ಬೆಂಗಳೂರು/ನವದೆಹಲಿ: ಕಾಂಗ್ರೆಸ್ ನಾಯಕರ ಮಾಲೀಕತ್ವದ ಡಿಸೈನ್ ಬಾಕ್ಸ್ ಪಿಆರ್ ಕಂಪನಿ ಮೇಲೆ ದೆಹಲಿ, ಬೆಂಗಳೂರಿನಲ್ಲಿ ಐಟಿ ರೇಡ್ ನಡೆದಿದೆ.
ದಾಳಿ ವೇಳೆ ಹಲವು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದು, ಬ್ಯಾಂಕ್ ಖಾತೆಗಳನ್ನು ಜಾಲಾಡಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮತ್ತು ಕಾರ್ತಿ ಚಿದಂಬರಂ ಸೇರಿ ಹಲವು ಕಾಂಗ್ರೆಸ್ ನಾಯಕರ ಕಂಪನಿಯನ್ನು ನಿರ್ವಹಿಸುತ್ತಿತ್ತು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ದೇಶದ ವಿವಿಧ ಪ್ರಮುಖ ನಾಯಕರ ಪರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಕೇವಲ ಒಂದೂವರೆ ತಿಂಗಳ ಹಿಂದೆ ಡಿಸೈನ್ ಬಾಕ್ಸ್ ಕಂಪನಿ ಜೊತೆಗಿನ ಒಪ್ಪಂದವನ್ನು ಡಿಕೆ ಶಿವಕುಮಾರ್ ರದ್ದು ಮಾಡಿದ್ದರು. ಇದನ್ನೂ ಓದಿ: ಬಿಎಸ್‍ವೈ ಆಪ್ತರ ಬಳಿ 765 ಕೋಟಿ ಅಕ್ರಮ ಆಸ್ತಿ
ಡಿಸೈನ್ ಬಾಕ್ಸ್ ಮೇಲಿನ ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಆ ಸಂಸ್ಥೆ ನನ್ನ ಸೋಷಿಯಲ್ ಮೀಡಿಯಾ ನೋಡಿಕೊಳ್ತಿರಲಿಲ್ಲ. ಅವರು ನನಗೆ ಸಹಾಯ ಮಾಡುತ್ತಿದ್ದರು. ನಿನ್ನೆ ನನ್ನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸಿದ್ದರು. ಕಂಪನಿ ವೃತ್ತಿಪರವಾಗಿದ್ದು ದಾಳಿಗೆ ಸಂಬಂಧಿಸಿದಂತೆ ಉತ್ತರ ಕೊಟ್ಟುಕೊಳ್ತಾರೆ ಎಂದು ತಿಳಿಸಿದರು.
– ಜಲಸಂಪನ್ಮೂಲ, ಹೆದ್ದಾರಿ ಕಾಮಗಾರಿಯಲ್ಲಿ ಅಕ್ರಮ – ಕ್ಲಾಸ್ ಒನ್ ಗುತ್ತಿಗೆದಾರರಿಂದ ಬೋಗಸ್ ಬಿಲ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಆಪ್ತ ಗುತ್ತಿಗೆದಾರರ ಮೇಲೆ ನಡೆದಿದ್ದ ಆದಾಯ ತೆರಿಗೆ ದಾಳಿ ವೇಳೆ 750 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ.
ಜಲಸಂಪನ್ಮೂಲ ಮತ್ತು ಹೆದ್ದಾರಿ ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದು, ಬೋಗಸ್ ಖರೀದಿ ಮತ್ತು ಕಾರ್ಮಿಕರ ಹೆಸರಲ್ಲಿ ಅಕ್ರಮ ನಡೆದಿದೆ. ಮೂರು ಬೃಹತ್ ಗುತ್ತಿಗೆದಾರರ ಕಂಪನಿಗಳಲ್ಲಿ ಅಪಾರ ನಗ-ನಗದು ಸೇರಿ ಒಟ್ಟು 750 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಐಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
40 ಮಂದಿ ಹೆಸರಲ್ಲಿ ಬೋಗಸ್ ಉಪ ಗುತ್ತಿಗೆ ನೀಡಲಾಗಿದ್ದು, ಈ 40 ಮಂದಿಯೂ ಅಕ್ರಮ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಯಡಿಯೂರಪ್ಪ ಆಪ್ತರಿಗೆ ಸಂಕಷ್ಟ ಫಿಕ್ಸ್ ಎಂದು ಹೇಳಲಾಗುತ್ತಿದೆ.
ಶೀಘ್ರವೇ ಭ್ರಷ್ಟರ ವಿಚಾರಣೆಯನ್ನು ಐಟಿ ಇಲಾಖೆ ಶುರು ಮಾಡಿಕೊಳ್ಳಲಿದೆ. ಕಳೆದ ವಾರ ಕ್ಲಾಸ್ ಒನ್ ಕಂಟ್ರಾಕ್ಟರ್ ಡಿ ವೈ ಉಪ್ಪಾರ್ ಕಂಪನಿ, ಗುತ್ತಿಗೆದಾರ ಸೋಮಶೇಖರ್, ರಾಹುಲ್ ಎಂಟರ್‍ಪ್ರೈಸಸ್ ಮನೆಗಳ ಮೇಲೆ ಐಟಿ ದಾಳಿ ನಡೆಸಿತ್ತು. ಅಲ್ಲದೆ ಯಡಿಯೂರಪ್ಪ, ವಿಜಯೇಂದ್ರಗೆ ಆಪ್ತನಾಗಿದ್ದ ಬಿಎಂಟಿಸಿ ಡ್ರೈವರ್ ಉಮೇಶ್ ಮನೆ ಮೇಲೂ ದಾಳಿ ಆಗಿತ್ತು. ನಾಲ್ಕು ರಾಜ್ಯಗಳ ಒಟ್ಟು 47 ಕಡೆಗಳಲ್ಲಿ ಐಟಿ ಇಲಾಖೆ ದಾಳಿ ನಡೆಸಿತ್ತು.
3 ಕಂಪನಿಗಳಿಂದ 750 ಕೋಟಿ ಅಕ್ರಮ
ಜಲಸಂಪನ್ಮೂಲ, ಹೆದ್ದಾರಿ ಕಾಮಗಾರಿಯಲ್ಲಿ 3 ಬೃಹತ್ ಗುತ್ತಿಗೆದಾರರಿಂದ ಭಾರೀ ಅಕ್ರಮ ನಡೆದಿದೆ. 3 ಕಂಪನಿಗಳ ಪೈಕಿ 750 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಪೈಕಿ ಒಂದೇ ಕಂಪನಿಯಿಂದ 487 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.
ಆರೋಪ ಏನು?
ಜಲಸಂಪನ್ಮೂಲ, ಹೆದ್ದಾರಿ ಕಾಮಗಾರಿ ಉಪ ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ. ಕಾರ್ಮಿಕರ ಹೆಸರಲ್ಲಿ ಬೋಗಸ್ ವೆಚ್ಚ ತೋರಿಸಲಾಗಿದೆ. 40 ಮಂದಿ ಹೆಸರಲ್ಲಿ ಬೋಗಸ್ ಉಪ ಗುತ್ತಿಗೆ ನೀಡಲಾಗಿದೆ. ಕ್ಲಾಸ್ ಒನ್ ಗುತ್ತಿಗೆದಾರರಿಂದ 382 ಕೋಟಿ ಅಕ್ರಮ ನಡೆದಿದ್ದು ಕಾರ್ಮಿಕರ ಹೆಸರಲ್ಲಿ 382 ಕೋಟಿ ವಂಚಿಸಲಾಗಿದೆ. ಅಸ್ತಿತ್ವದಲ್ಲಿಲ್ಲದ ಕಂಪನಿ ಜೊತೆಗೆ 105 ಕೋಟಿ ವ್ಯವಹಾರ ನಡೆದಿದೆ. ಇದನ್ನೂ ಓದಿ: ಮನೆಯಲ್ಲಿ ಐದು ಸದಸ್ಯರಿದ್ದರೂ ಒಂದೇ ಮತ ಪಡೆದ ಬಿಜೆಪಿ ಅಭ್ಯರ್ಥಿ
ಐಟಿ ದಾಳಿ ವೇಳೆ ಸಿಕ್ಕಿದ್ದೇನು?
ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ 4.69 ಕೋಟಿ ರೂಪಾಯಿ ನಗದು, 8.67 ಕೋಟಿ ರೂಪಾಯಿ ಚಿನ್ನಾಭರಣ, ಚಿನ್ನದ ಗಟ್ಟಿ ವಶ ಪಡಿಸಲಾಗಿದೆ. 29.83 ಲಕ್ಷ ಮೊತ್ತದ ಬೆಳ್ಳಿ ವಸ್ತುಗಳು ಸಿಕ್ಕಿವೆ.
ವಿಜಯಪುರ: ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಏನು ಸಂಬಂಧ ಎಂದು ವಸತಿ ಸಚಿವ ವಿ. ಸೋಮಣ್ಣ ಐಟಿ ರೇಡ್ ಸಮರ್ಥಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮೇಲನಲ್ಲಿ ಮಾತನಾಡಿದ ಅವರು, ಐಟಿ ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್‍ವೈ ಅವರಿಗೆ ಇದು ಸಂಬಂಧವಿಲ್ಲ. ಆಪ್ತರ ಮೇಲೆ ಐಟಿ ದಾಳಿ ಮಾಡಿದ್ರೇ ಬಿಎಸ್‍ವೈಗೆ ಏನು ಸಂಬಂಧ. ನನ್ನ ಆಪ್ತ ಮಾಡಿದ್ದರೆ ನನಗೇನು ಸಂಬಂಧ ಇರುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಯಾರದೋ ಮನೆಯಲ್ಲಿ ಏನೋ ಆದ್ರೇ ಬಿಎಸ್‍ವೈ ಅವರಿಗೇನು? ಐಟಿ ರೇಡ್ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ನಾನು ಬೆಂಗಳೂರಿಗೆ ಹೋದ ಬಳಿಕ ಈ ಕುರಿತು ಮಾಹಿತಿ ತಿಳಿದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಎರಡು ರಾಜ್ಯದ ಗುತ್ತಿಗೆದಾರರ ಮಧ್ಯೆ ಗಲಾಟೆ – ಬಿಎಸ್‌ವೈ ಪಿಎ ಮೇಲೆ ಐಟಿ ದಾಳಿ
ಯಡಿಯೂರಪ್ಪ ನಮ್ಮ ಪಕ್ಷದ ಪಕ್ಷಾತೀತ ನಾಯಕರು. ಕೆಲವು ನಿರ್ಧಾರವನ್ನು ಪಕ್ಷ ನಿರ್ಧಾರ ಮಾಡುತ್ತದೆ. ಆ ಪ್ರಕ್ರಿಯೆಗಳು ಅದರ ಪಾಡಿಗೆ ಆಗುತ್ತದೆ ಎಂದರು. ಎಚ್‍ಡಿ ಕುಮಾರಸ್ವಾಮಿ ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡುತ್ತಿರುವುದರ ಬಗ್ಗೆ ಮಾತನಾಡಿ, ಚುನಾವಣೆ ಗಿಮಿಕ್‍ಗಾಗಿ ಎಚ್‍ಡಿಕೆ ಆರ್‌ಎಸ್‌ಎಸ್ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಇತ್ತೀಚೆಗೆ ಮಾಜಿ ಸಿಎಂ ಎಚ್‍ಡಿಕೆ ಪುಸ್ತಕ ಓದುತ್ತಿದ್ದಾರೆ. ಪುಸ್ತಕ ಓದುವ ಮೂಲಕ ವಿವಿಧ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ವಿಜಯೇಂದ್ರ ಮಾಡಿದ ಭ್ರಷ್ಟಾಚಾರಕ್ಕೆ ಈ ದಾಳಿ ಸಾಕ್ಷಿ: ಎಚ್. ವಿಶ್ವನಾಥ್
ಬೆಂಗಳೂರು: ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗುತ್ತಿಗೆದಾರರ ನಡುವಿನ ಜಗಳವೇ ಬಿಎಸ್‌ವೈ ಪಿಎ ಮನೆ ಮೇಲೆ ಐಟಿ ದಾಳಿಗೆ ಮೂಲ ಕಾರಣ ಎಂಬ ವಿಚಾರ ಈಗ ತಿಳಿದು ಬಂದಿದೆ.
ಆರೋಪ ಏನು?
ನೀರಾವರಿ ಟೆಂಡರ್‌ಗಳನ್ನು ಬೇಕಾದವರಿಗೆ ಮಾಡಿಕೊಡುತ್ತಿದ್ದ ಉಮೇಶ್ ಬಳಿಕ ಕಮಿಷನ್ ರೂಪದಲ್ಲಿ ಕೋಟಿ ಕೋಟಿ ರೂ. ದುಡ್ಡು ಪಡೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಉಮೇಶ್ ಮೇಲೆ ಶಿವಮೊಗ್ಗ, ಬೆಂಗಳೂರಲ್ಲಿ ನೂರಾರು ಕೋಟಿ ಆಸ್ತಿ ಮಾಡಿರುವ ಆರೋಪವಿದೆ.
`ಎ’ ಗ್ರೇಡ್ ಟೆಂಡರ್‌ಗಳನ್ನು ಆಂಧ್ರ ಮೂಲದವರಿಗೆ ಸಿಗುವಂತೆ ಕೆಲಸ ಮಾಡುತ್ತಿದ್ದ ಉಮೇಶ್ ಕರ್ನಾಟಕದ ಗುತ್ತಿಗೆದಾರರಿಗೆ ಗುತ್ತಿಗೆ ತಪ್ಪಿಸುತ್ತಿದ್ದ. ಈ ವಿಚಾರದ ಬಗ್ಗೆ ಎರಡೂ ರಾಜ್ಯದ ಗುತ್ತಿಗೆದಾರ ಮಧ್ಯೆ ಗಲಾಟೆ ನಡೆಯುತ್ತಿತ್ತು. ತಿಕ್ಕಾಟ ಜೋರಾದ ಬಳಿಕ ರಾಜ್ಯದ 8 ಮಂದಿ ಗುತ್ತಿಗೆದಾರರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿನಿಂದ ಐಟಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಸಮಯ ನೋಡಿ ಈಗ ದಾಳಿ ನಡೆಸಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಕಾವೇರಿ ನೀರಾವರಿ ನಿಗಮ, ಕೃಷ್ಣ ಭಾಗ್ಯ ಜಲನಿಗಮದ ಟೆಂಡರ್‌ನಲ್ಲಿ ಗೋಲ್ಮಾಲ್ ಮಾಡಿದ್ದು, ಬಿಡುಗಡೆಯಾದ ಹಣಕ್ಕೂ, ಕಾಮಗಾರಿಯ ಹಣಕ್ಕೂ ಭಾರೀ ವ್ಯತ್ಯಾಸ ಕಂಡು ಬಂದಿದೆ. ಗುತ್ತಿಗೆದಾರರಿಗೆ ಕೊಟ್ಟಿರುವ ಹಣದ ಅಂಕಿ-ಅಂಶದಲ್ಲೂ ಏರುಪೇರು ಕಾಣಿಸಿದ್ದು, ಎರಡೂವರೆ ವರ್ಷದಲ್ಲಿ ಸಾವಿರಾರು ಕೋಟಿ ವ್ಯವಹಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ವಿಜಯೇಂದ್ರ ಮಾಡಿದ ಭ್ರಷ್ಟಾಚಾರಕ್ಕೆ ಈ ದಾಳಿ ಸಾಕ್ಷಿ: ಎಚ್. ವಿಶ್ವನಾಥ್
ಆರೋಪ ನಿಜ?
ಮಾಜಿ ಸಿಎಂ ಯಡಿಯೂರಪ್ಪನವರ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಪರಿಷತ್ ಸದಸ್ಯ ವಿಶ್ವನಾಥ್ ಅವರ ಆರೋಪ ನಿಜವಾಯ್ತಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಈ ಹಿಂದೆ ವಿಶ್ವನಾಥ್ ಅವರು ಬಿಎಸ್‍ವೈ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು. ನಾನು ಯಡಿಯೂರಪ್ಪನವರನ್ನು ಟಾರ್ಗೆಟ್ ಮಾಡುತ್ತಿಲ್ಲ. ಇದು ಟಾರ್ಗೆಟ್ ಕರೆಪ್ಶನ್. ಬಿಎಸ್‍ವೈ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿ ಅಕ್ರಮ ನಡೆದಿದೆ. 20 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಬೆಳಗಾವಿ ಮನೆ ಗೋಡೆ ಕುಸಿದು 7 ಮಂದಿ ಸಾವು- 2 ಲಕ್ಷ ರೂ. ಪರಿಹಾರ ಘೋಷಿಸಿದ ಮೋದಿ
ಆರ್ಥಿಕ ಇಲಾಖೆ ಮತ್ತು ನೀರಾವರಿ ನಿಗಮಗಳ ಒಪ್ಪಿಗೆ ಪಡೆಯದೇ ತರಾತುರಿಯಲ್ಲಿ ಟೆಂಡರ್ ಹಂಚಿಕೆ ಮಾಡಲಾಗಿದೆ. ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಅರುಣ್ ಸಿಂಗ್ ಬಳಿ ಹೇಳಿದ್ದೇನೆ. ನಾಯಕತ್ವ ಬದಲಾವಣೆ ಆಗಲೇಬೇಕು. ನಾಯಕತ್ವ ಬದಲಾವಣೆಗೆ ಕಾರಣ ಕೊಟ್ಟಿದ್ದೇನೆ ಎಂದು ಗಂಭೀರ ಆರೋಪ ಮಾಡಿದ್ದರು.
ನೀರಾವರಿ ಇಲಾಖೆಯಲ್ಲಿ ಡೀಲ್?
ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾಗಿದ್ದಾಗ ಡೀಲ್ ಆರೋಪ ಕೇಳಿ ಬಂದಿತ್ತು. ಉಮೇಶನ ಡೀಲ್‍ನಿಂದ ರೋಸಿ ಹೋಗಿದ್ದ ರಮೇಶ್ ಜಾರಕಿಹೊಳಿ ಬಿಎಸ್‍ವೈ, ವಿಜಯೇಂದ್ರ ಬಳಿಯೂ ಚರ್ಚಿಸಿದ್ದರು ಎಂದು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಐಟಿ ರೇಡ್ ಬಿಜೆಪಿಯ ಆಂತರಿಕ ಕಿತ್ತಾಟದಿಂದ ಬೆಳಕಿಗೆ ಬಂದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಸಿಎಂ ಬಿಎಸ್‍ವೈ ಹಾಗೂ ಡಿಕೆಶಿ ಆಪ್ತರ ಮೇಲೆ ಐಟಿ ದಾಳಿ ಸಂಬಂಧಿಸಿದಂತೆ ಕಲಬುರಗಿ ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಟಿ ದಾಳಿ ಬಗ್ಗೆ ನನಗೆ ಯಾವುದೇ ರೀತಿಯ ಪ್ರತಿಕ್ರಿಯೆ ಇಲ್ಲ. ಆದರೆ ಉಪಚುನಾಣೆ ಸಂದರ್ಭದಲ್ಲಿ ಐಟಿ ದಾಳಿ ಸರ್ವೇ ಸಾಮಾನ್ಯ. ಆದರೆ ಬಿಎಸ್‍ವೈ ಆಪ್ತರ ಮೇಲೆ ದಾಳಿ ನಡೆದಿರುವುದು ಕುತೂಹಲ ಮೂಡಿಸಿದೆ. ಇದರಿಂದ ಅವರ ಪಕ್ಷದಲ್ಲಿ ಆಂತರಿಕ ಕಚ್ಚಾಟ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ದೂರಿದರು. ಇದನ್ನೂ ಓದಿ: ಬಿಎಸ್‍ವೈ ಆಪ್ತನ ಮನೆ ಮೇಲೆ ಐಟಿ ರೇಡ್
ಉಪಚುನಾಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರು ಇವರು ನನಗೆ ಹೇಳೋಕೆ? ಅವರ ಯಾವ ಡೊಣ್ಣೆ ನಾಯಕ? ಅವರ ಪರ್ಮಿಷನ್ ತಗೋಂಡು ಅಭ್ಯರ್ಥಿ ಹಾಕಬೇಕಾ? ಎಲ್ಲಿ ಯಾವ ಅಭ್ಯರ್ಥಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸುತ್ತೇವೆ. ಅವರಿಗೆ ಪರಿಜ್ಞಾನ ಇದ್ದರೆ ನನ್ನ ಪಕ್ಷದ ಅಭ್ಯರ್ಥಿ ಬಗ್ಗೆ ಮಾತನಾಡಬಾರದು ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್ ಕುರಿತು ಎಚ್‍ಡಿ ದೇವೆಗೌಡರ ಹೇಳಿಕೆ ವಿಚಾರವಾಗಿ, ಸ್ವಾತಂತ್ರ ಪೂರ್ವದ ಆರ್‌ಎಸ್‌ಎಸ್ ಬೇರೆ, ಈಗಿನ ಆರ್‌ಎಸ್‌ಎಸ್ ಬೇರೆ. ಈಗಿನ ಆರ್‌ಎಸ್‌ಎಸ್ ದೇಶವನ್ನು ಹಾಳು ಮಾಡುವ ಸಂಘಟನೆ. ದೇವೆಗೌಡರು ಹೇಳಿದ್ದು ಆರ್‌ಎಸ್‌ಎಸ್ ಸ್ವಾತಂತ್ರ ಪೂರ್ವದ ಸಂಘಟನೆ ಬಗ್ಗೆ ಎಂದರು. ಇದನ್ನೂ ಓದಿ: ದಿಢೀರ್ ಆರ್‌ಎಸ್‌ಎಸ್ ವಿರುದ್ಧ ಎಚ್‌ಡಿಕೆ ಮುಗಿಬಿದ್ದಿದ್ದು ಯಾಕೆ?
ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಉಮೇಶ್ ಸಹಿತ 30ಕ್ಕೂ ಹೆಚ್ಚು ಕಾಂಟ್ರ್ಯಾಕ್ಟರ್ ಗಳ ಮನೆ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಯಾರು ಈ ಉಮೇಶ್?
ಬಿಎಂಟಿಸಿ ಕಂಡೆಕ್ಟರ್ ಆಗಿದ್ದ ಉಮೇಶ್ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ಆಪ್ತ ಸಹಾಯಕನಾಗಿ ಕಾರ್ಯನಿರ್ವಹಿಸಿದರು. ಬಳಿಕ ವಿಜಯೇಂದ್ರ ಹಾಗೂ ಬಿಎಸ್‍ವೈ ಇಬ್ಬರ ವ್ಯವಹಾರಗಳನ್ನು ಉಮೇಶ್ ನೋಡಿಕೊಳ್ಳುತ್ತಿದ್ದರು. ಮೂಲತಃ ಶಿವಮೊಗ್ಗ ಜಿಲ್ಲೆ ಆಯನೂರಿನವರಾಗಿರುವ ಉಮೇಶ್, ಬಿಎಸ್‍ವೈ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. 2008ರಲ್ಲಿ ಬಿಎಸ್‍ವೈ ಸಿಎಂ ಆಗಿದ್ದಾಗ ಸಿಎಂ ಆಪ್ತ ಶಾಖೆಯಲ್ಲಿ ಕೆಲಸ ಮಾಡಿದ್ದ ಬಳಿಕ ಅಧಿಕಾರ ಕಳೆದುಕೊಂಡರೂ ಬಿಎಸ್‍ವೈ ನಂಟು ಬಿಟ್ಟೇ ಇರಲಿಲ್ಲ. ಬಿಎಸ್‍ವೈ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದರು. ಬಿಎಸ್‍ವೈ ಎಲ್ಲಾ ಆಪ್ತ ಖಾಸಗಿ ಕೆಲಸಗಳನ್ನು ನಿರ್ವಹಿಸುತ್ತಿದ್ದ ಉಮೇಶ್ ಇದೀಗ ಬಿಎಸ್‍ವೈ ರಾಜೀನಾಮೆ ಬಳಿಕ ಹಾಲಿ ಸಿಎಂ ಕಚೇರಿಯಲ್ಲಿ ಸಹಾಯಕನಾಗಿ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ
ಸಿಎಂ ಆಪ್ತ ಸಹಾಯಕನಾದ್ರೂ ಬಿಎಸ್‍ವೈ ಮನೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದು, ಯಡಿಯೂರಪ್ಪ ವಿಧಾನಸಭೆ ವಿಪಕ್ಷ ನಾಯಕರಾದಾಗಿಂದಲೂ ಜೊತೆಗೆ ಇರುವ ಉಮೇಶ್ ಶಿವಮೊಗ್ಗ, ಬೆಂಗಳೂರಿನಲ್ಲಿ ನೂರಾರು ಕೋಟಿ ಆಸ್ತಿ ಮಾಡಿರುವ ಆರೋಪ ಕೇಳಿ ಬಂದಿದ್ದು, ವಿಜಯನಗರದಲ್ಲಿ ಒಂದು ಭವ್ಯ ಮನೆಯ ನಿರ್ಮಾಣ ಮಾಡುತ್ತಿರುವ ಉಮೇಶ್ ಅವರ ಮೇಲೆ ಐಟಿ ರೇಡ್ ಆಗಿದೆ.
ಉಮೇಶ್ ಸಹಿತ 6 ಜನ ಆಪ್ತರ ಮೇಲೂ ದಾಳಿ ನಡೆದಿದ್ದು, ಉಮೇಶ್ ಸ್ನೇಹಿತ ಗುತ್ತಿಗೆದಾರ ಮನೆ ಮೇಲೂ ದಾಳಿ ನಡೆದಿದ್ದು, 30ಕ್ಕೂ ಹೆಚ್ಚು ಸರ್ಕಾರಿ ಕಾಂಟ್ರ್ಯಾಕ್ಟರ್ ಗಳ ಮನೆ ಮೇಲೆ ದಾಳಿ ನಡೆದಿದೆ. ನೀರಾವರಿ ಇಲಾಖಡ ಸಹಿತ ಕೆಲ ಕಾಂಟ್ರ್ಯಾಕ್ಟರ್ ಗಳ ಮನೆ ಮೇಲೆ ಐಟಿ ರೇಡ್ ಆಗಿದ್ದು, ಎಲ್ಲರೂ ಕೂಡ ಬಿಎಸ್‍ವೈಗೆ ಆಪ್ತರಾಗಿದ್ದರು. ಇದನ್ನೂ ಓದಿ: 2023ರಲ್ಲೂ ಬೊಮ್ಮಾಯಿ ಸಿಎಂ ಆಗಿ ದಸರಾ ಉದ್ಘಾಟಿಸಲಿದ್ದಾರೆ: ಪ್ರತಾಪ್ ಸಿಂಹ
ಮುಂಬೈ: ಬಾಲಿವುಡ್ ನಟ ಸೋನು ಸೂದ್ 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಸತತ ಮೂರು ದಿನಗಳ ಕಾಲ ಸೋನು ಅವರ ಮನೆ, ಕಚೇರಿಗಳ ಮೇಲೆ ಸಮೀಕ್ಷೆ ನಡೆಸಿದ ಐಟಿ ಅಧಿಕಾರಿಗಳು, ನಟನಿಗೆ ಸಂಬಂಧಿಸಿದ ನಾನ್ ಪ್ರಾಫಿಟ್ ಸಂಸ್ಥೆಯು, 2.1 ಕೋಟಿಗಳನ್ನು ವಿದೇಶಿ ಮೂಲಗಳಿಂದ ಸಂಗ್ರಹಿಸಿದೆ ಎಂದಿದೆ. ಇದು ಸರ್ಕಾರದ ವಿದೇಶಿ ಹಣ ಸ್ವೀಕಾರದ ಕಾನೂನಿಗೆ ವಿರುದ್ಧವಾಗಿದೆ ಎಂದು ಇಲಾಖೆ ತಿಳಿಸಿದೆ.
During the course of search at the premises of the actor &his associates, incriminating evidence pertaining to tax evasion found. The main modus operandi followed by the actor had been to route his unaccounted income in form of bogus unsecured loans from many bogus entities: CBDT
ಮನೆಯ ಮೇಲಿನ ಸಮೀಕ್ಷೆಯ ವೇಳೆ ಅವರು ತಮ್ಮ ಸಹವರ್ತಿಗಳೊಂದಿಗೆ ಕೂಡಿ ತೆರಿಗೆ ವಂಚನೆ ನಡೆಸಿದ್ದರ ಕುರಿತು ಸಾಕ್ಷ್ಯಗಳು ಪತ್ತೆಯಾಗಿವೆ. ಇದರಲ್ಲಿ ಮುಖ್ಯವಾಗಿ ಲೆಕ್ಕವಿಲ್ಲದ ಆದಾಯವನ್ನು ನಕಲಿ ಸಂಸ್ಥೆಗಳ ಮೂಲಕ ಸಾಗಿಸಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ. ಐಟಿ ಇಲಾಖೆಯು ಸೋನು ಸೂದ್ ಹಾಗೂ ಲಕ್ನೋ ಮೂಲದ ಸಂಸ್ಥೆಯೊಂದರ ಮೇಲೆ ಸಮೀಕ್ಷೆ ನಡೆಸಿತ್ತು.ಇದಕ್ಕೆ ಸಂಬಂಧಪಟ್ಟಂತೆ, ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ, ಗುರುಗ್ರಾಮಗಳಲ್ಲಿ ಶೋಧ ನಡೆಸಲಾಗಿತ್ತು ಎಂದು ಕೇಂದ್ರ ಆದಾಯ ತೆರಿಗೆ ಮಂಡಳಿ ತಿಳಿಸಿದೆ.
The total amount of tax evaded unearthed so far, amounts to more than Rs 20 crore: Central Board of Direct Taxes (CBDT)
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಕಷ್ಟಪಡುತ್ತಿರುವವರಿಗೆ ಸಹಾಯ ಮಾಡಿದ ಪ್ರಯತ್ನಗಳು ಭಾರೀ ಪ್ರಶಂಸೆಯನ್ನುಗಳಿಸಿತ್ತು. ಆದರೆ ಕಳೆದ ವರ್ಷ ಜುಲೈನಲ್ಲಿ ಕೋವಿಡ್ ಮೊದಲ ಅಲೆಯಲ್ಲಿ ಸ್ಥಾಪಿಸಲಾದ ಅವರ ಲಾಭರಹಿತ ಸೂದ್ ಚಾರಿಟಿ ಫೌಂಡೇಶನ್ 18 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿದೆ. ಈ ವರ್ಷದ ಏಪ್ರಿಲ್ ವರೆಗೆ, ಅದರಲ್ಲಿ 1.9 ಕೋಟಿ ಪರಿಹಾರ ಕಾರ್ಯಕ್ಕಾಗಿ ಖರ್ಚು ಮಾಡಿದೆ. ಉಳಿದ 17 ಕೋಟಿ ಹಣ ಲಾಭರಹಿತ ಬ್ಯಾಂಕ್ ಖಾತೆಯಲ್ಲಿ ಬಳಕೆಯಾಗದೆ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋನು ಸೂದ್ ಅವರ ಕಂಪನಿ ಮತ್ತು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವಿನ ಇತ್ತೀಚಿನ ಒಪ್ಪಂದದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಪ್ಪಂದದ ಆಧಾರದ ಮೇಲೆ ತೆರಿಗೆ ವಂಚನೆಯ ಆರೋಪದ ಕುರಿತು ಸಮೀಕ್ಷೆ ನಡೆಸಲಾಗಿದೆ.
ಲಕ್ನೋದ ಸಂಸ್ಥೆಯಲ್ಲಿ ಸೋನು ಸೂದ್ ಅಕ್ರಮ ಹಣವನ್ನು ಹೂಡಿದ್ದಾರೆ. ಈ ಕುರಿತು ಸಾಕ್ಷಾಧಾರಗಳು ಲಭ್ಯವಾಗಿವೆ. ಜೊತೆಗೆ ಲಕ್ನೋದ ಕಂಪೆನಿಯು 65 ಕೋಟಿಗೂ ಅಧಿಕ ಬೋಗಸ್ ಕಾಂಟ್ರಾಕ್ಟ್ ಪಡೆದಿದೆ. ಹೆಚ್ಚಿನ ತನಿಖೆ ನಡೆದಿದೆ ಎಂದು ಮಾಹಿತಿ ನೀಡಲಾಗಿದೆ.
ಬೀಜಿಂಗ್: ತೆರಿಗೆ ವಂಚನೆ ಎಸಗಿದ್ದಕ್ಕೆ ಚೀನಾದ ಖ್ಯಾತ ನಟಿಗೆ 299 ದಶಲಕ್ಷ ಯುವಾನ್(340 ಕೋಟಿ ರೂ.) ದಂಡವನ್ನು ವಿಧಿಸಲಾಗಿದೆ.
2019-20ರ ಅವಧಿಯಲ್ಲಿ ತೆರಿಗೆ ಉಲ್ಲಂಘಿಸಿದ್ದಕ್ಕೆ 30 ವರ್ಷ ನಟಿ ಜೆಂಗ್ ಶುವಾಂಗ್‍ಗೆ ಶಾಂಘೈಯ ತೆರಿಗೆ ಅಧಿಕಾರಿಗಳು 299 ದಶಲಕ್ಷ ಯುವಾನ್ ದಂಡವನ್ನು ವಿಧಿಸಿದ್ದಾರೆ.
ಸಿನಿಮಾದಲ್ಲಿ ನಟಿಸಿದ್ದ ಜೆಂಗ್ ಶುವಾಂಗ್ ಭಾರೀ ಮೊತ್ತವನ್ನು ಪಡೆದಿದ್ದರೂ ಈ ವಿಚಾರವನ್ನು ಮುಚ್ಚಿಟ್ಟಿದ್ದರು. ಈ ವಿಚಾರವನ್ನು ನಟಿಯ ಮಾಜಿ ಗಂಡ ಬಹಿರಂಗ ಪಡಿಸಿದ ಬೆನ್ನಲ್ಲೇ ತನಿಖೆ ನಡೆಸಿದ ಅಧಿಕಾರಿಗಳು ಭಾರೀ ಪ್ರಮಾಣದ ದಂಡವನ್ನು ವಿಧಿಸಿದ್ದಾರೆ.
ಚೀನಾದ ಸೈಬರ್ ನಿಯಂತ್ರಕ ಶುಕ್ರವಾರ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದ್ದು, ಸೆಲೆಬ್ರಿಟಿಗಳ ಶ್ರೇಯಾಂಕ ಪಟ್ಟಿಗಳನ್ನು ನಿಷೇಧಿಸಿದೆ. ಅಷ್ಟೇ ಅಲ್ಲದೇ ಸೆಲೆಬ್ರಿಟಿ ಫ್ಯಾನ್ ಕ್ಲಬ್ ಮತ್ತು ಮ್ಯಾನೇಜ್‍ಮೆಂಟ್ ಏಜೆನ್ಸಿಗಳ ಮೇಲೂ ಬಿಗಿ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದೆ.
ನವದೆಹಲಿ: ಇ-ಫೈಲಿಂಗ್ ಪೋರ್ಟಲ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಪರಿಹಾರವಾಗದ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟನ್ ಲೋಕಾರ್ಪಣೆಗೊಂಡು 2.5 ತಿಂಗಳು ಕಳೆದರೂ ಅದರಲ್ಲಿನ ತಾಂತ್ರಿಕ ದೋಷಗಳು ಇನ್ನೂ ಸರಿಯಾಗದ ಹಿನ್ನೆಲೆಯಲ್ಲಿ ಜನರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದನ್ನೂ ಓದಿ: 107 ಭಾರತೀಯರು ಸೇರಿ ಅಫ್ಘಾನಿಸ್ತಾನದಿಂದ 168 ಜನರ ಆಗಮನ
ಆದಾಯ ತೆರಿಗೆ ಸಲ್ಲಿಕೆಯ ನೂತನ ಇ-ಫೈಲಿಂಗ್ ಪೋರ್ಟಲ್ ಅಭಿವೃದ್ಧಿಪಡಿಸಿದ ಇಸ್ಫೋಸಿಸ್ ಸಂಸ್ಥೆಗೆ 2019ರ ಜನವರಿಯಿಂದ 2021ರ ಜೂನ್‍ವರೆಗೆ 164.5 ಕೋಟಿ ರೂ. ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿತ್ತು.
Ministry of Finance has summoned Sh Salil Parekh,MD&CEO @Infosys on 23/08/2021 to explain to hon'ble FM as to why even after 2.5 months since launch of new e-filing portal, glitches in the portal have not been resolved. In fact,since 21/08/2021 the portal itself is not available.
ಈ ಸಂಬಂಧ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದ ಆರ್ಥಿಕ ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ಎಂಎಸ್‍ಪಿ, ಜಿಎಸ್‍ಟಿ, ಬಾಡಿಗೆ,ಪೋಸ್ಟೇಜ್ ಮತ್ತು ಯೋಜನೆ ವ್ಯವಸ್ಥಾಪನೆಯ ವೆಚ್ಚಕ್ಕೆ ಸಂಬಂಧಿಸಿದ 4,241.97 ಕೋಟಿ ರೂ. ವೆಚ್ಚದ ಸಮಗ್ರ ಇ-ಫೈಲಿಂಗ್ ಮತ್ತು ಸಿಪಿಸಿ-2.0 ಯೋಜನೆಯನ್ನು ಇಸ್ಫೋಸಿಸ್‍ಗೆ ವಹಿಸಲಾಗಿತ್ತು. ಈ ಪ್ರಕಾರ ಇದೇ ವರ್ಷದ ಜೂ.7ರಂದು ನೂತನ ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್ ಲೋಕಾರ್ಪಣೆಯಾಗಿತ್ತು.
ಹೊಸ ತಲೆಮಾರಿನ ಆದಾಯ ತೆರಿಗೆ ಪಾವತಿ ಸಲ್ಲಿಸುವ ವೆಬ್‍ಸೈಟ್ ತೆರೆಯಲು 2019ರಲ್ಲಿ ಇನ್ಫೋಸಿಸ್ ಈ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಐಟಿ ರಿಟರ್ನ್ಸ್ ಸಲ್ಲಿಕೆಯಾದ 63 ದಿನಗಳ ಬಳಿಕ ರಿಫಂಡ್ ಆಗುವುದನ್ನು ತಪ್ಪಿಸಿ ಒಂದೇ ದಿನಕ್ಕೆ ರಿಟರ್ನ್ ಪ್ರಕ್ರಿಯೆ ಪೂರ್ಣಗೊಳಿಸಿ ಬಹಳ ಬೇಗ ಮರು ಪಾವತಿ ಮಾಡುವಂತೆ ವೆಬ್‍ಸೈಟ್ ಸಿದ್ಧಪಡಿಸಬೇಕೆಂಬ ಷರತ್ತು ವಿಧಿಸಲಾಗಿತ್ತು.
– ರಾಜ್ಯಾದ್ಯಂತ 107 ಕಡೆ ಐಟಿ ದಾಳಿ – ನರ್ಸಿಂಗ್ ಪ್ರವೇಶಾತಿ, ಕೋವಿಡ್ ಬಿಲ್ ಬಗ್ಗೆ ಅನುಮಾನ
ಬೆಂಗಳೂರು: 2 ವರ್ಷದ ಬಳಿಕ ರಾಜ್ಯದಲ್ಲಿ ಅತಿ ದೊಡ್ಡ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದಿದೆ. ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ಒಟ್ಟು 107 ಕಡೆ ದಾಳಿಯಾಗಿದೆ.
ರಾಜ್ಯದ 20 ಆಸ್ಪತ್ರೆಗಳು ಸೇರಿ 107 ಕಡೆ ಏಕ ಕಾಲದಲ್ಲಿ ದಾಳಿಯಾಗಿದೆ. ನರ್ಸಿಂಗ್ ಪ್ರವೇಶಾತಿ ಅಕ್ರಮ, ಕೊರೊನಾ ಚಿಕಿತ್ಸೆ ಸಮಯದಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಕೇಳಿ ಬಂದಿರುವ ಆಕಾಶ್ ಆಸ್ಪತ್ರೆ, ಸಪ್ತಗಿರಿ ಆಸ್ಪತ್ರೆ ಮೇಲೆ ಐಟಿ ದಾಳಿ ಮಾಡಲಾಗಿದೆ.
ಆಕಾಶ್ ಆಸ್ಪತ್ರೆಯಲ್ಲಿ ಬೆಳಗ್ಗೆ 5:30ಕ್ಕೆ ದಾಳಿ ಮಾಡಿದ್ದು, ಎಂಟು ಇನ್ನೊವಾಕಾರಿನಲ್ಲಿ ಬಂದ25 ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಆಕಾಶ್ ಹಾಸ್ಪಿಟಲ್ ಮಾಲೀಕ ಮುನಿಯಪ್ಪ ಅವರ ಸಹಕಾರನಗರ ಮನೆ, ಕಚೇರಿ ಹಾಗೂ ಮಗ ಅಮರ್ ಮನೆ ಕಚೇರಿ ಮೇಲೆ ದಾಳಿ ಮಾಡಲಾಗಿದೆ.
ಮಲ್ಲೇಶ್ವರಂನಲ್ಲಿರುವ ಸಪ್ತಗಿರಿ ಆಸ್ಪತ್ರೆ ಮಾಲೀಕ ದಯಾನಂದ್ ಮನೆ ಮೇಲೂ ದಾಳಿ ಮಾಡಲಾಗಿದೆ. ಮೊನ್ನೆಯಷ್ಟೆ ಆಕಾಶ್ ಆಸ್ಪತ್ರೆ ಮಾಲೀಕನ ಮಗ ಅಮರ್ ನಿಶ್ಚಿತಾರ್ಥ ನೆರವೇರಿತ್ತು. ಈಗ ಐಟಿ ಬಿಸಿ ಮುಟ್ಟಿದೆ. ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜು ಮೇಲೆ ಸಹ ಐಟಿ ದಾಳಿಯಾಗಿದೆ. ಸಪ್ತಗಿರಿ ಆಸ್ಪತ್ರೆ ಮಾಲೀಕ ದಯಾನಂದ್ ಒಡೆತನದಲ್ಲಿರುವ ಹೆಸರುಘಟ್ಟ ಮುಖ್ಯ ರಸ್ತೆಯಲ್ಲಿರುವ ಎಂಜಿನಿಯರಿಂಗ್ ಕಾಲೇಜ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.
ನರ್ಸಿಂಗ್ ಪ್ರವೇಶಾತಿ, ಕೋವಿಡ್ ಬಿಲ್ಲಿಂಗ್ ವಿಚಾರದ ಅನುಮಾನದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿರುವ ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಕೋಟ್ಯಂತರ ರೂ. ಆದಾಯ ತೆರಿಗೆ ವಂಚನೆ ಮಾಡಿರುವ ಆರೋಪದಡಿಯಲ್ಲಿ ಆಸ್ಪತ್ರೆಗಳ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.