗಳಲ್ಲಿ 55 ರನ್‌ (9 ಬೌಂಡರಿ, 43 ಎಸೆತ) ಬಾರಿಸಿ ಅಜೇಯರಾಗುಳಿದರು. ಇದರಿಂದ ಭಾರತ 16.4 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 117 ರನ್​ ಬಾರಿಸಿ ಗೆಲುವು ದಾಖಲಿಸಿತು. ಸರಣಿಯ ದ್ವಿತೀಯ ಪಂದ್ಯ ಡಿಸೆಂಬರ್​ 19 ಮಂಗಳವಾರ ನಡೆಯಲಿದೆ.

    ದಾಖಲೆ ಬರೆದ ಅರ್ಷ್‌ದೀಪ್‌:
    ವೇಗಿ ಅರ್ಷ್‌ದೀಪ್‌ ಸಿಂಗ್ ಹರಿಣರ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್​ ಪಡೆಯುವ ಮೂಲಕ ಭಾರತ ಪರ ಹೊಸ ದಾಖಲೆಯೊಂದನ್ನು ಬರೆದರು. ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಕಿತ್ತ ಮೊದಲ ಭಾರತೀಯ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದ್ರೆ, ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಪಡೆದ ಭಾರತೀಯ ಬೌಲರ್​ಗಳ ಪಟ್ಟಿಯಲ್ಲಿ ಅವರಿಗೆ 4ನೇ ಸ್ಥಾನವನ್ನೂ ಪಡೆದುಕೊಂಡರು. ಮಾಜಿ ಕ್ರಿಕೆಟಿಗ ಸುನೀಲ್​ ಜೋಶಿ ಮೊದಲಿಗರಾಗಿದ್ದಾರೆ. ಜೋಶಿ 1999ರಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇವಲ 6 ರನ್​ಗೆ 5 ವಿಕೆಟ್​ ಕಿತ್ತು ಮಿಂಚಿದ್ದರು. ಯಜುವೇಂದ್ರ ಚಾಹಲ್​ (22 ರನ್​ಗೆ 5) ಮತ್ತು ರವೀಂದ್ರ ಜಡೇಜಾ (33 ರನ್​ಗೆ 5) ನಂತರದ ಸ್ಥಾನಗಳಲ್ಲಿದ್ದಾರೆ.

    ಅರ್ಷ-ಆವೇಶ ನಡುವೆ ಹಣಾ-ಹಣಿ:
    ಅರ್ಷ್‌ದೀಪ್‌ ಸಿಂಗ್‌ಗೆ ಜಿದ್ದಿಗೆ ಬಿದ್ದವರಂತೆ ಪೈಪೋಟಿ ನೀಡಿದ ಅವೇಶ್​ ಖಾನ್​ ತಮ್ಮ ಆವೇಶಭರಿತ ಬೌಲಿಂಗ್​ ದಾಳಿ ನಡೆಸುವ ಮೂಲಕ 27 ರನ್​ ನೀಡಿ 4 ವಿಕೆಟ್​ ಕಿತ್ತರು. ಕುಲ್ದೀಪ್‌ ಯಾದವ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು. ಉಭಯ ಬೌಲರ್​ಗಳ ಘಾತುಕ ಬೌಲಿಂಗ್​ ದಾಳಿಯನ್ನು ಎದುರಿಸಲು ವಿಫಲವಾದ ಡೇವಿಡ್​ ಮಿಲ್ಲರ್​ 2 ರನ್‌, ಹೆನ್ರಿಕ್ ಕ್ಲಾಸೆನ್ 6 ರನ್‌, ನಾಯಕ ಐಡೆನ್​ ಮಾರ್ಕ್ರಮ್ 12 ರನ್‌ ಗಳಿಸಿದ್ರೆ ವಿಯಾನ್ ಮುಲ್ಡರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆಂಡ್ರಿಕ್ಸ್ ಶೂನ್ಯ ಸುತ್ತಿದರು.

    ಫೆಹ್ಲುಕ್ವಾಯೊ ಹೋರಾಟ ವ್ಯರ್ಥ:
    58ರನ್​ಗೆ 7 ವಿಕೆಟ್​ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ 100 ರನ್‌ ಗಳಿಸುವುದೂ ಕಷ್ಟವಾಗಿತ್ತು. ಆದ್ರೆ ಬೌಲರ್​ ಆಂಡಿಲೆ ಫೆಹ್ಲುಕ್ವಾಯೊ. ಭಾರತೀಯ ಬೌಲರ್​ಗಳ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ 2 ಸಿಕ್ಸರ್​ ಮತ್ತು 3 ಬೌಂಡರಿ ಬಾರಿಸಿ 33 ರನ್​ ಗಳಿಸಿದರು. ಇಂದು ಇದೇ ತಂಡದ ಪರ‌ ಗಳಿಸಿದ ಅಧಿಕ ರನ್‌ ಆಗಿತ್ತು. ಆದ್ರೆ ಭಾರತದ ಎದುರು ಈ ಆಟ ವ್ಯರ್ಥವಾಯಿತು.

  • ಇಂದಿನಿಂದ ಹರಿಣರ ವಿರುದ್ಧ ಏಕದಿನ ಸರಣಿ – ಹೊಸ ತಾರೆಗಳ ಉಗಮಕ್ಕೆ ರೈಟ್‌ ಟೈಂ, ರಾಹುಲ್‌ ನಾಯಕತ್ವಕ್ಕೂ ಸವಾಲ್‌

    ಇಂದಿನಿಂದ ಹರಿಣರ ವಿರುದ್ಧ ಏಕದಿನ ಸರಣಿ – ಹೊಸ ತಾರೆಗಳ ಉಗಮಕ್ಕೆ ರೈಟ್‌ ಟೈಂ, ರಾಹುಲ್‌ ನಾಯಕತ್ವಕ್ಕೂ ಸವಾಲ್‌

    ಜೋಹಾನ್ಸ್‌ ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರ (ಇಂದು) ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೊಸ ತಲೆಮಾರಿನ ತಾರೆಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಾಲುಗಟ್ಟಿ ನಿಂತಿದ್ದು ಭಾರತದ ಏಕದಿನ ಭವಿಷ್ಯದ ಪ್ರಯಾಣಕ್ಕೆ ಇದು ಮೊದಲ ಹೆಜ್ಜೆಯಾಗುವ ನಿರೀಕ್ಷೆ ಇದೆ.

    ಅಷ್ಟೇ ಅಲ್ಲದೇ ಉಭಯ ತಂಡಗಳಿಗೆ ಈ ಮುಖಾಮುಖಿಯು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮುಂಚಿತವಾಗಿ ಹೊಸ ಸ್ಟಾರ್‌ಗಳ ಆಗಮನವನ್ನು ಬಿಂಬಿಸುತ್ತದೆ. ಕಳೆದ ಒಂದೂವರೆ ದಶಕದಿಂದಲೂ ಏಕದಿನ ಸ್ವರೂಪದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Virat Kohli and Rohit Sharma) ಉತ್ತುಂಗದಲ್ಲಿದ್ದಾರೆ. ಆದರೀಗ ಅವರು ತಮ್ಮ ವೃತ್ತಿಜೀವನದ ಮುಸ್ಸಂಜೆಗೆ ಸರಿಯುತ್ತಿದ್ದಾರೆ. ಹೀಗಾಗಿ ಯುವ ಭಾರತೀಯರ ಹೆಸರು ತಮ್ಮ ಪರಂಪರೆ ಮುಂದುವರಿಸಬೇಕಾಗಿದೆ.

    ಮೂರು ಏಕದಿನ ಪಂದ್ಯಗಳ ಸರಣಿಯ ನಾಯಕತ್ವ ವಹಿಸಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಪಂದ್ಯದ ಕೇಂದ್ರ ಬಿಂದುವಾಗಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ರಾಹುಲ್ ಈ ಹಿಂದೆ ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ವಿಶ್ವಕಪ್‌ಗೂ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಯ 2-1 ಅಂತರದಲ್ಲಿ ಗೆಲ್ಲುವಲ್ಲಿ ರಾಹುಲ್‌ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಇಲ್ಲಿನ ಯಶಸ್ವಿ ಫಲಿತಾಂಶವು ಕರುನಾಡ ಕುವರನಿಗೆ ದೀರ್ಘಕಾಲದವರೆಗೆ ಏಕದಿನ ನಾಯಕತ್ವ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಅಚ್ಚರಿ ಬೆಳವಣಿಗೆಯಲ್ಲಿ ಮುಂಬೈ ಸಾರಥಿಯಾದ ಪಾಂಡ್ಯ – ಹಿಟ್‌ಮ್ಯಾನ್‌ ಸ್ಥಾನ ಏನು?

    ಅನಾರೋಗ್ಯದಿಂದಾಗಿ ಟಿ20 ಸರಣಿ ಯಿಂದ ಹೊರಗುಳಿದಿದ್ದ ರಾಹುಲ್, ಋತುರಾಜ್ ಚೇತರಿಸಿಕೊಂಡಿದ್ದರೆ, ಶ್ರೇಯಸ್ ಅಯ್ಯರ್ ಸೇರಿದಂತೆ ಯುವ ಆಟಗಾರರು ತಂಡದಲ್ಲಿ ಕಾಯಂ ಸ್ಥಾನಕ್ಕಾಗಿ ಪೈಪೋಟಿ ನಡೆಸಲು ಉತ್ಸುಕರಾಗಿದ್ದಾರೆ. ಅಷ್ಟೇ ಅಲ್ಲದೇ ಫುಲ್‌ ಫಾರ್ಮ್‌ನಲ್ಲಿರುವ ರಿಂಕು ಸಿಂಗ್‌ ಸಹ ಏಕದಿನ ಸರಣಿಯಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಇದನ್ನೂ ಓದಿ: ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್‌ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ಮುಂಬೈ

    ಇನ್ನೂ ವೇಗಿಗಳಾದ ಅವೇಶ್ ಖಾನ್, ಮುಖೇಶ್ ಕುಮಾರ್ ಮತ್ತು ಅರ್ಷ್‌ದೀಪ್‌ ಸಿಂಗ್‌ ಹಿರಿಯ ಬೌಲರ್‌ಗಳ ಅನುಪಸ್ಥಿತಿ ತುಂಬಬೇಕಾದ ಜವಾಬ್ದಾರಿ ಹೊತ್ತಿದ್ದಾರೆ. ಜೋಹಾನ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅವರು ಹೆಚ್ಚು ಸ್ಥಿರತೆ ತೋರಿಸಬೇಕಾಗಿದೆ. ಇದನ್ನೂ ಓದಿ: ಟೆಕ್ವಾಂಡೋ: ರಾಷ್ಟ್ರಮಟ್ಟಕ್ಕೆ ಕಾಸರಗೋಡಿನ ಗಣ್ಯ – ಕೇರಳದಲ್ಲಿ ಅಗ್ರʻಗಣ್ಯʼಚಿನ್ನದ ಪದಕ..!

  • ICC World Cup: 20 ವರ್ಷಗಳ ಬಳಿಕ ಟೀಂ ಇಂಡಿಯಾದ ಸತತ 8ನೇ ಗೆಲುವು

    ICC World Cup: 20 ವರ್ಷಗಳ ಬಳಿಕ ಟೀಂ ಇಂಡಿಯಾದ ಸತತ 8ನೇ ಗೆಲುವು

    ಬೆಂಗಳೂರು: ಐಸಿಸಿ ವಿಶ್ವಕಪ್ (ICC World Cup) ಕ್ರಿಕೆಟ್ ಟೂರ್ನಿಯಲ್ಲಿ ಭಾರತ 20 ವರ್ಷಗಳ ಬಳಿಕ ಸತತ 8 ಏಕದಿನ ಪಂದ್ಯಗಳನ್ನು ಗೆದ್ದಿದೆ. ಈ ಹಿಂದೆ ಭಾರತ ತಂಡವು 2003ರಲ್ಲಿ ಸತತ 8 ಪಂದ್ಯಗಳನ್ನು ಗೆದ್ದಿತ್ತು.

    ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ (Team India) ಇದುವರೆಗೆ 8 ಪಂದ್ಯಗಳನ್ನು ಆಡಿದ್ದು, 8 ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

    2023ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ‘ಅಷ್ಟ’ಜಯ!
    ಮ್ಯಾಚ್ 1: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗೆಲುವು
    ಮ್ಯಾಚ್ 2: ಆಫ್ಘಾನಿಸ್ತಾನ ವಿರುದ್ಧ 8 ವಿಕೆಟ್ ಗೆಲುವು
    ಮ್ಯಾಚ್ 3: ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು
    ಮ್ಯಾಚ್ 4: ಬಾಂಗ್ಲಾದೇಶದ ವಿರುದ್ಧ 7 ವಿಕೆಟ್ ಗೆಲುವು
    ಮ್ಯಾಚ್ 5: ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗೆಲುವು
    ಮ್ಯಾಚ್ 6: ಇಂಗ್ಲೆಂಡ್ ವಿರುದ್ಧ 100 ರನ್ ಗೆಲುವು
    ಮ್ಯಾಚ್ 7: ಶ್ರೀಲಂಕಾ ವಿರುದ್ಧ 302 ರನ್ ಗೆಲುವು
    ಮ್ಯಾಚ್ 8: ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗೆಲುವು

    ಒನ್ ಡೇ ಮ್ಯಾಚಲ್ಲಿ ದಕ್ಷಿಣ ಆಫ್ರಿಕಾದ ಬೃಹತ್ ಸೋಲು: ಏಕದಿನ ಅಂತಾರಾಷ್ಟ್ರೀಯ ಸರಣಿಯಲ್ಲಿ (Odi Series) ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 243 ರನ್ ಗಳಿಂದ ಸೋತಿದೆ. ಇದು ದಕ್ಷಿಣ ಆಫ್ರಿಕಾದ ಬೃಹತ್ ಅಂತರದ ಸೋಲು ಎನ್ನುವುದು ಇಲ್ಲಿ ಗಮನಾರ್ಹ. ಇದಕ್ಕೂ ಮುನ್ನ 2002ರಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 182 ರನ್ ಗಳಿಂದ ಸೋಲಿಸಿತ್ತು. ಭಾರತ ತಂಡ ಇದಕ್ಕೂ ಮುನ್ನ 2010ರಲ್ಲಿ 153 ರನ್‌ಗಳ ಅಂತರದಿಂದ ಸೋಲಿಸಿದ್ದೇ ಟೀಂ ಇಂಡಿಯಾ ಪಾಲಿನ ದಾಖಲೆಯಾಗಿತ್ತು.

    2015ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೆಲ್ಬರ್ನ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 130 ರನ್ ಗಳಿಂದ ಸೋಲಿಸಿದ್ದೇ ವಿಶ್ವಕಪ್ ನ ದಾಖಲೆಯಾಗಿತ್ತು.

    ವಿಶ್ವಕಪ್ ನಲ್ಲಿ ಆಫ್ರಿಕಾ ಕನಿಷ್ಠ ಮೊತ್ತ!
    ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಪಂದ್ಯದಲ್ಲಿ 100 ರನ್ ಗಿಂತಲೂ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಈ ಹಿಂದೆ ಆಸ್ಟ್ರೇಲಿಯಾ ತಂಡವು 2007ರಲ್ಲಿ ದಕ್ಷಿಣ ಆಫ್ರಿಕಾವನ್ನು 149 ರನ್ ಗಳಿಗೆ ಆಲೌಟ್ ಮಾಡಿತ್ತು. ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದ.ಆಫ್ರಿಕಾ 83 ರನ್ ಗೆ ಆಲೌಟ್ ಆಗಿದೆ. ಈ ಹಿಂದೆ ಎರಡು ಬಾರಿ ಇಂಗ್ಲೆಂಡ್ ವಿರುದ್ಧ 83 ರನ್ ಗೆ ದಕ್ಷಿಣ ಆಫ್ರಿಕಾ ಆಲೌಟ್ ಆಗಿತ್ತು. 1993ರಲ್ಲಿ ಆಸ್ಟ್ರೇಲಿಯಾ ವಿರುದ್ಧ 69 ರನ್ ಗಳಿಗೆ ಆಲೌಟ್ ಆಗಿದ್ದೇ ದಕ್ಷಿಣ ಆಫ್ರಿಕಾ ತಂಡದ ಏಕದಿನ ಇತಿಹಾಸದ ಅತಿ ಕಡಿಮೆ ರನ್ ದಾಖಲೆಯಾಗಿದೆ.