Tag: income tax

  • Union Budget: 10 ಆದಾಯ ತೆರಿಗೆ ಬದಲಾವಣೆಗಳು – ಮಧ್ಯಮ ವರ್ಗದವರ ಬೇಡಿಕೆಗಳೇನು?

    Union Budget: 10 ಆದಾಯ ತೆರಿಗೆ ಬದಲಾವಣೆಗಳು – ಮಧ್ಯಮ ವರ್ಗದವರ ಬೇಡಿಕೆಗಳೇನು?

    ನವದೆಹಲಿ: ಕೇಂದ್ರ ಬಜೆಟ್ 2025 (Union Budget 2025) ಇದೇ ಫೆ.1 ರಂದು ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವರು ಆಯವ್ಯಯ ಮಂಡಿಸಲು ಸಜ್ಜಾಗಿದ್ದಾರೆ. ಜನರ ನಿರೀಕ್ಷೆಗಳು ಗರಿಗೆದರಿವೆ. ನಮ್ಮ ವಲಯಕ್ಕೆ ಏನೇನು ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಸಂಬಳ ಪಡೆಯುವ ಉದ್ಯೋಗಿಗಳು, ಕಾರ್ಪೊರೇಟ್‌ಗಳು ಮತ್ತು ಉದ್ಯಮಿಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಏನು ನೀಡಲಿದ್ದಾರೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕರಿಸಿದೆ. ಆದಾಯ ತೆರಿಗೆ ಸೇರಿದಂತೆ ಯಾವೆಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ತರಲಿದ್ದಾರೆಂದು ಕುತೂಹಲದ ಕಣ್ಣಿನಿಂದ ಕಾಯುತ್ತಿದ್ದಾರೆ.

    ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಆದಾಯ ತೆರಿಗೆ, ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿ) ಮತ್ತು ಕ್ರಿಪ್ಟೋ, ಗೃಹ ಸಾಲ, ಉಳಿತಾಯಕ್ಕೆ ಪ್ರೋತ್ಸಾಹ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇವುಗಳಲ್ಲಿ ಬದಲಾವಣೆಗಳನ್ನು ತರುವ ಸಂಬಂಧ ಹಲವು ಶಿಫಾರಸುಗಳನ್ನು ತಜ್ಞರು ನೀಡಿದ್ದಾರೆ. ಈ ಪ್ರಸ್ತಾವಿತ ಸುಧಾರಣೆಗಳು ತೆರಿಗೆದಾರರಿಗೆ ಒಂದಷ್ಟು ಪರಿಹಾರ ಒದಗಿಸುವ ಗುರಿಯನ್ನು ಹೊಂದಿವೆ. ಇದನ್ನೂ ಓದಿ: Union Budget 2025| ಯಾವಾಗ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡುತ್ತಾರೆ?

    ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ
    ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಸಂಭಾವ್ಯವಾಗಿ ಕಡಿಮೆ ಮಾಡುವ ಮೂಲಕ ಮಧ್ಯಮ ವರ್ಗದ ತೆರಿಗೆದಾರರಿಗೆ ಪರಿಹಾರವನ್ನು ಒದಗಿಸಲು ತೆರಿಗೆ ಸ್ಲ್ಯಾಬ್‌ಗಳನ್ನು ಪರಿಷ್ಕರಿಸಲು ಸರ್ಕಾರವು ಪರಿಗಣಿಸಬೇಕು ಎಂಬ ಕೂಗು ಕೇಳಿಬಂದಿದೆ.

    ಆದಾಯ ತೆರಿಗೆ ಆಡಳಿತದ ಅಡಿಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಹಣದುಬ್ಬರವನ್ನು ಪರಿಹರಿಸಬಹುದು. ಆದಾಯ ತೆರಿಗೆಗೆ ಕನಿಷ್ಠ 10 ಲಕ್ಷ ರೂ. ಮಿತಿ ಅಳವಡಿಸಿಕೊಳ್ಳಬೇಕು ಎಂದು ಅನೇಕ ತೆರಿಗೆದಾರರು ನಿರೀಕ್ಷಿಸಿದ್ದಾರೆ. ಸರ್ಕಾರವು ವಾರ್ಷಿಕವಾಗಿ 15 ಲಕ್ಷದವರೆಗೆ ಗಳಿಸುವವರಿಗೆ ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡಬೇಕು. ಇದರಿಂದ ವೈಯಕ್ತಿಕ ಆದಾಯ ಹೆಚ್ಚಳವಾಗಲಿದೆ. ಆಗ ಮಾರುಕಟ್ಟೆಯಲ್ಲಿ ವಿನಿಯೋಗವು ಹೆಚ್ಚಲಿದೆ ಎಂದು ಕ್ಲಿಯರ್‌ಟ್ಯಾಕ್ಸ್‌ನ ತೆರಿಗೆ ತಜ್ಞ ಶೆಫಾಲಿ ಮುಂದ್ರಾ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಫೈನಾನ್ಸ್ ಕಿರುಕುಳ: 3 ವರ್ಷ ಜೈಲು, 1 ಲಕ್ಷದ ವರೆಗೆ ದಂಡ – ಗುರುವಾರ ಸರ್ಕಾರದಿಂದ ಸುಗ್ರೀವಾಜ್ಞೆ

    ಹೊಸ ತೆರಿಗೆ ವ್ಯವಸ್ಥೆಯಲ್ಲಿ ಗೃಹ ಸಾಲದ ಪ್ರಯೋಜನಗಳು
    ಹೊಸ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಮನೆ ಹೊಂದುವವರನ್ನು ಪ್ರೋತ್ಸಾಹಿಸಬೇಕು. ಹಳೆ ತೆರಿಗೆ ಪದ್ಧತಿಯಲ್ಲಿ ಕಡಿಮೆ ತೆರಿಗೆ ಇರುವವರಿಗೂ ಇದರ ಲಾಭ ಸಿಗಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತೆರಿಗೆ ತಜ್ಞರು ಸಲಹೆ ನೀಡಿದ್ದಾರೆ.

    ಮನೆ ಮಾಲೀಕರಿಗೆ ಪ್ರೋತ್ಸಾಹ
    ಮನೆ ಹೊಂದುವವರು ಸೆಕ್ಷನ್ 24(ಬಿ) ಅಡಿಯಲ್ಲಿ ಗೃಹ ಸಾಲಗಳ ಮೇಲಿನ ಹೆಚ್ಚಿನ ಬಡ್ಡಿ ಕಡಿತದ ಮಿತಿಗಳಿಂದ ಪ್ರಯೋಜನ ಪಡೆಯಬಹುದು. ಕನಿಷ್ಠ ಒಂದು ಮನೆಗಾದರೂ, ಪೂರ್ತಿ ಬಡ್ಡಿ ಪಾವತಿಸುವವರಿಗೆ ರಿಯಾಯಿತಿ ಮಿತಿಯನ್ನು ಹೆಚ್ಚಿಸಬೇಕು. ಪ್ರಸ್ತುತ ಈ ಮಿತಿಯನ್ನು 2 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಬೇಕು ದಿವಾನ್ ಪಿ.ಎನ್‌ನ ವ್ಯವಸ್ಥಾಪಕ ಪಾಲುದಾರ ಧ್ರುವ ಚೋಪ್ರಾ ತಿಳಿಸಿದ್ದಾರೆ.

    ಎನ್‌ಪಿಎಸ್ ಕಡಿತ ಮಿತಿ ಹೆಚ್ಚಿಸುವುದು
    ಹೆಚ್ಚುವರಿ ಎನ್‌ಪಿಎಸ್ ಕಡಿತದ ಮಿತಿಯನ್ನು 50,000 ದಿಂದ 1 ಲಕ್ಷಕ್ಕೆ ಹೆಚ್ಚಿಸಬೇಕು. ಅದಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕು ಎಂಬ ಕೂಗು ಕೇಳಿಬಂದಿದೆ.

    ಶ್ರೇಣಿ-2 ನಗರಗಳಿಗೆ ಹೆಚ್‌ಆರ್‌ಎ
    ದ್ವಿತೀಯ ದರ್ಜೆ ನಗರಗಳಾದ ಬೆಂಗಳೂರು, ಹೈದರಾಬಾದ್, ಪುಣೆಯಲ್ಲಿ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆಯನ್ನು 50%ಗೆ ವಿಸ್ತರಿಸಬೇಕು ಎಂದು ಬೇಡಿಕೆಯೂ ಇದೆ.

    ಸೆಕ್ಷನ್ 80ಡಿ ಅಡಿಯಲ್ಲಿ ಸುಧಾರಣೆಗಳು
    ಈಗಿನ ದಿನಮಾನಗಳಲ್ಲಿ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದೆ. ಹೀಗಾಗಿ, ಹಿರಿಯ ನಾಗರಿಕರ ಆರೋಗ್ಯ ವಿಮೆ ಸೆಕ್ಷನ್ 80ಡಿ ಅಡಿಯಲ್ಲಿ 25ರಿಂದ 50 ಸಾವಿರಕ್ಕೆ ಹಾಗೂ 50ರಿಂದ 1 ಲಕ್ಷಕ್ಕೆ ತೆರಿಗೆ ಮಿತಿಯನ್ನು ಹೆಚ್ಚಿಸಬೇಕು ಎಂದು ಶೆಫಾಲಿ ಮುಂದ್ರಾ ಸಲಹೆ ನೀಡಿದ್ದಾರೆ. ಇದನ್ನೂ ಓದಿ: PUBLiC TV Impact | ಹಾಲಿಗೆ ನೀರು ಕಲಬೆರಕೆ ಮಾಡಿರೋದು ತನಿಖೆಯಲ್ಲಿ ಧೃಢ – ಸಿಬ್ಬಂದಿ, ಅಧಿಕಾರಿಗಳು ವಜಾ

    ಪಿಎಫ್ ಬಡ್ಡಿಯ ಮೇಲಿನ ಟಿಡಿಎಸ್‌ಗೆ ವಿನಾಯಿತಿ ನೀಡಬೇಕು
    ಪಿಎಫ್ ಮೇಲಿನ ಬಡ್ಡಿಯು 2.5 ಲಕ್ಷ ರೂ. ಮೀರಿದಾಗ ವಿಧಿಸುವ ಟಿಡಿಎಸ್ ಅನ್ನು ಹಣ ಹಿಂಪಡೆಯುವ ವರೆಗೂ ಕಡಿತ ಮಾಡಬಾರದು ಎಂಬ ಬೇಡಿಕೆ ಇದೆ.

    ಹೂಡಿಕೆ ಮೇಲಿನ ತೆರಿಗೆ
    ಹೂಡಿಕೆಯ ಲಾಭದ ಮೇಲಿನ ತೆರಿಗೆಗಳಿಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಯ ಅಗತ್ಯತೆಗಳನ್ನು ನಿರೀಕ್ಷಿಸಲಾಗಿದೆ. ಭಾರತೀಯ ಹಾಗೂ ವಿದೇಶಿ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ, ಚಿನ್ನದ ಮೇಲಿನ ಹೂಡಿಕೆಯಿಂದ ಸಿಗುವ ಲಾಭಕ್ಕೆ ತೆರಿಗೆ ಪ್ರಮಾಣ ತಗ್ಗಿಸಬೇಕು. ಸ್ಟಾಕ್ ಲಾಭದ ಮೇಲಿನ ತೆರಿಗೆಗಳು ಹೆಚ್ಚಾಗಿರುವುದರಿಂದ (ಅಲ್ಪಾವಧಿಗೆ 15% ರಿಂದ 20% ಮತ್ತು ದೀರ್ಘಾವಧಿಗೆ 10% ರಿಂದ 12.5% ವರೆಗೆ), ಷೇರುಗಳನ್ನು ಖರೀದಿಸುವಾಗ ಮತ್ತು ಮಾರಾಟ ಮಾಡುವಾಗ ಪಾವತಿಸುವ ತೆರಿಗೆಯನ್ನು ತೆಗೆದುಹಾಕಬೇಕು.

    ಹಿರಿಯ ನಾಗರಿಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವುದು
    ಹಿರಿಯ ನಾಗರಿಕರಿಗೆ ಹಣಕಾಸಿನ ಒತ್ತಡ ಕಡಿಮೆ ಮಾಡಬೇಕಿದೆ. ಅವರಿಗೆ ಉದಾರವಾದ ವಿನಾಯಿತಿ ಮಿತಿಯನ್ನು ಒದಗಿಸಬೇಕಿದೆ. ಹೆಚ್ಚಿನ ವಿನಾಯಿತಿ ನೀಡಬೇಕಿದೆ ಎಂಬುದು ತಜ್ಞರ ಸಲಹೆ.

    ಸೆಕ್ಷನ್ 80ಸಿ ಅಡಿಯಲ್ಲಿ ಮಿತಿ ಹೆಚ್ಚಳ
    ಸೆಕ್ಷನ್ 80ಸಿ ಮಿತಿಯನ್ನು ಪರಿಷ್ಕರಿಸಬೇಕು ಎಂದು ಮಧ್ಯಮ ವರ್ಗ ಆಶಯ ವ್ಯಕ್ತಪಡಿಸಿದೆ. ಈಗ ಇರುವ 1.5 ಲಕ್ಷ ಮಿತಿಯು 2014ರಿಂದಲೂ ಬದಲಾಗಿಲ್ಲ. ಎಫ್‌ಡಿ, ಪಿಪಿಎಫ್ ಮೊದಲಾದ ಹೂಡಿಕೆ ಉತ್ತೇಜನಕ್ಕೆ ಇದು ತುಂಬಾ ಅವಶ್ಯಕ ಎಂದು ತಜ್ಞರು ತಿಳಿಸಿದ್ದಾರೆ.

  • Budget 2025 | 15 ಲಕ್ಷ ರೂ.ವರೆಗೆ ಆದಾಯ ತೆರಿಗೆ ಕಡಿತ ಸಾಧ್ಯತೆ – ಯಾರಿಗೆ ಲಾಭ?

    Budget 2025 | 15 ಲಕ್ಷ ರೂ.ವರೆಗೆ ಆದಾಯ ತೆರಿಗೆ ಕಡಿತ ಸಾಧ್ಯತೆ – ಯಾರಿಗೆ ಲಾಭ?

    ನವದೆಹಲಿ: ಫೆಬ್ರವರಿ 1 ರಂದು ಮಂಡನೆಯಾಗಲಿರುವ 2025-26ನೇ ಸಾಲಿನ ವಾರ್ಷಿಕ ಬಜೆಟ್‌ನಲ್ಲಿ 15 ಲಕ್ಷ ರೂ.ಗಳ ವರೆಗೆ ಆದಾಯ ತೆರಿಗೆ (Income Tax) ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ಮಧ್ಯಮ ವರ್ಗಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶ ಹಾಗೂ ಆರ್ಥಿಕತೆ ವೇಗವಾಗಿ ಬೆಳೆಯಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಈ ಚಿಂತನೆ ಮಾಡಿದೆ. ಸದ್ಯಕ್ಕೆ ಯಾವುದೇ ಕಡಿತದ ಗಾತ್ರವನ್ನು ನಿರ್ಧರಿಸಿಲ್ಲ. ಬಜೆಟ್‌ ಮಂಡನೆಗೆ ದಿನಾಂಕ ಸಮೀಪವಾಗುತ್ತಿದ್ದಂತೆ ನಿರ್ಧಾರ ಸ್ಪಷ್ಟವಾಗಲಿದೆ ಎಂದು ಹೆಸರು ಹೇಳಲಿಚ್ಚಿಸದ ಸರ್ಕಾರಿ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿಗೆ 2,244 ಕೋಟಿ, ಕಾಂಗ್ರೆಸ್‌ಗೆ 289 ಕೋಟಿ – ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸಿಕ್ಕಿದೆ?

    ಪ್ರಮುಖವಾಗಿ ವಸತಿ ಬಾಡಿಗೆಗಳಂತಹ ವಿನಾಯಿತಿಗಳನ್ನು ತೆಗೆದುಹಾಕುವ 2020ರ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಂಡರೆ, ಈ ಕ್ರಮವು ಕೋಟ್ಯಂತರ ತೆರಿಗೆದಾರರಿಗೆ, ವಿಶೇಷವಾಗಿ ಹೆಚ್ಚಿನ ಜೀವನ ವೆಚ್ಚದಿಂದ ಹೊರೆಯಾಗಿರುವ ನಗರವಾಸಿಗಳಿಗೆ ಪ್ರಯೋಜನ ನೀಡುತ್ತದೆ. 2020ರ ತೆರಿಗೆ ಪದ್ದತಿಯಲ್ಲಿ 3 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳ ವರೆಗಿನ ವಾರ್ಷಿಕ ಆದಾಯಕ್ಕೆ ಶೇ.5 ರಿಂದ ಶೇ.20ರ ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಈ ಪ್ರಮಾಣ ಗರಿಷ್ಠ 30% ರಷ್ಟಿತ್ತು.

    ಇದೀಗ ಕೇಂದ್ರ ಸರ್ಕಾರ ಮುಂದಿಟ್ಟಿರುವ ನೂತನ ಪ್ರಸ್ತಾಪದಲ್ಲಿ ದೇಶದ ತೆರಿಗೆದಾರರು 2 ತೆರಿಗೆ ವ್ಯವಸ್ಥೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಅದೇನೆಂದರೆ ವಸತಿ ಬಾಡಿಗೆ ಮತ್ತು ವಿಮೆಯ ಮೇಲೆ ವಿನಾಯಿತಿ ಅನುಮತಿಸುವ ಒಂದು ತೆರಿಗೆ ಪದ್ದತಿ ಮತ್ತು ಮತ್ತೊಂದು 2020ರಲ್ಲಿ ಪರಿಚಯಿಸಲಾದ ತೆರಿಗೆ ಪದ್ದತಿ. ಇದು ಸ್ವಲ್ಪ ಕಡಿಮೆ ತೆರಿಗೆ ದರಗಳನ್ನು ನೀಡುತ್ತದೆಯಾದರೂ ಪ್ರಮುಖ ವಿನಾಯಿತಿಗಳನ್ನ ಅನುಮತಿಸುವುದಿಲ್ಲ ಎಂದು ವರದಿ ಹೇಳಿದೆ.

    ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಅರ್ಥಶಾಸ್ತ್ರಜ್ಞರನ್ನು ಭೇಟಿಯಾಗಿದ್ದರು. ಈ ವೇಳೆ ತಜ್ಞರು ನಾಗರಿಕರ ಮೇಲಿನ ಹೊರೆ ಕಡಿಮೆ ಮಾಡಲು ಆದಾಯ ತೆರಿಗೆ ಕಡಿತಗೊಳಿಸುವಂತೆ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಕಸ್ಟಮ್ಸ್ ಸುಂಕಗಳನ್ನು ತರ್ಕಬದ್ಧಗೊಳಿಸಬೇಕು ಮತ್ತು ರಫ್ತುಗಳನ್ನು ಬೆಂಬಲಿಸುವ ಕ್ರಮಗಳನ್ನ ಪರಿಚಯಿಸಬೇಕು ಎಂದು ಸಹ ಮನವಿ ಮಾಡಿದ್ದರು.

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ರ ಫೆಬ್ರವರಿ 1 ರಂದು 2025-26ನೇ ಸಾಲಿನ ವಾರ್ಷಿಕ ಬಜೆಟ್‌ ಮಂಡಿಸಲಿದ್ದಾರೆ. ಇದನ್ನೂ ಓದಿ: ಮೈಗೆ ಬೆಂಕಿ ಹಚ್ಚಿಕೊಂಡು ಸಂಸತ್‌ ಭವನದ ಕಡೆ ಓಡಿದ ವ್ಯಕ್ತಿ – ದೇಹದ 95% ಭಾಗ ಸುಟ್ಟು ಆಸ್ಪತ್ರೆಗೆ ದಾಖಲು

  • ಕಾಡಿನಲ್ಲಿ ನಿಂತಿದ್ದ ಕಾರಿನಲ್ಲಿತ್ತು 40 ಕೋಟಿ ರೂ. ಮೌಲ್ಯದ 52 ಕೆಜಿ ಚಿನ್ನ

    ಕಾಡಿನಲ್ಲಿ ನಿಂತಿದ್ದ ಕಾರಿನಲ್ಲಿತ್ತು 40 ಕೋಟಿ ರೂ. ಮೌಲ್ಯದ 52 ಕೆಜಿ ಚಿನ್ನ

    ಭೋಪಾಲ್: ಮಿಂದೋರಿ ಕಾಡಿನಲ್ಲಿ ನಿಂತಿದ್ದ ಕಾಲಿನಲ್ಲಿ ಬರೋಬ್ಬರಿ 40 ಕೋಟಿ ರೂ. ಮೌಲ್ಯದ 52 ಕೆಜಿ ಚಿನ್ನವನ್ನು ಕಾರ್ಯಾಚರಣೆ ನಡೆಸಿ ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ರಾತ್ರಿ 2 ಗಂಟೆ ವೇಳೆಗೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಬಂದಿತ್ತು. 30 ವಾಹನಗಳಲ್ಲಿ 100 ಪೊಲೀಸರು ಕಾರ್ಯಾಚರಣೆ ತೆರಳಿದ್ದರು. ಜಾರಿ ನಿರ್ದೇಶನಾಲಯ (ED), ಲೋಕಾಯುಕ್ತ ಮತ್ತು ಐಟಿ ಇಲಾಖೆಯಿಂದ ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಿಹಾರದಲ್ಲಿ ಥರ್ಮಲ್ ಪವರ್ ಪ್ಲಾಂಟ್ ಸ್ಥಾಪಿಸಲು ಅದಾನಿ ಗ್ರೂಪ್ 20,000 ಕೋಟಿ ಹೂಡಿಕೆ

    ಇಲಾಖೆಗೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಸುಳಿವು ಸಿಕ್ಕಿತು. ನಾವು ಕರೆ ಸ್ವೀಕರಿಸಿದ ನಂತರ 30 ವಾಹನಗಳಲ್ಲಿ 100 ಪೊಲೀಸರ ತಂಡವು ಸ್ಥಳಕ್ಕೆ ಹೋದೆವು. ಪೊಲೀಸರು ಬಂಧಿಸಲು ಪ್ರಯತ್ನಿಸುತ್ತಿರುವ ಬಿಲ್ಡರ್ ಹೆಸರಿನಲ್ಲಿ ಕಾರನ್ನು ನೋಂದಾಯಿಸಲಾಗಿದೆ ಎಂದು ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭೋಪಾಲ್ ಮತ್ತು ಇಂದೋರ್‌ನಲ್ಲಿರುವ ತ್ರಿಶೂಲ್ ಕನ್‌ಸ್ಟ್ರಕ್ಷನ್, ಕ್ವಾಲಿಟಿ ಗ್ರೂಪ್ ಮತ್ತು ಇಶಾನ್ ಗ್ರೂಪ್‌ಗೆ ಸೇರಿದ 51 ಸ್ಥಳಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದ್ರೆ ಪರಿಶೀಲಿಸುತ್ತಾ ಕೂರ್ತಿದ್ರಾ? – ಬಿವಿ ಶ್ರೀನಿವಾಸ್ ಆಕ್ರೋಶ

    ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಮಾಜಿ ಕಾನ್‌ಸ್ಟೆಬಲ್ ಸೌರಭ್ ಶರ್ಮಾ ಅವರ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 1 ಕೋಟಿ ಮತ್ತು 40 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಶರ್ಮಾ ಅವರು ಒಂದು ವರ್ಷದ ಹಿಂದೆ ಕೆಲಸ ತೊರೆದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸೇರಿದ್ದರು.

  • DCM ಆದ ಮರುದಿನವೇ ಬೇನಾಮಿ ಆಸ್ತಿ ಆರೋಪದಿಂದ ಮುಕ್ತ; 1,000 ಕೋಟಿ ಮೌಲ್ಯದ ಆಸ್ತಿ ಪವಾರ್‌ಗೆ ರಿಲೀಸ್‌!

    DCM ಆದ ಮರುದಿನವೇ ಬೇನಾಮಿ ಆಸ್ತಿ ಆರೋಪದಿಂದ ಮುಕ್ತ; 1,000 ಕೋಟಿ ಮೌಲ್ಯದ ಆಸ್ತಿ ಪವಾರ್‌ಗೆ ರಿಲೀಸ್‌!

    – ಅಜಿತ್ ಪವಾರ್ ಮೇಲಿನ ಬೇನಾಮಿ ಆಸ್ತಿ ಆರೋಪ ವಜಾ

    ಮುಂಬೈ: ಬಿಜೆಪಿ ಮೈತ್ರಿ ಪಕ್ಷವಾದ ಎನ್‌ಸಿಪಿಯ ನಾಯಕ ಅಜಿತ್ ಪವಾರ್ (Ajit Pawar) ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಆರೋಪವೊಂದರಿಂದ ಮುಕ್ತವಾಗಿದ್ದಾರೆ.

    ಬೇನಾಮಿ ಆಸ್ತಿ (Benami Property Case) ವಹಿವಾಟು ತಡೆ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಮಂಡಳಿಯು ಅಜಿತ್ ಪವಾರ್ ಮತ್ತು ಅವರ ಕುಟುಂಬದ ವಿರುದ್ಧದ ಬೇನಾಮಿ ಆಸ್ತಿ ಮಾಲೀಕತ್ವದ ಆರೋಪವನ್ನು ಶುಕ್ರವಾರ ವಜಾಗೊಳಿಸಿತು. ನ್ಯಾಯಾಲಯದ ತೀರ್ಪಿನ ನಂತರ, ಆದಾಯ ತೆರಿಗೆ ಇಲಾಖೆಯು 2021ರ ಬೇನಾಮಿ ವಹಿವಾಟು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅಜಿತ್ ಪವಾರ್‌ ಅವರಿಗೆ ಬಿಡುಗಡೆ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇತ್ತೀಚೆಗೆ ಚುನಾಯಿತರಾದ ಮಹಾಯುತಿ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಸಾಕಷ್ಟು ಪುರಾವೆಗಳ ಆಧಾರದ ಮೇಲೆ ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಬೇನಾಮಿ ಮಾಲೀಕತ್ವದ ಅಡಿಯಲ್ಲಿ ಆಸ್ತಿಗಳನ್ನು ಲಿಂಕ್ ಮಾಡಿದ 2021ರ ಪ್ರಕರಣವನ್ನು ನ್ಯಾಯಮಂಡಳಿ ವಜಾಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

    ಆದಾಯ ತೆರಿಗೆ ಇಲಾಖೆಯು 2021ರ ಅಕ್ಟೋಬರ್ 7 ರಂದು ಅಜಿತ್ ಪವಾರ್‌ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಸತಾರಾದಲ್ಲಿನ ಸಕ್ಕರೆ ಕಾರ್ಖಾನೆ, ದೆಹಲಿಯ ಫ್ಲಾಟ್, ಗೋವಾದ ರೆಸಾರ್ಟ್ ಮತ್ತು ಮಹಾರಾಷ್ಟ್ರದಾದ್ಯಂತ ಹಲವಾರು ಭೂಮಿ ಸೇರಿದಂತೆ ಹಲವು ಆಸ್ತಿಗಳು ಸೇರಿತ್ತು.

    ಆದಾಯ ತೆರಿಗೆ ಇಲಾಖೆ ದಾಳಿ ವೇಳೆ, ಅಜಿತ್ ಪವಾರ್ ಅವರು ಅವಿಭಜಿತ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಭಾಗವಾಗಿದ್ದರು. ಈ ವೇಳೆ ಜೂನ್ 2022ರಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತ್ತು. ಈ ವೇಳೆ ಅಜಿತ್ ಪವಾರ್ ಅವರು ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ಸರ್ಕಾರ ಪತನದ ನಂತರ ಅವರು ಪಕ್ಷವನ್ನು ಒಡೆದು ಜುಲೈ 2023 ರಿಂದ ಶಿಂಧೆ ನೇತೃತ್ವದ ಶಿವಸೇನೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಮುಂದುವರೆದಿದ್ದರು. ಈ ಸರ್ಕಾರಕ್ಕೆ ಬಿಜೆಪಿ ಕೂಡಾ ಸೇರಿದ್ದು, ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿದ್ದರು. ಶುಕ್ರವಾರ ನ್ಯಾಯಪೀಠವು ಬೇನಾಮಿ ವ್ಯವಹಾರದ ಪ್ರತಿಪಾದನೆಯನ್ನು ತಿರಸ್ಕರಿಸಿ, ಆರೋಪಗಳಿಗೆ ಸಾಕಷ್ಟು ಪುರಾವೆಗಳ ಕೊರತೆಯಿದೆ ಎಂದು ಹೇಳಿದೆ.

    ಅಜಿತ್ ಪವಾರ್, ಪತ್ನಿ ಸುನೇತ್ರಾ ಪವಾರ್ ಮತ್ತು ಮಗ ಪಾರ್ಥ್ ಪವಾರ್ ಬೇನಾಮಿ ಆಸ್ತಿಗಳನ್ನು ಸಂಗ್ರಹಿಸಲು ಹಣವನ್ನು ವರ್ಗಾಯಿಸಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ. ಎಲ್ಲಾ ಆಸ್ತಿ ವಹಿವಾಟುಗಳನ್ನು ಕಾನೂನುಬದ್ಧವಾಗಿ ನಡೆಸಲಾಗಿದೆ. ದಾಖಲೆಗಳಲ್ಲಿ ಯಾವುದೇ ಅಕ್ರಮಗಳಿಲ್ಲ ಎಂದು ಅಜಿತ್ ಪವಾರ್ ಅವರ ಕಾನೂನು ಸಲಹೆಗಾರರು ವಾದಿಸಿದ್ದರು.

  • ವಿದೇಶಿ ಸ್ವತ್ತು, ಆದಾಯ ಘೋಷಿಸದಿದ್ರೆ 10 ಲಕ್ಷ ರೂ. ದಂಡ – ಕೊನೇ ದಿನ ಯಾವಾಗ?

    ವಿದೇಶಿ ಸ್ವತ್ತು, ಆದಾಯ ಘೋಷಿಸದಿದ್ರೆ 10 ಲಕ್ಷ ರೂ. ದಂಡ – ಕೊನೇ ದಿನ ಯಾವಾಗ?

    ನವದೆಹಲಿ: ತೆರಿಗೆದಾರರು ವಿದೇಶದಲ್ಲಿ ಹೊಂದಿರುವ ಆಸ್ತಿ (Foreign Aassets) ಅಥವಾ ವಿದೇಶದಿಂದ ಗಳಿಸಿದ ಆದಾಯದ ವಿವರ ಘೋಷಿಸದಿದ್ದರೇ ಅಂತಹವರಿಗೆ ಕಪ್ಪುಹಣ ತಡೆ ಕಾಯ್ದೆ ಅಡಿಯಲ್ಲಿ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ (Income Tax Department) ಎಚ್ಚರಿಕೆ ನೀಡಿದೆ.

    2024-25ನೇ ಐಟಿ ರಿಟರ್ನ್ಸ್‌ (ITR) ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸಿರುವ ಐಟಿಆರ್‌ಗಳಲ್ಲಿ ವಿದೇಶಿ ಸ್ವತ್ತು ಅಥವಾ ಆದಾಯ ಕುರಿತು ಘೋಷಣೆ ಮಾಡದಿರುವ ತೆರಿಗೆದಾರರಿಗೆ ಸಂದೇಶ ರವಾನಿಸಲು ಅಭಿಯಾನ ಆರಂಭಿಸಲಾಗಿದೆ. ಇದರ ಭಾಗವಾಗಿ ಇಲಾಖೆಯು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಮಾಹಿತಿ ಪ್ರಕಟಿಸಿದೆ. ಇದನ್ನೂ ಓದಿ: Pushpa 2 The Rule Trailer: ಪುಷ್ಪ ಅಂದ್ರೆ ಫೈಯರ್‌ ಅಲ್ಲ, ವೈಲ್ಡ್‌ ಫೈಯರ್‌ – ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್‌ ಖದರ್‌

    ವಿದೇಶಿ ಆಸ್ತಿ ಎಂದರೇನು?
    ಐ-ಟಿ ಇಲಾಖೆಯ ಸಲಹೆಯ ಪ್ರಕಾರ, ವಿದೇಶದಲ್ಲಿ ಬ್ಯಾಂಕ್ ಖಾತೆ, ವಿಮಾ ಒಪ್ಪಂದ, ಕಂಪನಿ ಅಥವಾ ವ್ಯವಹಾರದಲ್ಲಿನ ಬಡ್ಡಿ. ಸ್ಥಿರಾಸ್ತಿ, ಕಸ್ಟೋಡಿಯಲ್ ಖಾತೆ, ಟ್ರಸ್ಟಿ, ಷೇರು ಮತ್ತು ಸಾಲಪತ್ರಕ್ಕೆ ಲಭಿಸಿರುವ ಬಡ್ಡಿ ಇತ್ಯಾದಿಯನ್ನು ವಿದೇಶಿ ಸ್ವತ್ತು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ರಾತ್ರೋ ರಾತ್ರಿ ಬದಲಾಗ್ತಿದ್ಯಾ ಎಪಿಎಲ್, ಬಿಪಿಎಲ್ ಕಾರ್ಡ್? – ಅರ್ಹರಿಗೆ ಮಾತ್ರ ಸಿಗತ್ತೆ ಅಂತ ಸಿಎಂ ಸ್ಪಷ್ಟನೆ

    2024-25ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ವಿಳಂಬ ಹಾಗೂ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರಂದು ಅಂತಿಮ ದಿನವಾಗಿದೆ. ಹಾಗಾಗಿ ಎಲ್ಲಾ ಅರ್ಹ ತೆರಿಗೆದಾರರು ತಮ್ಮ ಐಟಿ ರಿಟರ್ನ್ಸ್‌ನಲ್ಲಿ ವಿದೇಶಿ ಆಸ್ತಿ (ಎಫ್‌ಎ) ಅಥವಾ ವಿದೇಶಿ ಮೂಲ ಆದಾಯ (ಎಫ್‌ಎಸ್‌ಐ) ವೇಳಾಪಟ್ಟಿಯನ್ನು ʻಕಡ್ಡಾಯವಾಗಿʼ ಭರ್ತಿ ಮಾಡಬೇಕು ಎಂದು ಎಂದು ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ಮಣಿಪುರದ ಭದ್ರತಾ ವ್ಯವಸ್ಥೆ ಕುರಿತು ಅಮಿತ್ ಶಾ ಸಭೆ – ಸೋಮವಾರವೂ ಹೈವೋಲ್ಟೇಜ್‌ ಮೀಟಿಂಗ್‌ 

  • ನಟ ದರ್ಶನ್‌ಗೆ ಐಟಿ ವಿಚಾರಣೆ ಬಿಸಿ – ಜೈಲಿನಲ್ಲೇ 7 ಗಂಟೆ ಡ್ರಿಲ್‌

    ನಟ ದರ್ಶನ್‌ಗೆ ಐಟಿ ವಿಚಾರಣೆ ಬಿಸಿ – ಜೈಲಿನಲ್ಲೇ 7 ಗಂಟೆ ಡ್ರಿಲ್‌

    ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್‌ಗೆ (Darshan) ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ.

    ರೇಣುಕಾಸ್ವಾಮಿ ಕೊಲೆ ಬಳಿಕ ಶವ ವಿಲೇವಾರಿ, ಸಾಕ್ಷ್ಯ ನಾಶಕ್ಕಾಗಿ ದರ್ಶನ್ ಲಕ್ಷ ಲಕ್ಷ ಕಾಸು ನೀಡುವ ಭರವಸೆ ನೀಡಿದ್ದರು. ಈ ಸಂಬಂಧ ಆದಾಯ ತೆರಿಗೆ (Income Tax) ಅಧಿಕಾರಿಗಳು ಬಳ್ಳಾರಿ ಜೈಲಿನಲ್ಲೇ (Ballari Jail) ಇಂದು ದರ್ಶನ್‌ರನ್ನು 7 ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದರು.

    ರೇಣುಕಾಸ್ವಾಮಿ ಕೊಲೆ ಆದ ಬಳಿಕ ಮನೆಯಲ್ಲಿ ಅಷ್ಟೊಂದು ಹಣ (Money) ಹೇಗೆ ಬಂತು? ಆ ಹಣ ಯಾರಿಗೆ ಸೇರಿದ್ದು? ಆ ಹಣವನ್ನು ನಿಮಗೆ ತಂದುಕೊಟ್ಟಿದ್ಯಾರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಐಟಿ ಅಧಿಕಾರಿಗಳು ದರ್ಶನ್‌ಗೆ ಕೇಳಿದ್ದಾರೆ. ಇದನ್ನೂ ಓದಿ: ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಗೋಲ್ಮಾಲ್ ಆರೋಪ – ಲೋಕಾಯುಕ್ತಕ್ಕೆ ದೂರು

    ಐಟಿ ಅಧಿಕಾರಿಗಳು ದರ್ಶನ್‌ ಅವರನ್ನು ವಿಚಾರಣೆ ಒಳಪಡಿಸುತ್ತಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಪರ ಅಡಿಟರ್ ಎಂ ಎಸ್ ರಾವ್ ಮತ್ತು ಅಸಿಸ್ಟೆಂಟ್ ಅರುಣ್ ಇಬ್ಬರು ಬೆಳಿಗ್ಗೆ 10:50 ಕ್ಕೆ ಜೈಲಿಗೆ ಬಂದಿದ್ದರು. ಎರಡು ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಮಧ್ಯಾಹ್ನ 12:20ಕ್ಕೆ ಜೈಲು ಪ್ರವೇಶಿಸಿ ಜೈಲು ಅಧೀಕ್ಷಕರ ಕೊಠಡಿಯಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ವಿಚಾರಣೆ ನಡೆಸಿದರು.

    ಕೊಲೆ ಪ್ರಕರಣದಲ್ಲಿ ಬಳಿಕೆಯಾದ ಒಟ್ಟು ಹಣದ ಬಗ್ಗೆ ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳು, ಹಣದ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಯಾವ ಅಕೌಂಟ್‌ಗಳ ಮೂಲಕ ಹಣ ವ್ಯವಹಾರ ನಡೆದಿದೆ ಎನ್ನುವದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

    ಒಂದು ಮಾಹಿತಿ ಪ್ರಕಾರ ಶವದ ವಿಲೇವಾರಿ ವಿಚಾರವಾಗಿ 30 ಲಕ್ಷ ರೂ., ದರ್ಶನ್ ಮನೆಯಲ್ಲಿ ಸೀಜ್ ಆಗಿದ್ದ 40 ಲಕ್ಷ ರೂ., ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಸೀಜ್ ಆಗಿದ್ದ 3 ಲಕ್ಷ ರೂ., ಮೈಸೂರು ಹೊಟೇಲ್‌ನಲ್ಲಿ ಸೀಜ್ ಆಗಿದ್ದ 1 ಲಕ್ಷ ರೂ. ಸೇರಿ ಒಟ್ಟು 84 ಲಕ್ಷ ರೂ. ಹಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ 12:30 ರಿಂದ ಸಂಜೆ 7:30ರವರೆಗೆ ನಿರಂತರವಾಗಿ 7 ತಾಸುಗಳ ಕಾಲ ಐಟಿ ಅಧಿಕಾರಿಗಳು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಹಣದ ಮೂಲದ ಬಗ್ಗೆ ದರ್ಶನ್ ವಿವರಣೆ ನೀಡಿದ್ದು ಅದಕ್ಕೆ ಸೂಕ್ತ ದಾಖಲೆಗಳನ್ನು ಆಡಿಟರ್ ಸಲ್ಲಿಸಿದ್ದಾರೆ ಎನ್ನಲಾಗಿದೆ.

    ಇದರ ಮಧ್ಯೆ ಇಂದು ಸಂಜೆ ನಟ ದರ್ಶನ್‌ರನ್ನು ಡೆವಿಲ್ ಸಿನಿಮಾ ನಿರ್ಮಾಪಕ ಜೆವಿ ಪ್ರಕಾಶ್, ಆಪ್ತರಾದ ಸುನೀಲ್, ಶ್ರೀನಿವಾಸ್ ಭೇಟಿ ಮಾಡಿ ಚರ್ಚೆ ನಡೆಸಿದರು.

     

  • ಉದ್ಯೋಗಿಗಳಿಗೆ 17,500 ರೂ. ಉಳಿತಾಯ –  ಮೊದಲು ತೆರಿಗೆ ಎಷ್ಟಿತ್ತು? ಈಗ ಏನು ಬದಲಾವಣೆಯಾಗಿದೆ?

    ಉದ್ಯೋಗಿಗಳಿಗೆ 17,500 ರೂ. ಉಳಿತಾಯ – ಮೊದಲು ತೆರಿಗೆ ಎಷ್ಟಿತ್ತು? ಈಗ ಏನು ಬದಲಾವಣೆಯಾಗಿದೆ?

    ನವದೆಹಲಿ: ತೆರಿಗೆ ಪಾವತಿದಾರರಿಗೆ (Salaried Class) ಬಜೆಟ್‌ನಲ್ಲಿ (Union Budget) ಗುಡ್‌ ನ್ಯೂಸ್‌ ಸಿಕ್ಕಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು ವರ್ಷಕ್ಕೆ 17,500 ರೂ. ಆದಾಯ ತೆರಿಗೆ ಉಳಿತಾಯ ಮಾಡಬಹುದು.

    ಸಂಬಳ ಪಡೆಯುವ ಉದ್ಯೋಗಿಗಳಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ 50,000 ರೂ. ನಿಂದ 75,000 ರೂ.ಗೆ ಹೆಚ್ಚಳ ಮಾಡಲಾಗಿದೆ. ಇದನ್ನೂ ಓದಿ: Union Budget 2024: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್;‌ ಚಿನ್ನ, ಬೆಳ್ಳಿ, ಪ್ಲಾಟಿನಂ ದರ ಇಳಿಕೆ – Live Updates‌‌

     
    ಎಷ್ಟು ತೆರಿಗೆ?
    0-3 ಲಕ್ಷ ರೂ. ವರೆಗೆ ಯಾವುದೇ ತೆರಿಗೆ ಇಲ್ಲ (ಯಾವುದೇ ಬದಲಾವಣೆ ಇಲ್ಲ)
    3-7 ಲಕ್ಷ ರೂ. ವರೆಗೆ 5% (ಮೊದಲು 3-6 ಲಕ್ಷ ರೂ. ಗೆ 5% ಇತ್ತು)
    7-10 ಲಕ್ಷ ರೂ. ವರೆಗೆ 10 % (ಮೊದಲು 6-9 ಲಕ್ಷ ರೂ. 10% ಇತ್ತು)
    10-12 ಲಕ್ಷ ರೂ. ವರೆಗೆ 15% ( ಮೊದಲು 9-12 ಲಕ್ಷ ರೂ. 15% ಇತ್ತು)
    12-15 ಲಕ್ಷ ರೂ. ವರೆಗೆ 20% (ಯಾವುದೇ ಬದಲಾವಣೆ ಇಲ್ಲ)
    15 ಲಕ್ಷ ರೂ. ಗಿಂತ ಮೇಲ್ಪಟ್ಟು 30% (ಯಾವುದೇ ಬದಲಾವಣೆ ಇಲ್ಲ)

  • ದರ್ಶನ್‌ ಬಳಿ 70 ಲಕ್ಷ ರೂ. ಪತ್ತೆ – ʻದಾಸʼನಿಗೆ ಕೊಲೆ ಆರೋಪದ ಜೊತೆಗೆ ಐಟಿ ಸಂಕಷ್ಟ!

    ದರ್ಶನ್‌ ಬಳಿ 70 ಲಕ್ಷ ರೂ. ಪತ್ತೆ – ʻದಾಸʼನಿಗೆ ಕೊಲೆ ಆರೋಪದ ಜೊತೆಗೆ ಐಟಿ ಸಂಕಷ್ಟ!

    ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) 2ನೇ ಆರೋಪಿಯಾಗಿರುವ ನಟ ದರ್ಶನ್‌ (Darshan Arrested) ಸೇರಿ ನಾಲ್ವರು ಆರೋಪಿಗಳನ್ನು ನ್ಯಾಯಾಲಯ ಪೊಲೀಸ್‌ ಕಸ್ಟಡಿಗೆ ವಹಿಸಿದೆ. ಈ ನಡುವೆ ಕೊಲೆ ಆರೋಪ ಹೊತ್ತಿರುವ ದರ್ಶನ್‌ಗೆ ಐಟಿ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

    ಹೌದು. ಮೊದಲಿಗೆ ರೇಣುಕಾಸ್ವಾಮಿ ಮೃತದೇಹ ವಿಲೇವಾರಿ ಮಾಡುವುದಕ್ಕಾಗಿ ನೀಡಲಾಗಿದ್ದ 30 ಲಕ್ಷ ರೂ. ಹಣವನ್ನು ಪೊಲೀಸರು ತನಿಖೆ ವೇಳೆ ವಶಪಡಿಸಿಕೊಂಡಿದ್ದರು. ಈ ಹಣವನ್ನು ದರ್ಶನ್‌ ಅವರೇ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಬಳಿಕ ದರ್ಶನ್‌ ಮನೆಯಲ್ಲಿ ಜೂನ್‌ 19ರಂದು ಪೊಲೀಸರು 37.40 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆ ಆರೋಪದ ಜತೆಗೆ ದರ್ಶನ್‌ಗೆ ಐಟಿ ಸಂಕಷ್ಟ ಎದುರುಗ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರೇಣುಕಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?

    ಕಾನೂನು ಪ್ರಕಾರ ಒಬ್ಬ ವ್ಯಕ್ತಿ 2 ಲಕ್ಷ ರೂ. ನಗದು ಮಾತ್ರ ಮನೆಯಲ್ಲಿ ಇಟ್ಟುಕೊಳ್ಳಬಹುದು. ಆದ್ರೆ ತನಿಖೆಯಲ್ಲಿ ಒಟ್ಟು 70 ಲಕ್ಷ ರೂ. ಹಣ ದರ್ಶನ್ ಬಳಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 70 ಲಕ್ಷ ರೂ.ಗಳಿಗೆ ತೆರಿಗೆ ಪಾವತಿ ಮಾಡಲಾಗಿದ್ಯಾ? ಇಷ್ಟೊಂದು ನಗದು ಮೂಲ ಯಾವುದು ಎಂಬುದರ ಕುರಿತು ತನಿಖೆ ನಡೆಸಲು ಪೊಲೀಸರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಲಬುರಗಿ ಹೋಟೆಲ್‌ನಲ್ಲಿ ಸಿಲಿಂಡರ್‌ ಸ್ಫೋಟ – 11 ಮಂದಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

  • ಜುವೆಲ್ಲರಿ ಮಳಿಗೆ ಮೇಲೆ ಐಟಿ ದಾಳಿ – 26 ಕೋಟಿ ನಗದು ಜಪ್ತಿ

    ಜುವೆಲ್ಲರಿ ಮಳಿಗೆ ಮೇಲೆ ಐಟಿ ದಾಳಿ – 26 ಕೋಟಿ ನಗದು ಜಪ್ತಿ

    ಮುಂಬೈ: ಆದಾಯ ತೆರಿಗೆ (Income Tax) ಇಲಾಖೆ ನಾಸಿಕ್‌ನಲ್ಲಿರುವ (Nashik) ಪ್ರಸಿದ್ಧ ಜುವೆಲ್ಲರಿ ಅಂಗಡಿ ಮೇಲೆ ದಾಳಿ ನಡೆಸಿ 26 ಕೋಟಿ ರೂ. ನಗದು ಹಣವನ್ನು ಜಪ್ತಿ ಮಾಡಿದೆ.

    ಅಕ್ರಮ ವಹಿವಾಟು ನಡೆಸಿದ ಆರೋಪದ ಮೇಲೆ ಸುರಾನಾ ಜ್ಯುವೆಲರ್ಸ್ (Surana Jewellers) ಮೇಲೆ ದಾಳಿ ನಡೆಸಿದೆ. ಈ ವೇಳೆ 26 ಕೋಟಿ ರೂ. ನಗದು, 90 ಕೋಟಿ ರೂ. ಮೌಲ್ಯದ ಲೆಕ್ಕಕ್ಕೆ ಸಿಗದ ಸಂಪತ್ತಿನ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: ನಿಂತಿದ್ದ ಬಸ್‌ಗೆ ಟ್ರಕ್ ಡಿಕ್ಕಿ – 11 ಭಕ್ತರು ದುರ್ಮರಣ, 10 ಜನರಿಗೆ ಗಾಯ

    ನಗದು ಹಣವನ್ನು ಹಲವು ಚೀಲಗಳಲ್ಲಿ ತುಂಬಿ ಇಡಲಾಗಿತ್ತು.  ಅಧಿಕಾರಿಗಳು ಕಚೇರಿಗೆ ತಂದು ಜೋಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿದೆ.

     

  • ಶೂ ವ್ಯಾಪಾರಿ ಮನೆಯಲ್ಲಿ ಕಂತೆ ಕಂತೆ ಹಣ – ಬರೋಬ್ಬರಿ 40 ಕೋಟಿ ರೂ. ಜಪ್ತಿ!

    ಶೂ ವ್ಯಾಪಾರಿ ಮನೆಯಲ್ಲಿ ಕಂತೆ ಕಂತೆ ಹಣ – ಬರೋಬ್ಬರಿ 40 ಕೋಟಿ ರೂ. ಜಪ್ತಿ!

    ಲಕ್ನೋ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ ನಡೆಸಿದ ದಾಳಿಯಲ್ಲಿ ಬರೋಬ್ಬರಿ 40 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ.

    ತೆರಿಗೆ ವಂಚನೆ ಮತ್ತು ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಮೇಲೆ ಐಟಿ ಅಧಿಕಾರಿಗಳು ಆಗ್ರಾದಲ್ಲಿ ಶೂ ವ್ಯಾಪಾರಿ ರಾಮನಾಥ್‌ ಡಂಗ್‌ ಅವರ ಮನೆ ಮೇಲೆ ದಾಳಿ (Tax Raid) ನಡೆಸಿದ್ದರು. ಈ ವೇಳೆ ದಾಖಲೆ ಇಲ್ಲದ 500 ರೂ. ನೋಟುಗಳ ಹಲವು ಬಂಡಲ್‌ಗಳನ್ನು ಹೊರತೆಗೆದಿದ್ದಾರೆ. ಇದನ್ನೂ ಓದಿ: 2004: ಎನ್‌ಡಿಎ ಔಟ್‌.. ಯುಪಿಎ ಇನ್‌ – ಗಾಂಧಿಯೇತರ ನಾಯಕನಿಗೆ ಪ್ರಧಾನಿ ಪಟ್ಟ

    ಸದ್ಯ 40 ಕೋಟಿ ರೂ. ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜಪ್ತಿ ಮಾಡಿದ ಹಣವನ್ನು ಇನ್ನೂ ಏಣಿಕೆ ಮಾಡಲಾಗುತ್ತಿದ್ದು, ಹಣದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾನು, ರಾಹುಲ್‌ ಒಟ್ಟಿಗೆ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗ್ತಿತ್ತು – ಲೋಕಸಭೆಗೆ ಸ್ಪರ್ಧಿಸದಿರಲು ಕಾರಣ ತಿಳಿಸಿದ ಪ್ರಿಯಾಂಕಾ

    ಇತ್ತೀಚೆಗೆ ದೇಶದಲ್ಲಿ ನಡೆದ 2ನೇ ಅತಿದೊಡ್ಡ ದಾಳಿಯೂ ಇದಾಗಿದೆ. ಇದೇ ತಿಂಗಳ ಮೇ 6 ರಂದು ಜಾರ್ಖಂಡ್‌ನಲ್ಲಿ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳ ತಂಡ ಸಚಿವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮತ್ತು ಅವರ ಮನೆ ಕೆಲಸಗಾರ ಜಹಾಂಗೀರ್ ಆಲಂ ಮನೆಯಲ್ಲಿ ಸಿಕ್ಕ 35 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿತ್ತು.