Tag: income tax

  • ಮಧ್ಯಮ ವರ್ಗದರಿಗೆ ಬಂಪರ್‌ – 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ

    ಮಧ್ಯಮ ವರ್ಗದರಿಗೆ ಬಂಪರ್‌ – 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ

    ನವದೆಹಲಿ: ಮಧ್ಯಮ ವರ್ಗದವರಿಗೆ ಬಜೆಟ್‌ನಲ್ಲಿ (Union Budget 2023) ಬಂಪರ್‌ ಘೋಷಣೆ ಮಾಡಿದ್ದು ವಾರ್ಷಿಕ 7 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಏರಿಕೆ ಮಾಡಲಾಗಿದೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಬಜೆಟ್‌ ನಲ್ಲಿ ವಿನಾಯಿತಿ ಘೋಷಣೆ ಮಾಡುತ್ತಿದ್ದಂತೆ ಸರ್ಕಾರದ ಪರ ಸಚಿವರು, ಸಂಸದರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮೊದಲು ವಾರ್ಷಿಕ 5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಸಿಕ್ಕಿತ್ತು.

    ನಿರ್ಮಲಾ ಸೀತಾರಾಮನ್‌ ಹೊಸ ಸ್ಲ್ಯಾಬ್‌ ದರವನ್ನು ಪ್ರಕಟಿಸಿದ್ದಾರೆ.

    ಯಾವುದಕ್ಕೆ ಎಷ್ಟು?
    0-3 ಲಕ್ಷ ರೂ. – ಇಲ್ಲ
    3- 6 ಲಕ್ಷ ರೂ. – 5%

    6- 9 ಲಕ್ಷ ರೂ. – 10%
    9-12 ಲಕ್ಷ ರೂ. – 15%

    12-15 ಲಕ್ಷ ರೂ. 20%
    15 ಲಕ್ಷ ರೂ. 30%

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಿನ 25ಕ್ಕೂ ಹೆಚ್ಚು ಜ್ಯುವೆಲ್ಲರಿ ಶಾಪ್‌ಗಳ ಮೇಲೆ ಐಟಿ ದಾಳಿ

    ಬೆಂಗಳೂರಿನ 25ಕ್ಕೂ ಹೆಚ್ಚು ಜ್ಯುವೆಲ್ಲರಿ ಶಾಪ್‌ಗಳ ಮೇಲೆ ಐಟಿ ದಾಳಿ

    ಬೆಂಗಳೂರು: ಸಿಲಿಕಾನ್‌ ಸಿಟಿಯ ಚಿನ್ನದ (Gold) ವ್ಯಾಪಾರಿಗಳ ಮನೆ,  ಜ್ಯುವೆಲ್ಲರಿ ಶಾಪ್‌ಗಳ (Jewellery Shop) ಮೇಲೆ ಆದಾಯ ತೆರಿಗೆ (Income Tax) ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

    ಜಯನಗರ, ಯಶವಂತಪುರ, ಬಸವನಗುಡಿ, ಚಿಕ್ಕಪೇಟೆ ಸೇರಿದಂತೆ ನಗರದ 25ಕ್ಕೂ ಹೆಚ್ಚು ಜ್ಯುವೆಲ್ಲರಿ ಶಾಪ್‌ಗಳ ಮೇಲೆ ದಾಳಿ ನಡೆದಿದೆ. ಇದನ್ನೂ ಓದಿ: ವಿರೋಧದ ನಡುವೆಯೂ ರಾತ್ರೋರಾತ್ರಿ ಬಸವೇಶ್ವರ ಪುತ್ಥಳಿ ತೆರವು

    ತೆರಿಗೆ ವಂಚನೆ ಮಾಡಿ ವ್ಯಾಪಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.

    ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುವ ಮಾಲೀಕರು, ತೆರಿಗೆ ವಂಚನೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ಪ್ರಾಥಮಿಕ ತನಿಖೆ ನಡೆಸಿದ್ದ ಅಧಿಕಾರಿಗಳು, ಯಾವ್ಯಾವ ವ್ಯಾಪಾರಿಗಳಿಗೆ ಎಷ್ಟು ಚಿನ್ನದ ಮಳಿಗೆಗಳಿವೆ? ಅವರ ತಿಂಗಳ ಒಟ್ಟು ವ್ಯವಹಾರ ಎಷ್ಟು? ಒಟ್ಟು ಅಸ್ತಿ ಮೌಲ್ಯವೆಷ್ಟು ಎನ್ನುವುದನ್ನು ಪರಿಶೀಲನೆ ನಡೆಸಿದರು.

    ಈ ವೇಳೆ ಚಿನ್ನದ ವ್ಯಾಪಾರಿ ಗಳು ದೊಡ್ಡ ಮಟ್ಟದಲ್ಲಿ ತೆರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಹಾಗಾಗಿ ಅಂತಹ ಚಿನ್ನದ ಅಂಗಡಿಗಳು, ವ್ಯಾಪಾರಿ ಗಳನ್ನು ಪಟ್ಟಿ ಮಾಡಿ ಇಂದು ದಾಳಿ ನಡೆಸಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 50 ಕೋಟಿ ಮೌಲ್ಯದ ಫ್ಲಾಟ್‌, 2.17 ಕೋಟಿಯ ಕಾರು, 80 ಲಕ್ಷದ ಬೈಕ್ – ರಾಹುಲ್ ದಂಪತಿಗೆ ದುಬಾರಿ ಉಡುಗೊರೆ

    50 ಕೋಟಿ ಮೌಲ್ಯದ ಫ್ಲಾಟ್‌, 2.17 ಕೋಟಿಯ ಕಾರು, 80 ಲಕ್ಷದ ಬೈಕ್ – ರಾಹುಲ್ ದಂಪತಿಗೆ ದುಬಾರಿ ಉಡುಗೊರೆ

    ಮುಂಬೈ: ಬಾಲಿವುಡ್ ತಾರೆ ಅಥಿಯಾ ಶೆಟ್ಟಿ (Athiya Shetty) ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ (KL Rahul) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಈ ಚೆಂದದ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿವೆ.

    ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel shetty) ಅವರ ಬಂಗಲೆಯಲ್ಲಿ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದೆ. ಈ ಸಂಭ್ರಮಕ್ಕೆ ಇಡೀ ಬಾಲಿವುಡ್ ಚಿತ್ರರಂಗ ಸಾಕ್ಷಿಯಾಗಿದೆ. ಆದರೀಗ ಕೆ.ಎಲ್.ರಾಹುಲ್ ಹಾಗೂ ಅಥಿಯಾ ದಂಪತಿಗೆ ಸಹಪಾಠಿಗಳು ಹಾಗೂ ಸೆಲೆಬ್ರಿಟಿಗಳು ನೀಡಿರುವ ದುಬಾರಿ ಉಡುಗೊರೆಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ: `ಝೀಬ್ರಾ’ಗಾಗಿ ಸತ್ಯದೇವ್‌ಗೆ ಸಾಥ್ ಕೊಟ್ಟ ಧನಂಜಯ್

    ಕೋಟಿ-ಕೋಟಿ ಮೌಲ್ಯದ ಉಡುಗೊರೆ: ಅಥಿಯಾ-ಕೆ.ಎಲ್ ರಾಹುಲ್ ದಂಪತಿಗಾಗಿ ನಟ ಸುನೀಲ್ ಶೆಟ್ಟಿ 50 ಕೋಟಿ ಮೌಲ್ಯದ ಫ್ಲಾಟ್ ಉಡುಗೊರೆಯಾಗಿ ನೀಡಿದ್ರೆ, ಸಲ್ಮಾನ್ ಖಾನ್ (Salman Khan) ಅಥಿಯಾಗೆ 1.64 ಕೋಟಿ ಮೌಲ್ಯದ ಐಷಾರಾಮಿ ಆಡಿ ಕಾರನ್ನ ಗಿಫ್ಟ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ ನಟ ಜಾಕಿ ಶ್ರಾಫ್ ವಧುವಿಗೆ 30 ಲಕ್ಷ ಮೌಲ್ಯದ ಚೋಪರ್ಡ್ ವಾಚ್ ಹಾಗೂ ಅರ್ಜುನ್ ಕಪೂರ್ 1.5 ಕೋಟಿ ಮೌಲ್ಯದ ವಜ್ರದ ಬಳೆಗಳನ್ನ ನೀಡಿದ್ದಾರೆ. ಇನ್ನೂ ಕೆ.ಎಲ್. ರಾಹುಲ್‌ಗೆ ಟೀಂ ಇಂಡಿಯ ಮಾಜಿ ನಾಯಕರಾದ ವಿರಾಟ್ ಕೊಹ್ಲಿ (Virat Kohli) 2.17 ಕೋಟಿ ಮೌಲ್ಯದ ಬಿಎಂಡಬ್ಲ್ಯೂ (BMW) ಕಾರು ನೀಡಿದ್ರೆ, ಎಂ.ಎಸ್ ಧೋನಿ (MS Dhoni) 80 ಲಕ್ಷ ಮೌಲ್ಯದ ಕವಾಸಕಿ ನಿಂಜಾ ಬೈಕ್ ಅನ್ನ ಉಡುಗೊರೆಯಾಗಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪುತ್ರಿ ಅಥಿಯಾ- ರಾಹುಲ್‌ ಮದುವೆಗೆ ದುಬಾರಿ ಉಡುಗೊರೆ ನೀಡಿದ ಸುನೀಲ್ ಶೆಟ್ಟಿ

    ಮದುವೆ ಉಡುಗೊರೆಗೆ ತೆರಿಗೆಯಿಲ್ಲ: ಯಾವುದೇ ಉಡುಗೊರೆಗಳು 50 ಸಾವಿರ ಮೌಲ್ಯದ ಮಿತಿ ಮೀರಿದರೆ ತೆರಿಗೆಗೆ ಒಳಪಡುತ್ತವೆ. ಆದರೆ ಮದುವೆ ಸಂದರ್ಭದಲ್ಲಿ ಇದು ಅನ್ವಯಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಪುತ್ರಿ ಅಥಿಯಾ- ರಾಹುಲ್‌ ಮದುವೆಗೆ ದುಬಾರಿ ಉಡುಗೊರೆ ನೀಡಿದ ಸುನೀಲ್ ಶೆಟ್ಟಿ

    ಪುತ್ರಿ ಅಥಿಯಾ- ರಾಹುಲ್‌ ಮದುವೆಗೆ ದುಬಾರಿ ಉಡುಗೊರೆ ನೀಡಿದ ಸುನೀಲ್ ಶೆಟ್ಟಿ

    ಮದುವೆ ವಾಣಿಜ್ಯ ಉಡುಗೊರೆಗಳಿಂದ ವಿನಾಯ್ತಿ ಪಡೆಯುವ ಏಕೈಕ ಸಂದರ್ಭವಾಗಿದೆ. ಮದುವೆ ಸಮಾರಂಭದ ಹೊರತಾಗಿ ಯಾವುದೇ ಸಂದರ್ಭದಲ್ಲೂ ಉಡುಗೊರೆ ಪಡೆಯುವುದು ತೆರಿಗೆಗೆ ಅರ್ಹವಾಗುತ್ತದೆ. ಕೆ.ಎಲ್. ರಾಹುಲ್ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ಮದುವೆಯಲ್ಲಿ ಉಡುಗೊರೆ ಪಡೆದಿದ್ದಾರೆ. ಆದ್ದರಿಂದ ಇದಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರು ನಗರದ ಸಂಬಳದಾರರ ಮನೆ ಬಾಡಿಗೆ ಭತ್ಯೆ ಶೇ.50 ಹೆಚ್ಚಳಕ್ಕೆ ತೇಜಸ್ವಿ ಸೂರ್ಯ ಮನವಿ

    ಬೆಂಗಳೂರು ನಗರದ ಸಂಬಳದಾರರ ಮನೆ ಬಾಡಿಗೆ ಭತ್ಯೆ ಶೇ.50 ಹೆಚ್ಚಳಕ್ಕೆ ತೇಜಸ್ವಿ ಸೂರ್ಯ ಮನವಿ

    ಬೆಂಗಳೂರು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು(Bengaluru) ನಗರದ ಸಂಬಳದಾರರ ಮನೆ ಬಾಡಿಗೆ ಭತ್ಯೆಯನ್ನು(HRA) ಶೇ. 50ಕ್ಕೆ ಹೆಚ್ಚಳ ಮಾಡುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ(Tejasvi Surya) ಮನವಿ ಮಾಡಿದ್ದಾರೆ.

    ಲೋಕಸಭೆಯ(Lok Sabha) ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತಂದು ಪ್ರಸ್ತುತ ಶೇ. 40 ರಷ್ಟು ಇರುವ ಮನೆ ಬಾಡಿಗೆ ಭತ್ಯೆಯನ್ನು ಶೇ.50 ಕ್ಕೆ ಏರಿಸಬೇಕು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇತರ ಸಮನಾದ ನಗರಗಳ ಪಟ್ಟಿಗೆ ಬೆಂಗಳೂರನ್ನು ಸೇರ್ಪಡೆಗೊಳಿಸುವ ಮೂಲಕ ಮಧ್ಯಮ ವರ್ಗದ ಸಂಬಳದಾರರ ಹಿತಾಸಕ್ತಿ ಕಾಯುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದಾರೆ.

    ತೇಜಸ್ವಿ ಸೂರ್ಯ ಮನವಿ ಏನು?
    ಬೆಂಗಳೂರು ಮಹಾನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅತ್ಯಂತ ಪ್ರಮುಖ ನಗರವಾಗಿದ್ದು, ಸಂಬಳದಾರ ವರ್ಗವು ಅತಿ ಹೆಚ್ಚು ವಾಸಿಸುವ ದೇಶದ ಮುಖ್ಯ ನಗರವಾಗಿದೆ . ದೆಹಲಿ, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾ ಗಳ ಸಾಲಿಗೆ ಬೆಂಗಳೂರನ್ನು ಕೂಡ ಸೇರಿಸಿದಲ್ಲಿ, ನಗರದ ಮಧ್ಯಮ ವರ್ಗದ ಸಂಬಳದಾರ ವರ್ಗದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ.. ಆದಾಯ ತೆರಿಗೆ ನಿಯಮಾವಳಿಗಳನ್ನು ಪರಾಮರ್ಶಿಸುವ ಮೂಲಕ ಬೆಂಗಳೂರು ನಗರದ ಜನತೆಯ ಮನೆ ಬಾಡಿಗೆ ಭತ್ಯೆ ಹೆಚ್ಚಳಕ್ಕೆ ಮನವಿ ಮಾಡುತ್ತೇನೆ.

    ಬೆಂಗಳೂರು 1.18 ಕೋಟಿ ನಾಗರಿಕರನ್ನು ಹೊಂದಿದ್ದು ,ಕರ್ನಾಟಕದ ಜಿಡಿಪಿಗೆ ಶೇ.80 ರಷ್ಟು ಕೊಡುಗೆ ನೀಡುತ್ತಿದೆ. ಸಿಲಿಕಾನ್ ವ್ಯಾಲಿ ಎಂದಲೂ ಕರೆಯಲ್ಪಡುವ ಬೆಂಗಳೂರು ಅನೇಕ ಸ್ಟಾರ್ಟ್ – ಅಪ್ ಗಳ ತವರು. ಐಟಿ, ಐಟಿ ಸಂಬಂಧಿತ ಸೇವೆಗಳು, ಸಾಫ್ಟ್ ವೇರ್ ತಂತ್ರಜ್ಞಾನದ 66.80 ಬಿಲಿಯನ್ ಡಾಲರ್ ಅಥವಾ ಭಾರತದ ಶೇ.40 ರಷ್ಟು ಐಟಿ ರಪ್ತು ವಹಿವಾಟು ನಡೆಸುವ ಬಹು ಮುಖ್ಯ ನಗರವಾಗಿದೆ. ಬಯೋ ಟೆಕ್ನಾಲಜಿ ಗೆ ಸಂಬಂಧಿಸಿದ ಅತೀ ಹೆಚ್ಚಿನ ಸಂಸ್ಥೆಗಳು ಇರುವುದು ಬೆಂಗಳೂರಿನಲ್ಲಿ ಎನ್ನುವುದು ವಿಶೇಷ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?

    ದೇಶದ ಶೇ.80 ರಷ್ಟು ಸೆಮಿ ಕಂಡಕ್ಟರ್ ಉದ್ಯಮವು ಬೆಂಗಳೂರು ಕೇಂದ್ರಿತವಾಗಿದೆ. 7,500 ಸ್ಟಾರ್ಟ್-ಅಪ್ ಗಳ ಕಾರ್ಯನಿರ್ವಹಣೆಯಿಂದ ಸ್ಟಾರ್ಟ್ ಅಪ್ ಕ್ಯಾಪಿಟಲ್ ಎಂದು ಕೂಡ ಪ್ರಾಮುಖ್ಯತೆ ಪಡೆದಿದೆ.

    ಬೆಂಗಳೂರು ಮತ್ತು ಇತರ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಮನೆ ಬಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ, ಬೆಂಗಳೂರು ಮತ್ತು ಇಂತಹ ನಗರಗಳನ್ನು ಮಹಾ ನಗರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದಲ್ಲಿ ಮಧ್ಯಮ ವರ್ಗದ ಸಂಬಳದಾರ ವರ್ಗದ ಜನತೆಗೆ ಅನುಕೂಲವಾಗಲಿದೆ ಎಂದು ಸಂಸತ್ತಿನ ಗಮನ ಸೆಳೆದರು.

    Live Tv
    [brid partner=56869869 player=32851 video=960834 autoplay=true]

  • ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ – ಇಡಿ ಬೆನ್ನಲ್ಲೇ ಡಿಕೆಶಿಗೆ ಐಟಿ ಶಾಕ್

    ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ – ಇಡಿ ಬೆನ್ನಲ್ಲೇ ಡಿಕೆಶಿಗೆ ಐಟಿ ಶಾಕ್

    ನವದೆಹಲಿ: ಜಾರಿ ನಿರ್ದೇಶನಾಲಯ(Enforcement Directorate) ಸಮನ್ಸ್‌ ಜಾರಿ ಮಾಡಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ (DK Shivakumar) ಆದಾಯ ತೆರಿಗೆ ಇಲಾಖೆ(Income Tax) ಪ್ರಕರಣದಲ್ಲಿ ಶಾಕಿಂಗ್‌ ಸುದ್ದಿ ಪ್ರಕಟವಾಗಿದೆ. ಐಟಿ ದಾಖಲಿಸಿದ್ದ ಪ್ರಕರಣವನ್ನು ರದ್ದು ಮಾಡಿದ್ದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

    2018 ರಲ್ಲಿ ಬಿಡದಿಯ ಈಗಲ್ಟನ್‌ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದ  ಐಟಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣವನ್ನು ಹೈಕೋರ್ಟ್‌(High Court) ರದ್ದು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಐಟಿ ಸುಪ್ರೀಂನಲ್ಲಿ(Supreme Court) ಮೇಲ್ಮನವಿ ಸಲ್ಲಿಸಿತ್ತು. ಇದನ್ನೂ ಓದಿ: ಗಾಲ್ಫ್ ಆಡೋ ನೆಪದಲ್ಲಿ ಎಂಟ್ರಿಕೊಟ್ಟು ಡಿಕೆಶಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದು ಹೀಗೆ

    ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿ ಪ್ರತಿಕ್ರಿಯೆ ನೀಡುವಂತೆ ನೋಟಿಸ್‌ ಜಾರಿ ಮಾಡಿದೆ. ಅಷ್ಟೇ ಅಲ್ಲದೇ 4 ವಾರದ ಒಳಗಡೆ ಹೊಸ ಅರ್ಜಿ ಸಲ್ಲಿಕೆ ಮಾಡುವಂತೆ ಐಟಿಗೆ ಸೂಚಿಸಿದೆ.

    ಏನಿದು ಪ್ರಕರಣ?
    2017ರ ಆಗಸ್ಟ್ 2ರಂದು ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾಗಿತ್ತು. ಈ ಸಂದರ್ಭದಲ್ಲಿ ಈಗಲ್ಟನ್‌ ರೆಸಾರ್ಟ್‌ನಲ್ಲಿ(Eagleton Resort) ಗುಜರಾತಿನ 44 ಮಂದಿ ಕಾಂಗ್ರೆಸ್‌ ಶಾಸಕರ ಯೋಗಕ್ಷೇಮದ ಉಸ್ತುವಾರಿಯನ್ನು ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ನೋಡಿಕೊಳ್ಳುತ್ತಿದ್ದರು. ಈ ಮಾಹಿತಿ ತಿಳಿದ ಅಧಿಕಾರಿಗಳು ಅಲ್ಲಿಯೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

    ಪರಿಶೀಲನೆ ವೇಳೆ ಕೆಲವು ಮಹತ್ವದ ದಾಖಲೆಗಳು ಲಭ್ಯವಾಗಿತ್ತು. ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ್ದು ಎನ್ನಲಾದ ಚೀಟಿಯನ್ನು ಡಿ.ಕೆ. ಶಿವಕುಮಾರ್ ಹರಿದು ಹಾಕಿದ್ದರು. ಆ ಪೇಪರ್‌ನಲ್ಲಿ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ್ದ ದಾಖಲೆ ಇತ್ತು ಎಂದು ಐಟಿ ಹೇಳಿತ್ತು. ಅಕ್ರಮ ವ್ಯವಹಾರ, ಡಿಜಿಟಲ್ ಕೇಬಲ್ ಜತೆಗಿನ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಇದರಲ್ಲಿ ಇತ್ತು ಎನ್ನುವುದು ಐಟಿಯ ಆರೋಪವಾಗಿತ್ತು. ಈ ಸಂಬಂಧ ಸಾಕ್ಷ್ಯನಾಶ ಮಾಡಿದ ಆರೋಪ ಹೊರಿಸಿ ಐಟಿ ಅಧಿಕಾರಿಗಳು ಕೇಸು ದಾಖಲಿಸಿದ್ದರು.

    ಈ ಪ್ರಕರಣವನ್ನು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2019 ರಲ್ಲಿ ರದ್ದು ಮಾಡಿತ್ತು. ನ್ಯಾಯಾಲಯದ ಆದೇಶ ಪ್ರಶ್ನಿಸಿ ಐಟಿ ಹೈಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ ಇಲ್ಲೂ ಹೈಕೋರ್ಟ್‌ ಐಟಿ ಅರ್ಜಿಯನ್ನು ತಿರಸ್ಕರಿಸಿತ್ತು.

    ಆರೋಪಿಯಿಂದ ಬರೀ ಹಣಕಾಸು ವ್ಯವಹಾರಗಳು ನಡೆದಿದ್ದರೆ ಕೇಸ್‌ ದಾಖಲಿಸಲು ಸಾಧ್ಯವಿಲ್ಲ. ಲೆಕ್ಕವಿಲ್ಲದ ವಹಿವಾಟುಗಳು ನಡೆದಿದ್ದರೂ ತೆರಿಗೆ ಅಥವಾ ದಂಡದ ಪಾವತಿಗೆ ಆರೋಪಿ ಹೊಣೆಗಾರರಾಗಿದ್ದಾರೆ ಎಂಬುದನ್ನು ನಿರ್ಧರಿಸುವವರೆಗೆ ಯಾವುದೇ ಕಾನೂನು ಕ್ರಮವನ್ನು ಆರಂಭಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್‌ ಐಟಿ ಅರ್ಜಿಯನ್ನು ವಜಾಗೊಳಿಸಿ ಡಿಕೆಶಿಗೆ ಬಿಗ್‌ ರಿಲೀಫ್‌ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಮಣಿಪಾಲ್ ಸಮೂಹದ ಮೇಲೆ ಐಟಿ ದಾಳಿ

    ಮಣಿಪಾಲ್ ಸಮೂಹದ ಮೇಲೆ ಐಟಿ ದಾಳಿ

    ಬೆಂಗಳೂರು: ಇಂದು ನಗರದ ಮಣಿಪಾಲ್ ಸಂಸ್ಥೆಗಳ(Manipal Groups) ಮೇಲೆ ಏಕಕಾಲಕ್ಕೆ ಐಟಿ(IT) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ನಾಲ್ಕು ಇನ್ನೋವಾ ವಾಹನದಲ್ಲಿ ಆಗಮಿಸಿರುವ ಅಧಿಕಾರಿಗಳು ಹೈಗ್ರೌಂಡ್ಸ್ ಪೊಲೀಸ್ ಠಾಣೆ ಬಳಿ ಇರುವ ಮಣಿಪಾಲ್ ಆಸ್ಪತ್ರೆಗೆ ದಾಳಿ ನಡೆಸಿದ್ದಾರೆ. ಬೆಳಗಿನ ಜಾವ 6 ಗಂಟೆಗೆ ಐಟಿ(Income Tax) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸದನದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದ ಉಮೇಶ್ ಕತ್ತಿ ತಂದೆ

    200 ಕ್ಕೂ ಹೆಚ್ಚು ಐಟಿ ಅಧಿಕಾರಿಗಳಿಂದ ಒಟ್ಟು 20 ಕಡೆಗಳಲ್ಲಿ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಓಲ್ಡ್ ಏರ್‌ ಪೋರ್ಟ್ ರೋಡ್, ಕನ್ನಿಂಗ್ ಹ್ಯಾಮ್ ರೋಡ್, ಯಶವಂತಪುರ, ಏರ್‌ ಪೋರ್ಟ್ ರೋಡ್ ಸೇರಿದಂತೆ 20 ಕಡೆ ದಾಳಿ ನಡೆದಿದೆ. ಐಟಿ ಅಧಿಕಾರಿಗಳು ಬೆಳಗ್ಗೆಯಿಂದ ಕಾರ್ಯಾಚರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಉಮೇಶ್‌ ಕತ್ತಿ ನಿಧನ: ಸಂಜೆ ಬೆಲ್ಲದ ಬಾಗೇವಾಡಿ ತೋಟದಲ್ಲಿ ಅಂತ್ಯಕ್ರಿಯೆ

    Live Tv
    [brid partner=56869869 player=32851 video=960834 autoplay=true]

  • ತೆರಿಗೆ ವಿನಾಯ್ತಿ ಕೈಬಿಡಲು ಕೇಂದ್ರ ಚಿಂತನೆ – ವಿನಾಯ್ತಿ ಬೇಡ ಎಂದವರಿಗೆ ಮಾತ್ರ ಕಡಿಮೆ ತೆರಿಗೆ

    ತೆರಿಗೆ ವಿನಾಯ್ತಿ ಕೈಬಿಡಲು ಕೇಂದ್ರ ಚಿಂತನೆ – ವಿನಾಯ್ತಿ ಬೇಡ ಎಂದವರಿಗೆ ಮಾತ್ರ ಕಡಿಮೆ ತೆರಿಗೆ

    ನವದೆಹಲಿ: ತೆರಿಗೆ ವಿನಾಯ್ತಿಗಳನ್ನು ಕೈಬಿಟ್ಟು, ವಿನಾಯ್ತಿ ಮುಕ್ತ ತೆರಿಗೆ ಪದ್ಧತಿ ಜಾರಿಗೊಳಿಸಲು ಹಾಗೂ ವಿನಾಯ್ತಿ ಬೇಡ ಎಂದವರಿಗೆ ಆದಾಯ ತೆರಿಗೆ ದರವನ್ನು ಕಡಿಮೆಮಾಡಲು ಕೇಂದ್ರ ವಿತ್ತ ಸಚಿವಾಲಯ ಹೊಸ ಪ್ರಸ್ತಾವ ಇರಿಸಿದೆ. ಈ ಮೂಲಕ ಗೊಂದಲಮುಕ್ತ ಹಾಗೂ ಆಕರ್ಷಕ ಆದಾಯ ತೆರಿಗೆ ಪದ್ಧತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

    2020-21ರಲ್ಲಿ ಈ ನಿಟ್ಟಿನಲ್ಲಿ ಹೊಸ ತೆರಿಗೆ ಪದ್ಧತಿಯೊಂದನ್ನು ಕೇಂದ್ರ ಜಾರಿಗೆ ತಂದಿತ್ತು. ಅದರಲ್ಲಿ ಮೊದಲ ವಿಧಾನದಲ್ಲಿ ಹಲವಾರು ತೆರಿಗೆ ವಿನಾಯ್ತಿ ಇರುತ್ತಿದ್ದವು. 2ನೇ ವಿಧಾನದಲ್ಲಿ ಯಾವುದೇ ತೆರಿಗೆ ವಿನಾಯ್ತಿ ಇರುತ್ತಿರಲಿಲ್ಲ. ಆದರೆ ಮೊದಲನೆಯ ವಿಧಕ್ಕೆ ಹೋಲಿಸಿದರೆ ಈ ವಿಧದಲ್ಲಿ ಕಡಿಮೆ ಪ್ರಮಾಣದ ತೆರಿಗೆ ಇತ್ತು. ತೆರಿಗೆದಾರರು ತಮಗೆ ಇಷ್ಟವಾದ ವಿಧಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಈಗ ಗೊಂದಲ ತೊಡೆದುಹಾಕುವ ನಿಟ್ಟಿನಲ್ಲಿ ವಿನಾಯ್ತಿ ಮುಕ್ತ ತೆರಿಗೆ ಪದ್ಧತಿಗೆ ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಪ್ರೀತಿಯ ಸುಳಿಗೆ ಸಿಕ್ಕಿಬಿದ್ದ ಬಾಲೆ – ಮದುವೆಯಾಗಲು ಪ್ರಿಯಕರ ಒಪ್ಪದ್ದಕ್ಕೆ ಆತ್ಮಹತ್ಯೆ

    ಈಗಾಗಲೇ ಗೃಹ, ಶೈಕ್ಷಣಿಕ ಸಾಲ ಮುಗಿಸಿದವರಿಗೆ ಈ ಎರಡೂ ಕಾರಣ ಮುಂದಿಟ್ಟು ತೆರಿಗೆ ವಿನಾಯ್ತಿ ಕೇಳಲು ಆಗದು. ಇಂಥವರೆಲ್ಲ ವಿನಾಯ್ತಿ ಮುಕ್ತ ತೆರಿಗೆ ಪದ್ಧತಿಯ ಮೊರೆ ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ವಿನಾಯ್ತಿ ಮುಕ್ತ ತೆರಿಗೆಯಲ್ಲಿ ತೆರಿಗೆ ದರ ಕಡಿಮೆಯಿರುವ ಕಾರಣ ಜನರು ಇದರತ್ತ ಆಕರ್ಷಿತರಾಗುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

    Live Tv

  • ತಾಯಿಗೆ ಐಟಿ ನೋಟಿಸ್ ನೀಡಿರುವ ಬಗ್ಗೆ ಆತಂಕ ಇಲ್ಲ: ಹೆಚ್‌ಡಿಕೆ

    ತಾಯಿಗೆ ಐಟಿ ನೋಟಿಸ್ ನೀಡಿರುವ ಬಗ್ಗೆ ಆತಂಕ ಇಲ್ಲ: ಹೆಚ್‌ಡಿಕೆ

    ಬೆಂಗಳೂರು: ತಮ್ಮ ತಾಯಿಗೆ ಆದಾಯ ತೆರಿಗೆ ನೋಟಿಸ್ ನೀಡಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಹೇಳಿದರು.

    ವಿಧಾನಸೌಧದ ಬಳಿ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಹೆಚ್‌ಡಿಕೆ, ನೋಟಿಸ್ ನೀಡಿರುವ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಆತಂಕಪಡುವ ಅಗತ್ಯವೂ ಇಲ್ಲ ಎಂದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಕೊಡುವಂತೆ ಯಾರೂ ಆಗ್ರಹಿಸಬೇಡಿ: ಸಿದ್ದಲಿಂಗ ಸ್ವಾಮೀಜಿ

    ದೇವೇಗೌಡರ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದೂ ಮಹತ್ವ ಕೊಟ್ಟಿಲ್ಲ. ನಾವು ಕೂಡಾ ನಮ್ಮ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದೂ ಪ್ರಾಮುಖ್ಯತೆ ಕೊಟ್ಟವರಲ್ಲ. ನಾವು ಪರಿಶುದ್ಧವಾಗಿರಬೇಕು ಅಷ್ಟೇ ಎಂದರು. ಇದನ್ನೂ ಓದಿ: ಗುತ್ತಿಗೆದಾರರು ಪರ್ಸಂಟೇಜ್ ಕೊಡುವುದು ನಿಲ್ಲಿಸಿ ಎಲ್ಲವೂ ಸರಿ ಹೋಗುತ್ತದೆ: ಎಚ್‍ಡಿಕೆ

    ನೋಟಿಸ್ ಕೊಟ್ಟಿದ್ದಾರೆ. ಅದಕ್ಕೆ ಏನು ಉತ್ತರ ಕೊಡಬೇಕೋ ಕೊಟ್ಟರಾಯಿತು. ಆದಾಯ ತೆರಿಗೆ ಬಗ್ಗೆ ಕಾನೂನಾತ್ಮಕವಾಗಿ ಆಸ್ತಿ ವಿಚಾರವಾಗಿ ಕೇಳಿರುತ್ತಾರೆ. ಆ ವಿವರಗಳನ್ನು ಸಲ್ಲಿಕೆ ಮಾಡಿದರೆ ಆಯಿತು. ನನ್ನ ಸಹೋದರ ರೇವಣ್ಣ ಅವರಿಗೂ ಇದನ್ನೇ ಹೇಳಿದ್ದೇನೆ. ಇದನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

  • ಎಚ್‍ಡಿಡಿ ಪತ್ನಿಗೆ ಐಟಿ ನೋಟಿಸ್

    ಎಚ್‍ಡಿಡಿ ಪತ್ನಿಗೆ ಐಟಿ ನೋಟಿಸ್

    ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಐಟಿಯಿಂದ ನೋಟೀಸ್ ನೀಡಲಾಗಿದೆ.

    ಈ ಕುರಿತು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ಜಮೀನನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ. ಅದನ್ನು ನೋಡಬೇಕು ಅದನ್ನು ನೋಡದೆ ನಮ್ಮ ತಾಯಿಗೆ ನೋಟೀಸ್ ಕೊಟ್ಟಿದ್ದಾರೆ. ಆರ್‍ಟಿಓದಲ್ಲಿ ನೂರು ಕೋಟಿ ಇನ್ನೂರು ಕೋಟಿ ಲೂಟಿ ಹೊಡೆದಿದ್ದು, ಅವರಿಗೇಕೆ ನೀವು ನೋಟೀಸ್ ನೀಡಲ್ಲ. ಒಂದು ಏಕರೆಯಲ್ಲಿ ಎಷ್ಟು ಬೆಳೆ ಬೆಳೆಯುತ್ತೇವೆ ಬಂದು ನೋಡಲಿ ಎಂದು ಸಿಡಿದರು. ಇದನ್ನೂ ಓದಿ: 32 ವರ್ಷಗಳ ನಂತ್ರ ಕಾಶ್ಮೀರಿ ಪಂಡಿತರಿಗೆ ಸಿಕ್ಕಿದ್ದು ಸಿನಿಮಾ, ನ್ಯಾಯವಲ್ಲ: ಕೇಜ್ರಿವಾಲ್

    ನಾನು ಡಿಸಿಗೆ ಹೇಳಿದ್ದೇನೆ. ನಾನು ಸರ್ವೆ ಮಾಡಿ ಬಿಲ್ ಕೊಟ್ಟರೆ ಸರಿಯಾಗಲ್ಲ. ಆಪ್‍ನಲ್ಲಿ ಸರ್ವೆ ಮಾಡಿಸಿ ನಮ್ಮ ತಂದೆ, ತಾಯಿ ಏನಾದರು ಕೋಟ್ಯಂತರ ರೂ ಆಸ್ತಿ ಮಾಡಿಲ್ಲ. ಅವರು ನನ್ನ ತಾಯಿಗೆ ನೋಟಿಸ್ ಕೊಟ್ಟಿದ್ದಾರೆ. ಉತ್ತರ ಕೊಡುತ್ತೇವೆ ನಮಗೂ ಕಾಲ ಬರುತ್ತೆ. ಇದೇ ಏನು ಶಾಶ್ವತವಾಗಿ ಇರಲ್ಲ. ಏನಾದರೂ ಕದ್ದು ವ್ಯವಸಾಯ ಮಾಡುತ್ತಿದ್ದೇವಾ ಅಂತ ಡ್ರೋಣ್ ಸರ್ವೆ ಮಾಡಲಿ. ದೊಡ್ಡಪುರ, ಪಡುವಲ ಹಿಪ್ಪೆ ಹತ್ತಿರ ನಮ್ಮ ಗದ್ದೆ ಇದೆ ಎಂದರು. ಇದನ್ನೂ ಓದಿ:  ಬಾಗಲಕೋಟೆಯಲ್ಲಿ ಹಿಜಬ್‍ಗಾಗಿ ಪರೀಕ್ಷೆ ಕೈ ಬಿಟ್ಟ ವಿದ್ಯಾರ್ಥಿನಿ

    ನಾನೇನು ಹೊಸದಾಗಿ ಆಸ್ತಿ ಮಾಡಲು ಹೋಗಿದ್ದೇನಾ? ನಾನೇನಾದರು ಸೈಟ್ ಬ್ಯುಸಿನೆಸ್ ಮಾಡಲು ಹೋಗಿದ್ದೇನ. ನಗರಸಭೆಯಿಂದ ಸೈಟ್ ಮಾಡಲು ಹೋಗಿದ್ದೇಮಾ? ಒಂದು ಪಕ್ಷವನ್ನು ಗುರಿ ಇಟ್ಟುಕೊಂಡು ಈ ರೀತಿಯೆಲ್ಲಾ ಮಾಡಲು ಹೋಗಬೇಡಿ. ಕಾನೂನು ರೀತಿ ರೀವಾಜಗಳು ಏನಿದೆ ಆ ರೀತಿ ನೋಟಿಸ್ ಕೊಡಿ. ನನಗೂ ಕೊಡಿ ಕೆಲವರು ಆರ್‍ಟಿಓ ನಲ್ಲಿ ಲೂಟಿ ಮಾಡಿ ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಎಲೆಕ್ಷನ್‍ಗೆ ನಿಲ್ಲುತ್ತಿದ್ದಾರೆ. ಅಂತಹವರಿಗೆ ನೋಟಿಸ್ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಐಟಿ‌ ದಾಳಿಗೆ ನಾವು ಹೆದರಲ್ಲ – ಶಾಸಕಿ ಲಕ್ಷ್ಮಿ‌ ಹೆಬ್ಬಾಳ್ಕರ್‌

    ಐಟಿ‌ ದಾಳಿಗೆ ನಾವು ಹೆದರಲ್ಲ – ಶಾಸಕಿ ಲಕ್ಷ್ಮಿ‌ ಹೆಬ್ಬಾಳ್ಕರ್‌

    ಹುಬ್ಬಳ್ಳಿ:  ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಯ ಸೃಷ್ಟಿ ಮಾಡಲು ಐಟಿ, ಇಡಿ ದಾಳಿ ಮಾಡಲಾಗುತ್ತಿದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕಾರ್ಯಕರ್ತರಲ್ಲಿ ಭಯ ಸೃಷ್ಟಿ ಮಾಡಲು ರಾಜಕಾರಣ ಮಾಡುತ್ತಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಈ ರೀತಿ ಆಗುತ್ತಿದೆ. ಇಡಿ, ಐಟಿಗೆ ನಾವು ಹೆದರುವುದಿಲ್ಲ. ಇದು ಯಾವುದು ಕೂಡ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

    ಈಗ ಐಟಿ ದಾಳಿ ಮಾಡಿರುವ ಯು.ಬಿ. ಶೆಟ್ಟಿ ಮೊದಲಿಂದಲೂ ಡಿ.ಕೆ. ಶಿವಕುಮಾರ್ ಜೊತೆ ಇದ್ದಾರೆ. ನಮ್ಮ ಕಾರ್ಯಕರ್ತರ ನೈತಿಕತೆ ಕಡಿಮೆ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಗನಿಗೆ ಬೇಲ್ ಸಿಕ್ಕ ಖುಷಿಗೆ ವಕೀಲರ ತಂಡದೊಂದಿಗೆ ಫೋಟೋಗೆ ಪೋಸ್ ಕೊಟ್ಟ ಶಾರೂಖ್ ಖಾನ್

    ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ, ಧಾರವಾಡದ ಎ-1 ಗುತ್ತಿಗೆದಾರ, ಉದ್ಯಮಿ ಆಗಿರುವ ಯು.ಬಿ. ಶೆಟ್ಟಿಯ ಮನೆ ಮೇಲೆ ದಾಳಿಯಾಗಿದೆ. ಗೋವಾ ಮೂಲದ ಐಟಿ ಅಧಿಕಾರಿಗಳಿಂದ ಯುಬಿ ಶೆಟ್ಟಿಗೆ ಸಂಬಂಧಿಸಿದ ಧಾರವಾಡದ ಮನೆ ಮತ್ತು ಉಡುಪಿಯ ಬೈಂದೂರು ತಾಲೂಕಿನ ಸ್ವಗ್ರಾಮ ಉಪ್ಪುಂದದ ಮನೆ ಮೇಲೆ ರೇಡ್ ಆಗಿದೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ದಾಳಿ